Lakki.s.Blogs

  • Home
  • Lakki.s.Blogs

Lakki.s.Blogs digital creater

10/03/2024
ಬೇಸಿಗೆ ಕಾಲದಲ್ಲಿ ನಿಮ್ಮ ವಾರ್ಡ್ರೋಬ್‌ನಲ್ಲಿ ಇರಲೇಬೇಕಾದ ಬಟ್ಟೆಗಳುಬೇಸಿಗೆಯಲ್ಲಿ ಕಂಫರ್ಟೇಬಲ್‌ ಆಗಿರಲು ಯಾವ ರೀತಿಯ ಡ್ರೆಸ್ ಬೆಸ್ಟ್, ಸಮ್ಮರ್‌...
21/04/2023

ಬೇಸಿಗೆ ಕಾಲದಲ್ಲಿ ನಿಮ್ಮ ವಾರ್ಡ್ರೋಬ್‌ನಲ್ಲಿ ಇರಲೇಬೇಕಾದ ಬಟ್ಟೆಗಳು

ಬೇಸಿಗೆಯಲ್ಲಿ ಕಂಫರ್ಟೇಬಲ್‌ ಆಗಿರಲು ಯಾವ ರೀತಿಯ ಡ್ರೆಸ್ ಬೆಸ್ಟ್, ಸಮ್ಮರ್‌ನಲ್ಲೂ ಫ್ಯಾಶನೇಬಲ್‌ ಆಗಿ ಕಾಣಿಸಿಕೊಳ್ಳಲು ಯಾವ ರೀತಿಯ ಉಡುಪು ಒಳ್ಳೆಯದು.

1. ಫ್ಯಾಬ್ರಿಕ್‌ ಮತ್ತು ಮೆಟೀರಿಯಲ್ಸ್‌ ಹೀಗಿರಲಿ
ಕಾಟನ್, ಲೆನಿನ್‌ ಅಥವಾ ಜರ್ಸಿಯಿಂದ ಮಾಡಿದ ಬಟ್ಟೆಗಳು ಸಮ್ಮರ್‌ಗೆ ಸೂಕ್ತ. ಈ ಬಟ್ಟೆಗಳು ಗಾಳಿಯಾಡಲು ಮತ್ತು ದೇಹವು ಶಾಖವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯ ಮೆಟೀರಿಯಲ್ಸ್ ನಿಮಗೆ ಕಡಿಮೆ ಬೆವರುವಂತೆ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲೂ ನೀವು ಕೂಲ್ ಆಗಿರಲು ಬಯಸಿದ್ರೆ ಕಾಟನ್, ಲೆನಿನ್ ಅಥವ ಜೆರ್ಸಿಯಿಂದ ಮಾಡಿದ ಟಿಶರ್ಟ್‌ಗಳನ್ನು ಧರಿಸಿ.

ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ

ಬೇಸಿಗೆಯಲ್ಲಿ ಧರಿಸಲು ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ. ನಿಮ್ಮ ಬೇಸಿಗೆಯ ಉಡುಪನ್ನು ಆರಿಸುವಾಗ, ಗಾಢ ಮತ್ತು ದಪ್ಪ ಬಣ್ಣಗಳಿಂದ ದೂರವಿರಿ. ಕಪ್ಪು ಬದಲಿಗೆ, ಬಿಳಿ, ಕೆನೆಬಣ್ಣ ಅಥವಾ ಬೂದು ಬಣ್ಣವನ್ನು ಧರಿಸಿ. ತೆಳು-ಬಣ್ಣದ ಬಣ್ಣಗಳು ಗಾಢ ಬಣ್ಣಗಳಂತೆ ಸೂರ್ಯನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ, ಬೇಸಿಗೆಗೆ ತಿಳಿ ಬಣ್ಣ ಹೆಚ್ಚು ಸೂಕ್ತ.

3 UPF-ರೇಟೆಡ್ ಬಟ್ಟೆಗಳನ್ನು ನೋಡಿ
ನೀವು ಹೊರಾಂಗಣದಲ್ಲಿ ಕೆಲಸ ಮಾಡುವಾಗ, ಹೈಕಿಂಗ್‌ಗೆ ಹೋಗುವಾಗ ಅಥವಾ ಸಹೋದ್ಯೋಗಿಯೊಂದಿಗೆ ಔಟಿಂಗ್ ಹೋಗುವಾಗ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುವ ಬಟ್ಟೆಯು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. UPF-ರೇಟೆಡ್ ಉಡುಪುಗಳು ಸನ್‌ಸ್ಕ್ರೀನ್‌ನ ಹೆಚ್ಚುವರಿ ಪದರವಾಗಿದ್ದು, ಸೂರ್ಯನ ಬಿಸಿ ಬೇಸಿಗೆಯ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಮಧ್ಯಾಹ್ನದ ಹೊತ್ತೇನಾದ್ರೂ ಹೊರಗಡೆ ಹೋಗುವವರಾಗಿದ್ದಲ್ಲಿ ಬಿಸಿಲಿಗೆ ಸುಡುವುದನ್ನು ತಡೆಯಲು UPF-ರೇಟೆಡ್ ಶರ್ಟ್ ಅನ್ನು ಆರಿಸಿಕೊಳ್ಳಿ.

4. ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳನ್ನು ತಪ್ಪಿಸಿ
ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳು ಚೆನ್ನಾಗಿ ಕಾಣಿಸಬಹುದು, ಆದರೆ ಅವು ವಾಸ್ತವವಾಗಿ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ನೀವು ಹೆಚ್ಚು ಬೆವರು ಮಾಡಲು ಕಾರಣವಾಗಬಹುದು. ಹೆಚ್ಚು ಬೆವರುವುದನ್ನು ತಪ್ಪಿಸಲು ಮತ್ತು ಅತ್ಯಂತ ಆರಾಮದಾಯಕವಾಗಿರಲು ಈ ರೀತಿಯ ಅನ್‌ಕಂಫರ್ಟೇಬಲ್‌ ಬಟ್ಟೆಗಳಿಂದ ದೂರವಿರಿ.ಜೊತೆಗೆ ರೇಯಾನ್ ಮತ್ತು ಉಣ್ಣೆಯಂತಹ ಚಳಿಗಾಲದ ಬಟ್ಟೆಗಳಿಂದ ದೂರವಿರಿ, ಏಕೆಂದರೆ ಅವುಗಳ ದಪ್ಪ ವಸ್ತುಗಳು ಬೆಚ್ಚಗಿರಲು ಸೂಕ್ತ.ಆದರೆ ಬೇಸಿಗೆಕಾಲಕ್ಕೆ ಇದು ಒಳ್ಳೆಯದಲ್ಲ.

5. ಶಾರ್ಟ್‌ ಸ್ಲೀವ್‌ ಅಥವಾ ಸ್ಲೀವ್‌ಲೆಸ್‌ ಬಟ್ಟೆ ಆಯ್ಕೆ ಮಾಡಿ
ಬೇಸಿಗೆಯಲ್ಲಿ ಯಾವಾಗಲೂ ಶಾರ್ಟ್‌ಸ್ಲೀವ್‌ ಅಥವಾ ತೋಳುಗಳಿಲ್ಲದ ಬಟ್ಟೆಗಳನ್ನು ಧರಿಸಿ. ಈ ಶೈಲಿಯ ಬಟ್ಟೆಗಳು ನಿಮ್ಮ ಚರ್ಮವನ್ನು ತೇವಾಂಶದಲ್ಲಿ ಉಸಿರಾಡಲು ಅವಕಾಶ ಮಾಡಿಕೊಡುತ್ತವೆ.ಜೊತೆಗೆ ಕಂಕುಳು ಬೆವರುವುದು ಹೆಚ್ಚಾಗಿದ್ದಲ್ಲಿ ಸ್ಲೀವ್‌ಲೆಸ್‌ ಬಟ್ಟೆಗಳು ಹೆಚ್ಚು ಬೆವರುವಂತೆ ಮಾಡದು. ನೀವು ಆಫೀಸ್‌ಗೆ ಹೋಗುವವರಾಗಿದ್ದರೆ ಸಣ್ಣ ತೋಳಿನ ಕಾಲರ್ ಬಟನ್-ಡೌನ್‌ ಬಟ್ಟೆ ಧರಿಸಿ.ಗೆಟ್‌ ಟುಗೆದರ್‌ಗೆ ಅಥವಾ ಹೊರಗೆ ಹೋಗುತ್ತಿದ್ದರೆ ಸ್ಲೀವ್‌ ಲೆಸ್‌ ಡ್ರೆಸ್‌ ಅಥವಾ ಕಂಫರ್ಟೇಬಲ್ ಆಗಿರುವ ಟೀಶರ್ಟ್ ಧರಿಸಿ.

what to wear in summer
6. ಬಿಗಿಯಾದ ಬಟ್ಟೆ ಬೇಡವೇ ಬೇಡ
ಬೇಸಿಗೆಯಲ್ಲಿ ಬಿಗಿಯಾಗಿ ಮೈಗಂಟು ಬಟ್ಟೆಗಳ ಸಹವಾಸಕ್ಕಂತೂ ಹೋಗಲೇಬೇಡಿ. ಬೇಸಿಗೆಯಲ್ಲಿ ಕಂಫರ್ಟೇಬಲ್‌ ಆಗಿರಲು ಸಡಿಲವಾದ ಬಟ್ಟೆಗಳೇ ಹೆಚ್ಚು ಬೆಸ್ಟ್.ವಾತಾವರಣ ಬಿಸಿಯಾಗಿರುವಾಗ, ಬೆವರುವಾಗ ಚರ್ಮಕ್ಕೆ ಅಂಟಿಕೊಂಡಿರುವ ಬಟ್ಟೆಗಳು ಕಿರಿಕಿರಿಯುಂಟುಮಾಡಬಹುದು.ಸಡಿಲವಾದ ಟಾಪ್‌ ಅಥವಾ ತ್ವಚೆ ಉಸಿರಾಡುವಂತೆ ಮಾಡುವ ಉಡುಪನ್ನು ಆಯ್ಕೆ ಮಾಡಿ.
ಸಡಿಲವಾದ ತೋಳು ಹೊಂದಿರುವ ಎ-ಲೈನ್‌ ಟಾಪ್‌, ರಾತ್ರಿ ಔಟಿಂಗ್‌ ಆದರೆ ಸ್ಕರ್ಟ್‌ , ಮಧ್ಯಾಹ್ನ ಹೊರಹೋಗುವುದಾದರೆ ಕ್ರಾಪ್‌ಟಾಪ್‌ ಓಕೆ.

7. ಬೇಸಿಗೆಯಲ್ಲಿ ವರ್ಕ್‌ಔಟ್‌ ಕ್ಲೋತಿಂಗ್‌ ಕೂಡಾ ಬೆಸ್ಟ್
ವರ್ಕ್‌ಔಟ್‌ ಮಾಡೋವಾಗ ಮಾತ್ರವಲ್ಲ ನೀವು ಇತರ ಕೆಲಸ ಮಾಡುವಾಗಲೂ ಸ್ಪೋರ್ಟ್ಸ್‌ ಬ್ರಾ, ಲೆಗ್ಗಿಂಗ್ಸ್‌, ವರ್ಕೌಔಟ್‌ ಟಾಪ್‌ ಮತ್ತು ಸ್ಪೋರ್ಟ್ಸ್‌ ಶಾರ್ಟ್ಸ್ ಧರಿಸಬಹುದು.ಇವು ಆರಾಮದಾಯಕವಾಗಿರುವುದು ಮಾತ್ರವಲ್ಲ ಚರ್ಮವು ಉಸಿರಾಡಲು ಮತ್ತು ಸುಲಭವಾಗಿ ಚಲಿಸಲು ಸಹಕಾರಿ.ನೀವು ಮನೆಯಲ್ಲಿರುವಾಗ ವರ್ಕ್‌ಔಟ್‌ ಡ್ರೆಸ್‌ ಧರಿಸಲು ಅಡ್ಡಿಯಿಲ್ಲ.

8. ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಬೇಡಿ
ಬೇಸಿಗೆಕಾಲದಲ್ಲಿ ಬಟ್ಟೆಗಳನ್ನು ಲೇಯರ್‌ ರೀತಿ ಧರಿಸಬೇಡಿ. ಆದಷ್ಟು ಕಡಿಮೆ ಬಟ್ಟೆ ಧರಿಸಿ. ಸಿಂಪಲ್‌ ಆಗಿರುವ ಉದ್ದನೆಯ ಉಡುಪು, ಸ್ಕರ್ಟ್‌ ಅಥವಾ ಉದ್ದ ತೋಳು ಹೊಂದಿರುವ ಶರ್ಟ್‌ಗಳು ಉತ್ತಮ.ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಿದರೆ ನೀವು ಬಿಸಿಯಾಗುತ್ತೀರಿ.

9. ಬೇಸಿಗೆಯಲ್ಲಿ ಈ ಆಕ್ಸೆಸ್ಸರೀಸ್‌ ಅಗತ್ಯವಾಗಿರಲಿ

* ಬೇಸಿಗೆಯಲ್ಲಿ ಸ್ಟೈಲಿಶ್‌ ಆಗಿಯೂ ಕಾಣಬೇಕೆಂದರೆ ಸನ್‌ಗ್ಲಾಸ್‌ ಧರಿಸಿ, ಇದು ತೀಕ್ಷ್ಣ ಸೂರ್ಯನ ಕಿರಣಗಳಿಂದ ಕಣ್ಣನ್ನು ರಕ್ಷಿಸುವುದಲ್ಲದೇ ಇದು ನೀವು ಫ್ಯಾಶನೇಬಲ್‌ ಆಗಿ ಕಾಣಲು ಸಕಕರಿಸುತ್ತದೆ.
* ಬಿಸಿಲಿನಲ್ಲಿ ಹೊರಗೆ ಸುತ್ತಾಡುವುದಾದರೆ ಟೋಪಿ ಧರಿಸುವುದು ಮಸ್ಟ್‌. ಬ್ರಿಮ್ಡ್‌ ಟೋಪಿಗಳು ಕೂಲ್ ಆಗಿರಲು ಬೆಸ್ಟ್‌.
* ಹೆಚ್ಚಿನವರು ಬೇಸಿಗೆಯಲ್ಲಿ ಕಾಲು ಪೂರ್ತಿಯಾಗಿ ಮುಚ್ಚಿರುವ ಶೂಸ್‌ ಧರಿಸುತ್ತಾರೆ. ಇದರಿಂದಾಗಿ ಬೆವರಿ ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕ್ಯಾನ್ವಾಸ್‌ ಅಥವಾ ಕಾಟನ್‌ನಿಂದ ಮಾಡಿರುವ ಶೂಸ್‌ ಅಥವಾ ಆರಾಮದಾಯಕ ಚಪ್ಪಲಿ ಧರಿಸಿ.
* ಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಹಚ್ಚುವುದನ್ನಂತೂ ಮರೆಯಲೇಬೇಡಿ. ಹೊರಗೆ ಹೋಗುವುದಾದರೆ ಸನ್‌ಸ್ಕ್ರೀನ್‌ ಲೋಷನ್‌ ನಿಮ್ಮ ಬ್ಯಾಗ್‌ನಲ್ಲಿರಲಿ. ಕನಿಷ್ಠ ಎರಡು ಗಂಟೆಗೊಮ್ಮೆಯಾದರೂ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಿ.
* ಸಮ್ಮರ್‌ನಲ್ಲಿ ಹೆಚ್ಚು ಹೊತ್ತು ನೀವು ಹೊರಗೆ ಇರಬೇಕಾದಲ್ಲಿ ಕೂಲಿಂಗ್‌ ನೆಕ್‌ಸ್ಕಾರ್ಫ್‌ ಧರಿಸಿ. ಬಿಸಿ ಎನಿಸಿದಾಗ ಸ್ವಲ್ಪ ಒದ್ದೆ ಮಾಡಿ ಕುತ್ತಿಗೆಯ ಮೇಲೆ ಧರಿಸಿ.

ಹೊಸ ವಿಷಯದ ಹೊಸತನಕ್ಕೆ ಕಾರಣವೇನುಅರೆ ! ನಿರ್ದಿಷ್ಟ ವಾಗಿ ಕಾರಣ ಕೇಳಿದರೆ ನನಗೂ ತಿಳಿಯದು.         ನಾನು ಒಬ್ಬಳು ವಾಣಿಜ್ಯ ವಿಭಾಗದ ವಿದ್ಯಾರ್ಥ...
21/04/2023

ಹೊಸ ವಿಷಯದ ಹೊಸತನಕ್ಕೆ ಕಾರಣವೇನು
ಅರೆ ! ನಿರ್ದಿಷ್ಟ ವಾಗಿ ಕಾರಣ ಕೇಳಿದರೆ ನನಗೂ ತಿಳಿಯದು.
ನಾನು ಒಬ್ಬಳು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.
ಅವಾಗಿನ್ನು ಮೊದಲನೇ ಸೆಮಿಸ್ಟರ್ ಡಿಗ್ರಿ ಓದೋ ಸಮಯ ಅನ್ಸುತ್ತೆ. ಅಪ್ಪ ನ್ಯೂಸ್ ಚಾನಲ್ ತುಂಬಾ ನೋಡತ್ತಾಯಿದ್ರು. ನಮಗೇನು ಸುದ್ದಿ ಕೇಳೋ ಹಂಬಲ ಇರಲಿಲ್ಲ. ಅಪ್ಪ ರಿಮೋರ್ಟ್ ಕೊಡಲ್ಲಾ ಅನ್ನೋ ಕಾರಣಕ್ಕೆ ನೋಡ್ತಇದ್ದೆ ಅಷ್ಟೇ.
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವ ರೀತಿಯಲ್ಲಿ, ಸಮಯ ಕಳೆದಂತ್ತೆ ಕೇಳೋ ಸುದ್ಧಿಗಿಂತ ಹೇಳೋ ಸುದ್ದಿಗಾರರ ಮೇಲೆ ಗಮನ ಹೋಗಿದ್ದು ನಿಜ.ಆವಾಗಲೇ ಇರಬೇಕು ಮೊದಲ ಬಾರಿಗೆ ನನ್ನ ಮನಸಲ್ಲಿ ಪತ್ರಿಕೋದ್ಯಮದ ಬೀಜ ಬಿದ್ದದ್ದು, ಆದರೆ ಅದು ಇನ್ನು ಮೊಳಕೆ ಹೊಡೆದಿರಲಿಲ್ಲ.
ಹೀಗೆ ಕೆಲವು ಸಮಯ ಉರುಳೇ ಹೋಯಿತು.ನನ್ನ ಡಿಗ್ರಿ ಕೂಡ ಮುಗಿತಾ ಬಂತು ಮುಂದೆ ಏನು? ಅನ್ನೋ ಪ್ರಶ್ನೆ ನನ್ನನ್ನು ಕಾಡಿತ್ತು.ಸಾಮಾನ್ಯವಾಗಿ ವಾಣಿಜ್ಯ ವಿಭಾಗದಿಂದ ಬಂದಂತಹ ವಿದ್ಯಾರ್ಥಿಗಳು M.com ಅಥವಾ M B A ಮಾಡುವುದು ರೂಡಿಯಲ್ಲಿದೆ.ನನ್ನ ಸಹಪಾಠಿಗಳು ಸಹ ಅದೇ ಮನಸ್ಥಿತಿಯವರು.ಹೆಚ್ಚು ಕಡಿಮೆ ನನ್ನ ಅಭಿಪ್ರಾಯವು ಅದೇ ಆಗಿತ್ತು.
ಮುಂದಿನ ಎರಡು ವರ್ಷಗಳ ವಿದ್ಯಾಭ್ಯಾಸದ ಕನಸೂ ಹೊತ್ತು M B A ಮಾಡುವ ಆಸೆಯಿಂದ ಅರ್ಜಿ ಸಲ್ಲಿಸಿದ್ದು ಆಯಿತ್ತು. ಆದರೆ ಆ ವರ್ಷ ನಾನು M B A ಮಾಡಬೇಕು ಅನ್ನೋ ಕನಸು ಕನಸಾಗಿಯೇ ಉಳಿಯಿತ್ತು. ನನ್ನ ಬೇಕು ಬೇಡಗಳು ನನಗಿಂತ ಆ ದೇವರಿಗೆ ಚನ್ನಾಗಿ ತಿಳಿದಿತ್ತೋ ಏನೋ.
ಈ ಮಧ್ಯೆ ಕೊರೊನಾದ ಹಾವಳಿಯಿಂದ ವರ್ಕ್ ಫ್ರಮ್ ಹೋಮ್, ಆನ್ ಲೈನ್ ಕ್ಲಾಸ್, ಯೂಟ್ಯೂಬ್,ಇನ್ಸ್ಟಗ್ರಾಮ್ ಗಳಂತಹ ಸೋಷಿಯಲ್ ಮೀಡಿಯಾದ ಬಳಕೆ ಹೆಚ್ಚಾಯಿತು. ಇದು ನನ್ನ ಶಿಕ್ಷಣ ಭವಿಷ್ಯದ ಆಯ್ಕೆಯ ಒಂದೊಳ್ಳೆ ಪರಿಣಾಮವನ್ನೇ ಬೀರಿತು. ಎರಡು ವರ್ಷಗಳ ಹಿಂದೆ ನನ್ನ ಮನಸ್ಸಿನಲ್ಲಿ ಬಿದ್ದಿದ್ದ ಜರ್ನಲಿಸಂ ಎಂಬ ಬೀಜ ಇಂದು ಮೊಳಕೆಯೊಡೆಯಲು ಪ್ರಾರಂಭಿಸಿತು.
ಈ ಪತ್ರಿಕೋದ್ಯಮ ಆಸಕ್ತಿದಾಯಕ ಎನ್ನುವುದು ಬಿಟ್ಟರೆ ಇದರ ಗಂದಾ - ಗಾಳಿಯು ನನಗೆ ತಿಳಿದಿರಲಿಲ್ಲ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದೇ ಎನ್ನುವ ಪ್ರಶ್ನೆಯು ಮೂಡಿತ್ತು. "ಗೊತ್ತಿರದ ಮಾಯ ಲೋಕದಲ್ಲಿ ಹುಚ್ಚು ಕುದುರೆಯ ಬೆನ್ನೇರಿ ಹೊರತವಳು ನಾ".
ಈ ಎಲ್ಲಾ ಗೊಂದಲಗಳ ಮಧ್ಯ ಪತ್ರಿಕೋಧ್ಯಮವನ್ನು ಮಾಡಲೇ ಬೇಕು ಎನ್ನುವ ಹಠವು ಹೆಚ್ಚಾಯಿತ್ತು.ಮುಂಬರುವ ಶೈಕ್ಷಣಿಕ ವರ್ಷದ ಹಾದಿಯನ್ನು ಕಾಯುತ್ತಿದ್ದ ನನಗೆ, ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಇದೆ ಸೋಷಿಯಲ್ ಮೀಡಿಯಾದಲ್ಲಿ.
ಈ ಹಠದಿಂದಲೇ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನನ್ನ ಈ ಹಠದಿಂದಲೇ ಜೀವನದ ಮಹತ್ತರದ ಹಾದಿಯನ್ನು ಹಿಡಿದ್ದಿದ್ದೇನೆ. ಈ ಹಠವೇ ನನ್ನ ಮುಂದಿನ ಎಲ್ಲಾ ಆಸೆ ಕನಸುಗಳಿಗೆ ದಾರಿ ದೀಪವಾಗಲಿದೆ ಎನ್ನುವ ಬರವಸೆಯಿಂದ ಮುನ್ನಡೆಯುತ್ತಿದ್ದೇನೆ.
ಲಕ್ಷ್ಮೀ ಶಿವಣ್ಣ.

ಮಣ್ಣಿಗೆ ಆಕಾರ ಕೊಟ್ಟು ಆಟವಾಡಿದ ಸವಿ ನೆನಪು           ಈ ರೈತನಿಗೂ ಮಣ್ಣಿಗೂ ಇರುವ ನಂಟು ಒಂದು ರೀತಿಯದ್ದಾದರೆ, ಈ ಕುಂಬಾರನಿಗೂ ಮಣ್ಣಿಗೂ ಇರುವ...
21/04/2023

ಮಣ್ಣಿಗೆ ಆಕಾರ ಕೊಟ್ಟು ಆಟವಾಡಿದ ಸವಿ ನೆನಪು

ಈ ರೈತನಿಗೂ ಮಣ್ಣಿಗೂ ಇರುವ ನಂಟು ಒಂದು ರೀತಿಯದ್ದಾದರೆ, ಈ ಕುಂಬಾರನಿಗೂ ಮಣ್ಣಿಗೂ ಇರುವ ನಂಟು ಇನ್ನೊಂದು ರೀತಿಯ ಅದ್ಭುತವೇ ಸರಿ.
ಇನ್ನು ನನ್ನ ಬಾಲ್ಯದ ವಿಚಾರಕ್ಕೆ ಬಂದ್ರೆ , ನನಗೆ ನೆನಪಿರೋದು ಮಣ್ಣು, ಮಣ್ಣು,ಬರಿ ಮಣ್ಣು. ಇದೆನಿದು ಹೀಗ್ ಹೇಳ್ತಇದ್ದೀನಿ ಅನ್ಕೊಂದ್ರ ಇರಿ ಅದ್ದಕ್ಕೂ ಒಂದು ಕಾರಣ ಇದೆ ಹೇಳ್ತೀನಿ.
ನನ್ನ ಬಾಲ್ಯದಲ್ಲೂ ಆಡೋದಕ್ಕೆ ಚಿಣಿ ದಾಂಡು, ಬುಗುರಿ, ಗೋಲಿ, ಬಳೆ ಚುರು, ಕಬ್ಬಡಿ, ಕೋಕೋ ಇವೆಲ್ಲವುಗಳು ಇದ್ದವಾದರು, ನಾನು ಒಬ್ಬ ಬಡ ಹಾಗೂ ಹೃದಯ ಶ್ರೀಮಂತಿಕೆ ಇರುವ ಕುಂಬಾರರ ಕುಟುಂಬದಲ್ಲಿ ಹುಟ್ಟಿರೋದ್ರಿಂದ ನನ್ನ ಬಾಲ್ಯದ ಬಹುಪಾಲು ಮಣ್ಣೆ ಆವರಿಸಿತ್ತು.
ಮಣ್ಣನ್ನ ಕಿವ್ಚಿ , ಆಕಾರ ಕೊಟ್ಟು ಅದೇ ಮಣ್ಣಲ್ಲಿ ಆಟಿಕೆಗಳನ್ನ ತಯಾರಿಸಿ ಆಟವಾಡೋ ಆ ನನ್ನ ಬಾಲ್ಯ ಅದೆಷ್ಟು ಸುಂದರವಾಗಿತ್ತು.
ಆಟಿಕೆಗಳು ಅಂದಕೂಡಲೇ ನೆನಪಾಯ್ತು ನಿಮಗೆಲ್ಲಾ ಮಣ್ಣೆತ್ತಿನ ಅಮಾವಾಸ್ಯೆ ಗೊತ್ತಿರಬೇಕಲ್ಲ. ಅಮ್ಮ ಅದೆಷ್ಟು ಚನ್ನಾಗಿ ಮಣ್ಣಿನಿಂದ ಎತ್ತನ್ನು ತಯಾರಿಸೋರು ಅಂದ್ರೆ ಅದೇ ತರ ನಾನು ಮಾಡ್ಬೇಕು ಅಂತ ಅಮ್ಮನ ಅತ್ರ ಕಾಡಿ ಬೇಡಿ ಮಣ್ಣು ತೆಗೆದುಕೊಂಡು ಅದನ್ನ ಹಿಂಡಿ ಇಸುಕಿ, ಅದರ ಜೊತೆಗೆ ಗುದ್ದಾಡಿದರು ಮಾಡೋದಕ್ಕೆ ಬರದೇ ಇದ್ದಾಗ 'ಅಮ್ಮ ನನಗೆ ಬರ್ತಾನೆ ಇಲ್ಲ' ಅಂತ ಪೇಚಾಡಿದ್ದು ಇದೆ. ಅಮ್ಮನಷ್ಟು ಚನ್ನಾಗಿ ಬಂದಿಲ್ಲ ಅಂದ್ರು ಇಂಫ್ಯಾಕ್ಟ್ ಅದು ಎಷ್ಟೇ ಕೆಟ್ಟದಾಗಿ ಬಂದಿದ್ರು 'ಅಮ್ಮ ನಾನು ಮಾಡಿದೆ ನೋಡು' ಅಂತ ಹೆಮ್ಮೆ ಪಟ್ಟಿದ್ದು ಇದೆ.
ಸಾಮಾನ್ಯವಾಗಿ ಕುಂಬಾರ ಎಂದ ಕೂಡಲೇ ನೆನಪಗೋದು ತಿಗರಿ(ಬಂಡಿ ಚಕ್ರ) ಮತ್ತು ಅದನ್ನ ಕೋಲಿನಿಂದ ತಿರುಗಿಸುವ ವೇಕ್ತಿ ಕಣ್ಣ ಮುಂದೆ ಬರ್ತಾನೆ. ಆದರೆ ಕುಂಬಾರನ ಕೆಲಸ ಅದಷ್ಟೇ ಅಲ್ಲ.
ಬತ್ತಿ ಹೋಗಿರೋ ಕೆರೆಗೆ ಹೋಗಿ, ಕುಂಬಾರಿಕೆಗೆ ಯೋಗ್ಯವಾದ ಮಣ್ಣನ್ನ ಹುಡುಕಿ ತಂದು. ಹಿಂದಿನ ದಿನವೇ ಅದನ್ನ ನೆನೆಹಾಕಿ ಮರುದಿನ ಬೆಳಿಗ್ಗೆ ಹದ ಮಾಡಿ ತಿಗರಿ ಮೇಲೆ ಇಟ್ಟು ಅದಕ್ಕೆ ಆಕಾರ ಕೊಟ್ಟು ಅದನ್ನ ಒಣಗಿಸಿ, ಆಂಗಿ(ಮಡಿಕೆಗಳನ್ನ ಸುಡುವ ಜಾಗ) ಕಟ್ಟಿ , ಸುಟ್ಟು , ಸಂತೆಗೆ ತೊಗೊಂಡು ಹೋಗಿ, ಮಾರಾಟ ಮಾಡಿ. ಇಷ್ಟೆಲ್ಲಾ ಮಾಡಿ ಆದಮೇಲು ಇದರಿಂದ "ಬರೋ ಪುಡಿಗಾಸು ಮಕ್ಕಳ ಬಟ್ಟೆ ತರೋದಕ್ಕೂ ಸಾಕಾಗೋದಿಲ್ವಾಲ್ಲ" ಅಂತ ಅಪ್ಪ ಗೋಣಗುತ್ತಿದ್ದದನ್ನ ಕೇಳಿದ ನೆನಪು ನನಗೆ.
ಹಾ... ಇನ್ನೂ ಒಂದು ವಿಚಾರ ನೆನಪಾಯಿತು. ಅವತ್ತು ಒಂದು ದಿನ ಅಮ್ಮ ಬೆಳಿಗ್ಗೆ ಇಂದ ಸಂಜೆತನಕ ತುಂಬಾ ಕಷ್ಟ ಪಟ್ಟು ಮಡಿಕೆ ಮಾಡಿದ್ರು. ಅವು ಒಣಗಲಿ ಅಂತ ಮನೆ ತುಂಬ ಹರಡಿ ಮರು ದಿನ ಮಡಿಕೆ ಮಾಡೋಕೆ ಮಣ್ಣು ಬೇಕು ಅಂತ ತರೊಡಕ್ಕೆ ಹೋದಾಗ ಕಳ್ಳ ಬೆಕ್ಕೊಂದು ಅದೇಲಿಂದಲೋ ಬಂದ್ದು ಮಾಡಿರೋ ಮಾಡಿಕೆಗಳನ್ನೆಲ್ಲ ಹಾಳು ಮಾಡಿ ಬಿಟ್ಟಿತ್ತು. ಆಗ ಅಮ್ಮನಿಗೆ ಬಂದಿರೋ ಕೋಪಕ್ಕೆ ಮನೆ ಬಿಟ್ಟು ಎಲ್ಲಿ ತಿರುಗೋದಕ್ಕೆ ಹೋಗಿದ್ರಿ ಅಂತ ನಾನು ನನ್ನ ಇಬ್ಬರು ಅಣ್ಣಂದಿರು ಅಮ್ಮನಿಂದ ಸರಿಯಾಗಿ ಬೈಸಗೊಂಡಿದ್ವಿ. ಅದೇನೋ ಹೇಳ್ತಾರಲ್ಲ "ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ" ಅಂತ್ತ. ಅಲ್ಲಿ ಅಕ್ಷರಶಃ ಇಲಿಗಳಾಗಿದ್ದು ನಾನು ಮತ್ತೆ ನನ್ನ ಅಣ್ಣಂದಿರು. ಆ ಬೆಕ್ಕು ನಮ್ಮ ಕೈಗೆ ಸಿಕ್ಕರೆ ಸಾಯಿಸಿಯೇ ಬಿಡ್ತೀವಿ ಅನೋ ಅಷ್ಟು ಕೋಪ ಬಂದಿತ್ತು ನಮಗೆ.
ಅರೆ....! ನಿಮಗೆ ನನ್ನ ಕಥೆಯನ್ನ ಹೇಳೋ ನೆಪದಲ್ಲಿ ಇಡೀ ನನ್ನ ಬಾಲ್ಯವನ್ನೇ ಒಂದು ಸುತ್ತು ಹಾಕಿಕೊಂಡು ಬಂದೆ. ಇದಷ್ಟೇ ನನ್ನ ಬಾಲ್ಯವಲ್ಲವಾದರು ಬಾಲ್ಯ ಎಂದಕೂದಲೇ ನೆನಪಿಗೆ ಬರುವ ಒಂದಿಷ್ಟು ಸಂಗತಿಗಳು.
ಇದನ್ನೆಲ್ಲ ನೆನಪಿಸಿಕೊಂಡಾಗ ನನಗೆ ಅನಿಸೋದು "ಓ... ಬಾಲ್ಯವೇ ನೀನು ಅದೆಷ್ಟು ಸುಂದರ"
"ಓ... ಬಾಲ್ಯವೇ ನೀನು ಅದೆಷ್ಟು ರೋಮಾಂಚಕ"
"ಓ... ಬಾಲ್ಯವೇ ನಿ ಮರಳಿ ಬರಬಾರದೆ ನನ್ನ ಜೀವನಕ್ಕೆ" "ನಿ ಮರಳಿ ಬರಬಾರದೇ ನನ್ನ ಜೀವನಕ್ಕೆ".

ಲಕ್ಷ್ಮೀ ಶಿವಣ್ಣ.

ಸೆಲ್ಫ್ ಲವ್Self love ಸ್ವ-ಪ್ರೀತಿ ಎನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲೂ ಅವಶ್ಯವಾಗಿ ಇರಬೇಕಾದ ಒಂದು ಅಮೂಲ್ಯವಾದ ಗುಣ. ಸೆಲ್ಫ್ ಲವ್ ನಮ್ಮ ದೈ...
19/04/2023

ಸೆಲ್ಫ್ ಲವ್

Self love ಸ್ವ-ಪ್ರೀತಿ ಎನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲೂ ಅವಶ್ಯವಾಗಿ ಇರಬೇಕಾದ ಒಂದು ಅಮೂಲ್ಯವಾದ ಗುಣ. ಸೆಲ್ಫ್ ಲವ್ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ.
ಕೆಲವು ಬಾರಿ ನಾವು ಇತರರಿಗಿಂತ ವಿಭಿನ್ನವಾಗಿರುತ್ತೇವೆ ಅದು ಒಂದು ಸಮಸ್ಯೆಯೇ ಅಲ್ಲ ಏಕೆಂದರೆ ಪ್ರತಿಯೊಬ್ಬ ಮನುಷನು ಅವರದ್ದೇಯಾದ ಗುಣಗಳನ್ನು ಹೊಂದಿರುತ್ತಾನೆ.
ಇದು ನಿಮ್ಮ ಅನುಭವಕ್ಕೂ ಬಂದೇ ಇರುತೆ "ನೋಡು ಎಷ್ಟು ಕೊಬ್ಬು ಅವಳಿಗೆ ಯಾರ ಜೊತೆಗು ಮಾತೇ ಆಡಲ್ಲ ಸ್ವಲ್ಪ ಕೂಡ ಗೌರವ ಇಲ್ಲ". ಅಂತ ಹೇಳೋದನ್ನ ಕೇಳೇ ಇರ್ತೀರ ಅಯೋ ಅವ್ರು ಅದನ್ನು ಕೊಬ್ಬು, ಅಹಂಕಾರ ಅಂತ ಹೇಳಿದ್ರೆ ನಾನು ಅದನ್ನ ಸೆಲ್ಫ್ ರೆಸ್ಟೋರೆಂಟ್ ಅಂತ ಹೇಳ್ತೀನಿ. ಗೌರವ ಅನ್ನೋದು ಕೇವಲ ತೆಗೆದುಕೊಳ್ಳೋದು ಅಲ್ಲಾ ಅಲ್ವಾ ಅದು ಕೊಟ್ಟು ತೆಗೆದುಕೊಳ್ಳೋದು.
ಈ ಆತ್ಮಹತ್ಯೆಗಳಂತಹ ಪ್ರಕರಣಗಳು ಹೆಚ್ಚಾಗುತಿರೋದಕ್ಕೆ ಕಾರಣ ಸೆಲ್ಫ್ ಲವ್ ನ ಕೊರತೆ ಅಂತ ಅನ್ಸಲ್ವಾ. "ಅಯೋ ನನಗೆ ಅವಳಿಗಿಂತ ಕಡಿಮೆ ಅಂಕಗಳು ಬಂದಿವೆ". "ನಾನು ಅವನಷ್ಟು ಚನ್ನಾಗಿಲ್ಲಾ". "ಯಾರಾದ್ರೂ ಏನಾದ್ರು ಅಂದ್ರೆ".
"ಅವಳನ್ನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತೇನೆ ನನ್ನನ್ನ ಅವ್ಳು ಬಿಟ್ಟು ಹೋಗಬರದಾಗಿತ್ತು". ಅರೇ!... ನಿನಗೆ ನಿನ್ನ ಮೇಲೆ ಪ್ರೀತಿ ಇಲ್ಲ ಅಂದ್ರೆ ಅವಳನ್ನ ಅಥವಾ ಅವನನ್ನ ಪ್ರೀತಿಸಿ ಏನು ಪ್ರಯೋಜನ ? ಎಲ್ಲರಿಗೂ ಎಲ್ಲರೂ ಇಷ್ಟ ಆಗಬೇಕು ಅನ್ನೋ ನಿಯಮಗಳೇನು ಇಲ್ಲಾ ಅಲ್ವಾ. ಯಾರಿಗೆ ಇಷ್ಟ ಆಗ್ತಿವೋ ಬಿಡ್ತಿವೋ ಮೊದಲು ನಮಗೆ ನಾವು ಇಷ್ಟ ಆಗಬೇಕು.
ಸೆಲ್ಫ್ ಲವ್ ಅನ್ನೋದು ಈ ಕ್ಷಣದಲ್ಲಿ ನಿಮನ್ನು ನೀವು ಒಪ್ಪಿಕೊಳ್ಳುವುದು. ನಿಮ್ಮ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು. ಸೆಲ್ಫ್ ಲವ್ ಇಸ್ ಆಲ್ ಅಬೌಟ್ ಬಿಲಿವ್ ಇನ್ ಯುವರ್ ಸೆಲ್ಫ್. ನನ್ನನು ನಾನು ನಂಬದೇ ಇದ್ದಾಗ ಇತರರು ಹೇಗೆ ನನ್ನನು ನಂಬುತ್ತಾರೆ.
ಕೆಲವು ತಪ್ಪುಗಳಾಗುತ್ತೆ ತಪ್ಪೇ ಮಾಡದೆ ಇರೋರು ಜಗತ್ತಲ್ಲಿ ಯಾರಾದ್ರೂ ಇದ್ದಾರಾ?. ಶ್ರೀ ಕೃಷ್ಣ ಪರಮಾತ್ಮನೇ ಬೆಣ್ಣೆ ಕದ್ದು ಹಸಿವಾಗಿತ್ತು ತಿಂದೆ ಅಂತ ಹೇಳಬೇಕಾದರೆ, ನಮಗೆ ಗೊತ್ತಿಲ್ಲದೆ ಆಗಿರೋ ತಪ್ಪುಗಳು ಅದು ಹೇಗೆ ತಪ್ಪಾಗುತ್ತೆ. ತಪ್ಪಾದರೂ ಪಾಸ್ಚ್ಯಾ ತಾಪಕ್ಕಿಂತ ದೊಡ್ಡ ಶಿಕ್ಷೆ ಇಲ್ಲಾ ಅಂತ ಹೇಳ್ತಾರಲ್ವಾ. ನಮ್ಮನ ನಾವು ಕ್ಷಮಿಸಬೇಕು.
ಮೊದಲು ನಿಮ್ಮನ್ನು ನೀವು ಪ್ರೀತಿಸಿ ಇದರ ಅರ್ಥ ಇತರರನ್ನು ಪ್ರೀತಿಸಬೇಡಿ ಅನೋಡಲ್ಲ ಇತರರಿಗೆ ನೀಡೋ ಪ್ರೀತಿಯಲ್ಲಿ ಅರ್ಧದಷ್ಟದರು ನಿಮ್ಮ ಮೇಲೆ ಹೂಡಿಕೆ ಮಾಡಿ. ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನಿಮ್ಮ ನಿರ್ಣಯಗಳ ಮೇಲೆ ನಂಬಿಕೆಯಿರಲಿ. ನಿಮ್ಮ ದೇಹವನ್ನು ಆಲಿಸಿ ಬೇಕು ಬೇಡಗಳ ನಿರ್ಧಾರವನ್ನ ನೀವೇ ಮಾಡಿ.
ಒತ್ತಡದ ಕೆಲಸಗಳಿಂದ ಕೆಲ ಕಾಲ ವಿರಾಮ ತೆಗೆದುಕೊಳ್ಳಿ. ಪ್ರವಾಸವನ್ನು ಕೈಗೊಳ್ಳಿ, ಪ್ರಕೃತಿಗಿಂತ ಓಷದಿ ಮತ್ತೊಂದಿಲ್ಲ. ಆರೋಗ್ಯಕರವಾಗಿ ತಿನ್ನುವುದು, ಕೋಲವು ಬಾರಿ ನೆಚ್ಚಿನದನ್ನು ತಿನ್ನುವುದು.ಪ್ರೀತಿ ಪತ್ರರೊಂದಿಗೆ ಮಾತನಾಡುವುದು ಇವೆಲ್ಲವೂ ನಿಮ್ಮನ್ನು ಆರೋಗ್ಯವಾಗಿಡಲು ಮತ್ತು ಸಂತೋಷವಾಗಿದಳು ಸಹಾಯ ಮಾಡುತ್ತವೆ.
"If you have the ability to love,
Love your self first."
ಸೆಲ್ಫ್ ಲವ್ ಇಸ್ ಆಲ್ ಅಬೌಟ್ ಯು ಯು ಅಂಡ್ ಯು.

ಹಾಸ್ಟಲ್ ನೊಂದಿಗಿನ ಸಂಬಂಧ.ಹಾಸ್ಟಲ್ ಲೈಫ್ ಅದೆಷ್ಟು ಚಂದ ಅಲ್ವಾ. ಬಟ್ಟೆ ಓಗಿಯೋದಕ್ಕೂ ಕ್ಯೂ, ಜಳಕ ಮಾಡೋದಕ್ಕೂ ಕ್ಯೂ, ಒಟ್ಟಿನಲ್ಲಿ ಬೆಳಿಗ್ಗೆ ಎದ...
19/04/2023

ಹಾಸ್ಟಲ್ ನೊಂದಿಗಿನ ಸಂಬಂಧ.

ಹಾಸ್ಟಲ್ ಲೈಫ್ ಅದೆಷ್ಟು ಚಂದ ಅಲ್ವಾ. ಬಟ್ಟೆ ಓಗಿಯೋದಕ್ಕೂ ಕ್ಯೂ, ಜಳಕ ಮಾಡೋದಕ್ಕೂ ಕ್ಯೂ, ಒಟ್ಟಿನಲ್ಲಿ ಬೆಳಿಗ್ಗೆ ಎದ್ದಾಗ ಶುರುವಗೋ ಕಾರ್ಯಕ್ರಮದಿಂದ ಹಿಡಿದು ರಾತ್ರಿ ಊಟ ಮಾಡಿ ಮಲಗೋವರೆಗೂ ಎಲ್ಲದಕ್ಕೂ ಕ್ಯೂ.
ಇನ್ನು ಮೊದಲನೇ ಬಾರಿ ಹಾಸ್ಟಲ್ ಗೆ ಸೇರಿರುವವರ ಗೋಳಂತೂ ಹೇಳತಿರದ್ದು. "ಮನೇಲಿ ಆರಾಮಾಗಿದ್ದೆ ಇಲ್ಲಿಗೆ ಯಾಕಾದ್ರು ಬನ್ದನೋ" ಅಂತ ಪೇಚಾಡೋನೊಬ್ಬ. ಹಗಲೆಲ್ಲಾ ಆರಾಮಾಗಿದ್ದು ಎಲ್ಲರೂ ನಿದ್ರೆಗೆ ಜಾರುವ ಸಮಯದಲ್ಲಿ "ಮನೆ ನೆನಪಾಯ್ತು" ಅಂತ ಅಳೋನು ಇನ್ನೊಬ್ಬ, ಇವನನ್ನು ನೋಡಿ "ನನಗೂ ಮನೆ ನೆನಪಾಯ್ತು" ಅಂತ ಮತ್ತೊಬ್ಬ, ಬಂದು ಎರಡು ದಿನ ಆಗಿಲ್ಲ ಇವಾಗ್ಲೇ ಹಿಂಗ್ ಆಡ್ತಾ ಇದಿಯಾ ನನ್ನ ನೋಡು ನಾನು ಬಂದು ಒಂದು ತಿಂಗಳಾಯ್ತು ಇನ್ನು ಊರಿಗೆ ಹೋಗಿಲ್ಲ! ಅಂತ ಸಾಮಾದಾನ ಮಾಡೋ ನೆಪದಲ್ಲಿ ಮತ್ತೊಂದಿಷ್ಟು ಬೇಜಾರು ಮಾಡಿಸೋ ಗೆಳೆಯ ನಿಮ್ಮ ಹಾಸ್ಟೆಲ್ ನಲ್ಲೂ ಒಬ್ಬ ಇದ್ದೆ ಇರ್ತಾನೆ.
Sharing is caring ಅನ್ನೋ ಮಾತನ್ನ ಹಾಸ್ಟೆಲ್ ಜೀವನ ಅನುಭವಿಸಿರೋ ವೇಕ್ತಿನೆ ಬರೆದಿರಬೇಕು. "ಮಚ್ಚಾ ಪೇಸ್ಟ್ ಇದ್ರೆ ಕೊಡೋ", "ಮಚ್ಚಾ ಬುಕ್ ಎಲಿಟಿದ್ಯ", "ಮಚ್ಚಾ ನನ್ ತಟ್ಟೆ ಸಿಗ್ತಾಯಿಲ್ಲ ನಿನ್ ತಟ್ಟೆಯಲ್ಲೇ ನನಗೂ ಊಟ ಹಾಕ್ಸ್ಕೊಳ್ಳೋ" ಅಂತ ಊಟ ಮಾಡೋ ತಟ್ಟೆಯಲ್ಲೂ ಪಾಲು ಕೇಳೋ ನನ್ನತ್ತಾ ಸ್ನೇಹಿತ ಎಲ್ಲರಿಗೂ ಸಿಗಲ್ಲಾ ಬಿಡಿ.
ಹಾಸ್ಟಲ್ ಗೆ ಸೇರಿದ ಮೊದಲನೇ ದಿನ ಎಪ್ಪಾ ಎರಡು ವರ್ಷ ಇರ್ಬೇಕಾ ಈ ಹಾಸ್ಟೆಲ್ ನಲ್ಲಿ ನನ್ ಕೈಯಲ್ಲಿ ಆಗಲ್ಲ. ಯಾವಾಗ ಎರಡು ವರ್ಷ ಮುಗಿಯುತ್ತೋ ಅಂತ ದಿನಗಳನ್ನು ಲೆಕ್ಕಾ ಹಾಕುತ್ತಿದ್ದ ನಾನು ಕಾಲೇಜು ಮುಗಿಸಿ ಮನೆಗೆ ವಾಪಸಾಗಬೇಕಾದಗ ಎಲ್ಲಾ ಲಗೇಜನ್ನು ಆಟೋದಲ್ಲಿ ಇಟ್ಟಾದಮೇಲು ಅಣ್ಣ ಒಂದು ನಿಮಿಷ ಏನೋ ಮರೆತು ಬಂದಿದ್ದೀನಿ ತಗೊಂಡು ಬಂದು ಬಿಡ್ತೀನಿ ಅಂತ ಸುಳ್ಳು ಹೇಳಿ ನಾನಿದ್ದ ರೂಮ್, ಹಾಸ್ಟೆಲ್ ಕಾಂಪೋಂಡ್, ಟೆರೇಸ್ ಹೀಗೆ ಹಾಸ್ಟಲ್ ನ ಮೂಲೆ ಮೂಲೆಗಳಿಗೂ ವಿದಾಯ ಹೇಳುವಾಗ ಕಣ್ಣಂಚಿನಲ್ಲಿ ಬಂದ ಆ ಕಣ್ಣೀರಿಗೆ ಕಾರಣವೇ ತಿಳಿಯಲಿಲ್ಲ.
ಹಾಸ್ಟಲ್ ಅದೆಷ್ಟೋ ಜನರ ಪಾಲಿಗೆ ಸ್ವತಂತ್ರವಾಗಿ ಬದುಕಲು ಕಲಿಸಿದ ಪಾಠಶಾಲೆ. ಬಟ್ಟೆ ಹೊಗೆಯುವುದರಿಂದ ಹಿಡಿದು ನಾನು ತಿಂದ ತಟ್ಟೆಯನ್ನು ನಾನೇ ತೊಳೆಯುವುದರವರೆಗೂ ಅದೆಷ್ಟೋ ವಿಷಯಗಳನ್ನು ಇಲ್ಲಿಂದಲೇ ಕಲಿತಿರುವೆ.

Address


Website

Alerts

Be the first to know and let us send you an email when Lakki.s.Blogs posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share