Namma hassan life

  • Home
  • Namma hassan life

Namma hassan life Video editing
(2)

ಓಂ ನಮಃ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ನಮಃ  #ಶ್ರೀಜೇನುಕಲ್. .
18/12/2023

ಓಂ ನಮಃ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ನಮಃ
#ಶ್ರೀಜೇನುಕಲ್.
.

18/12/2023
16/12/2023
ಮಳಲಿ ಬೈಪಾಸ್‌ ರಸ್ತೆ ಸಮೀಪ ಭೂಕುಸಿತಸಕಲೇಶಪುರ: ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಸಕಲೇಶಪುರ ನಡುವಿನ ಮೊದಲ ಹಂತದ ಚತುಷ್ಪಥ ...
16/12/2023

ಮಳಲಿ ಬೈಪಾಸ್‌ ರಸ್ತೆ ಸಮೀಪ ಭೂಕುಸಿತ

ಸಕಲೇಶಪುರ: ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಸಕಲೇಶಪುರ ನಡುವಿನ ಮೊದಲ ಹಂತದ ಚತುಷ್ಪಥ ರಸ್ತೆ ಕಾಮಗಾರಿ ಮುಂಬರುವ ಜನವರಿ 20ರ ಒಳಗೆ ಉದ್ಘಾಟನೆಗೊಳ್ಳುವುದು ಅನುಮಾನವಾಗಿದೆ.
ಹಾಸನದ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗದ್ದೆ ಗ್ರಾಮದ ಹೊರವಲಯದವರೆಗಿನ 54 ಕಿ.ಮೀ. ರಸ್ತೆ ಚತುಷ್ಪಥಕ್ಕೆ 2016 ರಲ್ಲಿ ಟೆಂಡರ್‌ ಕರೆಯಲಾಗಿದ್ದು, 2019ರ ಏಪ್ರಿಲ್‌ ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮ ಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್‌ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 54 ಕಿ.ಮೀ. ರಸ್ತೆಯನ್ನು ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂಕುಸಿತಕ್ಕೆ ಕಾರಣವಾಗಿತ್ತು.
ಕುಂಟುತ್ತ ಸಾಗಿದ್ದ ಕಾಮಗಾರಿ: ಈ ನಡುವೆ ಐಸೋಲೆಕ್ಸ್‌ ಕಂಪನಿ ದಿವಾಳಿಯಾಗಿದ್ದರಿಂದ ಐಸೋಲೆಕ್ಸ್‌ ಕಂಪನಿಯ ಬಳಿ ಉಪಗುತ್ತಿಗೆ ಮಾಡು ತ್ತಿದ್ದ ರಾಜ್‌ಕಮಲ್‌ ಕಂಪನಿ ಕಳೆದ 6 ವರ್ಷಗಳಿಂದ ಕಾಮಗಾರಿಯನ್ನು ಕುಂಟುತ್ತ ನಡೆಸುತ್ತಿದ್ದು, ಇದೀಗ ಹಾಸನ ಸಕಲೇಶಪುರ ನಡುವೆ ಕಾಮಗಾರಿ ಬಹುತೇಕವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ. ಕಾಮಗಾರಿಯನ್ನು ಕಳೆದ ತಿಂಗಳು ಪರಿಶೀಲಿಸಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಜನವರಿ 2ನೇ ವಾರದೊಳಗೆ ಹಾಸನದಿಂದ ಸಕಲೇಶಪುರ ಬೈಪಾಸ್‌ ಮಾರ್ಗವಾಗಿ ಆನೆಮಹಲ್‌ವರೆಗಿನ 40 ಕಿ.ಮೀ. ಅಂತರದ ರಸ್ತೆಯ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುವುದಾಗಿ ಹೇಳಿದ್ದರು. ಆದರೆ, ಇದೀಗ ಕಾಮಗಾರಿಯ ವೇಗ ನೋಡಿದರೆ ಜನವರಿ 20ರ ಒಳಗೆ ಉದ್ಘಾಟನೆಗೊಳ್ಳುವುದು ಬಹುತೇಕ ಅನುಮಾನವಾಗಿದೆ.
ಪಟ್ಟಣದ ವಾಹನ ದಟ್ಟಣೆ ತಪ್ಪಿಸಲು ಕೊಲ್ಲಹಳ್ಳಿ- ಮಳಲಿ-ಕೌಡಹಳ್ಳಿ ಮಾರ್ಗವಾಗಿ ಆನೆಮಹಲ್‌ಗೆ ಸೇರಲು ಬೈಪಾಸ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, ಕಾಮಗಾರಿಯನ್ನು ಮುಗಿಸಲು ತರಾತುರಿಯಲ್ಲಿ ಕೆಲಸ ಮಾಡಲಾಗುತ್ತಿದೆ. ರಸ್ತೆಗೆ ಹಾಕಲಾಗುತ್ತಿರುವ ಮಣ್ಣು ಹೊಂದಿಕೊಳ್ಳಲು ಅವಕಾಶ ಕೊಡದೆ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
ತರಾತುರಿಯಲ್ಲಿ ಕೆಲಸ: ಮಳಲಿ ಬೈಪಾಸ್‌ ಸಮೀಪ ಭೂಕುಸಿತ ಉಂಟಾಗಿ ತಡೆಗೋಡೆ ಸಹ ಮುಂದಕ್ಕೆ ಹೋಗಿದ್ದು, ಯಾವುದೇ ಸಂದರ್ಭದಲ್ಲಿ ರಸ್ತೆ ಕುಸಿಯುವ ಆತಂಕ ನಿರ್ಮಾಣವಾಗಿದೆ. ಇದಲ್ಲದೇ ಕೊಲ್ಲಹಳ್ಳಿಯಿಂದ ಮುಂದೆ ಬೈಪಾಸ್‌ನಲ್ಲೂ ಮೋರಿಯೊಂದು ಕಿತ್ತು ಬಂದಿದೆ. ಇಲ್ಲೂ ಸಹ ಭೂ ಕುಸಿತದ ಆತಂಕ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಕಾಮಗಾರಿ ಶೀಘ್ರ ಮುಕ್ತಾಯ ಮಾಡಲು ತರಾತುರಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ತರಾತುರಿಯಲ್ಲಿ ಜನವರಿ 20ರ ಒಳಗೆ ರಸ್ತೆ ಉದ್ಘಾಟನೆಗೆ ಲಭ್ಯವಿರಬೇಕೆಂದು ಬೈಪಾಸ್‌ ರಸ್ತೆ ಕಾಮಗಾರಿ ಮಾಡಲಾಗುತ್ತಿದ್ದು, ಇದರಿಂದ ಕಾಮಗಾರಿಯ ಗುಣಮಟ್ಟ ಕಡಿಮೆಯಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಮತ್ತಷ್ಟು ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ.
ಮಳೆಯಿಲ್ಲದೇ ಕುಸಿತ, ಮಳೆ ಬಂದರೆ ಇನ್ನೇನು ಕಥೆ?: ಬೇಸಿಗೆಯಲ್ಲೇ ಈ ರೀತಿ ಭೂ ಕುಸಿತವಾಗಿದ್ದು, ಇನ್ನು ಭಾರೀ ಮಳೆ ಸುರಿದರೆ ಮುಂದೇನಾಗುವುದೆಂಬ ಪ್ರಶ್ನೆ ಉದ್ಭವವಾಗಿದೆ. ರಸ್ತೆಗೆ ಮಣ್ಣು ಸುರಿದ ನಂತರ ಮಣ್ಣಿನ ಮೇಲೆ ಕಾಂಕ್ರೀಟ್‌ ಬೆಡ್ಡಿಂಗ್‌ ಹಾಕಲು ಕೆಲ ಸಮಯ ನೀಡಬೇಕು. ಆದರೆ, ಗುಂಡಿ ಇರುವ ಜಾ

ಅರ್ಜುನನ ಸಮಾಧಿ ಬಳಿ ಕಾಡಾನೆಗಳು ಬಂದು ತಂತಿ ಬೇಲಿಯನ್ನು ಮುರಿದು ಹಾಕಿವೆ
15/12/2023

ಅರ್ಜುನನ ಸಮಾಧಿ ಬಳಿ ಕಾಡಾನೆಗಳು ಬಂದು ತಂತಿ ಬೇಲಿಯನ್ನು ಮುರಿದು ಹಾಕಿವೆ

ಅರ್ಜುನನ ಪುಣ್ಯಾರಾಧನೆಸಕಲೇಶಪುರ: ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಕಾಡಾನೆಯೊಂದಿಗಿನ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯ ಪುಣ್ಯರಾಧನೆಯನ್ನು ಗು...
14/12/2023

ಅರ್ಜುನನ ಪುಣ್ಯಾರಾಧನೆ

ಸಕಲೇಶಪುರ: ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಕಾಡಾನೆಯೊಂದಿಗಿನ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯ ಪುಣ್ಯರಾಧನೆಯನ್ನು ಗುರವಾರ ಅರಣ್ಯ ಇಲಾಖೆ ಸಿಬ್ಬಂದಿ ವಿಧಿವತ್ತಾಗಿ ನೆರವೇರಿಸಿದರು.
ಮುಂಜಾನೆ ಸಮಾಧಿ ಸಮೀಪ ನೀರು ಹಾಕಿ ಸ್ವಚ್ಛಗೊಳಿಸಿದ ಯಸಳೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಹೂವುಗಳಿಂದ ಶೃಂಗರಿಸಿದ್ದರು. ನಂತರ ಅರ್ಜುನ ಆನೆಯ ಭಾವ ಚಿತ್ರವನ್ನು ಸಮಾಧಿಗೆ ಇಟ್ಟ, ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿ ಹಾಲು ತಪ್ಪು ತರ್ಪಣೆ ಮಾಡುವ ಮೂಲಕ ಅರ್ಜುನನ ಆತ್ಮಕ್ಕೆ ಶಾಂತಿದೊರಕಲೆAದು ಪ್ರಾರ್ಥಿಸಿದರು. ಸಿಬ್ಬಂದಿ ಸಮಾಧಿಗೆ ನಮಿಸುವ ಮೂಲಕ ಗೌರವ ಸಲ್ಲಿಸಿದರು.

ಹಾಸನ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಹೊದ್ದು ಕಣ್ಮನ ಸೆಳೆಯುವ ಸಕಲೇಶಪುರ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನ...
14/12/2023

ಹಾಸನ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಹೊದ್ದು ಕಣ್ಮನ ಸೆಳೆಯುವ ಸಕಲೇಶಪುರ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನೂರಾರು ಜಲಪಾತ, ಬೆಟ್ಟಗುಡ್ಡ, ದೇಗುಲ, ಕೋಟೆ ಹೀಗೆ ಹತ್ತು ಹಲವು ವಿಶೇಷತೆಗಳಿದ್ದರೂ, ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಪ್ರವಾಸಿಗರನ್ನು ಸೆಳೆಯುವಲ್ಲಿ ಸಕಲೇಶಪುರ ತಾಲ್ಲೂಕಿನ ತಾಣಗಳು ಯಶಸ್ವಿಯಾಗಿದ್ದರೂ, ಸೌಲಭ್ಯಗಳಿಲ್ಲದೇ ಜನರು ಬರುವುದು ಸಾಧ್ಯವಾಗುತ್ತಿಲ್ಲ.

ಹಾಸನ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಎಂದಾಕ್ಷಣ ಬೇಲೂರು, ಹಳೇಬೀಡು, ಶ್ರವಣಬೆಳಗೊಳಗಳು ಮಾತ್ರ ನೆನಪಿಗೆ ಬರುತ್ತವೆ. ಜನರ ಬಾಯಿಂದ ಬಾಯಿಗೆ, ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ವಾರದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಸೌಲಭ್ಯ ಇಲ್ಲದೇ, ರೆಸಾರ್ಟ್ ಹಾಗೂ ಹೋಂ ಸ್ಟೇಗಷ್ಟೇ ಬಂದು ಹೋಗುತ್ತಿದ್ದಾರೆ.
ಪ್ರವಾಸಿ ತಾಣಗಳ ಅಭಿವೃದ್ಧಿಯಾದರೆ ಸ್ಥಳೀಯ ನೂರಾರು ಸಂಖ್ಯೆಯ ಯುವಕರಿಗೆ ಉದ್ಯೋಗ, ಇನ್ನಷ್ಟು ಹೊಟೆಲ್, ಅಂಗಡಿ ಮುಂಗಟ್ಟುಗಳು ಆರಂಭವಾಗಲಿದ್ದು, ಹಲವು ರೀತಿಯ ವ್ಯಾಪಾರ ವಹಿವಾಟುಗಳು ತಲೆ ಎತ್ತಲಿವೆ. ಇದರಿಂದ ಹಲವು ಕುಟುಂಬಗಳಿಗೆ ಉದ್ಯೋಗ ಜೊತೆಗೆ ತಾಲ್ಲೂಕಿನ ಆರ್ಥಿಕ ಚಟುವಟಿಕೆ ಅಭಿವೃದ್ಧಿ ಹೊಂದುತ್ತದೆ ಎನ್ನುವ ಮಾತುಗಳು ಇಲ್ಲಿನ ಜನರದ್ದು. ಕರ್ನಾಟಕದಲ್ಲಿರುವ ವಿಶೇಷವಾದ ಮಂಜರಾಬಾದ್ ಕೋಟೆ, ಅಷ್ಟಭುಜಾಕೃತಿಯ ನಕ್ಷತ್ರಾಕಾರದಲ್ಲಿದೆ. ಟಿಪ್ಪು ಸುಲ್ತಾನನು ತನ್ನ ಆಡಳಿತದ ಕಾಲದಲ್ಲಿ ರಕ್ಷಣೆಗಾಗಿ ರಚಿಸಿಕೊಂಡ ಕೋಟೆ ಇದಾಗಿದೆ. ಇಲ್ಲಿಗೆ ಚಾರಣ ಹೋಗುವುದು ಸ್ವಲ್ಪ ಕಷ್ಟವಾದರೂ, ಮೇಲೆ ನಿಂತು ಪಶ್ಚಿಮ ಘಟ್ಟಗಳತ್ತ ಕಣ್ಣಾಯಿಸಿದಾಗ ಚಾರಣದ ನೋವು ಮರೆತು ಹೋಗುತ್ತದೆ. ಈ ಸ್ಥಳವು ಭಾರತದ ಪುರಾತತ್ತ್ವ ಶಾಸ್ತ್ರದ ಸರ್ವೇಕ್ಷಣಾ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ.
ಇನ್ನು ಬಿಸಲೆ ಮೀಸಲು ಅರಣ್ಯ ಅನೇಕ ಜೀವವೈವಿಧ್ಯಗಳ ನೆಲೆ. ನಿಸರ್ಗ ದೇವತೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಜೇನುಕಲ್ಲು ಬೆಟ್ಟ, ಪುಷ್ಪಗಿರಿ ಮತ್ತು ಕುಮಾರ ಪರ್ವತದ ವಿಹಂಗಮ ನೋಟವನ್ನು ಕಾಣಬಹುದು. ಅಗ್ನಿ ಗುಡ್ಡದ ತುದಿಯಿಂದ ನೀವು ನಿಸರ್ಗದ ಅದ್ಭುತ ಸೌಂದರ್ಯವನ್ನು ಕಾಣಬಹುದು. ಜೇನುಕಲ್ಲು ಗುಡ್ಡ. ಪಾಂಡವರ ಗುಡ್ಡ ಅಥವಾ ಬೆಟ್ಟದ ಭೈರವೇಶ್ವರ ದೇವಸ್ಥಾನದಿಂದ ಜೇನುಕಲ್ಲು ಗುಡ್ಡಕ್ಕೆ ಚಾರಣ ಮಾಡಬಹುದು.
ಪ್ರಮುಖವಾಗಿ ಸಕಲೇಶಪುರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಎಲ್ಲ ಸೌಕರ್ಯಗಳೂ ಇವೆ. ರೆಸಾರ್ಟ್, ಹೋಂಸ್ಟೇಗಳಿದ್ದು, ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳಿವೆ. ಇದೀಗ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಅಲ್ಲಿಂದಲೂ ಸಕಲೇಶಪುರಕ್ಕೆ ಭೇಟಿ ನೀಡಬಹುದಾಗಿದೆ. ಅದಾಗ್ಯೂ ಸರ್ಕಾರಗಳಿಂದ ನಿರೀಕ್ಷಿತ ಮಟ್ಟದಲ್ಲಿ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವ ಬೇಸರ ಜನರದ್ದು.

ಮರಗುಂದ ಮಂಜರಾಬಾದ್ ಕೋಟೆ ಮೂಕನಮನೆ ಅಬ್ಬಿ ಜಲಪಾತ ಬಿಸಿಲೆ ಘಾಟ್ ಪಾಂಡವರ ಬೆಟ್ಟ ಮೂರ್ಕಣ್ ಬೆಟ್ಟ ಜೇನುಕಲ್ಲು ಬೆಟ್ಟ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ.
ಎಚ್.ಕೆ. ಪಾಟೀಲ್ ಪ್ರವಾಸೋದ್ಯಮ ಸಚಿವ

ಶ್ರೀಪುರದಮ್ಮನ ಕಳಸ
14/12/2023

ಶ್ರೀಪುರದಮ್ಮನ ಕಳಸ

ವಿಮಾನ ನಿಲ್ದಾಣ ಕಾಮಗಾರಿ ವಿಳಂಬ2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದ ರಾಜ್ಯ ಸರ್ಕಾರಬೆಳಗಾವಿ: ಹಾಸನ ವಿಮಾನ ನಿಲ್ದಾಣ ಕಾ...
13/12/2023

ವಿಮಾನ ನಿಲ್ದಾಣ ಕಾಮಗಾರಿ ವಿಳಂಬ
2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದ ರಾಜ್ಯ ಸರ್ಕಾರ

ಬೆಳಗಾವಿ: ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ. ಈ ಮೊದಲು 2024 ರ ಅಂತ್ಯಕ್ಕೆ ವಿಮಾನ ಹಾರಾಟ ಆರಂಭ ಆಗಲಿದೆ ಎಂದು ಹೇಳಲಾಗಿತ್ತು. ಆದರೀಗ ಹಾಸನ ವಿಮಾನ ನಿಲ್ದಾಣದ ಕಾಮಗಾರಿಗಳನ್ನು 2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ.
ಹಾಸನ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿರುವ ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಕಾಮಗಾರಿಯ ಸಂಪೂರ್ಣ ವಿವರ ನೀಡಿದ್ದಾರೆ.
ಯೋಜನೆಗೆ ತಯಾರಿಸಿರುವ ಅಂದಾಜು ಮೊತ್ತ ಎಷ್ಟು ಎಂಬ ಸ್ವರೂಪ್ ಅವರ ಪ್ರಶ್ನೆಗೆ, ಲೋಕೋಪಯೋಗಿ ಇಲಾಖೆಯಿಂದ ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ವಿವರವಾದ ಯೋಜನಾ ವರದಿಯನ್ನು 220 ಕೋಟಿ ಮೊತ್ತದಲ್ಲಿ ತಯಾರಿಸಲಾಗಿತ್ತು. ಈ ಪೈಕಿ ಕಾಂಪೌAಡ್ ಗೋಡೆ, ಅಪ್ರೋಚ್ ರಸ್ತೆ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಟವರ್ ಕಾಮಗಾರಿಗೆ 19.67 ಕೋಟಿ, ರನ್ ವೇ, ಏಪ್ರಾನ್ ಟ್ರಾಕ್ಸಿ ವೇ, ಫೆರಿಫರಲ್ ರೋಡ್ ಮತ್ತು ಒಳಾವರಣ ರಸ್ತೆಗೆ 98.85 ಕೋಟಿ, ಟರ್ಮಿನಲ್ ಕಟ್ಟಡ, ಕಾರ್ಗೋ ಏಟಿಸಿ ಟವರ್, ಹ್ಯಾಂಗರ್, ಅಗ್ನಿಶಾಮಕ ಠಾಣೆಗೆ 94.23 ಕೋಟಿ, ನೀರು ಸರಬರಾಜು ಮತ್ತು ನೈರ್ಮಲೀಕರಣ, ವಿದ್ಯುತ್ ಮತ್ತು ಇತರೆ ಕಾಮಗಾರಿಗಳು 6.05 ಕೋಟಿ ಹಾಗೂ ಇತರೆ ವೆಚ್ಚಗಳು 7.20 ಕೋಟಿ ಎಂದು ಮಾಹಿತಿ ನೀಡಿದ್ದಾರೆ.
ಕಾಮಗಾರಿಯ ಅಂದಾಜು ಮೊತ್ತವೆಷ್ಟು, ಬಿಡುಗಡೆಯಾಗಿರುವ ಅನುದಾನ ಎಷ್ಟು ಎಂಬ ಇನ್ನೊಂದು ಪ್ರಶ್ನೆಗೆ, ಒಟ್ಟು ಅಂದಾಜು ಮೊತ್ತ 193.65 ಕೋಟಿಯಾಗಿದ್ದು, ಈವರೆಗೂ 164.70 ಕೋಟಿ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದುವರಿದು ಹಾಸನ ವಿಮಾನ ನಿಲ್ದಾಣದ ಮೂಲ ಉದ್ದೇಶ ಹಾಗೂ ಮೂಲ ನಕ್ಷೆಯಂತೆ ಎಲ್ಲಾ ಜಮೀನುಗಳನ್ನು ಸಂಪೂರ್ಣವಾಗಿ ಭೂ ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಜೊತೆಗೆ ಗಾಲ್ಫ್ಕೋರ್ಟ್, ಕಾರ್ಗೋ, ಎಂಆರ್‌ಒ ಸೌಲಭ್ಯ ಮತ್ತು ವಾಯುಯಾನ ತರಬೇತಿ, ಸಂಪರ್ಕರಸ್ತೆ ಮುಂತಾದ ಮೂಲ ಸೌಲಭ್ಯಗಳುಲ್ಲ ಹಾಸನ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಸ್ವರೂಪ್ ಪ್ರಶ್ನೆ ಮಾಡಿದರು. ಇದಕ್ಕೆ ಹಾಸನ ವಿಮಾನ ನಿಲ್ದಾಣವನ್ನು ಎಟಿಆರ್-72 ಮಾದರಿ ವಿಮಾನಗಳ ಕಾರ್ಯಾಚರಣೆಗೆ ಅನುವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ನಿಲ್ದಾಣಗಳನ್ನು ಎ-320 ಮಾದರಿ ವಿಮಾನಗಳ ಕಾರ್ಯಾಚರಣೆಗೆ ವಿನ್ಯಾಸ ಮಾಡಲಾಗಿದೆ. ಅದರಂತೆ ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಸ್ತುತ ಯಾವ ಹಂತದಲ್ಲಿದೆ. ಯಾವ ಕಾಲಮಿತಿಯಲ್ಲಿ ಮುಗಿಯಲಿದೆ ಎಂಬ ಪ್ರಶ್ನೆಗೆ, ಪ್ಯಾಕೇಜ್ 1 ಆರ್ಥಿಕ ಪ್ರಗತಿ ಶೇ.62.26 ಹಾಗೂ ಭೌತಿಕ ಪ್ರಗತಿ ಶೇ.63.40 ಮತ್ತು ಪ್ಯಾಕೇಜ್ 2ರ ಆರ್ಥಿಕ ಪ್ರಗತಿ ಶೇ.5.20, ಭೌತಿಕ ಪ್ರಗತಿ ಶೇ.12.14 ರಷ್ಟು ಸಾಧಿಸಲಾಗಿದೆ. ಎಲ್ಲಾ ಕಾಮಗಾರಿಗಳನ್ನು 2024-25 ನೇ ಸಾಲಿನಲ್ಲಿ ಪೂ

ಸಂಭ್ರಮದ ಕಣಿವೆ ಬಸವೇಶ್ವರ ಜಾತ್ರಾ ಮಹೋತ್ಸವ ಅರಕಲಗೂಡು: ತಾಲ್ಲೂಕಿನ ತೇಜೂರು ಸಮೀಪದ ಕಣಿವೆ ಬಸವೇಶ್ವರ ದೇವರ 63ನೇ ವರ್ಷದ ಜಾತ್ರಾ ಮಹೋತ್ಸವ ಸೋಮ...
13/12/2023

ಸಂಭ್ರಮದ ಕಣಿವೆ ಬಸವೇಶ್ವರ ಜಾತ್ರಾ ಮಹೋತ್ಸವ

ಅರಕಲಗೂಡು: ತಾಲ್ಲೂಕಿನ ತೇಜೂರು ಸಮೀಪದ ಕಣಿವೆ ಬಸವೇಶ್ವರ ದೇವರ 63ನೇ ವರ್ಷದ ಜಾತ್ರಾ ಮಹೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.
ದೇವಾಲಯದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ತಮ್ಮ ಪಶು ಸಂಪತ್ತನ್ನು ಸಂರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಸುತ್ತಮುತ್ತಲಿನ ಹಳ್ಳಿಗಳ ರೈತರು ಜಾನುವಾರುಗಳಿಗೆ ಆಕರ್ಷಕವಾಗಿ ಅಲಂಕಾರ ಮಾಡಿಕೊಂಡು ಕರೆತಂದಿದ್ದರು. ಜಾತ್ರೆಗೆ ಸೇರಿದ್ದ ಜನರು ಅಲಂಕೃತ ಜಾನುವಾರುಗಳನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು. ಜಾನುವಾರು ಪ್ರದರ್ಶನದಲ್ಲಿ ಮೂವತಕ್ಕೂ ಹೆಚ್ಚಿನ ಎತ್ತಿನ ಜೋಡಿಗಳು ಪಾಲ್ಗೊಂಡಿದ್ದವು. ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಜಾತ್ರೆಯಲ್ಲಿ ವಿವಿಧ ಸಿಹಿ ತಿನಿಸುಗಳು ಹಾಗೂ ಅಲಂಕಾರಿಕ ವಸ್ತುಗಳ ವ್ಯಾಪಾರವೂ ನಡೆಯಿತು. ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೇಲೂರು ಬಸ್ ನಿಲ್ದಾಣ ಒಂದು ಕಾಲದಲ್ಲಿ
13/12/2023

ಬೇಲೂರು ಬಸ್ ನಿಲ್ದಾಣ ಒಂದು ಕಾಲದಲ್ಲಿ

ಶ್ರೀ ಸೀತಾರಾಮ ಮಂದಿರ, ವಾಚನಾಲಯ ರಸ್ತೆ -ಅರಸೀಕೆರೆ
12/12/2023

ಶ್ರೀ ಸೀತಾರಾಮ ಮಂದಿರ, ವಾಚನಾಲಯ ರಸ್ತೆ -ಅರಸೀಕೆರೆ

ಅರ್ಜುನ ಆನೆ ಸಾವು: ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ:  ಈಶ್ವರ ಖಂಡ್ರೆ ಹಾಸನ: ಕಾಡಾನೆ ಕಾರ್ಯಾಚರಣೆ ವೇಳೆ ಮಾಜ...
10/12/2023

ಅರ್ಜುನ ಆನೆ ಸಾವು: ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ: ಈಶ್ವರ ಖಂಡ್ರೆ

ಹಾಸನ: ಕಾಡಾನೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿದ್ದಾನೆ. ಅರ್ಜುನ ಸಾವಿನ ಬಗ್ಗೆ ಅನೇಕರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ವನ್ಯಜೀವಿ ಪಾಲಕರ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ ಮಾಡಿದ್ದೇವೆ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, 15 ದಿನದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ದಸರಾ ಆನೆ ಅರ್ಜುನನನ್ನು ಕಳೆದುಕೊಂಡಿದ್ದು ದುಃಖಕರ. ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ನೋವು ತಂದಿದೆ. ಅರ್ಜುನನಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಅರ್ಜುನ ಸಮಾಧಿ ಸ್ಥಳ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಾಚರಣೆ ಅತ್ಯಂತ ಅಪಾಯದ್ದು. ಈ ಬಾಗದಲ್ಲಿ ಸಾಕಷ್ಟು ಆನೆಗಳು ಬೆಳೆ ನಾಶ ಮಾಡಿವೆ. ಚಿಕ್ಕಮಗಳೂರಿನಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದರು. ಹೀಗಾಗಿ ಆನೆ ಸೆರೆ ಹಿಡಿಯಲು ಸಾಕಷ್ಟು ಒತ್ತಡ ಇತ್ತು. ಈ ಸಂಬಂಧ ನವೆಂಬರ್ 24 ರಿಂದ ಕಾರ್ಯಾಚರಣೆ ಆರಂಭ ಆಗಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ಅಧಿಕಾರಿಗಳು ಎಲ್ಲ ಮಾನದಂಡ ಅನುಸರಣೆ ಮಾಡಿದ್ದಾರೆ. ಪುಂಡಾನೆ ಏಕಾ ಏಕಿ ದಾಳಿ ಮಾಡಿದೆ. ಹೀಗಾಗಿ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಆದರು ಕೆಲವರು ಘಟನೆ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ಗೆ ಅರವಳಿಕೆ ಮದ್ದು ಬಿದ್ದಿದೆ, ಅರ್ಜುನನಿಗೆ ಗುಂಡು ತಗುಲಿದೆ ಎಂಬ ಆರೋಪವಿದೆ. ಬಾಹ್ಯ ಮರಣೋತ್ತರ ಪರೀಕ್ಷೆ ಆಗಿದೆ. ಈ ವರದಿಯಲ್ಲಿ ಗುಂಡು ತಗುಲಿದ ಬಗ್ಗೆ ಮಾಹಿತಿ ಇಲ್ಲ. ಎಸ್ಓಪಿ ಅಪ್ಡೇಡ್ ಆಗಬೇಕಿದೆ. ಈ ಬಗ್ಗೆ ಕೂಡ ಕ್ರಮ ವಹಿಸುತ್ತೇವೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದರು.

ಅರ್ಜುನನಿಗೆ ಗುಂಡೇಟು ಬಿದ್ದಿಲ್ಲ: ಹಾಗಾದ್ರೆ ಅಂಬಾರಿ ಆನೆ ಮೃತಪಟ್ಟಿದ್ದು ಹೇಗೆ? ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ ಹಾಸನ: ಅರ್ಜುನನ ಕಾಲಿಗೆ ಯಾ...
10/12/2023

ಅರ್ಜುನನಿಗೆ ಗುಂಡೇಟು ಬಿದ್ದಿಲ್ಲ: ಹಾಗಾದ್ರೆ ಅಂಬಾರಿ ಆನೆ ಮೃತಪಟ್ಟಿದ್ದು ಹೇಗೆ? ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ

ಹಾಸನ: ಅರ್ಜುನನ ಕಾಲಿಗೆ ಯಾವುದೇ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರೆಲ್ ಚರ್ರೆ ಕೋವಿ ಮಾತ್ರ ಅದರಲ್ಲಿ ಆನೆ ಸಾಯುವುದಿಲ್ಲ ಎಂದು ವನ್ಯಜೀವಿ ವೈದ್ಯ ರಮೇಶ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ. ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಆಗಲು ಹೀಗೆ ಆಗುತ್ತಿತ್ತ ಎಂದು ಹೇಳುವುದು ಕಷ್ಟ ಎಂದಿದ್ದಾರೆ. ಆ ಮೂಲಕ ಅರ್ಜುನನ ಸಾವಿನ ಬಗ್ಗೆ ಹರಡಿದ್ದ ಹಲವು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ವೈದ್ಯ ರಮೇಶ್
ಕಾರ್ಯಾಚರಣೆ ದಿನ ಡಿಸೆಂಬರ್ 4 ರಂದು ನಾನು ಆನೆ ಮಾವುತ ವಿನು, ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಕುಳಿತ್ತಿದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್ಎಫ್ಓ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು ಎಂದು ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ.
ವಿಕ್ರಾಂತ್ ಆನೆ ಎದುರಾದರೆ ನಾನು ಹಾಗೂ ಇನ್ನೊಂದು ಆನೆ ಎದುರಾದರೆ ರಂಜನ್ ಅರವಳಿಕೆ ಮದ್ದು ನೀಡುವ ನಿರ್ಧಾರ ಆಗಿತ್ತು. ಅದರಂತೆ ನಾವು ಕಾಡಿನೊಳಗೆ ಎಂಟ್ರಿ ಆದಾಗ ಒಂದು ಆನೆ ಗುಂಪು ಕಾಣಿಸಿತು. ಅದರಲ್ಲಿ ವಿಕ್ರಾಂತ್ ಆನೆ ಇರಲಿಲ್ಲ. ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ.
ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರುವ ಆನೆ ನಮ್ಮ ಟಾರ್ಗೆಟ್ ಆನೆಯಾ ಅಥವಾ ಸಲಗವೇ ಅಥವಾ ಹೆಣ್ಣಾನೆಯಾ ಎನ್ನೋದು ಖಾತ್ರಿ ಆಗಬೇಕಿತ್ತು. ನಾವು ಮೇಲಿದ್ದವು ಆ ಒಂಟಿ ಸಲಗ ಕೆಳಗೆ ಇತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಆನೆ ಸುತ್ತುವರೆದೆವು. ಇದನ್ನು ಡಾಟ್ ಮಾಡುವ ಬಗ್ಗೆ ರಂಜನ್ ಮತ್ತು ನಾವು ಮಾತಾಡಿಕೊಂಡೆವು.
ಏಕಾಏಕಿ ದಾಳಿ
ನಾನು ಡಾಟ್ ಮಾಡುತ್ತೇನೆ ಎಂದು ಹೇಳಿ ನಾನು ನನ್ನ ಅರವಳಿಕೆ ಸಜ್ಜು ಮಾಡಿಕೊಂಡೆ. ಪ್ರಸರ್ ಫಿಕ್ಸ್ ಮಾಡಿ ಡಾಟ್ ಮಾಡಲು ರೆಡಿಯಾಗಿದ್ದ ವೇಳೆಗೆ ಆ ಆನೆ ಏಕಾಏಕಿ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ. ಯಾವುದೇ ಆನೆಯ ಮುಖದ ಭಾಗಕ್ಕೆ ಹುಟ್ಟೆಗೆ ಇಂಜೆಕ್ಷನ್ ಹೊಡೆಯುವ ಹಾಗಿಲ್ಲ. ಆಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆ ಜೀವಕ್ಕೆ ಅಪಾಯ ಇದೆ ಹಾಗಾಗಿ ಆಗ ಡಾಟ್ ಮಾಡಲು ಆಗಲಿಲ್ಲ. ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿ ಮಾಡಿದಾಗ ನಾವೆಲ್ಲ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಆನೆ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
ಪ್ರಶಾಂತ್ ಆನೆಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನ

https://m.facebook.com/story.php?story_fbid=759521629524429&id=100063997964617&mibextid=Nif5oz
09/12/2023

https://m.facebook.com/story.php?story_fbid=759521629524429&id=100063997964617&mibextid=Nif5oz

ಹಾಸನದ ಯೋಧ ಮಣಿಪುರದಲ್ಲಿ ಸಾವು
ಕೆ.ಆರ್.ಪುರಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಹಾಸನ : ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಕೆಆರ್ ಪುರಂ ನಿವಾಸಿ ಪದ್ಮರಾಜು (52) ಮೃತ ಯೋಧ. ನಿನ್ನೆ ಮಣಿಪುರದಲ್ಲಿ ಅಸುನೀಗಿದ್ದು, ಪಾರ್ಥಿವ ಶರೀರವನ್ನು ಹಾಸನಕ್ಕೆ ಕರೆತರಲಾಗಿದೆ. 31 ವರ್ಷದಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪದ್ಮರಾಜು ಅವರ ಅಗಲಿಕೆ ತುಂಬಲಾರದ ನಷ್ಟವುಂಟು ಮಾಡಿದೆ.
ಅಂತಿಮ ದರ್ಶನಕ್ಕೆ ಮನೆಯ ಮುಂದೆ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

ಹೊಳೆನರಸೀಪುರ: ತಾಲೂಕಿನ ದಾಳಗೋಡನಹಳ್ಳಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟು...
08/12/2023

ಹೊಳೆನರಸೀಪುರ: ತಾಲೂಕಿನ ದಾಳಗೋಡನಹಳ್ಳಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ನವೆಂಬರ್ ತಿಂಗಳ ಮೊದಲ ವಾರದಲ್ಲಿ ಚಿರತೆ ಹಾವಳಿ ಹೆಚ್ಚಾಗಿ, ಸಾಕು ನಾಯಿ, ಕುರಿ ಹಾಗೂ ಕರುಗಳ ಮೇಲೆ ದಾಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದಿಲೀಪ್ ಅವರಿಗೆ ಚಿರತೆ ಸೆರೆಗೆ ಮನವಿ ಸಲ್ಲಿಸಿದ್ದರು. ಹಿರಿಯ ಅಧಿಕಾರಿ ನಿರ್ದೇಶನದಂತೆ ಉಪವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಗೂ ಸಿಬ್ಬಂದಿ ಸುಶೀಲಮ್ಮ ಎಂಬುವರ ಜಮೀನಿನಲ್ಲಿ ಬೋನ್ ಇಟ್ಟಿದ್ದರು. ಒಂದು ತಿಂಗಳಾದರೂ ಬೋನಿಗೆ ಬೀಳದೇ ಗ್ರಾಮಸ್ಥರ ನೆಮ್ಮದಿ ಕೆಡಿಸಿದ್ದ ಒಂದೂವರೆಯಿAದ ಎರಡು ವರ್ಷದ ಗಂಡು ಚಿರತೆ ಗುರುವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ.

ಕುಕ್ಕೆ ಚಂಪಾಷಷ್ಠಿ ಮಹೋತ್ಸವ ಹಿನ್ನಲೆ ಕೆಲವೊಂದು ಸೇವಾ ಸಮಯಗಳಲ್ಲಿ ವ್ಯತ್ಯಾಸವಾಗಲಿವೆ, ಅವುಗಳ ಮಾಹಿತಿ ಇಲ್ಲಿದೆ.
07/12/2023

ಕುಕ್ಕೆ ಚಂಪಾಷಷ್ಠಿ ಮಹೋತ್ಸವ ಹಿನ್ನಲೆ ಕೆಲವೊಂದು ಸೇವಾ ಸಮಯಗಳಲ್ಲಿ ವ್ಯತ್ಯಾಸವಾಗಲಿವೆ, ಅವುಗಳ ಮಾಹಿತಿ ಇಲ್ಲಿದೆ.

ಸ್ಪೀಕರ್ ಆಗಿ ಕಲಾಪ ನಡೆಸಿಕೊಟ್ಟ ಕೆಎಂಶಿಅರಸೀಕೆರೆ: ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನ ಅಲಂಕರಿಸಿ ಸದನದ ಕಲಾಪಗಳನ್ನು ನಡೆಸಿಕೊಡುವುದರೊಂದಿ...
06/12/2023

ಸ್ಪೀಕರ್ ಆಗಿ ಕಲಾಪ ನಡೆಸಿಕೊಟ್ಟ ಕೆಎಂಶಿ

ಅರಸೀಕೆರೆ: ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನ ಅಲಂಕರಿಸಿ ಸದನದ ಕಲಾಪಗಳನ್ನು ನಡೆಸಿಕೊಡುವುದರೊಂದಿಗೆ ಕ್ಷೇತ್ರದ ಮತದಾರ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಶಾಸಕ ಕೆ.ಎಂ ಶಿವಲಿಂಗೇಗೌಡ ಗಮನ ಸೆಳೆದಿದ್ದಾರೆ.
ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿರುವ ಶಿವಲಿಂಗೇಗೌಡರು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ ಎಂಬ ಆಶಯ ಕ್ಷೇತ್ರದ ಜನತೆಯದಾಗಿತ್ತು. ಸಚಿವ ಸ್ಥಾನಮಾನದಿಂದ ವಂಚಿತರಾದರೂ ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ಸಭಾಪತಿ ಸ್ಥಾನ ಅಲಂಕರಿಸಿದ್ದನ್ನು ಕಂಡ ಕ್ಷೇತ್ರದ ಜನತೆ ಸಂತಸ ಪಡುವಂತೆ ಮಾಡಿತು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ಕರ್ನಾಟಕದ ವಿಧಾನಸಭೆಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ವಿಶೇಷ ಗೌರವವಿದೆ. ಇಂಥ ಒಂದು ಮಹಾಸಭೆಯ ಕಲಾಪವನ್ನು ಕೆಲ ಸಮಯ ನನ್ನ ಅಧ್ಯಕ್ಷತೆಯಲ್ಲಿ ನಡೆಸಿಕೊಡಲು ಅನುವು ಮಾಡಿಕೊಟ್ಟ ಸಭಾಪತಿಗಳಾದ ಯು.ಟಿ.ಖಾದರ್ ಅವರಿಗೆ ನಾನು ಆಭಾರಿಯಾಗಿದ್ದೇನೆ ಹಾಗೂ ಇಂಥ ಒಂದು ಉನ್ನತ ಸ್ಥಾನದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರೈತನ ಮಗನೊಬ್ಬನನ್ನ ವಿಧಾನಸಭೆ ಸಭಾಪತಿ ಸ್ಥಾನದಲ್ಲಿ ಕೂರುವ ಹಂತಕ್ಕೆ ಬೆಳೆಸಿದ ಕ್ಷೇತ್ರದ ಮತದಾರರಿಗೆ ನಾನು ಋಣಿಯಾಗಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊAಡರು. ದಿನದ ಬಹುತೇಕ ಸಮಯವನ್ನ ಜನರ ಮಧ್ಯೆ ಕಳೆಯುವ ರೈತಾಪಿ ವರ್ಗ, ಕಾರ್ಮಿಕರು ಸೇರಿದಂತೆ ಶೋಷಿತ ಸಮುದಾಯಗಳ ನೋವು ನಲಿವುಗಳನ್ನ ಹತ್ತಿರದಿಂದ ಬಲ್ಲವರಾಗಿರುವ ಶಿವಲಿಂಗೇಗೌಡರು, ಮಂತ್ರಿ ಗಿರಿ, ಸಭಾಪತಿ ಹೀಗೆ ಯಾವುದೇ ಸ್ಥಾನಮಾನ ಕಲ್ಪಿಸಿಕೊಟ್ಟರೂ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಹ ಜನಪ್ರತಿನಿಧಿಯಾಗಿದ್ದು, ಇವರನ್ನ ಸಭಾಪತಿ ಸ್ಥಾನದಲ್ಲಿ ಕಂಡು ಖುಷಿಯಾಯಿತು ಎಂದು ಗಂಡಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜು ರಾಜ್ ಸಂತಸ ವ್ಯಕ್ತಪಡಿಸಿದರು.

ನಮ್ಮ ಅರ್ಜುನ ಇನ್ನು ನೆನಪು ಮಾತ್ರ 💔
06/12/2023

ನಮ್ಮ ಅರ್ಜುನ ಇನ್ನು ನೆನಪು ಮಾತ್ರ 💔

ಮಾಲೆಕಲ್ಲು ತಿರುಪತಿ ದೇವಾಲಯ , ಅರಸೀಕೆರೆ
06/12/2023

ಮಾಲೆಕಲ್ಲು ತಿರುಪತಿ ದೇವಾಲಯ , ಅರಸೀಕೆರೆ

ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ- ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ ಹಾಸನ: " ಅರ್ಜುನ ಆನೆಯನ್ನು ಅನ್ಯಾಯವಾ...
05/12/2023

ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ- ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ
ಹಾಸನ: " ಅರ್ಜುನ ಆನೆಯನ್ನು ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ " ಎಂದು ಅರಣ್ಯ ಇಲಾಖೆಗೆ ಧಿಕ್ಕಾರ ಹಾಕುತ್ತಾ ಸ್ಥಳೀಯರು ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ ನಡೆಸಿದರು.

ಒಂಟಿ ಸಲಗ ಸೆರೆ ಕಾರ್ಯಾಚರಣೆಯ ವೇಳೆ ಮೃತಪಟ್ಟಿದ್ದ ಅರ್ಜುನ ಆನೆಯನ್ನು ಮೃತಪಟ್ಟ ಸ್ಥಳ ಹಾಸನದ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿಯೇ ಗುಂಡಿ ತೋಡಿಸಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ಮಾವುತರು ವಿರೋಧ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಅಚಾತುರ್ಯದಿಂದ ಅರ್ಜುನ ಆನೆ ಸಾವಾಗಿದೆ. ಆನೆಯ ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಅಂದರೆ, ಆನೆ ಹುಟ್ಟಿ ಬೆಳೆದ ಬಳ್ಳೆ ಸಾಕಾನೆ ಶಿಬಿರದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡುವ ಮೂಲಕ ನ್ಯಾಯ ಒದಗಿಸಿ ಎಂದು ಮಾವುತವು ಹಾಗೂ ಸ್ಥಳೀಯರು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಆದರೂ, ಅರಣ್ಯ ಇಲಾಖೆ ಕಿವಿಗೊಡದೇ ಅಂತ್ಯ ಸಂಸ್ಕಾರ ಮಾಡಿದೆ. ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಆಗ್ರಹಿಸಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಓಡಿಸಿದ್ದಾರೆ.



ಅರಣ್ಯ ಇಲಾಖೆ ಎಡವಟ್ಟಿನಿಂದ ಅರ್ಜುನ ಸಾವು?
ಅರ್ಜುನ ಆನೆ ಸಾವಿನ ಬಗ್ಗೆ ಮಾವುತರೊಬ್ಬರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ ಸೆರೆ ಹಿಡಿಯಬೇಕಿದ್ದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಇಂಜೆಕ್ಷನ್ ಶೂಟ್ ಮಾಡಲಾಗಿತ್ತು. ಅದು ಗುರಿ ತಪ್ಪಿ ಪ್ರಶಾಂತ್ ಎಂಬ ಸಾಕಾನೆ ಮೇಲೆ ಬಿತ್ತು. ನಂತರ, ಬೇರೊಂದು ಇಂಜೆಕ್ಷನ್ ನೀಡಿ ಅದನ್ನು ಸುಧಾರಿಸಲಾಯಿತು. ಆ ವೇಳೆಗೆ, ಕಾಡಾನೆ ಮೇಲೆ ಅರ್ಜುನ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆ ಗುಂಡು ಅಚಾನಕ್ಕಾಗಿ ಅರ್ಜುನನ ಕಾಲಿಗೆ ಬಿದ್ದಿತು. ಗುಂಡು ತಗುಲಿದ್ದರಿಂದ ಅರ್ಜುನ ಸುತ್ತಮುತ್ತಲಿದ್ದ ಮರಗಳನ್ನು ಬೀಳಿಸಿತು. ಅರ್ಜುನ ಆನೆ ನಡೆಯಲಾಗದ ಪರಿಸ್ಥಿತಿಯಲ್ಲಿತ್ತು. ಈ ವೇಳೆ, ಸೆರೆ ಹಿಡಿಯಬೇಕಿದ್ದ ಕಾಡಾನೆಯೇ ಅರ್ಜುನನ ಮೇಲೆ ದಾಳಿ ಮಾಡಿತು” ಎಂದು ಮಾವುತ ವಿಡಿಯೋದಲ್ಲಿ ಹೇಳಿದ್ದಾರೆ.
ಅರ್ಜುನನ ಸಾವಿನ ತನಿಖೆಗೆ ಒತ್ತಾಯ
ವನ್ಯಜೀವಿ ಪ್ರಿಯರು ಹಾಗೂ ಹೋರಾಟಗಾರರು ಅರ್ಜುನ ಆನೆಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಂಗಳವಾರ ಸಂಜೆ 4ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 'ಅಂಬಾರಿ ಆನೆ ಅರ್ಜುನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷ ಆಗಬೇಕು' ಎಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಗೆ 64 ವರ್ಷದ ಅರ್ಜುನನನ್ನು ಬಳಸಿದ್ದೇ ತಪ್ಪು
ವನ್ಯ ಜೀವಿ ತಜ್ಞರು ಹೇಳುವಂತೆ, ವಯಸ್ಸಾದ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೋರುವುದನ್ನೇ ನಿಲ್ಲಿಸಲಾಗಿದೆ. 64 ವರ್ಷದ ಅರ್ಜುನನ್ನು ಕಾಡಿನ ಪುಂಡಾನೆ/ ಒಂಟಿ ಸಲಗಗಳ ಸೆರೆ ಕಾರ್ಯಾಚರಣೆಗೆ ಬಳಸಬಾರದಿತ್ತು. ಅರಣ್ಯ ಇಲಾಖೆ ಕಾರ್ಯಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಕಾರ್ಯಾಚರಣೆ ಸಿಬ್ಬಂದಿಗೆ ತರಬೇತಿಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆ ...
05/12/2023

ಕಾರ್ಯಾಚರಣೆ ಸಿಬ್ಬಂದಿಗೆ ತರಬೇತಿ

ಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಮೃಗಗಳೂ ಸಾವಿಗೀಡಾಗುತ್ತಿರುವುದು ಆಂತಕದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಪಡೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಳಗಾವಿಯಯಲ್ಲಿ ನಡೆದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್, ಬೋಸರಾಜ್ ಮತ್ತು ಕೆ.ಎನ್.ರಾಜಣ್ಣ ಹಾಗೂ ಮೂರೂ ಜಿಲ್ಲೆಗಳ ಶಾಸಕರ ಉಪಸ್ಥಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಆನೆ-ಮಾನವ ಸಂಘರ್ಷ ಹೆಚ್ಚಾಗಿರುವ 9 ಜಿಲ್ಲೆಗಳಿಗೆ
ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಾರದಲ್ಲಿ ಕನಿಷ್ಠ 2 ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆನೆ ನಾಡಿಗೆ ಬಾರದಂತೆ ತಡೆಯಲು ಉತ್ತಮ ಮಾರ್ಗೋಪಾಯ ಎಂದರೆ ರೈಲ್ವೆ ಬ್ಯಾರಿಕೇಡ್ ಅವಳವಡಿಕೆ. ಆದರಿದು ಒಂದೆರಡು ವರ್ಷದಲ್ಲಿ ಆಗುವ ಕೆಲಸವಲ್ಲ. ಬಜೆಟ್‌ನಲ್ಲಿ 100 ಕೋಟಿ ಹಂಚಿಕೆ ಮಾಡಲಾಗಿದ್ದು, ಆನೆ ಹಾವಳಿ ಹೆಚ್ಚಾಗಿರುವ ಕಡೆ ಬ್ಯಾರಿಕೇಡ್ ಹಾಕಲು ಕ್ರಮ ವಹಿಸಲಾಗಿದೆ. ಆನೆ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದರು.
ಕಳೆದ ಏಪ್ರಿಲ್‌ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನ, ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ ಇಬ್ಬರು, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.
ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಸಚಿವ ಬೋಸರಾಜ್ ಮಾತನಾಡಿ, ಆನೆಯಿಂದ ಹೆಚ್ಚಿನ ಸಾವು ಸಂಭವಿಸಿದೆ. ವೈಜ್ಞಾನಿಕವಾಗಿ ವಿದ್ಯುತ್ ತಂತಿ ಬೇಲಿ ಹಾಕಿದರೂ ಅತ್ಯಂತ ಬುದ್ಧಿವಂತಿಕೆಯಿAದ ಆನೆ ದಾಟಿ ಬರುತ್ತಿವೆೆ. ಹೀಗಾಗಿ ಆನೆ ತಡೆಯಲು ಸೂಕ್ತ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಬೆಳೆ ಹಾನಿ ಹೆಚ್ಚಾಗುತ್ತಿದೆ. ಕಾಫಿ ತೋಟಗಳಲ್ಲಿ ಆನೆಗಳು ಉಳಿಯುತ್ತಿವೆ. ಹೀಗಾಗಿ ಆನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಮಾತನಾಡಿ, ಕಾಡಾನೆಗಳು ಕಾಡಿನಿಂದ ನಾಡಿಗೆ ಗುಂಪು ಗುಂಪಾಗಿ ಬರುತ್ತಿದ್ದು, ಸಾರ್ವಜನಿಕರು ಭಯದಿಂದ ಜೀವನ ಸಾಗಿಸಬೇಕಿದೆ. ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು.
ಕಾಡಾನೆ ಹಾವಳಿಯಿಂದ ನನ್ನ ಕ್ಷೇತ್ರದ ಜನರು ಆತಂಕಗೊAಡು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜನರ ಭಯ ಹೋಗಲಾಡಿಸಲು ಅರಣ್ಯ ಇಲಾಖೆಯಿಂದ ಧ್ವನಿವರ್ಧಕದ ಮೂಲ

"ಯಾ ಮತ್" ಅಂದ್ರೆ ಬಂದು ಹತ್ತಿರ ನಿಲ್ತಾನೆ ಸಾರ್.. "ಗದೆ ಸಲಾಂ" ಅಂದ್ರೆ ಸೊಂಡಿಲು ಎತ್ತಿ ಮೇಲೆ ಮಾಡ್ತಾನೆ.. "ಸೋಲ್" ಅಂದ್ರೆ ಕಾಲು ಎತ್ತುತ್ತಾ...
05/12/2023

"ಯಾ ಮತ್" ಅಂದ್ರೆ ಬಂದು ಹತ್ತಿರ ನಿಲ್ತಾನೆ ಸಾರ್.. "ಗದೆ ಸಲಾಂ" ಅಂದ್ರೆ ಸೊಂಡಿಲು ಎತ್ತಿ ಮೇಲೆ ಮಾಡ್ತಾನೆ.. "ಸೋಲ್" ಅಂದ್ರೆ ಕಾಲು ಎತ್ತುತ್ತಾನೆ.. ಬೈಟ್ ಅಂದ್ರೆ ಕೂತ್ಕೋತಾನೆ.. ಭಾರಿ ತುಂಟ.. ಮದ ಏರಿದಾಗ ಎಲ್ಲೆಲ್ಲೋ ಹೋಗಿಬಿಡ್ತಾನೆ.. ನಾನು ರಾತ್ರಿ ಎಲ್ಲಾ ನಿದ್ದೆಗೆಟ್ಟು ಹುಡುಕಿಕೊಂಡು ಬರ್ಬೇಕು. ಬ್ರಶ್'ನಲ್ಲಿ ಉಜ್ಜಿ ಸ್ನಾನ ಮಾಡಿಸಿದ್ರೆ ಹಾಯಾಗಿ ಮಲಗಿ ಬಿಡ್ತಾನೆ.. ನನ್ ಕಂದ ಸಾರ್ ಇವನು.. ನನ್ ರಾಜ.. ಓದು-ಗೀದು ಹತ್ತಿಲ್ಲ ಸಾರ್.. ಆನೆ ನೋಡಿಕೊಳ್ಳೋದೇ ಖುಷಿ..

ಹೀಗೆ.. ಅರ್ಜುನನ ಬಗ್ಗೆ ಹೇಳುತ್ತಾ ಹೋದ.. ಮನೆ ಮಗನಂತೆ ಕೂಸನ್ನು ನೋಡಿಕೊಂಡಿದ್ದ ಮಾವುತ ವಿನು ಮಾತನಾಡುತ್ತಿದ್ದಂತೆ ಎದೆ ಉಬ್ಬಿ ಬಂದಿತ್ತು..

ಹ್ಯಾಂಡ್ ಪೋಸ್ಟಿನಲ್ಲಿ ಇಳಿದು.. ನಾಗರಹೊಳೆ ಒಳಗೆ ಸುಮಾರು 50 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಬಳ್ಳೆ ಗ್ರಾಮ..

2021ರಲ್ಲಿ ಇದೇ ಬಳ್ಳೆ ಸಾಕಾನೆ ಕ್ಯಾಂಪಿನಲ್ಲಿ ಸಂಕ್ರಾಂತಿಗೂ ಮುನ್ನವೇ ಜನ ಸಿಹಿ ಹಂಚಲು ಶುರು ಮಾಡಿದ್ರು. ಹಲವು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ.. ತಾಯಿ ಚಾಮುಂಡಿಯನ್ನು ಬೆನ್ನ ಮೇಲೆ ಹೊತ್ತು ಸಾಗಿದ್ದ ಅರ್ಜುನ ಎಂಬ ಅರವತ್ತು ದಾಟಿದ ಮುದ್ದಾದ ಕೂಸು ಬಳ್ಳೆ ಶಿಬಿರಕ್ಕೆ ಬರುವುದರಲ್ಲಿತ್ತು..

ಅರ್ಜುನ ಬಂದವನೇ.. ಖುಷಿ ಸುದ್ದಿ ಕೊಟ್ಟುಬಿಟ್ಟ.. ಅಪ್ಪನಾಗುವ ಮೂಲಕ ಮುಂದಿನ ಉತ್ತರಾಧಿಕಾರಿಯ ಆಗಮನದ ಬಗ್ಗೆ ಜಗತ್ತಿಗೇ ಸಾರಿ ಹೇಳಿದ್ದ.. ಅರ್ಜುನನ ಹೆಂಡತಿ ದುರ್ಗಾಪರಮೇಶ್ವರಿ.. ಅದೇ ಶಿಬಿರದಲ್ಲಿದ್ದ ಹೆಣ್ಣಾನೆ.

ಎಷ್ಟಾದರೂ ಅರ್ಜುನ ಅಪ್ಪನಾಗುತ್ತಿದ್ದಾನೆ ಅಂದ್ರೆ ಸುಮ್ನೇನಾ.. ಅವನ ಹೆಂಡತಿಯನ್ನು ಅತ್ಯಂತ ಜತನದಿಂದ ನೋಡಿಕೊಳ್ತಿದ್ರು. ದುರ್ಗಾಪರಮೇಶ್ವರಿಗೆ ಬೇಕಾದ ಆಹಾರ ಕೊಟ್ಟು ಸುಖಪ್ರಸವವಾಗಲಿ ಎಂದು ಕಾವಾಡಿಗರು, ಮಾವುತರು ತಾಯಿ ಚಾಮುಂಡೇಶ್ವರಿಯಲ್ಲಿ ಹರಕೆ ಹೊತ್ತಿದ್ರು. ಆದ್ರೆ ದುರ್ವಿಧಿ.. ಇನ್ಫೆಕ್ಷನ್'ಗೆ ತುತ್ತಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದುರ್ಗಾಪರಮೇಶ್ವರಿ ತೀರಿ ಹೋದ್ಲು.. ಅಲ್ಲಿಗೆ.. ಹೆಂಡತಿ ಮಗುವನ್ನು ಕಳೆದುಕೊಂಡ ಅರ್ಜುನ ಅನಾಥವಾದ..

64 ವಯಸ್ಸು ದಾಟಿದ್ದ ಅರ್ಜುನ.. ನೋವನ್ನೆಲ್ಲ ನುಂಗಿ.. ನಿವೃತ್ತಿಯಾಗಿ..ಚಂದವಾಗಿದ್ದ. ಕಳೆದ ವಾರವೇ ಕ್ಯಾಂಪಿಗೆ ತೆರಳಲು ಕಾಯುತ್ತಿದ್ದ. ಆದರೆ.. ಶಿಬಿರಕ್ಕೆ ವಾಪಾಸ್ ಕಳಿಸದೇ ಆರು ಆನೆಗಳ ಜೊತೆಗೆ ಅವನನ್ನೂ ಅಲ್ಲಿಯೇ ಉಳಿಸಿಕೊಂಡುಬಿಟ್ರು..ಅಲ್ಲೇ ಆಗಿದ್ದು ಎಡವಟ್ಟು..

64ರ ಮಗು ಅರ್ಜುನ ದಣಿದಿದ್ದ.. ಅಂಥ ಕೂಸನ್ನು ದೈತ್ಯ ಕಾಡಾನೆ ಸೆರೆ ಹಿಡಿಯಲು ಒತ್ತಾಯವಾಗಿ ಬಳಸಿ ಸಾಯಿಸಿಬಿಟ್ರು.

ಇತ್ತೀಚೆಗೆ ಎರಡು ಸಾಕಾನೆಗಳನ್ನು ಮಹಾರಾಷ್ಟ್ರಕ್ಕೆ ಮಾರಿಬಿಟ್ರು.. ಅದರಲ್ಲೊಬ್ಬ "ಭೀಮ". ಅವನಿದ್ದಿದ್ದರೆ ಅರ್ಜುನನ ಬದಲಾಗಿ ಅವನೇ ಮೊನ್ನೆಯ ಕಾರ್ಯಾಚರಣೆಯಲ್ಲಿ ಬಳಕೆ ಆಗುತ್ತಿದ್ದ.

ಅರ್ಜುನನ ದೇಹ ಸ್ಥಿತಿ.. ವಯಸ್ಸು.. ಎಲ್ಲಾ ಗೊತ್ತಿದ್ದೂ.. ಅವನಿಗೇ ಗುಂಡು ಹೊಡೆದು ಮನುಷ್ಯರು ಅನ್ನುವ ಪರಮ ಪಾಪಿಗಳು ಮಾಡಿದ್ದು ಮಹಾ ಅನ್ಯಾಯ..

ದೊಡ್ಡ ದೊಡ್ಡ ಪಶು ವೈದ್ಯರಿದ್ದರೂ ಆಗ ತಾನೇ ತರಬೇತಿಯಲ್ಲಿದ್ದ ಅರೆ ಬೆಂದ ವೈದ್ಯನನ್ನು ಬಳಸಿದ್ದು ಇನ್ನೊಂದು ಘೋರ ಅಪರಾಧ.

ಮನುಷ್ಯನ ಘನಘೋರ ಸ್ವಾರ್ಥಕ್ಕೆ.. ಪರಮ ದಡ್ಡತನಕ್ಕೆ.. ತಪ್ಪು ನಿರ್ಧಾರಕ್ಕೆ ದೇವರಂಥ ಕೂಸೊಂದು ಇವತ್ತು ಪ್ರಾಣ ಕಳೆದುಕೊಂಡಿದೆ..

"ಎದ್ದೇಳೋ.. ನನ್ ಕಂದ.." ಎಂದು ಹೊರಳಾಡಿ ಚೀರಾಡಿದ ವಿನುವಿನಂಥ ಮಾವುತನಿಗೆ.. ಸಮಾಧಾನ ಹೇಳುವವರಿಲ್ಲ.. ಸೊಂಡಿಲಿಂದ ನೇವರಿಸಿ.. ಪ್ರೀತಿ ಕೊಡುವವರಿಲ್ಲ..

ಪ್ರತಿ ಪ್ರಾಣಿಯ ಕಂಗಳಲ್ಲೂ ದೇವರನ್ನೇ ಹುಡುಕುವ ನನ್ನಂಥವನಿಗೆ.. ವರ್ಷಗಳೇ ಕಳೆದರೂ ಈ ನೋವಿನಿಂದ ಹೊರಬರಲು ಆಗುವುದಿಲ್ಲ..

ಅದಕ್ಕೇ.. ದೊಡ್ಡವರು ಹೇಳಿದ್ದು.. ಪ್ರಾಣಿಗಳೇ ಗುಣದಲಿ ಮೇಲು.. ಮಾನವನದಕ್ಕಿಂತ ಕೀಳು..

ಕ್ಷಮಿಸು ಅರ್ಜುನ..

ಭವಾನಿ ಸಿಟ್ಟಾಗಿ ಮಾತನಾಡಿದ್ದಾರೆ; ಪತ್ನಿ ವರ್ತನೆಯಿಂದ ನೋವಾಗಿದ್ದರೆ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ - ಎಚ್ಡಿ ರೇವಣ್ಣ ಬೆಳಗಾವಿ: ಅಪಘಾತದ ಸಂ...
04/12/2023

ಭವಾನಿ ಸಿಟ್ಟಾಗಿ ಮಾತನಾಡಿದ್ದಾರೆ; ಪತ್ನಿ ವರ್ತನೆಯಿಂದ ನೋವಾಗಿದ್ದರೆ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ - ಎಚ್ಡಿ ರೇವಣ್ಣ
ಬೆಳಗಾವಿ: ಅಪಘಾತದ ಸಂದರ್ಭದಲ್ಲಿ ಭವಾನಿ ರೇವಣ್ಣ ವರ್ತನೆಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಅವರು ಕ್ಷಮೆ ಕೋರಿದ್ದಾರೆ. ಸುವರ್ಣಸೌಧದಲ್ಲಿ ಸೋಮವಾರ ಮಾತನಾಡಿ, ಪತ್ನಿ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ ಎಂದರು.
" ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವರ ಬಳಿ ಡ್ಯಾಮೇಜ್ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ? ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ. ಸಿಟ್ಟಾಗಿ ಭವಾನಿ ಮಾತನಾಡಿದ್ದಾರೆ " ಎಂದರು.
ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು?
ಬೈಕ್ ಅವನೇ ಬಂದು ಸೈಡ್ ನಿಂದ ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಗಾಗುತ್ತಿತ್ತು? ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅವರು ಸಿಟ್ಟನಲ್ಲಿ ಮಾತನಾಡಿದ್ದಾರೆ ಎಂದರು.

ನಮ್ಮಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಎಂದು ಪ್ರಶ್ನಿಸಿದರು.

ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ
ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಸ್ನೇಹಿತರ ಕಾರು ಅಂತ ಹಾಗೇ ಮಾಡಿದ್ದಾರೆ. ನಮ್ಮ ಕುಟುಂಬ ಆ ತರ ಇಲ್ಲ. ಗಾಡಿ ಅವಘಡ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ? ಎಂದು ಪ್ರಶ್ನಿಸಿದರು.
ದೊಡ್ಡ ವಿಚಾರ ಮಾಡಬೇಡಿ ಎಂದು ರೇವಣ್ಣ ಮನವಿ
ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರು ವಿಷಾದ ವ್ಯಕ್ತಪಡಿಸುತ್ತೇನೆ. ಅವರು ಕುಡಿದು ಬಂದು ಮುಂದೆನೇ ಗುದ್ದಿದ್ದಾರೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಚಾರ ಮಾಡಬೇಡಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಏನಿದು ಘಟನೆ?
ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರು ಡಿಸೆಂಬರ್ 3 (ಭಾನುವಾರ) ಮೈಸೂರಿನ ಸಾಲಿಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ವಿರುದ್ಧ ಮಾರ್ಗದಲ್ಲಿ ಬಂದಿದ್ದ ಬೈಕ್ ಸವಾರರು ಕಾರಿಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಕೋಪಗೊಂಡಿದ್ದ ಭವಾನಿ ರೇವಣ್ಣ ಅವರು ಬೈಕ್ ಸವಾರನ ಮೇಲೆ ಅವ್ಯಾಚ ಪದಗಳಿಂದ ಬೈದು ಗಲಾಟೆ ಮಾಡಿದ್ದರು. ಅಪಘಾತದ ಬಳಿಕ ಬೈಕ್ ಸವಾರನ ಆರೋಗ್ಯವನ್ನು ವಿಚಾರಿಸದೇ ಹರಿಹಾಯ್ದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ನೆಟ್ಟಿಗರು ಭವಾನಿ ರೇವಣ್ಣ ಅವರ ವರ್ತನೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.

04/12/2023

ಕಾಡಾನೆ ಜೊತೆ ಕಾಳಗದಲ್ಲಿ ಪ್ರಾಣ‌ಬಿಟ್ಟ 'ಅರ್ಜುನ'

ಕಾರ್ಯಾಚರಣೆ ವೇಳೆ ದುರಂತ

ಹಾಸನ : ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ, ಇಂದು ಕಾಡಾನೆಯೊಂದಿಗಿನ ಕಾಳಗದಲ್ಲಿ ಪ್ರಾಣ ಬಿಟ್ಟಿದೆ.
ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯನ್ನು ಸೆರೆಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡಿದೆ.
ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಈ ವೇಳೆ ಒಂಟಿಸಲಗದ ಜೊತೆ ಅರ್ಜುನ ಕಾಳಗಕ್ಕೆ ಇಳಿದಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿದ್ದಾನೆ. ಕಾಳಗದಲ್ಲಿ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ.
ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ, ಸೌಮ್ಯ ಸ್ವಾಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ದುಃಖ ತರಿಸಿದೆ.

ಓಂ ನಮಃ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ನಮಃ
03/12/2023

ಓಂ ನಮಃ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ನಮಃ

ಸಕಲೇಶಪುರ :ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ  ಕಡತ ಸಂಗ್ರಹಗಳ ಕೊಠಡಿ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ  ದೂರಗಳು ಬಂದ ಹಿನ್ನಲೆಯಲ್ಲಿ  ಇಂದು...
03/12/2023

ಸಕಲೇಶಪುರ :ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಕಡತ ಸಂಗ್ರಹಗಳ ಕೊಠಡಿ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರಗಳು ಬಂದ ಹಿನ್ನಲೆಯಲ್ಲಿ ಇಂದು ಮಿನಿ ವಿಧಾನಸೌಧದ ಕಡತ ಸಂಗ್ರಹಗಳ ಕೊಠಡಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ವಾರದೊಳಗಾಗಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ, ದಾಖಲಾತಿಗಳನ್ನು ಕ್ರಮಬದ್ಧವಾಗಿ ಜೋಡಿಸುವ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವಂತೆ ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಹೆಚ್.ಡಿ.ದೇವೇಗೌಡರು ಘೋಷಣೆ
01/12/2023

ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿ

ಹೆಚ್.ಡಿ.ದೇವೇಗೌಡರು ಘೋಷಣೆ

ಬಾಳ್ಳುಪೇಟೆ: ಸಕಲೇಶಪುರ ತಾಲೂಕಿನ ಬಾಗೆಯಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಮಾಡದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಾರಿಗೆ ಬಸ...
30/11/2023

ಬಾಳ್ಳುಪೇಟೆ: ಸಕಲೇಶಪುರ ತಾಲೂಕಿನ ಬಾಗೆಯಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಮಾಡದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಾರಿಗೆ ಬಸ್ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಷ್ಟಿçÃಯ ಹೆದ್ದಾರಿ 75ರಲ್ಲಿ ಬರುವ ಬಾಗೆ ಗ್ರಾಮದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಸನಕ್ಕೆ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಆದರೆ ಸಾರಿ ಬಸ್ ಚಾಲಕರು ಬಾಗೆ ಗ್ರಾಮದಲ್ಲಿ ಬಸ್ ನಿಲ್ಲಿಸದ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಬಸ್ ಚಾಲಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಾರವಷ್ಟೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ವೇಳೆ ಸಾರಿಗೆ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆಎಸ್‌ಆರ್‌ಟಿಸಿ ಎಲ್ಲಾ ಬಸ್‌ಗಳನ್ನು ಬಾಗೆಯಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ ಚಾಲಕರು ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದು ವಿದ್ಯಾರ್ಥಿಳನ್ನು ಕಂಡರೆ ಬಸ್ ನಿಲ್ಲಿಸದೆ ಹಾಗೆಯೇ ಹೋಗುತ್ತಾರೆ ಎಂದು ಕಿಡಿಕಾರಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಾರಿಗೆ ಸಂಸ್ಥೆ ಸಕಲೇಶಪುರ ಘಟಕದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಕಡ್ಡಾಯವಾಗಿ ಬಾಗೆಯಲ್ಲಿ ಬಸ್ ನಿಲುಗಡೆ ಮಾಡುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಇನ್ನು ಮುಂದೆ ಕಡ್ಡಾಯವಾಗಿ ಬಸ್ ನಿಲುಗಡೆ ಮಾಡುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಪ್ರತಿಭಟನೆಯಿಂದಾಗಿ ಅರ್ಧಗಂಟೆಗೂ ಹೆಚ್ಚುಕಾಲ ಸಾರಿಗೆ ಬಸ್‌ಗಳನ್ನು ತಡೆದಿದ್ದರಿಂದ ಸಕಲೇಶಪುರದಿಂದ ಹಾಸನಕ್ಕೆ ತೆರಳುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ 600 ಪಬ್ಲಿಕ್ ಶಾಲೆ ಸ್ಥಾಪನೆ5 ಗ್ಯಾರಂಟಿಗೂ ಶಾಲೆಗಳ ಅಭಿವೃದ್ಧಿಗೂ ಯಾವ ಸಂಬAಧವಿಲ್ಲ: ಮಧು ಬಂಗಾರಪ್ಪಹಾಸನ: ಕನ್ನ...
30/11/2023

ಮುಂದಿನ ಶೈಕ್ಷಣಿಕ ವರ್ಷದಲ್ಲಿ 600 ಪಬ್ಲಿಕ್ ಶಾಲೆ ಸ್ಥಾಪನೆ
5 ಗ್ಯಾರಂಟಿಗೂ ಶಾಲೆಗಳ ಅಭಿವೃದ್ಧಿಗೂ ಯಾವ ಸಂಬAಧವಿಲ್ಲ: ಮಧು ಬಂಗಾರಪ್ಪ
ಹಾಸನ: ಕನ್ನಡ ಶಾಲೆಗೆ ಪ್ರಾಧ್ಯಾನತೆ ಕೊಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳ ಸ್ಥಾಪನೆ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿ, ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಆದರೇ ಶಾಲೆಗಳ ಅಭಿವೃದ್ಧಿಗೂ ಗ್ಯಾರಂಟಿಗೂ ಯಾವ ಸಂಬAಧವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ಮೆಲೆ ರಾಜ್ಯ ಒಬಿಸಿ ಅಧ್ಯಕ್ಷರಾಗಿ ಹಾಸನ ನಗರದಲ್ಲಿ ಓಬಿಸಿ ಸಭೆ ನಡೆಸಬೇಕಿತ್ತು. ಕಾರಣತಾರದಿಂದ ಹಾಸನ ಸೇರಿದಂತೆ ನಾನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಬಿಸಿ ಸಭೆ ಮಾಡಲಾಗಲಿಲ್ಲ. ರಾಜ್ಯದ ಜನರು ಬದಲಾವಣೆ ಬಯಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷ ನೀಡಿರುವ ಜವಾಬ್ದಾರಿ ಉಳಿಸಿಕೊಳ್ಳುತ್ತೆವೆ. ಪ್ರಣಾಳಿಕೆ ನೀಡಿರುವುದನ್ನು ಕಾಂಗ್ರೆಸ್ ಪಕ್ಷ ಮಾತ್ರ ಜಾರಿಗೊಳಿಸುತ್ತದೆ. ಶಿಕ್ಷಣ ಇಲಾಖೆ ಎಂದರೇ ಬಹಳ ದೊಡ್ಡ ಇಲಾಖೆ ಸಮಸ್ಯೆಗಳು ಹೆಚ್ಚು ಇದೆ. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 53 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, 13 ಸಾವಿರ ಶಿಕ್ಷಕರ ನೇಮಾಕಾತಿ ಮಾಡಿಕೊಂಡಿದ್ದೆವೆ. ಇನ್ನೂ 20 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಶಿಥಿಲಗೊಂಡಿರುವ ಶಾಲೆ ಕಟ್ಟಡ ದುರಸ್ತಿ ಮಾಡಿಸಿಕೊಡಲಾಗುವುದು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಗಳು ಬಹಳ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 500-600 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡಲಾಗುವುದು. ಪ್ರತಿ ವಿಧಾನಸಭೆ ಸದಸ್ಯರಿಗೆ ಶಾಸಕರಿಗೆ 5-6 ಶಾಲೆ ಕೊಡಲಾಗುವುದು ಎಂದರು. ಮೊದಲು ಒಂದು ಮೊಟ್ಟೆ ಕೊಡುತ್ತಿದ್ದರು. ಈಗ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮುಂದಿನ ಅದಿವೇಶನದ ನಂತರ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು. ನಾನು ಶಿಕ್ಷಣ ಸಚಿವನಾಗಿ ಶಿಕ್ಷಣ ಇಲಾಖೆ ಅರ್ಥಮಾಡಿಕೊಳ್ಳಲು 6 ತಿಂಗಳಾಗಿದೆ. ಮಕ್ಕಳು ಪುನಃ ಸರ್ಕಾರಿ ಶಾಲೆಯಲ್ಲಿ ಇರುವಂತೆ ವಾತವರಣ ನಿರ್ಮಾಣ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಖಾಸಗಿ ಶಾಲೆಗಳು ಮುಂದೆ ಸರ್ಕಾರಿ ಶಾಲೆಗಳು ಗೋಡಾನ್ ಆಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರ ಶಾಲೆಗಳನ್ನ ಈ ರೀತಿ ನಮಗೆ ಈ ಬಳುವಳಿ ಕೊಟ್ಟಿದ್ದಾರೆ. ಸೋರುತ್ತಿರುವ ಕಟ್ಟಡಗಳಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. 3 ವರ್ಷದೊಳಗೆ ಸರ್ಕಾರಿ ಶಾಲೆಗಳು ತುಂಬುವಾಗೆ ಮಾಡಲಾಗುವುದು. ಖಾಸಗಿ ಶಾಲೆ ನಿರ್ಮಾಣ ತಡೆಯಲು ನಮಗೆ ಯಾವುದೇ ಅಧಿಕಾರ ಇಲ್ಲ. ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುವುದು ನಮ್ಮ ಕೆಲಸ. ರಾಜ್ಯದಲ್ಲಿ 1600 ಶಾಲೆಗಳು ಯಾವುದೇ ಅನುಮತಿ ಪಡೆಯದೆ ನಡೆಯುತ್ತಿವೆ. ಮಕ್ಕಳ ಭವಿಷ್ಯದ ಕಾರಣ ಅವುಗಳನ್ನು ಶೀಘ್ರವಾಗಿ ಮುಚ್ಚಲಾಗುತ್ತಿಲ್ಲ ಎಂದು ತಿಳಿಸಿದರು.
5 ಗ್ಯಾರಂಟಿಗಳ ಅಬ್ಬರದಲ್ಲಿ ಶಾಲೆಗಳ ಬಗ್ಗೆ ಗಮನ ಕಡಿಮೆ ಆಗುವುದಾ! ಎನ್ನುವ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಶಿಕ್ಷಣ ಆರ್ಥಿಕ ಕೊ

ಚನ್ನರಾಯಪಟ್ಟಣ: ಪುರಾಣ ಪ್ರಸಿದ್ಧ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 92ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ...
30/11/2023

ಚನ್ನರಾಯಪಟ್ಟಣ: ಪುರಾಣ ಪ್ರಸಿದ್ಧ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 92ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಚುಂಚಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆಯಿತು.
ಇದಕ್ಕೂ ಮುನ್ನ ಬಸವೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ದೀಪದಾರತಿ ಬೆಳಗಲಾಯಿತು. ರೈತರು ಜಾನುವಾರುಗಳನ್ನು ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಪ್ರದಕ್ಷಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸಿದರು. ಬೆಳಗ್ಗೆ ಶ್ರೀಗಳು ಗೋಪೂಜೆಯನ್ನು ನೆರವೇರಿಸಿದರು.
ಹರಕೆ ಹೊತ್ತ ಭಕ್ತರು ಬಸವೇಶ್ವರಸ್ವಾಮಿಯ ಸರ್ಪೋತ್ಸವ ಪುಣ್ಯ ಕಾರ್ಯ ನೆರವೇರಿಸಿದರು. ವಿವಿಧ ಬಗೆಯ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದ ಮುತ್ತಿನ ಪಲ್ಲಕ್ಕಿಯ ಮೇಲೆ ನಿರ್ಮಲಾನಂದನಾಥ ಸ್ವಾಮೀಜಿ ಅಲಂಕೃತರಾಗುತಿದAತೆಯೇ ಭಕ್ತರ ಜಯಘೋಷ ಮೊಳಗಿತು. ಮಂಗಳವಾದ್ಯದೊAದಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಆರಂಭಗೊAಡಿತು.
ಉತ್ಸವ ದೇಗುಲವನ್ನು ಒಂದು ಸುತ್ತು ಪ್ರದಕ್ಷಣೆ ಹಾಕಿ ಪುಷ್ಕರಣಿ ಬಳಿ ಆಗಮಿಸಿತು. ಪುಷ್ಕರಣಿಯಲ್ಲಿ ವಿದ್ಯುತ್ ದೀಪಾಲಂಕಾರದೊAದಿಗೆ ಸಿದ್ಧಗೊಂಡಿದ್ದ ತೆಪ್ಪದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ, ಬಸವೇಶ್ವರಸ್ವಾಮಿ ಉತ್ಸವ ಮೂರ್ತಿ ಹಾಗೂ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ನಿರ್ಮಲಾನಂದನಾಥ ಸ್ವಾಮೀಜಿ ಪುಷ್ವ ಸಿಂಹಾಸನದ ಮೇಲೆ ಅಲಂಕೃತರಾದ ತಕ್ಷಣ ತೆಪ್ಪೋತ್ಸವಕ್ಕೆ ಚಾಲನೆ ದೊರೆಯಿತು.
ಆದಿಚುಂಚನಗಿರಿ ಹಾಸನ ಶಾಖಾಮಠದ ಶೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ದಿಡಗ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಗುಡಿಗೌಡ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

ಒಂಟಿ ಕೋರೆ ಆನೆ ಸೆರೆ: ಸ್ಥಳಾಂತರಒಟ್ಟು 3 ಆನೆಗಳಿಗೆ ರೇಡಿಯೋ ಕಾಲರ್: ಎರಡು ಪುಂಡಾನೆಗಳ ಸ್ಥಳಾಂತರಬೇಲೂರು: ಮಲೆನಾಡು ಭಾಗದಲ್ಲಿ ಬೆಳೆ ನಾಶ, ಜೀವ...
29/11/2023

ಒಂಟಿ ಕೋರೆ ಆನೆ ಸೆರೆ: ಸ್ಥಳಾಂತರ
ಒಟ್ಟು 3 ಆನೆಗಳಿಗೆ ರೇಡಿಯೋ ಕಾಲರ್: ಎರಡು ಪುಂಡಾನೆಗಳ ಸ್ಥಳಾಂತರ

ಬೇಲೂರು: ಮಲೆನಾಡು ಭಾಗದಲ್ಲಿ ಬೆಳೆ ನಾಶ, ಜೀವಹಾನಿ ಸೇರಿದಂತೆ ಹಲವು ರೀತಿಯ ನಷ್ಟಗಳಿಗೆ ಕಾರಣವಾಗಿರುವ ಐದು ಕಾಡಾನೆ ಸೆರೆ ಹಾಗೂ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು.
ಇAದು ತೊಂದರೆ ಕೊಡುತ್ತಿದ್ದ ಒಂಟಿ ಕೋರೆ ಆನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಅಲ್ಲಿಗೆ ಕಳೆದ ಶುಕ್ರವಾರದಿಂದ ಇಲ್ಲಿಯವರೆಗೆ ಒಟ್ಟು ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದರೆ, ಎರಡು ಪುಂಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸಾಗಿಸಿದಂತಾಗಿದೆ. ಅಲ್ಲಿ ಇನ್ನು ಆರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ 3 ಪುಂಡಾನೆ ಸೆರೆ ಕೆಲಸ ಬಾಕಿ ಇದೆ.
ಅರ್ಧದಿನ ಆಪರೇಷನ್:
ಒಂಟಿಕೋರೆ ಆನೆಯನ್ನು ಖೆಡ್ಡಾಕ್ಕೆ ಬೀಳಿಸಲು ಅರಣ್ಯ ಇಲಾಖೆಯವರು ಅಕ್ಷರಶಃ ನೀರು ಕುಡಿಯಬೇಕಾಯಿತು. ಸತತ ಆರು ಗಂಟೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮತ್ತೊಂದು ಆನೆಯನ್ನು ಬಲೆಗೆ ಬೀಳಿಸಿದರು. ಬೆಳಿಗ್ಗೆ ಹತ್ತು ಗಂಟೆಯಿAದ ಕಾರ್ಯಾಚರಣೆ ಆರಂಭವಾಯಿತು. ಆದರೆ ಆರು ಪಳಗಿದ ಆನೆಗಳು ಹಾಗೂ ಅಧಿಕಾರಿಗಳು, ಶಾರ್ಪ್ ಶೂರ‍್ಸ್ ಮತ್ತು ವೈದ್ಯರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಲ್ಲೆಂದರಲ್ಲಿ ಓಡಾಡಲು ಆರಂಭಿಸಿತು. ಹೀಗಾಗಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಲು ವೈದ್ಯರು ಹರಸಾಹಸ ಪಡಬೇಕಾಯಿತು.
ಕಡೆಗೂ ಮೂರು ಗಂಟೆ ನಂತರ ಅರವಳಿಕೆ ಇಂಜೆಕ್ಷನ್ ನೀಡಿದರಾದರೂ, ಬೀಳದೆ ನಡೆದು ಹೋಯಿತು.
ಬೇರೆ ದಾರಿ ಇಲ್ಲದೆ ಆನೆ ಎಲ್ಲಿ ಬೀಳುವುದೋ ಎಂದು ಅದನ್ನ ಹಿಂಬಾಲಿಸುವ ಕಾರ್ಯದಲ್ಲಿ ಅಧಿಕಾರಿಗಳು, ಸಿಬ್ಬಂದಿ ಮಗ್ನರಾದರು.
ಉರಿ ಬಿಸಿಲಿನ ನಡುವೆ ಆನೆಯನ್ನು ಹಿಂಬಾಲಿಸಿ ಸಾಕಾನೆಗಳು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾದರು.
ಕಡೆಬಿತ್ತು ಖೆಡ್ಡಾಕ್ಕೆ:
ಕಡೆಗೆ ಬೇಲೂರು ತಾಲ್ಲೂಕು, ವಳಲು ಗ್ರಾಮದ ಜೈದೀಪ್ ಎಂಬುವರ ಎಸ್ಟೇಟ್‌ನಲ್ಲಿ ಒಂಟಿ ಕೋರೆ ಆನೆ ಕುಸಿದು ಬಿದ್ದಿತು. ಪಳಗಿದ ಆನೆಗಳ ಸಹಾಯದಿಂದ ಸೆರೆ ಸಿಕ್ಕ ಆನೆ ಕಣ್ಣಿಗೆ ಹಸಿರು ಬಟ್ಟೆ ಹೊದಿಸಿ ಶುಶ್ರೂಷೆ ಮಾಡಲಾಯಿತು. ಮತ್ತೊಂದು ಒಂಟಿ ಸಲಗನನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದಂತೆಯೇ ಲಾರಿ ಮೂಲಕ ಬೇರೆಡೆಗೆ ಸಾಗಿಸಲಾಯಿತು.


ಬೇಲೂರು ವಲಯ ಅರೇಹಳ್ಳಿ ಶಾಖೆಯ ದೊಡ್ಡ ಉಡುವೆ ಎಸ್ಟೇಟ್ ಬಳಿಯ ವಳಲು ಎಂಬಲ್ಲಿ ಒಂಟಿ ಕೋರೆಯ ಗಂಡಾನೆಯನ್ನು ಸೆರೆಹಿಡಿಯಲಾಗಿದೆ ಸದರಿ ಕಾಡಾನೆಯನ್ನು ಇಂದೇ ಸ್ಥಳಾಂತರಿಸಲಾಗುವುದು. ಕಾರ್ಯಾಚರಣೆಯಲ್ಲಿ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್.ಆರ್, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್‌ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭುಗೌಡ, ಈರನಗೌಡ ಬೀರಾದಾರ, ಎಸ್.ಪಿ.ಮಹದೇವ್ ಇದ್ದರು. ಆಪರೇಷನ್ ವೇಳೆ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆಯಿಂದ ಇರಲು ಇಲಾಖೆಯ ಜೀಪ್‌ಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಲಾಯಿತು.
-ಮೋಹನ್ ಕುಮಾರ್, ಡಿಎಫ್‌ಒ

Address


Alerts

Be the first to know and let us send you an email when Namma hassan life posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share