Seva Vani - ಸೇವಾ ವಾಣಿ

  • Home
  • Seva Vani - ಸೇವಾ ವಾಣಿ

Seva Vani - ಸೇವಾ ವಾಣಿ The Word of Sant Sevalal Maharaja

29/04/2024
29/04/2024

It gives me immense happiness to have received such a great honour. I’d like to thank each and everyone one of you for showing your love and support in all my endeavours. This one’s for you all! ♥️

ಸರ್ಕಾರದ ಹೊಸ ಯೋಜನೆ..... “ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”.  "Blood_On_Call" ಎಂಬುದು ಸೇವೆಯ ಹೆಸರು...
26/10/2023

ಸರ್ಕಾರದ ಹೊಸ ಯೋಜನೆ..... “ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”. "Blood_On_Call" ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯೊಳಗೆ, ರಕ್ತವನ್ನು ನಾಲ್ಕು ಗಂಟೆಗಳ ಒಳಗೆ ತಲುಪಿಸಲಾಗುತ್ತದೆ.. ಪ್ರತಿ ಬಾಟಲಿಗೆ ರೂ. 450/- ಮತ್ತು ಸಾಗಣೆಗೆ ರೂ. 100/-. ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕದಲ್ಲಿರುವ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪಿಗೆ ಫಾರ್ವರ್ಡ್ ಮಾಡಿ. ಈ ಸೌಲಭ್ಯದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು.
🤝🙏🤝

26/10/2023
26/09/2023

⛈️🌦️☔...📖✍️
ರಮ ಝಮ ರಮ ಝಮ ಪಡ ಪಾಣಿ
ಓಮಾಯಿ ನಾಚ ಮಾರ ದಲೇರ ರಾಣಿ
ಖಾವಜೂ ಲಾಗ ಹೋಳಿಗಿಮ ಗಲ್ವಾಣಿ
ದಲೇನ ಬೂರರಿಚ ಓರ ರಾತಡ ಓಡಣಿ.!!೧!!

ವಾಳನ ಪಾಣಿ ಭಳನ ಜೋರ ಜೋರೇತಿ ಮಾರ
ಚಮಕನ ಮಾರ ನಾಯಕಣ ಮಾರ ಬಕಡಿ ಭರ
ಮಾತೇರ ಪಾಣಿ ಗಾಲೇಪರೇನ ಛಾತಿಪರ ಝರ
ಊ ಮನದೇಕನ ಮನಮಾಯಿಜ ಸರಮ ಕರ.!!೨!!

ಪುಷ್ಯಾರೋ ಪಾಣಿ ಭಾರಜ ಜಾಯೆದೇನಿ
ಮಾರ ದಲೇರ ರಾಣಿ ಸೀಳೊಖಾಯೆದೇನಿ
ಹೂಸಣ ಛ ಊ ಮಾತೊ ಭಿಜಾಯೆದೇನಿ
ಜಾನೇರ ಜಾನ ಛ ಛೇಟಿ ಸೋಯೆದೇನಿ.!!೩!!

ಲಾಗೋ ಪಾಣಿತೊ ಡೂಂಗರ ಹರೊ ಭರೊ
ಮಾರ ರಾಣಿನ ಚಿಂತಾ ಚೂಲೊ ಕರೇರೊ
ಬಗರ ಮಾರೆ ಭಾಂಡೇರ. ಆಂಶು ಭರೇರೊ
ಗರ್ಜಣೇತಿ ಚಮಕನ್ ಊ ಬಕಡಿ ಭರೆರೊ.!!೪!!

ರಾತ ಧನ ಲಾಗ ಪಾಣಿ ಖಾಳಿಯಾ ಭರಾವ
ಹರಿಯಾಳಿಮ ಲೋಕ ಢೋರುನ ಚರಾವ
ಘರೇಮ ಜಪರಿಜೊ ಛತರಿನೊ ಭಾರ ಆವ
ಮಾರ ರಾಣಿ ಗರಮ ಕಾಡೊ ಕರನ ಪರಾವ.!!೫!!
...✍️📖
ಶ್ರೀ ಹೆಚ್ ರಾಠೋಡ (ಅಂಜನಾಸುತ)
ಮಾಸ್ತಾರ
(ತಾ)ಸುರಪುರ (ಜಿ)ಯಾದಗಿರಿ

17/09/2023

ವೀಂತಿ, ಅರದಾಸ್, ಕಡಿ ಕಸಳಾತ್ ಬರದಿದ್ದರೆ, ಮನೆಯಲ್ಲಿ ಸೇವಾಲಾಲ್, ಮರಿಯಮ್ಮ ಫೋಟೋ ಇಲ್ಲದಿದ್ದರೆ, ಹೋಳಿ ದವಾಳಿ ತೀಜ್ ಆಚರಿಸದಿದ್ದರೆ, ಭೋಗ್ ಗೊತ್ತಿಲ್ಲದಿದ್ದರೆ, ಗೋರ್ ಬೋಲಿ ಗೊತ್ತಿಲ್ಲದಿದ್ದರೆ ಗೊತ್ತಿದ್ದರೂ ಮಾತನಾಡದಿದ್ದರೆ !!!??????

ನಾನು ಬಂಜಾರ ಸಮಾಜ ಸುಧಾರಕ ಎಂದುಕೊಂಡು ಓಡಾಡುವ ಎಷ್ಟೇ ದೊಡ್ಡ ವ್ಯಕ್ತಿಗಳಿರಲಿ, ಎಷ್ಟೇ ದೊಡ್ಡ ನೌಕರನಾಗಿರಲಿ, ಐಎಎಸ್, ಕೆಎಎಸ್, ಇಂಜಿನಿಯರ್, ಪ್ರೊಫೆಸರ್ ಏನೇ ಆಗಿರಲಿ ಇವರಿಂದ ಬಂಜಾರರಿಗೆ ಯಾವುದೇ ರೀತಿ ಉಪಯೋಗವಿಲ್ಲ ವೇಸ್ಟ್.
ಇವರೆಲ್ಲ ಬಂಜಾರರ ಹೆಸರು ಹೇಳಿಕೊಂಡು ಜೀವನ ನಡೆಸುವವರು ಬಂಜಾರ SC ಸರ್ಟಿಫಿಕೇಟ್ನಿಂದ ನೌಕರಿ ತೆಗೆದುಕೊಂಡು ಮಜಾ ಮಾಡುತ್ತಿರುವವರು, ಬಂಜಾರ ತಂದೆ ತಾಯಿಗಳು ಮಾಡಿರುವ ಆಸ್ತಿಯನ್ನು ಮಾತ್ರ ಅನುಭವಿಸುವವರು, ಬಂಜಾರರಿಗೆ ಪ್ರಿಯವಾದ ಸಳೋಯಿ ಬಾಟಿ ತಿಂದು ಮಜಾ ಉಡಾಯಿಸುವವರು ಅಷ್ಟೇ ಇವರಿಂದ ಬಂಜಾರರಿಗೆ ಯಾವುದೇ ರೀತಿಯ ಉಪಯೋಗವಿಲ್ಲ.

14/09/2023

ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಒಂದು ಕಿರುಚಿತ್ರ ಎಲ್ಲ ವಿದ್ಯಾರ್ಥಿಗಳು ತಪ್ಪದೆ ನೋಡಿ

14/09/2023

ಕೆ.ಎಚ್.ಮುನಿಯಪ್ಪ ರವರು ಹೊಸಕೋಟೆಯಲ್ಲಿ ನಡೆದ ಒಂದು ಖಾಸಗೀ ಕಾರ್ಯಕ್ರಮದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ನೀಡಿದ ಹೇಳಿಕೆಯ ಬಗ್ಗೆ ಬಂಜಾರ ಸಮುದಾಯದವರು ಆತಂಕಗೊಂಡಿರುತ್ತಾರೆ ಮತ್ತು ಬಿಜೆಪಿ ಯ ಕೆಲವರು, ಹೋರಾಟಗಾರನ್ನು ಮತ್ತು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳನ್ನು ಪ್ರಶ್ನಿಸತೊಡಗಿದ್ದಾರೆ..

ವಿಷಯ ಇಷ್ಟೇ; ನಾವು ಹೇಗೆ ಒಳಮೀಸಲಾತಿಯ ವಿಷಯದಲ್ಲಿ ವಿರೋಧವಿದ್ದೇವೆಯೋ ಹಾಗೆಯೇ ಅವರು ಒಳಮೀಸಲಾತಿಯ ಪರವಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪರ/ವಿರೋಧ ಮಾಡುವ ಹಕ್ಕು ಎಲ್ಲರಿಗೂ ಇದೆ.
ಅವರ ಖಾಸಗೀ ಸಭೆಯೊಂದರಲ್ಲಿ ಕೊಟ್ಟ ಹೇಳಿಕೆಗೆ ಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.. ಒಂದುವೇಳೆ ಒಳಮೀಸಲಾತಿ ವರದಿಯ ವಿಷಯವು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದರೆ, ಅಥವಾ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಯೋ, ಸಮಾಜ ಕಲ್ಯಾಣ ಸಚಿವರೋ ಹೇಳಿಕೆ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲೇಬೇಕಾಗುತ್ತದೆ. ಆಗಲೂ ಪ್ರತಿಕ್ರಿಯೆ ನೀಡದಿದ್ದರೆ ಒಕ್ಕೂಟವನ್ನು ಪ್ರಶ್ನಿಸುವ, ಟೀಕಿಸುವ ಹಕ್ಕು ಎಲ್ಲರಿಗೂ ಇದೆ.

ಮೀಸಲಾತಿ ಸಂರಕ್ಷಣಾ ಒಕ್ಕೂಟವು ಈಗಾಗಲೇ ಒಳಮೀಸಲಾತಿಯ ಕುರಿತು ನ್ಯಾಯಾಲಯದಲ್ಲಿ ಮೊದಲಹಂತದ ಗೆಲುವು ಸಾಧಿಸಿದ್ದು ವಿಚಾರಣೆ ಕೋರ್ಟಿನಲ್ಲಿದೆ. ಒಳಮೀಸಲಾತಿಯ ವಿಷಯದಲ್ಲಿ ಸಮುದಾಯದ ಜೊತೆಯಲ್ಲಿ ಒಕ್ಕೂಟ ಯಾವತ್ತೂ ಇರುತ್ತದೆ. ಗೊಂದಲ ಸೃಷ್ಟಿ ಮಾಡುವವರಿಂದ ಮತ್ತು ದಿಕ್ಕುತಪ್ಪಿಸುವವರಿಂದ ಎಚ್ಚರವಾಗಿರಿ.

ಅಪಣ್ ಕತರಾಯೀಭೀ ಮೋಟ್ ರತೊಯಿ ಅಪಣೇನ್ ಪಾಚೇತಿ ಲಂಬಾಣಿ, ಬಂಜಾರ ಕರನಜ ಲೋಗ್ ಒಳಕೇರೋ. ಅಪಣೇನ ಗೌರ್ಮೆಂಟ್ ಫೆಸಿಲಿಟಿ, ನೌಕರಿ, ಎಜುಕೇಶನ್, MBBS, ...
14/09/2023

ಅಪಣ್ ಕತರಾಯೀಭೀ ಮೋಟ್ ರತೊಯಿ ಅಪಣೇನ್ ಪಾಚೇತಿ ಲಂಬಾಣಿ, ಬಂಜಾರ ಕರನಜ ಲೋಗ್ ಒಳಕೇರೋ.

ಅಪಣೇನ ಗೌರ್ಮೆಂಟ್ ಫೆಸಿಲಿಟಿ, ನೌಕರಿ, ಎಜುಕೇಶನ್, MBBS, Engineering, Professor, Teacher, ಸಬ್ಸಿಡಿ, ಪಾಲಿಟಿಕಲ್ ರಿಸರ್ವೇಶನ್ ಸೇಜ ಮಳೇರೋ ಬಂಜಾರ, ಲಂಬಾಣಿ ಕ್ಯಾಸ್ಟ್ ಸರ್ಟಿಫಿಕೇಟೇತಿ.

ಜೇಸಾರು, ಜಾತೇನ ಕತೇತಾಣಿ ಅಪಣ್ ಮೋಟ್ ಕರಾನಿ, ಮಾನ್ ಸಮ್ಮಾನ್ ಲಾಮಾನಿ ಒತ್ತೆತಾಣಿ ಅಪಣೇನ ಈ ದೇಶಮ ನ್ಯಾಯ, ಮಾನ್ ಸಮ್ಮಾನ್ ಮಳೇನಿ. ಅಪಣ್ ಹೈಂಜ ನೀಂದೇಮಾ ಸೊಗೇತೊ ಆಂಗೇರ ಧಾಡ ಅಪ್ಣೇರ ಬೇಟ್ ಬೆಟಾರ್ ಕ್ಯಾಸ್ಟ್ ಸರ್ಟಿಫಿಕೇಟ್ ಭೀ ಚಲೇಜಾವಚ.

ಜಾತೇನ ಮಾನ್ ಮಳೇಸಾರು ಸಂಘಟನಾ ವೇಣು, ಸಂಘಟನಾ ವೇಣುಕತೊ ಗೋರೂರ ವಹಿವಾಟ್, ಕಲ್ಚರ್ ಬಚಾಡನ್ ರಕಾಡಜಣೂ.

ಗೋರ್ ವಹಿವಾಟ್
👉 ಗೋರ್ ಬೋಲೀಮ ವಾತೇ ಕರೇರೊ

👉 ಸತ್ಗರು ಸೇವಾಲಾಲ್ ಅನ ಜಗದಂಬ ಯಾಡಿ ಮರಿಯಮ್ಮರ ಭೋಗ್ ಲಗಾಡೇರೋ.

👉 ಹರ್ ಘರೇಮಾ ಸೇವಾಲಾಲ್ ಮರಿಯಮ್ಮ ಅನ್ ಗೋರೂರ್ ವೇರಾಳೂರ ಫೋಟೋ ಘಾಲೇರೊ ಅನ್ ಧಾಡೀ ಪೂಜಾ ಕರೇರೊ.

👉 ವೀಂತಿ, ಅರದಾಸ್, ಕಡೀ ಕಸಳಾತ್, ಗೀದ್, ಯಾಡಿ ಬೇನೆರ ನಾಚ್ ಸೀಕೇರೊ.

👉 ಹೋಳಿ, ದವಾಳಿ, ತೀಜ್, ಆಟಮ್, ಸೀತಲ ತೇವಾರ್ ಹಸಿ ಖುಸೀತಿ ಮನಾಯೇರೊ.

👉 ಗೊರ ಪದ್ಧತೀರ ಸೋಟ ಮುಸಳೆರೋ ವಿಯಾ ಕರೇರೋ, ಗೊರ ಪದ್ಧತೀರ ಭೊಗ್ ಲಗಾಡನ ಘರಭರಣಿ (ಗೃಹಪ್ರವೇಶ) ಕರೇರೊ.

👉 ಕಷ್ಟಾಮಾ ಛಜಕೋಣ್ ಗೋರ್ ಗರೀಬೇನ ಸಹಾಯ ಕರೇರೊ, ತಾಂಡೆಮಾಯಿರ ಭಾಯಿ ಪಣಾನ ಹೋಟೋ ಫರನ ದೇಕೆರೋ.

ಅಜೆಕೇರ್ ಪಗೇಮ ದಾದಾ ಘಿಸಾಗೊ, ಬಾಪ್ ಘಿಸಾಗೊ, ಅಪಣ್ ಭೀ ಘಿಸಾರೇಚ ಅನ ಆಂಗೇರ್ ಧಾಡ್ ಅಪಣೇರ್ ಬೆಟಬೇಟಾಭಿ ಘಿಸಾಯೆವಾಳ್ ಛ.

ಅಬತೊಯಿ ಜಾಗ್ ಜಾವ್
ಅಬತೊಯಿ ಜಾಗ್ ಜಾವ್
ಅಬತೊಯಿ ಜಾಗ್ ಜಾವ್

ಜೈ ಗೋರ್
ಜೈ ಸೇವಾಲಾಲ್
ಜೈ ಮರಿಯಮ್ಮ
...✍️📖 ಲೇಖಣಿ
ಡಾ. ನಾಗೇಂದ್ರ ನಾಯಕ

ಹಾಯ್, ನಾನು ಪ್ರಜ್ಞಾನ್ ನಿಮ್ಮೆಲ್ಲರ ಪರವಾಗಿ ನಾನು ಚಂದ್ರನ ಮೇಲೆ ಹೆಜ್ಜೆ ಇಟ್ಟಿದ್ದೇನೆ. ನೆನ್ನೆ ನನ್ನನ್ನು ಹೊತ್ತ ವಿಕ್ರಮ ಇಲ್ಲಿ ಇಳಿದ ಕೂಡಲ...
27/08/2023

ಹಾಯ್, ನಾನು ಪ್ರಜ್ಞಾನ್

ನಿಮ್ಮೆಲ್ಲರ ಪರವಾಗಿ ನಾನು ಚಂದ್ರನ ಮೇಲೆ ಹೆಜ್ಜೆ ಇಟ್ಟಿದ್ದೇನೆ.

ನೆನ್ನೆ ನನ್ನನ್ನು ಹೊತ್ತ ವಿಕ್ರಮ ಇಲ್ಲಿ ಇಳಿದ ಕೂಡಲೇ ನೀವೆಲ್ಲಾ ಕುಣಿದು ಕುಪ್ಪಳಿಸಿದಿರಿ ಎಂದು ಕೇಳಿ ಸಂತೋಷವಾಯಿತು. ನಾನು ಸಹ ನಿಮ್ಮ ಹಾಗೆ ಚಂದ್ರನನ್ನು ಭೂಮಿಯಿಂದ ನೋಡಿ ಏನೋನೋ ಕಲ್ಪನೆ ಇಟ್ಟುಕೊಂಡಿದ್ದೆ. ಇದೇ ಖುಷಿಯಲ್ಲಿ ವಿಕ್ರಮನ ಹೊಟ್ಟೆಯಿಂದ ಹೊರ ಬರಲು ಕಾಯುತ್ತಿದ್ದೆ. ವಿಕ್ರಮ ಇಳಿದು ಮೂರುವರೆ ಗಂಟೆಯಾದರೂ ನನಗಾಗಿ ಬಾಗಿಲು ತೆರೆಯಲೇ ಇಲ್ಲ...

ಬಾಗಿಲನು ತೆರೆದು ಚಂದ್ರನ ಮೇಲೆ ಬಿಡೋ ದೊರೆಯೇ ಎಂದು ನಾನು ಹಾಡುತ್ತಲೇ ಇದ್ದೇ. ನಾನು ಇಳಿದೆ ಇಲ್ಲಿ ಎಲ್ಲವೂ ಕ್ಷೇಮ ಎಂದು ಭೂಮಿಗೆ ಸಂದೇಶ ಕಳುಹಿಸಿದ ವಿಕ್ರಮ ಮೂರುವರೆ ಗಂಟೆಗಳ ನಂತರ ನನಗಾಗಿ ಬಾಗಿಲು ತೆರೆದ. ನಾನು ಖುಷಿಯಲ್ಲಿ ನನ್ನ ಬಟ್ಟೆಗಳನ್ನೆಲ್ಲಾ ಸರಿ ಪಡಿಸಿಕೊಂಡು ಫೋಟೋ ತೆಗಿಯೋಕೆ ರೆಡಿ ಇರು ವಿಕ್ರಮನಿಗೆ ಹೇಳಿ ನಿಧಾನವಾಗಿ ಹೆಜ್ಜೆ ಇಡಲು ಆರಂಭಿಸಿದೆ. ವಿಕ್ರಮನೂ ತನ್ನ ಕ್ಯಾಮೆರಾ ಲೆನ್ಸ್ ಒರೆಸಿಕೊಂಡು ಸಿದ್ಧನಾದ. ಆದರೆ ಹೊರ ಬರುತ್ತಿದ್ದಂತೆ ಚಂದ್ರನ ಬಗ್ಗೆ ನನಗಿದ್ದ ಕಲ್ಪನೆಗಳೆಲ್ಲಾ ಠುಸ್ ಅಂದಿತು. ಎಲ್ಲೆಲ್ಲೂ ಬೂದಿ, ಬೂದಿಯ ಬೆಟ್ಟಗಳು. ಇಷ್ಟೊಂದು ಬೂದಿ ಇದ್ದರೂ ವಾತಾವರಣ ಫುಲ್ ಕ್ಲೀನ್. ಯಾಕಂದ್ರೆ ಇಲ್ಲಿ ಗಾಳಿಯೂ ಇಲ್ಲ.

ಆದರೂ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಚಂದ್ರನ ಮೇಲೆ ಹೆಜ್ಜೆ ಇಟ್ಟೆ. ನನ್ನ ಕಾಲಿನ ಮೇಲೆ ಇರುವ ನಮ್ಮ ದೇಶದ ಗುರುತನ್ನು ಇಲ್ಲಿ ಅಚ್ಚೊತ್ತಿದೆ. ಇದು ಚಂದ್ರ ಇರುವವರೆಗೂ ಇಲ್ಲೇ ಇರುತ್ತದೆ. ನನ್ನನ್ನು ಸೃಷ್ಟಿ ಮಾಡಿದ ದೇಶದ ಗುರುತನ್ನು ಇಲ್ಲಿ ಮೂಡಿಸಿದ ಗಳಿಗೆಯನ್ನೂ ಮಾತ್ರ ನಾನು ಮರೆಯಲಾರೆ. ಇನ್ನು ಮುಂದೆ ಯಾರೇ ಬಂದರೂ ನಾನು ಬಂದಿದ್ದೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಅಯ್ಯೋ ತುಂಬಾ ಎಮೋಶನಲ್ ಆದೆ ಅನ್ಸುತ್ತೆ. ಇರಲಿ ಬಿಡಿ ಜೀವನದಲ್ಲಿ ಇದು ಒಮ್ಮೆ ಮಾತ್ರ ಸಿಗೋ ಅನುಭೂತಿ

ಭೂಮಿಯಿಂದ ೩.೮೪ ಲಕ್ಷ ಕಿ.ಮೀ. ದೂರ ಪ್ರಯಾಣ ಮಾಡಿದಿನಿ. ಒಂದಷ್ಟು ರೆಸ್ಟ್ ಮಾಡೋಣ ಅನ್ಕೊಂಡೆ. ಆದರೆ ಆಗಲ್ಲ. ಚಂದ್ರನಲ್ಲಿ ಇಳಿಯೋಕು ಮೊದಲೇ ನಾನು ಯಾವಾಗ ಸಾಯ್ತೀನಿ ಅಂತಾ ಹೇಳಿ ಕಳುಹಿಸಿದ್ದಾರೆ. ಅಷ್ಟರಲ್ಲಿ ನಾನು ಮಾಡಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ವಿಕ್ರಮನೋ ಅರೆ ಹೊಟ್ಟೆ ತಿನ್ನಿಸಿ ನನ್ನನ್ನು ಚಂದ್ರನ ಮೇಲೆ ಬಿಟ್ಟ. ಹೊಟ್ಟೆ ಹಸಿಯುತ್ತಿತ್ತು. ಕೆಲ ಕಾಲ ಸೂರ್ಯನಿಗೆ ಮೈಯೊಡ್ಡಿದೆ ನೋಡಿ ಹೊಟ್ಟೆ ಫುಲ್. ೪೧ ದಿನಗಳ ಕಾಲ ಕತ್ತಲೆಯಲ್ಲೇ ಕುಳಿತಿದ್ದ ನನ್ನ ಮೇಲೆ ಮೊದಲ ಬಾರಿ ಸೂರ್ಯನ ಬಿಸಿಲು ಬಿದ್ದ ಕೂಡಲೇ ಮಿಂಚಿನ ಸಂಚಾರವಾಯಿತು. ಕೈಕಾಲುಗಳಲ್ಲಿ ಶಕ್ತಿ ತುಂಬಿಕೊಂಡಿತು. ಅಂತೂ ಕೆಲಸ ಶುರು ಮಾಡಿದೆ.

‘ಸ್ಸ್ಮೈಲ್ ಪ್ಲೀಸ್' ಎಂದು ವಿಕ್ರಮನಿಗೆ ಹೇಳಿ ಹೇಳಿ ಸಾಕಾಯ್ತು. ನಾನು ಇಳಿದ ಮೇಲೆ ಅವನಿಗಂತೂ ನನ್ನ ಮೇಲೆ ಗಮನವೇ ಇಲ್ಲ. ಚಂದ್ರನ ನೆಲ ನಡುಗುತ್ತದಾ, ಚಂದ್ರನ ಮೇಲೆ ಶಾಖ ಎಷ್ಟು ವೇಗವಾಗಿ ಸಾಗುತ್ತದೆ, ಚಂದ್ರನ ಮೇಲೆ ಕುಡಿಯೋಕೆ ನೀರು ಸಿಗುತ್ತದಾ, ಹೀಗೆ ಏನೇನೋ ಲೆಕ್ಕ ಹಾಕೋಕೆ ಶುರು ಮಾಡಿದ್ದ. ಅಂತೂ ಜೋರಾಗಿ ನಗೋ ಲೋ ಎಂದು ಕೂಗಿದ ಮೇಲೆ ನನ್ನ ಕಡೆ ತಿರುಗಿದ. ಅವನದ್ದೊಂದು ಫೋಟೋ ತೆಗೆದು, ಅದನ್ನು ಅವನಿಗೆ ಕೊಟ್ಟು ಆದಷ್ಟು ಬೇಗ ಭೂಮಿಗೆ ಕಳುಹಿಸು ೧೪೦ ಕೋಟಿ ಜನ ಇದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿ ಮಣ್ಣು ತಿನ್ನುವ ಕೆಲಸಕ್ಕೆ ತೊಡಗಿಕೊಂಡೆ.

ಮಣ್ಣು ತಿನ್ನೋದು ಅನ್ನೊದನ್ನ ತಪ್ಪಾಗಿ ಅರ್ಥ ಮಾಡ್ಕೋಬೇಡಿ. ಇಲ್ಲಿ ನನ್ನ ಕೆಲಸವೇ ಇದು, ಚಂದ್ರನ ಮೇಲೆ ಓಡಾಡುತ್ತಾ ಸರಿಯಾದ ಜಾಗ ಗುರುತಿಸಿ ಅಲ್ಲಿರುವ ಮಣ್ಣು ತೆಗೆದು ಬಾಯಿಗೆ ಹಾಕಿಕೊಂಡು ಅದರ ರುಚಿ ನೋಡಿ ನಿಮಗೆ ಹೇಳಬೇಕು. ಇಲ್ಲಿ ಕಬ್ಬಿಣ ಇದ್ಯಾ, ಮೆಗ್ನಿಷಿಯಂ ಇದ್ಯಾ, ಅಲ್ಯುಮಿನಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಯಾವುದಿದೆ ಅಂತಾ ರುಚಿ ನೋಡಿ ನಿಮಗೆ ತಿಳಿಸಬೇಕು. ಇವುಗಳ ರುಚಿ ನೋಡೋದ್ರಲ್ಲಿ ನಾನಂತೂ ಪಂಟರ್ ಬಿಡಿ, ವರ್ಷಾನುಗಟ್ಟಲೇ ನಿಮಗಾಗಿ ಇದನ್ನು ಅಭ್ಯಾಸ ಮಾಡಿದಿನಿ. ಅಷ್ಟೇ ಅಲ್ಲಾ ಚಂದ್ರ ಮೇಲೆ ಗುಂಡಿ ತೆಗೆದು ಆಳದಿಂದ ಮಣ್ಣು ತೆಗೆದು ನೀರಿನ ಅಂಶ ಇದೆಯಾ ಎಂಬುದನ್ನು ನಾನು ನೋಡಿ ಹೇಳ್ತೀನಿ ಯೋಚನೆ ಮಾಡ್ಬೇಡಿ...

ಉಫ್..... ಇಷ್ಟೆಲ್ಲಾ ಕೆಲಸ ನಾನು ೧೪ ದಿನದಲ್ಲಿ ಮಾಡಿ ಮುಗಿಸಬೇಕು. ಏಕೆಂದರೆ ಆಮೇಲೆ ನಾನು ಸತ್ತು ಹೋಗ್ತೀನಿ. ೧೪ ದಿನದ ಬಳಿಕ ಇಲ್ಲಿ ಬಿಸಿಲು ಇರೋಲ್ಲ. ೧೪ ದಿನ ಸಂಪೂರ್ಣ ರಾತ್ರಿ. ಏನೂ ಕಾಣೋಲ್ಲ. ನಿಮಗೆ ಉಸಿರಾಡೋಕೆ ಆಮ್ಲಜನಕ ಹೇಗೆ ಮುಖ್ಯಾನೋ ಹಾಗೆ ನನಗೆ ಬದುಕೋಕೆ ಬಿಸಿಲು ಬೇಕು. ಆದರೆ ೧೪ ದಿನ ಬಿಸಿಲು ಇಲ್ಲದೇ ನಾನು ಹೇಗೆ ಬದುಕಿರಲಿ ಹೇಳಿ. ಅಷ್ಟೇ ಅಲ್ಲ ಸೂರ್ಯ ಇಲ್ಲದಿದ್ದರೆ ಇಲ್ಲಿ ಉಷ್ಣಾಂಶ -೨೫೦ ಡಿಗ್ರಿಗೆ ಇಳಿಯುತ್ತೆ. ಈ ಚಳಿಯಲ್ಲಿ ನನ್ನ ಪರಿಸ್ಥಿತಿ ನೆನಪಿಸಿಕೊಂಡು ನಿಮ್ಮ ಮೈ ಫ್ರೀಜ್ ಆಗ್ತಿದೆ ಅಲ್ವಾ.... ಆದ್ರೂ ನಿಮಗಾಗಿ ೧೪ ದಿನ ಉಸಿರು ಬಿಗಿ ಹಿಡಿದು ಕಾಯ್ತಾ ಇರ್ತೀನಿ. ನನ್ನ ಅದೃಷ್ಟ ಚೆನ್ನಾಗಿದ್ರೆ ೧೪ ದಿನದ ಬಳಿಕ ಮತ್ತೆ ಬಿಸಿಲು ಬಂದಾಗ ಬದುಕಿಕೊಳ್ತೀನಿ, ಇನ್ನಷ್ಟು ಸಂಶೋಧನೆ ನಡೆಸ್ತೀನಿ.

ನಾನು ಸಾಯ್ತೀನಿ ಅಂತಾ ಬೇಜಾರು ಮಾಡ್ಕೋಬೇಡಿ. ಸಾಯೋ ಮೊದಲು ನನ್ನ ಕೆಲಸಗಳನ್ನು ಮರೆಯದೇ ಮಾಡ್ತೀನಿ. ಆದ್ರೂ ನನಗಾಗಿ ನಿಮ್ಮ ಪ್ರಾರ್ಥನೆ, ಹಾರೈಕೆಯಿಂದ ನನ್ನ ಹೃದಯ ತುಂಬಿ ಬಂದಿದೆ... ನನ್ನಂತ ಹಲವು ಅಧ್ಭುತಗಳನ್ನು ಸೃಷ್ಟಿಸುವ ಇಸ್ರೋ ಮೇಲೂ ನಿಮ್ಮ ಪ್ರೀತಿ, ನಂಬಿಕೆ ಹೀಗೆ ಇರಲಿ...

ಧನ್ಯವಾದಗಳು ಭಾರತಮಾತೆ... 🇮🇳

26/08/2023

ಇದು ಕಥೆಯಲ್ಲ..
ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ...

ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು🙏. ಒಂದು ಒಳ್ಳೆಯ ತಿಳುವಳಿಕೆ ಕೊಡುವಂತಹ ಬರಹ, ನಮ್ಮ (Generation) ಪೀಳಿಗೆಗೆ, ಮಕ್ಕಳ ಪೀಳಿಗೆಗೆ ಹಾಗೂ ಮುಂದಿನ ಎಲ್ಲಾ ಪೀಳಿಗೆಗೂ ಅನ್ವಯವಾಗುವಂತಹ ಬರಹ.

ಅಮ್ಮ - ಹೆಂಡತಿ ಮಕ್ಕಳು:
...✍️📖"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸುವುದು..."

ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಒಂದು ವರುಷವಾಯಿತು.....

ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...

ಯಾಕೆಂದರೆ ನಿನ್ನೆ ನನಗೆ ನಿವೃತ್ತಿಯಾಯಿತು...

ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ...

ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು, ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...

ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...

ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿಕೊಳ್ಳಬಲ್ಲೆ...

ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿಕೊಳ್ಳಬೇಕಾದವಳು ಇವಳೇ... ಅಂದರೆ ನನ್ನ ಹೆಂಡತಿಯೇ...

ನನಗಾದರೂ ಅವಳು
ತಾಯಿ.. ನನ್ನವಳಿಗೆ ಅವಳು ತಾಯಿಯಾ..?

ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.

ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ...

ಇವಳಿಗಾದರೂ ಈ ಭಾವ ಸಹಜವೇ... ಹೊರಗಿನಿಂದ ಬಂದವಳು....

ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....

ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ, "ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"

ಆದರೆ ನನ್ನ ಮಗಳು ಶಿಶಿರ "ಅಬ್ಬಾ, ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...

"ಮಕ್ಕಳೇ.. ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ" ಅಂದಿದ್ದೆ...

ಹೆಂಡತಿ ಮಕ್ಕಳೇನೋ ಸುಮ್ಮನಾದರು...

ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...

ಇಂದು ನನ್ನ ನಿವೃತ್ತಿಯ ಮೊದಲ ದಿನ.

ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ
ಮುಗಿಸಿ ನಾವು ಹೊರಟು ನಿಂತೆವು...

ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...

"ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.

ನಾವೆಲ್ಲರೂ ಕಾರಿನಲ್ಲಿ ಕುಳಿತೆವು.

ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.

ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..

ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..

ಹಾರನ್ ಮಾಡಿದೆ..

ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..

ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..

"ವೃದ್ಧಾಶ್ರಮ ಅಲ್ವಾ..?" ಹೆಂಡತಿ
ಬಾಯಿ ತೆಗೆದಳು...

ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...

ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್.... ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.

ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..

"ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
ನನ್ನವಳ ಪ್ರಶ್ನೆ..

"ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.

"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿಕೊಳ್ಳುತ್ತೀರಾ?"

"ಹಾಗೆಂದು ಕೊಳ್ಳಬಹುದು" ಎಂದೆ...

"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...

"ಮನೆಯ ಖರ್ಚು ನನ್ನದೇ" ನನ್ನ ಉತ್ತರ.

"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".

"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ, ಏನು ಭಯವೇ" ಅಂದೆ.

"ಅಯ್ಯೋ ನೀವಿಲ್ಲದ ಮನೆಯೇ".
ಇವಳ ಕಣ್ಣಲ್ಲಿ ಗಂಗಾ ಪ್ರವಾಹ..

ಅಮ್ಮನ ಕಣ್ಣಲ್ಲಿ ಅಶ್ರುಧಾರೆ..

ಅವಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.

ಅವಳನ್ನು ಮಂಚದ ಮೇಲೆ ಮಲಗಿಸಿದೆ...

ಮಗ, ಮಗಳು, ಇವಳು ಎಲ್ಲರೂ
ಸ್ತಬ್ಧ ಚಿತ್ರದ ಹಾಗೆ ಮೂಗರಾಗಿದ್ದಾರೆ..

ಮಗ ಬಾಯಿ ತೆಗೆದ "ಅಪ್ಪಾ ಇದೆಲ್ಲ ಏನು Nonsence...?

ನಾನೆಂದೆ, "ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...

"ನಾನೂ ಅಮ್ಮ ಇಲ್ಲಿರುತ್ತೇವೆ.. ನೀವು ಮನೆಗೆ ಹೋಗಿ ಮಗೂ.. ಚೆನ್ನಾಗಿರಿ".

"ಅಪ್ಪಾ "
ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...? ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"

ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು.. ಅದನ್ನೇ ಉರು ಹೊಡೆದು ಹೇಳುತ್ತಿದ್ದಾಳೆ... ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.

"ಮಗಳೇ... ನನಗಾಗ ಆರೇಳು ವರ್ಷ ಇರಬಹುದು. ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ನನಗೆ ವಾಂತಿ ಭೇದಿ ಆರಂಭವಾಯಿತು... ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.

ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.

ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು. ಬದುಕಿಸಿದಳು.

ದೇವಾ...ಇಂತಹ ಅಮ್ಮನಿಗೆ ಈಗ ಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.

ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ, ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ಧಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....

ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?

ಬೇಡ ಮಗೂ, ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ... ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ.... ಅಮ್ಮನಿರುವವರೆಗೆ ಮಾತ್ರ..."

ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದುಕೊಳ್ಳುತ್ತೇನೆ. ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.." ಅವಳಿಗೆ ಗಾಬರಿಯಾಗಿದೆ.

ಮಕ್ಕಳೇ,
ನಾನು ಹೇಳುತ್ತೇನೆ, ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....

ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ... ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ.. ನನ್ನಮ್ಮನಿಗಾದರೂ ನಾನಿದ್ದೆ... ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ
ಮಾಡಬೇಕೆಂಬ ನಿರೀಕ್ಷೆಯೂ ತಪ್ಪೇ...

ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ"

ಮಗ ಕದಲಿ ಹೋದ

"ಅಪ್ಪಾ, ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು, ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ... ನೀವು ನಮ್ಮ ಕಣ್ಣ ತೆರೆಸಿದಿರಿ... ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ, ನಿಮ್ಮಿಬ್ಬರನ್ನೂ ಕೊನೆ ಕಾಲದವರೆಗೆ ಪ್ರೀತಿ.. ಗೌರವದಿಂದ ನೋಡಿಕೊಳ್ಳುತ್ತೇವೆ.."

ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು ಬೀಳಬೇಕಾದುದು ಈ ಕಾಲುಗಳಿಗಲ್ಲ...ಆ ಕಾಲುಗಳಿಗೆ".

ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..
..✍️📖ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.

ಈಗಿನ ಕೆಲವರ ಮನೆಯ ಕಥೆ ಆದರೆ ಭವಿಷ್ಯದಲ್ಲಿ ಹಲವರ ಮನೆಯ ಕಥೆಯಾಗುತ್ತದೆ. ಯಾಕೆಂದರೆ ಪ್ರತಿಯೊಬ್ಬರಿಗೂ ವಯಸ್ಸು ಆಗುತ್ತದೆ. ಮಾಡಿದ್ದುಣ್ಣೋ ಮಹಾರಾಯ ಗಾದೆ ನಿಜವಾಗುತ್ತದೆ...

Shout out to my newest followers! Excited to have you onboard!Venky Naikt, Devidas Nayak Rathod, Rajesh Naik, Vikas Pawa...
09/08/2023

Shout out to my newest followers! Excited to have you onboard!

Venky Naikt, Devidas Nayak Rathod, Rajesh Naik, Vikas Pawar, Manju Manju, Shivaji Rathod, Somanath Somanath Chavan, Dyaneshvar Rathod, Ananda Naik, Basareddy Nayak, Santosh Lamani, Govinda Naik G, Vishnu Chavan, Praveen S Lamani Lamani, Ranjit Rathod, Shankar Shankar, Laxmanagouda Mudakanagoudra, Gulab Pawar, Chandrakant Jadhav, Sachin Chavhan, Nitin Chavan, Krishna Naik Dpc, Rakshasa Nayak, Krushna Krushna, Prabhu Lamani, Khalu Khalu, Sachin Chavan, Chandrashekhar Rathod Chandrashekhar Rathore, Ballajja Ballajja, Pavan Rathod, Ramesh Bhukya, Somu Chavan, T Srinu, Annanaik Naik, Ramji Nayak Maloth, Lp Nagraj, Ganesh Naik, Vinod Jadhav, Ambresh Jadhav

https://m.facebook.com/story.php?story_fbid=681407380697990&id=100064862011086&mibextid=DcJ9fc
10/07/2023

https://m.facebook.com/story.php?story_fbid=681407380697990&id=100064862011086&mibextid=DcJ9fc

ಬಂಜಾರ ಸಮುದಾಯ ಮೂಲತಃ ಬುಡಕಟ್ಟು ಸಮುದಾಯ ಹಾಗಾಗಿ ಪ್ರಮುಖವಾಗಿ ಪ್ರಕೃತಿಯನ್ನು ಆರಾಧಿಸುವಂತಹ ರೂಢಿ ಪದ್ಧತಿ ಬಂಜಾರ ಸಮುದಾಯದಲ್ಲಿ ಬೆಳೆದು ಬಂದಿದೆ.
ಮಳೆಗಾಲದ ಸಂದರ್ಭದಲ್ಲಿ ವಿಶೇಷವಾಗಿ ಜಡಿ ಮಳೆ ಬೀಳುವ ಅಂದರೆ ಆರಿದ್ರ ಮಳೆಯ ಸಂದರ್ಭದಲ್ಲಿ ಗಾಳಿ, ಮಣ್ಣು, ನೀರು ಹೀಗೆ ಪ್ರಕೃತಿಯಿಂದ ಬರುವಂತಹ ಬೇನೆಗಳು, ಸಾಂಕ್ರಾಮಿಕ ರೋಗಗಳು ಮತ್ತು ತಾಂಡಗಳಲ್ಲಿ ವಿಶೇಷವಾಗಿ ಮಕ್ಕಳಿಗೆ ಬರೆದಂತೆ ದೇವರಲ್ಲಿ ಪ್ರಾರ್ಥಿಸಿ ಮಾಡುವಂತಹ ಹಬ್ಬವೇ ಸೀತಲಾ ಹಬ್ಬ.

ಸೀತಲಾ ಹಬ್ಬ ಪ್ರಾರಂಭವಾಗುವುದು ತಾಂಡಾದ ಪ್ರತಿ ಮನೆ ಹಾಗೂ ಮನೆಲಿರುವಂತಹ ಬಟ್ಟೆ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೊಳೆದು ಸ್ವಚ್ಛಗೊಳಿಸಿ ಮನೆಯನ್ನು ಗುಡಿಸಿ , ಸಾರಿಸಿ ಸ್ವಚ್ಛಗೊಳಿಸಿ ಮನೆ ಹಾಗೂ ತಾಂಡದಲ್ಲಿರುವ ರೋಗರುಜಿನೆಗಳನ್ನು ಹೊರ ತೆಗೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಪ್ರಕೃತಿಯ ಸಂಕೇತವಾದ ಅಂಬಾ, ಅಳಲಿ, ಹಿಂಗಳಾ, ದುರ್ಗಾ, ಕಂಕಾಳಿ, ತುಳಜಾ ಮಂತ್ರಾಲ್, ಸಾತಿ ಭವಾನಿ ಯರನ್ನು (ಸಪ್ತ ಮಾತೃಕೆಯರು) ಪೂಜಿಸಲಾಗುತ್ತದೆ. ತಾಂಡಾದ ಹೊರಭಾಗದಲ್ಲಿ ಸಾತಿ ಭವಾನಿಯರನ್ನು ಪ್ರತಿನಿಧಿಸುವ ಏಳು ಕಲ್ಲುಗಳನ್ನು ಇಟ್ಟು ಇವುಗಳನ್ನು ಅರಿಶಿಣ,ಕುಂಕುಮ ಹೂವು ಗಳಿಂದ ಶೃಂಗರಿಸಿ ತಾಂಡಾದವರೆಲ್ಲರೂ ಒಂದೆಡೆ ಸೇರಿ ಕುರಿಯನ್ನು ಕಡಿದು ತಾಂಡಾದ ಎಲ್ಲ ಮನೆಗಳಿಗೂ ಸಮನಾಗಿ ಪಾಲನ್ನು ಹಾಕಿ ಅಂದು ಮನೆಗಳಲ್ಲಿ ಮಾಂಸದ ಊಟವನ್ನು ಮಾಡಲಾಗುತ್ತದೆ.

ಪ್ರತಿ ಮನೆಗಳಿಂದ ಮಹಿಳೆಯರು ಕಡಾಯಿ ಯನ್ನು ಅಂದರೆ ಅಕ್ಕಿಯ ಪಾಯಸ ತಯಾರಿಸಿಕೊಂಡು ಪೂಜಾ ಸಾಮಾನುಗಳೊಂದಿಗೆ ಸಾತಿ ಭವಾನಿಯರಿಗೆ ಪೂಜೆಯನ್ನು ಮಾಡಿಸಿಕೊಂಡು ಬರುತ್ತಾರೆ.

ಸೀತಲಾ ಹಬ್ಬದಲ್ಲಿ ಮಕ್ಕಳು ಕಳ್ಳಿಯ ಗಿಡಗಳಿಂದ ಅಥವಾ ಇತರೆ ಗಿಡಗಳಿಂದ ತಲವಾರ್ (ಕತ್ತಿಯನ್ನು) ತಯಾರಿಸಿ ಅದಕ್ಕೆ ಅರಿಶಿನ ಕುಂಕುಮ ಮತ್ತು ಕಪ್ಪು ಮಸಿ ಬಳಿದು ಶೃಂಗರಿಸಿಕೊಂಡು ಸಾತಿ ಭವಾನಿಯರಿಗೆ ಯಾವುದೇ ರೋಗ ರುಜಿನೆಗಳು ಬರದಂತೆ ಬೇಡಿಕೊಂಡು ಕತ್ತಿಯನ್ನು ಅರ್ಪಿಸಲಾಗುತ್ತದೆ. ಇಡೀ ತಾಂಡಾದ ಮಕ್ಕಳು ತಂದಿರುವ ಬಣ್ಣ ಬಣ್ಣದ ಮರದ ಕತ್ತಿಯನ್ನು ದೇವರ ಬಳಿ ಸುಂದರವಾಗಿ ಇಡಲಾಗುತ್ತದೆ.

ಈ ರೀತಿಯಾಗಿ ಪ್ರಕೃತಿಯ ಪೂಜೆಯನ್ನು ಮಾಡುವ ಮೂಲಕ ಸೀತಲಾ ಹಬ್ಬವನ್ನು ಬಂಜಾರ ಸಮುದಾಯದಲ್ಲಿ ತಲತಲಾಂತರದಿಂದ ಮಾಡಿಕೊಂಡು ಬರಲಾಗುತ್ತಿದೆ.
.. ✍️
ಡಾ. ನಾಗೇಂದ್ರ ನಾಯಕ್ ಕೆ.
ಗೋರ್ ಸಿಕವಾಡಿ

ಪರಿಶಿಷ್ಟ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ನಾಯಕ್ಕಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ZOOM ಮೀಟಿಂಗ್ ಅನ್ನು 25.08.2...
24/08/2022

ಪರಿಶಿಷ್ಟ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ನಾಯಕ್ಕಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ZOOM ಮೀಟಿಂಗ್ ಅನ್ನು 25.08.2022 ಆಯೋಜಿಸಲಾಗಿದೆ.

Meeting ID: 853 8921 5278
Pass Code: 806606

#ಗೋರ್_ಬಂಜಾರ_ಜನಜಾಗೃತಿ
#ಸೇವಾವಾಣಿ

16/11/2021
28/10/2021
29/09/2021

ಸದಾಶಿವ ವರದಿಯು ಅವೈಜ್ಞಾನಿಕವಾಗಿದ್ದು ಅದನ್ನು ರಾಜಕಾರಣಿಯವರು ತಮ್ಮ ಹಿತದೃಷ್ಟಿಯಿಂದ A/C ರೂಮದಲ್ಲಿ ಕುಳಿತುಕೊಂಡು ಮಾಡಿರೋ ವರದಿಯಾಗಿದೆ! ಯಾವ ಸಮಾಜದ ಪರಿಸ್ಥಿತಿಯನ್ನು ಅವಲೋಕಿಸಿಸದೆ ಮಾಡಿರು ವರಿದಿಯಾಗಿದೆ. ಕೆಲವು ಬುದ್ಧಿಹೀನ ಕಿಡಿಗೇಡಿಗಳು ನಮ್ಮ ಸಮಾಜದ ಗುರುಗಳಾದ ಸಂತ ಶ್ರೀ ಸೇವಾಲಾಲ್ ಮಹಾರಾಜರನ್ನು ಅವಹೇಳನ ಮಾಡಿದರೆ ನಾವು ಸಮರಕ್ಕೂ ಸಿದ್ಧ! ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ವರದಿಯನ್ನು ಮುಕ್ತಾಯಗೊಳಿಸಬೇಕು ಎಂದು ಬಾಲ ತಪಸ್ವಿ ಶ್ರೀ ಸೋಮಲಿಂಗ ಸ್ವಾಮಿಗಳು (ಶ್ರೀ ಶಂಕರಲಿಂಗ ಗುರುಪೀಠ, ಕೆಸರಟ್ಟಿ) ಬೆಂಗಳೂರಿನಲ್ಲಿ ಮಾಧ್ಯಮ ವರ್ಗದೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡರು!

Address


Website

Alerts

Be the first to know and let us send you an email when Seva Vani - ಸೇವಾ ವಾಣಿ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share