20/08/2020
ಓದಲಿಕ್ಕೆ ಬರುವವರಲ್ಲಿ ಪ್ರಜ್ಞಾವಂತ ಪ್ರಜೆಯಾಗಿ ಶ್ರೇಷ್ಠ ಮನಸ್ಸಿದ್ದು, ಶಾಶ್ವತಸತ್ಯ ಅರಿಯೋ ಮಹಾಬಯಕೆ ಇದ್ದವರು ಮಾತ್ರ ಇದನ್ನೊಮ್ಮೆ ಓದಿ ನೋಡಿ.
ರಾಮಮಂದಿರ ಕಟ್ಟೋದಿಕ್ಕೆ ಧಾರ್ಮಿಕ ಹೋರಾಟದಷ್ಟೆ ರಾಜಕೀಯ ಹೋರಾಟ ಕೂಡ ಆಗಿದೆ, ಜನಸಂಘವನ್ನ ಜನತಾ ಪಕ್ಷದ ಜೊತೆ ವಿಲೀನಗೊಳಿಸಿ ನಂತರ ಅದರಿಂದ ಹೊರಬಂದು ಭಾರತೀಯ ಜನತಾ ಪಕ್ಷ ಅಂತ ಹೆಸರಿಟ್ಟು ಹೊಸದೊಂದು ರಾಜಕೀಯ ಪಕ್ಷ ಸ್ಥಾಪಿಸಿದ ನಂತರ ಅಟಲ್ ಮತ್ತು ಅಡ್ವಾಣಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರಾಮಮಂದಿರ, ತ್ರಿಪಲ್ ತಲಾಖ್, ಯೂನಿಫಾರ್ಮ್ ಸಿವಿಲ್ ಕೋಡ್, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಇವುಗಳನ್ನ ಪ್ರಮುಖ ಅಂಶಗಳನ್ನಾಗಿ ಮಾಡಿಕೊಂಡು ಓಟು ಕೇಳ್ತಿದ್ರು, ಮೋದಿಯ ಮೊದಲ ಅವಧಿಯಲ್ಲೂ ಭಾಜಪ ಇದೇ ಅಂಶಗಳನ್ನ ಇಟ್ಕೊಂಡೇ ಓಟ್ ಕೇಳಿದ್ದು ನಂತರ ಮೋದಿಯ ಎರಡನೇ ಅವಧಿಯಲ್ಲೂ ಇದೇ ಅಂಶಗಳು ಪುನಾರವರ್ತನೆ ಆದ್ವು ಆದರೆ ಮುಂದಿನ ಚುನಾವಣೆಯಲ್ಲಿ ಇವು ಇರೋದಿಲ್ಲ ಬಿಡಿ, ಯಾಕೆ ಅಂತ ನಾನ್ ಹೇಳುವ ಅವಶ್ಯಕತೆ ಇಲ್ಲ...
ಅಟಲ್ ಮತ್ತು ಅಡ್ವಾಣಿ ಕೈಯಿಂದ ಸಾಧ್ಯಾವಾಗದೆ ಇದ್ದ ಕೆಲಸಗಳನ್ನ ಮೋದಿ ಸಾಧಿಸಿದ್ದು ಹೇಗೆ? ರಾಮಮಂದಿರ ಯಶಸ್ಸಿನ ವಿಚಾರದಲ್ಲಿ ಅಟಲ್ ಮತ್ತು ಅಡ್ವಾಣಿ ಪಾತ್ರ ಏನು? ಮಿತ್ರಪಕ್ಷಗಳ ತಿಕ್ಕಲುತನದಿಂದ ಅಟಲ್ ಎರಡು ಬಾರಿ ಅಧಿಕಾರದಿಂದ ಇಳಿಯಬೇಕಾಯ್ತು, 1999 ಚುನಾವಣೆಯಲ್ಲಿ ಕೆಲವು ಎಡಪಕ್ಷಗಳು ಸಹ ಭಾಜಪಗೆ ಬೆಂಬಲ ಕೊಟ್ಟಿದ್ರಿಂದ ಸಹಜವಾಗಿಯೇ ಬಿಜೆಪಿ ರಾಮಮಂದಿರ ತ್ರಿಪಲ್ ತಲಾಖ್ ಮತ್ತು ಕಾಶ್ಮೀರದ ವಿಚಾರದಲ್ಲಿ ಮೌನವಹಿಸಿ ಬಿಡ್ತು, ಅಟಲ್ ಜೀಗೆ ಗೊತ್ತಿತ್ತು ಮತ್ತೆ ಈ ವಿಚಾರವನ್ನ ಎತ್ತಿದ್ರೆ ಎಡಪಕ್ಷಗಳು ಬೆಂಬಲ ವಾಪಸ್ ಪಡೆಯುತ್ತವೆ ಆಮೇಲೆ ಮತ್ತೆ ಅಧಿಕಾರ ಹೋಗುತ್ತೆ ಅಂತ, ಆದರೆ ಅಟಲ್ ಯೋಚಿಸಿದ್ದು ಬೇರೆ ರೀತಿ, ಪಕ್ಷದ ಮೇಲೆ ಜನರಿಗೆ ನಂಬಿಕೆ ಬರುವಂತೆ ಆಡಳಿತ ಕೊಟ್ಟರೆ ಸಹಜವಾಗಿಯೇ ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಕೊಡ್ತಾರೆ ಆಗ ನಾವು ರಾಮಮಂದಿರ ವಿಚಾರ ಸೇರಿದಂತೆ ಕಾಶ್ಮೀರದ ಸ್ಥಾನಮಾನ ಮತ್ತು ತ್ರಿಪಲ್ ತಲಾಖ್ ಇವೆಲ್ಲ ಸಮಸ್ಯೆಗಳನ್ನ ಸುಲಭವಾಗಿ ಬಗೆಹರಿಸಬಹುದು ಅಂತ..
ಅಟಲ್ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದ ಅಭಿವೃದ್ಧಿಗೆ ಅನೇಕ ಕ್ರಾಂತಿಕಾರಿ ಯೋಜನೆಗಳನ್ನ ತಂದರು, 1999-2004 ರವರೆಗೆ ಭಾರತ ಹಿಂತಿರುಗಿ ನೋಡಲಿಲ್ಲ ಅಷ್ಟೊಂದು ವೇಗದಲ್ಲಿ ಬೆಳೆದುಬಿಡ್ತು, ಇನ್ನೇನು ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಸಿಗುತ್ತೆ ರಾಮಮಂದಿರದ ಕನಸು ನನಸಾಗುವ ದಿನ ಹತ್ತಿರದಲ್ಲಿದೆ ಅಂತ ಅಂದುಕೊಂಡು ಸ್ವಲ್ಪ ದಿನದಲ್ಲೇ ಭಾರತೀಯ ಮತದಾರ ಯಾಕೋ ಅಭಿವೃದ್ಧಿಯ ಕಡೆ ಒಲವು ತೋರಿಸದೆ ಅತಂತ್ರ ಸ್ಥಿತಿ ನಿರ್ಮಾಣ ಮಾಡಿಬಿಟ್ಟಿದ್ದ, ಇದೇ ಅವಕಾಶಕ್ಕಾಗಿ ಕಾದಿದ್ದ ಕಾಂಗ್ರೆಸ್ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಹತ್ತು ವರ್ಷ ಅದೆಂಥಾ ಕೆಟ್ಟ ಆಡಳಿತ ಕೊಡ್ತು ಅಂತ ಪ್ರತಿಯೊಬ್ಬರಿಗೂ ಗೊತ್ತಿದೆ, ಆದರೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬಂದ್ರೆ ಅಭಿವೃದ್ಧಿ ಪರ ಇರುತ್ತೆ ಅನ್ನೋದನ್ನ ಕೆಲಸದ ಮುಖಾಂತರ ತೋರಿಸಿ ಪಕ್ಷದ ಮೇಲೆ ಜನರಿಗೆ ನಂಬಿಕೆ ಬರುವಂತೆ ಮಾಡೋದ್ರಲ್ಲಿ ಅಟಲ್ ಮತ್ತು ಅಡ್ವಾಣಿ ಇಬ್ಬರೂ ಯಶಸ್ವಿಯಾಗಿದ್ರು, ಇದೇ ಮುಂದೆ ಮೋದಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಂದುಕೊಂಡಂತೆ ಅವತ್ತು ಮೊದಲ ಯತ್ನದಲ್ಲೇ ಮೋದಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದುಕೊಂಡ್ರು...
ಮೊದಲ ಬಾರಿಗೆ ಪ್ರಧಾನಿ ಆದಾಗ ಲೋಕಸಭೆಯಲ್ಲಿ ಸರಳ ಬಹುಮತ ಇತ್ತಾದರೂ ರಾಜ್ಯಸಭೆಯಲ್ಲಿ ಇರಲಿಲ್ಲ, ಆಗ ಯಾವುದೇ ಹೊಸ ಕಾನೂನು ತಂದರೆ ಅದು ಲೋಕಸಭೆಯಲ್ಲಿ ಎಷ್ಟು ವೇಗವಾಗಿ ಪಾಸ್ ಆಗುತ್ತಿತ್ತೊ ಅಷ್ಟೇ ವೇಗವಾಗಿ ರಾಜ್ಯಸಭೆಯಲ್ಲಿ ಫೇಲ್ ಆಗ್ತಿತ್ತು, ಇದು ಮೋದಿಗೂ ಗೊತ್ತಿತ್ತು ಅದಕ್ಕೆ ಅವರು ಸಹ ಅಟಲ್ ಹಾದಿಯನ್ನೇ ಹಿಡಿದು ಅಭಿವೃದ್ಧಿ ಕಡೆ ಹೆಜ್ಜೆ ಹಾಕಿದ್ರು, ಕೊನೆಗೆ ಒಂದು ಸಣ್ಣ ಭ್ರಷ್ಟಾಚಾರದ ಆರೋಪ ಇಲ್ಲದೆ ಐದು ವರ್ಷ ಅಧಿಕಾರ ಪೂರ್ಣಗೊಳಿಸಿಬಿಟ್ರು, ಮುಂದೆ 2019 ರಲ್ಲಿ ಮತ್ತದೆ ಹಳೇ ಪ್ರಣಾಳಿಕೆಯನ್ನ ಇಟ್ಕೊಂಡ್ ಮತವನ್ನ ಕೇಳಿದ್ರು, ಈ ಬಾರಿ ಜನ ಅಟಲ್ ಜೀಗೆ ಮಾಡಿದ ಮೋಸವನ್ನ ಮೋದಿಗೆ ಮಾಡದೆ ದಾಖಲೆ ಮಟ್ಟದಲ್ಲಿ ಗೆಲ್ಲಿಸಿ ಮೋದಿಯೇ ನಮ್ಮ ಪ್ರಧಾನಿ ಅಂತ ಮತದ ಮುಖಾಂತರ ಹೇಳಿಬಿಟ್ರು, ಅದೆಂಥಾ ದಿಗ್ವಿಜಯ ಮೋದಿಯದ್ದು ಸಾಲದ್ದಕ್ಕೆ ಸ್ವಲ್ಪ ದಿನಗಳ ನಂತರ ರಾಜ್ಯಸಭೆಯಲ್ಲೂ ಬಹುಮತ ಸಿಕ್ಕಿಬಿಡ್ತು, ಆಗಲೇ ನೋಡಿ ಮೋದಿ ಮೋಡಿ ಮಾಡಿದ್ದು, ಇವರಿಗೆ ಜೊತೆಯಾಗಿ ನಿಂತಿದ್ದು ಅಮಿತ್ ಶಾ ಮತ್ತು ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ಧೋವಲ್...
ತ್ರಿಪಲ್ ತಲಾಖ್ ತುಂಬಾ ಸ್ಮೂತಾಗಿ ಕ್ಲಿಯರ್ ಆಯ್ತು, ಇನ್ನು ರಾಮಮಂದಿರ ಕಟ್ಟೋಕೂ ಮುಂಚೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡ್ಬೇಕಿತ್ತು ಯಾಕಂದ್ರೆ ಹಿಂದೂ ಪರ ಯೋಜನೆಗಳು ಬಂದ್ರೆ ಸಹಜವಾಗಿಯೇ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು ಇದರಿಂದ ಪ್ರೇರಿತರಾಗಿ ದೇಶಾದ್ಯಂತ ಗಲಭೆಗಳು ಶುರುವಾಗುತ್ತಿದ್ವು ಪ್ರತಿ ಬಾರಿ ರಾಮಮಂದಿರ ತೀರ್ಪು ಪ್ರಕಟ ಆಗುವಾಗ ಇದೇ ಕಾರಣಕ್ಕೆ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡ್ತಾ ಇದ್ದಿದ್ದು, ಇನ್ನು ಕಾಶ್ಮೀರದ ಆರ್ಟಿಕಲ್ 370 ತೆಗೆದು ಅಲ್ಲಿ ಸೇನೆಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಸಹಜವಾಗಿಯೇ ಅಲ್ಲಿ ಭಯೋತ್ಪಾದನ ದಾಳಿಗಳು ಕಡಿಮೆ ಆಗುತ್ತವೆ ಆಗ ರಾಮಮಂದಿರ ವಿಚಾರವನ್ನ ಎತ್ತಿಕೊಂಡ್ರೆ ಎಲ್ಲಾ ಸಲೀಸಾಗಿ ಆಗುತ್ತೆ ಅಂತ ತೀರ್ಮಾನ ಮಾಡಿದ ಮೋದಿ ಎರಡನೇ ಬಾರಿ ಪ್ರಧಾನಿ ಆದಾಗ ಅಮಿತ್ ಶಾ ಕೈಗೆ ಗೃಹಖಾತೆ ಕೊಟ್ರು ಇನ್ನು ಅಜಿತ್ ಧೋವಲ್ ತಮ್ಮ ಹುದ್ದೆಯಲ್ಲೇ ಮುಂದುವರೆದರು, ಗೃಹ ಇಲಾಖೆ ಕಚೇರಿಗೆ ಹೋದ ಮೊದಲ ದಿನವೇ ಅಮಿತ್ ಶಾ ಟೇಬಲ್ ಮೇಲೆ ತರಿಸಿಕೊಂಡಿದ್ದು ಕಾಶ್ಮೀರದ ಫೈಲ್ಗಳನ್ನ, ಕೆಲವೇ ದಿನಗಳಲ್ಲಿ ಎಪ್ಪತ್ತು ವರ್ಷ ಕಾಡಿದ್ದ ಸಮಸ್ಯೆಯನ್ನ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಲೋಕಸಭಾ ಮತ್ತು ರಾಜ್ಯಸಭೆ ಎರಡು ಕಡೆ ಮಂಡಿಸಿ ಕೊನೆಗೂ ಅದಕ್ಕೆ ಎಳ್ಳು ನೀರು ಬಿಟ್ರು, ಈಗ ರಾಮಮಂದಿರಕ್ಕೆ ಕಂಟಕ ಆಗಿದ್ದ ಬಹುತೇಕ ಸಮಸ್ಯೆಗಳು ನಿವಾರಣೆ ಆಗಿದ್ರಿಂದ ಕಾನೂನಾತ್ಮಕವಾಗಿ ಮಂದಿರದ ಪರ ಹೋರಾಡಲು ಮೋದಿ ಹಗಲಿರುಳು ಶ್ರಮ ವಹಿಸಿ ಕೊನೆಗೆ ನ್ಯಾಯಾಲಯದಲ್ಲಿ ಗೆದ್ದಾಗ ಐನೂರು ವರ್ಷಗಳ ಹೋರಾಟಕ್ಕೆ ಅಂತಿಮ ಗೆರೆ ಎಳೆದು ಬಿಟ್ರು, ಈಗ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು ಆಯ್ತು ಇನ್ನೇನಿದ್ದರೂ ಭವ್ಯವಾದ ಮಂದಿರ ಕಟ್ಟೋದಷ್ಟೆ ಬಾಕಿ...
ಇಷ್ಟೆಲ್ಲಾ ಹೇಳಿದ್ದು ಯಾಕಂದ್ರೆ ರಾಮಮಂದಿರಕ್ಕಾಗಿ ಬಿಜೆಪಿ ಸವೆಸಿದ ಹಾದಿ ಇದ್ಯಲ್ಲ ಅದರಂತ ಕಠಿಣ ಹಾದಿ ಮತ್ತೊಂದಿಲ್ಲ ಇನ್ನು ಮೋದಿ ಶ್ರಮ ಇದ್ಯಲ್ಲ ಬಹುಶಃ ಯಾವ ರಾಜಕಾರಣಿ ಕೂಡ ಇಷ್ಟು ಕಷ್ಟ ಪಡ್ತಿರ್ಲಿಲ್ಲ ಅನ್ಸುತ್ತೆ ಯಾಕಂದ್ರೆ ಅಧಿಕಾರಕ್ಕೆ ಬಂದ ದಿನದಿಂದಲೂ ಮೋದಿ ಟೀಕೆಗಳ ಸುರಿಮಳೆಯನ್ನೇ ಅನುಭವಿಸಿದ್ದಾರೆ, ಸಾಲದ್ದಕ್ಕೆ ಮಿತ್ರಪಕ್ಷ ಶಿವಸೇನೆಯಿಂದ ಕೂಡ, ಆರು ವರ್ಷಗಳಲ್ಲಿ ಆತ ಅನುಭವಿಸಿದ ಯಾತನೆಗಳು ಅದೆಷ್ಟು? ಬೇರೆ ಯಾರೇ ಆಗಿದ್ರು ಸಹವಾಸ ಸಾಕು ಅಂತ ಅಧಿಕಾರದಿಂದ ಇಳಿಯುತ್ತಿದ್ರು ಅನ್ಸುತ್ತೆ ಆದ್ರೆ ಮೋದಿ ಹಾಗೆ ಮಾಡಲಿಲ್ಲ, ಆತನಿಗೆ ತನ್ನ ಗುರಿಯ ಬಗ್ಗೆ ನಂಬಿಕೆ ಇತ್ತು ಅದೇ ಕಾರಣಕ್ಕೆ ಆತ ಎಲ್ಲಾ ಅವಮಾನಗಳನ್ನ ಸಹಿಸಿಕೊಂಡು ಕೊನೆಗೆ ಸಾಧಿಸಿಬಿಟ್ಟ,
ಮೋದಿ ಎಷ್ಟು ಚಾಣಾಕ್ಷತನ ಹೊಂದಿರುವ ರಾಜಕಾರಣಿ ಅಂದ್ರೆ ರಾಮಮಂದಿರ ಎಂಬ ವಿವಾದಾತ್ಮಕ ಸಮಸ್ಯೆಯನ್ನು ಕೂಡ ಎಲ್ಲೂ ಗಲಭೆಗಳು ಆಗದಂತೆ ಮುಗಿಸಿಬಿಟ್ರು ಸಾಲದ್ದಕ್ಕೆ ಮಂದಿರದ ವಿಚಾರದಲ್ಲಿ ಇದ್ದ ಎಲ್ಲಾ ಸಮಸ್ಯೆಗಳನ್ನ ಕಾನೂನಾತ್ಮಕವಾಗಿಯೇ ಬಗೆಹರಿಯುವಂತೆ ಮಾಡಿಬಿಟ್ರು, ಈಗ ಮಂದಿರ ಕಟ್ಟಿದ ಮೇಲೆ ಅದನ್ನ ಯಾರೂ ಮುಟ್ಟುವಂತಿಲ್ಲ ಅಕಸ್ಮಾತ್ ಮುಟ್ಟಲು ಹೋದರೆ ಭಾರತದಲ್ಲಿ ಮತ್ತೊಂದು ರಕ್ತ ಕ್ರಾಂತಿ ಆಗುತ್ತೆ, ಇದೇ ಕಾರಣಕ್ಕೆ ಈಗಾಗಲೇ ಕಾಂಗ್ರೆಸ್ ರಾಮನ ಪರ ಹೇಳಿಕೆ ಕೊಡುತ್ತ ಬೆಳ್ಳಿ ಇಟ್ಟಿಗೆ ಕೊಡೊ ಮುಖಾಂತರ ಸಾಫ್ಟ್ ಹಿಂದುತ್ವದ ಮೊರೆ ಹೋಗಿದೆ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರು ಅಷ್ಟೇ ಕಮ್ಯೂನಿಸ್ಟ್ ಅಧಿಕಾರಕ್ಕೆ ಬಂದ್ರು ಅಷ್ಟೇ ಅಪ್ಪಿತಪ್ಪಿ ಯಾರಾದ್ರೂ ಮಂದಿರದ ಸುದ್ದಿಗೆ ಹೋದರೆ ಹಿಂದೂಗಳ ಕೈಯಲ್ಲಿ ನರಕಕ್ಕೆ ಹೋಗೋದು ಖಂಡಿತ, ಆ ರೀತಿ ಯೋಜನೆ ಮಾಡಿ ಮುಗಿಸಿದ್ದಾರೆ ಮೋದಿ, ಇದೇ ಕಾರಣಕ್ಕೆ ಮೋದಿ ಇಷ್ಟ ಆಗೋದು...
ಬಹುಶಃ ಇವತ್ತು ಮಂದಿರ ಆಗಿರ್ಲಿಲ್ಲ ಅಂದಿದ್ರೆ ಅದು ಇನ್ನೆಷ್ಟು ವರ್ಷಗಳ ಕಾಲ ವಿವಾದಾತ್ಮಕ ಸಮಸ್ಯೆಯಾಗಿ ಉಳಿಯುತ್ತಿತ್ತೊ ಗೊತ್ತಿಲ್ಲ, ಅಮಾವಾಸ್ಯೆಗೆ ಒಂದ್ಸಲ ಹುಣ್ಣಿಮೆಗೆ ಒಂದ್ಸಲ ರಾಮಮಂದಿರದ ನೆನಪು ಮಾಡಿಕೊಂಡು ನಮ್ಮವರೇ ಎಷ್ಟೊ ಜನ ಮೋದಿಗೆ ಬಾಯಿಗೆ ಬಂದಂತೆ ಬೈದಿದ್ದರು, ಇಷ್ಟೆಲ್ಲಾ ಟೀಕೆಗಳನ್ನ ಎದುರಿಸಿ ಮೋದಿ ಕೊನೆಗೂ ಸಾಧಿಸಿದ್ದು ಮಾತ್ರ ನಿಜಕ್ಕೂ ಅದ್ಭುತ, ಇಷ್ಟು ವರ್ಷಗಳ ಕಾಲ ಭಾಜಪ ಯಾವ ಅಂಶಗಳನ್ನ ಇಟ್ಕೊಂಡ್ ಓಟ್ ಕೇಳಿತ್ತೊ ಅವೆಲ್ಲವೂ ಮೋದಿಯ ಎರಡನೇ ಅವಧಿಯಲ್ಲೇ ಮುಗಿದುಹೋಗಲಿವೆ, ಇನ್ನು ಯೂನಿಫಾರ್ಮ್ ಸಿವಿಲ್ ಕೋಡ್ ಒಂದು ಬಾಕಿ ಇದೆ ಈಗಾಗಲೇ ಅಮಿತ್ ಶಾ ಅದಕ್ಕೆ ಎಳ್ಳು ನೀರು ಬಿಡೋ ಪ್ರೋಗ್ರಾಮ್ ರೆಡಿ ಮಾಡ್ಕಂಡ್ ಕಾಯ್ತಿದ್ದಾರೆ, ಕೋವಿಡ್ ಇರೋದ್ರಿಂದ ಸ್ವಲ್ಪ ತಡವಾಗಬಹುದು ಅಷ್ಟೇ, ಮುಂದಿನ ಬಾರಿ ಬಿಜೆಪಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಅಂತ ಮತ ಕೇಳಲಿದೆ, ಆಮೇಲೆ ಅದರ ಚಿತ್ತ ಬರಿ ಅಭಿವೃದ್ಧಿ ಕಡೆ ಅಷ್ಟೇ...
ಕೊನೆಯದಾಗಿ ಮೋದಿಗೆ ಥ್ಯಾಂಕ್ಸ್ ಹೇಳುವ ಸಮಯ, ನೂರಾರು ವರ್ಷಗಳಿಂದ ನಮ್ಮ ಆತ್ಮಾಭಿಮಾನಕ್ಕೆ ಕೊಳ್ಳಿ ಇಟ್ಟಿದ್ದ ಸಮಸ್ಯೆಗೆ ಆರು ವರ್ಷಗಳಲ್ಲಿ ತನ್ನನ್ನ ಹೆಚ್ಚಾಗಿ ತೊಡಗಿಸಿಕೊಂಡು ಮಂದಿರ ನಿರ್ಮಾಣಕ್ಕೆ ಇದ್ದ ಅಡೆ ತಡೆಗಳನ್ನ ನಿವಾರಿಸಿ ಜನರಿಗೆ ತಾನು ಕೊಟ್ಟ ಮಾತನ್ನ ಉಳಿಸಿಕೊಂಡ ಮೋದಿಗೆ ನನ್ನ ಕಡೆಯಿಂದ ಥ್ಯಾಂಕ್ಸ್, ಮೋದಿ ಎಷ್ಟು ಟೀಕೆಗಳನ್ನ ಅನುಭವಿಸಿದ್ದಾರೊ ಆತನ ಅಭಿಮಾನಿಗಳಾದ ನಾವು ಕೂಡ ಅಷ್ಟೇ ಟೀಕೆಗಳನ್ನ ಅನುಭವಿಸಿದ್ದೇವೆ, ಮೋದಿಗೆ ತನ್ನ ಮೇಲೆ ತನ್ನ ಗುರಿಯ ಮೇಲೆ ನಂಬಿಕೆ ಇತ್ತು ನಮಗೆ ಮೋದಿಯ ಮೇಲೆ ನಂಬಿಕೆ ಇತ್ತು, ಕೊನೆಗೆ ನಮ್ಮ ನಂಬಿಕೆ ಗೆದ್ದಿದೆ, ಪ್ರೀತಿ ಅಭಿಮಾನ ಕೊಟ್ಟಿದ್ದಕ್ಕೆ ಮೋದಿ ನಮಗೆ ಮೋಸ ಮಾಡದೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ, ಇವತ್ತು ಮತ್ತೆ ಹೆಮ್ಮೆಯಿಂದ ಹೇಳ್ತಿದಿನಿ ಇಷ್ಟು ದಿನ ಮೋದಿಯನ್ನ ಸಮರ್ಥಿಸಿಕೊಂಡಿದ್ದಕ್ಕೆ ಗರ್ವ ಪಡ್ತೀನಿ...
ಅಂತಹ ಕರ್ಮಯೋಗಿ, ನಿಜ ನಿಸ್ಸೀಮ ಮೋದಿಜಿಗೆ ಶತಕೋಟಿ ಕೋಟಿ ಶರಣಾರ್ಥಿಗಳು...
ಜೈ ಶ್ರೀರಾಮ್🚩 ಜೈ ಹಿಂದ್🇮🇳
ಜೈ ಹೋ ಮೋದೀಜಿ 💪💪💪
NaMo Supporters