Hassan News Express

  • Home
  • Hassan News Express

Hassan News Express Hassan Local News

ಅಕ್ರಮ ಕಸಾಯಿಖಾನೆ ಮುಚ್ಚಿಸಲು ಶ್ರೀರಾಮ ಸೇನೆ ಆಗ್ರಹ*ಗೋಮಾಂಸ ಸಾಗಣೆ ನೀವು ತಡೆಯಿರಿ; ಇಲ್ಲವೇ ನಾವು ತಡೆಯುತ್ತೇವೆಅರಕಲಗೂಡು.ಅ.೨೯.ಅರಕಲಗೂಡು ಸೇ...
29/10/2024

ಅಕ್ರಮ ಕಸಾಯಿಖಾನೆ ಮುಚ್ಚಿಸಲು ಶ್ರೀರಾಮ ಸೇನೆ ಆಗ್ರಹ
*ಗೋಮಾಂಸ ಸಾಗಣೆ ನೀವು ತಡೆಯಿರಿ; ಇಲ್ಲವೇ ನಾವು ತಡೆಯುತ್ತೇವೆ
ಅರಕಲಗೂಡು.ಅ.೨೯.ಅರಕಲಗೂಡು ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಅಕ್ರಮ ಕಸಾಯಿಖಾನೆಗಳನ್ನು ಕಾನೂನು ರೀತಿಯಲ್ಲಿ ಪೊಲೀಸರು ತಡೆಯಬೇಕು.ಇಲ್ಲವಾದರೆ ಸ್ವತ: ನಾವೇ ನಿಂತು ಕಸಾಯಿಖಾನೆಗಳನ್ನು ಮುಚ್ಚಿಸುತ್ತೇವೆ ಹಾಗೂ ಅಕ್ರಮ ಗೋಮಾಂಸ ಸಾಗಣೆಯನ್ನು ತಡೆಯುವುದಾಗಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಹೇಮಂತ್ ಚಳ್ಳಕೆರೆ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಪ್ರತಿದಿನ ೮-೯ ಇನೋವಾ ಕರುಗಳಲ್ಲಿ ಜಿಲ್ಲೆಯ ತಾಲೂಕು ಕೇಂದ್ರಗಳಿAದ ಪ್ರತಿ ರಾತ್ರಿ ಗೋಮಾಂಸ ಸಾಗಾಣಿಕೆ ಆಗುತ್ತಿದೆ.ಇದು ಪೊಲೀಸರಿಗೆ ತಿಳಿಯದ ವಿಷಯವೇನೂ ಅಲ್ಲ.ಆದರೂ ತಮಗೇನೂ ತಿಳಿಯದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಜಿಲ್ಲಾ ವರಿಷ್ಠಾಧಿಕಾರಿಗಳು ಸಿಪಿಐ ಹಾಗೂ ಪಿಎಸ್‌ಐ ಗಳಿಗೆ ಸೂಚಿಸುವಂತೆ ಆಗ್ರಹಿಸಿದ ಅವರು ಹಾಸನ ಜಿಲ್ಲೆಯಲ್ಲಿ ಪ್ರತಿದಿನ ನೂರಾರು ಜಾನುವಾರುಗಳು ಸಾಗಣೆಯಾಗುತ್ತಿವೆ.ಪೊಲೀಸರು ಕಾನೂನು ಉಲ್ಲಂಘಿಸಿ ಅಕ್ರಮ ಮಾಡಿದವರನ್ನು ಬಂಧಿಸುವ ಬದಲು ಅಕ್ರಮ ಮಾಡಿದವರನ್ನು ಹಿಡಿದುಕೊಟ್ಟರೆ ಅವರ ವಿರುದ್ದವೇ ಕೇಸು ದಾಖಲಿಸುತ್ತಾರೆ.ಇದು ಈ ಜಿಲ್ಲೆಯ ಪರಿಸ್ಥಿತಿಯಾಗಿದೆ ಎಂದು ದೂರಿದರು.
ಅಕ್ರಮ ವಲಸಿಗರು: ಬಾಂಗ್ಲಾ ದೇಶವೂ ಸೇರಿದಂತೆ ಅನ್ಯ ದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದವರಲ್ಲಿ ಜಿಲ್ಲೆಯಲ್ಲೇ ಸುಮಾರು ೧ ಲಕ್ಷದ ೭೩ ಸಾವಿರ ಜನರಿದ್ದಾರೆ.ಅವರನ್ನು ಪತ್ತೆ ಮಾಡಿ ಅವರನ್ನು ದೇಶದಿಂದ ಹೊರಕ್ಕೆ ಕಳುಹಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಶ್ರೀರಾಮಸೇನಾ ಸಮಿತಿಯ ಅಧ್ಯಕ್ಷ ಅಮಿತ್,ಜಿಲ್ಲಾ ಮುಖಂಡರುಗಳಾದ ಮಹೇಶ್ ಕುಮಾರ್,ಕೆ.ಕೆ.ಸುಮಿತ್,ಅರುಣ್,ಪ್ರದೀಪ್,ಮನು ಇತರರು ಇದ್ದರು.

24/10/2024

*ಅಹಲ್ಯಾಬಾಯಿ ಹೋಳ್ಕರ್ ತ್ರಿಶಾಬ್ದಿ ಜಯಂತಿ*
*ಅಕ್ಟೋಬರ್ 25ರಂದು (ನಾಳೆ)ಕಾರ್ಯಕ್ರಮ*
ಅರಕಲಗೂಡು.ಅ.24.ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ತ್ರಿ ಶತಾಬ್ದಿ ಜಯಂತಿ ಯ ಅಂಗವಾಗಿ ತಾಲೂಕು ಮಟ್ಟದ ಪ್ರಶಿಕ್ಷಣ ವರ್ಗವನ್ನು ಇದೇ ಅಕ್ಟೋಬರ್‌25ರಂದು ಸಂಜೆ 4.30ರಿಂದ7ಗಂಟೆಯವರೆಗೆ ಇಲ್ಲಿನ ಕೋಟೆಯಲ್ಲಿರುವ ಶ್ರೀ ವಿದ್ಯಾ ಗುರುಭವನದಲ್ಲಿ ನಡೆಸಲಾಗುವುದು ಎಂದು ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಮತಿ ರಶ್ಮಿ ಪ್ರವೀಣ್ ತಿಳಿಸಿದ್ದಾರೆ.
ಇವರು ಭಾರತದ ಅನೇಕ ದೇವಾಲಯಗಳ ಪುನಶ್ಚೇತನ ಗೊಳಿಸಿದ ಸನಾತನ ಹಿಂದೂ ಧರ್ಮರಕ್ಷಕಿಯಾಗಿದ್ದರು ಎಂದು ತಿಳಿಸಿದ್ದಾರೆ. ತಾಊಕಿನ ಎಲ್ಲ ಮಾತೆಯರು,,ಭಗಿನಿಯರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

13/10/2024
13/10/2024
ಮರೆಯಾದ ವರುಣನ ಆತಂಕ;ಸಂಪನ್ನಗೊಂಡ ಅರಕಲಗೂಡು ದಸರಾ *ಮೇಳೈಸಿದ ದೀಪಾಲಂಕಾರ,ಜನಾಕರ್ಷಿಸಿದ ಕಲಾತಂಡಗಳು,ವಿಜಯೋತ್ಸವಕ್ಕೆ ಸಾಲುಗಟ್ಟಿ ಬಂದ ದೇವರ ಉತ್...
13/10/2024

ಮರೆಯಾದ ವರುಣನ ಆತಂಕ;ಸಂಪನ್ನಗೊಂಡ ಅರಕಲಗೂಡು ದಸರಾ
*ಮೇಳೈಸಿದ ದೀಪಾಲಂಕಾರ,ಜನಾಕರ್ಷಿಸಿದ ಕಲಾತಂಡಗಳು,ವಿಜಯೋತ್ಸವಕ್ಕೆ ಸಾಲುಗಟ್ಟಿ ಬಂದ ದೇವರ ಉತ್ಸವ,ಜನೋತ್ಸಾಹಕ್ಕೆ ಬೂಸ್ಟ್ ಕೊಟ್ಟ ಡಿಜೆ,ಆರ್ಕೆಷ್ಟಾ
ಅ.ರಾ.ಸುಬ್ಬರಾವ್.
ಕಳೆದ 9 ದಿನಗಳ ಕಾಲ ನಡೆದ ನವರಾತ್ರಿ ಉತ್ಸವದ ನಂತರ ವಿಜಯದಶಮಿಯಂದು ಅರಕಲಗೂಡು ದಸರಾ ಮಹೋತ್ಸವ ನಡುರಾತ್ರಿ ಸಂಪನ್ನಗೊಂಡಿತು.
ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು,ಮಧ್ಯಾಹ್ನದ ವೇಳೆಗೆ ಅಬ್ಬರದ ಮಳೆಯೂ ಆಗಿ ಧರೆಯನ್ನು ತಂಪೆರಗಿಸಿತು.ಸAಜೆಯವೇಳೆಗೆ ನಿರ್ಮಲಗೊಂಡ ಆಕಾಶ ಅರಕಲಗೂಡು ದಸರಾ ಮೆರವಣಿಗೆಯ ಬಗ್ಗೆ ಇದ್ದ ಆತಂಕವನ್ನು ದೂರಮಾಡಿತ್ತು.
ದೊಡ್ಡಮ್ಮದೇವಿ ವೃತ್ತದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಖ್ಯಾತ ಗಾಯಕರುಗಳಾದ ಕಂಬದ ರಂಗಯ್ಯ,ಕೋಲಾರ ಉಮಾ ಹಾಗೂ ಇನ್ನಿತರ ಗಾಯಕರ ತಂಡ ಭಕ್ತಿಗೀತೆ,ಜನಪದ ಗೀತೆ,ಚಿತ್ರಗೀತೆಗಳನ್ನು ಹಾಡಿ ಮಧ್ಯಾಹ್ನದಿಂದಲೇ ದಸರಾ ಉತ್ಸವಕ್ಕೆ ಗ್ರಾಮೀಣ ಭಾಗಗಳಿಂದ ಹರಿದು ಬರುತ್ತಿದ್ದ ಜನರನ್ನು ಆಕರ್ಷಿಸಿದರೆ,ಇದೇ ವೇಳೆ ಜಿಲ್ಲಾಧಿಕಾರಿ ಜಾನಕಿ ಅವರನ್ನು ಶಾಸಕ ಎ.ಮಂಜು ಅವರು ಅರಕಲಗೂಡು ದಸರಾ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.
ಸಂಜೆ ವೇಳೆಗೆ ಇಲ್ಲಿನ ದೊಡ್ಡಮ್ಮ ದೇವಿ ವೃತ್ತದ ಬಳಿ ವಿವಿದೆಡೆಗಳಿಂದ ಬಂದಿದ್ದ ವಿವಿಧ ವಾದ್ಯತಂಡಗಳು,ಡೊಳ್ಳುಕುಣಿತ,ನಂದಿಧ್ವಜ,ಗೊಂಬೆ ಕುಣಿತ ಹೀಗೆ ಹಲವು ಕಲಾ ತಂಡಗಳು ತಮ್ಮ ಪ್ರದರ್ಶನಗಳನ್ನು ನೀಡಲಾರಂಭಿಸಿದುವು.ಜನರೂ ಕೂಡ ಸಾಗರೋಪಾದಿಯಲ್ಲಿ ಬಂದು ಸೇರಲಾರಂಭಿಸಿ ಕಲಾಪ್ರದರ್ಶನ,ಗಾಯನ ಮನರಂಜನೆಗಳಿಂದ ಪುಲಕಿತರಾಗಿ ಸಂಭ್ರಮಿಸುತ್ತಿದ್ದ ಸಮಯದಲ್ಲೇ ಬೆಳಕು ಸರಿದ ಮುಸ್ಸಂಜೆಯಾಗಿತ್ತು,ದೀಪಾಲಂಕಾರದಿಂದ ಸಿಂಗಾರಗೊಂಡಿದ್ದ ಪಟ್ಟಣ ಮದುಮಗಳಂತೆ ಕಂಗೊಳಿಸುತ್ತಿತ್ತು.ಇದೇ ವೇಳೆಗೆ ಪಟ್ಟಣವೂ ಸೇರಿದಂತೆ ವಿವಿಧ ದೇವಾಲಯಗಳಿಂದ ದೀಪಾಲಂಕಾರಗಳೊAದಿಗೆ ಬಂದಿದ್ದ ಉತ್ಸವಮೂರ್ತಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ತಂದಿದ್ದ ಸ್ಥಬ್ದ ಚಿತ್ರಗಳು ಜನಮನಸೆಳೆದುವು.
ಪಟ್ಟಣದ ಐತಿಹಾಸಿಕ ಹಾಗೂ ಪುರಾತನವಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿದ ಮಠಾಧೀಶರುಗಳು,ಪತ್ನಿ ತಾರಾ.ಎ.ಮಂಜು ಸಹಿತವಾಗಿ ಆಗಮಿಸಿದ ಶಾಸಕ ಎ.ಮಂಜು, ಜೆಡಿಎಸ್ ಮುಖಂಡ ಸತೀಶ್.ಕೆ,ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಮುತ್ತಿಗೆ ರಾಜೇಗೌಡ ಇನ್ನಿತರ ಮುಖಂಡರು,ತಹಸೀಲ್ದಾರ್ ಕೆ.ಸಿ.ಸೌಮ್ಯ ಸೇರಿದಂತೆ ಹಲವು ಅಧಿಕಾರಿಗಳು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ನಂತರ ಇಲ್ಲಿನ ಅಮೃತೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಶ್ರೀ ಅಮೃತೇಶ್ವರ ಸ್ವಾಮಿ ಹಾಗೂ ಶ್ರೀಪಾರ್ವತೀ ದೇವಿಯವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಈ ವೇಳೆ ದೇವಾಲಯ ಸಮಿತಿಯ ಹಿರಿಯರಾದ ಶ್ರೀ ಎ.ಎನ್.ಗಣೆಶಮೂರ್ತಿ,ಎ.ಎಸ್.ರಾಮಕೃಷ್ಣಯ್ಯ,ಕೆ.ಎಸ್.ವೆಂಕಟೇಶಮೂರ್ತಿ,
ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ಇತರರು ಮಠಾಧೀಶರು,ಶಾಸಕರು ಹಾಗೂ ಇತರೆ ಗಣ್ಯರನ್ನು ಸ್ವಾಗತಿಸಿ ಗೌರವ ಸಲ್ಲಿಸಿದರು.ವೇ.ಬ್ರ.ಶ್ರೀ ನರಸಿಂಹಮೂರ್ತಿಯವರು ಮಂತ್ರಪುಷ್ಪದೊಂದಿಗೆ ಆಶೀರ್ವದಿಸಿದರು.
ನಂತರ ಗ್ರಾಮದೇವತೆ ದೊಡ್ಡಮ್ಮದೇವಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭಗೊಂಡು ಪಟ್ಟಣದ ಪ್ರಮುಖಬೀದಿಗಳ ಮೂಲಕ ಬನ್ನಿಮಂಟಪದತ್ತ ಸಾಗಿದುವು.ಯುವಕರ ದೊಡ್ಡ ದಂಡು ಡಿಜೆಯ ವಾಹನದ ಹಿಂದೆ ಕುಣಿದು ಕುಪ್ಪಳಿಸುತ್ತಾ ಸಾಗಿತ್ತು.
ಶಮೀ ವೃಕ್ಷಕ್ಕೆ ಪೂಜೆ: ಬನ್ನಿಮಂಟಪಕ್ಕೆ ದೇವರ ಉತ್ಸವಗಳು ಬಂದ ನಂತರ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು.ಈ ವೇಳೆ ಮಠಾಧೀಶರುಗಳಾದ ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ,ಅರೆಮಾದನಹಳ್ಳಿಯ ವಿಶ್ವಕರ್ಮ ಶ್ರೀಮನ್ಮೂಲಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ,ದಸರಾ ಸಮಿತಿ ಅಧ್ಯಕ್ಷರೂ ಆದ ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ,ಕೆಸವತ್ತೂರು ಶ್ರೀ ಸಿದ್ಧೇಶ್ವರ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ,ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ,ಶಿರಧನಹಳ್ಳಿ ಮಠದ ಸದಾಶಿವ ಸ್ವಾಮೀಜಿ,ಶಾಸಕ ಎ.ಮಂಜು,ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್,ಉಪಾಧ್ಯಕ್ಷ ಸುಭಾನ್ ಷರೀಫ್,ಸದಸ್ಯರುಗಳಾದ ಅನಿಕೇತನ್,ಶ್ರೀಮತಿ ಲಕ್ಷ್ಮೀ ಸೇರಿದಂತೆ ಹಲವು ಗಣ್ಯರು ಸಾಕ್ಷೀಕರಿಸಿದರು.
ಕದಳೀ ಛೇದನ: ಕಂದಾಯ ಇಲಾಖೆಯ ಉಪತಹಸೀಲ್ದಾರ್ ಮಲ್ಲಿಕಾರ್ಜುನ್ ಅವರು ಕದಳೀ ಛೇದನವನ್ನು ನೆರವೇರಿಸಿದರು.ಕದಳೀ ಛೇದನದ ಕ್ಷಣವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಸಾವಿರಾರು ಮಂದಿ ಆ ಶುಭ ಶಕುನವನ್ನು ಕಣ್ತುಂಬಿಕೊಂಡು ಜಯಘೋಷದೊಂದಿಗೆ ಸಂಭ್ರಮಿಸಿದರು.

10/10/2024

ಬೆಳಕು ಹರಿಯುವ ಮುನ್ನವೇ ನಡೆಯುವ ಕೋಟಿಗೂ ಮೀರಿದ ವ್ಯವಹಾರ
*ಸೇವಂತಿಗೆ,ಚೆಂಡು ಹೂವಿಗೆ ಬಾರೀ ಬೇಡಿಕೆ * ಹೂ ಬೆಳೆದವ ಬಡವಾಗಲಿಲ್ಲ
ಅ.ರಾ.ಸುಬ್ಬರಾವ್
ಸಾಲುಸಾಲು ಹಬ್ಬಗಳು ಬಂತೆಂದರೆ ಹೂವಿಗೆ ಬಾರೀ ಬೇಡಿಕೆ.ಈ ಬಾರಿಯೂ ಹೂವಿಗೆ ಬಾರೀ ಬೆಲೆ ಬಂದಿದೆ.ಬೆಂಗಳೂರು,ಮೈಸೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಹೂವಿನ ಬೆಲೆ ಹೆಚ್ಚು ಎನ್ನುತ್ತಿದ್ದ ಸಮಯ ಮುಗಿದಿದೆ.ಈಗ ಚಿಕ್ಕ ಚಿಕ್ಕ ಪಟ್ಟಣಗಳಲ್ಲೂ ಹೂವಿನ ಬೆಲೆ ಗಗನಕ್ಕೇರಿದೆ.
ಅರಕಲಗೂಡು ಸುತ್ತಮುತ್ತಲಿನಲ್ಲಿ ಹೂವಿನ ಬೆಳೆ ಬೆಳೆಯುವವರ ಸಂಖ್ಯೆ ಅಧಿಕವಾಗಿದೆ.ಹೂವಿನ ವ್ಯಾಪಾರದಲ್ಲೂ ಹಲವು ವಿಧಾನಗಳಿವೆ.ಪ್ರಸ್ತುತ ಹೂವಿನ ನಿಜವಾದ ವ್ಯವಹಾರ ನಡೆಯುವುದು ನಡುರಾತ್ರಿಯಲ್ಲೇ.ಕತ್ತಲು ಬೆಳಗಾಗುವುದರಲ್ಲಿ ಹೂ ಬೆಳೆದ ರೈತರು ತಾವು ಬೆಳೆದ ಹೂವುಗಳನ್ನು ಮಾರಾಟ ಮಾಡಿ ತಮ್ಮ ಮನೆ ಸೇರಿ ಬಿಡುತ್ತಾರೆ.ಈ ವೇಳೆ ನಡೆಯುವುದು ಹೋಲ್ ಸೇಲ್ ವ್ಯಾಪಾರ.ರೈತರು ರಿಟೈಲ್ ವ್ಯಾಪಾರಿಗಳಿಗೆ ಮಾರಾಟ ಮಾಡಿಕೊಳ್ಳುತ್ತಾರೆ.
ಹಬ್ಬ ಹರಿದಿನಗಳಿಲ್ಲದ ದಿನಗಳಲ್ಲಿ ಈ ಹೂವುಗಳನ್ನು ರೈತರಿಂದ ಖರೀದಿಸಿ ಅಕ್ಕಪಕ್ಕದ ಜಿಲ್ಲೆಗಳಿಗೆ ಕಳುಹಿಸಿಕೊಡಲು ಮದ್ಯವರ್ತಿಗಳಿರುತ್ತಾರೆ.ಅವರ ಬೇಡಿಕೆ ಕೇಳಿಕೊಂಡು ಕಳುಹುಸಿಕೊಡುತ್ತಾರೆ.ಹಬ್ಬ ಹರಿದಿನಗಳಲ್ಲಿ ಹಾಗಲ್ಲ,ಅಕ್ಕಪಕ್ಕದ ಜಿಲ್ಲೆಗಳಾದ ಕೊಡಗು,ಚಿಕ್ಕಮಗಳೂರು,ಮಂಗಳೂರು ಜಿಲ್ಲೆಗಳಿಂದ ಅಲ್ಲಿನ ವ್ಯಾಪಾರಿಗಳೇ ಬಂದು ನೇರ ರೈತರಿಂದ ಖರೀದಿಸಿ ತಮ್ಮ ವಾಹನಗಳಲ್ಲೇ ತೆಗೆದುಕೊಂಡು ಹೋಗುವ ಪರಿಪಾಟವಿದೆ.ಓಣಂ ವೇಳೆ ಇಲ್ಲಿನ ಹೂವಿನ ವ್ಯಾಪಾರಿಗಳು ಕೇರಳಕ್ಕೆ ಹೋಗಿ ವ್ಯಾಪಾರ ಮಾಡಿಬರುತ್ತಾರೆ.
ರಾಜ್ಯಾದ್ಯಂತ ಇಲ್ಲಿನ ಹೂವಿನ ವ್ಯಾಪಾರಿಗಳು ಸಂಪರ್ಕ ಹೊಂದಿದ್ದು,ಚಿತ್ರದುರ್ಗ,ಹೊಸಪೇಟೆ,ಮAಗಳೂರು, ಹೀಗೆ ಹಲವು ಭಾಗಗಳಿಗೆ ಹೂವುಗಳನ್ನು ಕಳುಹಿಸುವ ಪರಿಪಾಠ ಹೊಂದಿದ್ದಾರೆ.
ಬೆಳಕು ಮೂಡುವ ಮುಂಚಿನ ವ್ಯವಹಾರ: ಗಣಪತಿ ಹಬ್ಬದಿಂದ ದೀಪಾವಳಿ ಹಬ್ಬದವರೆಗೆ ಸೇವಂತಿಗೆ ಹೂವಿನ ವ್ಯಾಪಾರ ಇಲ್ಲಿನ ಪ್ರಮುಖ ವ್ಯಾಪಾರ ಹಿಂದಿನಿಂದಲೂ ನಡೆದುಬಂದಿತ್ತಾದರೂ ಇತ್ತೀಚಿನ ವರ್ಷಗಳಲ್ಲಿ ಚೆಂಡು ಹೂವು ವ್ಯಾಪಾರವೂ ಪ್ರಮುಖ ಪಾತ್ರ ವಹಿಸುತ್ತಿದೆ.ಎಕರೆಗಟ್ಟಲೆ ಚೆಂಡು ಹೂವು ಬೆಳೆಯುತ್ತಿದ್ದಾರೆ.ಪ್ರತಿ ಕೆಜಿ ಚೆಂಡು ಹೂವಿಗೆ ೬೦ ರೂಗಳು ಸ್ಥಳದಲ್ಲೇ ಖರೀದಿಸುತ್ತಿದ್ದಾರೆ.ಇದರಿಂದ ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಂತಾಗುತ್ತಿದೆ.ಇನ್ನು ಆ ಹೂವನ್ನು ಮಾಲೆ ಮಾಡಿ ರಾತ್ರಿ ಮಾರುಕಟ್ಟೆಗೆ ಬರುವ ವೇಳೆಗೆ ಕನಿಷ್ಠ ೨೫೦ರಿಂದ ೩೦೦ ರೂಗಳಿಗೆ ಒಂದು ಕುಚ್ಚು ಮಾರಾಟಕ್ಕೆ ದೊರಕುತ್ತದೆ.ಅಂದರೆ ೫ ಮಾರಿಗೆ ಒಂದು ಕುಚ್ಚು. ಇದೇ ಹೂವಿನ ಒಂದು ಕುಚ್ಚು ಬೆಳಕು ಹರಿದರೆ ೪೫೦ ರಿಂದ ೫೦೦ ರೂಗಳಿಗೆ (ಕುಳಿತು ಮಾರುವವರು) ಮಾರಾಟವಾಗುತ್ತಿದೆ.
ಅದೇ ರೀತಿ ಈ ಬಾರಿಯ ನವರಾತ್ರಿ ವೇಳೆಗೆ ಹೋಲ್ ಸೇಲ್ ದರವೇ ಒಂದು ಮಾರಿಗೆ ೧೨೦-೧೩೦ ರೂಗೆ ಮಾರಾಟವಾಗಿದೆ.ಅಂದರೆ ಹೂಬೆಳೆ ಬೆಳೆದ ರೈತ ಸಮಾಧಾನಗೊಂಡಿದ್ದಾನೆ ಎಂದರೆ ತಪ್ಪಿಲ್ಲ.
ಮಧ್ಯವರ್ತಿಗೂ ಅಧಿಕ ಲಾಭ: ಬೆಳೆ ಬೆಳೆದ ರೈತರು ಕೂತು ಮಾರುವವರ ಸಂಖ್ಯೆ ವಿರಳ.ಆದ್ದರಿಂದ ರೈತ ಮತ್ತು ರೀಟೇಲ್ ವ್ಯವಹಾರ ಮಾಡುವವರ ನಡುವೆ ಮಧ್ಯವರ್ತಿಗಳ ಕೈ ಬದಲಾಯಿಸುವವರು ಇಲ್ಲಿಯೂ ಇದ್ದಾರೆ.ಶ್ರಮವೇ ಇಲ್ಲದೇ ಕೈ ಬದಲಾಯಿಸಿ ಪ್ರತಿ ಮಾರಿಗೆ ೧೦ರಿಂದ ೨೦ ರೂಗಳ ಲಾಭ ಪಡೆಯುತ್ತಿದ್ದಾರೆ. ರೀ ಟೇಲ್ ದರ ೧೫೦ರಿಂದ ೧೮೦ರವರೆಗೂ ಮಾರಾಟಗೊಂಡಿದೆ.ಇಲ್ಲಿ ಬೆಳೆದ ರೈತನಿಗೆ ಸಮಾಧಾನ ದೊರೆತಂತಾದರೂ,ಮಧ್ಯವರ್ತಿ ಮಾರಾಟಗಾರನಿಗೆ ಅಂದರೆ ಕೈ ಬದಲಾಯಿಸಿದವನಿಗೇ ಅಧಿಕ ಲಾಭವಾದಂತಾಗಿದೆ.
ವ್ಯಾಪಾರA ದ್ರೋಹ ಚಿಂತನA: ಇಲ್ಲಿ ರೈತ ವರ್ಗದವರಿಂದ ಖರೀದಿಸುವ ಹೂವಿನ ಲಾಟುಗಳ ನಡುವೆ ಕಳಪೆ ಗುಣಮಟ್ಟದ ಹೂವುಗಳನ್ನು ಸೇರಿಸಿ ಮಾರಾಟ ಮಾಡುವುದರ ಮೂಲಕ ಮೋಸ ಹೋಗುತ್ತೇವೆ ಎಂದು ದೂರುಗಳನ್ನು ಸಗಟು ವ್ಯಾಪಾರಿಗಳು ದೂರಿದರೆ.ಇತ್ತ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಮೀಟರ್ ಇಲ್ಲವೇ ಮಾರು ಹಾಕುವುದರಲ್ಲಿ ಅಧಿಕ ಲಾಭ ಪಡೆಯುತ್ತಾರೆ ಎಂದು ದೂರುತ್ತಾರೆ.
ಅದೇನೇ ಇರಲಿ,ಇಂದು ಹೂವಿನ ವ್ಯಾಪಾರ ಒಂದು ದೊಡ್ಡ ವಹಿವಾಟು ಹೊಂದಿದೆ ಎಂದರೆ ತಪ್ಪಿಲ್ಲ. ನವರಾತ್ರಿಯ ಕೊನೆಯ ದಿನದ ಮುನ್ನಾದಿನ ಅಂದರೆ ಗುರುವಾರದ ಬೆಳಕು ಮೂಡುವ ವೇಳೆಗೆ ಅರಕಲಗೂಡಿನ ಹೂ ಮಾರಾಟ ಸಂತೆಯಲ್ಲಿ ಸುಮಾರು ಅರ್ಧಕೋಟಿಗೂ ಅಧಿಕ ವ್ಯವಹಾರ ನಡೆದಿತ್ತು ಎಂದರೆ ಅತಿಶಯೋಕ್ತಿಯೇನೂ ಅಲ್ಲ.

*ದಸರಾ ಉತ್ಸವ ಸೌಹಾರ್ಧತೆಯ ಸಂಕೇತ:ಶಾಸಕ ಎ.ಮಂಜು**ನೌಕರರ ದಸರಾ ನಿರ್ಲಕ್ಷಿಸಿದ ನೌಕರ ವರ್ಗ!*ಅರಕಲಗೂಡು: ಇಲ್ಲಿನ  18 ಕೋಮಿನ ಜನರು ಒಟ್ಟಾಗಿ ಆಚರ...
06/10/2024

*ದಸರಾ ಉತ್ಸವ ಸೌಹಾರ್ಧತೆಯ ಸಂಕೇತ:ಶಾಸಕ ಎ.ಮಂಜು*

*ನೌಕರರ ದಸರಾ ನಿರ್ಲಕ್ಷಿಸಿದ ನೌಕರ ವರ್ಗ!*
ಅರಕಲಗೂಡು: ಇಲ್ಲಿನ 18 ಕೋಮಿನ ಜನರು ಒಟ್ಟಾಗಿ ಆಚರಿಸುತ್ತಿರುವ ದಸರಾ ಉತ್ಸವ
ಸೌಹಾರ್ದತೆಯ ಸಂಕೇತವಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಕೊತ್ತಲು ಗಣಪತಿ ಉದ್ಯಾನದಲ್ಲಿ ಶನಿವಾರ ನಡೆದ ನೌಕರರ ದಸರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ಉತ್ಸವದ 7 ದಿನಗಳು ವಿವಿಧ ಇಲಾಖೆಗಳ ಮೂಲಕ ವಿವಿಧ ದಸರಾವನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದೆ. ನೌಕರರಿಗಾಗಿಯೆ ದಸರಾ ಆಯೋಜಿಸಿದ್ದರೂ ಸರ್ಕಾರಿ ನೌಕರರು ಪಾಲ್ಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿ ಈ ಕುರಿತು ನೌಕರರ ಸಂಘ ಎಚ್ಚರ ವಹಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಮೇಲೆ ಹೆಚ್ಚುತ್ತಿರುವ ಒತ್ತಡ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಸರ್ಕಾರಿ ನೌಕರರ ನೇಮಕಾತಿಯಾಗಿಲ್ಲ. ಇರುವ ನೌಕರರು ಎಲ್ಲ ಕೆಲಸಗಳನ್ನು ನಿಭಾಯಿಸ ಬೇಕಿರುವ ಕಾರಣ ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ.ಶಿವಶಂಕರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಸಮಾಜ ಸೇವಕ ಗಾಂದಿನಗರ ದಿವಾಕರ್, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಎಸ್. ವೈ. ರವಿಕುಮಾರ್ ಮಾತನಾಡಿದರು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಹಶೀಲ್ದಾರ್ ಕೆ.ಸಿ. ಸೌಮ್ಯ, ಪಪಂ ಉಪಾಧ್ಯಕ್ಷ ಸುಬಾನ್ ಷರೀಪ್, ಸದಸ್ಯ ನಿಖಿಲ್ ಕುಮಾರ್, ದಸರಾ ಸಮಿತಿ ಸದಸ್ಯರಾದ ಕಿಶೋರ್, ಗೋಪಾಲ್,ಮುತಾಹಿರ್ ಪಾಶ, ವಲಯ ಅರಣ್ಯಾಧಿಕಾರಿಗಳಾದ ಯಶ್ಮ ಮಾಚಮ್ಮ, ಶಿವಾನಂದ್, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎಸ್. ಕೆ. ತಾರಾನಾಥ್, ಉಪಾಧ್ಯಕ್ಷ ಜಿ.ಎಚ್. ಪ್ರಕಾಶ್, ಕಾರ್ಯದರ್ಶಿ ಚಂದ್ರೇಗೌಡ, ರಾಜ್ಯ ಪರಿಷತ್ ಸದಸ್ಯ ಭರತೇಶ್, ಮಾಜಿ ಅಧ್ಯಕ್ಷ ಬಿ.ಎನ್. ಮಹೇಶ್ ಉಪಸ್ಥಿತರಿದ್ದರು.

*ಶತಮಾನದ ಸ್ಮರಣೆಯ ಪಾದಯಾತ್ರೆ*ಅರಕಲಗೂಡು.ಅ.2.ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಗಾಂಧೀಜಿಯವರ ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ...
03/10/2024

*ಶತಮಾನದ ಸ್ಮರಣೆಯ ಪಾದಯಾತ್ರೆ*
ಅರಕಲಗೂಡು.ಅ.2.
ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಗಾಂಧೀಜಿಯವರ ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಬನ್ನಿಮಂಟಪ ದಿಂದ ಅನಕೃ ವೃತ್ತದವರಗೆ ಹಮ್ಮಿಕೊಂಡಿದ್ದ "ಗಾಂಧಿ ನಡಿಗೆ" ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸರ್ಕಾರದ ಐದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ *ಶ್ರೀ ಹೆಚ್ ಪಿ ಶ್ರೀಧರ್ ಗೌಡ* ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ
*ಟಿ ಎಂ ಶಾಹಿದ್ ಟೆಕ್ಕಿಲ್* ಅವರು ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ಶ್ರೀಧರಗೌಡ ಅವರು ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ, ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ. ಮಹಾತ್ಮ ಗಾಂಧೀಜಿ ಅವರು "ನನ್ನ ಬದುಕೇ ನನ್ನ ಸಂದೇಶ" ಎಂದು ಸರಳವಾಗಿ ಹೇಳಿದರು. ಸತ್ಯ, ಶಾಂತಿ, ಅಹಿಂಸೆ ಇವು ಅವರು ಬೋಧಿಸಿದ 3 ತತ್ವಗಳು. ಬದುಕಿನಲ್ಲಿ ಇವನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಸನ್ಮಾರ್ಗದ ಮೂಲಕ ನಾವು ಗುರಿ ತಲುಪಬಹುದು ಎಂದರು.

ಇಂದು ನೂರಾರು ಕಾರ್ಯಕರ್ತರು, ನಾಯಕರು ಹೆಜ್ಜೆ ಹಾಕುವ ಮೂಲಕ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾತ್ಮಾ ಗಾಂಧೀಜಿ ಅವರಿಗೆ ಗೌರವ ಸಮರ್ಪಿಸಿದ್ದೇವೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ ಟಿ ಕೃಷ್ಣೆಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್,ಮಾತನಾಡಿದರು. ಪ ಪಂ ಅಧ್ಯಕ್ಷ ಪ್ರದೀಪ್ ಕುಮಾರ್,ಪ ಪಂ ಉಪಾಧ್ಯಕ್ಷರಾದ ಸುಭಾನ್ ಷರೀಫ್,ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷರು ಹಾಗೂ ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಎಸ್ ಎಲ್ ಗಣಪತಿ , ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಪುಟ್ಟಯ್ಯ ರವರು,ಅರಕಲಗೂಡು ನಗರಾಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷರಾದ ಗುರುಮೂರ್ತಿ,NSUI ತಾಲ್ಲೂಕು ಅಧ್ಯಕ್ಷರಾದ ಶ್ರೀಕಾಂತ್,ಜಿಲ್ಲಾ INTUC ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ್ ,ಅರಕಲಗೂಡು ಟೌನ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹಾಗೂ ಆಶ್ರಯ ಸಮಿತಿ ಸದಸ್ಯ ಮುಸಾವೀರ್ ,ಆಶ್ರಯ ಸಮಿತಿ ಸದಸ್ಯ ವಿಜಿಕುಮಾರ್,ಮಹಿಳಾ ಘಟಕದ ತಾಲ್ಲೂಕು ಅಧ್ಯಕಸದಸ್ಯ, ಸುಮ ರವರು,INTUC ತಾಲ್ಲೂಕು ಅಧ್ಯಕ್ಷ ರಂಗನಾಥ ,ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸೋಮಶೇಖರ್ ಕಬ್ಬಳಿಗೆರೆ, ಸತ್ಯರಾಜ್,ಧರ್ಮ,ಸಲೀಂ ,ರಾಜೇಶ್ , ಕೆಡಿಪಿ ಸದಸ್ಯ ಸುರೇಶ್ ಸೋಮನಹಳ್ಳಿ, ತಾಲ್ಲೂಕು SC & ST ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಪಟ್ಟಣ ಮಂಜು,ಪಕ್ಷದ ಇತರೆ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

*ಸಂಸ್ಕೃತ ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿ*ಅರಕಲಗೂಡು. ಅ.1 ಸಂಸ್ಕೃತ ಕೇವಲ ಒಂದು ಭಾಷೆಯಲ್ಲ.ಅದೊಂದು ಸಂಸ್ಕೃತಿ ಎಂದು ಎ.ಜೆ.ಎಸ್.ಪಿ ಟ್ರಸ್ಟ್...
01/10/2024

*ಸಂಸ್ಕೃತ ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿ*
ಅರಕಲಗೂಡು. ಅ.1 ಸಂಸ್ಕೃತ ಕೇವಲ ಒಂದು ಭಾಷೆಯಲ್ಲ.ಅದೊಂದು ಸಂಸ್ಕೃತಿ ಎಂದು ಎ.ಜೆ.ಎಸ್.ಪಿ ಟ್ರಸ್ಟ್ ನ ಕಾರ್ಯದರ್ಶಿ ದಿವಾಕರಸ್ವಾಮಿ ತಿಳಿಸಿದರು.
ಅವರು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣದ ಸೀತಾರಾಘವ ಎಜುಕೇಷನ್ ಸೊಸೈಟಿಯ ಸಂಸ್ಕೃತ ವಾಗ್ವರ್ಧಿನಿ ಪಾಠಶಾಲೆ ಎಜೆಎಸ್ ಪಿ ಟ್ರಸ್ಟ್ ನ ವೇದಾಂತ ಸಭಾ ಸಂಸ್ಕೃತ ಪಾಠಶಾಲೆ ಆಯೋಜಿಸಿದ್ದ ಅಸ್ಮಾಕಮ್ ಸಂಸ್ಕೃತ ಮ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಸಂಸ್ಕೃತ ಭಾಷೆ ಮಕ್ಕಳಲ್ಲಿ ಸ್ವಚ್ಛ ಉಚ್ಚಾರಣೆಯ ಜೊತೆಗೆ ಸಂಸ್ಕಾರವನ್ನೂ ಬೆಳೆಸುತ್ತದೆ.ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿಬೇರು ಇದ್ದಂತೆ.ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಭಾಷೆಯನ್ನು ಬಳಸಿಕೊಳ್ಳಲಾಗಿದೆ.ಪೋಷಕರು ಮೂಲ ಭಾಷೆಯಾದ ಸಂಸ್ಕೃತ ವನ್ನು ಕಲಿಸಲು ಉತ್ತೇಜಿಸಬೇಕು ಎಂದರು.
ಸಮಾರಂಭವನ್ನು ಸೀತಾರಾಘವ ಎಜುಕೇಷನ್ ಸೊಸೈಟಿಯ ನಿರ್ದೇಶಕ ಎ.ಎಸ್.ಹಿರಣ್ಣಯ್ಯ ನೆರವೇರಿಸಿ ಸಂಸ್ಕೃತ ಭಾಷೆ ಮಕ್ಕಳಲ್ಲಿಹಿಂದಿ ಸ್ವಚ್ಚವಾದ ಮಾತುಗಾರಿಕೆಯ ಜೊತೆಗೆ ಜ್ಣಾನಾರ್ಜನೆಗೆ ಪೂರಕವಾದ ಭಾಷೆ.ಹಿಂದೆ ಸಂಸ್ಕೃತ ಭಾಷೆಯನ್ನು ಕೆಲವರು ಮಾತ್ರ ಅಧ್ಯಯನ ಮಾಡುತ್ತಾರೆ ಎಂಬ ಕಾರಣಕ್ಕೆ ಆದು ಅವರದೇ ಭಾಷೆ ಎಂಬ ತಪ್ಪು ಅರಿವಿನಿಂದ ಆ ಭಾಷೆಯ ಲ್ಷೀಣತೆಗೆ ಕಾರಣವಾಗಿತ್ತು.ಪ್ರಸ್ತುತ ಈ ಭಾಷೆಯ ಮಹತ್ವ ಎಲ್ಲ ಸಮುದಾಯಗಳಿಗೂ ಅರಿವಾಗಿದ್ದು,ಎಲ್ಲರ ಭಾಷೆಯಾಗಿ ರೂಪುಗೊಳ್ಳುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ನರಸೇಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕ ಕೆ.ಎಸ್.ಸುರೇಶ್,ಪತ್ರಕರ್ತ ಸುಬ್ಬರಾವ್,ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮತಿ ಶೋಭಾ,ಕಂಚೀರಾಯ ಪ್ರೌಢಶಾಲಾ ಮುಖ್ಯಶಿಕ್ಷಕ ವೆಂಕಟೇಶ್,ಸಿಆರ್ ಪಿ ಬಿ.ಎಸ್.ಸತೀಶ್,ಗೊರೂರು ವೇದಾಂತ ಸಭಾ ಮುಖ್ಯೋಪಾಧ್ಯಾಯ ಎಸ್.ಎನ್.ಕುಶ ಇವರುಗಳು ಉಪಸ್ಥಿತರಿದ್ದರು.

28/09/2024
*ಅರಕಲಗೂಡು ಕಾರೋನೇಷನ್ ಸಹಕಾರಸಂಘ*23 ಲಕ್ಷ ರೂಗಳ ಲಾಭ ಘೋಷಣೆಅರಕಲಗೂಡು.ಸೆ.27.ಅರಕಲಗೂಡು ಪಟ್ಟಣದ ಕಾರೋನೇಷನ್ ಸಹಕಾರ ಸಂಘವು 23 ಲಕ್ಷ ರೂಗಳ ಆದಾ...
28/09/2024

*ಅರಕಲಗೂಡು ಕಾರೋನೇಷನ್ ಸಹಕಾರಸಂಘ*
23 ಲಕ್ಷ ರೂಗಳ ಲಾಭ ಘೋಷಣೆ
ಅರಕಲಗೂಡು.ಸೆ.27.ಅರಕಲಗೂಡು ಪಟ್ಟಣದ ಕಾರೋನೇಷನ್ ಸಹಕಾರ ಸಂಘವು 23 ಲಕ್ಷ ರೂಗಳ ಆದಾಯವನ್ನು 2023-24 ನೇ ಸಾಲಿನಲ್ಲಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಅ.ರಾ.ಸುಬ್ಬರಾವ್ ತಿಳಿಸಿದ್ದಾರೆ.
ಅವರು ಸಹಕಾರ ಸಂಘದ 111ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ಟಣದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಹಣಕಾಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದೆ.ಹಿರಿಯರು ಈ ಸಂಸ್ಥೆಯನ್ನು ಸ್ಥಾಪಿಸಿ ಉಳಿಸಿಕೊಂಡು ಬಂದಿದ್ದಾರೆ.ಅದನ್ನು ಉಳುಸಿ,ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.ಸಹಕಾರ ಸಂಘಗಳ ಅಡಿಪಾಯ ಷೇರುದಾರರು.ಅದೇ ರೀತಿಯಲ್ಲಿ ಸಂಸ್ಥೆಯಲ್ಲಿರುವ ಠೇವಣಿದಾರರು.ನಿಮ್ಮೆಲ್ಲರ ವಿಶ್ವಾಸದಿಂದ ಗೆದ್ದುಬಂದಿರುವ ನಿರ್ದೇಶಕರ ಈ ತಂಡ ನಿಮ್ಮ ವಿಶ್ವಾಸವನ್ನು ಕಾಯ್ದುಕೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.ನಿಮ್ಮೆಲ್ಲರ ನಂಬಿಕೆಗೆ ಚ್ಯುತಿ ಬಾರದ ಹಾಗೆ ನಡೆಯುವುದಾಗಿ ತಿಳಿಸಿದರು.
ಸಂಸ್ಥೆಯ ಷೇರು ಬಂಡವಾಳ 2022-23ನೇ ಸಾಲಿನಲ್ಲಿ10,12 ಲಕ್ಷ ರೂಗಳಿದ್ದು ಪ್ರಸಕ್ತ 23-24ನೇ ಸಾಲಿಗೆ11,72 ಲಕ್ಷದಷ್ಟು ಹೆಚ್ಚಿಸಿಕೊಂಡಿದೆ.2035,92 ಲಕ್ಷ ರೂಗಳ ವಹಿವಾಟು ನಡೆದಿದೆ.1000ಲಕ್ಷ ರೂಗಳ ದುಡಿಯುವ ಬಂಡವಾಳ ಹೊಂದಿದೆ ಎಂದರು.ವಿವಿಧ ನಿಧಿಗಳಲ್ಲಿ 858.44 ಲಕ್ಷ ರೂಗಳನ್ನು ಸಂಸ್ಥೆ ಹೂಡಿಕೆ ಮಾಡಿರುವುದಾಗಿ ತಿಳಿಸಿದರು.
ಮೃತ ಸದಸ್ಯನ ಕುಟುಂಬಕ್ಕೆ ನೀಡುವ ಮರಣೋತ್ತರ ನಿಧಿ 2ಸಾವಿರ ರೂಗಳಿಂದ 5ಸಾವಿರ ರೂಗಳಿಗೆ ಹೆಚ್ಚಿಸಬೇಕೆಂಬ ಸದಸ್ಯರ ಅಪೇಕ್ಷೆಯಂತೆ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಉಪಾಧ್ಯಕ್ಷ ಪಿ.ಎಸ್.ಪ್ರಸಾದ್,ನಿಕಟ ಪೂರ್ವ ಅಧ್ಯಕ್ಷ ಎ.ಎನ್.ಗಣೇಶ್ ಮೂರ್ತಿ, ನಿರ್ದೇಶಕರುಗಳಾದ ಪಿ.ಎನ್.ರಮೇಶ್,
ಜಿ.ರಮೇಶ್,ವೆಂಕಟೇಶ್ ಮೂರ್ತಿ, ಜಿ.ಉಮಾ,ಚಂದ್ರಕಲಾ,
ಸವಿತಾ,ಜಗದೀಶ್,ಕಮಲಮ್ಮಾ,ಎ.ಎನ್.ಕುಮಾರ್ ಇದ್ದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗಶಂಕರ್ ಸಂಘದ ವರದಿ ಓದಿದರು.

*ಬಿಸಿ ಊಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ*ಅಸ್ವಸ್ಥ ಮಕ್ಕಳಿಗೆ,ಹಾಸನ,ಅರಕಲಗೂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಅರಕಲಗೂಡು.ಸೆ.26.ತಾಲ್ಲೂಕಿನ ರಾಮನ...
26/09/2024

*ಬಿಸಿ ಊಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ*
ಅಸ್ವಸ್ಥ ಮಕ್ಕಳಿಗೆ,ಹಾಸನ,ಅರಕಲಗೂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ
ಅರಕಲಗೂಡು.ಸೆ.26.ತಾಲ್ಲೂಕಿನ ರಾಮನಾಥಪುರ ಹೋಬಳಿ ರಾಗಿಮರೂರು ಗ್ರಾಮದ ವರನಂದಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ ಅಸ್ವಸ್ಥ ಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಚೇತರಿಕೆ ಕಾಣದ ಆರು ಮಕ್ಕಳನ್ನು ಅರಕಲಗೂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.ಮತ್ತೊಬ್ಬ ವಿದ್ಯಾರ್ಥಿನಿ ತೀವ್ರ ಅಸ್ವಸ್ಥ ಗೊಂಡ ಕಾರಣಕ್ಕೆ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
*ಹಲ್ಲಿ ಬಿದ್ದ ಊಟ ಸೇವಿಸಿದ್ದೇ ಘಟನೆಗೆ ಕಾರಣ*
ಮಕ್ಕಳು ತೀವ್ರ ಅಸ್ವಸ್ಥಗೊಳ್ಳುತ್ತಿರುವುದನ್ನು ಗಮನಿಸಿದ ಮುಖ್ಯ ಶಿಕ್ಷಕರು ಅಡುಗೆಯನ್ನು ಪರಿಶೀಲಿಸಲು ಮುಂದಾದಾಗ,ಅಡುಗೆಯಲ್ಲಿ ಹಲ್ಲಿ ಬಿದ್ದಿದ್ದುದು ಕಂಡು ಬಂದಿದೆ ಎಂದು ತಿಳಿದುಬಂದಿದೆ.ಒಟ್ಟಾರೆ,ಚಿಕಿತ್ಸೆ ಪಡೆದಿರುವ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರುಗಳು ತಿಳಿಸಿದ್ದಾರೆ.

*ಹಾಸನ ಪದವಿ ಪೂರ್ವ ಕಾಲೇಜಿಗೆವಾಲಿಬಾಲ್ ಪ್ರಥಮ,ಕಬ್ಬಡಿ ದ್ವಿತೀಯ ಸ್ಥಾನ* ಅರಕಲಗೂಡಿನ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ 20...
24/09/2024

*ಹಾಸನ ಪದವಿ ಪೂರ್ವ ಕಾಲೇಜಿಗೆವಾಲಿಬಾಲ್ ಪ್ರಥಮ,ಕಬ್ಬಡಿ ದ್ವಿತೀಯ ಸ್ಥಾನ*

ಅರಕಲಗೂಡಿನ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ 2024ರ ದಸರಾ ಕ್ರೀಡಾಕೂಟದಲ್ಲಿ
ಹಾಸನ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಹಿಳಾ ವಾಲಿಬಾಲ್ ವಿಭಾಗದಲ್ಲಿ ಪ್ರಥಮ , ಕಬ್ಬಡ್ಡಿ ವಿಭಾಗದಲ್ಲಿ ದ್ವಿತೀಯ ಖೋಖೋ ವಿಭಾಗದಲ್ಲಿ ದ್ವಿತೀಯ 4x100 ರಿಲೇಯಲ್ಲಿ ಪ್ರಥಮ, ತ್ರಿಪಲ್ ಜಂಪ್ ಪ್ರಥಮ ಹಾಗೂ ವಯಕ್ತಿಕ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ಖುಷಿ ಎಸ್ ಅಭಿಗೇಲ್ ಪ್ರಥಮ ಹಾಗೂ ಹೇಮಲತಾ ದ್ವಿತೀಯ ಸ್ಥಾನ ಪಡೆದು ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಕಾಲೇಜಿಗೆ ಹಾಗೂ ತಾಲೋಕಿಗೆ ಕೀರ್ತಿಯನ್ನು ತಂದಿರುತ್ತಾರೆ ಇವರುಗಳಿಗೆ ಕಾಲೇಜಿನ ಕಾರ್ಯದರ್ಶಿಗಳಾದ ಗಂಗಾಧರ್ ಬಿ ಕೆ ಹಾಗೂ ಪ್ರಾಂಶುಪಾಲರಾದ ನವೀನ್ ಪಿ ಉಲಿವಾಲರವರು ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

*ಖೋ-ಖೋ- ಮೋಕಲಿ ಶಾಲೆಗೆ ಪ್ರಥಮ ಸ್ಥಾನ*ಅರಕಲಗೂಡು :ಸೆ.20.ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ 2024 -25 ರ ಕ್ರೀಡಾಕೂಟದಲ್ಲಿ ಸರ್ಕಾರಿ ಪ್...
20/09/2024

*ಖೋ-ಖೋ- ಮೋಕಲಿ ಶಾಲೆಗೆ ಪ್ರಥಮ ಸ್ಥಾನ*
ಅರಕಲಗೂಡು :ಸೆ.20.
ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ 2024 -25 ರ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಮೋಕಲಿಯ ಬಾಲಕರ ತಂಡ ಖೋ- ಖೋ ಪ್ರಥಮ ಮತ್ತು ಬಾಲಕಿಯರ ತಂಡ ಖೋ-ಖೋ ಪ್ರಥಮ ಸ್ಥಾನ ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ 100 ಮೀಟರ್, ಉದ್ದ ಜಿಗಿತ ,ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಗೆ ನಿಶಾನ್ ರವರು ಭಾಜನರಾಗಿರುತ್ತಾರೆ. ಬಾಲಕರ ಸಮಗ್ರ ಹಾಗೂ ಸತತ ಎರಡನೇ ಬಾರಿ ಕ್ರೀಡಾಕೂಟ ಸಮಗ್ರ ಪ್ರಶಸ್ತಿಯನ್ನು ಪಡೆದ ಕ್ರೀಡಾಪಟುಗಳಿಗೆ ಮೋಕಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ,ಉಪಾಧ್ಯಕ್ಷರು ಸದಸ್ಯರು, ಪಿಡಿಒ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ,ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿ ಜಿಲ್ಲಾ ಮಟ್ಟಕ್ಕೆ ಶುಭ ಹಾರೈಸಿದರು ಹಾಗೂ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಪುರುಷೋತ್ತಮ ಜಿ .ಎಸ್. ಅವರನ್ನೂ ಅಭಿನಂದಿಸಲಾಯಿತು..

ದೇವಾಲಯದಲ್ಲಿ ಕಳವುಅರಕಲಗೂಡು.ಸೆ.13.ತಾಲ್ಲೂಕಿನ ವಿಜಾಪುರ ಅರಣ್ಯ ದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ರಾತ್ರಿ ವೇಳೆ ಕಳ್ಳರು ದೇವಾಲಯ ದ ಬೀ...
13/09/2024

ದೇವಾಲಯದಲ್ಲಿ ಕಳವು
ಅರಕಲಗೂಡು.ಸೆ.13.ತಾಲ್ಲೂಕಿನ ವಿಜಾಪುರ ಅರಣ್ಯ ದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ರಾತ್ರಿ ವೇಳೆ ಕಳ್ಳರು ದೇವಾಲಯ ದ ಬೀಗ ಒಡೆದು ದೇವಾಲಯದಲ್ಲಿದ್ದ ಸಾಲಿಗ್ರಾಮ ,ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ.ದೇವಾಲಯದ ಗೋಲಕದಲ್ಲಿದ್ದ ಹಣವನ್ನೂ ಕಳವು ಮಾಡಿರುವ ಕಳ್ಳರು,ಬೀರುವನ್ನು ಒಡೆದು ಅಲ್ಲಿದ್ದ ಕೆಲವು ಹಳೆಯ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ.ದೇವಾಲಯದ ಅರ್ಚಕ ದೀಪಕ್ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ*ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯ*  ಅರಕಲಗೂಡು. ಸೆ.10...
10/09/2024

ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
*ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯ*
ಅರಕಲಗೂಡು. ಸೆ.10. ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯವಾಗಿದ್ದು,ಈ ನಿಟ್ಟಿನಲ್ಲಿ ನಮ್ಮ ದೇಶದ ಕಾನೂನನ್ನು ಗೌರವಿಸುವುದು ಮತ್ತು ಅದನ್ನು ಪಾಲಿಸುವುದು ಪ್ರಮುಖ ಅಂಶವಾಗುತ್ತದೆ ಎಂದು ಅರಕಲಗೂಡಿನ ಆರಕ್ಷಕ ಠಾಣೆಯ ಆರಕ್ಷಕ ಉಪನಿರೀಕ್ಷಕಿ ಕಾವ್ಯ ತಿಳಿಸಿದರು.
ಅವರು ಇಲ್ಲಿನ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕಾನೂನು ಅರಿವು ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕಾವ್ಯ ಅವರು ಹದಿಹರೆಯದ ವಯಸ್ಸಿನಲ್ಲಿ ಮನಸೋ ಇಚ್ಛೆಯಂತೆ ಮೋಟಾರ್ ಬೈಕ್ ಗಳನ್ನು ಓಡಿಸುವುದು ಮತ್ತುಉಪಯೋಗಿಸುವುದು ಕಾನೂನು ಬಾಹಿರ .ಇದರಿಂದ ಅನಾಹುತಗಳು ಸಂಭವಿಸಿದರೆ ದಾಖಲಾತಿ ಹೊಂದಿರುವ ವಾರಸುದಾರರಿಗೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಆದ್ದರಿಂದ ವಿದ್ಯಾರ್ಥಿಗಳು ಮೋಟಾರ್ ಬೈಕ್ ಗಳನ್ನು 18 ವರ್ಷದ ನಂತರ ದಾಖಲಾತಿಯೊಂದಿಗೆ ಉಪಯೋಗಿಸುವುದು ಸೂಕ್ತ ಎಂದು ತಿಳಿಸಿದರು..
ಬೈಕ್ ಗಳನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರುಗಳಲ್ಲಿ ಸೀಟ್ ಬೆಲ್ಟ್ ಗಳನ್ನು ಬಳಸಿ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಇದರಿಂದ ವ್ಯಕ್ತಿಯ ಜೀವ ಮತ್ತು ಜೀವನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರಿಂದ ತಾವೆಲ್ಲರೂ ಇದರ ಬಗ್ಗೆ ನಿಮ್ಮ ಪೋಷಕರಿಗೆ ಹಾಗೂ ನಿಮ್ಮ ನೆರೆಯವರಿಗೆ ತಿಳುವಳಿಕೆಯನ್ನು ಮೂಡಿಸುವುದು ಅತಿ ಮುಖ್ಯ ಎಂದರು.
ವಿದ್ಯಾರ್ಥಿನಿಯರನ್ನು ಕುರಿತು ಮಾತನಾಡಿ ಆಕರ್ಷಣೆಗೆ ಒಳಗಾಗುತ್ತಿರುವ ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುಂಚಿತವಾಗಿ ಪ್ರೀತಿ -ಪ್ರೇಮ ಮದುವೆಗಳಲ್ಲಿ ತೊಡಗಿದ್ದು ಇತ್ತೀಚೆಗೆ ಪೋಕ್ಸೋ ಕಾಯ್ದೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಓದಿನ ಕಡೆಗೆ ಗಮನ ಕೊಟ್ಟು ತಮ್ಮ ಗುರಿಯನ್ನು ಸಾಧಿಸಿ. ನಿಮ್ಮನ್ನು ಸಾಕಿದ ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ ಉತ್ತಮ ಭವಿಷ್ಯದ ಕಡೆಗೆ ಗಮನವನ್ನು ಹರಿಸಬೇಕಾಗಿ ತಿಳಿಸಿಕೊಟ್ಟರು. ತಂದೆ ತಾಯಿಯರು ಮತ್ತು ನಮ್ಮ ದೇಶ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಮೇಲೆ ಬಂಡವಾಳವನ್ನು ಹೂಡಿದ್ದು ಅದರ ಲಾಭ ದೇಶಕ್ಕೆ ಸದುಪಯೋಗವಾಗಬೇಕು ಅದರ ವ್ಯರ್ಥವನ್ನ ಮಾಡದೆ ಚಿಂತಿಸಿ ಭವಿಷ್ಯದ ಕಡೆಗೆ ಸಾಗಬೇಕಾಗಿದೆ. ಅಲ್ಲದೆ ಇತ್ತೀಚೆಗೆ ನಾವು ಬಳಸುವ ಸಾಮಾಜಿಕ ಜಾಲತಾಣಗಳಿಂದ ದುರುಪಯೋಗಗಳೇ ಜಾಸ್ತಿಯಾಗಿದ್ದು ಸೈಬರ್ ಕೃತ್ಯಗಳು ತುಂಬಾ ನಡೆಯುತ್ತಿರುವುದರಿಂದ ತಾವೆಲ್ಲರೂ ಜಾಗೃತರಾಗಿ ಹಾಗೂ ಪೋಷಕರಿಗೆ ಅರಿವನ್ನ ಮೂಡಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಅಲ್ಲದೆ ಬ್ಯಾಂಕ್ ಎಟಿಎಂ ಗಳಲ್ಲಿ ಹಣವನ್ನು ಪಡೆಯುವಾಗ ದುರುಪಯೋಗಗಳು ಅನಾವಶ್ಯಕ ವ್ಯಕ್ತಿಗಳಿಂದ ದಿನನಿತ್ಯ ಹೆಚ್ಚಾಗಿರುವುದರಿಂದ ನಿಮ್ಮ ಪೋಷಕರಿಗೆ ನಿಮ್ಮ ಮನೆಯಲ್ಲಿರುವ ವೃದ್ಧರಿಗೆ ತಿಳುವಳಿಕೆ ಮೂಡಿಸುವುದು ನಿಮ್ಮೆಲ್ಲರ ಆಧ್ಯ ಕರ್ತವ್ಯ. ನಂತರ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಹೊಡೆನೂರ್ ಅವರು ಇತ್ತೀಚಿನ ದಿನಗಳಲ್ಲಿ ಕಾನೂನಿನ ಅರಿವು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿದ್ದು, ಜೊತೆಗೆ ಎಲ್ಲ ಸಾರ್ವಜನಿಕರು ಕಾನೂನು ಪಾಲನೆ ಮೂಡುವುದರ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು. ಆರಕ್ಷಕ ಸಿಬ್ಬಂದಿ ವರ್ಗದವರು. ಹಾಜರಿದ್ದರು.

*ಜಿಲ್ಲಾಧಿಕಾರಿ ವಿರುದ್ಧ ಶಾಸಕ ಎ.ಮಂಜು ಕಿಡಿ**ಹಕ್ಕು ಚ್ಯುತಿ ಮಂಡಿಸುವ ಎಚ್ಚರಿಕೆ *ಸುಪ್ರೀಂ ಗಿಂತ ಸುಪ್ರೀಮ ಈ ಜಿಲ್ಲಾಧಿಕಾರಿ ಅರಕಲಗೂಡು:ಆ.30...
30/08/2024

*ಜಿಲ್ಲಾಧಿಕಾರಿ ವಿರುದ್ಧ ಶಾಸಕ ಎ.ಮಂಜು ಕಿಡಿ*
*ಹಕ್ಕು ಚ್ಯುತಿ ಮಂಡಿಸುವ ಎಚ್ಚರಿಕೆ *ಸುಪ್ರೀಂ ಗಿಂತ ಸುಪ್ರೀಮ ಈ ಜಿಲ್ಲಾಧಿಕಾರಿ
ಅರಕಲಗೂಡು:ಆ.30 ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿರುವ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಶಾಸಕ ಎ.ಮಂಜು ಆಗ್ರಹಿಸಿದರು.
ಇಲ್ಲಿನಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಯವರ ನಡೆ ನಿಜಕ್ಕೂ ಅನುಮಾನ ಹುಟ್ಟಿಸುವಂತಿದೆ.ಜಿಲ್ಲಾಧಿಕಾರಿ ಗಳು ಹೈಕೋರ್ಟ್, ಸುಪ್ರೀಂ ಕೋರ್ಟ್ ಗಿಂತ ದೊಡ್ಡವರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಅವರ ದೋರಣೆಯಿಂದ ಕಾನೂನು ಬಾಹಿರವಾಗಿ ಅಧಿಕಾರ ನಡೆಸುತ್ತಿರುವ ಅವರ ವಿರುದ್ದ ಹಕ್ಕುಚ್ಯುತಿ ಮಂಡಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಅರಕಲಗೂಡು ತಾಲೂಕು ಮುದುಗನೂರು ಕಾವಲು ಗ್ರಾಮದ ಸರ್ವೆ ನಂ 1ರಲ್ಲಿ 64.07 ಹೆಕ್ಟೇರ್ ಪ್ರದೇಶದಲ್ಲಿ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಅಂದಿನ ಸಕಲೇಶಪುರ ಉಪವಿಭಾಗಾಧಿಕಾರಿ ಅರಣ್ಯ ಪ್ರದೇಶದ ಸರ್ವೆ ನಂಬರನ್ನು ವಿಂಗಡಣೆಗೊಳಿಸಿ ಸರ್ವೆ ನಂ 46 ಸರ್ಕಾರಿ ಬಂಡೆ ಎಂದು ನಮೂದಿಸಿ ಅಕ್ರಮ ಗಣಿಗಾರಿಕೆಗೆ ಅವಕಾಶವನನ್ನು ಮಾಡಿಕೊಟ್ಟಿದ್ದರು. ದಿನಾಂಕ 5/05/2022ರಂದು ಜಿಲ್ಲಾ ಮಟ್ಟದ ಸಮಿತಿಯು ಸಲ್ಲಿಸಿದ ಶಪತ ಪ್ರಮಾಣ ಪತ್ರದಲ್ಲಿರುವ ಭೂ ಪ್ರದೇಶವನ್ನು ಪರಿಬಾವಿತ ಅರಣ್ಯ ಪ್ರದೇಶಗಳೆಂದು ಅದಿಸೂಚಿಸಿ ಸಂರಕ್ಷಣೆ ಮಾಡುವಂತೆ ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 185 ಎಫ್‌ಎಎಫ್ 2011ರ ಆದೇಶದಂತೆ ಮದುಗನೂರು ಕಾವಲಿನ ಅರಣ್ಯ ಹಾಗೂ ಅರಸೀಕಟ್ಟೆ ಕಾವಲಿನ ಅರಣ್ಯ ಪ್ರದೇಶಗಳು ಪರಿಬಾವಿತ ಅರಣ್ಯ ಪ್ರದೇಶವಾಗಿ ಮಾರ್ಪಟ್ಟು ಸುಪ್ರೀಂ ಕೋ ಆದೇಶದಂತೆ ಅರಣ್ಯ ಇಲಾಖಾ ಅಧಿಕಾರಿಗಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಕ್ರಮ ಕೈಗೊಂಡಿದ್ದರು. ಆದರೆ ಜಿಲ್ಲಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 26/06/2024ರಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿ ನೀಡಿರುವುದು ಜಿಲ್ಲಾಧಿಕಾರಿಗಳ ದೋರಣೆಗೆ ಹಿಡಿದ ಸಾಕ್ಷಿಯಾಗಿದೆ. ಈ ಕೂಡಲೇ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಅವಕಾಶವನ್ನು ಮಾಡಿಕೊಟ್ಟಿರುವ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳ ಪತ್ರಕ್ಕೂ ಕಿಮ್ಮತ್ತು ನೀಡದ ಜಿಲ್ಲಾಧಿಕಾರಿ:- 26/06/2024 ರಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಮುಂದೆ ಜಿಲ್ಲಾ ವಲಯ ಅರಣ್ಯಾಧಿಕಾರಿಯವರು ಗಣಿಗಾರಿಕೆಗೆ ಅನುವ್ಮತಿಯನ್ನ ನೀಡದಂತೆ ಪತ್ರದ ಮುಖೇನ ಮನವಿ ಮಾಡಿದರು ಇದನ್ನ ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.

ವೈಯಕ್ತಿಕ ಲಾಭಕ್ಕಾಗಿ ಮುಂದಾಗಿರುವರೇ ಎಂದು ಪ್ರಶ್ನಿಸಿದ ಶಾಸಕರು:- ಹಾಸನ ಜಿಲ್ಲಾದಿಕಾರಿ ಸತ್ಯಭಾಮರವರು ರಾಜಕೀಯ ಒತ್ತಡ ಹಾಗೂ ಲಾಭಕ್ಕಾಗಿ ಇಂತಹ ಕೆಲಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ಆದೇಶವನ್ನೆ ಉಲ್ಲಂಘಿಸಿ ಅತೀ ಹೆಚ್ಚು ಜವಬಾýರಿಯನ್ನ ತೆಗೆದುಕೊಂಡು ಸಮಿತಿಯಲ್ಲಿ ಗಣಿಗಾರಿಕೆಗೆ ಅನುಮತಿ ಯನ್ನ ನೀಡಿರುವುದು ಶಂಕೆಗೆ ಕಾರಣವಾಗುತ್ತಿದೆ.

ಪಹಣಿ ವಿಲಿನ ಮಾಡುವುದರಲ್ಲೂ ಲೋಪ:- ಮುದುಗನೂರು ಕಾವಲು ಗ್ರಾಮದ ಸರ್ವೆ ನಂ. 1 ರಲ್ಲಿ ಗಣಿಗಾರಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹಿಂದಿನ ಎ.ಸಿ. ಸರ್ವೆ ನಂ 1 ನ್ನು ವಿಭಾಗಗೊಳಿಸಿ ಸರ್ವೆ ನಂ 46 ಎಂದು ವಿಂಗಡಣೆಗೊಳಿಸಿ ಸರ್ಕಾರಿ ಬಂಡೆ ಎಂದು ಗುರುತಿಸಿದರು. ಡೀಮ್ಡ್ ಫಾರೆಸ್ಟ್ ಸರ್ವೆಯ ಸಂದರ್ಭದಲ್ಲಿ ಹಾಗೂ ಅರ್ಜಿ ಸಮಿತಿಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಕೈಗೊಂಡು ಸರ್ವೆ ನಂ 46ರನ್ನು ರದ್ದುಗೊಳಿಸಿ ಸರ್ವೆ ನಂ 1 ರೊಳಗೆ ವಿಲೀನಗೊಳಿಸುವಂತೆ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿತ್ತು. ಆದರೆ ಜಿಲ್ಲಾದಿಕಾ ರಿಗಳು ಗಣಿಗಾರಿಕೆ ಮಾಡುತ್ತಿರುವವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಸರ್ವೆ ನಂ 46 ನ್ನು 1 ಕ್ಕೆ ವಿಲೀನಗೊಳಿಸಿ ದರೆ ವಿನಃ ಅದರ ಹಕ್ಕುದಾರರಾಗಿರುವ ಎಂ.ಸಿ. ರಂಗಸ್ವಾಮಿ, ಎಂ.ಟಿ. ನಾಗರಾಜು, ಎಂ.ಜಿ. ತಿಮ್ಮೇಗೌಡ, ಕೃಷ್ಣೇಗೌಡ ಇವರುಗಳನ್ನು ಈಗಲೂ ಪಹಣಿಯಲ್ಲಿ ಮುಂದುವರಿಸಿರುವುದು ಕಾನೂನುಬಾಹಿರವಾಗಿದೆ. ಈ ಕೂಡಲೇ ಇದನ್ನು ಸಂಪೂರ್ಣ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ವಿರುದ್ದ ಎಫ್‌ಐಆರ್ ಧಾಖಲು ಮಾಡುವಂತೆ ಶಾಸಕ ಎ.ಮಂಜು:- ಕಾನೂನು ಬಾಹಿರವಾಗಿ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆಗಿರುವ ಸತ್ಯಭಾಮ ಹಾಗೂ ಸಮಿತಿಯ ಸಧಸ್ಯರುಗಳ ವಿರುದ್ದ ಎಫ್‌ಐಆರ್ ಧಾಖಲು ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯ ಎಚ್ಚರಿಕೆ:- ಅಕ್ರಮ ಗಣಿಗಾರಿಕೆಗೆ ಸಾತ್ ನೀಡಿರುವ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರ ವಿರುದ್ದ ಅರಣ್ಯ ಸಂರಕ್ಷಣಾ ಕಾಯಿದೆ 1980 ರ ಸೆಕ್ಷನ್ 3ಬಿ ರೂಲ್ ಅಡಿಯಲ್ಲಿ ಕ್ರಮ ಜರುಗಿಸಲು ಈಗಾಗಲೇ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಆದೇಶಿಸಿದಂತೆ ಅವರುಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಶಾಸಕ ಎ.ಮಂಜು ನೀಡಿದರು.

ಗುರಿ ಇದ್ದವರಿಂದ ಮಾತ್ರ ಸಾಧನೆ ಸಾಧ್ಯ:ಶಾಸಕ ಎ.ಮಂಜುಅರಕಲಗೂಡು.ಆ.26. ಯಾವುದೇ ವಿದ್ಯಾರ್ಥಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಶ್ರದ್ಧೆ ಮತ್ತು ಪರಿ...
27/08/2024

ಗುರಿ ಇದ್ದವರಿಂದ ಮಾತ್ರ ಸಾಧನೆ ಸಾಧ್ಯ:ಶಾಸಕ ಎ.ಮಂಜು
ಅರಕಲಗೂಡು.ಆ.26. ಯಾವುದೇ ವಿದ್ಯಾರ್ಥಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಶ್ರದ್ಧೆ ಮತ್ತು ಪರಿಶ್ರಮದಿಂದ ತನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಆತ ತನ್ನ ಜೀವನದಲ್ಲಿ ಉತ್ತಮ ಸಾಧನೆ ಸಾಧಿಸಬಲ್ಲ ಎಂದು ಶಾಸಕ ಎ.ಮಂಜು ಅವರು ತಿಳಿಸಿದರು.
ಅವರು ಇಲ್ಲಿನ ಶಾಲಾಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಶಾಲೆಗಳ ಶಿಕ್ಷಕರಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಅಂದು ವಿದ್ಯಾಭ್ಯಾಸಕ್ಕೆ ಬೇಕಾದ ಸೌಕರ್ಯಗಳು ಇರಲಿಲ್ಲ.ಪ್ರೋತ್ಸಾಹವೂ ಇರಲಿಲ್ಲ.ಇಂದು ಸೌಕರ್ಯ,ಪ್ರೋತ್ಸಾಹ ಎರಡೂ ಲಭ್ಯವಿದೆ.ಇದರ ಸದುಪಯೋಗವಾಗಬೇಕು.ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯ ರೀತಿಯಲ್ಲಿ ಉತ್ತಮ ಶ್ರೇಣಿಯ ವಿದ್ಯಾಭ್ಯಾಸವಷ್ಟೇ ನಮ್ಮನ್ನು ಸಮಾಜದಲ್ಲಿ ಉತ್ತಮ ಬದುಕಿಗೆ ದಾರಿಮಾಡಿಕೊಡಬಲ್ಲದು ಎಂದು ನುಡಿದರು.ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಸಕರು ತಮ್ಮ ಸಾಧನೆ ತಾಲೂಕು ಹೆಮ್ಮೆಪಡುವಂತಹ ವಿಷಯವಾಗಿದ್ದು,ಮುಂದಿನ ದಿನಗಳಲ್ಲಿ ಕಿರಿಯರಿಗೆ ಇದು ಆದರ್ಶವಾಗಿ,ನಿಮಗೆ ಇನ್ನೂ ಹೆಚ್ಚಿನ ಸಾಧನೆಗೆ ದಾರಿಯಾಗಲಿ ಎಂದರು.
ತಾಯಿ ಮತ್ತು ಗುರುವಿನ ಮಹತ್ವ ದೊಡ್ಡದು.ಗುರುವಾದವರು ವಿದ್ಯಾರ್ಥಿ ಯ ನಿರಂತರ ಕಲಿಕೆ ಮತ್ತು ಅವನು ಹೋಗುತ್ತೊರುವ ದಾರಿಯ ಬಗೆಗೆ ಕಾಳಜಿ ಇಟ್ಟು ಅವನ ಉನ್ನತಿಗೆ ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಸ್ವಾಗತಿಸಿ,ಪ್ರಾಸ್ತಾವಿಕ ನುಡಿ ನುಡಿದರು.
ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನರಸೇಗೌಡ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನರಸೇಗೌಡ ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರೇಗೌಡ,ರಂಗಸ್ವಾಮಿ,ಸಂಜೀವ್ ಕುಮಾರ್, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಅ.ರಾ.ಸುಬ್ಬರಾವ್ ಇತರರು ಉಪಸ್ಥಿತಿ ಇದ್ದರು.

Address


Website

Alerts

Be the first to know and let us send you an email when Hassan News Express posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share