Right to Speak HUBLI

  • Home
  • Right to Speak HUBLI

Right to Speak HUBLI ನಾನು ಹೋರಾಟದಲ್ಲಿ ನಂಬಿಕೆ ಇಟ್ಟವನು. �
ಕೆಲ?

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಮುಂಭಾಗದಲ್ಲ...
26/01/2024

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಮುಂಭಾಗದಲ್ಲಿ ಮತ್ತು 79ನೇ ವಾರ್ಡ್ ಸಮಿತಿ ವತಿಯಿಂದ ಎಸ್ ಎಂ ಕೃಷ್ಣ ನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂವಿಧಾನ ದೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಮಕ್ತುಮ್ ಹುಸೇನ್ ಹೊಸಮನಿ ಪ್ರಸ್ತಾವಿಕವಾಗಿ ದೇಶದ ಬಗ್ಗೆ ಮಾತನಾಡಿದರು. ಅದೇ ರೀತಿ ಸಂವಿಧಾನ ದೀಕ್ಷೆಯನ್ನು ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ ಅವರ ನೆರವೇರಿಸಿದರು.

ಈ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಲ್ಮಾ ಮುಲ್ಲಾ, ದಲಿತ ನಾಯಕರು ದೇವೇಂದ್ರಪ್ಪ ಇಟಗಿ, ಪರಶುರಾಮ್ ದೊಡ್ಡಮನಿ, ಎಸ್ ಎಂ ಕೃಷ್ಣ ನಗರದ ಜಮಾತಿನ ಹಿರಿಯರು ಅಬ್ದುಲ್ ಪಾಟೀಲ್, ಎಸ್ ಡಿ ಟಿ ಯು ಅಧ್ಯಕ್ಷರಾದ ಜಹೀರ್ ಜಮಖಂಡಿ ಮತ್ತು ಎಸ್‌ಡಿಪಿಐ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ ಲಷ್ಕರ್, ಕಾರ್ಯದರ್ಶಿ ಸುಹೇಲ್ ಇಂಗಳಗಿ, ಜಿಲ್ಲಾ ಕೋಶಾಧಿಕಾರಿ ಮಲೀಕ ಜಾನ್ ಕಳಸ, ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುಲ್ ಜಬ್ಬಾರ್ ಲಷ್ಕರ್ ಮತ್ತು 79ನೇ ವಾರ್ಡಿನ ಅಧ್ಯಕ್ಷರಾದ ಫಯಾಜ್ ಬೈರಿಕೊಪ್ಪ & ಕಾರ್ಯದರ್ಶಿ ಸಾಧಿಕ್ ಕಲಬುರ್ಗಿ ಮತ್ತು ಬ್ರಾಂಚಿನ ಅಧ್ಯಕ್ಷರು & ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು.

*SDPI HUBLI-DHARWAD*

14/01/2024

ಹುಬ್ಬಳ್ಳಿ-ಧಾರವಾಡ ಜನವರಿ 13

SDPI ಪಕ್ಷದ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಪಕ್ಷದ ಕಚೇರಿಯಲ್ಲಿ ಇಂದು ನಡೆಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ ಲಷ್ಕರ್, ಜಿಲ್ಲಾ ಕೋಶಾಧಿಕಾರಿ ಮಲೀಕ ಕಳಸ ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಹಳ್ಯಾಳ, ಫೈರೋಜ ಮತ್ತು ಅಬ್ದುಲ್ ಜಬ್ಬಾರ ಉಪಸ್ಥಿತರಿದ್ದರು.

ಎಸ್‌ಡಿಪಿಐ ಹುಬ್ಬಳ್ಳಿ-ಧಾರವಾಡ

13/01/2024

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ ಎಂಬ ಭಯೋತ್ಪಾದಕರು ಯಾರು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ವಿಷಯಾಂತರ ಮಾಡಿ PFI ಮೇಲೆ ಆರೋಪ ಹೊರಿಸಲು ಯತ್ನಿಸಿದ ಬಿಜೆಪಿ ವಕ್ತಾರನಿಗೆ ಮಾತಿನಲ್ಲೆ ಚಾಟಿ ಬೀಸಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ

05/01/2024

ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರದ ದೋರಣೆಯನ್ನು ಖಂಡಿಸಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ರವರ ಮಾತು

29/12/2023

ಇದಾಗಿದೆ ನೈಜ ಸೌಹಾರ್ದತೆ

*ಮುಸ್ಲಿಂ ಮಹಿಳೆಯರ ಬಗ್ಗೆ ಅತ್ಯಂತ ಅಹವೇಳನಕಾರಿಯಾಗಿ ಮಾತನಾಡಿ,ಪ್ರಚೋದನಕಾರಿ ಭಾಷಣ ಮಾಡಿದ RSS ಮುಖಂಡ ಪ್ರಭಾಕರ ಭಟ್ಟನ FIR ದಾಖಲಾಗಿ ಆಗಿ, 48 ಗಂಟೆ ಕಳೆದರೂ, ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರದ ನೀತಿಯನ್ನು ವಿರೋಧಿಸಿ ಮತ್ತು ಭಟ್ಟನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, SDPI ಮಂಡ್ಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂಧರ್ಭದಲ್ಲಿ ಪ್ರತಿಭಟನೆ ಮುಂಬಾಗದಿಂದ ಸಾಗುತ್ತಿದ್ದ ಹಿಂದೂ ಸಹೋದರ ಧಾರ್ಮಿಕ ಮೆರವಣಿಗೆಗೆ ಗೌರವ ಸೂಚಿಸಿ ತಮ್ಮ ಮುಖ್ಯ ಭಾಷಣವನ್ನು ನಿಲ್ಲಿಸಿ ಸೌಹಾರ್ದ ಮೆರೆದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ*

ನಮ್ಮ ನಾಯಕರು ನಮ್ಮ ಹೆಮ್ಮೆ....




01/11/2023
26/10/2023

Afsar kodlipet
General Secretary SDPI Karnataka

24/10/2023
*ಪತ್ರಿಕಾ ಪ್ರಕಟಣೆ**ಇಸ್ರೇಲ್ ಗುರಿ ಪ್ಯಾಲೇಸ್ತೀನಿಯರ ನರಮೇಧವಾಗಿದೆ. ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಕೆ ಮತ್ತು ಆಸ್ಪತ್ರೆಗಳ ಮೇಲಿನ ದಾಳಿ...
19/10/2023

*ಪತ್ರಿಕಾ ಪ್ರಕಟಣೆ*

*ಇಸ್ರೇಲ್ ಗುರಿ ಪ್ಯಾಲೇಸ್ತೀನಿಯರ ನರಮೇಧವಾಗಿದೆ. ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಕೆ ಮತ್ತು ಆಸ್ಪತ್ರೆಗಳ ಮೇಲಿನ ದಾಳಿಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಭಾರತ ಸೇರಿದಂತೆ ಇಡೀ ವಿಶ್ವ ಈ ಜಿಯೋನಿಸ್ಟರ ಕ್ರೌರ್ಯದ ವಿರುದ್ಧ ನಿಲ್ಲಬೇಕಿದೆ.*

*ಬೆಂಗಳೂರು, 14 ಅಕ್ಟೋಬರ್ 2023:* ಪ್ಯಾಲೇಸ್ತೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಇಸ್ರೇಲ್ ಕಳೆದ 70 ವರ್ಷಗಳಿಂದ ಪ್ಯಾಲೇಸ್ತೀನಿಯರ ಶೋಷಣೆಯಲ್ಲಿ ತೊಡಗಿದೆ. ಈಗ ಅದು ಪ್ಯಾಲೇಸ್ತೀನಿಯರನ್ನು ಶಾಶ್ವತವಾಗಿ ಇಲ್ಲವಾಗಿಸುವ ಉದ್ದೇಶದಿಂದ ಬರ್ಬರ ನರಮೇಧದಲ್ಲಿ ತೊಡಗಿದೆ. ಇದಕ್ಕೆ ಜಿಯೋನಿಸ್ಟ್ ಇಸ್ರೇಲ್ ಈಗ ನಡೆಯುತ್ತಿರುವ ಸಂಘರ್ಷದಲ್ಲಿ ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಸುತ್ತಿರುವುದು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಸುಮಾರು 800 ಮಂದಿಯನ್ನು ಕೊಂದಿರುವುದು ಪುಷ್ಟಿ ನೀಡುತ್ತವೆ. ಈ ಕ್ರೌರ್ಯದ ವಿರುದ್ಧ ಭಾರತ ಸೇರಿದಂತೆ ಇಡೀ ವಿಶ್ವ ನಿಲ್ಲಬೇಕಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರನಿಂದ ಶೋಷಣೆಗೆ ಒಳಗಾಗಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಾ ಅಮೆರಿಕ ಜೊತೆಗೂಡಿ ಕುತಂತ್ರದಿಂದ ಪ್ಯಾಲೆಸ್ತೀನಿಯರ ಭೂಮಿಯನ್ನು ಇಸ್ರೇಲ್ ಕಸಿದುಕೊಂಡಿತು. ಇಂದು ಪ್ಯಾಲೇಸ್ತೀನಿಯರು ತಮ್ಮದೇ ನೆಲದಲ್ಲಿ ನಿರ್ಗತಿಕರಾಗಿ ಅತಿಕ್ರಮಣಕಾರರ ವಿರುದ್ಧ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. 1948 ರಿಂದ ಸುಮಾರು ಏಳು ದಶಕಗಳಿಂದ ಇಸ್ರೇಲಿನ ಅತಿಕ್ರಮಣ, ದೌರ್ಜನ್ಯ, ಹಿಂಸಾಚಾರದ ವಿರುದ್ಧ ತಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಸ್ವಾತಂತ್ರ ಹೋರಾಟವನ್ನು ಎಸ್‌ಡಿಪಿಐ ಪಕ್ಷ ಗೌರವಿಸುತ್ತದೆ ಎಂದು ಎಸ್‌ಡಿಪಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಟ್ಲರ ಶೋಷಣೆ ಮತ್ತು ಹತ್ಯಾಕಾಂಡಗಳಿಂದ ತತ್ತರಿಸಿಹೋಗಿ ದಿಕ್ಕು ತೋಚದಂತಾಗಿದ್ದ ಜ್ಯೂಗಳಿಗೆ ಮಾನವೀಯತೆಯ ಆಧಾರದ ಮೇಲೆ ಪುನರ್ವಸತಿ ಕಲ್ಪಸಿಕೊಡುವ ಮನಸ್ಸು ಮಾಡಿದ್ದು ಪ್ಯಾಲೆಸ್ತೀನಿಯರು ಮಾತ್ರ. ಉಳಿದಂತೆ ಜಗತ್ತಿನ ಬೇರೆ ಯಾವ ದೇಶವೂ ಅವರ ನೆರವಿಗೆ ಅಂದು ನಿಂತಿರಲಿಲ್ಲ. ಆದರೆ ಇಸ್ರೇಲಿಗರು ಆಶ್ರಯ ಕೊಟ್ಟವರಿಗೆ ದ್ರೋಹ ಬಗೆದು ಕೆಲವೇ ವರ್ಷಗಳಲ್ಲಿ ಪ್ಯಾಲೆಸೀನಿಯರಿಂದ ಅವರ ದೇಶವನ್ನೇ ಕಸಿದುಕೊಂಡರು. ಕೊನೆಗೆ ಅವರಿಗೆ ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಎಂಬ ಎರಡು ತುಂಡು ಭೂಮಿ, ಅದೂ ಒಂದರಿಂದ ಒಂದು ನೂರಾರು ಕಿಲೋ ಮೀಟರ್ ದೂರ, ನಡುವೆ ಇಸ್ರೇಲ್ ಪ್ರದೇಶ ಇರುವಂತೆ ನೋಡಿಕೊಂಡು ಪ್ಯಾಲೆಸ್ತೀನಿಗರಿಗೆ ನೀಡಿದರು. ಇಂದು ಗಾಝಾ ಪಟ್ಟಿ ಜಗತ್ತಿನ ಅತಿ ಹೆಚ್ಚು ಜನನಿಭಿಡ ಪ್ರದೇಶಗಳಲ್ಲಿ ಒಂದಾಗಿದ್ದು, ಒಂದು ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಸುಮಾರು 5500 ಜನ ಅಲ್ಲಿ ವಾಸ ಮಾಡಬೇಕಾದಷ್ಟು ಇಕ್ಕಟ್ಟಿನ ಪ್ರದೇಶವನ್ನು ಅವರ ಪಾಲಿಗೆ ನೀಡಲಾಗಿದೆ. ಇದು ಮನುಕುಲದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದ್ರೋಹ ಎಂದು ಎಸ್‌ಡಿಪಿಐ ತಿಳಿಸಿದೆ.

ಮೊದಲೇ ನಲುಗಿಹೋಗಿರುವ ಪ್ಯಾಲೇಸ್ತೀನಿಯರ ವಿರುದ್ಧ ಜಿಯೋನಿಸ್ಟ್ ಇಸ್ರೇಲ್ ಈಗ ಅತಿದೊಡ್ಡ ದಾಳಿ ಮಾಡುತ್ತಿದೆ. ಅಲ್ಲಿನ ಜನರಿಗೆ ನೀರು, ಆಹಾರ, ವಿದ್ಯುತ್, ಅನಿಲ ಪೂರೈಕೆ ಸ್ಥಗಿತಗೊಳಿಸಿ ನರಳಿಸಿ ಕೊಲ್ಲಲಾಗುತ್ತಿದೆ. ಇದನ್ನ

17/10/2023

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ ಎಂಎಸ್ಸಿ, ಭೌತಶಾಸ್ತ್ರದಲ್ಲಿ ಏಳು ಚಿನ್ನ ಪದಕ ಗಳಿಸಿದ ಅಸ್ಮಾ ಬಾನುಗೆ ಅಭಿನಂದನೆಗಳು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

14/10/2023
13/10/2023

ಒಂದು ಪ್ರಕರಣದಲ್ಲಿ ಮಂಗಳೂರಿನ ವಕೀಲೆ ಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಶೆಲ್ ಬಸ್ಸಿನ ನಿರ್ವಾಹಕನ ಮೇಲೆ IPC section 354 ದಾಖಲಾಗಿರುವ ಹೊರತಾಗಿಯೂ ಮಂಗಳೂರು ಪೊಲೀಸರು ಕೇವಲ ನೋಟಿಸ್ ನೀಡಿ ಕೈ ತೊಳೆದು ಕೊಂಡಿರುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ವೆನ್ಲಾಕ್ ಆಸ್ಪತ್ರೆಯ ಸೆಕ್ಯುರಿಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಸಮಾಜ ಸೇವಕ ಆಸಿಫ್ ಆಪತ್ಬಾಂಧವರ ಮೇಲೆ ಮಂಗಳೂರು ಪೊಲೀಸರು IPC section 354 ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡುವಂತೆ ಮಾಡುತ್ತಾರೆ.

ಒಂದೇ ರೀತಿಯ ಸೆಕ್ಷನ್ ದಾಖಲಾಗಿರುವ ಎರಡು ವಿಭಿನ್ನ ಪ್ರಕರಣಗಳಲ್ಲಿ ಆರೋಪಿಗಳ ಧರ್ಮ ನೋಡಿ ಮಂಗಳೂರು ಪೊಲೀಸರು ನಡೆಸಿಕೊಂಡಿರುವ ರೀತಿ ತಾರತಮ್ಯ ಧೋರಣೆ ಆಗಿರುತ್ತದೆ ಮಾತ್ರವಲ್ಲ ಮಂಗಳೂರಿನ ಪೊಲೀಸರಲ್ಲೂ ಸಂಘೀ ಮನೋಸ್ಥಿತಿಯ ಕೋಮುವಾದವು ಮನೆಮಾಡಿದೆ ಎಂಬುದನ್ನು ಜಗಜ್ಜಾಹಿರುಗೊಳಿಸಿದೆ.

ಪೊಲೀಸ್ ಅಧಿಕಾರಿಗಳ ಈ ರೀತಿಯ ನಡೆಯ ವಿರುದ್ಧ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಾನ್ಯ ಗೃಹ ಸಚಿವರು ಮಧ್ಯೆ ಪ್ರವೇಶಿಸಿ ಪೊಲೀಸ್ ಇಲಾಖೆಯಲ್ಲಿ ಸಮಾನ ನ್ಯಾಯವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.

*ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮತ್ತು 2ಬಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಎಸ್‌ಡಿಪಿಐ(S...
12/10/2023

*ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮತ್ತು 2ಬಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಎಸ್‌ಡಿಪಿಐ(SDPI) ಹುಬ್ಬಳ್ಳಿ-ಧಾರವಾಡ ವತಿಯಿಂದ ಪಾದಯಾತ್ರೆ ಮತ್ತು ಧರಣಿ ಹೋರಾಟ*

⭕Kantaraj Report ko Aam Karne ke Liye Aur
⭕Musalmano ki 2B Reservation ko 08 % Tak Badane ka Mutalba karte hue Bade Paimane par Pada Yatra aur Dharna Jari Kiya SDPI

♡ ㅤ    ❍ㅤ     ⎙ㅤ     ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ

11/10/2023
_⭕ಕಾಂತರಾಜ್ ವರದಿಯನ್ನು ಸ್ವೀಕರಿಸಿ ಸಾರ್ವಜನಿಕ ಗೊಳಿಸಲು_ಹಾಗೂ⭕ಮುಸ್ಲಿಮರ 2B ಮೀಸಲಾತಿಯನ್ನು ಶೇಕಡಾ 8 ಕ್ಕೆ ಏರಿಸಲು ಆಗ್ರಹಿಸಿ ಪಾದಯಾತ್ರೆ ಮತ...
11/10/2023

_⭕ಕಾಂತರಾಜ್ ವರದಿಯನ್ನು ಸ್ವೀಕರಿಸಿ ಸಾರ್ವಜನಿಕ ಗೊಳಿಸಲು_
ಹಾಗೂ
⭕ಮುಸ್ಲಿಮರ 2B ಮೀಸಲಾತಿಯನ್ನು ಶೇಕಡಾ 8 ಕ್ಕೆ ಏರಿಸಲು ಆಗ್ರಹಿಸಿ ಪಾದಯಾತ್ರೆ ಮತ್ತು ಬೃಹತ್ ಧರಣಿ ಸತ್ಯಾಗ್ರಹ

*ದಿನಾಂಕ: 12:10:2023(ಗುರುವಾರ) ಬೆಳಿಗ್ಗೆ 10:00 ರಿಂದ ಸಂಜೆಯ 05:00 ರ ವರೆಗೆ ನಡೆಯಲಿರುವದು*

*ಪಾದಯಾತ್ರೆ ಪ್ರಾರಂಭವಾಗುವ ಸ್ಥಳ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತ ದಿಂದ ಮಿನಿ ವಿಧಾನಸೌಧದ ವರೆಗೆ*

*ಧರಣಿ ಸತ್ಯಾಗ್ರಹ ಸ್ಥಳ : ಮಿನಿ ವಿಧಾನಸೌಧ ಮುಂಭಾಗ ಹುಬ್ಬಳ್ಳಿ*

*ಬನ್ನಿ ಬಾಗವಹಿಸಿ ಬೃಹತ್ ಜನಾಂದೋಲನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ*

*ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ.*

05/10/2023

ಕಾಂತರಾಜ್ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮತ್ತು ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇಕಡ 8ಕ್ಕೆ ಏರಿಸಲು ಆಗ್ರಹಿಸಿ ಎಸ್‌ಡಿಪಿಐ ಯಿಂದ ರಾಜ್ಯಾದ್ಯಂತ ಜನಾಂದೋಲನ ಘೋಷಣೆ

ಕಾಂತರಾಜ್ ಆಯೋಗದ ವರದಿ ಮತ್ತು ಮೀಸಲಾತಿ ವಿಚಾರದ ಬಗ್ಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್ ನೇತೃತ್ವದಲ್ಲಿ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಂತರಾಜ್ ಆಯೋಗದ ವರದಿ ಬಗ್ಗೆ ಮತ್ತು 2B ಮೀಸಲಾತಿಯ ಬಗ್ಗೆ ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿದರು. ರಾಜ್ಯದ್ಯಂತ 9 ರಿಂದ 13 ರವರೆಗೆ ವಿವಿಧ ರೀತಿಯ ಆಂದೋಲವನ್ನು ನಡೆಸಲಿದ್ದು ಟ್ವಿಟರ್ ಕ್ಯಾಂಪೈನ್, ಸೆಮಿನಾರ್, ಧರಣಿ, ಪ್ರತಿಭಟನೆ
ನಡೆಯಲಿರುವ ಕುರಿತು ಪೋಸ್ಟರ್‌ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್, ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಜ್ ಕಡಂಬು, ಬೆಂಗಳೂರು ದಕ್ಷಿಣ ಅಧ್ಯಕ್ಷರಾದ ಮೆಹಬೂಬ್‌ ಉಪಸ್ಥಿತರಿದ್ದರು.

05/10/2023

ಕಾಂತರಾಜ್ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮತ್ತು ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇಕಡ 8ಕ್ಕೆ ಏಲಿಸಲು
ಆಗ್ರಹಿಸಿ ರಾಜ್ಯಾದ್ಯಂತ ಜನಾಂದೋಲನ ಧರಣಿ, ಪ್ರತಿಭಟನೆ, ಪತ್ರಿಕಾಗೋಷ್ಠಿ, ವಿಚಾರ ಸಂಕಿರಣ, ಟ್ವಿಟ್ಟರ್ ಅಭಿಯಾನ

ಅಕ್ಟೋಬರ್ 9 ರಿಂದ 13 ರ ವರೆಗೆ

05/10/2023
05/10/2023

ನ್ಯೂಸ್‌ಕ್ಲಿಕ್ ಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಬಂಧನವು ಸತ್ಯವನ್ನು ಮಾತನಾಡುವ ಮತ್ತು ಪ್ರಶ್ನಿಸುವವರನ್ನು ಹತ್ತಿಕ್ಕುವ ಮೋದಿ ಸರ್ಕಾರದ ಪ್ರಯತ್ನ ನೀಚತನದ ಪರಮಾವಧಿಯಾಗಿದೆ.
ಈ ಮೂಲಕ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ.

~ರಿಯಾಝ್ ಕಡಂಬು,
ರಾಜ್ಯ ಮಾಧ್ಯಮ ಉಸ್ತುವಾರಿ, ಎಸ್‌ಡಿಪಿಐ ಕರ್ನಾಟಕ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕರ್ನಾಟಕ

30/09/2023

Azad Circle Bypass Shimoga.

Address


Website

Alerts

Be the first to know and let us send you an email when Right to Speak HUBLI posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share