P.B.Rai Indian citizen socialwork message

  • Home
  • P.B.Rai Indian citizen socialwork message

P.B.Rai Indian citizen socialwork message persons change in the world

17/09/2023

ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ನಲ್ಲಿ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ವರ್ಕಿನಲ್ಲಿ ಜನರ ಬದಲಾವಣೆಗೆ ಘೋಷಣಾ ವಿಧಾನಗಳು.
1 ಪರಿಸರದ ರಕ್ಷಣೆ ಮತ್ತು ಪರಿಸರದ ಸ್ವಚ್ಛತೆ.
2 ರೈತರ ,ಕಾರ್ಮಿಕರ, ಜನಸಾಮಾನ್ಯರ, ಯಂತ್ರೋಪಕರಣಗಳ ಮತ್ತು ಶಿಕ್ಷಣ, ಆರೋಗ್ಯ ಕೆಲಸ ಕಾರ್ಯಗಳಿಗೆ ಬೆಂಬಲ ಘೋಷಿಸುವುದು.
3 ವಾಹನ ಚಲಾವಣೆಯಲ್ಲಿ ಜಾಗೃತೆ ವಹಿಸಿಕೊಳ್ಳುವುದು ನಿಯಮಗಳನ್ನು ಸರಿಯಾಗಿ ಪಾಲಿಸುವುದು.
4 ಸರ್ವ ಒಳ್ಳೆಯ ಕೆಲಸ ಕಾರ್ಯಗಳಿಗೆ ಜನರ ಉಚಿತ ಬೆಂಬಲ ಮತ್ತು ಉಚಿತ ಕೆಲಸ ಕಾರ್ಯಗಳು ಮಾಡುವ ಬೆಂಬಲ ಸಹಾಯವನ್ನು ಜನರು ಮಾಡಬೇಕು.
5 ಜನರ ಒಂಟಿ ಜೀವನ ಸಮಾಜದ ಉತ್ತಮ ನಿಯಮ.
6 ಜನರು ಯಾರ ಜೊತೆ ಕಾಳಜಿಯ ಜೀವನವನ್ನು ನಡೆಸಬೇಕು.
1 ಮಕ್ಕಳ ಜೊತೆ, ವೃದ್ಧರ ಜೊತೆ, ಅಂಗವಿಕಲರ ಜೊತೆ, ಅನಾರೋಗ್ಯದಿಂದ ಕೂಡಿದ ವ್ಯಕ್ತಿಗಳ ಜೊತೆ ಪ್ರೀತಿಯ ಮತ್ತು ಕಾಳಜಿಯ ಜೀವನವನ್ನು ನಡೆಸಬೇಕು. ಜನರು ಕಷ್ಟ ಕಾರ್ಪಣ್ಯಗಳಿಗೆ ಯಾವತ್ತೂ ಸಹಾಯದ ಮನೋಭಾವ ಉಚಿತವಾಗಿ ಪ್ರತಿಯೊಬ್ಬರಲ್ಲೂ ಇರಬೇಕು.
7 ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡುವುದರಿಂದ ಪ್ರತಿಯೊಬ್ಬರ ಜೀವನದಲ್ಲಿ ಹರುಷದ ಸಾರ್ಥಕ ಮನೋಭಾವವನ್ನು ನಾವು ಕಾಣಬಹುದು.
8 ಮೊದಲು ಸ್ವಾರ್ಥ ದುರಾಸೆಯನ್ನು ತ್ಯಜಿಸಿ ಸರ್ವ ಕಾರ್ಯಗಳನ್ನು ಸರ್ವರ ಸಂತೋಷಕ್ಕಾಗಿ ಮಾಡುವುದರಿಂದ ಸರ್ವರ ಯಶಸ್ಸನ್ನು ಕಾಣಬಹುದು.

15/08/2023

77ನೇ ಸ್ವಾತಂತ್ರ್ಯೋತ್ಸವದ ಸರ್ವ ಜನರಿಗೂ ಶುಭಾಶಯಗಳು. ಸ್ವತಂತ್ರ ಮತ್ತು ಸ್ವಾತಂತ್ರ್ಯೋತ್ಸವದ ವ್ಯತ್ಯಾಸವನ್ನು ನಾವು ಮೊದಲು ಕಾಣಬೇಕು. ಸ್ವತಂತ್ರ ಅಂದರೆ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಹೇಳುತ್ತದೆ ಸ್ವಾತಂತ್ರ್ಯೋತ್ಸವ ಅಂದರೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆಯ ದಿನ ಎಂದು ಹೇಳಲಾಗುತ್ತದೆ.
ವ್ಯಕ್ತಿ ಮತ್ತು ವ್ಯಕ್ತಿತ್ವ ಜನರಲ್ಲಿ ಯಾವ ರೀತಿ ಬದಲಾವಣೆ ಆಗಿದೆ ಸ್ವಾತಂತ್ರ್ಯೋತ್ಸವ ಆಚರಿಸಿದ ನಂತರ ಮೊದಲನೆಯದಾಗಿ
1. ಏಕಾಂಗಿ ಜೀವನ ಜನರ ಬದಲಾವಣೆಯಾಗಿದೆ.
2 ಅನಾರೋಗ್ಯಗಳು ಹೆಚ್ಚಾಗಿವೆ.
3 ಜನರ ವರ್ತನೆಗಳು ಕ್ರೂರ ಮತ್ತು ಭ್ರಷ್ಟಾಚಾರದಿಂದ ಕೂಡಿದೆ.
4 ಶಿಕ್ಷಣ ಉದ್ಯೋಗ ವ್ಯಕ್ತಿ ವ್ಯಕ್ತಿತ್ವದಲ್ಲಿ ಅನೇಕ ರೀತಿಯ ಬದಲಾವಣೆಯನ್ನು ಜನರಲ್ಲಿ ಕಾಣಬಹುದು.
5 ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳಿದ್ದರೂ ಜನರು ಸ್ವತಂತ್ರವಾಗಿ ನೆಮ್ಮದಿಯಾಗಿ ಬಾಳುತ್ತಾರೆ.
6 ಜನರ ಯಶಸ್ಸು ಸಮಾಜದ ಯಶಸ್ಸು. ಸಮಾಜದ ಜನರಲ್ಲಿ ಅನೇಕ ರೀತಿಯ ಕಷ್ಟಕಾರ್ಪಣ್ಯಗಳನ್ನು ನಾವು ಕಾಣಬಹುದು.
7 ಜನರ ಹೋರಾಟ ಯಾವಾಗಲೂ ದೇಶದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಹೋರಾಟವಾಗಿ ಸಮಾಜದಲ್ಲಿ ಅನೇಕ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರೇರಣೆ ಮತ್ತು ಸಹಾಯ ವಾಗಿರಬೇಕು.
8 ಸ್ವತಂತ್ರವಾಗಿ ಒಂಟಿಯಾಗಿ ಸರ್ವರ ಕಾರ್ಯಗಳು ಯಶಸ್ಸನ್ನು ಸಂತೋಷವನ್ನು ಕಂಡರೆ ಸಮಾಜದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಮತ್ತು ಸ್ವತಂತ್ರಕ್ಕೆ ಆಗ ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಒಂದು ಜಯ ಸಿಕ್ಕಿದ ಹಾಗೆ.

01/08/2023

ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕಿನ ಶಿಕ್ಷಣ ವ್ಯವಸ್ಥೆ.
1 ಮಕ್ಕಳ ಮತ್ತು ಜನಗಳ ಪರಿವರ್ತನೆಯ ವ್ಯವಸ್ಥೆಯನ್ನು ಶಿಕ್ಷಣದಲ್ಲಿ ನಾವು ಪರಿಪೂರ್ಣವಾಗಿ ಕೊಡಲಾಗುವುದು.
2 ಆಟ ಪಾಠಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಬದಲಾವಣೆಯನ್ನು ಜನಗಳ ಬದಲಾವಣೆಯನ್ನು ನಾವು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣಬಹುದು.
3 ಉದ್ಯೋಗ ಮತ್ತು ಸಾಧನೆಯ ಯಶಸ್ಸನ್ನು ಶಿಕ್ಷಣದಲ್ಲಿ ಕಾಣಬೇಕು.
4 ಜನರಲ್ಲಿರುವ ಅತಿಯಾದ ದುರಾಸೆಗಳು ಕೆಟ್ಟ ವರ್ತನೆಗಳು . ಶಿಕ್ಷಣದ ಮೂಲಕ ಪರಿಹಾರ ಮಾಡಬಹುದು.
5 ಆರೋಗ್ಯವನ್ನು ಮತ್ತು ಮನಸ್ಸನ್ನು ಏಕಾಗ್ರತೆಯಿಂದ ಕಾಪಾಡಿಕೊಳ್ಳುವುದು ಶಿಕ್ಷಣದ ಮೂಲ ಉದ್ದೇಶವಾಗಿರಬೇಕು.
6 ಒಬ್ಬ ವ್ಯಕ್ತಿಯ ಜೀವನದ ಕರ್ತವ್ಯವನ್ನು ನ್ಯಾಯ, ಸತ್ಯ, ಪ್ರೀತಿ ವಿಶ್ವಾಸ ನಂಬಿಕೆ ಅನುಕಂಪ ಕರುಣೆ ಮತ್ತು ಮಾನ ,ಸನ್ಮಾನ ,ಧರ್ಮದ ಮೂಲಕ ಶಿಕ್ಷಣವನ್ನ ಪರಿವರ್ತಿಸಬೇಕು.
7 ಪ್ರತಿಯೊಬ್ಬರ ಜೀವನದಲ್ಲಿ ಸರ್ವ ಕೆಲಸ ಕಾರ್ಯಗಳು ಸಂತೋಷವಾಗಿ ಜೀವನ ನಡೆಯುವಂತಹ ಶಿಕ್ಷಣ ವ್ಯವಸ್ಥೆ ಇರಬೇಕು. ಆಗ ಸಮಾಜದ ಬದಲಾವಣೆ ಮತ್ತು ಜನಗಳ ಬದಲಾವಣೆ ಸುಲಭ ಸಾಧ್ಯ.
8 ಶಿಕ್ಷಣ ವ್ಯವಸ್ಥೆಯಲ್ಲಿ ಹೆತ್ತವರ ಮತ್ತು ಗುರುಗಳ ಪಾತ್ರ ಮಕ್ಕಳ ಭವಿಷ್ಯದ ಮತ್ತು ಜನಗಳ ಭವಿಷ್ಯವನ್ನು ಬದಲಾಯಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
9 ಮಕ್ಕಳ ಮತ್ತು ಜನಗಳ ಜೀವನ ಶೈಲಿ ಒಂಟಿಯಾಗಿ ಮತ್ತು ಸನ್ಯಾಸಿ ಮನೋಭಾವದಿಂದ ಕೂಡಿರಬೇಕು.

20/07/2023

ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ರೈತರ ಮತ್ತು ಕಾರ್ಮಿಕರ ಬಗ್ಗೆ ಒಂದು ವಿಶೇಷ ವರದಿ.
ನಮ್ಮ ದೇಶದಲ್ಲಿ ರೈತರಿಗೆ ಪ್ರತಿಯೊಬ್ಬ ಜನರು ಸಹಾಯ ಮತ್ತು ಸಹಕಾರವನ್ನು ಕೊಡಬೇಕು. ನಮ್ಮ ದೇಶದಲ್ಲಿ ರೈತರು ಅಭಿವೃದ್ಧಿ ಹೊಂದಿದರೆ ಜನರ ಅಭಿವೃದ್ಧಿ ಸುಲಭ ಸಾಧ್ಯ.
ರೈತರನ್ನು ಮತ್ತು ಕಾರ್ಮಿಕರನ್ನು ಜೊತೆಯಾಗಿ ಕರೆದುಕೊಂಡು ಹೋಗಿ ಸಮಾಜದಲ್ಲಿ ಪ್ರತಿಯೊಬ್ಬರು ಬದುಕಿದರೆ ಸಮಾಜದ ಏಳಿಗೆ ಮತ್ತು ಜನರ ಏಳಿಗೆ ನಾವು ಕಾಣಬಹುದು. ರೈತರು ಬೆಳೆಯುವ ಪ್ರತಿಯೊಂದು ಬೆಳೆಯು ಪ್ರತಿಯೊಂದು ವ್ಯಕ್ತಿಯ ಜೀವನದ ಹಾದಿ. ರೈತರು ಅತ್ಯಧಿಕವಾಗಿ ಅಕ್ಕಿ ,ದ್ವಿದಳ ಧಾನ್ಯ ತರಕಾರಿಗಳನ್ನು ಬೆಳೆಯಬೇಕು. ರೈತರಿಂದ ದೇಶದ ಜನರ ಆರೋಗ್ಯ ಉತ್ತಮ ಗೊಳ್ಳುವುದು. ಅತ್ಯಧಿಕ ವಾಗಿ ರೈತರು ಸಾಕು ಪ್ರಾಣಿಗಳನ್ನು ಸಾಕುವುದರಿಂದ ಪ್ರಾಣಿಗಳ ರಕ್ಷಣೆ ಮತ್ತು ಜನಗಳ ರಕ್ಷಣೆ ಆಗುತ್ತದೆ. ರೈತರನ್ನು ಬೆಳೆಸೋಣ ಜಗವನ್ನು ಬೆಳೆಸೋಣ ಪ್ರತಿಯೊಬ್ಬರು ರೈತರ ಮತ್ತು ಕಾರ್ಮಿಕರ ಬಂಧುಗಳಾಗಿ ಬಾಳೋಣ.

17/07/2023

ಆಟಿ ಅಮಾವಾಸ್ಯೆ ತುಳುನಾಡಿ ನ ಬಂಟ ಸಮುದಾಯದ ಪುಣ್ಯ ತಿಂಗಳು ಯಾಕೆಂದರೆ ಗುರು ಹಿರಿಯರನ್ನು ಗೌರವಿಸುವ ತಿಂಗಳು ಆಟಿ ಅಮಾವಾಸ್ಯೆಯ ತಿಂಗಳು. ಸರ್ವರಿಗೂ ಆಟಿ ಅಮಾವಾಸ್ಯೆ ಶುಭಾಶಯಗಳು.

15/07/2023

GS coin ಮತ್ತು LS Coin ಪುರುಷರು ಮತ್ತು ಮಹಿಳೆಯರು ಒಂದನ್ನು ಬ್ಯಾಂಡ್ ಮತ್ತು ಸಿಂಬಲ್ ಅನ್ನು ಉಪಯೋಗಿಸಿದರೆ ನೀವು ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕಿನ ಪ್ರತಿಯೊಬ್ಬ ಪುರುಷರು ಮತ್ತು ಮಹಿಳೆಯರು ಸದಸ್ಯರಾಗುತ್ತಾರೆ.

07/07/2023

ಪಿ .ಬಿ ರೈ ಇಂಡಿಯನ್ ಸಿಟಿಜನ್ ಸೋಶಿಯಲ್ ವರ್ಕ್ ಮೆಸೇಜ್ ನಲ್ಲಿ ಹಾಗೂ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ಸಮಾಜದಲ್ಲಿ ಪ್ರತಿಯೊಬ್ಬ ಜನರ ಬಾಂಧವ್ಯ ಹೇಗಿರಬೇಕೆಂದು ಪ್ರತಿಯೊಬ್ಬರು ಚಿಂತಿಸಬೇಕು.
1 ಪುರುಷರು ಮತ್ತು ಮಹಿಳೆಯರು ಎರಡು ಬ್ಯಾಂಡ್ ಅನ್ನು ಧರಿಸಬೇಕು. ಅದರ ಹೆಸರು ಬಿಎಫ್ ಬ್ಯಾಂಡ್ ಮತ್ತು ಎಸ್ ಎಫ್ ಬ್ಯಾಂಡ್. ಅದರ ಬಣ್ಣ ಐದು ಯಾವುದೆಂದರೆ ಅದರಲ್ಲಿ ಮೂರು ಬಣ್ಣ ಬಿಳಿ ಹಸಿರು ಕೇಸರಿ ಶಾಂತಿ ಯ ಶುಭಸೂಚಕ ಬಾಂಧವ್ಯ ಬ್ಯಾಂಡಿನ ಮೇಲ್ಭಾಗ. ಬ್ಯಾಂಡಿನ ಬಣ್ಣ ಹಳದಿ ಮತ್ತು ಕೆಂಪು ಸ್ನೇಹ ಪ್ರೀತಿಯ ಬಾಂಧವ್ಯ. ಪುರುಷರು ಬಿ ಎಫ್ ಬ್ಯಾಂಡ್ ಅನ್ನು ಧರಿಸಬೇಕು ಮಹಿಳೆಯರು ಎಸ್ಎಫ್ ಬ್ಯಾಂಡನ್ನು ಧರಿಸಬೇಕು. ಯಾಕೆಂದರೆ ಪುರುಷರು ಬಿ ಎಫ್ ಬ್ಯಾಂಡ್ ಎಂದರೆ ಸೋದರ ಸ್ನೇಹ ಬಾಂಧವ್ಯವನ್ನು ಹೊಂದಿರುವವರು. ಮಹಿಳೆಯರು ಎಸ್ಎಫ್ ಬ್ಯಾಂಡ್ ಎಂದರೆ ಸಹೋದರಿ ಸ್ನೇಹ ಬಾಂಧವ್ಯವನ್ನು ಹೊಂದಿರುವವರೆಂದು ಹೇಳಲಾಗುವುದು. ಪತಿಯನ್ನು ಬಿಟ್ಟು ಸತಿಯನ್ನು ಬಿಟ್ಟು ಬೇರೆ ಎಲ್ಲರಿಗೂ ಕಟ್ಟಬಹುದು. ಎಲ್ಲರೂ ಈ ಬ್ಯಾಂಡ್ ಅನ್ನು ಧರಿಸಬಹುದು. ಪುರುಷರು ಮಹಿಳೆಯರಿಗೆ ಮಹಿಳೆಯರು ಪುರುಷರಿಗೆ ಕಟ್ಟಬೇಕು. ಇದು ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ಬ್ಯಾಂಡ್. ಬ್ಯಾಂಡ್ ಎಂದರೆ ರಕ್ಷಾ ಕವಚ ಎಂದರ್ಥ ಪುರುಷರು ಮತ್ತು ಮಹಿಳೆಯರ ಬಾಂಧವ್ಯದ ರಕ್ಷಾ ಕವಚವಾಗಿದೆ.
2 ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ಎರಡು ಸಿಂಬಲ್ ಗಳಿವೆ . ಅವುಗಳು ಯಾವುದೆಂದರೆ
1 ಪಿ ಎಸ್ ಸಿಂಬಲ್ ಎಂದರೆ ಪರ್ಮನೆಂಟ್ ಸೋಶಿಯಲ್ ವರ್ಕ್ ಸಿಂಬಲ್. ಇದನ್ನು ಇನ್ನೊಂದು ಅರ್ಥದಲ್ಲಿ ಶಾಶ್ವತ ಸಮಾಜ ಸೇವೆ ಎಂದು ಹೇಳುತ್ತೇವೆ. ಪಿ ಎಸ್ ಸಿಂಬಲ್ ನ ಬಣ್ಣ ಹಳದಿ.
2 ಬಿ ಎಸ್ ಸಿಂಬಲ್ ಎಂದರೆ ಬ್ಯಾಚುಲರ್ ಸೋಶಿಯಲ್ ವರ್ಕ್ ಸಿಂಬಲ್ . ಇದನ್ನು ಇನ್ನೊಂದು ಅರ್ಥದಲ್ಲಿ ಒಂಟಿ ಸಮಾಜ ಸೇವೆ ಎಂದು ಹೇಳುತ್ತೇವೆ . ಬಿಎಸ್ ಸಿಂಬಲ್ ನ ಬಣ್ಣ ಕೆಂಪು.
3 ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನ ಎರಡು ನಾಣ್ಯಗಳು.
1 ಜಿಎಸ್ ನಾಣ್ಯ ಎಂದರೆ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ನಾಣ್ಯ.
2 ಎಲ್ ಎಸ್ ನಾಣ್ಯ ಎಂದರೆ ಲೇಡೀಸ್ ಸೋಶಿಯಲ್ ವರ್ಕ್ ನಾಣ್ಯ. ಪುರುಷರು ಜಿ ಎಸ್ ನಾಣ್ಯವನ್ನು ಮತ್ತು ಮಹಿಳೆಯರು ಎಲ್ ಎಸ್ ನಾಣ್ಯವನ್ನು ಉಪಯೋಗಿಸಬೇಕು . ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ಜಾರಿಗೆ ಬಂದ ನಂತರ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಸಮಾನವಾಗಿ ನಿಗದಿಪಡಿಸಲಾಗುವುದು.
ಇದನ್ನು ಪ್ರತಿಯೊಬ್ಬರು ಅವರವರೇ ಧರಿಸಿಕೊಳ್ಳಬೇಕು. ಯಾವುದನ್ ಅಂದರೆ ಬ್ಯಾಂಡ್ ನಲ್ಲಿ ಪುರುಷರು ಬಿ ಎಫ್ ಮತ್ತು ಮಹಿಳೆಯರು ಎಸ್ ಎಫ್ ಎಂದು ಬರೆದಿರಬೇಕು , ಸಿಂಬಲ್ ನಲ್ಲಿ ಪುರುಷರು ಪಿ ಎಸ್ ಹಳದಿ ಬಣ್ಣ ದಲ್ಲಿ ಮತ್ತು ಮಹಿಳೆಯರು ಬಿ ಎಸ್ ಕೆಂಪು ಬಣ್ಣ ದಲ್ಲಿ ಬರೆದಿರಬೇಕು ,
ನಾಣ್ಯವನ್ನು ನಾಣ್ಯದ ಬಣ್ಣ ಗೋಲ್ಡನ್ ಕಲರ್. ಅದರಲ್ಲಿ ಪುರುಷರು G S Coin ಅಂತಲೂ ಮಹಿಳೆಯರು LSCoin ಅಂತಲೂ ಬರೆದಿರಬೇಕು. ಪ್ರತಿಯೊಬ್ಬರೂ ಒಂದೇ coinನನ್ನು ಉಪಯೋಗಿಸಬೇಕು.
4 ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನವರು ಧರಿಸಬೇಕಾದ ಬಟ್ಟೆಗಳು. ಪುರುಷರು ಮತ್ತು ಮಹಿಳೆಯರು ಬಿಳಿ ಮತ್ತು ಹಳದಿ ಬಣ್ಣದಿಂದ ಕೂಡಿರಬೇಕು.

29/06/2023

ಪೂಜ್ಯ ತಂದೆಯವರಾ ದ ರಾಧಾಕೃಷ್ಣ ರೈ ಯವರ ನೆನಪು ನಾಲ್ಕನೇ ವರ್ಷದ ಪುಣ್ಯತಿಥಿಯ ನೆನಪು ಸದಾ ನಿಮ್ಮ ಪ್ರೀತಿ ನಮ್ಮೊಂದಿಗೆ ಚಿರಂಜೀವಿಯಾಗಿದೆ. ಪಿಬಿ ರೈ ಫ್ಯಾಮಿಲಿ ಸದಸ್ಯರಿಂದ ನೆನಪಿನೊಂದಿಗೆ ಚಿರಕಾಲ.

21/06/2023

ಯೋಗ ದಿನದ ಸಂದೇಶ.
ಜೆಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ಯೋಗ ದಿನದ ಆಚರಣೆ.
ಯೋಗ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಯೋಗಾಭ್ಯಾಸ. ಯೋಗದಲ್ಲಿ ಎರಡು ವಿಧಾನ ಒಂದು ಯೋಗಾಧ್ಯಾನ ಮತ್ತೊಂದು ಜಿಮ್ ವರ್ಕ್ . ಯೋಗದಿಂದ ಆರೋಗ್ಯಕ್ಕೆ ವಿಶ್ರಾಂತಿ ಲಭಿಸುತ್ತದೆ. ಜಿಮ್ ವರ್ಕ್ ಔಟ್ಟಿನಿಂದ ಆರೋಗ್ಯಕ್ಕೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ .
ಜಿಮ್ ನಿಂದ ಆರೋಗ್ಯದ ಸಾಮರ್ಥ್ಯವನ್ನು ನಾವು ಕಾಣಬಹುದು. ಯೋಗದಿಂದ ಆರೋಗ್ಯದ ಶಾಂತಿ ನೆಮ್ಮದಿಯನ್ನು ಕಾಣಬಹುದು.
ದೈನಂದಿನ ಕೆಲಸಗಳನ್ನು ಮಾಡುವುದರಿಂದ ಯೋಗ ಮಾಡುವ ಅಗತ್ಯ ಇಲ್ಲ ಆರೋಗ್ಯವಂತ ವ್ಯಕ್ತಿಗಳು ಮತ್ತು ಅನಾರೋಗ್ಯ ವ್ಯಕ್ತಿಗಳು ಯೋಗ ಮಾಡಿದರೆ ಆರೋಗ್ಯಕ್ಕೆ ವಿಶ್ರಾಂತಿ ಲಭಿಸುತ್ತದೆ . ಜಿಮ್ ವರ್ಕ್ ಔಟ್ ಮಾಡುವವರು ಯಾವಾಗಲೂ ಆರೋಗ್ಯವಂತರಾಗಿದ್ದರು ವರ್ಕೌಂಟಿನಿಂದ ಅನಾರೋಗ್ಯ ಬರುವ ಸಾಧ್ಯತೆ ಜಾಸ್ತಿ ಇದೆ. ಜಿಮ್ ಮಾಡುವುದಕ್ಕಿಂತ ಹೆಚ್ಚಾಗಿ ಯೋಗ ಮಾಡುವುದು ಉತ್ತಮ.

18/06/2023

Happy fathers day Best wishes for all lovely wishes P.B.Rai family members.

28/05/2023

ದೇಶದ ಜನರಿಗೆ ಕಾಡುವ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ವಿಧಾನಗಳು.
1. ತಿನ್ನುವ ಆಹಾರ ಸ್ವಚ್ಛವಾಗಿರಬೇಕು.
2. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು.
3. ಕಾರ್ಖಾನೆಗಳಿಂದ ಹೋಗುವ ಕಲುಷಿತ ಕೊಳಕು ನೀರುಗಳು ಹೋಗುವ ಸ್ಥಳಗಳು ಸ್ವಚ್ಛವಾದ ಪರಿಸರ ಇರುವ ಹಾಗೆ ನೋಡಿಕೊಳ್ಳಬೇಕು.
4. ಬಟ್ಟೆ ಬರೆಗಳ ಬಗ್ಗೆ ಕಠಿಣವಾದ ಸ್ವಚ್ಛವಾದ ತೀರ್ಮಾನವನ್ನು ಜನರಲ್ಲಿ ಮೂಡಿಸುವ ಆಂದೋಲನವನ್ನು ಈ ದೇಶದ ಜನರು ಮಾಡಬೇಕು.
5 ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮಾನವೀಯ ಗುಣವನ್ನು ಬೆಳೆಸುವ ವ್ಯಕ್ತಿತ್ವವನ್ನು ಜನರು ಬೆಳೆಸಿಕೊಳ್ಳಬೇಕು.
6 ಪ್ರತಿಯೊಂದು ಕರ್ತವ್ಯದಲ್ಲೂ ಅನೇಕ ರೀತಿಯ ಸಮಸ್ಯೆಗಳನ್ನು ಬರುವಾಗ ಜನರು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರಬೇಕು
7. ಆಸ್ಪತ್ರೆಯ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಜನರಿಗೆ ರೋಗ ರುಜಿನಗಳು ಬರದ ಹಾಗೆ ಕಾಪಾಡಿಕೊಳ್ಳಬೇಕು.
8. ಪೇಟೆಗಳ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ಜನರು ತಿನ್ನುವ ಆಹಾರದಲ್ಲಿ ರೋಗ ರುಜಿನಗಳು ಬರುವುದರಿಂದ ಜನರ ಆರೋಗ್ಯವು ಕೆಡುವುದು.
9 ಮನೆಗಳ ಸುತ್ತಮುತ್ತ ಮತ್ತು ಮನೆಗಳಲ್ಲಿ ತಿನ್ನುವ ಆಹಾರಗಳು ಸ್ವಚ್ಛವಾಗಿರಬೇಕು.
10 ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರೋಗ್ಯವನ್ನು ಮತ್ತು ಕರ್ತವ್ಯವನ್ನು ಸರಿಯಾಗಿ ಮಾಡುವುದರಿಂದ ಸಮಾಜದಲ್ಲಿ ಬರುವ ಅನೇಕ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಬಹುದು.
11 ಪ್ರತಿಯೊಬ್ಬ ವ್ಯಕ್ತಿಯ ವರ್ತನೆಗಳು ನಡುವಳಿಕೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವ ರೀತಿ ಪ್ರೀತಿಸುವ ರೀತಿ ಇರಬೇಕು.

12 ಒಂಟಿಯಾಗಿ ಬದುಕಿದರು ಸರ್ವರ ನೋವಿಗೆ ಸ್ಪಂದಿಸುವ ಸರ್ವ ಮನೋಭಾವ ಸರ್ವರಿಗೂ ಇರಬೇಕು.
13. ಒಬ್ಬ ವ್ಯಕ್ತಿಯ ಗೆಲುವು ಯಶಸ್ವಿನಿಂದ ಮಾತ್ರ ಆಗದು ಕರ್ತವ್ಯದಿಂದಲೂ ಒಬ್ಬ ವ್ಯಕ್ತಿ ಗೆಲ್ಲಬಹುದು.
14 ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆಗಳು ಬರುವುದು ಅನಿವಾರ್ಯ ಸರ್ವ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿಕೊಳ್ಳಬೇಕು. ಪ್ರತಿಯೊಂದು ಕೆಲಸಕ್ಕೂ ಒಗ್ಗಟ್ಟು ಇರಬೇಕು . ಸಮಸ್ಯೆಗಳು ಸುಲಭ ರೀತಿಯಲ್ಲಿ ಪರಿಹರಿಸಲು ಸಾಧ್ಯ.
15. ಶಿಕ್ಷಣ ಉದ್ಯೋಗ ಕರ್ತವ್ಯ ಮತ್ತು ಆರೋಗ್ಯ ಮನುಷ್ಯನ ಒಗ್ಗಟ್ಟಿನ ಮಂತ್ರ.
16 ಸರ್ವ ಸಮಸ್ಯೆಗಳನ್ನು ಪರಿಹರಿಸಲು ಶಾಂತಿ ನೆಮ್ಮದಿ ಕರುಣೆ ಅನುಕಂಪ ಮನುಷ್ಯನ ಮೂಲ ಮಂತ್ರವಾಗಿರಬೇಕು. ಸರ್ವ ಜನರ ಕೆಟ್ಟ ವರ್ತನೆಯನ್ನು ತ್ಯಜಿಸಲು ಸರ್ವ ಜನಗಳು ಸನ್ಯಾಸಿ ಮನೋಭಾವ ವನ್ನು ಹೊಂದಿರಬೇಕು.

21/05/2023

ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡುವ ವಿಧಾನಗಳು. ಮನುಷ್ಯನು ಜೀವಿಸಬೇಕಾದರೆ ಪರಿಸರದಲ್ಲಿ ನಾವು ಕಾಣುವ ನಿಮ್ಮ ಆರೋಗ್ಯವನ್ನು ಕಾಪಾಡುವ ಎರಡು ವಿಧಾನ ಸಸ್ಯಗಳು ಮತ್ತು ಪ್ರಾಣಿಗಳು. ಸಸ್ಯಗಳಲ್ಲಿ ದೈವಿ ಗುಣ ಗಳನ್ನು ನಾವು ಕಾಣುತ್ತೇವೆ . ಪ್ರಾಣಿಗಳಲ್ಲಿ ಕ್ರೂರ ಗುಣವನ್ನು ಕಾಣುತ್ತೇವೆ. ಮನುಷ್ಯರು ತಿನ್ನುವ ಆಹಾರದಲ್ಲಿ ಎರಡು ವಿಧಾನ ವನ್ನು ಕಾಣುತ್ತೇವೆ . ಮೊದಲನೆಯದ್ದು ಸಸ್ಯಹಾರಿ ಮತ್ತು ಮಾಂಸಹಾರಿ. ಸಸ್ಯಹಾರಿ ಎಂದರೆ ತರಕಾರಿ ಮತ್ತು ಮಾಂಸಹಾರಿ ಎಂದರೆ ಪ್ರಾಣಿಗಳ ಮಾಂಸ. ತರಕಾರಿಗಳಿಗೆ ಕೆಮಿಕಲ್ ಯುಕ್ತ ಗೊಬ್ಬರ ಹಾಕುವುದರಿಂದ ಜನರು ತಿನ್ನುವುದರಿಂದ ರೋಗಗಳು ಬರುವುದರಿಂದ ಸಾವಯವ ಗೊಬ್ಬರಗಳನ್ನು ಹಾಕಿ ತರಕಾರಿಗಳನ್ನು ತಿನ್ನಬೇಕು. ಮಾಂಸಹಾರ ತಿನ್ನುವವರು ರೋಗವಿಲ್ಲದ ಮಾಂಸವನ್ನು ತಿನ್ನಬೇಕು. ಇಲ್ಲದಿದ್ದರೆ ಮಾಂಸದಿಂದ ನಿಮ್ಮ ಆರೋಗ್ಯವು ಕೆಡಬಹುದು. ಜನರು ದೀರ್ಘಾಯುಷ್ಯವಾಗಿ ಬಾಳಬೇಕಾದರೆ ನಿಮ್ಮ ಆರೋಗ್ಯವನ್ನು ಕಾಪಾಡುವ ಆಹಾರಗಳು ಸೇವಿಸಬೇಕು. ಯಾವುದೆಂದರೆ ಪ್ರತಿದಿನವೂ ಎರಡು ಲೀಟರ್ ಬಿಸಿ ನೀರು ಕುಡಿಯಬೇಕು. ಎರಡು ಲೀಟರ್ ಜ್ಯೂಸ್ ಕುಡಿಯಬೇಕು. ಎರಡು ಕಾಫಿ ಎರಡು ಹೊತ್ತು ತಿಂಡಿ ಎರಡು ಹೊತ್ತು ಊಟ ಆಯುರ್ವೇದಿಕ್ ಕಷಾಯ ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ತರಕಾರಿ ತಿನ್ನುವುದರಿಂದ ಮತ್ತು ಹಾಲು ಕುಡಿಯುವುದರಿಂದ ಪೋಷಕಾಂಶ ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಕಣ್ಣು ತಂಪಾಗಿರಬೇಕಾದರೆ ಮತ್ತು ತಲೆ ತಂಪಾಗಿ ಇರಬೇಕಾದರೆ ಪ್ರತಿಯೊಬ್ಬರೂ ತಣ್ಣೀರಲ್ಲಿ ಸ್ನಾನ ಮಾಡಬೇಕು. ಮನುಷ್ಯರು ತಿನ್ನುವ ಆಹಾರವನ್ನು ತಂಪಾದ ಪರಿಸರದಲ್ಲಿ ಪರಿಶುದ್ಧ ಮನಸ್ಸಿನಿಂದ ಆಹಾರವನ್ನು ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿಯೊಬ್ಬರೂ ನೋಡುವ ದೃಷ್ಟಿ ಚೆನ್ನಾಗಿದ್ದರೆ ಪರಿಸರವು ಆರೋಗ್ಯವು ಚೆನ್ನಾಗಿರುತ್ತದೆ. ನಿಮ್ಮ ಜೀವನ ನಿಮ್ಮ ಪರಿಸರ ನಿಮ್ಮ ಆಹಾರ ನಿಮ್ಮ ಆರೋಗ್ಯ .

08/05/2023

ದೇಶದ ಜನರಲ್ಲಿರುವ ಭ್ರಷ್ಟಾಚಾರವನ್ನು ಹೇಗೆ ಬ್ಯಾನ್ ಮಾಡುವುದು.
1 ಜನರು ಒಳ್ಳೆಯದರ ಬಗ್ಗೆ ಯೋಚಿಸಬೇಕು. ಒಂದು ಕ್ಷಣ ಕೂಡ ಕೆಟ್ಟದರ ಬಗ್ಗೆ ಚಿಂತಿಸಬಾರದು.
2 ಜನರು ಕರ್ತವ್ಯವನ್ನು ನಿಯತ್ತಾಗಿ ಮಾಡಬೇಕು. ಕುತಂತ್ರವನ್ನು ಮಾಡಬಾರದು.
3 ಜನರು ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯನ್ನು ಕೊಡಬೇಕು .ಸ್ವಾರ್ಥದ ಜೀವನವನ್ನು ಮಾಡಬಾರದು.
4 ಜನರು ಸಮಾಜದಲ್ಲಿ ಒಂಟಿಯಾಗಿ ಬದುಕಿದರು ಕರ್ತವ್ಯದಲ್ಲಿ ಯಾವುದೇ ಲೋಪ ದೋಷ ಇರಬಾರದು.
5 ಜನರ ಮನೋಭಾವನೆಯಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುವುದು ಇದನ್ನು ಮೊದಲು ತಡೆಹಿಡಿಯಬೇಕು .ಇದಕ್ಕೆ ಸುಲಭ ಉಪಾಯ ಜನರ ಬದಲಾವಣೆಯಿಂದ ಮಾತ್ರ ಸಾಧ್ಯ.
6 ಜನರೂ ಪದವಿಗಾಗಿ ಬದುಕಬಾರದು. ಜೀವನದ ಸಾರ್ಥಕ ಸಾಧನೆಗಾಗಿ ಬದುಕಬೇಕು.
7 ಜನರಲ್ಲಿರುವ ಮೋಸ ಕಪಟ ವಂಚನೆ ಅಹಂಕಾರ ದ್ವೇಷ ಅಸುವೆ ಹಠ ಭ್ರಷ್ಟಾಚಾರ ಇದನ್ನು ನಿರ್ಮೂಲನೆ ಮಾಡಬೇಕು . ಆಗ ಸಮಾಜದಲ್ಲಿ ಭ್ರಷ್ಟಾಚಾರ ನಾಶವಾಗಲು ಕಾರಣವಾಗಬಹುದು.
8 ಅಧಿಕಾರಿಗಳು ಅಧಿಕಾರವನ್ನು ಜನರ ಮೇಲೆ ದುರುಪಯೋಗಪಡಿಸಬಾರದು. ಸಮಾಜ ಸೇವೆ ಒಂದು ದೇಶದ ಭದ್ರತಾ ರಕ್ಷಣೆ ಆಗಬೇಕೆ ಹೊರತು ಜನರ ಪಾಲಿನ ಭ್ರಷ್ಟಾಚಾರವಾಗಬಾರದು.
9 ಸಮಾಜ ಸೇವೆ ಜನರ ಪಾಲಿಗೆ ಶ್ರೀರಕ್ಷೆಯಾಗಿರಬೇಕು. ಸಮಾಜ ಸೇವೆ ಜನರನ್ನು ಸಂಕಷ್ಟಕ್ಕೆ ತಂದು ಅತಂತ್ರ ಪರಿಸ್ಥಿತಿ ಗೆ ತಂದು ಗೊಂದಲ ಮಾಡಬಾರದು.
10 ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿ ಸುಸಂಸ್ಕೃತನಾಗಿ ಸರ್ವರಿಗೂ ದಾರಿದೀಪವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದರೆ . ಗೆಲುವು ಸಾಧಿಸಲು ಸಾಧ್ಯ .ಸಾರ್ಥಕ ಬದುಕನ್ನು ಸರ್ವರೂ ಸಾರ್ಥಕಗೊಳಿಸಬೇಕೆಂದು ಸರ್ವರನ್ನು ವಿನಂತಿ ಮಾಡುತ್ತಾ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದರೆ . ದೇಶದ ಅಭಿವೃದ್ಧಿಯು ಜನಗಳ ಅಭಿವೃದ್ಧಿಯಾಗಲು ಸುಲಭ ಸಾಧ್ಯ .ಆಗ ಭ್ರಷ್ಟಾಚಾರ ಬ್ಯಾನ್ ಆಗಬಹುದು .
11. ಜನರು ಸಮಾಜದಲ್ಲಿ ಭ್ರಷ್ಟಾಚಾರವನ್ನು ಮಾಡಬಾರದೆಂಬ ಸಂಕಲ್ಪವನ್ನು ಮಾಡಬೇಕು. ಜನರ ಸಂಕಲ್ಪವೇ ಭ್ರಷ್ಟಾಚಾರದ ನಿರ್ಮೂಲನೆಗೆ ಮೂಲ ಕಾರಣ ಆಗಬೇಕು. ಇದರಿಂದ ಸಮಾಜದಲ್ಲಿ ಭ್ರಷ್ಟಾಚಾರ ಬ್ಯಾನ್ ಮಾಡಲು ಸುಲಭ ಸಾಧ್ಯ. ಜನರ ಬದಲಾವಣೆ ದೇಶದ ಬದಲಾವಣೆ .ಭ್ರಷ್ಟಾಚಾರದ ಬದಲಾವಣೆ ಜನರ ಬದಲಾವಣೆ. ದೇಶದ ಭ್ರಷ್ಟಾಚಾರ ನಿರ್ಮೂಲನೆ ಯಾದರೆ ಜನರ ಬದಲಾವಣೆ ಸಾರ್ಥಕ ಜೀವನ ಆಗಬಹುದು.

27/04/2023

ಸಮಾಜದಲ್ಲಿ ನಿರುದ್ಯೋಗವನ್ನು ಬ್ಯಾನ್ ಮಾಡಿ ಸರ್ವರೋ ಉದ್ಯೋಗ ವನ್ನು ಮಾಡಿ ದೇಶದಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡುವುದು ಹೇಗೆ ಒಂದು ಸುಲಭ ಉಪಾಯ ಅವರವರ ಕುಲ ಕಸುಬು ಮಾಡಿ. ಸಮಾಜದಲ್ಲಿ ನಿರುದ್ಯೋಗವನ್ನು ನಿರ್ಮೂಲನೆ ಮಾಡಿ. ಉದ್ಯೋಗ ಯಾವುದೇ ಆದರೂ ಅದರಲ್ಲಿ ತಾರತಮ್ಯತೆ ಬೇಡ. ಉತ್ತಮ ಉದ್ಯೋಗ ಜನರ ಗೆಲುವು ಮತ್ತು ಸಾಧನೆಯ ಮಾರ್ಗ. ಸಮಾಜದಲ್ಲಿ ಕಾರ್ಮಿಕರು ಸ್ವಂತ ಉದ್ಯೋಗವನ್ನು ಮಾಡುತ್ತಾರೆ. ಸಮಾಜದಲ್ಲಿ ಬೇರೆ ಬೇರೆ ಉದ್ಯೋಗವನ್ನು ಮಾಡುವವರು ಕಾರ್ಮಿಕರು ಆದಕಾರಣ ಅವರನ್ನು ಸ್ವಂತ ಉದ್ಯೋಗಿಗಳು ಎಂದು ಹೇಳುತ್ತೇವೆ. ಅನ್ನದಾದರೂ ರೈತರು. ಕರಕುಶಲ ಕೆಲಸ ಮಾಡುವವರು ಕರಕುಶಲ ವ್ಯಾಪಾರ ಮಾಡುವವರು ವ್ಯಾಪಾರಸ್ಥರು. ಪೂಜೆ ಪುರಸ್ಕಾರ ಮಾಡುವವರು ದೇವತಾ ಕಾರ್ಯ ಮಾಡುವವರು ಬ್ರಾಹ್ಮಣರು. ಕೈಗಾರಿಕಾ ಉದ್ಯಮ ಮತ್ತು ಯಂತ್ರೋಪಕರಣಗಳು ಸಮಾಜದ ಮೂಲ ಉದ್ಯೋಗ.
ದೇಶದ ಜನರಿಗೆ ಶಿಕ್ಷಣ ಯಾವ ರೀತಿ ಇರಬೇಕು. ವ್ಯಕ್ತಿ ಯು ವ್ಯಕ್ತಿತ್ವವನ್ನು ಬೆಳೆಸುವಂತಹ ಶಿಕ್ಷಣ ಇರಬೇಕು. ಜನರು ಸಾಧನೆಯನ್ನು ತೋರಿಸಬೇಕಾದರೆ ಮೊದಲು ಏನು ಮಾಡಬೇಕು. ನಿಮ್ಮ ಸಾಧನೆಯ ಬಗ್ಗೆ ನೀವು ಸಂಶೋಧನೆ ಮಾಡಬೇಕು. ಸಮಾಜದ ಜನರ ಕನಸು ನನಸಾಗಲಿ ಜನರಿಗೆ ದಾರಿದೀಪವಾಗಲಿ. ಸಮಾಜದ ಜನರಿಗೆ ಉದ್ಯೋಗ ಬೆಳಕಾಗಲಿ. ಪ್ರತಿಯೊಬ್ಬರೂ ಉದ್ಯೋಗಿಗಳಾಗಿ ಸಮಾಜದಲ್ಲಿ ಹರುಷದಿಂದ ಬಾಳಬೇಕು.

11/04/2023

ಜನಪರಿವರ್ತನೆ ಸಮಾಜದ ಮೂಲ ಉದ್ದೇಶ.
1 ಪುರುಷರು ಜೆಂಟಲ್ ಮ್ಯಾನ್ ಗಳಾದರೆ ಮಹಿಳೆಯರು ಮಹಾಲಕ್ಷ್ಮಿ ಹಾಗೆ ಬದುಕುತ್ತಾರೆ. ಸಮಾಜದಲ್ಲಿ ಬದುಕಲು ಸಾಧ್ಯ.
2 ಜನರು ಮೂಢನಂಬಿಕೆಗಳಾದ ಜ್ಯೋತಿಷ್ಯ ಕಷ್ಟ ಕಾಲದಲ್ಲಿ ಬೇರೆಯವರನ್ನು ನಂಬಿ ಮೋಸ ಹೋಗುವಂತ ಸನ್ನಿವೇಶವನ್ನು ವೀಕ್ನೆಸ್ ಗಳನ್ನು ಜನರು ಮೊದಲು ಪರಿವರ್ತನೆಗೊಳಿಸಬೇಕು.
3 ಅನಗತ್ಯ ದುರಾಸೆಗಳು ದ್ವೇಷಗಳು ಜನರ ಮನಸ್ಸನ್ನು ಕೆಟ್ಟದ್ದನ್ನಾಗಿ ಮಾಡುತ್ತದೆ. ಅದನ್ನು ಮೊದಲು ಪರಿವರ್ತಿಸಬೇಕು.
4 ಸ್ವಚ್ಛ ಮನಸ್ಸು ಸ್ವಚ್ಛ ಜೀವನ ಶೈಲಿ ಜೀವನದ ಮೂಲ ಮಂತ್ರವಾಗಬೇಕು.
5 ಪೂಜೆ ಪುರಸ್ಕಾರಗಳಿಂದ ಒಬ್ಬ ವ್ಯಕ್ತಿಯ ಜೀವನ ಬದಲಾಗದು ಜನರ ಪರಿಶುದ್ಧ ಆತ್ಮ ಪರಿಶುದ್ಧ ಮನಸ್ಸು ಜನರು ಪರಿವರ್ತನೆ ಆಗಲು ಸಾಧ್ಯ.
6 ತನ್ನ ತಪ್ಪುಗಳನ್ನು ತಿದ್ದಿ ಬೇರೆಯವರನ್ನು ಸನ್ಮಾನಿಸುವ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಸಾಧ್ಯ.
7 ಒಂಟಿ ಜೀವನವನ್ನು ನಡೆಸಲು ಮೊದಲು ಸ್ವಾರ್ಥ ಅಹಂಕಾರ ದ್ವೇಷ ಅಸುವೆ ಮತ್ಸರ ಕೋಪ ಹಠ ವನ್ನು ತ್ಯಜಿಸಿ ತ್ಯಾಗಮಯವಾಗಿ ಬಾಳಬೇಕು. ಆಗ ಜನರ ಪರಿವರ್ತನೆ ಆಗಲು ಸಾಧ್ಯ.
8 ಸಂಸ್ಕಾರ ಮತ್ತು ಸಂಸ್ಕೃತಿ ಸಂಸಾರದ ಮೂಲ ಮಂತ್ರ. ಮಕ್ಕಳು ಯುವಕರು ಮತ್ತು ಯುವತಿಯರು ಪುರುಷರು ಮತ್ತು ಮಹಿಳೆಯರು ವೃದ್ಧರು ಜನ ಪರಿವರ್ತನೆ ಯ ಮೂಲ ಸೂತ್ರದಾರರು.
9 ಹೆತ್ತ ತಂದೆ ತಾಯಿಗಳನ್ನು ಪೂಜಿಸುವವನು. ಗುರುಗಳನ್ನು ಗೌರವದಿಂದ ಕಾಣುವವನು. ಅಣ್ಣ ತಮ್ಮಂದಿರನ್ನು ಅಕ್ಕ ತಂಗಿಯರನ್ನು ಬಂಧುಗಳನ್ನು ಪ್ರೀತಿಸುವವನು ಸ್ನೇಹಿತರನ್ನು ಪ್ರೀತಿಸುವವನು ಸರ್ವರನ್ನು ಸನ್ಮಾನಿಸುವವನು. ಈ ಭಾವನೆಯನ್ನು ಸರ್ವರೂ ಅವಲಂಬಿಸಿದರೆ ಜನ ಪರಿವರ್ತನೆ ಆಗಲು ಸುಲಭ ಸಾಧ್ಯ.
10 ಕಷ್ಟ ಕಾಲದಲ್ಲಿ ಸಹಾಯ ಮಾಡುವವನು ದೇವರು ಆಗುವನು .ಸರ್ವರ ಕಷ್ಟಕ್ಕೂ ಸಹಾಯ ಮಾಡುವ ಮಾನವೀಯ ಗುಣವನ್ನು ಹೊಂದಿರುವ ಮನುಷ್ಯ ಜನಪರಿವರ್ತನೆ ಮಾಡಲು ಸಾಧ್ಯ.
11 ಜನರು ದೈನಂದಿನ ದಿನಚರಿಗಳನ್ನು ಸರಿಯಾಗಿ ಪರಿಪಾಲಿಸಿದರೆ ಜನರ ಪರಿವರ್ತನೆ ಸುಲಭ ಸಾಧ್ಯ.
12 ಜೆಂಟಲ್ ಮ್ಯಾನ್ ಸೋಶಿಯಲ್ ವರ್ಕ್ ನಲ್ಲಿ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ಜನರ ಪರಿವರ್ತನೆ ಆಗಲು ಸುಲಭ ಸಾಧ್ಯ.

28/03/2023

ದೇಶದ ಸರ್ವ ಜನರಿಗೂ ನನ್ನ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಬಾಲ್ಯದ ಕಿರು ಚಿತ್ರಣ ನನ್ನ ಬಾಳಿನ ಹೀರೋ ನನ್ನ ತಂದೆ. ನನ್ನ ಬಾಳಿನ ಶಕ್ತಿ ತಾಯಿ . ಸಹೋದರಿ ಮತ್ತು ಸಹೋದರ ನನ್ನ ಬಾಳಿನ ದೀಪ. ನನ್ನ ಯಜಮಾನ್ರು ನನ್ನ ಬಾಳಿನ ಗುರು. ನನ್ನ ಮಕ್ಕಳು ನನ್ನ ಬಾಳಿನ ಬೆಳಕು. ಕುಟುಂಬಸ್ಥರು ಮತ್ತು ಮಿತ್ರರು ಪ್ರೀತಿ ಪಾತ್ರರು ನನ್ನ ಬಾಳಿನ ಸ್ಪೂರ್ತಿದಾಯಕರು. ನನ್ನ ಬಾಳಿನ ಸಿಹಿ ಕ್ಷಣಗಳು ಎಲ್ಲಾ ಜನರನ್ನು ಸಮಾನವಾಗಿ ಅಭಿಮಾನ ದಿಂದ ಕಾಣೋದು. ನನ್ನ ಬಾಳಿನ ಕಹಿ ಕ್ಷಣಗಳು ಸ್ವಾಭಿಮಾನಕ್ಕೆ ಅವಮಾನವಾದ ಕ್ಷಣಗಳು ಮತ್ತು ಮನಸ್ಸಿಗೆ ನೋವಾದ ಕ್ಷಣಗಳು. ನನ್ನ ಕೆಲಸ ಸಮಾಜ ಸೇವೆ . ಪದವಿಗಿಂತ ಜನರ ಪರಿವರ್ತನೆ ಮುಖ್ಯ. ಪಿಬಿ ರೈ ಇಂಡಿಯನ್ ಸಿಟಿಜನ್ ಸೋಶಿಯಲ್ ವರ್ಕ್ ನಲ್ಲಿ ಎರಡು ವಿಧಾನ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಮತ್ತು ಲೇಡೀಸ್ ಸೋಶಿಯಲ್ ವರ್ಕ್ ಇದಕ್ಕೆ ನಾಡಿನ ಸಮಸ್ತ ಜನರ ಪ್ರೋತ್ಸಾಹ ಇರಬೇಕೆಂದು ಎಲ್ಲರಲ್ಲಿ ವಿನಂತಿ ಮಾಡುತ್ತೇನೆ. ಬಬ್ಬಿ ರೈ ಯಾವರ ಹುಟ್ಟು ಹಬ್ಬಕ್ಕೆ ನಿಮ್ಮೆಲ್ಲರ ಅಭಿಮಾನ ಶಾಶ್ವತವಾಗಿರಲಿ.

Happy ugadi P.B.Rai family members.
22/03/2023

Happy ugadi P.B.Rai family members.

21/03/2023

Happy birthday sudarshan Rai best wishes P.B.Rai family members.

19/03/2023

ಜನಾಂದೋಲನ ಬಾವುಟ.
ಬಾವುಟಕ್ಕೆ ಐದು ಬಣ್ಣಗಳು ಒಂದು ಚಕ್ರ ಮಧ್ಯದಲ್ಲಿ ಚಕ್ರ ಅದರ ಬಣ್ಣ ಕೆಂಪು ಬಣ್ಣ ಪ್ರೀತಿಯ ಸೂಚಕ . ಕೇಸರಿ ಬಣ್ಣ ಬಾವುಟ ದ ಬಣ್ಣ ಸೌಹಾರ್ದತೆಯ ಬಣ್ಣ.
ಬಿಳಿ ಬಣ್ಣ ಶಾಂತಿ ಸೂಚಕ ಬಣ್ಣ.
ಹಳದಿ ಬಣ್ಣ ಸ್ನೇಹ ಬಾಂಧವ್ಯದ ಬಣ್ಣ .
ಹಸಿರು ಬಣ್ಣ ಶುಭ ಸೂಚಕ ಬಣ್ಣ.
ಕೆಂಪು ಬಣ್ಣ ಪ್ರೀತಿಯ ಸಂಕೇತ.
ದೇಶದ ಜನರ ಯಶಸ್ಸಿಗೆ ಜನಾಂದೋಲನ ಕಾರ್ಯಗಳು.
1. ನಾವು ಮಾಡುವ ಕರ್ತವ್ಯ ಸರಿಯಾಗಿದ್ದರೆ.
ನ್ಯಾಯಕ್ಕೆ ಜಯ ಸತ್ಯಕ್ಕೆ ಗೆಲುವು ಖಂಡಿತ ಸಿಗುತ್ತದೆ.
2. ಪುರುಷರು ಮಹಿಳೆಯರಿಗೆ ದೌರ್ಜನ್ಯ ಮಾಡುವ ಹಾಗಿಲ್ಲ. ಮಹಿಳೆಯರು ಪುರುಷರನ್ನು ನಂಬಿ ಬದುಕುವ ಹಾಗಿಲ್ಲ. ಒಂಟಿಯಾಗಿ ಧೈರ್ಯವಾಗಿ ಬದುಕಿ ಬಾಳಬೇಕು. ಆಗ ಸಮಾಜದಲ್ಲಿ ಒಂದು ಬದಲಾವಣೆಯಾಗಲು ಸಾಧ್ಯ.
3. ವೋಟ್ ಬ್ಯಾನ್ ಮಾಡಬೇಕು. ನೀವು ಪುರುಷರಾದರೆ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಗೆ ಸೇರಿದವರು. ನೀವು ಮಹಿಳೆಯರಾದರೆ ಲೇಡೀಸ್ ಸೋಶಿಯಲ್ ವರ್ಕ್ ಗೆ ಸೇರಿದವರು. ಮಂಗಳ ಮುಖಿಗಳಾದರೆ ಜೆಂಟಲ್ ಮ್ಯಾನ್ ಸೋಶಿಯಲ್ ವರ್ಕಿಗೆ ಮತ್ತು ಲೇಡೀಸ್ ಸೋಶಿಯಲ್ ವರ್ಕಿಗೆ ಸೇರಿದವರು.
4. ದೇಶದಲ್ಲಿ ಅಂಗವಿಕಲರಿಗೆ ಉತ್ತಮ ಸ್ಥಾನವನ್ನು ಕೊಟ್ಟು ಅವರ ಶ್ರೇಯಸ್ಸಿಗೆ ಜನರು ಸಹಾಯ ಮಾಡಬೇಕು.
5 ಮಂಗಳಮುಖಿಗಳಿಗೆ ವಿಶೇಷ ಗೌರವವನ್ನು ಸಮಾಜದಲ್ಲಿ ಕೊಡಬೇಕು.
6 ದೇಶದಲ್ಲಿ ಏಕ ಪತ್ನಿತ್ವವನ್ನು ಮತ್ತು ಏಕಪತಿತ್ವವನ್ನು ಜಾರಿಗೆ ತರಬೇಕು.
7 ಡೈವರ್ಸ್ ಕೇಸ್ ಗಳನ್ನು ಬ್ಯಾನ್ ಮಾಡಬೇಕು.
8 ಸಮಾಜದಲ್ಲಿ ವಿಧವೆಯರನ್ನು ಸ್ನೇಹಿತರಾಗಿ ಕಾಣಬೇಕು.
9 ಪುರುಷರು ಮತ್ತು ಮಹಿಳೆಯರ ಬಾಂಧವ್ಯದ ಬಗ್ಗೆ ಕಠಿಣವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು.
ಪುರುಷರು ಮತ್ತು ಮಹಿಳೆಯರು ಒಂಟಿಯಾಗಿ ಸಮಾಜ ದಲ್ಲಿ ಬಾಳಬೇಕು. ಆಗ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ.
10 ಮಕ್ಕಳ ಬಗ್ಗೆ ಮತ್ತು ದೇಶದ ಪ್ರಜೆಗಳ ಬಗ್ಗೆ ಸಮಾಜದಲ್ಲಿ ಉತ್ತಮ ಗೌರವ ಬರುವ ಹಾಗೆ ಪ್ರತಿಯೊಬ್ಬರು ಬದುಕಿ ಬಾಳಬೇಕು. ಸಾಧನೆಯೇ ಜೀವಮಾನದ ಸಾರ್ಥಕ ಜೀವನ.
11 ಮನಸೇ ಜೀವನದ ಹರುಷ ಪ್ರೀತಿಯೇ ಜೀವನದ ಗೆಲುವು.
12 ಮಕ್ಕಳು ಜೀವನದ ಕನಸು. ಯುವಕರು ಮತ್ತು ಯುವತಿಯರು ಜೀವನದ ಬೆಳಕು. ಪುರುಷರು ಮತ್ತು ಮಹಿಳೆಯರು ಸಮಾಜದ ಸ್ಪೂರ್ತಿ. ಹಿರಿಯರು ಸಮಾಜದ ಗುರುಗಳು. ಸಾಧನೆ ಜೀವನದ ಯಶಸ್ಸು.
13 ಬಡವರಿಗೆ ದಾನಿಯಾಗಿ ರೈತರಿಗೆ ನೆರವಾಗಿ ವ್ಯಾಪಾರಿಗಳಿಗೆ ಮಾರ್ಗದರ್ಶಕರಾಗಿ ರಾಜಕಾರಣಿಗಳಿಗೆ ಗುರುಗಳಾಗಿ ಜನರಿಗೆ ಬೆಳಕಾಗಿ ಪ್ರತಿಯೊಬ್ಬರು ಸಮಾಜದಲ್ಲಿ ಬಾಳಬೇಕು.
14 ರಾಜಕೀಯವನ್ನು ಬ್ಯಾನ್ ಮಾಡಿ ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ತರಬೇಕು. ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕ್ ಸಮಾಜದಲ್ಲಿ ಜಾರಿಗೆ ತಂದು ಶಾಂತಿಯ ಜೀವನವನ್ನು ಪ್ರತಿಯೊಬ್ಬರು ಅನುಸರಿಸಿದರೆ ಸಾರ್ಥಕ ಜೀವನ ಆಗುವುದು .

08/03/2023

ದೇಶದ ಸರ್ವ ಜನರಿಗೆ ಹೋಳಿ ಹಬ್ಬದ ಶುಭಾಶಯಗಳು. ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

25/02/2023

ಸಮಾಜದ ಬದಲಾವಣೆಗೆ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ಮತ್ತು ಲೇಡೀಸ್ ಸೋಶಿಯಲ್ ವರ್ಕಿನ ಸಮಸ್ಯೆಗಳನ್ನು ಮತ್ತು ಕಾರಣಗಳನ್ನು ಪರಿಹಾರವಾಗಲು ಜನರು ಮಾಡಬೇಕಾದ ಬದಲಾವಣೆಗಳು.
1. ವಸ್ತ್ರ ಬದಲಾವಣೆ. ಮಕ್ಕಳು ಕಾವಿ ಬಟ್ಟೆಯನ್ನು ಧರಿಸಬೇಕು. ಮದುವೆಯಾಗದೇ ಇರುವವರು ಮತ್ತು ಒಂಟಿ ಜೀವನ ನಡೆಸುವವರು ಮರ್ಯಾದಸ್ಥರು ಬಿಳಿ ಬಟ್ಟೆಯನ್ನು ಧರಿಸಬೇಕು . ಸಂಸಾರಿಗಳು ಹಳದಿ ಬಟ್ಟೆಯನ್ನು ಧರಿಸಬೇಕು. ವೃದ್ಧರು ಮರ್ಯಾದಸ್ಥರು ಆಗಿದ್ದರೆ ಬಿಳಿ ಬಟ್ಟೆಯನ್ನು ಸಂಸಾರಿಗಳು ಆಗಿದ್ದರೆ ಹಳದಿ ಬಟ್ಟೆಯನ್ನು ಧರಿಸಬೇಕು.
2 ಜನರ ಆರೋಗ್ಯವನ್ನು ರಕ್ಷಿಸಲು ಆಯುರ್ವೇದಿಕ್ ಮದ್ದು ಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.
3 ಸಮಾಜದಲ್ಲಿ ಜನರಲ್ಲಿ ಗೊಂದಲ ಬಾರದ ಹಾಗೆ ವಾತಾವರಣ ವನ್ನು ಶುಭ್ರವಾಗಿಸಬೇಕು.
4. ಬಜಾರ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಕಾಲೇಜಿನ ತ ರ ಶಿಸ್ತು ಕ್ರಮಗಳನ್ನು ಅಳವಡಿಸಬೇಕು.
5. ಉತ್ತಮ ಕೆಲಸಗಳನ್ನು ಮಾಡುವುದರಿಂದ ಜನರ ಅಭಿವೃದ್ಧಿ ಸಮಾಜದ ಅಭಿವೃದ್ಧಿಯಾಗುತ್ತದೆ.
6 ಪ್ರತಿ ಏರಿಯಾದಲ್ಲಿ ಮನೆಯ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ವೃದ್ಧಾಶ್ರಮ ಅನಾಥ ಶ್ರಮಗಳನ್ನು ಮಾಡಬೇಕು.
7 ಭ್ರಷ್ಟಾಚಾರವನ್ನು ತಿರಸ್ಕರಿಸಿ ಜನರ ರಕ್ಷಣೆ ದೇಶದ ರಕ್ಷಣೆ ಮಾಡೋಣ ಜನರನ್ನ ಗೌರವಿಸೋಣ ಜನರನ್ನು ಪ್ರೀತಿಸೋಣ ಜನರನ್ನು ರಕ್ಷಿಸೋಣ. ಜನರ ಅಭಿವೃದ್ಧಿ ಸಮಾಜದ ಅಭಿವೃದ್ಧಿ ಜನರ ಗೆಲುವೇ ದೇಶದ ಗೆಲುವು.
8 ಪ್ರತಿಯೊಬ್ಬ ವ್ಯಕ್ತಿಯು ಸೈನಿಕನ ತರ ಬದುಕಿ ಬಾಳಬೇಕು. ಆಗ ಸಮಾಜದ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗುತ್ತದೆ .

10/02/2023

ಪಿಬಿ ರೈ ಇಂಡಿಯನ್ ಸಿಟಿಜನ್ ಜಂಟಲ್ ಮ್ಯಾನ್ ಸೋಶಿಯಲ್ ವರ್ಕ್ ನಲ್ಲಿ ಮತ್ತು ಪಿಬಿ ರೈ ಇಂಡಿಯನ್ ಸಿಟಿಜನ್ ಲೇಡೀಸ್ ಸೋಶಿಯಲ್ ವರ್ಕ್ ನಲ್ಲಿ ಎರಡು ವಿಧಾನ.
1. ಗಂಡು ಜಾತಿ ಮತ್ತು
2. ಹೆಣ್ಣು ಜಾತಿ.
ಪಿ ಬಿ ರೈ ಸೋಶಿಯಲ್ ವರ್ಕ್ ಪಬ್ಲಿಕ್ ಸೋಶಿಯಲ್ ವರ್ಕ್.
1. ಸಾರ್ವಜನಿಕ ಸ್ಥಳಗಳಾದ ಹಾದಿ ಬೀದಿಗಳಲ್ಲಿ ಪುರುಷರು ಮಹಿಳೆಯರು ಮಾತನಾಡುವ ಹಾಗಿಲ್ಲ.
2. ಕಾವಿತೊಟ್ಟವರು ಸನ್ಯಾಸಿ ಗಳಲ್ಲ. ಮಕ್ಕಳು ಸನ್ಯಾಸಿಗಳು.
3. ಮದುವೆಯಾಗದೆ ಒಂಟಿ ಜೀವನ ಮಾಡುವವರು ಮರ್ಯಾದಸ್ತರು.
4. ಸಂಸಾರಿಗಳು ನ್ಯಾಯವಂತರು.
5. ವೃದ್ಧರು ದನಿಕರು.
6. ಮನುಷ್ಯನಲ್ಲಿ ನಾಲ್ಕು ವಿಧದ ಜೀವನಶೈಲೇ ಇದೆ.
1. ಮಕ್ಕಳ ಜೀವನಶೈಲಿ.
2. ಒಂಟಿ ಜೀವನಶೈಲಿ.
3. ಕುಟುಂಬ ಜೀವನ ಶೈಲಿ.
4. ವೃದ್ಧಾಪ್ಯ ಜೀವನ ಶೈಲಿ.
7. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ವ್ಯಕ್ತಿಗೆ ಅವಮಾನ ಮಾಡಕೂಡದು.
8. ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಯಿಂದ
ಗೌರವದಿಂದ ಮಾತನಾಡಿ ಗೌರವವನ್ನು ಕೊಡಬೇಕು. ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣಬೇಕು.

02/02/2023

ದೇಶದಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ ಮೊದಲ ಮೂರು ಸಮಸ್ಯೆಗಳು.
1. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದರ ಮೊದಲು ನಿಖರವಾದ ಮಾಹಿತಿಯನ್ನು ಜನರಿಗೆ ನೀಡಬೇಕು.
2. ನ್ಯೂಸ್ ಪೇಪರ್ ಗಳಲ್ಲಿ ಅಪಪ್ರಚಾರದ ಸುದ್ದಿ ಬಿಡುಗಡೆ ಮಾಡಬಾರದು.
3. ಮೊಬೈಲ್ ಅವಾಂತರ ಸಮಾಜದ ದೊಡ್ಡ ಸಮಸ್ಯೆ.
ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರಿಲ್ಲ.

31/01/2023

ಸಮಾಜದ ಬದಲಾವಣೆ ದೇಶದ ಬದಲಾವಣೆ.ಜನಗಳ ಬದಲಾವಣೆ ಜೀವನದ ಬದಲಾವಣೆ. ಸಮಾಜದಲ್ಲಿ ಎರಡು ಸಮಾಜ ಸೇವೆಗಳಿವೆ. ಮೊದಲನೆಯದು ಪುರುಷ ಸಮಾಜ ಸೇವೆ. ಮತ್ತೊಂದು ಮಹಿಳಾ ಸಮಾಜ ಸೇವೆ. ಪುರುಷ ಸಮಾಜ ಸೇವೆಗೆ ಜೆಂಟಲ್ ಮ್ಯಾನ್ ಸಮಾಜ ಸೇವೆ ಎಂದು ಹೇಳುತ್ತೇನೆ. ಮಹಿಳಾ ಸಮಾಜ ಸೇವೆಗೆ ಲೇಡೀಸ್ ಸಮಾಜ ಸೇವೆ ಎಂದು ಹೇಳುತ್ತೇವೆ. 1.ಜಂಟಲ್ ಮ್ಯಾನ್ ಸಮಾಜ ಸೇವೆಯ ಸಾರಾಂಶಗಳು ನೋಟ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ. ನಮ್ಮವರು ಚೆನ್ನಾಗಿರುತ್ತಾರೆ. ನೇರ ನಡಿಗೆ ದಿಟ್ಟ ಹೆಜ್ಜೆ ಪ್ರಶಾಂತ ಜೀವನ ಸುಂದರ ಕನಸು ಸಂದೇಶ ಸಾರುವ ಸಮಾಜ ಸೇವೆಯೇ ಜಂಟಲ್ ಮ್ಯಾನ್ ಸಮಾಜ ಸೇವೆ.
2.ಲೇಡೀಸ್ ಸಮಾಜ ಸೇವೆ. ನಾವು ಚೆನ್ನಾಗಿದ್ದರೆ ನಮ್ಮವರು ಚೆನ್ನಾಗಿರುತ್ತಾರೆ. ನಮ್ಮೂರು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಸುಂದರ ಬದುಕಿಗೆ ಪ್ರಶಾಂತ ಸಮಾಜ ಸೇವೆಗೆ. ಸಂದೇಶ ಸಾರುವ ಸಮಾಜ ಸೇವೆ ಲೇಡೀಸ್ ಸಮಾಜ ಸೇವೆ.
ಜಂಟಲ್ ಮ್ಯಾನ್ ಸಮಾಜ ಸೇವೆಯ ಮತ್ತು ಲೇಡೀಸ್ ಸಮಾಜ ಸೇವೆಯ ಯೋಜನೆಗಳು.
1. ಪರಿಸರ ಚೆನ್ನಾಗಿರಬೇಕು. ಮನಸ್ಸು ಚೆನ್ನಾಗಿರಬೇಕು. ಪ್ರತಿಯೊಬ್ಬರೂ ಸಂತೋಷದಿಂದ ಬಾಳಬೇಕು.
2. ಆಹಾರವನ್ನು ಮತ್ತು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.
3. ಉತ್ತಮವಾದ ಸಮಾಜಕ್ಕೆ ಪ್ರತಿಯೊಬ್ಬರು ದಾರಿದೀಪವಾಗಬೇಕು.
4. ಅವರವರ ರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡುವುದರಿಂದ ಸಮಾಜದ ಏಳಿಗೆ ಸುಲಭ ದಾರಿದೀಪವಾಗುತ್ತದೆ5. ಒಂಟಿ ಜೀವನ ಸುಂದರ ಬದುಕು.
6. ಪ್ರತಿ ಊರಿನಲ್ಲಿ ಎರಡು ಬಜಾರ್ ತೆಗೆಯಬೇಕು. ಜಂಟಲ್ ಮ್ಯಾನ್ ಬಜಾರ್ ಮತ್ತು ಲೇಡೀಸ್ ಬಜಾರ್ ತೆಗೆದು ಸಮಾಜ ಸೇವೆ ಮಾಡಬೇಕು. ಆಗ ಊರು ಚೆನ್ನಾಗಿದ್ದರೆ ಆಗ ದೇಶ ಚೆನ್ನಾಗಿರತ್ತೆ.
7. ಶಿಕ್ಷಣ ,ಬಟ್ಟೆ ಬರೆ, ಜನಗಳಿಗೆ ರೋಗ ರುಜಿನಗಳು ಬರೆದ ಹಾಗೆ ಮದ್ದುಗಳು. ಬಡವರಿಗೆ ಅನ್ನದಾನ ಸೇವೆ ಮೊದಲ ದಾರಿದೀಪ.
8. ಜಂಟಲ್ ಮ್ಯಾನ್ ಮ್ಯಾನ್ ಕಚೇರಿ ಮತ್ತು ಲೇಡೀಸ್ ಕಚೇರಿ ಪ್ರತಿ ಏರಿಯಾದಲ್ಲಿ ಇರಬೇಕು.
ಆಗ ಸಮಾಜದ ಅನೇಕ ಸಮಸ್ಯೆಗಳು ಬದಲಾಗುತ್ತದೆ.
9. ಮನಿ ಬ್ಯಾನ್ ಮಾಡುವುದರಿಂದ ದೇಶದ ಭ್ರಷ್ಟಾಚಾರ ನಾಶವಾಗುತ್ತದೆ.
10. ಇಂಡಿಯನ್ ಸಿಟಿಜನ್ ಸೋಶಿಯಲ್ ವರ್ಕ್ ನ ಯೋಜನೆಗಳು.

19/01/2023

Happy New year for all best wishes P.B.Rai family

Address


Website

Alerts

Be the first to know and let us send you an email when P.B.Rai Indian citizen socialwork message posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share