Kaalada Charithre Kannada Monthly

  • Home
  • Kaalada Charithre Kannada Monthly

Kaalada Charithre Kannada Monthly ಕಾಲದ ಚರಿತ್ರೆ ಮಾಸ ಪತ್ರಿಕೆಯನ್ನು ಓದುಗರ ?

18/08/2021
17/08/2021

 #ಧನ್ಯವಾದಗಳು         ಜನ್ಮ ದಿನದ ಶುಭಾಸಯ ಕೋರಿದ, ಆಚರಿಸಿ ಸಂತೋಷಪಟ್ಟ ನನ್ನೇಲ್ಲಾ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಅನಂತ.ಅನಂತ......
17/08/2021

#ಧನ್ಯವಾದಗಳು

ಜನ್ಮ ದಿನದ ಶುಭಾಸಯ ಕೋರಿದ, ಆಚರಿಸಿ ಸಂತೋಷಪಟ್ಟ ನನ್ನೇಲ್ಲಾ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಅನಂತ.ಅನಂತ.... ಕೋಟಿ ಧನ್ಯವಾದಗಳು....! ಕೆ.ಎಂ.ಶಿವಪ್ರಸಾದ್......

14/08/2021

#ಬೃಹತ್_ರಕ್ತದಾನ_ಶಿಬಿರ @ಮಳವಳ್ಳಿ

   #ಬೃಹತ್_ರಕ್ತದಾನ_ಶಿಬಿರ        💉      😘😘 .official  .bhai.779642
13/08/2021

#ಬೃಹತ್_ರಕ್ತದಾನ_ಶಿಬಿರ 💉 😘😘 .official .bhai.779642

13/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ ಕುರಿತು #ಥ್ರಿಲ್ಲರ್_ಮಂಜುರವರ ನುಡಿಗಳು....!

ದಿನಾಂಕ: 15-Aug-2021
ಸ್ಥಳ: ರೋಟರಿ ವಿದ್ಯಾ ಸಂಸ್ಥೆ(ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ - 571430

13/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ ಕುರಿತು ಚಿತ್ರನಟ, ಹೋರಾಟಗಾರ #ಚೇತನ್ ರವರ ನುಡಿಗಳು....!

ದಿನಾಂಕ: 15-Aug-2021
ಸ್ಥಳ: ರೋಟರಿ ವಿದ್ಯಾ ಸಂಸ್ಥೆ(ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ - 571430

13/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ ಕುರಿತು ಚಿತ್ರ ಸಾಹಿತಿ #ಕವಿರಾಜ್ ರವರ ನುಡಿಗಳು....!

ದಿನಾಂಕ: 15-Aug-2021
ಸ್ಥಳ: ರೋಟರಿ ವಿದ್ಯಾ ಸಂಸ್ಥೆ(ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ - 571430

09/08/2021

#ಬೃಹತ್_ರಕ್ತದಾನ_ಶಿಬಿರ @ #ಮಳವಳ್ಳಿ ಕುರಿತು ಚಿತ್ರ ಸಾಹಿತಿ, ನಿರ್ದೇಶಕರು ಆದ #ಋಷಿ ರವರ ನುಡಿಗಳು....!

  #ರಕ್ತ

ದಿನಾಂಕ: 15-Aug-2021
ಸ್ಥಳ: ರೋಟರಿ ವಿದ್ಯಾ ಸಂಸ್ಥೆ(ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ - 571430

 #ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ
09/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ

 #ಬೃಹತ್_ರಕ್ತದಾನ_ಶಿಬಿರ  @ ಮಳವಳ್ಳಿ .official
09/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ

.official

08/08/2021

#ಬೃಹತ್_ರಕ್ತದಾನ_ಶಿಬಿರ @ #ಮಳವಳ್ಳಿ

#ವಸಿಷ್ಠ_ಸಿಂಹ

  #ರಕ್ತ

ದಿನಾಂಕ: 15-Aug-2021

ಸ್ಥಳ:
ರೋಟರಿ ವಿದ್ಯಾ ಸಂಸ್ಥೆ (ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ
ಮಂಡ್ಯ - 571430

06/08/2021



06/08/2021




donation.camps



jcbust jds

05/08/2021

#ಬೃಹತ್_ರಕ್ತದಾನ_ಶಿಬಿರ @ ಮಳವಳ್ಳಿ ಮಳವಳ್ಳಿ ತಾಲೂಕಿನ ಯುವಕ ಮಿತ್ರರು ಹಾಗೂ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ

ಸ್ಥಳ: ರೋಟರಿ ವಿದ್ಯಾ ಸಂಸ್ಥೆ(ರಿ)
ತ್ಯಾಗರಾಜ ರಸ್ತೆ, ಮಳವಳ್ಳಿ

ದಿನಾಂಕ: 15-Aug-2021

.fans

01/06/2021

" #ಕೆಂಪು_ಕೋಟೆಯ_ದೇವೇಗೌಡರು_ರಾಜ್ಯ_ರಾಜಕಾರಣದ_ದೊಡ್ಡಗೌಡರು"
( #ವಿರೋಧಿಗಳ_ಚಕ್ರವ್ಯೂಹ_ಭೇದಿಸುವ_ಚಾಣಕ್ಯ) #ಕಾಲದ_ಚರಿತ್ರೆ_ಮಾಸ_ಪತ್ರಿಕೆಯಲ್ಲಿ....!

2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ದೇವೇಗೌಡರ ಕುಟುಂಬದ ವಿರುದ್ಧ ಒಂದು ಅಘೋಷಿತ ದ್ವೇಷದ ರಾಜಕಾರಣ ಶುರುವಾಗಿತ್ತು. ಅಷ್ಟೊತ್ತಿಗಾಗಲೇ ಸಿದ್ದು ಕಾರಣಕ್ಕಾಗಿ ಕುರುಬ ಸಮುದಾಯ ಗೌಡರ ವಿರುದ್ಧ ಅಸಮಾಧಾನ ಹೊಂದಿತ್ತು. ಇದರ ನಡುವೆಯೇ ಯಡ್ಡಿಗೆ ಅಧಿಕಾರ ಹಸ್ತಾಂತರಿಸಲು ಬಿಡಲ್ಲಿಲ್ಲ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯ ಕೂಡ ಅದೇ ರೀತಿಯಾಗಿ ಗೌಡರ ಕುಟುಂಬದ ವಿರುದ್ಧ ರಾಜಕೀಯ ನಿಲುವು ತಳೆದ ಕಾರಣವಾಗಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋತಿತು. ದೇವೇಗೌಡರ ವಿರುದ್ಧ ಕತ್ತಿ ಮಸೆಯುತ್ತಿದ್ದ ಯಡಿಯೂರಪ್ಪ ಬಚ್ಚೇಗೌಡರನ್ನು ಮುಂದೆ ಬಿಟ್ಟು ಕಟು ಶಬ್ಧಗಳಿಂದ ಮಾಧ್ಯಮದವರ ಮುಂದೆ ಇಡೀ ದೊಡ್ಡಗೌಡರ ಕುಟುಂಬವನ್ನು ಖಂಡಾತುಂಡವಾಗಿ ಟೀಕಿಸಲು ಛೂ ಬಿಟ್ಟರು. ಇಂದಿಗೂ ರಾಜ್ಯ ರಾಜಕಾರಣದಲ್ಲಿ ಆ ದಿನ ಕರಾಳ ದಿನವೇ. ಏಕೆಂದರೆ ಪಚ್ಚೆ ಕಟ್ಟಿಕೊಳ್ಳಲು ಎದ್ದು ನಿಂತವರನ್ನು ಇತರೆ ನಾಯಕರೆಲ್ಲಾ‌ ಸೇರಿ ಒಮ್ಮತದಿಂದ ಪ್ರಧಾನಿ ಮಾಡಿಬಿಟ್ಟರು. ಅವರೊಂಥರ ನಾಗರಹಾವು, ಭಷ್ಮಾಸುರ ಎಂದೆಲ್ಲಾ ಜರಿದು ದೇವೇಗೌಡರ ಜೀವನದ ಅಷ್ಟು ವರ್ಷಗಳ ಹೋರಾಟವನ್ನೇಲ್ಲಾ ಹೀಗಳೆದು ಬಿಟ್ಟ ಬಚ್ಚೇಗೌಡ.

ತಾನೂ ಕೂಡ ಅದೇ ಸಮುದಾಯದ ನಾಯಕನೆಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದೇ ಯಡಿಯೂರಪ್ಪನನ್ನು ಓಲೈಸಲು ದೇವೇಗೌಡರ‌ ಹೋರಾಟದ ಬದುಕಿಗೆ ಕಪ್ಪು ಮಸಿ ಬಳಿದು ಅವಮಾನಿಸಿಬಿಟ್ಟರು. ಆ ಕ್ಷಣಕ್ಕೆ ಆ ಘಟನೆ ದೇವೇಗೌಡರ ರಾಜಕೀಯ ಬದುಕಿಗೆ ಪೆಟ್ಟು ಎನಿಸಿದರು ನಂತರದ ದಿನಗಳಲ್ಲಿ ದೇಶದ ರಾಜಕಾರಣದಲ್ಲಿ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳಲ್ಲಿ ಅವರು ನಿರ್ವಹಿಸಿದ ಪಾತ್ರ ಕುಹಕವಾಡಿದವರಿಗೆ ತಕ್ಕ ಉತ್ತರ ನೀಡಿದಂತಿತ್ತು. ಆದರು ಇಂದಿಗೂ ಆ ದಿನದ ಪತ್ರಿಕಾಗೋಷ್ಠಿಯಲ್ಲಿ ಏನೆಲ್ಲಾ ಆರೋಪಗಳು, ಟೀಕೆಗಳು ಕೇಳಿ ಬಂದವೋ ಅವನ್ನೇ ಸತ್ಯವೆಂದು ತಿಳಿದು ವಾದ ಮಾಡುವ ಮೂಢರನ್ನು ನೋಡಿದ್ದೇನೆ. ಆದರೆ ಗೌರವ ನೀಡಬೇಕೆನಿಸುವುದು ಇಂತಹ ನೂರಾರು-ಸಾವಿರಾರು ಷಡ್ಯಂತ್ರ ಕುತಂತ್ರಗಳನ್ನು ಮೆಟ್ಟಿ ನಿಂತು ಇದೇ ನೆಲದಿಂದಲೇ ಬೆಳೆದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಆರಿಸಿದ ಶ್ರೀಮಾನ್ ಹೆಚ್.ಡಿ.ದೇವೇಗೌಡರ ರಾಜಕೀಯ ಜಾಣ್ಮೆ.

ಕರ್ನಾಟಕ ಇಡೀ ದೇಶದಲ್ಲಿ ವಿಶಿಷ್ಠ ರೀತಿಯ ಹಿರಿಮೆ ಗರಿಮೆ ಹೊಂದಿರುವ ರಾಜ್ಯ. ನೆರೆಹೊರೆಯ ರಾಜ್ಯಗಳ ಜೊತೆ ಹಂಚಿ ಹೋಗಿದ್ದ ಭೂಭಾಗಗಳನ್ನು ಹಲವಾರು ಹೋರಾಟಗಳ ಮೂಲಕ ಒಗ್ಗೂಡಿಸಿದ ಮಹಾನ್ ಹೋರಾಟಗಾರರ ಶ್ರಮದ ಫಲ ಅಖಂಡ ಕರ್ನಾಟಕ. ಕೃಷ್ಣೆ, ಮಹಾದಾಯಿ, ಕಾವೇರಿ ಹೋರಾಟಗಳು, ಬೆಳಗಾವಿಯ ಗಡಿ ವಿವಾದಗಳು ರಾಜ್ಯದ ಹೋರಾಟದ ಕಿಚ್ಚಿನ ಸಂಕೇತ. ಭಾಷಾ ವೈಶಿಷ್ಟ್ಯತೆ, ಜೀವನ ಶೈಲಿಯ, ಸಂಸ್ಕೃತಿ, ಸಮಸ್ಯೆಗಳ ಆಗರ. ದೇಶದ ಭೂಪಟದೊಳಗೆ ಪ್ರಾಬಲ್ಯ ಸಾಧಿಸಲು ಏನಿರಬೇಕು, ಏನಿರಬಾರದೆಂಬ ಎಲ್ಲ ಮಾನದಂಡಗಳನ್ನು ಹೊಂದಿರುವ ರಾಜ್ಯ. ದೇಶದ ಆರ್ಥಿಕತೆಗೆ ದೊಡ್ಡ ಪಾಲು ನೀಡುತ್ತಿರುವ ರಾಜ್ಯವೂ ಕೂಡ ಹೌದು. ಆದರೆ ಇದೆಲ್ಲವನ್ನು ಮರೆಮಾಚುವುದು ರಾಜಕೀಯ ಅಧಿಕಾರ.‌ ಅಧಿಕಾರ ಸ್ಥಾನದಲ್ಲಿ ಕುಳಿತ ರಾಜಕೀಯ ನಾಯಕರುಗಳು. ಅವರ ನಾಯಕತ್ವದ ಗುಣ. ಈ ನೆಲದಿಂದ ಆಯ್ಕೆಯಾಗಿ ಬಂದ ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಅನಂತ್ ಕುಮಾರ್ ಸೇರಿದಂತೆ ಈ ನೆಲದ ಜನನಾಯಕರು ರಾಷ್ಟ್ರರಾಜಕಾರಣದಲ್ಲಿಯೂ ಪ್ರಾಬಲ್ಯ ಸಾಧಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅಂತಹ ಕೌತುಕ, ಕಾತರ, ಹೆಮ್ಮೆಗೆ ಕಾರಣವಾದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ದೇವೇಗೌಡರು ಕೂಡ ಒಬ್ಬರು. ಹಾಗೇಯೇ ಪ್ರಧಾನಿಯಾದವದಲ್ಲಿ ಅವರೇ ಮೊದಲಿಗರು ಹಾಗೇ ಅವರೇ ಕೊನೆಯವರು ಆಗಬಹುದೇನೋ ಅನ್ನಿಸಿಬಿಡುತ್ತೆ.

ಜಾತಿ ನಾಯಕನ ಪಟ್ಟ ಕಟ್ಟಿದರು, ಮಾತು ಮಾತಿಗೂ ಕುಹಕವಾಡಿದರು, ರಾಜಕೀಯ ಪಟ್ಟುಗಳನ್ನು ಕುತಂತ್ರವೆಂದೂ ಅಳಿದರು, ಕೆಲವೊಂದು ಯಡವಟ್ಟುಗಳನ್ನೇ ದೊಡ್ಡದಾಗಿ ಬಿಂಬಿಸಿದ್ದರ ಪ್ರತಿಫಲವಾಗಿ ಕರ್ನಾಟಕ ರಾಜಕಾರಣದಲ್ಲಿ ಎಂದೂ ಯಾರು ಎದುರಿಸದ ಅಷ್ಟು ಸಮಸ್ಯೆಗಳು, ಸವಾಲುಗಳನ್ನು ಎದುರಿಸಿದರು. ರಾಜಕೀಯ ಸೋಲುಗಳನ್ನು ಅನುಭವಿಸಿದರು ಆದರೆ ಎಂದೂ ಅವಶೇಷವನ್ನಾಗಿಸುವ ವಿರೋಧಿಗಳ ಕುತಂತ್ರಕ್ಕೆ ಮಣ್ಣಾಗಲ್ಲಿಲ್ಲ. ಯಾರಿಗೂ ಬಗ್ಗದ, ಯಾರಿಗೂ ಜಗ್ಗದ ಯಾರ ಅಂಕೆ-ಊಹೆಗೂ ನಿಲುಕದ ಕರ್ನಾಟಕ ರಾಜಕೀಯ ವಿಶ್ವವಿದ್ಯಾನಿಲಯದ ಕುಲಪತಿ, ಅಧಿಪತಿ ಎಲ್ಲವೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತ್ರ. ವಿರೋಧಿಗಳು ಒಪ್ಪದೇ ಇದ್ದರು, ಎಷ್ಟೇ ಮೂಗು ಮುರಿದರು ದೊಡ್ಡಗೌಡರು ಈ ನೆಲದ ಹೆಮ್ಮೆ ಎಂದರೆ ಅದು ಅತೀಶಯೋಕ್ತಿಯಲ್ಲ. ಆದರೂ ಇಲ್ಲಿನ ಜಾತಿ ವಿಷಬೀಜದ ಮನಸ್ಸು ಹೊಂದಿರುವ ಚಿಲ್ಟುಗಳಿಗೆ ಅವರು ಧೃತರಾಷ್ಟ್ರನಂತೆ ಭಾಸವಾಗುತ್ತಿದ್ದಾರೆ ಎಂಬುದೆ ಅಶ್ಚರ್ಯ.

ದೇವೇಗೌಡರ ರಾಜಕೀಯ ಪಟ್ಟುಗಳ ಮುಂದೆ ಏನೇನೂ ಅಲ್ಲದ ರಾಜಕೀಯ ಶಿಶುಗಳು ಬೀದಿ ನಾಯಿಗಳಂತೆ ಬೊಗಳಿದರು ಕೂಡ ರಾಜ್ಯಕ್ಕೆ ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು. ನೀರಾವರಿ ಕ್ಷೇತ್ರದ ಸಾಧನೆಗಳು, ಹೋರಾಟಗಳು, ಅರಿವು, ಜ್ಞಾನಕ್ಕೆ ಅವರೇ ಸಾಟಿ. ಅದಕ್ಕಾಗಿಯೇ ಸಿದ್ದು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ವಿವಾದವೆದ್ದಾಗ ಸ್ವತಃ ಸಿದ್ದರಾಮಯ್ಯನವರೇ ದೇವೇಗೌಡರನ್ನು ವಿಧಾನಸೌಧಕ್ಕೆ ಆಹ್ವಾನಿಸಿ ಸಲಹೆ ಪಡೆದುಕೊಂಡಿದ್ದು. ಕಾವೇರಿ-ಕೃಷ್ಣಾ ನದಿ ನೀರಿನ ಹೋರಾಟಗಳು, ಯೋಜನೆಗಳಲ್ಲಿನ ಅವರ ಹೆಜ್ಜೆಗುರುತು ಯಾವುದು ಸದ್ಯಕ್ಕೆ ರಾಜ್ಯದ ಜನಮಾನಸದಲ್ಲಿ ಚರ್ಚೆಯಾಗುವುದಿಲ್ಲ. ಅವರ ಹೋರಾಟದಿಂದ ನೆಲದ ಮಣ್ಣಿನ ಮಕ್ಕಳಿಗೆ ಆದ ಉಪಯೋಗವೂ ಯಾರಿಗೂ ಬೇಕಾಗಿಲ್ಲ. ಬದಲಾಗಿ ಅವರ ಹೋರಾಟಕ್ಕೆ ರಾಜಕೀಯ ಅಧಿಕಾರದ ಲಾಲಸೆ ಎಂಬ ಕಪ್ಪುಚುಕ್ಕಿ ಬಳಿದು, ಅವರ ಸಾಧನೆಗಳನ್ನೇಲ್ಲಾ ಕುಟುಂಬ ರಾಜಕಾರಣದ ನೆರಳಿನಲ್ಲಿ ತುಳಿದು ಮುತ್ಸದ್ದಿತನಕ್ಕೆ ಅಪಚಾರವೆಸಗುವ ಕಾರ್ಯ ಅಂದು ನಡೆದಿದೆ. ಇಂದು ಕೂಡ ನಡೆಯುತ್ತಿದೆ. ಹೋರಾಟದ ಮೂಲಕವೇ ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾದವರನ್ನೇ ಇನ್ನಿಲ್ಲದಂತೆ ಅಳಿಯುವ ಕೀಳು ಮನಸ್ಥಿತಿಗಳ ನಡುವೆಯೂ ಹೆಚ್.ಡಿ.ದೇವೇಗೌಡರು ಎಂದಿಗೂ ರಾಜಕಾರಣದಲ್ಲಿ ಅಪ್ರಸ್ತುತರಾಗಿಲ್ಲ.

ಯಾರೋ ಕಟ್ಟಿದ ಹುತ್ತದೊಳಗೆ ಹೊಕ್ಕ ನಾಗರಹಾವಲ್ಲ ದೊಡ್ಡಗೌಡರು. ಅವರದ್ದೇನಿದ್ದರು ಸ್ವಂತ ಶ್ರಮದ ಪಾಲು. ಸೋತ ಸ್ಥಳದಲ್ಲಿಂದಲೇ ಗೆಲ್ಲಬೇಕೆಂಬ ಹಠವುಳ್ಳವರು. ಯಡಿಯೂರಪ್ಪ, ಸಿದ್ದರಾಮಯ್ಯ ಸೃಷ್ಠಿಸಿದ ಜಾತಿ ಕಾಡ್ಗಿಚ್ಚಿನ ನಡುವೆಯೂ ತಮ್ಮ ಛಲದಿಂದಲೇ ಪಕ್ಷ ಸಂಘಟಿಸಿದ ಛಲವಂತ. ಭರ್ತಿ 88 ವಸಂತಗಳನ್ನು ಪೂರೈಸಿದ ಈ ಸಮಯದಲ್ಲೂ ಅವರ ರಾಜಕೀಯ ಪಾಂಡಿತ್ಯಕ್ಕೆ ತುಕ್ಕು ಹಿಡಿದಿಲ್ಲ. ಆಗಾಗಿಯೇ ಗೌಡರನ್ನು ಹಾದಿ-ಬೀದಿಯಲ್ಲಿ ಬೇಕಾಬಿಟ್ಟಿ ನಿಂದಿಸಿದ ಯಡ್ಡಿ, ಸಿದ್ದು ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಅವರ ಮುಂದೆ ಕೈಕಟ್ಟಿ ನಿಂತಿದ್ದು. ಏಕೆಂದರೆ ದೊಡ್ಡಗೌಡರು ಇಂದಿಗೂ ಚಲಾವಣೆಯಲ್ಲಿರುವ ಚಿನ್ನದ ನಾಣ್ಯ. ಬಗೆದಷ್ಟು ರಾಜಕೀಯ ಪಟ್ಟುಗಳು, ಅಭಿವೃದ್ಧಿಯ ಚಿಂತನೆಗಳನ್ನು ಹೊಂದಿರುವ ಮಹಾನಾಯಕ. ಅದಕ್ಕಾಗಿಯೇ 37 ಶಾಸಕರನ್ನು ಗೆಲ್ಲಿಸಿಕೊಂಡರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವ, ಕೇವಲ 11 ಕಾರ್ಪೋರೇಟರ್ ಗಳನ್ನಿಟ್ಟುಕೊಂಡು ಬಿಬಿಎಂಪಿಯಲ್ಲಿ ಅಧಿಕಾರ ನಡೆಸಿದ್ದು ಇನ್ನು ಪ್ರಧಾನಮಂತ್ರಿಯಾದ ವಿಷಯದಲ್ಲಿ ಅವರಿಗೆ, ಅವರ ತಂತ್ರಗಾರಿಕೆಗೆ, ಜನಮನ್ನಣೆಗೆ ಅವರೇ ಸಾಟಿ.

ಯಾರು ಎಷ್ಟೇ ಮೂಗು ಮುರಿಯಲಿ ಕರ್ನಾಟಕ ರಾಜಕೀಯಕ್ಕೆ ಅವರೇ ದೊಡ್ಡಗೌಡರು. ಎಷ್ಟೇ ಜಾತಿ ಹಣೆಪಟ್ಟಿ ಹಚ್ಚಿದರು ಅವರು ನೀಡಿದ ಅಭಿವೃದ್ಧಿ ಕೊಡುಗೆಯ ಪ್ರತಿಫಲವನ್ನು ಎಲ್ಲಾ ಜಾತಿ-ಸಮುದಾಯಗಳ ಜನರು ಅನುಭವಿಸುತ್ತಿದ್ದಾರೆ. ಅವರ ಜಾತ್ಯಾತೀತ ನಿಲುವುಗಳನ್ನು ಟೀಕಿಸುವ ಜನ ಆಂತರ್ಯದಲ್ಲಿ ಅದೇ ಜಾತಿ ವಿಷಬೀಜ ಹೊಂದಿರುವುದು ಸುಳ್ಳಲ್ಲ. ದೇವೇಗೌಡರನ್ನು ಜಾತಿಗೆ ಸೀಮಿತವಾಗಿಸಲು ಹೊರಟವರು ಕೂಡ ಮಾಡುತ್ತಿರುವುದು ಜಾತಿ ರಾಜಕಾರಣವನ್ನೇ. ಅವರೇ ನೀತಿಪಾಠ ಮಾಡಿ ರಾಜಕೀಯ ಉತ್ತುಂಗಗಕ್ಕೆ ಬೆಳೆಸಿದವರೆ ದೇವೇಗೌಡರ ಎದೆಗೆ ಒದ್ದು ಹೋಗಿದ್ದಾರೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದೇವೇಗೌಡರು ತಮ್ಮ ಎಂದಿನ‌ ಲವಲವಿಕೆಯಿಂದಲೇ ಇಂದಿಗೂ ಸಕ್ರಿಯ ರಾಜಕಾರಣದಲ್ಲಿರುವುದು ನಿಜಕ್ಕೂ ಯುವ ರಾಜಕಾರಣಿಗಳಿಗೆ, ಸಣ್ಣ ಪುಟ್ಟ ಸೋಲು, ಅವಮಾನಗಳಿಗೆ ಪ್ರಾಣ ಕಳೆದುಕೊಳ್ಳಲು ಮುಂದಾಗುವ ದುರ್ಬಲ ಮನಸ್ಸಿನ ಯುವ ಸಮೂಹಕ್ಕೆ ದೊಡ್ಡಗೌಡರೇ ಸ್ಫೂರ್ತಿ.

ಜಾತಿ-ಧರ್ಮದ ಪಿತ್ತ ನೆತ್ತಿಗೇರಿಸಿಕೊಂಡು ದೇವೇಗೌಡರ ಸಾಧನೆಯನ್ನು ಕೀಳಾಗಿ ಕಾಣುವ ಮುನ್ನ ಒಂದೇ ಒಂದು ಬಾರಿ ನೀವೆಲ್ಲಾ ಈ ಕನ್ನಡ ನಾಡಿನ‌ ಪ್ರಜೆಗಳು ಎಂಬುದನ್ನು ನೆನಪು ಮಾಡಿಕೊಳ್ಳಿ. ರಾಷ್ಟ್ರಮಟ್ಟದಲ್ಲಿ ಕನ್ನಡಿಗರನ್ನು ಗುರುತು ಮಾಡಲು ಹೋದರೆ ಸಿಗುವ ಕೆಲವೇ ಕೆಲವು ಹೆಸರುಗಳಲ್ಲಿ ದೇವೇಗೌಡರು ಕೂಡ ಪ್ರಮುಖರು. ರಾಜ್ಯಕ್ಕೆ ನಯಾಪೈಸೆ ಕೊಡುಗೆ ನೀಡದೇ ಕೇವಲ ಅನ್ಯಾಯವನ್ನೇ ಮಾಡಿಕೊಂಡಿರುವ ಮೋದಿಯನ್ನು ಮಭ್ಭಕ್ತರಂತೆ ಮೋಹಿಸುತ್ತಿರುವವರೆ ಅಂಧ ಅಭಿಮಾನದಿಂದ ಹೊರಬಂದು ನೆಲದ ಅಭಿವೃದ್ಧಿಗಾಗಿ ಒಂದಷ್ಟಾದರೂ ಕೊಡುಗೆ ನೀಡಿರುವ, ನೆಲದ ಕೀರ್ತಿ ಪತಾಕೆಯನ್ನು ರಾಷ್ಟ್ರವ್ಯಾಪಿ, ಅಂತರಾಷ್ಟ್ರೀಯ ಮಟ್ಟಕ್ಕೂ ಮುಟ್ಟಿಸಿದ ದೇವೇಗೌಡರನ್ನು ನೆಲದ ಮಗನೆಂದಾದರೂ ಗೌರವಿಸುವುದನ್ನು ಕಲಿಯಿರಿ.

ಲೇಖಕರು:
ಕೆ.ಎಂ.ಶಿವಪ್ರಸಾದ್



HDKumaraswamy H D Kumaraswamy H D Devegowda Siddaramaiah BS Yediyurappa JDS ನಿಷ್ಠಾವಂತ ಕಾರ್ಯಕರ್ತರು.. JDS Karnataka - ಜೆಡಿಎಸ್ ಕರ್ನಾಟಕ JDS Fans Club JDS JDS KARNATAKA Nikhilkumaraswamy for Ramanagara Karnatka

" #ಕಾಲದ_ಚರಿತ್ರೆ* ಮಾಸ ಪತ್ರಿಕೆಯ ಅಕ್ಟೋಬರ್ ಸಂಚಿಕೆಯ ಮುಖಪುಟ......! ಕೆ.ಎಂ.ಶಿವಪ್ರಸಾದ್....!
20/10/2020

" #ಕಾಲದ_ಚರಿತ್ರೆ* ಮಾಸ ಪತ್ರಿಕೆಯ ಅಕ್ಟೋಬರ್ ಸಂಚಿಕೆಯ ಮುಖಪುಟ......! ಕೆ.ಎಂ.ಶಿವಪ್ರಸಾದ್....!

Address


Website

Alerts

Be the first to know and let us send you an email when Kaalada Charithre Kannada Monthly posts news and promotions. Your email address will not be used for any other purpose, and you can unsubscribe at any time.

Contact The Business

Send a message to Kaalada Charithre Kannada Monthly:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share