District Health Society Udupi

  • Home
  • District Health Society Udupi

District Health Society Udupi Contact information, map and directions, contact form, opening hours, services, ratings, photos, videos and announcements from District Health Society Udupi, Media, .

14/12/2023
ದಿನಾಂಕ 26.09.2023ರಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ  07 ತಾಲೂಕುಗಳಲ್ಲಿ  ಆಯುಷ್ಮಾನಭವ ಕಾರ್ಯಕ್ರಮದಡಿಯಲ್ಲಿ...
27/09/2023

ದಿನಾಂಕ 26.09.2023ರಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ 07 ತಾಲೂಕುಗಳಲ್ಲಿ ಆಯುಷ್ಮಾನಭವ ಕಾರ್ಯಕ್ರಮದಡಿಯಲ್ಲಿ *ಹೆಣ್ನು ಮಕ್ಕಳನ್ನು ಉಳಿಸಿ ಹೆಣ್ನು ಮಕ್ಕಳನ್ನು ಓದಿಸಿ* ಲಿಂಗಾನುಪಾತದ ಮಹತ್ವ ಹಾಗೂ ಪಿಸಿಪಿಎನ್.ಡಿಟಿ ಕಾಯ್ದೆಯ ಅರಿವು ಜಾಥಾವನ್ನು ಹಮ್ಮಿಕೊಳ್ಳಲಾಯಿತು,

ಉಡುಪಿ ತಾಲೂಕು ವ್ಯಾಪ್ತಿಯಲ್ಲಿನ ಜಾಥವನ್ನು ಲೊಂಬಾರ್ಡ್ ಆಸ್ಪತ್ರೆಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಡಾ.ನಾಗಭೂಷಣ ಉಡುಪ ಹೆಚ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ ರಾಮ್ ರಾವ್ ಕೆ, ತಾಲೂಕು ಅರೋಗ್ಯಧಿಕಾರಿ ಡಾ ವಾಸುದೇವ ಉಪಾಧ್ಯಯ, ವೈದ್ಯಾಧಿಕಾರಿಗಳಾದ ಡಾ ಅಂಜಲಿ ವಾಗ್ಲೆ ಹಾಗೂ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

14/09/2023

ರಾಜ್ಯದಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಫ್ಟೈ ಸೊಳ್ಳೆಗಳ ಕಡಿತದಿಂದ ಈ ಸೋಂಕು ಹರಡುತ್ತದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ.ಆರೋಗ್ಯದ ಕುರಿತು ಜಾಗೃತಿ ವಹಿಸುವಂತೆ ಸಾರ್ವಜನಿಕರಲ್ಲಿ ಮಾನ್ಯ ಆರೋಗ್ಯ ಸಚಿವರಾದ ಶ್ರೀ Dinesh Gundu Rao ಸಚಿವರು ಮನವಿ ಮಾಡಿರುತ್ತಾರೆ.


14/09/2023
ದಿನಾಂಕ: 01.09.2023 ರಂದು ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿಗಳ ಕಚೇರಿಯ ಶ್ರೀ ಕೃಷ್ಣ ಸಭಾಂಗಣದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಅಧ್...
01/09/2023

ದಿನಾಂಕ: 01.09.2023 ರಂದು ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿಗಳ ಕಚೇರಿಯ ಶ್ರೀ ಕೃಷ್ಣ ಸಭಾಂಗಣದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ಎಲ್ಲಾ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಆರ್.ಸಿ.ಹೆಚ್ (ತಾಯಿ ಮತ್ತು ಮಕ್ಕಳ ಅರೋಗ್ಯ) ಕಾರ್ಯಕ್ರಮದ ಕುರಿತು ಪ್ರಗತಿ ಪರಿಶೀಲನಾ ಸಭೆ ಹಾಗೂ sensitization ನ್ನು ನಡೆಸಲಾಯಿತು.

ತರಬೇತಿಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಉಡುಪಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, M&E Manager ಹಾಜರಿದ್ದರು.

*ವೈದ್ಯರು ಹಾಗೂ ರೋಗಿಯ ನಡುವೆ ಮಾನವೀಯ ಅನುಬಂಧದಿಂದ ತಾಯಿ ಮರಣ ಪ್ರಮಾಣ ಕಡಿಮೆಗೊಳಿಸಬಹುದು: ಜಿಲ್ಲಾಧಿಕಾರಿ*ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡು...
30/08/2023

*ವೈದ್ಯರು ಹಾಗೂ ರೋಗಿಯ ನಡುವೆ ಮಾನವೀಯ ಅನುಬಂಧದಿಂದ ತಾಯಿ ಮರಣ ಪ್ರಮಾಣ ಕಡಿಮೆಗೊಳಿಸಬಹುದು: ಜಿಲ್ಲಾಧಿಕಾರಿ*

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಉಡುಪಿ ಜಿಲ್ಲೆ ಹಾಗೂ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಪ್ರಧಾನ್ ಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನದಡಿಯಲ್ಲಿ ಉಡುಪಿ ಜಿಲ್ಲೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆಯ ಕುರಿತು ಕೆ.ಎಂ.ಸಿ. ಮಣಿಪಾಲದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಕಾರ್ಯಗಾರ ನಡೆಯಿತು.
ವೈದ್ಯರು ಹಾಗೂ ರೋಗಿಯ ನಡುವೆ ಮಾನವೀಯ ಅನುಬಂಧ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಆಡಳಿತ ವರ್ಗ ಹಾಗೂ ವೈದ್ಯರು ಅರಿವು ಮೂಡಿಸಿದಲ್ಲಿ ತಾಯಿ ಮರಣ ಪ್ರಮಾಣವನ್ನು ಕಡಿಮೆಗೊಳಿಸಬಹುದೆಂದು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ತಾಯಿ ಮರಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ಮುಖಾಂತರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಉಡುಪಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಏಚ್ ಇವರು ಮಾತನಾಡಿ, ಜಿಲ್ಲಾ ಆರೋಗ್ಯ ಇಲಾಖೆಗೆ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆ ಮುಖಾಂತರ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು ಹಾಗೂ ಖಾಸಗಿ ಫಿಸಿಶಿಯನ್ ಗಳು, ಸ್ತ್ರೀ ರೋಗ ತಜ್ಞರು, ರೇಡಿಯಾಲಾಜಿಸ್ಟಗಳು ಸ್ವಯಂ ಪ್ರೇರಿತವಾಗಿ ಈ ಅಭಿಯಾನದಲ್ಲಿ ವೆಬ್ ಸೈಟ್ https://pmsma.nhp.gov.in/pmsma-app/ ನಲ್ಲಿ ನೋಂದಾವಣೆ ಮಾಡಿಕೊಳ್ಳುವ ಮೂಲಕ ಭಾಗವಹಿಸಬೇಕೆಂದು ವಿನಂತಿಸಿದರು. ಪ್ರತೀ ತಿಂಗಳು 9ನೇ ಮತ್ತು 24 ನೇ ದಿನಾಂಕಗಳಂದು ಖಾಸಗಿ ವೈದ್ಯರು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸವ ಪೂರ್ವ ಆರೈಕೆ ಸೇವೆ ನೀಡಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಸಿ. ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಎಂ.ಜಿ. ರಾಮ, ಕೆ.ಎಂ.ಸಿ. ವೀಕ್ಷಕರಾದ ಡಾ. ಶರತ್ಚಂದ್ರ, ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ್ ಹೆಬ್ಬಾರ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳೂ ಹಾಗೂ DPM,DAM M&E manager, IEC ಅಧಿಕಾರಿಗಳೂ, DPC RCH, IFV ಹಾಗೂ RCH ಕಚೇರಿಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆಯ ವಿವಿಧ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು. ಉಡುಪಿ ಜಿಲ್ಲೆಯ ಸುಮಾರು 152 ಸರ್ಕಾರಿ ಹಾಗೂ ಖಾಸಗಿ ವೈದ್ಯರು ಭಾಗವಹಿಸಿದ್ದರು.
ಡೀನ್ ಡಾ. ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಡಾ. ಶ್ರೀಪಾದ್ ಹೆಬ್ಬಾರ್ ವಂದಿಸಿ, ಡಾ. ಸ್ನೇಹಾ ಡಿ. ಮಲ್ಯ ಕಾರ್ಯಕ್ರಮ ನಿರೂಪಿಸಿದರು.

Mysuru

ಉಡುಪಿ ಜಿಲ್ಲೆಯಲ್ಲಿ HIV/AIDS ರೋಗದ ಬಗ್ಗೆ ಅರಿವು ಕುರಿತು ಜಿಲ್ಲಾ ಮಟ್ಟದ 5 KM ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ...
29/08/2023

ಉಡುಪಿ ಜಿಲ್ಲೆಯಲ್ಲಿ HIV/AIDS ರೋಗದ ಬಗ್ಗೆ ಅರಿವು ಕುರಿತು ಜಿಲ್ಲಾ ಮಟ್ಟದ 5 KM ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರು, ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಮಾನ್ಯ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು, ಉಪ ನಿರ್ದೇಶಕರು ಯುವಜನ ಸೇವೆ, ಕ್ರೀಡಾ ಇಲಾಖೆ, ವಿವಿಧ ಇಲಾಖೆ ಮುಖ್ಯಸ್ಥರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

18/08/2023

'ಬೃಹತ್ ಉಚಿತ ಆರೋಗ್ಯ ಶಿಬಿರ' - ನಿಮ್ಮ ಗಾಂಧಿನಗರದಲ್ಲಿ!

ನುರಿತ ವೈದ್ಯರಿಂದ ಉಚಿತ ತಪಾಸಣೆ ಮತ್ತು ಉಚಿತ ಚಿಕಿತ್ಸೆ

ಇದೇ ಆಗಸ್ಟ್ 20 ರಂದು, ಬೆಳಿಗ್ಗೆ 8 ರಿಂದ - ಸಂಜೆ 4 ಗಂಟೆಯವರೆಗೆ

ಸ್ಥಳ: ಸ.ಹಿ.ಪ್ರಾ. ಶಾಲೆ ಆವರಣ, ಮಾಗಡಿ ರಸ್ತೆ, 2ನೇ ಕ್ರಾಸ್, ವಾಟರ್ ಟ್ಯಾಂಕ್ ಹಿಂಭಾಗ, ಬಿನ್ನಿಪೇಟೆ ವಾರ್ಡ್

ಬನ್ನಿ. ಭಾಗವಹಿಸಿ!

18/08/2023
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಬಳಕೆ ಹಾಗೂ ನಿರ್ವಹಣೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಡಿ ಉಡುಪಿಯ ಸೂಪರ್ ಸ್ಪೆಷಾ...
18/08/2023

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಬಳಕೆ ಹಾಗೂ ನಿರ್ವಹಣೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಡಿ ಉಡುಪಿಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಸ್ವಾತಂತ್ರ್ಯೋತ್ಸವದ ಆಚರಣೆಯಂದು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಮಾನ್ಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮಾಣ ಪತ್ರವನ್ನು ನೀಡಿರುವುದು.

ಈ ಸಂದರ್ಭದಲ್ಲಿ ಶ್ರೀ ಯಶ್ ಪಾಲ್ ಸುವರ್ಣ, ಶಾಸಕರು, ವಿಧಾನಸಭಾ ಕ್ಷೇತ್ರ ಉಡುಪಿ, ಡಾ.ವಿದ್ಯಾ ಕುಮಾರಿ, ಮಾನ್ಯ ಜಿಲ್ಲಾಧಿಕಾರಿಗಳು, ಶ್ರೀ ಪ್ರಸನ್ನ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಜಿ.ಪಂ, ಉಡುಪಿ, ಡಾ ನಾಗಭೂಷಣ ಉಡುಪ ಹೆಚ್, ಡಿ.ಹೆಚ್.ಓ ಉಡುಪಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮವು ಆಗಸ್ಟ್ 07 ರಿಂದ ಮೂರು ಸುತ್ತುಗಳಲ್ಲಿ ಇದ್ದು, ಇದರ ಸದುಪಯೋಗವ...
04/08/2023

ಉಡುಪಿ ಜಿಲ್ಲೆಯಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮವು ಆಗಸ್ಟ್ 07 ರಿಂದ ಮೂರು ಸುತ್ತುಗಳಲ್ಲಿ ಇದ್ದು, ಇದರ ಸದುಪಯೋಗವನ್ನು ಅರ್ಹ ಮಕ್ಕಳು ಪಡೆಯುವಂತೆ ಪೋಷಕರಿಗೆ ಪ್ರೇರೇಪಿಸಿ ಈ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಆರೋಗ್ಯ ಇಲಾಖಾ ಅಧಿಕಾರಿಗಳು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

Mysuru

ಹೃದಯಾಘಾತವಾದಾಗ ಚಿಕಿತ್ಸೆ ವಿಳಂಬದಿಂದ ಆಗುತ್ತಿರುವ ಸಾವಿನ ಪ್ರಮಾಣವನ್ನು ತಗ್ಗಿಸಲು ರಾಜ್ಯದ ಐದು ಕಂದಾಯ ವಿಭಾಗಗಳ ಒಟ್ಟು 75 ತಾಲೂಕುಗಳಲ್ಲಿ 'ಸ...
12/06/2023

ಹೃದಯಾಘಾತವಾದಾಗ ಚಿಕಿತ್ಸೆ ವಿಳಂಬದಿಂದ ಆಗುತ್ತಿರುವ ಸಾವಿನ ಪ್ರಮಾಣವನ್ನು ತಗ್ಗಿಸಲು ರಾಜ್ಯದ ಐದು ಕಂದಾಯ ವಿಭಾಗಗಳ ಒಟ್ಟು 75 ತಾಲೂಕುಗಳಲ್ಲಿ 'ಸೈಮಿ' ಎಂಬ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 'ಗೋಲ್ಡನ್ ಅವರ್'ನಲ್ಲಿ ಹೃದಯಾಘಾತಕ್ಕೆ ಮೊದಲ ಹಂತದ ಚಿಕಿತ್ಸೆ ನೀಡುವುದು ಈ ಯೋಜನೆಯ ಉದ್ದೇಶ.

#ಆರೋಗ್ಯ #ಹೃದಯ

16/05/2023

ಖ್ಯಾತ ಚಿತ್ರನಟ ಶ್ರೀ ರಮೇಶ್ ಅರವಿಂದ್ ಅವರು ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.

#ಆರೋಗ್ಯ

ಉಡುಪಿ ಮಣಿಪಾಲ್ ಉದಯವಾಣಿ ಫೋನ್ ಇನ್ ಕಾರ್ಯಕ್ರಮದ ಮೂಲಕ  ಕೋವಿಡ್ ಮುಂಜಾಗ್ರತಾ ಕ್ರಮಗಳು ಹಾಗೂ ಸಂಭಾವ್ಯ ಕೋವಿಡ್ ನಾಲ್ಕನೇ ಅಲೆಯನ್ನು ತಡೆಗಟ್ಟಲು...
12/01/2023

ಉಡುಪಿ ಮಣಿಪಾಲ್ ಉದಯವಾಣಿ ಫೋನ್ ಇನ್ ಕಾರ್ಯಕ್ರಮದ ಮೂಲಕ ಕೋವಿಡ್ ಮುಂಜಾಗ್ರತಾ ಕ್ರಮಗಳು ಹಾಗೂ ಸಂಭಾವ್ಯ ಕೋವಿಡ್ ನಾಲ್ಕನೇ ಅಲೆಯನ್ನು ತಡೆಗಟ್ಟಲು ಪೂರ್ವ ತಯಾರಿ ಬಗ್ಗೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿ ಹಾಗೂ ಕೆಎಂಸಿ ಮಣಿಪಾಲ ಸಮುದಾಯ ಔಷಧಿ ವಿಭಾಗದ ಪ್ರಾಧ್ಯಾಪಕರಿಂದ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.

09/01/2023

13/12/2022

ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಹೊಸದಾಗಿ 06 ನಮ್ಮ ಕ್ಲಿನಿಕ್ ಆರಂಭ.

#ಕರ್ನಾಟಕ

⭕ *ಮಕ್ಕಳಿಗೆ JE (ಮೆದುಳು ಜ್ವರ) ಲಸಿಕೆ ಕೊಡಿಸಲೇಬೇಕು.. ಯಾಕೆ ಗೊತ್ತಾ?*https://youtu.be/75ClKFODHSI ⭕ *JE(ಮೆದುಳು ಜ್ವರ) ಲಸಿಕೆ ನಿಮ್...
12/12/2022

⭕ *ಮಕ್ಕಳಿಗೆ JE (ಮೆದುಳು ಜ್ವರ) ಲಸಿಕೆ ಕೊಡಿಸಲೇಬೇಕು.. ಯಾಕೆ ಗೊತ್ತಾ?*

https://youtu.be/75ClKFODHSI

⭕ *JE(ಮೆದುಳು ಜ್ವರ) ಲಸಿಕೆ ನಿಮ್ಮ ಮಕ್ಕಳಿಗೆ ಕೊಡಿಸದೆ ಇದ್ದಲ್ಲಿ ಮುಂದಾಗುವ ತೊಂದರೆಗಳ ಬಗ್ಗೆ ನೀವು ತಿಳಿದಿದ್ದೀರಾ?*
https://fb.watch/hiY9pEB8oi/

ಮಕ್ಕಳಿಗೆ JE (Japanese Encephalitis) ಲಸಿಕೆ ಕೊಡಲೇಬೇಕು.. ಯಾಕೆ ಗೊತ್ತಾ? JE(Japanese Encephalitis) ಲಸಿಕೆ ನಿಮ್ಮ ಮಕ್ಕಳಿಗೆ ಕೊಡಿಸದೆ ಇದ್ದಲ್ಲಿ ಮುಂದಾಗುವ ತೊಂದ.....

Japanese Encephalitis ( JE) ಲಸಿಕಾ ಕಾರ್ಯಕ್ರಮದ ತರಬೇತಿ ಕಾರ್ಯಾಗಾರ -2022 ನ್ನುದಿನಾಂಕ 12-10-2022 ರಂದು ಮಾನ್ಯ ಜಿಲ್ಲಾ ಆರೋಗ್ಯ ಮತ್ತು...
13/10/2022

Japanese Encephalitis ( JE) ಲಸಿಕಾ ಕಾರ್ಯಕ್ರಮದ ತರಬೇತಿ ಕಾರ್ಯಾಗಾರ -2022 ನ್ನು
ದಿನಾಂಕ 12-10-2022 ರಂದು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉದ್ಘಾಟಿಸಿದರು ಹಾಗೂ ಮಾನ್ಯ RCH ಅಧಿಕಾರಿಗಳು ಅಧೀನ ಸಂಸ್ಥೆಗಳ ವೈದ್ಯಾಧಿಕಾರಿಗಳಿಗೆ ಹಾಗೂ ಇತರೆ ಇಲಾಖೆಯ ಪ್ರಮುಖರಿಗೆ ತರಬೇತಿ ನೀಡಿದರು.

ಉಡುಪಿ ಜಿಲ್ಲೆ

ಜನಸಂಖ್ಯಾ ಸಂಶೋಧನಾ ಕೇಂದ್ರ ಧಾರವಾಡ ಇಲ್ಲಿನ  ತಂಡವು ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಉಡುಪಿ ಜಿಲ್ಲೆಗೆ  ಆಗಮಿಸಿದ್ದು, ಇಂದು ಜಿಲ್ಲಾ ಆರೋಗ್ಯ ...
22/08/2022

ಜನಸಂಖ್ಯಾ ಸಂಶೋಧನಾ ಕೇಂದ್ರ ಧಾರವಾಡ ಇಲ್ಲಿನ ತಂಡವು ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಇಂದು ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿಗಳ ಕಛೇರಿಯಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಡಿ.ಹೆಚ್ ಓ, ಜಿಲ್ಲಾ ಸರ್ಜನ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ RCHO,DFWO,DSO,DVBDCO,DLO, ಮತ್ತು NHM ನ DAM, DPM ಹಾಗೂ HS, DHEO ಹಾಗೂ ಎಲ್ಲಾ ವಿಭಾಗಗಳ ಕಾರ್ಯಕ್ರಮ ಸಂಯೋಜಕರುಗಳು ಹಾಜರಿದ್ದರು.

30.09.2022 ರವರೆಗೆ ರಾಜ್ಯಾದ್ಯಂತ “ಕೊರೊನಾ ಮುನ್ನೆಚ್ಚರಿಕಾ ಡೋಸ್ ಲಸಿಕಾ ಅಭಿಯಾನ” ನಡೆಯುತ್ತಿದ್ದು ಕೋವಿಡ್ 2ನೇ ಡೋಸ್ ಪಡೆದು6ತಿಂಗಳು ಪೂರ್ಣವ...
18/08/2022

30.09.2022 ರವರೆಗೆ ರಾಜ್ಯಾದ್ಯಂತ “ಕೊರೊನಾ ಮುನ್ನೆಚ್ಚರಿಕಾ ಡೋಸ್ ಲಸಿಕಾ ಅಭಿಯಾನ” ನಡೆಯುತ್ತಿದ್ದು ಕೋವಿಡ್ 2ನೇ ಡೋಸ್ ಪಡೆದು6ತಿಂಗಳು ಪೂರ್ಣವಾದ 18 ವರ್ಷ ಮೇಲ್ಪಟ್ಟವರು ಲಸಿಕೆಯ ಮುನ್ನೆಚ್ಚರಿಕಾ ಡೋಸ್ ನ್ನು ಉಚಿತವಾಗಿ ಪಡೆದು ಇದರ ಉಪಯೋಗವನ್ನು ಪಡೆಯಲು ಉಡುಪಿ ಡಿ.ಹೆಚ್.ಓ ಡಾ.ನಾಗಭೂಷಣ ಉಡುಪ ಹೆಚ್ ‌ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾಇವರು ಉಡುಪಿ ಭೇಟಿ ವೇಳೆ ತಮ್ಮ ಆರೋಗ್ಯಸಮಸ್ಯೆಯಿಂದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ಣು ಇಲ್ಲಿಗೆ ಆ...
17/08/2022

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾಇವರು ಉಡುಪಿ ಭೇಟಿ ವೇಳೆ ತಮ್ಮ ಆರೋಗ್ಯಸಮಸ್ಯೆಯಿಂದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ಣು ಇಲ್ಲಿಗೆ ಆಗಮಿಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ವಿ.ರಾವ್‌ ರವರಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯ ಸಿಬ್ಬಂದಿಗಳು ನೀಡುತ್ತಿರುವ ವೈದ್ಯಕೀಯ ಸೇವೆ & ಸೌಕರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಕಾರ್ಯಕ್ರಮದ ಮಾಹಿತಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ.
10/08/2022

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಕಾರ್ಯಕ್ರಮದ ಮಾಹಿತಿ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ.

08/08/2022

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಇಲ್ಲಿನ ಶಾಲಾ ಮಕ್ಕಳಿಂದ ಕೈ ತೊಳೆಯುವ ಬಗ್ಗೆ ಪ್ರಾತ್ಯಾಕ್ಷಕತೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ- ಐ ಇ ಸಿ ವಿಭಾಗ.

ದಿನಾಂಕ: 04.06.2022 ರಂದು ಡಾ| ಎಂ.ಸಿ.ರವಿ, ಉಪನಿರ್ದೇಶಕರು, ಶ್ರೀ ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿಗಳು, ವಿಭಾಗೀಯ ಸಹ ನಿರ್ದೇಶಕರ ಕಛೇರಿ, ...
04/06/2022

ದಿನಾಂಕ: 04.06.2022 ರಂದು ಡಾ| ಎಂ.ಸಿ.ರವಿ, ಉಪನಿರ್ದೇಶಕರು, ಶ್ರೀ ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿಗಳು, ವಿಭಾಗೀಯ ಸಹ ನಿರ್ದೇಶಕರ ಕಛೇರಿ, ಮೈಸೂರು ವಿಭಾಗ ಇವರು ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲನಾ ಪ್ರವಾಸದ ಬೇಟಿಯಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಹಾಗೂ ಇದೇ ಸಂದರ್ಭದಲ್ಲಿ ಡಿ.ಹೆಚ್.ಒ. ಕಛೇರಿಗೆ ಬೇಟಿ ನೀಡಿ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, DPM,DAM,DCQA,DHEO,AAO,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಇತರೇ ಸಿಬ್ಬಂದಿಗಳು ಉಪಸ್ಥಿತರಿದ್ದರು.

Address


Website

Alerts

Be the first to know and let us send you an email when District Health Society Udupi posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share