ಹೊಯ್ಸಳ ಸುದ್ದಿ Hoysalasuddi

  • Home
  • ಹೊಯ್ಸಳ ಸುದ್ದಿ Hoysalasuddi

ಹೊಯ್ಸಳ ಸುದ್ದಿ Hoysalasuddi Contact information, map and directions, contact form, opening hours, services, ratings, photos, videos and announcements from ಹೊಯ್ಸಳ ಸುದ್ದಿ Hoysalasuddi, Media/News Company, .

ಟಿಪ್ಪರ್ ಅರಿದು ಅರಸೀಕೆರೆ ಹೊಯ್ಸಳೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿ ಸಾವುಅರಸೀಕೆರೆಯ ಬಾಣವಾರ ಹೋಬಳಿಯ ಚಿಕ್ಕಮ್ಮನಹಳ್ಳಿಯ ಬಳ್ಳಿ ದ್ವಿಚಕ್ರ ವಾ...
06/07/2023

ಟಿಪ್ಪರ್ ಅರಿದು ಅರಸೀಕೆರೆ ಹೊಯ್ಸಳೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿ ಸಾವು

ಅರಸೀಕೆರೆಯ ಬಾಣವಾರ ಹೋಬಳಿಯ ಚಿಕ್ಕಮ್ಮನಹಳ್ಳಿಯ ಬಳ್ಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ ಇಬ್ಬರು ಯುವಕರಿಗೆ ಟಿಪ್ಪರ್ ಗಾಡಿ ಗುದ್ದಿ ಒಬ್ಬ ಯುವಕ ಸ್ಥಳದಲ್ಲೇ ಮೃತನಾಗಿದ್ದಾನೆ.
ಮೃತ ಯುವಕ ಸಿದ್ದರಾಮೇಶ (19 ವರ್ಷ) ಹೊಯ್ಸಳೇಶ್ವರ ಪದವಿ ಕಾಲೇಜಿನ ಪ್ರಥಮ ವರ್ಷದ ಕಲಾ ವಿಭಾಗ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಸದ್ಯ ಮೃತ ಯುವಕನ ಕುಟುಂಬದ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ .
ನಗರದಲ್ಲಿ ಟಿಪ್ಪರ್ ಗಾಡಿಗಳು ನಾಮ ಫಲಕಗಳಿಲ್ಲದೆ ಅತಿ ವೇಗವಾಗಿ ಮತ್ತು ಓವರ್ಲೋಡ್ ಹಾಕಿಕೊಂಡು ಓಡಾಡುತ್ತಿದ್ದು ಕಳೆದ ಎರಡು-ಮೂರು ವರ್ಷಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿ ಅನೇಕರು ಮೃತಪಟ್ಟರೆ ಇನ್ನೂ ಕೆಲವರು ಅಂಗಾಂಗಳನ್ನು ಕಳೆದುಕೊಂಡಿದ್ದಾರೆ. ಇನ್ನೂ ಮುಂದೆಯಾದರು ಪೋಲಿಸ್ ಇಲಾಖೆಯವರು ಕಾನೂನು ಬಾಹಿರವಾಗಿ ಓಡಾಡುತ್ತಿರುವ ಟಿಪ್ಪರ್ ಗಳಿಗೆ ಕಡಿವಾಣ ಹಾಕಬೇಕಾಗಿದೆ.
Karnataka State Police
Banavara Police Station
Arsikere peoples

ಕರವೇ ರಾಜ್ಯ ಅಧ್ಯಕ್ಷರಾದ ಟಿ ಎ ನಾರಾಯಣಗೌಡರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದ ಸಂದರ್ಭ ಆಸ್ಪತ್ರೆಗೆ ದಾಖಲಾದ ಕ್ಷಣ ಆರೋಗ್ಯ ವಿಚಾರಿಸಲು ಆಸ್ಪ...
28/06/2023

ಕರವೇ ರಾಜ್ಯ ಅಧ್ಯಕ್ಷರಾದ ಟಿ ಎ ನಾರಾಯಣಗೌಡರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದ ಸಂದರ್ಭ ಆಸ್ಪತ್ರೆಗೆ ದಾಖಲಾದ ಕ್ಷಣ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

07/05/2023

ಅರಸೀಕೆರೆಯಲ್ಲಿ ಯಾರಿಗೆ ಈ ಬಾರಿ ಮತದಾರ ಪ್ರಭುಗಳ ಒಲವು.?.!!!!!!

ಇದೇ ಮೊಟ್ಟ ಮೊದಲ ಬಾರಿಗೆ ಹೊಯ್ಸಳ ಸುದ್ದಿ ವತಿಯಿಂದ ಚುನಾವಣೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ.. ‌!!!!

ವರದಿ
ಪರಮಶಿವ,ಭರತ್,ಮಂಜುನಾಥ್

02/05/2023

*ಪರಮಶಿವ ವಿಶೇಷವರದಿಗಾರ*

*ಬನ್ನಿ ಎಲ್ಲಾ ಮತದಾರ ಬಾಂದವರೆ ಮರೆಯದೆ ಮತ ಚಲಾಯಿಸೋಣ ಪ್ರಜಾಪ್ರಭುತ್ವದ ಘನತೆಯನ್ನು ಸಾರೊಣ*
Mail :- hoysalasuddi01@gmail
What's up no :-9606304756

https://youtu.be/tdT-57AtM4o*ಮಂಜುನಾಥ್ ವಿಶೇಷ ‌ವರದಿಗಾರ**ನಮ್ಮ ನಿಮ್ಮ ಹಕ್ಕು*!*ಸಾಂವಿಧಾನಿಕ ಕರ್ತವ್ಯ. ಮರೆಯದೆ ಮತ ಚಲಾಯಿಸಿ**ಲೈಕ್ ಮಾಡ...
29/04/2023

https://youtu.be/tdT-57AtM4o

*ಮಂಜುನಾಥ್ ವಿಶೇಷ ‌ವರದಿಗಾರ*

*ನಮ್ಮ ನಿಮ್ಮ ಹಕ್ಕು*!
*ಸಾಂವಿಧಾನಿಕ ಕರ್ತವ್ಯ. ಮರೆಯದೆ ಮತ ಚಲಾಯಿಸಿ*

*ಲೈಕ್ ಮಾಡಿ ಕಮೆಂಟ್ ಮಾಡಿ ಸಬ್ಸ್ಕ್ರೈಬ್ ಆಗಿ ಹಾಗೂ ಲೈಕ್ ಕೊಡೋದು ಮರಿಬೇಡಿ*

*🔔 *PLEASE SUBSCRIBE CHANNEL AND LIKE SUPPORT COMMENTS ಹೊಯ್ಸಳ ಸುದ್ದಿ*

*ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ* *Hoysalasuddi
ಹೊಯ್ಸಳ ಸುದ್ದಿ
Mail :- hoysalasuddi01@gmail
What's up no :-9606304756

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಸಾರ್ವಜನಿಕರ ದನಿ.ದೇಶದ ಭದ್ರಬುನಾದಿಗೆ ಸೆಟೆದೆದ್ದ ಅಸ್ತ್ರ.ನಮ್ಮ ನಿಮ್ಮ ಹಕ್ಕು!ಸಾಂವಿಧಾ...

https://youtu.be/QImZrYY8ccAವರದಿಕೃಷ್ಣಮೂರ್ತಿ ಎಸ್8151035672*ಪಟೇಲ್ ಶಿವಪ್ಪಣ್ಣ .ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್...
25/04/2023

https://youtu.be/QImZrYY8ccA

ವರದಿ
ಕೃಷ್ಣಮೂರ್ತಿ ಎಸ್
8151035672

*ಪಟೇಲ್ ಶಿವಪ್ಪಣ್ಣ .ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ಯಾಗಿ ನೇಮಕ*.

*ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಇಂದು ಪಟೇಲ್ ಶಿವಪ್ಪಣ್ಣನವರಿಗೆ ಅರಸೀಕೆರೆ ನಗರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು*.

ಪಟೇಲ್ ಶಿವಪ್ಪಣ್ಣ .ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ಯಾಗಿ ನೇಮಕ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರ....

Contact for adsW'ts Up No :- 96063 04756
22/04/2023

Contact for ads
W'ts Up No :- 96063 04756

https://youtu.be/MthjyQl2cOE*BIG BREKING NEWS**ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಯೋಧರು*ವರದಿ *ಕೃಷ್ಣಮೂರ್ತಿ ಎಸ್ ವಿಶೇಷ...
21/04/2023

https://youtu.be/MthjyQl2cOE

*BIG BREKING NEWS*

*ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಯೋಧರು*

ವರದಿ
*ಕೃಷ್ಣಮೂರ್ತಿ ಎಸ್ ವಿಶೇಷವರದಿಗಾರ*

ಪೂಂಛ್ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ: ಸೇನೆ ಶ್ರೀನಗರ, ಏಪ್ರಿಲ್ 20: ಜ.....

ಪೋಲಿಸ್ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಸನ್ಮಾನ್ಯ ಶಾಸಕರಾದ ಶಿವಲಿಂಗೇಗೌಡ ರಿಗೆ  ಮನವಿ ಸಲ್ಲಿಸಲಾಯಿತು. ಅರಸೀಕೆರೆ ವಿಧಾನಸಭೆಯ ಶಾಸಕರಾದ ಸನ್ಮಾ...
21/09/2021

ಪೋಲಿಸ್ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಸನ್ಮಾನ್ಯ ಶಾಸಕರಾದ ಶಿವಲಿಂಗೇಗೌಡ ರಿಗೆ ಮನವಿ ಸಲ್ಲಿಸಲಾಯಿತು.

ಅರಸೀಕೆರೆ ವಿಧಾನಸಭೆಯ ಶಾಸಕರಾದ ಸನ್ಮಾನ್ಯ ಶಿವಲಿಂಗೇಗೌಡರಿಗೆ ಬೆಂಗಳೂರಿನ ಶಾಸಕ ಭವನದಲ್ಲಿ ರಾಜ್ಯದ ಪೋಲಿಸ್ ಕಾನ್ಸ್‌ಟೇಬಲ್ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು ಎಂದು ರಾಜ್ಯದ ಎಲ್ಲಾ ಅಭ್ಯರ್ಥಿಗಳ ಪರವಾಗಿ ಅರಸೀಕೆರೆಯ ಪೋಲಿಸ್ ಕಾನ್ಸ್‌ಟೇಬಲ್ ಆಕಾಂಕ್ಷೆಗಳಾದ ಭರತ್. ತಿಪಟೂರಿನ ಬುಷಣ್, ರಾಯಚೂರಿನ ರಾಹುಲ್‌, ಲಿಖಿತ್ ಹಾಗೂ ಹೆಲ್ಪ್ ಹ್ಯಾಂಡ್ಸ್ ಚಾರಿಟಬಲ್ ಟ್ರಸ್ಟ್(ರಿ) ನ ಅಧ್ಯಕ್ಷರಾದ ಕೃಷ್ಣಮೂರ್ತಿ ಎಸ್ ರವರು ಮನವಿ ಮಾಡಿ ನಂತರ ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಉಪಾಧ್ಯಕ್ಷ : ಜೀವಿಟಿ ಬಸವರಾಜು ಗೆ ಅಭಿನಂದನೆ.ಅರಸೀಕೆರೆ : ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ   ಉಪಾಧ್ಯಕ್ಷ...
13/09/2021

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಉಪಾಧ್ಯಕ್ಷ : ಜೀವಿಟಿ ಬಸವರಾಜು ಗೆ ಅಭಿನಂದನೆ.

ಅರಸೀಕೆರೆ : ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ನೇಮಕವಾಗಿರುವ ಅರಸೀಕೆರೆ ತಾಲ್ಲೂಕಿನ ಜೀವಿಟಿ ಬಸವರಾಜು ರವರಿಗೆ ಹುಟ್ಟೂರಾದ ಗಂಜಿಗೆರೆಪುರ ಗ್ರಾಮದ ಗ್ರಾಮಸ್ಥರು ಗ್ರಾಮದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೆ ಮೊದಲ ಬಾರಿಗೆ ತಮ್ಮ ಹುಟ್ಟೂರಾದ ಗಂಜಿಗೆರೆಪುರಕ್ಕೆ ಆಗಮಿಸಿದ ಜೀವಿಟಿ ಬಸವರಾಜು ರವರಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ತಾರೆಲ್ಲರು ಸೇರಿ ಪಕ್ಷಾತೀತವಾಗಿ ಅಭಿನಂಧಿಸಿದರು.
ಈ ಸಮಯದಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ್, ತಾ ಪಂ ಮಾಜಿ ಸದಸ್ಯ ಬೋಜನಾಯ್ಕ್, ಏ ಪಿ ಎಂ ಸಿ ಮಾಜಿ ಅಧ್ಯಕ್ಷ ನಾಗರಾಜು, ಹಿದುಳಿದ ವರ್ಗಗಳ ಮುಖಂಡ ಕುರುವಂಕ ರೇಣುಕಪ್ಪ, ರೋಟರಿ ಅರುಣ್ ಕುಮಾರ್ ,ಸರ್ವೇ ಚಂದ್ರು,ಲೋಕೇಶ್,ದೇವರಾಜು ,ಹನುಮಾನ್ ಕ್ಲಬ್ ಕಮಲ್ ಜೈನ್,ಶ್ರೀನಿವಾಸ್,ನಂಜೇಶ್ ಹಾಗೂ ಗಂಜಿಗೆರೆ ಗ್ರಾಮಸ್ಥರು ಇತರರು ಹಾಜರಿದ್ದರು.

ಎಟಿಎಂ ದರೋಡೆಗೆ ಯತ್ನಹಾಸನ:10/09/2021  ಎಟಿಎಂ ದರೋಡೆಗೆ ಯತ್ನ ಮಾಡಿ ವಿಫಲವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಅರ...
11/09/2021

ಎಟಿಎಂ ದರೋಡೆಗೆ ಯತ್ನ
ಹಾಸನ:10/09/2021 ಎಟಿಎಂ ದರೋಡೆಗೆ ಯತ್ನ ಮಾಡಿ ವಿಫಲವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.

ಅರಸೀಕೆರೆ ಪಟ್ಟಣದ ಬಿಎಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆಯ ಸಮೀಪವಿರುವ ಎಟಿಎಂ ನಲ್ಲಿ ಹಣ ದೋಚಲು ಮುಂದಾಗಿ ವಿಫಲ ಯತ್ನ ಮಾಡಿದ್ದು ಹಣ ಸಿಗದೆ ಖದೀಮರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸಾಗಿದ್ದಾರೆ.

ಸರಿಸುಮಾರು ಮಧ್ಯರಾತ್ರಿ ಒಂದರಿಂದ ಎರಡು ಗಂಟೆಯ ಸಮಯದಲ್ಲಿ ಘಟನೆ ಸಂಭವಿಸಿದೆ. ಎಟಿಎಂಗೆ ರಾತ್ರಿ ಪಾಳಯದ ಕಾವಲುಗಾರ ಇಲ್ಲದ ಕಾರಣ ಇಂತಹದೊಂದು ಘಟನೆ ಸಂಭವಿಸಿದ್ದು ಬ್ಯಾಂಕಿನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮತ್ತು ಸತತವಾಗಿ 4 ದಿನಗಳ ಕಾಲ ರಜೆ ಬಂದಿದ್ದರಿಂದ ಎಟಿಎಂ ಗೆ ಬ್ಯಾಂಕ್ ಸಿಬ್ಬಂದಿಗಳು ಸುಮಾರು 62 ಲಕ್ಷ ಹಣವನ್ನು ತುಂಬಿದ್ದರು ಎನ್ನಲಾಗಿದೆ. ಇದನ್ನ ಮನಗಂಡಿದ್ದ ಕೆಲವು ಕದೀಮರು ಹಣವನ್ನು ಲಪಟಾಯಿಸಲು ಸಂಚು ರೂಪಿಸಿ ವಿಫಲತೆ ಕಂಡಿದ್ದಾರೆ.

ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಅರಸೀಕೆರೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಹಬ್ಬ ಇರುವುದರಿಂದ ಬ್ಯಾಂಕಿಗೆ ರಜೆ ಇದೆ ಹೀಗಾಗಿ, ಸಿಸಿಟಿವಿ ದೃಶ್ಯಾವಳಿಗಳ ಕಲೆಹಾಕಲು ತಡವಾಗುತ್ತಿತ್ತು ಬ್ಯಾಂಕ್ ತೆರೆದ ಬಳಿಕ ಖದೀಮರ ಕೈಚಳಕ ದೃಶ್ಯಾವಳಿಗಳು ಪೊಲೀಸರ ಕೈಗೆ ಸಿಗಲಿದೆ.

ಇನ್ನು ಈ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ

10/09/2021 ಅರಸೀಕೆರೆ ಪ್ರತಿವರ್ಷದಂತೆ ಗಣಪತಿಯ ವೈಭವ ಮಹೋತ್ಸವವನ್ನು ಆಚರಣೆ ಮಾಡಲು ಸಾಧ್ಯವಾಗದಿದ್ದರೂ ಪ್ರತಿವರ್ಷದಂತೆ ಈ ವರ್ಷವೂ ಅದೇ ರೀತಿಯ ...
11/09/2021

10/09/2021 ಅರಸೀಕೆರೆ ಪ್ರತಿವರ್ಷದಂತೆ ಗಣಪತಿಯ ವೈಭವ ಮಹೋತ್ಸವವನ್ನು ಆಚರಣೆ ಮಾಡಲು ಸಾಧ್ಯವಾಗದಿದ್ದರೂ ಪ್ರತಿವರ್ಷದಂತೆ ಈ ವರ್ಷವೂ ಅದೇ ರೀತಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಭಾರಿ ಗಣಪತಿಯನ್ನು ಅರಸೀಕೆರೆಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

ತಲೆತಲಾಂತರಗಳಿಂದ ಅರಸೀಕೆರೆ ಗಣಪತಿಯನ್ನು ಗರುಡನಗಿರಿ ರಸ್ತೆಯಲ್ಲಿರುವ ಮಹದೇವ್ ಎಂಬವರ ಕುಟುಂಬ ಮೂರ್ತಿಯನ್ನು ತಯಾರು ಮಾಡುತ್ತಾ ಬಂದಿದೆ. ಕಳೆದೆರಡು ವರ್ಷಗಳಿಂದ ಕೋರೋನಾ ಆವರಿಸಿದ ಹಿನ್ನೆಲೆಯಲ್ಲಿ ಸರಳತೆಯಲ್ಲಿ ಸರಳವಾಗಿ ಗಣೇಶೋತ್ಸವ ಹಾಗೂ ಜಾತ್ರಾಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು ಈ ವರ್ಷವೂ ಕೋವಿಡ್ 19 ನಿಯಮದ ಪ್ರಕಾರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಇಂದು ಮಧ್ಯಾಹ್ನ ಗರುಡನ ಗಿರಿ ರಸ್ತೆಯ ಮಹದೇವ್ ಎಂಬುವರ ಬಳಿಯಿಂದ ಬೃಹತ್ ಕ್ರೇನ್ ಮೂಲಕ ಗಣಪತಿಯನ್ನು ಟ್ರ್ಯಾಕ್ಟರ್ ಗೆ ಸ್ಥಳಾಂತರ ಮಾಡಿ ಅಲ್ಲಿ ಸಲ್ಲಿಸಬೇಕಾದ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಮೆರವಣಿಗೆಗೆ ಸ್ಥಳೀಯ ಶಾಸಕ ಶಿವಲಿಂಗೇಗೌಡ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಹೊರಟ ಮೂರ್ತಿ ಗರುಡನಗಿರಿ ಪೇಟೆಬೀದಿ ಬಿ ಎಚ್ ರಸ್ತೆ ಮೂಲಕ ಪಟ್ಟಣದ ಗಣಪತಿ ಆಸ್ಥಾನ ಮಂಟಪಕ್ಕೆ ತರುವ ಮೂಲಕ ಸಕಲ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೊನೆಗೂ ಮೂಲಸ್ಥಾನದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಗಣಪತಿ ಬಪ್ಪ ಮೋರಿಯ ಎಂದು ಘೋಷಣೆ ಕೂಗಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗಣಪತಿ ಪ್ರತಿಷ್ಠಾಪನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅರಸೀಕೆರೆಯಲ್ಲಿ ಪ್ರತಿವರ್ಷ 48 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಐದು ದಿನ ಪ್ರತಿಷ್ಠಾಪನೆ ಮಾಡಲಾಗಿದೆ ಗಣಪತಿಯನ್ನು ಈ ಬಾರಿ 9ದಿನ ಪ್ರತಿಷ್ಠಾಪನೆ ಮಾಡಲು ಜಿಲ್ಲಾಡಳಿತ ಅನುಮತಿ ನೀಡಲಾಗಿದೆ.

ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಡಿಜೆ ನೃತ್ಯದೊಂದಿಗೆ ಮಿನಿ ದಸರಾ ರೀತಿಯಲ್ಲಿ ಆಯೋಜನೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಅದಕ್ಕೆ ಕಡಿವಾಣ ಬಿದ್ದಿದ್ದರಿಂದ ಗಣಪತಿ ಭಕ್ತರಿಗೆ ಬೇಸರವೂ ಉಂಟಾಗಿರುವುದು ಅಷ್ಟೇ ಸತ್ಯ.

09/09/2021

ಅರಸೀಕೆರೆ ತಾಲೋಕಿನ ಮಾಡಳು ಗ್ರಾಮದ ಶ್ರೀ ಸ್ವರ್ಣಗೌರಿ ಅಮ್ಮನವರ ವಿಸರ್ಜನೆ.
ಅರಸೀಕೆರೆಯ ಮಾಡಾಳು ಗ್ರಾಮದ ಶ್ರೀ ಸ್ವರ್ಣಗೌರಿ ಅಮ್ಮನವರನ್ನು ವರ್ಷಕ್ಕೆ ಒಂದು ಸಾರಿ ಅಂದರೆ 9 ದಿನಗಳವರೆಗೆ ಪ್ರತಿಷ್ಠಾಪಿಸುವ ತಾಯಿಯನ್ನು ಕೋವಿಡ್-19 ರ ಇನ್ನಲೆಯಲ್ಲಿ ಒಂದೇ ದಿನಕ್ಕೆ ಸ್ತೀಮಿತಗೊಳಿಸಿ ವಿಸರ್ಜನೆ ಮಾಡಿರುವುದು ಅನೇಕಬಭಕ್ತಾದಿಗಳಿಗೆ ನಿರಾಸೆಯಾಗಿದೆ. ಒಟ್ಟಿನಲ್ಲಿ ದೇಶದ ಜನತೆ ಕೋವಿಡ್-19 ರಿಂದ ಮುಕ್ತಿ ಸಿಗಲಿ ಎಂದು ಎಲ್ಲಾ ಭಕ್ತಾದಿಗಳ ಹಾರೈಕೆ.

ಅರಸೀಕೆರೆ ತಾಲ್ಲೂಕಿನ ಭಾರತೀಯ ಗೋ ಪರಿವಾರ್ ‍ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ದಿನಾಂಕ 10/9/2021 ನೇ ಶುಕ್ರವಾರ ನಡೆಯಲಿರುವ ಗಣೇಶ ಚತುರ್ಥಿ...
08/09/2021

ಅರಸೀಕೆರೆ ತಾಲ್ಲೂಕಿನ ಭಾರತೀಯ ಗೋ ಪರಿವಾರ್ ‍ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ದಿನಾಂಕ 10/9/2021 ನೇ ಶುಕ್ರವಾರ ನಡೆಯಲಿರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಾಣಿಹತ್ಯೆ ಹಾಗೂ ಮಾಂಸ ಮಾರಾಟವನ್ನು ಕಸಾಯಿಖಾನೆಯಲ್ಲಿ ಪ್ರಾಣಿ ಹತ್ಯೆಯನ್ನು ನಿಷೇಧಿಸಬೇಕೆಂದು ಗ್ರೇಡ್-೨ ತಹಶೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಪರಸ್ ಜೈನ್, ನಾರಾಯಣ್, ಶಿವು, ವಕೀಲರಾದ ಸುನಿಲ್ ಕುಮಾರ್,ಅಂದಾನಿ, ಉಪಸ್ಥಿತರಿದ್ದರು...

ವರದಿ - ಸಿಂಧು ಅರಸೀಕೆರೆ

08/09/2021

ನೂತನ ಪೋಲೀಸ್ ವಸತಿ ಗೃಹ ಉದ್ಘಾಟನೆ

ಇಂದು ಅರಸೀಕೆರೆ ತಾಲ್ಲೂಕಿನ ಜನಪ್ರಿಯ ಶಾಸಕರಾದ ಶ್ರೀಯುತ ಕೆ ಎಂ ಶಿವಲಿಂಗೇಗೌಡರು ಗಂಡಸಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪೋಲಿಸ್ ವಸತಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ಹುಚ್ಚೆಗೌಡರು,ಡಿ.ಎಸ್.ಪಿ ನಾಗೇಶ್ ಸರ್ ಹಾಗೂ ಗಂಡಸಿಯ ಎಲ್ಲಾ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

07/09/2021

9 ದಿನಗಳಿಗೆ ಅರಸೀಕೆರೆ ಪ್ರಸನ್ನ ಗಣಪತಿಯ ವಿಸರ್ಜನೆ, ಶಾಂತಿ ಸಭೆಯಲ್ಲಿ ನಿರ್ಣಯ

ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಈ ಶಾಂತಿ ಸಭೆಯಲ್ಲಿ ಶ್ರೀ ಗಣೇಶೋತ್ಸವ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಅರಸೀಕೆರೆ ನಗರದ ವೃತ್ತ ನೀರಿಕ್ಷಕರಾ ಸೋಮೇಗೌಡ ರವರು ತಿಳಿಸಿದರು ನಂತರ ಸನ್ಮಾನ್ಯ ಶಾಸಕರಿಗೂ ಭಕ್ತಮಡಂಳಿಯವರಿಗೂ ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರಿಗೂ ಸಾರ್ವಜನಿಕರಿಗೂ ಪ್ರತಿಷ್ಟಾಪನೆಯ ವಿಚಾರದಲ್ಲಿ ಗದಲ ಸೃಷ್ಟಿಯಾಗಿ ಭಕ್ತರ ಒತ್ತಾಯದ ಮೇರೆಗೆ ಹಾಗೂ ನಗರ ಸಭೆಯ ಅಧ್ಯಕ್ಷರಾದ ಗಿರೀಶ್ ರವರ ಸಲಹೆ ಮೇರೆಗೆ 9 ದಿನಗಳಿಗೆ ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ವಿಸರ್ಜನೆ ಮಾಡುವಂತೆ ಸಭೆಯ ಅಧ್ಯಕ್ಷತೆ ವಹಿಸಿದ ಸನ್ಮಾನ್ಯ ಶಾಸಕರಾದ ಶಿವಲಿಂಗೇಗೌಡರು ಸಾರ್ವಜನಿಕ ನಿರ್ಣಯವನ್ನು ಮಾಡಿದ್ದರು. ನಂತರ ಮಾತನಾಡಿದ ಡಿವೈಎಸ್ ಪಿ ನಾಗೇಶ್ ರವರು ಅರಸೀಕೆರೆಯ ಪ್ರಸನ್ನ ಗಣಪತಿ ವರತು ಪಡಿಸಿ ಉಳಿದಂತೆ ಎಲ್ಲಾರಿಗೂ ಪರಿಷ್ಕೃತ ಮಾರ್ಗಸೂಚಿ ಅನ್ವಯವಾಗುತ್ತದೆ ಎಂದು ತಿಳಿಸಿದ್ದರು
ಈ ಸಭೆಯಲ್ಲಿ ಮಾನ್ಯ ಶಾಸಕರಾದ ಶಿವಲಿಂಗೇಗೌಡರು , ನಗರ ಸಭೆಯ ಅಧ್ಯಕ್ಷರಾದ ಗಿರೀಶ್, ಉಪಾಧ್ಯಕ್ಷರಾದ ಕಾಂತೇಶ್ , ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ , ಡಿವೈಎಸ್ ಪಿ ನಾಗೇಶ್ , ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಎನ್ ಡಿ ಪ್ರಸಾದ್ ರವರು ಗಣಪತಿ ಮಂಡಳಿಯ ಎಲ್ಲಾ ಪದಾಧಿಕಾರಿಗಳು ವಿವಿಧ ಸಂಘಟನೆಯ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಈ ಶಾಂತಿ ಸಭೆಯಲ್ಲಿ ಹಾಜರಿಂದರು

ಎಲ್ಲಾರು ಪಾಲಿಸಲೇ ಬೇಕಾದ ಸರ್ಕಾರದ  ಸರಳ ಶ್ರೀ ಗಣೇಶೋತ್ಸವ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ
07/09/2021

ಎಲ್ಲಾರು ಪಾಲಿಸಲೇ ಬೇಕಾದ ಸರ್ಕಾರದ ಸರಳ ಶ್ರೀ ಗಣೇಶೋತ್ಸವ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ

ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಎಚ್.ಕೆ ವಿವೇಕಾನಂದ ಕರೆ ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹೊರಟಿರುವ ಸಾಮಾಜಿಕ ಕಾರ್ಯಕರ್ತ ಎಚ್.ಕೆ....
07/09/2021

ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಎಚ್.ಕೆ ವಿವೇಕಾನಂದ ಕರೆ

ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹೊರಟಿರುವ ಸಾಮಾಜಿಕ ಕಾರ್ಯಕರ್ತ
ಎಚ್.ಕೆ. ವಿವೇಕಾನಂದ್ ಅರಸೀಕೆರೆ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಾ ಮಾರ್ಗದ ನಡುವೆ ವಿವೇಕಾನಂದ ಶಿಕ್ಷಣ ಕಾಲೇಜಿಗೆ ಭೇಟಿ ನೀಡಿದ್ದರು, ಈ ವೇಳೆ ಪಿಯು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚೆಗೆ ಮಾನವ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ, ವಿದ್ಯಾರ್ಥಿಗಳು ಆ ದಿಸೆಯಲ್ಲಿ ದೇಶವನ್ನು ಕಟ್ಟುವಂತಹ ಉತ್ತಮ ಉದಾತ್ತ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು, ಸಭೆಯಲ್ಲಿ ಪ್ರಾಂಶುಪಾಲರು ಬಸವರಾಜ್ ಸರ್ ಮತ್ತು ದ.ಸಂ.ಸ ಕೆ ಆನಂದ್, ಕವಿಯತ್ರಿ ಮಮತಾ ಮತ್ತು ಕಾಲೇಜಿನ ಪ್ರಾಧ್ಯಾಪಕರು ಉಪನ್ಯಾಸಕರು ಮತ್ತು ಮಕ್ಕಳು ಭಾಗಿಯಾಗಿದ್ದರು, ಎಚ್.ಕೆ ವಿವೇಕಾನಂದರವರು ಈವರೆವಿಗೂ ಒಟ್ಟು 9500 km ಪಾದಯಾತ್ರೆ ಮಾಡಿರುವ ಇವರು ಅರಸೀಕೆರೆ ಮಾರ್ಗವಾಗಿ ತಿಪಟೂರು ಕಡೆ ನಡೆದರು.

ವರದಿ - ಆದರ್ಶ

07/09/2021

ಅರಸೀಕೆರೆಯ ಪದವಿ ಕಾಲೇಜಿನ ಉಪನ್ಯಾಸಕರಾದ ಸುಧಾಕಲ್ಯಾಣ ರವರಯ ಪೊಲೀಸ್ ಕಾನ್ಸ್‌ಟೇಬಲ್ ನ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ಮನವಿ ಮಾಡಿದ್ದಾರೆ.

ಅರಸೀಕೆರೆ ನಗರದ ಬಿ.ಎಚ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ( ರಾಮಣ್ಣ ಶಾಲೆ) ಇಂದು 6 ಮತ್ತು 7 ನೇ ಪ್ರಾರಂಭಗೊಂಡ ಹಿನ್ನ...
06/09/2021

ಅರಸೀಕೆರೆ ನಗರದ ಬಿ.ಎಚ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ( ರಾಮಣ್ಣ ಶಾಲೆ) ಇಂದು 6 ಮತ್ತು 7 ನೇ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ನಗರಸಭೆ ಅಧ್ಯಕ್ಷ ಗಿರೀಶ್, ಬಿ.ಇ.ಓ ಮೋಹನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಪುಷ್ಪ ಮಳೆಗರೆದು ಸ್ವಾಗತಿಸಿದರು,
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಗಿರೀಶ್ ಅವರು ಕೊರೋನ ಕಾರಣದಿಂದಾಗಿ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೇರ ಬೋಧನೆ ಇರಲಿಲ್ಲ ಅಂತರ್ಜಲ ಹಾಗೂ ಶಿಕ್ಷಕರು ಮನೆಗೆ ಬಂದು ಬೋಧನೆ ಮಾಡುವರು, ಇದೀಗ ತರಗತಿಗಳು ಪ್ರಾರಂಭಗೊಂಡಿದೆ ನಿಮ್ಮ ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಮುನ್ನೆಚ್ಚರಿಕೆಯನ್ನು ಕೈಗೊಂಡಿದ್ದೇವೆ ಕೋವಿಡ್ ಮಾರ್ಗಸೂಚಿಯನ್ನು ಶಿಕ್ಷಕರು ಹೇಳಿದಂತೆ ನೀವು ಪಾಲಿಸಿ, ಶಿಕ್ಷಣದ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ, ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ ಎಂದು ಹೇಳಿದ್ದರು ಜೊತೆಗೆ ಶಾಲೆಯ ಅಭಿವೃದ್ಧಿಗೆ ನಮ್ಮ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು..

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ನಾಯಕ್ ಮಾತನಾಡಿ ಇಂದಿನಿಂದ ಬೌದ್ಧಿಕ ಶಾಲೆ ಆರಂಭಗೊಂಡಿದೆ ಶಿಕ್ಷಕರ ಜೊತೆ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಹೇಳಿದರು...
ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿರುವ ತಾಲ್ಲೂಕಿನ ನಾಲ್ವರು ಶಿಕ್ಷಕರುಗಳಾದ
1)ಮಾಗೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮಹೇಶ್ವರಪ್ಪ,
2) ನಾಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರಾಮೇಗೌಡ
3) ಚಗಚಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪರಮೇಶ್ವರಪ್ಪ
4) ಬಾಣಾವರ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸುಧಾ, ಅವರುಗಳನ್ನು ಅಭಿನಂದಿಸಲಾಯಿತು..

ಈ ಸಂದರ್ಭದಲ್ಲಿ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವ ಶಂಕರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್, ಶಿಕ್ಷಕ ಸಂಯೋಜಕ ಗಿರೀಶ್, ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ, ರಾಜ್ಯ ಸಂಘದ ನಾಮನಿರ್ದೇಶನ ಉಪಾಧ್ಯಕ್ಷ ಓಂಕಾರಮೂರ್ತಿ, ಕಾರ್ಯದರ್ಶಿ ಜಯರಾಮ್, ಶಾಲಾ ಮುಖ್ಯ ಶಿಕ್ಷಕಿ ರೇಣುಕಾ, ಸಹ ಶಿಕ್ಷಕರುಗಳಾದ ವೀಣಾ, ಲೋಲಾಕ್ಷಿ, ಧನಲಕ್ಷ್ಮಿ ಉಪಸ್ಥಿತರಿದ್ದರು....

#ವರದಿ- ಸಿಂಧು ಅರಸೀಕೆರೆ

ಅರಸೀಕೆರೆಯ ಹೆಸರಾಂತ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿಯವರ   ಬೆಟ್ಟದ ಮೇಲಿನ ಶನಿವಾರದ ಪ್ರಯುಕ್ತ   ಈ ದಿನದ ಅಲಂಕಾರಮಾಹಿತಿ ಸಂಗ್ರಹ :- ಭರತ ಜಿ...
04/09/2021

ಅರಸೀಕೆರೆಯ
ಹೆಸರಾಂತ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿಯವರ ಬೆಟ್ಟದ ಮೇಲಿನ ಶನಿವಾರದ ಪ್ರಯುಕ್ತ ಈ ದಿನದ ಅಲಂಕಾರ

ಮಾಹಿತಿ ಸಂಗ್ರಹ :- ಭರತ ಜಿ ಎಮ್

ಅರಸೀಕೆರೆ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಯುವ ಮೋರ್ಚಾ ಘಟಕದ ವತಿಯಿಂದ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀ...
31/08/2021

ಅರಸೀಕೆರೆ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಯುವ ಮೋರ್ಚಾ ಘಟಕದ ವತಿಯಿಂದ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಲು ಒತ್ತಾಯಿಸಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಪ್ರತಿಭಟನೆ ನಡೆಸುವುದರ ಮೂಲಕ ಗ್ರೇಡ್-೨ ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ತೇಜಸ್ ಯಾದಾಪುರ ಅವರು ಕನ್ನಡಿಗರು ಊಟ ಮಾಡುವಾಗ ಇಂದಿರಾಗಾಂಧಿಯ ಕರಾಳ ದಿನ ನೆನಪು ಮಾಡಿಕೊಳ್ಳುವುದು ಬೇಡ ಮತ್ತು ಯಾವುದೇ ಪಕ್ಷದ ವ್ಯಕ್ತಿಗಳ ಹೆಸರು ಬೇಡ ಆದ್ದರಿಂದ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿದರೆ ಎಲ್ಲಾ ಜನರು ಬಂದು ಊಟ ಮಾಡುತ್ತಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಅರಸೀಕೆರೆ, ಗ್ರಾಮಾಂತರ ಯುವ ಮೋರ್ಚಾ ಉಪಾಧ್ಯಕ್ಷ ರಾದ ತಿಮ್ಲಾಪುರ ಕೀರ್ತಿ ಕಣಕಟ್ಟೆ ಚಂದ್ರು ಕಾರ್ಯದರ್ಶಿಗಳಾದ ಸಂದೀಪ್, ಶಿವಾನಂದ್ ಜಾಜೂರು, ಆನಂದ್, ಸೂರಜ್, ನವನೀತ್, ನಿರಂಜನ್, ಡರೆನ್ ,ಮತ್ತಿತರರು ಉಪಸ್ಥಿತರಿದ್ದರು.

ಅರಸೀಕೆರೆ ತಾಲ್ಲೂಕಿನಲ್ಲಿ ದಿನಾಂಕ 01/09/2021 ರಂದು ನಡೆಯಲಿರುವ ಲಸಿಕಾ ಮಹಾಮೇಳದ ಸ್ಥಳ ಮತ್ತು ಸಿಬ್ಬಂದಿಗಳ ವಿವರ  ಕೆಳಕಂಡಂತಿದೆ
31/08/2021

ಅರಸೀಕೆರೆ ತಾಲ್ಲೂಕಿನಲ್ಲಿ ದಿನಾಂಕ 01/09/2021 ರಂದು ನಡೆಯಲಿರುವ ಲಸಿಕಾ ಮಹಾಮೇಳದ ಸ್ಥಳ ಮತ್ತು ಸಿಬ್ಬಂದಿಗಳ ವಿವರ ಕೆಳಕಂಡಂತಿದೆ

*ಬಾಣಾವರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಆತ್ಮಹತ್ಯೆ ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ವಾಹನ ತಪಾಸಣೆ ವೇಳೆ  ಚಾಲಕ ಮಂಜುನಾಥ್ (50) ತನ್ನ ವ...
31/08/2021

*ಬಾಣಾವರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಆತ್ಮಹತ್ಯೆ
ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ವಾಹನ ತಪಾಸಣೆ ವೇಳೆ ಚಾಲಕ ಮಂಜುನಾಥ್ (50) ತನ್ನ ವಾಹನದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಬಾಣಾವರ ಸಮೀಪದ ಸರ್ವೆ ಕೊಪ್ಪಲು ಮೂಲದವರಾಗಿದ್ದು
ಆರ್.ಟಿ.ಓ ಅಧಿಕಾರಿಗಳ ತಪಾಸಣೆಯ ವೇಳೆ ಹದಿನೇಳು ಸಾವಿರ ದಂಡವಿಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೊರೋನಾ ಹಿನ್ನೆಲೆಯಲ್ಲಿ ವಾಹನ ಸಾಲ ತೀರಿಸಲಾಗದೆ ಮೊದಲೇ ಮನನೊಂದಿದ್ದರು ಎಂದು ಸಾರ್ವಜನಿಕರು ದೂರಿದ್ದಾರೆ.
ಆರ್.ಟಿ.ಓ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮತ್ತು ವಾಹನ ಮಾಲೀಕರು ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ,
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿ.ಸಿ. ಆಗಮಿಸಬೇಕೆಂದು ಒತ್ತಾಯ ಮಾಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತು ಸಾರ್ವಜನಿಕರ ನಿಯಂತ್ರಣ ಮಾಡುವಲ್ಲಿ ಅರಸೀಕೆರೆ ಹಾಗೂ ಬಾಣಾವರ ಪೊಲೀಸರು ಹರಸಾಹಸಪಟ್ಟರು.....

ಬ್ಲಾಕ್ ಮೇಲ್ ಅರಸೀಕೆರೆ ಯುವಕ ಆತ್ಮಹತ್ಯೆ.ಹಾಸನ (ಆ 14)  : ಅರಸೀಕೆರೆ ನಿವಾಸಿ ಸುಪ್ರಿತ್ (32) ಆತ್ಮಹತ್ಯೆ ಮಾಡಿಕೊಂಡ  ದುರ್ದೈವಿ ಎನ್ನಲಾಗಿದೆ...
16/08/2021

ಬ್ಲಾಕ್ ಮೇಲ್ ಅರಸೀಕೆರೆ ಯುವಕ ಆತ್ಮಹತ್ಯೆ.

ಹಾಸನ (ಆ 14) : ಅರಸೀಕೆರೆ ನಿವಾಸಿ ಸುಪ್ರಿತ್ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎನ್ನಲಾಗಿದೆ.
ಚೆಸ್ಕಾಂನಲ್ಲಿ ಸುಪ್ರಿತ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ.
ಕೆಲ ತಿಂಗಳ ಹಿಂದೆ ಅರಸಿಕೆರೆಯ ಮಲ್ಲೇಶ್ವರಂ ಬೆಟ್ಟಕ್ಕೆ ಯುವತಿ ಜೊತೆ ಹೋಗಿದ್ದ ಸುಪ್ರಿತ್ ಯುವತಿ ಜೊತೆ ಇದ್ದ ಖಾಸಗಿ ಕ್ಷಣದ ವಿಡಿಯೋವನ್ನು ಅಲ್ಲಿಯೇ ಇದ್ದ ನಾಲ್ವರು ಬಾಲಕರು ಸೆರೆ ಹಿಡಿದ್ದು ಈ ವಿಡಿಯೋ ತೋರಿಸಿ ಬ್ಲಾಕ್‌ ಮೇಲ್ ಮಾಡಲಾಗುತಿತ್ತು.
ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದರು. ಹೀಗೆ ಬಾಲಕರು ಕೇಳಿದಾಗಲೆಲ್ಲಾ ಸುಪ್ರಿತ್ ಹಣ ಕೊಡುತ್ತಿದ್ದ. ಇತ್ತೀಚೆಗೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು ಯುವತಿಯ ನಂಬರ್ ಕೊಡುವಂತೆಯೂ ಪೀಡಿಸುತ್ತಿದ್ದರು. ಇದರಿಂದ ಆತಂಕಗೊಂಡ ಸುಪ್ರಿತ್ ಉಪ್ಪಾರಪೇಟೆ ಲಾಡ್ಜ್‌ನಲ್ಲಿ ಶುಕ್ರವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಮೃತನಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ನಾಲ್ವರು ಬಾಲಕರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

16/08/2021

ಅರಸೀಕೆರೆ ನಗರ ಪೊಲೀಸರಿಂದ ಭರ್ಜರಿ ಬೇಟೆ.

ಅರಸೀಕೆರೆ: ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇತ್ತೀಚೆಗೆ ಮೋಟಾರ್ ಕಳ್ಳತನವಾಗಿ ಈ ಸಂಬಂಧ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅರಸೀಕೆರೆ ಪೊಲೀಸರು ಇದರ ಸೂಕ್ಷ್ಮತೆಯನ್ನು ಅರಿತು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿ ಮಂಜ( ಮಂಜುನಾಥ್) ಮಟ್ಟನವಿಲೆ ಮಂಜ ಈತನ ವಿಚಾರಣೆ ವೇಳೆ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು . ಒಟ್ಟು ಸುಮಾರು 10 ಲಕ್ಷ ಮೌಲ್ಯದ 2 ಕಾರು, 1 ಆಟೋ , 5 ಬೈಕುಗಳನ್ನು ವಶಪಡಿಸಿಕೊಂಡಿರುತ್ತಾರೆ ಹಾಗೂ ಈತನು ಹಲವು ಪೊಲೀಸ್‌ ಠಾಣೆಗಳಲ್ಲಿ ಕುರಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ ಎಂದು ತಿಳಿಸಿದ್ದರು.

07/08/2021

#ಹೊಸ_ಇತಿಹಾಸ_ಸೃಷ್ಟಿಸಿದ_ನೀರಜ್_ಚೋಪ್ರಾ

ಟೋಕಿಯೋ ಒಲಿಂಪಿಕ್ ನಲ್ಲಿ ಜಾವಲಿನ್ ಥ್ರೋ ನಲ್ಲಿ ಚಿನ್ನ ಗೆದ್ದ ಒಕ್ಕೂಟ ಭಾರತದ ನೀರಜ್ ಚೋಪ್ರಾ..
ನೂರು ವರ್ಷದಲ್ಲೇ‌ ಮೊದಲ ಬಾರಿಗೆ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ಒಕ್ಕೂಟ ಭಾರತ.. ಟೋಕಿಯೋ ಒಲಿಂಪಿಕ್‌ನಲ್ಲಿ ಒಕ್ಕೂಟ ಭಾರತದ ಮಡಿಲಿಗೆ ಏಳನೇ ಪದಕ

 #ರಾಜ್ಯದಾದ್ಯಂತ_ನೈಟ್_ಕರ್ಫ್ಯೂ_ಜಾರಿರಾಜ್ಯದಾದ್ಯಂತ ಈಗಿರುವ ನೈಟ್ ಕರ್ಫ್ಯೂವನ್ನು ರಾತ್ರಿ 9 ಗಂಟೆಯಿಂದ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚಿರುವ...
06/08/2021

#ರಾಜ್ಯದಾದ್ಯಂತ_ನೈಟ್_ಕರ್ಫ್ಯೂ_ಜಾರಿ

ರಾಜ್ಯದಾದ್ಯಂತ ಈಗಿರುವ ನೈಟ್ ಕರ್ಫ್ಯೂವನ್ನು ರಾತ್ರಿ 9 ಗಂಟೆಯಿಂದ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‌ಡೌನ್ ಜಾರಿಗೆ ಬರಲಿದೆ.

ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಕೋವಿಡ್ ನಿಯಂತ್ರಣ ಕುರಿತು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು,' ಶುಕ್ರವಾರದಿಂದಲೇ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್‌ಡೌನ್ ಜಾರಿಯಾಗಲಿದೆ' ಎಂದರು.

ರಾತ್ರಿ ಕರ್ಫ್ಯೂ ಅವಧಿ ಪರಿಷ್ಕರಿಸಲಾಗಿದೆ. ರಾಜ್ಯದಾದ್ಯಂತ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ ಎಂದು ತಿಳಿಸಿದರು.

 #ಭಾರತಕ್ಕಿಂದು_ಹೆಮ್ಮೆಯ_ದಿನದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ (Indigenous Aircraft Carrier – IAC) ವಿಕ್ರಾಂತ್​ ಪ...
06/08/2021

#ಭಾರತಕ್ಕಿಂದು_ಹೆಮ್ಮೆಯ_ದಿನ

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ (Indigenous Aircraft Carrier – IAC) ವಿಕ್ರಾಂತ್​ ಪರೀಕ್ಷಾರ್ಥ ಸಂಚಾರ ಬುಧವಾರ ಆರಂಭವಾಯಿತು. ಕೊಚಿನ್ ಶಿಪ್​ಯಾರ್ಡ್ ನಿರ್ಮಿಸರುವ ಈ ಯುದ್ಧನೌಕೆಯು ದೇಶದಲ್ಲಿ ಈವರೆಗೆ ನಿರ್ಮಿಸಿರುವ ಯುದ್ಧನೌಕೆಗಳ ಪೈಕಿ ಇದು ಅತ್ಯಂತ ಸಂಕೀರ್ಣ ಮತ್ತು ಬೃಹತ್​ ಆದುದು.

ಇದು ದೇಶದ ಹೆಮ್ಮೆಯ, ಐತಿಹಾಸಿಕ ಕ್ಷಣ ಎಂದು ಭಾರತೀಯ ನೌಕಾಪಡೆಯು ಹೇಳಿದೆ. ಈ ಸಾಧನೆಯೊಂದಿಗೆ ವಿಮಾನ ವಾಹಕ ಯುದ್ಧನೌಕೆಯ ವಿನ್ಯಾಸ ಮತ್ತು ವಿವಿಧ ಸಂಕೀರ್ಣ ತಂತ್ರಜ್ಞಾನಗಳನ್ನು ಸಂಯೋಜಿಸಿ ಯುದ್ಧನೌಕೆಯನ್ನು ಕಾರ್ಯಾಚರಣೆ ಸ್ಥಿತಿಯ ಮಟ್ಟಕ್ಕೆ ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿದೆ.

21  #ನರ್ಸಿಂಗ್‌_ವಿದ್ಯಾರ್ಥಿನಿಯರಿಗೆ_ಕೊರೊನಾಸೋಂಕುಹಾಸನದ ಕೆ.ಆರ್.ಪುರಂನಲ್ಲಿರುವ ಅತಿಥಿ ಪಿಜಿಯಲ್ಲಿ ಉಳಿದುಕೊಂಡಿದ್ದ ಕೇರಳ ಮೂಲದ 21 ನರ್ಸಿಂಗ...
06/08/2021

21 #ನರ್ಸಿಂಗ್‌_ವಿದ್ಯಾರ್ಥಿನಿಯರಿಗೆ_ಕೊರೊನಾಸೋಂಕು

ಹಾಸನದ ಕೆ.ಆರ್.ಪುರಂನಲ್ಲಿರುವ ಅತಿಥಿ ಪಿಜಿಯಲ್ಲಿ ಉಳಿದುಕೊಂಡಿದ್ದ ಕೇರಳ ಮೂಲದ 21 ನರ್ಸಿಂಗ್‌ ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು,
ಇವರ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಕ್ವಾರಂಟೈನ್‌ ಮಾಡಲಾಗಿದೆ
ವಿದ್ಯಾರ್ಥಿನಿಯರನ್ನು ಕ್ವಾರಂಟೈನ್‌ ಮಾಡಿರುವ ಖಾಸಗಿ ಲಾಡ್ಜ್‌ನ್ನು ಸೀಲ್ ಡೌನ್ ಮಾಡಿದ ಅಧಿಕಾರಿಗಳು

Address


Website

Alerts

Be the first to know and let us send you an email when ಹೊಯ್ಸಳ ಸುದ್ದಿ Hoysalasuddi posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share