14/07/2022
ತುಮಕೂರು ಪ್ರೆಸ್ ಕ್ಲಬ್ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ
ನಮ್ಮ ಕ್ಲಬ್...,
ನಮ್ಮ ಹೆಮ್ಮೆ ....
ಆತ್ಮೀಯರೇ,
ಆಲದ ಮರ ಪಾರ್ಕ್ ಹಸ್ತಾಂತರಕ್ಕೆ ನಾಡಿನ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಂದು ಹೋಗಿದ್ದು ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಇತಿಹಾಸ. ಈಗ ದೇಶದ ಪ್ರತಿಷ್ಠಿತ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಜತೆ ನಮ್ಮ "ಪ್ರೆಸ್ ಕ್ಲಬ್ ತುಮಕೂರು" ಸಂಯೋಜನೆ (Affiliated) ಆಗಿರುವುದು ಮತ್ತೊಂದು ಮೈಲಿಗಲ್ಲು....
ಹೌದು, 'ಪ್ರೆಸ್ ಕ್ಲಬ್ ತುಮಕೂರು' 'ಪ್ರೆಸ್ ಕ್ಲಬ್ ಆಫ್ ಬೆಂಗಳೂರು' ಜತೆ ಸಂಯೋಜನೆಗೊಂಡಿದ್ದು ದೇಶದ ಪ್ರತಿಷ್ಟಿತ ಕ್ಲಬ್ ನಲ್ಲಿರುವ ಸೌಲಭ್ಯಗಳು ಇನ್ನುಮುಂದೆ ತುಮಕೂರು ಪ್ರೆಸ್ ಕ್ಲಬ್ ಸದಸ್ಯರಿಗೂ ಸಿಗಲಿವೆ ಎಂಬುದೀಗ
ಸಿಹಿ ಸುದ್ದಿ.
ಆರಂಭವಾದ ಅಲ್ಪಾವಧಿಯಲ್ಲೇ ಸಮಾಜಮುಖಿ ಕಾರ್ಯಚಟುವಟಿಕೆ ಮೂಲಕ ಗಮನ ಸೆಳೆದಿರುವ ನಮ್ಮ ಪ್ರೆಸ್ ಕ್ಲಬ್ ಗೆ ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ಸಂಯೋಜನೆಗೆ ಒಪ್ಪಿಗೆ ಸೂಚಿಸಿ ಅಧಿಕೃತವಾಗಿ 2022 ಜು.13 ರಿಂದಲೇ ಜಾರಿಗೆ ಬಂದಿದೆ.
ಪಿಸಿಬಿ ಕಾರ್ಯಕಾರಿ ಸಮಿತಿಯಲ್ಲಿ ಸಂಯೋಜನೆಗೆ ಸರ್ವಾನುಮತದ ಅನುಮತಿ ಸಿಕ್ಕಿರುವುದು ನಮಗೆಲ್ಲಾ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ.
ಈ ಸಂಯೋಜನೆ ಮಾಡಿಕೊಂಡಿದ್ದಕ್ಕಾಗಿ ಪಿಸಿಬಿ ಅಧ್ಯಕ್ಷ ಆರ್.ಶ್ರೀಧರ್ , ಪ್ರಧಾನಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿ ಎಲ್ಲಾ ಪದಾಧಿಕಾರಿಗಳಿಗೂ ತುಮಕೂರು ಕ್ಲಬ್ ಪ್ರೀತಿಯ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಇನ್ನು ಮುಂದೆ ಪ್ರೆಸ್ ಕ್ಲಬ್ ತುಮಕೂರಿನ ಎಲ್ಲಾ ಸದಸ್ಯರಿಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಅತಿಥಿ ಶುಲ್ಕ ವಿನಾಯಿತಿ ಸೇರಿದಂತೆ ಕ್ಲಬ್ ನ ಸೌಲಭ್ಯ ಬಳಸಿಕೊಳ್ಳುವ ಅವಕಾಶವಿದ್ದು ಸದುಪಯೋಗ ಪಡೆಯಬಹುದು.
1969 ರಲ್ಲಿ ಆರಂಭವಾಗಿರುವ 'ಪ್ರೆಸ್ ಕ್ಲಬ್ ಆಫ್ ಬೆಂಗಳೂರು' ದೇಶದ ಪ್ರತಿಷ್ಠಿತ ಕ್ಲಬ್ ಎನ್ನಿಸಿದ್ದು ಸದಸ್ಯತ್ವ ಪಡೆಯುವುದೇ ಹೆಮ್ಮೆಯ ವಿಚಾರ. ಅಂತಹದರಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ನಮ್ಮ ಕ್ಲಬ್‌ಗೆ ಅದರ ಸಂಯೋಜನೆ ಸಿಕ್ಕಿರುವುದು ತುಮಕೂರು ಪತ್ರಕರ್ತರಿಗೊಂದು ಪ್ರತಿಷ್ಠೆಯೇ ಸರಿ.
ಎಲ್ಲರೂ ಈ ಸಿಹಿ ಸುದ್ದಿ ಸಂಭ್ರಮಿಸೋಣ, ಹಂಚೋಣ, ಅವಕಾಶ ಸದುಪಯೋಗ ಪಡಿಸಿಕೊಳ್ಳೋಣ...
ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರೂ ನಮ್ಮ ಕ್ಲಬ್ ಗೌರವ ಸದಸ್ಯರಾಗಿರುವ ಪ್ರತಿಷ್ಠಿತ ಕ್ಲಬ್ ಎನ್ನಿಸಿದ್ದು ಈ ಘನತೆಯನ್ನು ಉಳಿಸಿಕೊಳ್ಳಲು ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂದಿರಲು ಬಯಸುತ್ತದೆ.
ಎಲ್ಲರಿಗೂ ಅಭಿನಂದನೆಗಳು..
:-
ಶಶಿಧರ್ ಎಸ್.ದೋಣಿಹಕ್ಲು
ಅಧ್ಯಕ್ಷ
ಮತ್ತು
ಯೋಗೇಶ್ ಎಲ್.
ಪ್ರಧಾನ ಕಾರ್ಯದರ್ಶಿ