K7 kannada News

  • Home
  • K7 kannada News

K7 kannada News NEWS / MEDIA

12/12/2022

https://youtu.be/KZ7syg1H7LI

ಸ್ವಾಭಿಮಾನಿ ರಾಜ್ಯ ರೈತ ಸಂಘ ಕರ್ನಾಟಕ ಇವರ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ನಿರ್ಲಕ್ಷ ವಹಿಸಿದ, 2000 ಜಾನುವಾರು ಸತ್ತಾರ ಬರಿ 100 ಜನಕ್ಕೆ ಪರಿಹಾರ ಬಂದಿರುತ್ತೆ.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು.
ಸೋಯಾಬಿನ್ 9000 5400, ಗೋವಿನಜೋಳ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
ಶಿವನಸಿಂಗ ಮೊಖಾಶಿ, ಸಲಹಾ ಸಮಿತಿ ಅಧ್ಯಕ್ಷ ಎಂ ವಾಯ್ ಸೋಮನ್ನವರ, ಉಪಾಧ್ಯಕ್ಷ ಬೀರಪ್ಪ ದೇಶನೂರ, ಮಲ್ಲಿಕಾರ್ಜುನ್ ಕೊಡೊಳ್ಳಿ ದ್ಯಾಮಣ್ಣ ಹುದಲಿ ಲಕ್ಷ್ಮಣ ಕಿಲಾರಿ ಬಸಮ್ಮ ಕಾದ್ರೊಳ್ಳಿ ಈರಣ್ಣ ಗುಮ್ಮಾಗೋಳ, ಅಶೋಕ ಕಳಸಣ್ಣವರ ಉಮೇಶ ಕಾದ್ರೊಳ್ಳಿ ಅಡಿವೆಪ್ಪ ಕೊಟರ್ ಮಲ್ಲಪ್ಪ ಪಣತಿ ಯಲ್ಲಪ್ಪ ಕರಾಬನ್ನವರ ಬಾಬುಸಾಬ ಖುದ್ದುನವರ, ಗಂಗಮ್ಮ ಪಾಟೀಲ ಲಕ್ಷನ ಗೊರ್ಗುದ್ದಿ ಮುನೇಪ್ಪ ಕುಲ್ಲೊಳ್ಳಿ ಹಾಗೂ ರೈತ ಮುಖಂಡರು ಇದ್ದರು

11/12/2022

https://youtu.be/mSWmmuILWHQ

ಬೆಂಗಳೂರು ಕುಂದನಹಳ್ಳಿ ಗೇಟ್ HAL ಸಮೀಪ ಬೇಕರಿಯಲ್ಲಿ ನಿನ್ನೆ ನಡೆದ ಘಟನೆ ಪುಡಿ ರೌಡಿಗಳಿಂದ ಅಮಾಯಕ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ,, ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನೇ ದಿನೇ ಜಾಸ್ತಿ ಆಗುತ್ತಿದ್ದು. ಪುಡಿ ರೌಡಿಗಳ ದರ್ಪವನ್ನು ಇಳಿಸಲು,, ಸಹಾಯ ಹಸ್ತ ಚಾಚುತ್ತಿರುವ ಬೈಂದೂರಿನ ಹುಡುಗರು , ಕಷ್ಟಪಟ್ಟು ಸಾಲ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ದೂರದ ಬೆಂಗಳೂರಿಗೆ ಬಂದರೆ , ತಮ್ಮ ಜೀವನವನ್ನೇ ಹಾಳು ಮಾಡುತ್ತಿರುವ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಾವೆಲ್ಲರೂ ಒಂದಾಗಬೇಕು,

08/12/2022

ಡಾ: ವಿಶ್ವನಾಥ್ ಈ. ಪಾಟೀಲ್ ಅಭಿಮಾನ ಬಳಗ ವತಿಯಿಂದ ಉದ್ಯೋಗ ಮೇಳ ಬೈಲಹೊಂಗಲ್ ನಲ್ಲಿ ಹಮ್ಮಿಕೊಳಲಾಗಿದೆ

https://youtu.be/tbvZEfnjJXM

06/12/2022

ಬೆಳಗಾವಿ ಹೊಗಲು ಅವಕಾಶ ಮಾಡದೇ ಇದ್ದಲ್ಲಿ ರಾಜ್ಯವ್ಯಾಪ್ತಿ ಹೊರಾಟ ಕರೆ ಕೊಡೂವದಾಗಿ ಎಚ್ಛರಿಸಿದರು ಕರವೇ

10/10/2022

ದರೋಡೆಗೆ ಇಳಿದ R T O ಅಧಿಕಾರಿಗಳು...
ಕಾಗವಾಡ: ಬೆಳಗಾವಿ ಜಿಲ್ಲೆ ಕಾಗವಾಡ ಚೆಕ್ ಪೋಸ್ಟ್ ಬಳಿ ರಾತ್ರಿ ಹೊತ್ತು RTO ಅಧಿಕಾರಿಗಳು ವಾಹನ ನಿಲ್ಲಿಸಿ
ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಮಹಾರಾಷ್ಟ್ರ ಗಡಿ ಹೊಂದಿಕೊಂಡೀರೋ ಕಾಗವಾಡ್ RTO ಚೆಕ್ಕ್ ಪೋಸ್ಟ್ ನಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ ಇಲ್ಲಿಯ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವಾಹನಗಳನ್ನ ಅಡ್ಡಗಟ್ಟಿ ಪ್ರತಿ ವಾಹಣಕ್ಕೆ ಯಾವುದೇ ರಸಿದಿಯು ನೀಡದೆ ವಂಚಿಸುತ್ತಿರುವುದು ಕಂಡುಬದಿದೆ

ಲಾರಿ ಚಾಲಕರು ಇಂತಹ ಅಧಿಕಾರಿಗಳಿಂದ ಹಾಗೂ ಸರ್ಕಾರದ ಅನೌಪಚಾರಿಕ ಟೋಲ್ ವಸೂಲಾತಿಯಿಂದ
ಮಾಸಿ ಹೋಗಿದ್ದಾರೆ

ಸರಕು ಸಾಗಣೆಯಲ್ಲಿ ಲಾರಿ ಚಾಲಕರು ದೇಶದ ಅವಿಭಾಜ್ಯ ಅಂಗ ವೆಂದರೆ ತಪ್ಪಾಗಲಾರದು

ಈ ಚೆಕ್ಕ್ ಪೋಸ್ಟನಲ್ಲಿ CC ಟಿವಿ ಕಂಗಾವಲು ಬರಿ ಹೆಸರಿಗೆ ಮಾತ್ರವೆ ಎಂಬಂತಾಗಿದೆ ಕಾನೂನು ರಕ್ಷಕರೇ ಭಕ್ಷಕರಾದಾಗ ಕಾನೂನು ಸೂವೆವಸ್ಥೆ ಕಾಪಾಡುವರರು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ಒಲಯದಲ್ಲಿ ಚರ್ಚೆಯಾಗುತ್ತಿದೆ

ಕೂಡಲೇ ಜಿಲ್ಲಾಡಳಿತ ಇಂತಹ ಅಧಿಕಾರಿಗಳ ವಿರುದ್ದ ಚಾಟಿ ಬಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ

ವಿನೋದ ಪಾಟೀಲ್ : K R S ಪಕ್ಷದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ

06/10/2022

ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಮಾನಪ್ಪ ಕಂಬಾರ ಅವರಿಗೆ ಸೇರಿದ ಮನೆ ಕಳೆದ ನಾಲ್ಕು ದಿವಸಗಳ ಹಿಂದೆ ಬಿದ್ದು ಗೊಡೇ ಕುಸಿದು ಮಾನಪ್ಪ ಸೋಸೆ ಕಾಳವ್ವ ಕಂಬಾರ ಗಂಭೀರವಾಗಿ ಗಾಯಗೂಂಡಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದು ಅವಳಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವದರಿಂದ ಕುಟುಂಬ ಕಡು ಬಡವರಿರುವದರಿಂದ ಸಂಬಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೆಟ್ಟಿ ಕೊಟ್ಟೂ ಸ್ವಾಂತನ ಹೇಳದೆ ಹಾಗೂ ಪರಿಹಾರ ದೂರಕಿಸುವಲ್ಲಿ ವಿಳಂಬ ಆದ ಹಿನ್ನಲೆಯಲ್ಲಿ ಇಂದು ಕುಟುಂಬಸ್ಥರು ಸೇರಿ ನೂರಾರು ಜನ ಪಟ್ಟಣ ಪಂಚಾಯಿತಿ ಎದರು ಪ್ರತಿಭಟನೆ ಮಾಡಿದರು. ಹಾಗೂ ಆ ಮಹಿಳೆಗೆ ಚಿಕಿತ್ಸೆಗೆ ತಕ್ಷಣ ಹಣ ನಿಡಬೇಕು ಎಂದು ಒತ್ತಾಯಿಸಿದರು ಸ್ಥಳಕ್ಕೆ ಕಿತ್ತೂರು ದಂಡಾಧಿಕಾರಿಗಳಾದ ಸೊಮಲಿಂಗಪ್ಪ ಹಾಲಗಿ ಅವರು ಆಗಮಿಸಿ ಸಕಾ೯ರದಿಂದ ಆದಷ್ಟು ಬೇಗ ಆ ಮಹಿಳೆಗೆ ಚಿಕಿತ್ಸೆ ಆಧರಿಸಿ ವೈದ್ಯರಿಂದ ಮಾಹಿತಿ ಪಡೆದು ಮೇಲಾಧಿಕಾರೀಗಳಿಗೆ ತಿಳಿಸಿ ಆಸ್ಪತ್ರೆ ವೆಚ್ಚ ಹಾಗೂ ಹಾಗೂ ಪ್ರಕ್ರುತಿ ವಿಕೂಪದಡಿ ಪರಿಹಾರ ದೂರಕಿಸುವದಾಗಿ ಭರವಸೆ ನಿಡಿದರು.ಹಾಗೂ ಅಲ್ಲೀಯವರೆಗೆ ಅಲ್ಲಿ ಕೊಡಿದ ಪಟ್ಟಣದ ಜನತೆ ಮಾನವಿಯತೆಯಿಂದ ತಮ್ಮ ಕೈಲಾದಷ್ಟು ಹಣ ಕೊಡಿಕರಣ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷೆ ಆಸ್ಮಾ ಜೊಟದಾರ ರೈತ ಮುಖಂಡರಾದ ರುದ್ರಪ್ಪ ಕೊಡ್ಲಿ ಶಿವನಪ್ಪ ವಾಲಿ ವಾಡಿ೯ನ ನಿವಾಸಿಗಳಾದ ಪ್ರಕಾಶ ಅಳಗುಂಡಿ ಈರಣ್ಣಾ ಗಿರಜಿಮನಿ ಮುತಾಂದವರು ಉಪಸ್ಥಿತರಿದ್ದರು ಹಾಗೂ ಸಮಾಜ ಸೇವಕರಾದ ಸುನಿಲ್ ಸಂಬಣ್ಣವರ ಪುಂಡಲಿಕ ಹುಂಚ್ಯಾನಟ್ಟಿ ಗಿರಿಶ ಕುಲಕರ್ಣಿ ಹಾಗೂ ಪಟ್ಟಣ ಪಂಚಾಯಿತಿ ಕೆಲ ಸದಸ್ಯರುಗಳು ಉಪಸ್ಥಿತರಿದ್ದರು. ಹಾಗೂ ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಆಯ್ ಸಿ ಸಿದ್ನಾಳ ಗ್ರಾಮ ಲೆಕ್ಕಾಧಿಕಾರಿಗಳಾದ ಗುರುನಾಥ್ ಬಂಡಿವಡ್ಡರ ಕಿತ್ತೂರು ಪೊಲೀಸ್ ಠಾಣೆ ಅಧಿಕಾರಿಗಳು ಆದ ಹೆಚ್ ಎಲ್ಲ ಧಮ೯ಟ್ಟಿ ಎಂಕೆ ಹುಬ್ಬಳ್ಳಿ ಉಪಪೊಲಿಸ ಠಾಣೆ ಅಧಿಕಾರಿಗಳು ಆದ ಎ ಎಸ್ ಹಂಪನ್ನವರ ಉಪಸ್ಥಿತರಿದ್ದರು.
ವರದಿ: ಸುದರ್ಶನ್

05/10/2022

ಸಮಸ್ತ ನಾಡಿನ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.ಬೆಳಗಾವಿ ಡಿಸಿ ನಿತೀಶ್ ಪಾಟೀಲ್ ಸರ್

04/10/2022

ದಸರಾ ಕ್ರೀಡಾ ಮತ್ತು ಸಂಸ್ಕೃತಿ ಕ ಮಹೋತ್ಸವ ಬೆಳಗಾವಿ

ವಿದ್ಯಾರ್ಥಿಗಳು ಭಗೀರಥ ಮಹರ್ಷಿಗಳ ಪ್ರಯತ್ನದಂತೆ ತಾವು ಪ್ರಯತ್ನಶೀಲರಾಗಿ ಸಾಧನೆ ಮಾಡಿ : ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಜೀಮಿಗಳು ಗೋಕ...
25/09/2022

ವಿದ್ಯಾರ್ಥಿಗಳು ಭಗೀರಥ ಮಹರ್ಷಿಗಳ ಪ್ರಯತ್ನದಂತೆ ತಾವು ಪ್ರಯತ್ನಶೀಲರಾಗಿ ಸಾಧನೆ ಮಾಡಿ : ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಜೀಮಿಗಳು ಗೋಕಾಕ ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಸಾಧನೆ ಸಾಧಕರ ಸ್ವತ್ತು , ಸಾಧನೆಗೆ ಬಡತನ ಅಡ್ಡಿಯಾಗುವದಿಲ್ಲ ವಿದ್ಯಾರ್ಥಿಗಳು ಭಗೀರಥ ಮಹರ್ಷಿಗಳ ಪ್ರಯತ್ನದಂತೆ ತಾವು ಪ್ರಯತ್ನಶೀಲರಾಗಿ ಸಾಧನೆ ಮಾಡಿ ಸಾಧಕರಾಗಿ ತಮ್ಮ ಭವಿಷ್ಯದೊಂದಿಗೆ ಸಮಾಜವನ್ನು ಅಭಿವೃದ್ಧಿ ಪಡಿಸಿ ಎಂದರು
ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾತನಾಡಿ .ಎಲ್ಲಾ ಸಮುದಾಯದ ಮಕ್ಕಳು ಉತ್ತಮ ಸಾಧಕರಾಗುತ್ತಿದ್ದು, ಅವರ ಮುಂದಿನ ಭವಿಷ್ಯದ ಚಿಂತನೆ ಆಗಬೇಕು ಸಮಾಜದ ಮುಖಂಡರು ಉನ್ನತ ಹುದ್ದೆಯಲ್ಲಿರುವವರು ಅವರ ಭವಿಷ್ಯಕ್ಕೆ ಸಹಕಾರ ನೀಡಬೇಕು. ಸ್ವಾಮೀಜಿ ಅವರ ಹೋರಾಟದಿಂದ ಇಂದು ಸಮಾಜ ಜಾಗೃತವಾಗಿ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿದೆ ಸಮಾಜ ಭಾಂಧವರು ಸಂಘಟಿತರಾಗಿ ಅವರನ್ನು ಬೆಂಬಲಿಸಬೇಕು. ನಾವು ನಮ್ಮ ಸಂಸ್ಥೆಯಿಂದ ಉನ್ನತ ಹುದ್ದೆಗಳಿಗೆ, ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿ ಮಾಡಲು ತರಬೇತಿ ನೀಡುತ್ತಿದ್ದು, ಸಮಾಜ ಭಾಂಧವರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು .
ನಂತರ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗಿರೀಶ ಉಪ್ಪಾರ ಅವರು ಮಾತನಾಡಿ ರಾಜ್ಯದ 32 ಕ್ಷೇತ್ರದಲ್ಲಿ ಉಪ್ಪಾರ ಸಮಾಜ ಭಾಂಧವರು ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಇದ್ದರು ಸಂಘಟನೆ ಕೋರತೆಯಿಂದ ಸಮಾಜ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಪೂಜ್ಯರ ನೇತೃತ್ವದಲ್ಲಿ ನಾವೆಲ್ಲ ಸಂಘಟಿತರಾಗಿ ಶ್ರಮಿಸೋಣ ಎಂದರು
ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ 500 ವಿದ್ಯಾರ್ಥಿ, ವಿದ್ಯಾರ್ಥಿನೀಯರನ್ನು, ಉನ್ನತ ಹುದ್ದೆಯಲ್ಲಿರುವ ಸಮಾಜದ ಅಧಿಕಾರಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕಟಕಭಾಂವಿಯ ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು , ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಕರ್ನಾಟಕ ಲೋಕಸೆವಾ ಆಯೋಗದ ಮಾಜಿ ಸದಸ್ಯ ಶ್ರೀಕಾಂತರಾವ, ಹಿಂದುಳಿದ ಆಯೋಗದ ಮಾಜಿ ಸದಸ್ಯ ಎಸ್.ಎಂ ಹತ್ತಿಕಟಗಿ ಸೇರಿದಂತೆ ಸಮಾಜದ ಹಿರಿಯರು ಯುವಕರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು . ವೆಂಕೋಬಾ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಮಾಜಿ ಅಧ್ಯಕ್ಷ ಬಿ.ಆರ್.ಕೋಪ್ಪ, ಜಿಲ್ಲಾಧ್ಯಕ್ಷ ಜಿ.ಎಸ್. ಉಪ್ಪಾರ, ಯುವಕ ಸಂಘಧ ಗೌರವಾಧ್ಯಕ್ಷ ಭರಮಣ್ಣ ಉಪ್ಪಾರ, ಮಹಿಳಾ ಸಂಘದ ಅಧ್ಯಕ್ಷ ಕಮಲಾ ಜೇಡರ, ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷರುಗಳಾದ ಶಿವಪುತ್ರ ಜಕಬಾಳ, ರಾಮಣ್ಣ ಹಂದಿಗುಂದ, ಪದಾಧಿಕಾರಿಗಳಾದ ಕುಶಾಲ ಗುಡ್ಡೇನವರ, ಅಡಿವೆಪ್ಪಾ ಕಿತ್ತೂರ, ವಿಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ಯಮನಪ್ಪ ಕೌಜಲಗಿ, ನಗರಸಭೆ ಸದಸ್ಯ ಭಗವಂತ ಹುಳಿ, ಗಣ್ಯರಾದ ಸತೀಶ ಕಡಾಡಿ, ಧರ್ಮದರ್ಶಿ ಶಾಮಾನಂದ ಪೂಜೆರಿ, ಭಜರಂಗದಳದ ವಿಭಾಗೀಯ ಸಂಯೋಜಕ ಸದಾಶಿವ ಗುದಗಗೋಳ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ‌.ಬಿ.ಬಳಗಾರ, ಅಧಿಕಾರಿಗಳಾದ ಡಾ.ವಿಜಯಕುಮಾರ್ ತೋರಗಲ್, ಲಕ್ಕಪ್ಪ ಹಣುಮನ್ನವರ, ಜಗದೀಶ್ ಗಂಗಣ್ಣವರ, ಲಕ್ಷ್ಮಣ ಬಬಲಿ, ಡಾ‌.ಸಂದೀಪ್ ದಂಡಿನ, ಲಕ್ಷ್ಮಣ ಉಪ್ಪಾರ, ಬಸವರಾಜ ಮೆಳವಂಕಿ, ಆರ್.ಕೆ ಬಿಸಿರೊಟ್ಟಿ, ಎಂ.ಆರ್.ಮುಂಜಿ , ಯಲ್ಲಪ್ಪ ಗದಾಡಿ, ಅಡಿವೇಶ ಗುದಿಗೋಪ್ಪ, ಶಂಕರ ಅಂತಗಟ್ಟಿ, ನಾಗರಾಜ್ ಕಿಲಾರಿ, ಶಿವಾನಂದ ಬಬಲಿ , ಕೃಷ್ಣಾ ಕುಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

12/09/2022

ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ
10 ವರ್ಷದ ಪುಟ್ಟ ಮಗುವನ್ನು ಯಾರೋ ವೇಷದಾರಿ ರೂಪದಲ್ಲಿ ಸ್ವಾಮೀಜಿಗಳ ವೇಷ ಧರಿಸಿ ಆ ಮಗುವಿಗೆ ಚಾಕಲೇಟ್ ಕೊಡುವ ನೆಪದಲ್ಲಿ ಆಟ ಆಡುತಿದ್ದ ಮಗುವನ್ನು ಕರೆದು ತಮ್ಮ ವಾಹನದೊಳಗೆ ಹಾಕುವಷ್ಟರಲ್ಲಿ ಗ್ರಾಮಸ್ಥರು ತಡೆದು ಸಂಬಂಧಪಟ್ಟ ಕುಲಗೋಡ ಪೊಲೀಸ್ ಸ್ಟೇಷನ್ಗೆ ಆರೋಪಿಗಳನ್ನು ಒಪ್ಪಿಸಿದ್ದಾರೆ. ಆದಕಾರಣ ಎಲ್ಲಾ ಪಾಲಕರಲ್ಲಿ ಕೇಳಿಕೊಳ್ಳೋದೇನೆಂದರೆ ದಯವಿಟ್ಟು ತಮ್ಮ ಮಕ್ಕಳು ಶಾಲೆಗೆ ಹೋಗುವಾಗ & ಶಾಲೆ ಬಿಟ್ಟು ಮನೆಗೆ ಬರುವಾಗ ಯಾರೋ ಅಪರಿಚಿತ ವ್ಯಕ್ತಿಗಳು ಮಕ್ಕಳನ್ನು ಕರೆದರೆ ತಮ್ಮ ಮಕ್ಕಳು ಹೋಗದಂತೆ ತಿಳಿಸಿ ಹೇಳಬೇಕು ಹಾಗೂ ಎಲ್ಲಾ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಈ ವಿಷಯದ ಕುರಿತು ಜಾಗೃತಿ ಮೂಡಿಸಬೇಕೆಂದು ತಮ್ಮಲ್ಲಿ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತೇನೆ. ಮಗುವಿನ ಏಳಿಗೆಯಲ್ಲಿ ಪಾಲಕರು & ಶಿಕ್ಷಕರ ಪಾತ್ರ ಅಮುಲ್ಯವಾದದ್ದು. ದಯವಿಟ್ಟು ಈ ವಿಷಯವನ್ನು ನಿಮ್ಮ ಎಲ್ಲಾ ಫ್ರೆಂಡ್ಸ್ ಗ್ರೂಪ್ಗಳಿಗೆ ಕಳುಹಿಸಿ ಸಣ್ಣ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.

https://youtu.be/OypzASDjuuE
05/09/2022

https://youtu.be/OypzASDjuuE

T̲H̲E̲ B̲E̲S̲T̲ T̲E̲A̲C̲H̲E̲R̲S̲ T̲E̲A̲C̲H̲ F̲R̲O̲M̲ T̲H̲E̲ H̲E̲A̲R̲T̲ N̲O̲T̲ F̲R̲O̲M̲ T̲H̲E̲ B̲O̲O̲K̲. H̲A̲P̲P̲Y̲ T̲E̲A̲C̲H̲E̲R̲S̲ D̲A̲Y̲

30/08/2022

ಬೆಳಗಾವಿಯಲ್ಲಿ ಗಣಪತಿ ಪಪ್ಪಾ ಮೋರಿಯ. ಶ್ರೀನಗರ

ಬೆಳಗಾವಿ ಪ್ರಸಿದ್ಧ ದೇವಾಲಯ ದುರ್ಗಾ ಮಂದಿರ ಮತ್ತು ಕಮಲ್ ಬಸ್ತಿ
29/08/2022

ಬೆಳಗಾವಿ ಪ್ರಸಿದ್ಧ ದೇವಾಲಯ ದುರ್ಗಾ ಮಂದಿರ ಮತ್ತು ಕಮಲ್ ಬಸ್ತಿ

ಗೋಕಾಕದಲ್ಲಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳರ ಬಂಧನ!ಗೋಕಾಕ : ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮನೆ ಕಳ್ಳತನ...
27/08/2022

ಗೋಕಾಕದಲ್ಲಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳರ ಬಂಧನ!
ಗೋಕಾಕ : ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ.
ನಗರದ ಜಿ.ಆರ್.ಬಿ.ಸಿ. ಕಾಲೋನಿಯಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಹಿಡಿದುಕೊಂಡು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ, ಸದರಿಯವನು ತಾನು ಮತ್ತು ಇನ್ನೊಬ್ಬ ಕೂಡಿಕೊಂಡು ಇದೇ ವರ್ಷ 2022 ಮಾರ್ಚ್ ತಿಂಗಳಲ್ಲಿ ಲಕ್ಷ್ಮೀ ಬಡಾವಣೆಯಲ್ಲಿಯ ಒಂದು ಮನೆ ಹಾಗೂ ಜುಲೈ ಆಶ್ರಯ ಬಡಾವಣೆಯಲ್ಲಿಯ ಒಂದು ಕಳ್ಳತನ ಮಾಡಿದ ಬಗ್ಗೆ ಹಾಗೂ ಜೂನ್ ತಿಂಗಳಲ್ಲಿ ವಿದ್ಯಾ ನಗರದಲ್ಲಿ ಒಂದು ಮನೆಯಲ್ಲಿ ಒಪ್ಪಿಕೊಂಡಿದ್ದು , ಆರೋಪಿತನಿಂದ 44 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ವಸ್ತುಗಳ ಸುಮಾರು 3.50.000 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಡಿವಾಯ್ಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಗೋಪಾಲ ರಾಠೋಡ , ರವರ ನೇತೃತ್ವದಲ್ಲಿ ಗೋಪಾಹ ಶಹರ ಠಾಣೆಯ ಪಿಎಸ್ಐ ಎಂ ಡಿ ಘೋರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಿ .ವ್ಹಿ ನೇರಳೆ , ಸುರೇಶ ಈರಗಾರ , ಮಲ್ಲಪ್ಪ ಗಿಡ್ಡಗಿರಿ, ಸಚೀನ ಹೊಳಪ್ಪಗೋಳ, ವಿಠ್ಠಲ ನಾಯಕ್ ರಮೇಶ ಮುರನಾಳ, ಪ್ರವೀಣ ಹೆಬ್ಬಾಳ ಅವರು ಮಾಡಿದ್ದಾರೆ.

26/08/2022

ನಿಮ್ಮ ಅಧಿಕಾರಿ ತಪ್ಪು ಮಾಡಿದ್ದಾನೆ ಅಂತಾ ಹೇಳಿದ್ದಕ್ಕೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ ಅಧಿಕಾರಿ ಐ ಎಸ್ ಕೋಲಾರ...

ಬೈಲಹೊಂಗಲ:

ಬೈಲಹೊಂಗಲದಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ ಮೇಟಿ ಅವರು ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆ ಕಾಗದ ಪತ್ರಗಳ ಮೇಲೆ ಗೆಜೆಟೆಡ್ ಸಹಿ ಮಾಡಸಲಿಕೆ ಬಂದಾಗ ಹಣ ತೆಗೆದುಕೊಂಡಿರುವ ಅಧಿಕಾರಿ ಮಹೇಶ ಮೇಟಿ.

ಹಾಗೇಯೆ ಒಬ್ಬ ಅಧಿಕಾರಿಯಾಗಿ ಸಾರ್ವಜನಿಕರು ಬಂದಾಗ ಉಚಿತವಾಗಿ ಗೆಜೆಟೆಡ್ ಮಾಡಬೇಕಾದ ಅಧಿಕಾರಿ ಈ ರೀತಿ ಮಾಡಿರುವುದು ತಪ್ಪು ಎಂದು ಮಹಿಳೆ ಅಸಮಾಧಾನ ಹೊರಹಾಕಿದರು..

ಇದೇ ಸಂದರ್ಭದಲ್ಲಿ ಇವತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿನ ಐ ಎಸ್ ಕೋಲಾರ ಅವರ ಹತ್ತಿರ ಮಾಹಿತಿ ತೆಗದುಕ್ಕೊಳಲಿಕೆ ಹೋದಾಗ ಮಾಧ್ಯಮದರ ಮೇಲೆ ಏಕಾಎಕಿ ದಬ್ಬಾಳಿಕೆ ಮಾಡಲಿಕೆ ಬಂದರು .

ಹಾಗೇಯೆ ನಮ್ಮ ಪೋಟೊ ತೆಗೆದೊಕೊಂಡು ನಮ್ಮ ಅಧಿಕಾರಿಗಳಿಗೆ ತೋರಿಸುತ್ತೇನೆ ಎಂದು ದಬ್ಬಾಳಿಕೆ ಮಾಡಿದ್ದಾರೆ ಇಂತಹ ಅಧಿಕರಿಗಳ ಮೇಲೆ ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.

28/07/2022

ವಿಕ್ರಾಂತ್ ರೋಣ ಫಿಲಂ ಬೆಂಗಳೂರು

ಬೆಳಗಾವಿ: ಹುಂಚಾನಟ್ಟಿ ಮತ್ತು ಪೀರನವಾಡಿ ಗ್ರಾಮದಲ್ಲಿ ಪಡಿತರಿಗೆ ಉಚಿತವಾಗಿ ನೀಡಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಮನೆಯ ಮೇಲೆ ಹಿ...
27/07/2022

ಬೆಳಗಾವಿ: ಹುಂಚಾನಟ್ಟಿ ಮತ್ತು ಪೀರನವಾಡಿ ಗ್ರಾಮದಲ್ಲಿ ಪಡಿತರಿಗೆ ಉಚಿತವಾಗಿ ನೀಡಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಮನೆಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ನೇತೃತ್ವದ ತಂಡ ಹಾಗೂ ಆಹಾರ ನಿರೀಕ್ಷಕರು ಬೆಳಗಾವಿ ರವರೋಂದಿಗೆ ದಾಳಿ ನಡೆಸಿ ಸುಮಾರು 7,21,050/- ಮೌಲ್ಯದ 31 ಟನ್ 350 ಕೆ.ಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.

20/07/2022

ಚಾಮರಾಜನಗರದ ಕೊಳ್ಳೇಗಾಲದಲ್ಲಿ ಬಿರಿಯಾನಿ ತಿಂದು ಅಶ್ವಸ್ಥ...

ಹುಟ್ಟುಹಬ್ಬದ ತಂಗಳು ಬಿರಿಯಾನಿ ತಿಂದು 24ಜನ
ಅಶ್ವಸ್ಥ.

ತಂಗಳು ಬಿರಿಯಾನಿ ತಿಂದು ಸರ್ಕಾರಿ ಆಸ್ಪತ್ರೆ ದಾಖಲಾಗಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಂತೋಷ್ ಎಂಬುವವರ ಮಗನ ಹುಟ್ಟು ಹಬ್ಬ ಪ್ರಯುಕ್ತ ಬಿರಿಯಾನಿ ಮಾಡಲಾಯಿತು. ಸಂಜೆ ವೇಳೆಗೆ ಉಳಿದ ಬಿರಿಯಾನಿ ಯನ್ನು ಕೂಲಿ ಆಳುಗಳಿಗೆ ನೀಡಿದರು.

ಬಿರಿಯಾನಿ ಸೇವಿಸಿದ ಅಕ್ಕಪಕ್ಕ ಗ್ರಾಮದ 24ಕೂಲಿ ಆಳುಗಳು ಅಶ್ವಸ್ಥರಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಶಾಸಕ ಎನ್ ಮಹೇಶ್ ಭೇಟಿ ನೀಡಿ,ಅಶ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

18/07/2022

ವಿಧಾನಸೌಧದ ಮುಂಭಾಗದಲ್ಲಿ ಸಿಟಿ ರವಿಯ ಹುಟ್ಟು ಹಬ್ಬಕ್ಕೆ ಶುಭ ಕೊರಿ ಹಾಕಿದ್ದ ಫ್ಲೆಕ್ಸ್ ಹರಿದು ಹಾಕಿದ ಯುವತಿ
ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡಿದ್ದಾರೆ ಎಂದು ಹರಿದು ಹಾಕಿದ ಯುವತಿ.
ಹೈಕೋರ್ಟ್ ಆದೇಶವನ್ನ ಉಲ್ಲಂಘನೆ ಮಾಡಿ ಹಾಕಿದ್ದಾರೆ ಎಂದು ಫ್ಲೆಕ್ಸ್ ಹರಿದು ಹಾಕಿದ ಯುವತಿ...
ಹೈಕೋರ್ಟ್ ಮುಂಭಾಗದಲ್ಲಿ ಅದು ವಿಧಾನಸೌಧದ ಗೇಟ್ ಬಳಿ ಸಿಟಿ ರವಿ ಹುಟ್ಟು ಹಬ್ಬಕ್ಕೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್...

18/07/2022

ಹಳ್ಳಿ ಸೊಗಡಿನ ಅಂದ ಹೆಚ್ಚಿಸಿದ ವಿದ್ಯಾರ್ಥಿಗಳು

ಗದಗ:
ಕಾಲೇಜು ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ ತುಂಬಿಕೊಂಡಿತ್ತು. ಟ್ರ್ಯಾಕ್ಟರ್ ಏರಿ ಹುಡುಗರು ಕಾಲೇಜಿಗೆ ಎಂಟ್ರಿಕೊಟ್ರೆ ಹುಡ್ಗೀರು ಬುತ್ತಿ ಹೊತ್ತು ಬಂದಿದ್ರು.. ಇದ್ರಿಂದಾಗಿ ಅಲ್ಲಿ ಅಪ್ಪಟ ಹಳ್ಳಿ ಸೊಗಡಿನ ಜಾನಪದ ಲೋಕ ಸೃಷ್ಟಿ ಯಾಗಿತ್ತು.

ರಂಗು ರಂಗಿನ ಪೇಟಾ ಧೋತಿ, ಜುಬ್ಬಾ ಹಾಕ್ಕೊಂಡು ಹುಡುಗ್ರು ಮಿಂಚ್ತಿದ್ರೆ.. ಹುಡುಗೀರ್ ನಾವೇನ್ ಕಮ್ಮಿ ಅಂತಾ ಇಳಕಲ್ ಸೀರೆ ಹಾಕ್ಕೊಂಡು ಫುಲ್ ರೆಡಿಯಾದೆ. ಕಾಲೇಜು ಮೈದಾನದಲ್ಲಿ ಫನ್ ವೀಕ್ ಅಂದ್ರೆ ಕೇಳ್ಬೇಕಾ ಹುಡುಗ್ರು ಹುಡುಗೀರು ಸೇರ್ಕೊಂಡು ಫುಲ್ ಎಂಹಾಯ್ ಮಾಡುತ್ತಿರೋ ಗದಗ ನಗರದ ವಾಣಿಜ್ಯ ಹಾಗೂ ಕಲಾ ಕಾಲೇಜನಲ್ಲಿ. ಹೌದು ಕಾಲೇಜು ಸಂಪ್ರದಾಯಿಕ ದಿನಕ್ಕೆ ಸಾಕ್ಷಿಯಾಗಿತ್ತು. ಪಾಠದ ಜಂಜಾಟದಲ್ಲಿ ಕೊಂಚ ರಿಲೀಫ್ ಆಗಿದ್ದ ವಿದ್ಯಾರ್ಥಿಗಳಿಗೆ ಇಂದು ಮನೋರಂಜನೆಯ ಜೊತೆಗೆ ನಮ್ಮ ತನದ ಅರಿವು ಮೂಡಿಸಲು ಕಾಲೇಜು ಅಂಗಳ ಉತ್ತಮ ವೇದಿಕೆಯಾಯಿತು. ಇನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟ್ರ್ಯಾಕ್ಟರ್ ಏರಿ ಕಾಲೇಜ್ ಗೆ ಎಂಟ್ರಿ ಕೊಟ್ರೆ ಉಪನ್ಯಾಸಕರು ಖುಷಿಯಿಂದ ಸ್ವಾಗತಿಸಿದ್ರು. ಪ್ರತಿಯೊಬ್ಬರು ತಂದ ಖಡಕ್ ರೊಟ್ಟಿ, ಚಪಾತಿ, ಹುರಳಿ ಕಾಳು ಹುಗ್ಗಿ, ಸೋಪ್ಪು, ಸೇರಿ ಬಗೆಬಗೆಯ ಭಕ್ಷ ಭೋಜನ ಕಟ್ಟಿಕೊಂಡು ಬಂದಿದ್ರು. ಎಲ್ಲರೂ ಸೇರಿ ತರತರಹದ ಪರಸ್ಪರರು ಕೈತುತ್ತು ನೀಡುತ್ತ ಊಟ ಸವಿದ್ರು. ಈ ಮೂಲಕ ಗ್ರಾಮೀಣ ಜನರ ಖಾದ್ಯದ ಕಲ್ಪನೆ ಮೂಡಿತು. ತಾವು ಉಟ್ಟ ಉಡುಗೆಯನ್ನು ಓರಿಗೆಯ ಗೆಳತಿಯರೆಲ್ಲ ಸೇರಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು. ಹತ್ತು ಹಲವು ಜಾನಪದ ನೃತ್ಯಕ್ಕೆ ವಿದ್ಯಾರ್ಥಿನಿಯರು ಹೆಜ್ಜೆಹಾಕಿ ಸಕತ್ ಎಂಜಾಯ್ ಮಾಡಿದ್ರು. ಪ್ಯಾಟಿ ಹುಡ್ಗಿಯರು ಹಳ್ಳಿ ಉಡುಗೆ ತೊಟ್ಟು ಸೆಲ್ಫಿ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಶಿಕ್ಷಕರು ಇಂದು ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿದ್ರು. ಕೇವಲ ಶಿಕ್ಷಕಿಯರಷ್ಟೆ ಅಲ್ಲದೇ ಶಿಕ್ಷಕರು ಧೋತಿ, ರುಮಾಲು, ಜಾಕೇಟ್ ತೊಟ್ಟು ಅಪ್ಪಟ ಹಳ್ಳಿಯವರಂತೆ ಕಂಡ್ರು. ಇಂದು ಬಟ್ಟೆಗಳು ನಮ್ಮತನ ಹಾಗೂ ಸಂಪ್ರದಾಯವನ್ನು ಮರೆಸುತ್ತಿವೆ. ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ನಮ್ಮ ಹಳ್ಳಿಸೊಗಡಿನ ಅರಿವು ಯುವಕರಲ್ಲಿ ಮೂಡಿಸಬೇಕಾದ ಅವಶ್ಯಕತೆ ಇದೆ ಅಂತಾರೆ ಶಿಕ್ಷಕರು..

ಬಂಡಿ ಹೊತ್ತ ಬೆಳ್ಳಾನೆ ಎರಡೆತ್ತಿನ ಗತ್ತು ವಿದ್ಯಾರ್ಥಿಗಳಿಗೂ ಆಕರ್ಶಿಸಿದ್ವು. ಅಪ್ಪಟ ಹಳ್ಳಿ ಹುಡುಗಿಯರಾಗಿ ಬಂದ ಕಾಲೇಜು ಕನ್ಯೇಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಪಠ್ಯೇತರ ಚಟುವಟಿಕೆಗಳ ಮೂಲಕ ಇಂಥ ಕಾರ್ಯಕ್ರಮಗಳನ್ನು ಮಾಡಿದ್ದಾದ್ರೆ ಅದೆಷ್ಟೋ ಯುವಕರಿಗೆ ನಮ್ಮ ಅನ್ನದಾತರ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತ

17/07/2022

ಟಿ ನರಸೀಪುರ ತಾಲೂಕಿನ ಮೂಗೂರು ತ್ರಿಪುರಸುಂದರೀ ತಿಬ್ಬಾದೇವಿ ದೇವಸ್ಥಾನದಲ್ಲಿ ಕಳ್ಳತನ

ಒಂದೇ ತಿಂಗಳಲ್ಲಿ 2ದೇವಾಲಯಗಳಲ್ಲಿ ಕಳ್ಳತನ

ತಿರಮಕೂಡಲಿನ ಚೌಡೇಶ್ವರಿ ದೇವಾಲಯದಲ್ಲಿ ಕಿಟಕಿ ಮುರಿದು ಕಳ್ಳತನ ಮಾಡಿದ ಕಳ್ಳರು

ಚೌಡೇಶ್ವರಿ ದೇವಾಲಯ ಕಳ್ಳತನ ಮಾಸುವ ಮೊದಲೇ ತ್ರಿಪುರಸುಂದರಿ ತಿಬ್ಬದೇವಿ ದೇವಾಲಯದಲ್ಲಿ ಕಳ್ಳತನ

ದೇವಿಯ ಮೈಮೇಲಿದ್ದ ಚಿನ್ನಾಭರಣ ಮತ್ತು ಸರ್ಕಾರದ ಹುಂಡಿ ಒಡೆದು ಕಳ್ಳತನ ಮಾಡಿರುವ ಕಳ್ಳರು

ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನ ಮತ್ತು ರಾಬರಿ ಪೊಲೀಸ್ ವೈಫಲ್ಯವೆಂದು ಜನಾಕ್ರೋಶ

ಆಷಾಢ ಮಾಸದಲ್ಲೇ ಹೆಚ್ಚುತ್ತಿರುವ ಕಳ್ಳತನಗಳು

16/07/2022

ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು.

ತಾಲೂಕು ಪ್ರವಾಸ ಮಂದಿರ ಪಕ್ಕದಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ ನೀಡಿದರು ಅಲ್ಲಿರುವ ಸಮಸ್ಯಗಳನ್ನು ಅಳಿಸಿ ಸಂಬಂಧ ಪಟ್ಟು ಅಧಿಕಾರಿಗೆ
ಫೋನ್ ಕರೆ ಮಾಡಿ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು

ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರು ಸೂಚನೆಗೆ ಸ್ಪಂದಿಸಿದ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್

ಮರು ದಿನವೇ ಸಿಂಧನೂರಿಗೆ ಆಗಮಿಸಿ ಗ್ರಂಥಾಲಯದಲ್ಲಿರುವ ಸಮಸ್ಯೆಗಳಾದ ಇನ್ವೇಟರ್ , ಸ್ಪರ್ದಾರ್ಥಕ ಪುಸ್ತಕಗಳು,ಚೇರ್ ಗಳು, ಪ್ಯಾನ್, ಎಲ್ ಇ ಡಿ ಬಲ್ಪ್, ಸೇರಿದಂತೆ ಗ್ರಂಥಾಲಯದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ತಾಲೂಕಾ ಗ್ರಂಥಾಪಾಲಕರಾದ ವಿಶ್ವನಾಥ್ ಕುಲಕರ್ಣಿ ಅವರರಿಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ನಿನ್ನೆ ಗ್ರಂಥಾಲಯದ ಸಮಸ್ಯಗಳನ್ನು ನಮ್ಮ ಸ್ಪೀಡ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು

ಗ್ರಂಥಾಲಯದ ಅಧಿಕಾರಿಗಳು ಸಿಂಧನೂರಿಗೆ ಆಗಮಿಸಿ ಸಮಸ್ಯಗಳನ್ನು ಸರಿಪಡಿಸಲು ಇಲ್ಲಿರುವ ಗ್ರಂಥಾಪಾಲಕರಿಗೆ ಸೂಚನೆ ನೀಡಿದರು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 9 ಅಂಬುಲೆನ್ಸ್ ವಿತರಣೆ. ಗ್ರಾಮೀಣ ಜನರಿಗೆ ಆರೋಗ್ಯ ಸೇವೆಗೆ ಅಂಬುಲೆನ್ಸ್.
15/07/2022

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 9 ಅಂಬುಲೆನ್ಸ್ ವಿತರಣೆ. ಗ್ರಾಮೀಣ ಜನರಿಗೆ ಆರೋಗ್ಯ ಸೇವೆಗೆ ಅಂಬುಲೆನ್ಸ್.

14/07/2022

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಕಟ್ಟಾಬಲಿ ಗ್ರಾಮ ಶಾಲಾ ವಿದ್ಯಾರ್ಥಿಗಳ ಪ್ರತಿನಿತ್ಯದ ಗೋಳು ಬಸ್ಸಿಗಾಗಿ ಕಾದು ಕಾದು ಕಾಸ್ಕಿ ಗೂಡ್ಸ್ ವಾಹನಗಳ ಮೊರೆ ಸುಮಾರು 100 ಮಕ್ಕಳು ಪ್ರತಿನಿತ್ಯ ಕಟ್ಟಾ ಬಳಿ ಇಂದ ಯಮಕನಮರಡಿ ತನಕ.

13/07/2022

ಸಹೋದರರಿಂದ ಗುಂಡಿನ ದಾಳಿಯಿಂದ ಪಾರಾದ ಚಿತ್ರನಟ ಶಿವರಂಜನ್ ಹೇಳಿದ್ದೇನು....

ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಫೈರಿಂಗ್‌ಗೆ ಯತ್ನ ವಿಚಾರ

ಬೆಳಗಾವಿ ಜಿಲ್ಲೆಯ ಬೈಲಹೊಂಗಲನಗರದ ನಿವಾಸಿಗಳಾದ ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್

ನಮ್ಮ ಸಹೋದರ ಮತ್ತು ಆತನ ಹೆಂಡತಿಯ ಅಕ್ಕನಮಗನಿಂದಲೇ ನನ್ನ ಮೇಲೆ ಐದು ಸುತ್ತು ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದು ಚಿತ್ರನಟ,ಉದ್ಯಮಿ ಶಿವರಂಜನ್ ಬೋಳಣ್ಣವರ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮೀಯ ಗುರುಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದಿಂದ ನಾನು ಬದುಕಿದ್ದೇನೆ. ನಿನ್ನೆ ಸಂಜೆ 7.30ರ ಸುಮಾರಿಗೆ ನನ್ನ ಮೇಲೆ ಸಂಬಂಧಿಕರರಿಂದಲೇ ಗುಂಡಿನ ದಾಳಿ ಆಗಿದೆ.

ನಮ್ಮ ಸಹೋದರ ಮತ್ತು ಆತನ ಹೆಂಡತಿ ಅಕ್ಕನ ಮಗ ಸೇರಿ ನನ್ನ ಮೇಲೆ ಐದು ಸುತ್ತು ಗುಂಡಿನ ದಾಳಿ ಮಾಡಿದ್ದಾರೆ. ಅದೃಷ್ಟವಶಾತ್ ನನಗೆ ಯಾವುದೇ ಗುಂಡು ತಗುಲಿಲ್ಲ.‌ಆದ್ರೆ ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಇದನ್ನ ನಾನು ಖಂಡಿಸುತ್ತೇನೆ.

ಘಟನೆ ನಡೆದ ಬಳಿಕ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗಿ ಕೆಲಸ ಮಾಡಿದೆ.‌ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಇವತ್ತು ಬಂಧಿಸುವ ಭರವಸೆಯನ್ನೂ ಪೊಲೀಸರು ನೀಡಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ.ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಚಿತ್ರನಟ,ಉದ್ಯಮಿ ಶಿವರಂಜನ್ ಬೋಳಣ್ಣವರ 90ರ ದಶಕದಲ್ಲಿ ಅಮೃತ ಸಿಂಧು, ರಾಜಾ ರಾಣಿ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರನಟಿ ಶೃತಿ ಅಭಿನಯದ ಅಮೃತಸಿಂಧು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದರು.

ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಫೈರಿಂಗ್‌ಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಕಾರಣರಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದರು.ಸದ್ಯ ಓರ್ವ ಆರೋಪಿಯನ್ನ ಬಂಧಿಸಿರುವುದಾಗಿ ತಿಳಿದುಬಂದಿದೆ.

12/07/2022

ಬೆಳಗಾವಿ ಸಮೀಪದ ರಾಕಸಕೊಪ್ಪ ಬೆಡುಗುಂದಿ ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿ ಭೀಕರ ಅಪಘಾತದಲ್ಲಿ ಯೋದನೊಬ್ಬನು ಮೃತಪಟ್ಟನು ಘಟನೆ ನಡೆದಿದೆ.

12/07/2022

ಶಿಕ್ಷಣಕ್ಕಾಗಿ ನಿತ್ಯ 4 ಕಿಮೀ ಕಾಲ್ನಡಿಗೆ

ಸವದತ್ತಿ : ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಿಂದ ಸವದತ್ತಿ, ಧಾರವಾಡದ ಶಾಲಾ,ಕಾಲೇಜು ಹಾಗೂ ಮಹಾವಿದ್ಯಾಲಯಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ.

ಸವದತ್ತಿಯಿಂದ 15 ಕಿಮೀ ದೂರವಿರುವ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ಪ್ರತಿದಿನ 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಧಾರವಾಡ ಹಾಗೂ ಸವದತ್ತಿಗೆ ತೆರಳುತ್ತಾರೆ. ಸವದತ್ತಿಗೆ ತೆರಳಲು ಮು.8:30 ಸಾ.5:30 ರಾ.8:30 ಸೇರಿ ಮೂರು ಬಸ್ ಇದ್ದರೆ ಧಾರವಾಡಕ್ಕೆ ತೆರಳಲು ಮು.6:30, 9:30 ಮ.3.30 ಸಾ.5:30ಕ್ಕೆ ಸೇರಿ ನಾಲ್ಕು ಬಸ್ ಗಳು ಓಡಾಡುತ್ತವೆ. ಈ ಬಸ್ಸುಗಳು ಸಹ ಸಮಯಕ್ಕೆ ಬಾರದೆ ಇರುವ ಕಾರಣ ವಿದ್ಯಾರ್ಥಿಗಳು ಸರಿಯಾಗಿ ತರಗತಿಗೆ ಹಾಜರಾಗದೆ ಶಿಕ್ಷಣದದಿಂದ ವಂಚಿತರಾಗುವ ಜೊತೆಗೆ ಹಾಜರಾತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ವ್ಯವಸ್ಥೆಗೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದು ಗೊಂದಲಕ್ಕೆ ಸಿಲುಕಿದ್ದಾರೆ.

ಸಮರ್ಪಕ ಬಸ್ ಇರದ ಕಾರಣ ಗ್ರಾಮದಿಂದ 2 ಕಿಮೀ ಅಂತರದಲ್ಲಿರುವ ಸವದತ್ತಿ-ಧಾರವಾಡದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಚಿಕ್ಕಉಳ್ಳಿಗೇರಿ ಕ್ರಾಸ್ ಗೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬರುತ್ತಾರೆ.

ಆದರೆ ಆ ಕ್ರಾಸ್ ಗೆ ಸವದತ್ತಿ ವಿಭಾಗದ ಬಸ್ ಹೊರತುಪಡಿಸಿ ಬೇರೆ ವಿಭಾಗದ ಯಾವುದೇ ಬಸ್ ನಿಲ್ಲುವುದಿಲ್ಲಾ ಹೀಗಾಗಿ ಪರೀಕ್ಷಾ ಸಮಯದಲ್ಲಂತೂ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಲ್ಲಿನ ವಿದ್ಯಾರ್ಥಿಗಳು ಸೋಮವಾರ ಚಿಕ್ಕ ಉಳ್ಳಿಗೇರಿ ಬಸ್ ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಕುರಿತು 1ಗಂಟೆ ಕಾಲ ಧಿಕ್ಕಾರವನ್ನು ಕುಗಿದರು.

ಶಿಕ್ಷಣಕ್ಕಾಗಿ ನಿತ್ಯ 2 ಕಿಮೀ ಅಲೆದಾಟ

ಚಿಕ್ಕ ಉಳ್ಳಿಗೇರಿ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಧಾರವಾಡ ಹಾಗೂ ಸಮದತ್ತಿ ಶಾಲಾ, ಕಾಲೇಜಿಗೆ ತೆರಳುತ್ತಾರೆ ಆದರೆ ಆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಇರದ ಕಾರಣ ಮಳೆ, ಗಾಳಿ, ಚಳಿಯಲ್ಲಿಯೆ ಶಿಕ್ಷಣ ಪಡೆಯಲು ಗ್ರಾಮದಿಂದ 2 ಕಿಮೀ ಆಚೆಯಿರುವ ಸವದತ್ತಿ - ಧಾರವಾಡ ಮುಖ್ಯ ರಸ್ತೆಗೆ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡೆ ಹೋಗುವ ಅನಿವಾರ್ಯತೆ ಇದೆ. ಅಲ್ಲದೆ ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಕಗ್ಗತ್ತಲ ಭಯದಲ್ಲಿಯೇ ನಡೆದು ಶಿಕ್ಷಣ ಪಡೆಯಬೇಕಾಗಿದೆ.

ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಕಲಿಕೆಗಿಂತ ಕಾಲ್ನಡಿಗೆಯ ಶಿಕ್ಷೆ ಹೆಚ್ಚಾಗಿದೆ. ಈ ಅವ್ಯವಸ್ಥೆಯಿಂದ ಕಡ್ಡಾಯ ಶಿಕ್ಷಣದ ಕಲಿಕೆಯು ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಸ್ವಲ್ಪ ಮರಿಚೀಕೆ ಕಾಣುತ್ತಿದೆ.

ನೇತ್ರಾ ದೊಡಮನಿ. (ಸ್ಥಳೀಯ ನಿವಾಸಿ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ)

ಶಿಕ್ಷಣವನ್ನು ಪಡೆಯಲು ಮಳೆ,ಗಾಳಿ, ಚಳಿಯಲ್ಲಿಯೆ ನಾನು 5 ವರ್ಷದಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ, ಈ ಕುರಿತು ಹಲವಾರು ಬಾರಿ ಸವದತ್ತಿ ಡಿಪೋಗೆ ಮನವಿಯನ್ನು ಸಹ ಮಾಡಿಕೊಂಡಿದ್ದೇವೆ ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಇವರ ನಿರ್ಲಕ್ಷತನದಿಂದಾಗಿ ಗ್ರಾಮದ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಗಣೇಶ.ಎಂ.ಜವಳಿ (ಸವದತ್ತಿ, ಡಿಪೋ ಮ್ಯಾನೆಜರ್)
ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವ ಕುರಿತು ಇದೀಗ ಗಮನಕ್ಕೆ ಬಂದಿದೆ ಸ್ಥಳೀಯ ವಿದ್ಯಾರ್ಥಿಗಳ ಮಾಹಿತಿ ಪಡೆದು ಇನ್ನೆರಡು ದಿನಗಳಲ್ಲಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡುತ್ತೇವೆ

11/07/2022

ಸತತ ಮಳೆಯಿಂದ ಬೆಂಡಲಗಟ್ಟಿ ಗ್ರಾಮದಲ್ಲಿ ಮನೆ ಸಂಪೂರ್ಣ ಕುಸಿತ

ಸತತ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಪರಸಪ್ಪ ಮಲ್ಲೇಶಪ್ಪ ನಾಗೋಜಿ ಎಂಬುವವರ ಮನೆ ಚಾವಣಿ ಸಂಪೂರ್ಣ ಬಿದ್ದಿರುವ ಘಟನೆ ನಡೆದಿದೆ.

ತುಂಬ ಹಳೆಯ ಮನೆ ಇದಾಗಿದ್ದು ಮನೆಯಲ್ಲಿ ಟಿವಿ ಹಾಗೂ ಇನ್ನಿತರೆ ವಸ್ತುಗಳು ಒಡೆದು ಹೋಗಿದ್ದು ಇನ್ನು ಬಹಳಷ್ಟು ವಸ್ತುಗಳಿಗೆ ಹಾನಿಯಾಗಿದೆ. ಅದೆ ರೀತಿ ಮನೆಯಲ್ಲಿ ದನಕರುಗಳಿಗೆ ಗಾಯಗಳಾಗಿದ್ದು ಯಾವದೆ ರೀತಿಯಾದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮನೆಯ ಮಾಲಿಕರಾದ ಪರಸಪ್ಪ ರವರು ತಿಳಿಸಿದ್ದಾರೆ.

ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಆಗಿರುವಂತ ನಷ್ಟಕ್ಕೆ ಶೀಘ್ರವಾಗಿ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಮನವಿಮಾಡಿದರು.

11/07/2022

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಸರ್ಕಾರದ ಮುಂದಿರವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯನ್ನು ಜಾರಿಗೊಳಿಸುವ ಬಗ್ಗೆ ಬೆಳಗಾವಿ ಡಿಸಿ ಆಫೀಸ್ ಗೆ ಮುತ್ತಿಗೆ ಹಾಕಿದರು

11/07/2022

ಗೋಕಾಕ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟಕ್ಕೆ ಖಾಕಿ ಕಡಿವಾಣ; ನೀರಿಗಿಳಿಯದಂತೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಕೆ

ಫಾಲ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಗೆ ಪ್ರಸಿದ್ಧ ಗೋಕಾಕ ಫಾಲ್ಸ್ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಕೆಲ ಯುವಕರ ಅಪಾಯಕಾರಿ ಹುಚ್ಚಾಟಗಳು ಮಾತ್ರ ಮಿತಿ ಮೀರಿದ್ದು ಇದೀಗ ಪೊಲೀಸರು ಇದಕ್ಕೆ ಭಾನುವಾರದಿಂದಲೇ ಕಡಿವಾಣ ಹಾಕಿದ್ದಾರೆ.

ಫಾಲ್ಸ್ ಧುಮುಕುವ ಜಾಗದ ಪಕ್ಕದಲ್ಲಿ ಎತ್ತರದ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ, ಫಾಲ್ಸ್ ನ ದೃಶ್ಯ ಚಿತ್ರೀಕರಿಸುವ ಸಾಹಸಕ್ಕೆ ಇಳಿಯುವ ಕೆಲ ಯುವಕರು ಜೀವದ ಹಂಗೇ ಇಲ್ಲದಂತೆ ವರ್ತಿಸುತ್ತಾರೆ. ಈ ಭಾಗದಿಂದ ಕೆಳಗೆ ಬಿದ್ದರೆ ನೇರವಾಗಿ ಜಲಪಾತದಲ್ಲೇ ಬಿದ್ದು ಪ್ರಾಣಹಾನಿಯಾಗುವುದು ನಿಶ್ಚಿತ. ಈ ಹಿಂದೆ ಹಲವು ಘಟನೆಗಳು ನಡೆದಿದ್ದರೂ ಸೆಲ್ಫಿ ಗೀಳಿನ ಯುವಕರು ಮಾತ್ರ ತಮ್ಮ ಚಾಳಿ ಬದಲಿಸುವುದಿಲ್ಲ.

ಇದೀಗ ಫಾಲ್ಸ್ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರದಿಂದಲೇ ಇಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜಲಪಾತದ ಮೇಲ್ಭಾಗದ ಜಾಗಗಳಿಗೆ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು ಆಗಮಿಸಿದ ಪ್ರವಾಸಿಗರಿಗೆ ಸುರಕ್ಷತೆಯ ಬಗ್ಗೆ ತಿಳಿಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು ಮುಂಬರುವ ದಿನಗಳಲ್ಲಿ ಇಲ್ಲಿ ಮೆಟಲ್ ರೇಲಿಂಗ್ಸ್ ಅಳವಡಿಸುವಂತೆ ಸಂಬಂಧಿಸಿದ ಇಲಾಖೆ ಗಮನಕ್ಕೆ ತರಲಾಗುತ್ತಿದೆ ಎಂದು ಗೋಕಾಕ ಫಾಲ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ ಹೇಳಿದ್ದಾರೆ.

10/07/2022

ಅಂಬೋಲಿ ಫಾಲ್ಸ್.
ಎಂಜಾಯ್ ಮಾಡ್ತಿದ್ದಾರೆ ಪಾಲ್ಸ್ ಕೆಳಗೆ ನೂರಾರು ಜನರು ಪ್ರವಾಸಿಗರು.

ಬೆಳಗಾವಿ ಗಡಿಗೆ ಹೊಂದಿಕೊಂಡು ಮಹಾರಾಷ್ಟ್ರದ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಅಂಬೋಲಿ ಫಾಲ್ಸ್

09/07/2022

ಅಕ್ರಮವಾಗಿ ಬಕ್ರೀದ್ ಬಲಿಗೆ ಸಾಗಿಸಲಾಗಿದ್ದ ಹಸುಗಳ ಜೀವ ಉಳಿಸಿದ ಖಾಕಿ

ಹೊಸಕೋಟೆ:- ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಮಾಂಸ ವ್ಯಾಪಾರಿಗಳು ಅಕ್ರಮವಾಗಿ ಸೂಕ್ತ ದಾಖಲೆಗಳಿಲ್ಲದೆ ಹಸುಗಳನ್ನು ಸಾಗಿಸಿ, ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಹಿನ್ನೆಲೆ ಈ ಬಗ್ಗೆ ಗೋಗ್ಯಾನ್ ಸಂಸ್ಥೆ ಹೊಸಕೋಟೆಯ ಅನುಗೊಂಡನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ನಾಳೆ ಬಕ್ರೀದ್ ಹಬ್ಬದ ವ್ಯಾಪಾರಕ್ಕೆ ಹಸುಗಳನ್ನು ತಂದು ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆ ಹೊಸಕೋಟೆ DYSP ಉಮಾಶಂಕರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 6ಕ್ಕು ಹೆಚ್ಚು ಹಸುಗಳನ್ನು ಸಂರಕ್ಷಿಸಿದ್ದಾರೆ.

09/07/2022

ಮಕ್ಕಳ ಜೀವನ ಜೊತೆ ಚೆಲ್ಲಾಟ ಆಡುತ್ತಿರುವ ಬಿಸಿಎಂ ಹಾಸ್ಟಲ್ ವಾರ್ಡನ್....

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳು ಜಾರಿ ತಂದು ವಸತಿ ನಿಲಯದಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಊಟದ ವ್ಯವಸ್ಥೆ ಮಾಡಬೇಕಾರುವ ಅಧಿಕಾರಿಗಳು ತಮ್ಮ ಜೇಬು ಸೇರಿಸಿಕೊಳ್ಳುತ್ತಿದ್ದಾರೆ....

ಬೀದರ್ ನಗರ ಭಾಗದಲ್ಲಿರುವ ನೌಬಾದ ಮೆಟ್ರಿಕ್ ನಂತರ
ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಮ್ಯಾಟ್ರಿಕ್ ನಂತರ ವಸತಿ ನಿಲಯದಲ್ಲಿ ವಾರ್ಡನ್ ಆಡಿದ್ದೆ ಆಟ....

ಮಕ್ಕಳು ಕುಳಿತು ಊಟ ಮಾಡುವ ಸ್ಥಳದಲ್ಲಿ ನಾಯಿಗಳ(ಕಕ್ಕಸ) ಮಲಮೂತ್ರ...

ಮಕ್ಕಳ ಜೀವನ ಜೊತೆ ಚೆಲ್ಲಾಟ ಆಡುತ್ತಿರುವ ಬಿಸಿಎಂ ಹಾಸ್ಟಲ್ ವಾರ್ಡನ್....

ಅಸ್ವಚ್ಛತೆಯ ತಾಂಡವಾಡುತ್ತಿದ್ದ ಬಿಸಿಎಂ ಹಾಸ್ಟಲ್.......

ಹಾಸ್ಟೆಲ್ ವಾರ್ಡನ್ ಕಾಯಾ೯ಲಯದ ಮುಂದೆ ನಾಯಿಗಳ (ಕಕ್ಕಸ) ಮಲಮೂತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ವರ್ಡನ್.....

ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಫೋನ್ ಮಾಡಿ ಗಮನಕ್ಕೆ ತಂದರು ವಸತಿ ನಿಲಯಕ್ಕೆ ಬಾರದ ಮೇಲಾಧಿಕಾರಿಗಳು ......

ಚಾರ್ಟ್ ಮೆನು ಪ್ರಕಾರ ಸರಿಯಾದ ಊಟದ ವ್ಯವಸ್ಥೆ ಸಿಗುತ್ತಿಲ್ಲ ಎಂದು ಅಧಿಕಾರಿಗಳ ಎದುರು ವಿದ್ಯಾರ್ಥಿಗಳ ದೂರು....

ಕೇವಲ ಒಂದು ಲೀಟರ್ ಹಾಲಿನಲ್ಲಿ 140 ವಿದ್ಯಾರ್ಥಿಗಳಿಗೆ ಟೀ.....

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಲ್ಲ ಬಿಸಿ ನೀರಿನ ವ್ಯವಸ್ಥೆ....

ವಸತಿ ನಿಲಯದ ಗೀಸರ್ ಗಳಿಗೆ ಮುಟ್ಟಿದರೆ ಮಕ್ಕಳಿಗೆ ತಗಲುತ್ತೆ ಕರೆಂಟ್ ಶಾಕ್.....

ರಾತ್ರಿಯಾದರೆ ಸಾಕು ಅಡಿಗೆ ಕೋಣೆಗಳಿಗೆ ನಾಯಿಗಳದ್ದೆ ದರ್ಬಾರ್.....

ವಸತಿ ನಿಲಯದಲ್ಲಿ ಪ್ರವೇಶ ಪಡೆದ (ಅಧಿಕೃತ) ವಿದ್ಯಾರ್ಥಿಗಳಿಗಿಂತ ಹೊರಗಿನ ವಿದ್ಯಾರ್ಥಿಗಳ ಸಂಖ್ಯೆ ಅಂದರೆ ಅನಾಧಿಕೃತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಧಿಕೃತ ವಿದ್ಯಾರ್ಥಿಗಳಿಗೆ ಆಗುತ್ತಿದೆ ಊಟದ ಸಮಸ್ಯೆ.....

ಅನಾಧಿಕೃತ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳ ಎದುರಿಗೆ ಉಡಾಫೆ ಉತ್ತರ ನೀಡುತ್ತಿರುವ ಹಾಸ್ಟೆಲ್ ವಾರ್ಡನ್ ರಮೇಶ್.........

ಬೀದರ್ ನಗರ ಭಾಗದಲ್ಲಿರುವ ನೌಬಾದ ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಮತ್ತು ಸುತ್ತಮುತ್ತಲು ಅಸ್ವಚ್ಛತೆ ಕಂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಆರೋಪದ ಮೆರೆಗೆ ಸ್ಥಳಕ್ಕೆ ಭೇಟಿ ಕೊಟ್ಟು ಸಿಬ್ಬಂದಿಗಳಿಗೆ ಮತ್ತು ವಸತಿ ನಿಲಯದ ಮೇಲ್ವಿಚಾರಕರಿಗೆ ತರಾಟೆಗೆ ತೆಗೆದುಕೊಂಡರು .....

ಅಧಿಕಾರಿಗಳ ಎದುರು ಕೂಡಲೇ ವಸತಿ ನಿಲಯದ ಮೇಲ್ವಿಚಾರಕರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದ ವಸತಿ ನಿಲಯದ ವಿದ್ಯಾರ್ಥಿಗಳು....

08/07/2022

ಮೂಡಲಗಿ ತಾಲೂಕಿನ ಕುಲಗೋಡ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಹೊನಕುಪ್ಪಿ ಗ್ರಾಮದಲ್ಲಿ ರೈತನೊರ್ವ ತಾನು ಬೆಳೆದ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೇಳೆದ ಖಚಿತ ಮಾಹಿತಿಯೊಂದಿಗೆ ಕುಲಗೋಡ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ದೌಢಾಯಿಸಿ ಅಂದಾಜು 95.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ,

ಹಾಗೂ ಗಾಂಜಾ ಬೆಳೆದ ಇಬ್ಬರನ್ನು ಪೋಲಿಸರು ತಮ್ಮ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ,

03/07/2022

ಸರ್ಕಾರಿ ಶಾಲೆಗಳ ಏಳಿಗೆಗೆ ಇಲ್ಲೊಂದು ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಾಲಾ ಸಲಕರಣಿಗಳನ್ನು ಅರ್ಪಿಸಿ ಸರ್ಕಾರಿ ಕನ್ನಡ ಶಾಲೆ ಉಳಿಸುವ ಅಭಿಯಾನಕ್ಕೆ ನಾಂದಿಯಾಡಿದ್ದಾರೆ.

ವಾ. ಓ : ಶ್ರೀನಿವಾಸಪುರ ತಾಲ್ಲೂಕಿನ ದಾಸರತಿಮ್ಮನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಸರ್ಕಾರಿ ಅನುದಾನಗಳಿಗೆ ದೂರವಿಡಲಾಗುತ್ತಿತ್ತು. ಇಂತಹ ಸಮಯದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ವಿ ಸಿಂಪ್ಲಿಫೈ ಚಾರಿಟಬಲ್ ಟ್ರಸ್ಟ್ ನವರು ಇಲ್ಲಿನ ಶಾಲೆಗೆ ಸುಂದರವಾದ ಬಣ್ಣ ಹಾಗೂ ಶಾಲೆಗೆ ಅಗತ್ಯ ವಿರುವ ಸಾಮಗ್ರಿಗಳು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ಈ ವೇಳೆ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹಾಗೂ ಕನ್ನಡ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವ ಯತ್ನ ಸರ್ಕಾರಗಳು ಮಾಡುತ್ತಿವೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಮೊದಲಿಗೆ ಕನ್ನಡ ಸರ್ಕಾರಿ ಶಾಲೆಗಳು ಉಳಿಯಬೇಕು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಸರ್ಕಾರಿ ಕನ್ನಡ ಶಾಲೆ ಉಳಿಸುವ ಅಭಿಯಾನವನ್ನು ಹಮ್ಮಿಕೊಂಡು ಇಂದು ಆಂಧ್ರ ಗಡಿಭಾಗದ ಗ್ರಾಮದಲ್ಲಿನ ಶಾಲೆಯ ಉಳಿವಿಗಾಗಿ ನಮ್ಮ ಸಂಸ್ಥೆಯಿಂದ ಸಾಧ್ಯವಾದಷ್ಟು ಅನುಕೂಲಗಳನ್ನು ಮಾಡಲಾಗಿತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಟ್ರಸ್ಟ್ ನ ಸದಸ್ಯರು ಗಿಡಗಳನ್ನು ನೆಟ್ಟರು.

Address


Website

Alerts

Be the first to know and let us send you an email when K7 kannada News posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share