Vajra9news

Vajra9news Contact information, map and directions, contact form, opening hours, services, ratings, photos, videos and announcements from Vajra9news, Media/News Company, .

02/11/2021

ಪ್ರತಿ ವರ್ಷದಂತೆ ಮಾಗಡಿ ಪಟ್ಟಣದ ಕೋಟೆ ಅವರಣದಲ್ಲಿ KMK ಪಟಾಕಿ ಮಾರಾಟ ಮಳಿಗೆ ತೆರೆಯಲಾಗಿದೆ... ಪಟ್ಟಣದ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಏನೆಂದರೆ ರಿಯಾಯತಿ ದರದಲ್ಲಿ ಜನರಿಗೆ ಕೈಗೆಟುವ ದರದಲ್ಲಿ ಸಿಗಲಿದೆ ಎಂದು ಪಟಾಕಿ ಅಂಗಡಿ ಮಾಲೀಕರಾದ ವಿಜಯಸಿಂಹ.ರಾಮು.ಉಮೇಶ್ ತಿಳಿಸಿದ್ದಾರೆ

01/11/2021

ಮಾಗಡಿ ತಾಲ್ಲೂಕು ಕಚೇರಿ ಹೊರಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ.. ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ ಹಾಗೂ ಶಾಸಕ ಎ. ಮಂಜುನಾಥ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು

31/10/2021

ಮಾಗಡಿ ಪಟ್ಟಣದ ಕೆಂಪೇಗೌಡರ ಪುತ್ಥಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಸನ ಜಿಲ್ಲೆಯ ತಣ್ಣೀರಹಳ್ಳ ನಿವಾಸಿ ಜಗತಿ ಚೇರ್ ಗಳ ಮೇಲೆ ಜೀವಿಸುತ್ತ ಕಾಲ ಕಳೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. 2ವರ್ಷಗಳಿಂದ ಅನುಮಾನಾಸ್ಪದವಾಗಿ ಮಾಗಡಿಯಲ್ಲಿ ತಿರುಗಾಡಿಕೊಂಡು ಇದಾನೇ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಇಂಥವರಿಗೆ ಬುದ್ದಿ ಹೇಳಿ ಊರಿನ ಕಡೆ ಕಳುಹಿಸಬೇಕಾಗಿ ವಜ್ರ 9 ನ್ಯೂಸ್ ಚಾನಲ್ ಮನವಿ ಮಾಡುತ್ತಿದೆ. ಆ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಹಾಸನ ಜಿಲ್ಲೆಯ ತಣ್ಣೀರನಹಳ್ಳಿಯಲ್ಲಿ ಹೆಂಡತಿ ಪುಷ್ಪಾ ಟೈಲರಿಂಗ್ ಕೆಲಸ ನಿರ್ವಹಿಸುವುದಾಗಿ ಎರಡು ಹೆಣ್ಣು ಮಕ್ಕಳು ಇದ್ದಾರೆ ಎಂದು ತಿಳಿಸಿದ್ದಾನೆ.ತಂದೆಯ ಹೆಸರು ರಾಮರಾವ್ ತಾಯಿ ಹೆಸರು ಶಾಂತಾಬಾಯಿ ಹೆಂಡತಿ ಹೆಸರು ಪುಷ್ಪಾ ಎಂದು ತಿಳಿಸಿದ್ದಾನೆ

31/10/2021

ಇನ್ನಷ್ಟು ಹೃದಯಾಘಾತಕ್ಕೆ ಕಾರಣ ಸಮಸ್ಯೆ ತಿಳಿಯಲು ಡಾಕ್ಟರ್ ಭರತ್ ಚಂದ್ರ ನಮ್ಮೊಂದಿಗಿದ್ದಾರೆ ಈ ವೀಡಿಯೋ ಇಷ್ಟವಾದರೆ ಶೇರ್ ಲೈಕ್ ಕೊಡುವ ಮೂಲಕ ವಜ್ರ 9 ನ್ಯೂಸ್ ಚಾನೆಲ್ ಗೆ ಪ್ರೋತ್ಸಾಹಿಸಿ

26/10/2021

ನಿಯತ್ತಿಗೆ ಬೆಲೆಕಟ್ಟಲಾಗದ ಮೂಕಪ್ರಾಣಿ ಶ್ವಾನ...!! ಮನುಷ್ಯನ ನಿಯತ್ತಿಗೂ ಮೂಕ ಪ್ರಾಣಿಯ ನಿಯತ್ತಿಗೂ ದೃಶ್ಯಾವಳಿಗಳಲ್ಲಿ ನೋಡಿದರೆ ಎಂತಹ ಮನುಜನ ಮನಸ್ಸಿನಲ್ಲೂ ಮನಸ್ಸು ಕರಗುತ್ತದೆ. ಮೂಕ ಪ್ರಾಣಿ ಮನುಷ್ಯನನ್ನು ನಂಬಿದರೆ ಊಟ ನೀರು ಬಿಟ್ಟು ರಾತ್ರಿ ಹಗಲು ಅವನಿಗಾಗಿ ಕಾಯುವ ದೃಶ್ಯಾವಳಿಗಳನ್ನು ನೋಡಬಹುದು ಇಂತಹ ಸನ್ನಿವೇಶಗಳನ್ನು ಕಣ್ಣಾರೆ ನೋಡಿದಾಗ ಎಂತಹ ಕಠೋರ ವ್ಯಕ್ತಿಯ ಮನಸ್ಸಿನಲ್ಲೂ ಕೂಡ ಕಂಬನಿ ಧಾರೆ ಹರಿದು ಬರುತ್ತದೆ ...!!

25/10/2021

ಮಾಗಡಿ ಪಟ್ಟಣ ಸುಮಾರು 2014 ರಿಂದ ಯುಜಿಡಿ ನೀರು ಭರ್ಗಾವತಿ ಕೆರೆ ಸೇರಿ ಕಲುಷಿತವಾಗಿದೆ ಈ ದಿನಗಳಲ್ಲಿ ಭರ್ಗಾವತಿ ಕೆರೆ ಕೋಡಿಯಾಗಿ ರಾಜ ಕಾಲುವೆಗಳ ಮುಖಾಂತರ ಕೆರೆಯ ನೀರು ವೈಜಿಗುಡ್ಡ ತಲುಪುತ್ತಿದೆ ಈ ಕೆರೆಯ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಹತ್ತಾರು ಗ್ರಾಮಗಳ ಜನಸಾಮಾನ್ಯರು ಕುಡಿಯುವ ನೀರಿಗೆ ಯುಜಿಡಿ ಸೇರಿ ಕಲುಷಿತವಾಗುತ್ತಿದೆ ಇದನ್ನಾದರೂ ಮನಗಂಡ ಶಾಸಕರು ಅಧಿಕಾರಿಗಳು ಗಮನಹರಿಸಿ ಯುಜಿಡಿ ಸರಿಪಡಿಸಬೇಕೆಂದು ಪುರುಷೋತ್ತಮ್ ಮನವಿ ಮಾಡಿದರು ...!!

23/10/2021

[10/22, 11:22 PM] Vijay Vijay: https://youtu.be/dG-_3_L5Das ಸ್ಥಳೀಯ ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ:9972717575 ಸುದ್ದಿಗಳ ಅಪ್ಡೇಟ್ಸ್ ಗಾಗಿ subscribe ಮಾಡಿ ಬೆಲ್ ಬಟನ್ ಒತ್ತುವ ಮೂಲಕ ಪ್ರೋತ್ಸಾಹಿಸಿ
[10/22, 11:23 PM] Vijay Vijay: ಮಾಗಡಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯ ಫಲವಾಗಿ ದೇಶದಲ್ಲಿ 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರಕ್ಕೆ ಕೃತಜ್ಞತೆ ಸಲ್ಲಿಸಿ ತಾಲ್ಲೂಕಿನ ಜನಪರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಅವಿರತವಾಗಿ ಶ್ರಮಿಸಿದ ವೈದ್ಯರು ದಾದಿಯರು ವೈದ್ಯಕೀಯ ಸಿಬ್ಬಂದಿಗಳಿಗೆ ಸನ್ಮಾನಿಸಿದ ಕ್ಷಣಗಳು..! ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹುಲುವಾಡಿ ದೇವರಾಜು. ತಾಲ್ಲೂಕು ಅಧ್ಯಕ್ಷರು ಧನಂಜಯ. ಕುದೂರು ಶೇಷಪ್ಪ. ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಯಣಪ್ಪ. ವೈದ್ಯಾಧಿಕಾರಿಗಳು ರಾಜೇಶ್. ಶಂಕರ್. ಮಾರಣ್ಣ. ಶಿವಣ್ಣ. ರಾಜೇಶ್. ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

22/10/2021

ನಮ್ಮ ತಾಲ್ಲೂಕಿನ ಶಾಸಕರು 3ವರ್ಷ ಆದ್ರೂ ಪುರಸಭೆಗೆ ಶಾಸಕರ ಅನುದಾನ ಕವಡೆ ಪೈಸೆ ಬಂದಿಲ್ಲಾ.. ಪುರಸಭೆ ಸದಸ್ಯ ಶಿವಕುಮಾರ್..? ಈ ವಿಚಾರವಾಗಿ ಮಾತನಾಡಿದ ಶಿವಕುಮಾರ್ ಪಟ್ಟಣದ ಜನಸಾಮಾನ್ಯರಿಗೆ ಪುರಸಭೆ ವತಿಯಿಂದ ನಿವೇಶನ ರಹಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ ಆದರೆ ಅರ್ಹ ಫಲಾನುಭವಿಗಳಿಗೆ ಜಾಗ ಕೊಡಲು ಪುರಸಭೆಯಿಂದ ಜಾಗ ಖರೀದಿಯನ್ನೇ ಮಾಡಿಲ್ಲ ಎಲ್ಲಿ ಅರ್ಹ ಫಲಾನುಭವಿಗಳಿಗೆ ಜಾಗ ನೀಡುತ್ತಾರೆ ಎಂಬುದೇ ಡೌಟ್ ಆಗಿದೆ...! ಮತ್ತೆ ಚುನಾವಣೆ ಹತ್ತಿರ ಬರುತ್ತಿದೆ ರಾಜಕೀಯ ಗಿಮಿಕ್ ಇರಬಹುದು.ಈ ಹಿಂದೆ ನೀಡಿರುವ ಜೋಗಿಕಟ್ಟೆ ಸೈಟ್ಗಳ ಫಲಾನುಭವಿಗಳಿಗೆ ಈ ಖಾತಾ ಮಾಡಿಕೊಡಿ ಸ್ವಾಮಿ. ಪುರಸಭೆ ಬಾಗಿಲು ಅಲೆದು ನಾಗರಿಕರು ಸುಸ್ತಾಗಿದ್ದಾರೆ.2017-18ರ ಸಾಲಿನ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರು ಹಣ ಇನ್ನೂ ಬಿಡುಗಡೆಯಾಗಿಲ್ಲ ಬಡಜನರು ಇರುವ ಸೂರು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೈಗೆ ಸಿಗದೆ ಪಟ್ಟಣ ನಿವಾಸಿಗಳನ್ನು ಆಟವಾಡಿಸುತ್ತಿದ್ದಾರೆ ಇನ್ನಾದರೂ ಇದರ ಬಗ್ಗೆ ಗಮನ ಹರಿಸಬೇಕು ಶಾಸಕರು ಪುರಸಭೆ ಅಧಿಕಾರಿಗಳ ದುರಾಡಳಿತದ ಬಗ್ಗೆ ಎಂದರು.ಪಟ್ಟಣದ ಸ್ಲಂ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೌಸ್ ಫಾರ್ ಯೋಜನೆಯಡಿಯಲ್ಲಿ 27ಕೋಟಿ 88ಲಕ್ಷದ 10ಸಾವಿರ ಹಣ ಬಿಡುಗಡೆಯಾಗಿದ್ದು 504ಮನೆ ಕಟ್ಟಿಸಿಕೊಳ್ಳುವ ಅರ್ಹ ಫಲಾನುಭವಿಗಳಿಗೆ ಬಂದಿದ್ದು ಸ್ಲಂ ಬೋರ್ಡ್ ಗೆ ಸೀಮಿತವಾಗಿದೇ..23ವಾರ್ಡ್ ಗಳ ಶ್ರೀಮಂತರ ಪಾಲಾಗಿದೆ.sc-st ಕಾಲೊನಿ ನಿವಾಸಿಗಳಿಗೆ ವಂಚನೆ ಮೋಸ ಮಾಡುವ ಕೆಲಸ ನಡೆದಿದೆ.ಉದಾಹರಣೆಗೆ :ಕಲ್ಯಾಗೇಟ್ ಹೃದಯಭಾಗದಲ್ಲಿ ಸ್ಲಂಬೋರ್ಡ್ ಮನೆ ನಿರ್ಮಾಣವಾಗಿದೆ ಆಗದರೆ ಫಲಾನುಭಾವಿಗಳು ಇಲ್ಲ ಎಂಬ ಭಾವನೆ ಸೃಷ್ಟಿ ಮಾಡಿದ್ದಾರೆ.ಇರುವ ಕಪ್ಪು ಹೆಂಚಿನ ಮನೆಯೋ.. ಶೀಟಿನ ಮನೆಯ ಸೋರುವ ಮನೆಯೋ ಯಂಗೋ ನೆಮ್ಮದಿಯಾಗಿದ್ದ ಜನಸಾಮಾನ್ಯರ ಮನೆಗಳನ್ನು ಉರುಳಿಸಿ ಮನೆ ಕಟ್ಟುವುದಾಗಿ ತಿಳಿಸಿ 3ವರ್ಷಗಳಾದರೂ 1ಮನೆ ಕಂಪ್ಲೀಟ್ ಮಾಡಿಲ್ಲ ಸ್ಲಂ ಬೋರ್ಡ್ ಹೊರತುಪಡಿಸಿ ಬೇರೆಯ ವಾರ್ಡಿನ ಶ್ರೀಮಂತರ ಮನೆಗಳು ಪೂರ್ಣಗೊಂಡಿರುವುದು ಕಣ್ಣಾರೆ ನಾವೇ ಕಂಡಿದ್ದೇವೆ ಆ ಮನೆಗಳು ಯಾವುದೆಂದರೆ ಸ್ಲಂ ಬೋರ್ಡ್ ಗೆ ಸಂಬಂಧಪಟ್ಟಿದ್ದು ಅದೇ ಬಡವರ ಸಾಮಾನ್ಯರ ಮನೆಗಳು ನಿರ್ಮಾಣವಾಗದೆ ಬಾಡಿಗೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ ಈ ಕಾರಣವಾಗಿ ಬಡಜನತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.ಶಾಸಕರಾಗಿ 3ವರ್ಷ ಕಳೆದರೂ ಇಂತಹ ವಿಚಾರ ತಿಳಿಯದೇ ಇರುವುದು ದುರದೃಷ್ಟಕರ ಸಂಗತಿ ಪಟ್ಟಣ ನಿವಾಸಿಗಳ ಬದುಕು ಕೆರೆಯಿಂದ ಹೊರ ಬಂದ ಮೀನು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು...?

21/10/2021

ನಿಷ್ಟಾವಂತರಿಗೆ ಹಾಗೂ ಮೂಲ ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲಾ....!! ದುಡ್ಡಿಗೆ ಸ್ಥಾನಮಾನ ಅಧ್ಯಕ್ಷರು ಹಾಗೂ ನಾಮನಿರ್ದೇಶಕರುಗಳನ್ನು ಮಾರಿಕೊಳ್ಳುತ್ತಿರುವ ತಾಲ್ಲೂಕು ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು. ಇದೇ ರೀತಿ ಮುಂದುವರಿದರೆ ಬಿಜೆಪಿ ಕಥೆಯೇನು ಕಾದು ನೋಡಬೇಕಾಗಿದೆ ...? ತಾಲ್ಲೂಕಿನಲ್ಲಿ ....!!

20/10/2021

ಮಾಗಡಿ ತಾಲ್ಲೂಕು ಮಾಡಬಾಳ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಭರ್ಗಾವತಿ ಕೆರೆ ವಿಚಾರವಾಗಿ ಅಕ್ಕಪಕ್ಕದ ಗ್ರಾಮಸ್ಥರಿಂದ ಮಾಧ್ಯಮಗೋಷ್ಠಿ ..!! ಭರ್ಗಾವತಿ ಕೆರೆಯಲ್ಲಿ ಮೀನು ಸಾಕಾಣಿಕೆ ನಂಬಿ 150-200ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ವಿಚಾರವಾಗಿ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘ ಹಾಗೂ ಶಿವಗಂಗಾ ಬೆಸ್ತರ ಸಹಕಾರ ಸಂಘದ ಅಧ್ಯಕ್ಷರು ಸದಸ್ಯರುಗಳು ಕೆರೆಯ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ.ಹಲವು ವರ್ಷಗಳಿಂದ ನೇತೇನಹಳ್ಳಿ ಗ್ರಾಮ ಪಂಚಾಯಿತಿಯ ಅಡಿಯಲ್ಲಿ ಕೆರೆ ಅಭಿವೃದ್ಧಿ ಸ್ವಚ್ಛತೆ ಕೆಲಸಗಳು ನಡೆಯುತ್ತಿದ್ದವು ಈ ದಿನಗಳಲ್ಲಿ ಮಾಡಬಾಳ್ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸದಸ್ಯರುಗಳ ದುರಾಡಳಿತದಿಂದ ದಿನಾಂಕ 21-10-2021ರ ಗುರುವಾರದಂದು ಕೆರೆಯ ಆಜುಬಾಜಿನ ಗ್ರಾಮಸ್ಥರಿಗೆ ತಿಳಿಸದೆ "ಮೀನು ಪಾಶುವಾರು ಹರಾಜು ಪ್ರಕಟಣೆ" ಹೊರಡಿಸಿದ್ದಾರೆ.ಈ ವಿಚಾರವಾಗಿ ಮಾಡಬಾಳ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂಚಿತವಾಗಿಯೇ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸದೆ ಇರುವುದು..ಮೇಲಧಿಕಾರಿಗಳ ಗಮನಕ್ಕೆ ತಿಳಿಸದೇ ಇರುವುದು ದುರದೃಷ್ಟಕರ ಸಂಗತಿ ಎಂದು ಶ್ರೀನಿವಾಸ್ ಕುಮಾರ್ ಪ್ರಕಾಶ್ ಶಾಂತರಾಜು ಶಿವಣ್ಣ ರಮೇಶ ದಿಲೀಪ್ ಹಾಗೂ ಗ್ರಾಮಸ್ಥರು ಕಿಡಿಕಾರಿದರು. ಗ್ರಾಮಸ್ಥರಿಗೆ ನ್ಯಾಯ ದೊರಕದೆ ಹೋದರೆ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು ...!?

20/10/2021

ಮಾಜಿ ಶಾಸಕರು H.C.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಕಿಸಾನ್ ಕಾಂಗ್ರೆಸ್ ಸಮಿತಿ ರಾಮನಗರ ಜಿಲ್ಲಾ ಉಪಾಧ್ಯಕ್ಷರು ನರಸಿಂಹರಾಜು ನೇತೃತ್ವದಲ್ಲಿ ಮಾಗಡಿ ತಾಲ್ಲೂಕು ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವರದೇನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ದಿನಾಂಕ-23-10-2021ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಪ್ರಕ್ರಿಯ ಹಾಸ್ಪಿಟಲ್ ಬೆಂಗಳೂರು ಹಾಗೂ ಬೆಳ್ಳಿ ರಕ್ತ ನಿಧಿ ರಾಮನಗರ ಮತ್ತು ಯುವ ಸ್ಪಂದನ ರಾಮನಗರ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿದ್ದು.ಆ ಭಾಗದ ಸುತ್ತಮುತ್ತಲ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವುದಾಗಿ ಜಿಲ್ಲಾ ಉಪಾಧ್ಯಕ್ಷರು ನರಸಿಂಹ ರಾಜು ತಿಳಿಸಿದರು

19/10/2021

ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಗುಡ್ಡೇಗೌಡರು ಮಾತನಾಡಿದ ಸುದ್ದಿ vajra9news ಚಾನಲ್ ನಲ್ಲಿ ತಪ್ಪದೇ ನೋಡಿ...!!

17/10/2021

ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದ ಬದುಕಿಗೆ ಇದೊಂದು ಉದಾಹರಣೆ:ತಾಯಿ ಶ್ವಾನ

14/10/2021

ಮಾಗಡಿ:ಹಾಲು ಉತ್ಪಾದಕರು ಮುಖ್ಯ ಹೊರತು ಬೇರ್ಯಾರೂ ಅಲ್ಲಾ ಶಾಸಕರು ಎ.ಮಂಜುನಾಥ್ ಗರಂ..!?

14/10/2021

ತಿಪ್ಪಸಂದ್ರ ಹೋಬಳಿ ಬಸವನಪಾಳ್ಯ ಮಹಿಳಾ ಹಾಲು ಉತ್ಪಾದಕ ಸಂಘದ ಕಾರ್ಯ ಕಾರ್ಯ ಮಂಡಳಿಯ ಬೇಜವಾಬ್ದಾರಿಯಿಂದ ರೈತರಿಗೆ ನೋವಾಗಿದೆ ಮುಂದಿನ ದಿನಗಳಲ್ಲಿ ಡೈರಿ ವಿಚಾರ ಈ ರೀತಿಯಾಗದಂತೆ ರೈತರಿಗೆ ಸ್ಪಂದಿಸಿ ರೈತರ ಪರ ನಿಲ್ಲುತ್ತೇನೆ ಎಂದು ಬಮೂಲ್ ಅಧ್ಯಕ್ಷರು ನರಸಿಂಹಮೂರ್ತಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು ..!!

12/10/2021

ಮೈಸೂರುನಲ್ಲಿ ನೋಡುವ ರಮಣೀಯ ದೃಶ್ಯಾವಳಿಗಳು...!!

11/10/2021

ಲಿಖಿಂ ಪುರನಲ್ಲಿ ರೈತರ ನರಮೇಧಕ್ಕೆ ಮುನ್ನುಡಿಯಂತಿರುವ ನಡೆದ ಘಟನೆ...ಡಿ.ಕೆ.ಶಿವಕುಮಾರ್ ರೈತರ ಹತ್ಯೆ ರೈತಾಪಿ ವರ್ಗದವರು ಗಷ್ಟೇ ಅಲ್ಲಾ... ನಾಗರಿಕರ ಎದೆಯಲ್ಲೂ ನಡುಕ ಹುಟ್ಟಿಸಿದೆ. ಈ ದೃಶ್ಯ ಮಾಧ್ಯಮಗಳಲ್ಲಿ ನೋಡಿದರೆ ಮೈ ಜುಮ್ಮೆನಿಸುತ್ತದೆ ಈ ಅನ್ಯಾಯವನ್ನು ಖಂಡಿಸಿ ರೇಸ್ಕೋರ್ಸ್ ಕಾಂಗ್ರೆಸ್ ಕಚೇರಿ ಗಾಂಧಿ ಪ್ರತಿಮೆಯ ಬಳಿ ಕೆಪಿಸಿಸಿ ವತಿಯಿಂದ ಮೌನ ಪ್ರತಿಭಟನೆ ..!?

10/10/2021

ಶಾಸಕರು ಎ.ಮಂಜುನಾಥ್ ಇಲ್ಲದ ವೇಳೆ ಪುರಸಭೆ ಶಾಸಕರ ಕಚೇರಿಗೆ ಹೋಗಿದ್ದಾರೆ ಮಾಜಿ ಶಾಸಕರು ಎಚ್.ಸಿ.ಬಾಲಕೃಷ್ಣ..!! ಮಾಜಿ ಶಾಸಕರು ಇದೇ ರೀತಿ ಮಾಡುತ್ತ ಹೋದರೆ ಮುಂದಿನ ದಿನಗಳಲ್ಲಿ ಮಾಜಿಯಾಗಿಯೇ ಉಳಿಯುತ್ತಾರೆ ತಾಲ್ಲೂಕಿನಲ್ಲಿ... ಎಂದು ಗುಡೇಮಾರನಹಳ್ಳಿ ನಾಗರಾಜು ಕಿಡಿಕಾರಿದರು

ಮಾಗಡಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಹೆಚ್ ಸಿ ಬಾಲಕೃಷ್ಣ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಿಂಕ್ ಕೆನ...
10/10/2021

ಮಾಗಡಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಹೆಚ್ ಸಿ ಬಾಲಕೃಷ್ಣ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಿಂಕ್ ಕೆನಾಲ್ ಯೋಜನೆ ಅನುಷ್ಠಾನ ವಿಚಾರವಾಗಿ ಮನವಿ ಮಾಡಿದ್ದಾರೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ
ಶ್ರೀ Dr. Ashwath Narayan ಅವರಿಗೆ ನನ್ನ ವಿನಮ್ರ ಮನವಿ....

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿ ಅವರು ಮಾಗಡಿ ತಾಲೂಕಿಗೆ ನೀರು ಹರಿಸುವ "ಲಿಂಕ್ ಕೆನಾಲ್" ಯೋಜನೆ ಬಗ್ಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ

ಮಾಧುಸ್ವಾಮಿ ಅವರ ಅಭಿಪ್ರಾಯದಿಂದ ಮಾಗಡಿ ತಾಲೂಕಿಗೆ ಸಿಗಬೇಕಾದ ಸಂಪೂರ್ಣ ನ್ಯಾಯ ದೊರೆಯುವುದು ಅನುಮಾನವಾಗಿದೆ. ಆದುದರಿಂದ ತಾವು
ಈ ಹಿಂದೆ ಮಂಜೂರಾಗಿದ್ದ
"ಶ್ರೀ ರಂಗ ಏತ ನೀರಾವರಿ" ಯೋಜನೆಗೆ ಮುಂದುವರಿದು
ನಿಮ್ಮ ಸರ್ಕಾರದ ವತಿಯಿಂದ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ.

ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ DK Shivakumar ಅವರ ಹಾಗೂ ಲೋಕಸಭಾ ಸದಸ್ಯರಾದ ಶ್ರೀ DK Suresh ಅವರ ಪ್ರಯತ್ನದಿಂದ ಮಂಜೂರು ಮಾಡಿಸಿದ್ದ "ಲಿಂಕ್ ಕೆನಾಲ್" ಯೋಜನೆಯನ್ನು ಇಂದಿನ ಬಿಜೆಪಿ ಸರ್ಕಾರ ವಜಾ ಮಾಡಿರುವುದರಿಂದ
ತಾವು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಿ, ಈ "ಲಿಂಕ್ ಕೆನಾಲ್" ಯೋಜನೆಗೆ ಪುನಃ ಮರು ಮುಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಅನುಮತಿ ಕೊಡಬೇಕೆಂದು ಈ ಮೂಲಕ ಕೋರುತ್ತೇನೆ.

ಮಾಗಡಿ ತಾಲೂಕಿನ ಜನತೆ
"ಲಿಂಕ್ ಕೆನಾಲ್" ಯೋಜನೆ ಅನುಷ್ಠಾನ ಆಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದರೆ.
ಮಾಗಡಿ ಕ್ಷೇತ್ರದ ಶಾಸಕರು ಪತ್ರಿಕಾಗೋಷ್ಟಿಯಲ್ಲಿ ಲಿಂಕ್ ಕೆನಾಲ್ ಯೋಜನೆಯು ನಲ್ಲಿ ಸೇರಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಆಗಿದ್ದ ಹಳೆಯ ೇ ಬೇರೆ , ತಾವು ಶಾಸಕರ ಹೇಳಿಕೆಗೆ ಬದ್ಥರಾಗದೆ ಹೊಸದಾಗಿ ಮಂಜೂರಾಗಿರುವ ಲಿಂಕ್ ಕೆನಾಲ್ ಯೋಜನೆಯನ್ನು ಶ್ರಮವಹಿಸಿ ಅನುಷ್ಠಾನ ಮಾಡಲು ಮಾಧ್ಯಮ ಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ

10/10/2021

ಕುದೂರು ಗಮ್ ದಯಾನಂದ್ ನಿರೂಪಣೆಯಲ್ಲಿ.. ಸೋಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ NH75 ಹೆದ್ದಾರಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ದೇವಿಯವರ ಅಲಂಕಾರ ಹಾಗೂ ನವರಾತ್ರಿ ಪೂಜೆ

07/10/2021

ಮಾಗಡಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಡೆ ಒತ್ತು ಕೊಡಿ...!! ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ಮುಖಂಡರು ಕಾರ್ಯಕರ್ತರು ಶಾಸಕ ಎ.ಮಂಜುನಾಥ್ ರವರ ತಾಳ್ಮೆ ಕೆಡಿಸುತ್ತಿದ್ದಾರೆ..ಪೂಜಾರಿ ಪಾಳ್ಯ K.ಕೃಷ್ಣಮೂರ್ತಿ

05/10/2021
03/10/2021

ಮಾಗಡಿ ಪಟ್ಟಣದ ಕಲ್ಯಾಗೇಟ್ ಸಿದ್ಧಾರೂಢ ಆಶ್ರಮದಲ್ಲಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಮಾಜಿ ಶಾಸಕರು ಎಚ್.ಸಿ.ಬಾಲಕೃಷ್ಣ ಆಚರಿಸಿದರು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರು ಡಿ.ಕೆ.ಸುರೇಶ್ ಆಗಮಿಸಿ ಈ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷ 70 ವರ್ಷಗಳ ಅಧಿಕಾರವಧಿಯಲ್ಲಿ ಅತಿ ದೊಡ್ಡ ಶಕ್ತಿಯಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಬೃಹತ್ ಶಕ್ತಿಯಾಗಿ ಶ್ರಮಿಸಿದೆ. ಅಧಿಕಾರವದಿಯಲ್ಲಿ ಕಾಂಗ್ರೆಸ್ ಪಕ್ಷದ ಜನಪರವಾಗಿ 70 ವರ್ಷಗಳ ಕಾಲ ದುಡಿಯುವ ಪ್ರಯತ್ನ ಮಾಡಿದೆ.ಆರೆಸ್ಸೆಸ್.ಬಿಜೆಪಿ ಭಾವನಾತ್ಮಕವಾಗಿ ಯುವಕರನ್ನು ಪ್ರಚೋದಿಸುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ.ಇಂದಿನ ಯುವಕರು ಬಿಜೆಪಿ ಮುಕ್ತವಾದ ಭಾರತ ನಿರ್ಮಿಸಲು ಮುಂದಾಗಬೇಕು ಎಂದು ತಿಳಿಸಿದರು

02/10/2021

ಮಾಗಡಿ:ಕರೆದಾಗ ತಾಲ್ಲೂಕಿನ ಚರ್ಚೆಗೆ ಬರೋಕೆ ಖಾಲಿ ಕೂತು ವ್ಯಕ್ತಿ ನಾನಲ್ಲಾ..! ತಾಲ್ಲೂಕಿನ ಮತದಾರರು ಗುರುತಿಸಿದ್ದಾರೆ ಅವರ ಋಣ ತೀರಿಸಲು ಅವರಿಗೆ ಉತ್ತರ ಕೊಡಬೇಕು ಮತ್ತಾರಿಗೋ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲಾ... ಶಾಸಕರು ಎ.ಮಂಜುನಾಥ್

01/10/2021

ಇಂದು ಬೆಳಿಗ್ಗೆ 8-30ರ ಸಮಯದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಮಾಗಡಿ ತಾಲ್ಲೂಕಿನ ಶಿವನಸಂದ್ರ ದಂಡೇನಹಳ್ಳಿ ತಾಳೆಕೆರೆ ನಾರಸಂದ್ರ ಮರೂರು ಭಾಗದ ರೈತರಿಗೆ ಮಾಹಿತಿ ನೀಡದೆ ಒಳಸಂಚು ರೂಪಿಸಿದ ಸಚಿವರು ಮುರುಗೇಶ್ ನಿರಾಣಿ ಹಾಗೂ ಶಾಸಕರು ಎ.ಮಂಜುನಾಥ್ ಸ್ಥಳ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಜಾಣಗೆರೆ ರವೀಶ್ ಆರೋಪಿಸಿದರು

29/09/2021

ಮಾಗಡಿ ತಾಲ್ಲೂಕಿನ ನಿರುದ್ಯೋಗಿ ಯುವಕ ಯುವತಿಯರಿಗೆ... ಬಾಲಣ್ಣ ಮಂಜಣ್ಣ ಕೈಜೋಡಿಸಿದರೆ ಗಾರ್ಮೆಂಟ್ಸ್ ...!!

28/09/2021

ಮಾಗಡಿ ಪಟ್ಟಣದ ಪುರಸಭೆ ಕೊಠಡಿಯಲ್ಲಿ ಎಚ್.ಸಿ.ಬಾಲಕೃಷ್ಣ ಮಾತನಾಡಿ ಶಾಸಕರು ಎ.ಮಂಜುನಾಥ್ ಮಾತೆತ್ತಿದರೆ ನಾನು ಮತ್ತು ತಂದೆಯವರಾದ ಚನ್ನಪ್ಪನವರ ಅವಧಿಯಲ್ಲಿ ತಾಲ್ಲೂಕಿನ ಅಭಿವೃದ್ಧಿ ಕನಸಾಗಿಯೇ ಉಳಿದಿದೆ ಎಂದು ದೂರಿದ್ದಾರೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು.ವಿದ್ಯುತ್.ರಸ್ತೆ.ಚರಂಡಿ ಯಾವುದು ಆಗಿರುವುದಿಲ್ಲ ಎಂದು ಸುಳ್ಳು ಹೇಳುವ ಮೂಲಕ ಶಾಸಕ ಎ.ಮಂಜುನಾಥ್ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಅಭಿವೃದ್ಧಿಯ ವಿಚಾರವಾಗಿ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಮಾಧ್ಯಮಗೋಷ್ಠಿಯಲ್ಲಿ ಎಚ್.ಸಿ.ಬಾಲಕೃಷ್ಣ ರವರು ತಿಳಿಸಿದರು..!!

Address


Alerts

Be the first to know and let us send you an email when Vajra9news posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share