
02/10/2022
ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ
ಹಳೇ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.26ರಿಂದ ಅ.4ರ ವರೆಗೆ ಒಂಬತ್ತು ದಿನಗಳ ಕಾಲ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ.26ರಿಂದ ಅ.3ರ ವರೆಗೆ ಸಾಂಸ್ಕೃತಿಕ ಕಾಠ್ಯಕ್ರಮಗಳು ಪ್ರತಿ ದಿನ ಸಂಜೆ 7ಕ್ಕೆ ಇರಲಿದೆ. ಅ.4ರಂದು ರಥೋತ್ಸವ ಸಂಜೆ 7ಕ್ಕೆ ನಡೆಯಲಿದೆ. ಅ.5ರಂದು ವಿಜಯದಶಮಿಯ ಅಂಗವಾಗಿ ಬೆಳಗ್ಗೆ 9ಕ್ಕೆ ಸರಸ್ವತಿ ಪೂಜೆಯೊಂದಿಗೆ ವಿದ್ಯಾರಂಭ ಮತ್ತು ತುಲಾಭಾರ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.