Kannada News Room

  • Home
  • Kannada News Room

Kannada News Room Kannada News room for daily trending news.

ಟೀಂ ಇಂಡಿಯಾ ಸ್ಟಾರ್‌ ಆಟಗಾರ ರಿಷಬ್‌ ಪಂತ್‌ಗೆ ತೀವ್ರ ಅಪಘಾತಟೀಂ ಇಂಡಿಯಾ ಸ್ಟಾರ್​ ಆಟಗಾರ ರಿಷಭ್​ ಪಂತ್​ ಇಂದು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗ...
30/12/2022

ಟೀಂ ಇಂಡಿಯಾ ಸ್ಟಾರ್‌ ಆಟಗಾರ ರಿಷಬ್‌ ಪಂತ್‌ಗೆ ತೀವ್ರ ಅಪಘಾತ

ಟೀಂ ಇಂಡಿಯಾ ಸ್ಟಾರ್​ ಆಟಗಾರ ರಿಷಭ್​ ಪಂತ್​ ಇಂದು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ದೆಹಲಿಯಿಂದ ತಮ್ಮ ನಿವಾಸ ರೂರ್ಕಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದ ನರ್ಸನ್​ ಎಂಬ ಪಟ್ಟಣದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹೊತ್ತಿ ಉರಿದಿದೆ .ಹೊತ್ತಿ ಉರಿಯುತ್ತಿದ್ದ ಕಾರಿನ ಕಿಟಕಿ ಗಾಜನ್ನು ಒಡೆದು ರಿಷಭ್​ ಪಂತ್​ ಕಾರಿನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

#ಕನ್ನಡ_ನ್ಯೂಸ್‌_ರೂಂ

ಬೇಷರಮ್‌ ರಂಗ್‌ ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಯ ಸದಸ್ಯರುಕಳೆದ ಕೆಲವು ದಿನಗಳಿಂದ ಬಾಲಿವುಡ್‌ ಚಿತ್ರಗಳಿಗೆ ಬಿಡುಗಡೆಗೂ...
15/12/2022

ಬೇಷರಮ್‌ ರಂಗ್‌ ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಯ ಸದಸ್ಯರು

ಕಳೆದ ಕೆಲವು ದಿನಗಳಿಂದ ಬಾಲಿವುಡ್‌ ಚಿತ್ರಗಳಿಗೆ ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಜೋರಾಗಿ ನಡೆಯುತ್ತಿದ್ದು ಇದೀಗ ಈ ಬಿಸಿ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಚಿತ್ರಕ್ಕೂ ತಟ್ಟಿದೆ.
ಇತ್ತೀಚಿಗೆ ಬಿಡುಗಡೆಯಾಗಿದ್ದ ಚಿತ್ರದ ಬೇಷರಮ್‌ ರಂಗ್‌ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್‌ ಮೈ ಚಳಿ ಬಿಟ್ಟು ಕುಣಿದಿದ್ದರು ಇದೀಗ ಈ ಹಾಡಿಗೆ ಹಿಂದೂ ಪಟ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದದ್ದು ಚಿತ್ರವನ್ನ Boycott ಮಾಡುವಂತೆ ಕರೆ ನೀಡಿವೆ.
ಹಾಡಿನ ಕೊನೆಯಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಯ ಸದಸ್ಯರು ಇದು ಹಿಂದೂ ಸಂಸ್ಕೃತಿಗೆ ವಿರುದ್ದವಾದದ್ದು ಎಂದು ಕಿಡಿಕಾರಿದ್ದರು ಮತ್ತು ಚಿತ್ರವನ್ನ ಬಹಿಷ್ಕರಿಸುವಂತೆ ಕರೆ ನೀಡಿದ್ದವು.

#ಕನ್ನಡ_ನ್ಯೂಸ್‌_ರೂಂ

ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಕೃತ್ಯಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವ...
15/12/2022

ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಕೃತ್ಯ

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಕೃತ್ಯ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ರಾಮನಗರ ಆಹಾರ ಇಲಾಖೆ ಉಪ ಆಯುಕ್ತರ ಕ್ರಮ ಪುರಸ್ಕರಿಸಿದ ಏಕ ಸದಸ್ಯಪೀಠದ ಆದೇಶ ರದ್ದು ಕೋರಿ ವಾಜರಹಳ್ಳಿಯ ಜಯಮ್ಮ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರ್ಲೆ ನೇತೃತ್ವದ ವಿಭಾಗೀಯ ಪೀಠ, ಏಕ ಸದಸ್ಯಪೀಠದ ಆದೇಶವನ್ನು ಎತ್ತಿಹಿಡಿದಿದೆ.

#ಕನ್ನಡ_ನ್ಯೂಸ್‌_ರೂಂ

ಸಾಕು ಹಂದಿಗಳ ಹಾವಳಿಗೆ ರೈತರು ಕಂಗಾಲುಕಲಬುರಗಿ: ಚಿತ್ತೂರು ತಾಲೂಕಿನ ವಾಡಿ ಪಟ್ಟಣದಲ್ಲಿ ಸಾಕು ಹಂದಿಗಳ ಹಾವಳಿಗೆ ರೈತರು ಕಂಗಾಲಾಗಿದ್ದಾರೆ. ಹಂದಿ...
14/12/2022

ಸಾಕು ಹಂದಿಗಳ ಹಾವಳಿಗೆ ರೈತರು ಕಂಗಾಲು

ಕಲಬುರಗಿ: ಚಿತ್ತೂರು ತಾಲೂಕಿನ ವಾಡಿ ಪಟ್ಟಣದಲ್ಲಿ ಸಾಕು ಹಂದಿಗಳ ಹಾವಳಿಗೆ ರೈತರು ಕಂಗಾಲಾಗಿದ್ದಾರೆ. ಹಂದಿಗಳು ವಾಡಿ ಪಟ್ಟಣದ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿನ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಜೋಳ, ತೊಗರಿ ಸೇರಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಂದಿಗಳನ್ನು ಮೇಯಲು ಬಿಟ್ಟಿರುವ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ರೈತರು ಆಗ್ರಹಿಸಿದ್ದಾರೆ.

#ಕನ್ನಡ_ನ್ಯೂಸ್‌_ರೂಂ

ಕಾಂಗ್ರೆಸ್‌ ಟಿಕೆಟ್‌ ಯಾತ್ರೆದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್​ ನಾಯಕರು, ಟಿಕೆಟ್​ ಅಂತಿಮ ಮಾಡುವ ಬಗ್ಗೆ ಹೈಕಮಾಂಡ್​ ಜೊತೆಗೆ ಚ...
13/12/2022

ಕಾಂಗ್ರೆಸ್‌ ಟಿಕೆಟ್‌ ಯಾತ್ರೆ

ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್​ ನಾಯಕರು, ಟಿಕೆಟ್​ ಅಂತಿಮ ಮಾಡುವ ಬಗ್ಗೆ ಹೈಕಮಾಂಡ್​ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಈಗ ನಾಯಕರ ನಿಜಬಣ್ಣ ಹೊರಬೀಳುವ ಸಾಧ್ಯತೆಯಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋ ಕುತೂಹಲ ಮೂಡಿಸಿದೆ. ಒಂದು ವೇಳೆ ಟಿಕೆಟ್​ ಹಂಚಿಕೆಯಲ್ಲಿ ಸಮಬಲ ಸಾಧಿಸಿದರೆ, ಕ್ಷೇತ್ರದಲ್ಲಿ ಸೋಲು ಗೆಲುವಿನಲ್ಲಿ ಯಾವ ನಾಯಕರು ಯಾವ ಪಾತ್ರ ವಹಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇದರ ನಡುವೆ ಎಐಸಿಸಿ ಅಧ್ಯಕ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಗ್ರೂಪ್​ ಕೂಡ ಆ್ಯಕ್ಟೀವ್​ ಆಗಿದೆ ಎನ್ನುವ ಸಂದೇಶ ಕಾಂಗ್ರೆಸ್​ ವಲಯದಲ್ಲೇ ಹರಿದಾಡ್ತಿದೆ. ಇದು ಕಾಂಗ್ರೆಸ್​​ ಪಾಲಿಗೆ ಗೆಲ್ಲುವ ಕುದುರೆಗೆ ಕಂದಕ ತೋಡಿದಂತೆ ಎನ್ನುವುದು ರಾಜಕೀಯ ಪರಿಣಿತರ ಮಾತು.

#ಕನ್ನಡ_ನ್ಯೂಸ್‌_ರೂಂ

ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು, ಇದೀಗ ...
09/12/2022

ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು, ಇದೀಗ ಈ ಬಗ್ಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಈ ಮೊದಲು ಬ್ಯಾನ್ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ, ಇದೀಗ ನನ್ನನು ಯಾರು ಬ್ಯಾನ್ ಮಾಡಿಲ್ಲ ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಈ ನಡುವೆ ತಮ್ಮ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡುತ್ತಿತ್ತು, ಇದೀಗ ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ನಾನು ಕಾಂತಾರಾ ಸಿನಿಮಾವನ್ನು ನೋಡಿದ್ದೇನೆ. ನಂತರ ರಿಷಬ್ ಅವರಿಗೆ ಮೆಸೇಜ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದೇನೆ ಎಂದು ಹೇಳಿದ್ದಾರೆ

#ಕನ್ನಡ_ನ್ಯೂಸ್‌_ರೂಂ

ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ನರ್ತಿಸಿದ ಆರೋಪದಡಿ ನಾಲ್ವರು ವಿದ್ಯಾರ್ಥಿಗಳು ಸಸ್ಪೆಂಡ್ಮಂಗಳೂರು: ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ...
09/12/2022

ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ನರ್ತಿಸಿದ ಆರೋಪದಡಿ ನಾಲ್ವರು ವಿದ್ಯಾರ್ಥಿಗಳು ಸಸ್ಪೆಂಡ್

ಮಂಗಳೂರು: ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ನರ್ತಿಸಿದ್ದಾರೆಂಬ ಆರೋಪದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.ಮಂಗಳೂರಿನ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿತ್ತು.
ಕಾಲೇಜಿನಲ್ಲಿ ಬುಧವಾರ ಸಂಜೆ ಕಾಲೇಜಿನ ವಿದ್ಯಾರ್ಥಿ ಘಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಾದ ಬಳಿಕ ಬುರ್ಖಾ ಧರಿಸಿ ಹಿಂದಿ ಐಟಂ ಸಾಂಗ್ ಗೆ ಮುಸ್ಲಿಂ ವಿದ್ಯಾರ್ಥಿನಿಯರ ಡ್ಯಾನ್ಸ್‌ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಡ್ಯಾನ್ಸ್ ಗೆ ಅವರದೇ ಸಮುದಾಯದವರಿಂದ ತೀವ್ರ ಆಕ್ರೋಶ ಎದುರಾಗಿತ್ತು ಎನ್ನಲಾಗಿದೆ.
ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿ, ಕಾಲೇಜಿನ ಅಧಿಕೃತ ಕಾರ್ಯಕ್ರಮದ ಬಳಿಕ ನೃತ್ಯ ಮಾಡಿದ್ದಾರೆ. ಕಾಲೇಜು ಆವರಣದಲ್ಲಿ ಯಾವುದೇ ರೀತಿ ಆಕ್ಷೇಪಾರ್ಹ ಹಾಗೂ ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

#ಕನ್ನಡ_ನ್ಯೂಸ್‌_ರೂಂ

‘ಕರ್ನಾಟಕ ಯುವ ನೀತಿ’ಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಬೆಂಗಳೂರು: ‘ಕರ್ನಾಟಕ ಯುವ ನೀತಿ’ಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ...
09/12/2022

‘ಕರ್ನಾಟಕ ಯುವ ನೀತಿ’ಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ

ಬೆಂಗಳೂರು: ‘ಕರ್ನಾಟಕ ಯುವ ನೀತಿ’ಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಹೆಚ್ಚುತ್ತಿರುವ ನಿರುದ್ಯೋಗವನ್ನು ಕಡಿಮೆಗೊಳಿಸಲು, ಯುವಕರಲ್ಲಿ ಅಪೌಷ್ಟಿಕತೆ, ಮಾನಸಿಕ ಆರೋಗ್ಯ ಮತ್ತು ವ್ಯಸನದ ಸಮಸ್ಯೆಗಳನ್ನು ನಿಭಾಯಿಸಲು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಈ ಯುವ ನೀತಿಯು ಒತ್ತು ನೀಡುತ್ತದೆ. ಪ್ರಥಮ ಬಾರಿಗೆ ಇಂತಹ ಸಮಗ್ರ ನೀತಿಯನ್ನು ರೂಪಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಕರ್ನಾಟಕ ಯುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರವು ಅಕ್ಟೋಬರ್ 2021 ರಲ್ಲಿ 13 ಸದಸ್ಯರಿರುವ ತಜ್ಞರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯು ಶಿಕ್ಷಣ, ತರಬೇತಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯ ಮತ್ತು ಯೋಗಕ್ಷೇಮ, ಕ್ರೀಡೆ ಮತ್ತು ಫಿಟ್‌ನೆಸ್, ಕಲೆ ಮತ್ತು ಸಂಸ್ಕೃತಿ ಹಾಗೂ ನಾಯಕತ್ವದ ಅಭಿವೃದ್ಧಿ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡು 15 ರಿಂದ 29 ರ ವಯೋಮಾನದ ಯುವಕರಿಗೆ ಒತ್ತು ನೀಡಿತ್ತು.

#ಕನ್ನಡ_ನ್ಯೂಸ್‌_ರೂಂ

ಕನ್ನಡಿಗರ ಮೇಲಿನ ದಾಳಿ ಸಹಿಸಲಾರೆವು. ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚುಮಹಾರಾಷ್ಟ್ರ-ಬೇಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ...
09/12/2022

ಕನ್ನಡಿಗರ ಮೇಲಿನ ದಾಳಿ ಸಹಿಸಲಾರೆವು. ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು

ಮಹಾರಾಷ್ಟ್ರ-ಬೇಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ನಡೆಸ ದಾಳಿ ಖಂಡಿಸಿ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದೆ.
ಪ್ರತಿಭಟನೆಯ ವೇಳೆ ಮಹಾರಾಷ್ಟ್ರ ಸರ್ಕಾರದ ಸಚಿವರು, ಶಿವಸೇನೆಯ ಹಾಗೂ MES ಮುಖಂಡರ ಭೂತದಹನ ಮಾಡಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.

ಗಡಿ ವಿಚಾರವಾಗಿ ನಿರಂತರವಾಗಿ ಕನ್ನಡಿಗರ ಮೇಲೆ ದಾಳಿಯಾಗುತ್ತಿದೆ ಆದ್ದರಿಂದ ಮರಾಠ ಪುಂಡರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದ್ದರು.

# #ಕನ್ನಡ_ನ್ಯೂಸ್‌_ರೂಂ

ಅಂಬರೀಶ್‌ ನೆನಪಲ್ಲಿ ಸುಮಲತಾ ;‌ ಟ್ವೀಟ್‌ ಮೂಲಕ ಭಾವನೆ ಹೊರಹಾಕಿದ ಸಂಸದೆರೆಬೆಲ್‌ ಸ್ಟಾರ್‌ ಅಂಬರೀಶ್‌ ನಿಧನರಾಗಿ ಇಂದಿಗೆ (ನವೆಂಬರ್‌ 24, 2018...
24/11/2022

ಅಂಬರೀಶ್‌ ನೆನಪಲ್ಲಿ ಸುಮಲತಾ ;‌ ಟ್ವೀಟ್‌ ಮೂಲಕ ಭಾವನೆ ಹೊರಹಾಕಿದ ಸಂಸದೆ

ರೆಬೆಲ್‌ ಸ್ಟಾರ್‌ ಅಂಬರೀಶ್‌ ನಿಧನರಾಗಿ ಇಂದಿಗೆ (ನವೆಂಬರ್‌ 24, 2018) ನಾಲ್ಕು ವರ್ಷಗಳಾಗಿವೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಪತಿಯನ್ನು ನೆನೆದು ಮಂಡ್ಯ ಸಂಸದೆ ಸುಮಲತಾ ಭಾವನಾತ್ಮಕ ಟ್ವೀಟ್‌ ಮಾಡಿದ್ದಾರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ ಅಂಬಿ ಅಮರ ಎಂದು ಬರೆದುಕೊಂಡಿದ್ದಾರೆ.
#ಕನ್ನಡ_ನ್ಯೂಸ್‌_ರೂ

ಕುಕ್ಕರ್‌ ಸ್ಪೋಟ ಪ್ರಕರಣ; ತಾನು ಹಿಂದೂ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಶಾರಿಖ್‌ಮೈಸೂರಿನಲ್ಲಿ ಕೆಲದಿನ ವಾಸಿಸಿದ್ದ ಉಗ್ರ ಶಾರಿಖ್‌ ದೊಡ್ಡ ಬ್ಲಾ...
22/11/2022

ಕುಕ್ಕರ್‌ ಸ್ಪೋಟ ಪ್ರಕರಣ; ತಾನು ಹಿಂದೂ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಶಾರಿಖ್‌

ಮೈಸೂರಿನಲ್ಲಿ ಕೆಲದಿನ ವಾಸಿಸಿದ್ದ ಉಗ್ರ ಶಾರಿಖ್‌ ದೊಡ್ಡ ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದ ಎಂಬ ಸಂಗತಿ ಪೊಲೀಸ್‌ ವಿಚಾರಣೆ ವೇಳೆ ತಿಳಿದು ಬಂದಿದೆ. 25ಕ್ಕೂ ಹೆಚ್ಚು ದಿನಗಳ ಕಾಲ ಮೊಬೈಲ್ ರಿಪೇರಿ ಟ್ರೈನಿಂಗ್ ಪಡೆದಿದ್ದ ಎಂಬ ಅಂಶ ಹೊರಬಂದಿದೆ.
ಮೊದಲಿಗೆ ಮೈಸೂರಿಗೆ ಬಂದ ಶಾರಿಖ್‌ ಲೋಕನಾಯಕನಗರದಲ್ಲಿ ಪ್ರೇಮ್ ರಾಜ್ ಅನ್ನೋ ನಕಲಿ ಆಧಾರ್ ಕಾರ್ಡ್ ನೀಡಿ ಮೋಹನ್ ಕುಮಾರ್ ಎಂಬುವರಿಗೆ ಸೇರಿದ ರೂಮ್ ಬಾಡಿಗೆ ಪಡೆದು ಜೀವನ ನಡೆಸಿದ್ದ. ಕೆಲದಿನಗಳ ಬಳಿಕ ಮೈಸೂರಿನ ಕೆಆರ್ ಮೊಹಲ್ಲಾದಲ್ಲಿರೋ SMM ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ. ಒಟ್ಟು 45 ದಿನಗಳ ಕಾಲ ನಡೆಯೋ ಟ್ರೈನಿಂಗ್ ಗೆ ಆಗ್ಗಾಗ್ಗೆ ಮಾತ್ರ ಆಗಮಿಸಿ ಕಡಿಮೆ ಅವಧಿಯಲ್ಲಿ ರಿಪೇರಿ ಮಾಡೋದನ್ನ ಕಲಿತಿದ್ದ ಎಂದು ತಿಳಿದು ಬಂದಿದೆ.
ಎಲ್ಲರ ಜೊತೆ ಸೌಮ್ಯವಾಗಿ ವರ್ತಿಸುತ್ತಿದ್ದ. ಒಟ್ಟು 45 ದಿನಗಳ ಕ್ಲಾಸ್ ಗೆ ಪದೇ ಪದೇ ಚಕ್ಕರ್ ಹಾಕುತ್ತಿದ್ದನಂತೆ. ಒಟ್ಟು 25 ದಿನಗಳ ಕಾಲ ಕ್ಲಾಸ್ ಗೆ ಹಾಜರಾಗಿದ್ದ. ಹಾಗೆಯೇ ತನಗೆ ಬರುವ ಮೊಬೈಲ್ ಕರೆಗಳನ್ನ ಕನ್ನಡದಲ್ಲೇ ಉತ್ತರಿಸುತ್ತಿದ್ದ ಎಂದು ವಿಚಾರಣೆ ವೇಳೆ ಅಂಗಡಿ ಮಾಲೀಕ ಪ್ರಸಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

#ಕನ್ನಡ_ನ್ಯೂಸ್‌_ರೂ

ವರಕವಿ ದ.ರಾ.ಬೇಂದ್ರೆ ಸೊಸೆ ನಿಧನಧಾರವಾಡ: ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸೊಸೆ ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದ ನಿಧನರಾದ ...
22/11/2022

ವರಕವಿ ದ.ರಾ.ಬೇಂದ್ರೆ ಸೊಸೆ ನಿಧನ

ಧಾರವಾಡ: ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸೊಸೆ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ನಿಧನರಾದ ಪದ್ಮಾ ಪಾಂಡುರಂಗ ಬೇಂದ್ರೆ (90)ಯವರು ಧಾರವಾಡ ಸಾಧನಕೇರಿಯ ದ.ರಾ ಬೇಂದ್ರೆ ಮನೆಯಲ್ಲಿ ಮೃತಪಟ್ಟಿದ್ದಾರೆ.
ಪದ್ಮಾ ಬೇಂದ್ರೆ ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಧಾರವಾಡ ಹೊಸ ಯಲ್ಲಾಪೂರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.

ಮಂಗಳೂರಿನ ಸ್ಪೋಟಕ್ಕೆ ಉಗ್ರ ಲಿಂಕ್‌ ಇದೆಯೆಂಬುದು ಮೊದಲೇ ತಿಳಿದಿತ್ತಾ?ಮಂಗಳೂರಿನ ನಾಗೂರಿನ ಬಳಿ ಶನಿವಾರ ಸಂಜೆ 5 ಗಂಟೆ 15 ನಿಮಿಷದ ವೇಳೆಗೆ ಆಟೋವ...
22/11/2022

ಮಂಗಳೂರಿನ ಸ್ಪೋಟಕ್ಕೆ ಉಗ್ರ ಲಿಂಕ್‌ ಇದೆಯೆಂಬುದು ಮೊದಲೇ ತಿಳಿದಿತ್ತಾ?

ಮಂಗಳೂರಿನ ನಾಗೂರಿನ ಬಳಿ ಶನಿವಾರ ಸಂಜೆ 5 ಗಂಟೆ 15 ನಿಮಿಷದ ವೇಳೆಗೆ ಆಟೋವೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. CCTV ದೃಶ್ಯದಲ್ಲಿ ಆಟೋವೊಂದು ಸಂಚರಿಸುತ್ತಿದ್ದಾಗ, ದಟ್ಟ ಹೊಗೆ ತುಂಬಿಕೊಂಡು, ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಸುಟ್ಟ ಗಾಯಗಳಿಂದ ಹೊರಕ್ಕೆ ಬಂದಿದ್ದರು. ಮೊದಲಿಗೆ ಆಟೋದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿತ್ತು. ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ಮಂಗಳೂರು ಪೊಲೀಸ್​ ಕಮಿಷನರ್​ ಎನ್. ಶಶಿಕುಮಾರ್, ಆಟೋ ಚಾಲಕನ ಮೊದಲ ಹೇಳಿಕೆಯ ಪ್ರಕಾರ ಪ್ರಯಾಣಿಕನ ಬ್ಯಾಗ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಟೋ ಚಾಲಕ ಮತ್ತು ಪ್ರಯಾಣಿಕ ಇ‌ಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸೋದು ಬೇಡ ಎಂದು, ಇದೊಂದು ಸಣ್ಣ ವಿಚಾರ ಎನ್ನುವ ರೀತಿಯಲ್ಲಿ ಹೇಳಿಕೆ ಕೊಟ್ಟರು.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ಪ್ರವಾಸದಲ್ಲಿ ಇದ್ರು. ಮಂಗಳೂರಿನ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಇತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಇದ್ದಾಗಲೇ ಈ ಸ್ಫೋಟ ಸಂಭವಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಇದ್ದಾಗಲೂ ಈ ರೀತಿಯ ಸ್ಫೋಟ ಸಂಭವಿಸಿದೆ ಅನ್ನೋ ಕಳಂಕ ಬರುತ್ತದೆ ಅನ್ನೋ ಕಾರಣಕ್ಕೆ ಕಮಿಷನರ್​ ಎನ್​ ಶಶಿಕುಮಾರ್​ ಸುಳ್ಳು ಹೇಳಿದ್ದಾ..? ಅನ್ನೋ ಅನುಮಾನ ಮೂಡುತ್ತದೆ. ಈಗ ಭದ್ರತಾ ವೈಫಲ್ಯ ಆಗಿದೆ ಅನ್ನೋದನ್ನು ಪೊಲೀಸ್​ ಇಲಾಖೆ ಒಪ್ಪಿಕೊಳ್ಳಲೇಬೇಕು. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಅನ್ನೋದನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕಿದೆ. ಯಾಕಂದ್ರೆ ಉಗ್ರರ ನಂಟಿದೆ ಅನ್ನೋದನ್ನು ಇದೀಗ ಸ್ವತಃ ಪೊಲೀಸ್​ ಇಲಾಖೆಯೇ ಬಹಿರಂಗ ಮಾಡಿದೆ.

#ಕನ್ನಡ_ನ್ಯೂಸ್‌_ರೂಂ

ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯಸಾಮಾನ್ಯವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕ...
16/11/2022

ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

ಸಾಮಾನ್ಯವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿದ್ದೇವೆ, ಓದಿದ್ದೇವೆ. ಬಾಲಿವುಡ್ ಸ್ಟಾರ್ ನಟನೊಬ್ಬ ತಮ್ಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಪತಿ, ನಟ ರಣ್ವೀರ್ ಸಿಂಗ್ ತಮಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿಕೊಳ್ಳುವ ಮೂಲಕ ಬಾಲಿವುಡ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಸದ್ಯ ರಣ್ವೀರ್ ಸಿಂಗ್ ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರೋತ್ಸವದಲ್ಲಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಮಾತನಾಡಿದ ರಣ್ವೀರ್, ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ದುಷ್ಟರು, ದುರುಳರು ತಮಗೂ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅವರು ಯಾರು ಎನ್ನುವುದನ್ನು ಅವರು ಹೇಳಲಿಲ್ಲ.

#ಕನ್ನಡ_ನ್ಯೂಸ್‌_ರೂಂ

ರೇರಾ ರಣ ಬೇಟೆ.. ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ ಶೇಕ್ಬೆಂಗಳೂರಲ್ಲಿ ಸೈಟ್ ಕೊಡಿಸ್ತೀನಿ ಅಂತ ಟೋಪಿ ಹಾಕೋರ ಹಾವಳಿ ಜೋರಾಗಿದೆ. ಕನಸಿನ ಮನೆ ಕೊ...
16/11/2022

ರೇರಾ ರಣ ಬೇಟೆ.. ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ ಶೇಕ್

ಬೆಂಗಳೂರಲ್ಲಿ ಸೈಟ್ ಕೊಡಿಸ್ತೀನಿ ಅಂತ ಟೋಪಿ ಹಾಕೋರ ಹಾವಳಿ ಜೋರಾಗಿದೆ. ಕನಸಿನ ಮನೆ ಕೊಳ್ಳೋಕೆ ಮುಂದೆ ಬರುವ ಮಂದಿಗೆ ದೊಡ್ಡ ದೊಡ್ಡ ಬಿಲ್ಡರ್ ಕಂಪೆನಿಗಳು ವಂಚಿಸಿ ಹಣ ಪೀಕಿ ಯಮಾರಿಸುತ್ತಿದ್ದ ದೂರಿನ ಮೇರೆಗೆ ರೇರಾ (RERA : Real Estate Regulatory Authority of Karnataka / ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) ರಿಯಲ್ ಎಸ್ಟೇಟ್ ವಂಚಕರಿಗೆ ಬಿಸಿ ಮುಟ್ಟಿಸಿದೆ‌.

ಹೌದು, ದುಡ್ಡು ಪಡೆದು ಪ್ರಾಪರ್ಟಿ ನೀಡದೆ ವಂಚಿಸುತ್ತಿದ್ದ ಬಿಲ್ಡರ್ ಗಳಿಗೆ ರೇರಾ ಬಿಸಿ ಮುಟ್ಟಿಸಿದೆ‌. ಜನರಿಗೆ ವಂಚಿಸುತ್ತಿದ್ದ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ರೇರಾ, ನಿಗಧಿತ ಸಮಯಕ್ಕೆ ನಿವೇಶನ ಕಟ್ಟಿಕೊಡದ & ರೇರಾ ನಿಯಮ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ‌.
ಆರಂಭಿಕ ಹಂತವಾಗಿ ನಗರದ 10 ಪ್ರತಿಷ್ಠಿತ ಕಂಪೆನಿಗಳ ಪಟ್ಟಿ ರೇರಾ ತಯಾರಿಸಿದ್ದು ರಿಕವರಿ ಮಾಡಿಕೊಳ್ಳಲು ಯೋಚಿಸಿದೆ‌.

#ಕನ್ನಡ_ನ್ಯೂಸ್‌_ರೂಂ

ಕನ್ನಡ ಮಾಸದ ಆಚರಣೆಯಲ್ಲಿರುವ ಕನ್ನಡಿಗರಿಗಾಗಿ ಇದೇ ನವೆಂಬರ್ 26 ರಂದು ಅಪ್ಪಟ ಕನ್ನಡಿಗರ ಚಿತ್ರ "ಇನಾಮ್ದಾರ್" ಟೀಸರ್ ಬಿಡುಗಡೆಯಾಗಲಿದೆ. ಸ್ಥಳ :...
16/11/2022

ಕನ್ನಡ ಮಾಸದ ಆಚರಣೆಯಲ್ಲಿರುವ ಕನ್ನಡಿಗರಿಗಾಗಿ ಇದೇ ನವೆಂಬರ್ 26 ರಂದು ಅಪ್ಪಟ ಕನ್ನಡಿಗರ ಚಿತ್ರ "ಇನಾಮ್ದಾರ್" ಟೀಸರ್ ಬಿಡುಗಡೆಯಾಗಲಿದೆ.
ಸ್ಥಳ : ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ
ಬೆಳಿಗ್ಗೆ 9 ಗಂಟೆಗೆ...

#ಕನ್ನಡ_ನ್ಯೂಸ್‌_ರೂಂ

ಟೆಸ್ಟ್‌ನಿಂದ ನಿವೃತ್ತಿಯಾಗುವ ಸುಳಿವು ನೀಡಿದ ಡೇವಿಡ್‌ ವಾರ್ನರ್‌ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಡೇವಿಡ್‌ ವಾರ್ನರ್‌ ಟೆಸ್ಟ್‌...
16/11/2022

ಟೆಸ್ಟ್‌ನಿಂದ ನಿವೃತ್ತಿಯಾಗುವ ಸುಳಿವು ನೀಡಿದ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಡೇವಿಡ್‌ ವಾರ್ನರ್‌ ಟೆಸ್ಟ್‌ ಮಾದರಿಗೆ ಮುಂದಿನ ವರ್ಷ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದಾರೆ.
ಸೀಮಿತ ಓವರ್‌ಗಳ ಮಾದರಿ ಮೇಲೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ನಾನು ಕನಿಷ್ಠ 12 ತಿಂಗಳು ಟೆಸ್ಟ್‌ ಮಾದರಿಯಲ್ಲಿ ಮುಂದುವರಿಯಬಹುದು ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ̤
96 ಟೆಸ್ಟ್‌ ಪಂದ್ಯ ಆಡಿರುವ ವಾರ್ನರ್‌ 46.52ರ ಸರಾಸರಿಯಲ್ಲಿ 7,817 ರನ್‌ ಸಿಡಿದ್ದಾರೆ. ಇದರಲ್ಲಿ 24 ಶತಕ, 34 ಅರ್ಧಶತಕಗಳು ಒಳಗೊಂಡಿವೆ.

#ಕನ್ನಡ_ನ್ಯೂಸ್‌_ರೂಂ

ಶಿವಮೊಗ್ಗ; ಬಿಜೆಪಿ ವಿರುದ್ದ ಸಮರ ಸಾರಿದ ಕಾಂಗ್ರೆಸ್‌ ನಾಯಕರುಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಂಗಳವಾರ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ಬಿ...
15/11/2022

ಶಿವಮೊಗ್ಗ; ಬಿಜೆಪಿ ವಿರುದ್ದ ಸಮರ ಸಾರಿದ ಕಾಂಗ್ರೆಸ್‌ ನಾಯಕರು

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಂಗಳವಾರ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ಬಿಜೆಪಿ ವಿರುದ್ದ ಕಾಂಗ್ರೆಸ್‌ ನಾಯಕರು ಸಮರ ಸಾರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕರಾದ ಮಧು ಬಂಗಾರಪ್ಪ ನಿಮಗೆ ಧಮ್ ಇದ್ದರೆ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಇಂದು ನೀವು ಮಾತನಾಡುವ ವೇದಿಕೆಯಲ್ಲೇ ಉತ್ತರ ಕೊಡಿ ನೋಡೋಣ ಎಂದು ಸವಾಲೆಸೆದಿದ್ದಾರೆ.
ನಮಗೆ ಜನರ ಆಶೀರ್ವಾದ ಸಿಕ್ಕಾಗ ಧಮ್ಮೂ ಇತ್ತು ತಾಕತ್ತೂ ಇತ್ತು, ಕಾಗೋಡು ತಿಮ್ಮಪ್ಪನವರ ನಾಯಕತ್ವದಲ್ಲಿ ಜನರಿಗೆ ಹಕ್ಕುಪತ್ರ ನೀಡಿದ್ದೆವು. ಆದರೆ ನೀವು ಅದನ್ನು ಹಾಳು ಮಾಡಿದ್ದೀರಿ. ಎಂಟು ತಿಂಗಳ ಹಿಂದೆ ಸಿಎಂ ಶಿವಮೊಗ್ಗಕ್ಕೆ ಬಂದು ಅರಣ್ಯ ಜಮೀನು ಸಾಗುವಳಿ ಮಾಡುವ ರೈತರಿಗೆ ಭೂಗಳ್ಳರು ಎಂಬ ಹಣೆಪಟ್ಟಿ ಕಟ್ಟಿದ್ದೀರಿ. 2012ರಲ್ಲಿ ನೀವೆ ಜಾರಿಗೆ ತಂದ ಕಾನೂನಿನಿಂದ ಜನರು ಹೈಕೋರ್ಟ್ ಹಾಗೂ ಜಿಲ್ಲಾ ಕೋರ್ಟ್‌ಗೆ ಅಲೆಯುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಬೇಲೂರು ಗೋಪಾಲಕೃಷ್ಣ, ಸ್ಥಳೀಯ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

#ಕನ್ನಡ_ನ್ಯೂಸ್‌_ರೂಂ

ಐಪಿಎಲ್‌ಗೆ ವಿದಾಯ ಘೋಷಿಸಿದ ಕೈರಾನ್‌ ಪೊಲಾರ್ಡ್‌ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್ರೌಂಡರ್‌ ಬಹು ಕಾಲ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದ ಕ...
15/11/2022

ಐಪಿಎಲ್‌ಗೆ ವಿದಾಯ ಘೋಷಿಸಿದ ಕೈರಾನ್‌ ಪೊಲಾರ್ಡ್‌

ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್ರೌಂಡರ್‌ ಬಹು ಕಾಲ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದ ಕೈರಾನ್‌ ಪೊಲಾರ್ಡ್‌ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಪೊಲಾರ್ಡ್‌ ಇನ್ನಷ್ಟು ವರ್ಷ ಐಪಿಎಲ್‌ ಆಡಬೇಕು ಎಂದುಕೊಂಡಿದೆ ಆದರೆ, ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಮುಂಬೈ ತಂಡದ ಪರ ಆಡಿರುವ ನನಗೆ ಬೇರೆ ತಂಡದ ಭಾಗವಾಗಲು ಇಷ್ಟವಿರಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.
ಪೊಲಾರ್ಡ್‌ ಟ್ವೀಟ್‌ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಇಂಡಿಯನ್ಸ್‌ ತಂಡವು ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಿ ಆದೇಶ ಹೊರಡಿಸಿದೆ.
ಇನ್ನು ರಿಟೇನ್‌ ಆಟಗಾರರ ಪಟ್ಟಿ ಸಲ್ಲಿಸಲು ನವೆಂಬರ್‌ 15ರಂದು ಕೊನೆ ದಿನವಾಗಿದ್ದು ಸಂಜೆ 6ಕ್ಕೆ ಯಾವ ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡಿದೆ ಎಂದು ತಿಳಿದು ಬರಲಿದೆ.
#ಕನ್ನಡ_ನ್ಯೂಸ್‌_ರೂಂ

ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ : ಬಿಜೆಪಿ2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ...
15/11/2022

ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ : ಬಿಜೆಪಿ

2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎನ್ನುತ್ತಿರುವ ಸಿದ್ದರಾಮಯ್ಯ, ತಾನು ಗೆಲ್ಲುವ ಕ್ಷೇತ್ರವಿಲ್ಲದೇ ಅಲೆದಾಡುತ್ತಿದ್ದಾರೆ ಎಂದು ಟೀಕಿಸಿದೆ.

#ಕನ್ನಡ_ನ್ಯೂಸ್‌_ರೂಂ

ಶೂಟಿಂಗ್‌ ಮುಗಿಸಿದ ಸ್ವಾತಿ ಮುತ್ತಿನ ಮಳೆ ಹನಿಯೇಸ್ಯಾಂಡಲ್‌ವುಡ್‌ ಕ್ಷೀನ್‌ ಮೋಹಕ ತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳ...
15/11/2022

ಶೂಟಿಂಗ್‌ ಮುಗಿಸಿದ ಸ್ವಾತಿ ಮುತ್ತಿನ ಮಳೆ ಹನಿಯೇ

ಸ್ಯಾಂಡಲ್‌ವುಡ್‌ ಕ್ಷೀನ್‌ ಮೋಹಕ ತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರೀಕರಣವನ್ನ ಮುಗಿಸಿದೆ.
ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಜ್‌.ಬಿ. ಶೆಟ್ಟಿ ಹಾಗು ಸಿರಿ ರವಿಕುಮಾರ್‌ ನಟಿಸಿದ್ದಾರೆ.
ಅಕ್ಟೋಬರ್‌ ಮೊದಲ ವಾರದಲ್ಲಿ ಸೆಟ್ಟೇರಿದ ಈ ಚಿತ್ರದ ಬಹುತೇಕ ಚಿತ್ರೀಕರಣವು ಊಟಿಯಲ್ಲಿ ನಡೆದಿದೆ. ಅಕ್ಟೋಬರ್‌ 7ರಂದು ನಿರ್ದೇಶಕ ರಾಜ್‌.ಬಿ.ಶೆಟ್ಟಿ ಸ್ಕ್ರಿಪ್ಟ್‌ ಕೆಲಸದಲ್ಲಿ ತೊಡಗಿರುವ ಪೋಟೋ ಪೋಸ್ಟ್‌ ಮಾಡಿದ ಚಿತ್ರತಂಡ ತಿಂಗಳೊಳಗೆ ಚಿತ್ರೀಕರಣ ಮುಗಿಸಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಮೊದಲಿಗೆ ಈ ಚಿತ್ರದ ಮೂಲಕ ರಮ್ಯಾ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂದು ಹೇಳಲಾಗಿತ್ತು ಆದರೆ, ಕಾರಣಾಂತರಗಳಿಂದ ರಮ್ಯಾ ಹಿಂದೆ ಸರಿದಿದ್ದರು. ಗರುಡ ಗಮನ ರಿಷಭ ವಾಹನ ಚಿತ್ರದಲ್ಲಿ ಕೆಲಸ ಮಾಡಿದ ತಾಂತ್ರಿಕ ವಿಭಾಗವೇ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಕಾರ್ಯನಿರ್ವಹಿಸಿದೆ.

#ಕನ್ನಡ_ನ್ಯೂಸ್‌_ರೂಂ

ಅಪ್ಪು ನೆನಪಲ್ಲಿ ಮಕ್ಕಳ ಚಿತ್ರೋತ್ಸವಮಕ್ಕಳ ದಿನಾಚರಣೆ ಪ್ರಯುಕ್ತ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ ಮಾಡ...
15/11/2022

ಅಪ್ಪು ನೆನಪಲ್ಲಿ ಮಕ್ಕಳ ಚಿತ್ರೋತ್ಸವ

ಮಕ್ಕಳ ದಿನಾಚರಣೆ ಪ್ರಯುಕ್ತ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ ಮಾಡಲಾಯಿತು. ಜನವರಿ 26ರಿಂದ ಮೂರು ದಿನ ನಡೆಯುವ ಮಕ್ಕಳ ಚಲನ ಚಿತ್ರೋತ್ಸವವನ್ನು ಇದೇ ಮೊದಲ ಬಾರಿಗೆ ಉಲ್ಲಾಸ್ ಸ್ಕೂಲ್ ಸಿನಿಮಾಸ್ ಆಯೋಜನೆ ಮಾಡಿದೆ. ಅದರ ಪೂರ್ವಭಾವಿಯಾಗಿ ಇಂದು ಚಂದನವನದ ಬಾಲನಟರನ್ನೆಲ್ಲ ಒಟ್ಟು ಗೂಡಿಸಿ ಮಕ್ಕಳ ಚಲನಚಿತ್ರೋತ್ಸವ ಲೋಗೋ ಲಾಂಚ್ ಮಾಡಿಸಲಾಯಿತು.

ಜನವರಿ 26ರಿಂದ ಮೂರು ದಿನಗಳ ಕಾಲ ‘ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದ್ದು, ಈ ಬಾರಿ ಪುನೀತ್ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಬಾಲ ನಟರಾಗಿ ಪ್ರಖ್ಯಾತಿ ಗಳಿಸಿದ್ದ ಕಲಾವಿದರನ್ನು ಒಂದೆಡೆ ಸೇರಿಸಿದ್ದು ವಿಶೇಷವಾಗಿತ್ತು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್, ಸುನಿಲ್ ರಾವ್, ವಿಜಯ ರಾಘವೇಂದ್ರ, ಮಾಸ್ಟರ್ ಆನಂದ್, ಅಭಿಷೇಕ್, ವಿನಾಯಕ ಜೋಶಿ, ಹೇಮಾ ಪಂಚಮುಖಿ, ಎಸ್.ಎಸ್. ಕೀರ್ತನ, ನಟರಾಜ್ ಗುಬ್ಬಿ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

#ಕನ್ನಡ_ನ್ಯೂಸ್‌_ರೂಂ

ಶೀಘ್ರದಲ್ಲೇ PSI ಪರೀಕ್ಷಾ ದಿನಾಂಕ...402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಸೇರಿದಂತೆ RSI (CAR/DAR), KSISF & KSRP ಹುದ್ದ...
15/11/2022

ಶೀಘ್ರದಲ್ಲೇ PSI ಪರೀಕ್ಷಾ ದಿನಾಂಕ...

402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಸೇರಿದಂತೆ RSI (CAR/DAR), KSISF & KSRP ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಇಲಾಖೆಯು ಪರೀಕ್ಷಾ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ನಿರೀಕ್ಷಿಸಿ....... ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.!!

#ಕನ್ನಡ_ನ್ಯೂಸ್‌_ರೂಂ

ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವು ಬಿಡುಗಡೆಗೂ ಮುನ್ನ ಹಾಗೂ ನಂತರ ತನ್ನ ವಿಶೇಷತೆಗಳಿಂದಲ್ಲೇ ಹೆಚ್ಚು ಸದ್ದು ಮಾ...
15/11/2022

ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವು ಬಿಡುಗಡೆಗೂ ಮುನ್ನ ಹಾಗೂ ನಂತರ ತನ್ನ ವಿಶೇಷತೆಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಯಶಸ್ಸು ಕಂಡಿದ್ದಾರೆ. ಚಿತ್ರ ಬಿಡುಗಡೆಯಾಗಿ 50ದಿನಗಳಾಗುತ್ತಾ ಬಂದರೂ ಸಹ ಚಿತ್ರದ ಬಗೆಗಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.
ಸೆಪ್ಟೆಂಬರ್‌ 30 ರಂದು ಚಿತ್ರ ಬಿಡುಗಡೆಯಾಗಿದ್ದು ಬಿಡುಗಡೆಯಾಗಿ 50 ದಿನಗಳಾಗುತ್ತ ಬಂದರೂ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್‌ ಗೌಡ ಚಿತ್ರಕ್ಕೆ ಎಲ್ಲೆಡೆ ವ್ಯಕ್ತವಾಗಿರುವ ರೆಸ್ಪಾನ್ಸ್‌ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಕಾಂತಾರ ಟಿಕೆಟ್‌ ಮಾರಾಟ ವಿಚಾರದಲ್ಲಿ KGF-1&2 ದಾಖಲೆಗಳನ್ನು ಸರಿಗಟ್ಟಿತ್ತು ಇನ್ನು ಕರ್ನಾಟಕ ಒಂದರಲ್ಲೇ ಒಂದು ಕೋಟಿಗೂ ಅಧಿಕ ಟಿಕೆಟ್‌ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಬಿಡುಗಡೆಯಾಗಿ 50 ದಿನವಾಗುತ್ತಾ ಬಂದರೂ ಕಾಂತಾರ ಚಿತ್ರವು ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಹಿಂದಿ ಭಾಷೆಯಲ್ಲಿ 75 ಕೋಟಿ ರೂಪಾಯಿ, ತೆಲುಗಿನಲ್ಲಿ 50 ಕೋಟಿ ರೂಪಾಯಿ, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ವಿಯಾಗಿದೆ.
ಇನ್ನು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದರಿಂದ ಚಿತ್ರತಂಡವು ಒಟಿಟಿ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ ಮತ್ತು ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿಲ್ಲ.
#ಕನ್ನಡ_ನ್ಯೂಸ್‌_ರೂಂ

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್
14/11/2022

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್


Former team india opener virender sehwag feels he doent like to see certain faces in next T20 world cup 2024: ಐಸಿಸಿ T20 ವಿಶ್ವಕಪ್‌ 2024ರ ವೇಳೆಯಲ್ಲಿ ಪ್ರಸ್ತುತ ಟೀಂ ಇಂಡಿಯಾದಲ್ಲಿರುವ ಕೆಲವು ಹಿರಿ...

ಭಾರತದ ಈ ಮೂವರು ಆಟಗಾರರು ಯುವ ಆಟಗಾರರಿಗೆ ಸ್ಥಾನ ಬಿಟ್ಟುಕೊಡುವ ಸಮಯ: ಮಾಂಟಿ ಪನೆಸರ್ #ಕನ್ನಡ_ನ್ಯೂಸ್‌_ರೂಂ
14/11/2022

ಭಾರತದ ಈ ಮೂವರು ಆಟಗಾರರು ಯುವ ಆಟಗಾರರಿಗೆ ಸ್ಥಾನ ಬಿಟ್ಟುಕೊಡುವ ಸಮಯ: ಮಾಂಟಿ ಪನೆಸರ್

#ಕನ್ನಡ_ನ್ಯೂಸ್‌_ರೂಂ

Monty Panesar said Rohit Sharma Dinesh Karthik and Ravichandran Ashwin make way for young players. Know more. ಟಿ20 ವಿಶ್ವಕಪ್‌ ಮುಕ್ತಾಯವಾಗಿದ್ದು ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡದ ವಿರುದ್ಧ ಗೆ...

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಅತ್ಯಾಧುನಿಕ ಟರ್ಮಿನಲ್- 2ನ್ನು ಉದ್ಘಾಟಿಸಿದ್ದಾರೆ. ರಾ...
11/11/2022

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಟರ್ಮಿನಲ್- 2ನ್ನು ಉದ್ಘಾಟಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸುಮಾರು 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇದಕ್ಕೆ ಬಳಸಲಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದರು. ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಕಾಶಿಗೆ ತೆರಳುತ್ತಿರುವ ಭಾರತ್ ಗೌರವ್ ಕಾಶಿ ದರ್ಶನ ಹೊಸ ರೈಲಿಗೆ ಕೂಡ ಹಸಿರು ಬಾವುಟ ತೋರಿಸಿದರು.

#ಕನ್ನಡ_ನ್ಯೂಸ್‌_ರೂಂ

Address


Website

Alerts

Be the first to know and let us send you an email when Kannada News Room posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share