B V News Kannada

  • Home
  • B V News Kannada

B V News Kannada Contact information, map and directions, contact form, opening hours, services, ratings, photos, videos and announcements from B V News Kannada, News & Media Website, belgaum, .

29/12/2021

BV NEWS superfast news||ಕಡಿಮೆ ಸಮಯ ಹೆಚ್ಚು ಸುದ್ದಿ|| Thursday 30 Dec 2021 ಬಿವಿನ್ಯೂಸ್all type of news

29/12/2021

ರಾಯಭಾಗ
ಜಿರೋ ಅಕೌಂಟ್ ತೆಗೆಯಲು ಸಾರ್ವಜನಿಕರಿಂದ ನೂಕು ನುಗ್ಗಲು

29/12/2021

ಬೆಂಡವಾಡ
ಸುಕುಮಾರ ಕಿರಣಗಿ ಹೃದಯಘಾತದಿಂದ ನಿಧನ

ಬೆಳಗಾವಿ: ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಶರಣ ಶ್ರೀ ಬಸವ ಜ್ಙಾನ ಗುರುಕುಲಸ ಅಧ್ಯಕ್ಷರು ದಿವಂಗತ ಲಿ...
10/12/2021

ಬೆಳಗಾವಿ: ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಶರಣ ಶ್ರೀ ಬಸವ ಜ್ಙಾನ ಗುರುಕುಲಸ ಅಧ್ಯಕ್ಷರು ದಿವಂಗತ ಲಿಂಗೈಕೈ ಡಾ. ಈಶ್ವರ ಮಂಟೂರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನೇರವೇರಿತು. ಈ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಗಳಾಗಿ ಹಾರೋಗೇರಿಯ ಶ್ರೀ ಸಿದ್ದೇಶ್ವರ ಕಲಾ ಪದವಿ ಮಾಹಾ ವಿಧ್ಯಾಲಯದ ಪ್ರಾಚಾರ್ಯಾರು ಹಾಗೂ ಸಾಹಿತಿ ಟಿ.ಎಸ್ ವಂಟಗೂಡಿ ಮಾತನಾಡಿ ಮಾತಾಡುವ ಹಾಗೂ ನಡೆದಾಡುವ ದೇವರೇಂದೇ ಖ್ಯಾತಿಯನ್ನು ಪಡೆದೆದಿರುವ ಶ್ರೇಷ್ಠ ಪ್ರವಚನಕಾರ ಉತ್ತಮ ಸಂಗೀತಗಾರರಾದ ಶರಣರು ಮೆಟ್ಟಿದ ಧರೆ ಪಾವನ ಎನ್ನುವಂತೆ ಶರಣತತ್ವವನ್ನು ಮೈಗೂಂಡಿಸಿಕೂಂಡು ತಮ್ಮ ವಚನಗಳೆಂಬ ಜ್ಯೋತಿಯಿಂದ ಮನಕೂಲವನ್ನು ಬೆಳಗಿದ ವಚನ ಜ್ಯೋತಿ ಡಾ: ಈಶ್ವರ ಮಂಟೂರು ಅವರ ಅಗಲಿಕೆಯಿಂದ ಕನ್ನಡ ನಾಡಿನಗೆ ತುಂಬಾಲಾರದಷ್ಟು....

https://bharathvaibhav.com/lingaykai-dr-ishwar-mantura-is-a-passionate-shraddhanjali-program/

ಬೆಳಗಾವಿ: ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಶರಣ ಶ್ರೀ ಬಸವ ಜ್ಙಾನ ಗುರುಕುಲಸ ಅಧ್ಯಕ್ಷರು...

ಬೆಳಗಾವಿ: ಮಹಾನಗರ ಪಾಲಿಕೆಗೆ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕ...
10/12/2021

ಬೆಳಗಾವಿ: ಮಹಾನಗರ ಪಾಲಿಕೆಗೆ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮುಖಾಮುಖಿಯಾದರು. ಶಾಸಕ ಸತೀಶ ಜಾರಕಿಹೊಳಿ ಮತ ಚಲಾಯಿಸಲು ಪಾಲಿಕೆ ಕಚೇರಿ ಆವರಣದಲ್ಲಿ ನಿಂತಿದ್ದರು.ಇದೇ ವೇಳೆ, ಕವಟಗಿಮಠ‌ ಕುಟುಂಬ ಸಮೇತರಾಗಿ ಆಗಮಿಸಿದರು. ಈ ವೇಳೆ ಪರಸ್ಪರರು ಉಭಯ ಕುಶಲೋಪರಿ ವಿಚಾರಿಸಿದರು. ಮತ ಚಲಾಯಿಸಿ ಬಂದ್ರಾ ಎಂದು ಕವಟಗಿಮಠ ವಿಚಾರಿಸಿದರು. ಆಗ, ನಮ್ಮ ಮೇಡಂ(ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್) ಬರಬೇಕು ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ಬಳಿಕ ಮತದಾನಕ್ಕಾಗಿ ಕವಟಗಿಮಠ ತೆರಳಿದರು.

https://bharathvaibhav.com/our-madame-must-come/

ಬೆಳಗಾವಿ: ಮಹಾನಗರ ಪಾಲಿಕೆಗೆ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಬಿಜೆಪಿ ಅಭ್ಯರ್.....

ಬೆಂಗಳೂರು :  ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 10 ಸಾವಿರ ಖಾಸಗಿ ಶಾಲೆಗಳು ಬಾಗಿಲು ಮು...
10/12/2021

ಬೆಂಗಳೂರು : ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 10 ಸಾವಿರ ಖಾಸಗಿ ಶಾಲೆಗಳು ಬಾಗಿಲು ಮುಚ್ಚುವ ಸಾಧ್ಯತೆಯಿದೆ. ರಾಜ್ಯದ ಹಲವು ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ಈ ಶಾಲೆಗಳನ್ನು ಮುಚ್ಚದಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳಿಗೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ. ಲೋಕೋಪಯೋಗಿ ಇಲಾಖೆ ಮಾರ್ಗಸೂಚಿಗಳನ್ನು ನೀಡಿದ್ದು, ಅಗ್ನಿಶಾಮಕ ದಳ ಮತ್ತು ಸುರಕ್ಷತಾ ಪ್ರಮಾಣಗಳನ್ನು 10 ದಿನಗಳ ಗಡುವಿನೊಳಗೆ ಪಡೆಯುವಂತೆ ಸೂಚಿಸಿದೆ. ಇಂದಿಗೂ ಇಲಾಖೆಯಿಂದ ಸರಿಯಾದ ಮಾರ್ಗಸೂಚಿ ಇಲ್ಲದಿರುವುದರಿಂದ ಭ್ರಷ್ಟ ಅಧಿಕಾರಿಗಳು ಹಣ ಮಾಡಿ ಪ್ರಮಾಣ ಪತ್ರ ನೀಡಲು ದಾರಿ ಮಾಡಿಕೊಟ್ಟಂತಾಗಿದೆ....

https://bharathvaibhav.com/anxiety-among-10-thousand-private-schools-in-the-state/

ಬೆಂಗಳೂರು : ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 10 ಸಾವಿರ ಖಾಸಗಿ ಶಾಲೆಗಳು .....

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನವನ್...
10/12/2021

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಪರಿಷತ್ ಚುನಾವಣೆ ಮತದಾನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷೇತರ ಅಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ಹಾನಿಯಿಲ್ಲ. ಅಲ್ಲದೇ ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪ್ರಚಂಡ ಬಹುಮತವನ್ನು ಪಡೆದುಕೊಂಡು ಗೆಲವು ಸಾಧಿಸುವುದು ನಿಶ್ಚಿತ ಎಂದರು. ಧಾರವಾಡ ಮತ್ತು ಗದಗ ಕ್ಷೇತ್ರಕ್ಕಿಂತ ಹಾವೇರಿಯಲ್ಲಿಯೇ ಪ್ರದೀಪ ಶೆಟ್ಟರ್ ಹೆಚ್ಚಿನ ಮತವನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಈಗಾಗಲೇ ಜಿಲ್ಲಾವಾರು ಮಾಹಿತಿಯನ್ನು ಶಾಸಕರಿಂದ ಕಲೆ ಹಾಕಲಾಗಿದ್ದು, ಎಲ್ಲೆಡೆಯೂ ಬಿಜೆಪಿಗೆ ಬೆಂಬಲ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವರದಿ : ಸುಧಿರ ಕುಲಕರ್ಣಿ

https://bharathvaibhav.com/no-loss-from-non-party-bjp-winners-have-a-certain-shutter-confidence/

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚ...

ಅಥಣಿ : ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿಯ ಅತಿಥಿ ಉಪನ್ಯಾಸಕರು ಅನಿರ...
10/12/2021

ಅಥಣಿ : ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿಯ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುವುದರ ಕುರಿತು ಪ್ರಾಚಾರ್ಯರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕರಾದ ಶ್ರೀ ಆರ ಎ ಬಡಿಗೇರ್ ಅವರು ನಾವುಗಳು ಕಳೆದ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಜೀವನ ಬಹಳ ಅತ್ಯಂತ ಕನಿಷ್ಠ ಮಟ್ಟದ ಜೀವನವಾಗಿದೆ. ಹಾಗೂ ನಮ್ಮನ್ನೇ ನಂಬಿಕೊಂಡು ನಮ್ಮ ಕುಟುಂಬವು ಕೂಡ ಅತಂತ್ರ ಸ್ಥಿತಿಯಲ್ಲಿದೆ ಹಾಗೂ ಅತಿಥಿ ಉಪನ್ಯಾಸಕರನ್ನು ಒಬ್ಬ ಕೂಲಿಯವನಿಗಿಂತಲೂ ಕನಿಷ್ಠಮಟ್ಟದಲ್ಲಿ ನಮ್ಮನ್ನು ಸರಕಾರ ನೋಡುತ್ತಿದೆ ಆದ್ದರಿಂದ ಸರ್ಕಾರದ ಧೋರಣೆಯನ್ನು ಖಂಡಿಸಿ ಈ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ ಆದಷ್ಟು ಬೇಗ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಿಕೊಡಬೇಕು ಎಂದು ಹೇಳಿದರು....

https://bharathvaibhav.com/strike-by-guest-lecturer-for-service-security/

ಅಥಣಿ : ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿಯ ಅತಿಥಿ ಉಪನ್ಯಾಸ.....

ಮುದಗಲ್ಲ : ಎಂಐ-17ವಿ5 ಸೇನಾ ಹೆಲಿಕಾಪ್ಟರ್‌ ಪತನವಾಗಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮೃತಪಟ್ಟಿದ್ದಾರೆ.ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿ...
10/12/2021

ಮುದಗಲ್ಲ : ಎಂಐ-17ವಿ5 ಸೇನಾ ಹೆಲಿಕಾಪ್ಟರ್‌ ಪತನವಾಗಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮೃತಪಟ್ಟಿದ್ದಾರೆ.ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾ ಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆಂದು ಅಧಿಕೃತವಾಗಿ ಸೇನೆ ಘೋಷಿಸಿದೆ ಹಿನ್ನೆಲೆಯಲ್ಲಿ. ಮುದಗಲ್ಲ ಸ್ನೇಹಿತರು ಬಳಗ ದಿಂದ ಸೇನಾ ಪಡೆ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.ಭಾರತೀಯ ಸೇನಾ ಪಡೆ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.....

https://bharathvaibhav.com/bipin-rawat-is-a-sincere-tribute-to-him/

ಮುದಗಲ್ಲ : ಎಂಐ-17ವಿ5 ಸೇನಾ ಹೆಲಿಕಾಪ್ಟರ್‌ ಪತನವಾಗಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮೃತಪಟ್ಟಿದ್ದಾರೆ.ರಕ್ಷಣಾ ಪಡೆಗಳ ಮುಖ್ಯ.....

ಬೆಂಗಳೂರು:  ಅಕ್ರಮವಾಗಿ ಜೀವಂತ ಮೊಸಳೆ ಮರಿಯನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ...
10/12/2021

ಬೆಂಗಳೂರು: ಅಕ್ರಮವಾಗಿ ಜೀವಂತ ಮೊಸಳೆ ಮರಿಯನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಬ್ದುಲ್ ಖಾಲಿದ್ ಹಾಗೂ ಗಂಗಾಧರ ಬಂಧಿತರು. ಆರೋಪಿಗಳು ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನೀರಿನ ಕ್ಯಾನ್ ಒಳಗೆ ಮೊಸಳೆ ಮರಿಯನ್ನ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಜೀವಂತ ಮೊಸಳೆ ಮರಿಯನ್ನ ವಶಕ್ಕೆ ಪಡೆಯಲಾಗಿದೆ.

https://bharathvaibhav.com/arrest-is-the-two-accused-of-selling-a-living-crocodile/

ಬೆಂಗಳೂರು: ಅಕ್ರಮವಾಗಿ ಜೀವಂತ ಮೊಸಳೆ ಮರಿಯನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಕಾರ್ಯಾಚರಣೆ ನಡ.....

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​​ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಇಂದು ದೆಹಲಿ...
10/12/2021

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​​ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಇಂದು ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಬಿಪಿನ್​ ರಾವತ್​ ಅವರ ಪಾರ್ಥಿವ ಶರೀರವನ್ನು ದೆಹಲಿಯ ಕಾಮರಾಜ್ ಮಾರ್ಗದ ನಂ.3ರಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ನಮನಕ್ಕೆ ಇಡಲಾಗುವುದು. ನಂತರ ಸೇನಾ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಲಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆಗೆ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಬಿಪಿನ್​ ರಾವತ್​​​ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ನಡೆಯಲಿದೆ.

https://bharathvaibhav.com/today-is-the-funeral-of-bipin-rawat-and-his-wife%e0%b2%87%e0%b2%82%e0%b2%a6%e0%b3%81-%e0%b2%ac%e0%b2%bf%e0%b2%aa%e0%b2%bf%e0%b2%a8%e0%b3%8du200b-%e0%b2%b0%e0%b2%be%e0%b2%b5%e0%b2%a4%e0%b3%8d/

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​​ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ...

ಹುಬ್ಬಳ್ಳಿ : ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ. ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು. ನಾ...
10/12/2021

ಹುಬ್ಬಳ್ಳಿ : ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ. ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು. ನಾನು ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಹುಬ್ಬಳ್ಳಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಇದೇ 13 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಶ್ನೋತ್ತರಗಳಿಗೆ ನಮ್ಮ ಹಕ್ಕಿದೆ ಸದನವನ್ನ ಸಂಪೂರ್ಣಗೊಳಿಸಬೇಕು. ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವ ಗುರಿ ಇದೆ....

https://bharathvaibhav.com/i-have-voted-in-my-sole-discretion/

ಹುಬ್ಬಳ್ಳಿ : ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ. ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬ.....

ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು...
10/12/2021

ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.21 ವರ್ಷದ ಮಹಿಳೆ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ದೇವರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ದಂಪತಿಗೆ ಮದುವೆಯಾಗಿದ್ದು, ಫಸ್ಟ್ ನೈಟ್ ನಿಂದಲೂ ದೇವರಾಜು ಲೈಂಗಿಕ ಕ್ರಿಯೆ ನಡೆಸುವಾಗ ವಿಚಿತ್ರ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ರೀತಿಯ ವಿಚಿತ್ರ ವರ್ತನೆಯಿಂದ ಕಿರಿಕಿರಿಯಾಗುತ್ತಿರುವುದಾಗಿ ಮಹಿಳೆ ಹೇಳಿದರೂ ಆತ ಬಿಡುತ್ತಿರಲಿಲ್ಲ. ಅಲ್ಲದೆ ಹುಷಾರಿಲ್ಲದ ಸಂದರ್ಭದಲ್ಲಿಯೂ ಲೈಂಗಿಕಕ್ರಿಯೆಗೆ ಬಲವಂತ ಮಾಡಿ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುತ್ತಿದ್ದ....

https://bharathvaibhav.com/wife-complaining-against-husband-for-cruel-behavior-if-sex/

ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊ.....

ಬೀದರ್: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸನ ಅಭ್ಯರ್ಥಿ ಭೀಮರಾವ ಪಾಟೀಲ ಗೆಲುವು ನಿಶ್ಚಿತ ಎಂದು...
10/12/2021

ಬೀದರ್: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸನ ಅಭ್ಯರ್ಥಿ ಭೀಮರಾವ ಪಾಟೀಲ ಗೆಲುವು ನಿಶ್ಚಿತ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಹುಮನಾಬಾದ್ ಪುರಸಭೆ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದ ಬಳಿಕ ಭಾರತ ವೈಭವಕ್ಕೆ ಈ ವಿಷಯ ತಿಳಿಸಿದರು. ಕಾಂಗ್ರೆಸ್ ಮಾತ್ರವಲ್ಲದೇ ಅನ್ಯ ಪಕ್ಷಗಳ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ, ಬೆಂಬಲ ಸೂಚಿಸಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ, ಗ್ರಾಮೀಣ ಘಟಕ ಅಧ್ಯಕ್ಷ ರಾಜಪ್ಪ ಇಟಗಿ, ಮಾಣಿಕರೆಡ್ಡಿ ಕರ್ಣಿ, ನರೇಂದ್ರಪ್ರಸಾದ್ ಮಿಶ್ರಾ, ಮಾಣಿಕರಾವ ವಾಡೇಕರ್, ವಾಹೇದ್ ಬೇಗ್ ಮೊದಲಾದವರು ಇದ್ದರು.

https://bharathvaibhav.com/bhimarava-patil-won-by-over-700-votes/

ಬೀದರ್: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸನ ಅಭ್ಯರ್ಥಿ ಭೀಮರಾವ ಪಾಟೀಲ ಗೆಲುವು .....

ಸೇಡಂ:ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕ ಅದ್ಯಕ್ಷರು ಮಾರುತಿ ಮುಗುಟಿ ಅವರ ನೇತೃತ್ವದಲ್ಲಿ ಸೇಡಂ ತಾಲೂಕಿನ ಪ್ರತಿ ಗ್ರಾಮದಲ್ಲೂ ತಮ್ಮ ಸಂಘಟನೆಯ ಒ...
10/12/2021

ಸೇಡಂ:ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕ ಅದ್ಯಕ್ಷರು ಮಾರುತಿ ಮುಗುಟಿ ಅವರ ನೇತೃತ್ವದಲ್ಲಿ ಸೇಡಂ ತಾಲೂಕಿನ ಪ್ರತಿ ಗ್ರಾಮದಲ್ಲೂ ತಮ್ಮ ಸಂಘಟನೆಯ ಒಂದು ಗ್ರಾಮ ಘಟಕ ಇರಬೇಕೆಂದು ಯೋಚನೆಯಿಂದ ಹಳ್ಳಿ ಹಳ್ಳಿಗೆ ತೆರಳಿ ಸಂಘಟನೆಯ ಮುಖ್ಯ ಉದ್ದೇಶ ಹಾಗೂ ಅದರ ಪ್ರತಿಫಲ ಹಾಗೆ ಅದರಿಂದ ನಮಗೆ ಏನು ಉಪಯೋಗ ಎಂಬುದನ್ನು ಅರ್ತಪೂರ್ವಕವಾಗಿ ತಿಳಿಸಿ ಅದರ ಬಗ್ಗೆ ಪ್ರತಿಯೊಬ್ಬ ದಲಿತನ ಮನದಲ್ಲಿ ತನ್ನದೇ ಆದ ಒಂದು ಸ್ವಾಭಿಮಾನ ಬರುವಂತೆ ದಲಿತ ಮಾದಿಗ ಸಮನ್ವಯ ಸಮಿತಿಯ ಅದ್ಯಕ್ಷರು ಸೇಡಂ ಘಟಕದ ಮಾರುತಿ ಮುಗುಟಿ ಅವರು ತಮ್ಮ ಅನುಭವದೊಂದಿಗೆ ಸಂಘಟನೆರಾರ ಜೊತೆ ಹಂಚಿಕೊಳ್ಳುತ್ತಿದ್ದಾರೆ....

https://bharathvaibhav.com/growing-dalit-lobbyist-coordination-committee/

ಸೇಡಂ:ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕ ಅದ್ಯಕ್ಷರು ಮಾರುತಿ ಮುಗುಟಿ ಅವರ ನೇತೃತ್ವದಲ್ಲಿ ಸೇಡಂ ತಾಲೂಕಿನ ಪ್ರತಿ ಗ್ರಾಮದಲ್ಲೂ ತಮ್ಮ...

ಚನ್ನಮ್ಮನಕಿತ್ತೂರ: ಭಾರತೀಯ ರಕ್ಷಣಾ ಸಿಬ್ಬಂದಿ ಪ್ರತಮ ಮುಖ್ಯಸ್ಥ (CDS) ಜನರಲ್ ಬಿಪಿನ್​ ರಾವತ್ ಮತ್ತು ಅವರ ಪತ್ನಿ ,ಅಧಿಕಾರಿಗಳು ಹಾಗೂ ಸೈನಿಕರ...
10/12/2021

ಚನ್ನಮ್ಮನಕಿತ್ತೂರ: ಭಾರತೀಯ ರಕ್ಷಣಾ ಸಿಬ್ಬಂದಿ ಪ್ರತಮ ಮುಖ್ಯಸ್ಥ (CDS) ಜನರಲ್ ಬಿಪಿನ್​ ರಾವತ್ ಮತ್ತು ಅವರ ಪತ್ನಿ ,ಅಧಿಕಾರಿಗಳು ಹಾಗೂ ಸೈನಿಕರು ಸೇರಿದಂತೆ ಒಟ್ಟು 12 ಜನ ಭಾರತೀಯ ಸೇನೆಯ MI-17 ಹೆಲಿಕಾಪ್ಟರ್​ ತಮಿಳುನಾಡಿನ ಕುನ್ನುರಿನಲ್ಲಿ ಪತನಗೊಂಡು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಮೃತರ ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಾವಿ ಸೈನಿಕರಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಭಾರತದ ಪ್ರತಮ ಸೇನಾ ಪಡೆ ಮುಖ್ಯಸ್ಥರಾದ (CDS) ಜನರಲ್ ಬೀಪಿನ್ ರಾವತ್ ಅವರ ಹೆಲಿಕಾಪ್ಟರ್ ....

https://bharathvaibhav.com/shraddhanjali-to-indian-chief-of-defense-staff/

ಚನ್ನಮ್ಮನಕಿತ್ತೂರ: ಭಾರತೀಯ ರಕ್ಷಣಾ ಸಿಬ್ಬಂದಿ ಪ್ರತಮ ಮುಖ್ಯಸ್ಥ (CDS) ಜನರಲ್ ಬಿಪಿನ್​ ರಾವತ್ ಮತ್ತು ಅವರ ಪತ್ನಿ ,ಅಧಿಕಾರಿಗಳು ಹಾಗೂ .....

ಬೆಳಗಾವಿ : ಜಿದ್ದಾಜಿದ್ದಿನ ಪ್ರತಿಷ್ಠೆಯ ಬೆಳಗಾವಿ ದ್ವಿಸದಸ್ಯ ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಮತದಾನ ಮಾಡಲು ಮಹಾನಗರ ಪಾಲಿಕೆಯ ಸದಸ್ಯರು ಶು...
10/12/2021

ಬೆಳಗಾವಿ : ಜಿದ್ದಾಜಿದ್ದಿನ ಪ್ರತಿಷ್ಠೆಯ ಬೆಳಗಾವಿ ದ್ವಿಸದಸ್ಯ ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಮತದಾನ ಮಾಡಲು ಮಹಾನಗರ ಪಾಲಿಕೆಯ ಸದಸ್ಯರು ಶುಕ್ರವಾರ ಬೆಳಗಿನ ಜಾವವೇ ಪಾಲಿಕೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಬೆಳಗಾವಿ ಮಹಾನಗರ ಪಾಲಿಕೆಗೆ ಮತದಾನ ಮಾಡಲು ಏಕಕಾಲಕ್ಕೆ ಎಲ್ಲ ಬಿಜೆಪಿ ಪಾಲಿಕೆ ಸದಸ್ಯ. ಆಗಮಿಸಿ ತಮ್ಮ ಮತವನ್ನು ಚಲಾಯಿಸಿದರು.ಒಟ್ಟಾಗಿ ಬಂದು ಮತದಾನ ಮಾಡಿದ 35 ಬಿಜೆಪಿ ಪಾಲಿಕೆ ಸದಸ್ಯರಿಗೆ ಸ್ಥಳೀಯ ಇಬ್ಬರು ಬಿಜೆಪಿ ಶಾಸಕರು ಹಾಗೂ ಸಂಸದೆ ಮಂಗಳಾ ಅಂಗಡಿ ಸಾಥ್ ನೀಡಿ ಮತದಾನ ಮಾಡಿದರು. ಶಾಸಕ ಅನಿಲ್ ಬೆನಕೆ ಮಾತನಾಡಿ, ಬೆಳಗಾವಿಯಲ್ಲಿ ಯಾವುದೇ ಚುನಾವಣೆಯಾದರೂ ರಾಜ್ಯದ ಗಮನ ಸೆಳೆಯುತ್ತದೆ....

https://bharathvaibhav.com/elections-for-belgaum-election-leaders/

ಬೆಳಗಾವಿ : ಜಿದ್ದಾಜಿದ್ದಿನ ಪ್ರತಿಷ್ಠೆಯ ಬೆಳಗಾವಿ ದ್ವಿಸದಸ್ಯ ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಮತದಾನ ಮಾಡಲು ಮಹಾನಗರ ಪಾಲಿಕೆಯ ...

ಬೆಂಗಳೂರು: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ....
10/12/2021

ಬೆಂಗಳೂರು: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.ತರಗತಿಗಳನ್ನು ಬಹಿಷ್ಕರಿಸಿರುವ 444 ಕ್ಕೂ ಹೆಚ್ಚು ಕಾಲೇಜಿನ 11 ಸಾವಿರ ಉಪನ್ಯಾಸಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಕನಿಷ್ಠ ವೇತನ, ಸೇವಾ ಆಧಾರದ ಮೇಲೆ ಖಾಯಮಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆಗೆ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.

https://bharathvaibhav.com/statewide-guest-lecturers-protest/

ಬೆಂಗಳೂರು: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸ.....

ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಅಭಿವೃದ್ಧಿ ‌ಕುರಿತು ಚರ್ಚೆಗೆ ಆದ್ಯತೆ‌ ನೀಡಲಾಗುವುದು ಎಂದು ಮುಖ...
10/12/2021

ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಅಭಿವೃದ್ಧಿ ‌ಕುರಿತು ಚರ್ಚೆಗೆ ಆದ್ಯತೆ‌ ನೀಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಶಿಗ್ಗಾವಿಗೆ ತೆರಳುವ ಮೊದಲು ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಮಹದಾಯಿ ವಿಚಾರ ಸದ್ಯಕ್ಕೆ ನ್ಯಾಯಾಲಯದಲ್ಲಿದ್ದು, ಯೋಜನೆ ತ್ವರಿತ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮಳೆಯಿಂದ ಆದ ಬೆಳೆ ಹಾನಿಗೆ ಪರಿಹಾರ ನೀಡುವ ಕೆಲಸ ಈಗಾಗಲೇ ಆರಂಭವಾಗಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷ ಅದ್ದೂರಿ ಆಚರಣೆಗೆ ನಿರ್ಬಂಧ ವಿಧಿಸುವ ಬಗ್ಗೆ ಸದ್ಯಕ್ಕೆ ತೀರ್ಮಾನ ಕೈಗೊಂಡಿಲ್ಲ ಎಂದರು.ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಲ್ಯಾಂಡ್ ಆಗುವುದು ವಿಳಂಬವಾಯಿತು ಎಂದರು.

https://bharathvaibhav.com/during-the-session-the-north-karnataka-sessions-discussed-the-issue/

ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಅಭಿವೃದ್ಧಿ ‌ಕುರಿತು ಚರ್ಚೆಗೆ ಆದ್ಯತೆ‌ ನೀಡಲಾಗುವ.....

ಒಂದೇ ಬೆಳೆಯನ್ನು ಬೆಳೆಯುವ ಮೂಲಕ ರೈತರು  ಅಧಿಕ ಲಾಭ ಪಡೆಯಲು ಸಾಧ್ಯವಿಲ್ಲ ಬದಲಾಗಿ ಜಮೀನಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣು ತರಕಾರಿ ಹೈನುಗಾರ...
10/12/2021

ಒಂದೇ ಬೆಳೆಯನ್ನು ಬೆಳೆಯುವ ಮೂಲಕ ರೈತರು ಅಧಿಕ ಲಾಭ ಪಡೆಯಲು ಸಾಧ್ಯವಿಲ್ಲ ಬದಲಾಗಿ ಜಮೀನಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣು ತರಕಾರಿ ಹೈನುಗಾರಿಕೆ ಮುಂತಾದ ಕೃತಿ ಚಟುವಿಕೆಯಿಂದಾಗಿ ಹೆಚ್ಚು ಆದಾಯ ಪಡೆಯಬಹುದು ಹಾಗೆಯೇ ವರ್ಷದ ಅಷ್ಟು ದಿನವೂ ಆದಾಯ ಬರುತ್ತದೆ ಕೃಷಿ ಜೊತೆಗೆ ಮೌಲ್ಯಾಧಾರಿತ ಕೃಷಿಯನ್ನು ಮಾಡುವುದರಿಂದ ಕೃಷಿಯಲ್ಲಿ ಸಹ ಪ್ರಗತಿಯನ್ನು ಕಾಣಬಹುದು. ಹಾಗೆಯೇ ಅಧಿಕ ಇಳುವರಿಯನ್ನು ಪಡೆಯಬಹುದು ಅಧಿಕ ಬಂಡವಾಳ ಹೂಡುವ ಮೂಲಕ ಹೆಚ್ಚು ಇಳುವರಿಯನ್ನು ಪಡೆಯಬಹುದು ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭವನ್ನು ಪಡೆಯುವುದೇ ಅಲ್ಲದೆ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು....

https://bharathvaibhav.com/60-lakhs-a-year-farmer-on-a-6-acre-farm/

ಒಂದೇ ಬೆಳೆಯನ್ನು ಬೆಳೆಯುವ ಮೂಲಕ ರೈತರು ಅಧಿಕ ಲಾಭ ಪಡೆಯಲು ಸಾಧ್ಯವಿಲ್ಲ ಬದಲಾಗಿ ಜಮೀನಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣು ತರಕಾರ...

ಬೆಳಗಾವಿ:  ನಗರದ  ಗಾಂಧಿನಗರದಲ್ಲಿರುವ 1008 ಭಗವಾನ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ ರಾತ್ರಿ ಕಳ್ಳತನ ನಡೆಸಿ ದಾನ ಪೆಟ್ಟಿಗೆ ಸೇರಿದ...
10/12/2021

ಬೆಳಗಾವಿ: ನಗರದ ಗಾಂಧಿನಗರದಲ್ಲಿರುವ 1008 ಭಗವಾನ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ ರಾತ್ರಿ ಕಳ್ಳತನ ನಡೆಸಿ ದಾನ ಪೆಟ್ಟಿಗೆ ಸೇರಿದಂತೆ ತೀರ್ಥಂಕರರ ಮೂರ್ತಿಗಳನ್ನು ಕಳುವು ಮಾಡಲಾದ ಎಲ್ಲ ಮೂರ್ತಿಗಳು ಪತ್ತೆಯಾಗಿವೆ.‌ ರವಿವಾರ ರಾತ್ರಿ ಕಳ್ಳತನ ನಡೆಸಿದ ಖದೀಮರು . ಬಸದಿಯಿಂದ 500 ಮೀಟರ ದಾಟಿದ ಮೇಲೆ ಅವರಿಗೆ ಒಳ್ಳೆ ಬುದ್ದಿ ಬಂದಂತೆ ಕಾಣುತ್ತದೆ. ತಾವು ಕದ್ದ ಎಲ್ಲ ಮೂರ್ತಿಗಳನ್ನು ಒಂದು ಸಿಮೆಂಟ್ ಚೀಲದಲ್ಲಿ ತುಂಬಿ ಓರ್ವರ ಮನೆಯ ಪಕ್ಕಕ್ಕೆ ಎಸೆದು ಹೋಗಿದ್ದಾರೆ. ಜೈನ ಮಂದಿರದಲ್ಲಿನ 24 ತೀರ್ಥಂಕರರ ಪ್ರತಿಮೆ, ಭ.‌ಶಾಂತಿನಾಥ , ಭ. ಪಾರ್ಶ್ವನಾಥ , ಭ....

https://bharathvaibhav.com/stolen-jain-statues-found-in-jain-basadi-in-belgaum/

ಬೆಳಗಾವಿ: ನಗರದ ಗಾಂಧಿನಗರದಲ್ಲಿರುವ 1008 ಭಗವಾನ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ ರಾತ್ರಿ ಕಳ್ಳತನ ನಡೆಸಿ ದಾನ ಪೆಟ್ಟಿಗೆ ....

ಬೆಳಗಾವಿ: ಬಹು ರೋಚಕತೆ ಮೂಡಿಸಿದ ಎಂ.ಎಲ್.ಸಿ ಚುನಾವಣೆ ಮತದಾನ ಪ್ರಕ್ರಿಯೆ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿಯೂ ಮಹಾನಗರ ಪಾಲಿಕೆ ...
10/12/2021

ಬೆಳಗಾವಿ: ಬಹು ರೋಚಕತೆ ಮೂಡಿಸಿದ ಎಂ.ಎಲ್.ಸಿ ಚುನಾವಣೆ ಮತದಾನ ಪ್ರಕ್ರಿಯೆ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿಯೂ ಮಹಾನಗರ ಪಾಲಿಕೆ ಸದಸ್ಯರು ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿದರು. ಬೆಳಗಾವಿ ವಿಧಾನ ಪರಿಷತ್ತ್ ಚುನಾವಣೆಯು ತ್ರಿಕೋನ ಸ್ಪರ್ಧೆ ಎರ್ಪಡುವುದರ ಮೂಲಕ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದ್ದು ಮಹಾನಗರ ಪಾಲಿಕೆ ಸದಸ್ಯರು ಬೆಳಿಗ್ಗೆ ಪಾಲಿಕೆಗೆ ಆಗಮಿಸಿ ಶಾಂತ ರೀತಿಯಿಂದ ಮತವನ್ನು ಚಲಾಯಿಹಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಿಯ ಶಾಸಕರಾದ ಅನೀಲ್ ಬೆನಕೆ ಮತ್ತು ಅಭಯ ಪಾಟೀಲ್ ಮತ ಚಲಾಯಿಸಿ ಸದಸ್ಯರಿಗೆ ಸಾಥ್ ನೀಡಿದ್ದಾರೆ. ಬೆಳಗಾವಿಯಿಂದ ಇಬ್ಬರು ಅಭ್ಯರ್ಥಿಗಳು ಎಂ.ಎಲ್.ಸಿ ಗದ್ದೆಗೆ ಹಿಡಿಯಲಿದ್ದು ಡಿ.14ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

https://bharathvaibhav.com/belgaum-thrills-mlc-election/

ಬೆಳಗಾವಿ: ಬಹು ರೋಚಕತೆ ಮೂಡಿಸಿದ ಎಂ.ಎಲ್.ಸಿ ಚುನಾವಣೆ ಮತದಾನ ಪ್ರಕ್ರಿಯೆ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿಯೂ ಮಹಾ....

ಬೆಂಗಳೂರು :ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14...
10/12/2021

ಬೆಂಗಳೂರು :ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14, 15 ರ ಹರಜಾತ್ರೆ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹರಿಹರದ ಪಂಚಮಸಾಲಿ ಗುರುಪೀಠದ ಆಶ್ರಯದಲ್ಲಿ ನಡೆಯಲಿರುವ ಹರಜಾತ್ರೆಯ ಲೋಗೋ, ಧ್ವನಿಸುರುಳಿ, ಟಿ ಶರ್ಟ್ ನ್ನು ಬಿಡುಗಡೆ ಮಾಡಿ ಮಾತನಾಡಿದರು. ಹರ ಎಂದರೆ ಶಕ್ತಿ : ಹರ ಎಂದರೆ ಆಧ್ಯಾತ್ಮಕವಾಗಿ ಶಕ್ತಿ, ಲೌಕಿಕವಾಗಿ ‘ಬಗೆಹರಿಸುವುದು’ ಎಂದರ್ಥ. ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತಹ ಶ್ರೇಷ್ಠ ದೇವತೆ ಹರ....

https://bharathvaibhav.com/cm-bommai-is-the-construction-of-the-tunga-arati-mandapam-in-the-south-like-the-ganga-aarti-in-kashi/

ಬೆಂಗಳೂರು :ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ .....

ಕುಂದಗೋಳ : ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕುಂದಗೋಳ ಇವರು ಸಂಯುಕ್ತ ಆಶ್ರಯದಲ್ಲಿ "ಏಡ್ಸ್ ದಿನಾಚ...
10/12/2021

ಕುಂದಗೋಳ : ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕುಂದಗೋಳ ಇವರು ಸಂಯುಕ್ತ ಆಶ್ರಯದಲ್ಲಿ "ಏಡ್ಸ್ ದಿನಾಚರಣೆ ಮಾಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಾಧೀಶರಾದ ಶ್ರೀ ಪಿ ಜಿ ಪರಮೇಶ್ವರ್ ಎಚ್ಐವಿ ಏಡ್ಸ್ ಕಲಾತಂಡದವರಿಗೆ ಚಾಲನೆ ನೀಡಿ ಮಾತನಾಡಿದರು. ಶ್ರೀಮತಿ ರೂಪಾ ತುರಮರಿ ಮತ್ತು ಶ್ರೀಮತಿ ಎಂ ಆರ್ ಕೋಟ್ಯಾನ್ ವರು ಹೆಚ್ಐವಿ ಏಡ್ಸ್ ಕೌನ್ಸಿಲರ್ ಎಚ್ಐವಿ ಏಡ್ಸ್ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಿ ಬಿ ಸೊರಟೂರ್ ಕಾರ್ಯದರ್ಶಿಗಳು ವಾಯ್ ಬಿ ಬಿಳೆಬಾಳ ಹಾಗೂ ಎಲ್ಲಾ ವಕೀಲರು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ವರದಿ : ಶಾನು ಯಲಿಗಾರ

https://bharathvaibhav.com/army-chief-bipin-rawat-calls-for-silence/

ಕುಂದಗೋಳ : ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕುಂದಗೋಳ ಇವರು ಸಂಯುಕ್ತ ಆಶ್ರಯದಲ್ಲಿ “ಏ.....

ಬೆಂಗಳೂರು : ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ 6072 ಮತಗಟ್ಟೆ ಸ್ಥ...
10/12/2021

ಬೆಂಗಳೂರು : ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ 6072 ಮತಗಟ್ಟೆ ಸ್ಥಾಪಿಸಿದ್ದು, ಸುಮಾರು 1 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಮಂಡ್ಯ ಕ್ಷೇತ್ರದಲ್ಲಿನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿಧಾನಪರಿಷತ್ ನ 25 ಸ್ಥಾನಗಳ ಪೈಕಿ ಕಾಂಗ್ರೆಸ್ ನಿಂದ 20, ಬಿಜೆಪಿಯಿಂದ 20 ಹಾಗೂ ಜೆಡಿಎಸ್ ನಿಂದ 6 ಸೇರಿದಂತೆ 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ....

https://bharathvaibhav.com/today-the-fate-of-90-candidates-will-be-decided/

ಬೆಂಗಳೂರು : ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ 6072 ಮತಗಟ್ಟೆ ಸ್....

ಗೋಕಾಕ: ಕೆಲವರು ನಮ್ಮ ಹೆಸರು ಹೇಳಿಕೊಂಡು ಎದುರಾಳಿಗೆ ಮತ ನೀಡಿ ಅಂತಾ ಹೇಳುತ್ತಿದ್ದಾರೆ. ಅದಕ್ಕೆ ಕಾರ್ಯಕರ್ತರು ಸ್ಪಂದಿಸಬೇಡಿ. ಕಾಂಗ್ರೆಸ್ ಅಭ್ಯ...
10/12/2021

ಗೋಕಾಕ: ಕೆಲವರು ನಮ್ಮ ಹೆಸರು ಹೇಳಿಕೊಂಡು ಎದುರಾಳಿಗೆ ಮತ ನೀಡಿ ಅಂತಾ ಹೇಳುತ್ತಿದ್ದಾರೆ. ಅದಕ್ಕೆ ಕಾರ್ಯಕರ್ತರು ಸ್ಪಂದಿಸಬೇಡಿ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪಣತೊಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಮ್ಮ ಹಿಲ್ ಗಾರ್ಡನ್ ಕಚೇರಿಯಲ್ಲಿ ಗೋಕಾಕ, ಅರಭಾವಿ ಮತಕ್ಷೇತ್ರದ ಏಜೆಂಟ್ ಹಾಗೂ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಕಾಂಗ್ರೆಸ್ ಅಭ್ಯರ್ಥಿ ಹೊರತು ಯಾರಿಗೂ ಮತ ನೀಡಿ ಎಂದು ಹೇಳಿಲ್ಲ. ಮುಖಂಡರು ಇದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಬೇಕು....

https://bharathvaibhav.com/dont-listen-to-false-propaganda-satheesha/

ಗೋಕಾಕ: ಕೆಲವರು ನಮ್ಮ ಹೆಸರು ಹೇಳಿಕೊಂಡು ಎದುರಾಳಿಗೆ ಮತ ನೀಡಿ ಅಂತಾ ಹೇಳುತ್ತಿದ್ದಾರೆ. ಅದಕ್ಕೆ ಕಾರ್ಯಕರ್ತರು ಸ್ಪಂದಿಸಬೇಡಿ. ಕಾಂಗ.....

ಬೆಂಗಳೂರು : ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿಲು ಮುಂದಾಗಿದ್ದು, ಸ್ವಸಹಾಯ ಗುಂಪುಗಳ ಪುನಶ್ಚೇತನಕ್ಕೆ ರಾಜ್ಯ ಸರ...
10/12/2021

ಬೆಂಗಳೂರು : ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿಲು ಮುಂದಾಗಿದ್ದು, ಸ್ವಸಹಾಯ ಗುಂಪುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರವು 20 ಲಕ್ಷ ರೂ.ವರೆಗೆ ಕಾಮಗಾರಿ ನೀಡುವ ಯೋಜನೆ ಜಾರಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಸೊರಗಿದ ಮಹಿಳಾ ಸ್ವಸಹಾಯ ಗುಂಪುಗಳ ಉತ್ತೇಜನಕ್ಕಾಗಿ ಪಂಚಾಯತ್ ರಾಜ್ ಅಧಿನಿಯಮ 1993, ಸೆಕ್ಷನ್ 60(ಬಿ) ಅನ್ವಯ ಈ ನೂತನ ಯೋಜನೆ ಜಾರಿಗೊಳಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಕಡತಕ್ಕೆ ಸಹಿ ಹಾಕಿದ್ದು, ರಾಜ್ಯಾದ್ಯಂತ ಯೋಜನೆ ಅಧಿಕೃತವಾಗಿ ಜಾರಿಯಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಯಾ ಗುಂಪುಗಳಿಗೆ ತಲಾ 20 ಲಕ್ಷ ರೂ.ವರೆಗೆ ಅನುದಾನ ನೀಡುವ ಯೋಜನೆ ಇದಾಗಿದ್ದು, ಗ್ರಾಮ ಪಂಚಾಯಿತಿ ರಸೀದಿ ನೀಡುವ ಯಾವುದೇ ಕಾಮಗಾರಿಗೆ ಸರಕು ಮತ್ತು ಸೇವೆಗಳನ್ನು ಪೂರೈಸುವ ಗುತ್ತಿಗೆ ಪಡೆಯಬಹುದಾಗಿದೆ. ರಾಜ್ಯದ 6000 ಮಹಿಳಾ ಸ್ವಸಹಾಯ ಗುಂಪುಗಳ 1 ಲಕ್ಷಕ್ಕೂ ಅಧಿಕ ಮಹಿಳಾ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎನ್ನಲಾಗಿದೆ.

https://bharathvaibhav.com/rural-women-are-being-sweetened-by-the-government/

ಬೆಂಗಳೂರು : ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿಲು ಮುಂದಾಗಿದ್ದು, ಸ್ವಸಹಾಯ ಗುಂಪುಗಳ ಪುನಶ್ಚೇತನಕ್....

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆಯಾಗಿದ...
10/12/2021

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರದೇಶದದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಆಕಾಶದಲ್ಲಿಯೇ ವಿಮಾನ ಮೂರು ಸುತ್ತು ಸುತ್ತಿದೆ.ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಸಿಗದ ಕಾರಣ ಅರ್ಧ ಗಂಟೆಯಿಂದ ವಿಮಾನ ಹಾರಾಟ ನಡೆಸಿದೆ. ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದು, ಆದರೆ ದಟ್ಟ ಮಂಜು ಸಮಸ್ಯೆಯ ಕಾರಣ ಆಕಾಶದಲ್ಲಿ ವಿಮಾನ ಹಾರಾಡಿದೆ. ಬೆಳಗ್ಗೆ 7.30 ಕ್ಕೆ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನ 8 ಗಂಟೆಯಾದರೂ ಹಾರಾಟ ನಡಿಸಿ ತಡವಾಗಿ ಲ್ಯಾಂಡ್ ಆಗಿದೆ ಎನ್ನಲಾಗಿದೆ....

https://bharathvaibhav.com/cm-bommai-landing-issue-with-union-minister-joshi/

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ....

ಬೆಂಗಳೂರು: ತಲೆಮಾರುಗಳಿಂದ ಇನಾಂ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಇನಾಂ ಭೂಮಿ ಉಳುಮೆ ಮಾಡುತ್...
10/12/2021

ಬೆಂಗಳೂರು: ತಲೆಮಾರುಗಳಿಂದ ಇನಾಂ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಇನಾಂ ಭೂಮಿ ಉಳುಮೆ ಮಾಡುತ್ತಿರುವ ಭೂವಂಚಿತರಿಗೆ ಭೂಮಿ ಮರು ಮಂಜೂರು ಮಾಡಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಈ ಹಿಂದೆ ಇನಾಂ ಭೂಮಿ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಹೆಚ್ಚಿನ ರೈತರಿಗೆ ಮಾಹಿತಿ ಸಿಗದೇ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

https://bharathvaibhav.com/submission-of-application-for-grant-of-inam-land/

ಬೆಂಗಳೂರು: ತಲೆಮಾರುಗಳಿಂದ ಇನಾಂ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಇನಾಂ ಭೂಮಿ ಉಳ.....

ಮುಂಬೈ: ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆಯ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ಮುಂಬೈನ ಮಾಲ್ವಾನಿಯ ಅಂಬುಜ್‌ವಾಡಿ ಪ್ರದೇಶದಲ್ಲಿ ಬುಧವಾರ ರಾತ್ರ...
09/12/2021

ಮುಂಬೈ: ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆಯ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ಮುಂಬೈನ ಮಾಲ್ವಾನಿಯ ಅಂಬುಜ್‌ವಾಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಜೋರಾಗಿ ಹಾಡು ಹಾಕಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ಹಾಡಿನ ಧ್ವನಿಯ ಪ್ರಮಾಣ ಕಡಿಮೆ ಮಾಡುವಂತೆ ತಿಳಿಸಿದ್ದಾನೆ.ಈ ವೇಳೆ ಧ್ವನಿ ಕಡಿಮೆ ಮಾಡಲು ನಿರಾಕರಿಸಿದ್ದ 40 ವರ್ಷದ ನೆರೆಯ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಸುರೇಂದ್ರ ಕುಮಾರ್ ಗುನ್ನಾರ್ ಎಂದು ಗುರುತಿಸಲಾಗಿದೆ. ನೆರೆಯ ಸೈಫ್ ಅಲಿ ಚಂದ್ ಅಲಿ ಶೇಖ್ ಎಂಬಾತ ಆರೋಪಿ.ತೀವ್ರ ಗಾಯಗೊಂದ ಸುರೇಂದ್ರ ಕುಮಾರ್ ಪ್ರಜ್ಞೆ ತಪ್ಪಿ ಬಿದ್ದರು. ಅತೀವ ರಕ್ತಸ್ರಾವ ಉಂಟಾಯಿತು. ಬಳಿಕ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಭಾರತೀಯ ದಂಡ ಸಂಹಿತೆ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

https://bharathvaibhav.com/murder-of-a-person/

ಮುಂಬೈ: ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆಯ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ಮುಂಬೈನ ಮಾಲ್ವಾನಿಯ ಅಂಬುಜ್‌ವಾಡಿ ಪ್ರದೇಶದಲ್ಲಿ .....

ಶರಣಶ್ರೀ ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಮುನ್...
09/12/2021

ಶರಣಶ್ರೀ ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಮುನ್ನಡೆದವರು. ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನ ಶರಣರಾದ ಇವರ ತ್ಯಾಗ, ಸೇವೆ ಅನುಪಮವಾದುದು. ಶರಣಶ್ರೀ ಈಶ್ವರ ಮಂಟೂರ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ ‘ಕಲಾನೇಕಾರ’ ಕುಟುಂಬದಲ್ಲಿ 23-03-1972 ರಂದು ತಂದೆ ಶ್ರೀಶೈಲಪ್ಪ ತಾಯಿ ಅನ್ನಪೂರ್ಣ ಶರಣ ದಂಪತಿಗಳ ಪುಣ್ಯ ಉದರದಿಂದ ಜನ್ಮ ತಾಳಿದವರು. ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮುಂತಾದ ಕಲೆಗಳನ್ನು ಮೈಗಂಟಿಸಿಕೊಂಡು ಬೆಳೆದವರು ತಿಳಿಯಲಾರದ ಘನವನ್ನು ತಿಳಿಯುವ ಕಾಣಬಾರದ ಪರವಸ್ತುಗಳನ್ನು ಕಾಣುವ ಅಂತರಂಗದ ರತ್ನವಾದ ಆತ್ಮವಿದ್ಯೆಯ ಕಡೆಗೆ ಒಲವು ತೋರಿದವರು....

https://bharathvaibhav.com/shivanabharana-saranas-were-the-great-spirit-of-this-age/

ಶರಣಶ್ರೀ ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾ...

ಬೈಲಹೊಂಗಲ : ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜು ಬೈಲಹೊಂಗಲ ದಲ್ಲಿ ಬುಧವಾರ ದಿನಾಂಕ 08/12/2021 ರಂದು ಪ್ರತಿಷ್...
09/12/2021

ಬೈಲಹೊಂಗಲ : ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜು ಬೈಲಹೊಂಗಲ ದಲ್ಲಿ ಬುಧವಾರ ದಿನಾಂಕ 08/12/2021 ರಂದು ಪ್ರತಿಷ್ಟಿತ ಎಕಸ್ ಪ್ರಾಯವೆಟ್ ಕಂಪನಿ ಬೆಳಗಾವಿ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಡಿಪ್ಲೋಮಾ ಮೆಕ್ಯಾನಿಕಲ್, ಆಟೋಮೋಬೈಲ ಮತ್ತು ಮೆಕೆಟ್ರಾನಿಕ್ಸ ವಿಭಾಗದಲ್ಲಿ 2019, 2020 ಮತ್ತು 2021 ರ ಅವಧಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮಾಡಲಾಯಿತು.ಸಂದರ್ಶನದಲ್ಲಿ ಸುಮಾರು 113 ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ 46 ವಿದ್ಯಾರ್ಥಿಗಳನ್ನು ಆಯ್ಕೆಮಾಡಿದರು. ಎಕಸ್ ಪ್ರಾಯವೆಟ್ ಕಂಪನಿ ಬೆಳಗಾವಿಯ ಅಧಿಕಾರಿಗಳಾದ ಶ್ರೀ ವಿನಾಯಕ ಕಡಕಭಾವಿ, ವಿಕಾಸ ಕುಮಾರ ಮತ್ತು ವಿರೇಂದ್ರ ಶೆಟ್ಟಿ ಸಂದರ್ಶನ ನೆರವೇರಿಸಿದರು, ಪ್ರಾಚಾರ್ಯರಾದ ಪ್ರೋ. ಶ್ರೀಧರ ಬ ನಿರಡಿ ಮತ್ತು ತರಬೇತಿ ಅಧಿಕಾರಿಗಳಾದ ಪ್ರವೀಣ ಹುಡೇದ, ಎಸ್. ಎಮ್. ಕಳಸಣ್ಣವರ, ಎಮ್. ಬಿ. ಕಡಬಿ ಮತ್ತು ಎಮ್. ಎ. ಸವದತ್ತಿಮಠ ಉಪಸ್ಥಿತರಿದ್ದರು.

https://bharathvaibhav.com/a-total-of-46-students-were-selected-in-the-ecus-campus-interview/

ಬೈಲಹೊಂಗಲ : ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜು ಬೈಲಹೊಂಗಲ ದಲ್ಲಿ ಬುಧವಾರ ದಿನಾಂಕ 08/12/2021 ರಂದು ಪ್ರತಿಷ್ಟ....

ನವದೆಹಲಿ: ಹೆಲಿಕಾಪ್ಟರ್ ದುರಂತದಿಂದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ‌ ನಿಧನರಾಗಿದ್ದಾರೆ. ಆದ್ರೆ ಕೆಲವೊಂದಿಷ್ಟು ಮೃಗೀಯ ...
09/12/2021

ನವದೆಹಲಿ: ಹೆಲಿಕಾಪ್ಟರ್ ದುರಂತದಿಂದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ‌ ನಿಧನರಾಗಿದ್ದಾರೆ. ಆದ್ರೆ ಕೆಲವೊಂದಿಷ್ಟು ಮೃಗೀಯ ಮನಸ್ಥಿತಿಯವರು ಅವರ ಸಾವನ್ನು ಸಂಭ್ರಮಿಸುತ್ತಿದ್ದಾರೆ.ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅಂತವರ ಮೇಲೆ ಎಲ್ಲೆಡೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಇದೀಗ ರಾಜಸ್ತಾನದಲ್ಲಿ ಒಬ್ಬ ವ್ಯಕ್ತಿಯನ್ನ ಅರೆಸ್ಟ್ ಮಾಡಲಾಗಿದೆ. ಜವ್ವಾದ್ ಖಾನ್ ಎಂಬ ವ್ಯಕ್ತಿ ಬಿಇನ್ ರಾವತ್ ಅವರ ಸಾವನ್ನ ಸಂಭ್ರಮಿಸಿ ಪೋಸ್ಟ್ ಹಾಕಿದ್ದ. ನರಕಕ್ಕೆ ಹೋಗುವ ಮೊದಲೇ ಈತನ ದೇಹ ಸುಟ್ಟು ಹೋಯ್ತು ಎಂದು ಪೋಸ್ಟ್ ಹಾಕಿದ್ದ. ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಮಿಕ್ ಫಂಡಮೆಂಟಲಿಸ್ಟ್ ಎಂದು ಹಾಕಿಕೊಂಡಿದ್ದಾನೆ. ತಾಲಿಬಾನ್ ಸಂಘದ ಪರವು ಹಲವು ಪೋಸ್ಟ್ ಗಳನ್ನ ಹಾಕಿದ್ದಾನೆ. ಈತನ ನೀಚ ಕೃತ್ಯಕ್ಕೆ ರಾಜಸ್ತಾನ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

https://bharathvaibhav.com/arrest-is-the-one-who-talked-badly-about-army-chief-rawat/

ನವದೆಹಲಿ: ಹೆಲಿಕಾಪ್ಟರ್ ದುರಂತದಿಂದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ‌ ನಿಧನರಾಗಿದ್ದಾರೆ. ಆದ್ರೆ ಕೆಲವೊಂದಿಷ.....

ಕೊಪ್ಪಳ : ಮೊದಲು ಹೆಣ್ಣು ಮತ್ತೊಬ್ಬ ಹೆಣ್ಣನ್ನು ಒಪ್ಪಿಕೊಂಡಾಗ ಮಾತ್ರ ಸಮರ್ಥ ಮತ್ತು ಸಮಾನ ನಾಡು ನಿರ್ಮಾಣ ಮಾಡಲು ಸಾಧ್ಯ ಎಂದು ರಾಜ್ಯ ಯುವ ಪ್ರಶ...
09/12/2021

ಕೊಪ್ಪಳ : ಮೊದಲು ಹೆಣ್ಣು ಮತ್ತೊಬ್ಬ ಹೆಣ್ಣನ್ನು ಒಪ್ಪಿಕೊಂಡಾಗ ಮಾತ್ರ ಸಮರ್ಥ ಮತ್ತು ಸಮಾನ ನಾಡು ನಿರ್ಮಾಣ ಮಾಡಲು ಸಾಧ್ಯ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸಂಘಟಕಿ ಜ್ಯೋತಿ ಎಂ. ಗೊಂಡಬಾಳ ಸಲಹೆ ನೀಡಿದರು. ಅವರು ನಗರದ ಬಾಲಿಕಯರ ವಸತಿ ನಿಲಯದಲ್ಲಿ ಭಾಗ್ಯನಗರ ಇನ್ನರ್ ವ್ಹೀಲ್ ಕ್ಲಬ್ ಮೂಲಕ ಆಯೋಜಿಸಿರುವ ಒಂದು ವಾರದ ಉಚಿತ ಆತ್ಮ ರಕ್ಷಣಾ ಕಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಇರುವದು ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳು ಇಂದು ಕವಲೊಡೆದು ಸಮಾಜದಲ್ಲಿ ಕೆಟ್ಟ ಪರಿಸರ ನಿರ್ಮಾಣವಾಗಿದೆ, ಹೆಣ್ಣು ಸಹ ಹೆಣ್ಣಿಗೆ ಶತ್ರುವಾಗಿರುವದು ಪ್ರಕೃತಿಯ ದುರಂತವೇ ಸರಿ....

https://bharathvaibhav.com/a-competent-nadu-construction-is-gondabala-when-the-female-is-admitted-to-the-female/

ಕೊಪ್ಪಳ : ಮೊದಲು ಹೆಣ್ಣು ಮತ್ತೊಬ್ಬ ಹೆಣ್ಣನ್ನು ಒಪ್ಪಿಕೊಂಡಾಗ ಮಾತ್ರ ಸಮರ್ಥ ಮತ್ತು ಸಮಾನ ನಾಡು ನಿರ್ಮಾಣ ಮಾಡಲು ಸಾಧ್ಯ ಎಂದು ರಾಜ್ಯ ...

ನವದೆಹಲಿ: 2020ರಲ್ಲಿ ಎಕ್ಸ್‌ಪ್ರೆಸ್‌ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 47,984 ಜನ ಸಾವನ್ನಪ...
09/12/2021

ನವದೆಹಲಿ: 2020ರಲ್ಲಿ ಎಕ್ಸ್‌ಪ್ರೆಸ್‌ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 47,984 ಜನ ಸಾವನ್ನಪ್ಪಿದ್ದಾರೆ ಎಂದು ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದರು. ಲೋಕಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ಅವರು ಈ ಮಾಹಿತಿ ನೀಡಿದರು. 2019ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 53,872 ಮಂದಿ ಅಸುನೀಗಿದ್ದಾರೆ ಎಂದೂ ಹೇಳಿದರು.ವಾಹನಗಳ ವಿನ್ಯಾಸ, ಸ್ಥಿತಿ, ರಸ್ತೆಗಳ ಪರಿಸ್ಥಿತಿ, ಅತಿವೇಗ, ಕುಡಿದು, ಮಾದಕ ದ್ರವ್ಯ ಸೇವಿಸಿ ಚಾಲನೆ, ಮೊಬೈಲ್‌ ಬಳಕೆ ಮೊದಲಾದವು ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಗಡ್ಕರಿ ಹೇಳಿದರು. ರಸ್ತೆ ಸುರಕ್ಷತೆಗೆ ಎಲ್ಲಾ ಹಂತಗಳಲ್ಲಿ ತಜ್ಞರ ಸಹಾಯದಿಂದ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ ಎಂದು ಅವರು ಹೇಳಿದರು.

https://bharathvaibhav.com/gadkari-killed-48-thousand-people-in-accidents-last-year/

ನವದೆಹಲಿ: 2020ರಲ್ಲಿ ಎಕ್ಸ್‌ಪ್ರೆಸ್‌ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 47,984 ಜನ ಸಾ....

ಸವದತ್ತಿ: ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಸಿದ್ಧತೆಯ ತಯಾರಿ ಎಲ್ಲ ಇಲಾಖೆ ಅಧಿಕಾರಿಗಳು ನಡೆಸಿದ್ದು ಆದಕಾರಣ ಸವದತ್ತಿ ತಾಲೂಕಿನ ಗ್ರಾಮ...
09/12/2021

ಸವದತ್ತಿ: ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಸಿದ್ಧತೆಯ ತಯಾರಿ ಎಲ್ಲ ಇಲಾಖೆ ಅಧಿಕಾರಿಗಳು ನಡೆಸಿದ್ದು ಆದಕಾರಣ ಸವದತ್ತಿ ತಾಲೂಕಿನ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಪುರಸಭೆ ಪ್ರತಿನಿಧಿಗಳು ಮಾತ್ರ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ನಮ್ಮ ಸವದತ್ತಿ ತಾಲೂಕಿನಲ್ಲಿ ಒಟ್ಟು 45 ಮತಗಟ್ಟೆಗಳಿವೆ ಆದಕಾರಣ ಎಲ್ಲ ಬೂತ್ ಅಧಿಕಾರಿಗಳು ಚುನಾವಣಾ ಆಯೋಗದ ಆದೇಶವನ್ನು ಪಾಲಿಸಬೇಕು ಎಂದು ಸವದತ್ತಿ ತಾಲೂಕಿನ ದಂಡಾಧಿಕಾರಿಗಳಾದ ಪ್ರಶಾಂತ್ ಪಾಟೀಲ ತಿಳಿಸಿದರು. ಎಲ್ಲ ಇಲಾಖೆ ಅಧಿಕಾರಿಗಳು ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಮತದಾರರು ಮತದಾನ ಮಾಡುವಾಗ ಚುನಾವಣಾ ಆಯೋಗದ ಆದೇಶ ಮತ್ತು ಕೋರೋನಾ ರೋಗದ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ಸವದತ್ತಿ ತಾಲೂಕಿನ ತಹಸೀಲ್ದಾರಾದ ಪ್ರಶಾಂತ್ ಪಾಟೀಲ ಸೂಚಿಸಿದರು. ವರದಿ: ಈರಣ್ಣಾ ಹುಲ್ಲೂರ ಸವದತ್ತಿ

https://bharathvaibhav.com/tahsildar-prashant-patil-holds-fair-and-transparent-election/

ಸವದತ್ತಿ: ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಸಿದ್ಧತೆಯ ತಯಾರಿ ಎಲ್ಲ ಇಲಾಖೆ ಅಧಿಕಾರಿಗಳು ನಡೆಸಿದ್ದು ಆದಕಾರಣ ಸವದತ್ತಿ ತಾ....

ಬೆಂಗಳೂರು :ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಐದು ಮಂದಿ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 9.30 ಲಕ್ಷ ರೂ. ಹಾಗೂ 19...
09/12/2021

ಬೆಂಗಳೂರು :ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಐದು ಮಂದಿ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 9.30 ಲಕ್ಷ ರೂ. ಹಾಗೂ 19 ಲಕ್ಷ ಮೌಲ್ಯದ 402 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿ ದ್ದಾರೆ.ಕರಣ್ ಬಿಸ್ಟಾ, ಹಿಕಮ್ ಶಾಹಿ, ರಾಜು ಅಲಿಯಾಸ್ ಚಾಮ್ಡಿ, ಜೀವನ್, ಗೋರಕ್ ಕಾಲು ಬಂಧಿತ ಆರೋಪಿಗಳು. ಇವರ ಬಂಧನದಿಂದ ನಾಲ್ಕು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ತಾವು ಕೆಲಸ ಮಾಡುತ್ತಿದ್ದ ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ ಮಾಲೀಕರು ಹೊರಗೆ ಹೋಗಿರುವ ಬಗ್ಗೆ ಬೇರೆ ರಾಜ್ಯದಲ್ಲಿರುವ ನೇಪಾಳಿ ಸಂಬಂಕರು ಹಾಗೂ ಸ್ನೇಹಿತರಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಮಾಹಿತಿಗಳನ್ನು ನೀಡಿ ಕರೆಸಿಕೊಳ್ಳುತ್ತಿದ್ದರು. ಅವರ ಮೂಲಕ ಮನೆಗಳ್ಳತನ ಮಾಡಿಸುತ್ತಿದದ್ದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.

https://bharathvaibhav.com/arrests-are-the-five-nepalis-who-have-stolen/

ಬೆಂಗಳೂರು :ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಐದು ಮಂದಿ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 9.30 ಲಕ್ಷ ರೂ. ಹ.....

ಅಥಣಿ: ನಾಳೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ ತೆಸೀಲ್ದಾರ ದುಂಡಪ್ಪ ಕೋಮಾರ್ ಹೇಳಿಕೆ.ಅಥಣಿ ತಾಲೂಕಿನಲ್ಲಿ ಒಟ್ಟು 45 ವಿಧಾನಪ...
09/12/2021

ಅಥಣಿ: ನಾಳೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ ತೆಸೀಲ್ದಾರ ದುಂಡಪ್ಪ ಕೋಮಾರ್ ಹೇಳಿಕೆ.ಅಥಣಿ ತಾಲೂಕಿನಲ್ಲಿ ಒಟ್ಟು 45 ವಿಧಾನಪರಿಷತ್ ಚುನಾವಣೆ ಮತಕಟ್ಟೆಗಳಿದ್ದು ಎಲ್ಲಾ ಮತಕಟ್ಟೆಗಳನ್ನು ಪರಿಶೀಲಿಸಿ ಚುನಾವಣೆ ಸಿಬ್ಬಂದಿ ನೇಮಕ ಹಾಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆವೆಂದು ಅಥಣಿ ತೆಹಸೀಲ್ದಾರ್ ದುಂಡಪ್ಪ ಕೋಮಾರ ತಿಳಿಸಿದರು. ಬುಧವಾರ ಮಾಧ್ಯಮ ಜೋತೆಗೆ ಮಾತನಾಡಿದ ಅವರು ಚುನಾವಣಾ ನೀತಿ ಸಂಹಿತೆ ಡಿ.16 ರವರೆಗೂ ಜಾರಿಯಲ್ಲಿರಲಿದೆ. ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ’ ಎಂದು ವಿವರಿಸಿದರು. ‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸುಗಮ ಚುನಾವಣೆಗೆ ಬೇಕಿರುವ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದರು.ಶಿಸ್ತುಬದ್ಧ ಹಾಗೂ ಸುಸೂತ್ರವಾಗಿ ಚುನಾವಣೆ ನಡೆಸಲು ತಾಲ್ಲೂಕು ಮಟ್ಟದಲ್ಲಿ ವಿಚಕ್ಷಣಾ ದಳ ಮತ್ತು ಕಣ್ಗಾವಲು ಸಮಿತಿ ರಚಿಸಲಾಗಿದೆ....

https://bharathvaibhav.com/preparations-for-the-assembly-elections/

ಅಥಣಿ: ನಾಳೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ ತೆಸೀಲ್ದಾರ ದುಂಡಪ್ಪ ಕೋಮಾರ್ ಹೇಳಿಕೆ.ಅಥಣಿ ತಾಲೂಕಿನಲ್ಲಿ ಒಟ್ಟು...

ರೋಣ : ನಗರದ ಡಾ. ಭೀಮ್ ಸೇನ ಜೋಶಿ ಸರಕಾರಿ ಆಸ್ಪತ್ರೆಯಲಿ.ಡಾ . ಬಾಬಾ ಸಾಹೇಬ ಅಂಬೇಡ್ಕರ್ ಅವರ 56ನೇ ಪರಿ ನಿರ್ವಹಣೆ ನಿಮಿತ್ಯವಾಗಿ ಯುವ ದಲಿತ ಸಂಘ...
09/12/2021

ರೋಣ : ನಗರದ ಡಾ. ಭೀಮ್ ಸೇನ ಜೋಶಿ ಸರಕಾರಿ ಆಸ್ಪತ್ರೆಯಲಿ.ಡಾ . ಬಾಬಾ ಸಾಹೇಬ ಅಂಬೇಡ್ಕರ್ ಅವರ 56ನೇ ಪರಿ ನಿರ್ವಹಣೆ ನಿಮಿತ್ಯವಾಗಿ ಯುವ ದಲಿತ ಸಂಘಟನೆ ಅಧ್ಯಕ್ಷ ಸಂಜಯ್ ದೊಡ್ಡಮನಿ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಾಲು ವಿತರಣೆ ಕಾರ್ಯಕ್ರಮ ಜರುಗಿತು. ನಗರದ ಕಾಂಗ್ರೆಸ್ ಪಕ್ಷದ ಮುಖಂಡ ವಿ ಬಿ ಸೂಮನಕಟ್ಟಮಠ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆಡಿಸಿಕೂಟ್ಟರು. ಪುರಸಭೆ ಸದಸ್ಯರಾದ ಹನಮಂತ ತಳಿಕೇರಿ ಹಾಗು ದುರಗಪ್ಪ ಹೀರೆಮನಿ ಸೋಮು ನಾಗರಾಪುರಸಭೆ ಸದಸ್ಯರಾದ ಹನಮಂತ ತಳಿಕೇರಿ ಹಾಗು ದುರಗಪ್ಪ ಹೀರೆಮನಿ ಸೋಮು ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

https://bharathvaibhav.com/distribution-of-fruit-milk-to-ambedkar-parinirvana-patients/

ರೋಣ : ನಗರದ ಡಾ. ಭೀಮ್ ಸೇನ ಜೋಶಿ ಸರಕಾರಿ ಆಸ್ಪತ್ರೆಯಲಿ.ಡಾ . ಬಾಬಾ ಸಾಹೇಬ ಅಂಬೇಡ್ಕರ್ ಅವರ 56ನೇ ಪರಿ ನಿರ್ವಹಣೆ ನಿಮಿತ್ಯವಾಗಿ ಯುವ ದಲಿತ ....

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಂಚ ಸ್ವೀಕರ...
09/12/2021

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿಂಪಿ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಶಸ್ತ್ರಚಿಕಿತ್ಸೆಗಾಗಿ ಸೂರ್ಯ ಎಂಬ ರೋಗಿಯಿಂದ ವೈದ್ಯ ಸಿಂಪಿ 5000 ನೀಡುವಂತೆ ಕೇಳಿದ್ದ. ರೋಗಿಯು 3000 ಗೂಗಲ್ ಪೇ ಮಾಡಿದ್ದ. ಉಳಿದ 2000 ನಗದು ನೀಡುವಾಗ ಎಸಿಬಿ ಸಿಬ್ಬಂದಿ ವೈದ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

https://bharathvaibhav.com/acb-trap-doctor-when-accepting-bribes/

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ...

Address

Belgaum

590001

Alerts

Be the first to know and let us send you an email when B V News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to B V News Kannada:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share