Shivamogga politics

  • Home
  • Shivamogga politics

Shivamogga politics Tracking political developments in Shivamogga

01/10/2023

ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಟಿಪ್ಪು ಕಟೌಟ್ ಗೊಂದಲ.‌ ಪೊಲೀಸರು ಕಟೌಟ್ ಗೆ ಬಣ್ಣ ಬಳಿದಿದ್ದರಿಂದ ಗೊಂದಲ ಸೃಷ್ಟಿ ವಿಚಾರ. ಮುಸ್ಲಿಂ ಮುಖಂಡರ ಜೊತೆ ಎಸ್ಪಿ ಮಿಥುನ್ ಮಾತುಕತೆ ಬೆನ್ನಲ್ಲೇ ಕಟೌಟ್ ಗೆ ಬಣ್ಣ.

*ಕಟೌಟ್ ಮೇಲೆ ರಕ್ತದಲ್ಲೇ "ಶೇರ್ ಟಿಪ್ಪು" ಎಂದು ಬರೆದ ಮುಸ್ಲಿಂ ಯುವಕ.*

*ಪೊಲೀಸರು ಹಚ್ಚಿದ್ದ ಬಿಳಿ ಬಣ್ಣದ ಮೇಲೆ ರಕ್ತದಲ್ಲಿ ಬರೆದ ಯುವಕ.*

ಕೈ ಕೊಯ್ದುಕೊಂಡು ರಕ್ತದಲ್ಲಿ ಶೇರ್ ಟಿಪ್ಪು ಎಂದು ಬರೆದ ಯುವಕ. ಜೊತೆಗೆ ಕಟೌಟ್ ನಲ್ಲಿನ ಬಿಳಿ ಬಣ್ಣಕ್ಕೆ ತನ್ನ ರಕ್ತ ಚಿಮ್ಮಿಸಿದ ಯುವಕ.

*ಕಟೌಟ್ ನಲ್ಲಿದ್ದ ಬಿಳಿ ಬಣ್ಣಕ್ಕೆ ರೆಡ್ ಕಲರ್ ಪೇಯಿಂಟ್ ಸ್ಪ್ರೇ ಮಾಡಿದ ಯುವಕರು.*

ಜೊತೆಗೆ ಶಾಂತಿನಗರ ಕ್ರಾಸ್ ಬಳಿ ದ್ವಾರದಲ್ಲಿ ಖಡ್ಗದ ಮಾದರಿ ಹಾಕಿದ ಯುವಕರು. ರಾಗಿಗುಡ್ಡ- ಶಾಂತಿನಗರ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್.

29/09/2023

Araga Jnanendra

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಗೋಕರ್ಣದಿಂದ ಬರುವಾಗ, ಇಬ್ಬರು ರಸ್ತೆಯಲ್ಲಿ ಬಿದ್ದಿರೋದನ್ನ ನೋಡ್ತಾರೆ. ಭಟ್ಕಳದಲ್ಲಿ ಈದ್ ಮಿಲಾದ್ ಆಚರಿಸಿ ಶಿವಮೊಗ್ಗ ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಅವರ ಬೈಕ್ ಲ್ಲಿ ಪೆಟ್ರೋಲ್ ಬಾಟಲಿ ಇತ್ತು, ಅರ್ಜೆಂಟ್ ಲ್ಲಿ ಅದನ್ನೇ ನೀರೆಂದು ಕುಡಿಯಲು ಹೊರಟ ಓರ್ವ ಗಾಯಾಳು.. Video.../

29/09/2023

ಕಾವೇರಿ ಬಂದ್ ಶಿವಮೊಗ್ಗಕ್ಕೆ ತಟ್ಟದ ಬಿಸಿ, ಆದರೂ ಕನ್ನಡ ರಕ್ಷಣ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ, ಪೊಲೀಸ್ ವಶಕ್ಕೆ..! ಕರವೇ ಕಿರಣ್, ವಾಟಾಳ್ ಮಂಜುನಾಥ್ ಸಾರಥ್ಯ. ಮುಂಜಾನೆ ಆರು ಗಂಟೆಗೆ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಕ್ಕೆ ಕಾರ್ಯಕರ್ತರ ಲಗ್ಗೆ.

ಕರವೇ ಕಿರಣ್ ಶಿವಮೊಗ್ಗ

29/09/2023

ಕೇಸರಿ (ಸಾವರ್ಕರ್ ಭಾವ ಚಿತ್ರವುಳ್ಳ) ಬಾವುಟ ಹಿಡಿದು ಸಂಭ್ರಮಿಸಿದ ಕಾಂಗ್ರೆಸ್ ನಾಯಕ Yogesh H C

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಸಮಾಪ್ತಿ..
BJP Shivamogga It Cell - ಬಿ.ಜೆ.ಪಿ ಶಿವಮೊಗ್ಗ ನಗರ ಐಟಿ
Bharatiya Janata Party (BJP)
BJP Shimoga

28/09/2023

ಐತಿಹಾಸಿಕ ಹಿಂದುಮಹಾಸಭಾ ಉತ್ಸವ ಇಂದು..Live updates..

ಶಿವಮೊಗ್ಗ ಹಿಂದೂಮಹಾಸಭಾ ಗಣೇಶ ರಾಜಬೀದಿ ಉತ್ಸವ ಆರಂಭ.

06/01/2023

PFI ಬೆಳೆಸಿದ್ದು Siddaramaiah /ರಾಷ್ಟ್ರನಿಷ್ಠ ಸಂಘಟನೆ ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ಕಪಿಚೇಷ್ಠೆ ಮಾಡೋದು ನಿಲ್ಲಿಸಲಿ: ಈಶ್ವರಪ್ಪ

ಶಿವಮೊಗ್ಗ ;

ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ರಾಷ್ಟ್ರಭಕ್ತ ಸಂಘಟನೆ ಆರ್ ಎಸ್ ಎಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ರೀತಿ ಕಪಿಗಳ ರೀತಿ ಮಾತನಾಡಿದ್ದಾರೆ.

ಆರ್ ಎಸ್ ಎಸ್ ರಾಷ್ಟ್ರ ನಿಷ್ಟ ಸಂಸ್ಥೆ. ಸಿದ್ದರಾಮಯ್ಯ ಕಪಿಚೇಷ್ಟೆ ಮಾಡುತಿದ್ದಾರೆ. ಕಪಿಚೇಷ್ಟೆ ಬಿಟ್ಟ ಆರ್ ಎಸ್ ಎಸ್ ಏನು ಮಾಡಿದೆ ಎಂಬುದನ್ನು ತಿಳಿದುಕೊಳ್ಳಲಿ.
ರಾಷ್ಟ್ರಭಕ್ತ ನಾಯಕರನ್ನು ತಯಾರುಮಾಡುತ್ತಿರುವ ರಾಷ್ಟ್ರಭಕ್ತ ಸಂಘಟನೆ ಆರ್ ಎಸ್ ಎಸ್. ಆರ್ ಎಸ್ ಎಸ್ ಬಗ್ಗೆ, ರಾಷ್ಟ್ರನಿಷ್ಟೆ ಬಗ್ಗೆ ಕಪಿಚೇಷ್ಟೆ ಮಾಡುತ್ತಾ ಹೋದರೆ ಅವರಿಗೆ ಪ್ರಚಾರ ಸಿಗಬಹುದು. ಆದರೆ ಜನ ಸಿದ್ದರಾಮಯ್ಯ ಹಾಗೂ ಕಾಂಗ್ರೆಸನ್ನು ಧೂಳಿಪಟ ಮಾಡುತ್ತಾರೆ.
ಇದನ್ನು ಮುಂದುವರಿಸಿದರೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಧೂಳಿಪಟವಾಗುತ್ತಾರೆ. ಪ್ರಪಂಚದಲ್ಲಿ ಆರ್ ಎಸ್ ಎಸ್ ನಷ್ಟು ದೊಡ್ಡ‌ಸಂಘಟನೆ ಬೇರೆ ಇಲ್ಲ. ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ. ಪಿಎಫ್ ಐ ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿದೆ, ಭಯೋತ್ಪಾದಕತೆ ಮಾಡುತ್ತಿದೆ‌ ಎಂಬ ಕಾರಣಕ್ಕೆ ಬ್ಯಾನ್ ಆಗಿದೆ.
ಇಂಥ ಸಂಘಟನೆಗಳನ್ನು ಬೆಳೆಸಿದ್ದು‌ ಸಿದ್ದರಾಮಯ್ಯನಂತಹ ನಾಯಕರು.

ರಾಷ್ಟ್ರದ್ರೋಹಿ ಚಟುವಟಿಕೆ ಧಮನ ಮಾಡುವ ಶಕ್ತಿ ನೀಡಿದ್ದು ಆರ್ ಎಸ್ ಎಸ್ ನ ರಾಷ್ಟ್ರ‌ನಿಷ್ಟೆ. ಇದು ಸಿದ್ದರಾಮಯ್ಯನವರಿಗೆ ಅರ್ಥವಾಗಬೇಕು. ಅರ್ಥವಾಗಿದೆ ಅವರಿಗೆ ಆದರೆ ತಮ್ಮ ರಾಜಕೀಯ ಉಳಿವಿಗಾಗಿ ಏನು ಬೇಕಾದರೂ ಪದಬಳಸುವ ಪ್ರಯತ್ನ‌ ನಡೆಸುತಿದ್ದಾರೆ. ಸಿದ್ದರಾಮಯ್ಯನವರಿಗೆ ನಾನು ಏರ್‌ಟಿಕೆಟ್ ಮಾಡಿಕೊಡುತ್ತೇನೆ‌ ಅಥವಾ ಹಡಗಿನಲ್ಲಿ ಅಂಡಮಾನಿಗೆ ಕಳುಹಿಸುತ್ತೇನೆ. ಅಲ್ಲಿ ಸಾವರ್ಕರ್‌ಏನು ಶಿಕ್ಷೆ ಅನುಭವಿಸಿದರು ಎಂಬುದನ್ನು ನೋಡಿಕೊಂಡು ಬರಲಿ.

ಸಿದ್ದರಾಮಯ್ಯ ಜಿನ್ನ ಬಗ್ಗೆ ಮಾತನಾಡಬೇಕಿತ್ತು. ಆದರೆ ದೇಶಭಕ್ತ ಸಾವರ್ಕರ್ ಬಗ್ಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯಗೆ ಆರ್ ಎಸ್ ಎಸ್ ಬಗ್ಗೆ ಹಾಗೂ ಮೋದಿ ಬಗ್ಗೆ ಮಾತನಾಡಲಿಲ್ಲ ಎಂದರೆ‌ ಸಮಾಧಾನವಾಗಲ್ಲ.
ಸಿದ್ದರಾಮಯ್ಯ ವಿರುದ್ಧ ಹಾಕಬೇಕಾದ ಅಗತ್ಯವಿಲ್ಲ. ನರೇಂದ್ರ ಮೋದಿ ಅವರು ಆರ್ ಎಸ್ ಎಸ್ ಪ್ರಾಡಕ್ಟ್ ಅದರಲ್ಲಿ ಅನುಮಾನವಿಲ್ಲ. ಸೂರ್ಯನಿಗೆ ಉಗಿದರೆ ಉಗುಳು ತನ್ನ ಮುಖದ ಮೇಲೆ ಬೀಳುತ್ತದೆ ಎಂಬುದು ಸಿದ್ದರಾಮಯ್ಯಗೆ ತಿಳಿದಿಲ್ಲ.

ಕಪಿಯಂತೆ ಆಡುವುದನ್ನು ಬಿಡು ಎಂದು ಹೇಳುತ್ತೇನೆ ಅಷ್ಟೆ. ಕೇಸ್ ದಾಖಲಿಸುವಷ್ಟು ದೊಡ್ಡ ಮನುಷ್ಯ ಸಿದ್ದರಾಮಯ್ಯ ಅಲ್ಲ
ಸೋನಿಯಾಗಾಂಧಿ ಹಾಗೂ ವಿದೇಶಿ ವ್ಯಕ್ತಿಗಳನ್ನು ನೋಡಿ ಅವರೇ ದೇಶಭಕ್ತರು ಎಂದುಕೊಂಡಿದ್ದಾರೆ. ಸಿದ್ದರಾಮಯ್ಯಗೆ ಟಿಪ್ಪು, ಜಿನ್ನಾ, ಸೋನಿಯಾಗಾಂಧಿ ಅಷ್ಟೆ ಗೊತ್ತು. ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಸಿದ್ದರಾಮಯ್ಯ ಕ್ಷೇತ್ರ ಹುಡುಕುತಿದ್ದಾರೆ.
ಒಂದೊಂದು ಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ನಿಲ್ಲುವ ಮೂಲಕ ಅಲೆಮಾರಿ ರಾಜಕಾರಣಿಯಾಗಿದ್ದಾರೆ. ಮೋದಿ ಹಾಗೂ ಆರ್ ಎಸ್ ಎಸ್ ಬೈದರೆ ಮುಸಲ್ಮಾನರು ತಮಗೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.

ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ತನಿಖೆ ಮಾಡಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಮೀಸಲಾತಿಗೂ ಯಡಿಯೂರಪ್ಪ ಅವರ ಕೈವಾಡಕ್ಕೂ ಸಂಬಂಧ ಎಲ್ಲಿದೆ ಎಂಬುದನ್ನು ಯತ್ನಾಳ್ ಸ್ಪಷ್ಟಪಡಿಸಬೇಕು. ಆರಂಭದಿಂದಲೂ ಈ ಬಗ್ಗೆ ಟೀಕೆ ಮಾಡುತಿದ್ದಾರೆ. ಇದು ಒಳ್ಳೆಯದಲ್ಲ.
ಯಡಿಯೂರಪ್ಪ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ‌. ಯತ್ನಾಳ್ ನನ್ನ ಆತ್ಮೀಯ ಸ್ನೇಹಿತ. ಪಂಚಮಸಾಲಿಗೆ ಮೀಸಲಾತಿ ನೀಡುವ ಬಗ್ಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಆಪಾದನೆ ಮಾಡಬೇಡಿ. ನನ್ನ ಮೇಲೆ ಆಪಾದನೆ ಬಂದಾಗ ತುಂಬಾ ನೋವಾಗಿತ್ತು. ನಾನು ತಪ್ಪು ಮಾಡಿದ್ದರೆ ಶಿಕ್ಷೆ ನೀಡು ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೆ.

ಬಳಿಕ ನನಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಮಾಧಾನವಾಯಿತು. ಬಳಿಕ ಮಂತ್ರಿ ಸ್ಥಾನ ನೀಡುವಂತೆ ಜನರೇ ಒತ್ತಾಯ ಮಾಡಲಾರಂಭಿಸಿದರು. ಹೀಗಾಗಿ ನಾನು ಎರಡು ದಿನ ಅಧಿವೇಶನಕ್ಕೂ ಹೋಗಿರಲಿಲ್ಲ.
ಬಳಿಕ ಸಿಎಂ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಬಳಿಕ ಅಧಿವೇಶನಕ್ಕೆ ಹೋದೆ.
ನನಗೆ ಮಂತ್ರಿ ಸ್ಥಾನ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಈಶ್ವರಪ್ಪ ಹೇಳಿದರು.

06/01/2023

ರಸ್ತೆ ಚರಂಡಿ ದೀಪ ನೀರು ಇವುಗಳಿಗೋಸ್ಕರ ಸ್ವಾತಂತ್ರ ಹೋರಾಟ‌ ನಡೆದಿಲ್ಲ: ಲವ್ ಜಿಹಾದ್ ತೊಲಗಬೇಕು: ಈಶ್ವರಪ್ಪ

ರಸ್ತೆ-ಮೋರಿ-ಚರಂಡಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಯನ್ನ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

ದೇಶದ ಜನ ಬಿಜೆಪಿಯನ್ನು ಮತ್ತೆ ಮತ್ತೆ ಯಾಕೆ ಗೆಲ್ಲಿಸುತ್ತಿದ್ದಾರೆ.? ಅಭಿವೃದ್ಧಿಯನ್ನು ನೋಡಿ ತಾನೇ..! ಗುಜರಾತ್ ಉತ್ತರಪ್ರದೇಶ ಎಲ್ಲ ಚುನಾವಣೆಗಳಲ್ಲಿ ನಾವು ಜಯಬೇರಿ ಭಾರಿಸಿದ್ದೇವೆ. ಅದರ ಜೊತೆಗೆ ಈ ದೇಶದ ಧರ್ಮವನ್ನ ಕಾಪಾಡಿಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಹೋಗುತ್ತಿದ್ದೇವೆ ಎಂದರು.

ದೇಶ ಧರ್ಮ ಇದನ್ನು ಬಿಟ್ಟು ನಾವು ರಾಜಕಾರಣ ಮಾಡಲ್ಲ..! ಅದರಲ್ಲಿ ಅಭಿವೃದ್ಧಿಯೂ ಸೇರುತ್ತದೆ. ರಸ್ತೆ ಚರಂಡಿ ದೀಪ ನೀರು ಇವುಗಳಿಗೋಸ್ಕರ ಸ್ವಾತಂತ್ರ ಹೋರಾಟ‌ ನಡೆದಿಲ್ಲ. ಅಂದು ಹೋರಾಟಗಾರರು ಇವುಗಳನ್ನ ಆದ್ಯತೆ ಆಗಿ ಇಟ್ಟುಕೊಂಡಿರಲಿಲ್ಲ. ಬ್ರಿಟಿಷರು ಇವೆಲ್ಲಾ ಚೆನ್ನಾಗಿಯೇ ನೀಡುತ್ತಿದ್ದರು. ಆದರೆ ನಮ್ಮ ಶ್ರದ್ಧಾ ಕೇಂದ್ರಗಳನ್ನು ದ್ವಂಸ ಮಾಡಿದ್ದರು. ನಮ್ಮ ಹೆಣ್ಣುಮಕ್ಕಳನ್ನ ಅತ್ಯಾಚಾರ ಮಾಡಿದ್ದರು. ರಾಷ್ಟ್ರಭಕ್ತರಿಗೆ ಗುಂಡಿಟ್ಟು ಕೊಂದರು. ಗೋ ಹತ್ಯೆ ಎಗ್ಗಿಲ್ಲದೇ ಸಾಗಿತ್ತು. ಇವೆಲ್ಲ ತೊಲಗಬೇಕು.

ನಮ್ಮ ಶ್ರದ್ಧಾ ಕೇಂದ್ರಗಳಿಗೆ ಗೌರವ ಬರಬೇಕು. ಅಯೋಧ್ಯಾ, ಮಥುರಾ‌, ಕಾಶಿ ಎಲ್ಲವೂ ಅಭಿವೃದ್ಧಿ ಆಗಬೇಕು.‌ ಹೆಣ್ಣು ಮಕ್ಕಳಿಗೆ ಗೌರವ ಸಿಗಬೇಕು ಎಂಬುದು ಸ್ವಾತಂತ್ರ ಹೋರಾಟಗಾರರ ಸಂಕಲ್ಪವಾಗಿತ್ತು.

ಸ್ವತಂತ್ರ ಹೋರಾಟ ಮಾಡಿದ್ದು ರಸ್ತೆ ಚರಂಡಿ, ಬೀದಿ ದೀಪಕ್ಕಲ್ಲ. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗದಿರಲಿ ಎಂದು. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತಿದ್ದೇವೆ. ಅದರ ಜೊತೆಗೆ ಧರ್ಮ ರಾಜಕಾರಣ ಕೂಡ ಮಾಡುತ್ತಿದ್ದೇವೆ. ಧರ್ಮ ಅಂದರೆ ಭಾರತದ ಸ್ವರೂಪ. ಅದನ್ನು ಉಳಿಸಬೇಕು ಅನ್ನೋದು ಸ್ವತಂತ್ರ ಹೋರಾಟಗಾರರ ಧ್ಯೇಯವಾಗಿತ್ತು. ನಮ್ಮ ಆದ್ಯತೆಯು ಅದೇ ಆಗಿದೆ. ಹೋರಾಟಗಾರರಿಗೆ ಶಾಂತಿ ಸಿಗುವ ರೂಪದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದರು.


ಚುನಾವಣಾ ಸಮೀಕ್ಷೆಗಳು ಏನೇ ಇರಲಿ ನಾವು ಪುನಃ ಅಧಿಕಾರಕ್ಕೆ ಬರುತ್ತೇವೆ. ಹಿಂದಿನ ಚುನಾವಣೆ ಪೂರ್ವ ಸಮೀಕ್ಷೆಯಲ್ಲೂ ಕೂಡ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆಯುತ್ತೆ ಎಂದು ಹೇಳಿಕೊಂಡಿತ್ತು. ಎಷ್ಟು ಸ್ಥಾನ ಗಳಿಸಿತ್ತು. ಕಾಂಗ್ರೆಸ್ ಸಮೀಕ್ಷೆಯನ್ನು ಕಾಂಗ್ರೆಸ್ ನಾಯಕರೇ ನಂಬರು, ಇಂತಹ ಪರಿಸ್ಥಿತಿ ಅಲ್ಲಿ ಇದೆ. ಗುಜರಾತ್ ಸಮೀಕ್ಷೆ ಕಾಂಗ್ರೆಸ್ ಮಾಡಿತ್ತು. ಗೋವಾದಲ್ಲಿ ಕಾಂಗ್ರೆಸ್ ಮುಖಂಡರೇ ಬಿಜೆಪಿ ಸೇರ್ಕೊಂಡ್ರು. ಇದರಿಂದ ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ,‌ ಬಿಜೆಪಿ ಧರ್ಮ ಸಂಸ್ಕೃತಿ ಉಳಿಸುತ್ತಾ ಒಳ್ಳೆ ಆಡಳಿತ ನೀಡುತ್ತಿದೆ. ಎಲ್ಲರೂ ಬಂದು ಸೇರುತ್ತಿದ್ದಾರೆ. ಕಾಂಗ್ರೆಸ್ ಸರ್ವೇ ಅನಗತ್ಯ ಸಂಸತ್ ಚುನಾವಣೆಯಲ್ಲಿ ಕೇವಲ ಒಂದು ಸೀಟಿಗೆ ಕಾಂಗ್ರೆಸ್ ತೃಪ್ತಿಪಟ್ಟುಕೊಳ್ಳಬೇಕು. ಕಾಂಗ್ರೆಸ್ ಸಮೀಕ್ಷೆ ಅರ್ಥ ಇಲ್ಲ ಜನ ತೀರ್ಮಾನ ಅಂತಿಮ. ಒಂದಂತೂ ಹೇಳ್ತೀನಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದೆ ಬಂದಿರುವ ಸ್ಥಾನಗಳನ್ನು ಪಡೆದುಕೊಳ್ಳುವುದಿಲ್ಲ ಎಂದರು.

06/01/2023

ಜ.ಕ್ಕೆ ಭಜರಂಗದಳ ಶೌರ್ಯ ಸಂಚಲನ, ಶಿವಮೊಗ್ಗದಲ್ಲಿ ಮತ್ತೊಂದು ಶಕ್ತಿ ಪ್ರದರ್ಶನ

ಶಿವಮೊಗ್ಗ: ಕೋಮುದಳ್ಳೂರಿಯಲ್ಲಿ ಬೆಂದ ಶಿವಮೊಗ್ಗ ನಿಧಾನವಾಗಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದೆ. ಆದರೆ ಕಳೆದ ವರ್ಷ ನಡೆದ ಅಹಿತ ಘಟನೆಗಳು ಹಿಂದೆಂದೂ ಕಾಣದಷ್ಟು ಹಿಂದೂ ಸಂಘಟನೆಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪ್ರತೀ ತಿಂಗಳು ಒಂದಿಲ್ಲೊಂದು ಬೃಹತ್ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ಸಾವರ್ಕರ್ ಸಾಮ್ರಾಜ್ಯ, ಹಿಂದೂ ಜಾಗರಣ ವೇದಿಕೆ ತ್ರೈ ವಾರ್ಷಿಕ ದಕ್ಷಿಣ ಪ್ರಾಂತ ಸಮಾವೇಶಗಳ ನಂತರ ಭಜರಂಗದಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಕರ್ನಾಕದಲ್ಲಿ ಮೊದಲ ಭಾರಿ ಬೃಹತ್ ಪಥ ಸಂಚಲನಕ್ಕೆ ಶಿವಮೊಗ್ಗ ಸಾಕ್ಷಿಯಾಗಲಿದೆ.

ಅಖಿಲ ಕರ್ನಾಟಕ ಭಜರಂಗದಳ, ಜಿಲ್ಲಾ ಭಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳ ಸಹಯೋಗದೊಂದಿಗೆ ಜನವರಿ 8ರಂದು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ನಡೆಯಲಿದೆ. ಈ ಸಂಚಲನ ಕಾರ್ಯಕ್ರಮವು ರಾಷ್ಟೀಯ ಭಜರಂಗದಳದಿಂದ ಏರ್ಪಾಡಾಗಿದ್ದು ಶಿವಮೊಗ್ಗದಲ್ಲಿ ಅಭೂತಪೂರ್ವ ಫಥ ಸಂಚಲನ ಮಾಡಲು ಹಿಂದೂಪರ ಮುಖಂಡರು ಪಣತೊಟ್ಟಿದ್ದಾರೆ.

ಜ.8ರಂದು ಸಾವಿರಾರು ಗಣವೇಷಧಾರಿಗಳು
ಶಿವಮೊಗ್ಗ ನಗರದ ಚಂದ್ರಶೇಖರ್ ಆಜಾದ್ ಫ್ರೀಡಂ ಪಾರ್ಕ್ ನಿಂದ ಹೊರಟು, ಲಕ್ಷ್ಮಿ ಚಿತ್ರಮಂದಿರ ಮುಖೇನ ಜೈಲ್ ರೋಡ್, ದೈವಜ್ಞ ಸರ್ಕಲ್, ದುರ್ಗಿಗುಡಿ ಮೇನ್ ರೋಡ್, ಗೋಪಿ ವೃತ್ತ, ನೆಹರು ರೋಡ್, ಸಾವರ್ಕರ್ ಸರ್ಕಲ್ ಶಿವಪ್ಪ ನಾಯಕ ಸ್ಟ್ಯಾಚು ಗಾಂಧಿ ಬಜಾರ್ ಮುಖೇನ ರಾಮಣ್ಣ ಸಿಟಿ ಪಾರ್ಕ್ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದವರೆಗೆ ಸಂಚಲಿಸಲಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಸಂಚಲನವಿದ್ದು ನಂತರ ವಾಸವಿ ವಿದ್ಯಾಲಯ ಸ್ಕೂಲ್ ಆವರಣದಲ್ಲಿ ವೇದಿಕೆ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಜಿ ಹಾಗೂ ಭಜರಂಗದಳ ಪ್ರಾಂತ ಸಂಯೋಜಕರಾದ ಸುನಿಲ್ ಕೆ ಆರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಸುನಿಲ್ ಕೆ ಆರ್ ಅವರು ಮುಖ್ಯ ಭಾಷಣಕಾರರಾಗಿರುತ್ತಾರೆ. ಈ ಕಾರ್ಯಕ್ರಮವು ಸುಮಾರು 40 ನಿಮಿಷಗಳ ಕಾಲ ನಡೆಯುತ್ತದೆ.

ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಶುರುವಾಗಿ ಮಧ್ಯಾಹ್ನ 1:30 ಕ್ಕೆ ಮುಗಿಯಲಿದ್ದು ಭಜರಂಗದಳ ಮುಖಂಡರು ಎಲ್ಲರೂ ಕಾರ್ಯಕ್ರಮಕ್ಕೆ ಭಾಗವಹಿಸಲು ಮನವಿ ಮಾಡಿದ್ದಾರೆ.

Bajarandal Sena Samithi
Shivamogga District Police
ಭಜರಂಗದಳ

ಅಡಕೆ ಬೆಳೆ ವಿಸ್ತರಣೆ ಆತಂಕ ವ್ಯಕ್ತಪಡಿಸಿದ್ದೇ ತಪ್ಪಾ..?
05/01/2023

ಅಡಕೆ ಬೆಳೆ ವಿಸ್ತರಣೆ ಆತಂಕ ವ್ಯಕ್ತಪಡಿಸಿದ್ದೇ ತಪ್ಪಾ..?

30/12/2022

ಕರ್ನಾಟಕ‌ ದಕ್ಷಿಣ ಪ್ರಾಂತ್ಯ ಹಿಂದೂ ಜಾಗರಣ ವೇದಿಕೆ ತ್ರೈ ವಾರ್ಷಿಕ ಸಮಾವೇಶಶಿವಮೊಗ್ಗದ NES ಗ್ರೌಂಡ್ ಲ್ಲಿ ನಡೆದ ಸಮಾವೇಶಶಿವಮೊಗ್ಗದ.....

30/12/2022

ಜಗದೀಶ್ ಕಾರಂತ್ _Jagadish Karanth's speech

24/12/2022

ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಧೈರ್ಯಶೀಲ ಮಾನೆ ಪ್ರಧಾನಿಗೆ ದೂರು ವಿಚಾರ

ಕರ್ನಾಟಕದ ಎಲ್ಲಾ ಪಕ್ಷಗಳು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದೇವೆ

ನಾಡು ನುಡಿ ಗಡಿಯ ರಕ್ಷಣೆಗೆ ಎಲ್ಲರೂ ಬದ್ಧರಾಗಿದ್ದೇವೆ

ಪ್ರಧಾನಮಂತ್ರಿಗಾಗಲಿ ದೂರು ಕೊಡಲಿ ವಿಶ್ವಸಂಸ್ಥೆಗಾದರೂ ದೂರು ಕೊಡಲಿ ನಮ್ಮ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ

ಮಹಾರಾಷ್ಟ್ರದವರ ಗಡಿ ಉದ್ದಟತನಕ್ಕೆ ನಾವು ಉತ್ತರ ಕೊಡ್ತಾ ಕುಳಿತುಕೊಳ್ಳಲಾ? ನಾವು ಉದ್ಧಟತನ ಮಾಡಲ್ಲ

ವಿಧಾನಸಭಾ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನಾವು ಬದ್ಧ

ಜನಾರ್ದನ ರೆಡ್ಡಿ ಪಕ್ಷ ಘೋಷಣೆ ಮಾಡಲಿ ಆಗ ಉತ್ತರ ಕೊಡುತ್ತೇನೆ

ಈಗ ಮಾಡುತ್ತಾರೆ ಇಲ್ಲ ಎಂಬುದರ ಬಗ್ಗೆ ನಾನು ಉತ್ತರ ನೀಡಲ್ಲ

ಪಕ್ಷ ಮಾಡಿದರೆ ಏನು? ಮಾಡುತ್ತಿದ್ದರೇ ಏನು? ಈಗಲೇ ಊಹೆ ಮಾಡಲ್ಲ ಮಾಡಲ್ಲ

ಮದುವೆ ಮೇಲೆ ತೀರ್ಮಾನ ಆದ ಮೇಲೆ ಆ ಹುಡುಗಿನ ಈ ಹುಡುಗಿನ ಆಮೇಲೆ ಮಾತಾಡ್ತೀನಿ

ಸಂಪುಟ ವಿಸ್ತರಣೆ ಬಗ್ಗೆ ನಾನು ತೀರ್ಮಾನ ಮಾಡೋಕೆ ಆಗುತ್ತಾ ಅದು ಸಿಎಂ ತೀರ್ಮಾನಕ್ಕೆ ಬಿಟ್ಟಿದ್ದು

JDS / ತೀರ್ಥಹಳ್ಳಿ ಕ್ಷೇತ್ರಕ್ಕೆ ಯುವ ಕೃಷಿಕ ಯಡೂರು ರಾಜಾರಾಮ್ ಅಭ್ಯರ್ಥಿ
22/12/2022

JDS / ತೀರ್ಥಹಳ್ಳಿ ಕ್ಷೇತ್ರಕ್ಕೆ ಯುವ ಕೃಷಿಕ ಯಡೂರು ರಾಜಾರಾಮ್ ಅಭ್ಯರ್ಥಿ

22/12/2022
https://youtu.be/EAMNL3mlf7k
07/12/2022

https://youtu.be/EAMNL3mlf7k

ಅಡಕೆ ಸಸಿ ಮಡಿಗಳ ಮಧ್ಯೆ ಚೆಂಡು ಹೂ ಬೇಸಾಯ: ಮಲೆನಾಡಿನಲ್ಲಿ ಸಾಕಷ್ಟು ಯುವಕರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಬೆರಳ.....

06/12/2022

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ....

04/12/2022

Prashanth KS joined BJP today at Shivamogga BJP office.

ದೇಶದ್ರೋಹಿ ಸಂಘಟನೆಗಳ ಪರ ಬರಹ ( ನಿಷೇಧಿತ CFI) / ಶಿರಾಳಕೊಪ್ಪ ಪೊಲೀಸರಿಂದ ತನಿಖೆ ಚುರುಕು.
04/12/2022

ದೇಶದ್ರೋಹಿ ಸಂಘಟನೆಗಳ ಪರ ಬರಹ ( ನಿಷೇಧಿತ CFI) / ಶಿರಾಳಕೊಪ್ಪ ಪೊಲೀಸರಿಂದ ತನಿಖೆ ಚುರುಕು.

Ramesh hegde Vs BY Raghavendra.ರಾಘವೇಂದ್ರ, ಯಡಿಯೂರಪ್ಪ ವಿರುದ್ಧ‌ ದಾಖಲೆ ಮೂಲಕ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ: ಶಿವಮೊಗ್ಗ: ಶರಾವತ...
02/12/2022

Ramesh hegde Vs BY Raghavendra.

ರಾಘವೇಂದ್ರ, ಯಡಿಯೂರಪ್ಪ ವಿರುದ್ಧ‌ ದಾಖಲೆ ಮೂಲಕ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ:

ಶಿವಮೊಗ್ಗ: ಶರಾವತಿ ಸಂತ್ರಸ್ತರ ಭೂಮಿ ಹಕ್ಕಿನ ಹೋರಾಟ ದಿನಗಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದ್ದು ಕಾಂಗ್ರೆಸ್ - ಬಿಜೆಪಿ ಮುಖಂಡರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಅರವತ್ತು ದಶಕದಿಂದ ಏನೂ ಮಾಡಿರದ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದಿದ್ದ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಪಾಲಿಕೆ ಸದಸ್ಯ ರಮೇಶ್ ಕಡೆ ಮಾತನಾಡಿ ಸಂಸದ ಬಿ ವೈ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ಶರಾವತಿ ಸಂತ್ರಸ್ತರ ಹೋರಾಟ ಮಾಡಲು ಯಾವುದೇ ನೈತಿಕತೆ ಇಲ್ಲ ಹಾಗೂ ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಇರುತ್ತಾರೆ ಎಂದು ಹೇಳಿದ್ದಾರೆ.
ಇದನ್ನು ನಾನು ಖಂಡಿಸುತ್ತೇನೆ. ನಾನು ಈ ಸಂದರ್ಭದಲ್ಲಿ ಹೇಳುವುದು ಇಷ್ಟೇ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಸಂಸದ ರಾಘವೇಂದ್ರನಿಗೆ ಕಾಂಗ್ರೆಸ್ ಪಕ್ಷದ ಭೂ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಿಂದ ಈತನಕ ಕಂದಾಯ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಆದರೆ ಈ ಬಿಜೆಪಿ ಸರ್ಕಾರ ಭೂಕಬಳಿಕೆ ನಿಷೇಧ ಕಾಯ್ದೆ ಇಂಡೀಕರಣದಂತಹ ಕಾನೂನುಗಳನ್ನ ತಂದು ರೈತರ ಜೀವನ ಜೊತೆಗೆ ಚೆಲ್ಲಾಟ ಆಡ್ತಿದೆ. ರೈತರಿಗೆ ಮಂಜೂರಾಗಿದ್ದ ಭೂಮಿಯನ್ನ ಇಂಡೀಕರಣದ ಹೆಸರಲ್ಲಿ ಕಬಳಿಸಿರುವ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ.‌ ವಿವಿಧ ಹೆಸರುಗಳಲ್ಲಿ ಅರಣ್ಯ ಭೂಮಿಯನ್ನು ರೈತರಿಗೆ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಆದರೆ ಇದೇ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ರೈತರ ವಿರೋಧಿ ಕಾನೂನು ತಂದು ಜನರನ್ಮ ಒಕ್ಕಲೆಬ್ಬಿಸುವ ಕೆಲಸ ಮಾಡಿತು. ಈಗ ಅವರ ಮಗ ಸಂಸದ ಕಾಂಗ್ರೆಸ್ ಮೇಲೆ ವಿರೋಧ ವ್ಯಕ್ತಪಡಿಸುತ್ತಾರೆ. ಭೂ ಕಬಳಿಕೆ ನಿಷೇಧ ಕಾನೂನಿಂದ ರೈತರು ಜಮೀನು ಕಳೆದುಕೊಂಡು ಜೈಲಿಗೆ ಹೋಗುವ ಪರಿಸ್ಥಿತಿ ತಂದಿಟ್ಟಿದ್ದೇ ಯಡಿಯೂರಪ್ಪ. ಜನರಿಗೆ ಭೂಮಿ ಕೊಟ್ಟು ಜೀವನ ಕಾಪಾಡಿದ ಕಾಂಗ್ರೆಸ್ಗೆ ಬಿಜೆಪಿಯ ಪಾಠ ಬೇಕಿಲ್ಲ. ರಾಘವೇಂದ್ರ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ. ಈ ಹಿಂದೆ ಕಾಗೋಡು ತಿಮ್ಮಪ್ಪ ಅಧಿಕಾರದಲ್ಲಿದ್ದಾಗ ಶಿಕಾರಿಪುರ ಶಾಸಕರಾಗಿದ್ರು. ಅಂದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ಕೊಡುವಾಗ ಇದೇ ರಾಘವೇಂದ್ರ ಅವರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಸಭೆಗಳನ್ನು ಕೂಡ ಪಾಲ್ಗೊಂಡಿದ್ದರು ಈಗ ಕಾಂಗ್ರೆಸ್ಸಿಗೆ ನೈತಿಕತೆ ಇಲ್ಲ ಅಂತ ಹೇಳ್ತಾರೆ. ಯಡಿಯೂರಪ್ಪ ಮತ್ತೆ ರಾಘವೇಂದ್ರ , ಅಪ್ಪ ಮಗ ಸೇರ್ಕೊಂಡು ಸಿಎಂನಿಂದ ಸಂಸದರವರೆಗೆ ಎಲ್ಲಾ ಅಧಿಕಾರವನ್ನು ಅನುಭವಿಸಿದ್ದಾರೆ. ಸುಮಾರು 10 ವರ್ಷಗಳ ಕಾಲ ರಾಘವೇಂದ್ರ ಸಂಸದರಾಗಿದ್ದರು. ಈತನಕ ಶರಾವತಿ ಸಂತ್ರಸ್ತರ ಭೂಮಿ ಹಕ್ಕಿನ ಬಗ್ಗೆ ಮಾತನಾಡಿದ್ದೀರಾ, ಎಂದು ಹಿಗ್ಗಾ-ಮುಗ್ಗಾ ಜಾಡಿಸಿದರು

ರಾಘವೇಂದ್ರ, ಯಡಿಯೂರಪ್ಪ ವಿರುದ್ಧ‌ ದಾಖಲೆ ಮೂಲಕ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ: ಶಿವಮೊಗ್ಗ: ಶರಾವತಿ ಸಂತ್ರಸ್ತರ ಭೂಮಿ ಹಕ್ಕ.....

ಪ್ರಶಾಂತ್ ಕೆ.ಎಸ್ ಸ್ನೇಹ ಬಳಗ ಸಾಗರಕ್ಕೆ ಭವಿಷ್ಯದ ಬಿಜೆಪಿ ನಾಯಕ.Shimoga Bjp B Y Raghavendra   #ಪ್ರಶಾಂತ್ ಕೆ.ಎಸ್
30/11/2022

ಪ್ರಶಾಂತ್ ಕೆ.ಎಸ್ ಸ್ನೇಹ ಬಳಗ
ಸಾಗರಕ್ಕೆ ಭವಿಷ್ಯದ ಬಿಜೆಪಿ ನಾಯಕ.

Shimoga Bjp
B Y Raghavendra

#ಪ್ರಶಾಂತ್ ಕೆ.ಎಸ್

26/11/2022

ಶಿವಮೊಗ್ಗ

ಶರಾವತಿ ಹಿನ್ನೀರಿನಲ್ಲಿ ತಪ್ಪಿದ ಭಾರಿ ದುರಂತ.

ಚಾಲಕನ‌ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಇಳಿದ‌ ಖಾಸಗಿ ಬಸ್.

ಸಾಗರ ತಾಲೂಕು ಹೊಳೆ ಬಾಗಿಲಿನ ಹಿನ್ನೀರಿನಲ್ಲಿ ನಡೆದ ಘಟನೆ.

ಹೊಳೆ ಬಾಗಿಲು‌ ಕಡೆಯಿಂದ‌ ಸಿಗಂದೂರು ಕಡೆ ಹೊರಟಿದ್ದ ಬಸ್.

ಹಿನ್ನೀರು ಬಳಿ ಲಾಂಚ್ ಗಾಗಿ ಬಸ್ ನಿಲ್ಲಿಸಿಕೊಂಡು ಕಾಯುತ್ತಿದ್ದ ಬಸ್ ಚಾಲಕ.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಇಳಿದ ಬಸ್.

ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಜೀವ ಉಳಿಸಿಕೊಂಡ ಪ್ರಯಾಣಿಕರು.

ಬಳಿಕ ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಮೇಲಕ್ಕೆತ್ತಲಾಗಿದೆ.

ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

26/11/2022

ಸಿದ್ದರಾಮಯ್ಯ & ಕಾಂಗ್ರೆಸ್ ಧೂಳಿಪಟ: ಬಿಎಸ್ ಯಡಿಯೂರಪ್ಪ...

#ಶಿವಮೊಗ್ಗ #ಶರಾವತಿಸಂತ್ರಸ್ತರು #ಎಂಪಿಬಿವೈರಾಘವೇಂದ್ರ #ಶಿವಮೊಗ್ಗಸುದ್ದಿ

26/11/2022

ಏಕರೂಪ ನಾಗರಿಕ ಸಂಹಿತೆ ಜಾರಿಗೆ ರಾಜ್ಯ ಸರ್ಕಾರ ಚಿಂತನೆ: ಬಸವರಾಜ್ ಬೊಮ್ಮಾಯಿ.




ನಗೊಂದು ಹೆಣ್ಣು ಹುಡುಕಿ ಕೊಡಿ ಸಾಹೇಬ್ರೇ, ಶಿವಮೊಗ್ಗ SP ಗೆ ಪತ್ರ..! ಭದ್ರಾವತಿ / ಶಿವಮೊಗ್ಗ ಭದ್ರಾವತಿ ಹೊಸಮನೆ ಏರಿಯಾದಿಂದ ಪ್ರವೀಣದ ಓ ಎಸ್ ಬ...
26/11/2022

ನಗೊಂದು ಹೆಣ್ಣು ಹುಡುಕಿ ಕೊಡಿ ಸಾಹೇಬ್ರೇ, ಶಿವಮೊಗ್ಗ SP ಗೆ ಪತ್ರ..!

ಭದ್ರಾವತಿ / ಶಿವಮೊಗ್ಗ

ಭದ್ರಾವತಿ ಹೊಸಮನೆ ಏರಿಯಾದಿಂದ ಪ್ರವೀಣದ ಓ ಎಸ್ ಬಿನ್ ಓ ಸಣ್ಣರಂಗಪ್ಪ ಎಂಬಾತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿಕೆಗೆ ಟಪಾಲು ಮಾಡಿದ್ದು SP ಅಧೀನದಲ್ಲಿ ಯಾವುದಾದರೂ ಮದುವೆಯೋಗ್ಯ ಹೆಣ್ಣು ಇದ್ದರೆ ತಿಳಿಸಿ ಎಂದು ಮನವಿ ಮಾಡಿದ್ದಾನೆ. ಈ ಪತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಾಗಾದ್ರೆ ಪತ್ರದಲ್ಲಿ ಏನಿದೆ..?

ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ಕಡೆಯವರು ಆಂಧ್ರಪ್ರದೇಶ ರಾಜ್ಯ ಮಡಕಶಿರ ಟೌನ್ ಶ್ರೀ ಸತ್ಯ ಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ತೋಟಗಾರಿಕಾ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದು ನಿವೃತ್ತರಾಗಿರುತ್ತಾರೆ. ನನ್ನ ಅಣ್ಣ ಈಗಾಗಲೇ ಮದುವೆಯಾಗಿದ್ದಾನೆ ನಾನು ಹಿಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿರುತ್ತೇನೆ. ಸದ್ಯ ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿ ಹೋಗದ ಕಾರಣ ನಮ್ಮ ಯಾದವ ಗೊಲ್ಲ ಜಾತಿಯ ಯಾರಾದರೂ ವಧು ತಮ್ಮ ಅಧೀನದಲ್ಲಿ ಕಂಡು ಬಂದರೆ ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಪರಿಚಯ ವ್ಯಕ್ತಿಗಳು ಭದ್ರಾವತಿ ಪುರಸಭೆಯ ಸದಸ್ಯ ವಿ ಕದರೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರನಾಯಕ್, ಇವರಲ್ಲಿ ಕೇಳಬಹುದು.

ಈ ಅರ್ಜಿಯನ್ನ ಪೊಲೀಸರಿಂದ ಪರಿಶೀಲಿಸಿ ಹಾಗೂ ನನ್ನ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತೇನೆ,

ತಮ್ಮ ವಿಶ್ವಾಸಿ ಪ್ರವೀಣ್ ಓಎಸ್.

ಹೀಗೆ ಪತ್ರ ಬರೆದಿರುವ ಪ್ರವೀಣ್, ತಮಾಷೆಗಾಗಿ ಬರೆದಿದ್ದಾನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ಪೊಲೀಸರಿಗೆ ತಲೆ ನೋವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ಭದ್ರಾವತಿ ಪೊಲೀಸರು ಈ ಅರ್ಜಿಯನ್ನು ಅರ್ಜಿ ಬರೆದಾತವನ್ನು ಹುಡುಕುತ್ತಿದ್ದಾರೆ. ಆತ ಯಾವ ಕಾರಣಕ್ಕೆ ಪತ್ರ ಬರೆದಿದ್ದಾನೆ ಎಂಬುದು ಗೊತ್ತಿಲ್ಲ..! ಆದರೆ ಪೊಲೀಸ್ ಇಲಾಖೆಗೆ ಈ ತರಹದ ಪತ್ರ ಬರೆಯುವುದು ಸಮಂಜಸವಲ್ಲ ಅದು ನನ್ನ ಕರೆದು ವಿಚಾರಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಯಾದವ ಗೊಲ್ಲ ಸಮುದಾಯದಲ್ಲಿ ಹೆಣ್ಣುಗಳ ಕೊರತೆ ಇರುವುದು ನಿಜ. ಅದರಲ್ಲೂ ಚಿತ್ರದುರ್ಗ ಸ್ವಲ್ಪ ಮಟ್ಟಿಗೆ ಕಾಣಿಸುವ ಸಮುದಾಯ ಈ ತರಹದ ಒಂದು ಸಾಮಾಜಿಕ ಸಮಸ್ಯೆ ಎದುರಿಸುತ್ತಾ ಬಂದಿದೆ. ಪತ್ರ ಬರದಾತ ನಿಜವಾಗಿಯೂ ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾನೆಯೇ ಅಥವಾ ಯಾರಾದರೂ ತಮಾಷೆಗೆ ಬರೆದರೇ..? ಈ ಪತ್ರ ಹೇಗೆ ಹೊರಬಂತು..? ಎಂಬುದು ಕುತೂಹಲ ಮೂಡಿಸಿದೆ ಏನೇ ಇರಲಿ ಈ ಪತ್ರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

24/11/2022

ರಾಜ್ಯದಲ್ಲೇ ಬಹುದೊಡ್ಡ ಅಡಿಕೆ ಕಳುವು ಪ್ರಕರಣ, Shivamogga District Police ಬೇಧಿಸಿದ ರೀತಿ ರೋಚಕ..!
Karnataka State Police
Karnataka Police Diaries

ರಾಜಕೀಯ ಪರಂಪರೆ, ಸೇವಾ ಶ್ರದ್ಧೆ, ಯುವಕರ ಜೊತೆ ಸದಾ ಒಡನಾಟ, ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಆಳ ಅರಿವಿರುವ ಕೆಎಸ್ ಪ್ರಶಾಂತ್ ಬಿಜೆಪಿ ಸೇರು...
24/11/2022

ರಾಜಕೀಯ ಪರಂಪರೆ, ಸೇವಾ ಶ್ರದ್ಧೆ, ಯುವಕರ ಜೊತೆ ಸದಾ ಒಡನಾಟ, ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಆಳ ಅರಿವಿರುವ ಕೆಎಸ್ ಪ್ರಶಾಂತ್ ಬಿಜೆಪಿ ಸೇರುವುದು ಖಚಿತ. ಸಾಗರಕ್ಕೆ ಬಿಜೆಪಿಯಿಂದ ಹೊಸ ತಲೆಮಾರಿನ ಪ್ರತಿನಿಧಿ ಇವ್ರಾಗ್ತಾರ..?

ಪ್ರಶಾಂತ್ ಕೆ.ಎಸ್ ಸ್ನೇಹ ಬಳಗ
BJP Shivamogga
BJP Shivamogga It Cell - ಬಿ.ಜೆ.ಪಿ ಶಿವಮೊಗ್ಗ ನಗರ ಐಟಿ
Shimoga Bjp
Arjun Bangarappa
Harathalu Halappa
B Y Raghavendra
KS Eshwarappa

#ಎಂಪಿಬಿವೈರಾಘವೇಂದ್ರ #ಶಿವಮೊಗ್ಗ #ಶರಾವತಿಸಂತ್ರಸ್ತರು #ಶಿವಮೊಗ್ಗಸುದ್ದಿ

23/11/2022

ಪಾಲಿಕೆ ಜಾಗದಲ್ಲಿ ಗಣಪ ಪ್ರತ್ಯಕ್ಷ, ಪ್ರಾಚ್ಯವಸ್ತು ಇಲಾಖೆ ಪ್ರವೇಶದಿಂದ ಇನ್ನಷ್ಟು ಜಟಿಲ..?

ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವ ಉದ್ದೇಶದಿಂದ ಸ್ಥಳದಲ್ಲಿದ್ದ ಅರಳಿಮರ ತೆರವುಗೊಳಿಸಿ ಸ್ವಚ್ಚಗೊಳಿಸುವ ವೇಳೆ ಭೂಮಿಯ ಅಡಿಯಲ್ಲಿ ಪ್ರಾಚೀನ ಗಣೇಶ ವಿಗ್ರಹ ಪತ್ತೆಯಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲೇ ಪಕ್ಕದಲ್ಲಿ ಅಂತರಘಟ್ಟಮ್ಮ ದೇವಾಲಯವಿದ್ದು, ಇದಕ್ಕೆ ಸಂಬಂಧಿಸಿದ ನಾಗದೇವರ ವಿಗ್ರಹ ಕೂಡ ಇಲ್ಲಿ ಇತ್ತು ಎಂಬುದು ಸ್ಥಳೀಯ ಹಿರಿಯರ ಅಭಿಪ್ರಾಯವಾ ಗಿದೆ. ಇನ್ನು ಭೂಮಿಯ ಕೆಳಗೆ ಅಗೆದಷ್ಟು ಅಲ್ಲಿ ದೇವಾಲಯವಿತ್ತು ಎನ್ನುವುದಕ್ಕೆ ಇನ್ನಷ್ಟು ಪುರಾವೆಗಳು ಲಭ್ಯವಾಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದ್ದು, ವಾಣಿಜ್ಯ ಕಟ್ಟಡಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿ ಗಣಪತಿ ಹಾಗೂ ನಾಗದೇವರ ವಿಗ್ರಹ ದೊರಕಿದ್ದರಿಂದ ದೇವಾಲಯ ಕಟ್ಟಬೇಕುಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಯಾವಾಗ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಪ್ರವೇಶವಾಯ್ತೋ ಇರೋ ಜಾಗವೂ ಇಲಾಖೆಗೆ ಸುಪರ್ದಿಗೆ ಹೋಗುವ ಆತಂಕವೂ ಇದಿರಾಗಿದೆ.

ಸ್ಥಳಕ್ಕೆ ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಹಾಗೂ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಒತ್ತಾಯದ ಮೇರೆಗೆ ಜೆಸಿಬಿಯಿಂದ ತೆರವು ಕಾರ್ಯಾ ಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ವಿಗ್ರಹ ದೊರೆತಿರುವ ಸ್ಥಳದಲ್ಲಿ ಕಾಟನ್ ರಿಬ್ಬನ್‌ಹಾಕಿ ವಿಗ್ರಹವನ್ನು ಸಂರಕ್ಷಿಸಲಾಗಿದೆ.
ಭಗವಾಧ್ವಜ ನೆಟ್ಟು ಸ್ಥಳೀಯರು ಪೂಜೆ ಕೂಡ ಸಲ್ಲಿಸಿದರು. ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಲೇ ಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ಕಮಿಷನರ್ ಮಾಯಣ್ಣ ಗೌಡ ವಿಗ್ರಹ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಸೀಗೆಹಟ್ಟಿ ಭಾಗದಲ್ಲಿ ಪಾಲಿಕೆ ಜಾಗದಲ್ಲಿ ಮಳಿಗೆ ಹಾಗೂ ಜಿಮ್ ಮಾಡುವ ಉದ್ದೇಶದಿಂದ ಅನಧಿಕೃತ ಜಾಗ ತೆರವು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಭೂಮಿ ಅಗೆಯುವ ವೇಳೆ ಎರಡೂವರೆ ಅಡಿ ಎತ್ತರದ ಗಣೇಶನ ವಿಗ್ರಹ ಸಿಕ್ಕಿದೆ ಎಂದು ಅಲ್ಲಿನ ಜನರು ಮನವಿ ಮಾಡಿದ್ದಾರೆ. ಈ ಜಾಗಕ್ಕೆ ಬಂದು ನೋಡಿದಾಗ ಇಲ್ಲಿ ನಿಧಿ ಅಥವಾ ಬೇರೆ ವಸ್ತುಗಳು ಲಭ್ಯವಿಲ್ಲ. ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳೂ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ತಪಾಸಣೆ ಮಾಡಿ ಐತಿಹಾಸಿಕ ಹಿನ್ನೆಲೆ ಇದ್ದರೆ ವರದಿ ನೀಡುತ್ತಾರೆ. ವರದಿ ಜಿಲ್ಲಾಧಿಕಾರಿಗಳಿಗೆ ನೀಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ಈ ವಿಗ್ರಹದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ, ವೈಜ್ಞಾನಿಕ ವಿಶ್ಲೇಷಣೆ ಮಾಡಿಯೇ ನಿರ್ಧಾರಕ್ಕೆ ಬರಬೇಕು. ಸದ್ಯ ತೆರವು ಕಾರ್ಯಾಚಾರಣೆ ಸ್ಥಗಿತಗೊಳಿಸಲಾಗಿದೆ ಎಂದು ಮಾಯಣ್ಣ ಗೌಡ ಹೇಳಿದರು. ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳ ಪರಿಶೀಲನೆ ಇರೋದ್ರಿಂದ ಯಾರೂ ಕೂಡ ಪೂಜೆ ಪುನಸ್ಕಾರ ಮಾಡುವಂತಿಲ್ಲ. ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗುತ್ತದೆ, ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಕಾನೂನು ಚೌಕಟ್ಟು ಇದ್ದೇ ಇರುತ್ತೆ ಎಂದರು.

Address

Shivamogga

577202

Website

Alerts

Be the first to know and let us send you an email when Shivamogga politics posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share