ನಮ್ಮೂರು ಘಟಪ್ರಭಾ

  • Home
  • ನಮ್ಮೂರು ಘಟಪ್ರಭಾ

ನಮ್ಮೂರು ಘಟಪ್ರಭಾ Our Native Our Heaven Ghataprabha

ಗೋಕಾಕ ದುಂಡಾನಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ, ಸ್ಥಳದಲ್ಲೇ ಯುವಕ ಸಾವು..!ಗೋಕಾಕ : ತಾಲೂಕಿನ ದುಂಡಾನಟ್ಟಿ ಕ್ರಾಸ್ ಹತ್ತಿರ ಗೋಕಾಕ ರಿಂದ ಬೆಂಗಳೂ...
21/02/2024

ಗೋಕಾಕ ದುಂಡಾನಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ, ಸ್ಥಳದಲ್ಲೇ ಯುವಕ ಸಾವು..!

ಗೋಕಾಕ : ತಾಲೂಕಿನ ದುಂಡಾನಟ್ಟಿ ಕ್ರಾಸ್ ಹತ್ತಿರ ಗೋಕಾಕ ರಿಂದ ಬೆಂಗಳೂರಿಗೆ ಹೊರಟ್ಟಿದ್ದ SRS ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಬಸ್ ಅಯಾ ತಪ್ಪಿ ರಸ್ತೆ ಬದಿ ಉರುಳಿದ್ದು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ

*ಚಲಿಸುತ್ತಿರುವ ರೈಲಿನಿಂದ ಜಿಗಿದ ಯುವಕನ ಸ್ಥಿತಿ ಗಂಭೀರ!!!**********************************************ಘಟಪ್ರಭಾ : ಚಲಿಸುತ್ತಿರುವ ರ...
03/02/2024

*ಚಲಿಸುತ್ತಿರುವ ರೈಲಿನಿಂದ ಜಿಗಿದ ಯುವಕನ ಸ್ಥಿತಿ ಗಂಭೀರ!!!*
*********************************************
ಘಟಪ್ರಭಾ : ಚಲಿಸುತ್ತಿರುವ ರೈಲಿನಿಂದ ಜಿಗಿದ ಯುವಕ ಗಂಭೀರವಾಗಿ ಗಾಯಗೊಂಡ ಕಾರಣ ಘಟನೆ ಘಟಪ್ರಭಾ ರೈಲು ನಿಲ್ದಾಣದ ಮೊದಲನೆಯ ಗೆಟ್ ಹತ್ತಿರ ಸಂಭವಿಸಿದೆ.

ಹೌದು ಬೆಳಗಾವಿ ಇಂದ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಘಟಪ್ರಭಾ ಕ್ಕೆ ಹೊರಟಿದ್ದ ಪಾಮಲದಿನ್ನಿ ಗ್ರಾಮದ ಯುವಕ ವಿಠ್ಠಲ್ ಗುಜನಟ್ಟಿ (18) ಎಂಬ ಯುವಕ ಘಟಪ್ರಭಾ ರೈಲುನಿಲ್ದಾಣ ದಿಂದ ಮುಂದೆ ಇರುವ ರೈಲ್ ಗೇಟ್ ಹತ್ತಿರ ಹೋದಾಗ ಯುವಕ ರೈಲಿನಿಂದ ಜಿಗಿದಿದ್ದಾನೆಂದು ಹೇಳಲಾಗಿದೆ.

ರೈಲಿನಿಂದ ಜಿಗಿದ ಯುವಕನ ಪ್ರಜ್ಞಾ ಹೀನ ವಾಗಿದ್ದು, ಯುವಕನ ಸ್ಥಿತಿ ಗಂಭೀರ ವಾಗಿದೆ. ಸ್ಥಳೀಯರು ಹಾಗೂ ಕುಟುಂಬಸ್ಥರು ಕೊಡಲೇ 108 ಆಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ನಲ್ಲಿ ಈ ಎಂ ಟಿ ಪರಮಾನಂದ ಹಾಗೂ ವಿಠ್ಠಲ್ ಪ್ರಥಮ ಚಿಕೆತ್ಸೆ ನೀಡಿ ಗೋಕಾಕ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ .

ಈ ಕುರಿತು ರೈಲ್ವೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ವನ್ನು ದಾಖಲಿಸಿಕೊಂಡಿದ್ದಾರೆ.

ಜಾರಕಿಹೊಳಿ ಸಹೋದರರೊಂದಿಗೆ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು🙏
29/01/2024

ಜಾರಕಿಹೊಳಿ ಸಹೋದರರೊಂದಿಗೆ
ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು🙏

ನಮ್ಮ ಊರು ❤
11/01/2024

ನಮ್ಮ ಊರು ❤

ವಾಹನ ಚಾಲಕನ ತಪ್ಪಿದ ನಿಯಂತ್ರಣ ತಪ್ಪಿದ ಭಾರಿ ಅನಾಹುತಘಟಪ್ರಭಾದ ಮನಿಷ್ ಬಾರ ಸಮೀಪದಲ್ಲಿ ಕ್ರುಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿದ ಬಳಿಕ ರೋಡ್ ಬ...
08/01/2024

ವಾಹನ ಚಾಲಕನ ತಪ್ಪಿದ ನಿಯಂತ್ರಣ ತಪ್ಪಿದ ಭಾರಿ ಅನಾಹುತ

ಘಟಪ್ರಭಾದ ಮನಿಷ್ ಬಾರ ಸಮೀಪದಲ್ಲಿ ಕ್ರುಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿದ ಬಳಿಕ ರೋಡ್ ಬಿಟ್ಟು ಅಂಗಡಿಗೆ ನುಕಿದೆ. ಎರಡು ದ್ವಿ ಚಕ್ರ ವಾಹನಗಳು ಜಖಂಡಗೊಂಡಿದ್ದು ಕ್ರುಸರ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ! ಪ್ಲಾಸ್ಟಿಕ್ ಬ್ಯಾಗಿನಲ್ಲಿ ರಾತ್ರಿ ವೇಳೆ ಮಗು ಎಸೆದಿರುವ ಶಂಕೆ! ಸ್ಥಳಕ್ಕೆ ಘಟಪ್ರಭಾ ಪೋಲೀಸರ ಭೇ...
24/12/2023

ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ!

ಪ್ಲಾಸ್ಟಿಕ್ ಬ್ಯಾಗಿನಲ್ಲಿ ರಾತ್ರಿ ವೇಳೆ ಮಗು ಎಸೆದಿರುವ ಶಂಕೆ!

ಸ್ಥಳಕ್ಕೆ ಘಟಪ್ರಭಾ ಪೋಲೀಸರ ಭೇಟಿ ಪರಿಶೀಲನೆ!
*******************************************
ಘಟಪ್ರಭಾ: ಸ್ಥಳೀಯ ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ರವಿವಾರ ನಡೆದಿದೆ.

ಇಂದು ಮುಂಜಾನೆ ಚರಂಡಿಯಲ್ಲಿ ಯಾವುದೇ ವಸ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ಎಸೆದಿರುವ ಬಗ್ಗೆ ಗಮನಿಸಿದ ಜನರು ಪ್ಲಾಸ್ಟಿಕ್ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ನವಜಾತ ಗಂಡು ಶಿಶುವಿನ ಶವ ಸಿಕ್ಕಿದೆ.
ಮಗುವಿನ ಶವ ಸಿಕ್ಕಿದೆ ಎಂಬ ವಿಷಯ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಘಟಪ್ರಭಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಕೋಡ್; ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳನ್ನು ಹೊಂದಿರುವ ಘಟಪ್ರಭಾದಲ್ಲಿ ನವಜಾತ ಶಿಶುವಿನ ಶವ ಪತ್ತೆ ಯಾಗಿದ್ದು, ಇದು ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಗರ್ಭಪಾತ (illegal Abortion) (ಭ್ರೂಣ ಹತ್ಯೆಯ) ಕರಾಳ ದಂಧೆಯ ಭಾಗವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.



ಗೋಕಾಕ ಜಿಲ್ಲೆ ಆಗ್ರಹಿಸಿ ಬೃಹತ್ ಪ್ರತಿಭಟನೆ?!! ************************************************ಗೋಕಾಕ: ಆಡಳಿತ ಹಾಗೂ ಅಭಿವೃದ್ದಿ ದೃಷ...
13/12/2023

ಗೋಕಾಕ ಜಿಲ್ಲೆ ಆಗ್ರಹಿಸಿ ಬೃಹತ್ ಪ್ರತಿಭಟನೆ?!!
************************************************
ಗೋಕಾಕ: ಆಡಳಿತ ಹಾಗೂ ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವತಿರ್ಸುವಂತೆ ಆಗ್ರಹಿಸಿ ನಗರದಲ್ಲಿಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯು ಜರುಗಿತು.
ಬುಧವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನೆಯು ಅಪ್ಸರಾ ಕೂಟ, ತಂಬಾಕು ಕೂಟ, ಬಾಫನಾ ಚೌಕ, ಅಜಂತಾ ಕೂಟ, ಆನಂದ ಚಿತ್ರಮಂದಿರ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿಮರ್ಿಸಿ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಗೋಕಾಕನ್ನು ಕೂಡಲೇ ಜಿಲ್ಲಾ ಕೇಂದ್ರವನ್ನಾಗಿ ರಚಿಸಬೇಕು. ಈ ಹಿಂದಿನ ಮೂರು ಆಯೋಗಗಳು ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಆಗಿನ ಸಕರ್ಾರಗಳಿಗೆ ತಮ್ಮ ವರದಿಗಳನ್ನು ಸಲ್ಲಿಸಿವೆ. ಕಳೆದ 40 ವರ್ಷಗಳಿಂದ ಈ ಭಾಗದ ನಾಗರೀಕರು ಗೋಕಾಕ ಜಿಲ್ಲೆಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಗೋಕಾಕ ಜಿಲ್ಲಾ ರಚನೆಯು ಕೇವಲ ಕನಸಾಗಿಯೇ ಉಳಿದಿದೆ. ಆಡಳಿತಾತ್ಮಕ ದೃಷ್ಠಿಯಿಂದ ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ರಚಿಸಬೇಕು ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಗೋಕಾಕ ಜಿಲ್ಲಾ ರಚನೆಗೆ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಜಾರಕಿಹೊಳಿ ಸಹೋದರರಿಗೆ ಇಡೀ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನಾಗರೀಕರು ಶಕ್ತಿಯಾಗಿ ನಿಂತಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿ ಗೋಕಾಕ ಜಿಲ್ಲೆಯ ಕನಸನ್ನು ನನಸು ಮಾಡಲು ಕಾರಣಿಕರ್ತರಾಗಬೇಕೆಂದು ಪ್ರತಿಭಟನಾಕಾರರು ಜಾರಕಿಹೊಳಿ ಸಹೋದರರಲ್ಲಿ ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಅರಭಾವಿಮಠದ ಗುರುಬಸವಲಿಂಗ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಮನ್ನಿಕೇರಿಯ ಮಹಾಂತಸಿದ್ದೇಶ್ವರ ಮಹಾಸ್ವಾಮಿಗಳು, ಕಳ್ಳಿಗುದ್ದಿ-ಕಪರಟ್ಟಿ ಬಸವರಾಜ ಸ್ವಾಮಿ, ಯುವ ಧುರೀಣ ಸವರ್ೋತ್ತಮ ಜಾರಕಿಹೊಳಿ, ಮುಖಂಡ ಅಶೋಕ ಪೂಜಾರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ಮುಖಂಡರಾದ ಸಿದ್ದಲಿಂಗ ದಳವಾಯಿ, ರಾಜೇಂದ್ರ ಸಣ್ಣಕ್ಕಿ, ಅಶೋಕ ಪಾಟೀಲ, ಎಂ.ಆರ್.ಭೋವಿ, ಮಡ್ಡೇಪ್ಪ ತೋಳಿನವರ,ಟಿ.ಆರ್.ಕಾಗಲ, ಎಸ್.ವಿ.ದೇಮಶೆಟ್ಟಿ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸದಾಶಿವ ಗುದಗಗೋಳ, ಮಹಾದೇವ ಶೆಕ್ಕಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಎ.ಟಿ.ಗಿರಡ್ಡಿ, ಸತ್ತೇಪ್ಪ ಕರವಾಡೆ, ರಮೇಶ ಮಾದರ, ಕುತುಬುದ್ದೀನ ಗೋಕಾಕ, ಭೀಮಶಿ ಭರಮನ್ನವರ, ಮಹಾಂತೇಶ ಕಡಾಡಿ, ಲಖನ್ ಸಂಸೌದ್ದಿ, ದಸ್ತಗೀರ ಪೈಲವಾನ, ಗೋಕಾಕ-ಮೂಡಲಗಿ ತಾಲೂಕಿನ ಎಲ್ಲ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನ್ಯಾಯವಾದಿಗಳು ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ಕೋಟ ನಂ-1 ಗೋಕಾಕ ಜಿಲ್ಲೆಯಾಗಬೇಕೆಂಬುದು ಕಳೆದ 4 ದಶಕಗಳ ಕೂಗು. ಇದಕ್ಕಾಗಿ ಹಲವು ಮಹನೀಯರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು. ಇಲ್ಲಿಯತನಕ ನಾವುಗಳು ಶಾಂತ ರೀತಿಯಿಂದ ಹೋರಾಟಗಳನ್ನು ಮಾಡಿಕೊಂಡು ಸಕರ್ಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ನಮ್ಮ ಗೋಕಾಕ ಜಿಲ್ಲಾ ರಚನೆಗೆ ಜಾರಕಿಹೊಳಿ ಸಹೋದರರು ಎಲ್ಲ ರೀತಿಯಿಂದಲೂ ಸಹಕಾರ-ಬೆಂಬಲ ನೀಡುತ್ತಾ ನಮ್ಮ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲಾ ಹೋರಾಟ ಸಮಿತಿಯಿಂದ ಜಾರಕಿಹೊಳಿ ಸಹೋದರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಇನ್ನಾದರೂ ಈ ಅಧಿವೇಶನದಲ್ಲಿಯೇ ಗೋಕಾಕ ಜಿಲ್ಲೆಯನ್ನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಬೇಕು.
-ಮುರುಘರಾಜೇಂದ್ರ ಮಹಾಸ್ವಾಮಿಗಳು, ಶೂನ್ಯ ಸಂಪಾದನಾಮಠ ಗೋಕಾಕ
ಕೋಟ ನಂ-2 ಗೋಕಾಕ ಜಿಲ್ಲಾ ರಚನೆಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿದೆ. ಕಳೆದ ಹಲವಾರು ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಸತತ ಹೋರಾಟಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಮತ್ತು ಆಡಳಿತದ ದೃಷ್ಠಿಯಿಂದ ಗೋಕಾಕ ಜಿಲ್ಲೆ ಆಗಲೇ ಬೇಕು. ಇದಕ್ಕಾಗಿ ಎಂತಹ ಹೋರಾಟಗಳಿಗೂ ನಾವು ಸಿದ್ಧರಿದ್ದೇವೆ.
-ಸವರ್ೋತ್ತಮ ಜಾರಕಿಹೊಳಿ ಯುವ ಧುರೀಣರು ಗೋಕಾಕ
ಕೋಟ ನಂ- 3 ಜೆ.ಎಚ್.ಪಟೇಲ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದ್ದರು. ಆದರೆ ಕಾರಣಾಂತರಗಳಿಂದ ಗೋಕಾಕ ಜಿಲ್ಲೆಯನ್ನು ತಡೆ ಹಿಡಿದು ನಮಗೆ ಅನ್ಯಾಯ ಮಾಡಲಾಯಿತು. ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೇ ಗೋಕಾಕ ಜಿಲ್ಲೆ ಮಾಡುವುದು ದೊಡ್ಡ ಕೆಲಸವೇನಲ್ಲಾ. ಸಚಿವ ಸತೀಶ ಜಾರಕಿಹೊಳಿ ಮತ್ತು ಸಹೋದರರಿಗೆ ನಾವೆಲ್ಲಾ ಕೂಡಿಕೊಂಡು ಶಕ್ತಿ ನೀಡೋಣ. -ಅಶೋಕ ಪೂಜಾರಿ ಮುಖಂಡರು

ಫೋಟೋ ಕ್ಯಾಪ್ಸನ್ : 1 ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಗೋಕಾಕ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.
ಫೋಟೋ ಕ್ಯಾಪ್ಸನ್: 2 ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುರುಘರಾಜೇಂದ್ರ ಮಹಾಸ್ವಾಮಿಗಳ
ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಅವರು ಮನವಿ ಸ್ವೀಕರಿಸುತ್ತಿರುವುದು. ಚಾಲನಾ ಸಮಿತಿ ಪ್ರಮುಖರು, ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಘಟಪ್ರಭಾದಲ್ಲಿ ಕನ್ನಡ ಜ್ಯೋತಿಗೆ ಸ್ವಾಗತ **********************************************ಘಟಪ್ರಭಾ; ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ...
04/11/2023

ಘಟಪ್ರಭಾದಲ್ಲಿ ಕನ್ನಡ ಜ್ಯೋತಿಗೆ ಸ್ವಾಗತ
**********************************************
ಘಟಪ್ರಭಾ; ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ವರ್ಷಾಚರಣೆ ನಿಮಿತ್ತ ಬೆಳಗಾವಿ ಜಿಲ್ಲೆಯಾದ್ಯಂತ ಸಂಚಾರ ಮಾಡುತ್ತಿರುವ ಕನ್ನಡ ಜ್ಯೋತಿಗೆ ಘಟಪ್ರಭಾದ ಮೃತ್ಯುಂಜಯ ವೃತ್ತದಲ್ಲಿ ಹೃತ್ಪೂರ್ವಕ ಸ್ವಾಗತ ಕೋರಲಾಯಿತು ಗೋಕಾಕದ ಎನ್.ಎಸ್.ಎಫ್ ದಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಬೆಳಗ್ಗೆ ಚಾಲನೆ ನೀಡಿದರು.

ಘಟಪ್ರಭಾದಲ್ಲಿ ಹಿರಿಯ ಮುಖಂಡರಾದ ಡಿ ಎಮ್ ದಳವಾಯಿ ನೇತೃತ್ವದಲ್ಲಿ ಕನ್ನಡ ಜ್ಯೋತಿಗೆ ಹೃತ್ಪೂರ್ವಕ ಸ್ವಾಗತ ಕೋರಲಾಯಿತು..

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಮಹಾಜನ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಕನ್ನಡ ಸೇನೆ ಗೋಕಾಕ ತಾಲೂಕಿನ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಜಿಲ್ಲಾ ಉಪಾಧ್ಯಕ್ಷ ಕೆಂಪಯ್ಯ ಪುರಾಣಿಕ, ಬಸವರಾಜ ಹುಬ್ಬಳ್ಳಿ, ಜುಬೇರ್ ಡಾಂಗೆ, ಮತ್ತು ದಲಿತ ಸಂಘಟನೆಗಳ ಮುಖಂಡರು ಕನ್ನಡ ಪರ ಕಾರ್ಯಕರ್ತರು ಉಪಸ್ಥಿತರಿದ್ದರು.

ಘಟಪ್ರಭಾ; ಕನಾ೯ಟಕ ರಾಜ್ಯೋತ್ಸವ ಆಚರಣೆ***********************************************ಘಟಪ್ರಭಾ; ಕನ್ನಡ ರಕ್ಷಣಾ ವೇದಿಕೆ ಹಾಗೂ ವಿವಿಧ ಕ...
01/11/2023

ಘಟಪ್ರಭಾ; ಕನಾ೯ಟಕ ರಾಜ್ಯೋತ್ಸವ ಆಚರಣೆ
***********************************************
ಘಟಪ್ರಭಾ; ಕನ್ನಡ ರಕ್ಷಣಾ ವೇದಿಕೆ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಮೃತ್ಯುಂಜಯ ವೃತದಲ್ಲಿ ಘಟಪ್ರಭಾ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ಕನಾ೯ಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ,ಕರವೇ(ಸಂತೋಷ ಅರಳಿಕಟ್ಟಿ ಬಣದ) ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್ ಪಾಟೀಲ, ಸಿ.ಪಿ.ಐ ಬಸವರಾಜ ಕಾಮನಬೈಲ, ಹಿರಿಯರ ಮುಖಂಡರಾದ ಡಿಎಂ ದಳವಾಯಿ, ಮಲ್ಲು ಕೋಳಿ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸಲೀಂ ಕಬ್ಬೂರ, ವಿಠ್ಠಲ ಹುಕ್ಕೇರಿ, ಶೆಟ್ಟೆಪ್ಪ ಗಾಡಿ ವಡ್ಡರ, ರವಿ ನಾಂವಿ, ತೇಳಗೆರಿ, ಎಮ್,ಆಯ್ ಕೊತವಾಲ, ಮಾರುತಿ ಚೌಕಶಿ, ಶಶಿ ಚೌಕಶಿ, ವಿಠ್ಠಲ ನಿಪ್ಪಾಣಿ, ಭೀಮಶಿ ಪೂಜೇರಿ, ನಾರಾಯಣ ಜಡಕಿನ ಭೀಮಶಿ ಚೌಕಶಿ, ಬಸವರಾಜ ಹುಬ್ಬಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತಿ ದ್ದರು.

https://janaspandhan.com/jsn/161572
31/10/2023

https://janaspandhan.com/jsn/161572

ಜನಸ್ಪಂದನ ನ್ಯೂಸ್, ಘಟಪ್ರಭಾ(ಬೆಳಗಾವಿ) : ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ...

ಭಾವಪೂರ್ಣ ನಮನಗಳು.*ಹೃದಯಾಘಾತದಿಂದ ಅರಭಾವಿ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ*ಸಮೀಪದ ಪ್ರತಿಶ್ಠಿತ ಅರಭಾವಿಮಠದ ದುರದುಂಡೇಶ್ವರ ...
16/10/2023

ಭಾವಪೂರ್ಣ ನಮನಗಳು.

*ಹೃದಯಾಘಾತದಿಂದ ಅರಭಾವಿ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ*

ಸಮೀಪದ ಪ್ರತಿಶ್ಠಿತ ಅರಭಾವಿಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ(೬೪) ಲಿಂಗೈಕ್ಯರಾಗಿದ್ದಾರೆ.

ಮಠದಲ್ಲಿರುವಾಗಲೇ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಗೋಕಾಕನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಸೇವಕರು, ಚಿಕಿತ್ಸೆ ಫಲಕಾರಿಯಾಗದೆ ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿ ನಿಧನರಾಗಿದ್ದಾರೆ.

ಸ್ವಾಮೀಜಿ ನಿಧನದಿಂದ ಶೋಕಸಾಗರಲ್ಲಿ ಮುಳುಗಿದ ಅಪಾರ ಭಕ್ತ ಸಮೂಹ.

ಘಟಪ್ರಭಾ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಶಾಕಿಂಗ್ ನ್ಯೂಸ್
10/10/2023

ಶಾಕಿಂಗ್ ನ್ಯೂಸ್

ಬೀದಿನಾಯಿಗಳ ಹಾವಳಿ; ಕ್ರಮಕ್ಕೆ ಮುಂದಾದ ಪುರಸಭೆ***********************************************ಘಟಪ್ರಭಾ ಪಟ್ಟಣದಲ್ಲಿ ಬೀದಿ ನಾಯಿಗಳು ದ...
08/10/2023

ಬೀದಿನಾಯಿಗಳ ಹಾವಳಿ; ಕ್ರಮಕ್ಕೆ ಮುಂದಾದ ಪುರಸಭೆ
***********************************************
ಘಟಪ್ರಭಾ ಪಟ್ಟಣದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ ಮೂರು ಚಿಕ್ಕ ಮಕ್ಕಳಿಗೆ ತೀವ್ರವಾಗಿ ಗಾಯಗೊಳಿಸಿದ ಪರಿಣಾಮ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಹುಕ್ಕೇರಿಯಿಂದ ಬೀದಿನಾಯಿ ಹಿಡಿಯುವಲ್ಲಿ ಪರಿಣಿತ ಯುವಕರ ತಂಡವನ್ನು ಕರೆಯಿಸಿ ನಾಯಿಗಳನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ.

ರವಿವಾರ ಪಟ್ಟಣದ ವಿವಿಧ ಓಣಿಗಳಲ್ಲಿ ನಿದ್ದೆಗೆಡಿಸಿರುವ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯ ಈ ತಂಡ ಮಾಡುತ್ತಿದ್ದು, ಈವರೆಗೆ ಒಟ್ಟು 44 ನಾಯಿಗಳನ್ನು ಹಿಡಿದು ಬೇರೆಕಡೆ ಸ್ಥಳಾಂತರಿಸಿದ್ದಾರೆ.

ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ನಿಟ್ಟುಸಿರು ಬಿಡುವ ಜತೆಗೆ ಅಧಿಕಾರಿಗಳ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

30/09/2023

ಬಿಗ್ ಶಾಕಿಂಗ್ ನ್ಯೂಸ್

ಘಟಪ್ರಭಾದಲ್ಲಿನ ಉದ್ಯಮಿ ಹಾಗೂ ಗುತ್ತಿಗೆದಾರ ಜಯಶೀಲ ಶೆಟ್ಟಿ ಸೊಸೆ ನೇಣಿಗೆ ಶರಣು,

ಮನೀಷ ಶೆಟ್ಟಿ ಪತ್ನಿ ಶೀತಲ ಶೆಟ್ಟಿ ನೇಣಿಗೆ ಶರಣು. 1.5 ವರ್ಷದ ಹೆಣ್ಣು ಮಗು ಬಿಟ್ಟು ನೇಣಿಗೆ ಶರಣಾದ ಶೀತಲ ಶೆಟ್ಟಿ

ಆತ್ಮಹತ್ಯೆಗೆ ನೀಖರವಾದ ಕಾರಣ ತಿಳಿದು ಬಂದಿಲ್ಲ.ಘಟಪ್ರಭಾ ಫೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಘಟಪ್ರಭಾದ ಶಿವಾನುಭವ ಸಂಘದ ಸದಸ್ಯರಿಂದ ಮುಸ್ಲಿಂ ಸಮಾಜದ ಹಿರಿಯರಿಗೆ ಸತ್ಕಾರ**********************************************ಘಟಪ್ರಭಾ: ಈದ...
29/09/2023

ಘಟಪ್ರಭಾದ ಶಿವಾನುಭವ ಸಂಘದ ಸದಸ್ಯರಿಂದ ಮುಸ್ಲಿಂ ಸಮಾಜದ ಹಿರಿಯರಿಗೆ ಸತ್ಕಾರ
**********************************************
ಘಟಪ್ರಭಾ: ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಮುಂದಕ್ಕೆ ಹಾಕಿ ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಟ್ಟ ಘಟಪ್ರಭಾ ನಗರದ ಮುಸ್ಲಿಂ ಸಮಾಜದ ಹಿರಿಯರನ್ನು ಇಂದು ಇಲ್ಲಿನ ಶಿವಾನುಭವ ಸಂಘದ ಸದಸ್ಯರು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಡಾಂಗೆ, ಮಹಾದೇವ ಹಿರೇಮಠ ಮಹಾನಿಂಗಪ್ಪ ಹಳ್ಳೂರ ಸಚಿನ್ ಖಡಬಡಿ, ಮಹಾಂತೇಶ ಉದಗಟ್ಟಿಮಠ, ಬಸವರಾಜ ಗಂಜಿ, ಗುರು ನಿರ್ವಾನಿ, ಶಂಕರ ವಸ್ತ್ರದ ಶೌಕತಾಲಿ ಕಬ್ಬೂರ ಹಾಗೂ ಗಣೇಶ ಕಮೀಟಿ ಸದಸ್ಯರು ಹಾಜರಿದ್ದರು

ಆರೋಗ್ಯವನ್ನು ಲೇಕ್ಕಿಸದೆ ನಿರಂತರ ಕಾರ್ಯ ಮಾಡುವ ಪೌರ ಕಾರ್ಮಿಕರಿಗೆ ಗೌರವಿಸಿ ಎಂದು ಮುಖ್ಯಾಧಿಕಾರಿ ಎಮ್ ಎಸ್ ಪಾಟೀಲಘಟಪ್ರಭಾ: ಪಟ್ಟಣವನ್ನು ಸ್ವಚ...
24/09/2023

ಆರೋಗ್ಯವನ್ನು ಲೇಕ್ಕಿಸದೆ ನಿರಂತರ ಕಾರ್ಯ ಮಾಡುವ ಪೌರ ಕಾರ್ಮಿಕರಿಗೆ ಗೌರವಿಸಿ ಎಂದು ಮುಖ್ಯಾಧಿಕಾರಿ ಎಮ್ ಎಸ್ ಪಾಟೀಲ

ಘಟಪ್ರಭಾ: ಪಟ್ಟಣವನ್ನು ಸ್ವಚ್ಛವಾಗಿಟ್ಟು ಜನರ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯವನ್ನು ಪೌರ ಕಾರ್ಮಿಕರು ಮಾಡುತ್ತಿದ್ದು, ಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಘಟಪ್ರಭಾ ಪುರಸಭೆ ಕಾರ್ಯಾಲಯದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಪ್ರತಿ ನಿತ್ಯ ಸರಿಯಾದ ಸಮಯಕ್ಕೆ ಪಟ್ಟಣವನ್ನು ಸ್ವಚ್ಛಗೊಳಿಸಲು ತಮ್ಮ ಆರೋಗ್ಯವನ್ನು ಲೇಕ್ಕಿಸದೆ ನಿರಂತರ ಕಾರ್ಯ ಮಾಡುವ ಪೌರ ಕಾರ್ಮಿಕರಿಗೆ ನಾವು ಗೌರವಿಸಬೇಕು ಎಂದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಕ್ರೀಡಾಕೋಟದಲ್ಲಿ ವಿಜೇತರಾದ ಪೌರ ಕಾರ್ಮಿಕಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಮಾರುತಿ ಹುಕ್ಕೇರಿ, ಪುರಸಭೆಯ ಸಿಂಬ್ಬಂದಿ ವರ್ಗದವರು ಇದ್ದರು.

ಘಟಪ್ರಭಾದ ಅನುರಾಧಾ ಬಾರ್ ಬಳಿ‌ ಯುವಕನ‌ ಮರ್ಡರ್
24/09/2023

ಘಟಪ್ರಭಾದ ಅನುರಾಧಾ ಬಾರ್ ಬಳಿ‌ ಯುವಕನ‌ ಮರ್ಡರ್

ಬೆಳಗಾವಿ- ನಿನ್ನೆ ಶನಿವಾರ ಬಾರ್ ಗೆ ರಜೆ ಇದ್ದು ರಾತ್ರಿ ಊಟ ಮಾಡಿ ಮಲಗುವಾಗ ಜಗಳಾಡಿಕೊಂಡ ಬಾರ್ ಕಾರ್ಮಿಕರು ಓರ್ವನ ಕತ್ತು ಸೀಳಿ ಮರ್ಡರ...

ಘಟಪ್ರಭಾ: ಕುಡಿಯುವ ನೀರಿನ ಮುಖ್ಯ ಪೈಪ್ ಲೈನ್ ಒಡೆದ ಕಾರಣ ಇನ್ನೂ ಐದು ದಿನಗಳವರೆಗೆ ನೀರು ಬರುವುದಿಲ್ಲ.ಕಳೆದ 10 ದಿನಗಳಿಂದ ಕುಡಿಯುವ ನೀರು ಇಲ್ಲ...
04/09/2023

ಘಟಪ್ರಭಾ: ಕುಡಿಯುವ ನೀರಿನ ಮುಖ್ಯ ಪೈಪ್ ಲೈನ್ ಒಡೆದ ಕಾರಣ ಇನ್ನೂ ಐದು ದಿನಗಳವರೆಗೆ ನೀರು ಬರುವುದಿಲ್ಲ.

ಕಳೆದ 10 ದಿನಗಳಿಂದ ಕುಡಿಯುವ ನೀರು ಇಲ್ಲದೇ ಪರದಾಡುತ್ತಿರುವ ಘಟಪ್ರಭಾ ಜನರು ಇನ್ನೂ 5 ದಿನಗಳವರೆಗೆ ಕಾಯಬೇಕು ಎಂದು ಪುರಸಭೆ ವತಿಯಿಂದ ಮನವಿ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಮುಖ್ಯ ಪೈಪ್ ಲೈನ್ ರೀಪೆರಿಗೆ ಇನ್ನೂ ಎಷ್ಟು ಸಮಯ ಬೇಕು ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೋಗಿಗಳಿಗೆ ಹಾಲು, ಹಣ್ಣುಹಂಪಲು ವಿತರಣೆ!!**********************************************ಘಟಪ್ರಭಾ; ಸ್ಥಳೀಯ ಜೆ.ಜೆ. ಸಹಕಾರಿ ಆಸ್ಪತ್ರೆಯ...
21/08/2023

ರೋಗಿಗಳಿಗೆ ಹಾಲು, ಹಣ್ಣುಹಂಪಲು ವಿತರಣೆ!!
**********************************************
ಘಟಪ್ರಭಾ; ಸ್ಥಳೀಯ ಜೆ.ಜೆ. ಸಹಕಾರಿ ಆಸ್ಪತ್ರೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ರೋಗಿಗಳಿಗೆ ಹಾಲು, ಹಣ್ಣುಹಂಪಲು ವಿತರಿಸುವ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಯಿತು.

ಘಟಪ್ರಭಾದ ಹೊಸಮಠದ ಶ್ರೀ ವಿರುಪಾಕ್ಷ ಸ್ವಾಮಿಗಳು, ಬೆಳವಿ ಶ್ರೀಗಳು, ಪ್ರಿಯಾಂಕಾ ಸತೀಶ ಜಾರಕಿಹೊಳಿ, ಆಸ್ಪತ್ರೆಯ ಸಹಕಾರಿ ಸಂಘದ ಪದಾಧಿಕಾರಿಗಳು, ಮುಖ್ಯ ವೈದ್ಯರಾದ ಕೆ.ಬಿಎಚ್.ಪಾಟೀಲ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಘಟಪ್ರಭಾ:ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದದಂತೆ ಘಟಪ್ರಭಾ ಪೋಲಿಸರು ಆರೋಪಿಯೊಬ್ಬನನ್ನು ಬಂಧಿಸ...
19/08/2023

ಘಟಪ್ರಭಾ:ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದದಂತೆ ಘಟಪ್ರಭಾ ಪೋಲಿಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ವಿವಿಧ ಪ್ರಕರಣಗಳಲ್ಲಿ ಕಳ್ಳತನ ಮಾಡಿದ 07 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಜಲಾಶಯ)ಇಂದಿನ (19/08/2023) ನೀರಿನ ಮಟ್ಟದ ವಿವರಸಂಗ್ರಹಣಾ ಸಾಮರ್ಥ್ಯ- 51.00 tmcಇಂದಿನ ಸಂಗ್ರಹ- 43.63 tmcಇಂ...
19/08/2023

ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಜಲಾಶಯ)
ಇಂದಿನ (19/08/2023) ನೀರಿನ ಮಟ್ಟದ ವಿವರ

ಸಂಗ್ರಹಣಾ ಸಾಮರ್ಥ್ಯ- 51.00 tmc

ಇಂದಿನ ಸಂಗ್ರಹ- 43.63 tmc

ಇಂದಿನ ಒಳ ಹರಿವು- 2776 ಕ್ಯೂಸೆಕ್

ಇಂದಿನ‌ ಹೊರಹರಿವು - 3946

ಜೆ.ಜಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಬಡಕುಂದ್ರಿ ಹಾಗೂ ಉಪಾಧ್ಯಕ್ಷರಾಗಿ ನೇರ್ಲಿ ಅವಿರೋಧ ಆಯ್ಕೆ! ************************************...
17/08/2023

ಜೆ.ಜಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಬಡಕುಂದ್ರಿ ಹಾಗೂ ಉಪಾಧ್ಯಕ್ಷರಾಗಿ ನೇರ್ಲಿ ಅವಿರೋಧ ಆಯ್ಕೆ!
*************************************************
ಘಟಪ್ರಭಾ: ಸ್ಥಳೀಯ ಪ್ರತಿಷ್ಠಿತ ಶ್ರೀ ಜಗದ್ಗುರು ಗುರುಸಿದ್ದೇಶ್ವರ (ಜೆಜಿ) ಸಹಕಾರಿ ಆಸ್ಪತ್ರೆ ಸೊಸೈಟಿಯ ಅಧ್ಯಕ್ಷರಾಗಿ ಅಪ್ಪಯ್ಯಪ್ಪ ಶಿವಪ್ಪ ಬಡಕುಂದ್ರಿ ಹಾಗೂ ಉಪಾಧ್ಯಕ್ಷರಾಗಿ ಅನೀಲ ಈರಗೌಡ ನೇರ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಚುನಾವಣೆಯಲ್ಲಿ ಸಂಸ್ಥೆಗೆ ಆಯ್ಕೆಯಾದ ಆಡಳಿತ ಮಂಡಳಿಗೆ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಜರುಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಬೆಳಗಾವಿ ಸಹಕಾರಿ ಸಂಘಗಳ ಉಪ ನಿಭಂದಕರಾದ ಮನಿ ಎಂ.ಎನ್ ಘೋಷಿಸಿದರು.

ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಆಸ್ಪತ್ರೆಯ ಮುಖ್ಯಾಧಿಕಾರಿ ಬಿ.ಕೆ.ಎಚ್ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಘಟಪ್ರಭಾದಲ್ಲಿ ವಿವಿಧೆಡೆ ಧ್ವಜಾರೋಹಣ! **********************************************ಘಟಪ್ರಭಾ: 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಘ...
15/08/2023

ಘಟಪ್ರಭಾದಲ್ಲಿ ವಿವಿಧೆಡೆ ಧ್ವಜಾರೋಹಣ!
**********************************************
ಘಟಪ್ರಭಾ: 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಘಟಪ್ರಭಾ ಪಟ್ಟಣದ ವಿವಿಧೆಡೆ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಸ್ಥಳೀಯ ಪುರಸಭೆಯ ಗಾಂಧಿ ಚೌಕದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ನಿವೃತ ಚಿತ್ರಕಲಾ ಶಿಕ್ಷಕರಾದ ಗುಂಡುಪಂತ ಅಪ್ಪಣ್ಣ ಪತ್ತಾರ ನೆರವೇರಿಸಿದರು.

ಪುರಸಭೆಯಿಂದ ವಿವಿಧಡೆ ನೆರವೇರಿಸಲಾಗುವ ಧ್ವಜಾರೋಹಣವನ್ನು ಪುರಸಭೆ ಕಾರ್ಯಾಲಯ ಆವರಣದಲ್ಲಿ ಮುಖ್ಯಾಧಿಕಾರಿಗಳಾದ ಶ್ರೀಮತಿ ಎಮ್.ಎಸ್.ಪಾಟಿಲ, ಪುರಸಭೆ ಕಛೇರಿಯಲ್ಲಿ ಶೇಖರ ಕುಲಗೂಡ, ತರಕಾರಿ ಮಾರುಕಟ್ಟೆಯಲ್ಲಿ ಹಿರಿಯರಾದ ಶಿವಬಸು ಮಂಟೂರ, ಧುಪದಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜಶೇಖರ ರಜಪೂತ ಹಾಗೂ ಬಾಹುಬಲಿ ಕಡಹಟ್ಟಿ ಧ್ವಜಾರೋಹಣವನ್ನು ನೆರವೇರಿಸಿದರು. ಮಲ್ಲಾಪೂರ ಪಿ.ಜಿ ಅರ್ಬನ ಬ್ಯಾಂಕಿನ ಧ್ವಜಾರೋಹಣವನ್ನು ಅಧ್ಯಕ್ಷರಾದ ರಮೇಶ ತುಕ್ಕಾನಟ್ಟಿ ನೆರವೇರಿಸಿದರು.

ಪಂಚಪ್ರಾಣ ಶಪಥ ಭೋದನೆ: 76 ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ನನ್ನ ಮಣ್ಣು ನನ್ನ ದೇಶ, ಶಿಲಾಫಲಕ ಸಮರ್ಪಣೆ, ಪಂಚಪ್ರಾಣ ಶಪಥ, ವಸುಧಾ ವಂದನ, ವೀರರಿಗೆ ಗೌರವ ಸಮರ್ಪಣೆ, ರಾಷ್ಟ್ರಧಜ ವಂದನೆ, ಹರ್‌ಫರ್ ತಿರಂಗಾ ಅಭಿಯಾನ ದಂತಹ ಕಾರ್ಯಕ್ರಮಗಳನ್ನು ಅಚುಕಟ್ಟಾಗಿ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಜರುಗಿತು. ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ ಮಾಜಿ ಸದಸ್ಯರುಗಳಾದ ಪ್ರವೀನ ಮಠಗಾರ, ಈರಣ್ಣಾ ಕಲಕುಟಗಿ, ಸಲೀಮ ಕಬ್ಬೂರ, ಮಲ್ಲಪ್ಪ ಕೋಳಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಈಶ್ವರ ಮಠಗಾರ, ಮಾಜಿ ಗ್ರಾ.ಪಂ ಸದಸ್ಯ ರಾಜಶೇಖರ ರಜಪೂತ, ಬಾಹುಬಲಿ ಕಟ್ಟಹಟ್ಟಿ, ಮಹೇಶ ಪಾಟೀಲ, ವಿನೇಯ ಜಾಧವ, ಅರ್ಜುನ ಗಂಡವಗೋಳ, ಕೆಂಪಣ್ಣ ಚೌಕಶಿ, ಸುರೇಶ ಪೂಜೇರಿ, ಸುನೀಲ ನಾಯಿಕ, ಪರಶುರಾಮ ಗೋಕಾಕ, ಅಪ್ಪಾಸಾಬ ಮುಲ್ಲಾ, ಕಾಡಪ್ಪ ಕರೋಶಿ, ಪುರಸಭೆ ಸಿಬ್ಬಂದಿಗಳು ಇದ್ದರು.

09/08/2023

ಇಂದು ಘಟಪ್ರಭಾದಲ್ಲಿ ಕಂಡು ಬಂದ ದೃಶ್ಯ...

*ಪುರಸಭೆ ಸ್ಥಳಾಂತರಿಸದಿದ್ದರೆ ಕರವೇಯಿಂದ ಆಮರಣ ಉಪವಾಸ ಎಚ್ಚರಿಕೆ************************************************ಘಟಪ್ರಭಾ: ಘಟಪ್ರಭಾ ಪ...
08/08/2023

*ಪುರಸಭೆ ಸ್ಥಳಾಂತರಿಸದಿದ್ದರೆ ಕರವೇಯಿಂದ ಆಮರಣ ಉಪವಾಸ ಎಚ್ಚರಿಕೆ*
***********************************************
ಘಟಪ್ರಭಾ: ಘಟಪ್ರಭಾ ಪುರಸಭೆ ಸ್ಥಳಾಂತರಕ್ಕಾಗಿ ಕರವೇ ಕಾರ್ಯಕರ್ತರು ಘಟಪ್ರಭಾದ ಹೊಸ ಪುರಸಭೆ ಕಟ್ಟಡ ಮುಂದೆ ಪ್ರತಿಭಟಿಸಿದರು.

ಘಟಪ್ರಭಾದ ಪಟ್ಟಣದ ಮದ್ಯದಲ್ಲಿರುವ ಹಳೆ ಕಟ್ಟಡ ಆಗಲೋ ಈಗಲೊ ಕಳಚಿ ಬೀಳುವ ಪರಿಸ್ಥಿತಿಯಲ್ಲಿದ್ದು ಯಾವಾಗ ಅನಾಹುತ ಆಗಬಹುದೆಂಬ ಭಯದಲ್ಲಿ ಪುರಸಭೆಗೆ ಸಾರ್ವಜನಿಕರು ಭಯದಲ್ಲಿ ಬಂದು ಹೋಗುತಿದ್ದಾರೆ.

5-6 ವರ್ಷಗಳ ಹಿಂದೆ ನಿರ್ಮಾಣವಾದ ಹೊಸ ಕಟ್ಟಡದ ಸುತ್ತಮುತ್ತ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ,ಮಹಿಳೆಯರಿಗೂ ಶೌಚಾಲಯದಗಳಿದ್ದು ಕುಳಿತುಕೊಳ್ಳಲಿಕ್ಕೆ ಗಾರ್ಡನ ಇದ್ದರೂ ಕೂಡ ಕೆಲವು ಹಿತಾಬದ್ದ ಶಕ್ತಿಗಳ ಕೈವಾಡ ಹಾಗೂ ಒತ್ತಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುತ್ತಿಲ್ಲವೆಂದು ಕರವೇ ಸದಸ್ಯರು ಆರೋಪಿಸುತಿದ್ದಾರೆ.

ಇನ್ನು ಕರವೇ ಅದ್ಯಕ್ಷ ರೆಹಮಾನ ಮೊಕಾಶಿ ಮಾತನಾಡಿ ಘಟಪ್ರಭಾ ಪುರಸಭೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ದುಪಧಾಳ ಸೇರಿ ಸುತ್ತಮುತ್ತಲಿನ ಜನರಿಗೆ ಅನೂಕೂಲವಾಗುತ್ತದೆ ಅದಕ್ಕಾಗಿ 15 ದಿನಗಳ ಒಳಗೆ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸದಿದ್ದರೆ.ಆಮರಣ ಉಪವಾಸ ಕುಳಿತುಕೊಳ್ಳುವದಾಗಿ ಎಚ್ಚರಿಸಿ ಮುಖ್ಯಾಧಿಕಾರಿ ಮಲ್ಲವ್ವಾ ಪಾಟೀಲ ಇವರಿಗೆ ಮನವಿ ನೀಡಿದರು,

ಇನ್ನು ಮನವಿ ಸ್ವಿಕರಿಸಿ ಮುಖ್ಯಾಧಿಕಾರಿಯವರು ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಈ‌ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ರವಿ ನಾವಿ, ರಾಜು ವಗ್ಗನವರ,ಇಸ್ಮಾಯಿಲ್ ಬಳಿಗಾರ,ಸುಭಾಸ ಮೇತ್ರಿ,ಯಮನಪ್ಪಾ ಗಾಡಿವಡ್ಡರ, ರಫೀಕ ಜಗದಾಳ, ಎಮ್,ಎಮ್,ಬಳಿಗಾರ,ರಾಘು ಗಾಡಿವಡ್ಡರ, ದರ್ಶನ ದರ್ಮಟ್ಟಿ, ಪಾರುಖ ಬಿಜಗಾರ ,ಸಾತಪ್ಪಾ ಮುತ್ನಾಳ ಪ್ರಶಾಂತ ಮುತ್ತೆಪ್ಪಗೋಳ ಸೇರಿಂದಂತೆ ಇನ್ನುಳಿದ ಕಾರ್ಯಕರ್ತರು ಹಾಗೂ ಘಟಪ್ರಭಾದ ನಾಗರಿಕರು ಉಪಸ್ಥಿತರಿದ್ದರು.

ಘಟಪ್ರಭಾದ ಪ್ರತಿಷ್ಠಿತ ಸಹಕಾರಿ  ಜೆ ಜಿ ಆಸ್ಪತ್ರೆಯ ಚುನಾವಣೆಯಲ್ಲಿ ಹಳೆಯ ಪೆನಲ್ಗೆ ರೋಚಕ ಜಯ ******************************************...
07/08/2023

ಘಟಪ್ರಭಾದ ಪ್ರತಿಷ್ಠಿತ ಸಹಕಾರಿ ಜೆ ಜಿ ಆಸ್ಪತ್ರೆಯ ಚುನಾವಣೆಯಲ್ಲಿ ಹಳೆಯ ಪೆನಲ್ಗೆ ರೋಚಕ ಜಯ
*******************************************
ಘಟಪ್ರಭಾದ:ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೊಸಾಯಟಿ ನಿ.ಘಟಪ್ರಭಾ ಇದರ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಘಟಪ್ರಭಾದ ಹಳೆಯ ಓಂ ಸಹಕಾರ ಪೆನಲ್ಗೆ ವತಿಯಿಂದ ಸ್ಪರ್ಧಿಸಿದ್ದ ಹಿರಿಯರಾದ ಅಪ್ಪಯ್ಯಪ್ಪ ಬಡಕುಂದ್ರಿ, ಚಂದ್ರಶೇಖರ್ ಕಾಡದವರ. ಮಲ್ಲಿಕಾರ್ಜುನ್ ಪಾಟೀಲ್, ಅಶಾದೇವಿ ಕತ್ತಿ, ಇವರುಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನ.
07/08/2023

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನ.

06/08/2023

ಅಮೃತ ಭಾರತ ರೈಲ್ವೆ ನಿಲ್ದಾಣ ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಘಟಪ್ರಭಾ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ವರ್ಚುವಲ್ ಶಂಕು ಸ್ಥಾಪನೆ

ಘಟಪ್ರಭಾದ ಶ್ರೀ ವಿಜಯ ಮಹಾಂತೇಶ್ವರ ಕಾಂಪ್ಲೆಕ್ಸ್ ನಲ್ಲಿರುವ ಲವಕುಶ್ ಡಿಜಿಟಲ್ ಕೇಂದ್ರ(ಗ್ರಾಮ ಒನ್ ಸೇವಾ ಕೇಂದ್ರ) ದಲ್ಲಿ ನಿನ್ನೆ ರಾತ್ರಿ ಶಾರ್...
04/08/2023

ಘಟಪ್ರಭಾದ ಶ್ರೀ ವಿಜಯ ಮಹಾಂತೇಶ್ವರ ಕಾಂಪ್ಲೆಕ್ಸ್ ನಲ್ಲಿರುವ ಲವಕುಶ್ ಡಿಜಿಟಲ್ ಕೇಂದ್ರ(ಗ್ರಾಮ ಒನ್ ಸೇವಾ ಕೇಂದ್ರ) ದಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಕಂಪ್ಯುಟರ್ ಸೇರಿ ಇತರೆ ಆಸ್ತಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ.

Address


591306

Website

Alerts

Be the first to know and let us send you an email when ನಮ್ಮೂರು ಘಟಪ್ರಭಾ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share