A.J Ponnodi

A.J Ponnodi Giving a good message to our society

01/05/2018

Ranganathittu

30/04/2018

ರಂಗನತಿಟ್ಟುವಿನಲ್ಲಿ ನಿನ್ನೆ

30/04/2018
26/04/2018

ಗೂಂದಲಕ್ಕೆ ಪರಿಹಾರ

24/04/2018

Red Craft Studiodalli

19/04/2018

ಗೌರವಿಸಿ ಸಮಾಜದಲ್ಲಿ ಬಹಳಷ್ಟು ಒಳ್ಳೆಯವರಿದ್ದಾರೆ.

19/04/2018

ಅಂಗವಿಕಲರನ್ನು ಕೂಡ ಮುಖ್ಯವಾಹಿನಿಗೆ ಬರಲು ಬಿಡಿ ದಯವಿಟ್ಟು.

09/04/2018

ಎಚ್ಚರ...

15/03/2018

ಮಿತ್ತಬೈಲ್ ಜುಮ್ಮಾ ಮಸ್ಜಿದ್.

15/03/2018
News Kannada

ಡೆಲೀಟ್ ಆದ ಪೋಟೊ ಮರಳಿ ಪಡೆಯುವ ವಿಧಾನ.

►► ಪರ್ಮನೆಂಟ್ ಡಿಲೀಟೆಡ್ ಪೋಟೊ ಮರಳಿ ಪಡೆಯಬೇಕಾ? ತಪ್ಪದೇ ಈ ವೀಡಿಯೋ ವೀಕ್ಷಿಸಿ..
http://www.newskannada.in/breaking-latest/delted-photos/

14/03/2018
ಅಮ್ಮು - Ammu

ನಮ್ಮ ಅಮ್ಮು ಸಿನೇಮಾದ ಪೇಜ್

Ammu - The movie is about a young girl and her abilities to put up with a life taking cancer in the name of Medulloblastoma.

07/03/2018
ನೀವು ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ! ಹಾಗಾದರೆ ಈ ವೀಡಿಯೋ ವೀಕ್ಷಿಸಿ..

*►► ನೀವು ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ! ಹಾಗಾದರೆ ಈ 🎥ವೀಡಿಯೋ ವೀಕ್ಷಿಸಿ..*

*News Kannada*
https://m.facebook.com/story.php?story_fbid=1547838995284939&id=783227285079451

Posted BY March 7, 2018 Breaking Latest 3 ನೀವು ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ! ಹಾಗಾದರೆ ಈ ವೀಡಿಯೋ ವೀಕ್ಷಿಸಿ.. Share this on WhatsApp Tweet Share 0 Reddit +1 Pocket LinkedIn 0 ನ್ಯೂಸ್ ಕನ....

24/02/2018
ಯೋಗೀಶ್ ಮಾಸ್ಟರ್ ಬರೆಯುತ್ತಾರೆ.

ಜಬ್ಬಾರ್ ಎಂಬೋ ಜಬರ್ದಸ್ತ್ ಶಕ್ತಿ ಮತ್ತು ಸ್ಫೂರ್ತಿ ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಚಿತ್ರಗಳಾದ ಕಾರಣದಿಂದ ಕಲಾವಿದರಿಗೂ ಮತ್ತು ತಂತ್ರಜ್ಞರಿಗೂ ಸ್ವಲ್ಪ ಕೆಲಸ ಹೆಚ್ಚೇ. ಅದರಲ್ಲಿಯೂ ಹಲವು ವರ್ಷಗಳಿಂದ ಕ್ಯಾನ್ಸರ್ ಜೊತೆಗೆ ಹೋರಾಡಿಕೊಂಡು ಬಂದಿರುವ ಜಬ್ಬಾರ್ ಎಂಬ ಧೀರನಿಗೆ ಹೆಚ್ಚು ಕೆಲಸ ಕೊಡಲು ನಾನು ಅಧೀರನಾಗುತ್ತಿದ್ದೆ. ಆದರೆ, ನನಗೇನಾದರೂ ಆಯಾಸವಾದರೆ, ಬೇಕೆನಿಸಿದರೆ ನಾನೇ ಹೇಳುತ್ತೇನೆ ಎನ್ನುತ್ತಾ ನಮ್ಮ ಸಂತೈಸುವಿಕೆಯನ್ನು ನಿರಾಕರಿಸುತ್ತಿದ್ದ ಜಬ್ಬಾರ್ ಇಡೀ ಎರಡು ದಿನಗಳ ಚಿತ್ರೀಕರಣದ ಕೆಲಸದ ವಿಷಯದಲ್ಲಿ ತನಗೆಂದು ಏನೂ ವಿನಾಯತಿ ತೆಗೆದುಕೊಳ್ಳಲೇ ಇಲ್ಲ. ಕಾಲುಗಳಲ್ಲಿ ಅಂತಹ ಬಲವಿಲ್ಲದಿದ್ದರೂ ಮತ್ತು ನಡೆಯಲು ಆಧಾರವನ್ನು ಪಡೆಯುವಂತಹ ಪರಿಸ್ಥಿತಿ ಇದ್ದರೂ ಮಂಗಳೂರಿನಿಂದ ಉಪ್ಪಿನಂಗಡಿಗೆ ತಾನೊಬ್ಬನೇ ಸ್ಕೂಟರ್ ನಲ್ಲಿ ಬಂದಿದ್ದು, ಯಾರೂ ಕರೆದುಕೊಂಡು ಬರುವವರು ಇರಲಿಲ್ಲ ಎಂದಲ್ಲ. ತನ್ನ ಶಕ್ತಿ ಮತ್ತು ಸ್ಫೂರ್ತಿ ತನ್ನಲ್ಲಿ ಜೀವಂತವಾಗಿದೆ ಎಂದು. ಚಿತ್ರೀಕರಣದಲ್ಲಿ ಒಂದೇ ದೃಶ್ಯವನ್ನು ಹಲವು ಕೋನಗಳಿಂದ, ಹಲವು ಬಾರಿ ತೆಗೆದುಕೊಳ್ಳಲು ಮತ್ತು ಅದಕ್ಕೆ ಸೆಟ್ ಮಾಡಿಕೊಳ್ಳಲು ಹಲವು ರೀತಿಗಳನ್ನು ಜಬ್ಬಾರ್ ರವರನ್ನು ಕಾಯಿಸುತ್ತಾ, ಹೊಂದಿಸಿಕೊಳ್ಳುತ್ತಾ, ಅನುಸರಿಸಿಕೊಳ್ಳಲು ಹೇಳುತ್ತಿದ್ದರೂ ಅದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಾ ಚಿತ್ರೀಕರಣಕ್ಕೆ ತಮ್ಮ ಭಾಗವಹಿಸುವಿಕೆಯ ವಿಶೇಷ ಕೊಡುಗೆಯನ್ನು ನೀಡಿದರು. ಎಲ್ಲಿಯೂ ಸಾಕಾಯ್ತೆಂಬ ಸುಸ್ತಿನ ನಿಟ್ಟುಸುರು ಬಿಡದೇ, ನಾವು ಕ್ಯಾನ್ಸರ್ ಹೋರಾಟಗಾರನಿಗೆ ಹಿಂಸೆ ಕೊಡುತ್ತಿದ್ದೇವೆ ಎಂದು ನನಗೆ ಎಲ್ಲಿಯೂ ಅಪರಾಧಪ್ರಜ್ಞೆ ಮೂಡದಂತೆ ತಮ್ಮ ನಡೆ ನುಡಿ ಮತ್ತು ಚಟುವಟಿಕೆಗಳಲ್ಲಿ ಸಂಯಮವನ್ನು ಮತ್ತು ಸಹಕಾರವನ್ನು ತೋರಿದರು. ಎರಡೂ ಭಾಷೆಯ ಚಿತ್ರೀಕರಣಗಳಲ್ಲಿ ಬೇಕಾದ ಹಾಗೆ ನಟಿಸಿದರು. ಜಬ್ಬಾರ್ ರವರ ಜೀವನ ಪ್ರೀತಿ ಕ್ಯಾನ್ಸರ್ ಭೀತಿಯನ್ನು ಮೀರಿದೆ ಎಂಬುದಂತೂ ಇಡೀ ಚಿತ್ರೀಕರಣದ ಸಮಯದಲ್ಲಿ ನಾನು ಕಂಡುಕೊಂಡದ್ದು. ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರೀಕರಿಸುತ್ತಿದ್ದ ಕ್ಯಾಮರಾಮ್ಯಾನ್ ರಾಜ್ ಶಿವಶಂಕರ್ ಭಾವುಕರಾಗಿ ಬಿಕ್ಕಿ ಬಿಕ್ಕಿ ಚಿತ್ರೀಕರಿಸಲು ಸಾಧ್ಯವಾಗದೇ ಅತ್ತದ್ದುಂಟು. ನಾನು ಅವರಿಗೆ ಸಮಾಧಾನ ಪಡಿಸಿ ಚಿತ್ರೀಕರಣ ಮುಂದುವರಿಸಲು ಹೇಳುತ್ತಿದ್ದೆ. ಮೇಕಪ್ ಮೋಹನ್ ಕೂಡ ಅಳುತ್ತಿದ್ದ. ಹೀಗೆ ಹಲವರು ಭಾವುಕರಾದರೂ ಜಬ್ಬಾರ್ ನೀಡುತ್ತಿದ್ದದ್ದೇನೆಂದರೆ ತನ್ನ ಶಕ್ತಿ ಮತ್ತು ಸಂಯಮದ ಸಂಕೇತವಾಗಿರುವ ಮಾಸದ ಮುಗುಳ್ನಗೆ. ಚಿತ್ರೀಕರಣದ ಮರುದಿನವೇ ಕೀಮೋ ಥೆರಪಿಗೆ ಜಬ್ಬಾರ್ ಹೋಗಿದ್ದು, ಚಿಕಿತ್ಸೆಯು ನಮ್ಮ ಜಬ್ಬಾರ್ ಪೊನ್ನೋಡಿಯ ತಮ್ಮ ಜಬರ್ದಸ್ತ್ ಶಕ್ತಿ ಮತ್ತು ಸ್ಫೂರ್ತಿಯನ್ನು ನಮ್ಮೊಡನೆ ದೀರ್ಘಕಾಲ ಹಂಚಿಕೊಂಡಿರಲೆಂದು ನಮ್ಮ ಹಂಸಗೀತೆ ಚಿತ್ರೀಕರಣದ ತಂಡದ ಆಶಯ ಮತ್ತು ಹಾರೈಕೆ. ಇನ್ನೊಬ್ಬರು ನನ್ನ ಹೃದಯಕ್ಕೆ ಆಪ್ತವಾದ ವ್ಯಕ್ತಿಯೆಂದರೆ, ಜೆಟ್ ರಿಪ್ಪಾ ತಂದೆ ಯು ಟಿ ಹಂಜ಼ಾ. ಅವರು ತಮ್ಮ ತೋಟದಲ್ಲಿ ನಮ್ಮ ಚಿತ್ರೀಕರಣಕ್ಕೆ ಅನುಕೂಲ ಮಾಡಿಕೊಡಲು ಎಲ್ಲಾ ಸಿದ್ಧತೆ ಮಾಡಿದ್ದರು. ಅವರ ತೋಟದ ಹಿಂದಿನ ನದಿದಂಡೆಯಲ್ಲಿ ಚಿತ್ರೀಕರಣ ಮಾಡಲಾಯಿತೇ ಹೊರತು, ಸಮಯದ ಅಭಾವದಿಂದ ಅವರ ತೋಟದ ಸಂಪೂರ್ಣ ಸೇವೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಕಾಳಜಿ ಮತ್ತು ಪ್ರೀತಿಗೆ ನಾನು ಶರಣು ಹೋದೆ. ಇನ್ನು ಇಂತಹ ವಿಶ್ವದ ಗಮನ ಸೆಳೆಯಲು ಹೋಗುತ್ತಿರುವಂತಹ ಇಂತಹದ್ದೊಂದು ಚಿತ್ರವು ಉಪ್ಪಿನಂಗಡಿಯಲ್ಲಿ ಪ್ರಾರಂಭವಾಯಿತೆಂದು ಹೆಮ್ಮೆಯಿಂದ ಹೇಳುತ್ತೇನೆ. ಇದಕ್ಕೆ ಕಾರಣ ಇರ್ಷದ್ ರವರ ಮನೆ ಮತ್ತು ಹಂಜ಼ಾರವರ ತೋಟ. ಇರ್ಷದ್ ಮನೆಯ ಆವರಣದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುಪಾಲು ಚಿತ್ರೀಕರಣ ಅಲ್ಲಿಯೇ ನಡೆಯಿತು. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಹಂಜ಼ಾರವರ ತೋಟದ ಹಿಂದೆ ನಡೆದಿದ್ದು. ಇರ್ಷದ್ ರವರ ಸಹಕಾರ ಮತ್ತು ಒತ್ತಾಸೆ ಚಿತ್ರಕ್ಕೆ ಬಹಳ ಮುಖ್ಯ ಕಾಣ್ಕೆಗಳನ್ನು ನೀಡಿದೆ. ಅವರ ಸ್ನೇಹಕ್ಕೆ ಮತ್ತು ಪ್ರೀತಿಗೆ ನನ್ನದೊಂದು ಅಪ್ಪುಗೆ. ಒಟ್ಟಾರೆ ಕ್ಯಾನ್ಸರ್ ಬಗ್ಗೆ ಭಾರತದ ಸಾಮಾಜಿಕ, ತಾತ್ವಿಕ, ಚಿಕಿತ್ಸಕ ಆಯಾಮಗಳನ್ನು ವಿಶ್ವದ ದೃಷ್ಟಿಗೆ ತರಲು ಹೋಗುತ್ತಿರುವ ಈ ಸಿನಿಮಾದ ಆರಂಭ ಉಪ್ಪಿನಂಗಡಿಯಲ್ಲಿ ಪ್ರಾರಂಭವಾಯಿತೆಂದು ಹೆಮ್ಮೆಯಿಂದ ಹೇಳುವುದರೊಂದಿಗೆ ಇರ್ಷದ್ ರಂತಹ ಸ್ನೇಹಿತರ ಸಹಕಾರಗಳನ್ನು ಪ್ರೀತಿಯಿಂದ ನೆನೆಯುತ್ತೇನೆ. ಮುಂದಿನ ದಿನಗಳಲ್ಲಿ ಮಂಗಳೂರಿನ ಮತ್ತು ಕುಡ್ಲದ ಇತರ ಭಾಗದ ಸ್ನೇಹಿತರ ಸಹಕಾರವನ್ನು ಸ್ನೇಹದ ಸಲುಗೆಯೊಂದಿಗೆ ಜಬರ್ದಸ್ತಾಗಿಯೇ ಪಡೆಯುತ್ತೇನೆ. ಈ ಚಿತ್ರೀಕರಣದ ಹಂತದಲ್ಲಿ ಕಾರಣಾಂತರಗಳಿಂದ ನನಗೆ ಅವರು ಸಿಕ್ಕಿರಲಿಲ್ಲ. ಇರಲಿ, ಮತ್ತೆ ಮುಂದಿನ ಚಿತ್ರೀಕರಣ ಎಲ್ಲಿ ಮತ್ತು ಎಂದು ಅಂತ ಸಧ್ಯಕ್ಕೆ ಹೇಳೋದಿಲ್ಲ. ನಡೆದ ಮೇಲೆ ನಿಮ್ಮ ಜೊತೆ ಪ್ರೀತಿ ಮತ್ತು ಹೆಮ್ಮೆಯಿಂದ ಹಂಚಿಕೊಂಡೇತೀರುತ್ತೇನೆ. ಲವ್ ಯೂ.

https://jabbarponnodi.wordpress.com/2018/02/24/%e0%b2%af%e0%b3%8b%e0%b2%97%e0%b3%80%e0%b2%b6%e0%b3%8d-%e0%b2%ae%e0%b2%be%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%ac%e0%b2%b0%e0%b3%86%e0%b2%af%e0%b3%81%e0%b2%a4%e0%b3%8d%e0%b2%a4%e0%b2%be/

ಜಬ್ಬಾರ್ ಎಂಬೋ ಜಬರ್ದಸ್ತ್ ಶಕ್ತಿ ಮತ್ತು ಸ್ಫೂರ್ತಿ ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನ.....

22/02/2018

ಊಟದ ಬಟ್ಟಲಿನಲ್ಲಿ ಕಲಾವಿದನ ಕೈಚಳಕ...

20/02/2018

ಮಾಹಿತಿ ಹಂಚಿ ಎಲ್ಲರಿಗು...

20/02/2018

ನನ್ನ ಹೊಸ ಸ್ಟೈಲ್....

17/02/2018

ನೀರಿನ ಹೂಜಿ ಈಗ ನಮ್ಮ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಕುಡಿಯಲು...

17/02/2018

ರಾಮಕೃಷ್ಣ ಜಯಂತಿ.

16/02/2018

ಈಗಿನ ಅಗತ್ಯವನ್ನು ವಿವರಿಸಿದ ರೀತಿ ಚನ್ನಾಗಿದೆ.

06/02/2018

Only for Smokers.

02/02/2018
ಸಣ್ಣಪುಟ್ಟ ವಿಷಯಕ್ಕೆ ಡೈವೋರ್ಸ್ ಕೊಡುವ ಇಂದಿನ ಗಂಡ-ಹೆಂಡತಿ ನೋಡಲೇ ಬೇಕು! | ಇದು ನಮ್ಮ ಊರು

ಹಾಟ್ಸ್ ಅಫ್ ಮಾಸ್ಟ್ರೆ...

Home ಬದುಕು ಸಣ್ಣಪುಟ್ಟ ವಿಷಯಕ್ಕೆ ಡೈವೋರ್ಸ್ ಕೊಡುವ ಇಂದಿನ ಗಂಡ-ಹೆಂಡತಿ ನೋಡಲೇ ಬೇಕು! ಬದುಕುವಿಡಿಯೋಸಣ್ಣಪುಟ್ಟ ವಿಷಯಕ್ಕೆ ಡೈವೋರ್ಸ್...

02/02/2018
ಮಧ್ಯಾಹ್ನದ ಊಟ

ಯಾಕ್ರಿ ಇವತ್ತೇನು ಗೀಚೊಕಿಲ್ವಾ ಇಡೀ ದಿನ ಆ ಕಂಪ್ಯೂಟರ್ ಮುಂದೆ ಕೂರುವ ನೀವು ಯಾಕೆ ಇವತ್ತು ಟಿ.ವಿ ರಿಮೋಟ್ ಹಿಡಿದು ಕೂತಿದ್ದೀರಲ್ಲ ಎಂದು ಕೇಳುತ್ತಾ ಒಳಗೆ ಬಂದವಳು ನಾನು ಚಂದನ ಚಾನಲ್ ನೋಡುವುದನ್ನು ನೋಡಿ ಅಯ್ಯೋ ನ್ಯೂಸ್ ನೋಡೋದಲ್ವಾ ಎಂದು ಕೇಳಿದಳು? ನ್ಯೂಸ್ ಯಾವಾಗಲು ಇದ್ದೀದ್ದೆ ಅಲ್ವಾ ನೀನೇನು ಅಡಿಗೆ ಮಾಡ್ತಿ ಇವತ್ತು ಮಧ್ಯಾಹ್ನಕ್ಕೆ ಎಂದು ಕೇಳಿದಕ್ಕೆ ಅವಳಿಂದ ಬಂದ ಉತ್ತರ ನೋ... ಯಾಕೆ ರಹೀನ ಅಡಿಗೆ ಮಾಡಲ್ಲ ನನಗೆ ಈಗಲೇ ಹಸಿವು ಬೇರೆ ಸುರುವಾಗಿದೆ ಅಂದೆ ಅದಕ್ಕವಳು ಇವತ್ತು ನನ್ ಲೆಕ್ಕದಲ್ಲಿ ಮಧ್ಯಾಹ್ನ ಹೋಟೆಲ್ ನಲ್ಲಿ ತರಕಾರಿ ಊಟ ಅಂದಳು ನನಗೂ ಬಹಳ ಅಚ್ಚರಿಯಾಯಿತು ಇದೇನು ಕನಸಾ ಅಲ್ಲಾ ನನಸಾ ಒಮ್ಮೆ ನನ್ನಲ್ಲೆ ಕೇಳಿಕೊಂಡು ಸರಿ ಎಂದು ನಾನು ಒಪ್ಪಿದೆ. ಯಾಕೆಂದರೆ,ಅವಳ ಲೆಕ್ಕದಲ್ಲಿ ಅಲ್ವಾ ಭರ್ಜರಿ ಜಮಾಯಿಸಬೇಕು ಅಂತ ಮನಸಲ್ಲೆ ಪ್ಲಾನ್ ಮಾಡಿ ಅವಳಲ್ಲಿ ಹೇಳಿದೆ ಊಟ ಆದ ಮೇಲೆ ಒಂದು ಗುಲಾಬ್ ಜಾಮ್ ಕೂಡ ಇರಲಿ ಎಂದು ಹೇಳಿ ಇನ್ನು ಅಲ್ಲಿ ಹೋಗಿ ಬಿಲ್ಲ್ ನೀವು ಕೊಡಿ ಎಂದು ರಾಗ ಹಾಕೋಕಿದೆಯಾ ಎಂದು ಕೇಳಿದಾಗ ಹಾಗೆ ಒಂದು ನಗುವನ್ನು ಬೀರಿ ಏನೋ ಹೇಳೋಕೆ ಹೊರಡು ಮಾತನಾಡದೆ ಆ ಮಾತನ್ನು ಹಾಗೆ ನುಂಗಿ ಏನು ಹೇಳದೆ ಸೀದ ಒಳಗೋದವಳು ಒಂದು ಐದು ನೂರು ರೂಪಾಯಿಯ ಒದ್ದೆ ನೋಟನ್ನು ಹಿಡಿದುಕೊಂಡು ವಯ್ಯಾರದಿಂದ ನಡೆದುಕೊಂಡು ಬಂದು ಇದು ಸಾಲದೆ? ಇವತ್ತಿನ ಬಿಲ್ಲಿಗೆ ಎಂದು ಕಣ್ಸನ್ನೆ ಮೂಲಕ ಕೇಳಿದಳು? ನಾನು ಸಾಕು ಎಂದು ನಗುವಾಗ ಪಟ್ಟನೆ ಹೊಳೆಯಿತು ಎರಡು ದಿವಸದ ಹಿಂದೆ ಇಡೀ ಮನೆ ಅಡಿಮೇಲು ಮಾಡಿ ಸಿಗದ ಹಣ ಇವತ್ತು ಪ್ಯಾಂಟ್ ತೊಳೆಯುವಾಗ ಅವಳ ಕೈವಶವಾಗಿ ಬಿಟ್ಟಿದೆ ಎಂದು... Abdul Jabbar Ponnodi

https://jabbarponnodi.wordpress.com/2018/02/02/%e0%b2%ae%e0%b2%a7%e0%b3%8d%e0%b2%af%e0%b2%be%e0%b2%b9%e0%b3%8d%e0%b2%a8%e0%b2%a6-%e0%b2%8a%e0%b2%9f/

ಯಾಕ್ರಿ ಇವತ್ತೇನು ಗೀಚೊಕಿಲ್ವಾ ಇಡೀ ದಿನ ಆ ಕಂಪ್ಯೂಟರ್ ಮುಂದೆ ಕೂರುವ ನೀವು ಯಾಕೆ ಇವತ್ತು ಟಿ.ವಿ ರಿಮೋಟ್ ಹಿಡಿದು ಕೂತಿದ್ದೀರಲ್ಲ ಎಂ....

01/02/2018
ಮೀನಿಗೆ ಹಿಡಿದ ಗ್ರಹಣ

ಅಬ್ಬಾ.! ಏನು ಬಿಸಿಲು ಕಣ್ರೀ ಚಂದ್ರಗ್ರಹಣಕ್ಕೆ ಈಗಾದರು ಆಗಬಾರದಿತ್ತಾ ಸ್ವಲ್ಪ ಬಿಸಿಲ ಧವೆ ಕಮ್ಮಿಯಾದರೂ ಆಗುತ್ತಿತ್ತು ಎಂದು ಗೊಣಗುತ್ತಾ ಮನೆಯೊಳಗೆ ಬಂದವಳು ನಾನು ಕಂಪೂಟರಿನಲ್ಲಿ ಏನು ಮಾಡುತ್ತಿದ್ದೇನೆಂದು ಇಣುಕಿ ಬೆನ್ನಿಗೆ ಸ್ವಲ್ಪ ತಾಗಿ ನಿಮ್ಮ ಫೇಸ್ ಬುಕ್ ನಲ್ಲಿ ಗ್ರಹಣ ಮುಗಿಯಿತಾ ಅಲ್ಲಾ ಇನ್ನು ಆಗುತ್ತಾ ಇದೆಯಾ ಎಂದು ನುಲಿದು ಸೀದ ಅಡಿಗೆ ಕೋಣೆಗೆ ಓಡಿದಲು. ಸಾಧಾರಣವಾಗಿ ಈ ಹೊತ್ತಲ್ಲಿ ಯಾವಾಗಲು ಅಡಿಗೆ ಮನೆಯಿಂದ ಕುಕ್ಕರ್ ವಿಷಲ್ ಕೇಳುವುದು ವಾಡಿಕೆ ಆದರೆ ಇಂದು ಯಾವ ವಿಷಿಲ್ ಇಲ್ಲ ಅದಲ್ಲದೆ ವಗ್ಗರಣೆಯ ಪರಿಮಳವು ಇರಲಿಲ್ಲ. ಹಸಿವು ತಾಳಲಾರದೆ ರಹೀನಾ ಊಟ ತಾರೆ ಎಂದೆ,ನನ್ನ ಶಬ್ಧ ಕೇಳಿದ್ದೆ ತಡ ಎಲ್ಲಾ ರೆಡಿ ಮಾಡಿ ಇಟ್ಟುಕೊಂಡವಳಂತೆ ಬಿಸಿ ಬಿಸಿ ಗಂಜಿ ಮತ್ತು ಉಪ್ಪಿನಕಾಯಿ ತಂದಿಟ್ಟಳು.ಯಾಕೋ ಬೇರೇನು ಮಾಡಿಲ್ವಾ ಮೈಗೆ ಹುಷಾರಿಲ್ವಾ ಅಲ್ಲಾ ಸುಸ್ತಾ ಏನಾಯಿತು ಎಂದು ಗಾಬರಿಯಿಂದ ಕೇಳಿದೆ? ಏನು ಉತ್ತರ ಕೊಡದೆ ಸೀದಾ ಅಡುಗೆ ಕೋಣೆಗೆ ಹೋಗಿ ನೀರು ತಂದು ಕೊಟ್ಟಳು. ಅದಕ್ಕೆ ನಾನು ಪರ್ವಾಗಿಲ್ಲ ಸಾಕಿವತ್ತಿಗೆ ಇಷ್ಟು ನೀನು ಸುಸ್ತಾಗಿದ್ದರೆ ರೆಸ್ಟ್ ಮಾಡು ಎನ್ನುವಾಗಲೂ ನನ್ನ ಮುಖವೇ ನೋಡಿ ನಗುತ್ತಿದ್ದಳು. ಆಗ ತಕ್ಷಣ ನೆನಪಾದದ್ದು ನಿನ್ನೆ ತಂದು ಮಸಾಲ ಬೆರೆಸಿ ಇವತ್ತ ಪ್ರೈಮಾಡಲೆಂದು ಪ್ರಿಡ್ಜ್ ನಲ್ಲಿಟ್ಟ ಬಂಗುಡೆ ಮೀನುಗಳು ತಕ್ಷಣ ಅವಳಲ್ಲಿ ಹೇಳಿದೆ ಅದನ್ನಾದರು ಕಾಯಿಸಿ ಕೊಡೆ ಎಂದು, ಆಗ ತಿಳಿಯಿತು ಎಲ್ಲಾ ಗ್ರಹಣದ ಮಹಿಮೆ. ನಿಧಾನಕ್ಕೆ ಹತ್ತಿರ ಬಂದು ನೀರಿನ ಲೋಟವನ್ನು ನನ್ನ ಮುಂದೆ ಹಿಡಿದು ನಾನು ನಿನ್ನೆ ದಾರವಾಹಿ ಕೂಡ ನೋಡದೆ ನ್ಯೂಸ್ ಚಾನಲ್ ನಲ್ಲಿ ಸ್ವಾಮೀಜಿಗಳು ಹೇಳುವುದನ್ನು ಕೇಳುತ್ತಾ ಕೂತಿದ್ದೆ ಅವರು ಹೇಳಿದ್ರು ನಿನ್ನೆ ಗ್ರಹಣ ಆದ ಕಾರಣ ನಿನ್ನೆಯ ಆಹಾರಗಳನ್ನು ಇವತ್ತು ಬಳಸಬಾರದೆಂದು ಅದಕ್ಕೆ ನಿಮ್ಮ ಬಗ್ಗೆ ಇರೊ ಕಾಳಜಿಯಿಂದ ಆ ಎರಡು ಮೀನನ್ನು ಇವತ್ತು ಬೆಳಿಗ್ಗೆ ನಿಮ್ಮ ಪ್ರೀತಿಯ ಬೆಕ್ಕಿಗೆ ಹಾಕಿದೆ ಎನ್ನಬೇಕೆ.... Abdul Jabbar Ponnodi

https://jabbarponnodi.wordpress.com/2018/02/01/%e0%b2%ae%e0%b3%80%e0%b2%a8%e0%b2%bf%e0%b2%97%e0%b3%86-%e0%b2%b9%e0%b2%bf%e0%b2%a1%e0%b2%bf%e0%b2%a6-%e0%b2%97%e0%b3%8d%e0%b2%b0%e0%b2%b9%e0%b2%a3/

ಅಬ್ಬಾ.! ಏನು ಬಿಸಿಲು ಕಣ್ರೀ ಚಂದ್ರಗ್ರಹಣಕ್ಕೆ ಈಗಾದರು ಆಗಬಾರದಿತ್ತಾ ಸ್ವಲ್ಪ ಬಿಸಿಲ ಧವೆ ಕಮ್ಮಿಯಾದರೂ ಆಗುತ್ತಿತ್ತು ಎಂದು ಗೊಣಗುತ...

31/01/2018
ಸಲ್ಲಾಪದ ಸಮಯ

ಇಂದು ಸ್ವಲ್ಪ ಬೇಗನೇ ಎದ್ದು ನನ್ನನ್ನು ಸರಿಯಾಗಿ ಮಲಗೋಕೆ ಬಿಟ್ಟಿಲ್ಲ ಈ ನನ್ನ ಯಜಮಾನಿ. ಒಂದಿನ ಸ್ವಲ್ಪ ಬೇಗ ಆಫೀಸ್ ನಲ್ಲಿ ಕೆಲಸ ಇದ್ದರೆ ಸಾಕು ರಾತ್ರಿ ಹತ್ತಾರು ಸಾರಿ ಗಡಿಯಾರ ನೋಡೋಕಿದೆ ಆಗಾಗ ಎದ್ದು. ಅಷ್ಟು ಪ್ರೀತಿ ಕೆಲಸದ ಮೇಲೆ, ಅದೇನೆ ನನ್ ಮೇಲೆ ಇಲ್ಲದ ಪ್ರೀತಿ ಆ ಆಫೀಸ್ ಮೇಲೆ ಎಂದು ಕೇಳಿದರೆ ಅದು ನಮಗೆ ಅನ್ನ ಹಾಕುತ್ತೆ ಅನ್ನುತ್ತಾಳೆ ನಾನೋನು ಮಾತಾಡಿಲ್ಲ ನಿನ್ನೆ ನಾನು ತಂದು ಕೊಟ್ಟ ಬಿರಿಯಾಣಿ ಇಷ್ಟು ಬೇಗ ಮರೆತು ಬಿಟ್ಟಳೇನು ಎಂದು ಮನದಲ್ಲೆ ಗೊಣಗುತ್ತಿರುವಾಗ ಹಲ್ಲು ಉಜ್ಜಿ ಮುಖ ತೊಳೆದು ಹಾಗೆ ಸಮೀಪ ಬಂದು ನನಗೆ ತಾಗುವಾಗೆ ಕೂತಲು ಮುಖದ ನೀರು ಒರೆಸದೆ ಬಿಳಿಬಣ್ಣದ ಕೋಮಲ ಮುಖದಲ್ಲಿ ನೀರ ಹನಿಗಳೆಲ್ಲ ಮುತ್ತಿನಂತೆ ಕಂಗೊಳಿಸುತ್ತಿದೆ ಚಿನ್ನಾ ಎಂದು ಹೇಳಿದ್ದೇ ತಡ ನೀವು ಬರು ಬರುತ್ತಾ ಪೋಲಿಯಾಗುತ್ತಿದ್ದೀರಿ ಎನ್ನಬೇಕೆ. ಒದ್ದೆಯಾಗಿದ್ದ ಮುಂಗುರುಳ ಕೂದಲುಗಳು ಬಿಟ್ಟು ಉಳಿದ ಕೂದಲುಗಳೆಲ್ಲಾ ಫ್ಯಾನಿನ ಗಾಳಿಗೆ ಹಾರಿ ನನ್ನ ಮುಖಕ್ಕೆ ತಾಗುತ್ತಿದ್ದವು ಹಾಗು ಮೈಸೂರ್ ಸಾಂಡಲ್ ಸೋಪಿನ ಪರಿಮಳವು ಗಮ್ಮೆನ್ನುತ್ತಿತ್ತು. ಇದೇನು ಇವತ್ತು ಇಷ್ಟೋಂದು ಪ್ರೀತಿ ಉಕ್ಕಿ ಹರಿಸುತ್ತಿದ್ದಾಳೆ ಎಂದು ಮನದಲ್ಲೆ ಚಿಂತಿಸುತ್ತಿರುವಾಗ ಇನ್ನಷ್ಟು ಹತ್ತಿರ ಬಂದು ಕೈಹಿಡಿದು ನಿಮಗೆ ಯಾವ ತಿಂಡಿ ಇಷ್ಟ ಎಂದು ಕೇಳಿದಳು? ಮನದಲ್ಲಿ ಆದ ಸಂತಸ ಅಷ್ಟಿಷ್ಟಲ್ಲ ಅವರವರ ಹೆಂಡತಿಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರಮೇಲೆಲ್ಲ ಕೋಪ ಬರತೊಡಗಿತು. ಹೆಂಡತಿಯ ಪ್ರೀತಿಯನ್ನು ಅರ್ಥಮಾಡಲು ಇಷ್ಟು ಸಮಯ ಬೇಕಾಯಿತಲ್ಲಾ ಎಂದು ಮನದಲ್ಲೆ ವ್ಯಥೆ ಪಟ್ಟೆ ಅವಳಿಡಿದ ಕೈಯನ್ನು ಹಾಗೆ ಅಮುಕುತ್ತಾ ನನ್ನಿಷ್ಟದ ನೀರ್ ದೋಸೆ ಚಟ್ನಿ ಮಾಡು ಅಂದೆ. ಅಷ್ಟು ಹೇಳಿದ್ದೆ ತಡ ಕೈಯನ್ನು ಜೋರಾಗಿ ಹಿಡಿದು ಮೊನ್ನೆ ಬಾನುವಾರ ನಮ್ಮ ಮನೆಯ ಪಕ್ಕದಲ್ಲೆ ಹೊಸದಾಗಿ ಆಗಿರುವ ಅಥಿತಿ ಹೋಟೆಲ್ ನಲ್ಲಿ ನೀರ್ ದೋಸೆ ಚಟ್ನಿ ಬಹಳ ಚೆನ್ನಾಗಿದೆಯಂತೆ ಪ್ಲೀಸ್ ತನ್ನಿ ನನಗೆ ಆಫೀಸ್ ಗೆ ಬೇಗ ಹೋಗಲಿಕ್ಕೆದೆ ಪ್ಲೀಸ್ ಎನ್ನಬೇಕೆ? Abdul Jabbar Ponnodi

https://jabbarponnodi.wordpress.com/2018/01/31/%e0%b2%b8%e0%b2%b2%e0%b3%8d%e0%b2%b2%e0%b2%be%e0%b2%aa%e0%b2%a6-%e0%b2%b8%e0%b2%ae%e0%b2%af/

ಇಂದು ಸ್ವಲ್ಪ ಬೇಗನೇ ಎದ್ದು ನನ್ನನ್ನು ಸರಿಯಾಗಿ ಮಲಗೋಕೆ ಬಿಟ್ಟಿಲ್ಲ ಈ ನನ್ನ ಯಜಮಾನಿ. ಒಂದಿನ ಸ್ವಲ್ಪ ಬೇಗ ಆಫೀಸ್ ನಲ್ಲಿ ಕೆಲಸ ಇದ್ದರ...

31/01/2018
ಅಗರ್ಬತ್ತಿ ಹೋಗೆ ಸಿಗರೇಟು ಹೊಗೆಗಿಂತ ಹೆಚ್ಚು ಅಪಾಯಕಾರಿ, ಅದು ಕ್ಯಾನ್ಸರಿಗೂ ಕಾರಣವಾಗಬಹುದು : ಸಂಶೋಧನೆ | ಇದು

ಪರಿಮಳ ಪ್ರೀಯರಿಗೆ ಎಚ್ಚರ!

Home ಆರೋಗ್ಯ ಅಗರ್ಬತ್ತಿ ಹೋಗೆ ಸಿಗರೇಟು ಹೊಗೆಗಿಂತ ಹೆಚ್ಚು ಅಪಾಯಕಾರಿ, ಅದು ಕ್ಯಾನ್ಸರಿಗೂ ಕಾರಣವಾಗಬಹುದು : ಸಂಶೋಧನೆ ಆರೋಗ್ಯಅಗರ್ಬತ.....

30/01/2018

ಇದು ನಿಜವೇ?

30/01/2018

"ನಂದಿನಿ ಹಾಲು: ಸರಿಯಾದ ಬಣ್ಣದ ಪ್ಯಾಕೆಟ್ ಆರಿಸಿಕೊಳ್ಳುವುದರ ಹಿಂದಿನ ರಹಸ್ಯ"

#ಎಲ್ಲಾದಕ್ಕೂ_ನೀಲಿ_ಪ್ಯಾಕೆಟ್ಟೇ_ಸರಿಯಲ್ಲ•••

ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ.
ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ•

ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ!

ಆದರೆ ನಂದಿನಿ ಹಾಲ್ನ ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ••

1. ಹಾಗೇ (ಕಾಯಿಸದೆ) ಕುಡಿಯೋಕ್ಕೆ:

ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು•

ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ•

2. ಕಾಯಿಸಿ ಕುಡಿಯಲು:

ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು•

3. ಕಾಫಿ ಅಥವಾ ಟೀ ಮಾಡೋಕ್ಕೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ•

4. ಗಟ್ಟಿ ಕಾಫಿ ಮಾಡೋಕ್ಕೆ:

ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ•

5. ಗಟ್ಟಿ ಮೊಸರು ಮಾಡೋಕ್ಕೆ:

ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ•

6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ:

ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. "ಮಿಲ್ಕ್ ಮೈಡ್" ತರುವ ಬದಲು•

7. ಪುಟ್ಟ ಮಕ್ಕಳಿಗೆ ಕುಡಿಸೋಕೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ•

8. ಹಿರಿಯರಿಗೆ ಕುಡಿಯಲು:

ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿನ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ•

ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರತ್ತೆ•

9. ಕೊಬ್ಬು ಇಳಿಸೋಕೆ:

ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ•

ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರತ್ತೆ•

10. ಬೆಳೆಯುವ ಮಕ್ಕಳಿಗೆ:

ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್••

ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ•

ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡತ್ತೆ••

11. ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ••

12. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ:

ನ್ಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ••

13. ತುಂಬಾ ದಿನ ಇಟ್ಟುಕೊಳ್ಳಬೇಕಾದರೆ:

ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. 10 ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ•••
ಸಂಗ್ರಾಹ

29/01/2018
ಎಷ್ಟೇ ಡಿಲೀಟ್ ಮಾಡಿದರೂ ನಿಮ್ಮ ಮೊಬೈಲ್ ಮೆಮರಿ ಪದೇ ಪದೇ ಫುಲ್ ಅಂತ ತೋರಿಸುತ್ತದಾ? | ಇದು ನಮ್ಮ ಊರು

ನನ್ನ ಯುಟೂಬೆ ಚಾನಲ್ ಉಪಯುಕ್ತ ಗ್ಯಾಗೆಟ್ ಮಾಹಿತಿ.
#ಕನ್ನಡಗ್ಯಾಜೆಟ್

Home ತಂತ್ರಜ್ಞಾನ ಜಗತ್ತು ಎಷ್ಟೇ ಡಿಲೀಟ್ ಮಾಡಿದರೂ ನಿಮ್ಮ ಮೊಬೈಲ್ ಮೆಮರಿ ಪದೇ ಪದೇ ಫುಲ್ ಅಂತ ತೋರಿಸುತ್ತದಾ? ತಂತ್ರಜ್ಞಾನ ಜಗತ್ತುಎಷ್....

28/01/2018

ಫಬ್ರವರಿ 18ರಂದು ದಾಂಪ್ಯತ್ಯ ಜೀವನಕ್ಕೆ ಕಾಲಿರಿಸುತ್ತಿವ ಗೆಳೆಯ ಸಮದ್ ಕೈಕಂಬ ಅವರಿಗೆ ಅಭಿನಂದನೆಗಳು.
ಊರಿನವರ ಸಮಸ್ಯೆಗಳನ್ನು ತನ್ನ ಮನೆಯ ಸಮಸ್ಯೆಯಂತೆ ಮನಗಂಡು ಅವರಿಗೆ ಸಹಾಯ ಮಾಡುವ ಹಾಗು ಎಲ್ಲೆ ಅಪಘಾತವಾದರು ಕೂಡಲೆ ಧಾವಿಸಿ ಅಲ್ಲಿಗೆ ಬೇಕಾದ ವ್ಯವಸ್ಥೆ ಮಾಡುವುದಕ್ಕೆ ‌ನೀವು ಮದ್ಯರಾತ್ರಿಯಲ್ಲು ಮೀನಾ ಮೇಷ ಮಾಡದೆ ಸಹಾಯಕ್ಕೆ ದಾವಿಸಿರುವುದನ್ನು ನಾವೆಲ್ಲ ಮರೆಯಲು ನಿಜಕ್ಕು ಸಾದ್ಯವಿಲ್ಲ.
ನಿಮ್ಮ ಸಾಮಾಜಿಕ ಕಳಕಳಿ ನಿಜಕ್ಕು ಯುವ ಜನತೆಗೆ ಒಂದು ಮಾದರಿಯ ಪಾಠವಾಗಿದೆ ಅಲ್ಲಾಹನು ನಿಮ್ಮ ದಾಂಪತ್ಯ ಜೀವನದಲ್ಲಿ ಸದಾ ಸುಖ,ನೆಮ್ಮದಿ,ಸಂತೋಷ ಹಾಗು ತೃಪ್ತಿಯನ್ನು ದಯಪಾಲಿಸಲಿ. ಆಮೀನ್

Address

Ponnodi
Kaikamba
574219

Alerts

Be the first to know and let us send you an email when A.J Ponnodi posts news and promotions. Your email address will not be used for any other purpose, and you can unsubscribe at any time.

Contact The Business

Send a message to A.J Ponnodi:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share