KGF

KGF ಇದು ಕನ್ನಡ ಗೋಲ್ಡನ್ ಫ್ರೆಂಡ್ಸ್ ಪೇಜ್
kannada Golden friends page
ಜಾಸ್ತೀ ಯೋಚನೆ ಮಾಡಬೇಡಿ ಸುಮ್ಮನೆ ಲೈಕ್ ಮಾಡಿ ಶೇರ್.

* #ಅಕ್ಷಯಾ_ತೃತೀಯ_ಮೂಢನಂಬಿಕೆ_ಬೇಡ*ಜೈನ ಧರ್ಮದ ಪರ್ವಗಳೇ ಹಾಗೇ, ಭೋಗಕ್ಕೆ ಮರುಳಾಗದೇ , ವಿಲಾಸಕ್ಕೆ ಒಲಿಯದೇ , ವ್ರತ ಉಪವಾಸಾದಿಗಳ ಮೂಲಕ ಭಗವಂತನ ...
03/05/2022

* #ಅಕ್ಷಯಾ_ತೃತೀಯ_ಮೂಢನಂಬಿಕೆ_ಬೇಡ*

ಜೈನ ಧರ್ಮದ ಪರ್ವಗಳೇ ಹಾಗೇ, ಭೋಗಕ್ಕೆ ಮರುಳಾಗದೇ , ವಿಲಾಸಕ್ಕೆ ಒಲಿಯದೇ , ವ್ರತ ಉಪವಾಸಾದಿಗಳ ಮೂಲಕ ಭಗವಂತನ ಗುಣಗಳಲ್ಲಿ ಅನುರಕ್ತವಾಗುವುದೇ ಜೈನ ಧರ್ಮದ ಪರ್ವಗಳ ಉದ್ದೇಶವಾಗಿದೆ.

ಇಂದು ಅಕ್ಷಯ ತೃತೀಯ ದಿನವಾಗಿದೆ. ಪ್ರಥಮ ತೀರ್ಥಂಕರ ಭಗವಾನ್ ಆದಿನಾಥರಿಗೆ ಮುನಿ ಅವಸ್ಥೆಯಲ್ಲಿ ಶ್ರೇಯಾಂಸ ಮಹಾರಾಜ ಇಕ್ಷುರಸವನ್ನು ( ಕಬ್ಬಿನ ಹಾಲು ) ಆಹಾರ ರೂಪದಲ್ಲಿ ನೀಡಿದ ದಿನವಿದು. ಇದು ಈ ಯುಗದ ಪ್ರಪ್ರಥಮ ಮುನಿಗಳ ಆಹಾರ ವಿಧಿ. ಅಂದಿನಿಂದ ಇಂದಿನವರೆಗೆ ಅಸಂಖ್ಯಾತ ಮುನಿ ಮಹಾರಾಜರುಗಳಿಗೆ ಶ್ರಾವಕರು ಭಕ್ತಿ ಭಾವದಿಂದ ವಿವಿಧ ಬಗೆಯ ದ್ರವ್ಯಗಳನ್ನು ಆಹಾರವಾಗಿ ನೀಡಿದ್ದಾರೆ. ಪ್ರಥಮ ಆಹಾರದ ದಿನವೇ ಅಕ್ಷಯ ತೃತೀಯ. ಪ್ರಥಮ ಆಹಾರವನ್ನು ನೀಡಿದ ಶ್ರೇಯಾಂಸ ಮಹಾರಾಜನಿಗೆ ದೇವತೆಗಳಿಂದ ಪಂಚಾಶ್ಚರ್ಯವಾಯಿತು. ರತ್ನಗಳ ವೃಷ್ಟಿ, ದುಂದುಭಿ ವಾದ್ಯ, ಮಂದ ಸುಗಂಧಿತ ಗಾಳಿಯ ಸಂಚಾರ, , ಜಯಕಾರದ ಧ್ವನಿ, ಆಕಾಶದಿಂದ ಪುಷ್ಪವೃಷ್ಟಿ ಇವುಗಳು ದೇವತೆಗಳಿಂದ ಆಗಲ್ಪಡುತ್ತದೆ. ಈ ಪ್ರಸಂಗ ಎಲ್ಲಾ ಆಹಾರ ದಾನಗಳಲ್ಲಿ ಆಗುವುದಿಲ್ಲ. ಪಂಚಮ ಕಾಲದಲ್ಲಿ ಈ ಪಂಚಾಶ್ಚರ್ಯಗಳು ನಡೆಯುವುದೇ ಇಲ್ಲ.ಆದರೆ ಭಾರಿ ಪುಣ್ಯದ ಪ್ರಾಪ್ತಿಯಿದೆ. ಹಾಗೂ ಕರ್ಮ ನಿರ್ಜರೆಗೆ ನಿಮಿತ್ತವಾಗುತ್ತದೆ. ಪ್ರತಿಫಲಾಕ್ಷೆಯಿಂದ ಮುನಿಗಳಿಗೆ ಆಹಾರ ದಾನ ಮಾಡದೇ ಶೃದ್ಧೆಯಿಂದ, ನಿರ್ಮಲ ಭಾವದಿಂದ ಮುನಿಗಳಿಗೆ ಆಹಾರ ದಾನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ.

* #ಬಂಗಾರ_ಖರೀದಿಯಿಂದ_ಅಕ್ಷಯವಾಗುವುದಿಲ್ಲ*

ಇತ್ತೀಚೆಗೆ ಕೆಲವು ಸಂದರ್ಭಗಳಲ್ಲಿ ನಮ್ಮ ಆಚರಣೆಗಳು ದಾರಿ ತಪ್ಪುತ್ತವೆ. ಅದರಲ್ಲಿ ಪ್ರಮುಖವಾದದ್ದು ಅಕ್ಷಯಾ ತೃತೀಯಾ ದಿನದಂದು ಬಂಗಾರ ಖರೀದಿ ಮಾಡಿದರೆ ಬದುಕು ಬಂಗಾರವಾಗುತ್ತದೆ, ಹಾಗೂ ಭೋಗದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ಅವೈಜ್ಞಾನಿಕ ತಿಳುವಳಿಕೆ ಜನರಲ್ಲಿ ಪ್ರಚಲಿತದಲ್ಲಿದೆ. ಇಲ್ಲಿ ನಾವು ಗಮನಿಸಬೇಕಾದದ್ದು ಜೈನ ಧರ್ಮದ ತತ್ವ ಸಿದ್ಧಾಂತಗಳು ಭೋಗಕ್ಕೆ ಮಹತ್ವ ಕೊಡುವುದಿಲ್ಲ. ಬದಲಾಗಿ ಅದು ಆತ್ಮೋನ್ನತಿಯ ನಿಮಿತ್ತವಾಗಿವೆ. ಜೈನೇತರ ದರ್ಶನದ ಪ್ರಭಾವದಿಂದ ಜೈನರು ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿ ಮಾಡಿದರೆ ಬದುಕು ಚಿನ್ನವಾಗುತ್ತದೆ , ಸಂಪತ್ತು ವೃದ್ಧಿಯಾಗುತ್ತದೆ ಎಂಬ ಭ್ರಮೆಗೆ ಒಳಗಾಗಿ ಅಕ್ಷಯಾ ತೃತೀಯಾದ ಮಹತ್ವವನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಬಂಗಾರ ಖರೀದಿ ಮಾಡಿದರೆ ಅಲ್ಪ ಸುಖವನ್ನು ಅನುಭವಿಸಬಹುದು ಆದರೆ ನಂತರ ಅದನ್ನು ಕಾಪಾಡಿಕೊಳ್ಳುವ ಚಿಂತೆಯಲ್ಲೇ ಕಳೆಯಬೇಕಾಗುತ್ತದೆ. ಭೋಗ ಸಂಪತ್ತು ವೃದ್ಧಿಯಾಗಿಲ್ಲವೆಂದು ಮಾನಸಿಕ ಕ್ಷೋಭೆಗೆ ಒಳಗಾಗಬೇಕಾಗುತ್ತದೆ.

ಭೋಗ ವಿಲಾಸಗಳಿಗೆ ಮಹತ್ವ ಕೊಡದೇ ಆತ್ಮೋನ್ನತಿಗೆ ನಾವುಗಳು ಮುಂದಾಗುತ್ತಾ ಜೈನ ದರ್ಶನದ ಪ್ರಕಾರ ಸಮ್ಯಗ್ದರ್ಶನದ ಮಹತ್ವಕ್ಕೆ ತಲೆ ಬಾಗುತ್ತಾ ಆತ್ಮ ಸುಖದಲ್ಲಿ ರಮಣ ಮಾಡುವತ್ತ ಚಿಂತಿಸಬೇಕಾಗಿದೆ, ಹೆಜ್ಜೆ ಹಾಕಬೇಕಾಗಿದೆ.

* #ನಿರಂಜನ್_ಜೈನ್_ಕುದ್ಯಾಡಿ*

ಏನ್ ಐಡಿಯಾ ಬಾಸ್.... 😁.
27/04/2022

ಏನ್ ಐಡಿಯಾ ಬಾಸ್.... 😁.

22/04/2022

ಪುರುಷಾರ್ಥ

ಇದೆಲ್ಲಾ ಯಾವ ಪುರುಷಾರ್ಥಕ್ಕೆ? ಅಂತಿರ್ತೀವಲ್ಲ
ಅಂದರೆ ಇದರಿಂದೆಲ್ಲಾ ಏನು ಸಾಧಿಸಿದ ಹಾಗಾಯ್ತು ಅಂತ.
ಬಹಳ ಜನ ತಪ್ಪು ತಿಳಿದುಕೊಂಡಿರೋ ಹಾಗೆ
ಈ ಪುರುಷಾರ್ಥದಲ್ಲಿ ಪುರುಷ ಅಥವಾ ಪೌರುಷ ಇಲ್ಲ
ಪುರುಷಾರ್ಥ ಬರೀ ಗಂಡಸಿಗೆ ಸಂಬಂಧಿಸಿದ್ದೂ ಅಲ್ಲ
ಹಾಗೆ ನೋಡಿದರೆ ಪುರುಷಾರ್ಥಗಳು ನಾಲ್ಕು
ಧರ್ಮ, ಅರ್ಥ, ಕಾಮ, ಮೋಕ್ಷ
ಇವು ಮನುಷ್ಯ ಸಾಧಿಸಬೇಕಾದ ನಾಲ್ಕು ಸಂಗತಿಗಳು ಅಂತಾರೆ.
ಅದಕ್ಕೇನೇ ಪ್ರಯೋಜನವಿಲ್ಲದ ಕೆಲಸ ಅಂತ ಹೇಳೋಕೆ
‘ಇದ್ಯಾವ ಪುರುಷಾರ್ಥಕ್ಕೆ’ ಅಂತ ಕೇಳೋದು
ಮದುವೆಯ ಮಂತ್ರದಲ್ಲಿ ಬರೋ ಧರ್ಮೇಚ ಕಾಮೇಚ ಅರ್ಥೇಚಗಳು
ಇವೇ ಪುರುಷಾರ್ಥಗಳು.
ಇವು ಗಂಡು-ಹೆಣ್ಣು ಇಬ್ಬರಿಗೂ ಅನ್ವಯಿಸ್ತವೆ.

ಹಾಗೇನೇ ವ್ಯಾಕರಣದಲ್ಲಿ ಬರುವ ಉತ್ತಮಪುರುಷವೂ
ಲಿಂಗವನ್ನ ಸೂಚಿಸೋದಿಲ್ಲ

ಇನ್ನು ಮೇಲೆ ಈ ಪದ ಬಳಸುವಾಗ
ನಿಮಗೆ ಇದೆಲ್ಲಾ ನೆನಪಾಗಬೇಕು
ಇಲ್ಲದಿದ್ದರೆ ಇಷ್ಟು ಹೊತ್ತು ಹೇಳಿದ್ದೆಲ್ಲಾ ಯಾವ ಪುರುಷಾರ್ಥಕ್ಕೆ?

ಸರಿಗನ್ನಡಂ ಗೆಲ್ಗೆ

18/04/2022
ಸತ್ಯ ಅನಿಸುದ್ರೆ ಕಾಮೆಂಟ್ ಮಾಡಿ. Made in ಅಂದ್ರೆ ಬೇರೆ ಅರ್ಥ..
17/04/2022

ಸತ್ಯ ಅನಿಸುದ್ರೆ ಕಾಮೆಂಟ್ ಮಾಡಿ. Made in ಅಂದ್ರೆ ಬೇರೆ ಅರ್ಥ..

ವಿಶ್ವದ 20 ನೇ ಅತಿದೊಡ್ಡ ನುಡಿ ಇಟಲಿಯನ್ ನುಡಿಯ ನಾಡಲ್ಲಿ...ವಿಶ್ವದ 28 ನೇ ಅತಿದೊಡ್ಡ ನುಡಿ ಕನ್ನಡ ನುಡಿ.💛❤️🌍ಇಂತಹ ಕನ್ನಡದ ಅಕ್ಷರ ಬರವಣಿಗೆ ಹ...
17/04/2022

ವಿಶ್ವದ 20 ನೇ ಅತಿದೊಡ್ಡ ನುಡಿ ಇಟಲಿಯನ್ ನುಡಿಯ ನಾಡಲ್ಲಿ...ವಿಶ್ವದ 28 ನೇ ಅತಿದೊಡ್ಡ ನುಡಿ ಕನ್ನಡ ನುಡಿ.

💛❤️🌍

ಇಂತಹ ಕನ್ನಡದ ಅಕ್ಷರ ಬರವಣಿಗೆ ಹೊತ್ತುಕೊಂಡು
ವಿದೇಶ ಸುತ್ತುವ ಕನ್ನಡತಿ ಕಂಡು ಎಷ್ಟು ಖುಷಿಯಾಗುತ್ತೆ
ನಮ್ಮ ಕನ್ನಡ ನಮ್ಮ ಹೆಮ್ಮೆ ನಮ್ಮ ಅಕ್ಷರ ನಮ್ಮ ಹೆಮ್ಮೆ ಹಾಗೇ ನಮ್ಮಕಡೆಯಿಂದ ನಮ್ಮ‌ ಕನ್ನಡತಿಗೆ ಹೃದಯ ಪೂರ್ವಕ ಧನ್ಯವಾದಗಳು...💛❤

17/04/2022

ಜೀವನದಲ್ಲಿ ನೆಮ್ಮದಿಯಾಗಿ ಇರೋದು ಯಾರು ಗೊತ್ತ..? ನೋಡಿ ಪ್ರಕ್ಕೃತಿಯೇ ತಿಳಿಸುತ್ತೆ.
ಪೇಜ್ ಲೈಕ್ ಮಾಡಿ ಸಬ್ಸ್ಕ್ರೈಬ್ ಮಾಡಿ.

17/04/2022

Address

Gulu

Website

Alerts

Be the first to know and let us send you an email when KGF posts news and promotions. Your email address will not be used for any other purpose, and you can unsubscribe at any time.

Share


Other Gulu media companies

Show All

You may also like