Adhikar Vani Daily News

Adhikar Vani Daily News ಬಸವ ನಾಡಿನ ಗಟ್ಟಿ ದೈನಿಕ,
"ಅಧಿಕಾರ ವಾಣಿ" ಕನ್ನಡ ದಿನ ಪತ್ರಿಕೆ..
ಸಾಮಾಜಿಕ ಜಾಲತಾಣದ ಮೂಲಕ ಓದುಗರಲ್ಲಿ ತಲಪುವ ಒಂದು ಮಾಧ್ಯಮ

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಅಪಹರಣಗೊಂಡಿದ್ದ ನವ ಜಾತ ಶಿಶುವನ್ನು ರಕ್ಷಿಸುವಲ್ಲಿ ಕಲಬುರಗಿ ನಗರ ಪೊಲೀಸರು...
28/11/2024

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಅಪಹರಣಗೊಂಡಿದ್ದ ನವ ಜಾತ ಶಿಶುವನ್ನು ರಕ್ಷಿಸುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗು ಅಪಹರಣ ಮಾಡಿದ್ದ ಮೂವರು ಮಹಿಳೆಯರನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದಾರೆ.
ಬಂಧಿತರಲ್ಲಿ ಇಬ್ಬರನ್ನು ನನ್ ಮತ್ತು ಫಾತೀಮಾ ಎಂದು ಗುರುತಿಸಲಾಗಿದೆ.

ಕಲಬುರಗಿ: ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿದ್ದು, ವಕ್ಫ್  ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪ್ರತ್ಯೇಕವಾಗಿ ಚಾಲನೆ ನೀಡಿರುವ ಶಾಸಕ ಬಸನಗೌಡ ...
27/11/2024

ಕಲಬುರಗಿ: ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿದ್ದು, ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪ್ರತ್ಯೇಕವಾಗಿ ಚಾಲನೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ
ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ವಿರುದ್ಧದ ಹೋರಾಟ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಯತ್ನಾಳ್, ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ
ಮಾಡಿದ್ರೆ ನಿಮಗ್ಯಾಕೆ ಭಯ, ಟೆನನ್ ಎಂದು ಯಡಿಯೂರಪ್ಪ,
ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.
.official

adhikarvani_daily ವಿಜಯಪರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದಲ್ಲಿ ದಿ-3-II-2024 ರಂದು ಹಣುಮಂತಿ ಹನಮಂತ ಯರಕಿಹಾಳ ಇವರ ಮಗಳಾ...
21/11/2024

adhikarvani_daily ವಿಜಯಪರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದಲ್ಲಿ ದಿ-3-II-2024 ರಂದು ಹಣುಮಂತಿ ಹನಮಂತ ಯರಕಿಹಾಳ ಇವರ ಮಗಳಾದ ಭಾಗಮ್ಮ ವಯಾ 13 ಇವಳನ್ನು ಡವಳಗಿ ಗ್ರಾಮದ ಯುವಕರಾದ ರಮೇಶ
ತಿಪ್ಪಣ್ಣ ತಳವಾರ, ಲಕ್ಷಣ ಸಂಗಪ್ಪ ವಾಲಿಕಾರ, ಶಿವಪ್ಪ ದೇವಪ್ಪ ಸುತಗುಂಡ, ಸಮೀರ ಮಶಾಕಸಾಬ ಅವಟಿ, ಬಸವರಾಜ ತಿಪ್ಪಣ್ಣ ತಳವಾರ ಇವರೆಲ್ಲರು ಸೇರಿ ಭಾಗಮ್ಮಳನ್ನು ಮನೆಯ ಹಿಂದಿನ ತೊಗರಿ ಹೊಲದಲ್ಲಿ; ಬಯಲು ಶೌಚ್ಯಕ್ಕೆ ಹೋಗಿರುವ ವೇಳೆಯಲ್ಲಿ ಸಾಮೊಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಭಾಗಮ್ಮಳ ತಾಯಿ ಹಣಮಂತಿ ಅವರು ಮುದ್ದೇಬಿಹಾಳ ಠಾಣೆಯಲ್ಲಿ ಪೋಕ್ಸ್ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಿಸಿ 15 ದಿನಗಳಾದರೂ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸ ಇಲಾಖೆ ವಿಫಲವಾಗಿದೆ ಎಂದು ಹಣಮಂತಿ ಯರಕಿಹಾಳ ಅವರು ಕುಟುಂಬಸ್ಥರೊಡನೆ
ಅಪ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಹಾಗೂ ಕೇಸ್ ತೆಗೆದುಕೊಳ್ಳಲು ತಡ ಮಾಡಿರುವ ಪಿ.ಎಸ್.ಐಗಳಾದ ಆರ್.ಎಲ್.ಮುನ್ನಾಭಾಯಿ ಹಾಗೂ ಸಂಜೀವ ತಿಪ್ಪಾರೆಡ್ಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಲಿಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು.




ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ 100 ವರ್ಷ ಹಳೆಯದಾದ ಶಾಲೆಯನ್ನು ವಕ್ಸ್ ಆಸ್ತಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಮಂಗಳವಾರ ಆರೋಪಿ...
20/11/2024

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ 100 ವರ್ಷ ಹಳೆಯದಾದ ಶಾಲೆಯನ್ನು ವಕ್ಸ್ ಆಸ್ತಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಮಂಗಳವಾರ ಆರೋಪಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಶಾಲಾ ಆವರಣದಲ್ಲೇ ದರ್ಗಾ ಇರುವುದು, ರಾಷ್ಟ್ರ ಧ್ವಜದ ಬದಲು ಹಸಿರು ಭಾವುಟ ಹಾರುತ್ತಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಅಶೋಕ್
ಕೆಂಡಾಮಂಡಲರಾದರು.
.ashoka_official

ಬೆಂಗಳೂರು: ಕಾಂಗ್ರೆಸ್ ಆಮಿಷಕ್ಕೆ ಬಲಿಯಾದರೆ ಮುಂದೆ ದೇವಸ್ಥಾನಗಳನ್ನೂ ವಕ್ಸ್‌'ಗೆ ಮಾರಿಬಿಡುತ್ತಾರೆ. ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯುವುದಿಲ್...
04/11/2024

ಬೆಂಗಳೂರು: ಕಾಂಗ್ರೆಸ್ ಆಮಿಷಕ್ಕೆ ಬಲಿಯಾದರೆ ಮುಂದೆ ದೇವಸ್ಥಾನಗಳನ್ನೂ ವಕ್ಸ್‌'ಗೆ ಮಾರಿಬಿಡುತ್ತಾರೆ. ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅವರು ಪರಿಚಯಿಸಿದ ವಕ್ಸ್ ಅದಾಲತ್‌ಗಳು ಕಾನೂನುಬಾಹಿರ ಮತ್ತು
ಅಸಾಂವಿಧಾನಿಕ, ವಕ್ಸ್ ಕಾಯಿದೆ ಅಥವಾ ಕಂದಾಯ ಕಾನೂನುಗಳು ವಕ್ಸ್ ಅದಾಲತ್ ನಂತಹ ಸಭೆಗಳಿಗೆ ಅನುಮತಿ ನೀಡುವುದಿಲ್ಲ. ವಕ್ಸ್ ಅದಾಲತ್ ಗಳನ್ನು ನಡೆಸಲು
ಸಂವಿಧಾನದ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ. ಇದು ಅಸಂವಿಧಾನಿಕ ಮಾರ್ಗವಾಗಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ
ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸುವವರೆಗೂ ಬಿಜೆಪಿ ಹೋರಾಟ
ನಡೆಸಲಿದೆ ಎಂದು ಹೇಳಿದರು.

.fever2.0
ದಯವಿಟ್ಟು ಫಾಲೋ ಮಾಡಿ 🙏🏻🙏🏻

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೆ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಸ್ ಆಸ್ತಿ ಎಂದು ಗೆಜೆಟ್ ನೋಟಿಫ...
28/10/2024

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೆ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಸ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್‌ ಆಗಿರುವುದು ವಿವಾದಕ್ಕೀಡಾಗಿದ್ದು, ಈ ಬಗ್ಗೆ ಸಚಿವ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.
ಪಾಟೀಲ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಸ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಗೆ ಹೋಗುವುದಿಲ್ಲ ಎಂದು ಟ್ವಿಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿ ಆಗಿದೆ ಎಂದರೂ.

ವಕ್ಸ್ ಆಕ್ರಮಿತ ಆಸ್ತಿ, ವ್ಯಾಜ್ಯಗಳ ಕುರಿತಾಗಿ ವಿಜಯಪುರ ಜಿಲ್ಲೆಯ ಹೊನವಾಡ, ಕೋಲ್ದಾರ ಮತ್ತಿತರ ಗ್ರಾಮಗಳ ರೈತರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭ...
26/10/2024

ವಕ್ಸ್ ಆಕ್ರಮಿತ ಆಸ್ತಿ, ವ್ಯಾಜ್ಯಗಳ ಕುರಿತಾಗಿ ವಿಜಯಪುರ ಜಿಲ್ಲೆಯ ಹೊನವಾಡ, ಕೋಲ್ದಾರ ಮತ್ತಿತರ ಗ್ರಾಮಗಳ ರೈತರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭೆ ನಡೆಸಿ ಚರ್ಚಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರ ಎಕರೆಗಳಿಗೂ ಅಧಿಕ ಭೂಮಿ ಅತಿಕ್ರಮಣವಾಗಿದ್ದು, ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮ ಒಂದರಲ್ಲೇ 1,200 ಎಕರೆ ಗಳಷ್ಟು ವಕ್ಸ್ ಆಸ್ತಿ ಎಂದು ನಮೂದಾಗಿದೆ ಎಂದು ತಿಳಿಸಿದರು.

ಅಧಿಕಾರ ವಾಣಿ: 25-10-2024, ಮುದ್ದೇಬಿಹಾಳ ಭಾರೀ ಕ್ರೇನ್ನ ಚಕ್ರ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿ...
25/10/2024

ಅಧಿಕಾರ ವಾಣಿ: 25-10-2024, ಮುದ್ದೇಬಿಹಾಳ ಭಾರೀ ಕ್ರೇನ್ನ ಚಕ್ರ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ
ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ
ಹತ್ತಿರ ಹೊಂಡಾ ಶೋರೂಮ್ ಬಳಿ ಮುದ್ದೇಬಿಹಾಳ ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ..ಮೃತನನ್ನು ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು
ನಾಗರಾಳ ಗ್ರಾಮದ ಶಿವಪುತ್ರಪ್ಪ ಭಜಂತ್ರಿ (48) ಎಂದು
ಗುರುತಿಸಲಾಗಿದೆ.


ದಯವಿಟ್ಟು ಫಾಲೋ ಮಾಡಿ 🙏🏻🙏🏻

ವಿಜಯಪುರ ನಗರದಾದ್ಯಂತ ಕೋಟೆಗೋಡೆ ಸುತ್ತಲೂ ಇರುವಕಂದಕದ ಸ್ಥಳಗಳಲ್ಲಿ ಅತಿಕ್ರಮಣ- ಒತ್ತುವರಿಯಾದ ಪ್ರದೇಶವನ್ನು ಸರ್ವೇ ಮಾಡಿ, ಒತ್ತುವರಿಗೊಂಡಿರುವ ...
24/10/2024

ವಿಜಯಪುರ ನಗರದಾದ್ಯಂತ ಕೋಟೆಗೋಡೆ ಸುತ್ತಲೂ ಇರುವ
ಕಂದಕದ ಸ್ಥಳಗಳಲ್ಲಿ ಅತಿಕ್ರಮಣ- ಒತ್ತುವರಿಯಾದ ಪ್ರದೇಶವನ್ನು ಸರ್ವೇ ಮಾಡಿ, ಒತ್ತುವರಿಗೊಂಡಿರುವ ಸ್ಥಳವನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು ಮತ್ತು 2025 ರ ವೇಳೆಗೆ 10,000ಪೊಲೀಸ್ ಕ್ವಾರ್ಟಸ್‌್ರಗಳನ್ನು ನಿರ್ಮಿಸಲಾಗುವುದು...
22/10/2024

ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು ಮತ್ತು 2025 ರ ವೇಳೆಗೆ 10,000
ಪೊಲೀಸ್ ಕ್ವಾರ್ಟಸ್‌್ರಗಳನ್ನು ನಿರ್ಮಿಸಲಾಗುವುದು ಎಂದು
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ
ಘೋಷಿಸಿದ್ದಾರೆ. ಪೊಲೀಸ್ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕರ್ತವ್ಯದ ವೇಳೆ ಹುತಾತ್ಮರಾದ ಕರ್ನಾಟಕದಲ್ಲಿ 12 ಮಂದಿ ಸೇರಿದಂತೆ ದೇಶದಲ್ಲಿ 216 ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ, ಪೊಲೀಸರಿಗೆ ಮನೆ ನೀಡುವುದು ಸರ್ಕಾರದ ಕರ್ತವ್ಯ. 2025 ರ ವೇಳೆಗೆ 10,000 ವಸತಿ ಕ್ವಾರ್ಟಸ್ ನಿರ್ಮಿಸುತ್ತೇವೆ, ಇದಕ್ಕಾಗಿ 2,000 ಕೋಟಿ ರೂ. ಮೀಸಲಿಡಲಾಗಿದೆ ಎಂದರು. 100 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುವುದು, ಎಂದರು...
ದಯವಿಟ್ಟು ಫಾಲೋ ಮಾಡಿ 🙏🏻

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ- 2ಎ ಅಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿತೀ...
19/10/2024

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ- 2ಎ ಅಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ
ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೂಡಲ ಸಂಗಮದ ಪಂಚಮಸಾಲಿ
ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ
ನಿಯೋಗದೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತಮನಸ್ಸು
ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು.
ಎಂಬುವುದು ನಮ್ಮ ಸರ್ಕಾರದ ನಿಲುವು ಎಂದರು.
ದಯವಿಟ್ಟು ಫಾಲೋ ಮಾಡಿ 🙏🏻

ಬೆಂಗಳೂರು: ರಾಜ್ಯದ ಎಲ್ಲಾ ಎಸ್ ಟಿ ವಸತಿ ಶಾಲೆಗಳಿಗೆ 'ಮಹರ್ಷಿವಾಲ್ಮೀಕಿ ವಸತಿ ಶಾಲೆಗಳು” ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸ...
18/10/2024

ಬೆಂಗಳೂರು: ರಾಜ್ಯದ ಎಲ್ಲಾ ಎಸ್ ಟಿ ವಸತಿ ಶಾಲೆಗಳಿಗೆ 'ಮಹರ್ಷಿ
ವಾಲ್ಮೀಕಿ ವಸತಿ ಶಾಲೆಗಳು” ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಿಸಿದ್ದಾರೆ. ಇಂದು ಮಹರ್ಷಿ ವಾಲ್ಮೀಕಿ ಜಯಂತಿ
ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, 'ರಾಜ್ಯದ ಎಲ್ಲಾ ಸರ್ಕಾರಿ ವಸತಿ ಶಾಲೆಗಳನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆಗಳು ಎಂದು ಮರುನಾಮಕರಣ ಮಾಡಲಾಗುವುದು. ರಾಯಚೂರು ವಿಶ್ವವಿದ್ಯಾಲಯವನ್ನು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದರು.

ದಯವಿಟ್ಟು ಫಾಲೋ ಮಾಡಿ 🙏🏻

ಸಿ. ಎಂ ಸಿದ್ದರಾಮಯ್ಯ ನವರ ವಿರುದ್ದದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪಾಲರಿಗೆ Z ಕೆಟಗರಿ ಭದ್ರತೆಯನ್ನು ನೀಡಿ ಕೇಂದ್ರ ಸರ್...
15/10/2024

ಸಿ. ಎಂ ಸಿದ್ದರಾಮಯ್ಯ ನವರ ವಿರುದ್ದದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪಾಲರಿಗೆ Z ಕೆಟಗರಿ ಭದ್ರತೆಯನ್ನು ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ದಯವಿಟ್ಟು ಫಾಲೋ ಮಾಡಿ 🙏🏻

ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿ...
10/10/2024

ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.

ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿ, ಹಿರಿಯ ಚೇತನಕ್ಕೆ ಅಶೃತರ್ಪಣ ಸಲ್ಲಿಸಿದ್ದಾರೆ:

ಸಿರವಾರ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ನಾಮಫಲಕಕ್ಕೆ ಕಿಡಗೇಡಿಗಳು ಅಪಮಾನಗೊಳಿಸ...
09/10/2024

ಸಿರವಾರ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ನಾಮಫಲಕಕ್ಕೆ ಕಿಡಗೇಡಿಗಳು ಅಪಮಾನಗೊಳಿಸಿದ್ದಾರೆ.. ಈ ಸಂಬಂಧ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿ ಈ ರೀತಿ ಅಪಮಾನವು ಎರಡನೇ ಬಾರಿ ನಡೆದಿದ್ದು, ಕೃತ್ಯ ಎಸಗಿರುವವರ ಮೇಲೆ ಕ್ರಮ ಕೈಗೊಳ್ಳಲು ಅಗ್ರಹಿಸಿದರು...
ಅಧಿಕಾರ ವಾಣಿ ಸುದ್ದಿ: 09-10-2024
ದಯವಿಟ್ಟು ಫಾಲೋ ಮಾಡಿ 🙏🏻

ಬೆಂಗಳೂರಿನಲ್ಲಿ ನೈಜರಿಯಾ ಮೂಲದ ವ್ಯಕ್ತಿಯಿಂದ 6 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, ಅತೀ ದೊಡ್ಡ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ ಸಿಸಿಬಿ ಪೊಲೀಸರು...
08/10/2024

ಬೆಂಗಳೂರಿನಲ್ಲಿ ನೈಜರಿಯಾ ಮೂಲದ ವ್ಯಕ್ತಿಯಿಂದ 6 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, ಅತೀ ದೊಡ್ಡ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ ಸಿಸಿಬಿ ಪೊಲೀಸರು...
ಅಧಿಕಾರ ವಾಣಿ ಸುದ್ದಿ : 08-10-2024
ದಯವಿಟ್ಟು ಫಾಲೋ ಮಾಡಿ 🙏🏻

ಚೆನ್ನೈನಲ್ಲಿ ಏರ್ ಶೋ ವೇಳೆ ಹೀಟ್ ಸ್ಟ್ರೋಕದಿಂದ್ 4ಜನ ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ... ಅಧಿಕಾರ ವಾಣಿ ಸುದ್ದಿ...
07/10/2024

ಚೆನ್ನೈನಲ್ಲಿ ಏರ್ ಶೋ ವೇಳೆ ಹೀಟ್ ಸ್ಟ್ರೋಕದಿಂದ್ 4ಜನ ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ...
ಅಧಿಕಾರ ವಾಣಿ ಸುದ್ದಿ : 07-10-2024
ದಯವಿಟ್ಟು ಫಾಲೋ ಮಾಡಿ 🙏🏻

- ಬಾಗಲಕೋಟೆ : ಜಿಲ್ಲೆಯ ಗದ್ದನಕೇರಿ ಗ್ರಾಮದ ರಾಮಾರೂಢ ಮಠದಲ್ಲಿ ವ್ಯಕ್ತಿಯೊಬ್ಬರು ಸ್ವಾಮೀಜಿಯೊಬ್ಬರನ್ನು ಬ್ಲಾಕ್ ಮೇಲ್ ಮಾಡಿ ಬರೋಬ್ಬರಿ 1 ಕೋಟಿ...
30/09/2024

- ಬಾಗಲಕೋಟೆ : ಜಿಲ್ಲೆಯ ಗದ್ದನಕೇರಿ ಗ್ರಾಮದ ರಾಮಾರೂಢ ಮಠದಲ್ಲಿ ವ್ಯಕ್ತಿಯೊಬ್ಬರು ಸ್ವಾಮೀಜಿಯೊಬ್ಬರನ್ನು ಬ್ಲಾಕ್ ಮೇಲ್ ಮಾಡಿ ಬರೋಬ್ಬರಿ 1 ಕೋಟಿ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಪರಮ ರಾಮಾರೂಢ ಸ್ವಾಮೀಜಿಗಳಿಗೆ ಮುಧೋಳ ಪಟ್ಟಣದ ಪ್ರಕಾಶ ಎಂಬ ವ್ಯಕ್ತಿ ತಾನು ಡಿವೈಎಸ್ಪಿ, ಎಡಿಜಿಪಿ • ಅಂತ ಹೇಳಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.
ಹೋಮ್ ಮಿನಿಸ್ಟರ್ ಕಚೇರಿಯಿಂದ ಮಾಹಿತಿ ಬಂದಿದ್ದು, "ನಿಮ್ಮನ್ನು
ಬಂಧಿಸಿ ಜೈಲಿಗೆ ಹಾಕ್ತವೆ” ಎಂದು ಹೆದರಿಸಿ, ಬೆಂಗಳೂರಿನಲ್ಲಿ 61 ಲಕ್ಷ ರೂಪಾಯಿ ಮತ್ತು ಹುಬ್ಬಳ್ಳಿಯಲ್ಲಿ 39 ಲಕ್ಷ ರೂಪಾಯಿ ವಸೂಲಿ
ಮಾಡಿದ್ದಾನೆ. ಇಷ್ಟಾದರೂ, ಮತ್ತೆ ಮತ್ತೇ ಹಣ ಕೇಳಲು ಮುಂದಾದಾಗ ಆತಂಕಗೊಂಡ ಸ್ವಾಮೀಜಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ. ಸ್ವಾಮೀಜಿಯ ದೂರು ನಂತರ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕಾಶನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಈ ನಡುವೆ, ಸ್ವಾಮೀಜಿ ಇಷ್ಟು ಹಣ ಕೊಟ್ಟಿದ್ದೇಕೆ ಎಂಬ ವಿಚಾರದಲ್ಲಿ ಜನರಲ್ಲಿ ಕುತೂಹಲ ಮೂಡಿದೆ. ಈ ಪ್ರಕರಣವನ್ನು ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಜೆಡಿಎಸ್‌ ಅಭ್ಯರ್ಥಿ ಪ್ರಕಾಶ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಪ್ರಕಾಶ
ಮುಧೋಳನು ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ 2023 ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ.
.mandi

ಅಧಿಕಾರ ವಾಣಿ ಸುದ್ದಿ : 30-09-2024
ದಯವಿಟ್ಟು ಫಾಲೋ ಜೊತೆ ಲೈಕ್ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡ್ರಿ 🙏🏻

Address

Ward No 16, MG Nagar, Gunnapur Road, Vijayapur
Vijayapura
586104

Alerts

Be the first to know and let us send you an email when Adhikar Vani Daily News posts news and promotions. Your email address will not be used for any other purpose, and you can unsubscribe at any time.

Share