Bijapur Updates Kannada - ಬಿಜಾಪುರ ಅಪ್ಡೇಟ್ಸ ಕನ್ನಡ

  • Home
  • India
  • Vijayapura
  • Bijapur Updates Kannada - ಬಿಜಾಪುರ ಅಪ್ಡೇಟ್ಸ ಕನ್ನಡ

Bijapur Updates Kannada - ಬಿಜಾಪುರ ಅಪ್ಡೇಟ್ಸ ಕನ್ನಡ Contact information, map and directions, contact form, opening hours, services, ratings, photos, videos and announcements from Bijapur Updates Kannada - ಬಿಜಾಪುರ ಅಪ್ಡೇಟ್ಸ ಕನ್ನಡ, Media/News Company, Vijayapura.
(1)

14/11/2022
14/11/2022

ಕೇಂದ್ರ ಮತ್ತು ರಾಜ್ಯ ಸರಕಾರದ ಗೆಜೆಟ್‌ ಅಧಿಸೂನೆಯ ಪ್ರಕಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಪಟ್ಟಿಯ ಕ್ರ.ಸಂ 38 ರಲ್ಲಿ ಬರುವ ನಾಯಕ, ವಾಲ್ಮಿಕಿ ಜನಾಂಗದ ಪರ್ಯಾಯ ಪದವಾದ ತಳವಾರ ಮತ್ತು ಪರಿವಾರ ಜನಾಂಗದವರಿಗೆ ಮಾತ್ರ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡುವದು, ಅದನ್ನು ಬಿಟ್ಟು ಪ್ರವರ್ಗ-1ರ ಹಿಂದುಳಿದ ಜಾತಿಯಲ್ಲಿ ಬರುವ ಅಂಬಿಗ/ಕಬ್ಬಲಿಗ/ಕೋಲಿ ತಳವಾರ ಜಾತಿಯವರಿಗೆ ಎಸ್.ಟಿ ಜಾತಿ ಪತ್ರ ನೀಡುತ್ತಿರುವ ತಹಶೀಲ್ದಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು
,ಮಾರೇಪ್ಪ ನಾಯಕ/ ಮಗದಂಪೂರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಎಸ್‌.ಸಿ/ಎಸ್.ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ (ರಿ), ಅವರು ಜಿಲ್ಲಾದಿಕಾರಿಗಳ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

30/08/2022

We are service provider for air conditioning installation, Repair, service, AMC, and project work for Hotels, Hospitals, malls, commercial complex.

We deals with all leading brands



Contacts for your Hospital, Hotels and Malls for air conditioner maintenance, repair and AMC.

Visit on our website www.technafa.com
Contact us on 9972610016
E-mail on [email protected]

12/01/2022

ಕೋವಿಡ್-19 ಪರಿಸ್ಥಿತಿ ಕುರಿತು ವಿಡಿಯೊ ಕಾಲ್‌ ಮೂಲಕ ನಾಳೆ ಸಂಜೆ 4:30ಕ್ಕೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ

12/01/2022

ವಿಜಯಪುರ-ಜಿಲ್ಲೆಯಲ್ಲಿ 15 ವರ್ಷದೊಳಗಿನ 32 ಮಕ್ಕಳಿಗೆ ಕೋವಿಡ್‌ ಪಾಸಿಟಿವ್

12/01/2022

ಖಾಸಗಿ ಕೋವಿಡ್‌ ಕೇರ್‌ ಸೆಂಟರ್ಗಳಲ್ಲಿ ಚಿಕೆತ್ಸೆ ದರ ನಿಗದಿ
1 ದಿನಕ್ಕೆ ಬಜೆಟ್‌ ಕೊವಿಡ್‌ ಕೇರ್‌ ಸೆಂಟರ್‌ ಗಳಲ್ಲಿ:4,000
1 ದಿನಕ್ಕೆ 3 ಸ್ಟಾರ ಕೇರ ಸೆಂಟರ್‌ ಗಳಲ್ಲಿ:8,000
1 ದಿನಕ್ಕೆ 5 ಸ್ಟಾರ ಕೇರ ಸೆಂಟರ್‌ ಗಳಲ್ಲಿ:10,000

12/01/2022

ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟ
ಕರ್ನಾಟಕದಲ್ಲಿ:21,390
ಬೆಂಗಳೂರಿನಲ್ಲಿ:15,617
ವಿಜಯಪುರದಲ್ಲಿ:64

ಸೆಂಚೂರಿ ಮಿಸ್‌ ಆದರು ದಾಖಲೆ ಮಿಸ್‌ ಆಗಲಿಲ್ಲ...ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸನಲ್ಲಿ ಟೀಂ ಇಂಡಿಯಾ 223 ರ...
12/01/2022

ಸೆಂಚೂರಿ ಮಿಸ್‌ ಆದರು ದಾಖಲೆ ಮಿಸ್‌ ಆಗಲಿಲ್ಲ...

ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸನಲ್ಲಿ ಟೀಂ ಇಂಡಿಯಾ 223 ರನ್‌ ಗಳಿಗೆ ಆಲೌಟ್‌ ಆಗಿದೆ.

ನಾಯಕ ವಿರಾಟ್‌ ಕೊಹ್ಲಿಯ ಏಕಾಂಗಿ ಹೋರಾಟದ ಫಲವಾಗಿ ಟೀಂ ಇಂಡಿಯಾ ಇನ್ನೂರರ ಗಡಿ ದಾಟಿದೆ.

ಅಸಲಿಗೆ ವಿರಾಟ್ ಅವರ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿತ್ತು. ಮಂಗಳವಾರ ಆಫ್ರಿಕಾ ನೆಲದಲ್ಲಿ ಹಿಂದೆಂದೂ ನೋಡಿರದ ವಿರಾಟ್ ಕೊಹ್ಲಿಯ ದರ್ಶನವಾಯಿತು.

ಸದಾ 50ರ ಸರಾಸರಿಯಲ್ಲಿ ಬ್ಯಾಟ್ ಬೀಸುವ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ 21 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದರು.

ತಮ್ಮ ಇನ್ನಿಂಗ್ಸ್ ನಲ್ಲಿ 201 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 79 ರನ್ ಗಳನ್ನು ಸಿಡಿಸಿದರು. ಇದರಲ್ಲಿ 12 ಬೌಂಡರಿಗಳು ಒಂದು ಸಿಕ್ಸರ್ ಇದೆ.

ವಿರಾಟ್ ಕೊಹ್ಲಿ ಈ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು, ಈ ಬಾರಿ ವಿರಾಟ್ ಸೆಂಚೂರಿ ಬಾರಿಸಿಯೇ ತೀರುತ್ತಾರೆ ಎಂದು ಭಾವಿಸಿದ್ದರು. ಆದ್ರೆ ಆ ನಿರೀಕ್ಷೆ ಹುಸಿಯಾಯ್ತು.

ಟೀಂ ಇಂಡಿಯಾ 33 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಬಂದ ವಿರಾಟ್, ಅತ್ಯಂತ ಎಚ್ಚರಿಕೆಯಲ್ಲಿ ಇನ್ನಿಂಗ್ಸ್ ಕಟ್ಟಿದರು.

ಅನವಶ್ಯಕ ಹೊಡೆತಕ್ಕೆ ಕೈ ಹಾಕದೇ ಸಾವಧಾನವಾಗಿ ರನ್ ಗಳಿಸಿದ್ರು. ಇನ್ನೇನು ವಿರಾಟ್ ಶತಕ ಬಾರಿಸುತ್ತಾರೆ ಅನ್ನುಷ್ಟರಲ್ಲಿ ರಬಾಡ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಈ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸದೇ ಇದ್ದರೂ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಬರೆದುಕೊಂಡರು.

ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾದ ಬ್ಯಾಟರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಆ ಮೂಲಕ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದರು.

ದಕ್ಷಿಣ ಆಫ್ರಿಕಾ ನೆಲದಲ್ಲಿ ದ್ರಾವಿಡ್, 11 ಟೆಸ್ಟ್‌ನಲ್ಲಿ 624 ರನ್‌ ಗಳಿಸಿದ್ದರು. ಪ್ರಸಕ್ತ ಪಂದ್ಯಗಳಲ್ಲಿ ವಿರಾಟ್ 14 ರನ್ ಗಳಿಸುವ ಮೂಲಕ ಆ ದಾಖಲೆ ಮುರಿದರು.

ಇನ್ನು ಈ ಪಟ್ಟಿಯಲ್ಲಿ ದಿಗ್ಗಜ ಬ್ಯಾಟರ್‌ ಸಚಿನ್‌ ಟೆಂಡೂಲ್ಕರ್‌ (15 ಪಂದ್ಯಗಳಲ್ಲಿ 1161 ರನ್‌ ಗಳೊಂದಿಗೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.

ಇತ್ತ ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ 7 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 50ರ ಸರಾಸರಿಯಲ್ಲಿ 626* ರನ್ ಗಳಿಸಿದ್ದಾರೆ. ಇದರಲ್ಲಿ 2 ಸೆಂಚರಿಗಳು, 2 ಅರ್ಧ ಸೆಂಚರಿಗಳು ಇವೆ.

14/12/2021
02/12/2021

ಇಂದು ವಿಜಯಪುರ ತಾಲ್ಲೂಕಿನ ರತ್ನಾಪುರ ಗ್ರಾಮದ ಶಾಲಾ- ಮಕ್ಕಳಿಗೆ ಬಹಳ ಸಂಕಷ್ಟಕ್ಕೆ ಈಡು ಮಾಡಿದೆ ಗ್ರಾಮಾಂತರ ಹಳ್ಳಿ ಹಳ್ಳಿಯಿಂದ ಬರುವಂತ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದ ಮಕ್ಕಳು ಪರದಾಡುವಂತಾಗಿದೆ ಅದನ್ನು ಮನಗಂಡ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷರಾದ ಶ್ರೀ ವಿಜುಗೌಡ ಎಸ್ ಪಾಟೀಲ್ ಅವರು,KSRTC DC ಅಧಿಕಾರಿಗೆ ಕರೆಮಾಡಿ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ಸನ್ನು ಬಿಡಬೇಕೆಂದು ಹೇಳಿದರು.
Credit: Basvaraj Bagalai

ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊಸ #ವಿಜಯಪುರ:ನಗರದ "ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗಣೇಶನಗರ" ವ್ಯಾಕ್ಸಿನೇಷನ ಕೇಂದ್ರದಲ್ಲಿ ವ್ಯಾಕ್ಸಿನ್ ಕೊ...
12/11/2021

ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊಸ

#ವಿಜಯಪುರ:ನಗರದ "ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗಣೇಶನಗರ" ವ್ಯಾಕ್ಸಿನೇಷನ ಕೇಂದ್ರದಲ್ಲಿ ವ್ಯಾಕ್ಸಿನ್ ಕೊಡದೆ, ವ್ಯಾಕ್ಸಿನ್ ಕೊಟ್ಟಿದ್ದಾರೆಂದು ದಾಖಲೆಗಳನ್ನು ಪಡೆದುಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಗಣೇಶನಗರ ನಿವಾಸಿಯಾಗಿರುವ ತೇಜಶ್ರಿಯವರು ತಮ್ಮ ತಾಯಿಯೊಂದಿಗೆ ನಗರದಲ್ಲಿರುವ "ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗಣೇಶನಗರ"ಕ್ಕೆ ತಮ್ಮ ತಾಯಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋಗಿದ್ದರು.ಅಲ್ಲಿನ ಸಿಬ್ಬಂದಿ ಎಲ್ಲ ವಿವರಗಳನ್ನು ಹಾಗು ಒ ಟಿ ಪಿಯನ್ನು ತಮ್ಮ ರೆಜಿಸ್ಟಾರನಲ್ಲಿ ನಮೂದಿಸಿಕೊಂಡರು. ತೇಜಶ್ರೀ ತಮ್ಮ ತಾಯಿಗೆ ವ್ಯಾಕ್ಸಿನ್ ಕೊಡಲು ಹಳಿದಾಗ 20ಜನರು ಬರುವವರೆಗೆ ಕಾಯಿರಿ ಎಂದು ಹೆಳಿದರು.ತದ ನಂತರ 20ಜನರು ಬರದ ಕಾರಣ ತೇಜಶ್ರಿ ಮತ್ತು ಅವರ ತಾಯಿ ಮನೆಗೆ ಮರಳಿದರು.ಆದರೆ ಕೆಲ ದಿನಗಳ ನಂತರ ವ್ಯಾಕ್ಸಿನ್‌ತೆಗೆದುಕೊಂಡಿದ್ದಾರಂದು ತೇಜಶ್ರಿಯವರ ತಾಯಿಯ ಪ್ರಮಾಣಪತ್ರದ ಮೆಸೆಜು ಬಂದಿದೆ. ಈ ರೀತಿ ಸಾಕಷ್ಟು ಜನರಿಗೆ ಆಗಿದೆ ಎಂದು ತೇಜಶ್ರಿಯವರು" ಬಿಜಾಪುರ ಅಪ್ಡೇಟ್ಸ"ನೊಂದಿಗೆ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.ಹಾಗು ಆರೋಗ್ಯ ಕೇಂದ್ರದವರು ಮಾಡುತ್ತಿರುವ ಮೊಸದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ತಮ್ಮ ಜೊತೆಯು ಈ ರೀತಿ ಆದರೆ ಕಮೆಂಟಿನಲ್ಲಿ ತಿಳಿಸಿ. ಇದರ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕೆಂದು ಆಗ್ರಹಿಸುತ್ತೇವೆ.

Address

Vijayapura
586109

Website

Alerts

Be the first to know and let us send you an email when Bijapur Updates Kannada - ಬಿಜಾಪುರ ಅಪ್ಡೇಟ್ಸ ಕನ್ನಡ posts news and promotions. Your email address will not be used for any other purpose, and you can unsubscribe at any time.

Videos

Share