Kundapura Mirror

  • Home
  • Kundapura Mirror

Kundapura Mirror Contact information, map and directions, contact form, opening hours, services, ratings, photos, videos and announcements from Kundapura Mirror, Media/News Company, .
(1)

ಕುಂದಾಪುರ :ಖ್ಯಾತ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ ಅವರಿಗೆ ಮಾತೃ ವಿಯೋಗಕುಂದಾಪುರ ಮಿರರ್ ಸುದ್ದಿ...ಕುಂದಾಪುರ : ಇಲ್ಲಿನ ಕುಂದೇಶ್ವರ ದೇವಸ್ಥಾ...
23/06/2024

ಕುಂದಾಪುರ :ಖ್ಯಾತ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ ಅವರಿಗೆ ಮಾತೃ ವಿಯೋಗ

ಕುಂದಾಪುರ ಮಿರರ್ ಸುದ್ದಿ...

ಕುಂದಾಪುರ : ಇಲ್ಲಿನ ಕುಂದೇಶ್ವರ ದೇವಸ್ಥಾನದ ಬಳಿಯ ನಿವಾಸಿ, ಖ್ಯಾತ ಪತ್ರಿಕಾ ಛಾಯಾಗ್ರಾಹಕ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂತೋಷ್ ಕುಂದೇಶ್ವರ ಅವರ ತಾಯಿ ಜಯ (69 ) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಸ್ಥಳೀಯವಾಗಿ ಜಯಕ್ಕ ಎಂದೇ ಗುರ್ತಿಸಲ್ಪಡುತ್ತಿದ್ದ ಇವರು ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಜನಮನ್ನಣೆ ಗಳಿಸಿದ್ದರು. ಮೃತರು ಪತಿ, ರಾಷ್ಟ್ರ ಪ್ರಶಸ್ತಿ ಮನ್ನಣೆ ಪಡೆದ ಛಾಯಾಗ್ರಾಹಕ ಪುತ್ರ ಸಂತೋಷ್ ಕುಂದೇಶ್ವರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕುಂದಾಪುರ :ಸಂಗೀತದಿಂದ ಸ್ವಸ್ಥ ಸಮಾಜ ನಿರ್ಮಾಣ: ವಸಂತ ಗಳಿಯಾರ್ಕುಂದಾಪುರ ಮಿರರ್ ಸುದ್ದಿ... ಕುಂದಾಪುರ: ಸಂಗೀತ ಹೇಳಿ ಅನುಭವಿಸುವುದಕ್ಕಿಂತಲೂ ಸ...
22/06/2024

ಕುಂದಾಪುರ :ಸಂಗೀತದಿಂದ ಸ್ವಸ್ಥ ಸಮಾಜ ನಿರ್ಮಾಣ: ವಸಂತ ಗಳಿಯಾರ್

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ: ಸಂಗೀತ ಹೇಳಿ ಅನುಭವಿಸುವುದಕ್ಕಿಂತಲೂ ಸಂಗೀತ ಕೇಳಿ ಅನುಭವಿಸುವುದರಲ್ಲಿ ಹೆಚ್ಚಿನ ಸುಖವಿದೆ. ಸಂಗೀತ ಅಂದರೆ ಅದು ಬರಿ ಹಾಡು ಆಗಿರಬೇಕು ಅಂತೇನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿಗಳಲ್ಲಿ, ವಸ್ತುವಿನಲ್ಲಿ ಸಂಗೀತವಿದೆ. ಬೆಳಿಗ್ಗೆ ಎದ್ದಾಗ ಹಕ್ಕಿಗಳ ಕೂಗು, ಪ್ರಾಣಿಗಳ ಕೂಗು, ಗಿಡ ಮರಗಳ ಸದ್ದು, ನೀರು ಹರಿಯುವ ಸದ್ದು ಹೀಗೆ ಎಲ್ಲದರಲ್ಲಿಯೂ ಒಂದೊಂದು ರೀತಿಯ ಸಂಗೀತ ಹೊರ ಹೊಮ್ಮುತ್ತದೆ. ಸಂಗೀತ ಮನಸ್ಸಿಗೆ, ದೇಹಕ್ಕೆ ಅಮೂಲ್ಯ ಚೈತನ್ಯ, ನವೋಲ್ಲಾಸ ನೀಡುವ ಸಾಧನವಾಗಿದೆ. ಸಂಗೀತ ಹೇಳುವ ಮತ್ತು ಕೇಳುವ ಹವ್ಯಾಸದಿಂದ ಆರೋಗ್ಯ ಮತ್ತು ಆಯಸ್ಸು ವೃದ್ದಿಯಾಗುವುದರ ಜೊತೆಗೆ ಒಂದು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಕಲಾಕ್ಷೇತ್ರದ ಪ್ರಕಾಶಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ಸಾಮಾಜಿಕ ಹೋರಾಟಗಾರ ಸೋಮಶೇಖರ ಶೆಟ್ಟಿ ಕೆಂಚನೂರು, ಕುಸುಮಾಕರ ಶೆಟ್ಟಿ, ಉದ್ಯಮಿ ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಾಪ್ತಿ ಹೆಗ್ಡೆ ಮತ್ತು ಕಮಲ್ ಕುಂದಾಪುರ ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.

22/06/2024

ಕುಂದಾಪುರ ಮಿರರ್ ಸುದ್ದಿ...
ಕಂಬದಕೋಣೆ : ಬಸ್ಸು ಸೇವೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

22/06/2024

ಕುಂದಾಪುರ ಮಿರರ್ ಸುದ್ದಿ...
ಯಡಮೊಗೆ :ಉದ್ಘಾಟನೆಗೆ ಸಜ್ಜಾದ ರಾಂಪೈಜೆಡ್ಡು ಸೇತುವೆ

ಶಾಸಕ ಗುರುರಾಜ ಗಂಟಿಹೊಳೆ ಅವರ ಹೊಸದೊಂದು ಪರಿಕಲ್ಪನೆಯ ಕಾಲುಸಂಕ ನಿರ್ಮಾಣ ಯೋಜನೆ ಅನುಷ್ಠಾನ

ಲಾರಿ, ಬಸ್ಸಿನ ಹಳೆಯ ಚಾಸಿಸ್ ಗಳನ್ನು ಪ್ರಮುಖ ಆಧಾರವನ್ನಾಗಿ ಬಳಿಸಿ ಕಾಲುಸಂಕ ನಿರ್ಮಾಣ

22/06/2024

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಲೋಕಸಭೆ, ಪರಿಷತ್ ಚುನಾವಣೆಯ ಅಭೂತಪೂರ್ವ ಗೆಲುವು ನಮಗೆ ಮುಂದಿನ ಎಲ್ಲ ಚುನಾವಣೆಗಳಿಗೆ ಧೈರ್ಯ ಕೊಟ್ಟಿದೆ - ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ
Kishore Kumar Kundapura

ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್  ಕಿರಿಮಂಜೇಶ್ವರ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಅಂತರಾಷ್ಟ್ರೀಯ...
22/06/2024

ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.

ಕುಂದಾಪುರ ಮಿರರ್ ಸುದ್ದಿ...
ಹೆಮ್ಮಾಡಿ :ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಜಂಟಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ ಆಚರಿಸಲಾಯಿತು. ಶಾಲಾ ಯೋಗ ಶಿಕ್ಷಕಿ ಅನ್ವಿತಾ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಜನತಾ ಪದವಿಪೂರ್ವ ಕಾಲೇಜಿನ ಅಂತರರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆಗಳಾದ ಧನ್ವಿ ಮರವಂತೆ, ತನ್ವಿತಾ, ನಿರೀಕ್ಷಾ ಇವರಿಂದ ಹಾಗೂ ಶಾಲಾ ಆಯ್ದ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ,ಜನತಾ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು,ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಕುಂದಾಪುರ ಮಿರರ್ ಸುದ್ದಿ...ವಂಡ್ಸೆ: ಯೋಗವನ್ನು ನೀವು ಮಾಡುತ್ತಿದ್ದರೆ, ರೋಗವ...
22/06/2024

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ ಮಿರರ್ ಸುದ್ದಿ...
ವಂಡ್ಸೆ: ಯೋಗವನ್ನು ನೀವು ಮಾಡುತ್ತಿದ್ದರೆ, ರೋಗವನ್ನು ತಡೆಯಬಹುದು. "ಯೋಗ ಮಾಡಿ ಆರೋಗ್ಯವಾಗಿರಿ". ಎಂಬ ವಾಕ್ಯಗಳಂತೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮೂಹ ಸಂಪನ್ಮೂಲ ನಾಗರಾಜ್ ಶೆಟ್ಟಿ ಮತ್ತು ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಶಾಲಾ ದೈಹಿಕ ಶಿಕ್ಷಕರಾದ ರಾಜು .ಎನ್ ಅವರು ಯೋಗ ಮಾಡುವುದರಿಂದ ನಮ್ಮ ದೇಹಕ್ಕೆ ಉಂಟಾಗುವ ಪ್ರಯೋಜನಗಳ ಕುರಿತು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಅವರು, ಕೇವಲ ಯೋಗವನ್ನು ಇಂದಿನ ದಿನ ಅಷ್ಟೇ ಮಾಡದೆ ಅದನ್ನು ಪ್ರತಿದಿನವೂ ನಾವು ರೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳುವುದರ ಮೂಲಕ ಪ್ರತಿದಿನವೂ ಯೋಗ ಮಾಡುವಂತೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಾಪಕವೃಂದದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ರಾಜು ಎನ್ ಮತ್ತು ಇತರ ಆಧ್ಯಾಪಕರು ಸೂರ್ಯ ನಮಸ್ಕಾರ ಮತ್ತು ಯೋಗದ ಅನೇಕ ಭಂಗಿಗಳನ್ನು ಮಕ್ಕಳಿಗೆ ಮಾಡಿ ತೋರಿಸಿದರು. ಎಲ್ಲಾ ಮಕ್ಕಳು ಇದನ್ನು ನೋಡಿ ಅತ್ಯುತ್ತಮ ರೀತಿಯಲ್ಲಿ ಯೋಗವನ್ನು ಮಾಡಿ ಸಂತೋಷಪಟ್ಟರು.

21/06/2024

ಕುಂದಾಪುರ ಮಿರರ್ ಸುದ್ದಿ...
ಹೆಮ್ಮಾಡಿ: ಕಾರ್ಯಕರ್ತರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ

ಕುಂದಾಪುರ :ಸರ್ವ ರೋಗಕ್ಕೂ ಯೋಗ ಮದ್ದು,ಯೋಗವನ್ನು ಪ್ರತಿದಿನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ - ಕಿರಣ್ ಕುಮಾರ್ ಬಿ.ಲ...
21/06/2024

ಕುಂದಾಪುರ :ಸರ್ವ ರೋಗಕ್ಕೂ ಯೋಗ ಮದ್ದು,ಯೋಗವನ್ನು ಪ್ರತಿದಿನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ - ಕಿರಣ್ ಕುಮಾರ್ ಬಿ.

ಲಿಟ್ಲ್ ಸ್ಟಾರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆ

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ : "ಸರ್ವ ರೋಗಕ್ಕೂ ಯೋಗ ಮದ್ದು, ಯೋಗವನ್ನು ಪ್ರತಿದಿನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಇಂದು ಜಗತ್ತಿಗೆ ಯೋಗ ಮಹತ್ವವನ್ನು ಸಾರಿದ್ದು ನಮ್ಮ ಭಾರತ ದೇಶ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಇಂದು ಗುಣ ಪಡಿಸಲಾಗದ ಹಲವಾರು ಆರೋಗ್ಯ ಸಮಸ್ಯೆಗಳು ಯೋಗದಿಂದ ಗುಣವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ" ಎಂದು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಗಳು ಹಾಗು ನಿವೃತ್ತ ದೈಹಿಕ ಶಿಕ್ಷಕ ಕಿರಣ್ ಕುಮಾರ್ ಬಿ. ಹೇಳಿದರು.

ಅವರು ಲಿಟ್ಲ್ ಸ್ಟಾರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ ಇಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಯವರು ಮಾತನಾಡಿ ಯೋಗವು ಪ್ರಾಚೀನ ಕಾಲದ ಒಂದು ವೈದ್ಯಕೀಯ ಸಂಸ್ಕೃತಿಯಾಗಿದ್ದು ಇಂದು ಇಡೀ ಜಗತ್ತು ಭಾರತದ ಕಡೆಗೆ ಹೊರಳುವಂತೆ ಮಾಡಿದೆ. ಇಂದು ಶಾಲೆಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸಿರುವುದು ಒಳ್ಳೆಯ ವಿಚಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಯೋಗ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರದೀಪ್ ರವರು ಸ್ವಾಗತಿಸಿ, ಶಿಕ್ಷಕಿ ರೇಣುಕಾ ನಿರೂಪಿಸಿ ವಂದಿಸಿದರು.

ಬೈಂದೂರು: ಯೋಗ ದಿನಾಚರಣೆ ಆಚರಿಸಿಕೊಂಡ ಶಾಸಕ ಗಂಟಿಹೊಳೆ, ಸಂಸದ ಬಿ.ವೈ.ಆರ್ಕುಂದಾಪುರ ಮಿರರ್ ಸುದ್ದಿ...ಕುಂದಾಪುರ: ಯೋಗ ನಮ್ಮ ಸನಾತನ ಸಂಸ್ಕೃತಿಯ...
21/06/2024

ಬೈಂದೂರು: ಯೋಗ ದಿನಾಚರಣೆ ಆಚರಿಸಿಕೊಂಡ ಶಾಸಕ ಗಂಟಿಹೊಳೆ, ಸಂಸದ ಬಿ.ವೈ.ಆರ್

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ: ಯೋಗ ನಮ್ಮ ಸನಾತನ ಸಂಸ್ಕೃತಿಯ ವಿಶಿಷ್ಟ ಕೊಡುಗೆ. ಮನಸ್ಸಿನ ಸ್ಥಿರತೆ, ದೈಹಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಲು ಇದು ಸಹಕಾರಿಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಶುಕ್ರವಾರ ಬೈಂದೂರಿನ ಕೊಲ್ಲೂರಿನಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿಕೊಂಡ ಅವರು, ಇಂದು ನಮ್ಮ ಪ್ರಾಚೀನ ಕಾಲದ ಯೋಗವನ್ನು ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದ್ದು, ಇದು ಭಾರತ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದಿದ್ದಾರೆ. ಇದೇ ಸಂದರ್ಭ ವಿವಿಧ ಭಂಗಿಯ ಯೋಗಾಸನಗಳನ್ನು ಮಾಡಲಾಯಿತು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ದೇಶದ ಚುಕ್ಕಾಣಿ ಹಿಡಿದ ಮರುಕ್ಷಣವೇ ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟು ಜೂನ್ 21 ರಂದು ಯೋಗ ದಿನಾಚರಣೆಗೆ ಅಧಿಕೃತ ಮುದ್ರೆ ಒತ್ತಿಸಿ ಸನಾತನ ಪರಂಪರೆಯ ನೈಜ ಶಕ್ತಿಯನ್ನು ವಿಶ್ವಕ್ಕೆ ಅನಾವರಣಗೊಳಿಸಿ ಬಲ ತುಂಬಿದ್ದು ಸಾರ್ಥಕತೆಯ ಕ್ಷಣವಾಗಿದೆ ಎಂದು ಹೆಮ್ಮೆ ಪಟ್ಟರು. ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಹಲವರು ಭಾಗವಹಿಸಿದ್ದರು.

21/06/2024

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಹೇರಿಕುದ್ರು ಶಾಲೆ ರಸ್ತೆಗೆ ಗಂಗಾಧರ ಶೆಟ್ಟಿ ಹೆಸರಿಡಲು ಗ್ರಾಮಸ್ಥರ ಮನವಿ

21/06/2024

ಕುಂದಾಪುರ ಮಿರರ್ ಸುದ್ದಿ...
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ

21/06/2024

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಂದಾಪುರ ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

21/06/2024

ಕುಂದಾಪುರ ಮಿರರ್ ಸುದ್ದಿ...
ಬೈಂದೂರು ಮಂಡಲ ಬಿಜೆಪಿ ವತಿಯಿಂದ ನೂತನ ಸಂಸದ ಬಿ.ವೈ.ರಾಘವೇಂದ್ರರವರಿಗೆ ಅಭಿನಂದನಾ ಕಾರ್ಯಕ್ರಮ
B Y Raghavendra Kota Srinivas Poojary Fans Vijayendra Yediyurappa

21/06/2024

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ: ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ - ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹ

ರಾ.ಹೆ. ಕಾಮಗಾರಿಗಳ ಜೊತೆಗೆ ಸುರಕ್ಷತೆಗೆ ಆದ್ಯತೆ ನೀಡಲು ನಿರ್ದೇಶನ

20/06/2024

ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ...
ಉಡುಪಿ: ಸಾರ್ವಜನಿಕರ ಕೊಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವು ಜೂನ್ 25 ರಂದು ಬೆಳಗ್ಗೆ 10 ಗಂಟೆಗೆ ಕುಂದಾಪುರ ಶಾಸ್ರೀ ಸರ್ಕಲ್ ಬಳಿಯ ಆರ್.ಎನ್.ಶೆಟ್ಟಿ ಸಭಾಭವನ (ಬಂಟರ ಯಾನೆ ನಾಡವರ ಸಂಕೀರ್ಣ) ದಲ್ಲಿ ನಡೆಯಲಿದ್ದು, ಸಾರ್ವಜನಿಕರು ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕುಂದಾಪುರ ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.

ಕೋಟ :ಕನ್ನಡ ಮಾಧ್ಯಮ ಶಾಲೆಯ ಉಳಿವಿಗೆ ಶಿಕ್ಷಕರ ಪಾತ್ರ ಬಹುಮುಖ್ಯ -ಶಾಸಕ ಕಿರಣ್ ಕುಮಾರ್ ಕೊಡ್ಗಿಕುಂದಾಪುರ ಮಿರರ್ ಸುದ್ದಿ...ಕೋಟ : ಶಾಲಾ ಶಿಕ್ಷ...
20/06/2024

ಕೋಟ :ಕನ್ನಡ ಮಾಧ್ಯಮ ಶಾಲೆಯ ಉಳಿವಿಗೆ ಶಿಕ್ಷಕರ ಪಾತ್ರ ಬಹುಮುಖ್ಯ -ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ ಮಿರರ್ ಸುದ್ದಿ...
ಕೋಟ : ಶಾಲಾ ಶಿಕ್ಷಕರ ಗುಣಮಟ್ಟದ ಶಿಕ್ಷಣ ಆದರಿಸಿ ಮಕ್ಕಳ ಪೋಷಕರು ಸರಕಾರಿ ಶಾಲೆಯತ್ತ ಗಮನ ಹರಿಸುತ್ತಾರೆ ಅದೇ ರೀತಿ ಇಂದು ಸರಕಾರಿ ಶಾಲೆಗಳು ಬೆಳವಣಿಗೆ ಹಾದಿಯತ್ತ ಸಾಗುತ್ತಿದೆ ಇದು ಆಶಾದಾಯಕ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ನುಡಿದರು.

ಗುರುವಾರ ಬ್ರಹ್ಮಾವರ ವಲಯದ ಚಿತ್ರಪಾಡಿ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ.ಎಂ.ಶ್ರೀ ಯೋಜನೆಯಡಿ ಮಂಜೂರಾದ ಎಲ್.ಕೆ.ಜಿ. ತರಗತಿ ಉದ್ಘಾಟನೆ ಹಾಗೂ ಗೀತಾನಂದ ಫೌಂಡೇಶನ್ ಕೊಡಮಾಡಿದ ನೋಟ್ ಬುಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಹೆಚ್ಚಿನ ಸರಕಾರಿ ಅನುದಾನಿತ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಪಾತ್ರ ಹಾಗೂ ದಾನಿಗಳ ಸಹಕಾರ ಗಣನೀಯವಾದದ್ದು ,ಚಿತ್ರಪಾಡಿ ಶಾಲೆ ಮಕ್ಕಳ ಸಂಖ್ಯೆ ಏರುಗತಿ ಕಂಡಿರುವುದು ಶ್ಲಾಘನೀಯ ಕಾರ್ಯ ಇಲ್ಲಿನ ಶಿಕ್ಷಕರ ಹಾಗೂ ಶಾಲಾಭಿವೃದ್ಧಿ ಸಮಿತಿ ಕಾರ್ಯವನ್ನು ಪ್ರಶಂಸಿದರು. ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಅಭಿವೃದ್ಧಿ ಸರಕಾರದ ಕದ ತಟ್ಟಿದ್ದೇವೆ ಅನುದಾನ ಒದಗಿಸಿದರೆ ಶಾಲಾ ಕಟ್ಟಡ ಮೇಲ್ದರ್ಜೆಗೆ ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಎಲ್ ಕೆಜಿ ತರಗತಿ ಕೊಠಡಿಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಆಚಾರ್ ಕಪಾಟನ್ನು ಉದ್ಘಾಟಿಸಿದರು.

ಇದೇ ವೇಳೆ ಶಾಲಾ ಅಭಿವೃದ್ಧಿ ನೆರವು ನೀಡಿದ ದಾನಿಗಳಾದ ರಂಗನಾಥ್,ರಾಘವೇಂದ್ರ ಆಚಾರ್,ಉದಯ್ ನಾಯಕ್ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಕಿಶನ್ ಹೆಗ್ಡೆ ಕೊಳ್ಳೆಬೈಲು, ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ,ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಕೀಲರಾದ ಯೋಗೀಶ್ ಕುಮಾರ್,ಇಂಜಿನಿಯರ್ ನಾಗರಾಜ ಸೋಮಯಾಜಿ ಪಾರಂಪಳ್ಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಗಣಪತಿ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯೆ ರತ್ನಾ ನಾಗರಾಜ ಗಾಣಿಗ,ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ,ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ.,ಸಿಆರ್‍ಪಿ ಸವಿತಾ ಆಚಾರ್,ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ್ ಕಾರಂತ್,ಶಾಲಾ ಪ್ರೋತ್ಸಾಹಕರಾದ ಶಿವರಾಮ ಉಡುಪ, ಶಾಲಾ ಅಕ್ಷರರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ,ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶಂಕರ್ ದೇವಾಡಿಗ,ಉದ್ಯಮಿಗಳಾದ ಅರುಣ್ ಕುಂದರ್,ಭೋಜ ಪೂಜಾರಿ,ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು, ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ,ಶಿಕ್ಷಕಿ ಮಾಲಿನಿ ವಂದಿಸಿದರು.

ಕುಂದಾಪುರ ಮಿರರ್ ಸುದ್ದಿ...ಕೋಟ: ಕಳೆದ ಎರಡು ತಿಂಗಳುಗಳಿಂದ ಕೋಟ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಪಂಪ್ ಬಳಿ ಬಿಡುಬಿಟ್ಟಿದ ಗುಜರಾತ್ ಮೂಲದ ಬೃಹ...
20/06/2024

ಕುಂದಾಪುರ ಮಿರರ್ ಸುದ್ದಿ...
ಕೋಟ: ಕಳೆದ ಎರಡು ತಿಂಗಳುಗಳಿಂದ ಕೋಟ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಪಂಪ್ ಬಳಿ ಬಿಡುಬಿಟ್ಟಿದ ಗುಜರಾತ್ ಮೂಲದ ಬೃಹತ್ ಗಾತ್ರದ ಲಾರಿ ಕೊನೆಗೂ ಕೋಟ ಆರಕ್ಷರರ ಹಾಗೂ ಸ್ಥಳೀಯ ಜೀವನ್ ಮಿತ್ರ ತಂಡದ ಪರಿಶ್ರಮದೊಂದಿಗೆ ಅಲ್ಲಿಂದ ತೆರವುಗೊಳಿಸಲಾಗಿದೆ.

ಎರಡು ತಿಂಗಳಿಂದ ಅಪಘಾತಕ್ಕೆ ಎಡೆಮಾಡಿಕೊಡುತ್ತಿರುವ ಲಾರಿಯನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಟೋಲ್‍ನ ಪ್ರಸ್ತುತ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು ಇದೀಗ ಕೋಟದ ಜೀವನ್ ಮಿತ್ರ ಬಳಗ ಹಾಗೂ ಮಾಧ್ಯಮ ಕಳಕಳಿಗೆ ಕೊನೆಗೂ ಕೋಟ ಠಾಣಾಧಿಕಾರಿ ತೇಜಸ್ವಿ ಸ್ಥಳ ಪರಿಶೀಲಿಸಿ ತೆರೆವು ಕಾರ್ಯಕ್ಕೆ ಮುಂದಾದರು. ಇದರಿಂದ ಬಹು ಸಮಯಗಳಿಂದ ಅಪಘಾತ ವಲವಾಗಿದ್ದ ಈ ಪ್ರದೇಶದಲ್ಲಿ ಜನ ಸಂಚರಿಸಲು ನಿರಾಳತೆ ಕಂಡಿದ್ದಾರೆ.

ಕೃತಜ್ಞತೆ ಸಲ್ಲಿಸಿದ ನಾಗರೀಕರು.
ಈ ಬಗ್ಗೆ ಸಾಕಷ್ಟು ಸಮಯಗಳಿಂದ ಸಾಮಾಜಿಕ ಕಾರ್ಯಕರ್ತರು ,ವಾಹನ ಸಂಚಾರರು ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸುತ್ತಿದ್ದ ಸಂಬಂಧ ಪಟ್ಟ ಟೋಲ್ ನವರ ಗಮನಕ್ಕೆ ತಂದಿದ್ದರು ಇದೀಗ ತೆರವು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕುಂದಾಪುರ ಮಿರರ್ ಸುದ್ದಿ...ಸಾಸ್ತಾನ - ಕರಾಟೆ ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಕೋಟ: ಫೀನಿಕ್ಸ್ ಅಕಾಡೆಮಿ ಇಂಡಿಯಾ  ಆಯೋಜಿಸಿದ ಕರಾಟೆ ಕಪ...
20/06/2024

ಕುಂದಾಪುರ ಮಿರರ್ ಸುದ್ದಿ...
ಸಾಸ್ತಾನ - ಕರಾಟೆ ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ

ಕೋಟ: ಫೀನಿಕ್ಸ್ ಅಕಾಡೆಮಿ ಇಂಡಿಯಾ ಆಯೋಜಿಸಿದ ಕರಾಟೆ ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ಸಾಸ್ತಾನ ಕರಾಟೆ ಡೋಜ ತರಬೇತಿ ತಂಡದಿಂದ ಅಭಿಷೇಕ್. ಆರ್ ಹಾಗೂ ಕುಮಾರಿ ದಿಶಾ ಸಾಸ್ತಾನ ಇವರು ಕಪ್ಪುಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರುಗಳು ಈಗಾಗಲೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಬೆಳ್ಳಿ ಹಾಗೂ ಕಂಚು ಪದಕವನ್ನು ಪಡೆದಿದ್ದಾರೆ ಹಾಗೆಯೇ ಫೀನಿಕ್ಸ್ ಅಕಾಡೆಮಿಯ ಮುಖ್ಯ ಕರಾಟೆ ಶಿಕ್ಷಕ ಹಾಗೂ ತರಬೇತಿದಾರರಾದ ಸೆನ್ಸಾಯ್ ಮಂಜುನಾಥ್ ಕೋಟೇಶ್ವರ ಅವರಲ್ಲಿ ತರಬೇತಿ ಪಡೆಯುತ್ತಿದ್ದು ಸಾಸ್ತಾನದ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

20/06/2024

ಕುಂದಾಪುರ ಮಿರರ್ ಸುದ್ದಿ...
ಉಪ್ಪುಂದ :ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೈಂದೂರು ‌ಮಂಡಲ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ
B Y Raghavendra Kota Srinivas Poojary Fans

ಕುಂದಾಪುರ :ಅಂತರ್-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ:  ಬಿ. ಬಿ. ಹೆಗ್ಡೆ ಕಾಲೇಜು ಚಾಂಪಿಯನ್ಕುಂದಾಪುರ ಮಿರರ್ ಸುದ್ದಿ...ಕುಂದಾಪುರ : ಬಾರ್ಕೂರ...
19/06/2024

ಕುಂದಾಪುರ :ಅಂತರ್-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ: ಬಿ. ಬಿ. ಹೆಗ್ಡೆ ಕಾಲೇಜು ಚಾಂಪಿಯನ್

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ : ಬಾರ್ಕೂರು ಶ್ರೀಮತಿ ರುಕ್ಕಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಕಾಲೇಜಿನ ಉಪನ್ಯಾಸಕ ಸಂಘದ ಆಶ್ರಯದಲ್ಲಿ ಜೂನ್ 16ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಅಂತರ್-ಕಾಲೇಜು ಮಟ್ಟದ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಕುಂದಾಪುರದ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ತಂಡ ಬ್ರಹ್ಮಾವರದ ಎಸ್.ಎಮ್.ಎಸ್. ಕಾಲೇಜು ತಂಡದ ಎದುರು ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇವರಿಗೆ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಬೋಧಕ-ಬೋಧಕೇತರ ವೃಂದ ತಂಡವನ್ನು ಅಭಿನಂದಿಸಿದ್ದಾರೆ.

ಜೂನ್ 26: ಕುಂದಾಪುರ ಬಿಜೆಪಿ ರೈತಮೋರ್ಚಾದಿಂದ ಪ್ರತಿಭಟನೆಗೆ ಕರೆಕುಂದಾಪುರ: ರಾಜ್ಯ ಸರಗಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ, ವಿವಿಧ ಬೇಡಿಕೆಗ...
19/06/2024

ಜೂನ್ 26: ಕುಂದಾಪುರ ಬಿಜೆಪಿ ರೈತಮೋರ್ಚಾದಿಂದ ಪ್ರತಿಭಟನೆಗೆ ಕರೆ

ಕುಂದಾಪುರ: ರಾಜ್ಯ ಸರಗಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದಲ್ಲಿ ಜೂನ್ 26 ರಂದು ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕುಂದಾಪುರ‌ ಮಂಡಲ ಬಿಜೆಪಿ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಬುಧವಾರ ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಉಡುಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾದ ಜಯಶೀಲ ಶೆಟ್ಟಿ ಮರತೂರು, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ ಮತ್ತು ಕೃಷ್ಣಮೂರ್ತಿ ಕಾಂಚನ್, ಪುಷ್ಪರಾಜ್ ಬೈಂದೂರು, ಮೋಹನಚಂದ್ರ ಬೈಂದೂರು, ಶ್ಯಾಮಪ್ರಸಾದ್ ಭಟ್, ಸದಾನಂದ ಬಳ್ಕೂರು, ಸತೀಶ ಶೇರಿಗಾರ್ ಹಂಗಳೂರು ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೈಂದೂರು :ಹಕ್ಲಾಡಿಯಲ್ಲಿ ಶಾಸಕ ಗಂಟಿಹೊಳೆ ಗ್ರಾಮ ಸಂವಾದ, ಹಲವಾರು ಸಮಸ್ಯೆಗಳಿಗೆ ಪರಿಹಾರಕುಂದಾಪುರ ಮಿರರ್ ಸುದ್ದಿ...ಕುಂದಾಪುರ :ಬೈಂದೂರು ಶಾಸಕ...
19/06/2024

ಬೈಂದೂರು :ಹಕ್ಲಾಡಿಯಲ್ಲಿ ಶಾಸಕ ಗಂಟಿಹೊಳೆ ಗ್ರಾಮ ಸಂವಾದ, ಹಲವಾರು ಸಮಸ್ಯೆಗಳಿಗೆ ಪರಿಹಾರ

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಬುಧವಾರದಂದು ಬೈಂದೂರಿನ ಹಕ್ಲಾಡಿ, ಮಾಸ್ತಿಕಟ್ಟೆಯ ವೆಂಕಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಗ್ರಾಮಗಳಲ್ಲಿ ಕ್ರಿಯಾ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿ, ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಮತ್ತು ಆ ಗ್ರಾಮದಲ್ಲಿ ಯಾವ ಯಾವ ಅಭಿವೃದ್ಧಿ ಯೋಜನೆ ಕೈಗೊಂಡರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎನ್ನುವ ಬಗ್ಗೆ ಖುದ್ದು ಗ್ರಾಮಸ್ಥರ ಜೊತೆಗೆ ಶಾಸಕರು ಚರ್ಚಿಸುವ ಕಾರ್ಯಕ್ರಮ ಇದಾಗಿದ್ದು, ಹಕ್ಲಾಡಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಡೆಯಿತು.

ಸಭೆಯಲ್ಲಿ ಶಾಸಕರು ಗ್ರಾಮಸ್ಥರಿಂದ ವಿವಿಧ ರೀತಿಯ ಆಹವಾಲು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಮತ್ತು ಆ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಗ್ರಾಮಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನಡೆಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ಆದರೂ ಹಠ ಬಿಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಎಂದು ಶಾಸಕರು ಹೇಳಿದರು.

ಸಭೆಯಲ್ಲಿ ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ದೇವಾಡಿಗ, ಉಪಾಧ್ಯಕ್ಷರಾದ ಸುಭಾಷ್ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಕುಂದಾಪುರ :ರಾಷ್ಟ್ರ ಮಟ್ಟದ ಎತ್ತರ ಜಿಗಿತ ಸ್ಪರ್ಧೆ - ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ 6ನೇ ಸ್ಥಾನಕುಂದಾಪುರ ಮಿರ...
19/06/2024

ಕುಂದಾಪುರ :ರಾಷ್ಟ್ರ ಮಟ್ಟದ ಎತ್ತರ ಜಿಗಿತ ಸ್ಪರ್ಧೆ - ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ 6ನೇ ಸ್ಥಾನ

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ : ಜೂ.16 ಮತ್ತು 17 ರಂದು ಛತ್ತೀಸ್‌ಗಢನಲ್ಲಿ ನಡೆದ ರಾಷ್ಟ್ರಮಟ್ಟದ ಎತ್ತರ ಜಿಗಿತದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ 6ನೇ ಸ್ಥಾನಿಯಾಗಿ ಸಾಧನೆ ಮೆರೆದಿದ್ದಾನೆ.

ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಬೋಧಕ - ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಕೊಂಡಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆಕುಂದಾಪುರ ಮಿರರ್ ಸುದ್ದಿ...ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿ...
18/06/2024

ಕೊಂಡಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಳ್ಳಿ ಇಲ್ಲಿನ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರನಾರಾಯಣ ಭಟ್ ಕೊಂಡಳ್ಳಿಯವರು ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣ ಸಮಾರಂಭವು ಎಸ್ ಡಿ ಎಂ ಸಿ ಅಧ್ಯಕ್ಷ ಭಾಸ್ಕರ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಇವರು ಗೌರವ ಶಿಕ್ಷಕಿಗೆ ನೀಡುವ ಒಂದು ತಿಂಗಳ ವೇತನದ ಮೊತ್ತವನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿ, ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದರೂ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ವಿನೋದಾ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ರಾಮ ಮೊಗವೀರ ಪ್ರಸ್ಥಾವನೆಗೈದರು. ಸಹಶಿಕ್ಷಕಿ ಸುಜಾತ ಎಚ್ ಸ್ವಾಗತಿಸಿ, ಶೈಲಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಜಯಶ್ರೀ ವಂದಿಸಿದರು. ಶಾಲಾ ಎಸ್ ಡಿ ಎಮ್ ಸಿ ಸದಸ್ಯರು, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಂದಾಪುರ ಮಿರರ್ ಸುದ್ದಿ...ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 36ನೇ ಸಾಧಕ ರೈತಕಾಯಕ ಜೀವಿ ಪಾರಂಪಳ್ಳಿ ಪರಿಸರದ ಯಶೋಧ ನಕ್ಷತ್ರಿಕೋಟ: ಪಂಚವ...
18/06/2024

ಕುಂದಾಪುರ ಮಿರರ್ ಸುದ್ದಿ...
ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 36ನೇ ಸಾಧಕ ರೈತಕಾಯಕ ಜೀವಿ ಪಾರಂಪಳ್ಳಿ ಪರಿಸರದ ಯಶೋಧ ನಕ್ಷತ್ರಿ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 36ರ ಸಂಭ್ರಮ, ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಜೂ.22ರ ಶನಿವಾರ ಸಂಜೆ.4.30ಗ ನಡೆಯಲಿದ್ದು ಕೃಷಿ ಮತ್ತು ಹೈನುಗಾರಿಕೆ ಕೃಷಿ ಕಾಯಕದಲ್ಲಿ ವಿಶಿಷ್ಟ ಸಾಧನೆಗೈದ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಪಾರಂಪಳ್ಳಿ ಹಿರಿಯ ಕೃಷಿ ಸಾಧಕಿ ಯಶೋಧ ನಕ್ಷತ್ರಿ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

18/06/2024

ಕುಂದಾಪುರ ಮಿರರ್ ಸುದ್ದಿ...
ಶಿರೂರು: ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ

17/06/2024

ಕುಂದಾಪುರ ಮಿರರ್ ಸುದ್ದಿ...
ಕುಂದಾಪುರ :ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

Address


Alerts

Be the first to know and let us send you an email when Kundapura Mirror posts news and promotions. Your email address will not be used for any other purpose, and you can unsubscribe at any time.

Contact The Business

Send a message to Kundapura Mirror:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share