Namma Superstars

  • Home
  • Namma Superstars

Namma Superstars Star Kannada Media Network
Proudly Presents
"Namma Superstars"
The First Kannada Magazine Launched Across the World

# Proudly Presents
SUPERSTARS #
THE FIRST KANNADA MAGAZINE RELEASED WORLDWIDE.

ಶುಕ್ರವಾರದ ಸಿನಿಮಾ - ಚಿತ್ರಮಂದಿರದಲ್ಲಿ ಹೊಸ ಕಥೆಗಳ ಹಬ್ಬ :📽🎬🙂ಔಷಧಿ ಮಾಫಿಯಾ ಸುತ್ತ "ಹೇ ಪ್ರಭು" :📽ಔಷಧಿ ಕಂಪೆನಿಗಳ ಲಾಬಿ, ನಕಲಿ ಔಷಧ ಮಾರಾಟ ...
07/11/2025

ಶುಕ್ರವಾರದ ಸಿನಿಮಾ - ಚಿತ್ರಮಂದಿರದಲ್ಲಿ ಹೊಸ ಕಥೆಗಳ ಹಬ್ಬ :📽🎬🙂

ಔಷಧಿ ಮಾಫಿಯಾ ಸುತ್ತ "ಹೇ ಪ್ರಭು" :📽

ಔಷಧಿ ಕಂಪೆನಿಗಳ ಲಾಬಿ, ನಕಲಿ ಔಷಧ ಮಾರಾಟ ಮತ್ತು ಕಾರ್ಪೊರೇಟ್ ಲಾಭದ ಹಂಬಲ ಇವುಗಳ ಪರಿಣಾಮ ಹೇಗೆ ಜನರ ಆರೋಗ್ಯದ ಮೇಲೆ ಬಾಧೆ ಉಂಟು ಮಾಡುತ್ತದೆ ಎಂಬುದನ್ನು ಚಿತ್ರ ಮನರಂಜನೆಯ ಹಾಸ್ಯ, ಭಾವನೆ ಮತ್ತು ವಾಸ್ತವಿಕ ಪಾತ್ರಗಳ ಮೂಲಕ ತೋರಿಸಲಾಗಿದೆ. ಚಿತ್ರದಲ್ಲಿ ಯಮುನಾ ಶ್ರೀನಿಧಿ, ಜಯ ವರ್ಧನ್, ಸಂಹಿತಾ ವಿನ್ಯಾ, ಗಜಾನನ ಹೆಗ್ಡೆ, ಲಕ್ಷ್ಮಣ ಶಿವಶಂಕರ್, ಡಾ. ಸುಧಾಕರ್ ಶೆಟ್ಟಿ ನಟಿಸಿದ್ದಾರೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವಿರುವ ಕಾಮಿಡಿ ಎಂಟರ್ಟೈನರ್ ಇದಾಗಿದ್ದು, ವೆಂಕಟ್ ಭಾರದ್ವಾಜ್ ನಿರ್ದೇಶನದ 'ಹೇ ಪ್ರಭು' ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಅಮೃತ ಫಿಲಂ ಸೆಂಟರ್ ಮತ್ತು ೨೪ ರೀಲ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದಾರೆ.

ಅಪ್ಪ-ಮಗನ ಕಥೆಯ ರಘು ರಾಜನ "ರೋಣ" :📽

ರೋಣ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು ಅಪ್ಪ-ಮಗನ ಕಥೆಯನ್ನು ಒಳಗೊಂಡಿದ್ದು, ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ, ಧಾರ್ಮಿಕ, ರಾಜಕೀಯ, ಸೇಹ, ಪ್ರೀತಿ ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳು ಒಳಗೊಂಡಿದೆ. ರೋಣ ಚಿತ್ರವನ್ನು ನಟ, ನಿರ್ಮಾಪಕ ರಘು ರಾಜ ನಂದ ನಿರ್ಮಿಸಿದ್ದು, ಸತೀಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಕೃತಿ ಪ್ರಸಾದ್ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಶರತ್ ಲೋಹಿತಾಶ್ವನಾಯಕನ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲರಾಜವಾಡಿ, ಸಂಗೀತ ಅನೀಲ್, ರಂಗಭೂಮಿ ಪ್ರತಿಭೆ ಗೀತಾ, ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ, ಮನೋಜ್ ಕುಮಾರ್‌ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ರೊಮ್ಯಾಂಟಿಕ್ ಡ್ರಿಲ್ಲರ್ "ಐ ಯಾಮ್ ಗಾಡ್" :📽

ಈಗಾಗಲೇ ಟ್ರೇಲರ್ ಹಿಟ್ ಆಗಿರುವ "ಐ ಯಾಮ್ ಗಾಡ್" ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು. ರವಿ ಗೌಡ ಈ ಚಿತ್ರದ ನಾಯಕರಾಗಿ ನಟಿಸುವ ಜೊತೆಗೆ ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಡ್ರಿಲ್ಲರ್ ಕಥಾಹಂದರ ಹೊಂದಿರುವ "ಐ ಯಾಮ್ ಗಾಡ್" ಸಿನಿಮಾಕ್ಕೆ ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

೨೫ ವರ್ಷಗಳ ನಂತರ - ಯಜಮಾನ ಚಿತ್ರ - ಮತ್ತೆ ತೆರೆಗೆ :  🎬📽🙂ಬೆಳ್ಳಿ ಹಬ್ಬ ಆಚರಿಸಲು, ಇಂದು ನವೆಂಬರ್ ೭ ೨೦೨೫ರಂದು ಕರ್ನಾಟಕದ ಪ್ರಮುಖ ಚಿತ್ರಮಂದಿ...
07/11/2025

೨೫ ವರ್ಷಗಳ ನಂತರ - ಯಜಮಾನ ಚಿತ್ರ - ಮತ್ತೆ ತೆರೆಗೆ : 🎬📽🙂

ಬೆಳ್ಳಿ ಹಬ್ಬ ಆಚರಿಸಲು, ಇಂದು ನವೆಂಬರ್ ೭ ೨೦೨೫ರಂದು ಕರ್ನಾಟಕದ ಪ್ರಮುಖ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ.

೨೦೦೦ ರಲ್ಲಿ ಬಿಡುಗಡೆಯಾದಾಗ, ಯಜಮಾನ ಬೆಳ್ಳಿ ಪರದೆಯನ್ನು ಅಪ್ಪಳಿಸಿ ೩೫ ಕೋಟಿಗೂ ಹೆಚ್ಚು ಸಂಗ್ರಹಿಸಿತು, ಇದು ಆ ಕಾಲದ ಅದ್ಭುತ ದಾಖಲೆಯಾಗಿದೆ. ವಿಷ್ಣುವರ್ಧನ್ ಅವರು ಪ್ರಬಲ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಅವರ ಅತ್ಯಂತ ಪ್ರಸಿದ್ಧ ಅಭಿನಯಗಳಲ್ಲಿ ಒಂದಾಗಿದೆ. ಕನ್ನಡದ ಒಂದು ಕಾಲಾತೀತ ಬ್ಲಾಕ್‌ಬಸ್ಟರ್ ಚಿತ್ರ ಭರ್ಜರಿ ಪುನರಾಗಮನಕ್ಕೆ ಸಿದ್ಧವಾಗಿದೆ. ದಿವಂಗತ ಡಾ. ವಿಷ್ಣುವರ್ಧನ್ ನಟಿಸಿದ ಯಜಮಾನ, ಬಾಕ್ಸ್ ಆಫೀಸ್ ಇತಿಹಾಸವನ್ನು ಮೊದಲು ಸೃಷ್ಟಿಸಿದ ಚಿತ್ರ ಈಗ ೨೫ ವರ್ಷಗಳ ನಂತರ ಮತ್ತೊಮ್ಮೆ ಚಿತ್ರಮಂದಿರಗಳನ್ನು ಬೆಳಗಿಸಲು ಸಜ್ಜಾಗಿದೆ.

ಈ ಮರು-ಬಿಡುಗಡೆಯು ಕೇವಲ ಹಳೆಯ ನೆನಪುಗಳಷ್ಟೇ ಅಲ್ಲ, ಸಂಪೂರ್ಣ ತಾಂತ್ರಿಕ ಪುನರುಜ್ಜೀವನವನ್ನು ತಂದಿದೆ. ಮುನಿಸ್ವಾಮಿ ಎಸ್.ಡಿ. ನೇತೃತ್ವದಲ್ಲಿ, ಈ ಚಿತ್ರವನ್ನು ೪ಏ ಡಿಜಿಟಲ್ ಪ್ರೊಜೆಕ್ಷನ್, ಮಾಸ್ಟರಿಂಗ್ ಮತ್ತು ರೀಮಾಸ್ಟರ್ಡ್ ೫.೧ ಮತ್ತು ೭.೧ ಸರೌಂಡ್ ಸೌಂಡ್‌ನೊAದಿಗೆ ಪುನಃಸ್ಥಾಪಿಸಲಾಗಿದೆ. ಒಂದು ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಪ್ರತಿಯೊಂದು ಧ್ವನಿ, ಪ್ರತಿಯೊಂದು ಹಾಡು ಮತ್ತು ಪ್ರತಿಯೊಂದು ಫ್ರೇಮ್ ಅನ್ನು ವರ್ಧಿಸಲಾಗಿದೆ.

ಈ ಸಂದರ್ಭವನ್ನು ಆಚರಿಸಲು ಕಲಾವಿದರ ಸಂಘದಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು, ಚಿತ್ರದ ನಿರ್ಮಾಪಕರು, ಪಾತ್ರವರ್ಗ ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸಲಾಯಿತು. ನಿರ್ಮಾಪಕ ರೆಹಮಾನ್, "ಈ ಚಿತ್ರವು ಡಾ. ವಿಷ್ಣುವರ್ಧನ್ ಮತ್ತು ಕೆ.ವಿ. ನಾಗೇಶ್ ಕುಮಾರ್ ಅವರ ಯಶಸ್ಸಿಗೆ ಋಣಿಯಾಗಿದೆ. ಯಜಮಾನ ಚಿತ್ರವು ೪೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನಗೊಂಡಿತು, ೧೩೦ ಕೇಂದ್ರಗಳಲ್ಲಿ ೧೦೦ ದಿನಗಳನ್ನು ಆಚರಿಸಿತು ಮತ್ತು ೪ ಚಿತ್ರಮಂದಿರಗಳಲ್ಲಿ ಪೂರ್ಣ ವರ್ಷವನ್ನು ಪೂರ್ಣಗೊಳಿಸಿತು. ಆಗ ಅದು ೩೫ ಕೋಟಿ ಗಳಿಸಿತು, ಅದು ಬೃಹತ್ ದಾಖಲೆಯಾಗಿತ್ತು. ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್ ಮತ್ತು ಟೆನ್ನಿಸ್ ಕೃಷ್ಣ ನೇತೃತ್ವದ ತಾರಾಗಣದೊಂದಿಗೆ, ಮುನಿಸ್ವಾಮಿ ಈ ಕ್ಲಾಸಿಕ್ ಚಿತ್ರವನ್ನು ಪ್ರೇಕ್ಷಕರು ಮೊದಲಿಗಿಂತ ದೊಡ್ಡ ಗೆಲುವನ್ನು ಅನುಭವಿಸಲು ಮರಳಿ ತರುತ್ತಿದ್ದಾರೆ."

ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರು ಚಿತ್ರದ ಪುನಃಸ್ಥಾಪನೆಗೆ ಅಪಾರ ಸಮಯ ಮತ್ತು ಕಾಳಜಿ ಬೇಕಾಯಿತು, ಆಡಿಯೋ ಮತ್ತು ದೃಶ್ಯ ಅನುಭವವನ್ನು ಹೆಚ್ಚಿಸುವುದರ ಜೊತೆಗೆ ಚಿತ್ರದ ಭಾವನಾತ್ಮಕ ಸಾರವನ್ನು ಸಂರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಯಜಮಾನ ೨೫ ವರ್ಷಗಳ ಹಿಂದೆ ಮೊದಲ ಬಾರಿಗೆ ಚಿತ್ರಮಂದಿರಗಳಿಗೆ ಬಂದಾಗ, ಅಭಿಮಾನಿಗಳು ತಮ್ಮ ಪ್ರೀತಿಯ ತಾರೆಯ ನೋಟವನ್ನು ನೋಡಲು ಹಳ್ಳಿಗಳಿಂದ ಟ್ರ‍್ಯಾಕ್ಟರ್‌ಗಳಲ್ಲಿ ಪ್ರಯಾಣಿಸಿದರು. ಈ ಚಿತ್ರವು ಕೇವಲ ಹಿಟ್ ಆಗಿರಲಿಲ್ಲ, ಇದು ಕರ್ನಾಟಕದಾದ್ಯಂತ ಆಚರಣೆಯಾಗಿತ್ತು ಮತ್ತು ಈಗ ಅದು ಹೊಸ ರೂಪದಲ್ಲಿ ಮರಳಿದೆ. ನವೆಂಬರ್ ೭ ರಂದು ಈ ಚಿತ್ರ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಪ್ರತಿಯೊಬ್ಬ ಅಭಿಮಾನಿಯೂ ಅದನ್ನು ದೊಡ್ಡ ಪರದೆಯ ಮೇಲೆ ಅನುಭವಿಸಲು ನಾನು ವಿನಂತಿಸುತ್ತೇನೆ" ಎಂದು ಅವರು ಹೇಳಿದರು.

ಅವರ ಸಿನಿಪ್ರಪಂಚದ ಬೆಳಕು ಎಂದಿಗೂ ಆರದು.

ಡೆವಿಲ್ ರಾಣಿ - ರಚನಾ ರೈ : 🎬📽🙂ಸ್ಯಾಂಡಲ್‌ವುಡ್‌ನಲ್ಲಿ ನಟಿ ರಚನಾ ರೈ ಉದಯೋನ್ಮುಖ ನಕ್ಷತ್ರವಾಗಿ ಮಿಂಚಲಿದ್ದಾರೆ. ಹೌದು., ದರ್ಶನ್ ಅವರ ಬಹುನಿರೀ...
07/11/2025

ಡೆವಿಲ್ ರಾಣಿ - ರಚನಾ ರೈ : 🎬📽🙂

ಸ್ಯಾಂಡಲ್‌ವುಡ್‌ನಲ್ಲಿ ನಟಿ ರಚನಾ ರೈ ಉದಯೋನ್ಮುಖ ನಕ್ಷತ್ರವಾಗಿ ಮಿಂಚಲಿದ್ದಾರೆ. ಹೌದು., ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ಡೆವಿಲ್‌ನಲ್ಲಿ ನಾಯಕಿಯಾಗಿ ಪ್ರೇಕ್ಷಕರನ್ನು ರಚನಾ ರೈ ಆಕರ್ಷಿಸಲಿದ್ದಾರೆ. ಕರ್ನಾಟಕದ ಪುತ್ತೂರಿನಿಂದ ಬಂದ ಅವರು ತುಳು ಚಿತ್ರ ಸರ್ಕಸ್ ಮೂಲಕ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ನಂತರ ವಾಮನ ಚಿತ್ರದೊಂದಿಗೆ ಕನ್ನಡ ಚಿತ್ರರಂಗದಲ್ಲಿ ಮನ್ನಣೆ ಪಡೆದರು. ಪ್ರತಿಭಾನ್ವಿತ ಭರತನಾಟ್ಯ ನರ್ತಕಿ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಲೇಖಕಿಯಾಗಿರುವ ರಚನಾ ಬಹುಮುಖ ಕಲಾವಿದೆ. ಡೆವಿಲ್‌ನಲ್ಲಿನ ಅವರ ಪಾತ್ರವು ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ, ಕನ್ನಡ ಚಲನಚಿತ್ರೋದ್ಯಮದಲ್ಲಿ ಅವರ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ.

ಡೆವಿಲ್ ಪಾತ್ರದೊಂದಿಗೆ, ರಚನಾ ರೈ ವ್ಯಾಪಕ ಮನ್ನಣೆ ಗಳಿಸಲು ಮತ್ತು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಸಜ್ಜಾಗಿದ್ದಾರೆ. "ಡೆವಿಲ್" ದರ್ಶನ್ ನಟನೆಯ ಮುಂಬರುವ ಕನ್ನಡ ಸಾಹಸ ಚಿತ್ರವಾಗಿದ್ದು, ಈ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇದು ಉದಯಪುರ, ರಾಜಸ್ಥಾನ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಆಕ್ಷನ್ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ೧೨, ೨೦೨೫ ರಂದು ಬಿಡುಗಡೆಯಾಗಲಿದೆ.

"ಓಂ ಸಿನಿಮಾದ 'ಡಾನ್' ರಾಯ್" - 'ಕೆಜಿಎಫ್ ಚಾಚಾ'! - ಇನ್ನಿಲ್ಲ :🎬📽🙂ನಟ ಹರೀಶ್ ರಾಯ್ ೯೦ರ ದಶಕದ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ಖಳ...
07/11/2025

"ಓಂ ಸಿನಿಮಾದ 'ಡಾನ್' ರಾಯ್" - 'ಕೆಜಿಎಫ್ ಚಾಚಾ'! - ಇನ್ನಿಲ್ಲ :🎬📽🙂

ನಟ ಹರೀಶ್ ರಾಯ್ ೯೦ರ ದಶಕದ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿ, 'ಓಂ' ಸಿನಿಮಾದ ಡಾನ್ ರಾಯ್ ಪಾತ್ರ ಮಾಡಿ ಫೇಮಸ್ ಆಗಿದ್ದವರು. 'ಕೆಜಿಎಫ್' ಚಾಚಾ ಪಾತ್ರದದ ತನಕ ಹರೀಶ್ ರಾಯ್ ಕನ್ನಡ ಚಿತ್ರರಂಗದಲ್ಲಿ 350ಕ್ಕೊ ಹೆಚ್ಚು ವಿವಿಧ ರೀತಿಯ ರೋಲ್‌ಗಳಲ್ಲಿ ಮಿಂಚಿದವರು. ಹರೀಶ್ ರಾಯ್ ಪೋಷಕ ಪಾತ್ರ, ವಿಲನ್ ಹೀಗೆ ತಮ್ಮದೇ ಆದ ಒಂದು ಇಮೇಜ್ ಬಿಲ್ಡ್ ಮಾಡಿಕೊಂಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯವಾಗಿದ್ದವರು ನಟ ಹರೀಶ್ ರಾಯ್. ಅವರು ಕನ್ನಡದಲ್ಲಿ ಅಂಡರ್‌ವರ್ಲ್ಡ್, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೇ, ನಲ್ಲ, ಜೋಡಿ ಹಕ್ಕಿ, ತಾಯವ್ವ, ಚಕ್ರವರ್ತಿ, ಕಾಶಿ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ ಜೊತೆಗೆ ತಮಿಳಿನಲ್ಲೂ ನಟಿಸಿದರು.

ಜನಪ್ರಿಯತೆ ತಂದುಕೊಟ್ಟಿದ್ದ 'ಕೆಜಿಎಫ್'. ಈ ಪಾತ್ರದ ಮೂಲಕ ಹರೀಶ್‌ಗೆ ಚಿತ್ರರಂಗದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭವಾಗಿತ್ತು. ಬಹಳ ವರ್ಷಗಳ ನಂತರ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಕ್ಸಸ್ ಅನ್ನು ಅವರು ಕಂಡಿದ್ದರು.

ಇoತಹ ಜನಪ್ರಿಯ ನಟ ಹರೀಶ್ ರಾಯ್‌ರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್‌ರವರು ಗುರುವಾರ November 6th 2025 ಕಿದ್ವಾಯಿ ಆಸ್ಪತ್ರೆಯಲ್ಲಿ 55ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಶಿವಣ್ಣ, ಧ್ರುವ ಸರ್ಜಾ, ದರ್ಶನ್, ಯಶ್ ಸೇರಿದಂತೆ ಅನೇಕರು ಹರೀಶ್ ರಾಯ್ ಚಿಕಿತ್ಸೆಗೆ ಧನಸಹಾಯ ಮಾಡಿದ್ದಾರೆ ಎಂದು ನಟ ಹರೀಶ್ ರಾಯ್ ಸಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಅವರಿಗೆ ದುಬಾರಿ ಬೆಲೆಯ 17 ಇಂಜೆಕ್ಷನ್‌ಗಳ ಅವಶ್ಯಕತೆ ಇತ್ತು. ಅದಕ್ಕಾಗಿ ಅವರಿಗೆ ಸುಮಾರು 70 ಲಕ್ಷಕ್ಕೂ ಅಧಿಕ ರೂಪಾಯಿಗಳ ಅಗತ್ಯವಿತ್ತು. ಒಂದು ಇಂಜೆಕ್ಷನ್‌ನ ಬೆಲೆ 3.50 ಲಕ್ಷ ರೂ. ಎಂದು ಹೇಳಲಾಗಿತ್ತು. ಈಚೆಗೆ ಅವರಿಗೆ ಒಂದು ಇಂಜೆಕ್ಷನ್ ನೀಡಲಾಗಿತ್ತು. ಆದರೆ ಇಂಜೆಕ್ಷನ್‌ಗೆ ಅವರ ದೇಹ ಸಹಕರಿಸದೇ ಇರುವ ಕಾರಣ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದ ಅವರನ್ನ ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಹರೀಶ್ ರಾಯ್ ಅವರು ಸಾವನ್ನಪ್ಪಿದ್ದಾರೆ.

55 ವರ್ಷದ ಹರೀಶ್ ರಾಯ್ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಹರೀಶ್ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಹೆಚ್ಚೆಚ್ಚು ಅವಕಾಶಗಳು ಸಿಗುವ ಸಮಯದಲ್ಲಿಯೇ ಕ್ಯಾನ್ಸರ್ ಪೀಡಿತರಾದ ಹರೀಶ್, ಇದೀಗ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಗಜಲ್ ಗಾಯನ ಯಾತ್ರೆ_100 :ಕನ್ನಡ ಗಜಲ್ ಯಾತ್ರೆ ಯೋಜನೆಯ ರುವಾರಿ ಅನುರಾಗ್ ಗದ್ದಿ ಮೂಲತಃ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಎ...
06/11/2025

ಕನ್ನಡ ಗಜಲ್ ಗಾಯನ ಯಾತ್ರೆ_100 :

ಕನ್ನಡ ಗಜಲ್ ಯಾತ್ರೆ ಯೋಜನೆಯ ರುವಾರಿ ಅನುರಾಗ್ ಗದ್ದಿ ಮೂಲತಃ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಎಂಬ ಊರಿನ ಗ್ರಾಮೀಣ ಪ್ರತಿಭೆ. ಕನಕಗಿರಿಯ ಶ್ರೀಪುಟ್ಟರಾಜ ಗವಾಯಿಗಳ ಸಂಗೀತ ಪಾಠ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿ ಸಂಗೀತದಲ್ಲಿ ಎಂ.ಎ ಮತ್ತು ವಿದ್ವತ್ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಅನುರಾಗ ಸಂಗೀತ ಗುರುಕುಲ ಹೆಸರಿನಲ್ಲಿ ಸಂಗೀತ ಶಾಲೆ ನಡೆಸುತ್ತಿರುವ ಅನುರಾಗ್ ಗದ್ದಿ, ಸಾಕಷ್ಟು ಕಡೆ ಸಂಗೀತ ಕಚೇರಿ ನಡೆಸಿದ್ದಾರೆ.

ಸದ್ಯ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳುತ್ತಲೇ ಮುಂಬೈನಲ್ಲಿ ಗಜಲ್ ಗಾಯನದಲ್ಲಿ ಸಂಗೀತದ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಪರಿಣತಿ ಹಾಗೂ ಸುಗಮ ಸಂಗೀತ, ವಚನ, ತತ್ವಪದ, ಭಾವಗೀತೆ ಮತ್ತು ಹಿಂದಿ ಹಾಗೂ ಕನ್ನಡ ಗಜಲ್ ಹಾಡುತ್ತಾರೆ. ಜತೆಗೆ ಹರ‍್ಮೋನಿಯಂ, ತಬಲಾ ನುಡಿಸುತ್ತಾರೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗಜಲ್ ತನ್ನದೇ ಪಾರಮ್ಯ ಸಾಧಿಸಿದ ಶೈಲಿ. ಆಧುನಿಕ ಮನರಂಜನಾ ಮಾಧ್ಯಮಗಳಿಗೆ ಅಂಟಿಕೊಂಡಿರುವ ಪ್ರೇಕ್ಷಕ ಕುಲವನ್ನು ಕನ್ನಡ ಸಾಹಿತ್ಯ ಹಾಗೂ ಸಂಗೀತ ಪರಂಪರೆಯ ಕಡೆಗೆ ಕರೆತಂದು ಸಂಗೀತದ ಮಹಾರಸದೌತಣ ಉಣಬಡಿಸುವ ಹಾಗೂ ಈಗಿನ ಪೀಳಿಗೆಗೆ ಸಂಗೀತ - ಸಾಹಿತ್ಯದ ಸಂಸಕೃತಿಯನ್ನು ಬೆಳಸುವ, ಬೆಳಕು ಚೆಲ್ಲುವ ಮಹಾದುದ್ದೇಶದೊಂದಿಗೆ ಕನ್ನಡ ಗಜಲ್ ಗಾಯನ ಯಾತ್ರೆ 100 ಶೀರ್ಷಿಕೆ ಅಡಿಯಲ್ಲಿ ರಾಜ್ಯದ್ಯಂತ ನೂರು ಕಾರ್ಯಕ್ರಮಗಳ ಮಾಡುವ ಸಂಕಲ್ಪವಿದ್ದು , ಕನ್ನಡ ಗಜಲ್ ಗಾಯನ ಪ್ರಾಕಾರವನ್ನು ಮನೆ ಮನಗಳಿಗೆ ತಲುಪಿಸುವೂದು ಹಾಗೂ ಈ ಪ್ರಾಕಾರವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಮೊದಲ ಕಾರ್ಯಕ್ರಮ ಜನೆವರಿ 24-2025 ರಂದು ಬೆಂಗಳೂರು ನಗರದ ನಯನ ಸಭಾಂಗಣದಲ್ಲಿ (ರವೀಂದ್ರ ಕಲಾಕ್ಷೇತ್ರ ) ನಾಡಿನ ಹೆಸರಾಂತ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡು, ಈಗಾಗಲೇ 15+ ಸಂಚಿಕೆಗಳನ್ನ ಪೂರೈಸಿ ಜನಮನ್ನಣೆ ಪಡೆದು ಮುನ್ನುಗ್ಗೂತಿದೆ,


#100ಯಾತ್ರೆ

ಡಿಸೆಂಬರ್‌ನಲ್ಲಿ "ಡೆವಿಲ್" ದರ್ಶನ :ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿoಗ್ ಸ್ಟಾರ್ ಎಂದೇ ಹೆಸರುವಾಸಿಯಾದ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ...
06/11/2025

ಡಿಸೆಂಬರ್‌ನಲ್ಲಿ "ಡೆವಿಲ್" ದರ್ಶನ :

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿoಗ್ ಸ್ಟಾರ್ ಎಂದೇ ಹೆಸರುವಾಸಿಯಾದ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್ಆಫೀಸ್ ಸುಲ್ತಾನ', `ದಾಸ' "ಡಿ ಬಾಸ್" ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.

"ಡೆವಿಲ್" ದರ್ಶನ್ ನಟನೆಯ ಮುಂಬರುವ ಕನ್ನಡ ಸಾಹಸ ಚಿತ್ರವಾಗಿದ್ದು, ಈ ಚಿತ್ರವನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ ಮತ್ತು ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇದು ಉದಯಪುರ, ರಾಜಸ್ಥಾನ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಆಕ್ಷನ್ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ೧೨, ೨೦೨೫ ರಂದು ಬಿಡುಗಡೆಯಾಗಲಿದೆ.

ಮೈ ನೇಮ್ ಈಸ್ ``ಕೆಡಿ`` ಟ್ರೇಲರ್ ಬಿಡುಗಡೆ :🙂🎬📽`ಇಂತಿ ನಿಮ್ಮ ಭೈರಾ` ಚಿತ್ರ ತಂಡದ ಮತ್ತೊಂದು ಪ್ರಯತ್ನವೆ "ಮೈ ನೇಮ್ ಈಸ್ ಕೆಡಿ". ಫಿಲಿಂ ಛೇಂಬರ...
06/11/2025

ಮೈ ನೇಮ್ ಈಸ್ ``ಕೆಡಿ`` ಟ್ರೇಲರ್ ಬಿಡುಗಡೆ :🙂🎬📽

`ಇಂತಿ ನಿಮ್ಮ ಭೈರಾ` ಚಿತ್ರ ತಂಡದ ಮತ್ತೊಂದು ಪ್ರಯತ್ನವೆ "ಮೈ ನೇಮ್ ಈಸ್ ಕೆಡಿ". ಫಿಲಿಂ ಛೇಂಬರ್ ಮಾಜಿ ಅಧ್ಯಕ್ಷ ಬಾ.ಮ.ಹರೀಶ್, ಮಹಾರಾಣಿ ಕಾಲೇಜು ಉಪಕುಲಪತಿ ಶಿವಶಂಕರಪ್ಪ ಮತ್ತು ನಿರ್ದೇಶಕ ಟಿ.ಶಿ.ವೆಂಕಟೇಶ್ ಈ ಚಿತ್ರದ ಟ್ರೇಲರ್‌ನ್ನು ಬಿಡುಗಡೆ ಮಾಡಿ ನಿರ್ಮಾಪಕರಿಗೆ ಹಾಗು ತಂಡಕ್ಕೆ ಶುಭ ಹಾರೈಸಿದರು. ವೆಂಕಟೇಶ್.ಡಿ ರವರು ಎಸ್‌ ಎಸ್‌ ಕೆ ಬಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅರುಣಕುಮಾರ್.ಡಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ ಹಾಗು ಕೆ.ಜೆ.ಚಿಕ್ಕು ಆಕ್ಷನ್ ಕಟ್ ಹೇಳಿದ್ದಾರೆ.

ಇದೊಂದು ಕಾಮಿಡಿ, ಡ್ರಾಮಾ ಸನ್ನಿವೇಶಗಳನ್ನು ಒಳಗೊಂಡಿದೆ. ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಕಡೆಗಳಲ್ಲಿ ೩೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳು ಇರಲಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ತರಲು ನೀರಿಕ್ಷೆಯಿದೆ ಎಂದು ಕೆ.ಜೆ.ಚಿಕ್ಕು ಹೇಳಿದ್ದಾರೆ.

ಆರ್ಯನ್ ವೆಂಕಟೇಶ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ, ಗಿಡುಗ ಚಿತ್ರದಲ್ಲಿ ನಟಿಸಿದ್ದ ಭವಾನಿ ನಾಯಕಿಯಾಗಿ ನಟಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ, ಗಿರೀಶ್ ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್ ಕಾಟಿ, ರೋಹಿಣಿ, ಮಾಸ್ಟರ್ ಮುಂತಾದವರು ನಟಿಸಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಮನು ದೇವನಹಳ್ಳಿ ಅವರ ಸಾಹಿತ್ಯದ ಗೀತೆಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ. ಸಂತೋಸ ಪಂಡಿ ಅವರ ಛಾಯಾಗ್ರಹಣ, ಕಿರಣಕುಮಾರ್.ಜೆ ಅವರ ಸಂಕಲನ ಈ ಚಿತ್ರಕ್ಕಿದೆ.

ಕೆಡಿ ಎಂದರೆ ಕನಕನಹಳ್ಳಿ ದಾಸಗೌಡರ ಮಗ, ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ, ಏಳನೇ ತರಗತಿ ಓದುತ್ತಿರುವ ಹುಡುಗನೊಬ್ಬ ತನ್ನ ತಾಯಿಯನ್ನು ಉಳಿಸಿಕೊಳ್ಳುವ ಸಲುವಾಗಿ ಶಾಸಕನ ಬಳಿ ಸಹಾಯ ಕೇಳಲು ಹೋಗುತ್ತಾನೆ. ಆದರೆ ಆ ಶಾಸಕ ಈ ಹುಡುಗನನ್ನು ಅವಮಾನ ಮಾಡಿ ಕಳಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಆ ಹುಡುಗ ನಾನು ಮುಂದೆ ಒಳ್ಳೆಯ ರೀತಿಯಲ್ಲಿ ಹಣಗಳಿಸಿ ಎಂ ಎಲ್‌ ಎ ಆಗಬೇಕೆಂದು ಪಣ ತೊಡುತ್ತಾನೆ. ಆ ಹಾದಿಯಲ್ಲಿ ಆತ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ. ಅಂತಿಮವಾಗಿ ತನ್ನ ಹಾದಿಯಲ್ಲಿ ಆತ ಯಶಸ್ಸು ಗಳಿಸುತ್ತಾನಾ, ಇಲ್ವಾ ಎನ್ನುವುದೇ ಮೈ ನೇಮ್ ಈಸ್ ಕೆಡಿ ಚಿತ್ರದ ಕಥಾಹಂದರ. ..!!

"Prank ಪ್ರೇಯಸಿ"  ನಾಚಿ ಓಡಿದನು ಮದನಾ...!ಎಂಬ ವಿಭಿನ್ನ ಶೀರ್ಷಿಕೆಯ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಪತ್ರಕರ್ತರಾದ ಸ್ನೇಹ...
06/11/2025

"Prank ಪ್ರೇಯಸಿ" ನಾಚಿ ಓಡಿದನು ಮದನಾ...!
ಎಂಬ ವಿಭಿನ್ನ ಶೀರ್ಷಿಕೆಯ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಪತ್ರಕರ್ತರಾದ ಸ್ನೇಹಪ್ರಿಯಾ ಡಾಟ್ ಕಾಮ್ ನ ಸ್ನೇಹಪ್ರಿಯಾ ನಾಗರಾಜ್ ರವರು ನಿರ್ದೇಶಿಸುತ್ತಿದ್ದಾರೆ.

ಲಕ್ಷ್ಮಿ ನಾರಾಯಣ ಜಿ.ಡಿ., ಭದ್ರಾವತಿ ಕುಮಾರ್, ಮಂಜುನಾಥ್ ಜೆ. ನಾಯಕ್ ಮತ್ತು ಪ್ರವೀಣ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎಂ.ಎನ್. ಕೃಪಾಕರ್, ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣ ಮತ್ತು ಅವಿಶಂಕರ್ ಅವರ ಕಲಾ ನಿರ್ದೇಶನವಿದೆ.

'ನಮ್ಮ ಸೂಪರ್ ಸ್ಟಾರ್ಸ್' ಪತ್ರಿಕೆಯಲ್ಲಿ  'ಫ್ಯಾನ್ಸ್ ಕ್ರಿಕೆಟ್ ಲೀಗ್‌ನ ವಿಶೇಷ ಲೇಖನ. ಕವರ್ ಫೋಟೋ ಲಾಂಚ್ ಮಾಡಿದ ಡಾ. ಶಿವರಾಜ್ ಕುಮಾರ್ ದಂಪತಿ...
06/11/2025

'ನಮ್ಮ ಸೂಪರ್ ಸ್ಟಾರ್ಸ್' ಪತ್ರಿಕೆಯಲ್ಲಿ 'ಫ್ಯಾನ್ಸ್ ಕ್ರಿಕೆಟ್ ಲೀಗ್‌ನ ವಿಶೇಷ ಲೇಖನ. ಕವರ್ ಫೋಟೋ ಲಾಂಚ್ ಮಾಡಿದ ಡಾ. ಶಿವರಾಜ್ ಕುಮಾರ್ ದಂಪತಿ





06/11/2025
05/11/2025

I got over 2,000 reactions on my posts last week! Thanks everyone for your support! 🎉

Address


Opening Hours

Monday 10:00 - 21:00
Tuesday 10:00 - 21:00
Wednesday 10:00 - 21:00
Thursday 10:00 - 21:00
Friday 10:00 - 21:00
Saturday 10:00 - 21:00

Telephone

+919901297397

Alerts

Be the first to know and let us send you an email when Namma Superstars posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Superstars:

  • Want your business to be the top-listed Media Company?

Share