JAYASOORYA PATHRIKE

  • Home
  • JAYASOORYA PATHRIKE

JAYASOORYA PATHRIKE A powerful news paper page that can reach from public ,to public, for public news

27/10/2024

ತುಳುನಾಡು ರಕ್ಷಣ ವೇದಿಕೆ..
ಕುಂದಾಪುರ ಘಟಕ ಪದಗ್ರಹಣ ಕಾರ್ಯಕೃಮ ಸಂಪೂರ್ಣ ಚಿತ್ರಣ ...
ಇಲ್ಲಿ ನೋಡಿ..

27/10/2024
ಶ್ರಾವಣದ ಹುಣ್ಣಿಮೆ ಸೂಪರ್ಮೂನ್.19- 08- 24 ಸೋಮವಾರ ಶ್ರವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ ಸೂಪರ್ ಮೂನ್.ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ...
18/08/2024

ಶ್ರಾವಣದ ಹುಣ್ಣಿಮೆ ಸೂಪರ್ಮೂನ್.
19- 08- 24 ಸೋಮವಾರ ಶ್ರವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ ಸೂಪರ್ ಮೂನ್.
ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವೀಜ, ಹಾಗೂ ಕಾರ್ತೀಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್ಮೂನ್ ಗಳೇ.
ಸೂಪರ್ಮೂನ್ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು ಮೂವತ್ತು ಸಾವಿರ ಕಿಮೀ ಸಮೀಪ ಬರುವುದು. ಭೂಮಿಯಿಂದ ಸರಾಸರಿ 3ಲಕ್ಷದ 84 ಸಾವಿರ ಕಿಮೀ ದೂರದಲ್ಲಿ ದೀರ್ಘವೃತ್ಾಕಾರದಲ್ಲಿ ಸುತ್ತುವ ಚಂದ್ರ , 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರದವರೆಗೂ ಹತ್ತಿರ ಬರುವುದುಂಟು. ಆ ದಿನ ಹುಣ್ಣಿಮೆಯಾದರೆ, ಭೂಮಿಗೆ ಹತ್ತಿರ ಬಂದ ಚಂದ್ರ , ಸುಮಾರು 14 ಅಂಶ ದೊಡ್ಡದಾಗಿ ಕಂಡು , ಸುಮಾರು 24ಅಂಶ ಹೆಚ್ಚಿನ ಪ್ರಭೆಯಿಂದ ಬೆಳಗುತ್ತಾನೆ.
ವರ್ಷದಲ್ಲಿ ಕೆಲ ಹುಣ್ಣಿಮೆಗಳು ಸೂಪರ್ ಮೂನ್ ಆಗುವದುಂಟು. ಆದರೆ ಈ ವರ್ಷ ಈ ಹುಣ್ಣಿಮೆಯಿಂದ ಸರಾಗ ನಾಲ್ಕೂ ಹುಣ್ಣಿಮೆಗಳೂ ಸೂಪರ್ಮೂನ್ ಗಳೇ.
ಆಗಸ್ಟ್ 19 ರಂದು 3 ಲಕ್ಷದ 61 ಸಾವಿರದ 969 ಕಿಮೀ ಯಾದರೆ, ಸಪ್ಟಂಬರ್ 18 ರಂದು 3 ಲಕ್ಷದ 57 ಸಾವಿರದ 485, ಅಕ್ಟೋಬರ್ 17 ರಂದು 3 ಲಕ್ಷದ 57 ಸಾವಿರದ 363 ಕಿಮೀ ಹಾಗೂ ನವಂಬರ್ 15 ರಂದು 3 ಲಕ್ಷದ 61 ಸಾವಿರದ 866ಕಿಮೀ.
ಹುಣ್ಣಿಮೆಯೇ ಚೆಂದ. ಅದೂ ಸೂಪರ್ ಮೂನ್ ಬಲು ಚೆಂದ.
*ಡಾ ಎ ಪಿ ಭಟ್ ಉಡುಪಿ*

ಹೀಗೊಂದು ವಾಟ್ಸಪ್ ಲೇಖನದ ಹಿಂದೆ ಹೊರಟ ಜಯಸೂರ್ಯ ಪತ್ರಿಕೆಗೆ... ಇದು ನಿಜ! ಎನ್ನುವ ಸುದ್ದಿ ಸಿಕ್ಕಿತು. ಕೆಲವಾರು ಸಂಘಟನೆಯನ್ನು ಪರಿಶೀಲಿಸಿದಾಗ ...
01/07/2024

ಹೀಗೊಂದು ವಾಟ್ಸಪ್ ಲೇಖನದ ಹಿಂದೆ ಹೊರಟ ಜಯಸೂರ್ಯ ಪತ್ರಿಕೆಗೆ... ಇದು ನಿಜ! ಎನ್ನುವ ಸುದ್ದಿ ಸಿಕ್ಕಿತು. ಕೆಲವಾರು ಸಂಘಟನೆಯನ್ನು ಪರಿಶೀಲಿಸಿದಾಗ ಇದರ ಕುರುಹಗಳು ಸಿಕ್ಕಿತ್ತು. ಹಿಂದೆ ಕೆಲವು ದುಷ್ಟ ಕೂಟಗಳು ಪತ್ರಿಕೆಯನ್ನು ದುರ್ಬಳಕೆ ಮಾಡಲು ಕೆಲವು ಅಧಿಕಾರಿಗಳೂ ಸೇರಿ ನಡೆಸಿದ ಭ್ರಷ್ಟ ಚಟುವಟಿಕೆಗಳ ಕುರಿತಾಗಿ ಪತ್ರಿಕೆ ಎಚ್ಚರದಿಂದ ಇನ್ನಷ್ಟು ದೃಢತೆಯಿಂದ ಲೇಖನ ಪರಿಶೀಲಿಸಿ ಪ್ರಕಟಿಸುತ್ತಿದೆ. ನಂಬಿಕೆಯಿಂದ ಓದಿಕೊಳ್ಳಬಹುದಾದ ವಾಟ್ಸಪ್ ಲೇಖನ . ನಿಮಗಾಗಿ

21 ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸ್.‌ರಘು, ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬ..!

ಹಣೆಯಲ್ಲಿ ಕುಂಕುಮ, ಸಾಧಾರಣ ವ್ಯಕ್ತಿಯಂತೆ ಕಾಣುವ ಈ ವ್ಯಕ್ತಿ, ನಮ್ಮ ಕನ್ನಡ ನಾಡಿನ ಅಸಮಾನ್ಯ ಪ್ರತಿಭೆ

ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು. ಆದರೂ ಛಲ ಬಿಡದೇ, ಕಳೆದುಕೊಂಡದ್ದನ್ನು ಮತ್ತೆ ಹುಡುಕಲು ಹೊರಟವನು ಇಂದು ಭಾರತದ ಟಿ20 ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ.

ಸುಮಾರು 24 ವರ್ಷಗಳ ಹಿಂದೆ.., ಕ್ರಿಕೆಟ್ ಆಡಲೆಂದು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟಿದ್ದ ಹುಡುಗ…
ಆ ಪ್ರಯಾಣ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರೆಗೆ ಬಂದು ತಲುಪಿದೆ ಎಂದರೆ ಇದು ಅದ್ಭುತವಲ್ಲದೆ ಮತ್ತಿನ್ನೇನು..!

2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ‘’ನನ್ನ ಇವತ್ತಿನ ಯಶಸ್ಸಿನಲ್ಲಿ ಆ ವ್ಯಕ್ತಿಯ ಪಾತ್ರ ತುಂಬಾ ದೊಡ್ಡದು. ಆದರೆ ಅವರ ಪರಿಶ್ರಮ ಕೆಲವೊಮ್ಮೆ ಜಗತ್ತಿನ ಕಣ್ಣಿಗೆ ಕಾಣುವುದೇ ಇಲ್ಲ’’ ಎಂದು.

ಹೌದು.. ಆ ವ್ಯಕ್ತಿ ಇರುವುದೇ ಹಾಗೆ. ಆತ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು. ಹೀಗಾಗಿ ಜಗತ್ತಿನ ಕಣ್ಣಿಗೆ ಕಾಣಿಸದೆ ಸದಾ ಆಟಗಾರರ ಬೆನ್ನ ಹಿಂದೆಯೇ ನಿಂತಿರುತ್ತಾನೆ. ಆತ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸ್.‌ರಘು ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಎಂದು ಕರೆಯಲು ಕಾರಣವಿದೆ. ಕಳೆದ 13 ವರ್ಷಗಳಲ್ಲಿ ಭಾರತ ತಂಡಕ್ಕಾಗಿ ರಕ್ತವನ್ನೇ ಬಸಿದವರು ಯಾರಾದರೂ ಇದ್ದರೆ ಅದು ರಘು.

2011ರಲ್ಲಿ ಭಾರತ ತಂಡಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇರಿಕೊಂಡ ರಘು, ಕಳೆದೊಂದು ದಶಕದಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. ರಾಘವೇಂದ್ರನ ರಟ್ಟೆಯ ಬಲದಿಂದ ನುಗ್ಗಿ ಬರುವ ಆ ಎಸೆತಗಳನ್ನು ಎದುರಿಸಲು ಸಾಧಾರಣ ಧೈರ್ಯ ಸಾಲದು. 150 kph ವೇಗದಲ್ಲಿ ಬಂದಪ್ಪಳಿಸುವ ಮಿಂಚಿನ ವೇಗದ ಚೆಂಡುಗಳವು. Side arm ಎಂಬ ಸಾಧನ ರಘು ಕೈಯಲ್ಲಿದ್ದಾಗ ಇವನಷ್ಟು ವೇಗದಲ್ಲಿ ಚೆಂಡೆಸೆಯುವ ಮತ್ತೊಬ್ಬ ಥ್ರೋಡೌನ್ ಸ್ಪೆಷಲಿಸ್ಟ್ ಜಗತ್ತಿನಲ್ಲೇ ಇಲ್ಲ.

ತಲೆಯ ಎತ್ತರಕ್ಕೆ ಪುಟಿದೆದ್ದು ಬರುವ ಎಸೆತಗಳನ್ನು ರೋಹಿತ್ ಶರ್ಮಾ ಲೀಲಾಜಾಲವಾಗಿ ಸಿಕ್ಸರ್’ಗಟ್ಟುವುದನ್ನು ನೋಡಿ ಜನ ‘Wow, he is so special ಎನ್ನುತ್ತಾರೆ.

ಭಯಾನಕ ಬೌನ್ಸರ್’ಗಳಿಗೆ, ಶರವೇಗದ ಚೆಂಡುಗಳಿಗೆ ವಿರಾಟ್ ಕೊಹ್ಲಿ ಬಾರಿಸುವ ಒಂದೊಂದು ಹೊಡೆತಗಳಿಗೆ ಜನ ‘ಉಘೇ, ಉಘೇ’ ಎನ್ನುತ್ತಾರೆ.

ಅನುಮಾನವೇ ಬೇಡ, ಅದು ವಿರಾಟ್, ರೋಹಿತ್’ರಂತಹ ಆಟಗಾರರ ಶಕ್ತಿ ಮತ್ತು ತಾಕತ್ತು. ಆ ಶಕ್ತಿ-ತಾಕತ್ತಿಗೆ ಪರಿಪೂರ್ಣತೆ ತಂದುಕೊಟ್ಟವನು ನಮ್ಮ ಕನ್ನಡಿಗ ರಾಘವೇಂದ್ರ.

‘’ನೆಟ್ಸ್’ನಲ್ಲಿ 150 kph ವೇಗದಲ್ಲಿ ರಘು ಎಸೆಯುವ ಚೆಂಡುಗಳನ್ನು ಎದುರಿಸಿ ಎದುರಿಸಿ ಪಳಗಿರುವ ನಮಗೆ, ಮ್ಯಾಚ್’ನಲ್ಲಿ ಭಯಾನಕ ವೇಗಿಗಳೇ ಮಧ್ಯಮ ವೇಗಿಗಳಂತೆ ಕಾಣುತ್ತಾರೆ’’ ಎಂದು ಸ್ವತಃ ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿದ್ದ.

ಜೀವನದಲ್ಲಿ ಎಲ್ಲವೂ ಮುಗಿಯಿತೆಂದು ಅಂದುಕೊಳ್ಳುವವರು ಒಮ್ಮೆ ರಾಘವೇಂದ್ರನ ಸ್ಫೂರ್ತಿದಾಯಕ ಕಥೆಯನ್ನು ಕೇಳಬೇಕು.

ರಾಘವೇಂದ್ರನಿಗೆ ವಿಪರೀತ ಕ್ರಿಕೆಟ್ ಹುಚ್ಚು. ತಂದೆಗೆ ಕ್ರಿಕೆಟ್ ಎಂದರೆ ಅಲರ್ಜಿ. ಇವನ ಕ್ರಿಕೆಟ್ ಹುಚ್ಚನ್ನು ನೋಡಿದ ತಂದೆ ಒಂದು ದಿನ ಮಗನಲ್ಲಿ ಕೇಳುತ್ತಾರೆ. ‘’ನಿನಗೆ ಓದು, ಜೀವನ ಮುಖ್ಯವೋ, ಕ್ರಿಕೆಟ್ ಮುಖ್ಯವೋ’’ ಎಂದು. ಅಷ್ಟೇ.. ಕೈಯಲ್ಲೊಂದು ಬ್ಯಾಗ್, ಪಾಕೆಟ್’ನಲ್ಲಿ 21 ರೂಪಾಯಿ.. ಮನೆ ಬಿಟ್ಟು ಹೊರಟೇ ಬಿಟ್ಟ ರಾಘವೇಂದ್ರ.

ಕುಮಟಾದಿಂದ ಹೊರಟವನು ನೇರ ಬಂದು ಸೇರಿದ್ದು ಹುಬ್ಬಳ್ಳಿಗೆ. ಹಿಂದೆ ಮುಂದೆ ಯೋಚಿಸದೆ ಮನೆ ಬಿಟ್ಟು ಬಂದವ.. ಕೈಯಲ್ಲಿದ್ದದ್ದು ಕೇವಲ ₹21. ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಾನೆ. ಅಲ್ಲಿಂದ ಪೊಲೀಸರು ಓಡಿಸಿದಾಗ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ. ಅಲ್ಲಿಂದಲೂ ಹೊರ ನಡೆಯಬೇಕಾದ ಪರಿಸ್ಥಿತಿ ಎದುರಾದಾಗ ಬೇರೆ ದಾರಿ ಕಾಣದ ರಾಘವೇಂದ್ರ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾನೆ.

ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡವೇ ಮನೆಯಾಗುತ್ತದೆ. ಕ್ರಿಕೆಟ್ ಮೈದಾನದಿಂದ ತಂದ ಹರಕಲು ಮ್ಯಾಟನ್ನೇ ಹೊದಿಕೆ ಮಾಡಿಕೊಳ್ಳುತ್ತಾನೆ. ಈ ರೀತಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾನೆ ರಾಘವೇಂದ್ರ. ಈ ಮಧ್ಯೆ ಬಲಗೈ ಮುರಿದು ಹೋಗಿದ್ದ ಕಾರಣ ಕ್ರಿಕೆಟ್ ಆಡುವ ಕನಸಿಗೆ ಕಲ್ಲು ಬಿದ್ದಿರುತ್ತದೆ. ಮನೆ ಬಿಟ್ಟು ಬಂದಾಗಿದೆ, ವಾಪಸ್ ಹೋಗುವ ಮಾತೇ ಇಲ್ಲ ಎಂದುಕೊಂಡವನೇ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾನೆ.

ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾ ಇದ್ದವನಿಗೆ ಗೆಳೆಯನೊಬ್ಬ ಬೆಂಗಳೂರು ದಾರಿ ತೋರಿಸುತ್ತಾನೆ. ಬೆಂಗಳೂರಿಗೆ ಬಂದ ರಾಘವೇಂದ್ರನಿಗೆ ಆಶ್ರಯ ಕೊಟ್ಟದ್ದು Karnataka Institute of Cricket. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯುವುದು, ಬೌಲಿಂಗ್ ಮಷಿನ್’ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರನ ಕೆಲಸವಾಗಿತ್ತು.

ಹೀಗೇ ಒಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತಾನೆ. ರಾಘವೇಂದ್ರನ ಕೆಲಸವನ್ನು ನೋಡಿದ ತಿಲಕ್ ನಾಯ್ಡು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸುತ್ತಾರೆ.

ಅದು ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ತಿರುವು. ಹುಡುಗನ ಪ್ರಾಮಾಣಿಕತೆಯನ್ನು ಗಮನಿಸಿದ ಶ್ರೀನಾಥ್, ‘ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು’ ಎಂದು ಅಲ್ಲಿಗೆ ಕರೆ ತಂದು ಸೇರಿಸುತ್ತಾರೆ. ಕ್ರಿಕೆಟ್ ಸೀಸನ್’ನಲ್ಲಿ ಕರ್ನಾಟಕ ತಂಡದ ಜೊತೆ ಕೆಲಸ.. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ National Cricket Academyಯಲ್ಲಿ ಕೆಲಸ. ನೆನಪಿರಲಿ.. ಈ ರೀತಿ 3-4 ವರ್ಷ ಒಂದು ಪೈಸೆ ದುಡ್ಡು ಪಡೆಯದೆ ಕೆಲಸ ಮಾಡಿದ್ದ ರಾಘವೇಂದ್ರ. ಕೈಯಲ್ಲಿ ದುಡ್ಡಿಲ್ಲದ ಕಾರಣ ಎಷ್ಟೋ ದಿನ ಊಟವಿಲ್ಲದೆ ರಾತ್ರಿ ಕಳೆದದ್ದೂ ಇದೆ.

NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾನೆ. NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾ ಅವರ ನೆಚ್ಚಿನ ಹುಡುಗನಾಗಿ ಬಿಡುತ್ತಾನೆ.

ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸುತ್ತಾರೆ. ಪರಿಣಾಮ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾನೆ. ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘವೇಂದ್ರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾನೆ. ರಾಘವೇಂದ್ರನ ನಿರಂತರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲ ಟಿ20 ವಿಶ್ವಕಪ್.

- Gowda

ಇಂಥಾ  ಅನೇಕ ಸಂದರ್ಭಗಳನ್ನ ನಾವು ನೀವುಗಳು ಎದುರಿಸಿರುತ್ತೀರಿ. ಕಷ್ಟದ ಸಂದರ್ಭದಲ್ಲಿ ಯಾರೂ ಇರುವುದಿಲ್ಲ. ಆದರೆ ಕೆಲವು ವ್ಯಕ್ತಿಗಳು ದೇವತಾ ಸ್ವರ...
19/05/2024

ಇಂಥಾ ಅನೇಕ ಸಂದರ್ಭಗಳನ್ನ ನಾವು ನೀವುಗಳು ಎದುರಿಸಿರುತ್ತೀರಿ. ಕಷ್ಟದ ಸಂದರ್ಭದಲ್ಲಿ ಯಾರೂ ಇರುವುದಿಲ್ಲ. ಆದರೆ ಕೆಲವು ವ್ಯಕ್ತಿಗಳು ದೇವತಾ ಸ್ವರೂಪರಾಗಿ ಜೀವನದ ಮೇಲೆ ರೂಪುರೇಷೆ ನೀಡುತ್ತಾರೆ. ಪ್ರಾರ್ಥನೆಯು ನಿಜವಾಗಿದ್ದಲ್ಲಿ ಭಗವಂತನೂ ಕೈ ಬಿಡಲಾರ ಅನ್ನಿಸುವುದೂ ಹಲವು ಸಂದರ್ಭದಲ್ಲಿ ಗಮನಕ್ಕೆ ಬಂದಿರುತ್ತದೆ. ಅಂತಹಾ ಲೇಖನವೊಂದು ವಾಟ್ಸಪ್ ನಲ್ಲಿ ಸಿಕ್ತು. ಚನ್ನಾಗಿದೆ. ಓದಿಕೊಳ್ಳಿ.

ಆ ದಿನಗಳು ಜೀವನದಲ್ಲಿ ನನ್ನವರು ಯಾರು ಅನ್ನೋ ಪಾಠಕಲಿಸಿದ ಕಷ್ಟದ ದಿನಗಳು ಆ ದಿನಗಳನ್ನ ನಾನು ಇಂದಿಗೂ ಮರೆತಿಲ್ಲ..

ಅಮ್ಮನಿಗೆ ಗರ್ಭಕೋಶದ ಆಪರೇಷನ್ ಮಾಡಬೇಕು ಅಂದಿದ್ರು ಅಮ್ಮ ಅಪ್ಪ ಅದನ್ನು ಮನೆಗೆ ಹೇಳಲೇ ಇಲ್ಲಾ ನನ್ನ ತಂಗಿ ಮದುವೆ ಹತ್ತಿರ ಬಂದಿದೆ ಖರ್ಚು ಜಾಸ್ತಿ ಮದುವೆ ಆದ ನಂತರ ನೋಡಿಕೊಳ್ಳೋಣ ಅಂತಾ ಸುಮ್ಮನಾಗಿದ್ದಾರೆ. ಅವರಂದು ಕೊಂಡಂತೆ ಮದುವೆನೂ ಮಾಡಿದ್ರು ನಾನಿನ್ನು MA ಸೆಕೆಂಡ್ ಸೆಮಿಸ್ಟರ್ ಓದುತ್ತಿದ್ದೆ ನಂತರ ಅಮ್ಮನ ಆರೋಗ್ಯಸ್ಥಿತಿ ಸ್ವಲ್ಪ ಏರುಪೇರಾಗಿದ್ದು ನೋಡಿ ಕೇಳಿದಾಗ ಅಪ್ಪ ಹೇಳಿದ್ರು ಆಪರೇಷನ್ ಮಾಡಿಸ್ಬೇಕಂತೆ ಅಂತಾ ಸರಿ ಮಾಡಿಸೋಣ ತಡ ಯಾಕೆ ಅಪ್ಪ..ಅಂದಾಗ ಹಣಎಲ್ಲಿದೆ..? ಇದ್ದವೆಲ್ಲ ಹತ್ತನ್ನೆರೆಡು ಬೋರ್ ವೆಲ್ ಗೂ ಅಳಿದು ಉಳಿದಿದ್ದು ಬ್ಯಾಂಕ್ ಸಾಲ ಮಾಡಿ ಮದುವೆ ಖರ್ಚಿಗೂ ಸರಿ ಹೋಗಿದೆ ಅಂದ್ರು.

ಅಪ್ಪಾ ಇದು ಲೇಟ್ ಮಾಡಬಾರದಂತೆ ಡಾಕ್ಟರ್ ಹೇಳಿದ್ರು ಅಮ್ಮ ದಿನ ದಿನಕ್ಕೂ ವೀಕ್ ಆಗ್ತಿದ್ದಾರಂತೆ ಅಂದೆ. ಅಪ್ಪ ಮತ್ತೆ ಯಾರ್ ಯಾರೋ ಸ್ನೇಹಿತರ ಹತ್ತಿರ ಕೇಳಿ ಮೂವತ್ತು ಸಾವಿರ ಹೊಂದಿಸಿಕೊಂಡು ಆಸ್ಪತ್ರೆಗೆ ಕಟ್ಟಿ ಆಪರೇಷನ್ ಗೆ ರೆಡಿ ಮಾಡಿದ್ವಿ ಆಗ ರಕ್ತಬೇಕಾಗುತ್ತೆ O+ ಅಂದಾಗ ನಾನು ಅಪ್ಪನೇ ನಮ್ಮ ರಕ್ತ ಕೊಟ್ವಿ ಹೇಗೋ ಆಪರೇಷನ್ ಆಯ್ತು ಶಾಸ್ತ್ರಕ್ಕೆ ಬಂದು ಬಳಗ ಅನ್ನೋರೆಲ್ಲ ಬಂದು ನೋಡ್ಕೊಂಡು ಹೋದ್ರು..

ಆದರೆ ಒಂದುವಾರ ಎರೆಡುವಾರ ಕಳೆದರೂ ಆಪರೇಷನ್ ಮಾಡಿ ಹಾಕಿದ್ದ ಹೊಲಿಗೆ ಗಾಯ ಕೂಡಿಕೊಂಡಿರಲಿಲ್ಲ ಏನು ಅಂತಾ ಡಾಕ್ಟರ್ ಅವರನ್ನು ಕೇಳಿದರೆ ನಮಿಗೂ ಏನು ಗೊತ್ತಾಗ್ತಿಲ್ಲ ಅಂತಾ ಸುಮ್ನೆ ಡೈಲಿ ಮೆಡಿಕಲ್ ಬಿಲ್ ರೂಮ್ ರೆಂಟ್ ಕಟ್ಟಿಸಿಕೊಳ್ತಾ ಇದ್ರೂ ಆ ಬಿಲ್ ಮತ್ತೆ ಮೂವತ್ತು ಸಾವಿರ ಆಗೋಕೆ ಬಂತು... ಆಗ್ಲೇ ಹತ್ತಿರದ ಬಂಧುಗಳು ಎಲ್ಲಿ ಹಣ ಕೇಳ್ತಾರೋ ಇವರು ಅಂತಾ ಬರೋದು ಇರಲಿ ಫೋನ್ ಮಾಡೋದು ಬಿಟ್ಟಿದ್ರು...

ಅಮ್ಮ ಮನೆಗೆ ಕರೆದುಕೊಂಡುಹೋಗಿ ನನ್ನನ್ನು ಆಗಿದ್ದಾಗಲಿ ಎಲ್ಲಿ ತರ್ತೀರಾ ಹಣ ಅಂದ್ರು ಅಪ್ಪನ ಕಣ್ಣಲ್ಲಿ ನಾನು ಯಾವತ್ತೂ ನೀರು ನೋಡಿರಲಿಲ್ಲ ಆ ದಿನ ಕಣ್ಣೀರು ಬಂದಿದ್ದು ನೋಡ್ದೆ ಆದ್ರೆ ನಾನು ಅತ್ತು ಬಿಟ್ಟರೆ ಅವರಿಗೆ ಧೈರ್ಯ ಹೇಳೋರು ಯಾರು ಅಂತಾ ಅಪ್ಪಾ ಧೈರ್ಯವಾಗಿರಿ ಹೊಲ ಯಾರಿಗಾದ್ರೂ ಮಾರಿ ಬಿಡೋಣ ಅಮ್ಮ ಬದುಕಿದ್ರೆ ಸಾಕು ನಮಿಗೆ ಒಳ್ಳೆ ಆಸ್ಪತ್ರೆಗೆ ತೋರಿಸೋಣ ಅಂದೇ..... ಅಪ್ಪ ಯೋಚನೆ ಮಾಡ್ತಾ ಕೂತ್ರು...

ನಾನು ಆಸ್ಪತ್ರೆಯಿಂದ ಊರಿಗೆ ಬಂದೆ ಮನಸ್ಸು ತುಂಬಾ ಭಾರವಾಗಿತ್ತು ಅಜ್ಜಿ ಏನು ಹೇಳಿದ್ರು ಡಾಕ್ಟರ್ ಅಂದ್ರು ಏನು ಹೇಳಿಲ್ಲ ಅಜ್ಜಿ ಅಂದೇ ಅಜ್ಜಿ ಗೆ ಅರ್ಥ ಆಯ್ತು ಇಂತಹ ಎಷ್ಟು ಕಷ್ಟ ನೋಡಿ ಬಂದ ಜೀವ ಅದು ಮುದ್ದೆ ತಟ್ಟೇಲಿ ಇಟ್ಟು ಹೇಳಿದ್ರು ಇವತ್ತು ಭಾನುವಾರ ಸಿದ್ದಪ್ಪನದೇವಸ್ಥಾನಕ್ಕೆ ಹೋಗಿ ಬಾ ಸ್ನಾನ ಮಾಡಿ ಎಲ್ಲ ಆಯಪ್ಪ ನೋಡಿಕೊಳ್ತಾನೆ ಮುದ್ದೆಗಿಂತ ಊಟವಿಲ್ಲ ಸಿದ್ದಪ್ಪನಿಗಿಂತ ದ್ಯಾವರಿಲ್ಲ ಅಂದ್ರು... ನಾನು ರಾತ್ರಿ ಸ್ನಾನ ಮುಗಿಸಿ ಬರಿಗಾಲಲ್ಲಿ ನಾಲ್ಕು ಕಿಲೋಮೀಟರ್ ಇರುವ ವದ್ದಿಕೆರೆ ಸಿದ್ದೇಶ್ವರನ ದೇವಸ್ಥಾನಕ್ಕೆ ನಡೆದುಕೊಂಡು ಹೋದೆ ಕೈಮುಗಿದು ಹೊರಗಡೆ ಬಂದು ಮೆಟ್ಟಿಲುಗಳ ಮೇಲೆ ಒಬ್ಬನೇ ಕೂತೆ ಸಮಯ ರಾತ್ರಿ 11 ಆಗಿತ್ತು ಅನ್ಸುತ್ತೆ ಅಷ್ಟೇನೂ ಜನಸಂದಣಿ ಇರಲಿಲ್ಲ ಮೌನವಾಗಿ ಮನಸಲ್ಲಿ ಸಿದ್ದಯ್ಯ ನಮ್ಮ ಯಾವ ತಪ್ಪಿಗೆ ಈ ಶಿಕ್ಷ..? ಅಂತಾ ಮನಸಲ್ಲಿ ಕೇಳಿಕೊಂಡ ತಕ್ಷಣ ಕಣ್ಣೀರು ಧಾರಾಕಾರವಾಗಿ ಇಳಿತಿದ್ವು ಸಾಕಾಗೋ ವರೆಗೂ ಆ ಪ್ರಶಾಂತವಾದ ವಾತಾವರಣದಲ್ಲಿ ಇದ್ದು ಎಲ್ಲ ಕಷ್ಟ ಆ ಪರಮೇಶ್ವರನಬಳಿ ಹೇಳಿಕೊಂಡಾಗ ಮನಸಿಗೆ ಧೈರ್ಯ ಬಂತು ನಾನಿದ್ದೀನಿ ಹೋಗು ಎನ್ನುವ ಅಭಯ ಕೊಟ್ಟ ಹಾಗಾಯ್ತು ವಾಪಸ್ ಬಂದು ಮರುದಿನ ಆಸ್ಪತ್ರೆಗೆ ಹೋದೆ

ಅಲ್ಲಿ ಎಂದಿನಂತೆ ನಮಗೆ ಪ್ರತಿದಿನ ಊಟ ತಿಂಡಿಯನ್ನು ಮನೆಯಿಂದಲೇ ತಂದುಕೊಡುತ್ತಿದ್ದ ನಮ್ಮ ಭಾವನ ಚಿಕ್ಕಪ್ಪ ಚಂದ್ರಣ್ಣ ಅಂಕಲ್ ಬಂದು ಡಾಕ್ಟರ್ ಅವರನ್ನು ವಿಚಾರಿಸಿದರಂತೆ ಅವರು ಮತ್ತೆ ಮನೆಗೆ ಹೋಗಿ ಐವತ್ತು ಸಾವಿರ ಹಣದ ಕಟ್ಟನ್ನು ತಂದು ಅಪ್ಪನಿಗೆ ಕೊಟ್ಟು ನಿಮ್ಮ ಹತ್ತಿರ ಇದ್ದಾಗ ವಾಪಾಸ್ ಕೊಡಿ ಹಣ ಇರೋದೇ ಕಷ್ಟಕ್ಕೆ ಆಗೋಕೆ ಅಂತಾ ಧಾರಾಳವಾಗಿ ಕೊಟ್ಟಾಗ ನಮಗೆ ಆ ಮನುಷ್ಯ ಸಾಕ್ಷಾತ್ ದೇವರಂತೆ ಕಂಡಿದ್ದು ಸತ್ಯ.

ಅಷ್ಟರಲ್ಲಿ ಅಮ್ಮನ ತಂಗಿ ನನ್ನ ಎರಡನೇ ಅಮ್ಮ ಅಂತಾನೆ ಹೇಳಬಹುದು ಅವರು ಬಂದು ಈ ಆಸ್ಪತ್ರೆ ಸರಿ ಇಲ್ಲಾ ನಮ್ಮ ಫ್ಯಾಮಿಲಿ ಡಾಕ್ಟರ್ ಇದ್ದಾರೆ ಅವರಿಗೆ ತೋರಿಸೋಣ ಸುಮ್ನೆ ಡಿಸ್ಚಾರ್ಜ್ ಮಾಡಿಸಿ ಅಂತೇಳಿ ಆಸ್ಪತ್ತ್ರೆಯ ಉಳಿದ ಬಿಲ್ 38 ಸಾವಿರ ಕಟ್ಟಿದಮೇಲೆ ಜಗಳೂರಿಗೆ ಕರೆದುಕೊಂಡು ಹೋದ್ರು ಆ ಡಾಕ್ಟರ್ ನೋಡಿ ಅವರು ಸರಿಯಾಗಿ ಹೊಲಿಗೆ ಹಾಕಿಲ್ಲ ಮತ್ತೆ ಆ ಹೊಲಿಗೆ ತೆಗೆದು ಹಾಕೋಣ ಅಂತಾ ಹೊಲಿಗೆ ಹಾಕಿ ಮನೆಯಲ್ಲೇ ಟ್ರೀಟ್ಮೆಂಟ್ ತಗೊಳ್ಳಿ ನಾನು ಅಲ್ಲೇ ಬಂದು ನೋಡ್ತೀನಿ ಅಂದ್ರು ನಮ್ಮ ಚಿಕ್ಕಮ್ಮ ಅಮ್ಮನನ್ನು ಅವರ ಮನೆಯಲ್ಲೇ ಉಳಿಸಿಕೊಂಡು ಅಮ್ಮನನ್ನು ಪೂರ್ಣ ಗುಣಮುಖರಾದ ಮೇಲೆ ಅವರೇ ತಮ್ಮ ಕಾರ್ ಅಲ್ಲಿ ಕರೆದುಕೊಂಡು ಬಂದ್ರು ನಮ್ಮ ಮನೆಗೆ.

ಅಮ್ಮ ಮನೆಗೆ ಬಂದಾಗ ಮತ್ತೆ ಮನೆ ಬೆಳಕಾಯಿತು ಆ ಬೆಳಕಿಗೆ ಕಾರಣವಾದ ಆ ದೈವವನ್ನ ಕಷ್ಟಕ್ಕೆ ಆದ ಚಂದ್ರರೆಡ್ಡಿ ದಂಪತಿಗಳನ್ನ ನಮ್ಮ ಚಿಕ್ಕಮ್ಮ ಮತ್ತು ಆ ಜಗಳೂರು ಡಾಕ್ಟರರ ಋಣ ಬದುಕಿದ್ದಷ್ಟು ಕಾಲ ತೀರಿಸೋಕೆ ಆಗಲ್ಲ.

ಹೊಲದಲ್ಲಿ ಬೆಳೆಚನಾಗಿ ಬಂದವರ್ಷ ಆ ಹಣವನ್ನು ಅಪ್ಪ ಹೂಹಣ್ಣಿನಜೊತೆ ಇಟ್ಟು ಚಂದ್ರಣ್ಣ ಅಂಕಲ್ ಅವರಿಗೆ ವಾಪಸ್ ಕೊಟ್ಟು ಬಂದ್ರು....
ಆ ಹಣ ಈಗ ನಮಗೆ ಅಷ್ಟು ದೊಡ್ಡ ಮೊತ್ತ ಅನಿಸಲ್ಲ ಆದ್ರೆ ಆಗ ಪ್ರಾಣ ಕಾಯೋ ಸಂಜೀವಿನಿ ಆಗಿತ್ತು ಆ ದಿನ ಇಂದಿರಾ ಆಂಟಿ ಮಾಡಿ ಕಳಿಸುತ್ತಿದ್ದ ಊಟ ಸಾಕ್ಷಾತ್ ಅನ್ನ ಪೂರ್ಣೇಶ್ವರಿ ಪ್ರಸಾದವಾಗಿತ್ತು.

ನೀವು ಸುಖವಾಗಿದ್ದಾಗ ಹಣದಲ್ಲಿ ಅಧಿಕಾರದಲ್ಲಿ ಇದ್ದಾಗ ಸಾವಿರ ಜನ ನಾಟಕ ಆಡೋರು ಅನುಕೂಲ ಪಡೆದುಕೊಳ್ಳೋರು ಬಣ್ಣದ ಮಾತಾಡೋರು ಇರ್ತಾರೆ ಆದ್ರೆ ಕಷ್ಟದಲ್ಲಿ ಆದವರು ಆ ದೇವರಿಗೆ ಸಮ ಅಂತವರನ್ನು ಎಂದೂ ಮರೆಯಬಾರದು ಅವರೇ ಜೀವನಕ್ಕೆ ಭರವಸೆ ತುಂಬೋರು ಬದುಕಿಗೆ ಅರ್ಥ ತುಂಬೋರು ಒಳ್ಳೆತನ ಬದುಕಿದೆ ಅಂತಾ ತೋರಿಸೋರು...

ಆ ಕಷ್ಟದ ದಿನಗಳು ನಮಿಗೆ ಪಾಠ ಕಲಿಸಿವೆ ಆಗಲಿಂದ ಸಿಕ್ಕ ಸಿಕ್ಕ ಹಾಗೆ ಹಣ ಖರ್ಚು ಮಾಡಲ್ಲ ಬೇಕಾಬಿಟ್ಟಿ ಸಾಲವು ಮಾಡಲ್ಲ ಸಿಂಪಲ್ ಆಗೇ ಇರ್ತೀವಿ,ಯಾರೇ ಆಸ್ಪತ್ರೆಯಲ್ಲಿ ರಕ್ತಬೇಕು ಅಂದ್ರೆ ಹೋಗಿ ಕೊಟ್ಟು ಬರ್ತೀನಿ, ಹತ್ತಿರದ ಯಾರಿಗಾದ್ರೂ ಹುಷಾರಿಲ್ಲ ಅಂದ್ರೆ ಆಸ್ಪತ್ರೆಗೆ ಕರ್ಕೊಂಡು ಹೋಗಿ ಬರ್ತೀನಿ, ಅವರು ಕೇಳಲಿಲ್ಲ ಅಂದ್ರು ಅಂತವರ ಕಷ್ಟ ನಾನೆ ಕೇಳಿ ನನ್ನ ಕೈಲಾದ ಮಟ್ಟಿಗೆ ಸಹಾಯನೂ ಮಾಡ್ತೀನಿ.
ದೇವರು ಕಷ್ಟ ಕೊಡೋದೇ ಮತ್ತೊಬ್ಬರ ಕಷ್ಟ ನಮಗೆ ತಿಳಿಯಲಿ ಅಂತಾ ಅನ್ಸುತ್ತೆ... ಲೈಫ್ ತುಂಬಾ ಚಿಕ್ಕದು ಒಳ್ಳೆಯವರನ್ನು ಯಾವತ್ತೂ ಮಿಸ್ಸ್ ಮಾಡ್ಕೋ ಬಾರದು ❤️❤️❤️❤️❤️

ಚಿತ್ರದಲ್ಲಿ ಇರೋರು ನಮ್ಮ ಮನೆ ಕಷ್ಟದಲ್ಲಿ ಕೈ ಹಿಡಿದ ಜೋಡಿ ಶ್ರೀಮತಿ ಇಂದಿರಾ ಚಂದ್ರರೆಡ್ಡಿ ದಂಪತಿಗಳು...❤️❤️🙏🏻

ಒಳ್ಳೆತನ ಇನ್ನೂ ಬದುಕಿದೆ ಅನ್ನೋದಕ್ಕಾಗಿ ಈ ಬರಹ ಬರೆದಿದ್ದು.
*ಬರಹ: ಅಭಿಲಾಶ್ ಪಂಡ್ರಳ್ಳಿ*

13/05/2024

ಕುಂದಾಪುರ : ಗಂಗಾವಳಿಯ ಒಡಲಿಗೆ ಆಸ್ಪತ್ರೆಯ ತ್ಯಾಜ್ಯ ಸುರಿವ-ಹರಿಸುವ ಆದರ್ಶ ಆಸ್ಪತ್ರೆಯದ ವೀಡಿಯೋ ಈಗ ಗಮನಕ್ಕೆ ಬಂದಿದೆ. ರೋಗಿಷ್ಟರ- ಆಸ್ಪತ್ರೆಯ ಘನ ಹಾಗೂ ಕೊಳಚೆ ನೀರು ಹರಿಸುವ ಈ ಪ್ರತಿಷ್ಟಿತ ಆಸ್ಪತ್ರೆಯ ಕರ್ಮಕಾಂಡಕ್ಕೆ ಕಿವಿ-ಕಣ್ಣು ಮುಚ್ಚಿ ಕುಳಿತ ಆರೋಗ್ಯ ಇಲಾಖೆಯನ್ನು ಗಂಗಾವಖಿ ತೀರದ ಜನರ ಆರೋಗ್ಯದ ಜೊತೆ ಆಟವಾಡುತ್ತಿರುವುದು ವೀಡಿಯೋದಲ್ಲಿ ಅಡಕವಾಗಿದೆ. ತಾವು ನದಿಗೆ ತ್ಯಾಜ್ಯ ಹರಿಸುತ್ತಿಲ್ಲ ಎನ್ನುವ ಆಸ್ಪತ್ರೆ ಸಂಜೆ ಅರು-ಏಳರ ನಂತರ ಹಾಗೂ ಸರಕಾರಿ ಕಛೇರಿಯ ರಜಾದಿನಗಳಲ್ಲಿ ತ್ಯಾಜ್ಯ ಹರಿಸುವುದು ಮಾಡಿಕೊಂಡು ಬಂದಿರುವುದನ್ನು ಇಲ್ಲಿ ಗಮನಿಸಬೇಕು. ಜನರೇ ಪ್ರತಿಭಟನೆ ಮೂಲಕ ಇದನ್ನ ತಡೆಗಟ್ಟಬೇಕೋ? ಅಥವಾ ಪ್ರಜ್ಞಾವಂತ ಅಧಿಕಾರಿಗಳು ಇತ್ತ ಗಮನ ನೀಡಿ ಸಮಸ್ಯೆ ಬಗೆಹರಿಸುವರೋ? ಕಾದು ನೋಡೋಣ....

https://youtu.be/NPhjHv9l3Dg?si=_7PnPCwepKO8RVzdಅತ್ಯುತ್ತಮ ಸಿನಿಮಾ...ಹೋಗಿ ನೋಡಿ. ಈ ಚಿತ್ರದ ತಂಡದ ಯಾರೂ ನಮಗೆ ಗೊತ್ತಿಲ್ಲ. ಆದರೆ ಸಿ...
09/04/2024

https://youtu.be/NPhjHv9l3Dg?si=_7PnPCwepKO8RVzd
ಅತ್ಯುತ್ತಮ ಸಿನಿಮಾ...
ಹೋಗಿ ನೋಡಿ. ಈ ಚಿತ್ರದ ತಂಡದ ಯಾರೂ ನಮಗೆ ಗೊತ್ತಿಲ್ಲ. ಆದರೆ ಸಿನಿಮಾ.. ಅದ್ಬುತ... ಕಲಾ ರಸಿಕರು ಈವತ್ತೇ ಹೋಗಿ ನೋಡಿ. ಚಂದದ ಸಿನಿಮಾ... ಸುಸಂಸ್ಕೃತ ಸಿನಿಮಾ...
ಒಳ್ಳೆಯ ಪ್ರಯತ್ನ ಮಾಡಿಯೂ ಸೋತರೆ...
ಕನ್ನಡ ಸಿನಿಮಾ ರಂಗ ಬಡವಾಗುತ್ತದೆ. ಹುರಿದುಂಬಿಸಿ. ಗೆಲ್ಲಿಸಿ. ಚಿತ್ರ ನಿಮಗೆ ಇಷ್ಟವಾಗುತ್ತೆ. ಇಷ್ಟವಾಗಿದ್ದರೆ-ಇಷ್ಟವಾಗದಿದ್ದರೆ. ಕಾಮೆಂಟ್ ಮಾಡಿ

ಗೆದ್ದು ಸೊತ | ಕೆರೆಬೇಟೆ ನಟ ಗೌರಿಶಂಕರ್ | emotional speech |Cinifort Kannada bete kannada movie,kerebete ka...

ಉಡುಪಿ-ಕುಂದಾಪುರ ಪತ್ರಕರ್ತರ ಸಂಸ್ಥೆಯ ಹೆಸರಿನಲ್ಲಿ, ಗಣಿ ಇಲಾಖೆಯ ಅಧಿಕಾರಿಗಳಿಗೆ ದೂರು-ಡೀಲ್..?    ಗಣಿ ಇಲಾಖೆ ಅನ್ನುವ ಹೆಸರಿನಲ್ಲಿ ಒಂದು ಇಲ...
20/03/2024

ಉಡುಪಿ-ಕುಂದಾಪುರ ಪತ್ರಕರ್ತರ ಸಂಸ್ಥೆಯ ಹೆಸರಿನಲ್ಲಿ, ಗಣಿ ಇಲಾಖೆಯ ಅಧಿಕಾರಿಗಳಿಗೆ ದೂರು-ಡೀಲ್..?

ಗಣಿ ಇಲಾಖೆ ಅನ್ನುವ ಹೆಸರಿನಲ್ಲಿ ಒಂದು ಇಲಾಖೆ ಇದೆ. ಅದು ತನ್ನ ಕರ್ತವ್ಯ ಸರಿಯಾಗಿ ನೆರವೇರಿಸಿದರೆ ಕುಂದಾಪುರದ ಗಣಿಸಂಪತ್ತಿನ ಉದ್ಧಾರವಾದೀತು. ಆದರೆ ಅಕೃಮ ಖನಿಜ ಸಂಪತ್ತಿನ ನಾಶ, ಕಲ್ಲು ಗಣಿಗಾರಿಕೆ ಇದನ್ನ ವಿರೋಧಿಸಿ ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಲು ಬಿಡದೇ, ಅಕೃಮಕೋರರೊಂದಿಗೆ ಅಧಿಕಾರಿಗಳಿಂದಲೇ ರೋಲ್ಕಾಲ್ ಮಾಡುವ ಪತ್ರಕರ್ತರಿಂದ ಕುಂದಾಪುರದ ಸಭ್ಯ ಪತ್ರಕರ್ತರಿಂದ ಹಿಡಿದು, ನಾಗರೀಕ ಸಮಾಜವೂ ತಲೆತಗ್ಗಿಸಿ ಈ ಚಟುವಟಿಕೆಗೆ ದಾರಿ ಮಾಡಿಕೊಟ್ಟಿರುವುದು ಗುಸುಗುಸು ನಡೆಯುತ್ತಿದೆ.

ಪತ್ರಕರ್ತರ ಸಭ್ಯ ಗುಂಪಿಗಿಂತಲೂ ಇಲ್ಲಿ ಡೀಲ್ ಪತ್ರಕರ್ತರೇ ಅಧಿಕವಾಗಿ ಸದ್ದುಮಾಡುತ್ತಿದೆ. ಅನ್ಯಾಯದ ವಿರುದ್ಧ ಹೋರಾಡುವ ಪತ್ರಕರ್ತರನ್ನು ದಬಾಯಿಸಿ ಹಣ ಮಾಡುವ ಡೀಲ್ ಪತ್ರಕರ್ತರು ಬೇರೆಯದ್ದೇ ಗುಂಪುಗಾರಿಕೆ ಮಾಡಿಕೊಂಡು ಹೋಗುವ ಮೂಲಕ ಪತ್ರಕರ್ತಿಕೆ ಅನ್ನುವುದು ದಂಧೆಕೋರತನವೇ? ಎನ್ನುವುದು ಜನರೇ ಪ್ರಶ್ನಿಸುವಂತಾಗಿರುವುದು ಇಲ್ಲಿ ಗಮನಿಸಬೇಕು. ವೀಡಿಯೋವೊಂದರಲ್ಲಿ ಪತ್ರಕರ್ತೆಯೊಬ್ಬರು ಹೇಳಿದಂತೆ ಪತ್ರಕರ್ತಿಕೆ ದಂಧೆಯಾಗಿದೆ ಎನ್ನುವುದು ಸಾರಾಸಗಟಾಗಿ ಪ್ರಶ್ನಿಸಿರುವುದಕ್ಕೆ ಕುಂದಾಪುರ-ಉಡುಪಿ ವಲಯದ ಕೆಲ ದಂಧೆಕೋರ ಪತ್ರಕರ್ತರು ಕಾರಣೀಭೂತರಾಗಿರುವುದು ಗಮನಕ್ಕೆ ಬರುತ್ತದೆ. ಇದನ್ನ ಪ್ರಶ್ನಿಸಲು ಸಭ್ಯ ಪತ್ರಕರ್ತರು ಬಾಯಿಯಲ್ಲಿ ಅವಲಕ್ಕಿ ಹಾಕಿಕೊಂಡು ಕೂತಿರುವುದೇ ಕಾರಣ. ಒಂದೊಮ್ಮೆ ಸಭ್ಯರು ಬಾಯಿ ಬಿಟ್ಟರೆ ಅವರ ಮೇಲೂ ಇಲ್ಲಸಲ್ಲದ್ದನ್ನು ಬರೆಯಲು ಹಿಂದಡಿ ಇಡದ ಈ ದಂಧೆಕೋರ ಪತ್ರಕರ್ತರ ಗುಂಪು ತಮ್ಮದೇ ಗ್ಯಾಂಗ್ನೊಂದಿಗೆ ಸಭ್ಯರ ಮೇಲೆ ದಾಳಿಗಿಳಿಯುತ್ತಾರೆ. ಇವರಿಗೆ ಉಡುಪಿ-ಕುಂದಾಪುರದ ಕೆಲ ತಲೆಹಿಡುಕರ ಗುಂಪೂ, ಪುರಸಭೆ-ಜನನಾಯಕರ ಸೋಗಿನ ಗಿರಾಕಿಗಳು ಕೂಡಾ ಸಾಥ್ ನೀಡುವವರ ಅಷ್ಟೂ ಅಸಲಿಯತ್ತು ಇಷ್ಟು ದಿನ ಮೌನವಾಗಿ ಪತ್ರಿಕೆ-ಪತ್ರಕರ್ತರು ಕಲೆ ಹಾಕಿದೆ. ಇನ್ಬಷ್ಟು ಸಬಲ ಸಾಕ್ಷಿಯೊಂದಿಗೆ ನಿಮ್ಮ ಮುಂದೆ ಇರಲಿದೆ "ಆಪರೇಷನ್ ಟ್ರುತ್ ಕಿಲ್ಲರ್" ಸರಣಿ

ಅಡಗಿ ಕುಳಿತ ಹಾವುಗಳು ಹೊರಬರಲು ಕಾದ ಹಾಗೂ ಅಮಾಯಕ ಜನರನ್ನ ಸುಲಿಯುವ, ಕೋಟ್ಯಾಂತರ ಜನರ ಹಣ ಯಾಮಾರಿಸಿ ಕುಳಿತ ನಾಯಕರ ಗ್ಯಾಂಗ್ ಗಾಗಿ ಗಟ್ಟಿಯಾಗಿ ನಿಂತ ರೋಲ್ಕಾಲ್ ಕೆಲ ಹಲ್ಕಟ್ಗಳ ವಿರುದ್ಧ ಖಂಡಿತವಾಗಿಯೂ ಪತ್ರಿಕೆ ಸೂಕ್ತ ಟಕ್ಕರ್ ನೀಡಲಿದೆ ಅಲ್ಲಿಯವರೆಗೆ ... ಟೇಕ್ ಕೇರ್

16/03/2024

"ಸೆಕೆಗೆ ತತ್ತರಿಸಿದರೂ ಎಚ್ಚೆತ್ತುಕೊಳ್ಳದ ಜನ.."
ಅಂಥವರ ನಡುವೆ ಇಂಥಾ ಹಿರಿಯ ನಾಗರೀಕರ ಸೇವೆಗೆ ಬೆಲೆಕಟ್ಟಲಾದೀತೇ?

ಇವರಿಗೆ ಅರ್ಥವಾಗಿದೆ. ಈ ಗ್ಲೋಬಲ್ ವಾರ್ಮಿಂಗ್ ಅಂದರೆ ಹೆಚ್ಚುತ್ತಿರುವ ಜಾಗತೀಕ ತಾಪಮಾನ ಕಡಿಮೆ ಮಾಡಲು ಮರ ಗಿಡಗಳಿಗಿಂತಲೂ ಸರಿಯಾದ ಆಯ್ಕೆ ಬೇರೆ ಇಲ್ಲ ಅನ್ನುವುದು. ಸಿಕ್ಕ ಸಿಕ್ಕ ಗಿಡ ಮರಗಳನ್ನು ಸಾಮೂಹಿಕವಾಗಿ ಮಾರಣಹೋಮ ಮಾಡುವ ಮನುಷ್ತನೆಂಬ ರಾಕ್ಷಸನಿಗೆ ಇದೆಲ್ಲಾ ಯಾವಾಗ ಅರ್ಥವಾಗುತ್ತದೆ?

ಒಟ್ಟಿನಲ್ಲಿ ಈ ಹಿರಿಯ ರಿಟೈರ್ಡ್ ಅಧಿಕಾರಿಗಳ ತಂಡದ ಪ್ರಯತ್ನ ಶ್ಲಾಘನೀಯ...
ಲವ್ ಯೂ ಟೀಮ್ ಗ್ರೀನ್ ವಾರಿಯರ್ಸ್....

ಆನೆ ನಡೆದರೆ ನಾಯಿ ಬೊಗಳುತ್ತವೆ..ಕಾರ್ಯಕರ್ತರನ್ನ ನಾಯಿಗೆ ಹೋಲಿಸುವ ಹೊಲಸು ವ್ಯಕ್ತಿಗೆಮಾಧ್ಯಮಗಳು ಬೇವರ್ಸಿನಾ?ಮಿಸ್ಟರ್ ಅನಂತು...?ಪ್ಲೀಸ್ ಚೆಕ್...
11/03/2024

ಆನೆ ನಡೆದರೆ ನಾಯಿ ಬೊಗಳುತ್ತವೆ..
ಕಾರ್ಯಕರ್ತರನ್ನ ನಾಯಿಗೆ ಹೋಲಿಸುವ ಹೊಲಸು ವ್ಯಕ್ತಿಗೆ
ಮಾಧ್ಯಮಗಳು ಬೇವರ್ಸಿನಾ?

ಮಿಸ್ಟರ್ ಅನಂತು...?
ಪ್ಲೀಸ್ ಚೆಕ್ ಯುವರ್ ಮೈಂಡ್ ಇನ್ ಬೆಸ್ಟ್ ಮೆಂಟಲ್ ಹಾಸ್ಪಿಟಲ್....
ಈ ಸಲ ಅನಂತು ಬೇಡ ಅನ್ಬುವುದು ಕಾರ್ಯಕರ್ತರ ಅಭಿಪ್ರಾಯ. ಅದನ್ನ ಕಾರ್ಯಕರ್ತರು "ಯುಟ್ಯೂಬ್,ಫೇಸ್ಬುಕ್, ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಹಲವು ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ ಅದನ್ನೇ ಗುರಿಯಾಗಿಟ್ಟುಕೊಂಡು ಈ ಅನಂತು ಕಾರ್ಯಕರ್ತರನ್ನ " ಬೊಗಳೋ ನಾಯಿಗೂ, ಸುದ್ಧಿ ಮಾಧ್ಯಮಗಳನ್ನ "ಬೇವರ್ಸಿ" ಪದಬಳಕೆ ಮಾಡಿದ ಅನಂತುಗೆ ಈ ಸಲದ ಟಿಕೇಟ್ ತಪ್ಪುವ ಭಯ ಕಾಡಿದೆ. ಇಷ್ಟು ದಿನ ಯಾರೇನೇ ಹೇಳಿದರೂ, ಬಾಯಿ ಬಿಡದ ಅನಂತನ ಅವಾಂತರದ ರಗಳೆಗಳು ಈಗ ಗರಿ ಬಿಚ್ಚಿದೆ. ಕ್ಯಾನ್ಸರ್ ಈತನ ತಲೆಯನ್ನೇ ತಿಂದು ಹಾಕಿದೆ. ಈತ ಕೊನೆಗೆ ತನ್ನ ಕೊಚ್ಚೆ ಬಾಯಿ ಕಾರ್ಯಕರ್ತ-ಮಾಧ್ಯಮವೆನ್ನದೇ ಹರಿಬಿಟ್ಟಿರುವುದು ವ್ಯಾಪಕ ಖಂಡನೆಗೆ ಗುರಿಯಾಗುತ್ತಿದೆ.
ಒಟ್ಟಿನಲ್ಲಿ ಈತನ ಎಂ.ಪಿ ಟಿಕೇಟ್ ಆಕಾಂಕ್ಷೆ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಸಿಕೊಂಡಂತಾಗಿದೆ

22/02/2024
ಪತ್ರಕರ್ತ ಮತ್ತು ಪತ್ರಕರ್ತಿಕೆ...ನಿಜವಾದ ಪತ್ರಕರ್ತನ ಮೊದಲ ಆದ್ಯತೆ ಕ್ಷಮೆ ಮತ್ತು ಕ್ಷಮತೆ...     ಇಂದಿನ ಪತ್ರಕರ್ತನ ಮುಖಗಳು ಭಯಾನಕತೆಯಿಂದ ಕ...
22/02/2024

ಪತ್ರಕರ್ತ ಮತ್ತು ಪತ್ರಕರ್ತಿಕೆ...
ನಿಜವಾದ ಪತ್ರಕರ್ತನ ಮೊದಲ ಆದ್ಯತೆ ಕ್ಷಮೆ ಮತ್ತು ಕ್ಷಮತೆ...

ಇಂದಿನ ಪತ್ರಕರ್ತನ ಮುಖಗಳು ಭಯಾನಕತೆಯಿಂದ ಕೂಡಿದೆಯೇ? ಜನರ ಬಳಿ ಪತ್ರಕರ್ತ ಎಂದರೆ ಇರುವ ಮುಂಚಿನ ಭಯ-ಭಕ್ತಿ ಕಡಿಮೆಯಾಗಿರುವುದಕ್ಕೆ ನಿಜವಾದ ಕಾರಣಗಳು ಹಲವು. ಅಂತಹಾ ಹತ್ತು ಹಲವು ಕಾರಣಗಳೇನೇ ಇದ್ದರೂ, ಪತ್ರಕರ್ತನ ಗುಣಮಟ್ಟದ ವಿಚಾರದಲ್ಲಿ ಖಂಡಿತವಾಗಿಯೂ ಅಭಿಮಾನ ಶೂನ್ಯತೆಯ ಪರಿಧಿಗೆ ಬಂದು ನಿಂತಿದೆ ಅಂದರೆ ಅತಿಶಯೋಕ್ತಿಯಲ್ಲ. ಪ್ರಜಾಪ್ರಭುತ್ವ ಕಂಟಕರೊಂದಿಗೆ ಕೈಜೋಡಿಸುವ ಪತ್ರಕರ್ತರು ಕೆಲವರ ಅಸಲಿಯತ್ತು ಭಯಾನಕವಾದದ್ದು.

ಕೆಲವು ಸಮಯದ ಹಿಂದೆ ದಿಟ್ಟ ಪತ್ರಕರ್ತರೊಬ್ಬರು ಇಂದಿನ ಕಾಲಮಾನದಲ್ಲಿ ಪತ್ರಕರ್ತಿಕೆ ಅಥವಾ ಮಾಧ್ಯಮವನ್ನ ನಡೆಸಿಕೊಂಡೇ ಹೋಗುವುದು ಕಷ್ಟಸಾಧ್ಯ ಎಂದಿದ್ದನ್ನು ಇಲ್ಲಿ ನೆನೆಯಬೇಕು. ಅಂತಹಾ ಕಾಲಘಟ್ಟದಲ್ಲಿ ಪತ್ರಕರ್ತನೊಬ್ಬನ ಅಸಲಿಯತ್ತನ್ನು ಜನರೇ ಒರೆಗೆ ಹಚ್ಚಬಲ್ಲವರಾಗಿರುತ್ತಾರೆ. ಇನ್ನೂ ಮುಂದೆ ಹೇಳಬೇಕೆಂದರೆ, ಇತ್ತ ಸಮಸ್ಯೆಯನ್ನ ಬಿಗಡಾಯಿಸುವ ಹಂತಕ್ಕೆ ತಲುಪಿಸಿ ಅದನ್ನ ಆನೆಗಾತ್ರಕ್ಕೆ ತೋರಿಸುವ ದುಷ್ಟತನದ ಕೆಲ ಪತ್ರಕರ್ತ ಹೆಸರಿನ ಮುಠ್ಠಾಳತನವನ್ನ ಇಲ್ಲಿ ಹೇಳಲೇಬೇಕು. ಯಾವುದು ಸಮಸ್ಯೆಯಾಗಿರಲಿಲ್ಲವೋ ಅದನ್ನ ಸಮಸ್ಯೆ ಎಂದು ತೋರಿಸುವ, ತಾನೇ ಪರಮ ಶ್ರೇಷ್ಠ ಪತ್ರಕರ್ತ ಅನ್ನುವ ಭ್ರಮೆಯಲ್ಲಿ ಬದುಕುವ ಇಂಥವರಿಗೆ ಯಾವ ಧ್ಯೇಯಬದ್ಧತೆಯೂ ಇರುವುದಿಲ್ಲ. ತಾನು ಕಳ್ಳ-ತನಗಾಗದವರು ನಿಷ್ಠೆಯಿಂದ ಬದುಕಿದರೂ ಆತನ ಮೇಲೇ ದುಷ್ಠತನದ ಪರಮಾವಧಿ ಮೆರೆಯುವವ‌ ಎಂದಿಗೂ ಪತ್ರಕರ್ತನಾಗಲಾರ. ಪತ್ರಕರ್ತಿಕೆಯ ಭ್ರಮೆಯಲ್ಲಿ ಬದುಕುವ ಇಂಥಾ ಹುಳಗಲಿಂದಲೇ ಪತ್ರಕರ್ತಿಕೆಯ ಕ್ಷೇತ್ರಕ್ಕೆ ದುರಂತ ಅಧ್ಯಾಯ ಬರೆದಿರುವುದನ್ನು ಇಲ್ಲಿ ಗಮನಿಸಬೇಕು.

ತಾನು ಧ್ಯೇಯನಿಷ್ಠ ಪತ್ರಕರ್ತ ಎನ್ನುವವ ತಾನು ಯಾರ ಪರವಾಗಿ ನಿಂತಿದ್ದೇನೆ ಎನ್ನುವುದನ್ನು ಮೊದಲು ಗಮನಿಸಬೇಕು.ಕರ್ಣ ದಾನಶೂರನಾದರೂ- ಧರ್ಮಿಷ್ಠನಾದರೂ ಅಂಥವನೇ ದುರ್ಯೋಧನ ಪರ ನಿಂತಿದ್ದಕ್ಕೆ ಅವನ ಅವನತಿಗೆ ಅವನೇ ಕಾರಣನಾದ ಅಂದಮೇಲೆ, ಧರ್ಮದ ಪರ ನಿಂತವರ ಮೇಲೆ ಸವಾರಿ ಮಾಡಿ, ಆತ ನಿಂತ ಪರದ ವ್ಯಕ್ತಿ ತಿಂಗಳ ಹೆಚ್ಚಿನ ದಿನಮಾನ ವಂಚನೆ ಕೇಸುಗಳ, ಬಡವರಿಗೆ ಯಾಮಾರಿಸಿದ, ಕಷ್ಠಪಡುವ ಕೂಲಿಕಾರ್ಮಿಕರಿಗೆ ವಂಚಿಸಿ ಇಡಿ ಅವರ ಯೂನಿಯನ್ನನ್ನೇ ನುಂಗಿದ, ಸಿಕ್ಕ ಸಿಕ್ಕಲ್ಲಿ ಸಂಘ ಸಂಸ್ಥೆಗಳ ಸಾಲಕ್ಕೆ ಜಾಮೀನು ಹಾಕಿ ಜನರ ಹಣವನ್ನ ಯಾಮಾರಿಸಿ ಬಂಗಲೆ ಕಟ್ಟಿಕೊಳ್ಳುವವರ ಪರ ನಿಲ್ಲುವ, ಲಕ್ಷಾಂತರ ಬಡವರ ಹಣ ಲಪಟಾಯಿಸುವವನ ಪರ ನಿಲ್ಲುವ, ನಕಲಿ ಸರ್ಟಿಫಿಕೇಟುಹೊಂದಿರುವವರ ಪರ ನಿಲ್ಲುವ, ಹೇಳಿದರೆ ಒಂದೇ, ಎರಡೇ? ಅಷ್ಟಕ್ಕೂ ಕಾವಲಾಗಿ ನಿಂತುಕೊಳ್ಳುವ ಪತ್ರಕರ್ತನ ಅಸಲಿಯತ್ತಿನ ವಿಚಾರವನ್ನ ಯಾವ ಪತ್ರಕರ್ತನೂ ಪ್ರಶ್ನಿಸಲಾರ ಎಂದರೆ, ಪತ್ರಕರ್ತನೊಳಗಿನ ಸಿಂಹಗಳ ಅಸಲಿಯತ್ತಿನ ಮೇಲೆ ಸಂಶಯ ಹುಟ್ಟದೇ ಹೋದೀತೇ? ಅಂತಹಾ ಸತ್ತ ಆತ್ಮಸಾಕ್ಷಿ ಇಟ್ಟುಕೊಂಡು ಪತ್ರಕರ್ತ ಎನಿಸಿಕೊಳ್ಳುವ ಯೋಗ್ಯತೆ ಎಂಥಾದ್ದು?

ಒಂದು ಸುಂದರವಾದ ನಿಷ್ಕಲ್ಮಷವಾದ ಬೆಳಕಿನ- ಶಕ್ತಿಯ ಮುಂದೆ ನಿಂತು ನಿಷ್ಕಲ್ಮಷ ಪತ್ರಕರ್ತಿಕೆಯದ್ದಕ್ಕಿಂತಲೂ ಮೊದಲು ಮಾನವೀಯತೆಯ ದೃಷ್ಟಿ ತೆರೆದು, ತಾನು ಬರಯುವ ವ್ಯಕ್ತಿಯ ಆಂತರ್ಯವನ್ನು ಹಿಡಿಯದೇ, ಎದುರಿನ ಸತ್ಯ-ನಿಷ್ಠೆಯ ಕಗ್ಗೋಲೆ ಮಾಡಲು ಹೊರಟ ಪತ್ರಕರ್ತಿಕೆ ಇದೆಯಲ್ಲಾ..‌ ಅದು ಪ್ರಜಾಪ್ರಭುತ್ವದ ಅತ್ಯಂತ ಕಠೋರ ಭಯೋತ್ಪಾದನೆ. ಅಂತಹಾ ಭಯೋತ್ಪಾಕನನ್ನು ಸಮಾಜ ಪತ್ರಕರ್ತ ಎಂದು ಒಪ್ಪಿಕೊಂಡರೇ, ಪ್ರಪಂಚದ ಭಯೋತ್ಪಾದಕನನ್ನು ಮನೆಯಂಗಳಕ್ಕೆ ಎಳೆದು ತಂದು ಕೂರಿಸಿದಂತೆ ಅನ್ನುವ ಅರಿವು ಜನರಿಗಿದೆಯಾದರೂ, ಪ್ರಜಾಪ್ರಭುತ್ವದ ನಾಲ್ಲನೇ ಅಂಗವಾದ ಪತ್ರಕರ್ತಿಕೆಯ ಮೇಲೆ ಗೌರವ ಉಳಿಸಿಕೊಳ್ಳಲು ಬಹಷಃ ಜನ ನೀಡುವ ಗೌರವವನ್ನ ಬಂಡವಾಳ ಮಾಡಿಕೊಂಡು ಜನಪರ ಹೊರಾಟಗಳನ್ನು ಹತ್ತಿಕ್ಕುತ್ತಾ ತನ್ನ ಮೊಂಡುತನವನ್ನು ಮೆರೆಯಹೊರಟ ನಿಕೃಷ್ಠ ಮನಸ್ಥಿತಿಯ ಕುರಿತು ಧಿಕ್ಕಾರ ಹೇಳುತ್ತಾ ಪತ್ರಿಕೆ ಮತ್ತೊಮ್ಮೆ ಕಾರ್ಯ-ನಾಗಾಲೋಟದತ್ತ ಮುಖಮಾಡಿದೆ. ಈವರೆಗಿನ‌ಪ್ರೀತಿ ಹಾಗೇ ಇರಲಿ

Address

8th Cross

Telephone

+919482271575

Website

Alerts

Be the first to know and let us send you an email when JAYASOORYA PATHRIKE posts news and promotions. Your email address will not be used for any other purpose, and you can unsubscribe at any time.

Contact The Business

Send a message to JAYASOORYA PATHRIKE:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share