Empty Pocket Dreams

  • Home
  • Empty Pocket Dreams

Empty Pocket Dreams Empty Pocket Dreams is a production home based in India which aims to produce short/documentary/feat

The Train short film showcased at Kodagu Vidyalaya, Madikeri           ..............ಮಡಿಕೇರಿಯ ಪ್ರತಿಷ್ಠಿತ ಕೊಡಗು ವಿದ್ಯಾಲಯದ...
22/03/2024

The Train short film showcased at Kodagu Vidyalaya, Madikeri

..............

ಮಡಿಕೇರಿಯ ಪ್ರತಿಷ್ಠಿತ ಕೊಡಗು ವಿದ್ಯಾಲಯದಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಟ್ರೈನ್ ಕಿರುಚಿತ್ರ ಪ್ರದರ್ಶನ, ಸಂವಾದ ಹಾಗೂ ಚಲನಚಿತ್ರವನ್ನು ಪಠ್ಯವಾಗಿ ನೋಡುವ ಸಾಧ್ಯತೆ ಮತ್ತು ಉಪಯುಕ್ತತೆ ಕುರಿತು ಲೇಖಕ-ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ. ಜಿ ಕಾರ್ಯಾಗಾರ ನಡೆಸಿಕೊಟ್ಟರು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ, ಕಲರ್ ಪ್ಯಾಲೆಟ್ ಕಲಾ ಶಾಲೆಯ ಮುಖ್ಯಸ್ಥರಾದ ಪ್ರಸನ್ನ ಕುಮಾರ್, ಆದಿಗುರು ಪ್ರಾಡಿಜಿ ಸಂಸ್ಥೆಯ ನವೀನ್ ಉಪಸ್ಥಿತರಿದ್ದರು.

Kodagu Vidyalaya, a renowned educational institute in Madikeri, Coorg recently hosted the screening of the short film The Train. The session included the discussion with teachers and students and a a tiny workshop by the writer and film maker Vinay Kumar M. G under the title 'Possibilities and Benefits of Understanding a Film As a Visual Text'. The principal of the institute Smt. Sumithra, Mr. Prasanna Kumar, an art teacher, Mr. Naveen from Aadiguru Prodigy, an Ed-tech firm were present in the workshop.





ಸತ್ತ್ವ ಅರ್ಪಿಸುವ 2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ವಿಜೇತರ ಪಟ್ಟಿ ಇಲ್ಲಿದೆ. ಎಲ್ಲರಿಗೂ ಶುಭಾಶಯಗಳು.Here is the list of win...
30/12/2023

ಸತ್ತ್ವ ಅರ್ಪಿಸುವ 2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ವಿಜೇತರ ಪಟ್ಟಿ ಇಲ್ಲಿದೆ. ಎಲ್ಲರಿಗೂ ಶುಭಾಶಯಗಳು.

Here is the list of winners of 2nd Mandya International Short Film Festival presented by SATTVA. Congratulations to all the winners.



Facebook insta X /Misffesofficial

organized by Festival 4 Films an Empty Pocket Dreams initiative

https://www.instagram.com/p/C1fHKXmv1yt/?igsh=MzRlODBiNWFlZA==

LIST OF NOMINEES FOR MISFFES 2023!2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಲು ನಾಮ ನಿರ್ದೇಶನಗೊಂಡವರ ವಿವರ   ...
17/11/2023

LIST OF NOMINEES FOR MISFFES 2023!
2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಲು ನಾಮ ನಿರ್ದೇಶನಗೊಂಡವರ ವಿವರ
.............
ಸತ್ತ್ವ ಅರ್ಪಿಸುವ 2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ಪ್ರಶಸ್ತಿ ಪಡೆಯಲು ನಾಮ ನಿರ್ದೇಶನಗೊಂಡ ವಿವಿಧ ಕಲಾವಿದರು ಹಾಗೂ ತಂತ್ರಜ್ಞರ ವಿವರ ಇಲ್ಲಿದೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ನಲ್ವಾರೈಕೆಗಳು. ಬನ್ನಿ ಚಿತ್ರೋತ್ಸವಕ್ಕೆ. ಗೆಲುವು ನಿಮ್ಮದಾಗಲಿ.

Here is a list of nominees of 2nd Mandya International Short Film Festival presented by SATTVA. We congratulate all the artists and technicians for their invaluable work and achieving nominations. We wish everyone a great success. Welcome to the tiny carnival!



Facebook insta X /Misffesofficial
organized by Festival 4 Films an Empty Pocket Dreams initiative

https://www.instagram.com/p/CzvxOFnvHUH/?igshid=MzRlODBiNWFlZA==

ಎಷ್ಟೊಂದು ಪ್ರತಿಭಾಶಾಲಿಗಳು ಈ ಮಕ್ಕಳು!What a great talents these children are!         .................ಇಂಡಿಯನ್ ಕಲ್ಚರಲ್ ಕಲೆಕ್...
11/10/2023

ಎಷ್ಟೊಂದು ಪ್ರತಿಭಾಶಾಲಿಗಳು ಈ ಮಕ್ಕಳು!

What a great talents these children are!
.................

ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಎಂಪ್ಟಿ ಪಾಕೆಟ್ ಡ್ರೀಮ್ಸ್, ತ್ಯಾಗರಾಜು ಸೆಂಟ್ರಲ್ ಸ್ಕೂಲ್, ಬಿಡದಿ ಜಂಟಿಯಾಗಿ‌ ಆಯೋಜಿಸುತ್ತಿರುವ ಲೆಟ್ಸ್ ಮೇಕ್‌ ಎ ಶಾರ್ಟ್ ಫಿಲಂ ಕೋರ್ಸ್'ನಲ್ಲಿ ಪಾಲ್ಗೊಂಡಿರುವ‌ ಮಕ್ಕಳು ತಮ್ಮೊಳಗಿನ ಕ್ರಿಯಾಶೀಲ ಮನಸ್ಸಿಗೆ ರಂಗರೂಪ ನೀಡಿದ್ದಲ್ಲದೆ ತಾವೇ ನಟಿಸಿದರು. ವಯಸ್ಸು ಪುಟ್ಟದಾದರೂ ಅವರೊಳಗಿನ ಕಲ್ಪನಾಶಕ್ತಿ, ರಂಗದ ಮೇಲಿನ ಭಾವಾಭಿನಯ ಗಮನ ಸೆಳೆಯಿತು. ಆ ಮಕ್ಕಳನ್ನು ನಟರಾಗಿಸಿ ಕಿರುಚಿತ್ರ ನಿರ್ದೇಶಿಸುತ್ತಿರುವ ಲೇಖಕ, ಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ. ಜಿ. ರವರು ಪ್ರತಿಯೊಂದು ಮಗುವಿನ ಪ್ರತಿಭೆಯನ್ನೂ ಸೂಕ್ಷ್ಮವಾಗಿ ಗಮನಿಸಿ ಮಾರ್ಗದರ್ಶನ ಮಾಡಿದರು.

Participants of Let's Make a Short Film, a short term certification course designed by Indian Cultural Collective and Empty Pocket Dreams in collaboration with Thyagaraju Central School, Bidadi have written and performed a skit all by themselves. Writer and film maker, who's making a short film with the children closely observed and given valuable feedback about the performance.

For more details contact: 7204741986, +919900668633 and 9972391577.

ಆಂಕರಿಂಗ್ ಕಾರ್ಯಾಗಾರದಲ್ಲಿ ಖುಷಿಯಾಗಿ ಕಲಿತ ಮಕ್ಕಳುUnlimited fun and learning @ anchoring workshop         .................ಇಂಡ...
03/10/2023

ಆಂಕರಿಂಗ್ ಕಾರ್ಯಾಗಾರದಲ್ಲಿ ಖುಷಿಯಾಗಿ ಕಲಿತ ಮಕ್ಕಳು
Unlimited fun and learning @ anchoring workshop
.................

ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಎಂಪ್ಟಿ ಪಾಕೆಟ್ ಡ್ರೀಮ್ಸ್, ತ್ಯಾಗರಾಜು ಸೆಂಟ್ರಲ್ ಸ್ಕೂಲ್, ಬಿಡದಿ ಜಂಟಿಯಾಗಿ‌ ಆಯೋಜಿಸಿದ್ದ ಪರಿಣಾಮಕಾರಿ ಆಂಕರಿಂಗ್ ಕಲೆ ಕಾರ್ಯಾಗಾರದಲ್ಲಿ ಖುಷಿಯಿಂದ ಪಾಲ್ಗೊಂಡ ಮಕ್ಕಳು ಕಲಿಕೆಯ ಜೊತೆ ಕುಣಿದು ಕುಪ್ಪಳಿಸಿದರು.

Children who took part in Effective Anchoring Workshop organized by Indian Cultural Collective, Empty Pocket Dreams and Thyagaraju Central School, Bidadi thoroughly enjoyed and learned the art of anchoring. We thank everyone who helped to conduct this creative endeavor. For more details contact: 7204741986, +919900668633 and 9972391577 for more details.

ಉದ್ಘಾಟನಾ ಸಮಾರಂಭಕ್ಕೆ ಸ್ವಾಗತಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಸಾಧ್ಯತೆಗಳನ್ನು ಕುರಿತು ತಿಳಿಸಿಕೊಡುತ್ತಲೇ ಅ...
23/09/2023

ಉದ್ಘಾಟನಾ ಸಮಾರಂಭಕ್ಕೆ ಸ್ವಾಗತ

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಸಾಧ್ಯತೆಗಳನ್ನು ಕುರಿತು ತಿಳಿಸಿಕೊಡುತ್ತಲೇ ಅವರನ್ನೇ ನಟ-ನಟಿ ತಂತ್ರಜ್ಞರಾಗಿಸಿ ಕಿರುಚಿತ್ರವೊಂದನ್ನು ತಯಾರಿಸುವ ವಿಶೇಷ ಯೋಜನೆ. ಈಗಾಗಲೇ ನಾಲ್ಕು ಪ್ರಾಜೆಕ್ಟ್'ಗಳನ್ನು ಮುಗಿಸಿ ಐದನೇಯ ಯೋಜನೆಯನ್ನು ಬಿಡದಿಯ ತ್ಯಾಗರಾಜು ಸಂಟ್ರಲ್ ಸ್ಕೂಲ್'ನಲ್ಲಿ ಆರಂಭಿಸುತ್ತಿದ್ದೇವೆ. ಇದೇ ಶನಿವಾರ ಅದರ ಉದ್ಘಾಟನಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಮುಖ್ಯ ಅತಿಥಿಯಾಗಿ ಬಿಗ್'ಬಾಸ್ ಖ್ಯಾತಿಯ ಸೈಮಾ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಚಂದನ್ ಆಚಾರ್'ರವರು ಪಾಲ್ಗೊಳ್ಳಲಿದ್ದು ಭಾಗೀದಾರ ಮಕ್ಕಳಿಗೆ ವಿಶೇಷ ನಟನಾ ತರಗತಿಯನ್ನೂ ತೆಗೆದುಕೊಳ್ಳಲಿದ್ದಾರೆ. ಈ ಸಂಭ್ರಮದಲ್ಲಿ ತಾವು ಭಾಗಿಯಾಗಿ ಎಂದು ಆಹ್ವಾನಿಸುತ್ತೇವೆ. (ಸಂಪೂರ್ಣ ವಿವರಗಳಿಗೆ ಪೋಸ್ಟರ್ ನೋಡಿ)

-ಎಂಪ್ಟಿ ಪಾಕೆಟ್ ಡ್ರೀಮ್ಸ್

Welcome to Inauguration

Let's Make a Short Film is a short term certification course designed for students to teach the possibilities of visual medium through making them actors and technicians in a short film. As of now we have completed four projects and the fifth one will be launched at Sri Thyagaraju Central School, Bidadi. Big Boss fame SIIMA award winning film actor will be the chief guest. We welcome you all to the event. (For complete details kindly go through the poster)

-Empty Pocket Dreams

ಜಸ್ಟ್ ಪದ್ಯ!Just Poem!Episode 1ಪ್ರತೀ ತಿಂಗಳ ಎರಡನೇಯ ಭಾನುವಾರ ಕವಿಯೊಬ್ಬರನ್ನು ಆಹ್ವಾನಿಸಿ ಅವರ ಕವನ ಸಂಕಲನವೊಂದನ್ನು ಪ್ರಾತಿನಿಧಿಕವಾಗಿರಿ...
08/09/2023

ಜಸ್ಟ್ ಪದ್ಯ!
Just Poem!
Episode 1

ಪ್ರತೀ ತಿಂಗಳ ಎರಡನೇಯ ಭಾನುವಾರ ಕವಿಯೊಬ್ಬರನ್ನು ಆಹ್ವಾನಿಸಿ ಅವರ ಕವನ ಸಂಕಲನವೊಂದನ್ನು ಪ್ರಾತಿನಿಧಿಕವಾಗಿರಿಸಿಕೊಂಡು ಒಟ್ಟು ಸಮಕಾಲೀನ ಕಾವ್ಯವನ್ನು ಕುರಿತು ಗಂಭೀರವಾಗಿ ಚರ್ಚಿಸುವ ಜಸ್ಟ್ ಪದ್ಯ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞರೂ ಸಾಮಾಜಿಕ ಕಾರ್ಯಕರ್ತರೂ ಆದ ಬಿ. ಶ್ರೀಪಾದ ಭಟ್'ರವರು ಫ್ಯಾಸಿಸಂ ಮತ್ತು ಕಾವ್ಯ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುವುದರ ಮೂಲಕ ಚಾಲನೆ ನೀಡಲಿದ್ದಾರೆ. ಅದೇ ಸಂದರ್ಭದಲ್ಲಿ ಮೊದಲ ಕಂತಿನ ಅತಿಥಿಯಾಗಿ ಚಿಂತಕರೂ ಕವಿಗಳೂ ಆದ ವಸಂತ ಬನ್ನಾಡಿಯವರು ಲೇಖಕರು ಮತ್ತು ಚಲನಚಿತ್ರ ನಿರ್ದೇಶಕರಾದ ವಿನಯ್ ಕುಮಾರ್ ಎಂ. ಜಿ.ರವರೊಂದಿಗೆ ಸಂವಾದ ನಡೆಸಲಿದ್ದಾರೆ. ಜಸ್ಟ್ ಪದ್ಯ 2023ನೇ ವರುಷದ ಗೌರವಾಧ್ಯಕ್ಷರೂ ಕವಿಗಳೂ ಆದ ಮೃತ್ಯುಂಜಯ ಕೆ.ಪಿ. ಮತ್ತು Bigkannada.comನ ಪ್ರಧಾನ ಸಂಪಾದಕರೂ ಲೇಖಕರೂ ಆದ ವಿ.ಆರ್.ಕಾರ್ಪೆಂಟರ್'ರವರು ಉಪಸ್ಥಿತರಿರಲಿದ್ದಾರೆ. ಇದೇ ಹೊತ್ತಲ್ಲಿ ನಂದಾ ದೀಪ, ಶಶಿಧರ ಸಬ್ಬನಹಳ್ಳಿ ಹಾಗೂ ಮಾನಸ ಬನ್ನಂಗಾಡಿಯವರು ವಸಂತ ಬನ್ನಾಡಿಯವರ ಪದ್ಯಗಳನ್ನು ಓದಲಿದ್ದಾರೆ. ಕವಿಗಳು, ಪರಿಚಯ ಪ್ರಕಾಶನದ ಸಂಸ್ಥಾಪಕರೂ ಆದ ಶಿವಕುಮಾರಾಧ್ಯರವರು ಈ ಆವೃತ್ತಿಯನ್ನು
ಸಮನ್ವಯಗೊಳಿಸಲಿದ್ದಾರೆ.
ಭಾನುವಾರ ಬನ್ನಿ. ಮಂಡ್ಯದಲ್ಲಿ ಸೇರೋಣ.



https://www.instagram.com/p/Cw6k0v2vCtr/?igshid=MWZjMTM2ODFkZg==

After successful begining of the projects like Let's Make a Short Film, Mandya International Short Film (MISFFes) Indian...
05/09/2023

After successful begining of the projects like Let's Make a Short Film, Mandya International Short Film (MISFFes) Indian Cultural Collective and Empty Pocket Dreams stepping into a new venture. This time its literature. A unique programme Just Poem begins on 10th of September 2023 in Mandya.
.................

ಜಸ್ಟ್ ಪದ್ಯ!
Just Poem!

Talk | Poetry Recital | Interaction | Book Exhibition | Autograph | Coffee Party

ಸಹೃದಯರೆಲ್ಲ ಸೇರಿ ಒಬ್ಬ ಕವಿಯ ಜೊತೆ ಮಾತಾಡುವ, ಅವರ ಕಾವ್ಯವನ್ನು ಓದುವ ನೆವದಲ್ಲಿ
ಈ ಕಾಲಕ್ಕೆ ಮದ್ದಾಗಬೇಕಾದ ಕಾವ್ಯ ಮತ್ತದರ ಸ್ವರೂಪವನ್ನು ಗಂಭೀರವಾಗಿ ಚರ್ಚಿಸುವ ಹಾಗೂ ಕಾವ್ಯ ಪರಂಪರೆಯನ್ನು ಈವತ್ತಿನ ಎಳೆ ತಲೆಮಾರಿಗೆ ವಿಸ್ತರಿಸುವ ಕಾರ್ಯಕ್ರಮವೇ ಜಸ್ಟ್ ಪದ್ಯ. ಸೆಪ್ಟೆಂಬರ್ ತಿಂಗಳಿನಿಂದ ಪ್ರತೀ ಎರಡನೇಯ ಭಾನುವಾರಗಳಂದು ಮಂಡ್ಯದಲ್ಲಿ ಜಸ್ಟ್ ಪದ್ಯ ನಡೆಯಲಿದೆ. ಈಗಲೇ ನಿಮ್ಮ ಕ್ಯಾಲೆಂಡರ್'ನಲ್ಲಿ ಎರಡನೇಯ ಭಾನುವಾರಗಳನ್ನು ಕಾವ್ಯಕ್ಕಾಗಿ ಬ್ಲಾಕ್ ಮಾಡಿಟ್ಟುಕೊಳ್ಳಿ. ಮಿಕ್ಕ ವಿವರಗಳು ಸದ್ಯದಲ್ಲೇ.

ಹೆಚ್ಚಿನ ವಿವರಗಳಿಗೆ: 7204741986 | 9972391577
ಇ ಮೇಲ್ : [email protected]

Organized by
Indian Cultural Collective
An initiative by
Empty Pocket Dreams

ಎಂಪ್ಟಿ ಪಾಕೆಟ್ ಡ್ರೀಮ್ಸ್ ಬ್ಯಾನರ್'ನಡಿ ದರ್ಶಿನಿ ರಾಜ್ ಗೌಡ, ಟಿ. ಲಕ್ಷ್ಮಿ ಕುಮಾರಿ ಹಾಗೂ ಇತರೆ ಸಹೃದಯರು ಹಾಗೂ ಸಂಸ್ಥೆಗಳು ನಿರ್ಮಿಸಿರುವ ವಿನ...
22/07/2023

ಎಂಪ್ಟಿ ಪಾಕೆಟ್ ಡ್ರೀಮ್ಸ್ ಬ್ಯಾನರ್'ನಡಿ ದರ್ಶಿನಿ ರಾಜ್ ಗೌಡ, ಟಿ. ಲಕ್ಷ್ಮಿ ಕುಮಾರಿ ಹಾಗೂ ಇತರೆ ಸಹೃದಯರು ಹಾಗೂ ಸಂಸ್ಥೆಗಳು ನಿರ್ಮಿಸಿರುವ ವಿನಯ್ ಕುಮಾರ್ ಎಂ. ಜಿ. ರವರು ನಿರ್ದೇಶಿಸಿರುವ ಕನ್ನಡ ಅಂತರ್-ಶೀರ್ಷಿಕೆ ಒಳಗೊಂಡಿರುವ ಮೂಕಿ ಕಿರುಚಿತ್ರ ಟ್ರೈನ್ ಪ್ರತಿಷ್ಠಿತ ಸತ್ಯ ಹೆಗ್ಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್'ನಲ್ಲಿ‌ ಬಿಡುಗಡೆಗೊಂಡಿದೆ‌. ದಯವಿಟ್ಟು ವೀಕ್ಷಿಸಿ. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಈ ಲಿಂಕ್ಅನ್ನು ಸ್ನೇಹಿತರಿಗೆ, ಕುಟುಂಬದವರಿಗೆ ಕಳಿಸಿ ನೋಡಲು ತಿಳಿಸಿ.

'The Train' a black and
white silent short film with Kannada inter-titles written and directed by writer-film maker Vinay Kumar M. G. and produced by Darshini Raj Gowda, T. Lakshmi Kumari, connoisseur individuals and various organizations under Empty Pocket Dreams is streaming in Satya Hegde YouTube channel. Kindly subscribe, watch, comment and share to all your family and friends. Thank you.





Welcome to Satya Hegde Studios YouTube Channel.The Train is a short story exploring some of the biggest issues troubling the world, including inequality, har...

Only two hours left! ಬೇಗ ಬೇಗ ಬಂದ್ಬಿಡಿ!😍😍
02/07/2023

Only two hours left! ಬೇಗ ಬೇಗ ಬಂದ್ಬಿಡಿ!😍😍

ಬೆಂಗಳೂರಿನಲ್ಲಿ ನಾಲ್ಕು ಕಿರುಚಿತ್ರಗಳ ಪ್ರದರ್ಶನFour short films screening in Bengaluru                    ...........ಕನ್ನಡದ ಪ್...
30/06/2023

ಬೆಂಗಳೂರಿನಲ್ಲಿ ನಾಲ್ಕು ಕಿರುಚಿತ್ರಗಳ ಪ್ರದರ್ಶನ
Four short films screening in Bengaluru

...........

ಕನ್ನಡದ ಪ್ರತಿಷ್ಠಿತ ಸತ್ಯ ಹೆಗಡೆ ಸ್ಟುಡಿಯೋಸ್ ಇದೇ ಭಾನುವಾರ (ಜುಲೈ 2,2023) ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಾಲ್ಕು ಕಿರುಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದು ಆ ಪೈಕಿ ಎಂಪ್ಟಿ ಪಾಕೆಟ್ ಡ್ರೀಮ್ಸ್ ನಿರ್ಮಿಸಿ ವಿನಯ್ ಕುಮಾರ್ ಎಂ. ಜಿ. ರವರು ನಿರ್ದೇಶಿಸಿರುವ ಟ್ರೈನ್ ಕಿರುಚಿತ್ರವು ಪ್ರದರ್ಶನ ಗೊಳ್ಳಲಿದೆ. ದಯಮಾಡಿ ಬನ್ನಿ, ಬೆಂಬಲಿಸಿ.

Satya Hegde Studios founded by ace cinematographer Sri Satya Hegde organizing screening of four short films including Empty Pocket Dreams production of Vinay Kumar M. G film 'The Train' on this Sunday (July 2, 2023) at Suchithra Film Society, Banashankri, Bengaluru.
Kindly participate and participate in discussion.

For more details call or message to: 9972391577.



ಪಪ್ಪರಂಪರಂ ಪಾರಂಪಂ!Papparampara parampamSong recording for the short film Nakali ಶಾರ್ಟ್ ಫಿಲಂ ಆದರೇನು ಹಾಡುಗಳಿರಬಾರದೆಂಬ ಕಾನೂನಿ...
24/06/2023

ಪಪ್ಪರಂಪರಂ ಪಾರಂಪಂ!
Papparampara parampam
Song recording for the short film Nakali

ಶಾರ್ಟ್ ಫಿಲಂ ಆದರೇನು ಹಾಡುಗಳಿರಬಾರದೆಂಬ ಕಾನೂನಿದೆಯೇ? ಹಾಸನದ ವಿಜಯ ಸ್ಕೂಲಿನ ಮಕ್ಕಳು ಅಭಿನಯಿಸಿದ ನಕಲಿ ಕಿರುಚಿತ್ರದ ಹಾಡಿನ ಧ್ವನಿಮುದ್ರಣ ಮೈಸೂರಿನ ದಟ್ ಮ್ಯೂಸಿಕ್ ಕಂಪೆನಿಯಲ್ಲಿ ಯಶಸ್ವಿಯಾಗಿ ನಡೆಯಿತು. ಪಪ್ಪರಂಪರಂ ಪಾರಂಪಂ ಎನ್ನುವ ಗುನುಗುವ ಹಾಡನ್ನು ಬರೆದವರು ರೇಡಿಯೋ ಜಾಕಿ ಸಹನಾ. ಮ್ಯೂಸಿಕ್ ಮಾಡಿದವರು ಕಮಲ್ ತುಳಸಿ ಎಂಬ ಪ್ರತಿಭಾವಂತ. ಇನ್ನೇನು ಕೆಲವೇ ದಿನಗಳಲ್ಲಿ ಈ ಕಿರುಚಿತ್ರ ಬಿಡುಗಡೆಗೊಳ್ಳಲಿದೆ.

(ಇದು ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ರೂಪಿಸಿದ ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಯೋಜನೆಯ ಭಾಗ. ಇಂತಹ ಪ್ರಾಜೆಕ್ಟನ್ನೂ ನೀವೂ ನಿಮ್ಮ ಶಾಲೆಯಲ್ಲಿ, ತಂಡದಲ್ಲಿ ಮಾಡಬಹುದು. ಹೆಚ್ಚಿನ ವಿವರಗಳಿಗೆ 7204741986 ಈ ನಂಬರನ್ನು ಸಂಪರ್ಕಿಸಿ)

..................

Papparampara Parampam a song for the Kannada children short film Nakali performed by the children of Vijaya School, Hassan has been successfully recorded at That Music Company Mysuru. The sing has been written by Mysore's famous radio jockey R J Sahana and composed by talented musician Kamal Tulasi. The film will be released shortly.

(This film is a part of Indian Cultural Collective and Empty Pocket Dreams' project Let's Make a Short Film. You can also conduct such project in your educational institution and group. Call us at 7204741986 for more details)

11/06/2023

ಕಿರುಚಿತ್ರ ತಯಾರಿಕೆ ಮತ್ತು‌ ನಟನಾ ಶಿಬಿರ @ ನಮ್ಮ ಮಂಡ್ಯದಲ್ಲಿ!

Short Film Making and Acting Camp @ Namma Mandya!

................

ಸಕ್ಕರೆ ನಾಡು ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಿರುಚಿತ್ರ ತಯಾರಿಕೆ ಹಾಗೂ ನಟನಾ ಶಿಬಿರವನ್ನು ಆಯೋಜಿಸಿದ್ದು ಇದೇ ಆಗಸ್ಟ್ ತಿಂಗಳ 5ನೇ ತಾರೀಖಿನಿಂದ ಅಕ್ಟೋಬರ್ 1ನೇ ತಾರೀಖಿನವೆರೆಗೆ ಪ್ರತೀ‌ ಶನಿವಾರ ಮತ್ತು ಭಾನುವಾರ ಗಳಂದು ಶಿಬಿರ ನಡೆಯಲಿದೆ. ಐದನೇಯ ತರಗತಿ ಅಥವಾ ಅದಕ್ಕೂ ಮೇಲ್ಪಟ್ಟವರು ಇದರಲ್ಲಿ ಭಾಗವಹಿಸಬಹುದು. ನುರಿತ ಗುರುಗಳಿಂದ ಅಭಿನಯ ಹಾಗೂ ದೃಶ್ಯ ಮಾಧ್ಯಮ ಕುರಿತ ಶಿಕ್ಷಣ ನೀಡಿ ಕಿರುಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ, ವ್ಯಕ್ತಿತ್ವ ವಿಕಸನ, ಪರಿಣಾಮಕಾರಿ
ಭಾಷಣ ಕಲೆ, ಆಂಕರಿಂಗ್, ಆನ್'ಲೈನ್ ಕಂಟೆಂಟ್ ಕ್ರಿಯೇಷನ್, ಚಲನಚಿತ್ರ ರಸಗ್ರಹಣ, ಬುಕ್ ಕಲ್ಚರ್, ಪೊಯೆಟ್ರಿ ರಿಸೈಟಲ್ ಮುಂತಾದ ಹತ್ತು ಹಲವು ವಿಶೇಷತೆಗಳನ್ನು ರಾಜ್ಯ ಹಾಗೂ ದೇಶದ ಪ್ರಮುಖ ಪರಿಣಿತರಿಂದ ಹೇಳಿಕೊಡಲಾಗುತ್ತದೆ.
ಸೀಮಿತ ಅಭ್ಯರ್ಥಿಗಳಿಗಷ್ಟೇ ಭಾಗವಹಿಸುವ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ. ಅದಾಗಲೇ ನೋಂದಣಿ ಕಾರ್ಯ ಆರಂಭಗೊಂಡಿದ್ದು . ಈ ಕೂಡಲೇ ತಮ್ಮ ಮಗುವಿನ ಅಥವಾ ತಮ್ಮ ಹೆಸರನ್ನು ನೋಂದಾಯಿಸಿ. ವಿವರಗಳಿಗೆ 7204741986, 9972391577 ಈ ಸಂಖ್ಯೆಗಳನ್ನು ಸಂಪರ್ಕಿಸಿ.

(ವಿಶೇಷ ಸೂಚನೆ: ಈ ಶಿಬಿರದಲ್ಲಿ ಯಾರೂ ಬೇಕಾದರೂ ಯಾವ ಊರಿನವರಾದರೂ ಭಾಗವಹಿಸಬಹುದಾದ್ದರಿಂದ ಪ್ರತ್ಯೇಕ ಶುಲ್ಕ ಪಾವತಿಸಿ ವಸತಿ ಸೌಲಭ್ಯವನ್ನೂ ಪಡೆಯಬಹುದಾಗಿದೆ.)

ಆಯೋಜಕರು:
ಇಂಡಿಯನ್ ಕಲ್ಚರಲ್ ಕಲೆಕ್ಟಿವ್
ಮತ್ತು
ಎಂಪ್ಟಿ ಪಾಕೆಟ್ ಡ್ರೀಮ್ಸ್


emptypocketdreams







A glad moment for the entire community of Empty Pocket Dreams to see our beloved leader Dr. Shashank S. Wazarkar in the ...
28/05/2023

A glad moment for the entire community of Empty Pocket Dreams to see our beloved leader Dr. Shashank S. Wazarkar in the spotlight of Times of India. Kudos dear Shashank. Miles to go together!❤️

ಕಿರುಚಿತ್ರ ತಯಾರಿಕೆ ಮತ್ತು‌ ನಟನಾ ಶಿಬಿರ @ ನಮ್ಮ ಮಂಡ್ಯದಲ್ಲಿ!Short Film Making and Acting Camp @ Namma Mandya!              ......
06/05/2023

ಕಿರುಚಿತ್ರ ತಯಾರಿಕೆ ಮತ್ತು‌ ನಟನಾ ಶಿಬಿರ @ ನಮ್ಮ ಮಂಡ್ಯದಲ್ಲಿ!

Short Film Making and Acting Camp @ Namma Mandya!

................

ಸಕ್ಕರೆ ನಾಡು ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಿರುಚಿತ್ರ ತಯಾರಿಕೆ ಹಾಗೂ ನಟನಾ ಶಿಬಿರವನ್ನು ಆಯೋಜಿಸಿದ್ದು ಇದೇ ಜುಲೈ ತಿಂಗಳ 1ನೇ ತಾರೀಖಿನಿಂದ ಆಗಸ್ಟ್ 27ನೇ ತಾರೀಖಿನವೆರೆಗೆ ಪ್ರತೀ‌ ಶನಿವಾರ ಮತ್ತು ಭಾನುವಾರ ಗಳಂದು ಶಿಬಿರ ನಡೆಯಲಿದೆ. ಐದನೇಯ ತರಗತಿ ಅಥವಾ ಅದಕ್ಕೂ ಮೇಲ್ಪಟ್ಟವರು ಇದರಲ್ಲಿ ಭಾಗವಹಿಸಬಹುದು. ನುರಿತ ಗುರುಗಳಿಂದ ಅಭಿನಯ ಹಾಗೂ ದೃಶ್ಯ ಮಾಧ್ಯಮ ಕುರಿತ ಶಿಕ್ಷಣ ನೀಡಿ ಕಿರುಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ, ವ್ಯಕ್ತಿತ್ವ ವಿಕಸನ, ಪರಿಣಾಮಕಾರಿ
ಭಾಷಣ ಕಲೆ, ಆಂಕರಿಂಗ್, ಆನ್'ಲೈನ್ ಕಂಟೆಂಟ್ ಕ್ರಿಯೇಷನ್, ಚಲನಚಿತ್ರ ರಸಗ್ರಹಣ, ಬುಕ್ ಕಲ್ಚರ್, ಪೊಯೆಟ್ರಿ ರಿಸೈಟಲ್ ಮುಂತಾದ ಹತ್ತು ಹಲವು ವಿಶೇಷತೆಗಳನ್ನು ರಾಜ್ಯ ಹಾಗೂ ದೇಶದ ಪ್ರಮುಖ ಪರಿಣಿತರಿಂದ ಹೇಳಿಕೊಡಲಾಗುತ್ತದೆ.
ಸೀಮಿತ ಅಭ್ಯರ್ಥಿಗಳಿಗಷ್ಟೇ ಭಾಗವಹಿಸುವ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ. ಅದಾಗಲೇ ನೋಂದಣಿ ಕಾರ್ಯ ಆರಂಭಗೊಂಡಿದ್ದು . ಈ ಕೂಡಲೇ ತಮ್ಮ ಮಗುವಿನ ಅಥವಾ ತಮ್ಮ ಹೆಸರನ್ನು ನೋಂದಾಯಿಸಿ. ವಿವರಗಳಿಗೆ 7204741986, 8971038011, 9972391577 ಈ ಸಂಖ್ಯೆಗಳನ್ನು ಸಂಪರ್ಕಿಸಿ ಇಲ್ಲವೇ ಸಂಸ್ಥೆಯ ದೂರವಾಣಿ ಸಂಖ್ಯೆ +918971038011, +919880414848 ಅಥವಾ 9972391577ಅನ್ನು ಸಂಪರ್ಕಿಸಿ.

(ವಿಶೇಷ ಸೂಚನೆ: ಈ ಶಿಬಿರದಲ್ಲಿ ಯಾರೂ ಬೇಕಾದರೂ ಯಾವ ಊರಿನವರಾದರೂ ಭಾಗವಹಿಸಬಹುದಾದ್ದರಿಂದ ಪ್ರತ್ಯೇಕ ಶುಲ್ಕ ಪಾವತಿಸಿ ವಸತಿ ಸೌಲಭ್ಯವನ್ನೂ ಪಡೆಯಬಹುದಾಗಿದೆ.)

ಆಯೋಜಕರು:
ಇಂಡಿಯನ್ ಕಲ್ಚರಲ್ ಕಲೆಕ್ಟಿವ್
ಮತ್ತು
ಎಂಪ್ಟಿ ಪಾಕೆಟ್ ಡ್ರೀಮ್ಸ್


emptypocketdreams







ಬೆಂಗಳೂರು ಸಮ್ಮರ್ ಸಿನಿಮಾ ಕಾರ್ನಿವಲ್ 2023 ಶುರುವಾಗಲು ಇನ್ನೂ ಐದು ದಿನವಷ್ಟೇ ಇದೆ. ಕೇವಲ ಮೂವತ್ತು ಜನರಿಗಷ್ಟೇ ಪಾಲ್ಗೊಳ್ಳುವ ಅವಕಾಶ. ಕೂಡಲೇ ...
13/04/2023

ಬೆಂಗಳೂರು ಸಮ್ಮರ್ ಸಿನಿಮಾ ಕಾರ್ನಿವಲ್ 2023 ಶುರುವಾಗಲು ಇನ್ನೂ ಐದು ದಿನವಷ್ಟೇ ಇದೆ. ಕೇವಲ ಮೂವತ್ತು ಜನರಿಗಷ್ಟೇ ಪಾಲ್ಗೊಳ್ಳುವ ಅವಕಾಶ. ಕೂಡಲೇ ಈ ಮಾಹಿತಿಯನ್ನು ಎಲ್ಲೆಡೆ ಹಂಚಿ. ಆಸಕ್ತರನ್ನು ಸೇರಿಕೊಳ್ಳಲು ಹೇಳಿ.

Just five days to go to Bengaluru Summer Cinema Carnival 2023. Admission restricted to 30 members. Kindly spread this message to interests ones.

ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆಯು ಬೆಂಗಳೂರಿನ ಎನ್.ಜಿ.ಎಫ್. ಲೇಔಟ್, ನಾಗರಬಾವಿಯಲ್ಲಿರುವ  ಜೆ‌.ಇ.ಎಸ್....
08/04/2023

ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆಯು ಬೆಂಗಳೂರಿನ ಎನ್.ಜಿ.ಎಫ್. ಲೇಔಟ್, ನಾಗರಬಾವಿಯಲ್ಲಿರುವ
ಜೆ‌.ಇ.ಎಸ್. ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ
ಸಮ್ಮರ್ ಸಿನಿಮಾ ಕಾರ್ನಿವಲ್ 2023 ಎಂಬ ವಿಶೇಷ ಸಮ್ಮರ್ ಕ್ಯಾಂಪ್'ಅನ್ನು ಇದೇ ಏಪ್ರಿಲ್ ತಿಂಗಳ 18ನೇ ತಾರೀಖಿನಿಂದ 30ನೇ ತಾರೀಖಿನವೆರೆಗೆ ಆಯೋಜಿಸುತ್ತಿದೆ.
ಐದನೇಯ ತರಗತಿ ಅಥವಾ ಅದಕ್ಕೂ ಮೇಲ್ಪಟ್ಟವರು ಭಾಗವಹಿಸಬಹುದಾದ ಈ ಶಿಬಿರದಲ್ಲಿ ನುರಿತ ಗುರುಗಳಿಂದ ಅಭಿನಯ ಹಾಗೂ ದೃಶ್ಯ ಮಾಧ್ಯಮ ಕುರಿತ ಶಿಕ್ಷಣ ನೀಡಿ ಕಿರುಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ, ವ್ಯಕ್ತಿತ್ವ ವಿಕಸನ, ಪರಿಣಾಮಕಾರಿ
ಭಾಷಣ ಕಲೆ, ಆಂಕರಿಂಗ್, ಆನ್'ಲೈನ್ ಕಂಟೆಂಟ್ ಕ್ರಿಯೇಷನ್, ಚಲನಚಿತ್ರ ರಸಗ್ರಹಣ, ಬುಕ್ ಕಲ್ಚರ್, ಜಾಯ್ ಆಫ್ ಗಿವಿಂಗ್, ಪೊಯೆಟ್ರಿ ರಿಸೈಟಲ್ ಮುಂತಾದ ಹತ್ತು ಹಲವು ವಿಶೇಷತೆಗಳನ್ನು ದೇಶದ ಪ್ರಮುಖ ಪರಿಣಿತರಿಂದ ಹೇಳಿಕೊಡಲಾಗುತ್ತದೆ. ಚಲನಚಿತ್ರ ಹಾಗೂ ರಂಗಭೂಮಿ ನಟರೂ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪುರಸ್ಕೃತರೂ, ಬಿಗ್'ಬಾಸ್ ಸ್ಪರ್ಧಿಯೂ ಆಗಿದ್ದ ಶ್ರೀ ಚಂದನ್ ಆಚಾರ್'ರವರು ಈ ಶಿಬಿರದ ಸೆಲೆಬ್ರಿಟಿ ಡಿರೆಕ್ಟರ್ ಆಗಿರಲಿದ್ದಾರೆ.
ಸೀಮಿತ ಅಭ್ಯರ್ಥಿಗಳಿಗಷ್ಟೇ ಭಾಗವಹಿಸುವ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ. ಅದಾಗಲೇ ನೋಂದಣಿ ಕಾರ್ಯ ಆರಂಭಗೊಂಡಿದ್ದು . ಈ ಕೂಡಲೇ ತಮ್ಮ/ಮಗುವಿನ ಹೆಸರನ್ನು ನೋಂದಾಯಿಸಿ. ವಿವರಗಳಿಗೆ ಶಾಲೆಯ ಶಿಕ್ಷಕರಾದ ಶಿವರಾಜ್'ವರನ್ನು ಮೊಬೈಲ್ ಸಂಖ್ಯೆ +917353169189ರಲ್ಲಿ ಸಂಪರ್ಕಿಸಿ ಇಲ್ಲವೇ ಸಂಸ್ಥೆಯ ದೂರವಾಣಿ ಸಂಖ್ಯೆ +918971038011, +919880414848 ಅಥವಾ 9972391577ಅನ್ನು ಸಂಪರ್ಕಿಸಿ.

(ವಿಶೇಷ ಸೂಚನೆ: ಈ ಶಿಬಿರದಲ್ಲಿ ಯಾರೂ ಬೇಕಾದರೂ ಯಾವ ಊರಿನವರಾದರೂ ಭಾಗವಹಿಸಬಹುದಾದ್ದರಿಂದ ಪ್ರತ್ಯೇಕ ಶುಲ್ಕ ಪಾವತಿಸಿ ವಸತಿ ಸೌಲಭ್ಯವನ್ನೂ ಪಡೆಯಬಹುದಾಗಿದೆ.)

Let's Make a Short Film Project New Short Will be Out Soon!!These frames assure you a fine performance of children! Happ...
31/03/2023

Let's Make a Short Film Project New Short Will be Out Soon!!

These frames assure you a fine performance of children! Happy to finish the short film performed by the students of Vijaya School, Hassan. Title and other announcement soon.







ನಾಳೆ ಬೆಳಗ್ಗೆ ಹುಣಸೂರಿನಲ್ಲಿ ಆಡಿಷನ್ / ಅಡ್ಮಿಷನ್ ಇಂಟರ್'ವ್ಯೂ
27/01/2023

ನಾಳೆ ಬೆಳಗ್ಗೆ ಹುಣಸೂರಿನಲ್ಲಿ ಆಡಿಷನ್ / ಅಡ್ಮಿಷನ್ ಇಂಟರ್'ವ್ಯೂ

Film Appreciation Workshop and Let's Make a Short Film Summer Camp Orientation Successful @ Shasthri Public School, Huna...
17/01/2023

Film Appreciation Workshop and Let's Make a Short Film Summer Camp Orientation Successful @ Shasthri Public School, Hunasuru!❤

...............

ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಎಂಪ್ಟಿ ಪಾಕೆಟ್ ಡ್ರೀಮ್ಸ್ ಹಾಗೂ
ಶಾಸ್ತ್ರಿ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ಚಲನಚಿತ್ರ ರಸಗ್ರಹಣ ಶಿಬಿರ ಹಾಗೂ ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಬೇಸಿಗೆ ಶಿಬಿರ ಪರಿಚಯ ಕಾರ್ಯಾಗಾರದಲ್ಲಿ ಶಾಸ್ತ್ರಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿ/ನಿಯರು ಬಹಳ ಉತ್ಸುಕತೆಯಿಂದ ಪಾಲ್ಗೊಂಡರು. ಪ್ರಾಂಶುಪಾಲರಾದ ಸನ್ಮಾನ್ಯ ರವಿಶಂಕರ್'ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಕಲ್ಚರಲ್ ಕಲೆಕ್ಟಿವ್'ನ ಅಧ್ಯಕ್ಷರೂ, ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥಾಪಕರೂ ಆದ ಶ್ರೀ ವಿನಯ್ ಕುಮಾರ್ ಎಂ. ಜಿ.ರವರು ಶಿಬಿರವನ್ನು ನಡೆಸಿಕೊಟ್ಟರು. ಶಾಲೆಯಲ್ಲಿ ಪರೀಕ್ಷೆಯ ನಂತರ ಆಯೋಜಿಸಲಾಗುತ್ತಿರುವ ಈ ವಿಶೇಷ ಶಿಬಿರದಲ್ಲಿ ನಿಮ್ಮ ಮಗುವನ್ನೂ ಭಾಗವಹಿಸಿ. ಅವನ/ಳಲ್ಲಿರುವ ಪ್ರತಿಭೆ ಇಡೀ ಜಗತ್ತಿಗೆ ಮುಟ್ಟಲಿ. ಹೆಚ್ಚಿನ ಮಾಹಿತಿ ಮತ್ತು ನೋಂದಣಿ ಪಡೆಯಲು ಕೂಡಲೇ ಶಾಲೆಯ ಶಿಕ್ಷಕರಾದ ಆಂಟನಿಯವರಿಗೆ ಕರೆ ಮಾಡಿ (8123461522) ಇಲ್ಲವೇ ಇಪಿಡಿಯ ಅಧಿಕೃತ ದೂರವಾಣಿ ಸಂಖ್ಯೆ +918971038011 ಹಾಗೂ 9972391577 ಈ ನಂಬರುಗಳಿಗೆ ಕರೆ ಮಾಡಿ.

..................

Shasthri Public School in association with Indian Cultural Collective and Empty Pocket Dreams successfully hosted Film appreciation and Let's Make a Short Film summer camp orientation workshop at school premises. Students from class fifth to pre university actively participated. The workshop was facilitated by
the president of Indian Cultural Collective and founder of Empty Pocket Dreams Sri. Vinay Kumar M. G under the headship of the principal Sri Ravishankar. The most creative summer camp will be held in the school premises soon after the examinations. Kindly make use of this opportunity through admitting your children to prove their talent. For more details contact the teacher Sri Anthony at 8123461522 or give a call to the authorised numbers of EPD +918971038011 and 9972391577.

Regards,
*Indian Cultural Collective
*Empty Pocket Dreams
*Shasthri Public School, Hunasuru













Call for Film Story Writers!ನೀವು ಕಥೆಗಾರರೇ? ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ವ್ಯಕ್ತಿಚಿತ್ರ, ಜಾಹೀರಾತು ಚಿತ್ರಗಳಿಗೆ ಕಥೆ ಹಾಗೂ...
24/12/2022

Call for Film Story Writers!

ನೀವು ಕಥೆಗಾರರೇ? ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ವ್ಯಕ್ತಿಚಿತ್ರ, ಜಾಹೀರಾತು ಚಿತ್ರಗಳಿಗೆ ಕಥೆ ಹಾಗೂ ಚಿತ್ರಕತೆ ಬರೆಯುವ ಆಸಕ್ತಿ ಹಾಗೂ ಅಗತ್ಯಕ್ಕೆ ತಕ್ಕಂತೆ ಕಥೆ ಬರೆಯುವ ಕಲೆ ಹಾಗೂ ಸಾಮರ್ಥ್ಯ ನಿಮಗಿದೆಯೇ? ಹಾಗಿದ್ದರೆ ನೀವು ನಮ್ಮೊಡನೆ ಸೇರಬಹುದು. ಕೂಡಲೇ I AM A STORY WRITER
ಎಂದು ಟೈಪಿಸಿ ನಿಮ್ಮ‌ ವಿವರಗಳನ್ನು
+918971038011 ಈ ನಂಬರಿಗೆ ಕಳುಹಿಸಿ. ನಿಮ್ಮನ್ನು ನಾವೇ ಸಂಪರ್ಕಿಸುತ್ತೇವೆ.
......................
Are you a story writer? Are you capable of writing stories for film, short film, documentary, profile film and advertisement film according to the demand? Then send a message 'I AM A STORY WRITER' to +91-8971038011. We contact you.

Audition Successful @ JES Public School, Bengaluru!❤ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಎಂಪ್ಟಿ ಪಾಕೆಟ್ ಡ್ರೀಮ್ಸ್ ಹಾಗೂ ಜೆಇಎಸ್ ಪಬ್ಲಿಕ್...
22/12/2022

Audition Successful @ JES Public School, Bengaluru!❤

ಇಂಡಿಯನ್ ಕಲ್ಚರಲ್ ಕಲೆಕ್ಟಿವ್ ಎಂಪ್ಟಿ ಪಾಕೆಟ್ ಡ್ರೀಮ್ಸ್ ಹಾಗೂ
ಜೆಇಎಸ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಪ್ರಾಜೆಕ್ಟ್'ನಲ್ಲಿ ಭಾಗಿಯಾಗಲು ಆಯೋಜಿಸಿದ್ದ ಆಡಿಷನ್/ಅಡ್ಮಿಷನ್ ಇಂಟರ್'ವ್ಯೂನಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಆಯ್ಕೆಯಾದರು. ಈ ಯೋಜನೆಗೆ ನಿಮ್ಮ ಬೆಂಬಲವಿರಲಿ.

(ನಿಮ್ಮ ಶಾಲೆ/ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು +918971038011 ಈ ನಂಬರಿಗೊಂದು ಕರೆ ಮಾಡಿ.
.............

Audition/admission interview for Let's Make a Short Film project successfully completed at JES Public School, Bengaluru. Need your blessings and support.

(You can conduct the project in your school/institution. For more details give us a call at +918971038011)

Regards,
Indian Cultural Collective
Empty Pocket Dreams
JES Public School

https://m.facebook.com/story.php?story_fbid=138234095727982&id=100086241773686&mibextid=Nif5oz

Empty Pocket Dreams welcomes all the participants of Sri Vivekananda International School, Chennarayapatna for Let's mak...
05/11/2022

Empty Pocket Dreams welcomes all the participants of Sri Vivekananda International School, Chennarayapatna for Let's make a Short Film, a short term certification course of technology and art in visual media and short film. Classes will begin by next weekend. We wish you all a great learning. Any schools can take up this project to showcase the hidden talents of its children and to achieve local and global promotion. For more details call: +918971038011.

ಇಪಿಡಿ ಟಾಕ್ ಟುಗೆದರ್! ಅಂತಾರಾಷ್ಟ್ರೀಯ ಚಿಂತನಾ ವೇದಿಕೆ             ...............ಎಂಪ್ಟಿ ಪಾಕೆಟ್ ಡ್ರೀಮ್ಸ್ ಆರಂಭಿಸಿದ ಲೆಟ್ಸ್ ಮೇಕ್ ಎ...
26/10/2022

ಇಪಿಡಿ ಟಾಕ್ ಟುಗೆದರ್! ಅಂತಾರಾಷ್ಟ್ರೀಯ ಚಿಂತನಾ ವೇದಿಕೆ
...............

ಎಂಪ್ಟಿ ಪಾಕೆಟ್ ಡ್ರೀಮ್ಸ್ ಆರಂಭಿಸಿದ ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಯೋಜನೆ ಹಾಗೂ ಫೆಸ್ಟಿವಲ್ ಫಾರ್ ಫಿಲಂಸ್ ವೇದಿಕೆಗೆ ತಾವು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ನಾವು ಚಿರಋಣಿ. ಇದೀಗ ಇಪಿಡಿ ಟಾಕ್ ಟುಗೆದರ್ ಎಂಬ ಅಂತಾರಾಷ್ಟ್ರೀಯ ಯೋಜನೆಯೊಂದಿಗೆ ತಮ್ಮ ಮುಂದೆ ಬಂದಿದ್ದೇವೆ. ಇಲ್ಲಿ ಕರ್ನಾಟಕ, ಭಾರತ ಹಾಗೂ ಜಗತ್ತಿನ ವಿವಿಧ ಕ್ಷೇತ್ರದ ಸಾಧಕರು, ಶ್ರೇಷ್ಠ ಚಿಂತಕರು, ಕಲಾವಿದರು, ವಾಗ್ಮಿಗಳು, ರಾಜಕೀಯ ಮುತ್ಸದ್ದಿಗಳು, ಉದ್ಯಮಿಗಳು, ಚಿತ್ರಕರ್ಮಿಗಳು, ಸಾಹಿತಿಗಳು ಹಾಗೂ ಇತರ ಎಲ್ಲ ಕ್ಷೇತ್ರದ ಗಣ್ಯರನ್ನು ಕರೆತಂದು ಅವರೊಂದಿಗೆ ಮಾತುಕತೆ ನಡೆಸುವುದು ಮಾತ್ರವಲ್ಲದೆ ಸಂವಾದ, ಪುಸ್ತಕ ಚರ್ಚೆ, ವಸ್ತು ಪ್ರದರ್ಶನ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿತ ನಿರ್ದಿಷ್ಟ ಸಂಖ್ಯೆಯ ಆಸಕ್ತರಿಗಷ್ಟೇ ಅವಕಾಶ. ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ತ್ಯುತ್ತಮ ವ್ಯಕ್ತಿಗಳನ್ನು ಭೇಟಿ ಮಾಡುವುದು ಮಾತ್ರವಲ್ಲದೆ ವಿವಿಧ ಕ್ಷೇತ್ರದ ಆಸಸಕ್ತರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ವೈಯಕ್ತಿಕವಾಗಿ ಹಲವು ರೀತಿಯ ಬೆಳವಣಿಗೆಗಳನ್ನೂ ಕಾಣಬಹುದು. ಹಾಸನ ಹಾಗೂ ಮಂಡ್ಯದಲ್ಲಿ ಏಕಕಾಲದಲ್ಲಿ ಈ ಯೋಜನೆ ಆರಂಭವಾಗಲಿದೆ. ಮೊದಲು ಬಂದವರಿಗೆ ಆದ್ಯತೆ. ಈ ಕೂಡಲೇ +91-9972391577 ಈ ನಂಬರಿಗೆ ಕರೆ ಮಾಡಿ ಅಥವಾ [email protected] ಈ ಇ ಮೇಲ್ ಐಡಿಗೆ ಪತ್ರ ಬರೆದು ಪೂರ್ತಿ ವಿವರಣೆ ಪಡೆದು ನೋಂದಾಯಿಸಿಕೊಳ್ಳಿ. ಈ ವಿಭಿನ್ನ ಯೋಜನೆಯ ಜೊತೆಯಾಗಿ ನಿಲ್ಲಿ.

-ಇಪಿಡಿ ಟಾಕ್ ಟುಗೆದರ್ ತಂಡ

.............

EPD TALK TOGETHER
A Global Talk Show

Empty Pocket Dreams would like to extend great thanks to all of you for extending your unconditional support for our previous ventures Let's Make a Short Film project and Festival 4 Films initiative. Now, we are coming up with a big scale project EPD TALK TOGETHER, a global talk show project which aims to invite global personalities to deliver inspirational talks and conduct discussion with them. Since this project is truly international in nature only selected audience with the subscription are allowed to take part. Simultaneously organized in Mandya and Hassan will surely be an unprecedented event. We request you to subscribe immediately to be a part of the initiative. Kindly give a call to +91-9972391577 or write us at [email protected] for more details.

-Team
EPD TALK TOGETHER

Mandya International Short Film Festival April 2023              ..............2nd Mandya International Short Film Festi...
16/10/2022

Mandya International Short Film Festival April 2023

..............
2nd Mandya International Short Film Festival is here! Submit your short films to win exciting prizes worth Rs 1,00,000! You can also have a chance of winning grants and collaborations.
Go through the poster for more details and submit your film through this google form link:
https://forms.gle/uR1CxvG7EeYb3iqj7

Or contact us in these numbers: +91-8971038011, +91-9845552558, +91-9972391577

Facebook link:
https://m.facebook.com/story.php?story_fbid=137754252338722&id=100083124439300

Kindly find the link submit your film, share it and help promoting the festival.





2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ಏಪ್ರಿಲ್ 2023ನಿಮ್ಮ ಕಿರುಚಿತ್ರಗಳನ್ನು ಇಂದೇ ಸಲ್ಲಿಸಿ!!          ...............ಕಿರುಚಿತ...
09/10/2022

2ನೇ ಮಂಡ್ಯ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ಏಪ್ರಿಲ್ 2023
ನಿಮ್ಮ ಕಿರುಚಿತ್ರಗಳನ್ನು ಇಂದೇ ಸಲ್ಲಿಸಿ!!
...............

ಕಿರುಚಿತ್ರ ಮಾಧ್ಯಮವನ್ನು‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆಸಲಾಗುವ ಮಂಡ್ಯ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವವನ್ನು 2023ರ ಏಪ್ರಿಲ್‌ನಲ್ಲಿ ನಡೆಸಲು‌ ಉದ್ದೇಶಿಸಲಾಗಿದ್ದು ಯಾವುದೇ ಭಾಷೆಯ ಕಿರುಚಿತ್ರವನ್ನು ಸಲ್ಲಿಸಬಹುದು. ವಿವಿಧ ವಿಭಾಗಗಳ ವಿಜೇತರಿಗೆ 1,00,000 ರೂಪಾಯಿವೆರೆಗಿನ ಬಹುಮಾನ, ಪ್ರಶಸ್ತಿ ಫಲಕ, ಉಡುಗೊರೆಗಳು, ಗ್ರಾಂಟ್, ಫಂಡಿಂಗ್ ಸೇರಿದಂತೆ ಹಲವಾರು ಅವಕಾಶಗಳು ಸಿಗಲಿವೆ. ಮತ್ತೇಕೆ ತಡ? ಕೆಳಗಿನ ಲಿಂಕ್'ಅನ್ನು ಓಪನ್ ಮಾಡಿ👇🏼

https://m.facebook.com/story.php?story_fbid=135993649181449&id=100083124439300

ಪೋಸ್ಟರ್'ನಲ್ಲಿ ಹೇಳಲಾಗಿರುವ ಸೂಚನೆಗಳನ್ನು ಪಾಲಿಸಿ, ಚಿತ್ರಗಳನ್ನು ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8971038011





ನಿಮಗೆ ಕಿರುಚಿತ್ರ ನಿರ್ದೇಶಿಸಲು ಆಸಕ್ತಿಯಿದೆಯೇ? ನಿಮ್ಮ ಕನಸನ್ನು 'ಬನ್ನಿ ಕಿರುಚಿತ್ರ ಮಾಡೋಣ ಯೋಜನೆಯ ಮೂಲಕ ಸಾಕಾರಗೊಳಿಸಿಕೊಳ್ಳಿ. ಈ ಕೂಡಲೇ 'I...
03/10/2022

ನಿಮಗೆ ಕಿರುಚಿತ್ರ ನಿರ್ದೇಶಿಸಲು ಆಸಕ್ತಿಯಿದೆಯೇ? ನಿಮ್ಮ ಕನಸನ್ನು 'ಬನ್ನಿ ಕಿರುಚಿತ್ರ ಮಾಡೋಣ ಯೋಜನೆಯ ಮೂಲಕ ಸಾಕಾರಗೊಳಿಸಿಕೊಳ್ಳಿ. ಈ ಕೂಡಲೇ 'I AM A SHORT FILM MAKER' ಎಂದು +918971038011 ಈ ನಂಬರಿಗೆ ಕಳುಹಿಸಿ. ನಿಮ್ಮನ್ನು ನಾವೇ ಸಂಪರ್ಕಿಸುತ್ತೇವೆ.

Empty Pocket Dreams working on short film certification programme under the title Let's Make a Short Film.would like to ...
18/09/2022

Empty Pocket Dreams working on short film certification programme under the title Let's Make a Short Film.would like to collaborate with professional, upcoming short film makers and technicians. If you are one such aspiring celluloid story teller and technician looking for the opportunity kindly send your CV to: +918971038011 and 9972391577.

Address


Telephone

+919972391577

Website

Alerts

Be the first to know and let us send you an email when Empty Pocket Dreams posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share