Thijori ತಿಜೋರಿ

  • Home
  • Thijori ತಿಜೋರಿ

Thijori ತಿಜೋರಿ A magazine that blends between multifarious artistic and philosophical expressions from east and west
(1)

Thijori presents a virtual platform for the dissemination of state-of-the-art ideas and imageries with deep intellectual and analytic rigour keeping in mind both scholarly and mass conception.

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ 'ದಾರು ತರೀಂ' ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್ವಾಂಸ ಯೆಮನಿನ...
03/11/2023

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ 'ದಾರು ತರೀಂ' ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್ವಾಂಸ ಯೆಮನಿನ ಹಬೀಬ್ ಉಮರ್ ಬಿನ್ ಹಾಫಿಝ್‌ ರ ಪ್ರಮುಖ ಶಿಷ್ಯರಾದ ಹಬೀಬ್ ಮಹದಿ ಅಬೂಬಕರ್ ಹಮ್ದಿಯವರ ಈ ಸಂಸ್ಥೆಯಲ್ಲಿ ಪವಿತ್ರ ಕುರ್ಆನ್ ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಅಂದು ಸಂಸ್ಥೆಯ ಮಕ್ಕಳನ್ನು ಭೇಟಿ ಮಾಡಲು ಕೇರಳದ ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ಆಗಮಿಸುತ್ತಿರುವುದರಿಂದ ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತಿತ್ತು. ಸಂಸ್ಥೆಯ ಆಡಳಿತಾಧಿಕಾರಿಗಳಲ್ಲಿ ಕೇರಳದ ಅಧ್ಯಾಪಕರೂ ಇದ್ದರು.

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ ‘ದಾರು ತರೀಂ’ ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್....

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನ...
02/10/2023

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನೂ ಹುಟ್ಟಲಿರುವ ಎಲ್ಲಾ ಮಾನವರು ಸೃಷ್ಟಿಕರ್ತನ ಮುಂದೆ ಒಟ್ಟುಗೂಡುತ್ತಾರೆ. ಸೃಷ್ಟಿಕರ್ತನು ಅನೇಕ ವಾಗ್ದಾನಗಳನ್ನು ಮಾಡುತ್ತಾನೆ, ಜನರು ತಮಗೆ ಬೇಕಾದುದನ್ನು ಆರಿಸಿಕೊಳ್ಳುವ ಅವಕಾಶವನ್ನೂ ನೀಡುತ್ತಾನೆ. ಸೃಷ್ಟಿಕರ್ತನು ಕೇಳುತ್ತಾನೆ: "ನಿಮ್ಮಲ್ಲಿ ಯಾರಿಗೆ ಎಲ್ಲಾ ಲೌಕಿಕ ಆಸೆಗಳನ್ನು ಪೂರೈಸಬೇಕು..?" ಹಾಜರಿದ್ದವರಲ್ಲಿ ಶೇಕಡ ತೊಂಬತ್ತು ಮಂದಿ ಅದನ್ನು ಆರಿಸಿಕೊಂಡರು.

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರು...

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾರದಿಂದ ಒಮಾನಿನ...
21/09/2023

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾರದಿಂದ ಒಮಾನಿನ ಸಲಾಲಾದಲ್ಲಿರುವ ಜೆಟ್ಟಿಯಲ್ಲಿ ಹವಾಮಾನ ವರದಿಗಳ ಆಧಾರದ ಮೇಲೆ ಮರದ ಹಡಗು ಒಂದನ್ನು ಲಂಗರು ಹಾಕಿದ್ದರು. ಕಾರ್ಮಿಕರೆಲ್ಲರೂ ಹಡಗಿನಲ್ಲಿದ್ದಾರೆ. ಸರಕುಗಳನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಗಾಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ, ಅಂದರೆ ಮೇ 23,‌ 2018 ರಂದು ಯಮನ್‌ನ ತೀರ ಪ್ರದೇಶ ಸೊಕಾಟ್ರದಲ್ಲಿ (socotra) ಮೆಕುನು ಚಂಡಮಾರುತ ಸೃಷ್ಟಿಸಿದ ಅವಾಂತರದ ಬಗ್ಗೆ ಅವರು ತಿಳಿದಿದ್ದರು. 120ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮತ್ತು 5 ಭಾರತೀಯ ಸಣ್ಣ ಹಡಗುಗಳು ಮುಳುಗಿದ್ದವು. ಚಂಡಮಾರುತವು ಭಾರಿ ವೇಗದಲ್ಲಿ ಮುನ್ನುಗ್ಗುತ್ತಿತ್ತು. ಮುಳುಗುವಿಕೆಯಿಂದ ಕಾಪಾಡಲು ಸರಕುಗಳನ್ನೆಲ್ಲ ಲೋಡ್ ಮಾಡಲಾಗಿತ್ತು. ಹಡಗನ್ನು ಸುರಕ್ಷಿತವಾಗಿ ಲಂಗರು ಹಾಕಿದ್ದರು. ಎಲ್ಲಾ ಸಿಬ್ಬಂದಿಗಳು ಹಡಗಿನಲ್ಲಿದ್ದರು. ಗಾಳಿಯು ಗಂಟೆಗೆ 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿತ್ತು. ಅಂತೂ ಚಂಡಮಾರುತ ಬಂದೇಬಿಟ್ಟಿತು!.

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾ.....

14ನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಮೊರೊಕೊದಿಂದ ಸುಮಾರು 29 ವರ್ಷಗಳಲ್ಲಿ 75,000ಕ್ಕೂ ಅಧಿಕ ಮೈಲಿಗಳಷ್ಟು ಯಾತ್ರೆ ಕೈಗೊಂಡ ಇಬ್ನ್ ಬತೂತ ಇತಿಹ...
14/09/2023

14ನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಮೊರೊಕೊದಿಂದ ಸುಮಾರು 29 ವರ್ಷಗಳಲ್ಲಿ 75,000ಕ್ಕೂ ಅಧಿಕ ಮೈಲಿಗಳಷ್ಟು ಯಾತ್ರೆ ಕೈಗೊಂಡ ಇಬ್ನ್ ಬತೂತ ಇತಿಹಾಸ ಪುಟಗಳಲ್ಲಿ ಇಂದಿಗೂ ಅಜರಾಮರಾಗಿದ್ದಾರೆ. ತನ್ನ ಜೀವನದ ಸಿಂಹ ಭಾಗವನ್ನು ಬಿಸಿಲು-ಚಳಿಗಳೆನ್ನದೆ ಪ್ರವಾಸಕ್ಕಾಗಿ ಮುಡಿಪಾಗಿಟ್ಟ ಈ ಯಾತ್ರಿಕನನ್ನು ಮೊರೊಕೊ ಎಂಬ ದೇಶಕ್ಕೆ ಸೀಮಿತಗೊಳಿಸುವುದು ಒಂದು ರೀತಿಯ ವಿರೋಧಾಭಾಸ ಅಲ್ಲವೇ? ಇದು ಇಬ್ನ್ ಬತೂತರವರ ಪ್ರವಾಸದ ಕುರಿತಾದ ಅಧ್ಯಯನ ಮಾಡುವ ಅಮೆರಿಕಾದ ಸಂಶೋಧನೆ ವಿದ್ಯಾರ್ಥಿಗಳಲ್ಲಿ ಅನೇಕರು ಎತ್ತುವ ಪ್ರಶ್ನೆಯಾಗಿದೆ. ಸಮುದ್ರ ಮತ್ತು ಭೂಪ್ರದೇಶಗಳನ್ನು ದಾಟಿ ಇತರ ದೇಶಗಳಿಗೆ ಪ್ರವಾಸ ಹೊರಟ ಮಧ್ಯಕಾಲೀನ ಮುಸ್ಲಿಂ ಸಂಚಾರಿಗಳ ಜೀವನದಲ್ಲಿ ಸಂಚಾರವು ಯಾವ ಪರಿಣಾಮ ಬೀರಿದೆ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಅಪರಿಚಿತವಾದ ಜೀವನ ಶೈಲಿಗಳು ಮತ್ತು ಪರಿಚಯವಿಲ್ಲದ ಸಂಸ್ಕೃತಿಗಳು ಇವುಗಳ ಬಗ್ಗೆ ಅವರು ದಾಖಲಿಸಿದ ಅನುಭವಗಳು ಇಂದಿಗೂ ಮಾಸದೆ ಹಾಗೆಯೇ ಉಳಿದುಕೊಂಡ ಒಂದು ಪಾಠ ಪುಸ್ತಕವಾಗಿದೆ.

14ನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಮೊರೊಕೊದಿಂದ ಸುಮಾರು 29 ವರ್ಷಗಳಲ್ಲಿ 75,000ಕ್ಕೂ ಅಧಿಕ ಮೈಲಿಗಳಷ್ಟು ಯಾತ್ರೆ ಕೈಗೊಂಡ ಇಬ್ನ್ ಬತೂತ .....

ಒಮಾನಿನ ರಾಜಧಾನಿ ಮಸ್ಕತಿನಲ್ಲಿ ಸಫೀಯ ಅಹ್ಮದ್ ಅಲ್ಲಹದಿ ರಕ್ತಮಯ ಬಣ್ಣದ ನೂಲು ಬಳಸಿ ಒಮಾನ್ ಅರೇಬಿಯನ್ ಕುಮ್ಮ [Kumma] ಎಂದು ಹೆಸರುವಾಸಿಯಾದ ಒಮಾ...
05/08/2023

ಒಮಾನಿನ ರಾಜಧಾನಿ ಮಸ್ಕತಿನಲ್ಲಿ ಸಫೀಯ ಅಹ್ಮದ್ ಅಲ್ಲಹದಿ ರಕ್ತಮಯ ಬಣ್ಣದ ನೂಲು ಬಳಸಿ ಒಮಾನ್ ಅರೇಬಿಯನ್ ಕುಮ್ಮ [Kumma] ಎಂದು ಹೆಸರುವಾಸಿಯಾದ ಒಮಾನ್ ಟೋಪಿಯನ್ನು‌ ತನ್ನ ಮನೆಯಲ್ಲೇ ಕುಳಿತು ತಯಾರಿಸುತ್ತಾರೆ. ಗಟ್ಟಿಯಾದ ಬಿಳಿ ಕ್ಯಾಲಿಕ್ಕೋ ನೂಲಿನಿಂದ ಸೂಜಿಯೇರಿಸಿ, ಬಿಸಿಯೇರಿದ ಕಾಲಾವಧಿಯಲ್ಲಿ ವಾಯು ಸಂಚಾರಕ್ಕೆ ಸಹಾಯಕವಾಗುವ‌‌ ಟೋಪಿಯನ್ನು ಡಜನ್ಗಟ್ಟಲೆ ಇರುವ ಸಣ್ಣ ರಂಧ್ರಗಳ ಸುತ್ತಲು ಸಫೀಯ ನೂಲನ್ನು ನೇಯ್ದು ರೂಪ ತರುವರು. ಇಂದು ಬೆಳಿಗ್ಗೆಯೇ ಅಲ್ಲಹದಿ ಕುಮ್ಮ ನಿರ್ಮಾಣವನ್ನು ಆರಂಭಿಸಿದ್ದಾರೆ. "ಈ ಟೋಪಿ ನಿರ್ಮಾಣವು ಬಲು ದೀರ್ಘ, ಕ್ಲಿಷ್ಟಕರ ಹಾಗು ಸಂಕೀರ್ಣ ಪ್ರಕ್ರಿಯೆ‌" ಎಂದು ಹೇಳುತ್ತಾರೆ ಅವರು.‌ ವಿನ್ಯಾಸ ಎಷ್ಟು ವಿಪುಲವಾಗಿರುತ್ತೋ ಅದಕ್ಕೆ ತಕ್ಕಂತೆ ಒಂದು ತಿಂಗಳೋ ಅದಕ್ಕಿಂತ‌ ಹೆಚ್ಚು ಸಮಯವನ್ನು ವ್ಯಯಿಸಬೇಕಾಗುತ್ತದೆ. ತಮ್ಮ ಪ್ರತಿ ದಿನವನ್ನೂ ಸಂಪೂರ್ಣವಾಗಿ ದಿನನಿತ್ಯ ಕಾರ್ಯಚಟುವಟಿಕೆಗಾಗಿ ವಿಭಜಿಸಬೇಕಾಗಿ ಬರುವುದರಿಂದ ಪತ್ನಿ ಹಾಗೂ ಮಗನಿಗೆ ಬೇಕಾಗಿ ಕುಮ್ಮಾ‌‌ ನಿರ್ಮಿಸಲು ತನಗೆ ಸಮಯವನ್ನು ಸಿಗುವುದಿಲ್ಲವೆಂಬುದು ಸಫೀಯಾಳ ನೋವು.

ಒಮಾನಿನ ರಾಜಧಾನಿ ಮಸ್ಕತಿನಲ್ಲಿ ಸಫೀಯ ಅಹ್ಮದ್ ಅಲ್ಲಹದಿ ರಕ್ತಮಯ ಬಣ್ಣದ ನೂಲು ಬಳಸಿ ಒಮಾನ್ ಅರೇಬಿಯನ್ ಕುಮ್ಮ [Kumma] ಎಂದು ಹೆಸರುವಾಸಿಯ.....

“ಕಾಂಟ್‌ನ Critique of Pure Reason ಹಾಗೂ ಕುರಾನ್ ಅನ್ನು ನನಗೆ ಕಳುಹಿಸಿಕೊಡು, ರಹಸ್ಯವಾಗಿ ಕಳುಹಿಸಿ ಕೊಡುವುದಿದ್ದರೆ ಹೆಗೆಲ್‌ನ ಬರೆಹಗಳನ್ನೂ...
27/07/2023

“ಕಾಂಟ್‌ನ Critique of Pure Reason ಹಾಗೂ ಕುರಾನ್ ಅನ್ನು ನನಗೆ ಕಳುಹಿಸಿಕೊಡು, ರಹಸ್ಯವಾಗಿ ಕಳುಹಿಸಿ ಕೊಡುವುದಿದ್ದರೆ ಹೆಗೆಲ್‌ನ ಬರೆಹಗಳನ್ನೂ ಕಳುಹಿಸು, ಮುಖ್ಯವಾಗಿ ಹೆಗೆಲ್‌ನ History of Philosophy”. ಇದು ಫೆಬ್ರವರಿ 22, 1854 ರಂದು ಸೆರೆಮನೆಯಿಂದ ಬಿಡುಗಡೆಯಾದ ಒಂದು ವಾರದ ನಂತರ ದಸ್ತೋವ್ಸ್ಕಿ ತನ್ನ ಸಹೋದರ ಮಿಖಾಯಿಲ್‌ಗೆ ಓಮ್ಸ್ಕ್‌ನಿಂದ ಬರೆದ ಪತ್ರದ ಒಂದು ಭಾಗ. ಒಂದು ವರ್ಷದ ಬಳಿಕ, ಅದುವರೆಗೂ ಬರೆಯಲ್ಪಟ್ಟಿರದ ಸೈಬೀರಿಯಾದ ಖೈದಿಗಳ ದುರಂತಾವಸ್ಥೆ ಬಗ್ಗೆ Memoirs from the House of the Dead ಅನ್ನು ದಸ್ತೋವ್ಸ್ಕಿ ಬರೆಯುತ್ತಾರೆ. “ನಾನು ಓರ್ವ ಯುವ cherkess ಗೆ (cherkess ರಷ್ಯನ್‌ ರಿಪಬ್ಲಿಕ್‌ನ ಒಂದು ಪ್ರದೇಶ) ರಷ್ಯನ್‌ ಓದಲು ಕಲಿಸುತ್ತಿದ್ದೆ. ಎಂತಹಾ ಅದ್ಭುತ ವ್ಯಕ್ತಿ ಆತ” ಎಂದು ಅದರಲ್ಲಿ ಅಲಿ ಎಂಬ ಟಾಟರ್ ಮೂಲದ ಖೈದಿಯೊಂದಿಗಿನ ಮುಖಾಮುಖಿಯನ್ನು ದಸ್ತೋವ್ಸ್ಕಿ ವಿವರಿಸುತ್ತಾರೆ.

“ಕಾಂಟ್‌ನ Critique of Pure Reason ಹಾಗೂ ಕುರಾನ್ ಅನ್ನು ನನಗೆ ಕಳುಹಿಸಿಕೊಡು, ರಹಸ್ಯವಾಗಿ ಕಳುಹಿಸಿ ಕೊಡುವುದಿದ್ದರೆ ಹೆಗೆಲ್‌ನ ಬರೆಹಗಳನ್ನೂ ಕಳು...

ಪ್ರವಾದಿ ಪೈಗಂಬರರ ಕಾಲದಲ್ಲಿಯೇ ಇಸ್ಲಾಂ ಸ್ವೀಕರಿಸಿದವರ ಉತ್ತರಾಧಿಕಾರಿಗಳೆಂದೂ ಭಾರತೀಯ ಮುಸಲ್ಮಾನರ ಪೈಕಿ ಪುರಾತನ ಸಮುದಾಯ ನಾವಾಗಿದ್ದೇವೆಯೆಂದೂ ...
18/07/2023

ಪ್ರವಾದಿ ಪೈಗಂಬರರ ಕಾಲದಲ್ಲಿಯೇ ಇಸ್ಲಾಂ ಸ್ವೀಕರಿಸಿದವರ ಉತ್ತರಾಧಿಕಾರಿಗಳೆಂದೂ ಭಾರತೀಯ ಮುಸಲ್ಮಾನರ ಪೈಕಿ ಪುರಾತನ ಸಮುದಾಯ ನಾವಾಗಿದ್ದೇವೆಯೆಂದೂ ದಕ್ಷಿಣ ಭಾರತದ ಮುಸ್ಲಿಮರು ಹೆಮ್ಮೆಪಟ್ಟುಕೊಳ್ಳುತ್ತಾರೆ. ತಮಿಳುನಾಡಿನ ಬಹುಪಾಲು ಮುಸಲ್ಮಾನರು ಅರಬಿ, ಪರ್ಷಿಯನ್ ಮತ್ತು ಸಂಸ್ಕೃತ ಪದಗಳನ್ನೊಳಗೊಂಡ ತಮಿಳು ಭಾಷೆಯನ್ನು ಅವಲಂಬಿಸುವರಾಗಿದ್ದಾರೆ. ತಮಿಳು ಸಾಹಿತ್ಯದ ಭಾಗವಾಗಿ ಧಾರ್ಮಿಕ, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮುಸ್ಲಿಂ ಸಾಹಿತಿಗಳ ಬಹು ದೊಡ್ಡ ದಂಡೇ ಇದೆ. ತಮಿಳು ಭಾಷೆಯ ಉನ್ನತ ವಿದ್ವಾಂಸರ ಪಟ್ಟಿಯಲ್ಲಿ ಮುಸ್ಲಿಮರಾದ ಪುರುಷರ ಮತ್ತು ಸ್ತ್ರೀಗಳ ಹೆಸರುಗಳೂ ಇವೆ. 17ನೇ ಶತಮಾನದಲ್ಲಿ ಕಾಂಬನ್ (ಕಂಬ ರಾಮಾಯಣ) ಎಂಬ ಕವಿ ರಚಿಸಿದ ತಮಿಳು ರಾಮಾಯಣಕ್ಕೆ ಮದ್ರಾಸ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರೂ, ಪ್ರಖ್ಯಾತ ತಮಿಳು ರಾಮಾಯಣ ವಿದ್ವಾಂಸರೂ ಆಗಿದ್ದ ಎಂ.ಎಂ ಇಸ್ಮಾಯಿಲ್ 40 ವ್ಯಾಖ್ಯಾನ ಗ್ರಂಥಗಳನ್ನು ಬರೆದಿರುವುದು ಇದಕ್ಕೊಂದು ನಿದರ್ಶನವೆನ್ನಬಹುದು.

” ಭಾರತ ನಮ್ಮ ರಾಷ್ಟ್ರಇಸ್ಲಾಂ ನಮ್ಮ ಜೀವನಮಾರ್ಗ ಮತ್ತುತಮಿಳು ನಮ್ಮ ಭಾಷೆಯೂ ಆಗಿದೆ “

ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನ ಬಳಿ ಸುಂದರವಾದ ಒಂದು ಗಿಳಿಯಿತ್ತು. ಅದು ಮಾತನಾಡುತ್ತಾ, ಹಾಡುತ್ತಾ ವ್ಯಾಪಾರಿಗೂ, ಗ್ರಾಹಕರ...
07/07/2023

ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನ ಬಳಿ ಸುಂದರವಾದ ಒಂದು ಗಿಳಿಯಿತ್ತು. ಅದು ಮಾತನಾಡುತ್ತಾ, ಹಾಡುತ್ತಾ ವ್ಯಾಪಾರಿಗೂ, ಗ್ರಾಹಕರಿಗೂ ಮನರಂಜನೆ ನೀಡುತ್ತಿತ್ತು. ಸುತ್ತಮುತ್ತಲ ಊರುಗಳಿಂದ ಜನರು ಆ ಗಿಳಿಯ ಹಾಡು, ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಆ ಅಂಗಡಿಗೆ ಬರುತ್ತಿದ್ದರು. ಅಷ್ಟರಮಟ್ಟಿಗೆ ಆ ಗಿಳಿ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇದರಿಂದ ಆ ವ್ಯಾಪಾರಿಗೆ ಭರ್ಜರಿ ವ್ಯಾಪಾರವೂ ಆಗುತ್ತಿತ್ತು.

ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನ ಬಳಿ ಸುಂದರವಾದ ಒಂದು ಗಿಳಿಯಿತ್ತು. ಅದು ಮಾತನಾಡುತ್ತಾ, ಹಾಡುತ್ತಾ ವ್ಯಾಪಾರಿಗ...

ಜಗತ್ತನ್ನೇ ಕಾಡಿದ, ಕಾಡುತ್ತಿರುವ ಸೂಫಿ ಕವಿ ರೂಮಿ. ಆದರೆ, ರೂಮಿಯನ್ನು ಕಾಡಿದ, ಚಿಂತನೆಗೆ ಹಚ್ಚಿದ, ಆಳವಾದ ತರ್ಕಕ್ಕೆ ಒಡ್ಡಿದ ಕಥೆಗಳು ಅಪಾರ. ಮ...
05/07/2023

ಜಗತ್ತನ್ನೇ ಕಾಡಿದ, ಕಾಡುತ್ತಿರುವ ಸೂಫಿ ಕವಿ ರೂಮಿ. ಆದರೆ, ರೂಮಿಯನ್ನು ಕಾಡಿದ, ಚಿಂತನೆಗೆ ಹಚ್ಚಿದ, ಆಳವಾದ ತರ್ಕಕ್ಕೆ ಒಡ್ಡಿದ ಕಥೆಗಳು ಅಪಾರ. ಮಸ್ನವಿಯ ತುಂಬಾ ಇಂಥ ನೂರಾರು ಕಥೆಗಳು ಸಿಗುತ್ತವೆ. ರೂಮಿಯ ಆಧ್ಯಾತ್ಮ ಎಲ್ಲರಿಗೂ ತಿಳಿದದ್ದೇ. ರೂಮಿ ತನ್ನ ಆಧ್ಯಾತ್ಮವನ್ನು ಕವಿತೆಗಳ ಮೂಲಕ ಹೇಗೋ ಕಥೆಗಳ ಮೂಲಕವೂ ಹೇಳುತ್ತಾರೆ. ಬದುಕಿನ ನಶ್ವರತೆ, ನಿರರ್ಥಕತೆ, ದೈವಿಕ ಪ್ರೇಮ, ಒಬ್ಬ ಮನುಷ್ಯನಲ್ಲಿ ಅನಿವಾರ್ಯವಾಗಿ ಇರಬೇಕಾದ ಪ್ರಾಮಾಣಿಕತೆಯನ್ನು ರೂಮಿ ತಮ್ಮದೇ ಶೈಲಿಯಲ್ಲಿ, ತೀರಾ ಸಾಮಾನ್ಯ ಅನಿಸುವ, ಆದರೆ, ಗಾಢವಾದ ಒಳಾರ್ಥಗಳಿರುವ ಕಥೆಗಳ ಮೂಲಕ ಹೇಳುತ್ತಾರೆ. ರೂಮಿಯ ಅಂತಹ ನೂರರಷ್ಟು ಕಥೆಗಳನ್ನು ಸ್ವಾಲಿಹ್ ತೋಡಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ಒಂದಿಷ್ಟು ಕಥೆಗಳು ಇನ್ನೊಂದಿಷ್ಟು ವಾರಗಳ ಕಾಲ ತಿಜೋರಿ ಯಲ್ಲಿ ಪ್ರಕಟಗೊಳ್ಳಲಿದೆ. ಶೀಘ್ರದಲ್ಲೇ ಪುಸ್ತಕ ರೂಪದಲ್ಲೂ ಪ್ರಕಟವಾಗುತ್ತದೆ.

ಓದಿರಿ.

ತಮ್ಮ ಸ್ವಂತ ಬದುಕಿನ ಬಗ್ಗೆ ನಿರ್ಧಾರ ಮಾಡುವ ಆಯ್ಕೆ ಹೊಂದಿರುವ ಮುಸ್ಲಿಂ ಮಹಿಳೆಯರನ್ನು ಸಾಮಾನ್ಯವಾಗಿ ಪಿತೃಪ್ರಭುತ್ವದ ಸಂತ್ರಸ್ತರು ಎಂದು ಒತ್ತು...
04/07/2023

ತಮ್ಮ ಸ್ವಂತ ಬದುಕಿನ ಬಗ್ಗೆ ನಿರ್ಧಾರ ಮಾಡುವ ಆಯ್ಕೆ ಹೊಂದಿರುವ ಮುಸ್ಲಿಂ ಮಹಿಳೆಯರನ್ನು ಸಾಮಾನ್ಯವಾಗಿ ಪಿತೃಪ್ರಭುತ್ವದ ಸಂತ್ರಸ್ತರು ಎಂದು ಒತ್ತು ಕೊಟ್ಟು ನೋಡುವ ದೃಷ್ಟಿಕೋನದಿಂದ ಅಪಾಯಕಾರಿ ದುಷ್ಪರಿಣಾಮಗಳಿವೆ. ಇಂಗ್ಲಿಷ್ ಆಂಡ್ ಫಾರಿನ್ ಲ್ಯಾಂಗ್ವೇಜ್ ವಿವಿಯ ಪ್ರಾಧ್ಯಾಪಕಿ ಕೂಡಾ ಆಗಿರುವ ಲೇಖಕಿ ಡಾ ಬಿ ಎಸ್ ಶೆರಿನ್ ಅವರ ಇತ್ತೀಚಿನ 'Gendering Minorities: Muslim Women And Politics of Modernity' ಎಂಬ ಕೃತಿ ಮಹಿಳೆಯೋರ್ವಳು ನಂಬಿಕೆ ಮತ್ತು ಸ್ತ್ರೀವಾದಿ ಅಸ್ಮಿತೆಯ ಪೈಕಿ ಯಾವುದಾದರೊಂದನ್ನು ಆಯ್ಕೆ ಮಾಡಿಯೇ ತೀರಬೇಕೆಂದು ಹೇರುವ ಉದಾರವಾದಿಗಳ ನಿಲುವನ್ನು ತರಾಟೆಗೆ ತೆಗೆದುಕೊಂಡಿದೆ. ಆಧುನಿಕತಾವಾದ ಮತ್ತು ರಿಲಿಜನ್ ನಡುವೆ ಇದೆ ಎನ್ನಲಾಗುವ ಬೈನರಿಯನ್ನು ಆಧರಿಸಿಕೊಂಡು ಹೇಗೆ ಇಂತಹ ಹುಸಿ ದ್ವಂದ್ವವನ್ನು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ವಿವರಿಸಿದೆ.

ತಮ್ಮ ಸ್ವಂತ ಬದುಕಿನ ಬಗ್ಗೆ ನಿರ್ಧಾರ ಮಾಡುವ ಆಯ್ಕೆ ಹೊಂದಿರುವ ಮುಸ್ಲಿಂ ಮಹಿಳೆಯರನ್ನು ಸಾಮಾನ್ಯವಾಗಿ ಪಿತೃಪ್ರಭುತ್ವದ ಸಂತ್ರಸ್ತರ...

ಹಜ್ರತ್‌ ಖಾಝಿ ಮಹಮೂದ್‌ ಬಹರಿ ಅವರು ಆದಿಲ್‌ ಶಾಹಿ ಕಾಲದ ಖ್ಯಾತ ಸೂಫಿ ತತ್ವ ಚಿಂತಕರಾಗಿದ್ದು, ತಮ್ಮ ಕವಿತೆ, ಕೃತಿಗಳಿಂದ ಖ್ಯಾತಿ ಪಡೆದವರು. 17 ...
31/05/2023

ಹಜ್ರತ್‌ ಖಾಝಿ ಮಹಮೂದ್‌ ಬಹರಿ ಅವರು ಆದಿಲ್‌ ಶಾಹಿ ಕಾಲದ ಖ್ಯಾತ ಸೂಫಿ ತತ್ವ ಚಿಂತಕರಾಗಿದ್ದು, ತಮ್ಮ ಕವಿತೆ, ಕೃತಿಗಳಿಂದ ಖ್ಯಾತಿ ಪಡೆದವರು. 17 ನೇ ಶತಮಾನದ ಕರ್ನಾಟಕದ ರಾಜಕೀಯ ಅಸ್ಥಿರತೆಯ ಕಾಲದಲ್ಲೇ ಬಹರಿ ತಮ್ಮ ಆಧ್ಯಾತ್ಮಿಕತೆಯ ಪ್ರವರ್ಧಮಾನಕ್ಕೆ ತಲುಪಿದರು. ಸುಲ್ತಾನ್ ಸಿಕಂದರ್ ಕಾಲದಲ್ಲಿ ಆದಿಲ್‌ ಷಾಹಿ ಸಾಮ್ರಾಜ್ಯದ ರಾಜಧಾನಿ ಬಿಜಾಪುರದಲ್ಲಿ ನೆಲೆಸಿದ್ದ ಬಹರಿ ಅವರು, 1686 ರಲ್ಲಿ ಔರಂಗಝೇಬ್‌ ಕೈಯಲ್ಲಿ ಆದಿಲ್‌ ಶಾಹಿ ವಂಶ ಪತನವಾದ ಬಳಿಕ ಹೈದರಾಬಾದ್‌ ಗೆ ವಲಸೆ ಹೋದರು. ರಾಜಕೀಯ ಅಸ್ಥಿರತೆ, ವಲಸೆ, ಆಂತರಿಕ ಸಂಘರ್ಷಗಳ್ಯಾವುದೂ ಬಹರಿ ಅವರ ಆಧ್ಯಾತ್ಮಿಕ ಯಾತ್ರೆಗೆ ತಡೆಯಾಗುವುದಿಲ್ಲ, ಇದೇ ಅವಧೀಯಲ್ಲಿ ಅವರು ಮನ್‌ ಲಗಾನ್‌ ಅಥವಾ ಉರುಸ್‌ ಎ ಇರ್ಫಾನ್‌ ಕೃತಿಯನ್ನು ರಚಿಸುತ್ತಾರೆ.

ಹಜ್ರತ್‌ ಖಾಝಿ ಮಹಮೂದ್‌ ಬಹರಿ ಅವರು ಆದಿಲ್‌ ಶಾಹಿ ಕಾಲದ ಖ್ಯಾತ ಸೂಫಿ ತತ್ವ ಚಿಂತಕರಾಗಿದ್ದು, ತಮ್ಮ ಕವಿತೆ, ಕೃತಿಗಳಿಂದ ಖ್ಯಾತಿ ಪಡೆದ...

ಭಾರತದಲ್ಲಿರುವ ಕೆಲವೇ ಕೆಲವು ಸಯನ್ಸ್‌ ಆಂಡ್‌ ಟೆಕ್ನೋಲಜಿ ಸ್ಟಡೀಸ್‌ (STS) ಸಂಶೋಧಕರಲ್ಲಿ ರೆನಿ ಥೋಮಸ್‌ ಕೂಡಾ ಒಬ್ಬರು. ಅವರು ಸದ್ಯ ಭೋಪಾಲದ II...
04/03/2023

ಭಾರತದಲ್ಲಿರುವ ಕೆಲವೇ ಕೆಲವು ಸಯನ್ಸ್‌ ಆಂಡ್‌ ಟೆಕ್ನೋಲಜಿ ಸ್ಟಡೀಸ್‌ (STS) ಸಂಶೋಧಕರಲ್ಲಿ ರೆನಿ ಥೋಮಸ್‌ ಕೂಡಾ ಒಬ್ಬರು. ಅವರು ಸದ್ಯ ಭೋಪಾಲದ IISER ಸಂಸ್ಥೆಯಲ್ಲಿ ಸಾಮಾಜಿಕ ಮಾನವ ಶಾಸ್ತ್ರ (social anthropology) ವಿಭಾಗದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊರಬಂದಿರುವ ಅವರ 'Beyond Disenchantment: Science and Religion in India' ಕೃತಿ ಜಗತ್ತಿನ ವಿವಿಧ ಕಡೆಯ ವಿದ್ವಾಂಸರ ಗಮನ ಸೆಳೆದಿದೆ. ಭಾರತದ ಬಗೆಗಿನ ವಿಶಿಷ್ಟವಾದ ಮಾನವ ಶಾಸ್ತ್ರೀಯ ಒಳನೋಟವನ್ನು ನೀಡುವ ಈ ಕೃತಿ ವಿಜ್ಞಾನಿಗಳ ಮತ್ತು ವೈಜ್ಞಾನಿಕ ಸಂಸ್ಥೆಗಳ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿ. ವಿಜ್ಞಾನಿಗಳ ಮತ್ತು ವೈಜ್ಞಾನಿಕ ಸಂಸ್ಥೆಗಳ ಭಾಗವಾಗಿದ್ದುಕೊಂಡು ವೀಕ್ಷಿಸುವ ಮೂಲಕ ನಡೆಸಲಾದ ಜನಾಂಗಶಾಸ್ತ್ರೀಯ (ethnography) ವಿಧಾನದ ಅಧ್ಯಯನ ಇದಾಗಿದ್ದು ಅಕಾಡೆಮಿಕ್‌ ವಲಯದಲ್ಲಿ ಬಹಳ ಮೆಚ್ಚುಗೆ ಪಡೆದುಕೊಂಡಿದೆ. ಈ ಸಂದರ್ಶನದಲ್ಲಿ ಥೋಮಸ್‌ರವರೊಂದಿಗೆ ಕೃತಿಯ ಬಗ್ಗೆ ಮತ್ತು ಕೃತಿ ಎತ್ತುವ ಮುಖ್ಯ ಪ್ರಶ್ನೆಗಳ ಬಗ್ಗೆ ಐಐಟಿ ಗಾಂಧಿನಗರ ಮಾನವಿಕ ಹಾಗೂ ಸಮಾಜವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಸರ್ಫರಾಜ್ ಇ. ಪಿ. ಮತ್ತು ಅನೀಸ್ ಕೆ. ಮಾತಾಡಿದ್ದಾರೆ.

ಭಾರತದಲ್ಲಿರುವ ಕೆಲವೇ ಕೆಲವು ಸಯನ್ಸ್‌ ಆಂಡ್‌ ಟೆಕ್ನೋಲಜಿ ಸ್ಟಡೀಸ್‌ (STS) ಸಂಶೋಧಕರಲ್ಲಿ ರೆನಿ ಥೋಮಸ್‌ ಕೂಡಾ ಒಬ್ಬರು. ಅವರು ಸದ್ಯ ಭೋಪ...

ಡಾ.ಮಹೇಶ್‌ ಕುಮಾರ್ ಅವರು ‘ಈಶ್ವರ್ ಅಲ್ಲಾ ತೇರೋ ನಾಮ್’ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. (ಪ್ರಕಾಶಕರು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು,...
01/03/2023

ಡಾ.ಮಹೇಶ್‌ ಕುಮಾರ್ ಅವರು ‘ಈಶ್ವರ್ ಅಲ್ಲಾ ತೇರೋ ನಾಮ್’ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. (ಪ್ರಕಾಶಕರು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು, ೨೦೧೪.) ಇದು ಬಾಬಾ ಬುಡನ್‌ ಗಿರಿ ದರ್ಗಾದ ವಿವಾದ ಮತ್ತು ದರ್ಗಾ ಸಂಪ್ರದಾಯಗಳು ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ. ಲೇಖಕರು ಈ ಪುಸ್ತಕಕ್ಕೆ ಮೇಲಿನ ಉಪಶಿರ್ಷಿಕೆಯನ್ನು ನೀಡಿರುವುದರಿಂದ ಈ ಅಧ್ಯಯನದ ವಸ್ತುವಿನ ಬಗೆಗೂ ಮೇಲ್ನೊಟಕ್ಕೆ ಒಂದು ಗ್ರಹಿಕೆ ನಮ್ಮಲ್ಲುಂಟಾಗುತ್ತದೆ. ಹೌದು, ಈ ಅಧ್ಯಯನವು ಬಾಬಾಬುಡನ್ ಗಿರಿ ದರ್ಗಾದ ಸುತ್ತಮುತ್ತ ೧೯೭೫ರಿಂದ ಇಲ್ಲಿಯವರೆಗೆ ಅಂದರೆ ಸುಮಾರು ೪೦ ವರ್ಷಗಳ ತನಕ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದ ಅಧ್ಯಯನವಾಗಿರುವುದರಿಂದ ಸಹಜವಾಗಿಯೇ ನಮಗೆ ಕುತೂಹಲವನ್ನು ಉಂಟುಮಾಡುತ್ತದೆ.!

ಡಾ.ಮಹೇಶ್‌ ಕುಮಾರ್ ಅವರು ‘ಈಶ್ವರ್ ಅಲ್ಲಾ ತೇರೋ ನಾಮ್’ ಹೆಸರಿನ ಪುಸ್ತಕವನ್ನು ಪ್ರಕಟಿಸಿದ್ದಾರೆ. (ಪ್ರಕಾಶಕರು ಪ್ರಗತಿ ಗ್ರಾಫಿಕ್ಸ್...

ಜ್ಞಾನದ ಪೂರ್ವಾಧುನಿಕ ಇತಿಹಾಸದಲ್ಲಿ ಆಧುನಿಕ ಜ್ಞಾನಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅನೇಕ ಅರಿವಿನ ಮೂಲಗಳು ಮತ್ತು ಸೈದ್ಧಾಂತಿಕ ವಿಧಾನಗಳು ...
23/02/2023

ಜ್ಞಾನದ ಪೂರ್ವಾಧುನಿಕ ಇತಿಹಾಸದಲ್ಲಿ ಆಧುನಿಕ ಜ್ಞಾನಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅನೇಕ ಅರಿವಿನ ಮೂಲಗಳು ಮತ್ತು ಸೈದ್ಧಾಂತಿಕ ವಿಧಾನಗಳು ಇದ್ದವು. ವಿಜ್ಞಾನ ಮತ್ತು ಜ್ಞಾನ ಸಂಪ್ರದಾಯಗಳನ್ನು ವಿರೋಧಿಸಿದ ಯುರೋಪ್ ಇತಿಹಾಸದ ಕರಾಳ ಕಾಲದಲ್ಲಿ, ಇಸ್ಲಾಮಿಕ್ ಜಗತ್ತಿನಲ್ಲಿ ಬೆಳೆದು ಬಂದ ಚಿಂತನೆಗಳು ನಂತರದ ದಿನಗಳಲ್ಲಿ ಮಾನವತಾವಾದ ಮತ್ತು ಇತಿಹಾಸಕ್ಕೆ ಹೊಸ ದಿಕ್ಕನ್ನು ನೀಡಿತು. ಆದರೆ ಆಧುನಿಕತೆಯು ಈ ಜ್ಞಾನ ಪರಂಪರೆಗಳನ್ನು ಮತ್ತು ಅದರ ಇತಿಹಾಸವನ್ನೇ ತಿರಸ್ಕರಿಸಿ, ಹತ್ತಿಕ್ಕುವ ಮೂಲಕ ತನ್ನ ಪಾರಮ್ಯವನ್ನು ಪ್ರತಿಪಾದಿಸಿತು. ಆಧುನಿಕತೆಯ ಈ ಪ್ರವೃತ್ತಿಯನ್ನು ಇಂದು ನಿಖರವಾಗಿ ಗ್ರಹಿಸಬಹುದಾಗಿದೆ. ಈ ಸಾಕ್ಷಾತ್ಕಾರವನ್ನು ತಿಳಿಸುವ ಮತ್ತು ಜ್ಞಾನದ ಇತಿಹಾಸದ ನೈಜ ಬೆಳವಣಿಗೆಯ ಸಾಮಾನ್ಯ ಪರಿಚಯವನ್ನು ಒದಗಿಸುವ ಸಣ್ಣ ಪ್ರಯತ್ನ ಇಲ್ಲಿದೆ.

ಜ್ಞಾನದ ಪೂರ್ವಾಧುನಿಕ ಇತಿಹಾಸದಲ್ಲಿ ಆಧುನಿಕ ಜ್ಞಾನಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅನೇಕ ಅರಿವಿನ ಮೂಲಗಳು ಮತ್ತು ಸೈದ್ಧಾಂ....

“ದೆಹಲಿಯ ಸುಡು ಬಿಸಿಲಿನಲ್ಲಿ, ಹೇಗಾದರೂ ರೂಮನ್ನು ತಲುಪಿ ಬಿಡುವ ತರಾತುರಿಯಲ್ಲಿ ನಾನಿದ್ದೆ. ಹಳೆಯ ಟ್ಯಾಕ್ಸಿಯೊಂದರಲ್ಲಿ ಮಡದಿ ಮತ್ತು ಮಗು ನನ್ನ ...
16/02/2023

“ದೆಹಲಿಯ ಸುಡು ಬಿಸಿಲಿನಲ್ಲಿ, ಹೇಗಾದರೂ ರೂಮನ್ನು ತಲುಪಿ ಬಿಡುವ ತರಾತುರಿಯಲ್ಲಿ ನಾನಿದ್ದೆ. ಹಳೆಯ ಟ್ಯಾಕ್ಸಿಯೊಂದರಲ್ಲಿ ಮಡದಿ ಮತ್ತು ಮಗು ನನ್ನ ಜೊತೆಗಿದ್ದರು. ಟ್ಯಾಕ್ಸಿಯು ಗಲ್ಲಿಯೊಂದರ ಸವೆದ ರಸ್ತೆಯ ಮೂಲಕ ಮುಂದೆ ಸಾಗುತ್ತಿತ್ತು. ನಗರದ ತಾಪಮಾನ ನೂರರ ಗಡಿ ದಾಟಿದಂತಿತ್ತು. ಜನನಿಬಿಡವಾಗಿದ್ದ ಹಾದಿಯು ಧೂಳು ಮತ್ತು ಹೊಗೆಯಿಂದ ಆವೃತವಾಗಿತ್ತು. ರಸ್ತೆ ಇಕ್ಕೆಲಗಳಲ್ಲಿಯೂ ಊಟ ಮಾಡುವವರು, ಬಟ್ಟೆ ಒಗೆಯುವವರು, ನಿದ್ದೆಗೆ ಜಾರಿದವರು ಪಯಣಿಗರು ಹೀಗೆ ವಿವಿಧ ತೆರನಾದ ಜನರನ್ನು ಕಾಣಬಹುದಿತ್ತು. ಆ ಮಧ್ಯೆ ಭಿಕ್ಷುಕನೊಬ್ಬ ನಮ್ಮೆಡೆಗೆ ಕೈ ಚಾಚಿದನು

“ದೆಹಲಿಯ ಸುಡು ಬಿಸಿಲಿನಲ್ಲಿ, ಹೇಗಾದರೂ ರೂಮನ್ನು ತಲುಪಿ ಬಿಡುವ ತರಾತುರಿಯಲ್ಲಿ ನಾನಿದ್ದೆ. ಹಳೆಯ ಟ್ಯಾಕ್ಸಿಯೊಂದರಲ್ಲಿ ಮಡದಿ ಮತ್ತ....

ಉಝ್ಬೇಕಿನತ್ತ ಯಾತ್ರೆ ಬೆಳಸಬೇಕೆಂಬ ಬಯಕೆ ಬಹುದಿನಗಳಿಂದಲೇ ಮನಸ್ಸಿನಲ್ಲಿತ್ತು. ಅಲ್ಲಿನ ಆರ್ಟ್, ಆರ್ಕಿಟೆಕ್ಚರ್ ಮತ್ತು ಆಧ್ಯಾತ್ಮಿಕತೆಯನ್ನು ಗ್ರ...
07/02/2023

ಉಝ್ಬೇಕಿನತ್ತ ಯಾತ್ರೆ ಬೆಳಸಬೇಕೆಂಬ ಬಯಕೆ ಬಹುದಿನಗಳಿಂದಲೇ ಮನಸ್ಸಿನಲ್ಲಿತ್ತು. ಅಲ್ಲಿನ ಆರ್ಟ್, ಆರ್ಕಿಟೆಕ್ಚರ್ ಮತ್ತು ಆಧ್ಯಾತ್ಮಿಕತೆಯನ್ನು ಗ್ರಹಿಸುವುದು ನನ್ನ ಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು. ಹೀಗಿರುವಾಗ ತುರ್ಕಿ ಕೇಂದ್ರವಾಗಿ ಕಾರ್ಯಾಚರಿಸುವ 'ದೀನ್ ಫೌಂಡೇಶನ್' ಉಝ್ಬೇಕಿನಲ್ಲಿ ಜ್ಯಾಮೆಟ್ರಿ ಪ್ಯಾಟೇನ್ ವರ್ಕ್ ಶಾಪ್ ನಡೆಸುವ ವಿಷಯ ತಿಳಿದಾಗ, ದೀನ್ ಫೌಂಡೇಷನ್ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಸುವ ಕಾರ್ಯಚಟುವಟಿಕೆಗಳ ಕುರಿತು ನನಗೆ ಮೊದಲೇ ತಿಳಿದಿದ್ದ ಕಾರಣ ಕಾರ್ಯಕ್ರಮಕ್ಕೆ ನನ್ನ ಹೆಸರನ್ನು ನೊಂದಾಯಿಸಿದೆ. ಪ್ರಮುಖ ಆರ್ಟಿಸ್ಟ್ ಗಳಾದ ಫ್ರಾನ್ಸಿನ ಜೀನ್ ಮಾರ್ಕೆಸ್ ಮತ್ತು ತುರ್ಕಿಯ ಸರಾಪ್ಪಿ ಎಕ್ಸಿಲರ್ ಆಗಿದ್ದರು ಈ ಕಾರ್ಯಕ್ರಮದ ಆಯೋಜಕರು. ಜಗತ್ತಿನ ಪ್ರಮುಖ ಆರ್ಟಿಸ್ಟ್ ಗಳೊಂದಿಗೆ ಕ್ಯಾಲಿಗ್ರಫಿಯಿಂದ ಸಂಪನ್ನವಾದ ಭೂಮಿಯಲ್ಲಿ ಯಾತ್ರೆ ಮಾಡುವುದು ನನ್ನ ಯಾತ್ರೆಗೆ ಇನ್ನಷ್ಟು ಹುರುಪನ್ನು ನೀಡಿತು.

ಉಝ್ಬೇಕಿನತ್ತ ಯಾತ್ರೆ ಬೆಳಸಬೇಕೆಂಬ ಬಯಕೆ ಬಹುದಿನಗಳಿಂದಲೇ ಮನಸ್ಸಿನಲ್ಲಿತ್ತು. ಅಲ್ಲಿನ ಆರ್ಟ್, ಆರ್ಕಿಟೆಕ್ಚರ್ ಮತ್ತು ಆಧ್ಯಾತ್ಮಿ...

16ನೇ ಶತಮಾನದ ಪ್ರಾರಂಭದಿಂದ 19ನೇ ಶತಮಾನದ ಪೂರ್ವಾರ್ಧದ ತನಕ ಅಟೋಮನ್ ಸಾಹಿತ್ಯಗಳ ಪೈಕಿ ಕ್ಲಾಸಿಕಲ್ ಕಾವ್ಯ ಪರಂಪರೆಯಾದ 'ದಿವಾನ್ ಸಾಹಿತ್ಯ'ವು ತನ...
02/02/2023

16ನೇ ಶತಮಾನದ ಪ್ರಾರಂಭದಿಂದ 19ನೇ ಶತಮಾನದ ಪೂರ್ವಾರ್ಧದ ತನಕ ಅಟೋಮನ್ ಸಾಹಿತ್ಯಗಳ ಪೈಕಿ ಕ್ಲಾಸಿಕಲ್ ಕಾವ್ಯ ಪರಂಪರೆಯಾದ 'ದಿವಾನ್ ಸಾಹಿತ್ಯ'ವು ತನ್ನ ಉತ್ತುಂಗತೆಯನ್ನು ತಲುಪಿತ್ತು. ಈ ಸುದೀರ್ಘ ಅವಧಿಯು ತನ್ನದೇ ಆದ ತತ್ವಗಳ ಆಧಾರದ ಮೇಲೆ ಸಾಂಪ್ರದಾಯಿಕ ರಚನೆಯನ್ನು ಹೊಂದಿದೆ. ಅರೇಬಿಯನ್ ಕಾವ್ಯ ರಚನಾ ಶಾಸ್ತ್ರ, ಮಳ್ಮೂನ್, ದ್ವೈಯಾರ್ಥವಿರುವ ಪದಗಳು ಮತ್ತು ಭಾವನೆಗಳು ಮುಂತಾದ ಪಾರಂಪರಿಕ ರೂಪಕಗಳು ಅಟೋಮನ್ ಕವಿಗಳ ಅವಲಂಬನೆಗಳಾಗಿದ್ದವು. ಕವಿಗಳನ್ನು ಪುನರಾವರ್ತನೆಯ ವಿಷವರ್ತುಲಕ್ಕೆ ತಳ್ಳುವ ಬದಲು, ಈ ಸ್ಥಿರವಾದ ವಸ್ತುಗಳು ಕವಿಗಳಿಗೆ ತಮ್ಮನ್ನು ವ್ಯಕ್ತಪಡಿಸಲು ಆಳವಾದ ಸಾಮರ್ಥ್ಯವನ್ನು ನೀಡಿತು. ಮತ್ತು ಸೃಜನಶೀಲ ಕವಿತೆಗಳ ಹುಟ್ಟಿಗೆ ಹೇತುವಾಯಿತು.

16ನೇ ಶತಮಾನದ ಪ್ರಾರಂಭದಿಂದ 19ನೇ ಶತಮಾನದ ಪೂರ್ವಾರ್ಧದ ತನಕ ಅಟೋಮನ್ ಸಾಹಿತ್ಯಗಳ ಪೈಕಿ ಕ್ಲಾಸಿಕಲ್ ಕಾವ್ಯ ಪರಂಪರೆಯಾದ ‘ದಿವಾನ್ ಸಾಹಿತ...

ಆಧುನಿಕ ಕಾಲದ ವೈದ್ಯಕೀಯ ಪದ್ಧತಿ, ರೀತಿ ರಿವಾಜುಗಳು ಪ್ರಾಚೀನ ಗ್ರೀಕ್, ಬ್ಯಾಬಿಲೋನಿಯ, ರೋಮನ್ ಹಾಗೂ ಸಿಂಧೂ ನಾಗರಿಕತೆಗಳಿಂದ ಪ್ರೇರಣೆಗೊಂಡು ರೂಪ...
30/01/2023

ಆಧುನಿಕ ಕಾಲದ ವೈದ್ಯಕೀಯ ಪದ್ಧತಿ, ರೀತಿ ರಿವಾಜುಗಳು ಪ್ರಾಚೀನ ಗ್ರೀಕ್, ಬ್ಯಾಬಿಲೋನಿಯ, ರೋಮನ್ ಹಾಗೂ ಸಿಂಧೂ ನಾಗರಿಕತೆಗಳಿಂದ ಪ್ರೇರಣೆಗೊಂಡು ರೂಪು ಪಡೆದಿದೆ. ಸಾಮಾಜಿಕ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸುವುದು ವೈದ್ಯಕೀಯ ಕೇಂದ್ರಗಳ ಕರ್ತವ್ಯವಾಗಿದೆ. ಮಧ್ಯಕಾಲೀನ ಇಸ್ಲಾಮಿಕ್ ಸಮಾಜದಲ್ಲಿ ವಿಕಸನಗೊಂಡ ಇಂತಹ ಕೇಂದ್ರಗಳು ಇಂದು ಆಧುನಿಕ ವೈದ್ಯಶಾಸ್ತ್ರದ ಸಂಪೂರ್ಣ ಬೆಳವಣಿಗೆಗಳ ಅಡಿಗಲ್ಲಾಗಿ ನಿಂತಿದೆ. ಪೂರ್ವ ಕಾಲದ ಆಡಳಿತಾಧಿಕಾರಿಗಳು, ವಿದ್ವಾಂಸರು ಹಾಗೂ ವೈದ್ಯರು ಅವರ ಪರಂಪರೆಯಲ್ಲಿ ಜನಜನಿತವಾದ ಪುರಾತನ ಸಂಶೋಧನೆಗಳು ಹಾಗೂ ಮಾಹಿತಿಗಳನ್ನು ಅನ್ವೇಷಿಸಿ ಒಟ್ಟುಗೂಡಿಸಿದರು.

ಆಧುನಿಕ ಕಾಲದ ವೈದ್ಯಕೀಯ ಪದ್ಧತಿ, ರೀತಿ ರಿವಾಜುಗಳು ಪ್ರಾಚೀನ ಗ್ರೀಕ್, ಬ್ಯಾಬಿಲೋನಿಯ, ರೋಮನ್ ಹಾಗೂ ಸಿಂಧೂ ನಾಗರಿಕತೆಗಳಿಂದ ಪ್ರೇರಣ.....

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ...
26/01/2023

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ ಅಮೆರಿಕಾಗೆ ಸಾಗಿಸುವ ಮೊದಲು ಒಂದು ಜಗತ್ತು ಇತ್ತು.
ಒಮರ್ ಬಿನ್ ಸೈದ್ ರಂಥಹ ಪಂಡಿತರು, ಇಬ್ರಾಹಿಂ ಸೋರಿ ಅವರಂತಹ ರಾಜಕುಮಾರರು ತಮ್ಮ ವಿಚಾರಗಳನ್ನು ತಮ್ಮದೇ ಭಾಷೆಗಳಲ್ಲಿ ಬರೆದು ತಮ್ಮ ಇತಿಹಾಸಗಳನ್ನು ಜಗತ್ತಿನ ಮುಂದೆ ಇರಿಸಿದ್ದರು. ಹನ್ನೊಂದನೇ ಶತಮಾನದ್ದು ಎಂದು ಹೇಳಲಾಗುವ ಅಂತಹ 40,000 ಕ್ಕೂ ಹೆಚ್ಚು ಬರುವ ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳನ್ನು ಸಾರ್ವಜನಿಕ ಡಿಜಿಟಲ್ ಪ್ರದರ್ಶನದ ಮೂಲಕ ಮೊದಲ ಬಾರಿಗೆ ಹೊರತರಲಾಯಿತು. ಕಪ್ಪು ಜನಾಂಗೀಯ ಮುಸ್ಲಿಂ ಪಾರಂಪರಿಕ ಆರ್ಕೈವ್ ಗಳಿಗೋಸ್ಕರ ದುಡಿಯುವ ನನ್ನಂತಹ ಕಲಾವಿದೆಗೆ ಇದೊಂದು ರೋಮಾಂಚನಕಾರಿ ಅನುಭವವಾಗಿದೆ.

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡ....

ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ 'ಸಫರ್' ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.'ಯಾತ್ರೆ' ಎಂಬುವುದನ್ನು ಸಾಮಾ...
23/01/2023

ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ 'ಸಫರ್' ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.'ಯಾತ್ರೆ' ಎಂಬುವುದನ್ನು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಲ್ಲಟಗೊಳ್ಳುವುದನ್ನು ಸೂಚಿಸಲಾಗಿ ಬಳಸಲಾದರೆ, ಸೂಫಿ ಪಂಥದಲ್ಲಿ ಪ್ರಸ್ತುತ ಪದವನ್ನು ವ್ಯಕ್ತಿಯಲ್ಲುಂಟಾದ ತಕ್ಷಣದ ಬದಲಾವಣೆ, ಬದುಕಿನ ಕ್ಷಣಿಕತೆ ಮತ್ತು ವಿಯೋಗ ಎಂಬ ನೆಲೆಗಟ್ಟಿನಲ್ಲಿ ರೂಪಕಗಳಾಗಿಯೂ ಬಳಸುವುದುಂಟು. ಈ ವಿಶಾಲಾರ್ಥದ ಸಾಂಕೇತಿಕ ಪದಪ್ರಯೋಗವು ಸೂಫಿಗಳಿಗೆ ಆತ್ಮಜ್ಞಾನದ ಹಾದಿಯಲ್ಲಿನ ವಿವಿಧ ಹಂತಗಳನ್ನು ಸೂಚಿಸಲು ಸಹಾಯವನ್ನು ಮಾಡಿತು.

ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ ‘ಸಫರ್’ ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.’ಯಾತ್ರೆ’ ಎಂಬು.....

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟುಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿದಖ್ಖನಿನ ವಲಿಯು ಕೈ ತುತ್ತು ತಿನ್ನಿಸಿದಸೌದಾ...
16/01/2023

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು
ಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿ

ದಖ್ಖನಿನ ವಲಿಯು ಕೈ ತುತ್ತು ತಿನ್ನಿಸಿದ
ಸೌದಾನ ಕವಿತೆಗಳು ಹೆಚ್ಚಿಸಿದೆ ಅಂದ
ಮೀರ್ ನ ಮಹಿಮೆ ನಡೆಯಲು ಕಲಿತೆ

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟುಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿ

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜೀಲ...
05/01/2023

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜೀಲಾನಿ) ಅವರು ಪರ್ಷಿಯಾದ ಗೀಲಾನ್ ಪ್ರಾಂತ್ಯದ ತಮ್ಮ ತವರೂರನ್ನು ತೊರೆದು ವಿದ್ಯಾರ್ಜನೆಗಾಗಿ ಬಗ್ದಾದ್ ಪಟ್ಟಣಕ್ಕೆ ತೆರಳಿದ್ದರು. ಶೈಖ್ ಗೀಲಾನಿ ಅವರು 'ಜಂಗಿದೋಸ್ತ್' ಎಂದು ನಾಮಾಂಕಿತರಾಗಿದ್ದ ಅಬೂ ಸ್ವಾಲಿಹ್ ಮೂಸ ಅಲ್ ಹಸನಿ ಎಂಬ ಸಾತ್ವಿಕ ವ್ಯಕ್ತಿಯ ಪುತ್ರ. ಗೀಲಾನಿ ಅವರ ತಾಯಿ ಬೀಬಿ ನಿಸಾ/ ಉಮ್ಮುಲ್ ಖೈರ್ ಫಾತಿಮ ಅವರು ಪ್ರವಾದಿ ಪರಂಪರೆಯಲ್ಲಿ ಜನಿಸಿದ ಸಾತ್ವಿಕ ವ್ಯಕ್ತಿಯಾಗಿದ್ದರು. ಸೆಲ್ಜುಕ್ ಸುಲ್ತಾನರ ಆಡಳಿತದ ಅವಧಿಯಲ್ಲಿ ಜ್ಞಾನದ ನಗರವಾಗಿದ್ದ ಬಗ್ದಾದ್ ಪಟ್ಟಣದಲ್ಲಿ ಶೈಖ್ ಗೀಲಾನಿ ಅವರು ತಂಗುತ್ತಾರೆ. ಅವರು 'ಖಾದಿರಿ' ಸೂಫಿ ತ್ವರೀಖತಿನ ಸ್ಥಾಪಕರು. ಇಂದಿಗೂ ಲಕ್ಷಾಂತರ ಮುಸ್ಲಿಮರು ಅವರನ್ನು ಸ್ಮರಿಸುತ್ತಲೇ ಇದ್ದಾರೆ.

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜ...

𝐌𝐨𝐬𝐭 𝐕𝐢𝐞𝐰𝐞𝐝 𝐀𝐫𝐭𝐢𝐜𝐥𝐞𝐬 𝐢𝐧 𝟐𝟎𝟐𝟐https://drive.google.com/file/d/1wsGXsiNmuqU8lXrcTVI21ZoG-5e5zlIH/view?usp=sharing📍ಅಲ್‌ ಬಿರೂ...
31/12/2022

𝐌𝐨𝐬𝐭 𝐕𝐢𝐞𝐰𝐞𝐝 𝐀𝐫𝐭𝐢𝐜𝐥𝐞𝐬 𝐢𝐧 𝟐𝟎𝟐𝟐

https://drive.google.com/file/d/1wsGXsiNmuqU8lXrcTVI21ZoG-5e5zlIH/view?usp=sharing

📍ಅಲ್‌ ಬಿರೂನಿ ಕಂಡ ಭಾರತ
https://thijori.in/india-as-seen-by-al-beruni/

📍ಮಕ್ಕಾದಿಂದ ಮಾಲ್ಕಂ ಎಕ್ಸ್‌ ಬರೆದ ಪತ್ರ
https://thijori.in/letter-of-malcolm-x-from-makkah/

📍ಮುಸ್ಲಿಮ್ ತತ್ವಜ್ಞಾನಿಗಳು
https://thijori.in/muslim-philosophers-ibnu-seena-1/

📍‘ಅರಬ್ಬಿ ಕಡಲಿನ ರಾಜಕುಮಾರಿʼ ಕೊಚ್ಚಿಯ ಸೂಫಿ ಜಾಡು
https://thijori.in/cochin-the-queen-of-arabian-sea/

📍ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು
https://thijori.in/the-forgotten-muslims-of-spain/

📍ಭಾರತದ ಇತಿಹಾಸವನ್ನು ರೂಪಿಸಿದ ಎರಡು ಭಾಷೆಗಳು
https://thijori.in/the-two-languages-that-shaped-the-history-of-india/

📍‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು
https://thijori.in/mesahirunnisa-famous-women-of-the-muslim-world/

📍ದಕ್ಷಿಣ ಭಾರತದ ಸೂಫಿ; ಖ್ವಾಜಾ ಬಂದೇ ನವಾಝ್
https://thijori.in/sufi-of-south-india-khwaja-bande-nawaz/

📍‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ
https://thijori.in/calendar-bawa-by-thoppil-mohamed-meeran/

📍ಮುಸ್ಲಿಮರ ಆರೋಗ್ಯ ಮತ್ತು ಇಸ್ಲಾಮೋಫೋಬಿಯಾ
https://thijori.in/effects-of-islamophobia-health-of-muslims/

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ್ಷಗಳು, ಪಂಥ...
31/12/2022

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ್ಷಗಳು, ಪಂಥೀಯತೆ, ಸಾಮಾಜಿಕ ಬದಲಾವಣೆ, ಆರ್ಥಿಕ ಸಮಸ್ಯೆಗಳು ರಾಜಕೀಯ ಬಿಕ್ಕಟ್ಟುಗಳನ್ನು ತಂದಿಟ್ಟಿದ್ದೇ ಅಲ್ಲದೆ ಮುಸ್ಲಿಂ ಜಗತ್ತಿನ ಬೌದ್ಧಿಕ ಹಾಗೂ ಆಧ್ಯಾತ್ಮಿಕ ವಿಕಾಸದ ಮೇಲೂ ವಿಪರೀತ ಪರಿಣಾಮವನ್ನು ಬೀರಿದೆ. ಪರಿಣಾಮವಾಗಿ ಮುಸ್ಲಿಂ ವಿದ್ವಾಂಸರು, ವಿಜ್ಞಾನಿಗಳು ಹಾಗೂ ಕಲಾವಿದರೆಲ್ಲರೂ ಜಾಗತಿಕ ಗುಣಮಟ್ಟತೆಯ ಪಾತಳಿಯಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಜಗತ್ತಿನ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಸಾಬೀತುಪಡಿಸುತ್ತಲೇ ಇರಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಈ ಸಂಕುಚಿತ ಸನ್ನಿವೇಶದಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಉತ್ತುಂಗತೆಯನ್ನು ಮರಳಿ ಪಡೆಯುವುದು ಸಾಧ್ಯವೇ?

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ.....

ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತಿಯ ಸಂಬಂಧಗಳಿಗ...
28/12/2022

ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತಿಯ ಸಂಬಂಧಗಳಿಗೆ ನಿಮಿತ್ತವಾಗಿ ಕಾರ್ಯಾಚರಿಸಿದವುಗಳಲ್ಲಿ ಪ್ರಮುಖವಾಗಿತ್ತು 'ಮುಸ್ಲಿಂ ಪೆಪ್ಪರ್ ಜಾಲ' (Muslim pepper network) ಗಳು. ಮುಖ್ಯವಾಗಿ ವ್ಯಾಪಾರದ ಮೂಲಕ ಧಾರ್ಮಿಕ ವಿಚಾರ ವಿನಿಮಯಗಳು (ವಿಶೇಷವಾಗಿ ಅರಿವು ಮತ್ತು ಸಾಂಸ್ಕೃತಿಕ) ಒಳ ಹೊಕ್ಕಲಾರಂಭಿಸಿದವು. ಧರ್ಮ ಸಂದೇಶಗಳೊಂದಿಗೆ ಭಾರತಕ್ಕೆ ಬಂದ ವಿದ್ವಾಂಸರು ಮತ್ತು ಸೂಫಿ ಸಂತರು ವ್ಯಾಪಾರಿ ಹಡಗುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದ ಕಾರಣ ವಾಣಿಜ್ಯೋದ್ಯಮದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವುದರ ಜೊತೆಗೆ ಅವರಲ್ಲಿ ಹಲವರು ವ್ಯಾಪಾರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ನಿಟ್ಟಿನಲ್ಲಿ ವ್ಯಾಪಾರ ಜಾಲವನ್ನು ಸಂಘಟಿಸುವಲ್ಲಿ ಇಸ್ಲಾಂ ಪಾತ್ರ ವಹಿಸಿದಂತೆ ಧರ್ಮ ಬೋಧನೆಯ ಹಾದಿಯಲ್ಲಿ ಇಸ್ಲಾಂ ಶರವೇಗದಿಂದ ಬೆಳೆಯಲು ವಾಣಿಜ್ಯೋದ್ಯಮವೂ ಸಹಾಯ ಮಾಡಿತು.

ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತ.....

ಕ್ರಿ.ಶ. 1232 ರಲ್ಲಿ ಅಸ್ತಿತ್ವಕ್ಕೆ ಬಂದ ನಸ್ರಿದ್ ಸಾಮ್ರಾಜ್ಯವು ಕ್ರಿ.ಶ. 1492 ರಲ್ಲಿ ಕಿಂಗ್ ಫರ್ಡಿನ್ಯಾಂಡ್ ಮತ್ತು ಕ್ವೀನ್ ಇಸಬೆಲ್ಲ ನೇತೃತ...
28/11/2022

ಕ್ರಿ.ಶ. 1232 ರಲ್ಲಿ ಅಸ್ತಿತ್ವಕ್ಕೆ ಬಂದ ನಸ್ರಿದ್ ಸಾಮ್ರಾಜ್ಯವು ಕ್ರಿ.ಶ. 1492 ರಲ್ಲಿ ಕಿಂಗ್ ಫರ್ಡಿನ್ಯಾಂಡ್ ಮತ್ತು ಕ್ವೀನ್ ಇಸಬೆಲ್ಲ ನೇತೃತ್ವದ ಕ್ಯಾಥೊಲಿಕ್ ಕ್ರೈಸ್ತರ ದಾಳಿಗೆ ತುತ್ತಾಗಿ ಸ್ವಾಧೀನ ಕಳೆದುಕೊಂಡಿತು. ನಂತರ ರಾಜನ ಆಜ್ಞೆಯಂತೆ ಐಬೀರಿಯನ್ ಪರ್ಯಾಯ ದ್ವೀಪದಿಂದ ಯಹೂದಿಗಳನ್ನು ಸಂಪೂರ್ಣವಾಗಿ ಹೊರದೂಡಲಾಯಿತು. ಆಟೋಮನ್ ಬಾಯಝೀದರು ನೌಕಾ ಸೇನೆಯನ್ನು ಕಳುಹಿಸಿ ಯಹೂದಿಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಕರೆತಂದು ಪೌರತ್ವವನ್ನು ನೀಡಿದರು. ಸಾವಿರಾರು ಮುಸ್ಲಿಮರು ಆಶ್ರಯತಾಣಗಳನ್ನು ಅರಸುತ್ತಾ ಮೆಡಿಟರೇನಿಯನ್ ಹಾಗೂ ಇತರ ಪ್ರದೇಶಗಳತ್ತ ಗುಳೆ ಹೊರಟರು. ಕ್ರಿ.ಶ. 1492 ರಲ್ಲಿ ಐದು ಲಕ್ಷಗಳಷ್ಟು ಇದ್ದ ಮುಸ್ಲಿಮರಲ್ಲಿ ಸುಮಾರು ಎರಡು ಲಕ್ಷ ಜನರು ಆಫ್ರಿಕಾದತ್ತ ವಲಸೆ ಹೋದರು.

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದ...

ಜಿದ್ದಾ ನಗರದ ಕುರಿತು ನನ್ನ ವ್ಯಕ್ತಿಗತ ನಿಲುವನ್ನು ರೂಪಿಸುವಲ್ಲಿ, 2000 ಇಸವಿಯಲ್ಲಿ ಪ್ರಥಮ ಬಾರಿಗೆ ಜಿದ್ದಾಗೆ ಭೇಟಿ ಕೊಟ್ಟಾಗ ಅನುಭವಕ್ಕೆ ಬಂದ...
20/11/2022

ಜಿದ್ದಾ ನಗರದ ಕುರಿತು ನನ್ನ ವ್ಯಕ್ತಿಗತ ನಿಲುವನ್ನು ರೂಪಿಸುವಲ್ಲಿ, 2000 ಇಸವಿಯಲ್ಲಿ ಪ್ರಥಮ ಬಾರಿಗೆ ಜಿದ್ದಾಗೆ ಭೇಟಿ ಕೊಟ್ಟಾಗ ಅನುಭವಕ್ಕೆ ಬಂದ ಜಿದ್ದಾದ ವೈವಿಧ್ಯತೆಯು ಮುಖ್ಯ ಕಾರಣವಾಗಿದೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನಸಂಖ್ಯೆಯಿರುವ ಜಿದ್ದಾ ನಗರ ನೆಲೆನಿಂತಿರುವುದು, ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾವನ್ನು ಒಳಗೊಂಡಿರುವ ಹಿಜಾಝ್ ಪ್ರಾಂತ್ಯದಲ್ಲಾಗಿದೆ. ಸೌದಿ ಅರೇಬಿಯಾದ ಆಧುನೀಕರಣಗೊಂಡ ಇನ್ನಿತರ ನಗರಗಳಿಗೆ ಅಪವಾದವೆಂಬಂತೆ ಜಿದ್ದಾ ಇಂದಿಗೂ ಪುರಾತನ ಗರಿಮೆಯೊಂದಿಗೆ ನೆಲೆನಿಂತಿದೆ. ಲಾಗಾಯ್ತಿನಿಂದಲೂ ಓಲ್ಡ್ ಮಾರ್ಕೆಟ್ ಸ್ಟ್ರೀಟ್ (ಸೂಕ್) ನಗರದ ಪ್ರಧಾನ ಜವಳಿ ಕೇಂದ್ರ. ಪೂರ್ವಜರ ಸಿರಿತನದ ದ್ಯೋತಕವೆಂಬಂತೆ, ಹವಳ ನಿರ್ಮಿತ ಕಟ್ಟಡ ಸಮುಚ್ಚಯಗಳು ಹಾಗೂ ಅವುಗಳಲ್ಲಿನ ಸಂಕೀರ್ಣವಾದ ಕೆತ್ತನೆಗಳನ್ನು ಇಂದಿಗೂ ಕಾಣಬಹುದು.

ಜನರಿಂದ ತುಂಬಿ ತುಳುಕುತ್ತಿರುವಬಾಬೆಲ್‌ನ ಮೋಡಿಯೇಓ ಜನರೇ..ಮೆಕ್ಕಾದ ಬಾಗಿಲೇ

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರದಲ್ಲಿ ನ...
10/11/2022

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರದಲ್ಲಿ ನಿರತರಾಗಿದ್ದ ಅಲ್ ಬಿರೂನಿಯ ವಿದ್ವತ್ ಕೊಡುಗೆ ಮತ್ತು ಅವರ ಕಿತಾಬುಲ್ ಹಿಂದ್ (ಅಲ್ ಬಿರೂನಿ ಕಂಡ ಭಾರತ) ಎಂಬ ಗ್ರಂಥದ ಅನುಸಂಧಾನವನ್ನು ಈ ಬರಹ ನಡೆಸುತ್ತದೆ. 19ನೇ ಶತಮಾನದಲ್ಲಿ ಜೀವಿಸಿದ್ದ ಮ್ಯಾಕ್ಸ್ ಮುಲ್ಲರ್, ಅಲ್ಬರ್ಟ್ ವೆಬರ್ ಮೊದಲಾದ ಒರಿಯಂಟಲಿಸ್ಟ್‌ಗಳು ಇಂಡೋಲಜಿ ಸಂಬಂಧಿಸಿ ಅಧ್ಯಯನ ನಡೆಸುವುದಕ್ಕಿಂತ ಮೊದಲು ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ, 11ನೇ ಶತಮಾನದಲ್ಲಿ ಜೀವಿಸಿದ್ದ ಅಲ್ ಬಿರೂನಿಯ ಅಗಾಧ ಪಾಂಡಿತ್ಯವನ್ನು ಈ ಬರಹ ಶ್ರುತಪಡಿಸುತ್ತದೆ.

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರ....

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳ...
04/11/2022

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ. ವಸಾಹತೋತ್ತರ ಸಾಹಿತ್ಯದ ಆರಂಭಕಾಲದಲ್ಲಿ ಕಾದಂಬರಿಯ ಲೋಕವು ಒಂದು ರಾಷ್ಟ್ರವೇ ಆಗಿತ್ತು. ಆದರೆ ಅದೇ ಕಾಲದ ನಂತರದ ಕಾದಂಬರಿಗಳು ಸಾಮಾನ್ಯವಾಗಿ ಒಂದು ರಾಷ್ಟ್ರೀಯ ಗಡಿಯೊಳಗೆ ರೂಪುಗೊಳ್ಳುತ್ತಿತ್ತು ಮತ್ತು ಕೆಲವು ರೀತಿಯಲ್ಲಿ ರಾಷ್ಟ್ರೀಯ ಪ್ರಶ್ನೆಗಳಿಗೂ ಸಂಬಂಧಪಡುತ್ತಿತ್ತು. ಕೆಲವೊಮ್ಮೆ ಕಾದಂಬರಿಯ ಸಂಪೂರ್ಣ ಕಥೆಯು ಒಂದು ದೇಶದ ಅನ್ಯೋಕ್ತಿಯಾಗಿ(allegory) ಸ್ವೀಕರಿಸಲಾಗುತ್ತಿತ್ತು. ಇದು ವಸಾಹತು ವಿರೋಧಿ ರಾಷ್ಟ್ರೀಯತೆಯ ಬೆಂಬಲಕ್ಕೆ ಮುಖ್ಯವಾಗಿದ್ದರೂ ಅದರ ಭೊಕೇಂದ್ರಿತ ಮತ್ತು ಆಂತರಿಕ ಗಮನ ಸ್ವಭಾವವು ಒಂದು ಮಿತಿಯಾಗಿ ವರ್ತಿಸುತ್ತದೆ.

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ,...

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. 'ಅರಬ್ಬಿ ಕಡಲಿನ ರಾಜಕುಮಾರಿ' ಎಂದೇ ಪ್ರಸಿದ್ಧಗೊಂಡ...
04/11/2022

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. 'ಅರಬ್ಬಿ ಕಡಲಿನ ರಾಜಕುಮಾರಿ' ಎಂದೇ ಪ್ರಸಿದ್ಧಗೊಂಡಿರುವ ಕೊಚ್ಚಿ ಕೇರಳದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಆದರೆ, ಕೊಚ್ಚಿಯ ಮೇಲಿನ ಇಸ್ಲಾಮಿಕ್‌ ಪ್ರಭಾವದ ಬಗೆಗೆ ಗಂಭೀರವಾದ ಅಧ್ಯಯನಗಳು ನಡೆದೇ ಇಲ್ಲ ಎನ್ನಬಹುದು. ಅದಾಗ್ಯೂ, ಕೊಚ್ಚಿಯ ಇಸ್ಲಾಮಿಕ್ ಸೌಂದರ್ಯವು ಮಬ್ಬಿನಲ್ಲಿ ಮರೆಯಾಗಿದ್ದರೂ ಸಹ ಅದು ಗಮನಾರ್ಹ ಮತ್ತು ಗಂಭೀರ ಚರ್ಚೆಗೆ ಅರ್ಹವಾಗಿದೆ. ಕೊಚ್ಚಿಯ ಇಸ್ಲಾಮ್‌ ತನ್ನ ವಿಶಿಷ್ಟವಾದ ಸ್ಥಳೀಯ ಗುಣಗಳಿಂದ ವಿಶೇಷವಾಗಿದೆ. ಒಂದು ಕಾಲದ ಅತ್ಯಂತ ಲವಲವಿಕೆಯ ವ್ಯಾಪಾರಿ ಬಂದರಿನಲ್ಲಿ ಬದುಕಿದ ಸೂಫಿಗಳಿಂದ ಸಂಪನ್ನವಾಗಿದೆ.

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. ‘ಅರಬ್ಬಿ ಕಡಲಿನ ರಾಜಕುಮಾರಿ’ ಎಂದೇ ಪ....

'ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ' (ಪವಿತ್ರ ಖುರ್‌ಆನ್ 27:88).ಈ ಒಂದು ಸಣ್ಣ ಲೇಖನದಲ್ಲಿ ನಾ...
27/10/2022

'ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ' (ಪವಿತ್ರ ಖುರ್‌ಆನ್ 27:88).
ಈ ಒಂದು ಸಣ್ಣ ಲೇಖನದಲ್ಲಿ ನಾನು ಇಸ್ಲಾಮಿಕ್ ಕಲೆಯ ಆಧ್ಯಾತ್ಮಿಕ ಸ್ವರೂಪ, ಇತಿಹಾಸ ಮತ್ತು ಅದು ಇಸ್ಲಾಮಿಕ್ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಕೃತಿಯತ್ತ ನಾವು ಕಣ್ಣು ಹಾಯಿಸಿದಾಗ ಆಕಾಶಕಾಯಗಳ ಸಮತೋಲನ, ಸಸ್ಯ ಮತ್ತು ಪ್ರಾಣಿಗಳ ಆಕೃತಿಗಳಲ್ಲಿ, ಭೂಮಿಯ ರಚನೆಯಲ್ಲಿ ಹಾಗೂ ಜೀವಕೋಶಗಳ ಆಕಾರದಲ್ಲಿ ಅಲ್ಲಾಹನ ಸಂಪೂರ್ಣ ಸೃಷ್ಟಿವೈಭವದ ಪ್ರತಿಬಿಂಬವನ್ನು ನೋಡಲು ಸಾಧ್ಯವಾಗುತ್ತದೆ.

‘ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ’ (ಪವಿತ್ರ ಖುರ್‌ಆನ್ 27:88).ಈ ಒಂದು ಸಣ್ಣ ಲೇಖನ.....

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕೊಳ್ಳಲು ಅರಬ...
27/10/2022

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕೊಳ್ಳಲು ಅರಬ್- ಮುಸ್ಲಿಮರಿಗೆ ಅರ್ಧ ಶತಮಾನಗಳೇ ಹಿಡಿಯಿತು. ಭದ್ರಕೋಟೆಯನ್ನಾಗಿಸಿ ಕಾರ್ಯ ನಿರ್ವಹಿಸುತ್ತಿದ್ದ ‘ಬೈಸಾಂಟಿಯಾ' ಕರಾವಳಿಯಲ್ಲಿಯೂ ತನ್ನ ಅಧಿಕಾರ ಹಸ್ತ ಚಾಚಿತ್ತು. ಒಳನಾಡಿನ ಓಯಸಿಸ್‍ಗಳು ಬೆರ್-ಬೆರ್ ಬುಡಕಟ್ಟುಗಳ ( Berber Tribes ) ಹಿಡಿತದಲ್ಲಿತ್ತು. ಪೈಗಂಬರ್ (ಸ.ಅ)ರವರ ವಿಯೋಗದ ಹನ್ನೊಂದು ವರ್ಷಗಳ ನಂತರ ಅಂದರೆ ಸುಮಾರು CE 643 ರಲ್ಲಿ ಅಲೆಕ್ಸಾಂಡ್ರಿಯಾ ವಶಪಡಿಸಿಕೊಳ್ಳಲು ಕಳುಹಿಸಲ್ಪಟ್ಟ ಅರಬ್ ಜನರಲ್ ಅಂರುಬ್ನ್ ಆಸ್ವ್ ತದನಂತರದ ದಂಡಯಾತ್ರೆಗಳಲ್ಲಿ ಪಶ್ಚಿಮದ ಕಡೆಗೇ ಮುಖಮಾಡಿದರು. ಅಳಿಯ 'ಉಖ್‍ಬತುಬ್ನ್ ನಾಫಿ'ಯೂ ಯಾತ್ರೆಯಲ್ಲಿ ಜೊತೆಗೂಡಿದರು.

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕ...

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ್ಟಡ ಸಂ...
12/10/2022

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ್ಟಡ ಸಂಕೀರ್ಣದಲ್ಲಿ ಅಂದು ಸೌದಿಯ ಕಾನ್ಸುಲೇಟ್ ಜನರಲ್ ಕಾರ್ಯಾಚರಿಸುತ್ತಿತ್ತು. ಸೌದಿಯಲ್ಲಿ ತೈಲ ನಿಕ್ಷೇಪಗಳನ್ನು ಕಂಡು ಹಿಡಿಯಲಾದ ಆ ಸಂದರ್ಭದಲ್ಲಿ ಉದ್ಯೋಗ, ಹಜ್-ಉಮ್ರಾಗಳ ವೀಸಾ ಪಡೆಯಲು ಸಾವಿರಾರು ಜನರು ಎಂಬೆಸಿಗೆ ಮುತ್ತಿಗೆ ಹಾಕಿದ್ದರು. ಜನರ ರೋಷವು ಹೆಚ್ಚುತ್ತಲೇ ಇತ್ತು. ಗೇಟಿನ ಬಳಿ ಕಾಂಪೌಂಡ್‌ನ ಹೊರಗೂ ಒಳಗೂ ಜನ ಜಮಾಯಿಸಿದ್ದರು. ಬಿಳಿ ಸಮವಸ್ತ್ರ ಮತ್ತು ಕಪ್ಪು ಟೋಪಿ ಧರಿಸಿದ್ದ ಈಜಿಪ್ಟ್‌ ಪೊಲೀಸರು ಕೈಯಲ್ಲಿ ಬೆಲ್ಟ್‌ಗಳನ್ನು ಹಿಡಿದು ಜನರ ಬಳಿ ಬರುತ್ತಿದ್ದರು. ಜನರ ರೋಷಾಗ್ನಿ ಮತ್ತು ಬೆವರ ಹನಿಯ ವಾಸನೆಯು ನಗರವನ್ನೇ ವ್ಯಾಪಿಸಿತ್ತು. ಗತ್ಯಂತರವಿಲ್ಲದೆ ಗೇಟಿನ ಮೂಲಕ ಒಳಹೋದ ನನಗೆ ದಾಖಲೆಗಳನ್ನು ಸಲ್ಲಿಸುವ ಕಿಟಕಿಯವರೆಗೂ ಉದ್ದವಾಗಿದ್ದ ಸರತಿಯ ಸಾಲು ಕಂಡಿತು.

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ.....

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್ಮಿಕ ದತ್ತಿಗ...
07/10/2022

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್ಮಿಕ ದತ್ತಿಗಳ(ಅವ್ಕಾಫ್/ವಕ್ಫ್) ಹರಡುವಿಕೆ ವ್ಯಾಪಕಗೊಂಡವು. ನಂತರದ ಸಹಸ್ರಮಾನದತ್ತ ಗಮನಿಸಿದರೆ ಮುಸ್ಲಿಂ ಸಮುದಾಯವು ವಾಸಿಸುತ್ತಿದ್ದ ಭೂ ಪ್ರದೇಶಗಳ ಬೆಳವಣಿಗೆಯನ್ನು ಅವಲೋಕಿಸುವ ಅಧ್ಯಯನಗಳಲ್ಲಿ 'ವಕ್ಫ್' ಎಂಬುವುದು ಅವಿಭಾಜ್ಯ ಪರಿಕಲ್ಪನೆಯಾಗಿ ಕಾಣಬಹುದು.

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್...

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂದರೆ, ಅವಳು...
29/09/2022

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂದರೆ, ಅವಳು ಇಲ್ಲಿಂದ ಕಣ್ಮರೆಯಾದದ್ದಾಗಲೀ, ಈಗ ಮತ್ತೆ ಪ್ರತ್ಯಕ್ಷವಾದದ್ದಾಗಲಿ ಯಾರ ಗಮನಕ್ಕೂ ಬಿದ್ದಿಲ್ಲ. ಮೊದಲೇ ಲಾಚಾರಾಗಿದ್ದ ಅವಳು ಈಗ ಇನ್ನಷ್ಟು ಲಾಚಾರಾಗಿದ್ದಳು. ಮುಖದ ಸೌಂದರ್ಯ ಕೈಕೊಟ್ಟಿತ್ತು. ಎಂದೋ ಬಿಟ್ಟಗಲಿದ್ದ ಯೌವ್ವನದ ಒಂದೆರಡು ಕುರುಹುಗಳಷ್ಟೇ ಬಾಕಿ ಉಳಿದಿತ್ತು.
ಅಗಸಳಾಗಿದ್ದ ಅವಳ ತಾಯಿ ಸತ್ತ ನಂತರ ಅವಳು ಕೆಲಸಕ್ಕೆ ಹೋಗುತ್ತಿದ್ದ ಮೂರು ಮನೆಗಳ ಪಕ್ಕ ನಿಂತು ಅವುಗಳನ್ನೇ ನೋಡತೊಡಗಿದಳು. ಕ್ರಮೇಣ ಎರಡು ಮನೆಗಳು ಅವಳ ನೋಟದ ಪರಿಧಿಯಿಂದ ಹೊರಬಿದ್ದು ಒಂದು ಮನೆಯಷ್ಟೇ ಉಳಿಯಿತು. ಅದು ಊರುಗೋಲು ಹಾಗೂ ಕೊಡೆಗಳ ವ್ಯಾಪಾರಿ ಉಸ್ಮಾನ್ ಧಣಿಯ ಮನೆ.

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂ....

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ...
18/09/2022

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ಮೂರನೇ ಪ್ರಪಂಚ, ಮಧ್ಯ ಸಾಮ್ರಾಜ್ಯ ಮುಂತಾದವುಗಳು ಸಾಂಸ್ಕೃತಿಕ ಚಹರೆ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೆಲ ಪ್ರದೇಶಗಳನ್ನು ಗುರುತಿಸಲು ಜನರೇ ಕೊಟ್ಟು ಕೊಂಡಿರುವ ಹೆಸರುಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ನಿರ್ದಿಷ್ಟ ಭೌಗೋಳಿಕ‌ ಪ್ರದೇಶಕ್ಕೆ ಈ ರೀತಿ ಹೆಸರಿಸುವುದು ಅದರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ದಬ್ಬಾಳಿಕೆಯೇ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಅನೇಕ ಸಂಶೋಧನೆಗಳನ್ನು ಕೈಗೊಂಡಿರುವ ಸಂಸ್ಕೃತ ತಜ್ಞ ಮತ್ತು ಇತಿಹಾಸಕಾರ ಶೆಲ್ಡನ್ ಪೊಲಾಕ್ (Sheldon Po***ck) ಸಾಂಸ್ಕೃತಿಕ ಹೆಸರಿರುವ ಸ್ಥಳಗಳ ಬಗ್ಗೆ ವಿಭಿನ್ನವಾದ ಚಿಂತನೆಯನ್ನು ವ್ಯಕ್ತಪಡಿಸುತ್ತಾ, ನಾಲ್ಕನೇ ಶತಮಾನ ಮತ್ತು ಹದಿನಾಲ್ಕನೆಯ ಶತಮಾನಗಳ ನಡುವೆ ದಕ್ಷಿಣ ಏಶ್ಯದ ವಿಶಾಲವಾದ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರಸರಣವನ್ನು ಉಲ್ಲೇಖಿಸುತ್ತಾ 'ಸಂಸ್ಕೃತ ಕಾಸ್ಮೊಪೊಲಿಸ್' ಎಂಬ ಪದವನ್ನು ಸೃಷ್ಟಿಸಿದರು. ಅಫ್ಘಾನಿಸ್ತಾನದ ಕಂದಹಾರ್ (ಗಾಂಧಾರ) ಮತ್ತು ಆಗ್ನೇಯ ಏಶ್ಯದ ಸಿಂಗಾಪುರ (ಸಿಂಘಾಪುರ) ನಡುವಿನ ಸಾಂಸ್ಕೃತಿಕವಾಗಿ ಅಂತರ್ಸಂಪರ್ಕ ಹೊಂದಿರುವ ಸ್ಥಳಗಳು‌ ಕೇವಲ‌ ಸಂಸ್ಕೃತ ಹೆಸರುಗಳನ್ನು ಮಾತ್ರ ಹೊಂದಿವೆ ಎಂದು ಅವರು ಗುರುತಿಸುತ್ತಾರೆ.

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ.....

ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ 'ಇರಾನ್‌ಶಹ್ರಿ' ಎಂದು ಹೇಳಲಾಗುತ್ತದೆ. ಅವರು ತತ್ವಶಾಸ್ತ್ರವನ್ನು...
21/06/2022

ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ 'ಇರಾನ್‌ಶಹ್ರಿ' ಎಂದು ಹೇಳಲಾಗುತ್ತದೆ. ಅವರು ತತ್ವಶಾಸ್ತ್ರವನ್ನು ಪೂರ್ವಕ್ಕೆ ತರಲು ಪ್ರಯತ್ನಿಸಿದರು; ಪೂರ್ವವನ್ನು ಅಲ್-ಫಾರಾಬಿಯಿಂದ ಸುಹ್ರವರ್ದಿಯವರೆಗಿನ ಆನಂತರದ ಅನೇಕ ತತ್ವಜ್ಞಾನಿಗಳು ತತ್ವಚಿಂತನೆಯ ಉಗಮಸ್ಥಾನವೆಂದು ಪರಿಗಣಿಸಿದ್ದಾರೆ. ದುರದೃಷ್ಟವಶಾತ್ ಅವರನ್ನು 'ಮುಸ್ಲಿಂ ತತ್ವಶಾಸ್ತ್ರದ ಸ್ಥಾಪಕ' ಎಂದು ಸಾಬೀತುಪಡಿಸಲು ಅರ್ಹವಾದ ಯಾವುದೇ ಗ್ರಂಥರಚನೆಗಳೂ ಸಿಗದಿರುವುದರಿಂದ ಇಂದು ಅವರ ಹೆಸರು ಮಾತ್ರ ಉಳಿದಿದೆ. ಬದಲಾಗಿ, 'ಮಶ್ಶಾಯಿ ತತ್ವಶಾಸ್ತ್ರ' ಎಂಬ ಹೆಸರಿನ ಒಂದು ಪರಿವ್ರಾಜಕ ತತ್ವಚಿಂತನೆಯು (Peripatetic) ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಮಿಕ್ ತತ್ವಶಾಸ್ತ್ರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಸ್ಲಾಮಿಕ್ ಜಗತ್ತಿನಲ್ಲಿ ಅದು ಅಳಿದುಳಿದ ಕೆಲವೇ ಕೆಲವು ಸೈದ್ಧಾಂತಿಕ ವಿಭಾಗಗಳಲ್ಲಿ ಒಂದಷ್ಟೇ. ಅರಬ್ಬರ ತತ್ವಜ್ಞಾನಿ ಎಂದು ಖ್ಯಾತರಾದ 'ಅಬೂ ಯೂಸುಫ್ ಯಾಖೂಬ್ ಅಲ್ ಕಿಂದಿ' ಯನ್ನು ಆ ಪಂಥದ ಸ್ಥಾಪಕರು ಎಂದು ಕರೆಯಲಾಗುತ್ತದೆ.

ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ ‘ಇರಾನ್‌ಶಹ್ರಿ’ ಎಂದು ಹೇಳಲಾಗುತ್ತದೆ. ಅವರು ತತ್ವ...

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒ...
10/06/2022

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒಂದು ವಿಷಣ್ಣತೆಯಲ್ಲೇ ಕಳೆದುಹೋಯಿತು. ವರ್ಷದ ಆರಂಭದಿಂದಲೇ ದೇಶದಲ್ಲಿ ಇಸ್ಲಾಮೋಫೋಬಿಕ್ ಘಟನೆಗಳಲ್ಲಿ ಭಯಾನಕ ಹೆಚ್ಚಳ ಕಂಡಿದೆ. 'ಡೀಲ್ ಆಫ್ ದಿ ಡೇ' ಎಂದು ಪ್ರಖ್ಯಾತ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕಿದ 'ಬುಲ್ಲಿ ಬಾಯ್' ಅಪ್ಲಿಕೇಶನ್ ನಿಂದ ಹಿಡಿದು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಹಿಂದೂ ಸ್ವಾಮಿಗಳು ನೀಡಿದ ಬಹಿರಂಗ ಕರೆ, ಹಲವು ರಾಜ್ಯಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಮುಸ್ಲಿಮ್ ಮನೆಗಳು ಮತ್ತು ಮಸೀದಿಗಳ ಮೇಲೆ ನಡೆದ ಅಪ್ರಚೋದಕ ಹಿಂಸಾತ್ಮಕ ದಾಳಿಗಳೆಲ್ಲವೂ ಇಡೀ ದೇಶದ ಮುಸ್ಲಿಮರಲ್ಲಿ‌ ಒಂದು ವಿವರಿಸಲಾಗದ ಕಳವಳಕ್ಕೆ ಕಾರಣವಾಗಿತ್ತು.

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ...

Address


Alerts

Be the first to know and let us send you an email when Thijori ತಿಜೋರಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Thijori ತಿಜೋರಿ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share