ಜನಮಿತ್ರ ಕೊಡಗು

  • Home
  • ಜನಮಿತ್ರ ಕೊಡಗು

ಜನಮಿತ್ರ ಕೊಡಗು ಜನಮಿತ್ರ ಕೊಡಗು

18/04/2020

ವಿರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವ...

18/04/2020

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ.ಕಂಟೇನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್....

18/04/2020

ಶ್ರೀನಗರ: ಕೊರೋನಾ ಸಂಕಷ್ಟದ ಸಮಯದಲ್ಲೂ ಉಗ್ರರು ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಿದ್ದಾರೆ. ಸಿಆರ್ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ...

13/04/2020
ಕೊಡಗು :ಕೊರೊನಾ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖ, ಆಸ್ಪತ್ರೆಯಿಂದ‌ ಡಿಸ್ಚಾರ್ಜ್:ಸದ್ಯಕ್ಕೆ ಕೊಡಗು ಕೊರೊನಾ ಮುಕ್ತ ಜಿಲ್ಲೆ....ಜನಮಿತ್ರ:08-0...
08/04/2020

ಕೊಡಗು :ಕೊರೊನಾ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖ, ಆಸ್ಪತ್ರೆಯಿಂದ‌ ಡಿಸ್ಚಾರ್ಜ್:

ಸದ್ಯಕ್ಕೆ ಕೊಡಗು ಕೊರೊನಾ ಮುಕ್ತ ಜಿಲ್ಲೆ....

ಜನಮಿತ್ರ:08-04-2020
ಬುಧವಾರ..

ಕೊರೊನಾ ಎಫೆಕ್ಟ್: ಕರಿಮೆಣಸು ಕೊಯ್ಲಿಗೆ ಕಾರ್ಮಿಕರಿಲ್ಲ..ಬೆಲೆ ಕುಸಿತ, ಆಕಾಲಿಕ ಮಳೆಯಿಂದ ನಲುಗಿದ್ದ ಬೆಳೆ ಮೇಲೆ‌ ಕೊರೊನಾ ಭೀತಿ...ಜನಮಿತ್ರ:30-...
30/03/2020

ಕೊರೊನಾ ಎಫೆಕ್ಟ್: ಕರಿಮೆಣಸು ಕೊಯ್ಲಿಗೆ ಕಾರ್ಮಿಕರಿಲ್ಲ..
ಬೆಲೆ ಕುಸಿತ, ಆಕಾಲಿಕ ಮಳೆಯಿಂದ ನಲುಗಿದ್ದ ಬೆಳೆ ಮೇಲೆ‌ ಕೊರೊನಾ ಭೀತಿ...

ಜನಮಿತ್ರ:30-03-2020
ಸೋಮವಾರ....

ಯಾರ  ಹೆಗಲಿಗೆ ಕೊಡಗಿನ ಉಸ್ತುವಾರಿ ಪಟ್ಟ?..ಜನಮಿತ್ರ:20-02-2020ಗುರುವಾರ....
20/02/2020

ಯಾರ ಹೆಗಲಿಗೆ ಕೊಡಗಿನ ಉಸ್ತುವಾರಿ ಪಟ್ಟ?..

ಜನಮಿತ್ರ:20-02-2020
ಗುರುವಾರ....

ಪ್ರೇಮ ಲೋಕದಲ್ಲಿ ಗೆದ್ದವರಿಗಿಂತ ಸೋತವರೇ ಹೆಚ್ಚು....ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆ ಒಂದು ಪರಿಹಾರವಲ್ಲ..ಜನಮಿತ್ರ:14-02-2020ಶುಕ್ರವಾರ
14/02/2020

ಪ್ರೇಮ ಲೋಕದಲ್ಲಿ ಗೆದ್ದವರಿಗಿಂತ ಸೋತವರೇ ಹೆಚ್ಚು....
ಪ್ರೇಮ ವೈಫಲ್ಯಕ್ಕೆ ಆತ್ಮಹತ್ಯೆ ಒಂದು ಪರಿಹಾರವಲ್ಲ..

ಜನಮಿತ್ರ:14-02-2020
ಶುಕ್ರವಾರ

ಕಂದನ ಹೃದಯ ಬೇನೆಗೆ ಮಿಡಿದ ಜನಇಂದಿನ ಜನಮಿತ್ರ ಓದಿ..07-02-2020ಶುಕ್ರವಾರ....
07/02/2020

ಕಂದನ ಹೃದಯ ಬೇನೆಗೆ ಮಿಡಿದ ಜನ

ಇಂದಿನ ಜನಮಿತ್ರ ಓದಿ..
07-02-2020
ಶುಕ್ರವಾರ....

ಜನಮಿತ್ರ  ಸಂಕ್ರಾಂತಿ ಸಂಭ್ರಮ ರಾಜ್ಯ ಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆ.. 2020ಫಲಿತಾಂಶ....
17/01/2020

ಜನಮಿತ್ರ
ಸಂಕ್ರಾಂತಿ ಸಂಭ್ರಮ
ರಾಜ್ಯ ಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆ.. 2020
ಫಲಿತಾಂಶ....

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು...
15/01/2020

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೊಡಗಿನ ಶಾಸಕದ್ವಯರು.... ಶಾಸಕರಾಗಿ ಎರಡು ದಶಕಗಳ ಅನುಭವಿರುವ ಎಂ.ಪಿ ಅಪ್ಪಚ್ಚು ರಂಜನ್ , ಕೆ.ಜಿ ಬೋಪಯ್ಯ   ಜನಮಿ...
06/01/2020

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೊಡಗಿನ ಶಾಸಕದ್ವಯರು....

ಶಾಸಕರಾಗಿ ಎರಡು ದಶಕಗಳ ಅನುಭವಿರುವ ಎಂ.ಪಿ ಅಪ್ಪಚ್ಚು ರಂಜನ್ , ಕೆ.ಜಿ ಬೋಪಯ್ಯ

ಜನಮಿತ್ರ:06-01-2020.
ಸೋಮವಾರ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕೊಡಗು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನಜನಮಿತ್ರ:03-01-2020ಶುಕ್ರವಾರ
03/01/2020

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಕೊಡಗು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ

ಜನಮಿತ್ರ:03-01-2020
ಶುಕ್ರವಾರ

ಮತ್ತೇ ಬಾರದಿರಲಿ ಆ ಕರಾಳ ನೆನಪುಗಳು.....ಕಾವೇರಿ ತವರು ಕೊಡಗಿಗೆ ಕಣ್ಣೀರು ತಂದು ಮಾಯವಾದ ಮತ್ತೊಂದು ವರ್ಷ....ಜನಮಿತ್ರ:01-01-2020ಬುಧವಾರ..ಎಲ...
01/01/2020

ಮತ್ತೇ ಬಾರದಿರಲಿ ಆ ಕರಾಳ ನೆನಪುಗಳು.....

ಕಾವೇರಿ ತವರು ಕೊಡಗಿಗೆ ಕಣ್ಣೀರು ತಂದು ಮಾಯವಾದ ಮತ್ತೊಂದು ವರ್ಷ....

ಜನಮಿತ್ರ:01-01-2020
ಬುಧವಾರ..

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

"ವಿಶ್ವಗುರು ವಿಶ್ವೇಶತೀರ್ಥ ಅಸ್ತಂಗತ"ಇಹಲೋಕ ಪಯಣ ಮುಗಿಸಿದ ಪೇಜಾವರ ಶ್ರೀ...ಜನಮಿತ್ರ:30-12-2019 ಸೋಮವಾರ
30/12/2019

"ವಿಶ್ವಗುರು ವಿಶ್ವೇಶತೀರ್ಥ ಅಸ್ತಂಗತ"

ಇಹಲೋಕ ಪಯಣ ಮುಗಿಸಿದ ಪೇಜಾವರ ಶ್ರೀ...

ಜನಮಿತ್ರ:30-12-2019
ಸೋಮವಾರ

ಎಲ್ಲಾ ಓದುಗರಿಗೆ ಧನ್ಯವಾದಗಳು...
06/12/2019

ಎಲ್ಲಾ ಓದುಗರಿಗೆ ಧನ್ಯವಾದಗಳು...

ಕಾಫಿ ನಾಡಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಅಧಿಕ ಶಾಲೆ ಬಿಟ್ಟು ಪೋಷಕರೊಂದಿಗೆ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ  ದುಡಿಯುತ್ತಿರುವ ಮಕ್ಕಳು...ಅಧಿಕಾರಿ...
05/12/2019

ಕಾಫಿ ನಾಡಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಅಧಿಕ

ಶಾಲೆ ಬಿಟ್ಟು ಪೋಷಕರೊಂದಿಗೆ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು...

ಅಧಿಕಾರಿಗಳೇ.... ಕೂಡಲೇ ಎಚ್ಚೆತ್ತುಕೊಳ್ಳಿ...

ಜನಮಿತ್ರ:05-12-2019
ಗುರುವಾರ.....

ಈರುಳ್ಳಿ ಬೆಲೆ ಏರಿಕೆ: ಬಹುತೇಕರಿಗೆ ಬರೆತಿನ್ನೋಕೆ ಇಷ್ಟ: ಕೊಡೋದೇ ಕಷ್ಟ..ಜನಮಿತ್ರ:29-11-2019ಶುಕ್ರವಾರ...
28/11/2019

ಈರುಳ್ಳಿ ಬೆಲೆ ಏರಿಕೆ: ಬಹುತೇಕರಿಗೆ ಬರೆ
ತಿನ್ನೋಕೆ ಇಷ್ಟ: ಕೊಡೋದೇ ಕಷ್ಟ..

ಜನಮಿತ್ರ:
29-11-2019
ಶುಕ್ರವಾರ...

ರಾಷ್ಟ್ರೀಯ ಆವಿಷ್ಕಾರ ಯೋಜನೆಯಡಿ ಕೊಡಗು ಜಿಲ್ಲೆಯ ಹತ್ತು ಕ್ಲಸ್ಟರ್ ಗಳಲ್ಲಿ ನಡೆಯಲಿದೆ "ಮಕ್ಕಳ ವಿಜ್ಞಾನ ಹಬ್ಬ"ಜನಮಿತ್ರ:25-11-2019ಸೋಮವಾರ
25/11/2019

ರಾಷ್ಟ್ರೀಯ ಆವಿಷ್ಕಾರ ಯೋಜನೆಯಡಿ

ಕೊಡಗು ಜಿಲ್ಲೆಯ ಹತ್ತು ಕ್ಲಸ್ಟರ್ ಗಳಲ್ಲಿ ನಡೆಯಲಿದೆ

"ಮಕ್ಕಳ ವಿಜ್ಞಾನ ಹಬ್ಬ"

ಜನಮಿತ್ರ:

25-11-2019
ಸೋಮವಾರ

ಮೌನಕ್ಕೆ ಶರಣಾದ ಜಿಲ್ಲೆಯ ಜನಪ್ರತಿನಿಧಿಗಳು.ನೆರೆ ಸಂತ್ರಸ್ತರಿಗಿಲ್ಲ‌ ತಾತ್ಕಾಲಿಕ ಪರಿಹಾರ: ಮತ್ಯಾವಾಗ ಶಾಶ್ವತ ಪರಿಹಾರ?...ಜನಮಿತ್ರ:23-11-201...
23/11/2019

ಮೌನಕ್ಕೆ ಶರಣಾದ ಜಿಲ್ಲೆಯ ಜನಪ್ರತಿನಿಧಿಗಳು.

ನೆರೆ ಸಂತ್ರಸ್ತರಿಗಿಲ್ಲ‌ ತಾತ್ಕಾಲಿಕ ಪರಿಹಾರ: ಮತ್ಯಾವಾಗ ಶಾಶ್ವತ ಪರಿಹಾರ?...

ಜನಮಿತ್ರ:23-11-2019
ಶನಿವಾರ

ಸಾನ್ವಿ ಎಂಬ ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಿದೆ  ಲಕ್ಷಾಂತರ ರೂಪಾಯಿ..ಕೊಡುವ ಕೈಗಳಿಗಾಗಿ ಕಾಯುತ್ತಿದೆ ಹೆಬ್ಬೆಟ್ಟಗೇರಿಯ ಬಡ ಕುಟುಂಬ.ಜನಮಿತ್ರ...
20/11/2019

ಸಾನ್ವಿ ಎಂಬ ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಿದೆ ಲಕ್ಷಾಂತರ ರೂಪಾಯಿ..

ಕೊಡುವ ಕೈಗಳಿಗಾಗಿ ಕಾಯುತ್ತಿದೆ ಹೆಬ್ಬೆಟ್ಟಗೇರಿಯ ಬಡ ಕುಟುಂಬ.

ಜನಮಿತ್ರ:20-11-2019.
ಬುಧವಾರ...

ಕ್ರಿಕೆಟ್ ತವರು ವಿರಾಜಪೇಟೆಯಲ್ಲಿ ಡಿಸೆಂಬರ್ 24ರಿಂದ 29ರವರೆಗೆ "ವಿರಾಜಪೇಟೆ ಪ್ರೀಮಿಯರ್ ‌ಲೀಗ್ ಕ್ರಿಕೆಟ್ ಪಂದ್ಯಾಟ".ಜನಮಿತ್ರ:19-11-2019ಮಂಗ...
19/11/2019

ಕ್ರಿಕೆಟ್ ತವರು ವಿರಾಜಪೇಟೆಯಲ್ಲಿ ಡಿಸೆಂಬರ್ 24ರಿಂದ 29ರವರೆಗೆ "ವಿರಾಜಪೇಟೆ ಪ್ರೀಮಿಯರ್ ‌ಲೀಗ್ ಕ್ರಿಕೆಟ್ ಪಂದ್ಯಾಟ".

ಜನಮಿತ್ರ:19-11-2019
ಮಂಗಳವಾರ....

08/11/2019

ಈ ಹಿಂದೆ ನಿಗಧಿಯಾಗಿರುವ ಪರೀಕ್ಷೆಗಳಿಗೆ ದಿನಾಂಕ:09-11-2019 ರ ರಜೆ ಅನ್ವಯಿಸುವುದಿಲ್ಲ. ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ.

ಜಿಲ್ಲಾಧಿಕಾರಿ
ಕೊಡಗು ಜಿಲ್ಲೆ, ಮಡಿಕೇರಿ

08/11/2019

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಿನಾಂಕ: 09-11-2019 ರಂದು ಅಯೋಧ್ಯೆ ತೀರ್ಪು ಹೊರ ಬೀಳಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳು, ಪದವಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲಾಧಿಕಾರಿ
ಕೊಡಗು ಜಿಲ್ಲೆ, ಮಡಿಕೇರಿ

*ಜನಮಿತ್ರ*"ರಾಜ್ಯಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆ"
08/11/2019

*ಜನಮಿತ್ರ*

"ರಾಜ್ಯಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆ"

ಕಮಲ ಕೋಟೆಯಲ್ಲಿ ಕೈ ಬಲವರ್ಧನೆಗೆ ಕಸರತ್ತು...ಆರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳುಹೊಸ ಮುಖಗಳಿಗೆ ಮಣೆ ಹಾಕಲು ಕೆ.ಪ...
02/11/2019

ಕಮಲ ಕೋಟೆಯಲ್ಲಿ ಕೈ ಬಲವರ್ಧನೆಗೆ ಕಸರತ್ತು...
ಆರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳು
ಹೊಸ ಮುಖಗಳಿಗೆ ಮಣೆ ಹಾಕಲು ಕೆ.ಪಿ.ಸಿ.ಸಿ ಚಿಂತನೆ?..

ಜನಮಿತ್ರ:02-11-2019.
ಶನಿವಾರ...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
01/11/2019

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

31/10/2019

ಪಡಿತರ ಚೀಟಿ ಪಡೆದುಕೊಳ್ಳಲು ಮನವಿ

ಜನಮಿತ್ರ ಕೊಡಗು

:-ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 2018 ನೇ ಸಾಲಿನಲ್ಲಿ ಸ್ವೀಕೃತವಾದ ಹೊಸ ಆನ್‍ಲೈನ್ ಪಡಿತರ ಚೀಟಿ ಅರ್ಜಿಗಳು ಅರ್ಜಿದಾರರು ಕಚೇರಿಗೆ ಬಾರದೇ ವಿಲೇವಾರಿಯಾಗಲು ಬಾಕಿ ಉಳಿದಿದ್ದು, ಆದ್ಯತೆ ಮೇರೆಗೆ ಈ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕಾಗಿದೆ. ಈ ಹಿನ್ನೆಲೆ ನವೆಂಬರ್, 05 ರಿಂದ ನವೆಂಬರ್, 30 ರವರೆಗೆ 2018 ನೇ ಸಾಲಿನ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ ಹಾಗೂ 2018 ನೇ ಸಾಲಿನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಮಾತ್ರ ಈ ಅವಧಿಯಲ್ಲಿ ಆಯಾಯ ತಾಲ್ಲೂಕು ಕಚೇರಿಗೆ ಬಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡಿತರ ಚೀಟಿಯನ್ನು ತುರ್ತಾಗಿ ಪಡೆದುಕೊಳ್ಳಲು ತಿಳಿಸಿದೆ.
2019 ನೇ ಸಾಲಿನಲ್ಲಿ ಸಲ್ಲಿಸಿದ ಪಡಿತರ ಚೀಟಿ ಅರ್ಜಿದಾರರು ಡಿಸೆಂಬರ್-2019ರ ಮಾಹೆಯಿಂದ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ತಿಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಅವರು ಕೊರಿದ್ದಾರೆ.

25/10/2019

ಇಂದು ಉದ್ಘಾಟನೆಗೊಳ್ಳಲಿರುವ ಕೊಡಗು ಜಿಲ್ಲಾ ಪಂಚಾಯತ್ ನೂತನ ಸುಸಜ್ಜಿತ ಭವನ.....

*ರಾಷ್ಟ್ರಮಟ್ಟದ ಫುಟ್ಬಾಲ್ ಗೆ ಕೊಡಗಿನ ತಂಡ*ಜನಮಿತ್ರ ಕೊಡಗು‌‌‌.: ರಾಜಸ್ಥಾನದ ಅಜ್ಮೀರ್ ನಲ್ಲಿ‌ ನಡೆಯುತ್ತಿರುವ ರಾಷ್ಟ್ರಮಟ್ಟದ 17 ವರ್ಷದೊಳಗಿನ...
22/10/2019

*ರಾಷ್ಟ್ರಮಟ್ಟದ ಫುಟ್ಬಾಲ್ ಗೆ ಕೊಡಗಿನ ತಂಡ*

ಜನಮಿತ್ರ ಕೊಡಗು‌‌‌.

: ರಾಜಸ್ಥಾನದ ಅಜ್ಮೀರ್ ನಲ್ಲಿ‌ ನಡೆಯುತ್ತಿರುವ ರಾಷ್ಟ್ರಮಟ್ಟದ 17 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲೆಯ ಒಂಭತ್ತು ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿನಿಯಾರಾಗಿರುವ ಇವರು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ ಪಡೆದಿದ್ದರು. ಲಯನ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ರಾಜ್ಯ ತಂಡಕ್ಕೆ ಒಂಭತ್ತು ಆಟಗಾರರನ್ನು ಇದೇ ಶಾಲೆಯಿಂದ‌ ಆಯ್ಕೆ ಮಾಡಲಾಗಿದೆ. ಜಿಲ್ಲಾ‌ತಂಡ, ಮೈಸೂರು ವಿಭಾಗೀಯ ತಂಡಕ್ಕೆ ತರಬೇತುದಾರರಾಗಿದ್ದ ಲಯನ್ಸ್ ಶಾಲೆಯ ದೈಹಿಕ‌ ಶಿಕ್ಷಕ ಈಶ್ವರ್ ರಾಜ್ಯ ತಂಡಕ್ಕೂ ತರಬೇತುದಾರರಾಗಿದ್ದಾರೆ.ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ಈ ಪಂದ್ಯಾವಳಿ ಆಯೋಜಿಸಿದೆ.

18/10/2019

ಇಂದು ವಿದ್ಯುತ್ ವ್ಯತ್ಯಯ

*ಜನಮಿತ್ರ ಕೊಡಗು*.

: ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಗದ್ದಿಗೆ ಮತ್ತು ಗಾಳಿಬೀಡು ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಅಕ್ಟೋಬರ್, 19 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಎ.ವಿ ಶಾಲೆ, ಆಜಾದ್‍ನಗರ, ಉಕ್ಕಡ, ಅಬ್ಬಿಪಾಲ್ಸ್ ರಸ್ತೆ, ಮೆಡಿಕಲ್ ಕಾಲೇಜು, ಕಾನ್ವೆಂಟ್ ಜಂಕ್ಷನ್, ಹೆಬ್ಬೇಟಗೇರಿ, ಕೆ.ನಿಡುಗಣೆ. ಗಾಳಿಬೀಡು, ಒಣಚಲು, ಕಾಲೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ತಿಳಿಸಿದ್ದಾರೆ.

ಕುಶಾಲನಗರ : ಕುಶಾಲನಗರ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಕಾವೇರಿ, ನಂಜರಾಯಪಟ್ಟಣ ಹೆಬ್ಬಾಲೆ ಮತ್ತು ಭುವನಗಿರಿ ಫೀಡರ್‍ಗಳಲ್ಲಿ ಹಾಗೂ ಸುಂಟಿಕೊಪ್ಪ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಚೆಟ್ಟಳ್ಳಿ, ನಾಕೂರು ಮತ್ತು ಮಾದಾಪುರ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವ್ಯದರಿಂದ ಅಕ್ಟೋಬರ್, 19 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಹೆಬ್ಬಾಲೆ ಶಿರಂಗಾಲ ತೊರೆನೂರು, ಕೂಡಿಗೆ, ನಾಕೂರು, ಹೊಸಕೋಟೆ, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಗಹೊಸೂರು, ರಂಗಸಮುದ್ರ, ಚೆಟ್ಟಳ್ಳಿ, ಮಾದಾಪುರ, ಕಂಬೂರು, ಜಂಬೂರು ಸೂರ್ಲಬಿ, ಗರ್ವಾಲೆ, ಕೂಡ್ಲೂರು ಚೆಟ್ಟಳ್ಳಿ, ಕಂಡಕೆರೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ತಿಳಿಸಿದ್ದಾರೆ.

Yellow ಅಲರ್ಟ್..
17/10/2019

Yellow ಅಲರ್ಟ್..

ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಎಲ್ಲರಿಗೂ ಮಾದರಿಯಾದ ಕೊಡಗು ಎಸ್‌.ಪಿ ಡಾ ಸುಮನ್ ಡಿ ಪನ್ನೇಕರ್ .......ಬಿಗ್ ಸೆಲ್ಯೂಟ್ ಮೇಡಂ...ಜನಮಿತ...
16/10/2019

ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಎಲ್ಲರಿಗೂ ಮಾದರಿಯಾದ ಕೊಡಗು ಎಸ್‌.ಪಿ ಡಾ ಸುಮನ್ ಡಿ ಪನ್ನೇಕರ್ .......

ಬಿಗ್ ಸೆಲ್ಯೂಟ್ ಮೇಡಂ...

ಜನಮಿತ್ರ:16-10-2019
ಬುಧವಾರ...

*ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ: ಪಾರ್ವತಿ ಅಪ್ಪಯ್ಯ*ಜನಮಿತ್ರ ಕೊಡಗು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೊಳಪಡುವ ಕರ್ನಾಟಕ ...
15/10/2019

*ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ: ಪಾರ್ವತಿ ಅಪ್ಪಯ್ಯ*

ಜನಮಿತ್ರ ಕೊಡಗು

:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೊಳಪಡುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ: ಪಾರ್ವತಿ ಅಪ್ಪಯ್ಯ ಅವರನ್ನು ನೇಮಿಸಿ ರಾಜ್ಯ ಸರಕಾರ ಇಂದು ಅಧಿಸೂಚನೆ ಹೊರಡಿಸಿದೆ. ಸದಸ್ಯರುಗಳಾಗಿ ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ ಮತ್ತು ಮೆಚ್ಚಿರ ಸುಭಾಷ್ ನಾಣಯ್ಯ ನೇಮಕ ಕೊಂಡಿದ್ದಾರೆ.

14/10/2019

ಅ.16 ರಂದು ವಿದ್ಯುತ್ ವ್ಯತ್ಯಯ

ಜನಮಿತ್ರ ಕೊಡಗು‌

-ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ಅಕ್ಟೋಬರ್, 16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೊನ್ನಂಪೇಟೆ, ವಿರಾಜಪೇಟೆ, ಶ್ರೀಮಂಗಲ, ಸಿದ್ದಾಪುರ ಹಾಗೂ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ, ವಿರಾಜಪೇಟೆ, ಬಿ.ಶೆಟ್ಟಗೇರಿ, ಬೇತ್ರೀ, ಕಡಂಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಕೋರಿದ್ದಾರೆ.

ವರ್ಲಿ ಕಲೆಯಿಂದ ಕಂಗೊಳಿಸುತ್ತಿದೆ ಕೊಡಗಿನ ಸೋಮವಾರಪೇಟೆ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢ ಶಾಲೆ...ಕನ್ನಡ ಶಿಕ್ಷಕ ರತ್ನಕುಮಾರ್ ಕೆಲಸಕ್ಕೆ ಎಲ್ಲ...
14/10/2019

ವರ್ಲಿ ಕಲೆಯಿಂದ ಕಂಗೊಳಿಸುತ್ತಿದೆ ಕೊಡಗಿನ ಸೋಮವಾರಪೇಟೆ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢ ಶಾಲೆ...

ಕನ್ನಡ ಶಿಕ್ಷಕ ರತ್ನಕುಮಾರ್ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ....

ಜನಮಿತ್ರ:14-10-2019 ಸೋಮವಾರ..

09/10/2019

*ಜನಮಿತ್ರ ಕೊಡಗು*
*ಮಡಿಕೇರಿ ದಸರಾ*

ದಶಮಂಟಪಗಳ ಶೋಭಾಯಾತ್ರೆ ವಿಜೇತರು
1) ದಂಡಿನ ಮಾರಿಯಮ್ಮ ದೇವಾಲಯ
2)ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ
3) ಕೋಟೆ ಮಹಾ ಗಣಪತಿ

Address


Alerts

Be the first to know and let us send you an email when ಜನಮಿತ್ರ ಕೊಡಗು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಜನಮಿತ್ರ ಕೊಡಗು:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share