The Newsnap

The Newsnap The world at your fingertip

ಬೆಂಗಳೂರು: 2025ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನಿರಾಸೆಯೇ ಎದುರಾಗಿದೆ. ರಾಜ್ಯದ ನಿರೀಕ್ಷಿತ ಯೋಜನೆಗಳಿಗೆ ಯಾವುದೇ ವಿಶೇಷ ಅನುದಾನ ಘೋಷಣೆ...
01/02/2025

ಬೆಂಗಳೂರು: 2025ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನಿರಾಸೆಯೇ ಎದುರಾಗಿದೆ. ರಾಜ್ಯದ ನಿರೀಕ್ಷಿತ ಯೋಜನೆಗಳಿಗೆ ಯಾವುದೇ ವಿಶೇಷ ಅನುದಾನ ಘೋಷಣೆ ಆಗಿಲ್ಲ. ಹಳೆಯ ರೈಲ್ವೇ ಯೋಜನೆಗಳಿಗೆ ಮಾತ್ರ ಸ್ವಲ್ಪ ಅನುದಾನ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಅಶೋಕ್ ಮತ್ತು ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. Join WhatsApp Group ರಾಜ್ಯಕ್ಕೆ ನೀಡಲಾದ ಅನುದಾನ:ಕೇಂದ್ರ ಸರ್ಕಾರ ರಾಜ್ಯಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ 50 ವರ್ಷಗಳ ಅವಧಿಗೆ ಬಡ್ಡಿರಹಿತ 1.5 ಲಕ್ಷ ಕೋಟಿ ರೂ. ನೆರವನ್ನು ನೀಡುವುದಾಗಿ ಘೋಷಿಸಿದೆ. 2021ರಲ್ಲಿ ಪ್ರಾರಂಭವಾದ ಈ ಯೋಜನೆ 2025-2039ರವರೆಗೆ ವಿಸ್ತರಿಸಲಾಗಿದೆ....

Union Budget 2025: No desired grant for Karnataka? ಕೇಂದ್ರ ಬಜೆಟ್ 2025: ಕರ್ನಾಟಕಕ್ಕೆ ಅಪೇಕ್ಷಿತ ಅನುದಾನ ಇಲ್ಲ?

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಮಧ್ಯಮ ವರ್ಗದ ಜನತೆಗೆ ಮಹತ್ವದ ಘೋಷಣೆ ಮಾಡ...
01/02/2025

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಮಧ್ಯಮ ವರ್ಗದ ಜನತೆಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಬಜೆಟ್ ಭಾಷಣದಲ್ಲಿ ಅವರು 12 ಲಕ್ಷ ರೂ. ಆದಾಯದವರೆಗೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಹಲವು ಉದ್ಯೋಗಸ್ಥರು ಮತ್ತು ಸ್ವಯಂ ಉದ್ಯೋಗಿಗಳಿಗೆ ದೊಡ್ಡ ಅನುಕೂಲ ಒದಗಿಸಲಿದೆ. Join WhatsApp Group ಮಧ್ಯಮ ವರ್ಗದ ಜನರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಓದಿ -ಕೇಂದ್ರ Budget 2025 : 120 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ, ಪ್ರಯಾಣಿಕರಿಗೆ ಸುಲಭ ಸಂಚಾರ ಈ ನಿರ್ಧಾನದೊಂದಿಗೆ ಹೆಚ್ಚುವರಿ ಉಳಿತಾಯದ ಅವಕಾಶ ಲಭ್ಯವಗುತ್ತಿದ್ದು, ಖರೀದಿ ಸಾಮರ್ಥ್ಯ ಹೆಚ್ಚುವ ನಿರೀಕ್ಷೆಯಿದೆ ಎಂದು ಆರ್ಥಿಕ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Good news for the middle class:. Tax exemption up to Rs 12 lakh income ಮಧ್ಯಮ ವರ್ಗಕ್ಕೆ ಶುಭವಾರ್ತೆ: 12 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯಿತಿ

ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಭಾಷಣದಲ್ಲಿ ...
01/02/2025

ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಭಾಷಣದಲ್ಲಿ 120 ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಿದ್ದಾರೆ. ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ಗುರಿಯಾಗಿಸಿ ಈ ಏರ್‌ಪೋರ್ಟ್‌ಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ. ಬಜೆಟ್ ಭಾಷಣದಲ್ಲಿ ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ. Join WhatsApp Group ಈ ಹೊಸ ವಿಮಾನ ನಿಲ್ದಾಣಗಳ ಮೂಲಕ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಸಂಚಾರ ಸುಗಮಗೊಳ್ಳಲಿದ್ದು, ಹಳೆಯ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಯೋಜನೆಗಳೂ ಅನುಷ್ಟಾನಗೊಳ್ಳಲಿವೆ.ಇದನ್ನು ಓದಿ -...

Establishment of 120 new airports, easy movement of passengers 120 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ, ಪ್ರಯಾಣಿಕರಿಗೆ ಸುಲಭ ಸಂಚಾರ

ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ ನವದೆಹಲಿ: ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲ...
01/02/2025

ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ ನವದೆಹಲಿ: ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸುವ ವೇಳೆ ಅವರು, ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಯಾಗಲಿದ್ದು, ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಬೇರೆ ಊರುಗಳಿಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು. Join WhatsApp Group ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ 36 ಜೀವರಕ್ಷಕ ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಎಂದು ಅವರು ಘೋಷಿಸಿದರು. ಇದನ್ನು ಓದಿ -ಕೇಂದ್ರ ಸರ್ಕಾರದಿಂದ ರೈತರಿಗೆ ಶುಭವಾರ್ತೆ: ‘ಧನಧಾನ್ಯ’ ಕೃಷಿ ಯೋಜನೆ ಜಾರಿ ಇದು ಚಿಕಿತ್ಸಾ ವೆಚ್ಚವನ್ನು ಕಡಿಮೆಯಾಗಿ, ರೋಗಿಗಳಿಗೆ ಹೆಚ್ಚಿನ ಅನುಕೂಲ ಒದಗಿಸುವ ಉದ್ದೇಶವನ್ನು ಹೊಂದಿದೆ.

Exemption from customs duty for 36 life-saving medicines 36 ಜೀವರಕ್ಷಕ ಔಷಧಿಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ

ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ ಸಿಕ್ಕಿದ್ದು, 'ಪಿಎಂ ಧನಧಾನ್ಯ ಕೃಷಿ ಯೋಜನೆ' ಜಾರಿಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿ...
01/02/2025

ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ ಸಿಕ್ಕಿದ್ದು, 'ಪಿಎಂ ಧನಧಾನ್ಯ ಕೃಷಿ ಯೋಜನೆ' ಜಾರಿಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2025ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದು, ಇದು 10 ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಕೃಷಿ ವಲಯವನ್ನು ಬಜೆಟ್‌ನಲ್ಲಿ ಮೊದಲ ಮಹತ್ವದ ಎಂಜಿನ್‌ ಎಂದು ಅವರು ವಿವರಿಸಿದರು. ಪಿಎಂ ಧನಧಾನ್ಯ ಕೃಷಿ ಯೋಜನೆ 100 ಕಡಿಮೆ ಉತ್ಪಾದಕತೆ ಹೊಂದಿರುವ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಈ ಯೋಜನೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಜೊತೆಗೆ, ಪಂಚಾಯತ್ ಮಟ್ಟದಲ್ಲಿ ಸಂಗ್ರಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ....

Good news for farmers from central government: implementation of 'Dhandhanya' agriculture scheme

ಮನುಷ್ಯ ಅಂದಮೇಲೆ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಯಾವುದೋ ಒಂದು ತಪ್ಪನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುತ್ತಾರಲ್ಲ...
01/02/2025

ಮನುಷ್ಯ ಅಂದಮೇಲೆ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಯಾವುದೋ ಒಂದು ತಪ್ಪನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುತ್ತಾರಲ್ಲವೇ ? ತಾನು ಎಂದಿಗೂ ತಪ್ಪೇ ಮಾಡಿಲ್ಲವೆಂದು ಹೇಳಿಕೊಳ್ಳುವವರು ಬಹುಶಃ ಮನುಷ್ಯರಾಗಿರಲು ಸಾಧ್ಯವೇ ಇಲ್ಲವೆನ್ನುವಷ್ಟು "ತಪ್ಪು" ಎನ್ನುವುದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಹೆಜ್ಜೆ ಹೆಜ್ಜೆಯಲ್ಲಿಯೂ ಬೆರೆತು ಬಂದಿದೆ. ತಪ್ಪುಗಳಲ್ಲಿ ಕೆಲವು ದೊಡ್ಡ ತಪ್ಪುಗಳಾದರೆ ಮತ್ತೇ ಕೆಲವು ಚಿಕ್ಕಪುಟ್ಟ ತಪ್ಪುಗಳಾಗಿದ್ದಿರಬಹುದು. ಕೆಲವನ್ನು ತಪ್ಪೆಂದು ಗೊತ್ತಿದ್ದೂ ಮಾಡಿರುತ್ತೇವೆ ಮತ್ತೇ ಕೆಲವನ್ನು ಮಾಡಿದ ನಂತರ ಅದು ತಪ್ಪೆಂದು ಗೊತ್ತಾಗುತ್ತದೆ. ಅಂತೂ ಯಾರೇ ಆಗಿರಲಿ, ಎಂದಾದರೂ ಒಂದು ತಪ್ಪು ಮಾಡಿರೋದು ಮಾತ್ರ ಗ್ಯಾರಂಟಿ !...

Into the labyrinth of unforgivable mistakes ಕ್ಷಮೆಯಿರದ ತಪ್ಪುಗಳ ಚಕ್ರವ್ಯೂಹದೊಳಗೆ

ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾವೇ ಅಡುಗೆ ಮಾಡಿ ತಿನ್ನಲು ಸಮಯವಿಲ್ಲದ ಕಾರಣ ಹೊರಗಡೆ ಅಥವಾ ಹೋಟೆಲ್ ಗಳಲ್ಲಿ, ರಸ್ತೆ ಬದಿಗಳಲ್ಲಿ ಸಿಗುವಂತಹ ...
01/02/2025

ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾವೇ ಅಡುಗೆ ಮಾಡಿ ತಿನ್ನಲು ಸಮಯವಿಲ್ಲದ ಕಾರಣ ಹೊರಗಡೆ ಅಥವಾ ಹೋಟೆಲ್ ಗಳಲ್ಲಿ, ರಸ್ತೆ ಬದಿಗಳಲ್ಲಿ ಸಿಗುವಂತಹ ಮತ್ತೆ ಬೇಕರಿ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಆದರೆ ಇವುಗಳು ಅವರ ಬಾಯಿಗೆ ರುಚಿಯನ್ನು ನೀಡುತ್ತವೆಯಾದರೂ ಆರೋಗ್ಯ ಹಾಳಾಗುತ್ತದೆ ಏಕೆಂದರೆ ಹೋಟೆಲ್ ಗಳಲ್ಲಿ ಹೆಚ್ಚಾಗಿ ತಿನಿಸುಗಳಲ್ಲಿ ಸೋಡ ಬಳಸುತ್ತಾರೆ. ಈ ಸೋಡಾವನ್ನು ಅಡುಗೆಯಲ್ಲಿ ಬಳಸುವುದರಿಂದ ಊಟ ಮಾಡುವಾಗ ಜನರಿಗೆ ಊಟ ಹೆಚ್ಚಾಗಿ ಸೇರುವುದಿಲ್ಲ ಸ್ವಲ್ಪವೇ ಊಟ ತಿಂದ ತಕ್ಷಣ ಹೊಟ್ಟೆ ತುಂಬಿ ದಂತಾಗುತ್ತದೆ ಏಕೆಂದರೆ ಇದಕ್ಕೆ ಕಾರಣ ಅಡುಗೆಯಲ್ಲಿ ಬಳಸಿದ ಅಡುಗೆ ಸೋಡಾ ಇಂತಹ ಅಡುಗೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಎದೆಯೂರಿಯಂತಹ ಸಮಸ್ಯೆಗಳು ಎದುರಾಗುತ್ತವೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ಏಕೆಂದರೆ ಅದಕ್ಕೆ ನಾವೇ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿಕೊಳ್ಳಬಹುದು....

Nature's gift for indigestion Ajwain ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...
01/02/2025

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕೋಲಾರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ದಾವಣಗೆರೆ, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. Join WhatsApp Group ಇದೀಗ ರಾಜ್ಯದಲ್ಲಿ ಚಳಿ ಪ್ರಮಾಣ ಹಿಗ್ಗಿ ಕಡಿಮೆಯಾಗುತ್ತಿದ್ದು, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚಳಿ ಮುಂದುವರಿಯಲಿದೆ.ಇದನ್ನು ಓದಿ -ಜೆಟ್​ ವಿಮಾನ ಪತನ: 6 ಮಂದಿ ಸಾವು, ಹಲವಾರು ಮನೆಗಳಿಗೆ ಬೆಂಕಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ತಂಪಾದ ಹವಾಮಾನ ಸಾಧಾರಣವಾಗಿ ಇರಲಿದೆ.

Rain forecast in many districts of the state ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಫಿಲಡೆಲ್ಫಿಯ ಬಳಿ ಶನಿವಾರ (ಫೆಬ್ರವರಿ 1) ಭಾರಿ ಅನಾಹುತ ಸಂಭವಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿ...
01/02/2025

ಫಿಲಡೆಲ್ಫಿಯ ಬಳಿ ಶನಿವಾರ (ಫೆಬ್ರವರಿ 1) ಭಾರಿ ಅನಾಹುತ ಸಂಭವಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೈದ್ಯಕೀಯ ಸಾರಿಗೆ ಜೆಟ್​ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಮಗುವಿನೊಂದಿಗೆ ಕುಟುಂಬಸ್ಥರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವಿಮಾನವು ಶಾಪಿಂಗ್ ಮಾಲ್ ಸಮೀಪ ಪತನಗೊಂಡ ಕಾರಣ ಸುತ್ತಮುತ್ತಲಿನ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಾಣಾಪಾಯದಿಂದ ಯಾರಾದರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ವಿಮಾನ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. Join WhatsApp Group ಸಾಲು ಸಾಲು ಮನೆಗಳ ಮೇಲೆ ವಿಮಾನ ಅಪಘಾತಗೊಂಡಿದ್ದು, ಮನೆಯೊಳಗಿನ ಸಾವು-ನೋವಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ....

Jet plane crash: 6 dead, several houses on fire ಜೆಟ್​ ವಿಮಾನ ಪತನ: 6 ಮಂದಿ ಸಾವು, ಹಲವಾರು ಮನೆಗಳಿಗೆ ಬೆಂಕಿ

ಬೆಂಗಳೂರು: ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಾಡಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್...
31/01/2025

ಬೆಂಗಳೂರು: ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಾಡಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಜಮೀನು ಪೌತಿ ಖಾತೆ ಮಾಡಿಕೊಡಲು 2.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. Join WhatsApp Group ಲಂಚ ಸ್ವೀಕರಿಸುತ್ತಿದ್ದವರು ಎಳುವಳ್ಳಿ ಗ್ರಾಮ ಲೆಕ್ಕಾಧಿಕಾರಿ ಮಡಿವಾಳಪ್ಪ ಹಾಗೂ ವಿಜಯಪುರ ಗ್ರಾಮ ಲೆಕ್ಕಾಧಿಕಾರಿ ಸುನಿಲ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಆರ್‌ಐ ಸತ್ಯನಾರಾಯಣ ಕೂಡ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ದಾಳಿ ಬಳಿಕ ಸತ್ಯನಾರಾಯಣ ಪರಾರಿಯಾಗಿದ್ದಾರೆ.ಇದನ್ನು ಓದಿ -...

Accepting 2.5 lakh bribe - Two village accountants in Lokayukta trap 2.5 ಲಕ್ಷ ಲಂಚ ಸ್ವೀಕಾರ - ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್ತ ಬಲೆಗೆ

31/01/2025

ಬೆಂಗಳೂರು, ಜನವರಿ 31: ಕರ್ನಾಟಕ ಸರ್ಕಾರದಿಂದ ಹೊಸ ವರ್ಷಕ್ಕೆ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಸಂಭ್ರಮದ ಸುದ್ದಿ ನೀಡಲಾಗಿದೆ. ರಾಜ್ಯದ ಆರ್ಥಿಕ ಇಲಾಖೆಯಿಂದ ಗೌರವಧನ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿದ್ದು, ಈ ನಿರ್ಧಾರ ಅತಿಥಿ ಶಿಕ್ಷಕರಿಗೆ ಬಹುದೊಡ್ಡ ಸಹಾಯವಾಗಲಿದೆ. ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನವನ್ನು ರೂ.10,500 ರಿಂದ ರೂ.16,650 ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಮಾಸ್ಟರ್ ಆನ್ ಡ್ಯೂಟಿ ಭತ್ಯೆ ರೂ.3,150 ಹಾಗೂ ಪ್ರಯಾಣ ಭತ್ಯೆ ರೂ.3,000 ಸೇರಿಸಲಾಗಿದೆ. Join WhatsApp Group…...

Increase in honorarium for guest teachers and lecturers by state govt ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಹಾಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್...
31/01/2025

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಹಾಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಬಳಿಕ, ಇದೀಗ ಮತ್ತೊಂದು ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸಂಗಮದಿಂದ 3 ಕಿ.ಮೀ ದೂರದಲ್ಲಿರುವ ಜೂಸಿ ಘಾಟ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. Join WhatsApp Group ಜನಸಂದಣಿಯ ಅತಿಯಾದ ಒತ್ತಡದಿಂದಾಗಿ ಜೂಸಿಯಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಕಲ್ಪವಾಸಿ ಪೊಲೀಸ್ ಠಾಣೆಯ ವೃತ್ತಾಧಿಕಾರಿ ರುದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.ಇದನ್ನು ಓದಿ -ರಾಜ್ಯದ ಏಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ! ಇನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದರು.

Another stampede at Maha Kumbh Mela: 7 dead ಮಹಾ ಕುಂಭಮೇಳದಲ್ಲಿ ಮತ್ತೊಂದು ಕಾಲ್ತುಳಿತ: 7 ಜನ ದುರ್ಮರಣ

ಬೆಂಗಳೂರು, ಜ.31: ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಳು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆ...
31/01/2025

ಬೆಂಗಳೂರು, ಜ.31: ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಳು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಬಂದ ದೂರಿನ ಹಿನ್ನಲೆಯಲ್ಲಿ, ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು, ಚಿತ್ರದುರ್ಗ, ರಾಯಚೂರು, ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಅಧಿಕಾರಿಗಳು: Join WhatsApp Group ಸಂಜಯ್ ಮಾಂಡೆಡ್ – ಬೆಳಗಾವಿ ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಯ ಪ್ರಥಮ ವಿಭಾಗದ ಸಹಾಯಕ...

Lokayukta attack on the houses and offices of 7 state govt officials! ರಾಜ್ಯದ ಏಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ!

ವಿಜಯಪುರ: ಪೊಲೀಸ್ ವಿಚಾರಣೆಗೆ ಭಯಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮೃತ ಯುವಕ...
31/01/2025

ವಿಜಯಪುರ: ಪೊಲೀಸ್ ವಿಚಾರಣೆಗೆ ಭಯಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮೌನೇಶ್ ಅಬ್ಬಿಹಾಳ (30) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಮೌನೇಶ್‌ನ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದರಿಂದ, ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೌನೇಶ್ ಅವರನ್ನು ವಿಚಾರಣೆಗೆ ಕರೆಸಿದ್ದರು. Join WhatsApp Group ಗುರುವಾರ ಕೂಡ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ವಿಚಾರಣೆಗೆ ಹೆದರಿದ ಯುವಕ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.ಚಿನ್ನದ ಹಗರಣ: 50ಕ್ಕೂ ಅಧಿಕ ಮಂದಿ ವಂಚನೆಗೆ ಬಲಿ! ಈ ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

A young man who was afraid of police interrogation commits su***de ! ಪೊಲೀಸ್ ವಿಚಾರಣೆಗೆ ಭಯಗೊಂಡ ಯುವಕ ನೇಣಿಗೆ ಶರಣು!

ತುಮಕೂರು: ಕಡಿಮೆ ದರದಲ್ಲಿ ಚಿನ್ನ ಖರೀದಿಸಿ, ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ದುಪ್ಪಟ್ಟು ಲಾಭ ನೀಡುವುದಾಗಿ ವಂಚನೆ ನಡೆಸಿದ ಆರೋಪದ ಮೇರೆಗೆ ತುಮಕೂ...
31/01/2025

ತುಮಕೂರು: ಕಡಿಮೆ ದರದಲ್ಲಿ ಚಿನ್ನ ಖರೀದಿಸಿ, ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ದುಪ್ಪಟ್ಟು ಲಾಭ ನೀಡುವುದಾಗಿ ವಂಚನೆ ನಡೆಸಿದ ಆರೋಪದ ಮೇರೆಗೆ ತುಮಕೂರಿನ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣ ಎದುರಿನ ಆಕಾಶ್ ಜುವೆಲ್ಲರ್ಸ್ ಮಾಲೀಕ ಶಿವಾನಂದ ಮೂರ್ತಿ ಮತ್ತು ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಸಂಜೆವರೆಗೆ 50ಕ್ಕೂ ಹೆಚ್ಚು ಮಂದಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಒಟ್ಟು ₹12.50 ಕೋಟಿಗೂ ಹೆಚ್ಚು ಮೊತ್ತ ವಂಚನೆಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ, ಮತ್ತು ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆರೋಪಿ ಶಿವಾನಂದ ಮೂರ್ತಿ ತಲೆಮರೆಸಿಕೊಂಡಿದ್ದು, ದೂರು ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ....

Gold Scam: More than 50 victims of fraud! ಚಿನ್ನದ ಹಗರಣ: 50ಕ್ಕೂ ಅಧಿಕ ಮಂದಿ ವಂಚನೆಗೆ ಬಲಿ!

"ಜೀವನದಲ್ಲಿ ಬೆಂದರೆ ಮಾತ್ರವೇ ಬೇಂದ್ರೆಯವರಾಗಲು ಸಾಧ್ಯ" – ಈ ಒಂದು ಮಾತು ದ. ರಾ. ಬೇಂದ್ರೆಯವರ ಜೀವನ ಹಾಗೂ ಅವರ ಕಾವ್ಯಪ್ರಪಂಚವನ್ನು ಸಂಪೂರ್ಣವಾ...
31/01/2025

"ಜೀವನದಲ್ಲಿ ಬೆಂದರೆ ಮಾತ್ರವೇ ಬೇಂದ್ರೆಯವರಾಗಲು ಸಾಧ್ಯ" – ಈ ಒಂದು ಮಾತು ದ. ರಾ. ಬೇಂದ್ರೆಯವರ ಜೀವನ ಹಾಗೂ ಅವರ ಕಾವ್ಯಪ್ರಪಂಚವನ್ನು ಸಂಪೂರ್ಣವಾಗಿ ವಿವರಿಸುವಂಥದು. ಇಲ್ಲಿ ‘ಬೇಯು’ವುದಕ್ಕೂ ಎರಡು ಅರ್ಥಗಳಿವೆ. ಬೆಂಕಿಯಲ್ಲಿ ತಪಿಸುವದು ಎನ್ನುವುದು ಒಂದು ಅರ್ಥವಾದರೆ, ಪಕ್ವವಾಗುವುದು ಎನ್ನುವುದು ಎರಡನೆಯ ಅರ್ಥ. ಬೇಂದ್ರೆಯವರು ಬದುಕಿನ ಕಾವಲಿಯಲ್ಲಿ ಬೆಂದಿದ್ದಂತೂ ಸರಿಯೇ. ಜೊತೆಗೇ ಅವರ ಅಂತರಂಗವೂ ಸಹ ಪಕ್ವವಾಗುತ್ತಿತ್ತು. ಇದು ಅವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿದೆ. ದುಃಖ, ಬಡತನ, ನೋವು, ಕಷ್ಟಗಳ ನಡುವೆ ಅವರು ತಮ್ಮ ಕಾವ್ಯಪ್ರಭೆಯನ್ನು ಹರಡಿದರು. “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ” ಎಂಬ ಅವರ ಮಾತು ಕೇವಲ ಕವಿಯ ವಾಕ್ಯವಲ್ಲ, ಅವರ ಬದುಕಿನ ತತ್ತ್ವವೂ ಹೌದು....

Da. Ra. Bendre – The Musk of Kannada Poetry ದ. ರಾ. ಬೇಂದ್ರೆ – ಕನ್ನಡ ಕಾವ್ಯಲೋಕದ ಕಸ್ತೂರಿ -

ಬೆಂಗಳೂರು: ನಗರದ ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆಯ ಮೈದಾನದಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದ್ದು, 100ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ...
29/01/2025

ಬೆಂಗಳೂರು: ನಗರದ ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆಯ ಮೈದಾನದಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದ್ದು, 100ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಈ ಮೈದಾನದಲ್ಲಿ ಪೊಲೀಸರು ಜಪ್ತಿ ಮಾಡಿದ್ದ ವಾಹನಗಳನ್ನು ಪಾರ್ಕ್ ಮಾಡಿದ್ದರು. ಆದರೆ, ಮೈದಾನದಲ್ಲಿ ಹುಲ್ಲು ಗಿಡಗಳು ಬೆಳೆದುಕೊಂಡಿದ್ದರಿಂದ ಬೆಂಕಿ ವೇಗವಾಗಿ ಹರಡಿದ್ದು, ಐದು ಕಾರುಗಳು, ಐದು ಆಟೋಗಳು ಹಾಗೂ 80ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. Join WhatsApp Group ಘಟನೆಯ ಮೂಲ ಕಾರಣ , ಯಾರೋ ಸಿಗರೇಟು ಹೊತ್ತಿಸಿ ಕಡ್ಡಿ ಎಸೆದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ....

Terrible fire disaster in Bengaluru : More than 100 vehicles gutted ಬೆಂಗಳೂರು ನಗರದಲ್ಲಿ ಭೀಕರ ಬೆಂಕಿ ಅನಾಹುತ: 100ಕ್ಕೂ ಹೆಚ್ಚು ವಾಹನಗಳು ಭಸ್ಮ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31 ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಫೆಬ್ರವರಿ 1 ರಂದು ಹಣಕ...
29/01/2025

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31 ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಅವಧಿಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಂದು ಆರಂಭವಾಗಿ, ಫೆಬ್ರವರಿ 13 ರಂದು ಕೊನೆಗೊಳ್ಳಲಿದೆ. ಎರಡನೇ ಭಾಗವು ಮಾರ್ಚ್ 10 ರಿಂದ ಏಪ್ರಿಲ್ 4, 2025ರವರೆಗೆ ನಡೆಯಲಿದೆ. ರಾಷ್ಟ್ರಪತಿ ಭಾಷಣ ಮತ್ತು ಚರ್ಚೆಸಂಸತ್ತಿನ ಅಧಿವೇಶನದ ಮೊದಲ ದಿನ, ರಾಷ್ಟ್ರಪತಿ ಅವರ ಭಾಷಣದ ನಂತರ, ರಾಜ್ಯಸಭೆಯು ಸರ್ಕಾರಿ ವ್ಯವಹಾರಗಳ ಪ್ರತ್ಯೇಕ ಅಧಿವೇಶನವನ್ನು ನಡೆಸಲಿದೆ....

Parliament budget session from Jan 31 ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ, ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ

Address


Alerts

Be the first to know and let us send you an email when The Newsnap posts news and promotions. Your email address will not be used for any other purpose, and you can unsubscribe at any time.

Contact The Business

Send a message to The Newsnap:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share