C E Cini creations

  • Home
  • C E Cini creations

C E Cini creations save our humanity

07/08/2023

ಕನ್ನಡದ ಹೆಸರಾಂತ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ, ಹೃದಯಾಘಾತದಿಂದ ನಿಧನರಾದ ಸುದ್ದಿ ಅತ್ಯಂತ ಆಘಾತ ತಂದಿದೆ.
ನೋವನ್ನು ಭರಿಸುವಂತಹ ಶಕ್ತಿಯನ್ನು ಆ ಕುಟುಂಬಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಇಡೀ ಬದುಕನ್ನೇ ಚಿತ್ರರಂಗಕ್ಕಾಗಿ ಮುಡಿಪಾಗಿಟ್ಟ , ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದ ಹಿರಿಯ ಚೇತನ ಶಿವರಾಮ್ ಸರ್ ಅವರು ಬದುಕಿನ ಯಾನ ಮುಗಿಸಿರುವ...
04/12/2021

ಇಡೀ ಬದುಕನ್ನೇ ಚಿತ್ರರಂಗಕ್ಕಾಗಿ ಮುಡಿಪಾಗಿಟ್ಟ , ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದ ಹಿರಿಯ ಚೇತನ ಶಿವರಾಮ್ ಸರ್ ಅವರು ಬದುಕಿನ ಯಾನ ಮುಗಿಸಿರುವುದು ನೋವಿನ ಸಂಗತಿ.
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

ಶಂಕರ್ ನಾಗ್ ಎಂಬ ಮಿಂಚು ಮರೆಯಾಗಿ ಇಂದಿಗೆ 31 ವರ್ಷ ಅಂದರು ಇಂದು ಎಲ್ಲಾ ಕನ್ನಡಿಗರ ಮನಸ್ಸಿನಲ್ಲಿ ಅವರು ಮನೆ ಮಾಡಿಕೊಂಡಿದ್ದಾರೆ. ಇನ್ನು ಶತಮಾನ ...
30/09/2021

ಶಂಕರ್ ನಾಗ್ ಎಂಬ ಮಿಂಚು ಮರೆಯಾಗಿ ಇಂದಿಗೆ 31 ವರ್ಷ ಅಂದರು ಇಂದು ಎಲ್ಲಾ ಕನ್ನಡಿಗರ ಮನಸ್ಸಿನಲ್ಲಿ ಅವರು ಮನೆ ಮಾಡಿಕೊಂಡಿದ್ದಾರೆ. ಇನ್ನು ಶತಮಾನ ಉರುಳಿದರೂ ಕರುನಾಡು ಮರೆಯದ ಮಾಣಿಕ್ಯ, ಶಂಕರ್ ನಾಗ್ ಅವರನ್ನು ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನೆನೆಯೋಣ.

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ===================ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಖ್ಯಾತ...
11/06/2021

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ
===================
ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ(67) ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.
=====================
👉 ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ
===============
ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.
=================
👉 ಜನನ, ಜೀವನ
============
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
===========
👉 ಕೃತಿಗಳು
- ಪಿ.ಎಚ್ ಡಿ ಸಂಶೋಧನಾಪ್ರಬಂಧ – ಗ್ರಾಮ ದೇವತೆಗಳು, 1997
=============
👉 ಕವನ ಸಂಕಲನಗಳು
================
- ಹೊಲೆ ಮಾದಿಗರ ಹಾಡು, 1975
- ಮೆರವಣಿಗೆ, 2000
- ಸಾವಿರಾರು ನದಿಗಳು, 1979
- ಕಪ್ಪು ಕಾಡಿನ ಹಾಡು, 1983
- ಆಯ್ದಕವಿತೆಗಳು, 1997
- ಅಲ್ಲೆಕುಂತವರೆ
- ನನ್ನ ಜನಗಳು ಮತ್ತು ಇತರ ಕವಿತೆಗಳು, 2005
- ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
===================
👉 ವಿಮರ್ಶನಾ ಕೃತಿಗಳು
=============
- ಹಕ್ಕಿ ನೋಟ, 1991
- ರಸಗಳಿಗೆಗಳು
- ಎಡಬಲ
- ಉರಿಕಂಡಾಯ, 2009
=============
👉 ಲೇಖನಗಳ ಸಂಕಲನ
============
- ಅವತಾರಗಳು, 1991
- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996
- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004
- ಜನಸಂಸ್ಕೃತಿ, 2007
==============
👉 ನಾಟಕಗಳು
===========
- ಏಕಲವ್ಯ, 1986
- ನೆಲಸಮ, 1980
- ಪಂಚಮ, 1980
=========
👉 ಆತ್ಮಕಥೆ
===========
- ಊರುಕೇರಿ- ಭಾಗ-1, 1997
- ಊರುಕೇರಿ- ಭಾಗ-2, 2006
===========
🌷ಗೌರವ, ಪ್ರಶಸ್ತಿಗಳು
===============
- ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
- ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
- ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
- ಜಾನಪದ ತಜ್ಞ ಪ್ರಶಸ್ತಿ -2001
- 2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
- ಸಂದೇಶ್ ಪ್ರಶಸ್ತಿ -2001
- ಡಾ.ಅಂಬೇಡ್ಕರ್ ಪ್ರಶಸ್ತಿ -2002
- ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
- ಬಾಬುಜಗಜೀವನರಾಮ್ ಪ್ರಶಸ್ತಿ -2005
- ನಾಡೋಜ ಪ್ರಶಸ್ತಿ -2007
- ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
- ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
- ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
- ನೃಪತುಂಗ ಪ್ರಶಸ್ತಿ -2018
- ಪಂಪ ಪ್ರಶಸ್ತಿ – 2019
💐
ವರದಿ : ವಾಟ್ಸಪ್ ಕೃಪೆ .

ಪ್ರೀತಿಯ ಸ್ನೇಹಿತರೇ,ಇಂದು ನಮ್ಮ ಸಂಸ್ಥೆಯಾದ ಕಾವೇರಿ ಎಕ್ಸ್ ಪ್ರೆಸ್ ನ ಜೂನಿಯರ್ ಡ್ಯಾನ್ಸರ್ ಗಳಾದ ಡ್ಯಾನ್ಸಿಂಗ್ ಕ್ವೀನ್ ದೀಕ್ಷಾ ಹಾಗೂ ಸ್ಮೈಲಿ...
30/01/2021

ಪ್ರೀತಿಯ ಸ್ನೇಹಿತರೇ,
ಇಂದು ನಮ್ಮ ಸಂಸ್ಥೆಯಾದ ಕಾವೇರಿ ಎಕ್ಸ್ ಪ್ರೆಸ್ ನ ಜೂನಿಯರ್ ಡ್ಯಾನ್ಸರ್ ಗಳಾದ ಡ್ಯಾನ್ಸಿಂಗ್ ಕ್ವೀನ್ ದೀಕ್ಷಾ ಹಾಗೂ ಸ್ಮೈಲಿ ಶ್ರೇಯಸ್ ಇಬ್ಬರ ಹುಟ್ಟು ಹಬ್ಬದ ದಿನ.
ಹುಟ್ಟು ಹಬ್ಬದ ಶುಭಾಶಯಗಳು ದೀಕ್ಷಾ ಮತ್ತು ಶ್ರೇಯಸ್ . ನಿಮ್ಮ ಈ ಜೀವನ ಹಾಗೂ ಕಲೆ ಜೀವನವು ಯಶಸ್ವಿಯಾಗಲಿ.ಆ ದೇವರು ಆರೋಗ್ಯ ಐಶ್ವರ್ಯವನ್ನು ಕೊಟ್ಟು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿ.
ಇಂತಿ ಕಾವೇರಿ ಎಕ್ಸ್ ಪ್ರೆಸ್ ತಂಡ,ಹುಣಸೂರು.

ಸಮಸ್ತ ನಾಡಿನ ಜನತೆಗೆ ,ನಾಡು ನುಡಿಗಾಗಿ ಆಂಗ್ಲರ ವಿರುದ್ಧ ಹೋರಾಡಿದ ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿ, ವೀರ ಮಹಿಳೆ ಕಿತ್ತೂರು ರಾಣ...
23/10/2020

ಸಮಸ್ತ ನಾಡಿನ ಜನತೆಗೆ ,
ನಾಡು ನುಡಿಗಾಗಿ ಆಂಗ್ಲರ ವಿರುದ್ಧ ಹೋರಾಡಿದ ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿ, ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವದ ಶುಭಾಶಯಗಳು.

ಈ ನೆಲದ ಧೀರ ಮಹಿಳೆ ಹಾಗೂ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಮಹಾನ್ ದೇಶಭಕ್ತೆಗೆ ನನ್ನ ನಮನಗಳು.

22/10/2020

ಹೊಸದಾಗಿ ಪ್ರಾರಂಭವಾಗುತ್ತಿರುವ ಕನ್ನಡ ಸಿನಿಮಾ(DANCE AND SING BASED)ಗೆ ಪುರುಷ ಮತ್ತು ಮಹಿಳಾ ಕಲಾವಿದರು ಬೇಕಾಗಿದ್ದಾರೆ.

#ಪುರುಷ_ನಾಯಕ(Hero)
(ಕಲಾವಿದರು 23_ರಿಂದ_25_ವರ್ಷದವರ_ಮಾತ್ರ.)
* #ಮಹಿಳಾ_ಕಲಾವಿದರು_ನಾಯಕಿ(Heroine) (18 ರಿಂದ 23 ವರ್ಷದವರು ಮಾತ್ರ.)
ಹಾಗೂ
#ಪುರುಷ_ಕಲಾವಿದರು(supporting)
(30 ರಿಂದ 50 ವರ್ಷದವರ ಮಾತ್ರ).

#ಮಹಿಳಾ_ಕಲಾವಿದರು*
(16*ರಿಂದ*45*ವರ್ಷದವರು* *ಮಾತ್ರ).

#ಮಕ್ಕಳು_ಕಲಾವಿದರು (8 ರಿಂದ 15ವರ್ಷದವರು)

ಿರ್ಮಾಪಕರು ಸಹ ಬೇಕಾಗಿದ್ದಾರೆ.

Selection for Last Date:-25/October/2020
Select ಆದವರನ್ನು ನಾವೇ ಖುದ್ದಾಗಿ ಕರೆಗಳನ್ನು ಮಾಡುತ್ತೇವೆ, ಹಾಗೂ select ಆದವರು Screentestಗೇ ಬರಬೇಕಾಗುತ್ತದೆ.

ನಿರ್ದೇಶಕರು ಕೆ ಮಾದು
ನಿರ್ಮಾಪಕರು ಸಿ ಇ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವುದು.

ಇತ್ತೀಚಿನ 2 ಭಾವಚಿತ್ರ
ನಿಮ್ಮ ಅಭಿನಯದ 2 ನಿಮಿಷ ದ ವಿಡಿಯೋ

+919008624515
+918105613556
+917349320224

Note:-please don't send selfie photos and Tiktok vedios.

ಸೂಚನೆ :- ಕರೆಗಳನ್ನು ದಯವಿಟ್ಟು ಮಾಡಬೇಡಿ.

Forward to all groups, your friends, neighbours and helo them.

ಹಿರಿಯ ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶ...
24/09/2020

ಹಿರಿಯ ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಕಾವೇರಿ ಎಕ್ಸ್ ಪ್ರೆಸ್ ನ ಮತ್ತೊಂದು ಹೆಜ್ಜೆ ಸ್ನೇಹಿತರೇ, ಇಲ್ಲಿಯವರೆಗೂ ನಮ್ಮ ಕಾವೇರಿ ಎಕ್ಸ್ ಪ್ರೆಸ್ ಸಂಸ್ಥೆಯು ಪತ್ರಿಕಾ ರಂಗ ಹಾಗೂ ನೃತ್ಯ ಕಲ...
20/09/2020

ಕಾವೇರಿ ಎಕ್ಸ್ ಪ್ರೆಸ್ ನ ಮತ್ತೊಂದು ಹೆಜ್ಜೆ
ಸ್ನೇಹಿತರೇ, ಇಲ್ಲಿಯವರೆಗೂ ನಮ್ಮ ಕಾವೇರಿ ಎಕ್ಸ್ ಪ್ರೆಸ್ ಸಂಸ್ಥೆಯು ಪತ್ರಿಕಾ ರಂಗ ಹಾಗೂ ನೃತ್ಯ ಕಲಾರಂಗದಲ್ಲಿ ಗುರುತಿಸಿಕೊಂಡಿದ್ದು, ಹಲವಾರು ಪ್ರಶಸ್ತಿಯ ಗೌರವ ಸಂಪಾದಿಸಿದೆ. ಜೊತೆಗೆ ನೃತ್ಯಲೋಕದಲ್ಲಿ ಜಿಲ್ಲಾ, ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಯಶಸ್ವಿ ಸಂಸ್ಥೆಯಾಗಿ ನಡೆಯುತ್ತಿರುವುದು ಸಂತಸದ ವಿಷಯ. ಈ ಯಶಸ್ಸಿನ ನಾಗಲೋಟಕ್ಕೆ ನಮ್ಮ ಹೆಮ್ಮೆಯ ಸಂಸ್ಥೆಯ ಮತ್ತೊಂದು ಹೆಜ್ಜೆ ಸಿ ಇ ಸಿನಿ ಕ್ರಿಯೇಷನ್ಸ್ .
ನಮ್ಮ ನೂತನ C E cini creations ಸಂಸ್ಥೆಯು ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಹಾಗಾಗಿ ನಮ್ಮ ಸಂಸ್ಥೆಯಿಂದ ತಯಾರಾಗುವ ಚಲನಚಿತ್ರಗಳಲ್ಲಿ ಪ್ರತಿಭಾವಂತ ಮಕ್ಕಳಿಗೆ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಈ ಸಂಸ್ಥೆಯ ಮೂಲಕ ಬೆಳಕಿಗೆ ತರಲಿದೆ.ಹಾಗೂ ಆಸಕ್ತಿ ಇರುವ.,ಅವಕಾಶ ಅರಸಿ ಬರುವವರಿಗೆ ಮಾರ್ಗದರ್ಶನದೊಂದಿಗೆ ಒಳ್ಳೆಯ ತರಬೇತಿ ನೀಡಲಾಗುವುದು. ಹಾಗೂ ಸಮಾಜದ ಕಳಕಳಿಯುಳ್ಳ, ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಹೊರ ತರುವ ಉದ್ದೇಶದಿಂದ ನಮ್ಮ ಕಾವೇರಿ ಎಕ್ಸ್ ಪ್ರೆಸ್ ಸಂಸ್ಥೆಯು ಈ ಸಿ ಇ ಸಿನಿ ಕ್ರಿಯೇಷನ್ಸ್ ಸಂಸ್ಥೆಯನ್ನು ಪ್ರಾರಂಭಿಸಿದೆ.
ಇಲ್ಲಿಯತನಕ ನೀಡಿದ ಪ್ರೋತ್ಸಾಹ, ಬೆಂಬಲ, ಸಹಕಾರವನ್ನು ಮುಂದೆಯೂ ಸಹ ನಮ್ಮ ಸಂಸ್ಥೆಗೆ ನೀಡಿ ಹರಸಿ, ಆಶೀರ್ವಾದಿಸಿ.
ಕೆ ಮಾದುಹುಣಸೂರು.
ನೃತ್ಯ ನಿರ್ದೇಶಕರು
ನಿರ್ದೇಶಕರು
ಸಂಸ್ಥಾಪಕರು
ಕಾವೇರಿ ಎಕ್ಸ್ ಪ್ರೆಸ್ ಸಂಸ್ಥೆ.
ಹುಣಸೂರು.

Address


Telephone

+919008624515

Website

Alerts

Be the first to know and let us send you an email when C E Cini creations posts news and promotions. Your email address will not be used for any other purpose, and you can unsubscribe at any time.

Contact The Business

Send a message to C E Cini creations:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share