Nampeparu

Nampeparu ಚರ್ಚೆಗೊಂದು ನಿಖರ ಉತ್ತರ...!

14/08/2024
29/07/2024

ಮತ್ತೊಂದು ರೈಲು ದುರ್ಘಟನೆ

ಖ್ಯಾತ ನಿರೂಪಕಿ ಇನ್ನಿಲ್ಲ
11/07/2024

ಖ್ಯಾತ ನಿರೂಪಕಿ ಇನ್ನಿಲ್ಲ

ಕೋಮುವಾದಿ ಮಾರ್ಕೇಟ್‌ನಲ್ಲಿ ಅತ್ಯಂತ ದುಬಾರಿಯಾದ ವಸ್ತು ಪ್ರೀತಿ.-ಮಲ್ಲಿ. ಎಸ್.
07/05/2024

ಕೋಮುವಾದಿ ಮಾರ್ಕೇಟ್‌ನಲ್ಲಿ
ಅತ್ಯಂತ ದುಬಾರಿಯಾದ ವಸ್ತು ಪ್ರೀತಿ.
-ಮಲ್ಲಿ. ಎಸ್.

29/09/2023

ತಮಿಳು ನಟ ಸಿದ್ದಾರ್ಥ್‌ಗೆ ಕ್ಷಮೆ ಕೇಳಿದ ಶಿವರಾಜ್‌ಕುಮಾರ್

28/09/2023

ಕೋಮ ದ್ವೇಷ ಭಾಷಣಗಾರರಿಗೆ ಉತ್ತರ ಕೊಟ್ಟ ಹುಬ್ಬಳಿ ಜನತೆ

ದಕ್ಷಿಣ ಭಾರತಕ್ಕೆ ಕಾದಿದೆಯೇ ಗಂಡಾಂತರ
10/08/2023

ದಕ್ಷಿಣ ಭಾರತಕ್ಕೆ ಕಾದಿದೆಯೇ ಗಂಡಾಂತರ

ಇಂದು ಸಂಜೆ 6 ಗಂಟೆಗೆ  ಕಡೆಗೂ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟ 19.20.21 ತಂಡ. ಚಿತ್ರದ ಟ್ರೈಲರ್ ಈ ಕೆಳಗಿನ YouTube link ನಲ್ಲಿದೆ. ನೋಡ...
15/02/2023

ಇಂದು ಸಂಜೆ 6 ಗಂಟೆಗೆ ಕಡೆಗೂ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟ 19.20.21 ತಂಡ.

ಚಿತ್ರದ ಟ್ರೈಲರ್ ಈ ಕೆಳಗಿನ YouTube link ನಲ್ಲಿದೆ. ನೋಡಿ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ತಂಡಕ್ಕೆ ಶುಭ ಹಾರೈಸಿ

Presenting the Official Trailer of "19.20.21" , From the makers of Act - 1978The age between 20 to 30 is an important phase in everyone's life. A phase which...

ನೀವು "ವಾಟರ್ ವರ್ಲ್ಡ್" ಸಿನೆಮಾ ನೋಡಿದ್ದೇ ಆದರೇ ಅಲ್ಲಿ ಸಿನೆಮಾ ನಾಯಕ ಸದಾಕಾಲ ಸಮುದ್ರಯಾನ ಮಾಡುತ್ತಾ ಅಲೆಮಾರಿ ಜನಾಂಗದವರಂತೆ ಜೀವನ ಸಾಗಿಸುವುದ...
30/01/2023

ನೀವು "ವಾಟರ್ ವರ್ಲ್ಡ್" ಸಿನೆಮಾ ನೋಡಿದ್ದೇ ಆದರೇ ಅಲ್ಲಿ ಸಿನೆಮಾ ನಾಯಕ ಸದಾಕಾಲ ಸಮುದ್ರಯಾನ
ಮಾಡುತ್ತಾ ಅಲೆಮಾರಿ ಜನಾಂಗದವರಂತೆ ಜೀವನ ಸಾಗಿಸುವುದನ್ನ ನೋಡಿರುತ್ತೀರಿ.
("Water world" :Release date: 28 July 1995 (USA)
Director: Kevin Reynolds
Budget: 17.5 crores USD
Screenplay: David Twohy, Peter Rader
Box office: 26.42 crores USD
Distributed by: Universal Pictures)
ಜಾಗತೀಕ ತಾಪಮಾನದಿಂದ ದೃವ್ರಪ್ರದೇಶಗಳ ಹಿಮ
ಸಂಪೂರ್ಣ ಕರಗಿ ಇಡಿ ಭೂಪ್ರದೇಶ ಸಮುದ್ರದ ನೀರಿನಲ್ಲಿ ಮುಳುಗಿ ಹೋದಾಗಿನ ತುಂಬಾ ರೋಮಾಂಚಕಾರಿಯಾದ ಒಂದು ಕಾಲ್ಪನಿಕ ಕಥೆ ಅದು.
(ನೋಡಿದವರು ಸರಿ ,ನೋಡದೇ ಇದ್ದವರು ಆಸಕ್ತಿ ಇದ್ದರೇ ನೋಡಿ)
ಇಂಡೋನೇಷ್ಯಾ ಮಲೇಷಿಯಾ ಮತ್ತು ಫಿಲಿಪೀನ್ಸ್‌ ನ
ಸಮುದ್ರ ತೀರಗಳಲ್ಲಿ "ಬಜುವಾ" ಅಂತ ಒಂದು ಸಮುದ್ರದ ಅಲೆಮಾರಿ ಜನಾಂಗವಿದೆ.(Bajau) .
ಈ ಜನಾಂಗದವರು ತಮ್ಮ ಜೀವಿತದ ಹೆಚ್ಚಿನ ಕಾಲ ಸಮುದ್ರದಲ್ಲಿಯೇ ಕಳೆಯುತ್ತಾರೆ.ತೀರಾ ಅಪರೂಪಕ್ಕೆ ಭೂಮಿಯ ಮೇಲೆ ಬರುವ ಈ ಜನಾಂಗದವರು
ವಾಸಿಸುವುದು ಸಮುದ್ರದ ತೀರದಲ್ಲಿರುವ ಲೇಪಾ ಲೇಪಾ (Lepa Lepa) ಎಂದು ಕರೆಯಲಾಗುವ
ಪುಟ್ಟ ಪುಟ್ಟ ನೌಕೆಗಳಲ್ಲಿ.
ಈ ಜನಾಂಗದವರಿಗೆ ಯಾವುದೇ ದೇಶದ ಪೌರತ್ವ ಇಲ್ಲ,ಭೂಮಿಯ ಮೇಲೆ ಸ್ಥಿರವಾದ ವಾಸಸ್ಥಾನ ಇಲ್ಲ,
ಹಣದ ಅವಶ್ಯಕತೆಯಂತೂ ಇಲ್ಲವೇ ಇಲ್ಲ.ಯಾವೂದೇ
ರಕ್ಷಾಕವಚವಿಲ್ಲದೇ ಸದಾಕಾಲ ತಮ್ಮ ಈಟಿಯಿಂದ ಸಮುದ್ರದಲ್ಲಿ ಮೀನು ಭೇಟೆಯಾಡುತ್ತಾ ಜೀವನ ಸಾಗಿಸುತ್ತಾರೆ.ಭೂಮಿಯ ಮೇಲಿನ ಅಲೆಮಾರಿ ಜನಾಂಗದವರಂತೆಯೇ ಇವರು ಸಮುದ್ರದಲ್ಲಿನ‌
ಅಲೆಮಾರಿ ಜನಾಂಗ.ಭೂಮಿಯ ಮೇಲಿನ ನಾಗರೀಕತೆಯಿಂದ ಸಂಪೂರ್ಣ ದೂರ ಉಳಿಯುವ ಈ ಜನಾಂಗದವರ ಸಂಖ್ಯೆ 1.2 ಲಕ್ಷ ಎಂದು ಅಂದಾಜಿಸಲಾಗಿದೆ.ಸಮುದ್ರದಲ್ಲಿನ ಜೀವಿಗಳೇ ಇವರ ಆಹಾರಗಳು.
ತಮ್ಮ ಜೀವಿತದ ಹೆಚ್ಚಿನ ಸಮಯವನ್ನ ಸಮುದ್ರದಲ್ಲಿ ಕಳೆಯುವ ಈ "ಬಜುವಾ" ಜನಾಂಗದವರ ದೇಹ ಸಮುದ್ರದಲ್ಲಿ ಡೈವ್ ಹೊಡೆಯಲು
ಅನುವಂಶಿಕವಾಗಿಯೇ(genetically) ಮಾರ್ಪಾಟಾಗಿದೆ.ಸಮುದ್ರದಲ್ಲಿ ಇವರು ಯಾವೂದೇ ರೀತಿಯ ರಕ್ಷಾಕವಚಗಳು ಇಲ್ಲದೆಯೇ ಸರಿಸುಮಾರು 200 ft ಆಳಕ್ಕೆ ದುಮುಕಿ 13 ನಿಮಿಷಗಳ ಕಾಲ ಉಸಿರಾಡದೇಯೇ ಇರಬಲ್ಲರು.(ಕುಂಭಕ ಸ್ಥಿತಿಯಲ್ಲಿ).
ಜೆನೆಟಿಕಲ್ಲಿ ಮಾರ್ಪಾಟಾಗಿವುದು ,200 ft ಅಡಿ ಸಮುದ್ರದ ಆಳದಲ್ಲಿರುವುದು,13 ನಿಮಿಷ ಉಸಿರಾಡದೇ ಇರುವುದು ನಂಬಲು ತುಸು ಕಷ್ಟ ಎನಿಸಿದರೂ .......
ಇದು ಸತ್ಯ .

Mruthyunjaya Nara

ಕ್ಷಮೆಯಿರಲಿ ಪ್ರಿಯ ವಿದ್ಯಾರ್ಥಿಗಳೇ ವಿಶ್ವದಲ್ಲೇ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಯಿದ್ದರು ನಮ್ಮ ದೇಶ ಒಟ್ಟು ದಾಖಲಾತಿ ಅನುಪಾತ (Gross Enrolmen...
27/01/2023

ಕ್ಷಮೆಯಿರಲಿ ಪ್ರಿಯ ವಿದ್ಯಾರ್ಥಿಗಳೇ

ವಿಶ್ವದಲ್ಲೇ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಯಿದ್ದರು ನಮ್ಮ ದೇಶ ಒಟ್ಟು ದಾಖಲಾತಿ ಅನುಪಾತ (Gross Enrolment Ration-GER) ಕೇವಲ 27.1%. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸುಮಾರು 1000 ವಿಶ್ವವಿದ್ಯಾಲಯ ಮತ್ತು 42,000 ಕಾಲೇಜುಗಳಿದ್ದರೂ ಶಿಕ್ಷಣ ಅನ್ನೋದು ಬಹಳಷ್ಟು ಮಂದಿಗೆ ಗಗನ ಕುಸುಮ. ಒಳ್ಳವರು, ಸೋಶಿಯಲ್ ಕ್ಯಾಪಿಟಲ್ ಇರೋರು ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆಂದು 2016 ರಲ್ಲಿ 440,000 ಭಾರತದ ವಿದ್ಯಾರ್ಥಿಗಳು ವಿದೇಶಕ್ಕೆ ಹಾರಿದರೆ, 2019ರಲ್ಲಿ ಈ ಸಂಖ್ಯೆ 770,000 ಇತ್ತು. 2024ರಲ್ಲಿ 1.8 ಮಿಲಿಯನ್ ವಿದ್ಯಾರ್ಥಿಗಳು ವಿದೇಶಕ್ಕೆ ಹಾರಲಿದ್ದಾರೆ.

ಹೀಗೆ ವಿದೇಶಕ್ಕೆ ಹಾರಿಬಿಡುವ ವಿದ್ಯಾರ್ಥಿಗಳ ಹಿನ್ನಲೆ ಏನೆಂದು ಹೇಳುವ ಅವಶ್ಯಕತೆ ಇಲ್ಲ. ಕಾಲೇಜಿಗೆ ಸಲ್ಲಿಸುವ ಅರ್ಜಿಯಲ್ಲಿ ಪೋಷಕರ ವೃತ್ತಿ ಎಂದಿರುವ ಕಾಲಂನಲ್ಲಿ ಅಪ್ಪ ಆಟೋ ರಿಕ್ಷಾ ಚಾಲಕ, ಅಮ್ಮ ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಯೋಗಿ ಎಂದು ಬರೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಮ್ಮ ದೇಶದ ವಿಶ್ವವಿದ್ಯಾಲಯ/ಕಾಲೇಜುಗಳೇ ಗಟ್ಟಿ. ಇನ್ನು ಚಾಮರಾಜನಗರ, ಕೊಳ್ಳೇಗಾಲ, ಜೋಯಿಡಾ, ಸೇಡಂನಂತಹ ಊರುಗಳ ಬಡಕುಟುಂಬಗಳಲ್ಲಿ, ದಲಿತರ ಕೇರಿಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ಹುಟ್ಟಿದವರು ಹೈ ಸ್ಕೂಲ್ ತಲುಪಿದರೆ ಅದೇ ಸಾಧನೆ.

ಇನ್ನು ಕೌಶಲ್ಯಾಭಿವೃದ್ಧಿಯ ಹೆಸರಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸ್ವತಂತ್ರ ಚಿಂತನೆ, ವಿಮರ್ಶಾತಕ ಆಲೋಚನೆಗಳನ್ನೇ ಹೊಸಕಿಹಾಕಲಾಗುತ್ತಿದೆ. ಸೆಮಿಸ್ಟರ್ ವ್ಯವಸ್ಥೆ ಜಾರಿಗೆ ತಂದು ಯಾವ ವಿಷಯವನ್ನು ಆಳವಾಗಿ/ಸಮಗ್ರವಾಗಿ ಅಧ್ಯಯನ ಮಾಡದಂತೆ ನೋಡಿಕೊಳ್ಳುಲಾಗುತ್ತಿದೆ. ಹಾಗಾದರೆ ನಮ್ಮ ಬಡ/ದಲಿತ/ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳು ಎಷ್ಟು ಕಲಿಯುತ್ತಿದ್ದಾರೆ? ಮಾರುಕಟ್ಟೆಯ ಅಪರಿಮಿತ ಬೇಡಿಕೆಗೆ ಸ್ಪಂದಿಸುತ್ತ, ಈ ದೇಶದ ಧನಿಕರ ಅಡಿಯಾಳುಗಳಾಗಿ ಚೀಪ್ ಕಾರ್ಮಿಕರಾಗಿ ಕೆಲಸ ಕೊಂಡುಕೊಳ್ಳುವಷ್ಟು ಮಾತ್ರ ಕಲಿಯುತ್ತಿದ್ದಾರೆ. Employability skills ಎಂದರೆ ಚೀಪ್ ಲೇಬರ್ ತರಬೇತಿ ಅಂತಲೇ ಓದಿಕೊಳ್ಳಬೇಕಾಗುತ್ತದೆ.

ಮತ್ತೊಂದೆಡೆ ಕರೋನ ಬಡ ವಿದ್ಯಾರ್ಥಿಗಳ ಬದುಕನ್ನ ಇನ್ನಷ್ಟು ದುಸ್ತರಗೊಳಿಸಿದೆ. ವಿದ್ಯಾರ್ಥಿಗಳು ಪೋಷಕರನ್ನ ಕಳೆದುಕೊಂಡಿದ್ದಾರೆ ಅಥವಾ ಪೋಷಕರು ಕೆಲಸ ಕಳೆದುಕೊಂಡಿದ್ದಾರೆ, ನೆಡೆಸುತ್ತಿದ್ದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದಾರೆ, ಅಥವಾ ಕರೋನಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ತೀರಿಸಲಾಗದಷ್ಟು ಸಾಲ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಓದು ಬಿಟ್ಟು ಸಿಕ್ಕ ಕೆಲಸಕ್ಕೆ ಸೇರಿ ಕುಟುಂಬ ನೆರವಾಗುವ ಒತ್ತಡದಲ್ಲಿದ್ದಾರೆ. ಓದಿಕೊಂಡು ಕೆಲಸ ಮಾಡುವೆನ್ನುವ ವಿದ್ಯಾರ್ಥಿಗಳಿಗೆ 75% ಹಾಜರಾತಿ ಭೂತವಾಗಿ ಕಾಡುತ್ತದೆ. ದೇಶದ ವಿದ್ಯಾರ್ಥಿಗಳ distress ಒಂದ ಎರಡಾ! ವಿದ್ಯಾರ್ಥಿಗಳನ್ನ ನೋಡಿದರೆ ಚಾರ್ಲಿ ಚಾಪ್ಲಿನ್ನಿನ "ಮಾಡ್ರನ್ ಟೈಮ್ಸ್" ನೆನಪಾಗುತ್ತದೆ.

ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಇಂದಿಗೂ ಒಳಗೊಳ್ಳುವಿಕೆಯ ತತ್ವದ ಮೇಲೆ ನಿಂತಿಲ್ಲ. ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡಲು Cut-off percentage, entrance, ಆಂಗ್ಲ ಭಾಷಾ ಪ್ರಾವೀಣ್ಯತೆ ಪರೀಕ್ಷೆಗಳನ್ನ ಸೃಷ್ಟಿಸಿದ್ದೇವೆ. ಈ entrance exams crack ಮಾಡಲು ನೀವು ದೊಡ್ಡ ನಗರಕ್ಕೆ ಬಂದು ತರಬೇತಿ ಪಡೆಯಲೇ ಬೇಕು. ತರಬೇತಿಗೆ ಲಕ್ಷಾಂತರ ರೂಪಾಯಿ ತೆರಲೇಬೇಕು.

ಇವೆಲ್ಲಾ ನ್ಯೂನ್ಯತೆಗಳನ್ನ ಮರೆಮಾಚುವಂತೆ ಮೆರಿಟ್ ಅನ್ನು ಪ್ರತಿಭೆಗೆ ಲಿಂಕ್ ಮಾಡಿಬಿಟ್ಟಿದೇವೆ. Entrance ಪಾಸ್ ಆಗಿಲ್ಲವೆಂದರೆ, ನಿರೀಕ್ಷಿತ percentage ಗಳಿಸಲಾಗದಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳು ನನ್ನಲ್ಲಿ ಕ್ಷಮತೆ ಇರಲಿಲ್ಲ, ನನಗೆ ಯೋಗ್ಯತೆ/ಪ್ರತಿಭೆಯಿಲ್ಲವೆಂದು ತನ್ನನ್ನು ತಾನು convince/ದೂಷಿಸಿಕೊಳ್ಳುವ ಹಾಗೆ ಮಾಡಿದ್ದೇವೆ. ಜಾತಿ ಪದ್ಧತಿ/ ವರ್ಣಬೇಧ ನೀತಿ ಹಸನಾಗಿ ಬೆಳೆದಿದ್ದೆ ಈ ರೀತಿಯ convincing/ ದೂಷಿಸಿಕೊಳ್ಳುವ ಉಪಾಯಗಳಿಂದವೆನ್ನುವುದನ್ನ ನಾವು ಗಮನಿಸಬೇಕು.

ಮೆರಿಟ್ ಅನ್ನೋದು ನಾವು ಒಂದು ಸಮಾಜವಾಗಿ ಮಕ್ಕಳಿಗೆ ಹೇಳಿಕೊಂಡು ಬಂದ ಬಹುದೊಡ್ಡ ಸುಳ್ಳು. ಮೆರಿಟ್ ಅನ್ನೋದು ಸೋಶಿಯಲ್ ಕ್ಯಾಪಿಟಲ್ ಮೇಲೆ ಅವಲಂಬಿತವಾಗಿದೆ ಅನ್ನೋದೇ ಬಹಳಷ್ಟು ಮಂದಿಗೆ ತಿಳಿದಿಲ್ಲ. ಪೋಷಕರ ವಿದ್ಯಾರ್ಹತೆ, ವಿದ್ಯಾರ್ಥಿಗೆ ಸಿಗುವ ಸಹಪಾಠಿಗಳು, ಆತ ಹೋಗುವ ಶಾಲೆ, ಆತ ಸೇವಿಸುವ ಆಹಾರ, ಮನೆಯಲ್ಲಿ ಆತ ಯಾವ ಪೀಳಿಗೆಯ ವಿದ್ಯಾರ್ಥಿ, ವರ್ಗ, ಜಾತಿಯೆಲ್ಲದರಿಂದ ನಮ್ಮ ಮೆರಿಟ್ ನಿರ್ಧಾರವಾಗುತ್ತದೆ. ಹುಟ್ಟಿನಿಂದ ಬಂದ ಕ್ಷಮತೆ, ಪ್ರತಿಭೆಯಿಂದಲ್ಲ.

ಹಾಗಾದ್ರೆ ಕೆಳವರ್ಗ/ಜಾತಿಯವರು ಯಾರು ಸಾಧನೆನೇ ಮಾಡಿಲ್ವಾ ಅಂತ ನೀವು ಕೇಳಬಹುದು... ಖಂಡಿತ ಸಾಧಕರು ಇದ್ದಾರೆ ಆದರೆ ಯಶಸ್ಸಿನ ಅನುಪಾತ/ಶೇಕಡವಾರು ಏನು ಅನ್ನುವುದರ ಮಾಹಿತಿ ಪಡೆಯಬೇಕಾಗುತ್ತದೆ ಮತ್ತು ಈ ಸಾಧಕರು ಸಾಧನೆಯ ಹಾದಿಯಲ್ಲಿ ಎದುರಿಸಿದ ತೊಡಕುಗಳು ಎಷ್ಟು ಘೋರವಾಗಿರುತ್ತವೆ ಅನ್ನೋದು ಅರಿಯಬೇಕಾಗುತ್ತದೆ. (ಥ್ರೀ ಈಡಿಯಟ್ಸ್, ಚಿಚೋರೆ, ತಾರೆ ಜಮೀನ್ ಪರ್ ದಂತಹ ಚಿತ್ರ ಗಳ ನಮ್ಮನ್ನ ಶಿಕ್ಷಣ ಕ್ಷೇತ್ರದ ವಾಸ್ತವ ಬಿಕ್ಕಟ್ಟು ಗಳಿಂದ ಎಷ್ಟು ದೂರ ಕರೆದೊಯ್ದಿದೆ ಎಂದು ಅರ್ಥ ಮಾಡಿಕೊಳ್ಳಲು ಪರಿಯೇರುಮ್ ಪೆರುಮಾಳ್ ಚಿತ್ರವನ್ನು ಪದೇ ಪದೇ ನೋಡುವ ಅವಶ್ಯಕತೆಯಿದೆ.)

ಒಳ್ಳವರ ಮಕ್ಕಳು Programmed for Success from the very beginning ಅಂತ ನನಗೆ ಸದಾ ಅನ್ನಿಸಿದೆ. ದೊಡ್ಡ ದೊಡ್ಡ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ CBSE/ICSE ಪಠ್ಯ ಓದುವ ಕ್ಯಾಲೊರಿ/ನ್ಯೂಟ್ರಿಷನ್ conscious ಪೋಷಕರ ಮಕ್ಕಳ ಜೊತೆ ನಮ್ಮ ಹಳ್ಳಿಯ/ ಪುಟ್ಟನಗರಗಳ ಸರ್ಕಾರಿ ಶಾಲೆಗಳ ಮಕ್ಕಳು ಸ್ಪರ್ಧಿಸುವುದಾದರೂ ಹೇಗೆ. Hence they are doomed from the very beginning.

ನಮ್ಮ ದೇಶ ಅಂಕಿ ಅಂಶಗಳ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಂಡಿರುವ ದೇಶ. ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆ/ ವಿದ್ಯಾರ್ಥಿಗಳೊಡನೆ ಮುಕ್ತವಾದ ಸಂವಾದ, ಅನುಭವಿ ಕಲಿಕೆಗೆ ಅನುಕೂಲ ಕಲ್ಪಿಸುವ ಬದಲಾಗಿ ಬೋಧಕರು ಅಂಕಿ ಅಂಶಗಳ ಡಾಕ್ಯುಮೆಂಟೇಶನ್ ನಲ್ಲೆ ತೊಡಗಿಕೊಳ್ಳುವಂತೆ ವ್ಯೂಹ ರಚಿಸಲಾಗಿದೆ. ಜನರ ಕಣ್ಣೊರೆಸಲಿಕ್ಕೆ, ದಾರಿ ತಪ್ಪಿಸಿ ಮನತಣಿಸುವುದಕ್ಕಾಗಿ everything is on paper…

ಬಹಳ ಹಿಂದೆ ದೇಶದೆಲ್ಲೆಡೆ ಉತ್ತಮ ಶಿಕ್ಷಣ ಕೊಡುತ್ತೇವೆಂದು ಕೆಲ ನವೋದಯ ಶಾಲೆಗಳನ್ನ ತೆರೆದದ್ದು ನೆನಪಿದೆ. ಈ ನವೋದಯ ಶಾಲೆಗಳು ಎಲ್ಲ ಮಕ್ಕಳಿಗೂ ಗುಣ್ಣಮಟ್ಟ ಶಿಕ್ಷಣ ಒದಗಿಸಿತೇ? ಖಂಡಿತ ಇಲ್ಲ ಆಗಲೇ ಜಾತಿ/ ವರ್ಗಗಳ ಕೂಪದಲ್ಲಿ ಬಿದ್ದು ಒದ್ದಾಡುತಿದ್ದ ಸಮಾಜದಲ್ಲಿ ಮತ್ತೊಂದು ವರ್ಗ ಸೃಷ್ಟಿಸಿತು ಅಷ್ಟೇ. ಹಳ್ಳಿ/ಹೋಬಳಿ ಮಟ್ಟದಲ್ಲೂ ಒಂದು ಎಲೀಟ್ ವಿದ್ಯಾರ್ಥಿಗಳ ಸಮೂಹ ವೊಂದನ್ನ ಸೃಷ್ಟಿಸಿತು. ನಾವೆಲ್ಲ ಶಾಲೆಯಲ್ಲಿ ಓದುವಾಗ ಕೆಲ ವಿದ್ಯಾರ್ಥಿಗಳು ನವೋದಯ entrance ಪರೀಕ್ಷೆಯಲ್ಲಿ ಪಾಸ್ ಆಗಿ ನಮ್ಮ ಶಾಲೆ ಬಿಟ್ಟು ಹೋಗುತ್ತಿದ್ದರು. ಆಗ ನಮಗೆ ಒಂದು ಖಾತ್ರಿ. ಟೀಚರ್ ಮತ್ತು ಪೋಷಕರಿಂದ ಬೈಗುಳ. "ನೋಡು ಅವ ಸಾಧಿಸಿದ್ದು ನೀನು ಏಕೆ ಸಾಧಿಸಲು ಆಗಲಿಲ್ಲ ಅಂತ." ಆಗ ತಲೆ ತಗ್ಗಸಿ ನಿಲ್ಲುತ್ತಿದ್ದೆವು. ಆದ್ರೆ ಪಾಸ್ ಆಗಿ ಹೋದವ ನಮ್ಮ ಜೊತೆಯಲ್ಲೇ ಇದ್ದ ಸಂಭಾವಿತ, ಎಲೀಟ್, ಹೈಯರ್ ಮಿಡ್ಲ್ ಕ್ಲಾಸ್ ವರ್ಗದವ ಅಂತ ಅರ್ಥ ಆಗೋದರಲ್ಲಿ ಬಹಳಷ್ಟು ಕಾಲ ಹಿಡಿತು.

ನಾನು ಪಿಯುಸಿಯಲ್ಲಿ ಓದಿದ್ದು ವಿಜ್ಞಾನವನ್ನ. ನಾನು SSLC ಯಲ್ಲಿ 70% ಗಳಿಸಿದ್ದೆ. ನನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಲಿ ಅಂತ ನಮ್ಮಪ್ಪ ಒಂದು ಕಾಲೇಜಿಗೆ ಸೇರಿಸಿದರು. ಆ ಕಾಲೇಜಲ್ಲಿ SSLC ಅಂಕಗಳ ಆಧಾರದ ಮೇಲೆ ಸೆಕ್ಷನ್ಸ್ ಮಾಡಲಾಗಿತ್ತು. ನನ್ನ percentageಗೆ ನನಗೆ ಸಿಕ್ಕ ಸೆಕ್ಷನ್ "ಜೆ." ನಾವು ವ್ಯಾಸಂಗ ಶುರು ಮಾಡುವ ಮೊದಲೇ ನಮ್ಮದು ಡಬ್ಬ ಸೆಕ್ಷನ್ ಅಂತ ಬ್ರಾಂಡ್ ಆಗಿತ್ತು. ಈ ಅವಮಾನಗಳ ನಡುವೆ ಓದು ತಲೆಗೆ ಹತ್ತಲಿಲ್ಲ. ಆದರೂ ಪಾಸ್ ಅಂತೂ ಅದೇ. ಆದರೆ ಮೆಡಿಸಿನ್ ಅಥವಾ ಒಳ್ಳೆಯ ಇಂಜಿನಿಯರಿಂಗ್ ಕೋರ್ಸ್ ಮಾಡುವಷ್ಟು ಅಂಕಗಳಂತೂ ಬರಲಿಲ್ಲ. ಸಾಕಷ್ಟು ಹಣ ಕಳೆದುಕೊಂಡು ಹತಾಶ ರಾಗಿದ್ದ ನನ್ನಪ್ಪ "ನಾಲಾಯಕ್ ನೀನು, ಬಿಎ ಮಾಡು ಅಂತ ದಬ್ಬಿದರು." (In retrospect that was a wise decision)

ಕತೆ ಇಲ್ಲಿಗೆ ನಿಲ್ಲೋದಿಲ್ಲ. ಅದೇ ತರಗತಿಯಲ್ಲಿದ್ದ ನನ್ನ ಶ್ರೀಮಂತ ಗೆಳೆಯನೊಬ್ಬ ಆ ವರ್ಷ ಫೇಲ್ ಆದ. ಮತ್ತೆ exam ಬರೆದ. ಮತ್ತೆ ಫೇಲ್ ಆದ. ಒಂದು ವರ್ಷದ ನಂತರ ಪಾಸ್ ಆದ. ಧನಿಕರಾಗಿದ್ದ ಕಾರಣ ಅವನ ತಂದೆ ಅವನನ್ನ ವಿದೇಶಿ ವಿಶ್ವವಿದ್ಯಾಲಯಕ್ಕೆ ಸೇರಿಸಿದರು. There was no looking back. ಇಂದು ಆತ ವಿದೇಶದಲ್ಲಿ ತನ್ನದೇ ಉದ್ಯಮವೊಂದನ್ನ ನೆಡೆಸುತ್ತಿದ್ದಾನೆ. ಆಗಾಗ ಬೆಂಗಳೂರಿಗೆ ಬಂದಾಗ ವಿಲಾಸಿ ಹೋಟೆಲ್ಗಳಿಗೆ ಬರಹೇಳುತ್ತಾನೆ... ನಾನು ಹೋಗುತ್ತೇನೆ... ಶುಭ ಹಾರೈಸಿ ಬರುತ್ತೇನೆ...

ನನ್ನ ತರಗತಿಯ ವಿದ್ಯಾರ್ಥಿಗಳಲ್ಲಿ ನನ್ನದೇ ಪ್ರತಿಬಿಂಬವನ್ನು ಕಾಣುತ್ತೇನೆ. ರಭಸವಾಗಿ ಹರಿಯುವ ನದಿಯಲ್ಲಿ ಅವರೆಲ್ಲ ಸಿಕ್ಕಿಹಾಕಿಕೊಂಡಿದ್ದಾರೆ, ಸಹಾಯ ಬೇಡತ್ತಿದ್ದಾರೆ ಅಂತ ಅನ್ನಿಸುತ್ತೆ. ಅಲೆಗೆ ಎದುರಾಗಿ ಈಜಿ ಅವರನ್ನ ದಡ ಸೇರಿಸುವಷ್ಟು ಬಲ ನನ್ನಲಿಲ್ಲ. ದಡದ ಮೇಲೆ ಕುಳಿತು ನಾನೇ ಕೊಚ್ಚಿಹೋಗುವುದ್ದನ್ನೇ ನೋಡುತ್ತೇನೆ. ಹೀಗೆ ಆಲೋಚಿಸುವುದ್ದಕ್ಕಾಗಿ ಬೇರೆಯವರಿಂದ ನಿಂದನೆ, ನಿರ್ಲಕ್ಷ್ಯ ಗಳಿಗೆ ಒಳಗಾಗಿದ್ದೇನೆ... “ಪ್ರಾಕ್ಟಿಕಲ್ ಆಗಿ ಬದುಕೋದು ಬಿಟ್ಟು ಸಮಾಜ, ಜಾತಿ, ವರ್ಗ ಅಂತ ಗೊಣಗುತ್ತಿಯ, ಸುಮ್ಮನೆ ಹಗಲಿರುಳು ಅಕ್ಷರ “ಕುಟ್ಟುತ್ತೀಯ...” ಹೀಗೆ ನಿರಂತರ ಅವಮಾನಗಳ ಸರಮಾಲೆ ನನ್ನ ಕೊರಳಲ್ಲಿವೆ... I feel that I am going down a never ending sinkhole…

ಇದೇಲ್ಲದರ ನಡುವೆ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರಲಿವೆ. ಆ ಕಾರಣಕ್ಕಾಗಿಯೇ ಮೊದಲು ವಿದೇಶದಲ್ಲಿ ವ್ಯಾಸಂಗ ಮಾಡುವವರ ಪ್ರಸ್ತಾಪಿಸಿದ್ದು ಈಗಾಗಲೇ ಇರುವ ದುಬಾರಿ ಖಾಸಗಿ/ ಡೀಮ್ಡ್ ವಿಶ್ವವಿದ್ಯಾಲಯಗಳ ಜೊತೆಗೆ ಆಕ್ಸ್ಫರ್ಡ್, ಯೇಲ್, ಹಾರ್ವರ್ಡ್ ವಿಶ್ವವಿದ್ಯಾಲಯಗಳಿಗೆ ನಮ್ಮ ನೆಲದಲ್ಲಿ ತಮ್ಮ ಕ್ಯಾಂಪಸ್ ತೆರೆಯುವ ಅವಕಾಶ ಕೊಡಲಾಗಿದೆ. ಅಡ್ಮಿಶನ್, ಮತ್ತಿತರ ಶುಲ್ಕಗಳ ವಿಷಯದಲ್ಲಿ ಈ ವಿಶ್ವವಿದ್ಯಾಲಯಗಳ ನಿರ್ಧಾರವೇ ಅಂತಿಮವಂತೆ... ವಿದೇಶಿ ವಿಶ್ವವಿದ್ಯಾಲಯಗಳಿಗೆ ಬಾಗಿಲು ತೆರೆಯುವುದರ ಬದಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಸರಿ ಪಡಿಸಿ, ನಮ್ಮ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನೇ ಸುಧಾರಿಸಬಹುದಿತೆಂಬುದು ಹಲವು ತಜ್ಞರ ಅನಿಸಿಕೆಯಾಗಿದೆ. ಈ ನಡೆಯಿಂದ ಕಲಿಕೆ ಡೆಮೊಕ್ರಟೈಸ್ ಆಗುವುದೇ? ಅಥವಾ ಇದು ಮಹಾನಗರಗಳ ಮತ್ತೊಂದು ನವೋದಯ/ಪ್ರತಿಷ್ಠಿತ ದುಬಾರಿ ಶಾಲೆಗಳಂತಾಗುವವೆ... ? ನೀವೇ ಹೇಳಬೇಕು... ಸದ್ಯಕ್ಕೆ ಯಾವುದೋ ಮಹಾನಗರದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ತಮ್ಮ ಕ್ಯಾಂಪಸ್ನಲ್ಲಿ ಶೌಚಾಲಯವಿಲ್ಲದೆ ಮೆಟ್ರೋ ರೈಲು ನಿಲ್ದಾಣದ ಶೌಚಾಲಯವನ್ನೇ ಅವಲಂಬಿಸಿರುವ ವರದಿ ಓದಿದೆ... ಹೋಗ್ಲಿ ಬಿಡಿ ಇದೆಲ್ಲಾ ಚರ್ಚಿಸುವ ವಿಷಯವಲ್ಲ... ಪಠಾಣ್ ಚಿತ್ರ ಜಯಭೇರಿ ಬಾರಿಸಿದೆ... ಭಕ್ತರು ತಕ್ಕ ಪಾಠ ಕಲಿತಿದ್ದಾರೆ... Victory is ours!

- Harish Gangadhar

ನೆನ್ನೆ ವಿದ್ಯಾರ್ಥಿಗಳ ಕುರಿತು ಒಂದು ಪೋಸ್ಟ್ ಹಾಕಿದ್ದೆ. ಸೋಶಿಯಲ್ ಕ್ಯಾಪಿಟಲ್ (ಸಾಮಾಜಿಕ ಬಂಡವಾಳದ) ಪ್ರಸ್ತಾಪ ಆ ಲೇಖನದಲ್ಲಿತ್ತು. ಕೆಲವರು ಈಗ...
27/01/2023

ನೆನ್ನೆ ವಿದ್ಯಾರ್ಥಿಗಳ ಕುರಿತು ಒಂದು ಪೋಸ್ಟ್ ಹಾಕಿದ್ದೆ. ಸೋಶಿಯಲ್ ಕ್ಯಾಪಿಟಲ್ (ಸಾಮಾಜಿಕ ಬಂಡವಾಳದ) ಪ್ರಸ್ತಾಪ ಆ ಲೇಖನದಲ್ಲಿತ್ತು. ಕೆಲವರು ಈಗ ಎಲ್ಲರ ಬಳಿ ದುಡ್ಡಿದೆ, ಮೀಸಲಾತಿ ಎಲ್ಲರಿಗು ಸೋಶಿಯಲ್ ಕ್ಯಾಪಿಟಲ್ ನೀಡಿದೆ ಅಂದರು. ಜನರ ಮನಸ್ಥಿತಿ ಈಗ ಬದಲಾಗಿದೆ ತಾರತಮ್ಯ ಈಗಿಲ್ಲವೆಂದರು, ಇನ್ನು ಕೆಲವರು ಇದೆಲ್ಲವನ್ನು ಮೀರಿ ಬಡ ವಿದಾರ್ಥಿಗಳು ಬೆಳೆಯಬೇಕು, ಆತ್ಮ ವಿಶ್ವಾಸ ಮುಖ್ಯವೆಂದರು.

ಮೈಕಲ್ ಹೋಲ್ಡಿಂಗ್ ಕ್ರಿಕೆಟಿನ ದಂತಕತೆ. ಅವನ ಕ್ರಿಕೆಟ್ ಕಾಮೆಂಟರಿಗೆ ಮರುಳಾಗದವರಿಲ್ಲ. ಇಷ್ಟೆಲ್ಲಾ ಇದ್ದರು ಅವ ಕಪ್ಪುವರ್ಣದವನೆಂಬ ಕಾರಣಕ್ಕೆ ಅನುಭವಿಸಿದ ಅವಮಾನದ ಕುರಿತು ಜಾರ್ಜ್ ಫ್ಲಾಯ್ಡ್ ಕೊಲೆಯಾದ ದಿನದಂದು ಆತ ತುಂಬ ಭಾವುಕನಾಗಿ ಮಾತನಾಡಿದ್ದ. ಈ ಮಾತುಗಳನ್ನ ಭಾರತಕ್ಕೆ contextualize ಮಾಡಿಕೊಂಡು ಅರ್ಥ ಮಾಡಿಕೊಳ್ಳುವಿರಿ ಎಂಬ ಆಶಾವಾದದಿಂದ ಈ ಹಿಂದೆ ಪೋಸ್ಟ್ ಮಾಡಿದ್ದ ಲೇಖನವನ್ನ ಮತ್ತೆ ಶೇರ್ ಮಾಡುತ್ತಿದ್ದೇನೆ... Thanks for all the love...

ಮೈಕಲ್ ಹೋಲ್ಡಿಂಗ್ ಮನದಾಳದ ಮಾತುಗಳು

ನಾವು ಶಾಲೆಗಳಲ್ಲಿ ಪದೇ ಪದೇ ಓದಿರುತ್ತೇವೆ ಥಾಮಸ್ ಅಲ್ವಾ ಎಡಿಸನ್ ಬಲ್ಬ್ ಕಂಡುಹಿಡಿದ ಎಂದು. ಆದರೆ ಎಡಿಸನ್ ಕಂಡು ಹಿಡಿದ ಬಲ್ಬ್ ಒಳಗಿನ ಕಾಗದದ ಎಳೆ ( ಪೇಪರ್ ಫಿಲಮೆಂಟ್) ಬಹು ಬೇಗ ಉರಿದು ಉದುರಿಹೋಗುತ್ತಿತ್ತು. ಆದರೆ ನಿಮಗೆ ಗೊತ್ತೆ ಬಲ್ಬ್ ಗಳ ಒಳಗೆ ದೀರ್ಘ ಕಾಲ ಉರಿದು ಬೆಳಕು ಕೊಡುವಂತಹ ಫಿಲಮೆಂಟ್ ಯಾರು ಕಂಡುಹಿಡಿದಿದ್ದು ಎಂದು?

ಯಾರಿಗೂ ಗೊತ್ತಿರಲಿಕ್ಕಿಲ್ಲ. ಈ ವಿಚಾರವನ್ನ ಶಾಲೆಗಳಲ್ಲೂ ಹೇಳಿಕೊಟ್ಟಿರಲಿಕ್ಕಿಲ್ಲ ಏಕೆಂದರೆ ಅದನ್ನ ಕಂಡುಹಿಡಿದವನೊಬ್ಬ ಕಪ್ಪು ವರ್ಣದವ- ಲೂಯಿಸ್ ಹೋವರ್ಡ್ ಲ್ಯಾಟಿಮರ್- ಈತ ದೀರ್ಘವಾಗಿ ಉರಿಯುವ ಕಾರ್ಬನ್ ಫಿಲಮೆಂಟ್ ಕಂಡುಹಿಡಿದ. ಲ್ಯಾಟಿಮರ್ ತಂದೆ ತಾಯಿ ಗುಲಾಮಗಿರಿ ತಪ್ಪಿಸಿಕೊಂಡು ಸ್ವತಂತ್ರವಾಗಿ ಬದುಕಲು ಪಟ್ಟಪಾಡು ಅಷ್ಟಿಷ್ಟಲ್ಲ. ಇದೂ ಕೂಡ ವಿದ್ಯಾರ್ಥಿಗಳಿಗೆ ತಿಳಿದಿರಲಿಕ್ಕಿಲ್ಲ.
ಶಾಲೆಗಳಲ್ಲಿ ಎಲ್ಲವನ್ನು ಹೇಳಿಕೊಡಬೇಕು. ಶಾಲೆಯಲ್ಲಿ ಹೇಳಿಕೊಟ್ಟಿದ್ದೇ ಜೀವನ ಪರ್ಯಂತ ನೆನಪಿನಲ್ಲಿ ಉಳಿಯೋದು. ಕಪ್ಪು ವರ್ಣದವರ ಕುರಿತಾದ ಯಾವ ಒಳ್ಳೆಯ ವಿಚಾರಗಳನ್ನು ನನಗೆ ಶಾಲೆಯಲ್ಲಿ ಹೇಳಿಕೊಡಲಿಲ್ಲ. ಆಳುವವರಿಗೆ ಅನುಕೂಲವಾಗುವಂತಹ ವಿಚಾರಗಳನ್ನೇ ನಮಗೆ ಭೋದಿಸಲಾಯಿತು. ಇತಿಹಾಸ ಆಳುವವರಿಂದ ರಚಿಸಲ್ಪಡುತ್ತದೆಯೇ ಹೊರತು ಅಧೀನಕ್ಕೊಳಗಾದ ದಮನಿತರಿಂದಲ್ಲ. ಇತಿಹಾಸ ಹಾನಿ ಮಾಡುವವರಿಂದ ರಚಿಸಲ್ಪಡುತ್ತದೆ ಹೊರತು ಹಾನಿಗೊಳಗಾದವರಿಂದಲ್ಲ.

ಜಗತ್ತಿನ ಸರ್ವ ಒಳಿತು ಬಿಳಿಯರಿಂದಲೇ ಆಗಿದೆ ಹಾಗೂ ಎಲ್ಲಾ ಕೆಡುಕು ಕಪ್ಳು ವರ್ಣದಿಂದಲೇ ಆಗಿದೆಯೆಂದು ಮಕ್ಕಳಿಗೆ ಶಾಲೆಗಳಲ್ಲಿ ಹೇಳಿಕೊಡುತ್ತಾ ಹೋದರೆ ಅಥವಾ ಕಪ್ಪು ವರ್ಣದವರ ಸಾಧನೆಗಳನ್ನ ಮರೆಮಾಚುತ್ತಾ ಹೋದರೆ, ನಾವು ಎಂತಹ ಸಾಮಾಜ ಕಟ್ಟುತ್ತೇವೆ? ಅದೆಂತಹ ಭೌದ್ಧಿಕವಾಗಿ ದಿವಾಳಿಯಾದ ಸಮಾಜವದು? ಹೀಗೆ ಸಾಂಸ್ಥಿಕಗೊಳಿಸಲಾದ ವರ್ಣಭೇದದ ಸಮಾಜದಿಂದ ಆರೋಗ್ಯಕರ ಮನಸ್ಸುಗಳು ಹೇಗೆ ಹುಟ್ಟುಬಲ್ಲವು? ಇತಿಹಾಸದ ಎಲ್ಲ ಆಯಾಮಗಳನ್ನೂ ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಉದಾಹರಣೆಗೆ ಯೂರೋಪಿನ ಇತಿಹಾಸ ಅಂತ ನೀವು ಪುಸ್ತಕ ಬರೆದರೆ ಯುರೋಪಿಯನ್ ದೇಶದ ಬಗ್ಗೆ ಎಲ್ಲವನ್ನ, that means just EVERYTHING ಯಾಕೆ ಬರೆಯಬಾರದು?

ವರ್ಣಭೇದದ ನನ್ನ ಅನುಭವಗಳನ್ನೇ ಹೇಳುತ್ತೇನೆ- ನಾನು ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಡಲು ಬಂದಾಗ ನನ್ನ ಪೋರ್ಚುಗೀಸ್, ಬ್ರೌನ್ almost ಬಿಳಿಯ ಹೆಂಡತಿಯ ಜೊತೆ ಲೆಸ್ಟರ್ ನಗರ ಸುತ್ತಲೂ ಹೋದೆ. ಶಾಪಿಂಗ್ ಮುಗಿದ ಮೇಲೆ ಇಬ್ಬರು ಜೊತೆಗೆ ನಿಂತು ಟ್ಯಾಕ್ಸಿಗಾಗಿ ಕಾದೆವು. ದೂರದಲ್ಲೊಂದು ಟ್ಯಾಕ್ಸಿ ನಮ್ಮ ಕಡೆಗೇ ಬರುವುದು ಕಾಣಿಸಿತು. ಮೇಲೆ 'ಬಾಡಿಗೆಗೆ' ಎಂಬ ದೀಪ ಉರಿಯುತ್ತಿತು. ನಾನು ಮುಂದೆ ಬಂದು ಟ್ಯಾಕ್ಸಿ ನಿಲ್ಲಿಸಲು ಕೈ ಚಾಚಿದೆ. ಟಾಕ್ಸಿಯವನು ನನ್ನ ನೋಡಿ ದೀಪಹಾರಿಸಿಕೊಂಡು ಮುಂದೆ ಸಾಗಿ ಸ್ವಲ್ಪ ದೂರ ಚಲಿಸಿ ಮತ್ತೆ "ಬಾಡಿಗೆಗೆ" ಎಂಬ ದೀಪ ಹಾಕಿಕೊಂಡ. ಟ್ಯಾಕ್ಸಿ ಚಾಲಕನಿಗೂ ಒಬ್ಬ ಕಪ್ಪು ವರ್ಣದವನನ್ನು ಕಾರಿನೊಳಗೆ ಹತ್ತಿಸಿಕೊಳ್ಳವುದು ಇಷ್ಟವಿರಲಿಲ್ಲ. ರಸ್ತೆಯ ಆ ಬದಿಯಲ್ಲಿ ನಿಂತಿದ್ದ ನನ್ನ ಗೆಳೆಯ ಕೂಗಿ "ಲೋ ನಿನ್ ಬಿಳಿ ಹೆಂಡತಿಯನ್ನ ಕೈ ಚಾಚುವಂತೆ ಹೇಳು ಆಗ ಟ್ಯಾಕ್ಸಿ ನಿಲ್ಲುತ್ತವೆ. ಇಲ್ಲಿ ಬಿಳಿಯರಿಗೆ ವಿಶೇಷ ಸವಲತ್ತಿದೆ!!" ಎಂದು ಹೇಳಿದ. ಹಾಗೆಯೇ ಮಾಡಿದೆ. ಟ್ಯಾಕ್ಸಿ ನಿಲ್ಲಿಸಿತು ಕೂಡ.

ಇದು ಇಂಗ್ಲೆಂಡ್ ಕತೆಯಾದರೆ ಅಸ್ಟ್ರೇಲಿಯದಲ್ಲೂ ಈ ತರಹದ ಅನುಭವವೆ ಆಗಿದೆ. ಪ್ರತಿಷ್ಠಿತ ಹೋಟೆಲ್ನಲ್ಲಿ ನಾವು ತಂಗಿದ್ದೆವು. ನಾನು ನನ್ನ ಗೆಳೆಯರು ಹೋಟೆಲ್ಲಿನ ಲಿಫ್ಟ್ ನಲ್ಲಿನಿಂತಿದ್ದೇವು. ಇನ್ನೇನು ಲಿಫ್ಟಿನ ಬಾಗಿಲುಗಳು ಮುಚ್ಚುವುದರಲಿತ್ತು ಆಗ ಬಿಳಿಯನೊಬ್ಬ ಓಡಿಬಂದು ಲಿಫ್ಟ್ ಗುಂಡಿ ಒತ್ತಿದ. ಬಾಗಿಲು ತೆರದಾಗ ಆತನಿಗೆ ಅಚ್ಚರಿ ಕಾದಿತ್ತು. ಪುಟ್ಟ ಲಿಫ್ಟಿನಲ್ಲಿ ಇದ್ದವರೆಲ್ಲ ಕಪ್ಪು ವರ್ಣದವರೇ. ಆತ ಲಿಫ್ಟ್ ಹತ್ತಲಿಲ್ಲ. ಬಾಗಿಲು ಇನ್ನೆನ್ನು ಮುಚ್ಚುಕೊಳ್ಳುವಾಗ "ಹಾಳಾದ ಕರಿಯರು" ಎಂದು ಗೊಣಗಿದ. ಇದು ನನ್ನಂತಹ ಖ್ಯಾತ ಕ್ರಿಕೆಟಿಗನ ಅನುಭವಗಳು.

ಇಷ್ಟೆಲ್ಲಾ ಆದರೂ ಬಿಳಿಯರಿಗೆ ಯಾವ ವಿಶೇಷ ಸವಲತ್ತುಗಳು ಸಿಕ್ಕಿಲ್ಲವೆಂದು, ಎಲ್ಲೂ ತಾರತಮ್ಯವಿಲ್ಲವೆಂದು ಕೆಲವರು ವಾದಿಸುತ್ತಾರೆ. Give me a break. ಅಮೇರಿಕಾದ ಜಾರ್ಜ್ ಫ್ಲೋಯ್ಡ್ ಎಂಬ ಕಪ್ಪುವರ್ಣದವನ ಕುತ್ತಿಗೆಯ ಮೇಲೆ ಬಿಳಿಯ ಪೊಲೀಸನೊಬ್ಬ ತನ್ನ ಮಂಡಿಯನ್ನ 9ನಿಮಿಷ 29ಸೆಕೆಂಡ್ ಬಲವಾಗಿ ಊರಿರುವಾಗ, ಫ್ಲೋಯ್ಡ್ನ " ಸರ್ ನನಗೆ ಉಸಿರಾಡಲಾಗುತ್ತಿಲ್ಲ. I can't breath" ಎಂಬ ನಿರಂತರ ಕೂಗನ್ನು ನಿರ್ಲಕ್ಷಿಸಿ, ಈ ಹೇಯ ಕೃತ್ಯವನ್ನ ಫೋನ್ ಕ್ಯಾಮೆರಗಳಲ್ಲಿ ಸೆರೆಹಿಡಿಯುತ್ತಿದ್ದರೂ ಸ್ವಲ್ಪವೂ ಹೇಸದೆ ಆತನನ್ನ ಕೊಂದಾಗ, ಆ ಒಂಬತ್ತುವರೆ ನಿಮಿಷದಲ್ಲಿ ಇಡಿಯ ಕಪ್ಪು ವರ್ಣದವರ ಮೇಲಾದ ದಬ್ಬಾಳಿಕೆಯ ಭೀಕರ ಇತಿಹಾಸ, ಕಪ್ಪು ಚರ್ಮದವರನ್ನ (ಟ್ರಾನ್ಸ್ ಅಟ್ಲಾಂಟಿಕ್ ಸ್ಲೇವ್ ಟ್ರೇಡ್) ಗುಲಾಮರನ್ನಾಗಿಸಿ ಮಾರುಕಟ್ಟೆಗಳಲ್ಲಿ ಪ್ರಾಣಿಗಳಂತೆ ಮಾರಿದ್ದು, ಕರಿಯ ಹೆಂಗಸರ ಮೇಲೆ ಬಿಳಿಯರು ಮಾಡಿದ ಅತ್ಯಾಚಾರಗಳ ಕರಾಳ ಇತಿಹಾಸ ಅಡಗಿತ್ತು. ಬಿಳಿಯರು ಕಪ್ಪುವರ್ಣದವರನ್ನ ದೂರಬಹುದು, ಅದು ಬಿಳಿಯರಿಗಿರುವ ಸವಲತ್ತು. ಕಪ್ಪು ವರ್ಣದವರು ಆರೋಪ ಸುಳ್ಳು, ನಾವು ಮುಗ್ದರು ಎಂದು ಸಾಬೀತು ಪಡಿಸುವವರೆಗೆ ಬದುಕಿದ್ದರೆ ಅದೇ ಅದೃಷ್ಟ! (To kill a Mocking Bird, the Green Mile ಚಿತ್ರ ವೀಕ್ಷಿಸಿ) ಬಳಿಯರಿಗೆ privilege ಇಲ್ಲವಂತೆ. Give me a break.

ಬಿಳಿಯರು ಮತ್ತು ಕಪ್ಪು ವರ್ಣದವರಿಬ್ಬರು ವ್ಯವಸ್ಥಿತ ಬ್ರೈನ್ ವಾಷಿಂಗ್ನ ಬಲಿಪಶುಗಳು. ನಾನು ಧಾರ್ಮಿಕ ವ್ಯಕ್ತಿಯಲ್ಲ ಆದರೂ ಹೇಳುತ್ತೇನೆ ಕೇಳಿ. ನಮ್ಮ ಊರಿನ ಯೇಸು ಬಿಳಿಯ! ನೀಲಿ ಕಂಗಳಿನವನು, ಚಿನ್ನದ ಬಣ್ಣದ ಕೂದಲಿನವನು. ನಮ್ಮ ಊರಿನಲ್ಲಿ ಅವನಂತೆ ಯಾರು ಇಲ್ಲ. ಆದರೂ ನಮ್ಮ ಊರಿನ ಕಪ್ಪು ವರ್ಣದವರಿಗೆ ಆತನೇ ದೇವರು. ಪರಿಪೂರ್ಣತೆಯ ಸಂಕೇತ. ಇನ್ನೊಂದೆಡೆ ಯೇಸುವಿಗೆ ದ್ರೋಹ ಬಗೆದ ಜೂದ ಕಪ್ಪು ವರ್ಣದವ So black is essentially evil. White is divine. ಇಂತಹ ಹಸಿ ಹಸಿ ಸುಳ್ಳುಗಳನ್ನ ತಮ್ಮ ಡಿಎನ್ಎ ಒಳಗೆ ಸೇರಿಸಿಕೊಂಡುಬಿಟ್ಟಿರುವ ಜನರಿರುವ ಸಮಾಜ ಆರೋಗ್ಯಕರವಾಗಿರಲು ಹೇಗೆ ಸಾಧ್ಯ ...

ಆದರೆ ಎಲ್ಲವೂ ಮುಗಿದು ಹೋಗಿಲ್ಲ. ಜನರಲ್ಲಿ ಇವುಗಳ ಬಗ್ಗೆ ಅರಿವು ಮುಡಿಸಬೇಕಿದೆ. ಫ್ಲೋಡ್ ಹತ್ಯೆಯ ನಂತರ ಕೃತ್ಯವನ್ನ ಖಂಡಿಸಿ ಬೀದಿಗಿಳಿದವರಲ್ಲಿ ಯುವಕರೇ, ಕೆಲವೆಡೆ ಬಿಳಿಯ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದೊಂದೇ ನನಗೆ ಆಶಾಕಿರಣ.

- Harish Gangadhar

11/12/2022

ಉಪ್ಪುಚ್ಚಿಮುಳ್ಳು ಕಥಾಸಂಕಲನದ ಎರಡನೇ ಆವೃತಿ ಬಿಡುಗಡೆ ಸಮಾರಂಭ ತುಮಕೂರು

09/12/2022

ಮೂಢನಂಬಿಕೆಗಳು ಸರ್ಕಾರ ಆಡಳಿತ ವೈಖರಿನೋ

Address

Bijapur

Alerts

Be the first to know and let us send you an email when Nampeparu posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share