Windsor Manor Hotel a Waqf property? | ವಿಂಡ್ಸರ್ ಮ್ಯಾನರ್ ಹೋಟೆಲ್ ವಕ್ಫ್ ಆಸ್ತಿಯೇ? | The File Kannada
ರೈತರ ಸ್ವಾಧೀನ ಮತ್ತು ಅನುಭವದಲ್ಲಿರುವ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ದಾಖಲಿಸಿರುವ ಸರ್ಕಾರದ ನಡೆಗೆ ರಾಜ್ಯಾದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಸರ್ಕಾರಕ್ಕೆ ನೀಡಿದ್ದ ವಿಶೇಷ ವರದಿಯು ಮುನ್ನೆಲೆಗೆ ಬಂದಿದೆ.
ಈ ವರದಿಯಲ್ಲಿ ಬಹುಮುಖ್ಯವಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಂಡ್ಸರ್ ಮ್ಯಾನರ್ ಹೋಟೆಲ್ ಬಗ್ಗೆಯೂ ಪ್ರಸ್ತಾಪವಾಗಿದೆ. ನಿಜಕ್ಕೂ ವಿಂಡ್ಸರ್ ಮ್ಯಾನರ್ ಹೋಟೆಲ್, ವಕ್ಫ್ ಆಸ್ತಿಯೇ ಎಂಬ ಕುರಿತು ಪಲ್ಲವಿ ಶಂಕರ್ ಅವರು ವಿಸ್ತೃತವಾಗಿ ವಿವರಿಸಿದ್ದಾರೆ.
ನೋಡಿ, ನಮ್ಮನ್ನು ಬೆಂಬಲಿಸಿ
............
The government's move to register the lands in the possession and experience of farmers as waqf property has sparked outrage across the state. Meanwhile, the special report given to the government by Anwar Manippadi, who was the chairman of the Karnataka State Minorities Commission, has come to the fore regarding the seizure of Waqf property.
Windsor Manor Hotel in the heart of Bangalore is also mentioned in this report. Pallavi Shankar elaborates on whether Windsor Manor Hotel is indeed a waqf property.
150 ಕೋಟಿ ಮೌಲ್ಯದ ಟಿ ಡಿ ಆರ್ : ಮತ್ತೊಂದು ಅಕ್ರಮ? | 150 Crore TDR : Another Illegality? | The File Kannada
150 ಕೋಟಿ ಮೌಲ್ಯದ ಟಿ ಡಿ ಆರ್ : ಮತ್ತೊಂದು ಅಕ್ರಮ? | 150 Crore TDR : Another Illegality? | The File Kannada.
ಡಿ ಕೆ ಶಿವಕುಮಾರ ಕೃಪಾಪೋಷಿತ ದವನಂ ಸಂಸ್ಥೆಗೆ ಅಂದಾಜು 150 ಕೋಟಿ ರು ಮೌಲ್ಯದ ಟಿ ಡಿ ಆರ್ ನೀಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಹಿಂದಿನ ಬಿಜೆಪಿ ಸರ್ಕಾರ ದಲ್ಲೇ ಈ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಆದರೇ ಈ ಬಗ್ಗೆ ಅಂತಿಮ ತೀರ್ಮಾನ ಆಗಿರಲಿಲ್ಲ. ಎರಡು ವರ್ಷ ದ ಹಿಂದಿನ ಪ್ರಸ್ತಾವನೆ ಗೆ ಕಾಂಗ್ರೆಸ್ ಸರ್ಕಾರ ವು ತರಾತುರಿ ಯಲ್ಲಿ ಚಾಲನೆ ಕೊಟ್ಟಿದೆ. ವಾಸ್ತವ ದಲ್ಲಿ ಈ ದವನಂ ಈ ಜಾಗ ದಲ್ಲಿ ಸ್ವಾಧೀನ ದಲ್ಲೇ ಇಲ್ಲ. ಆದರೂ ಟಿ ಡಿ ಆರ್ ಕೊಡಲು ಹೊರಟಿದೆ. ಈ ಎಲ್ಲದರ ಬಗ್ಗೆ ಪಲ್ಲವಿ ಶಂಕರ್ ಅವರು ವಿಸ್ತ್ರತವಾಗಿ ವಿವರಿಸಿದ್ದಾರೆ. ನೋಡಿ, ನಮ್ಮನ್ನು ಬೆಂಬಲಿಸಿ.
....................................
The Congress government is going to give TDR worth Rs 150 crore to DK Shivakumar Linked Davanam Constructions Private Limited. This proposal was submitted in the previous BJP government. But this was not the final decision. The Congress government has hastily implemented the two-year-old proposal. Actually this Davanam is not in possession of this place. However, TDR is going to be given.
....................................
All this has been explained in detail, By Pallavi Shankar.
Look, support us.
#thefile #thefilekannada #scam #karnatakascam #scam #dkshivakumar #zameer_khan #congress #tdr #d
ಕಲ್ಲಡ್ಕ- ರಾಘವೇಶ್ವರ ಬೆನ್ನಿಗೆ ನಿಂತ ಸರ್ಕಾರ | The File Kannada
ಕಲ್ಲಡ್ಕ- ರಾಘವೇಶ್ವರ ಬೆನ್ನಿಗೆ ನಿಂತ ಸರ್ಕಾರ | The File Kannada
ಶ್ಯಾಮ್ ಪ್ರಸಾದ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ್ ಭಟ್, ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ದೋಷಾರೋಪಣೆ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಕಾಂಗ್ರೆಸ್ ಸರ್ಕಾರವು ಹಿಂದೇಟು ಹಾಕಿದೆ. ಹೈಕೋರ್ಟ್ ಆದೇಶವು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ತೀರ್ಮಾನಿಸಿದೆ.
ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಅಭಿಯೋಜನೆ ಇಲಾಖೆಯು ಹೇಗೆ ತೀರ್ಮಾನ ಕೈಗೊಂಡಿದೆ ಎಂದು ಚರಣ್ ಐವರ್ನಾಡು ವಿವರಿಸಿದ್ದಾರೆ.
ನೋಡಿ, ನಮ್ಮನ್ನು ಬೆಂಬಲಿಸಿ
.............
The High Court quashed the charge-sheet against Raghaveshwara Bharati Swamiji of Kalladka Prabhakar Bhat, Ramachandrapur Math in connection with the Shyam Prasad suicide case.
The Congress government has hesitated to challenge this order in the Supreme Court. The state Congress government concluded that the High Court order was not against the government's interest.
Charan Aivarnadu explained how the Abhishekana Department took the decision that it was not against the inter
ಕೆಲಸ ಮಾಡದ ಶೇ 47% ರಷ್ಟು ಸಿಬ್ಬಂದಿ : ಸೋಮಾರಿ ಸರ್ಕಾರ! | The File Kannada
ಕೆಲಸ ಮಾಡದ ಶೇ 47% ರಷ್ಟು ಸಿಬ್ಬಂದಿ : ಸೋಮಾರಿ ಸರ್ಕಾರ! | The File Kannada.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯೇ ಈಗಲೂ ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅಧಿಕಾರಿವರ್ಗದಲ್ಲಿನ ಮೈಗಳ್ಳತನ, ಸೋಮಾರಿತನ ಈಗಲೂ ದೂರವಾಗಿಲ್ಲ.
ಸಚಿವಾಲಯ ವ್ಯಾಪ್ತಿಯಲ್ಲಿನ ಅಧಿಕಾರಿ, ಸಿಬ್ಬಂದಿಗಳ ಪೈಕಿ ಶೇ. 47ರಷ್ಟು ಮಂದಿ ನಿಗದಿತ ಅವಧಿಯಲ್ಲಿ ಕೆಲಸ ಮಾಡುತ್ತಿಲ್ಲ. ಇಲಾಖೆಗಳಲ್ಲಿ 50,000ಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇವೆ.
ಈ ಎಲ್ಲದರ ಕುರಿತು ಚರಣ್ ಐವರ್ನಾಡು ವಿವರಿಸಿದ್ದಾರೆ.
............
The system of governance that was in place during the previous BJP government is still continuing. Even after a year and a half since the Congress government came to power, the laziness and laziness of the officials are still not far away.
Among the officers and staff under the ministry, percent. 47 percent are not working within the prescribed period. More than 50,000 files are pending disposal in departments.
All this has been explained by Charan Ivarnadu.
ನೋಡಿ, ನಮ್ಮನ್ನು ಬೆಂಬಲಿಸಿ
#thefile #thefilekannada #scam #karnatakascam #ScamAware
ಸಿದ್ದಾರ್ಥ್ ವಿಹಾರ ಟ್ರಸ್ಟ್, ಸಿ ಎ ಸೈಟ್ ವಾಪಸ್ ಕೊಟ್ಟಿದ್ದೇಕೆ? | The File Kannada
ಸಿದ್ದಾರ್ಥ್ ವಿಹಾರ ಟ್ರಸ್ಟ್, ಸಿ ಎ ಸೈಟ್ ವಾಪಸ್ ಕೊಟ್ಟಿದ್ದೇಕೆ? | The File Kannada.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರು ಒಳಗೊಂಡಿರುವ ಸಿದ್ಧಾರ್ಥ ವಿಹಾರ್ ಟ್ರಸ್ಟ್ ಕಡೆಗೂ ವಿವಾದಿತ ಸಿ ಎ ನಿವೇಶನವನ್ನು ಹಿಂದಿರುಗಿಸಿದೆ. ಇದು ದಿ ಫೈಲ್ ಸರಣಿ ವರದಿಗಳ ಪರಿಣಾಮ.
ಖರ್ಗೆ ಅವರ ಕುಟುಂಬ ಸದಸ್ಯರು ಇರುವ ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಬೆಂಗಳೂರಿನ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್ನಲ್ಲಿ 5 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ಮಂಜೂರಾಗಿತ್ತು. ಈ ಪ್ರಕರಣವು ಖರ್ಗೆ ಅವರ ಕುಟುಂಬವನ್ನು ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಗುರಿಯಾಗಿಸಿತ್ತು. ಈ ಕುರಿತು ದಾಖಲೆ ಸಹಿತ 'ದಿ ಫೈಲ್' ಬಹಿರಂಗಪಡಿಸಿತ್ತು. ಅಲ್ಲದೇ ಸರಣಿ ರೂಪದಲ್ಲಿ ವರದಿಗಳನ್ನು ಪ್ರಕಟಿಸಿತ್ತು. ಇದೆಲ್ಲದರ ಕುರಿತು ಪಲ್ಲವಿ ಶಂಕರ್ ಅವರು ವಿವರಿಸಿದ್ದಾರೆ. ನೋಡಿ, ನಮ್ಮನ್ನು ಬೆಂಬಲಿಸಿ
#news #latestnews #bjp #congress #jds #scams #karnatakascam #mallikarjunakharge #siddaramaiah #rashok
AICC Chairman Mallikarjun Kharge and his Family members owned Siddhartha Vihar Trust has also returned the disputed CA site to Kiadb. This i
ಸಾವಿರಾರು ಕೋಟಿ ಖರ್ಚು, ನೀರು ಹರಿದಿಲ್ಲ ಪೈಪ್ ಗಳೂ ನಾಪತ್ತೆ! | The File Kannada.
ಸಾವಿರಾರು ಕೋಟಿ ಖರ್ಚು, ನೀರು ಹರಿದಿಲ್ಲ ಪೈಪ್ ಗಳೂ ನಾಪತ್ತೆ! | The File Kannada.
ವಿಧಾನಮಂಡಲದ ಉಭಯ ಸದನಗಳಲ್ಲಿ ಮುಖ್ಯಮಂತ್ರಿ, ಸಚಿವರು ನೀಡುವ ಹೇಳಿಕೆಗಳು ಭವಿಷ್ಯದಲ್ಲಿ ಭರವಸೆ, ವಾಗ್ದಾನ, ಆಶ್ವಾಸನೆಗಳಾಗಿ ರೂಪುಗೊಳ್ಳುತ್ತವೆ. ಇಂತಹ ಭರವಸೆಗಳನ್ನು ನಿಗದಿತ ಅವಧಿಯಲ್ಲಿ ಈಡೇರಿಸಿದಲ್ಲಿ ಭರವಸೆ ನೀಡಿದವರಿಗೂ, ಪಡೆದವರಿಗೂ ಪ್ರಮುಖವಾಗಿ ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ.
ಆದರೆ ಹತ್ತಾರು ವರ್ಷಗಳ ಹಿಂದೆಯೇ ಸದನಕ್ಕೆ ನೀಡಿದ್ದ ಭರವಸೆಗಳು ಈಗಲೂ ಈಡೇರಿಲ್ಲ. ಅವ್ಯವಹಾರ, ಹಣ ದುರುಪಯೋಗಗಳಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಭರವಸೆಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸದಿರುವುದರಿಂದ ಅಂತಹ ಪ್ರಕರಣಗಳಲ್ಲಿ ಭಾಗಿಗಳಾದ ಅಧಿಕಾರಿ, ಸಿಬ್ಬಂದಿ ವರ್ಗದವರ ವಿರುದ್ಧ ಕ್ರಮ ತೆಗೆದು ಕೊಂಡಿಲ್ಲ ಮತ್ತು ಅಪರಾಧಿಗಳಿಗೆ ಶಿಕ್ಷೆಯೂ ಆಗಿಲ್ಲ.
ಈ ಭರವಸೆಗಳ ಪೈಕಿ ಪ್ರಮುಖವಾದ ಭರವಸೆಗಳ ಕುರಿತು ಅರುಣ್ ರಾಘವ್ ಅವರು ವಿಶ್ಲೇಷಿಸಿದ್ದಾರೆ.
ನೋಡಿ, ನಮ್ಮನ್ನು ಬೆಂಬಲಿಸಿ
.............
The statements made by the Chief Minister and the Ministers in the
ಕುನ್ಹಾ ವರದಿಯಲ್ಲಿ'ದಿ ಫೈಲ್' ಹೊರಗೆಳೆದಿದ್ದ ಪ್ರಕರಣಗಳ ಉಲ್ಲೇಖ | The File Kannada
ಕುನ್ಹಾ ವರದಿಯಲ್ಲಿ'ದಿ ಫೈಲ್' ಹೊರಗೆಳೆದಿದ್ದ ಪ್ರಕರಣಗಳ ಉಲ್ಲೇಖ | The File Kannada.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯು 'ದಿ ಫೈಲ್' ಪ್ರಕಟಿಸಿದ್ದ ವರದಿಗಳ ಮೇಲೂ ಬೆಳಕು ಚೆಲ್ಲಿದೆ.
ಪಿಪಿಇ ಕಿಟ್, ಮಾಸ್ಕ್, ಆಕ್ಸಿಜನ್, ವೆಂಟಿಲೇಟರ್, ಸ್ಯಾನಿಟೈಸರ್, ಆರ್ಟಿಪಿಸಿಆರ್, ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಹೀಗೆ ವಿವಿಧ ರೀತಿಯ ವೈದ್ಯಕೀಯ ಸಲಕರಣೆ ಮತ್ತು ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ.
ಕೆಟಿಪಿಪಿ ನಿಯಮ ಉಲ್ಲಂಘಿಸಿ ಮಾಡಿರುವ ಖರೀದಿ, ನಿರ್ದಿಷ್ಟ ಕಂಪನಿಗಳಿಗೆ ಆಗಿರುವ ಆರ್ಥಿಕ ಲಾಭ, ಸರ್ಕಾರಕ್ಕೆ ಆಗಿರುವ ನಷ್ಟ ಹೀಗೆ ಹತ್ತಾರು ಮಗ್ಗುಲಿನಲ್ಲಿ 'ದಿ ಫೈಲ್' 2020, 2021 ಮತ್ತು 2022ರಲ್ಲಿ 50ಕ್ಕೂ ಹೆಚ್ಚು ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಇದೀಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯಲ್ಲಿ ಈ