Maratha Mithra - ಮರಾಠ ಮಿತ್ರ

  • Home
  • Maratha Mithra - ಮರಾಠ ಮಿತ್ರ

Maratha Mithra - ಮರಾಠ ಮಿತ್ರ News Of all Maratha Community to spead news and current affairs of karnataka

ಸಾವಿತ್ರಿ ಬಾಯಿ ಫುಲ್ ಜನನ:ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬ...
02/01/2022

ಸಾವಿತ್ರಿ ಬಾಯಿ ಫುಲ್

ಜನನ:
ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

ಬಾಲ್ಯ ಮತ್ತು ವಿವಾಹ :
ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು

ಶಿಕ್ಷಕಿಯಾಗಿ:
ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅವರನ್ನು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.
ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.
ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು.
ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ.
ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ,‌ ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ - ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.

ಲೇಖಕಿಯಾಗಿ:
೧೮೫೪ರಲ್ಲಿ ಸಾವಿತ್ರಿಬಾಯಿಯವರು 'ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು ೧೯ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು'ಅಭಂಗ್' ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
ಅವರ ಎರಡನೇಯ ಕೃತಿ 'ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) ೧೮೯೧ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ.
ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ೧೮೯೨ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ

ಸಾಮಾಜಿಕ ಕ್ರಾಂತಿಕಾರಿಯಾಗಿ:
೧೫೦ ವರ್ಷಗಳ ಹಿಂದೆಯೇ ಸಾವಿತ್ರಿ ಬಾಯಿ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು.
೧೮೬೦ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.
ಸಾವಿತ್ರಿಬಾಯಿ 'ಸತ್ಯೋಧಕ' ಸಮಾಜದ ಅಧ್ಯಕ್ಷೆಯಾಗಿದ್ದರು. ೧೯ನೇ ಶತಮಾನದ ಇತಿಹಾಸದಲ್ಲಿ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿ.

ಮರಣ:
೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

ಇಂತಿ
#ಮರಾಠಮಿತ್ರ

ಭಾರತದಲ್ಲಿ ಮೊದಲು ಯುವತಿಯರ ಕನಿಷ್ಠ ವಿವಾಹ ವಯಸ್ಸು 18 ಇತ್ತು, ಈಗ 21 ಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ‌‌ ನೀಡಿದೆ. ಇದು ಬಹಳ...
19/12/2021

ಭಾರತದಲ್ಲಿ ಮೊದಲು ಯುವತಿಯರ ಕನಿಷ್ಠ ವಿವಾಹ ವಯಸ್ಸು 18 ಇತ್ತು, ಈಗ 21 ಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ‌‌ ನೀಡಿದೆ. ಇದು ಬಹಳ ಒಳ್ಳೆಯ ನಿರ್ಧಾರ ಏಕೆಂದರೆ ಹೆಣ್ಣುಮಕ್ಕಳ ದೈಹಿಕ ಸ್ಥಿತಿ, ಮಾನಸಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಹೆಚ್ಚಾಗಿ ಅವರ ಕಾಲ ಮೇಲೆ ಅವರು ನಿಂತುಕೊಳ್ಳುವ ಶಕ್ತಿ, ವಿದ್ಯಾಭ್ಯಾಸದಲ್ಲಿ ಹೆಚ್ಚು ಸಮಯ ಕೊಡಬಹುದು. ಅದಕೆಲ್ಲ ಮೀರಿ ಕಾಲೇಜು ಓದುವಾಗಲೇ ಪ್ರೀತಿ ಪ್ರೇಮಕ್ಕೆ ಬಿದ್ದು ಏನು ಅರಿಯದ ವಯಸ್ಸಿನಲ್ಲಿ ಮದುವೆಯಾಗುವ ಪರಿಸ್ಥಿತಿ ಉಂಟಾಗದು. ಇದರಿಂದ ಮತಾಂತರ ಮದುವೆಗಳ್ಳನು ತಡೆಯಬಹುದಾಗಿದೆ🙏🙏

#ಹಿಂದೂ
#ಸನಾತನಹಿಂದುಧರ್ಮ

ಇಂತಿ
ಮರಾಠ ಮಿತ್ರ ಪತ್ರಿಕೆ

ಮೊನ್ನೆ ಧಾರವಾಡದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸಾಹೇಬರಿಗೆ ಕೂಲಂಕುಷವಾಗಿ ತನ...
16/12/2021

ಮೊನ್ನೆ ಧಾರವಾಡದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸಾಹೇಬರಿಗೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು #ಹಿಂದೂ_ಪರಿಷದ್ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. #ಪ್ರಿಯಾ_ಪವಾರ ಎಂಬ ಹಿಂದೂ ಯುವತಿಯನ್ನು #ಹಜೀಮ_ನದಾಪ್ ಎಂಬ ಮುಸ್ಲಿಂ ಯುವಕ ಲವ್ ಜಿಹಾದ್ ನಡೆಸಿ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಹಾಗೂ ಇ ಕೃತ್ಯಕ್ಕೆ ಅವನದ್ದೇ ಓಣಿಯ #ಮಸ್ಕಾನ ಎಂಬಂತ ಮುಸ್ಲಿಂ ಯುವತಿ ಹಿಂದೂ ಹುಡುಗಿಯ ತಲೆ ಕೆಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಪರೋಕ್ಷವಾಗಿ ಬೆಂಬಲಿಸಿದ್ದಾಳೆ. ಆಕೆಯ ವಿರುದ್ಧವೂ ತನಿಖೆ ನಡೆಸಬೇಕೆಂದು ಆಗ್ರಹಿಸಿಲಾಯಿತು. ಹಿಂದು ಪರಿಷದ್, ಸ್ವಾಭಿಮಾನಿ ಮರಾಠ ಗ್ರೂಪ್ ಹುಬ್ಬಳ್ಳಿ ಅವರೊಂದಿಗೆ ವೀರ ಶಿವಾಜಿ ಸೇನೆ ಕಾರವಾರ ಶಿವಾಜಿ ಮರಾಠಾ ಸಮಾಜ ಕಲಘಟಗಿ* ಇವರ ವತಿಯಿಂದ *ಪೊಲೀಸ್ ಕಮಿಷನರ್ ಆಫೀಸ್ ನವನಗರ್* ಇವರಿಗೆ ಲವ್ ಜಿಹಾದ್ ವಿರುದ್ಧ ತನಿಖೆ ಆಗಬೇಕೆಂದು ಮನಿ ಪತ್ರ ಸಲ್ಲಿಸಲಾಯಿತು ಭಾಗವಹಿಸಿದ ಹುಬ್ಬಳ್ಳಿ-ಧಾರವಾಡ ಯಲ್ಲಾಪುರ ಕಾರವಾರ ಕಿರವತ್ತಿ ಕಲಘಟಗಿ ಮರಾಠ ಸಮಾಜದ ಬಾಂಧವರಿಗೆ ಧನ್ಯವಾದಗಳು 🙏🙏🚩🚩👍👍🏹🏹

ಇಂತಿ
ಮರಾಠ ಮಿತ್ರ ಪತ್ರಿಕೆ
#ಜಾಗೋ_ಹಿಂದೂ_ಜಾಗೋ

ಗೆ,ಉಪ ಪೊಲೀಸ್ ಆಯುಕ್ತರು ಬೆಂಗಳೂರು ಕೇಂದ್ರ ವಿಭಾಗ ಬೆಂಗಳೂರು-560001ವಿಷಯ MES ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ಕೋರಿ,---------------...
15/12/2021

ಗೆ,
ಉಪ ಪೊಲೀಸ್ ಆಯುಕ್ತರು
ಬೆಂಗಳೂರು ಕೇಂದ್ರ ವಿಭಾಗ
ಬೆಂಗಳೂರು-560001

ವಿಷಯ MES ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ಕೋರಿ,
---------------------------

ಮಾನ್ಯರೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿಯಲ್ಲಿರುವ ಕರ್ನಾಟಕ ಧ್ವಜವನ್ನು ಸುಟ್ಟುಹಾಕಿ ನಾಡದ್ರೋಹ ಹಾಗೂ 6ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿರುವ MES ಕೃತ್ಯವನ್ನು ಖಂಡಿಸಿ "ವೀರ ಶಿವಾಜಿ ಸೇನೆ" ವತಿಯಿಂದ ದಿನಾಂಕ 16/12/2021 ರಂದು ಮಧ್ಯಾಹ್ನ 2:00 ಗಂಟೆಗೆ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಪ್ರತಿಭಟನೆಗೆ 30 ಜನ ಸೇರಲಿದ್ದು ತಮ್ಮ ಇಲಾಖೆ ವತಿಯಿಂದ ಬಂದೋಬಸ್ತ್ ನೀಡಿ ಹಾಗೂ ಅನುಮತಿ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇವೆ.
ಆತ್ಮಿಯ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ಬೆಂಬೇಲಿಸಿ...

ನಾಡು ನುಡಿ ನೆಲ ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ....
ಧನ್ಯವಾದಗಳೊಂದಿಗೆ :-

ಭರತ್ ರಾವ್ ಕದಂ.
9845132143

ಎದ್ದೇಳಿ ! ಜಾಗೃತಿಯಾಗಿ ! ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ! #ಕ್ಷತ್ರಿಯ_ಮರಾಠಾ_ಒಕ್ಕೂಟದಿಂದ_ಡಿಸೆಂಬರ್_15ರಂದು_ಬೆಳಗಾವಿ_ಚಲೋನಾನಾ ಬೇಡಿಕೆಗಳ ಈ...
13/12/2021

ಎದ್ದೇಳಿ ! ಜಾಗೃತಿಯಾಗಿ ! ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ !

#ಕ್ಷತ್ರಿಯ_ಮರಾಠಾ_ಒಕ್ಕೂಟದಿಂದ_ಡಿಸೆಂಬರ್_15ರಂದು_ಬೆಳಗಾವಿ_ಚಲೋ

ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.15ರಂದು ಸುವರ್ಣ ವಿಧಾನಸೌಧ ಬಳಿ ಬೆಳಗಾವಿ ಚಲೋ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ಕ್ರತಿಯ ಮರಾಠಾ ಮಹಾ ಒಕ್ಕೂಟ ತಿಳಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ರಾಜ್ಯಾಧ್ಯಕ್ಷ ಶ್ಯಾಮಸುಂದರ ಗಾಯಕವಾಡ, ''ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮರಾಠ ಸಮುದಾಯವನ್ನು ಹಿಂದುಳಿದ ೩ಬಿ ಯಿಂದ ೨ಎ ವರ್ಗಕ್ಕೆ ಸೇರ್ಪಡೆಗೊಳಿಸಬೇಕು'', ಎಂದು ಆಗ್ರಹಿಸಿದರು,

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ರಚಿಸಿದ ನಿಗಮ ಮಂಡಳಿಗೆ ಶೀಘ್ರ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಬೇಕು. ನಗದು ಮಂಡಳಿಗೆ 250 ಕೋಟಿ ರೂ. ಅನುದಾನ ನೀಡಬೇಕು. ಸಮುದಾಯದ ಮುಖಂಡರಾದ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಮರಳಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು" ಎಂದು ಒತ್ತಾಯಿಸಿದರು.

ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಸೇರಿ ಯಶಸ್ವಿಗೊಳಿಸೋಣ

ಸೇನಾ ಮುಖ್ಯಸ್ಥರಾದ ಜನರಲ್‌ ಬಿಪಿನ್‌ ರಾವತ್‌ ಜಿ ಅವರು ಪ್ರಯಾಣಿಸುತ್ತಿದ್ದ ಭಾರತೀಯ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನಲ್ಲಿ ಪತನಗೊಂಡ...
08/12/2021

ಸೇನಾ ಮುಖ್ಯಸ್ಥರಾದ ಜನರಲ್‌ ಬಿಪಿನ್‌ ರಾವತ್‌ ಜಿ ಅವರು ಪ್ರಯಾಣಿಸುತ್ತಿದ್ದ ಭಾರತೀಯ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನಲ್ಲಿ ಪತನಗೊಂಡಿರುವ ಸುದ್ದಿ ಆಘಾತಕಾರಿ.

ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

#ಮರಾಠಮಿತ್ರ

07/12/2021

ಕರ್ನಾಟಕದಲ್ಲಿ 10/12/2021 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ BJP, Congress ಅಥವಾ JDS ಪಕ್ಷದಿಂದ ಯಾವೊಬ್ಬ ಮರಾಠ ಅಭ್ಯರ್ಥಿ ಕೊಟ್ಟಿಲ್ಲ. ಇದರಿಂದ ಮರಾಠಿಗರು ಅರ್ಥಮಾಡಿಕೊಳ್ಳಬೇಕಿರುವುದು ಒಂದೇ ನಮ್ಮ ಅಸ್ತಿತ್ವ ನಮ್ಮ ಸಮಾಜವನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದಾರೆ ನಮ್ಮ ರಾಜಕೀಯ ಪಕ್ಷಗಳು.
ಬೀದರ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಹುಬ್ಬಳಿ, ಧಾರವಾಡ, ಕಲಬುರ್ಗಿ, ಉತ್ತರ ಕನ್ನಡ ಇನ್ನು ಹೆಚ್ಚಿನ ಜಿಲ್ಲೆಯಲ್ಲಿ ಮರಾಠಾ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದರು, ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್, MLA, MLC ಅಥವ MP ಆಗಿರಬಹುದು
ಮರಾಠಾ ಸಮುದಾಯದ ಹಲವು ವ್ಯಕ್ತಿಗಳು ಎಲ್ಲಾ ಪಕ್ಷದಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಉನ್ನತ ಸ್ಥಾನದಲ್ಲಿದ್ದು ಇವರು ಕೇವಲ ಪಕ್ಷಗಳ ಸಲುವಾಗಿ ದುಡಿಯುವ ನಾಯಕರಾಗಿದ್ದಾರೆ ಹೊರತು ಚುನಾವಣೆಯಲ್ಲಿ ಸ್ಪರ್ಧಿಸುವ ನಮ್ಮ ಮರಾಠ ಸಮಾಜದ ವ್ಯಕ್ತಿಗೆ ಪ್ರೋತ್ಸಾಹ ಅಥವ ಸ್ಥಾನಮಾನ ನೀಡುವುದಾಗಿ ಆಗ್ರಹ ಮಾಡುತ್ತಿಲ್ಲ, ಮತ್ತು ನಮ್ಮ ಮರಾಠ ಸಮಾಜದ ವ್ಯಕ್ತಿಯೇ ಅಭ್ಯರ್ಥಿಯಾಗಿ ನಿಂತರು ಅವನಿಗೆ ಬೆಂಬಲ ಅಥವಾ ಪ್ರೋತ್ಸಾಹ ನೀಡುತ್ತಿಲ್ಲ , ಇಂತಹ ನಿರ್ಣಯಗಳು ಇಡೀ ಮರಾಠಾ ಸಮುದಾಯಕ್ಕೆ ಬೇಸರ ಉಂಟು ಮಾಡಿದೆ. ಮುಂಬರುವ ದಿನಗಲ್ಲಿ ಅಪ್ಪಟ ಹಿಂದುತ್ವದ ಪಕ್ಷದಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮತ್ತು ಅದೇ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ನಮ್ಮ ಮುಂಬರುವ ದಿನಗಳಲ್ಲಿ ನಮ್ಮ ಮರಾಠ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆದು ಕರ್ನಾಟಕದಲ್ಲಿನ ಮರಾಠ ಹಾಗೂ ಅಪ್ಪಟ ಹಿಂದೂ ಬಾಂಧವರಿಗೆ ನ್ಯಾಯ ಸಿಗುವಂತಾಗುತ್ತದೆ.

ಇಂತಿ
ಭರತ್ ರಾವ್ ಕದಂ
ಸಂಸ್ಥಾಪಕರು- ಮರಾಠ ಮಿತ್ರ ಪತ್ರಿಕೆ
ರಾಜ್ಯಾಧ್ಯಕ್ಷರು (ಯುವ ಘಟಕ) ವೀರ ಶಿವಾಜಿ ಸೇನೆ

#ಮರಾಠಮಿತ್ರ
#ಮರಾಠ_ಅಭ್ಯರ್ಥಿ_ಬೆಂಬಲಿಸಿ

ದಿನಾಂಕ 15/11/2021 ರಂದು ಶ್ರೀ ವಿನಾಯಕ್ ಜಾಧವ್ ಅವರನ್ನು ಗದಗ್ ಜಿಲ್ಲೆ, ಗಜೇಂದ್ರಗಡ ತಾಲೂಕಿನ ಮರಾಠ ಮಿತ್ರ ಪತ್ರಿಕೆಯ ತಾಲೂಕು ವಾರದಿಗಾರರಾಗಿ...
15/11/2021

ದಿನಾಂಕ 15/11/2021 ರಂದು ಶ್ರೀ ವಿನಾಯಕ್ ಜಾಧವ್ ಅವರನ್ನು ಗದಗ್ ಜಿಲ್ಲೆ, ಗಜೇಂದ್ರಗಡ ತಾಲೂಕಿನ ಮರಾಠ ಮಿತ್ರ ಪತ್ರಿಕೆಯ ತಾಲೂಕು ವಾರದಿಗಾರರಾಗಿ ನೇಮಕ ಮಾಡಲಾಗಿದೆ. ನಿಮ್ಮ ಮುಂದಿನ ಸಮಾಜದ ಕೊಡುಗೆಗೆ ಶುಭಾಶಯಗಳು.
ಗಜೇಂದ್ರಗಡ ತಾಲೂಕಿನ ಯಾವುದೇ ಸಮಾಜದ ವಿಷಯ ಹಾಗು ಕಾರ್ಯಕ್ರಮಗಳ ವಿವರವನ್ನು ಶ್ರೀ ವಿನಾಯಕ್ ಜಾಧವ್ ಅವರನ್ನು ಸಂಪರ್ಕಿಸಿ.
Ph: +91-8123269322

ಇಂತಿ
ಭರತ್ ರಾವ್ ಕದಂ
ಸಂಸ್ಥಾಪಕರು ಹಾಗು ಸಂಪಾದಕರು
ಮರಾಠ ಮಿತ್ರ ಪತ್ರಿಕೆ

#ಮರಾಠಮಿತ್ರ

ದಿನಾಂಕ 15/11/2021 ರಂದು ಶ್ರೀ ಸಂದೀಪ್ ಬಿರಾದಾರ್ ಸೂರ್ಯವಂಶಿ ಅವರನ್ನು ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲೂಕಿನ ಮರಾಠ ಮಿತ್ರ ಪತ್ರಿಕೆಯ ತಾಲೂಕು...
15/11/2021

ದಿನಾಂಕ 15/11/2021 ರಂದು ಶ್ರೀ ಸಂದೀಪ್ ಬಿರಾದಾರ್ ಸೂರ್ಯವಂಶಿ ಅವರನ್ನು ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲೂಕಿನ ಮರಾಠ ಮಿತ್ರ ಪತ್ರಿಕೆಯ ತಾಲೂಕು ವಾರದಿಗಾರರಾಗಿ ನೇಮಕ ಮಾಡಲಾಗಿದೆ. ನಿಮ್ಮ ಮುಂದಿನ ಸಮಾಜದ ಕೊಡುಗೆಗೆ ಶುಭಾಶಯಗಳು.
ಬಸವಕಲ್ಯಾಣ ತಾಲೂಕಿನ ಯಾವುದೇ ಸಮಾಜದ ವಿಷಯ ಹಾಗು ಕಾರ್ಯಕ್ರಮಗಳ ವಿವರವನ್ನು ಶ್ರೀ ಸಂದೀಪ್ ಬಿರಾದಾರ್ ಸೂರ್ಯವಂಶಿ ಅವರನ್ನು ಸಂಪರ್ಕಿಸಿ.
Ph: +91-9945419311

ಇಂತಿ
ಭರತ್ ರಾವ್ ಕದಂ
ಸಂಸ್ಥಾಪಕರು ಹಾಗು ಸಂಪಾದಕರು
ಮರಾಠ ಮಿತ್ರ ಪತ್ರಿಕೆ

#ಮರಾಠಮಿತ್ರ

14/11/2021

ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು

1ವರ್ಷ ಆಯಿತು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅದಕ್ಕೆ ಐವತ್ತು ಕೋಟಿ ರೂ ಘೋಷಣೆ ಮಾಡಿ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬರದೆ ಘೋಷಣೆ ಘೋಷಣೆಯಾಗಿಯೇ ಉ...
14/11/2021

1ವರ್ಷ ಆಯಿತು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅದಕ್ಕೆ ಐವತ್ತು ಕೋಟಿ ರೂ ಘೋಷಣೆ ಮಾಡಿ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬರದೆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ನಾವು ಮರಾಠರು ನಮ್ಮ ಜೊತೆಗೆ ಏಕೆ ಇಂತಹ ತಾರತಮ್ಯ ತೀವ್ರಗೊಳಿಸಬೇಕಾ ಅಥವಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಸಮಾಜ ತೀರ್ಮಾನಿಸಲಿದೆ.

#ಮರಾಠಮಿತ್ರ

#ಶ್ರೀ_ಶ್ರೀಮಂತ್_ಪಾಟೀಲ್_ಶಾಸಕರು ಕಾಗವಾಡ
#ಶ್ರೀ_ಅನೀಲ_ಬೇನಕೆ_ಶಾಸಕರು ಬೆಳಗಾವಿ
#ಶ್ರೀಮತಿ_ಅಂಜಲಿ_ನಿಂಬಾಳ್ಕರ್_ಶಾಸಕಿ ಖಾನಾಪುರ
#ಶ್ರೀ_ಶ್ರೀನಿವಾಸ್_ಮಾನೆ_ಶಾಸಕರು ಹಾನಗಲ್

07/11/2021
07/11/2021
07/11/2021
07/11/2021
ಕರ್ನಾಟಕದಲ್ಲಿ ನೆಲೆಸಿರುವ ಸಮಸ್ತ ಮರಾಠಸಮಾಜದ ಕಲ್ಯಾಣ,ಅಭಿವೃದ್ಧಿ,ವಿದ್ಯಮಾನಗಳು, ಹಬ್ಬ ಆಚರಣೆಗಳು ಮತ್ತು ಇನ್ನಿತರ ಸುದ್ದಿಗಳನ್ನುಇಲ್ಲಿ ಪ್ರಕಟ...
07/11/2021

ಕರ್ನಾಟಕದಲ್ಲಿ ನೆಲೆಸಿರುವ ಸಮಸ್ತ ಮರಾಠ
ಸಮಾಜದ ಕಲ್ಯಾಣ,ಅಭಿವೃದ್ಧಿ,ವಿದ್ಯಮಾನಗಳು, ಹಬ್ಬ ಆಚರಣೆಗಳು ಮತ್ತು ಇನ್ನಿತರ ಸುದ್ದಿಗಳನ್ನು
ಇಲ್ಲಿ ಪ್ರಕಟಿಸಲಾಗುವುದು.
ಸಂಪರ್ಕಿಸಿ: +91-9845132143

Address


Telephone

+919845132143

Website

Alerts

Be the first to know and let us send you an email when Maratha Mithra - ಮರಾಠ ಮಿತ್ರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Maratha Mithra - ಮರಾಠ ಮಿತ್ರ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share