Sandalwood Bisi Suddi

  • Home
  • Sandalwood Bisi Suddi

Sandalwood Bisi Suddi Sandalwood Bisi Suddi

Casting call
14/04/2024

Casting call

*ಯಶಸ್ಸಿನ ಸಂಭ್ರಮದಲ್ಲಿ "ಯುವ"* . *ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆ* .ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗ...
14/04/2024

*ಯಶಸ್ಸಿನ ಸಂಭ್ರಮದಲ್ಲಿ "ಯುವ"* .

*ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆ* .

ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಕೆ.ಜಿ.ಎಫ್, ಕಾಂತಾರ, ರಾಜಕುಮಾರ ದಂತಹ ಯಶಸ್ವಿ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಲಾಂಛದಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ "ಯುವ" ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮೂಲಕ ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಈ ಯಶಸ್ಸಿನ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ರಾಜ್ಯದ ಜನತೆ "ಯುವ" ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಲೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡ ಕಲಾರಸಿಕರಿಗೆ, ಮಾಧ್ಯಮದವರಿಗೆ, ಹೊಂಬಾಳೆ ಫಿಲಂಸ್ ಸಂಸ್ಥೆಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ಜನರು ನನ್ನ ಮೊದಲ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನ ತುಂಬಿ ಬಂದಿದೆ ಎಂದು ಮಾತನಾಡಿದ ನಾಯಕ ಯುವ ರಾಜಕುಮಾರ್, ಪ್ರಥಮವಾಗಿ ನಾನು ನನಗೆ ಅವಕಾಶ ನೀಡಿದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಿಗೆ, ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿ ಪಡಿಸಿಕೊಳ್ಳುತ್ತೇನೆ. ಜನ ಫ್ಯಾಮಿಲಿ ಸಮೇತ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ. ಈ ಮೂಲಕ ರಾಜ್ಯದ ಜನತೆಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು.

ನನ್ನ ಮಗನ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಮೊದಲು ಧನ್ಯವಾದ ಹೇಳುತ್ತೇನೆ. ನಂತರ ನನ್ನ ಮಗನ ಒಂದು ಬ್ರಾಂಡ್ ಗೆ ಸೀಮಿತ ಮಾಡದೆ ಎಲ್ಲಾ ರೀತಿಯ ನಟನೆಯನ್ನು ಅವನಿಂದ ಎಲ್ಲಾ ರೀತಿಯ ನಟನೆಯನ್ನು ಮಾಡಿಸಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ಧನ್ಯವಾದ ಹೇಳುತ್ತಾ, ಯುವನ ಸಿನಿಮಾ ಹಾದಿ ಈಗಷ್ಟೇ ಆರಂಭವಾಗಿದೆ. ‌ಮುಂದೆ ಬೇರೆಬೇರೆ ಪಾತ್ರಗಳಲ್ಲಿ ಅವನು ನಟಿಸಿ ಜನರಿಂದ ಸೈ ಎನಿಸಿಕೊಳ್ಳಬೇಕು ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದರು.

ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಾಯಕಿ ಸಪ್ತಮಿ ಗೌಡ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಹೇಳಿದರು

ಚಿತ್ರದಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರಾಘು ಶಿವಮೊಗ್ಗ ಹಾಗೂ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ "ಯುವ" ಚಿತ್ರದ ಗೆಲುವನ್ನು ‌ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

*ಶೂಟಿಂಗ್ ಮುಗಿಸಿದ ‘ಸೇನಾಪತಿ’..ಜೂನ್ ನಲ್ಲಿ ತೆರೆಗೆ ಬರಲಿದೆ ಕಮಲ್ ಹಾಸನ್ ‘ಇಂಡಿಯನ್-2’*ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಇಂಡಿಯನ್...
14/04/2024

*ಶೂಟಿಂಗ್ ಮುಗಿಸಿದ ‘ಸೇನಾಪತಿ’..ಜೂನ್ ನಲ್ಲಿ ತೆರೆಗೆ ಬರಲಿದೆ ಕಮಲ್ ಹಾಸನ್ ‘ಇಂಡಿಯನ್-2’*

ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಇಂಡಿಯನ್ -2. ಜೂನ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ಸದ್ಯ ಇಂಡಿಯನ್ 2 ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.

ಇಂಡಿಯನ್ ಸೀಕ್ವೆಲ್ ಗೆ ಎಸ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು 1996 ರ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ಥಿಯೇಟರ್ಗಳಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೋವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಎಸ್. ಶಂಕರ್ ನಿರ್ದೇಶನದಲ್ಲಿ ಇಂಡಿಯಾ 2 ಸಿನಿಮಾ ಮೂಡಿ ಬರುತ್ತಿದ್ದು, ಸುಬಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ರತ್ನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ನೋಡಿ ಹರಸಿ
14/04/2024

ರತ್ನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ನೋಡಿ ಹರಸಿ

*ಶ್ರೀವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಆರಂಭವಾಯಿತು ದುನಿಯಾ ವಿಜಯ್ ಅಭಿನಯದ ನೂತನ ಚಿತ್ರ* . *ಕೆ.ವಿ.ಸತ್ಯಪ್ರಕಾಶ್ ನಿರ್ಮಾಣದ ಈ ಚಿತ್ರಕ್ಕೆ ಜ...
13/04/2024

*ಶ್ರೀವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಆರಂಭವಾಯಿತು ದುನಿಯಾ ವಿಜಯ್ ಅಭಿನಯದ ನೂತನ ಚಿತ್ರ* .

*ಕೆ.ವಿ.ಸತ್ಯಪ್ರಕಾಶ್ ನಿರ್ಮಾಣದ ಈ ಚಿತ್ರಕ್ಕೆ ಜಡೇಶ ಕೆ ಹಂಪಿ ನಿರ್ದೇಶನ* .

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ "ಸಾರಥಿ" ಚಿತ್ರವನ್ನು ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಅವರು ಹನ್ನೆರಡು ವರ್ಷಗಳ ನಂತರ "ಸಾರಥಿ ಫಿಲಂಸ್" ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡುತ್ತಿದ್ದಾರೆ. "ಜಂಟಲ್ ಮ್ಯಾನ್", " ಗುರುಶಿಷ್ಯರು" ಚಿತ್ರಗಳ ನಿರ್ದೇಶಕ ಹಾಗೂ "ಕಾಟೇರ" ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 29 ನೇ ಚಿತ್ರ "ವಿ ಕೆ 29" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು. ಶಾಸಕ ಶ್ರೀ ಗೋಪಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. "ಡೇರ್ ಡೆವಿಲ್ ಮುಸ್ತಫಾ" ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ "ಚೋಮನ ದುಡಿ"ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ "ಚೋಮನ ದುಡಿ" ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು ಈ ಚಿತ್ರವನ್ನು ಜಗದೀಶ್ ಅವರು ನಿರ್ಮಿಸಬೇಕಿತ್ತು‌. ಕಾರಣಾಂತರದಿಂದ ಆಗಲಿಲ್ಲ. ಆನಂತರ ಸ್ನೇಹಿತರೊಬ್ಬರ ಮೂಲಕ ಸತ್ಯಪ್ರಕಾಶ್ ಅವರ ಪರಿಚಯವಾಯಿತು. ಅವರು ಹಾಗೂ ಅವರ ಮಗ ಸೂರಜ್ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡರು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರಕ್ಕೆ ಚಾಲನೆ ದೊರಕ್ಕಿದೆ. ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಚಿತಾರಾಮ್ ಈ ಚಿತ್ರದ ನಾಯಕಿ. ದುನಿಯಾ ವಿಜಯ್ ಪುತ್ರಿ ಮೋನಿಕಾ ಈ ಚಿತ್ರದ ಮೂಲಕ ರಿತನ್ಯ ಎಂದು ಹೆಸರು ಬದಲಾವಣೆ ಮಾಡಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶಿಶಿರ್ ಕೂಡ ಮುಖ್ಯಪಾತ್ರದಲ್ಲಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಹಾಗೂ ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.

ಈ ಚಿತ್ರದ ವಿಶೇಷವೆಂದರೆ ತಂದೆ - ಮಗ ನಿರ್ಮಿಸುತ್ತಿದ್ದಾರೆ. ತಂದೆ - ಮಗಳು ಅಭಿನಯಿಸುತ್ತಿದ್ದೇವೆ. ನನ್ನ ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯದ ಕುರಿತು ಕಲಿತು ಬಂದಿದ್ದಾಳೆ. ಈ ಚಿತ್ರದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಹಾಗೂ ನಾಯಕನಾಗಿ ಹದಿನೆಂಟು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಮಗಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾಳೆ. ಒಬ್ಬ ತಂದೆ ಮಗಳಿಗಾಗಿ ಏನೆಲ್ಲಾ ಕೊಡಬಹುದು? ಸ್ಕ್ರಿಪ್ಟ್ ನಲ್ಲೂ ಅರ್ಧಭಾಗ ಕೊಡಬಹುದು ಎಂದು ತಿಳಿಸಿದ ದುನಿಯಾ ವಿಜಯ್, ನಿರ್ದೇಶಕ ಜಡೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಜಡೇಶ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಾಗುವುದು ಖಂಡಿತ. ಬಹಳ ವರ್ಷಗಳ ನಂತರ ಸತ್ಯಪ್ರಕಾಶ್ ಅವರು ನಿರ್ಮಾಣಕ್ಕೆ ಮರಳಿದ್ದಾರೆ‌. ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ನಾಯಕ ದುನಿಯಾ ವಿಜಯ್.

ಮೊದಲ ಚಿತ್ರ ಅಪ್ಪನ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಈ ಚಿತ್ರದಿಂದ ನನ್ನ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ನನಗಿರಲಿ ಎಂದರು ರಿತನ್ಯ(ಮೋನಿಕಾ).

"ಸಾರಥಿ" ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ಕಾರಣಾಂತರದಿಂದ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಅವರ ಕಥೆ ಇಷ್ಟವಾಯಿತು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸತ್ಯಪ್ರಕಾಶ್ ತಿಳಿಸಿದರು.

ಸಹ ನಿರ್ಮಾಪಕ ಸೂರಜ್ ಗೌಡ, ನಟ ಶಿಶಿರ, ಛಾಯಾಗ್ರಾಹಕ ಸ್ವಾಮಿ ಗೌಡ, ನಿರ್ಮಾಣ ನಿರ್ವಾಹಕ ನರಸಿಂಹ ಜಾಲಹಳ್ಳಿ ನೂತನ ಚಿತ್ರದ ಕುರಿತು ಮಾತನಾಡಿದರು. "ಭೀಮ" ಚಿತ್ರದ ನಿರ್ಮಾಪಕರ ಕೃಷ್ಣ ಸಾರ್ಥಕ್ ಶುಭ ಹಾರೈಸಿದರು.

*ಈ ವಾರ ತೆರೆಗೆ "SCAM 1770"* . ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ,  ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ  "SCAM 1...
10/04/2024

*ಈ ವಾರ ತೆರೆಗೆ "SCAM 1770"* .

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ "SCAM 1770" ಚಿತ್ರ ಈ ವಾರ(ಏಪ್ರಿಲ್ 12) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ SCAM 1770. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು.

ಡಾ||ಇಂದು ನಟೇಶ್ ಹಾಗೂ ಅಡ್ವೊಕೇಟ್ ನೇತ್ರಾವತಿ ಅವರು ಕಥೆ ಬರೆದಿದ್ದು, ವಿಕಾಸ್ ಪುಷ್ಪಗಿರಿ ಹಾಗೂ ಶಂಕರ್ ರಾಮನ್ ಚಿತ್ರಕಥೆ ಬರೆದಿದ್ದಾರೆ‌. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ - ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನ "SCAM 1770" ಚಿತ್ರಕ್ಕಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ನಿಶ್ವಿತ(ನಾಯಕಿ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಂಜು-ಗೀತಾ ಪ್ರೇಮ ಸಂಭಾಷಣೆಗಳಿಗೆ ಚಾಲನೆ     ಲೂಪ್ ಸ್ಟುಡಿಯೋದಲ್ಲಿ ಸಂಜು         ವೆಡ್ಸ್ ಗೀತಾ ಡಬ್ಬಿಂಗ್ ಶುರು        ಕನ್ನಡ ಚಿತ್ರರಂಗಕ್...
10/04/2024

ಸಂಜು-ಗೀತಾ ಪ್ರೇಮ ಸಂಭಾಷಣೆಗಳಿಗೆ ಚಾಲನೆ

ಲೂಪ್ ಸ್ಟುಡಿಯೋದಲ್ಲಿ ಸಂಜು
ವೆಡ್ಸ್ ಗೀತಾ ಡಬ್ಬಿಂಗ್ ಶುರು

ಕನ್ನಡ ಚಿತ್ರರಂಗಕ್ಕೆ ಅದ್ಭುತ ಪ್ರೇಮಕಥೆಗಳನ್ನು ಕೊಟ್ಟಂಥ ನಿರ್ದೇಶಕ ನಾಗಶೇಖರ್ ಅವರ ಸಾರಥ್ಯದಲ್ಲಿ ದಶಕದ ಹಿಂದೆ ಮೂಡಿಬಂದಿದ್ದ ಸಂಜು ವೆಡ್ಸ್ ಗೀತಾ ತನ್ನ ಕಥೆ ಹಾಡುಗಳಿಂದಲೇ ಜನಪ್ರಿಯವಾಗಿತ್ತು. ಈಗ ಅದೇ ಹೆಸರಿನಲ್ಲಿ ನಾಗಶೇಖರ್ ಮತ್ತೊಂದು ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಇಲ್ಲಿ ರಮ್ಯಾ ಬದಲು ರಚಿತಾರಾಮ್ ನಾಯಕಿಯಾಗಿದ್ದಾರೆ. ಸಧ್ಯ ಈ ಚಿತ್ರದ ೩ ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದ್ದು ಯುಗಾದಿಯ ಶುಭದಿನದಂದು ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತುಗಳ ಮರುಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್ ನಮ್ಮ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ. ಬೆಂಗಳೂರಿನಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಶೂಟ್ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ. ಶಿಡ್ಲಘಟ್ಟ ರೇಶ್ಮೆಗೆ ದೊಡ್ಡ ಮಾರ್ಕೆಟ್ ಇದೆ. ನಮ್ಮ ರೇಶ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ಆರ್ಟಿಫೀಷಿಯಲ್ ಲವ್ಸ್ಟೋರಿ ಮಾಡೋದಕ್ಕಿಂತ ನಮ್ಮ ಮಣ್ಣಿನ ಹೋರಾಟದ ಕಥೆ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ಹಾಡುಗಳೇ ಹೈಲೈಟ್. ಹಾಡು ಕೇಳಿದವರೆಲ್ಲ‌ ಮೆಚ್ಚಿಕೊಂಡಿದ್ದಾರೆ. ಚಿತ್ರ ಶುರುವಾದಾಗಲೇ ಆನಂದ್ ಆಡಿಯೋದವರು ರೈಟ್ಸ್ ತಗೊಂಡಿದ್ದಾರೆ. ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ ಮೇ ಎಂಡ್ ಫಸ್ಟ್ ಕಾಪಿ ಬರುತ್ತದೆ ಎಂದರು.
ನಂತರ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಚಿತ್ರದಲ್ಲಿ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡುತ್ತಿದ್ದೇವೆ. ಚಿತ್ರದಲ್ಲಿ ತುಂಬಾ ಮೆಲೋಡಿಯಸ್ ಹಾಡುಗಳಿವೆ. ಮತ್ತೊಂದು ಅದ್ಭುತ ಪ್ರೇಮಕಾವ್ಯ ಇದಾಗಲಿದೆ ಎಂದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ 40 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲೂ ಸಹ ತೊಂದರೆಯಾಗದೆ, ಸರಾಗವಾಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.
ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ ೫ ಸುಂದರ ಟ್ಯೂನ್ ಕಂಪೋಜ್ ಮಾಡಿದ್ದು ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ.

ನಾಡಿನ ಸಮಸ್ತ ಜನತೆಗೆ ಯುಗಾಗಿ ಹಬ್ಬದ ಶುಭಾಶಯಗಳುkannadamovie
09/04/2024

ನಾಡಿನ ಸಮಸ್ತ ಜನತೆಗೆ ಯುಗಾಗಿ ಹಬ್ಬದ ಶುಭಾಶಯಗಳು
kannadamovie

ನಾಡಿನ ಸಮಸ್ತ ಜನತೆಗೆ ಯುಗಾಗಿ ಹಬ್ಬದ ಶುಭಾಶಯಗಳು
09/04/2024

ನಾಡಿನ ಸಮಸ್ತ ಜನತೆಗೆ ಯುಗಾಗಿ ಹಬ್ಬದ ಶುಭಾಶಯಗಳು

ಯಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🙏🏻💐
09/04/2024

ಯಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🙏🏻💐

ಆತ್ಮೀಯ ಎಲ್ಲಾ ಸ್ನೇಹಿತರಿಗೂ ಯುಗಾದಿ ಹಬ್ಬದ ಶುಭಾಶಯಗಳು....💐😍
09/04/2024

ಆತ್ಮೀಯ ಎಲ್ಲಾ ಸ್ನೇಹಿತರಿಗೂ ಯುಗಾದಿ ಹಬ್ಬದ ಶುಭಾಶಯಗಳು....💐😍

"ದೇವರ ದಯೇ"ಯುಗಾದಿ ಹಬ್ಬದ ಶುಭಾಶಯಗಳು.ರಾಘು ನಿರ್ದೇಶನದ ಪ್ರಶಾಂತ್ ಅಭಿನಯದ ರವರ ಮುಂದಿನ ಕಿರು ಚಿತ್ರ " #ಅಪ್ಪು ದಮ್ ಬಿರಿಯಾನಿ"ಎಲ್ಲಾರು ಹರಸಿ...
09/04/2024

"ದೇವರ ದಯೇ"

ಯುಗಾದಿ ಹಬ್ಬದ ಶುಭಾಶಯಗಳು.

ರಾಘು ನಿರ್ದೇಶನದ ಪ್ರಶಾಂತ್ ಅಭಿನಯದ
ರವರ ಮುಂದಿನ ಕಿರು ಚಿತ್ರ " #ಅಪ್ಪು ದಮ್ ಬಿರಿಯಾನಿ"

ಎಲ್ಲಾರು ಹರಸಿ ಹಾರೈಸಿ ನಿಮ್ಮ ಬೆಂಬಲದೊಂದಿಗೆ.
ರಾಘು..

ಹೊಸ ವರ್ಷ ಯುಗಾದಿಯ ಶುಭಾಶಯಗಳು, ಪ್ರಕೃತಿಯಲ್ಲಿ ಬದಲಾವಣೆ ತರುವ ಈ ಹೊಸ ವರುಷದಲ್ಲಿ ಎಲ್ಲರ ಸಹಕಾರದಿಂದ ನನ್ನ ನಿರ್ದೇಶನದ ಎರಡನೆಯ ಸಿನಿಮಾ ಕೋಚ್ ...
09/04/2024

ಹೊಸ ವರ್ಷ ಯುಗಾದಿಯ ಶುಭಾಶಯಗಳು, ಪ್ರಕೃತಿಯಲ್ಲಿ ಬದಲಾವಣೆ ತರುವ ಈ ಹೊಸ ವರುಷದಲ್ಲಿ ಎಲ್ಲರ ಸಹಕಾರದಿಂದ ನನ್ನ ನಿರ್ದೇಶನದ ಎರಡನೆಯ ಸಿನಿಮಾ ಕೋಚ್ ಅನಾವರಣಗೊಳಿಸಲು ಹರುಷ ದುಪ್ಪಟ್ಟಿದೆ. ನಿಮ್ಮ ಬೆಂಬಲ ಆಶೀರ್ವಾದ ಸದಾ ನಮ್ಮ ತಂಡದ ಮೇಲಿರಲಿ. ನಿರೀಕ್ಷೆ ಜವಾಬ್ದಾರಿಯ ಅರಿವಿನೊಂದಿಗೆ ಸಾಗಲು ನಿಮ್ಮ ಸಹಕಾರ ಕೂಡ ಅತ್ಯಗತ್ಯ
Poojaguru Raj Mohan Prasad Guru Bandi

ಏಳಿಗೆ ತರಲಿ ಹೊಸ ಏಡು(ವರ್ಶ) 😍Happy Ugadi. #ಅಮರಪ್ರೇಮಿಅರುಣ್   ‌ Dharmanna Kadur Harisharvaa Mattad ಪ್ರವೀಣ್ ಕುಮಾರ್ ಜಿ - Pravee...
09/04/2024

ಏಳಿಗೆ ತರಲಿ ಹೊಸ ಏಡು(ವರ್ಶ) 😍
Happy Ugadi.

#ಅಮರಪ್ರೇಮಿಅರುಣ್


Dharmanna Kadur Harisharvaa Mattad ಪ್ರವೀಣ್ ಕುಮಾರ್ ಜಿ - Praveen Kumar G Kiran Ravindranath ಕೇಳು ಮನಸೇ - Kelu Manase B Manjamma Jogathi Yograj Cinemas - ಯೋಗರಾಜ್ ಸಿನಿಮಾಸ್ Ankitha Deepika Aradhya Roadside Village Archana Kottige Bala Rajwadi Mahesh B**g Raghavendrachitravani ಒಲವು ಬರಹ - Olavu Baraha

ತ್ರೀನೇಶ್ ಕುಂಬಾರ್ ಕೆವಿ‌ ನಿರ್ದೇಶನದ ಓಂ ಶ್ರೀ ದಿಗ್ವಿಜಯ ಸಿನಿಮಾ ತಂಡದ ವತಿಯಿಂದ ಯುಗಾದಿ ಹಬ್ಬದ ‌ಶುಭಾಶಯಗಳು
09/04/2024

ತ್ರೀನೇಶ್ ಕುಂಬಾರ್ ಕೆವಿ‌ ನಿರ್ದೇಶನದ ಓಂ ಶ್ರೀ ದಿಗ್ವಿಜಯ ಸಿನಿಮಾ ತಂಡದ ವತಿಯಿಂದ ಯುಗಾದಿ ಹಬ್ಬದ ‌ಶುಭಾಶಯಗಳು

ಯುಗಾದಿ ಪ್ರಕೃತಿ ಹಬ್ಬದ ಶುಭಾಶಯಗಳುತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ! ನಮ್ಮೆದೆಯಲ್ಲಿದೆ ಸುಖನಿಧಿ ಎಂದು ಹೊಸ ಹೂಣಿಕ...
09/04/2024

ಯುಗಾದಿ ಪ್ರಕೃತಿ ಹಬ್ಬದ ಶುಭಾಶಯಗಳು

ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ! ನಮ್ಮೆದೆಯಲ್ಲಿದೆ ಸುಖನಿಧಿ ಎಂದು ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು! ಆಲಿಸು! ಜೇನಿನ ಹಬ್ಬದ ಹಾಡು! ಜೀವನವೆಂಬುದು ಹೂವಿನ ಬೀಡು; ಕವಿಯದೆ ಹೆಚ್ಚೇನಿನ ಗೂಡು!

~ ಕುವೆಂಪು
#ಅಡವಿ_ಅಂತಾರಾಷ್ಟ್ರೀಯ_ಪ್ರಶಸ್ತಿ #ಅಡವಿ_ಚಿತ್ರತಂಡ #ಅಡವಿ

ಗುಳ್ಟು ನಿರ್ದೇಶಕರ ಹೊಸ ಚಿತ್ರ “ಪೌಡರ್” ತಂಡದಿಂದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
09/04/2024

ಗುಳ್ಟು ನಿರ್ದೇಶಕರ ಹೊಸ ಚಿತ್ರ “ಪೌಡರ್” ತಂಡದಿಂದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಕೋಟಿ ಹೆಸರು-ಹಣ-ಸಂಖ್ಯೆಅವರವರ ಭಾವಕ್ಕೆ ಯುಗಾದಿಗೆ ಕೋಟಿ ಶುಭಾಶಯಗಳುಟೀಸರ್ ಬಿಡುಗಡೆ: ೧೩ ಏಪ್ರಿಲ್‌, ಸಂಜೆ ೫ ಗಂಟೆ    #ಕೋಟಿ
09/04/2024

ಕೋಟಿ

ಹೆಸರು-ಹಣ-ಸಂಖ್ಯೆ
ಅವರವರ ಭಾವಕ್ಕೆ

ಯುಗಾದಿಗೆ ಕೋಟಿ ಶುಭಾಶಯಗಳು
ಟೀಸರ್ ಬಿಡುಗಡೆ: ೧೩ ಏಪ್ರಿಲ್‌, ಸಂಜೆ ೫ ಗಂಟೆ

#ಕೋಟಿ

"ಕೃಷ್ಣಂ ಪ್ರಣಯ ಸಖಿ" ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು✨ ಕನ್ನಡ ಬಳಸಿ - ಕನ್ನಡ ಬೆಳಸಿ                                       ...
09/04/2024

"ಕೃಷ್ಣಂ ಪ್ರಣಯ ಸಖಿ" ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು✨
ಕನ್ನಡ ಬಳಸಿ - ಕನ್ನಡ ಬೆಳಸಿ

ನಾಡಿನ ಸಮಸ್ತ ಜನತೆ ಗೆ ಯುಗಾದಿ ಹಬ್ಬದ ಶುಭಾಶಯಗಳು. 💐        Keerthana Movie Makers Sunanda Kalaburgi
09/04/2024

ನಾಡಿನ ಸಮಸ್ತ ಜನತೆ ಗೆ ಯುಗಾದಿ ಹಬ್ಬದ ಶುಭಾಶಯಗಳು. 💐
Keerthana Movie Makers Sunanda Kalaburgi

ಕರಾಳ ‘ಕರಾವಳಿ’ಯಲ್ಲಿ ಯುಗಾದಿಯ ಸಂಭ್ರಮ🔥Dynamic Prince Prajwal Devaraj in a Never Seen Avatar !
09/04/2024

ಕರಾಳ ‘ಕರಾವಳಿ’ಯಲ್ಲಿ ಯುಗಾದಿಯ ಸಂಭ್ರಮ🔥

Dynamic Prince Prajwal Devaraj in a Never Seen Avatar !

ತಮಗೂ ಮತ್ತು ತಮ್ಮ ಕುಟುಂಬದವರಿಗೂ. #ಸಿಂಹರೂಪಿಣಿ ಚಿತ್ರ ತಂಡದಿಂದ  #ಯುಗಾದಿ  #ಹಬ್ಬದ  #ಶುಭಾಶಯಗಳು.💐💐🙏
09/04/2024

ತಮಗೂ ಮತ್ತು ತಮ್ಮ ಕುಟುಂಬದವರಿಗೂ.
#ಸಿಂಹರೂಪಿಣಿ ಚಿತ್ರ ತಂಡದಿಂದ
#ಯುಗಾದಿ #ಹಬ್ಬದ #ಶುಭಾಶಯಗಳು.
💐💐🙏

ಎಲ್ಲ ಸ್ನೇಹಿತರಿಗೂ ಯುಗಾದಿ ಹಬ್ಬದ ಶುಭಾಶಯಗಳು
09/04/2024

ಎಲ್ಲ ಸ್ನೇಹಿತರಿಗೂ ಯುಗಾದಿ ಹಬ್ಬದ ಶುಭಾಶಯಗಳು

*'ವೆಟ್ಟೈಯಾನ್' ಆಟಕ್ಕೆ ಮುಹೂರ್ತ ಫಿಕ್ಸ್..ಅಕ್ಟೋಬರ್ ನಲ್ಲಿ ಬಿಡುಗಡೆಯಾಗ್ತಿದೆ‌ ರಜನಿ ಸಿನಿಮಾ**ಬಾಕ್ಸಾಫೀಸ್ ಬೇಟೆಗೆ ತಲೈವಾ ರೆಡಿ...ಅಕ್ಟೋಬರ...
08/04/2024

*'ವೆಟ್ಟೈಯಾನ್' ಆಟಕ್ಕೆ ಮುಹೂರ್ತ ಫಿಕ್ಸ್..ಅಕ್ಟೋಬರ್ ನಲ್ಲಿ ಬಿಡುಗಡೆಯಾಗ್ತಿದೆ‌ ರಜನಿ ಸಿನಿಮಾ*

*ಬಾಕ್ಸಾಫೀಸ್ ಬೇಟೆಗೆ ತಲೈವಾ ರೆಡಿ...ಅಕ್ಟೋಬರ್‌ ನಲ್ಲಿ ರಜನಿಯ 'ವೆಟ್ಟೈಯಾನ್' ಎಂಟ್ರಿ*

*ಬೆಳ್ಳಿತೆರೆಗೆ ಬರಲು ರೆಡಿ ಜೈ ಭೀಮ್ ಡೈರೆಕ್ಟರ್ ಹೊಸ ಸಿನಿಮಾ..ಅಕ್ಟೋಬರ್ ತಿಂಗಳಲ್ಲಿ ರಜನಿಯ ವೆಟ್ಟೈಯಾನ್ ಅನಾವರಣ*

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 170ನೇ ಸಿನಿಮಾ ವೆಟ್ಟೈಯಾನ್. ಟೈಟಲ್ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವೆಟ್ಟೈಯಾನ್ ಸಿನಿಮಾ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

ಸೂರ್ಯ ನಟಿಸಿದ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಎಸ್. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ.

ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

'ವೆಟ್ಟೈಯಾನ್' ಚಿತ್ರದಲ್ಲಿ ರಜನಿಕಾಂತ್ ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಲಿದ್ದಾರೆ. ಹೀಗಾಗಿಯೇ ಇದು ಬಹು ತಾರಾಗಣದ ಚಿತ್ರವಾಗಲಿದೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ.


ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯಾನ್ ಸಿನಿಮಾ ನಿರ್ಮಿಸುತ್ತಿದೆ.

*ಶಬರಿಯಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದ್ದಾರೆ ವರಲಕ್ಷ್ಮೀ ಶರತ್‌ಕುಮಾರ್‌**ಪಂಚ ಭಾಷೆಗಳಲ್ಲಿ ಮೇ. 3ರಂದು ತೆರೆಗೆ ಬರಲಿದೆ ನಾಯಕ...
08/04/2024

*ಶಬರಿಯಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದ್ದಾರೆ ವರಲಕ್ಷ್ಮೀ ಶರತ್‌ಕುಮಾರ್‌*

*ಪಂಚ ಭಾಷೆಗಳಲ್ಲಿ ಮೇ. 3ರಂದು ತೆರೆಗೆ ಬರಲಿದೆ ನಾಯಕಿ ಪ್ರಧಾನ ಸಿನಿಮಾ*

ಕಥೆ ಆಯ್ಕೆ ವಿಚಾರದಲ್ಲಿ ವಿಭಿನ್ನ ಪ್ರಯತ್ನಗಳತ್ತ ಹೊರಳುವ ನಟಿಯರಲ್ಲಿ ವರಲಕ್ಷ್ಮೀ ಶರತ್‌ಕುಮಾರ್‌ ಸಹ ಒಬ್ಬರು. ಈಗ ಇದೇ ನಟಿ "ಶಬರಿ" ಹೆಸರಿನ ಸಿನಿಮಾ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ನಾಯಕಿ ಪ್ರಧಾನ ಈ ಸಿನಿಮಾ ಒಂದೇ ಭಾಷೆಗೆ ಸೀಮಿತವಾಗಿರದೇ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಮೇ 3ರಂದು ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಮಹಾ ಮೂವೀಸ್‌ ಬ್ಯಾನರ್‌ನಲ್ಲಿ ಮಹೇಂದ್ರ ನಾಥ್‌ ಕೊಂಡ್ಲಾ ಶಬರಿ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಮಹರ್ಷಿ ಕೊಂಡ್ಲಾ ಈ ಸಿನಿಮಾ ಪ್ರಸೆಂಟ್‌ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರವನ್ನು ಅನಿಲ್‌ ಕಾಟ್ಜ್ ನಿರ್ದೇಶನ ಮಾಡಿದ್ದಾರೆ. ವಿಶೇಷ ಏನೆಂದರೆ, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ.

ಈ ಸಿನಿಮಾ ಬಗ್ಗೆ ನಿರ್ಮಾಪಕ ಮಹೇಂದ್ರನಾಥ್‌ ಕೊಂಡ್ಲಾ ಹೇಳುವುದೇನೆಂದರೆ, "ಶಬರಿ ಸಿನಿಮಾದ ಕಥೆ ಮತ್ತು ಸ್ಕ್ರೀನ್‌ ಪ್ಲೇ ತುಂಬ ವಿಶೇಷವಾಗಿದೆ. ಭಾವುಕ ಎಳೆಯ ಜತೆಗೆ ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್‌ ಶೈಲಿಯೂ ಈ ಸಿನಿಮಾದಲ್ಲಿರಲಿದೆ. ವರಲಕ್ಷ್ಮೀ ಅವರ ಈ ವರೆಗಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ತುಂಬ ವಿಭಿನ್ನ. ಈ ಸಿನಿಮಾದಲ್ಲಿನ ಅವರ ನಟನೆಯೂ ಅಷ್ಟೇ ರೋಚಕವಾಗಿಯೇ ಮೂಡಿಬಂದಿದೆ" ಎನ್ನುತ್ತಾರೆ.

ಮುಂದುವರಿದು ಮಾತನಾಡುವ ಅವರು, "ಈಗಾಗಲೇ ತೆಲುಗು ಮತ್ತು ತಮಿಳಿನ ಮೊದಲ ಕಾಪಿಯನ್ನು ನೋಡಿರುವುದರಿಂದ, ಎಲ್ಲರಿಗೂ ಇಷ್ಟವಾಗಲಿದೆ ಎಂದು ನಂಬಿದ್ದೇನೆ. ಈ ನಡುವೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್‌ ಕೆಲಸಗಳು ನಡೆಯುತ್ತಿದ್ದು, ಮೇ 3ರಂದು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್‌ ಮಾಡಲಿದ್ದೇವೆ" ಎಂದಿದ್ದಾರೆ.

*ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ?*
ವರಲಕ್ಷ್ಮೀ ಶರತ್‌ ಕುಮಾರ್‌, ಗಣೇಶ್‌ ವೆಂಕಟರಮಣನ್‌, ಶಶಾಂಕ್‌, ಮೈಮ್‌ ಗೋಪಿ, ಸುನಯನಾ, ರಾಜಶ್ರೀ ನಾಯರ್‌, ಮಧುನಂದನ್‌, ರಶಿಕಾ ಬಾಲಿ (ಬಾಂಬೆ), ವಿವಾ ರಾಘವ್‌, ಪ್ರಭು, ಭದ್ರಮ್‌, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು. ಅರ್ಚನ್‌ ಅನಂತ್‌, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ತಾರಾಗಣದಲ್ಲಿದ್ದಾರೆ.

*ತಾಂತ್ರಿಕ ವರ್ಗದಲ್ಲಿರುವವರು..*
ಕೋ ರೈಟರ್: ಸನ್ನಿ ನಾಗಬಾಬು, ಹಾಡುಗಳು: ರೆಹಮಾನ್, ಮಿತ್ತಪಲ್ಲಿ ಸುರೇಂದರ್, ಮೇಕಪ್: ಚಿತ್ತೂರು ಶ್ರೀನು, ಕಾಸ್ಟೂಮ್ಸ್‌: ಅಯ್ಯಪ್ಪ, ಕಾಸ್ಟೂಮ್ಸ್‌ ಡಿಸೈನರ್‌: ಮಾನಸ, ಸ್ಟಿಲ್ಸ್: ಈಶ್ವರ್, ಕಾರ್ಯನಿರ್ವಾಹಕ ನಿರ್ಮಾಪಕ: ಲಕ್ಷ್ಮೀಪತಿ ಕಾಂತಿಪುಡಿ, ಸಹ ನಿರ್ದೇಶಕ: ವಂಶಿ, ಸಾಹಸ: ನಂದು - ನೂರ್, ನೃತ್ಯ ನಿರ್ದೇಶಕರು: ಸುಚಿತ್ರಾ ಚಂದ್ರ ಬೋಸ್ - ರಾಜ್ ಕೃಷ್ಣ, ಕಲಾ ನಿರ್ದೇಶನ: ಆಶಿಶ್ ತೇಜ ಪೂಲಾಲ, ಸಂಕಲನ: ಧರ್ಮೇಂದ್ರ ಕಾಕರಾಳ, ಛಾಯಾಗ್ರಹಣ: ರಾಹುಲ್ ಶ್ರೀವತ್ಸ, ನಾನಿ ಚಾಮಿಡಿ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ: ಸೀತಾರಾಮರಾಜು ಮಲ್ಲೇಲ, ಸಂಗೀತ: ಗೋಪಿ ಸುಂದರ್, ಕಂಪೋಸರ್‌: ಮಹರ್ಷಿ ಕೊಂಡ್ಲ, ನಿರ್ಮಾಪಕ: ಮಹೇಂದ್ರ ನಾಥ್ ಕೊಂಡ್ಲಾ, ಕಥೆ - ಸಂಭಾಷಣೆ- ಸ್ಕ್ರೀನ್ ಪ್ಲೇ - ನಿರ್ದೇಶನ: ಅನಿಲ್ ಕಾಟ್ಜ್.

*ಏಪ್ರಿಲ್ 19ರಂದು ಬಿಡುಗಡೆಯಾಗಲಿದೆ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ "O2" ಚಿತ್ರ* . *ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊ...
07/04/2024

*ಏಪ್ರಿಲ್ 19ರಂದು ಬಿಡುಗಡೆಯಾಗಲಿದೆ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ "O2" ಚಿತ್ರ* .

*ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಕಥೆ ಇದು* .

ಸದಾ ಹೊಸಬರ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುವ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "O2" ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದೇ ಏಪ್ರಿಲ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮಗೋಷ್ಠಿಯಲ್ಲಿ ನೀಡಿದರು.

"ಮಾಯಾಬಜಾರ್" ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜಕುಮಾರ್ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. "O2", ಪ್ರಮುಖವಾಗಿ ಮೆಡಿಕಲ್ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು "02" ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ನಾಯಕಿ ಶ್ರದ್ದಾ(ಆಶಿಕಾ ರಂಗನಾಥ್) ಮಾಡುತ್ತಾರೆ. "O2" ಡ್ರಗ್ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದರಿಸುತ್ತಾರೆ. ಇದಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹದು. ಅವಕಾಶ ನೀಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದರು ನಿರ್ದೇಶಕ ದ್ವಯರಾದ ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್. ರಾಘವ್ ನಾಯಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಕೂಡ.

ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ ಎಂದು ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಾನು ಹಾಗೂ ಅವರು ಇಬ್ಬರು ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆ. "O2" ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡು ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ಎರಡು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ಆರಂಭಿಸುತ್ತಿದ್ದೇವೆ‌. ಏಪ್ರಿಲ್ 19 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಮ್ಮ ಇಡೀ ಕುಟುಂಬದವರು ರಾಜಕುಮಾರ್ ಅವರ ಕುಟುಂಬದ ಅಪ್ಪಟ್ಟ ಅಭಿಮಾನಿಗಳು. ಅಂತಹುದರಲ್ಲಿ ನನಗೆ ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ನನ್ನದು ಈ ಚಿತ್ರದಲ್ಲಿ ಎನ್ ಆರ್ ಐ ವೈದ್ಯನ ಪಾತ್ರ ಎಂದು ನಾಯಕ ಪ್ರವೀಣ್ ತೇಜ್ ತಿಳಿಸಿದರು.

ಶ್ರದ್ದಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಆಶಿಕಾ ರಂಗನಾಥ್. ಸಂಗೀತ ನಿರ್ದೇಶಕ ವಿವಾನ್ ರಾಧಾಕೃಷ್ಣ ಹಾಗೂ ನಟ ಪುನೀತ್ ಬಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪುಟ್ಟಸ್ವಾಮಿ ಕೆ.ಬಿ ಹಾಗೂ ಸತೀಶ್ ವಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ "O2" ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಬಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

PRK Audio

ಪ್ರೇಕ್ಷಕರು ಅಪ್ಪಿಕೊಂಡ 'ಬ್ಲಿಂಕ್'ಗೆ 25 ದಿನದ ಸಂಭ್ರಮ..-ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಸಿನಿಮಾ ಮಾಡುವುದಕ್ಕಿಂತ ಜನರಿಗೆ ತಲುಪಿಸ...
07/04/2024

ಪ್ರೇಕ್ಷಕರು ಅಪ್ಪಿಕೊಂಡ 'ಬ್ಲಿಂಕ್'ಗೆ 25 ದಿನದ ಸಂಭ್ರಮ..

-

ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಸಿನಿಮಾ ಮಾಡುವುದಕ್ಕಿಂತ ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಯಾಕಂದರೆ ಜನ ಥಿಯೇಟರ್ ನತ್ತ ಸುಳಿಯುತ್ತಿಲ್ಲ. ಈ ನಗ್ನಸತ್ಯದ ನಡುವೆಯೇ ಕನ್ನಡ ಚಿತ್ರವೊಂದು 25 ದಿನ ಪೂರೈಸಿದೆ. ಆ ಕೀರ್ತಿಗೆ ಭಜನವಾಗಿರುವುದು ಬ್ಲಿಂಕ್ ಸಿನಿಮಾ.

ಸ್ಟಾರ್ ಹೀರೋ ಸಿನಿಮಾಗಳ ಅಬ್ಬರದ ನಡುವೆಯೇ ಮಾರ್ಚ್ 8ರಂದು ತೆರೆಗೆ ಬಂದ ಬ್ಲಿಂಕ್ ಸಿನಿಮಾಗೀಗ 25ರ ಸಂಭ್ರಮ. ಈ ಕ್ಷಣಗಳನ್ನು ಮಾಧ್ಯಮದರೊಟ್ಟಿಗೆ ಚಿತ್ರತಂಡ ಹಂಚಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡ ಬ್ಲಿಂಕ್ ಪಯಣದ ಬಗ್ಗೆ ಅನುಭವ ಹಂಚಿಕೊಂಡಿದೆ.

ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್. ಮುಖ್ಯವಾಗಿ ಕೋರ್ ಟೀಂ ಥಿಯೇಟರ್ ಹಿನ್ನೆಲೆಯಿಂದ ಬಂದಿರುವಂತಹದ್ದು. ಸಿನಿಮಾ ಮಾಡುವಾಗ ಸಾಕಷ್ಟು ಸಂದೇಹ ಇತ್ತು. ಜನ ಈ ರೀತಿ ವಿಷಯವನ್ನು ರಿಸೀವ್ ಮಾಡ್ತಾರಾ ಎಂದು‌‌. ನಾವು ಸಿನಿಮಾ ಮುಗಿಸಿಕೊಂಡುವ ಎಲ್ಲೇ ಹೋದರು, ಡಿಸ್ಟ್ರಿಬ್ಯೂಷನ್ ಕಂಪನಿಗೆ ಹೋದರೂ ಪ್ರೆಸೆಂಟ್ ಮಾಡುತ್ತೀರಾ ಎಂದು ಕೇಳಿದಾಗ ಹಿಂದೇಟು ಹಾಕಿದರು. ಆಗುತ್ತಾ ಇದು ಎಂದು.‌ ಆದರೆ ಸಿನಿಮಾ 25 ದಿನ ಪೂರೈಸಿದೆ. ಈ ಚಿತ್ರವನ್ನು ಅಪ್ಪಿ ಒಪ್ಪಿದ್ದಾರೆ. ಹೀಗಾಗಿ ಈ ರೀತಿ ಹೊಸ ಸಿನಿಮಾಗಳು ಬರುವುದು ಮುಖ್ಯ. 25 ದಿನ ಬ್ಲಿಂಕ್ ಕಂಪ್ಲೀಟ್ ಆಗಿರುವುದು ಖುಷಿ ಇದೆ. ಆದರೆ 25 ದಿನ ಅಷ್ಟೇ ಓಡುವಂತಹ ಸಿನಿಮಾವಲ್ಲ. ಬ್ಲಿಂಕ್ ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರುವ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕು ಎಂದರೆ ಇದು ಮಾದರಿಯಾಗುತ್ತದೆ ಎಂದರು.

ನಟಿ ಚೈತ್ರಾ ಆಚಾರ್ ಮಾತನಾಡಿ, ಬ್ಲಿಂಕ್ ನನ್ನ ಪಾಲಿಗೆ ಲಕ್ಕಿ ಸಿನಿಮಾ. ಈ ಚಿತ್ರದ ಶೂಟ್ ಮಾಡುವಾಗಲೇ ಸಪ್ತ ಸಾಗರದಾಚೆ ಎಲ್ಲೋ ತಂಡದಿಂದ ಕಾಲ್ ಬಂದಿದ್ದು. ಹೀಗಾಗಿ ಈ ಚಿತ್ರ ತುಂಬಾ ಲಕ್ಕಿ ನನಗೆ. ಈ ಕಥೆ ಹೇಳಲು ಬಂದಾಗ ಶ್ರೀನಿಧಿ ಬೆಂಗಳೂರು ಎಷ್ಟು ಕ್ಲಾರಿಟಿಯಾಗಿ ಕಥೆ ಹೇಳಿದರು. ಅವರು ಮಾಡಿದ ಒಂದು ಶಾರ್ಟ್ ಫಿಲ್ಮಂ ತೋರಿಸಿದರು. ಬಳಿಕ ನಾನು ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಈ ಚಿತ್ರ ಜನಕ್ಕೂ ತಲುಪಿದೆ. ನಿರ್ಮಾಪಕರು ಈ ಸಿನಿಮಾಗೆ ದುಡ್ಡು ಹಾಕಿ ಸುಮ್ಮನಾಗದೇ ಫೀಲ್ಡ್ ಗೆ ಇಳಿದು, ಅವರೇ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಥಿಯೇಟರ್ ನವರು ಕೊಡುವ ಶೋ ತೆಗೆದುಕೊಂಡು, ಆ ಶೋ ಹೌಸ್ ಫುಲ್ ಆದವು. ಇದು ಕಂಟೆಂಟ್ ಗೆದ್ದಿರುವ ಪವರ್ ಎನ್ನಬಹುದು ಎಂದರು.

ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ಚಲನಚಿತ್ರರಂಗಕ್ಕೆ ನಾನು ಹೊಸಬ. ಬೆರಗು ಕಣ್ಣಿನಿಂದ ನಾನು ಈ ಕಲಾ ಪ್ರಪಂಚವನ್ನು ನೋಡುತ್ತಿದ್ದೇನೆ. ಮೊಲದ ಚಿತ್ರವನ್ನು ನಾವು ಪ್ರಾರಂಭ ಮಾಡಿದಾಗ ನನಗೆ ಇಷ್ಟು ನಂಬಿಕೆ ಇರಲಿಲ್ಲ. ಈ ಚಿತ್ರ ಇಷ್ಟು ವಿಸ್ತಾರವಾಗಿ ಪ್ರೇಕ್ಷಕರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ. ಚಿತ್ರ 25 ದಿನ ಪೂರೈಸಿ 50 ದಿನತ್ತ ದಾಪುಗಾಲು ಇಡುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಪ್ರೇಕ್ಷಕರು ಹಾಗೂ ಮಾಧ್ಯಮಗಳು. ಹೊಸಬರ ಕನಸಿಗೆ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಧನ್ಯವಾದ ಎಂದು ಸಂತಸ ಹಂಚಿಕೊಂಡರು.

ರವಿಚಂದ್ರ ಎಜೆ, ಮೂಲತಃ ಗುಲ್ಬರ್ಗದವರು.‌‌ ಸಿನಿಮಾ ಶೂಟಿಂಗ್ ಗೂ‌ ಮೊದ್ಲೇ ಸಪರೇಟ್ ಆಗಿ ಟೀಸರ್ ಶೂಟ್ ಮಾಡಿದ್ದೇವು. ಟೀಸರ್ ಶೂಟ್ ಮಾಡುವ ಮೊದಲು ಮೇನ್ ಸ್ಟ್ರೀಮ್ ನಟ ನಟಿಯರು ನಮ್ಮ ಸಿನಿಮಾದಲ್ಲಿ ಕೆಲಸ ಮಾಡ್ತಾರಾ ಎಂದು ಚರ್ಚೆ ಮಾಡಿದೆವು. ಆದಾಗಲೇ ನಿಧಿ ದೀಕ್ಷಿತ್ ಸರ್ ಗೆ ಕಥೆ ಹೇಳಿದ್ದರು. ಸರ್ ಗೆ ಕಥೆ ಇಷ್ಟವಾಯ್ತು. ಹೀಗೆ ಜರ್ನಿ ಶುರುವಾಯ್ತು. ಆ ಜರ್ನಿಗೆ ಇಲ್ಲಿಗೆ ಬಂದು ತಲುಪಿದೆ. ಖುಷಿ ಇದೆ. 25 ದಿನ ಸಿನಿಮಾ ಪೂರೈಸಿರುವುದು. ಬ್ಲಿಂಕ್ ಸಿನಿಮಾ ಕೈ ಹಿಡಿದ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದ ಎಂದರು.

‘’ಬ್ಲಿಂಕ್’ ಸಿನಿಮಾಕ್ಕೆ ಚಿತ್ರರಂಗದ ಕೆಲವು ಪ್ರಮುಖ ನಟ, ನಟಿಯರು ಸಹ ಬೆಂಬಲ ವ್ಯಕ್ತಪಡಿಸಿದರು. ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ, ಸಿನಿಮಾದ ಬಗ್ಗೆ ಕೇಳಿ ಬಂದ ಉತ್ತಮ ವಿಮರ್ಶೆಗಳನ್ನು ಗಮನಿಸಿ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಬ್ಲಿಂಕ್’ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಸಿಂಪಲ್ ಸುನಿ, ನವೀನ್ ಶಂಕರ್, ರುಕ್ಮಿಣಿ ವಸಂತ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ‘ಬ್ಲಿಂಕ್’ ಗೆ ಬಹುಪರಾಕ್ ಎಂದಿದ್ದರು.

ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ‘ದಿಯಾ’ ಖ್ಯಾತಿಕ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಭಿನ್ನವಾದ ಕತೆ ಹೊಂದಿದೆ. ಟೈಮ್ ಲೂಪ್, ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಹೊಂದಿರುವ ಸಿನಿಮಾ ಇದಾಗಿದೆ. ಬ್ಲಿಂಕ್ ಸಿನಿಮಾ ವಿದೇಶದಲ್ಲಿಯೂ ತೆರೆಕಂಡಿದೆ. ಆಸ್ಟ್ರೇಲಿಯಾ, ಯುಎಸ್ ಎ, ಯುಕೆ ಐರ್ಲ್ಯಾಂಡ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆನಡಾ, ಜರ್ಮನಿ ಹಾಗೂ ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿದ್ದು, ಇದೀಗ 25 ದಿನ ಪೂರೈಸಿ 50 ದಿನದತ್ತ ಹೆಜ್ಜೆ ಇಟ್ಟಿದೆ.

ಜಯಪ್ರದಜಯಪ್ರದ ಅವರು ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿ ಯಶಸ್ಸು ಗಳಿಸಿ ಪ್ರಸಿದ್ಧರಾಗಿರುವ ಸೌಂದರ್ಯವತಿ.ಜಯಪ್ರದ 1957ರ...
04/04/2024

ಜಯಪ್ರದ

ಜಯಪ್ರದ ಅವರು ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿ ಯಶಸ್ಸು ಗಳಿಸಿ ಪ್ರಸಿದ್ಧರಾಗಿರುವ ಸೌಂದರ್ಯವತಿ.

ಜಯಪ್ರದ 1957ರ ಏಪ್ರಿಲ್ 3ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು. ಅಂದಿನ ಅವರ ಹೆಸರು ಲಲಿತಾ ರಾಣಿ.

ಶಾಲೆಯಲ್ಲಿ ಓದುತ್ತಿರುವ ದಿನಗಳಲ್ಲಿ ಸಿನಿಮಾಮಂದಿಯ ಕಣ್ಣಿಗೆ ಬಿದ್ದ ಹುಡುಗಿ ಹತ್ತು ರೂಪಾಯಿ ಸಂಭಾವನೆ ಸ್ವೀಕರಿಸಿ ‘ಭೂಮಿಕೋಸಂ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದಳು. ಮುಂದೆ ಈ ನಟನೆ ಆಕೆಗೆ ಅತ್ಯಂತ ಮೌಲ್ಯಯುತ ಪಾತ್ರಗಳು ಮತ್ತು ಶ್ರೀಮಂತಿಕೆಯನ್ನು ಪ್ರಸಾದಿಸಿದವು. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ನಟಿಸಿದ ಈಕೆ ನಟನೆಗಾಗಿನ ಪ್ರಶಂಸೆ ಮತ್ತು ಜನಪ್ರಿಯತೆಗಳನ್ನು ಹೋದೆಡೆಗಳಲ್ಲೆಲ್ಲಾ ಗಳಿಸಿದರು.

ಉತ್ತಮ ಸಂಗೀತ ನೃತ್ಯ ಮೌಲ್ಯಗಳನ್ನು ಚಲನಚಿತ್ರದಲ್ಲಿ ಬಿಂಬಿಸಿದ ಕೆ. ವಿಶ್ವನಾಥ್ ಅವರ ಪ್ರಸಿದ್ಧ ಚಿತ್ರಗಳಾದ ತೆಲುಗಿನ ‘ಸಿರಿ ಸಿರಿ ಮುವ್ವ’ , ಇದೇ ಚಿತ್ರದ ಹಿಂದಿಯ ಅವತರಿಣಿಕೆ ‘ಸರ್ಗಂ’, ‘ಸಾಗರ ಸಂಗಮಂ’, ‘ಸೀತಾ ಕಲ್ಯಾಣಂ’; ಕೆ. ಬಾಲಚಂದರ್ ಅವರ ‘ಅಂತುಲೆನಿ ಕಥಾ’, ‘ನಿನೈತ್ತಾಲೆ ಇನಿಕ್ಕುಂ’ ಮುಂತಾದ ಪಸಿದ್ಧ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರಿಗೆ ಮುಂದೆ ಅವಕಾಶಗಳು ಎಲ್ಲಾ ಭಾಷೆಗಳಲ್ಲೂ ಹರಿದು ಬರಲಾರಂಭಿಸಿದವು. ಹಿಂದಿಯಲ್ಲಿ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಪ್ರಕಾಶ್ ಮೆಹ್ರಾ ಅವರ ‘ಶರಾಬಿ’ ಚಿತ್ರ ಪ್ರಖ್ಯಾತವಾದುದು. ಅಮಿತಾಬ್ ಬಚ್ಚನ್, ಜಿತೇಂದ್ರ ಅವರ ಜೊತೆಯಲ್ಲಿ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿರುವಂತೆಯೇ ಆ ಕಾಲದ ತಮ್ಮ ಸಮಕಾಲೀನ ಪ್ರಸಿದ್ಧ ನಟಿ ಶ್ರೀದೇವಿ ಅವರೊಂದಿಗೆ ಸಹಾ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದರು.

ಭಾರತದ ಚಿತ್ರರಂಗದ ಪ್ರಖ್ಯಾತರಾದ ಸತ್ಯಜಿತ್ ರೇ ಅವರಿಂದ ಅತ್ಯಂತ ಸುಂದರಿ ಎಂದು ಹೊಗಳಿಸಿಕೊಂಡ ಜಯಪ್ರದಾ ಕೆಲವೊಂದು ಬಂಗಾಳಿ ಚಿತ್ರಗಳಲ್ಲಿ ನಟಿಸಿದರಾದರೂ, ಸತ್ಯಜಿತ್ ರೇ ಅವರ ಚಿತ್ರಗಳಲ್ಲಿ ನಟಿಸಬೇಕೆಂದಿದ್ದ ಅವರ ಕನಸು ನನಸಾಗಲಿಲ್ಲ. ಮಲಯಾಳಂ, ಮರಾಠಿ ಚಿತ್ರಗಳಲ್ಲಿ ಕೂಡಾ ಅವರು ನಟಿಸಿದ್ದಾರೆ.

ಜಯಪ್ರದಾ ಅವರು ತಮ್ಮ ಜನಪ್ರಿಯ ದಿನಗಳಲ್ಲಿ ಕನ್ನಡದ ಪ್ರಸಿದ್ಧ ಚಿತ್ರಗಳಾದ ‘ಸನಾದಿ ಅಪ್ಪಣ್ಣ’, ‘ಕವಿರತ್ನ ಕಾಳಿದಾಸ’, ‘ಹುಲಿಯ ಹಾಲಿನ ಮೇವು’, ‘ಹಬ್ಬ’, ‘ಈ ಬಂಧನ’ ಅಲ್ಲದೆ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು ಅಭಿನಯಿಸಿದ ‘ಕರೆದರೂ ಕೇಳದೆ’, ‘ರಾಗ ಅನುರಾಗ’, ‘ಸದಾ ಕಣ್ಣಲಿ’, ‘ಓ ಪ್ರಿಯತಮಾ ಕರುಣೆಯಾ ತೋರೆಯಾ’, ‘ಜೇನಿನ ಗೂಡು ನಾವೆಲ್ಲಾ’, ‘ಅಯ್ಯೊ ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲ’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯವೆನಿಸಿವೆ. ಕೇವಲ ನಾಟ್ಯ ಪಾತ್ರಗಳಲ್ಲಿ ಮಾತ್ರವಲ್ಲದೆ ಭಾವುಕತೆ ತುಂಬಿದ ಪಾತ್ರಗಳಲ್ಲಿ ಕೂಡಾ ಅವರ ಅಭಿನಯ ಮನಸೆಳೆಯುವಂತಿತ್ತು. ಅವರ ಅಭಿನಯಕ್ಕೆ ಶೋಭೆಯಿಟ್ಟಂತೆ ಇದ್ದುದು ಅವರ ಸೌಂದರ್ಯ.

ಜಯಪ್ರದ ಅವರ ರಾಜಕೀಯ ಜಿಗಿತ ಕೂಡಾ ಸಾಕಷ್ಟು ಸುದ್ದಿಯದ್ದು. ಎನ್ ಟಿ ರಾಮರಾವ್ ತೆಲುಗು ದೇಶಂ, ಚಂದ್ರ ಬಾಬು ನಾಯ್ಡು ದೇಶಂ, ಸಮಾಜವಾದಿ ಪಕ್ಷ, ಅಜಿತ್ ಸಿಂಗ್ ಪಕ್ಷ , ಭಾರತೀಯ ಜನತಾಪಕ್ಷ ಹೀಗೆ ಅವರು ರಾಜಕೀಯ ಜೀವನ ಸಾಗಿಸಿದ್ದಾರೆ.

ಜಯಪ್ರದಾ ಒಬ್ಬ ಸೌಂದರ್ಯಯುತ ಕಲಾವಿದೆಯಾಗಿ ಸಿನಿಮಾರಸಿಕರ ಮನಗೆದ್ದಿರುವುದಂತೂ ಖಂಡಿತ ನಿಜ.

(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)

*ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ "ಅವತಾರ ಪುರುಷ 2".*  *ಬಹು ನಿರೀಕ್ಷಿತ ಈ ಚಿತ್ರ ಏಪ್ರಿಲ್ 5 ರಂದು ತೆರೆಗೆ* ..ಪುಷ್ಕರ್ ಮಲ್ಲಿಕಾರ್ಜುನಯ್ಯ...
03/04/2024

*ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ "ಅವತಾರ ಪುರುಷ 2".*

*ಬಹು ನಿರೀಕ್ಷಿತ ಈ ಚಿತ್ರ ಏಪ್ರಿಲ್ 5 ರಂದು ತೆರೆಗೆ* ..

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ "ಅವತಾರ ಪುರುಷ 2" ಚಿತ್ರದ ಟ್ರೇಲರ್ ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ನಟರಾದ "ನೆನಪಿರಲಿ" ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

"ಅವತಾರ ಪುರುಷ" ಮೊದಲ ಭಾಗವನ್ನು ಚಿತ್ರಮಂದಿರ, ಓಟಿಟಿ ಹಾಗೂ ಖಾಸಗಿ ವಾಹಿನಿಯಲ್ಲಿ ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಅದೇ ರೀತಿ ಈ ಚಿತ್ರದ ಎರಡನೇ ಭಾಗವನ್ನು ನೋಡಿ ಯಶಸ್ವಿಗೊಳಿಸಿ. ಮೊದಲ ಭಾಗವನ್ನು ನೋಡಿದವರಿಗೆ ಹಾಗೂ ನೋಡದವರಿಗೆ ಇಬ್ಬರಿಗೂ ಭಾಗ 2 ಅರ್ಥವಾಗುತ್ತದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಸಿಂಪಲ್ ಸುನಿ.

ಕನ್ನಡ ಚಿತ್ರಗಳಲ್ಲಿ ಗುಣಮಟ್ಟ ಕಡಿಮೆ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಚಿತ್ರದ ಟ್ರೇಲರ್ ನೋಡಿದರೆ, ಚಿತ್ರ ಹೇಗೆ ಬಂದಿರಬಹುದು ಎಂದು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ‌. ಏಪ್ರಿಲ್ 5 ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಪಷ್ಕರ್ ಹಾಗೂ ನಿರ್ದೇಶಕ ಸುನಿ ಅವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸುನಿ ಅವರು ಚಿತ್ರದ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಜಾನರ್ ನ ಕಥೆ ಅಂದುಕೊಂಡಿದ್ದೆ. ಆದರೆ ಅವರು ಇದೊಂದು ವಿಭಿನ್ನ ಕಥೆ. ಈ ಕಥೆಯಲ್ಲಿ ಕಾಮಿಡಿ ಕೂಡ ಇರುತ್ತದೆ ಎಂದರು. ನನಗೂ ಬೇರೆಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಹಾಗಾಗಿ ಈ ಚಿತ್ರದ ಪಾತ್ರ ಇಷ್ಟವಾಯಿತು. ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎನ್ನುತ್ತಾರೆ ನಟ ಶರಣ್.

ನಾನು ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದಾಗ "ಅವತಾರ ಪುರುಷ 2" ಚಿತ್ರ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಜನರಿಗೆ ಈ ಚಿತ್ರದ ಬಗ್ಗೆ ಅಷ್ಟು ಕುತೂಹಲವಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದು ನಟಿ ಆಶಿಕಾ ರಂಗನಾಥ್ ತಿಳಿಸಿದರು. ವಿತರಕ ಮೋಹನ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬುಲೆಟ್ ಪ್ರಕಾಶ್ ದಿವಂಗತ ಬುಲೆಟ್ ಪ್ರಕಾಶ್ ಕನ್ನಡದ ಉತ್ತಮ ಹಾಸ್ಯಪಾತ್ರಧಾರಿಗಳಲ್ಲಿ ಒಬ್ಬರೆನಿಸಿದ್ದವರು.ಬುಲೆಟ್ ಪ್ರಕಾಶ್ 1976ರ ಏಪ್ರಿಲ್ 2ರಂ...
02/04/2024

ಬುಲೆಟ್ ಪ್ರಕಾಶ್

ದಿವಂಗತ ಬುಲೆಟ್ ಪ್ರಕಾಶ್ ಕನ್ನಡದ ಉತ್ತಮ ಹಾಸ್ಯಪಾತ್ರಧಾರಿಗಳಲ್ಲಿ ಒಬ್ಬರೆನಿಸಿದ್ದವರು.

ಬುಲೆಟ್ ಪ್ರಕಾಶ್ 1976ರ ಏಪ್ರಿಲ್ 2ರಂದು ಜನಿಸಿದರು.

ಬುಲೆಟ್ ಪ್ರಕಾಶ್ ಅವರ ಹಲವಾರು ಹಾಸ್ಯದ ತುಣುಕುಗಳನ್ನು ನೋಡಿ ನಾವೆಲ್ಲಾ ನಕ್ಕಿದ್ದೆವು. ರಂಗಾಯಣ ರಘು ಜೊತೆ ನಿರ್ಮಾಣ, ನಿರ್ದೇಶನ ಕೂಡಾ ಮಾಡಿದ ಈ ಹುಡುಗನ ಕನ್ನಡ ಕ್ರಿಯಾಶೀಲತೆ ಮೆಚ್ಚುವಂತದಿತ್ತು.

ಮೊದಲು ‘ಎ. ಕೆ. 47’ ಚಿತ್ರದಲ್ಲಿ ಖಳರಾಗಿ ಬಂದ ಬುಲೆಟ್ ಪ್ರಕಾಶ್ ಮುಂದಿನ ದಿನಗಳಲ್ಲಿ ಹಾಸ್ಯನಟರಾಗಿ ಜನಪ್ರಿಯರಾಗಿದ್ದರು. ಅವರು ನಟಿಸಿದ ಚಿತ್ರಗಳ ಸಂಖ್ಯೆ 350ಕ್ಕೂ ಹೆಚ್ಚಿನದು. ಕನ್ನಡವಲ್ಲದೆ ಕೆಲವೊಮ್ಮೆ ಹೊರ ಭಾಷಾ ಚಿತ್ರಗಳಲ್ಲೂ ನಟಿಸಿ ಬಂದಿದ್ದರು. ಕೋಮಲ್, ಕೋಕಿಲ, ಬುಲೆಟ್, ಟೆನ್ನಿಸ್, ಮಂಡ್ಯ, ಶರಣ್ ಇಂಥಹ ಹುಡುಗರ ಹಾಸ್ಯ, ಕನ್ನಡಿಗರನ್ನು ಇನ್ನೂ ಚಲನಚಿತ್ರಗಳತ್ತ ಕಣ್ಣುಹಾಯಿಸುವಲ್ಲಿ ಸಾಕಷ್ಟು ಪ್ರೇರಕವಾಗಿರುವಂತದ್ದು. ಸಾಕಷ್ಟು ಕಷ್ಟಪಟ್ಟು ದುಡಿಯುವ ಈ ಹುಡುಗರಿಗೆ ಚಿತ್ರಪ್ರೇಕ್ಷಕರು ಮತ್ತು ಚಿತ್ರರಂಗ ಸಾಕಷ್ಟು ಕೃತಜ್ಞರಾಗಿರಬೇಕು.

ಬುಲೆಟ್ ಪ್ರಕಾಶ್ ‘ಪರಾರಿ’ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ‘ಐತಲಕ್ಕಡಿ’ ಅಂತಹ ಚಿತ್ರದ ನಿರ್ಮಾಣದಲ್ಲೂ ಭಾಗವಹಿಸಿದ್ದರು. ಬುಲೆಟ್ ಪ್ರಕಾಶ್ ಚುನಾವಣಾ ರಂಗದಲ್ಲಿ ಕೂಡಾ ಕೆಲಕಾಲ ಚಾಲ್ತಿಯಲ್ಲಿದ್ದರು.

‘ಗಾತ್ರವೂ ಆನೆಯಂತೆ, ಬದುಕೂ ಆನೆಯಂತೆ’ ಎಂದು ತಮ್ಮ ಬದುಕನ್ನು ವಿಶ್ಲೇಷಿಸಿಕೊಳ್ಳುತ್ತಿದ್ದ ಬುಲೆಟ್ ಪ್ರಕಾಶ್ ತಮ್ಮ ಮೇಲಿನ ವಿಡಂಬನೆಯನ್ನು ನಗುನಗುತ್ತಾ ಸ್ವೀಕರಿಸಿದವರು. ಸೈಕಲ್ ಮೇಲೆ ಶೂಟಿಂಗಿಗೆ ಬರುತ್ತಿದ್ದ ಈತನನ್ನು ಗೆಳೆಯರು ಬುಲೆಟ್ ಪ್ರಕಾಶ್ ಎಂದರು. ಅದೇ ಆತನ ಹೆಸರಾಯಿತು. ತನ್ನ ಅಂತರಂಗದ ನೋವನ್ನೆಲ್ಲಾ ತನ್ನ ದೊಡ್ಡ ದೇಹದಲ್ಲಿ ಬಚ್ಚಿಟ್ಟುಕೊಂಡು ಪ್ರೇಕ್ಷಕರಿಗೆ ನಗೆ ನೀಡುತ್ತಿದ್ದ ಬುಲೆಟ್ ಪ್ರಕಾಶ್ 2020ರ ಏಪ್ರಿಲ್ 6ರಂದು ತಮ್ಮೆಲ್ಲ ನೋವುಗಳಿಗೆ ಇತಿಶ್ರೀ ಹಾಡಿ ಬದುಕಿನಂಗಣದಿಂದ‍ ಹೊರಗೆ ನಡೆದುಬಿಟ್ಟರು.

ಅವರು ತಮ್ಮ ತೂಕ 35 ಕಿಲೋ ಇಳಿಸಿಕೊಂಡರು ಎಂಬ ಸುದ್ಧಿ ಬಂದಿತ್ತು. ಅವರು ಇಳಿಸಿಕೊಳ್ಳದೆ ಉಳಿಸಿಕೊಳ್ಳಬೇಕಿತ್ತ! ಇಳಿಸಿ-ಉಳಿಸಿಕೊಳ್ಳಬೇಕಿದ್ದಕ್ಕೆಲ್ಲ ಪ್ರಕೃತಿಯಲ್ಲಿ ಅದರದ್ದೇ ಆದ ನಿಯಮವಿದೆಯೆ?!

ಎಲ್ಲ ಅದಮೇಲೆ ಬದುಕಿನ ಈ ಪ್ರಶ್ನೆಗಳಿಂದ ಪ್ರಯೋಜನವಿದೆಯೆ. ಲೋಕದ ಬದುಕು ಬಲ್ಲವರ್ಯಾರು, ಕಾಲದ ಮುಂದೆ ನಿಲ್ಲುವರ್ಯಾರು. ಎಲ್ಲ ಕೆಲವು ಕ್ಷಣಗಳಂತಹ ಬದುಕು. ಅದರ ತುಂಬ ಬರೀ ಕಥೆ, ವ್ಯಥೆ. ಈ ಮಧ್ಯೆ ನಮಗೆ ದಕ್ಕಿದ ಕೆಲವು ಸಂತಸದ ಕ್ಷಣಗಳ ನೆನಪಷ್ಟೇ ನಮ್ಮ ಬದುಕು. ಅಂತಹ ಸಂತಸದ ಕ್ಷಣ ನಮ್ಮ ಬದುಕಲ್ಲಷ್ಟು ತುಂಬಿ ಸಣ್ಣ ವಯಸ್ಸಿನಲ್ಲೇ ತಮ್ಮ ಬುಲೆಟ್ ಹತ್ತಿ ಹೊರಟು ಹೋದ ಪ್ರಕಾಶ್ ನಿಜಕ್ಕೂ ಸ್ಮರಣೀಯರು.

(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ)

Address


Telephone

+919108111553

Website

Alerts

Be the first to know and let us send you an email when Sandalwood Bisi Suddi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandalwood Bisi Suddi:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share