28/02/2024
ಸಂಗೀತಗೋಷ್ಠಿ- ಕೃತಜ್ಞತೆಗಳು.🙏🏾😊
ಬಂಧುಗಳೇ
ಯುವಕಲಾವಿದ ಹೊ ನಂ ಅಂಕರಾಜು ಅವರ ತಾಯಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆಗೆಂದು ದೊಡ್ಡ ಮೊತ್ತದ ಹಣದ ಅವಶ್ಯಕತೆ ಇತ್ತು. ಹೀಗಾಗಿ ಇವರಿಗೆ ಸಹಾಯ ಮಾಡುವ ಉದ್ದೇಶದಿಂದ BVS ಮೈಸೂರು, ಮಾನಸಗಂಗೋತ್ರಿಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಇವರ ಸಹಯೋಗದಲ್ಲಿ ದಿನಾಂಕ 25-2-2024ರ ಭಾನುವಾರ ಸಂಜೆ ಮೈಸೂರು ಮಾನಸ ಗಂಗೋತ್ರಿಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸಂಗೀತ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಸುಪ್ರಸಿದ್ಧ ಬಹುಭಾಷಾ ನಟ ಪ್ರಕಾಶ್ ರೈ, ಖ್ಯಾತ ಹಿಂದೂಸ್ಥಾನಿ ಗಾಯಕಿ ಶ್ರೀಮತಿ ಸಂಗೀತ ಕಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಗಾನ ದೇವತೆ ಶ್ರೀಮತಿ ಸಂಗೀತ ಕಟ್ಟಿಯವರು ಸುಮಾರು ಒಂದುಗಂಟೆಯ ಕಾಲ ಪ್ರೇಕ್ಷಕರನ್ನು ಸಂಗೀತಲೋಕಕ್ಕೆ ಕರೆದೊಯ್ದರು.
ಶ್ರೀ ಶಂಕರ ದೇವನೂರು, ಡಾ ಪ್ರೇಮ್ ಕುಮಾರ್, ಡಾ ಸುಶ್ರುತ ಗೌಡ, ಶ್ರೀ ಉಮೇಶ್, ಶ್ರೀ ಸೋಸಲೆ ಸಿದ್ದರಾಜು, ಶ್ರೀ ಮಹದೇವ ಕೋಟೆ, ಶ್ರೀ ಮಹೇಶ್ ಸಿ, ಶ್ರೀ ಸಚ್ಚಿನ್, ಮುಂತಾದವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಮಾನ್ಯ ಗಾಯಕರಾದ ಮಹೇಂದ್ರ ರಂಗದಾಸ್, ಪುರುಷೋತ್ತಮ್ ಕಿರಗಸೂರು, ದೇವಾನಂದ ವರಪ್ರಸಾದ್, ನಾಗೇಶ್ ಕಂದೇಗಾಲ, ಜಯಂಕರ ಮೇಸ್ತ್ರಿ, ನಿತಿನ್ ರಾಜಾರಾಮ ಶಾಸ್ತ್ರಿ, ಋತ್ವಿಕ್ ಸಿ ರಾಜ್, ಭವತಾರಿಣಿ, ಸಿಂಚನ, ಪ್ರೀತು ಎಸ್ ರವಿ, ನಾರಾಯಣಸ್ವಾಮಿ, ರಮೇಶ್ ತಾಯೂರು- ಇವರುಗಳು ಸುಮಧುರವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ತಬಲ- ರೋಷನ್ ಸೂರ್ಯ, ಕೀಬೋರ್ಡ್- ಶರತ್, ಪುರುಷೋತ್ತಮ್, ರಿದಂಪ್ಯಾಡ್- ಕಿರಣ್, ಗಿಟಾರ್- ಮಥಿಯಾಸ್, ಕೊಳಲು- ನೀತು, ನವೀನ್- ತಬಲ - ಇವರೆಲ್ಲರ ಹಿನ್ನೆಲೆ ಸಂಗೀತ ಮನಮೋಹಕವಾಗಿತ್ತು.
ಅಕ್ಕ ಅಕಾಡೆಮಿಯ ಮುಖ್ಯಸ್ಥ ಹಾಗು ಕಾರ್ಯಕ್ರಮದ ಮುಖ್ಯಸಂಘಟಕರಾದ ಡಾ ಶಿವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಿಂದಾಗಿ ಹೊ. ನಂ.ಅಂಕರಾಜು ತಾಯಿಯವರ ಚಿಕಿತ್ಸೆಗೆ ಮೂರು ಲಕ್ಷದ ಹನ್ನೊಂದು ಸಾವಿರದ ನಾಲ್ಕು ನೂರು ರೂಪಾಯಿಗಳ ನೆರವು ಸಿಕ್ಕಿತು 3,11,400/ ). ಮೂವತ್ತು ಸಾವಿರದ ಒಂಭೈನೂರು ರೂಪಾಯಿಗಳಷ್ಟು ಖರ್ಚಾಯಿತು. ಇದನ್ನೂ ಸೇರಿಸಿದರೆ ಒಟ್ಟು 3,42,300/. ಗಳಷ್ಟು ಹಣ ಸಂಗ್ರಹವಾದಂತಾಯಿತು. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.🙏🏾☺️