Western Ghat News

  • Home
  • Western Ghat News

Western Ghat News Contact information, map and directions, contact form, opening hours, services, ratings, photos, videos and announcements from Western Ghat News, Digital creator, .

(KOLARA): ಕೋಲಾರ : ಗ್ರಾಮದ ಅಭಿವೃದ್ಧಿಗೆ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡ್ತಾರೆ ಅವರು ಆಯ್ಕೆಯಾಗಿ ಗ್ರಾಮ ಪಂಚಾಯತಿ ಸ...
29/06/2024

(KOLARA): ಕೋಲಾರ : ಗ್ರಾಮದ ಅಭಿವೃದ್ಧಿಗೆ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡ್ತಾರೆ ಅವರು ಆಯ್ಕೆಯಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿ ತಾವು ತನ್ನ ಕುಟುಂಬ ಶ್ರೀಮಂತರಾಗಿ ಹೋಗುವುದನ್ನು ನಾವು ನೀವುಗಳು ನೋಡಿಯೇ ಇದ್ದೇವೆ ಆದರೆ ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಮಾತ್ರ ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಶ್ಮಿತಾ ರಮೇಶ್ ರವರು ಸಾರ್ವಜನಿಕರಿಗಾಗಿ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮದ ಸ್ವಚ್ಛತೆಗಾಗಿ ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ ರವರ ಬಳಿ ಮಂಡಿಯೂರಿ ತಮ್ಮ ಗ್ರಾಮಕ್ಕೆ ಬೇಕಾದ ಅನುದಾನವನ್ನು ತೆಗೆದುಕೊಂಡು ಹೋಗಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ....

(KOLARA): ಕೋಲಾರ : ಗ್ರಾಮದ ಅಭಿವೃದ್ಧಿಗೆ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡ್ತಾರೆ ಅವರು ಆಯ್ಕೆಯಾಗಿ ಗ್ರಾಮ ಪಂಚಾಯ...

(SHIAVAMOGA): ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದ ಎದುರು SGT ಕಾಂಪ್ಲೆಕ್ಸ್ ನಲ್ಲಿ ರಜಿನಿ ಫಣಿ ಕುಮಾರ್ ರವರ ಮಾಲಿಕತ್ವ ದಲ್ಲಿ ನೂತನವಾಗಿ ಪರಂ...
29/06/2024

(SHIAVAMOGA): ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದ ಎದುರು SGT ಕಾಂಪ್ಲೆಕ್ಸ್ ನಲ್ಲಿ ರಜಿನಿ ಫಣಿ ಕುಮಾರ್ ರವರ ಮಾಲಿಕತ್ವ ದಲ್ಲಿ ನೂತನವಾಗಿ ಪರಂಪರಾಸ್ ಡ್ರೈ ಫ್ರೂಟ್ಸ್ ಎಂಬ ಡ್ರೈ ಫ್ರೂಟ್ಸ್ ನ ಮಳಿಗೆಯು ದಿನಾಂಕ 30-06-2024 ಈ ಭಾನುವಾರ ಬೆಳಿಗ್ಗೆ ಶುಭಾರಂಭ ಗೊಳ್ಳಲಿದೆ..ನೈಸರ್ಗಿಕವಾದ ಉತ್ತಮ ಗುಣಮಟ್ಟದ ವಿವಿಧ ಬಗೆಯ ವಿಶೇಷ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್‌.ಖರ್ಜೂರ. ಡ್ರೈಫ್ರೋಟ್ಸ್‌ಗಳು ಪ್ರಕೃತಿ ಮಡಿಲಿನ ಜೇನುತುಪ್ಪ, ವಿವಿಧ ಬಗೆಯ ತಿಂಡಿ ತಿನಿಸುಗಳು ಹಾಗು ಸಾಂಬಾರ ಪದಾರ್ಥಗಳು ಉಪ್ಪಿನ ಕಾಯಿಗಳು.ಇಲ್ಲಿ ದೊರೆಯುತ್ತವೆ. ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ....

(SHIAVAMOGA): ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದ ಎದುರು SGT ಕಾಂಪ್ಲೆಕ್ಸ್ ನಲ್ಲಿ ರಜಿನಿ ಫಣಿ ಕುಮಾರ್ ರವರ ಮಾಲಿಕತ್ವ ದಲ್ಲಿ ನೂತನವಾಗಿ ಪರಂಪರ...

(SHIVAMOGA): ಸೊರಬ: ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ರೇಸಿಗೆ ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ ಎದ್ದಿದ್ದು ರಾಜಕೀಯ ವಲಯದಲ್ಲಿ ತಲ್ಲಣ...
29/06/2024

(SHIVAMOGA): ಸೊರಬ: ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ರೇಸಿಗೆ ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ ಎದ್ದಿದ್ದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಸಿಎಂ ಸ್ಥಾನವನ್ನು ವೀರಶೈವ ಲಿಂಗಾಯತ ಸಮುದಾಯದವರಿಗೆ ಮೀಸಲಿಡಬೇಕೆಂಬ ಆಗ್ರಹ ಕೇಳಿಬಂದಿದ್ದು, ಈ ಸಮುದಾಯದವರಿಗೆ ಒಕ್ಕಲಿಗರ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಗ್ರಹಿಸಿದೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಮುಂದೂ ತಾನೇ ಅಭ್ಯರ್ಥಿ ಎಂದಿದ್ದರೂ ಕೂಡ ಒಕ್ಕಲಿಗ ಪಾಳಯ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬಣವೂ ಕೂಡ ಸರ್ಕಾರ ರಚನೆಯ ಪೂರ್ವ ಮಾತಿನಂತೆ ಡಿಕೆಶಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವಂತೆ ಬೆನ್ನುಬಿದ್ದಿದ್ದೆ.ಅದರಂತೆ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಬಿಟ್ಟುಕೊಟ್ಟ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಬೇಕೆಂಬುದು ಈಗ ಮುನ್ನಲೆಗೆ ಬಂದಿದೆ....

(SHIVAMOGA): ಸೊರಬ: ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ರೇಸಿಗೆ ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ ಎದ್ದಿದ್ದು ರಾಜಕೀಯ ವಲಯದಲ್ಲಿ ತಲ್...

(SHIVAMOGA): ಸಾಗರ ಗ್ರಾಮ ಪಂಚಾಯಿತಿಯೂ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳ ಕಾರ್ಯದ ಉದ್ದೇಶ ಒಂದೆ ಆಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯವರ...
28/06/2024

(SHIVAMOGA): ಸಾಗರ ಗ್ರಾಮ ಪಂಚಾಯಿತಿಯೂ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳ ಕಾರ್ಯದ ಉದ್ದೇಶ ಒಂದೆ ಆಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸರಕಾರದ ಯೋಜನೆ ತಲುಪಿಸುವುದು ಮತ್ತು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿವಳಿಕೆ ನೀಡುವುದಾಗಿದೆ ಎಂದು ಹೆಗ್ಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮಾವಿನಸರ ಹೇಳಿದರು. ಭಾರತೀಯ ಅಂಚೆ ಇಲಾಖೆ, ಹೆಗ್ಗೋಡು ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಶುಕ್ರವಾರ ಹೆಗ್ಗೋಡಿನಲ್ಲಿ ಏರ್ಪಡಿಸಿದ್ದ `ಒಂದು ಸೂರು ಸೇವೆ ನೂರು' ಎನ್ನುವ ಜನ ಸಂಪರ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರಕಾರಿ ಯೋಜನೆಗಳು ಸದುದ್ದೇಶ ಹೊಂದಿದ್ದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನಮ್ಮ ಹಲವು ಸೇವೆ ಸಮರ್ಪಕವಾಗಿ ತಲುಪುತ್ತಿಲ್ಲ ಎನ್ನುವುದು ಬೇಸರದ ಸಂಗತಿ....

(SHIVAMOGA): ಸಾಗರ ಗ್ರಾಮ ಪಂಚಾಯಿತಿಯೂ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳ ಕಾರ್ಯದ ಉದ್ದೇಶ ಒಂದೆ ಆಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ...

(SHIVAMOGA): ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮುಖ್ಯ : ಜಿಪಂ ಆಡಳಿತಾಧಿಕಾರಿ ಕೆ. ಸುಜಾತಾ ಪಾಲ್ಗೊಂಡು  ಸರಕಾರದ ಯಾವುದೇ ಯೋಜನೆ...
28/06/2024

(SHIVAMOGA): ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮುಖ್ಯ : ಜಿಪಂ ಆಡಳಿತಾಧಿಕಾರಿ ಕೆ. ಸುಜಾತಾ ಪಾಲ್ಗೊಂಡು ಸರಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಿದ್ದರೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪ್ರತಿ ಪಂಚಾಯತಿ ಮಟ್ಟದಲ್ಲೂ ಗ್ರಾಮ ಸಭೆಗೆ ಹೋಗಿ ರೈತರು ಸೇರಿದಂತೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ನಡೆಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ (ಆಡಳಿತ), ಆಡಳಿತಾಧಿಕಾರಿ ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಪಂಚಾಯತಿಯ ಸಾಮಥ್ರ್ಯ ಸೌಧದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ 2024-25ನೇ ಸಾಲಿನ ಆಯವ್ಯಯದ ವಿವರ ಪಡೆದು ಅವರು ಮಾತನಾಡಿದರು....

(SHIVAMOGA): ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮುಖ್ಯ : ಜಿಪಂ ಆಡಳಿತಾಧಿಕಾರಿ ಕೆ. ಸುಜಾತಾ ಪಾಲ್ಗೊಂಡು ಸರಕಾರದ ಯಾವುದೇ ಯೋಜನ.....

(SHIVAMOGA): ಸೊರಬ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಜೂನ್ 30 ರ ಭಾನುವಾರ ಬೆಳಿಗ್ಗೆ 11...
28/06/2024

(SHIVAMOGA): ಸೊರಬ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಜೂನ್ 30 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸೊರಬ ಪಟ್ಟಣದ ನಿರೀಕ್ಷಣಾ ಮಂದಿರ (ಐ.ಬಿ) ದಲ್ಲಿ ಕರೆಯಲಾಗಿದೆ.ಸಂಘದ ರಾಜ್ಯಾಧ್ಯಕ್ಷ ಶರಣಪ್ಪಗೌಡ ಆರ್.ಕೆ ಇವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಏಳನೇ ವೇತನ ಆಯೋಗ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸುವುದು, ಪ್ರಮುಖವಾಗಿ ಗ್ರಾಮೀಣ ಭತ್ಯೆ ಹಕ್ಕೊತ್ತಾಯ, ಈ ವರ್ಷದ ವಲಯ ವರ್ಗಾವಣೆ ಮಾಡುವುದು, ಪದವೀಧರ ಪಿಎಸ್ಟಿಗಳನ್ನು ಜಿಪಿಟಿಗೆ ವಿಲೀನಗೊಳಿಸುವುದು. ಗ್ರಾಮೀಣ ಸಂಘಕ್ಕೆ ಮಾನ್ಯತೆ ನೀಡುವುದು, ಎನ್. ಪಿ.ಎಸ್ ರದ್ದುಗೊಳಿಸುವುದು, ವೃಂದ ಮತ್ತು ನೇಮಕಾತಿ ಕಾಯ್ದೆಯ ತಿದ್ದುಪಡಿ ಹಾಗೂ ಹೋಬಳಿ ಮಟ್ಟದಲ್ಲಿ ಶಿಕ್ಷಕರ ವಸತಿ ಸಮುಚ್ಚಯಗಳನ್ನು ನಿರ್ಮಿಸುವುದು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ, ಚಿಂತನ-ಮoಥನ ನಡೆಸಲಾಗುವುದು....

(SHIVAMOGA): ಸೊರಬ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಜೂನ್ 30 ರ ಭಾನುವಾರ ಬೆಳಿಗ್ಗೆ 11 ಗಂ....

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್...
28/06/2024

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿಯ ಕಿರು ಕಾಲುವೆಗೆ ಬಿದ್ದಿದೆ. ಮಂಗಳೂರು ಮೂಲದ ಕಾರೊಂದು ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದಾಗ ಮಳೆಗೆ ರಸ್ತೆ ತಿರುವು ಕಾಣದೇ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಹಳ್ಳಕ್ಕೆ ಬಿದ್ದಿದೆ.ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ zನೀರು ನಿಂತು ಇಂತಹ ಘಟನೆ ಸಂಭವಿಸುತ್ತಿದೆ.ಕಾರಿನಲ್ಲಿ ಇಬ್ಬರೇ ಇದ್ದು ಕಾರು ನೀರಿಗೆ ಜಾರಿರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್...

(BELAGAVI): ಬೆಳಗಾವಿ: ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಅಹಿಂದ ವರ್ಗದ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಗೆ ಡಿಸಿಎಂ ಹುದ್ದ...
28/06/2024

(BELAGAVI): ಬೆಳಗಾವಿ: ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಅಹಿಂದ ವರ್ಗದ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಗೆ ಡಿಸಿಎಂ ಹುದ್ದೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರ ಆರ್.ಬಿ.ಸಂಗಪ್ಪಗೋಳ್ ಹೈಕಮಾಂಡ್ ನಾಯಕರಲ್ಲಿ ಬೇಡಿಕೆ ಇಟ್ಟಿದ್ದಾರೆ.ಈ ಕುರಿತು ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚರ್ಚೆಯಲ್ಲಿರುವ ಜಾತಿವಾರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದು ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ. ಜಾತಿವಾರು ಹುದ್ದೆಗಳನ್ನು ನೀಡುವುದು ಸೂಕ್ತವಲ್ಲ. ಬದಲಾಗಿ ಅನುಭವಸ್ಥ ಹಾಗೂ ಸಮಾಜವಾದಿ ನಾಯಕರಾದ ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಬೇಕೆಂದು ಒತ್ತಾಯಿಸಿದರು....

(BELAGAVI): ಬೆಳಗಾವಿ: ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಅಹಿಂದ ವರ್ಗದ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಗೆ ಡಿಸಿಎಂ ಹುದ್....

(KOLARA): ಕೋಲಾರ : ರಾಜ್ಯಾದ್ಯಂತವಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿ...
28/06/2024

(KOLARA): ಕೋಲಾರ : ರಾಜ್ಯಾದ್ಯಂತವಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಇದುವರೆಗೂ ಸಿಗುತ್ತಿದ್ದ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಜಾರಿ ಮಾಡಿಲ್ಲಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ....

(KOLARA): ಕೋಲಾರ : ರಾಜ್ಯಾದ್ಯಂತವಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ....

(SHIVAMOGA): 500 ವರ್ಷದ ಹಿಂದೆಯೇ ಬೆಂಗಳೂರು ನಗರ ಕಟ್ಟಿದ್ದ ಕೆಂಪೇಗೌಡರು, ಇಂದಿನ ಅಗತ್ಯತೆಯನ್ನು ಅಂದೇ ಅರಿತಿದ್ದ ದಕ್ಷ ಆಡಳಿತಗಾರರಾಗಿದ್ದರು...
28/06/2024

(SHIVAMOGA): 500 ವರ್ಷದ ಹಿಂದೆಯೇ ಬೆಂಗಳೂರು ನಗರ ಕಟ್ಟಿದ್ದ ಕೆಂಪೇಗೌಡರು, ಇಂದಿನ ಅಗತ್ಯತೆಯನ್ನು ಅಂದೇ ಅರಿತಿದ್ದ ದಕ್ಷ ಆಡಳಿತಗಾರರಾಗಿದ್ದರು ಎಂದು ಉಪವಿಭಾಗಾಧಿಕಾರಿ ಆರ್. ಯತೀಶ್ ತಿಳಿಸಿದ್ದರು.ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅವರ ಆಡಳಿತದ ದೂರದೃಷ್ಟಿಯ ಛಾಪು ಕೃತಿಯಲ್ಲಿ ಮೂಡಿದ್ದಲ್ಲದೆ, ಜನರ ಅಗತ್ಯತೆಗಳನ್ನು ಅರಿತು ಅಧಿಕಾರ ನಡೆಸಿದ್ದರು. ನೂರಾರು ಕೆರೆ-ಕಟ್ಟೆಗಳ ನಿರ್ಮಾಣ, ಪಟ್ಟಣದಲ್ಲಿಯೂ ಉದ್ಯಾನದ ಅಗತ್ಯತೆ, ನಗರದ ವ್ಯವಸ್ಥಿತ ರಸ್ತೆಗಳು ಅವರನ್ನು ಇಂದಿಗೂ ನಾಡು ಸ್ಮರಿಸುವಂತೆ ಮಾಡಿದೆ. ನಾಡ ಪ್ರಭು ಕೆಂಪೇಗೌಡರು ಅಂದು ಕಟ್ಟಿದ ಬೆಂಗಳೂರನ್ನು ಇಂದು ವಿಶ್ವವೇ ತಿರುಗಿ ನೋಡುತ್ತಿದೆ ಎಂದರು....

(SHIVAMOGA): 500 ವರ್ಷದ ಹಿಂದೆಯೇ ಬೆಂಗಳೂರು ನಗರ ಕಟ್ಟಿದ್ದ ಕೆಂಪೇಗೌಡರು, ಇಂದಿನ ಅಗತ್ಯತೆಯನ್ನು ಅಂದೇ ಅರಿತಿದ್ದ ದಕ್ಷ ಆಡಳಿತಗಾರರಾಗಿದ್ದರ....

(SHIVAMOGA): ಸಾಗರ ಪಟ್ಟಣವು ದಿನೆ ದಿನೆ ಬೆಳೆಯುತ್ತಿರುವ ಪಟ್ಟಣ ಅದಕ್ಕಾಗಿ ಸಾರ್ವಜನಿಕ ಒತ್ತಾಯದ ಮೇರೆಗೆ ಸಾಗರದಲ್ಲಿ ಆದಸ್ಟು ಬೇಗ ಟ್ರಾಫಿಕ್ ...
28/06/2024

(SHIVAMOGA): ಸಾಗರ ಪಟ್ಟಣವು ದಿನೆ ದಿನೆ ಬೆಳೆಯುತ್ತಿರುವ ಪಟ್ಟಣ ಅದಕ್ಕಾಗಿ ಸಾರ್ವಜನಿಕ ಒತ್ತಾಯದ ಮೇರೆಗೆ ಸಾಗರದಲ್ಲಿ ಆದಸ್ಟು ಬೇಗ ಟ್ರಾಫಿಕ್ ಪೋಲಿಸ್ ಠಾಣೆಯು ಮಂಜೂರು ಆಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಸಾಗರ ಶಾರದಾಂಬಾ ಸಭಾ ಭವನದಲ್ಲಿ ಜನಸ್ಪಂದನ ಮತ್ತು ನೊಂದವರ ಸಭೆಯಲ್ಲಿ ಮಾತಾನಾಡಿದರು.ಸಾರ್ವಜನಿಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.ಸಾರ್ವಜನಿಕರಿಂದ ಅನೇಕ ಪ್ರಶ್ನೆಗಳನ್ನು ಎಸ್.ಪಿ.ಅವರಿಗೆ ಮನವರಿಕೆ ಮಾಡಲಾಯಿತು. ಅದರಲ್ಲಿ ಬಹು ಮುಖ್ಯವಾಗಿ ಸಾಗರದಲ್ಲಿ ಓ.ಸಿ, ಗಾಂಜಾ ಪಡ್ಡೆ ಹುಡುಗರ ಬ್ಯೆಕ್ ಚಾಲನೆ ‌ಇಂಟೀರಿಯರ್ ಸ್ಥಳದಲ್ಲಿ ಕುಡುಕರ ಹಾವಳಿ ಶಾಲಾ ವಾಹನಗಳಲ್ಲಿ ಅತೀ ಹೆಚ್ಚು ಮಕ್ಕಳನ್ನು ಕರೆದು ಕೊಂಡು ಹೊಗುವುದರ ಬಗ್ಗೆ ಚರ್ಚಿಸಲಾಯಿತು ಇದಕ್ಕೆ ಸ್ಪಂದಿಸಿದ ಎಸ್.ಪಿ‌.ಅವರು ಇವೆಲ್ಲದರ ಕಡೆಗೆ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದರು....

(SHIVAMOGA): ಸಾಗರ ಪಟ್ಟಣವು ದಿನೆ ದಿನೆ ಬೆಳೆಯುತ್ತಿರುವ ಪಟ್ಟಣ ಅದಕ್ಕಾಗಿ ಸಾರ್ವಜನಿಕ ಒತ್ತಾಯದ ಮೇರೆಗೆ ಸಾಗರದಲ್ಲಿ ಆದಸ್ಟು ಬೇಗ ಟ್ರಾಫಿ....

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಕುಂಬಾರ ಬೀದಿಯ ತೌಸೀಫ್ ಅಹಮದ್ ಎಂಬುವರಿಗೆ ಸೇರಿದ ಮನೆಯಲ್ಲಿ ಪರವಾನಗಿ ಇಲ್ಲದೆ ಅ...
26/06/2024

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಕುಂಬಾರ ಬೀದಿಯ ತೌಸೀಫ್ ಅಹಮದ್ ಎಂಬುವರಿಗೆ ಸೇರಿದ ಮನೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹ ಮಾಡಿ ಇರಿಸಿದ್ದ ಕೀಟನಾಶಕವನ್ನು ಮಾಹಿತಿ ಆಧರಿಸಿ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ. ಕೀಟನಾಶಕ ಮಾರಾಟ ಪರವಾನಗಿ ಇಲ್ಲದೇ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ₹5.71 ಲಕ್ಷ ಮೌಲ್ಯದ ಕೀಟನಾಶಕಗಳನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಕೀಟನಾಶಕಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ನಡೆಸಿದಾಗ ಸುಮಾರು 6 ಕಂಪನಿಗಳಿಗೆ ಸೇರಿದ ಒಟ್ಟು ₹5. 71ಲಕ್ಷ ಮೌಲ್ಯದ ಕೀಟನಾಶಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಕಂಡು ಬಂದಿದೆ. ಕೀಟನಾಶಕಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದೆ. ದಾಳಿ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ತಿಮ್ಮನಗೌಡ ಎಸ್.ಪಾಟೀಲ್, ಎಸ್ ವೆಂಕಟೇಶ ಚವ್ಹಾಣ್, ಕೃಷಿ ಅಧಿಕಾರಿ ಶ್ರೀನಿವಾಸ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಕುಂಬಾರ ಬೀದಿಯ ತೌಸೀಫ್ ಅಹಮದ್ ಎಂಬುವರಿಗೆ ಸೇರಿದ ಮನೆಯಲ್ಲಿ ಪರವಾನಗಿ ಇಲ್ಲದೆ ಅ.....

(SHIVAMOGA): ಪಡವಗೋಡ್, ಹೊಂಕೇರಿ, ಮಾರುತಿ ನಗರ, ಈ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಸಾಗರ ಸಿರಿವಂತೆ ಶಾಲೆ ಕಾಲೇಜ್ ಹೋಗಲು ಈ ಬಸ್ ನಿಲ್ದಾಣದ ಸ...
26/06/2024

(SHIVAMOGA): ಪಡವಗೋಡ್, ಹೊಂಕೇರಿ, ಮಾರುತಿ ನಗರ, ಈ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಸಾಗರ ಸಿರಿವಂತೆ ಶಾಲೆ ಕಾಲೇಜ್ ಹೋಗಲು ಈ ಬಸ್ ನಿಲ್ದಾಣದ ಸ್ಥಳದಲ್ಲಿ. ನಿಂತು ಕೈ ಮಾಡಿದರೂ ಬಸ್ ನಿಲ್ಲಿಸದೆ ಹಾಗೆ ಹೋಗುವುದಲ್ಲದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಹಾಗೂ ಈ ಸ್ಥಳದಲ್ಲಿ ನಾಡ ಕಚೇರಿ. ಕೃಷಿ ಇಲಾಖೆ. ಕೆನರಾ ಬ್ಯಾಂಕ್ ಇರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮುಖ್ಯವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಬಸ್ ನಿಲುಗಡೆ ಭಾಗ್ಯ ದೊರಕಿಸಿಕೊಡಬೇಕು. ವರದಿ :ಗಣಪತಿ ಭಂಡಾರಿ

(SHIVAMOGA): ಪಡವಗೋಡ್, ಹೊಂಕೇರಿ, ಮಾರುತಿ ನಗರ, ಈ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಸಾಗರ ಸಿರಿವಂತೆ ಶಾಲೆ ಕಾಲೇಜ್ ಹೋಗಲು ಈ ಬಸ್ ನಿಲ್ದಾಣದ ಸ್....

(KOLARA): ಕೋಲಾರ: ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಹ...
26/06/2024

(KOLARA): ಕೋಲಾರ: ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಹಕಾರಿಯಾಗಲಿದ್ದು ಪ್ರತಿಯೊಬ್ಬ ಹಾಲು ಉತ್ಪಾದಕರು ಸಹ ವಿಮೆ ಮಾಡಿಸಿಕೊಳ್ಳಿ ಎಂದು ಕೋಚಿಮುಲ್ ವೈದ್ಯಾಧಿಕಾರಿ ಆಶ್ರಫ್ ಅಹಮದ್ ತಿಳಿಸಿದರು, ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾಸುಗಳಿಗೆ ವಿಮೆ ಮಾಡಿಸಿ ಮಾತನಾಡಿದ ಅವರು ಹೈನುಗಾರಿಕೆಯು ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದು ರಾಸುಗಳಿಗೆ ವಿಮೆ ಮಾಡಿಸಿ ಅದರಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಜಿಲ್ಲೆಯಾದ್ಯಂತ ಹೈನುಗಾರಿಕೆ ಮಾಡಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ ಹಾಲು ಉತ್ಪಾದಕರ ಮಕ್ಕಳ ಶಿಕ್ಷ ಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆರ್.ಗೋಪಾಲಪ್ಪ, ಸಹಾಯಕ ಆರ್ ಬೈಚೇಗೌಡ, ಉತ್ಪಾದಕರು ಇದ್ದರು. ವರದಿ : ಅಮರೇಶ್ ಚಿಕ್ಕನಹಳ್ಳಿ

(KOLARA): ಕೋಲಾರ: ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕ.....

(SHIVAMOGA): ಸಾಗರ ರಂಗಭೂಮಿ ಎನ್ನುವ ಪದದಲ್ಲಿ ಭೂಮಿ ಎನ್ನುವ ಪದವಿದೆ. ಭೂಮಿ ಎಂದರೆ ಹೆಣ್ಣು, ಫಲವತ್ತತೆ. ಹೀಗಾಗಿ ಹೆಣ್ಣು ರಂಗಭೂಮಿಯ ಅವಿಭಾಜ್...
26/06/2024

(SHIVAMOGA): ಸಾಗರ ರಂಗಭೂಮಿ ಎನ್ನುವ ಪದದಲ್ಲಿ ಭೂಮಿ ಎನ್ನುವ ಪದವಿದೆ. ಭೂಮಿ ಎಂದರೆ ಹೆಣ್ಣು, ಫಲವತ್ತತೆ. ಹೀಗಾಗಿ ಹೆಣ್ಣು ರಂಗಭೂಮಿಯ ಅವಿಭಾಜ್ಯ ಅಗವೆಂದು ಖ್ಯಾತ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಹೇಳಿದ್ದಾರೆ. ಇವರು ಇಲ್ಲಿನ ಇಂದಿರಾಗಾಂಧಿ ಮಹಿಳಾ ಕಾಲೇಜು ಮತ್ತು ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಜೂನ್ 25 ರಂದು ಜಂಟಿಯಾಗಿ ಆಯೋಜಿದ್ದ ರಂಗಭೂಮಿ ಮತ್ತು ಮಹಿಳೆ ಎಂಬ ವಿಶೇಷ ಉಪನ್ಯಾಸ ನೀಡುತ್ತಾ ಹೇಳಿದರುಗಂಡಾಳ್ವಿಕೆಯ ನೆಲೆಯಲ್ಲಿ ರಂಗಭೂಮಿ ರಂಗಭೂಮಿ ಚಟವಟಿಕೆ ನಡೆಯುತ್ತಿದ ಕಾಲಘಟ್ಟದಲ್ಲಿ ಹಲವು ಮಹಿಳಾ ಹೋರಾಟಗಾರರು,ಬರಹಗಾರರು ಸೌಂದರ್ಯ ಸ್ಪರ್ದೆಯ ಸಮಯದಲ್ಲಿ ಸಿಡಿದು ವಿರೋಧಿಸಿದರು....

(SHIVAMOGA): ಸಾಗರ ರಂಗಭೂಮಿ ಎನ್ನುವ ಪದದಲ್ಲಿ ಭೂಮಿ ಎನ್ನುವ ಪದವಿದೆ. ಭೂಮಿ ಎಂದರೆ ಹೆಣ್ಣು, ಫಲವತ್ತತೆ. ಹೀಗಾಗಿ ಹೆಣ್ಣು ರಂಗಭೂಮಿಯ ಅವಿಭಾಜ್...

(KOLARA): ಕೋಲಾರ : ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಜೂನ್ 30ರಂದು ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪ್...
25/06/2024

(KOLARA): ಕೋಲಾರ : ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಜೂನ್ 30ರಂದು ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ನಿರಾತಂಕವಾಗಿ ನಡೆಯುವಂತಾಗಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.ಇಂದು ಜಿಲ್ಲಾಡಳಿತದ ನ್ಯಾಯಾಂಗ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 9.30ರಿಂದ 12ರವರೆಗೆ ನಡೆಯುವ ಮೊದಲ ಅಧಿವೇಶನದಲ್ಲಿ 9 ಕೇಂದ್ರಗಳಲ್ಲಿ 2142 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 2ರಿಂದ 4.30ರವರೆಗೆ ನಡೆಯುವ ದ್ವಿತೀಯ ಅಧಿವೇಶನದಲ್ಲಿ 14ಕೇಂದ್ರಗಳಲ್ಲಿ 3394 ಅಭ್ಯರ್ಥಿಗಳು ಸೇರಿದಂತೆ ಒಟ್ಟು 5536 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು....

(KOLARA): ಕೋಲಾರ : ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಜೂನ್ 30ರಂದು ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪ್...

(SHIVAMOGA): ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜಿ. ವೇಣುಗೋಪಾಲ ...
25/06/2024

(SHIVAMOGA): ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜಿ. ವೇಣುಗೋಪಾಲ ಕೆಳಮನೆ (44) ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಮೃತ ವೇಣುಗೋಪಾಲರಿಗೆ ತಂದೆ ಭಾಗವತರಾದ ಕೆ.ಜಿ. ರಾಮರಾವ್, ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ಸೋಮವಾರ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತವಾಗಿ ತಲೆಗೆ ತೀವ್ರ ತರಹದ ಗಾಯಗಳಾಗಿತ್ತು. ಈ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು....

(SHIVAMOGA): ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜಿ. ವೇಣುಗೋಪಾ...

(CHIKKAMAGALURU): ಸ್ಥಗಿತಗೊoಡಿರುವ ಮಾಶಾಸನಗಳನ್ನು ಸರಿಯಾಗಿ ನೀಡಲು ಆಗ್ರಹಸರ್ಕಾರ ನೀಡುತ್ತಿರುವ ವಿವಿಧ ಮಾಶಾಸನಗಳಲ್ಲಿ ಕಳೆದ 8 ತಿಂಗಳಿoದ ವ...
25/06/2024

(CHIKKAMAGALURU): ಸ್ಥಗಿತಗೊoಡಿರುವ ಮಾಶಾಸನಗಳನ್ನು ಸರಿಯಾಗಿ ನೀಡಲು ಆಗ್ರಹಸರ್ಕಾರ ನೀಡುತ್ತಿರುವ ವಿವಿಧ ಮಾಶಾಸನಗಳಲ್ಲಿ ಕಳೆದ 8 ತಿಂಗಳಿoದ ವಿವಿಧ ಕಾರಣವೊಡ್ಡಿ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ತಡೆವೊಡ್ಡಿ ಕೋಟ್ಯಾಂತರ ರೂಗಳನ್ನು ಯೋಜನೆಯ ಪಲಾನುಭವಿಗಳಿಗೆ ನೀಡದೇ ಮೋಸಮಾಡಿ ಓಟಿನ ಆಸೆಗೆ ಸೃಷ್ಟಿಸಿದ ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆಯಲ್ಲದೇ ಕಾಂಗ್ರೇಸ್ ನೇತೃತ್ವದ ಈ ರಾಜ್ಯಸರ್ಕಾರ ವಿವಿಧ ಬಣ್ಣದ ಟೋಪಿಗಳನ್ನು ಇಟ್ಟುಕೊಂಡಿದ್ದು ಜನತೆಗೆ ಒಂದೊoದು ಚುನಾವಣೆಯಲ್ಲಿ ಒಂದೊoದು ಬಣ್ಣದ ಟೋಪಿ ಹಾಕುತ್ತ ಜನತೆಗೆ ಮೋಸಮಾಡುತ್ತಿದೆ. ಎಂದು ಬಿಜೆಪಿ ವಕ್ತಾರ ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ....

(CHIKKAMAGALURU): ಸ್ಥಗಿತಗೊoಡಿರುವ ಮಾಶಾಸನಗಳನ್ನು ಸರಿಯಾಗಿ ನೀಡಲು ಆಗ್ರಹಸರ್ಕಾರ ನೀಡುತ್ತಿರುವ ವಿವಿಧ ಮಾಶಾಸನಗಳಲ್ಲಿ ಕಳೆದ 8 ತಿಂಗಳಿoದ ವಿ....

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಡಜಿಗಳೇ ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದಲ್ಲಿ ಯಾವುದೇ ಪೂರ್ವಾನುಮತಿ ಪ...
25/06/2024

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಡಜಿಗಳೇ ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಮಂಗನನ್ನು ಹಿಡಿದು ಸಾಗಾಟಕ್ಕೆ ಯತ್ನಿಸಿದ್ದ ಘಟನೆ ನಡೆದಿದ್ದು, ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಡಿಎಫ್ಓ ಸಂತೋಷ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಬ್ಬಿಣದ ಬೋನುಗಳಲ್ಲಿ ಹಿಡಿದಿಟ್ಟಿದ್ದ 32 ಕ್ಕು ಹೆಚ್ಚು ಮಂಗಗಳನ್ನು ಸೋಮವಾರ ರಕ್ಷಿಸಿದ್ದಾರೆ. ಘಟನೆ ಸಂಬಂಧ ಬಾಳೆಹಳ್ಳಿ ಗ್ರಾಮದಲ್ಲಿ ಮಂಗ ಹಿಡಿಯುತ್ತಿದ್ದ ಶಿವಮೊಗ್ಗದ ಗಾಡಿಕೊಪ್ಪ ನಿವಾಸಿಗಳಾದ 5 ಜನರನ್ನು (ಇಬ್ಬರು ಪುರುಷರು ಮೂವರು ಮಹಿಳೆಯರು) ವಶಕ್ಕೆ ತೆಗೆದುಕೊಂಡು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಶೆಡ್ಯುಲ್ 1 ಅನುಭಂದ. ...

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಡಜಿಗಳೇ ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದಲ್ಲಿ ಯಾವುದೇ ಪೂರ್ವಾನುಮ.....

(KOLARA): ಕೋಲಾರ : ತಾಲೂಕಿನ ಬೆಳಮಾರನಹಳ್ಳಿ ಪಂಚಾಯತಿಯ ಚಾಕಾರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್  ಇಂಡಿಯಾಪ್ರೈವ...
25/06/2024

(KOLARA): ಕೋಲಾರ : ತಾಲೂಕಿನ ಬೆಳಮಾರನಹಳ್ಳಿ ಪಂಚಾಯತಿಯ ಚಾಕಾರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್ ಇಂಡಿಯಾಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ 6 ರಿಂದ 7ನೇ ತರಗತಿ ಮಕ್ಕಳಿಗೆ ನೋಟ್ ಪುಸ್ತಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಶಾಲೆಯ ಮುಖ್ಯೋಪದ್ಯಾಯರಾದ ಡಾ.ಇಂಚರ ನಾರಾಯಣಸ್ವಾಮಿ ರವರು ಮಾತನಾಡಿ ಎಪ್ಸನ್ ಸಂಸ್ಥೆ ಸುಮಾರು ಹತ್ತು ವರ್ಷಗಳಿಂದ ಶಿಕ್ಷಕರ ಗೆಳೆಯರ ಬಳಗದೊಂದಿಗೆ ಒಡಗೂಡಿ ತಾಲ್ಲೂಕಿನ ಎಲ್ಲಾ ಮಕ್ಕಳ ವಿದ್ಯಾರ್ಜನೆಗೆ ಶ್ರಮಿಸುತ್ತಿರುವ ಸಂಸ್ಥೆಗೆ ನಾವೆಂದಿಗೂ ಚಿರಋಣಿಗಳು ಎಂದು ಹೇಳಿದರು....

(KOLARA): ಕೋಲಾರ : ತಾಲೂಕಿನ ಬೆಳಮಾರನಹಳ್ಳಿ ಪಂಚಾಯತಿಯ ಚಾಕಾರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್ ಇಂಡಿಯಾಪ....

(SHIVAMOGA): ಸಾಗರ ಪಟ್ಟಣದ ಎಲ್ಲ ಪದವಿ ಕಾಲೇಜುಗಳ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲ...
25/06/2024

(SHIVAMOGA): ಸಾಗರ ಪಟ್ಟಣದ ಎಲ್ಲ ಪದವಿ ಕಾಲೇಜುಗಳ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಯಾವುದೇ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿರುವ ಹಿನ್ನೆಲೆಯಲ್ಲಿ ಅಮಾಯಕ ವಿದ್ಯಾರ್ಥಿಗಳು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಝೀಬ್ರಾ ಕ್ರಾಸಿಂಗ್, ವೇಗ ನಿಯಂತ್ರಕ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪಟ್ಟಣದ ಇಂದಿರಾಗಾಂಧಿ ಮಹಿಳಾ ಪ್ರಥಮದರ್ಜೆ ಕಾಲೇಜು, ಜೋಗ ರಸ್ತೆಯಲ್ಲಿರುವ ಎಲ್‍ಬಿ ಕಾಲೇಜು, ಹಾಗೂ ಶಿವಮೊಗ್ಗ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಮೌನ ಜಾಥಾ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು....

(SHIVAMOGA): ಸಾಗರ ಪಟ್ಟಣದ ಎಲ್ಲ ಪದವಿ ಕಾಲೇಜುಗಳ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅ...

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಮನುಷ್ಯನಿಗೆ ಜೀವನದಲ್ಲಿ ಹಣವಿದ್ದರೆ ಮಾತ್ರ ಸಾಲದು. ಅದ...
25/06/2024

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಮನುಷ್ಯನಿಗೆ ಜೀವನದಲ್ಲಿ ಹಣವಿದ್ದರೆ ಮಾತ್ರ ಸಾಲದು. ಅದನ್ನು ಕೇವಲ ಸ್ವಂತಕ್ಕೆ ಬಳಸದೆ ಸಮಾಜ ಸೇವೆಗೆ ವಿನಿಯೋಗಿಸುವ ಮನಸ್ಸು ಇರುವುದು ಮುಖ್ಯವಾಗಿದೆ ಎಂದು ರಾಯಲ್ ಇಂಡಿಯನ್ಸ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ಓ.ಡಿ.ಸ್ಟೀಫನ್ ಹೇಳಿದರು. ಕುವೈತ್ ಉದ್ಯಮಿ, ಸಮಾಜ ಸೇವಕ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರ ಐವತ್ತನೇ ಜನ್ಮ ದಿನಾಚರಣೆ ಅಂಗವಾಗಿ ಮೆಣಸುಕೊಡಿಗೆಯ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯವನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು. ಸ್ಥಳೀಯರೇ ಆಗಿರುವ ಕುವೈತ್‌ನಲ್ಲಿ ಉದ್ಯೋಗದಲ್ಲಿರುವ ಕ್ಲಿಫರ್ಡ್ ಲಾರೆನ್ಸ್ ಅವರು ತಮ್ಮ ಸ್ವಗ್ರಾಮದ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದು ನಿರಂತರವಾಗಿ ಸಮಾಜಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಏನಾದರೊಂದು ಕೆಲಸವನ್ನು ಮಾಡುತ್ತಿದ್ದಾರೆ....

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಮನುಷ್ಯನಿಗೆ ಜೀವನದಲ್ಲಿ ಹಣವಿದ್ದರೆ ಮಾತ್ರ ಸಾಲದು. ಅ....

(KOLARA): ಬಂಗಾರಪೇಟೆ: ಮಳೆಯಿಂದ ಕುಸಿತಗೊಂಡಿದ್ದ ಮನೆಯ ಪರಿಹಾರದ ಹಣ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ತೇಜಸ್ ಭೂಷಣ್ ಲಂಚ ...
25/06/2024

(KOLARA): ಬಂಗಾರಪೇಟೆ: ಮಳೆಯಿಂದ ಕುಸಿತಗೊಂಡಿದ್ದ ಮನೆಯ ಪರಿಹಾರದ ಹಣ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ತೇಜಸ್ ಭೂಷಣ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಗೊಲ್ಲಹಳ್ಳಿಯ ನಾರಾಯಣಸ್ವಾಮಿ ಎಂಬುವವರ ತಾಯಿಗೆ ಸೇರಿದಂತಹ ಮನೆ 2022 ರಲ್ಲಿ ಸುರಿದ ಭಾರಿ ಮಳೆಗೆ ಮನೆ ಕುಸಿತಗೊಂಡಿತ್ತು. ಮನೆ ಕಳೆದುಕೊಂಡಂತಹ ನಾರಾಯಣಸ್ವಾಮಿ ಅವರ ತಾಯಿಯ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರವಾಹ ಸಂಕಷ್ಟ ಪರಿಹಾರ ಯೋಜನೆಯಿಂದ 3 ಲಕ್ಷ ಪರಿಹಾರ ನೀಡಲು ಅರ್ಜಿಯನ್ನು ಸಲ್ಲಿಸಿದ್ದರು....

(KOLARA): ಬಂಗಾರಪೇಟೆ: ಮಳೆಯಿಂದ ಕುಸಿತಗೊಂಡಿದ್ದ ಮನೆಯ ಪರಿಹಾರದ ಹಣ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ತೇಜಸ್ ಭೂಷಣ್ ಲ....

(KOLARA): ಕೋಲಾರ : ಯೋಗಾ ದಿನಾಚರಣೆಯೋಗದ ಅರಿವು ಮತ್ತು ಅಭ್ಯಾಸವನ್ನು ಉತ್ತೇಜಿಸುವ ಮೂಲಕ ಇದು ಪ್ರಪಂಚದಾದ್ಯಂತ ದೈಹಿಕ ಮತ್ತು ಮಾನಸಿಕ ಯೋಗಕ್ಷೇ...
23/06/2024

(KOLARA): ಕೋಲಾರ : ಯೋಗಾ ದಿನಾಚರಣೆಯೋಗದ ಅರಿವು ಮತ್ತು ಅಭ್ಯಾಸವನ್ನು ಉತ್ತೇಜಿಸುವ ಮೂಲಕ ಇದು ಪ್ರಪಂಚದಾದ್ಯಂತ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಮುಖ್ಯ ಶಿಕ್ಷಕಿ ಎಸ್ ಸುಜಾತ ರವರು ತಿಳಿಸಿದರು. ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಮಗ್ರ ಅಭ್ಯಾಸವಾಗಿದೆ. ಅದಕ್ಕಾಗಿ ಪ್ರತಿನಿತ್ಯ ಯೋಗ ಮಾಡಿ ರೋಗ ಓಡಿಸಿ ಎಂದರು. ದೈಹಿಕ ಶಿಕ್ಷಕ ಬಿ ಸೊಣ್ಣೇ ಗೌಡ ರವರು ಮಾತನಾಡಿ ಯೋಗ ಕೇವಲ ಎರಡು ಅಕ್ಷರವಲ್ಲ, ಕುಗ್ಗಿದ ದೇಹಕ್ಕೆ ಶಕ್ತಿ ತುಂಬುವ ಯೋಗ, ಜಿಗುಪ್ಸೆ ಹುಟ್ಟಿದ ಮನಸ್ಸಿಗೆ ಹುರುಪು ಕೊಡುವುದು ಯೋಗ....

(KOLARA): ಕೋಲಾರ : ಯೋಗಾ ದಿನಾಚರಣೆಯೋಗದ ಅರಿವು ಮತ್ತು ಅಭ್ಯಾಸವನ್ನು ಉತ್ತೇಜಿಸುವ ಮೂಲಕ ಇದು ಪ್ರಪಂಚದಾದ್ಯಂತ ದೈಹಿಕ ಮತ್ತು ಮಾನಸಿಕ ಯೋಗ.....

(SHIVAMOGA): ಸೊರಬ: ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕೈ...
22/06/2024

(SHIVAMOGA): ಸೊರಬ: ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ಶಿಕಾರಿಪುರ , ಹಿರೇಕೆರೂರು, ಹಾನಗಲ್, ಬ್ಯಾಡಗಿ, ರಾಣೇಬೆನ್ನೂರು, ದಾವಣಗೆರೆ, ಹರಿಹರ, ಬಾಗಲಕೋಟೆ,ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಆರಾಧ್ಯ ದೇವಿ ರೇಣುಕಾoಬೆಯ ದರ್ಶನ ಪಡೆದರು. ರೇಣುಕಾ ತಾಯಿ ನಿನ್ನ ಆಲಯಕ್ಕೆ ಉದೋ ಉದೋ ಎಂಬ ಉದ್ಘೋಷದೊಂದಿಗೆ ಭಕ್ತಿ ಸಮರ್ಪಿಸಿದರು....

(SHIVAMOGA): ಸೊರಬ: ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ .....

(KOLARA): ಕೋಲಾರ : ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆ, ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಅತ್ಯಂತ ...
22/06/2024

(KOLARA): ಕೋಲಾರ : ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆ, ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಅತ್ಯಂತ ವಿಶ್ವಾಸಾರ್ಹ ಸಾಧನವಾಗಿ ಹೊರಹೊಮ್ಮಿದೆ ಎಂದು ವ್ಯಾಲಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಜಿ.ಗೋಪಾಲರೆಡ್ಡಿ ರವರು ತಿಳಿಸಿದರು. ತಾಲ್ಲೂಕಿನ ನರಸಾಪುರ ಗ್ರಾಮದ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿವರ್ಷ ಜೂನ್‌ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಯೋಗ ದಿನಾಚರಣೆ ರೂಢಿಯಲ್ಲಿದೆ. *"ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ"* ಎನ್ನುವುದು ಈ ವರ್ಷ ಥೀಮ್‌ ಆಗಿದೆ....

(KOLARA): ಕೋಲಾರ : ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆ, ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಅತ್ಯ....

(KOALRA): ಕೋಲಾರ: ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಕೋಲಾರದ ನೂತನ ಸಂಸದ ಎಂ ಮಲ್ಲೇಶ್ ಬಾ...
21/06/2024

(KOALRA): ಕೋಲಾರ: ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಕೋಲಾರದ ನೂತನ ಸಂಸದ ಎಂ ಮಲ್ಲೇಶ್ ಬಾಬು ತಿಳಿಸಿದರು ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಗೂ ವಿವಿಧ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2015 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಜೂನ್ 21 ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದರು....

(KOALRA): ಕೋಲಾರ: ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಕೋಲಾರದ ನೂತನ ಸಂಸದ ಎಂ ಮಲ್ಲೇಶ.....

(SHIVAMAOGA): ಶಿವಮೊಗ್ಗ ಗ್ರಾಮಾಂತರದ ಅಯನೂರಿನ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸೇರಿದ ಯೋಗಾಸಕ್ತರು, ವಿದ್ಯಾರ್ಥಿಗಳ...
21/06/2024

(SHIVAMAOGA): ಶಿವಮೊಗ್ಗ ಗ್ರಾಮಾಂತರದ ಅಯನೂರಿನ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸೇರಿದ ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡಿ ಮೈ ದಂಡಿಸಿ ಯೋಗ ದಿನವನ್ನು ಸಂಭ್ರಮಿಸಿದರು 10 ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಗ ಅಭ್ಯಾಸ ಮಾಡಿದರು. ಸೂರ್ಯೋದಯಕ್ಕೂ ಮೊದಲೇ ಯೋಗಾಸಕ್ತರು ಆಯನೂರಿನ ಸಿದ್ದೇಶ್ವರ ದೇವಸ್ಥಾನ ಬಳಿ ಆಗಮಿಸಿದರು ಬೆಳಿಗ್ಗೆ 7:00 ಅಧಿಕೃತವಾಗಿ ಚಲನೆ ದೊರಕಿತು ತಡಸನ, ವೃಕ್ಷಾಸನ, ಭುಜಂಗಾಸನ ಶಲಾಭಾಸನ, ಇನ್ನಿತರ ಅಭ್ಯಾಸವನ್ನು ಮಾಡಿದರು. ಈ ಸಂದರ್ಭದಲ್ಲಿ ಎ ವಿ ಮಂಜುನಾಥ್, ಅಣ್ಣಪ್ಪ,ವಿನಯ್ ಕುಮಾರ್, ಸರಸ್ವತಿ ಮಂಜುನಾಥ್, ಉದಯ್, ಮುರಳಿ,ನವೀನ್, ಮಂಜುನಾಥ್ ಶೆಟ್ಟಿ, ಕುಪೇಂದ್ರ,ಸವಿತಾ, ರವಿ ಇನ್ನಿತರರು ಹಾಜರಿದ್ದರು. ವರದಿ: ಸೂರಜ್ ನಾಯರ್

(SHIVAMAOGA): ಶಿವಮೊಗ್ಗ ಗ್ರಾಮಾಂತರದ ಅಯನೂರಿನ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸೇರಿದ ಯೋಗಾಸಕ್ತರು, ವಿದ್ಯಾರ್.....

(SHIVAMOGA): ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಸೊರಬದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತರಬೇ...
21/06/2024

(SHIVAMOGA): ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಸೊರಬದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಆಸಕ್ತ ಸಾರ್ವಜನಿಕರು ತಮ್ಮ ಸಮೀಪದ ಪೊಲೀಸ್ ಠಾಣೆ ಅಥವಾ DAR shivamogga ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು, ನಿಗಧಿತ ನಮೂನೆಯಲ್ಲಿ ಭರ್ತಿಮಾಡಿ, ಆಧಾರ್ ಕಾರ್ಡ್ ನ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ನ ಭಾವಚಿತ್ರದೊಂದಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 30-06-2024 ರೊಳಗೆ ಅರ್ಜಿ ಸಲ್ಲಿಸುವುದು. ವರದಿ: ಮಧು ರಾಮ್

(SHIVAMOGA): ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಸೊರಬದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, .....

(SHIVAMOGA): ಸೊರಬ: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ರಸ್ತೆ  ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರ...
20/06/2024

(SHIVAMOGA): ಸೊರಬ: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ರೈತ ವೃತ್ತದಲ್ಲಿ ಬಿಜೆಪಿ ಮಂಡಲ ಹಾಗೂ ಯುವಮೋರ್ಚಾ ನೇತೃತ್ವದಲ್ಲಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ ರಾಜ್ಯ ಸರ್ಕಾರ ಒಂದು ಕಡೆ ಉಚಿತ ಎಂದು ಗ್ಯಾರಂಟಿ ಯೋಜನೆ ಕೊಡುತ್ತಿದ್ದಾರೆ, ಮತ್ತೊಂದೆಡೆ ಬೆಲೆ ಏರಿಕೆ ಮಾಡಿ ಸುಲಿಗೆ ಮಾಡುತ್ತಿದ್ದಾರೆ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡನೀಯ, ಈಗಾಗಲೇ ಮುದ್ರಾಂಕ ಶುಲ್ಕ, ಛಾಪಾಕಾಗದಗಳ ಬೆಲೆಗಳನ್ನು ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ....

(SHIVAMOGA): ಸೊರಬ: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರ....

Address


Telephone

+919110646886

Website

Alerts

Be the first to know and let us send you an email when Western Ghat News posts news and promotions. Your email address will not be used for any other purpose, and you can unsubscribe at any time.

Contact The Business

Send a message to Western Ghat News:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share