Search Coffee

  • Home
  • Search Coffee

Search Coffee Contact information, map and directions, contact form, opening hours, services, ratings, photos, videos and announcements from Search Coffee, News & Media Website, .

11/05/2021
https://searchcoorg.blogspot.com/2020/12/blog-post_78.html
10/12/2020

https://searchcoorg.blogspot.com/2020/12/blog-post_78.html

ಕಾಫಿ ಬೆಳೆಗಾರರಿಗೆ, ಕಾಫಿ ಗುಣಮಟ್ಟದ ಮಾನದಂಡಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಕೊಯ್ಲಿನ ನಂತರದ ಕಾಫಿಯಲ್ಲಿನ ತೇವಾಂಶ ಮತ್ತು ಉತ.....

10/12/2020
19/10/2020
23/08/2020
15/08/2020
14/08/2020

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ
ಕಾಫಿ ಸಂಶೋಧನಾ ಕೇಂದ್ರ - 577 117
ಚಿಕ್ಕಮಗಳೂರು ಜಿಲ್ಲೆ - ಕರ್ನಾಟಕ
ಪ್ರವಾಹ ಪೀಡಿತ ಮತ್ತು ಮುಳುಗಡೆಯಾದ ಕಾಫಿ ತೋಟಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಕೆಲಸಗಳು.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ನಿರಂತರವಾಗಿ ಆದ ಅತಿವೃಷ್ಟಿಯಿಂದ ತಗ್ಗು ಪ್ರದೇಶಗಳಲ್ಲಿ ಇರುವ ಕೆಲವು ಕಾಫಿ ತೋಟಗಳು ಪ್ರವಾಹದಿಂದ ಭಾಗಶಃ ಅಥವಾ ಸಂಪೂರ್ಣ ಮುಳುಗಡೆಯಾಗಿ ಹಾನಿಗೊಳಗಾಗಿವೆ. ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಹಾಗೇ ಬಿಟ್ಟರೆ, ಈ ಸಮಯದಲ್ಲಿ, ಒತ್ತಡದ ಹಾರ್ಮೋನುಗಳು ಹೆಚ್ಚಾಗಿ ಅತಿಯಾದ ಎಲೆಗಳ ಮತ್ತು ಕಾಯಿಗಳ ಉದುರುವಿಕೆ, ಬೇರುಗಳ ಕೊಳೆಯುವಿಕೆ ಆಗುವುದಲ್ಲದೆ ಗಿಡಗಳು ನಿಧಾನವಾಗಿ ಸಾಯಬಹುದು. ಆದ್ದರಿಂದ ಕಾಫಿ ಬೆಳೆಗಾರರು ಕೆಳಕಂಡ ಕ್ರಮಗಳನ್ನು ತಮ್ಮ ತೋಟಗಳಲ್ಲಿ ತಕ್ಷಣ ಕೈಗೊಳ್ಳಲು ಸೂಚಿಸಲಾಗಿದೆ.
1. ಕಾಂಡದ ಸುತ್ತ ಇರುವ ದರಗು ಹೊದಿಕೆಯನ್ನು ಸರಿಸಿ ಸಾಲುಗಳ ಮಧ್ಯೆ ಇಳಿಜಾರಿನ ಉದ್ದಕ್ಕೂ ರಾಶಿ ಹಾಕಿ ಬೇರುಗಳಿಗೆ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು.
2. ತಕ್ಷಣವೇ ನೀರು ಬಸಿದು / ಹರಿದು ಹೋಗುವಂತೆ ಸಾಕಷ್ಟು ಆಳದ ಚರಂಡಿಗಳನ್ನು ತೆಗೆಯಬೇಕು.
3. ಕಾಫಿ ಗಿಡಗಳ ಒಳಗೆ ಸಾಕಷ್ಟು ಗಾಳಿಯಾಡುವಂತೆ ಅವಕಾಶ ಮಾಡಲು ಅನಗತ್ಯ ಚಿಗುರುಗಳನ್ನು ತೆಗೆದು ನೆತ್ತಿ ಬಿಡಿಸಬೇಕು.
4. ಸಾಧ್ಯವಿರುವಲ್ಲಿ ಬಾಗಿದ ಅಥವಾ ಬಿದ್ದ ಕಾಫಿ ಗಿಡಗಳನ್ನು ಸರಿಯಾದ ಆಧಾರ ಕೊಟ್ಟು ನಿಲ್ಲಿಸಬೇಕು.
5. ನೀರು ಸಂಪೂರ್ಣವಾಗಿ ಬಸಿದುಹೋದ ಒಂದು ವಾರದ ನಂತರ ಕಾಫಿ ಗಿಡಗಳ ಸುತ್ತ ಬೇರುಗಳು ಕ್ರಿಯಾಶೀಲವಾಗಲು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಚೆಲ್ಲಬೇಕು.
6. ಕೊಳೆರೋಗ ಕಂಡುಬಂದಲ್ಲಿ, 200 ಲೀಟರ್ ನೀರಿಗೆ 200 ಗ್ರಾಂ ಕಾರ್ಬನ್ ಡೈಸಿಮ್ (ಬಾವಿಸ್ಟಿನ್), 50 ಮಿಲಿ
ಪ್ಲಾನೋಫಿಕ್ಸ್ ಮತ್ತು 100 ಮಿಲಿ ಅಂಟು ದ್ರಾವಣ ಬೆರೆಸಿ ಬಾಧಿತ ಗಿಡಗಳಿಗೆ ಸಿಂಪಡಿಸಬೇಕು. ಸಿಂಪಡಿಸುವ ಮುನ್ನ ನೆಲದಲ್ಲಿ ಬಿದ್ದಿರುವ ಸೋಂಕಿತ ರೆಕ್ಕೆಗಳು, ಎಲೆಗಳು ಮತ್ತು ಕಾಯಿಗಳನ್ನು ತೆಗೆದು ಹೊರಹಾಕಬೇಕು. ಇದರಿಂದ ರೋಗ ಮತ್ತಷ್ಟು ಹರಡದಂತೆ ತಡೆದು ಸೋಂಕು ಕಡಿಮೆ ಮಾಡಬಹುದು.
7. ಸಿಂಪರಣೆಯ ನಂತರವೂ ಕೊಳೆರೋಗ ಇದ್ದಲ್ಲಿ 200 ಮಿಲಿ ಫಾಲಿಕ್ಯೂರ್ ಅಥವಾ 200 ಮಿಲಿ ಟಿಲ್ಟ್ 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಸಂಶೋಧನಾ ನಿರ್ದೇಶಕರು

13/08/2020
10/08/2020

ಬೆಳೆ ಸಮೀಕ್ಷೆ ದಾಖಲಿಸಲು ಮನವಿ
*****************
ಮಡಿಕೇರಿ ಆ.10(ಕರ್ನಾಟಕ ವಾರ್ತೆ):-ಪ್ರಸಕ್ತ(2020-21) ಸಾಲಿನಲ್ಲಿ ಸರ್ಕಾರವು ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅನುಮತಿ ನೀಡಿದ್ದು, ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಫ್ ಬಳಸಿ ಸ್ವಯಂ ಬೆಳೆ ಸಮೀಕ್ಷೆ ಮಾಡಬಹುದಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ, ವಿಸ್ತೀರ್ಣ, ನೀರಾವರಿ ಮೂಲದ ಮಾಹಿತಿಯನ್ನು ಆ್ಯಫ್ ಮೂಲಕ ಸ್ವತಃ ದಾಖಲಿಸಬಹುದು. ಮುಂಗಾರು, ಹಿಂಗಾರು ಬೇಸಿಗೆ ಹಂಗಾಮುಗಳ ಬೆಳೆ ಸಮೀಕ್ಷೆಯನ್ನು ಖಾಸಗಿ ವ್ಯಕ್ತಿಗಳ ಸಹಾಯದೊಂದಿಗೆ ಕೈಗೊಳ್ಳಲು ಅವಕಾಶ ನೀಡಿ, ಆಗಸ್ಟ್ 7 ರಂದು ರಾಜ್ಯ ಸರಕಾರ ಆದೇಶಿಸಿದೆ. ರೈತರು ಬೆಳೆ ಕುರಿತು ಮಾಹಿತಿ ದಾಖಲಿಸದೇ ಇದ್ದರೆ ಖಾಸಗಿ ವ್ಯಕ್ತಿಗಳು ಬೆಳೆ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಗಳು ಬೆಳೆ ಸಮೀಕ್ಷೆ ಕಾರ್ಯಕ್ಕೆ ನೆರವು ನೀಡಲಿದೆ.
ರೈತರ ಪಹಣಿಗಳಲ್ಲಿ ನಮೂದಾಗಿರುವ ಬೆಳೆ ಮಾಹಿತಿ ಪರಿಷ್ಕರಿಸಿ ಸ್ಪಷ್ಟತೆ ತರುವ ಸಲುವಾಗಿ ಎನ್‍ಐಸಿಯಿಂದ (ರಾಷ್ಟ್ರೀಯ ಮಾಹಿತಿ ವಿಜ್ಞಾನ) ಸಮೀಕ್ಷೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ಸಮೀಕ್ಷೆಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದ ಪರಿಣಾಮ ರೈತರು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ರೈತರೇ ಸ್ವತಃ ತಮ್ಮ ಜಮೀನಿನ ಸರ್ವೆ ನಂ, ಹಿಸ್ಸಾ ನಂ.ವಾರು ಬೆಳೆ ಮಾಹಿತಿಯನ್ನು ಜಮೀನಿನಲ್ಲಿ ನಿಂತು ಫೋಟೋ ಅಪ್ಲೋಡ್ ಮಾಡಬಹುದಾಗಿದೆ.
ಸಮೀಕ್ಷೆ ಅವಧಿ: ಆಗಸ್ಟ್ 10 ರಿಂದ 24 ರವರೆಗೆ ಮೊಬೈಲ್ ಆ್ಯಪ್‍ನಲ್ಲಿ ರೈತರು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡಬಹುದು. ರೈತರು ಆ್ಯಪ್‍ನಲ್ಲಿ ದಾಖಲೆ ಮಾಡಿದ ಬೆಳೆ ಸಮೀಕ್ಷೆಯನ್ನು ಸರಕಾರಿ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣೀಕರಿಸಲಿದ್ದಾರೆ.
ಬೆಳೆ ಸಮೀಕ್ಷೆಯಿಂದ ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ, ಬೆಳೆ ಸಾಲ ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿಗಳ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಹಾಗೂ ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು ರೈತರಿಗೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ತಿಳಿಸಿದ್ದಾರೆ.

10/08/2020

Arecanut Tree Climbing Bike

07/08/2020

ಮೋಡದಿಂದ ಮಳೆ ಸಿಂಚನ

Appangala-1, Variety Cardamom
04/08/2020

Appangala-1, Variety Cardamom

10/05/2020

Organic farming

08/05/2020

Brazilian Coffee Plantation

21/04/2020

Benefits of Good Coffee

16/04/2020

ಹಸಿ ಹಲಸಿನ ಕಾಯಿ ಒಡೆಯುವ ಸುಲಭ ಉಪಾಯ

15/04/2020

'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್_19' ಗೆ ದೇಣಿಗೆ ನೀಡುವುದರ ಮೂಲಕ #ಕೊರೊನ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಶಕ್ತಿ ತುಂಬಿ.


#ಮನೆಯಲ್ಲೇಇರಿ

Address


Alerts

Be the first to know and let us send you an email when Search Coffee posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share