16/02/2024
ಅಭಿವೃದ್ದಿ ದೃಷ್ಠಿಯಿಂದ ತುಮಕೂರು ಜಿಲ್ಲೆಯನ್ನ ವಿಭಜನೆ ಮಾಡಿ ತಿಪಟೂರು ಜಿಲ್ಲೆಯನ್ನಾಗಿ ಮಾಡಿದರೆ ವಾಣಿಜ್ಯ ನಗರವಾಗಿ ಅತ್ಯಂತ ವೇಗವಾಗಿ ಬೆಳೆಯಲಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ತೆರಿಗೆಯನ್ನ ತಂದು ಕೊಡಲಿದೆ. ಜಿಲ್ಲಾ ಕೇಂದ್ರದಿಂದ 75-80 ಕಿ ಮೀ ದೂರ ಇರುವ ತುರುವೇಕೆರೆ, ಚಿ.ನಾ ಹಳ್ಳಿ, ಅರಸೀಕೆರೆ, ತಿಪಟೂರು ಸುತ್ತಮುತ್ತಲಿನ ಭಾಗದ ವಾಣಿಜ್ಯ ಬೆಳೆಯಾದ ಕೊಬ್ಬರಿ, ತೆಂಗು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಶಾಸಕರು ಕೆ ಷಡಕ್ಷರಿ,ಕೆ ಎಂ ಶಿವಲಿಂಗೇಗೌಡ, ಮಾಜಿ ಸಚಿವರು ಬಿ ಸಿ ನಾಗೇಶ್, ಮಾಜಿ ಶಾಸಕರು ಬಿ ನಂಜಾಮರಿ, ಲೋಕೇಶ್ವರ್, ಶಶಿಧರ್, ಶಾಂತಕುಮಾರ್ ಸೇರಿದಂತೆ ಪ್ರಗತಿಪರ ಬುದ್ದಿಜೀವಿಗಳು, ಕೊಬ್ಬರಿ ತೆಂಗು ಬೆಳೆಗಾರರು ಧ್ವನಿ ಎತ್ತಬೇಕು.
#ಕೊಬ್ಬರಿ #ಜಿಲ್ಲೆವಿಭಜನೆ #ತುಮಕೂರು #ಸಿದ್ದರಾಮಯ್ಯ #ತಿಪಟೂರು #ಮದುಗಿರಿ