30/09/2024
ಶಿರಾ ನಗರದ ಪ್ರತಿಯೊಂದು ಮನೆಗೂ ನೀರು ಕೊಡುವ ಉದ್ದೇಶದಿಂದ 85.ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅತಿ ಶೀಘ್ರದಲ್ಲಿಯೇ ಚಾಲನೆಯನ್ನು ನೀಡಿ ಸಿಗಲಿದ್ದು, 1 ವರ್ಷದಲ್ಲಿ ಪ್ರತಿ ಮನೆಗೂ ಪ್ರತ್ಯೇಕ ನಲ್ಲಿ ಸೌಲಭ್ಯ ಸಿಗಲಿದೆ.
ತ್ರಿವೇಣಿ ಸಂಗಮ ಮಾಡುವ ನನ್ನ ಸಂಕಲ್ಪ ಅತಿ ಶೀಘ್ರದಲ್ಲಿಯೇ ಸಕಾರಗೊಳ್ಳಲಿದ್ದು, ಎತ್ತಿನಹೊಳೆ, ಹೇಮಾವತಿ, ಅಪ್ಪರ ಭದ್ರ ನೀರಾವರಿ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಶಿರಾ ನಗರಕ್ಕೆ 4. ಟಿಎಂಸಿ ನೀರು ಲಭ್ಯವಾಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಡಾ. ಟಿ.ಬಿ .ಜಯಚಂದ್ರ ಹೇಳಿದರು.
ಶಿರಾ ನಗರದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿದು ಕೋಡಿ ಬಿದ್ದ ಕಾರಣ ಸೋಮವಾರ ಶಿರಾ ದೊಡ್ಡ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಶಿರಾ ನಗರಸಭೆ ಅಧ್ಯಕ್ಷ ಜಿಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸೂಡಾ ಅಧ್ಯಕ್ಷ ಪಿ.ಆರ್. ಮಂಜುನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರಸಭೆ ಸದಸ್ಯರಾದ ಅಮಾನುಲ್ಲಾ ಖಾನ್, ಬುರಾನ್ ಮಹಮೂದ್, ಎಸ್. ಎಸ್. ಅಜಯಕುಮಾರ, ಮಹಮ್ಮದ್ ಜಾಫರ್, ಫಯಾಜ್ ಖಾನ್, ಕೃಷ್ಣಪ್ಪ, ರಫಿ ಉಲ್ಲಾ, ಎಸ್. ಎಲ್. ರಂಗನಾಥ್ , ನಸ್ರುಲ್ಲ ಖಾನ್, ತೇಜು ಭಾನುಪ್ರಕಾಶ, ಸಾನಿಯಾ ಖಾದರ್ , ಅಂಬ್ರಿನ್ ಪರ್ಮನ್ , ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರೆಹಳ್ಳಿ ರಮೇಶ್ ,ನಾಮ ನಿರ್ದೇಶನ ಸದಸ್ಯರಾದ ರಾಧಾಕೃಷ್ಣ, ಸುಶೀಲ , ವಾಜರಹಳ್ಳಿ ರಮೇಶ್, ವಿರುಪಾಕ್ಷ, ನಗರಸಭೆ ಆಯುಕ್ತ ರುದ್ರೇಶ್, ಮುಖಂಡ ಗುಳಿಗೆನಹಳ್ಳಿ ನಾಗರಾಜು, ಡಿ.ಸಿ. ಅಶೋಕ ,ತಹಸೀಲ್ದಾರ್ ಸಚ್ಚಿದಾನಂದ ಈಚನೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಡಿವೈಎಸ್ಪಿ ಶೇಖರ್, ಮುಖಂಡರಾದ ಆಶ್ರಯ ಸಮಿತಿ ನೂರುದ್ದೀನ್, ರಹಮತ್ , ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿದೇವಮ್ಮ, ಜಯಲಕ್ಷ್ಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.