
31/08/2023
ಇವ್ರು ಇಸ್ರೋದ ಚಂದ್ರಯಾನ ಮೂರರ ಪ್ರಾಜೆಕ್ಟ್ ಡೈರೆಕ್ಟರ್ ವೀರಮುತ್ತುವೇಲ್. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋಕೆ ಮೂರು ದಿನ ಮುಂಚೆ ಇವರ ತಂಗಿಯ ಮದುವೆ ಇತ್ತಂತೆ. ಇವರಿಗಿದ್ದ ಆಯ್ಕೆ ಎರಡು... ತಂಗಿಯ ಮದುವೆಗೆ ಹೋಗೋದು,ಅಥವಾ ಚಂದ್ರಯಾನದ ಬೆಳವಣಿಗೆಗಳನ್ನು ಇಸ್ರೋದಲ್ಲೇ ಇದ್ದು ಸೂಕ್ಷ್ಮವಾಗಿ ಗಮನಿಸೋದು. ಇವರು ಅದನ್ನೇ ಆಯ್ಕೆ ಮಾಡಿಕೊಂಡರು.. ಚಂದ್ರಯಾನದ ಯಶಸ್ಸಿನ ಹಿಂದೆ ಈ ರೀತಿಯ ಅದೆಷ್ಟು ತ್ಯಾಗಗಳು ಇದ್ದಾವೇನೋ ಅಲ್ವಾ?