05/03/2022
Agnihamsa | ಅಗ್ನಿಹಂಸ
Price : 80/-
Shipping : 36/-
Buy : https://rzp.io/l/7U5XThbiO
Contact Us:
Catalog : https://wa.me/c/919008025075
Mobile : 9008025075
WhatsApp : https://wa.me/919008025075
ರಾಷ್ಟ್ರಕವಿ ಕುವೆಂಪು ಅವರ ೪೫ ಕವಿತೆಗಳನ್ನು ಒಳಗೊಂಡ ಸಂಕಲನ. ೧೯೪೬ರಲ್ಲಿ ಈ ಸಂಕಲನ ಮೊದಲ ಬಾರಿಗೆ ಪ್ರಕಟವಾಗಿತ್ತು. ನಂತರ ಹಲವಾರು ಮುದ್ರಣಗಳನ್ನು ಕಂಡಿದೆ. ಅಗ್ನಿಹಂಸ’ದಲ್ಲಿ ಇರುವ ಕವಿತೆಗಳಲ್ಲಿ ಬಹುತೇಕ ಆಧ್ಯಾತ್ಮಿಕತೆಗೆ ಸಂಬಂಧಿಸಿದವುಗಳು. ಈ ಸಂಕಲನದಲ್ಲಿ ಮುನ್ನುಡಿ, ಬೆನ್ನುಡಿ ಅಥವಾ ಲೇಖಕರು ಮಾತು ಇಲ್ಲ. ಈ ಸಂಕಲನವನ್ನು ಕುವೆಂಪು ಅವರು ಶ್ರೀ ಸ್ವಾಮಿ ಸಿದ್ಧೇಶ್ವರಾನಂದರಿಗೆ ಅರ್ಪಿಸಿದ್ದಾರೆ. ರಾಮಕೃಷ್ಣ ಪರಮಹಂಸ ಅವರನ್ನು ಕುರಿತ ರವೀಂದ್ರನಾಥ ಠಾಕೂರ್ ಅವರ ಶ್ರೀರಾಮಕೃಷ್ಣ ಪರಮಹಂಸ ದೇವನಿಗೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಕನ್ನಡೀಕರಿಸಿದ್ದಾರೆ. ’ಅಗ್ನಿಹಂಸ’ ಈ ಸಂಕಲನ ಮೊದಲ ಕವಿತೆ. ಸ್ವಾಮಿ ವಿವೇಕಾನಂದರ ಕವಿತೆ ’ಸಂನ್ಯಾಸಿ ಗೀತೆ’ಯ ಕನ್ನಡೀಕರಣ ಇದರಲ್ಲಿ ಸೇರಿದೆ. ಫ್ರಾನ್ಸಿಸ್ ಥಾಮ್ಸನ್ ಕವಿಯ ’ದ ಹೌಂಡ್ ಆಫ್ ಹೆವನ್’ ಕವಿತೆಯ ಕನ್ನಡ ರೂಪಾಂತರ ಸೊಗಸಾಗಿದೆ. ನಿನ್ನೆಡೆಗೆ ಬರುವಾಗ, ತೇನ ವಿನಾ, ಅಂತರತಮ ನೀ ಗುರು, ಮುಚ್ಚು ಮರೆಯಿಲ್ಲದೆಯೆ, ಋತಚಿನ್ಮಯಿ ಅಂತಹ ಜನಪ್ರಿಯ ಗೀತೆಗಳು ಈ ಸಂಕಲನದಲ್ಲಿವೆ. ರಾಮಕೃಷ್ಣ ಪರಮಹಂಸ, ಶಾರದಾದೇವಿ, ವಿವೇಕಾನಂದ, ಅರವಿಂದರು, ಪರಮಹಂಸರ ಶಿಷ್ಯ ಸ್ವಾಮಿ ಶಿವಾನಂದರು ಕುರಿತ ಕವಿತೆಗಳಿವೆ. ಹಾಗೆಯೇ ಖ್ಯಾತ ಚಿತ್ರ ಕಲಾವಿದ ರೋರಿಚ್ ಚಿತ್ರಶಾಲೆ ಯನ್ನು ಕುರಿತ ಮತ್ತು ಶ್ರವಣ ಬೆಳಗೊಳದ ಗೊಮ್ಮಟನನ್ನು ಕುರಿತ ಕವಿತೆಗಳು ಈ ಸಂಕಲನದ ವಿಶೇಷ.