15/03/2023
#ಧೀರಮಾತು - 8.
ಡ್ರೈವಿಂಗ್ ಲೈಸೆನ್ಸ್ 😇
ಒಂದು ಕೈ ಸ್ಟೇರಿಂಗ್ ಮೇಲೆ , ಒಂದು ಕೈ ಗೇರ್ ಮೇಲೆ ಇಟ್ಟು ನನ್ನ ಹಳೆಯ ford Icon ಕಾರ್ ನಲ್ಲಿ ಬೇಕಾಬಿಟ್ಟಿ ತಿರುಗಾಡುತ್ತಿದ್ದ ನಾನು, ಒಬ್ಬ ಉತ್ತಮ ಡ್ರೈವರ್ ಎಂಬ ನನ್ನ ಅಹಂನ್ನು ಒಂದೇ ಕ್ಷಣಕ್ಕೆ ಇಳಿಸದವರು England ನ ನನ್ನ ಡ್ರೈವಿಂಗ್ instructor Paul..🥺
ಹೌದು... ನಾವು England ನಲ್ಲಿ ಭಾರತದ driving licence ನಲ್ಲಿ ಒಂದು ವರ್ಷ ಕಾರ್ ಓಡಿಸಬಹುದು, ನಂತರ ಇಲ್ಲಿಯ ಡ್ರೈವಿಂಗ್ ಲೈಸೆನ್ಸ್ ಬೇಕು. ಇಲ್ಲಿಗೆ ಬಂದ ಒಂದು ವರ್ಷ ನಾನು ಕಾರು ಕೊಳ್ಳಲಿಲ್ಲ ಹಾಗಾಗಿ ಕಾರ್ ಓಡಿಸಿರಲಿಲ್ಲ.ಕೆಲವು ವೈಯಕ್ತಿಕ commitments ಮುಗಿದ ನಂತರ ನನಗೂ ಇಲ್ಲಿ ಕಾರ್ ಬೇಕು, ಡ್ರೈವಿಂಗ್ ಲೈಸೆನ್ಸ್ ಬೇಕು ಎಂದಾಯಿತು. ಹಲವು ಗೆಳೆಯರು ಇಲ್ಲಿ ಸುಲಭದಲ್ಲಿ ಲೈಸೆನ್ಸ್ ಸಿಗುವುದಿಲ್ಲ ಅಂದಿದ್ದರು.online ಮುಖಾಂತರ provisional ಲೈಸೆನ್ಸ್ ಗೆ ಅರ್ಜಿ ಹಾಕಿದೆ,practical ಟೆಸ್ಟ್ ನ ಮೊದಲು theory test , ಅದಕ್ಕೆ ತಯಾರಾಗಲು ಹಲವು app ಗಳು ಇವೆ,ನನ್ನ ಒಬ್ಬ ಗೆಳೆಯ theory test ಅಲ್ಲಿ ಫೇಲ್ ಆಗಿದ್ದ,theory test ಅಲ್ಲಿ ಫೇಲ್ ಆದರೆ ಮರ್ಯಾದಿ ಇಲ್ಲ ಅಂದುಕೊಂಡು, ಚೆನ್ನಾಗಿ ಓದಿ, ಪರೀಕ್ಷೆಯಲ್ಲಿ ಪುಣ್ಯಕ್ಕೆ Just pass ಆದೆ. 😇
ಮರುದಿನವೇ Practical Driving test ಗೆ online ಮುಖೇನ Book ಮಾಡಿದೆ,4 ತಿಂಗಳು ನಂತರದ date ಸಿಕ್ಕಿತು,ಪ್ರಾಕ್ಟಿಕಲ್ test ಗೆ ಡೇಟ್ ಸಿಗಲು ಹಲವು ತಿಂಗಳು ಕಾಯಬೇಕು, ಆದರೆ ದಿನವೂ website ನಲ್ಲಿ search ಮಾಡುತ್ತಾ, ಬೇರೆಯವರು ಟೆಸ್ಟ್ cancel ಮಾಡಿದಾಗ ಸಿಗುವ ದಿನಕ್ಕೆ ನಮ್ಮ ಪರೀಕ್ಷೆಯನ್ನು prepone ಮಾಡಬಹುದು. Practical Driving test ಗೆ ಮೊದಲು driving instructor ಹುಡುಕುವುದು, ನಮ್ಮ ಸಮಯಕ್ಕೆ ಹೊಂದುವಂತೆ ಕ್ಲಾಸ್ ಪಡೆಯುವುದು ದೊಡ್ಡ ಕೆಲಸ, ಆಗ ನನಗೆ ಸಿಕ್ಕಿದವರು ಪೌಲ್ .
Provisional ಲೈಸೆನ್ಸ್ ಇದ್ದರೆ, ನಮ್ಮ ಕಾರಿನಲ್ಲಿ certified instructor ನ ಮೂಲಕ ಡ್ರೈವಿಂಗ್ ಕಲಿಯಬಹುದು, ಅಥವಾ 3 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಲ್ಲಿಯ ಲೈಸೆನ್ಸ್ ಇರುವವರನ್ನು ಕೂರಿಸಿ ನಾವು ಕಾರ್ ಓಡಿಸಬಹುದು.
ನನ್ನಲ್ಲಿ ಕಾರ್ ಇರದ ಕಾರಣ,paul ನ ಕಾರಲ್ಲಿ driving ತರಬೇತಿ ಪಡೆದುಕೊಂಡೆ, ಡ್ರೈವಿಂಗ್ ಗೊತ್ತಿದ್ದರೂ ಇಲ್ಲಿಯ ರೂಲ್ಸ್ ಕಲಿಯಲು ತರಬೇತಿ ಅತೀ ಅಗತ್ಯ. ಮೊದಲ ದಿನವೇ,ನಾನು ಸ್ಟೇರಿಂಗ್ ಹಿಡಿಯುವ ರೀತಿ, ತಿರುಗಿಸುವ ಶೈಲಿಯನ್ನು ಸರಿಪಡಿಸಿ, ಇಲ್ಲಿಯ ರಸ್ತೆಯ ನಿಯಮಗಳನ್ನು ಕಲಿಸಿದರು, 2 session ತರಬೇತಿ ಸಾಕು ಎಂದು ಯೋಚಿಸಿದ್ದ ನಾನು ಇನ್ನೂ ಕಲಿಯಲು ಬೇಕಾದಷ್ಟಿದೆ ಎಂದು ಆ ದಿನವೇ ನನ್ನ ಅರಿವಿಗೆ ಬಂದು, ಒಟ್ಟು 6 Session ತರಬೇತಿ ಪಡೆದೆ. 2 ಗಂಟೆಯ ಒಂದು session ತರಬೇತಿಗೆ 70ಪೌಂಡ್ (ಸುಮಾರು 7,000 ರೂಪಾಯಿಗಳು). 😇
ಮುಖ್ಯವಾಗಿ, ಡ್ರೈವಿಂಗ್ ಟೆಸ್ಟ್ , ಸುಮಾರು 40 ನಿಮಿಷ ಇರುತ್ತದೆ, ಕಾರ್ ಓಡಿಸುವ ಮೊದಲು TELL ME ಪ್ರಶ್ನೆಗಳನ್ನು ಕೇಳುತ್ತಾರೆ, ಉದಾ: ಕಾರಿನ ಬ್ರೇಕ್ ಸರಿ ಇದೆ ಎಂದು ಹೇಗೆ ತಿಳಿಯುತ್ತದೆ .....ಇತ್ಯಾದಿ .ನಂತರ ಸ್ವಲ್ಪ ಹೊತ್ತು Navigation ಹಾಕಿ ಅಥವಾ Signboards ನೋಡಿ ನಿರ್ದಿಷ್ಟ ಸ್ಥಳಕ್ಕೆ ಹೋಗಲು ಹೇಳುತ್ತಾರೆ. ಇದಕ್ಕೆ independent Driving ಅನ್ನುತ್ತಾರೆ. ಇದಾದ ನಂತರ examiner ಹೇಳಿದಂತೆ Driving ಮಾಡಬೇಕು, ಆ ಸಮಯದಲ್ಲಿ SHOW ME ಪ್ರಶ್ನೆಗಳನ್ನು ಕೇಳುತ್ತಾರೆ, ಉದಾ:How will you wash and clean and windscreen.?...
ಇದರೊಂದಿಗೆ forward or reverse bay Parking , parallel parking , emergency stop , ರಸ್ತೆಯ ಬಲ ಅಥವಾ ಎಡ ಬದಿಯಲ್ಲಿ ನಿಲ್ಲಿಸು ಇತ್ಯಾದಿಗಳನ್ನು ಮಾಡಿಸುತ್ತಾರೆ. ಡ್ರೈವಿಂಗ್ test ಮುಗಿದ ತಕ್ಷಣವೇ ಪಾಸ್ ಅಥವಾ ಫೇಲ್ ಹೇಳುತ್ತಾರೆ.
ವಾಹನ ಚಲಾಯಿಸುವಾಗ ಪ್ರತಿ ಸಣ್ಣ ವಿಷಯವೂ ಕೂಡ ಬಹಳ ಮುಖ್ಯ. ನಿಂತ ಸ್ಥಳದಿಂದ ವಾಹನ ಚಲಾಯಿಸುವ ಮೊದಲು ಸುತ್ತಲೂ ಕಣ್ಣ್ ಹಾಯಿಸಿ safe ಆದರೆ ಮಾತ್ರ ಮುಂದಕ್ಕೆ ಚಲಿಸುವುದು, ಮಿರರ್ ಚೆಕ್ ಮಾಡಿ signal ಹಾಕುವುದು,ಪಾದಚಾರಿಗಳಿಗೆ ಗೌರವ ಕೊಡುವುದು, ಕನಿಷ್ಠ ಅಥವಾ ಗರಿಷ್ಠ ಸ್ಪೀಡ್ ಲಿಮಿಟ್ ಇದ್ದ ಜಾಗದಲ್ಲಿ ಅದಕ್ಕೆ ತಕ್ಕಂತೆ ವಾಹನ ಚಲಾಯಿಸುವುದು ಹೀಗೆ ಪಟ್ಟಿ ದೊಡ್ಡದಿದೆ.
ಪರೀಕ್ಷೆಯಲ್ಲಿ ಒಟ್ಟು 15 ಸಣ್ಣ ತಪ್ಪುಗಳನ್ನು (ಮೈನರ್ errors ) ಮಾಡಬಹುದು,ಒಂದು major ತಪ್ಪು ಮಾಡಿದರೂ ಫೇಲ್. ನಾವು ಮಾಡಿದ ಒಂದು minor mistake ಇತರ ವಾಹನ ಚಾಲಕರಿಗೆ ತೊಂದರೆ ಆದರೆ ಆ ಮೈನರ್ mistake ಅನ್ನು ಮೇಜರ್ mistake ಎಂದು ಪರಿಗಣಿಸಲಾಗುತ್ತದೆ.
ನಾವು Manual ಕಾರ್ ನಲ್ಲಿ ಟೆಸ್ಟ್ ನೀಡಿದರೆ, ನಾವು ಆಟೋಮ್ಯಾಟಿಕ್ ಕಾರ್ ಕೂಡ ಓಡಿಸಬಹುದು, ಆದರೆ ಆಟೋಮ್ಯಾಟಿಕ್ ಕಾರ್ ನಲ್ಲಿ ಟೆಸ್ಟ್ ನೀಡಿದರೆ manual ಕಾರ್ ಓಡಿಸಲು ಲೈಸೆನ್ಸ್ ಇಲ್ಲ. ಇದರೊಂದಿಗೆ ವಿಶೇಷವಾಗಿ ನಾವು ಓಡಿಸುವ ಕಾರಿಗೆ ಇನ್ಸೂರೆನ್ಸ್ ಕಡ್ಡಾಯ, ಒಂದು ವೇಳೆ ಬೇರೆಯವರ ಕಾರ್ ಓಡಿಸುವುದಾದರೆ ಕೂಡ ನಾವು ಅದಕ್ಕೂ ಇನ್ಸೂರೆನ್ಸ್ ಮಾಡಿಸಬೇಕು. ಉದಾ: ಒಂದು ಅರ್ಧ ದಿನದ ಮಟ್ಟಿಗೆ ನನ್ನ ಗೆಳೆಯನ ಕಾರ್ ಓಡಿಸಬೇಕಾದರೆ ನಾನು ಅರ್ಧ ದಿನಕ್ಕೆ ಇನ್ಸೂರೆನ್ಸ್ ಮಾಡಿಸಬೇಕು,ಗೆಳೆಯ ಬಿಡಿ ನನ್ನ ಹೆಂಡತಿ ನನ್ನ ಕಾರ್ ಓಡಿಸಬೇಕಾದರೆ ಅವಳು ಕೂಡಾ ಬೇರೆ insurance ಮಾಡಿಸುವುದು ಕಡ್ಡಾಯ.
ನನ್ನ ಪರೀಕ್ಷೆಯನ್ನು prepone ಮಾಡಿ December ಎರಡನೇ ವಾರ,ಬಹಳ ಧೈರ್ಯದಿಂದ ಟೆಸ್ಟ್ ಅಟೆಂಡ್ ಆದೆ, ಪಾಸ್ ಆಗಬಹುದು ಎಂಬ ಧೈರ್ಯ ದಿಂದ ಟೆಸ್ಟ್ ನ ಒಂದು ವಾರ ಮೊದಲೇ ಒಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದೆ. ಆದರೆ ಮೊದಲ ಪ್ರಯತ್ನದಲ್ಲಿ ನಾನು ಫೇಲ್ ಆಗಿದ್ದೆ. Examiner ಹೇಳುವ ತನಕ ನಾನು ಯಾಕಾಗಿ ಫೇಲ್ ಆದೆ ಎಂದು ನನಗೆ ತಿಳಿದಿರಲಿಲ್ಲ, ಎಲ್ಲವೂ ಸರಿ ಆಗಿತ್ತು ಅಂದು ಕೊಂಡಿದ್ದೆ. ರಸ್ತೆಯಲ್ಲಿ ಸಾಗುವಾಗ ಸ್ವಲ್ಪ ಮುಂದಕ್ಕೆ ಎಡಕ್ಕೆ ತಿರುಗು ಎಂದು examiner ಹೇಳಿದರು, ನಾನು ಮಿರರ್ ಚೆಕ್ ಮಾಡಿ,ಸಿಗ್ನಲ್ ಕೊಟ್ಟು ಎಡಕ್ಕೆ ತಿರುಗಿಸಿ ಹೋಗಿದ್ದೆ, ಆದರೆ ಎಡಕ್ಕೆ ತಿರುಗುವಾಗ ಅಲ್ಲಿ ಒಂದು ಸ್ಲಿಪ್ ರೋಡ್ ಇತ್ತು, ನೀನು ಸ್ಲಿಪ್ ರೋಡ್ಗೆ 15ಮೀಟರ್ ಲೇಟ್ ಆಗಿ ಸೇರಿಕೊಂಡೆ ಹಾಗಾಗಿ ನಿನ್ನನ್ನು ಫೇಲ್ ಮಾಡುತ್ತಿದ್ದೇನೆ,ಐಯಾಮ್ sorry ಅಂದರು ನನ್ನ examiner. 😭.. ಅಯ್ಯೋ ದೇವರೇ ಇಷ್ಟು ಸಣ್ಣ ತಪ್ಪಿಗೆ ಫೇಲ್ ಮಾಡಿ ಬಿಟ್ರಲ್ಲ ಅಂದುಕೊಂಡರೂ,serious fault ಮಾಡಿಲ್ಲ ನಾನು ಎಂದು ಸಮಾಧಾನಿಸಿಕೊಂಡೆ. ನನ್ನ ಹಲವಾರು ಪರಿಚಿತರು ಹೀಗೆಯೇ ಸಣ್ಣ ಸಣ್ಣ ತಪ್ಪಿಗಾಗಿ 3-4 ಬಾರಿ ಫೇಲ್ ಆದವರು, ಮೊದಲ ಪ್ರಯತ್ನದಲ್ಲಿ ಪಾಸ್ ಆದವರು ಬಹಳ ವಿರಳ. Correcting simple mistakes makes us perfect,but perfection is not a simple thing...isn't it ?..
ಮತ್ತೂಮ್ಮೆ ಡ್ರೈವಿಂಗ್ ಟೆಸ್ಟ್ ಬುಕ್ ಮಾಡಿದೆ,5 ತಿಂಗಳು ಬಿಟ್ಟು, ಅಂದರೆ ಮೇ ತಿಂಗಳ ದಿನಾಂಕ ಸಿಕ್ಕಿತು, ದಿನವೂ website search ಮಾಡಿದರೆ,pre -pone ಮಾಡಿಕೊಳ್ಳಬಹುದು ಎಂಬ ಧೈರ್ಯ ಇತ್ತು.
Paul ನಿವೃತ್ತಿಯಾದ ಕಾರಣ, ನಾನು ಇನ್ನೊಬ್ಬ instructor ಅನ್ನು ಹುಡುಕಿ , ಡ್ರೈವಿಂಗ್ ಕ್ಲಾಸ್ ಬುಕ್ ಮಾಡಿಕೊಂಡೆ, ಈ ಬಾರಿ ನನ್ನ ಕಾರ್ ಇದ್ದ ಕಾರಣ, ನನ್ನ ಕಾರ್ ನಲ್ಲಿಯೇ ಕ್ಲಾಸ್ ತೆಗೆದುಕೊಂಡರು , ಹಾಗಾಗಿ 2 ಗಂಟೆಯ ಒಂದು session ಗೆ 50 ಪೌಂಡ್ ಫೀಸ್. ಅವರಲ್ಲಿ ಎರಡು session ತರಬೇತಿ ಪಡೆದೆ. ಜನವರಿ ಕೊನೆಯ ವಾರ ಊರಿಗೆ ಹೋಗುವವನಿದ್ದ ನಾನು ಅದರ ಮೊದಲು ಟೆಸ್ಟ್ ಪಾಸ್ ಆಗಬೇಕು ಎಂಬ ಹಠ ನನ್ನಲ್ಲಿ, ಹಾಗಾಗಿ ಪ್ರತೀ ದಿನ YouTube videos ನೋಡಿ ಸಾಕಷ್ಟು ತಯಾರಿ ನಡೆಸಿದೆ. ನನ್ನ ಪುಣ್ಯಕ್ಕೆ ಯಾರೋ ಟೆಸ್ಟ್ ಕ್ಯಾನ್ಸಲ್ ಮಾಡಿದ ಕಾರಣ, ಜನವರಿಗೆ ನನ್ನ ಟೆಸ್ಟ್ Prepone ಮಾಡಿಸಿಕೊಂಡೆ. ಈ ಬಾರಿ ನಾನು ಪಾಸ್ ಆಗಿದ್ದೆ 🥰. ಅಬ್ಬಾ ದೇವರೇ ಡ್ರೈವಿಂಗ್ ಲೈಸೆನ್ಸ್ ಪಡೆಯವುದು ಒಂದು ಮಹಾ ಸಾಧನೆ ಅನಿಸಿತು.
ಇಲ್ಲಿ ಪಬ್ಲಿಕ್ transport ಬಹಳ ದುಬಾರಿ, ನಮ್ಮ ಊರಿನ ಹಾಗೆ ಗಲ್ಲಿ ಗಲ್ಲಿಗೆ, ಕರೆದಾಗ ಬರುವ ಆಟೋ ಇಲ್ಲ, ಹಾಗಾಗಿ ಕಾರ್ ಬಹಳ ಅವಶ್ಯ, Car is not for luxury,it's a basic need here . 👍
ಪಾಸ್ ಆದ 5 ದಿನದಲ್ಲಿ ಊರಿಗೆ ಬಂದಿದ್ದೆ, ಈಗ ಮರಳಿ ಬಂದ ನಂತರ ಬಹಳ ಖುಷಿಯಿಂದ ಕಾರ್ ಓಡಿಸುತಿದ್ದೇನೆ. ಇಡೀ ಇಂಗ್ಲೆಂಡ್ ಸುತ್ತಬೇಕು, ಇಲ್ಲಿನ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ಮನಸ್ಸಿದೆ.. ನೋಡೋಣ.. 🙏
ಧನ್ಯವಾದಗಳು. 🙏🙏🙏
ಧೀರೇದ್ರ ಜೈನ್.