Suraj Mangaluru

Suraj Mangaluru Official Page Of Suraj Mangaluru like page for more updates

ಸಿನಿಮಾ ರಂಗಕ್ಕೆ ಅಂಬೆಗಾಲಿಟ್ಟು ಬರಲು ತಯಾರಾಗುತ್ತಿರುವ ಹೊಸ ಪ್ರತಿಭೆಗಳ 'ತೀರ್ಪು' ಕಿರುಚಿತ್ರದ ಮುಹೂರ್ತಕ್ಕೆ ಬರಬೇಕೆಂದು ಸಿನಿಮಾಟೋಗ್ರಾಫರ್ ...
03/01/2025

ಸಿನಿಮಾ ರಂಗಕ್ಕೆ ಅಂಬೆಗಾಲಿಟ್ಟು ಬರಲು ತಯಾರಾಗುತ್ತಿರುವ ಹೊಸ ಪ್ರತಿಭೆಗಳ 'ತೀರ್ಪು' ಕಿರುಚಿತ್ರದ ಮುಹೂರ್ತಕ್ಕೆ ಬರಬೇಕೆಂದು ಸಿನಿಮಾಟೋಗ್ರಾಫರ್ ಪ್ರಣೀತ್ ಕುಲಾಲ್ ಪ್ರೀತಿಯಿಂದ ಆಹ್ವಾನಿಸಿದರು.. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮುಹೂರ್ತ ಸರಳವಾಗಿ ಗಣ್ಯರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ವಾಲ್ಟರ್ ನಂದಳಿಕೆ ಉಪಸ್ಥಿತಿಯಲ್ಲಿ ಮಂಜುನಾಥನ ಸಮಕ್ಷಮದಲ್ಲಿ ನಡೆಯಿತು.. ಯುವ ಪ್ರತಿಭೆಗಳಿಗೆ ಶುಭವಾಗಲಿ 💐

ಈ ವರ್ಷಕ್ಕೆ ನಾನು ಸಿನಿಮಾ ರಂಗಕ್ಕೆ ಬಂದು 10 ವರ್ಷ ( 2014-2024) ಮೊದಲ ಸಿನಿಮಾ ದಂಡ್ ( ತುಳು ಸಿನಿಮಾ) ದಿಂದ ಇತ್ತೀಚೆಗೆ ಬಿಡುಗಡೆಯಾದ ಅನಾರ್...
31/12/2024

ಈ ವರ್ಷಕ್ಕೆ ನಾನು ಸಿನಿಮಾ ರಂಗಕ್ಕೆ ಬಂದು 10 ವರ್ಷ ( 2014-2024) ಮೊದಲ ಸಿನಿಮಾ ದಂಡ್ ( ತುಳು ಸಿನಿಮಾ) ದಿಂದ ಇತ್ತೀಚೆಗೆ ಬಿಡುಗಡೆಯಾದ ಅನಾರ್ಕಲಿ ಯ‌ ವರೆಗೆ ಹತ್ತು ವರ್ಷದಲ್ಲಿ 120+ ಸಿನಿಮಾಗಳಿಗೆ‌ ಪ್ರಚಾರಕನಾಗಿ ದುಡಿದಿದ್ದೇನೆ... 2024 ರ ಕೊನೆಯ‌ ದಿನ ಇಂದು ಈ ಸಂತಸದ ಸುದ್ದಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂದೆನಿಸಿತು.. ನಾನು ದುಡಿದ ಅಷ್ಟು ಸಿನಿಮಾಗಳಿಗೆ ಸಹಕಾರ ನೀಡಿದ ವೀಕ್ಷಕ ಪ್ರಭುವಿಗೂ ನನ್ನನ್ನು ನಂಬಿ ಕೆಲಸ ನೀಡಿದ ನಿರ್ದೇಶಕ, ನಿರ್ಮಾಪಕರಿಗೂ ಸದಾ ಬೆನ್ನುತಟ್ಟಿ ಜೊತೆಗಿದ್ದ ಕಲಾವಿದರಿಗೂ, ತಂತ್ರಜ್ಞರಿಗೂ , ಮಾಧ್ಯಮ ಮಿತ್ರರಿಗು ಹೃದಯ ತುಂಬಿ ಧನ್ಯವಾದಗಳು ❤️🙏

ಈ ಹತ್ತು ವರ್ಷದಲ್ಲಿ ನನ್ನ ಧ್ಯೇಯ ಒಂದೇ ಆಗಿತ್ತು ಮುಂದೆಯು ಅದುವೇ ಇರುತ್ತದೆ. "ಕಾಯಕವೇ ಕೈಲಾಸ" ಮಾಡುವ ಕೆಲಸದಲ್ಲಿ ಶೃದ್ಧೆ ಇಟ್ಟು ಕೆಲಸ ಮಾಡಿದರೆ ಇಂದಲ್ಲ ನಾಳೆ ಗೆಲುವು ಅನ್ನೋದು ಸಿಕ್ಕೇ ಸಿಗುತ್ತದೆ. ಎಂದೂ ಸಕ್ಸಸ್ ನ ಹಿಂದೆ ಓಡಿಲ್ಲ ನಿಯತ್ತಿನಿಂದ, ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ನನ್ನ ಕೆಲಸವನ್ನು ಮಾಡಿಕೊಂಡು ಹೋಗಿದ್ದೇನೆ. ಸಾಕಷ್ಟು ಬೇಕಾದವರೇ ತುಳಿಯುವ ಹೊಸಕಿ ಹಾಕುವ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು ನಾನು ನಂಬಿದ ದೈವ ದೇವರುಗಳು ನನ್ನ ಕೈಬಿಡಲಿಲ್ಲ.. ನಾನು ದೃತಿಗೆಡಲಿಲ್ಲ

ಹಣಕಾಸು, ಕೊಡುವುದು ತಗೊಳ್ಳುವ ವಿಚಾರಗಳಲ್ಲಿ ಸಣ್ಣಪುಟ್ಟ ಇರುಸು ಮುರುಸು ಸಾಮಾನ್ಯ... ವ್ಯಾಪಾರದಲ್ಲಿ ಇದ್ದಿದ್ದೇ... ನನ್ನಿಂದ ಯಾರಿಗಾದರೂ ಬೇಜಾರು ಆಗಿದ್ದರೆ ಕ್ಷಮಿಸಿ ಇರುವ ಮೂರು ದಿನದ ಬಾಳಿನಲ್ಲಿ ಖುಷಿಯಾಗಿ ನಗುನಗುತ್ತಾ ಬಾಳೋಣ 🤗

ನಮ್ಮೆಲ್ಲರಿಗಿಂತ ದೊಡ್ಡದು ಸಿನಿಮಾ... ಅದಕ್ಕೆ ಯಾವತ್ತು ಮೋಸ ಮಾಡಿಲ್ಲ ಮಾಡೋದು ಇಲ್ಲ.

ಮತ್ತೊಮ್ಮೆ ಎಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು ❤️🙏
ನಿಮ್ಮೆಲ್ಲರ ಶುಭ ಹಾರೈಕೆ ಆಶೀರ್ವಾದ ನನ್ನ ಕೆಲಸದ ಮೇಲೆ ಇರಲಿ ಧನ್ಯವಾದಗಳು 💐

24/12/2024

ಅತಿ ಶೀಘ್ರದಲ್ಲಿ SP Vlogs YouTube channel ನಲ್ಲಿ
ವರ್ಷದ ನಂತರ ನನ್ನ Podcast ಚಿತ್ರೀಕರಣ ಆಗಿದೆ ❤️🙏

ಒಂದು ಸಾರ್ಥಕತೆಯ ಫೀಲು ❤️ತುಳು ಹಾಸ್ಯ ಕಲಾವಿದ ಹರೀಶ್ ಕಡಂದಲೆ ಆರೋಗ್ಯ ಸಮಸ್ಯೆ ಇದೆ ಎಂದು ಕಲಾವಿದ ಉಮೇಶ್ ಮಿಜಾರ್ ಮಂಗಳೂರಿನಲ್ಲಿ ಸಿಕ್ಕಾಗ ತಿಳ...
25/11/2024

ಒಂದು ಸಾರ್ಥಕತೆಯ ಫೀಲು ❤️

ತುಳು ಹಾಸ್ಯ ಕಲಾವಿದ ಹರೀಶ್ ಕಡಂದಲೆ ಆರೋಗ್ಯ ಸಮಸ್ಯೆ ಇದೆ ಎಂದು ಕಲಾವಿದ ಉಮೇಶ್ ಮಿಜಾರ್ ಮಂಗಳೂರಿನಲ್ಲಿ ಸಿಕ್ಕಾಗ ತಿಳಿಸಿದರು ಓಕೆ ಅಣ್ಣ ಅಂದ ಮೂರೇ ದಿನಕ್ಕೆ ಕರೆ ಮಾಡಿ ತುರ್ತಾಗಿ ಹರೀಶಣ್ಣನಿಗೆ ಓಪನ್ ಹಾರ್ಟ್ ಸರ್ಜರಿ ಆಗಬೇಕು ಆಪರೇಷನ್ ಗೆ 5 ಲಕ್ಷ ರೂಪಾಯಿ ಬೇಕಾಗಬಹುದು ಅಂದಿದ್ದರು.. ಓಕೆ ಅಣ್ಣ ಯಾವಗ ಬರಬೇಕು? ಎಲ್ಲಿಗೆ ಬರಬೇಕು ಹೇಳಿ ನಾನು ನನ್ನ ತಮ್ಮ ತಕ್ಷಣ ರೆಡಿ ಎಂದೆ... ಕಳೆದ ಎರಡು ದಿನದ ಹಿಂದೆ ಹರಿಶಣ್ಣನ ಮನೆಗೆ ಭೇಟಿ ನೀಡಿ ವೀಡಿಯೋ ಮಾಡಿ ಜನರ ಸಹಾಯ ಕೇಳಿದ್ದೆವು.. ಅತಿ ದೊಡ್ಡ ಸಂಖ್ಯೆಯಲ್ಲಿ ಪ್ರಚಾರ ಸಿಕ್ಕಿ ಮೂರೇ ದಿನಕ್ಕೆ 5 ಲಕ್ಷ ರೂಪಾಯಿ ಒಟ್ಟಾಗಿದೆ ❤️ ಈ ಪ್ರೀತಿಗೆ ಏನು ಹೇಳಲಿ ಮಾತು ಹೊರಡುತ್ತಿಲ್ಲ 🥺 ಭಾವುಕನಾಗಿದ್ದೇನೆ

ಕಲಾವಿದನ ಸಂಕಷ್ಟಕ್ಕೆ ಜನರು ನೀಡಿದ ಪ್ರತಿಕ್ರಿಯೆ ನೋಡಿ ಮೂಕ ಸ್ಥಬ್ದ ಹರೀಶಣ್ಣನಿಗೆ ವಾರದ ಒಳಗೆ ಓಪನ್ ಹಾರ್ಟ್ ಸರ್ಜರಿ ಅವರು ಬೇಗ ಹುಷಾರಾಗಿ ಬರಲಿ ಎಂದು ಪ್ರಾರ್ಥಿಸಿ ಅಷ್ಟೇ ❤️🙏

ಜನರು ನೀಡಿ ಪ್ರೀತಿಗೆ ಒಂದೊಂದು ರೂಪಾಯಿ ಗು ಕೋಟಿ ಕೋಟಿ ವಂದನೆ

ಹೊಸ ಅಥಿತಿಯ ಆಗಮನ ❤️ದೈವ ದೇವರ , ಅಪ್ಪ ಅಮ್ಮನ ಆಶೀರ್ವಾದ 🙏ನಿಮ್ಮೆಲ್ಲರ ಪ್ರೀತಿಯ ಹಾರೈಕೆ ❤️🙏
20/11/2024

ಹೊಸ ಅಥಿತಿಯ ಆಗಮನ ❤️

ದೈವ ದೇವರ , ಅಪ್ಪ ಅಮ್ಮನ ಆಶೀರ್ವಾದ 🙏
ನಿಮ್ಮೆಲ್ಲರ ಪ್ರೀತಿಯ ಹಾರೈಕೆ ❤️🙏

“ಭಘೀರ” ಸಿನಿಮಾದ ಕಲಾವಿದೆ ಸೌಮ್ಯ ಸುಧೀಂದ್ರ ರಾವ್ ಅವರ ವಿಶೇಷ ಸಂದರ್ಶನ ಇದಾಗಲೇ ನಮ್ಮ Bombat Cinema Channel ನಲ್ಲಿ ಬಿಡುಗಡೆ ಆಗಿದೆ 😍🙌🏻ಭರ...
15/11/2024

“ಭಘೀರ” ಸಿನಿಮಾದ ಕಲಾವಿದೆ ಸೌಮ್ಯ ಸುಧೀಂದ್ರ ರಾವ್ ಅವರ ವಿಶೇಷ ಸಂದರ್ಶನ ಇದಾಗಲೇ ನಮ್ಮ Bombat Cinema Channel ನಲ್ಲಿ ಬಿಡುಗಡೆ ಆಗಿದೆ 😍🙌🏻

ಭರತನಾಟ್ಯಂ ಹಿನ್ನೆಲೆ ಇರುವ ಸೌಮ್ಯ ಸುಧೀಂದ್ರ ರಾವ್ ಅವರು ಇದೀಗ ಭಘೀರ ಸಿನಿಮಾದಲ್ಲಿ ಕರ್ನಾಟಕ ಜನತೆಗೆ ದೊಡ್ಡ ಮಟ್ಟದಲ್ಲಿ ಪರಿಚಯವಾಗಿದ್ದಾರೆ, ಇವರ ಸಿನಿಮಾ ಕೆರಿಯರ್ ಗೆ ಶುಭವಾಗಲಿ 💐

ಮರೆಯಲಾಗದ ಶುಭ ಸಂಜೆಯೊಳಗೆ ಖ್ಯಾತ ನಾಟಕಕಾರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸರ್ ಕರೆ ಬಂತು ಇಂದು ಸಂಜೆ ಅವರ ಇತ್ತೀಚೆಗೆ ಗೃ...
13/11/2024

ಮರೆಯಲಾಗದ ಶುಭ ಸಂಜೆಯೊಳಗೆ

ಖ್ಯಾತ ನಾಟಕಕಾರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸರ್ ಕರೆ ಬಂತು ಇಂದು ಸಂಜೆ ಅವರ ಇತ್ತೀಚೆಗೆ ಗೃಹ ಪ್ರವೇಶ ಗೊಂಡ 'ನಿತ್ಯಾನಂದ ಕುಟೀರ' ಮನೆಗೆ ಶ್ರೀ ವಿಜಯಾನಂದ ಸ್ವಾಮೀಜಿ ನಿತ್ಯಾನಂದ ಆಶ್ರಮ ಆನಂದಾಶ್ರಮ ಬೇವಿನಕೊಪ್ಪ ಬೆಳಗಾವಿಯಿಂದ ಬರುತ್ತೀದ್ದಾರೆಂದು.. ತಮ್ಮನ ಜೊತೆಗೆ ನಿತ್ಯಾನಂದ ಸ್ವಾಮಿಯ ಸಂಜೆಯ ಪೂಜೆಗೆ ಜೊತೆ ಸೇರಿ ಆಶೀರ್ವಾದ ಪಡೆದು ಬಂದೆವು ಒಂದು ವಿಶೇಷ ಅನುಭವ ❤️

ವಿಶೇಷ ಅನುಭವಕ್ಕೆ ಅವಕಾಶ ನೀಡಿದ ವಿಜಯಣ್ಣನಿಗೆ ಧನ್ಯವಾದಗಳು 🙏

ಖ್ಯಾತ ನಾಟಕಕಾರ, ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅಣ್ಣನವರ ಹೊಸ ಮನೆಯ ಗೃಹಪ್ರವೇಶದಲ್ಲಿ ಶುಭಾಶಯಗಳು 💐
25/10/2024

ಖ್ಯಾತ ನಾಟಕಕಾರ, ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅಣ್ಣನವರ ಹೊಸ ಮನೆಯ ಗೃಹಪ್ರವೇಶದಲ್ಲಿ ಶುಭಾಶಯಗಳು 💐

25/10/2024

ಮುಂಬೈ ನ ಸ್ನೇಹಿತರಿಗೆ ನಮಸ್ಕಾರ 🙏

"ವಾ ಗಳಿಗೆಡ್ ಪುಟುದನ" ತುಳು ನಾಟಕದ ವಿಶೇಷ ಪ್ರದರ್ಶನದ ಪ್ರಚಾರಕ್ಕೆ ಮುಂಬೈಗೆ ನಾಳೆ ಬರುತ್ತಿದ್ದೇನೆ . ಬಂಟರ ಭವನ ಕುರ್ಲಾ ( ಪೂ) ಮುಂಬೈ ಇಲ್ಲಿ ಅಕ್ಟೋಬರ್ 27ನೇ ಆದಿತ್ಯವಾರ ಮಧ್ಯಾನ ಒಂದು ಗಂಟೆಗೆ ವಾ ಗಳಿಗೆಡ್ ಪುಟುದನ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ವಿಶೇಷ ಪ್ರದರ್ಶನ ಇದೆ ತಪ್ಪದೆ ಬನ್ನಿ ಸಿಗೋಣ ಮಾತನಾಡೋಣ 😍 🤝

ಅವಕಾಶ ನೀಡಿದ ಕನ್ನಡ ಸಂಘ ಸಾಯನ್ ಮುಂಬೈನ ಅಧ್ಯಕ್ಷರಾದ ಡಾ MJ ಪ್ರವೀಣ್ ಭಟ್ ಹಾಗೂ ಕಲಾವಿದ ಸಂದೀಪ್ ಶೆಟ್ಟಿ ರಾಯಿಯವರಿಗೆ ವಿಶೇಷ ಧನ್ಯವಾದಗಳು 🙏

ನಿನ್ನೆ ಮನಸ್ಸಿನ ಸಂತಸಕ್ಕೆ ಪಾರವೇ ಇರಲಿಲ್ಲ.. ❤️ ಕಾರಣ 7 ವರ್ಷಗಳಿಂದ ಮನಸ್ಸು ಹೋಗು ಹೋಗು ಎನ್ನುತ್ತಿದ್ದ.. "ಕವಿಮನೆ" ಆ ಪುಣ್ಯ ಸ್ಥಳಕ್ಕೆ ಮನ...
22/10/2024

ನಿನ್ನೆ ಮನಸ್ಸಿನ ಸಂತಸಕ್ಕೆ ಪಾರವೇ ಇರಲಿಲ್ಲ.. ❤️ ಕಾರಣ 7 ವರ್ಷಗಳಿಂದ ಮನಸ್ಸು ಹೋಗು ಹೋಗು ಎನ್ನುತ್ತಿದ್ದ.. "ಕವಿಮನೆ" ಆ ಪುಣ್ಯ ಸ್ಥಳಕ್ಕೆ ಮನಸಾರೆ ಖುಷಿಯಿಂದ ಭೇಟಿ ನೀಡಿದೆ. ನಿಸರ್ಗದ ಮಡಿಲಲ್ಲಿ ಒಂದು ಚಂದದ ಗುತ್ತಿನ ಮನೆ, ಮನೆಯ ಹಿಂದೆ ಹಚ್ಚ ಹಸುರಿನ ನಡುವೆ ನಿಧಾನವಾಗಿ ಉಕ್ಕುತ್ತಿರುವ ಮಂಜು, ಪ್ರಶಾಂತ ವಾತಾವರಣ, ಹನಿ ಮಳೆ ಅಲ್ಲಿ ಕನ್ನಡದ ಶ್ರೇಷ್ಠ ಜೀವವೊಂದು ಬಾಳಿ ಬದುಕಿದೆ ಎಂದು ಎನಿಸುವಾಗಲೆ ಆಹಾ.. ಆ ಖುಷಿಯನ್ನು ವರ್ಣಿಸುವುದು ಕಷ್ಟ.. ಮನಸ್ಸಿಗೊಂತರದ ಸಂತೃಪ್ತಿ 😍🙌🏻

ಒಂಥರಾ ಮನಸ್ಸು ಹಗರುವಾಯಿತು.. ಕವಿ ಮನೆ ನಂಗೆ ಸ್ವರ್ಗದಂತೆ ಫೀಲ್ ಆದದ್ದು ಸುಳ್ಳಲ್ಲ ಪ್ರತಿಹೆಜ್ಜೆ ಇಡುವಾಗಲು ಭಾವಕನಾಗಿದ್ದೆ ಆ ಪುಣ್ಯಾತ್ಮದ ಸಾಧನೆ , ಬರಹಗಳು, ವಿಶೇಷ ಭಾವಚಿತ್ರ, ಹಿತನುಡಿಗಳನ್ನು ನೋಡಿ ಓದಿ ಸಂಪೂರ್ಣವಾಗಿ ಕಣ್ತುಂಬಿಕೊಂಡೆ. ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ರಾಷ್ಟ್ರ ಕವಿ ಕುವೆಂಪು ಅವರ ಸಾಧನೆಯ ಮೇಲೆ ಅಪಾರ ಗೌರವ.. ನಾನೆನು ಓದುಗಾರನಲ್ಲ ಆದರು‌ ಆ ಮನೆಯಲ್ಲಿ ಓಡಾಡುವಾಗ ಮನಸ್ಸಲ್ಲಿ ಭೇಡಿಕೊಂಡದ್ದು ಇಷ್ಟೆ ಅವರಲ್ಲಿದ್ದ ಅಗಾಧ ಅಕ್ಷರ ಸಂಪತ್ತಿನ .1% ನನಗೂ ಒಲಿಯಲಿ ಎಂದು... ಕವಿ ಮನೆಗೆ ಭೇಟಿ ನೀಡಿ ಜೀವನ ಪಾವನವಾಯಿತು...

ನವೀನ್ ಅಣ್ಣನ ಜೊತೆಗೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ❤️🙌🏻ಮಂಗಳೂರಿನ ಅಡ್ಯಾರು ಸಾಹ್ಯಾದ್ರಿ ಕಾಲೇಜಿನ ಮುಂಭಾಗ ಜ್ಞಾನಮೂರ್ತಿ ವೀರಾಂಜನ...
07/10/2024

ನವೀನ್ ಅಣ್ಣನ ಜೊತೆಗೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ❤️🙌🏻

ಮಂಗಳೂರಿನ ಅಡ್ಯಾರು ಸಾಹ್ಯಾದ್ರಿ ಕಾಲೇಜಿನ ಮುಂಭಾಗ ಜ್ಞಾನಮೂರ್ತಿ ವೀರಾಂಜನೇಯ ಸ್ವಾಮಿಯ ಬಹಳ ದೊಡ್ಡ ದೇವಸ್ಥಾನ ಒಂದು ನಿರ್ಮಾಣ ಹಂತದಲ್ಲಿದೆ.. ಈಗಾಗಲೇ 50 % ಕೆಲಸಗಳು ಮುಗಿದಿದ್ದು ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಅರ್ದಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. 10 ಕೈಗಳು ಸೇರಿ ಒಂದು ದೊಡ್ಡ ಮಹಾನ್ ಕಾರ್ಯ ನಡೆಸುವುದು ಪ್ರತಿತಿ ಹಾಗಾಗಿ ಈ ಕೆಳಗಡೆ ನೀಡಿರುವ ದೇವಸ್ಥಾನದ ಖಾತೆಗೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಿ ಯಾಕೆಂದರೆ ಈಗಾಗಲೇ ಎರಡುವರೆ ಕೋಟಿ ರೂಪಾಯಿ ಖರ್ಚಾಗಿದ್ದು ದೇವಸ್ಥಾನ ಪೂರ್ಣಗೊಳ್ಳಲು ಇನ್ನೂ ಒಂದುವರೆ ಕೋಟಿ ರೂಪಾಯಿಯ ಅವಶ್ಯಕತೆ ಇದೆ. ನಾನು ನನ್ನ ಪುಟ್ಟ ಸೇವೆಯನ್ನು ನೀಡಿರುವೆ ನೀವು ಕೈಜೋಡಿಸಿ 🙏

Bank Details For Donations:
Sri Veeranjaneya Swami Devastana Punar Nirmana Samithi
AC No : 60435192699
IFSC Code : MAHB0001451
Bank Of Maharashtra Adyar Branch

ಹೆಚ್ಚಿನ ಮಾಹಿತಿಗೆ ಕರೆ ಮಾಡಿ
Ramesh Tumbe 9448101952 , Purushottam Bhandari 9845172865

ಜೈ ಹನುಮಾನ್ 🧡🙏

ತುಳು ಭಾಷೆಯ ಪ್ರಖ್ಯಾತ ಯೂಟ್ಯೂಬರ್ ನನ್ನ ಆತ್ಮೀಯರಾದ ಸಚಿನ್ ಶೆಟ್ಟಿ ಶಟರ್ ಬಾಕ್ಸ್ ರವರ 17 ರಾಜ್ಯ 14000+ ಕಿಮೀ ದೂರದ discover north east ...
05/10/2024

ತುಳು ಭಾಷೆಯ ಪ್ರಖ್ಯಾತ ಯೂಟ್ಯೂಬರ್ ನನ್ನ ಆತ್ಮೀಯರಾದ ಸಚಿನ್ ಶೆಟ್ಟಿ ಶಟರ್ ಬಾಕ್ಸ್ ರವರ
17 ರಾಜ್ಯ 14000+ ಕಿಮೀ ದೂರದ discover north east ರೈಡಿಗೆ ಶುಭವಾಗಲಿ 💐

ದೈವ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಆರಾಮವಾಗಿ ಹೋಗಿ ಬನ್ನಿ 🙌🏻

ಆತ್ಮೀಯರಾದ ಚೇತನ್ ಶೆಟ್ಟಿಯವರ ಹೊಸ ಮನೆಯ ಗೃಹಪ್ರವೇಶದಲ್ಲಿ ತಮ್ಮನ ಜೊತೆಗೆ ಶುಭವಾಗಲಿ ಚೇತನಣ್ಣ 💐
11/07/2024

ಆತ್ಮೀಯರಾದ ಚೇತನ್ ಶೆಟ್ಟಿಯವರ ಹೊಸ ಮನೆಯ ಗೃಹಪ್ರವೇಶದಲ್ಲಿ ತಮ್ಮನ ಜೊತೆಗೆ

ಶುಭವಾಗಲಿ ಚೇತನಣ್ಣ 💐

“ಧರ್ಮ ದೈವ” ತುಳು ಸಿನಿಮಾದ ದೊಡ್ಡ ಶಕ್ತಿ ನಟನೆಯಲ್ಲಿ ನಟ ಭಯಂಕರ ರಮೇಶ್ ರೈ ಕುಕ್ಕುವಳ್ಳಿ ಅವರ ಜೊತೆಗೆ ಸಿನಿಮಾದ ವಿಶೇಷ ಸಂದರ್ಶನ ಮಾಡುವ ಸಂದರ್...
07/07/2024

“ಧರ್ಮ ದೈವ” ತುಳು ಸಿನಿಮಾದ ದೊಡ್ಡ ಶಕ್ತಿ ನಟನೆಯಲ್ಲಿ ನಟ ಭಯಂಕರ ರಮೇಶ್ ರೈ ಕುಕ್ಕುವಳ್ಳಿ ಅವರ ಜೊತೆಗೆ ಸಿನಿಮಾದ ವಿಶೇಷ ಸಂದರ್ಶನ ಮಾಡುವ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ❤️🙌🏻

ಚಿತ್ರ ಎಲ್ಲಾ ಕಡೆ ಅಮೋಘ ಪ್ರದರ್ಶನ ಕಾಣುತ್ತಿದೆ ಇಡೀ ತಂಡಕ್ಕೆ ಶುಭವಾಗಲಿ 💐

ಬಾಲ ನಟನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖಾಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಆ ಪುಟ್ಟ ಹುಡುಗ ದಡ್ಡ ಪ್ರವೀಣ... ಇದೀಗ ಸಿನಿಮಾ ಹ...
23/06/2024

ಬಾಲ ನಟನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖಾಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಆ ಪುಟ್ಟ ಹುಡುಗ ದಡ್ಡ ಪ್ರವೀಣ... ಇದೀಗ ಸಿನಿಮಾ ಹೀರೋ "ಆರಟ" ಕಳೆದ ಶುಕ್ರವಾರ ಬಿಡುಗಡೆಯಾದ ರಂಜನ್ ಕಾಸರಗೋಡು ಹೀರೋ ಆಗಿ ನಟಿಸಿರುವ ಎರಡನೇ ಸಿನಿಮಾ... ದಿನೇ ದಿನೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ..

ಈ ಸಿನಿಮಾ ಪ್ರಚಾರದ ಕುರಿತಾಗಿ ಸಂದರ್ಶನ ನಡೆಯುವ ಸಂದರ್ಭ ತೆಗೆದ ಫೋಟೋ ಇದು... ಉತ್ತಮ ಭವಿಷ್ಯವಿದೆ ಈ ಹುಡುಗನಿಗೆ ಸಿನಿಮಾ ರಂಗದಲ್ಲಿ ಶುಭವಾಗಲಿ 💐

ತುಳು ನಾಟಕ, ಸಿನಿಮಾ ರಂಗದ ಹೆಸರಾಂತ ಕಲಾವಿದ ಚೇತನ್ ರೈ ಮಾಣಿ ಅವರ ಮಗಳು ವೆನ್ಯ ರೈ "ಆರಟ" ಕನ್ನಡ ಸಿನಿಮಾ ಮೂಲಕ ಹೀರೋಯಿನ್ ಆಗಿ ಕನ್ನಡ ಚಿತ್ರರಂ...
21/06/2024

ತುಳು ನಾಟಕ, ಸಿನಿಮಾ ರಂಗದ ಹೆಸರಾಂತ ಕಲಾವಿದ ಚೇತನ್ ರೈ ಮಾಣಿ ಅವರ ಮಗಳು ವೆನ್ಯ ರೈ "ಆರಟ" ಕನ್ನಡ ಸಿನಿಮಾ ಮೂಲಕ ಹೀರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಇಂದು ಪಾದಾರ್ಪಣೆ ಮಾಡುತ್ತಿದ್ದಾಳೆ...

ಆರಟ ಕನ್ನಡ ಸಿನಿಮಾ ಇಂದು ಕರ್ನಾಟಕದಾದ್ಯಂತ ಬಿಡುಗಡೆ ಆಗಿದೆ. ಶುಭವಾಗಲಿ 💐

When you give joy to other people, you get more joy in return. 😊✌️
13/06/2024

When you give joy to other people, you get more joy in return. 😊✌️

Live life to the fullest, and focus on the positive ❤️🙌🏻
17/05/2024

Live life to the fullest, and focus on the positive ❤️🙌🏻

Address

Mangalore

Alerts

Be the first to know and let us send you an email when Suraj Mangaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to Suraj Mangaluru:

Videos

Share

Category