PUBLiC TV Karavali

PUBLiC TV Karavali ಪಬ್ಲಿಕ್‌ ಟಿವಿ ಕರಾವಳಿ

09/07/2024

ಉಡುಪಿಯ ಕಾಪುವಿನಲ್ಲಿರುವ ಮಾರಿಗುಡಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಪತ್ನಿ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ SKY ಪತ್ನಿ ದೇವಿಶಾ ಶೆಟ್ಟಿ, ನಮ್ಮ ಹರಕೆ ಸೇವೆ ಇರಲಿಲ್ಲ ಎಂದು ಹೇಳಿದರು.

09/07/2024

ತುಳುವಿನಲ್ಲಿ 'ಕಾಪುದ ಅಮ್ಮ' ಎಂದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌

09/07/2024

T20 ವಿಶ್ವಕಪ್‌ ಫೈನಲ್‌ ಕ್ಯಾಚ್‌ ಬಗ್ಗೆ SKY ಹೇಳಿದ್ದೇನು..?

09/07/2024

ಉತ್ತರ ಕನ್ನಡ ಜಿಲ್ಲೆಯ ಅಸ್ನೋಟಿಯಲ್ಲಿ ಭಾರೀ ಮಳೆಯಿಂದಾಗಿ ಕೃಷಿ ಭೂಮಿ ಜಲಾವೃತವಾಗಿದೆ.

09/07/2024

ಮಂಗಳೂರಿನಲ್ಲಿ ಉಕ್ಕಿ ಹರಿದ ನಂದಿನಿ ನದಿ - ನದಿ ಪಾತ್ರದ ಜನರಿಗೆ ಎಚ್ಚರಿಕೆ

09/07/2024

ಕಾಪು ಮಾರಿಗುಡಿಗೆ ಕ್ರಿಕೆಟಿಗ ಸೂರ್ಯಕುಮಾರ್‌ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಹಾಗೂ ಕುಟುಂಬ ಸದಸ್ಯರ ಜೊತೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ, ದೇವಿಯ ದರ್ಶನ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ - ನಾಳೆಯೂ ಶಾಲಾ ಕಾಲೇಜಿಗೆ ರಜೆ ಘೋಷಣೆ
08/07/2024

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ - ನಾಳೆಯೂ ಶಾಲಾ ಕಾಲೇಜಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಗಿರಿತಾಣ, ಶಿಖರಗಳಿಗೆ ಚಾರಣ ನಿಷೇಧ ☞
06/07/2024

ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಗಿರಿತಾಣ, ಶಿಖರಗಳಿಗೆ ಚಾರಣ ನಿಷೇಧ ☞

ನದಿ‌, ಸಮುದ್ರ ತೀರದಲ್ಲಿ ಮೋಜು ಮಸ್ತಿಗೂ ತಡೆ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿ....

06/07/2024

ಉಡುಪಿ ಜಿಲ್ಲೆಯಾದ್ಯಂತ ಮಳೆಯೋ ಮಳೆ

06/07/2024

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ನದಿ ನೀರು ಉಕ್ಕಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯ ಚಾವಣಿಯಲ್ಲಿ ಕುಳಿತು ವೃದ್ಧೆ ಜೀವ ಉಳಿಸಿಕೊಂಡರೆ, ಮಳೆಯಿಂದ ಮನೆಯಲ್ಲಿದ್ದ ಔಷಧ ನೀರುಪಾಲಾಗಿ ಅಸ್ವಸ್ಥತೆಗೊಳಗಾದ ಮಹಿಳೆ, ಜೀವ ಕೈಯಲ್ಲಿ ಹಿಡಿದು ಬದುಕಿ ಬಂದ ಮಕ್ಕಳು ಇದೀಗ ಚಿಕನಗೋಡಿನ ಶಾಲೆಯ ಕಾಳಜಿ ಕೇಂದ್ರದಲ್ಲಿ 45 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ.

06/07/2024

ಧಾರಾಕಾರ ಮಳೆ, ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳಿಗೆ ನೀರು - ಕಾರವಾರದ ಅರಗಾದಲ್ಲಿ ಹಲವು ಮನೆಗಳು ಜಲಾವೃತ - ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ನೀರು ಸಮುದ್ರಕ್ಕೆ ಸರಾಗವಾಗಿ ಹರಿದುಹೋಗದ ಪರಿಣಾಮ ಜಲಾವೃತ

06/07/2024

ಮಂಗಳೂರಿನಲ್ಲಿ‌ ಮಳೆಯಿಂದಾಗಿ ಗುಡ್ಡ ಕುಸಿತಗಳು ಅಲ್ಲಲ್ಲಿ ಆಗುತ್ತಲೇ ಇದೆ. ಮಂಗಳೂರು ಹೊರವಲಯದ ವಾಂಮಜೂರ್‌ನ ಕೆತ್ತಿಕ್ಕಲ್‌ನಲ್ಲಿ ಗುಡ್ಡ ಕುಸಿಯುವ ಆತಂಕ‌ ಎದುರಾಗಿದೆ. ಮಂಗಳೂರು - ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ 169ರಲ್ಲಿರುವ ಕೆತ್ತಿಕ್ಕಲ್ ಗುಡ್ಡ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಲ್ಲಲ್ಲಿ ಗುಡ್ಡ ಅಗೆತ ಆಗಿದಿದ್ದು ಮಳೆ ಹಿನ್ನಲೆಯಲ್ಲಿ ಇದೀಗ ಗುಡ್ಡ ಕುಸಿದು ರಸ್ತೆ ಮೇಲೆ ಬೀಳುವ ಅಪಾಯ ಎದುರಾಗಿದೆ.

06/07/2024

ಬೆಳ್ಳಂಬೆಳಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ವಿಮ್ಮಿಂಗ್

ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯುಸಿವರೆಗಿನ ಕಾಲೇಜಿಗೆ ಜುಲೈ 6ರಂದು ರಜೆ‌ ಘೋಷಿಸಲಾಗಿದೆ. ಭಾರೀ ಮಳೆ ಸ...
05/07/2024

ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯುಸಿವರೆಗಿನ ಕಾಲೇಜಿಗೆ ಜುಲೈ 6ರಂದು ರಜೆ‌ ಘೋಷಿಸಲಾಗಿದೆ. ಭಾರೀ ಮಳೆ ಸಾಧ್ಯತೆಯಿಂದ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ರಜೆ.

04/07/2024

ಉಡುಪಿ ಜಿಲ್ಲೆಯ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನವೂ ಜಲಾವೃತ

04/07/2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಚಂಡಿಕಾ ಹೊಳೆ ನೀರು ಹರಿದು ನೀರಿನ ಮಧ್ಯದಲ್ಲೇ ನಿಂತ ಬಸ್ - ಆರಂಭದಲ್ಲಿ ಇದರಿಂದಾಗಿ ಕುಮಟಾ-ಶಿರಸಿ ಸಂಚಾರದಲ್ಲಿ ವ್ಯತ್ಯಯವಾದರೂ ಬಳಿಕ ನೀರಿನ ಪ್ರಮಾಣ ಇಳಿಕೆಯಾದ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

04/07/2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಕಾರವಾರ - ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ಸಮಸ್ಯೆಯಾಗಿದೆ.,

Address

Mangalore

Website

Alerts

Be the first to know and let us send you an email when PUBLiC TV Karavali posts news and promotions. Your email address will not be used for any other purpose, and you can unsubscribe at any time.

Videos

Share