The Saffron Productions

The Saffron Productions We produce content what u like to watch.

14/03/2023

Tirugu Bana | ತಿರುಗುಬಾಣ

02/03/2023

ಅಂತರಾಳ - ಇದು ಆಂತರ್ಯದ ನೋವಿನ ಕಥೆ
ಈ ವಾರದ ಅತಿಥಿ : - ಜಾನಪದ ಕಲಾವಿದ ಯಶೋಧರ ಕುಂದರ್ ಎರ್ಮಾಳ್ ಬಡಾ

02/03/2023

ನೀರಿಲ್ಲ.. ದಾರಿಯಿಲ್ಲ.. ಕುಡಿಯೋ ನೀರಿಗೂ ತತ್ವಾರ ನಡೆಯೋ ದಾರಿಗೂ ಪುಟ್ಟ ಮಗುವಿನ ಹಾಹಾಕಾರ...

ಎಷ್ಟೇ ವರ್ಷ ಅಧಿಕಾರದಲ್ಲಿದ್ದರೂ ಮೂಲಭೂತ ಸೌಕರ್ಯಗಳನ್ನೆ ನೀಡಿಲ್ಲ..
ಇದು ನಮ್ಮೂರಿನ ಕತೆ.. ಚುನಾವಣಾ ಅಖಾಡದಲ್ಲಿ ಶಾಸಕರ ಪೈಪೋಟಿ..
ಮತದಾರ ಬಂಧುಗಳ ಪರ ವಿರೋಧಗಳ ಜಟಾಪಟಿ..
ಜನಸ್ಪಂದನ ಅತೀ ಶೀಘ್ರದಲ್ಲಿ ನಿಮ್ಮ ಸ್ಪಂದನವಾಹಿನಿಯಲ್ಲಿ

01/03/2023

Tirugu Bana | ತಿರುಗುಬಾಣ
ಈ ವಾರದ ಅತಿಥಿ : ಮೋಹನ್ ಭಟ್ - ಶ್ರೀರಾಮ ಸೇನೆ ಮಂಗಳೂರು ವಿಭಾಗದ ಉಚ್ಚಾಟಿತ ಅಧ್ಯಕ್ಷರು

27/02/2023

ಮಂಗಳೂರು : ಕಂಕನಾಡಿ ಗರಡಿ ಕ್ಷೇತ್ರ ೧೫೦ ಸಂಭ್ರಮದಲ್ಲಿ ಇದ್ದು , ಈ ಸಂಭ್ರಮವನ್ನ ಬಹಳ ಅದ್ದೂರಿಯಾಗಿ ಆಚರಣೆ ಮಾಡಲು ಸಮಿತಿ ತೀರ್ಮಾನಿಸಿದ್ದು , ಮಾರ್ಚ್ ೩ ರಂದು ಹೊರೆಕಾಣಿಕೆ, ೬ರಂದು ಬ್ರಹ್ಮ ಕಳಶ, ೭ರಂದು ನಾಗಮಂಡಲ ಸಹಿತ ಕ್ಷೇತ್ರದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಐತಿಹಾಸಿಕವಾಗಲಿದೆ ಎಂದರು. ಮತ್ತಿತರ ವಿಷಯಗಳ ಬಗ್ಗೆ ಸಂಘಟಕರಾದ, ಕಿಶೋರ್ ಕುಮಾರ್, ಮೋಹನ್ ಉಜ್ಜೋಡಿ, ವಿಠ್ಠಲ, ವಾಮನ, ಜಗದೀಪ್, ದಿನೇಶ್ ಅಂಚನ್, ವಿಜಯ ಸಹಿತ ಮತ್ತಿತರರು ಉಪಸ್ಥಿತರಿದ್ದರು.

27/02/2023

ಮಂಗಳೂರು: ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಶ್ವಶ್ರೀ”, ಹಿಂದು ರುದ್ರಭೂಮಿ ರಸ್ತೆ, ಕದ್ರಿ. ಮಂಗಳೂರು ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ 3ನೇ ವರ್ಷದ ಕೊರಗಜ್ಜನ ಅದಿ ಕ್ಷೇತ್ರಕ್ಕೆ ನಮ್ಮ ನಡೆ ದಿನಾಂಕ 19-03-2023 ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆ

ಪಾದಯಾತ್ರೆ ಮುಗಿದ ನಂತರ ಸಮಾರೋಪ ಸಭೆ ಕುತ್ತಾರು ಕೊರಗಜ್ಜನ ಆದಿಕ್ಷೇತ್ರ ಬಳಿ ಬೆಳಿಗ್ಗೆ ಗಂಟೆ 9.30ಕ್ಕೆ ನಡೆಯಲಿದ್ದು ಇದರ ಅಂಗವಾಗಿ ಕೊರಗಜ್ಜನೆಡೆ ನಮ್ಮ ನಡೆ. ಶ್ರೀ ಕದ್ರಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪುರೋಹಿತರಾದ ಶ್ರೀ ಕೃಷ್ಣ ಅಡಿಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಉಪಾಧ್ಯಕ್ಷರು ಮನೋಹರ್ ಸುವರ್ಣ, ಹರೀಶ್ ಕುಮಾರ್ ಶೇಟ್, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ್, ನಾರಾಯಣ ಗುರು ಸಂಘ ಕದ್ರಿ ಇದರ ಅಧ್ಯಕ್ಷರಾದ ಬಬ್ಳಿ ಕದ್ರಿ ಉಪಸ್ಥಿತಿ ಇದ್ದರು.

25/02/2023

ಸೂಪರ್ ಸೆಕೆಂಡ್.. ನೇರ ಪ್ರಸಾರ ಕಾರ್ಯಕ್ರಮ

24/02/2023

ಮಡಿಕೇರಿ ನೆನಪಿಸಿದ ಸುರತ್ಕಲ್ ನ ಮುಂಜಾನೆ ಮಂಜು!
ಸುರತ್ಕಲ್: ಕಳೆದೊಂದು ವಾರದಿಂದ ಮುಂಜಾನೆ ವೇಳೆ ವಿಪರೀತ ಮಂಜು ಬೀಳುತ್ತಿದ್ದು ಇಂದು ಮುಂಜಾನೆ ಮಾತ್ರ ಸುರತ್ಕಲ್, ಮುಕ್ಕ ಭಾಗದಲ್ಲಿ ಭಾರೀ ಮಂಜು ಕವಿದ ವಾತಾವರಣದಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.
ಬೆಳಗ್ಗೆ 9 ಗಂಟೆಯ ವೇಳೆಯಲ್ಲೂ ಮಂಜು ಹರಡಿದ್ದು ಹೆದ್ದಾರಿಯಲ್ಲಿ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಸಂಚಾರ ನಡೆಸಿದರು. ಸಾಮಾನ್ಯವಾಗಿ ಮಡಿಕೇರಿ, ಚಿಕ್ಕಮಗಳೂರಿಗೆ ಸೀಮಿತವಾಗಿರುತ್ತಿದ್ದ ಮಂಜಿನ ವಾತಾವರಣ ಇಲ್ಲೇ ಕಂಡುಬಂದಿದ್ದು ವಾಹನ ಸವಾರರು ಪುಳಕಿತರಾದರು.

23/02/2023

ಬಂಟ್ವಾಳ: ತುಳುನಾಡಿನ ಪರಂಪರಾಗತ ವಸ್ತುಗಳು ತನ್ಮಯತೆ, ಕಲಾತ್ಮಕತೆಯಿಂದ ರೂಪುಗೊಂಡಿದ್ದು, ಶತಶತಮಾನಗಳ ಬಾಳ್ವಿಕೆಯನ್ನೂ ಹೊಂದಿದೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮೂಲಕ ತುಳು ಸಂಸ್ಕೃತಿಗೆ ಮರುಜೀವ ನೀಡುವ ಜತೆಗೆ ರಾಣಿ ಅಬ್ಬಕ್ಕನ ಜೀವನ ಚರಿತ್ರೆಯನ್ನು ವಿವರಿಸುವ ಕಾರ್ಯ ನಡೆಯುತ್ತಿದೆ ಎಂದು ಧರ್ಮಸ್ಥಳ ಕ್ಷೇತ್ರದ ಡಾ| ಹೇಮಾವತಿ ವಿ.ಹೆಗ್ಗಡೆ ಹೇಳಿದರು.

ಅವರು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ೩೦ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಲಿಕೆಯಲ್ಲಿ ಅಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಹಾಗೂ ಐಗಳ್ ಎಂಬ ದ.ಕ.ಇತಿಹಾಸದ ದಂತಕಥೆ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದರು.

ತುಳುನಾಡಿನ ಕೃಷಿ ಪರಂಪರೆ ವಿಶಿಷ್ಟವಾಗಿದ್ದು, ವಿದ್ಯಾವಂತರು ಕೃಷಿ ಕಾರ್ಯದೆಡೆ ಮುಖ ಮಾಡಿದರೆ ಅದರ ಆಳ, ಅರಿವು ಅರಿತು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಪ್ರೊ| ತುಕರಾಮ್ ಪೂಜಾರಿ ದಂಪತಿ ತಮ್ಮ ಸಂಪತ್ತನೇ ಸುರಿದು ಈ ಕೇಂದ್ರ ನಿರ್ಮಿಸಿದ್ದಾರೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಶುಭಹಾರೈಸಿದರು.

ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ| ಪಿ.ಎನ್.ನರಸಿಂಹಮೂರ್ತಿ ಹಾಗೂ ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಶಂಕರ ಭಟ್ ಅವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸುರೇಶ್ ಕಿಣಿ ಉಪ್ಪಿನಂಗಡಿ, ಮಾಧವ ರೈ ಪೆರ್ನೆ ಅವರನ್ನು ಗೌರವಿಸಲಾಯಿತು. ಡಾ| ಸಾಯಿಗೀತಾ, ಗಾಯತ್ರಿ ಲೋಕೇಶ್ ಅವರು ಸಮ್ಮಾನ ಪತ್ರ ವಾಚಿಸಿದರು.

ಕೇಂದ್ರದ ಅಧ್ಯಕ್ಷ ಪ್ರೊ| ತುಕರಾಮ್ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು. ನವೀತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

23/02/2023

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಅವರು ನೇಮಕವಾಗಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ವಿಷಯ ಪರಿಣಿತರಾಗಿ ಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿರುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

23/02/2023

ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಕಾಂಶಿ ಯೋಜನೆಗಳ ಪೋಸ್ಟರ್ ಮೂಲಕ ಪ್ರಚಾರ ಮಾಡಿದನ್ನ ಸಹಿಸದ ಯಾರೋ ಕಿಡಿಗೇಡಿಗಳು ಪ್ರಧಾನಿ ಮೋದಿ ಭಾವ ಚಿತ್ರಕ್ಕೆ ಹಾನಿ ಉಂಟು ಮಾಡಿದ ಘಟನೆ ನಡೆದಿದೆ.

ಮಂಗಳೂರು ನಾಗುರಿ ಮೂಲಕ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಪೋಸ್ಟರ್ಗೆ ಹಾನಿ ಉಂಟು ಮಾಡಿದ್ದಾರೆ.

ಕೆಲವೊಂದು ಪೋಸ್ಟರ್ ಹರಿದು ಹಾಕಿದ್ದು ಕೆಲವು ಪೋಸ್ಟರ್ ಮೋದಿ ಭಾವ ಚಿತ್ರಕ್ಕೆ ಹಾನಿ ಉಂಟು ಮಾಡಿದ್ದಾರೆ.

ಪರ ರಾಜ್ಯದ ಜನರು ಈ ರಸ್ತೆ ಮೂಲಕ ರೈಲ್ವೆ ನಿಲ್ದಾಣಕ್ಕೆ ಹೋಗೋದರಿಂದ ಎಲ್ಲರ ಗಮನ ಈ ಪೋಸ್ಟರ್ ಮೇಲೆ ಇದೆ. ಸಂಬಂಧ ಪಟ್ಟವರು ಆದಷ್ಟು ಬೇಗ ಈ ಪೋಸ್ಟರನ್ನು ತೆರವುಗಲಿಸಬೇಕಾಗಿ ಸಾರ್ವಜನಿಕರು ಮಾತನಾಡು ತ್ತಿದ್ದಾರೆ

23/02/2023

ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್. ಶಶಿಕುಮಾರ್ ವರ್ಗಾವಣೆ

ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿರುವ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆ ಪೊಲೀಸ್ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದ್ದು, ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನಿಯೋಜಿಸಿ ಸರ್ಕಾರ ಆದೇಶಿಸಿದೆ.

23/02/2023

ಮಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ 2023 ಫೆಬ್ರವರಿ 25 ಮತ್ತು 26ರಂದು ಕ್ರಮವಾಗಿ 'ಬಿಷನ್-2023' ಹಾಗೂ 'ಸಾನಿಧ್ಯ ಉತ್ಸವ' ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಭಿನ್ನ ಸಾಮರ್ಥ್ಯದ ಮಕ್ಕಳು ತಮ್ಮ ತರಬೇತುದಾರರೊಡನೆ ಸೇರಿಕೊಂಡು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ "ವಿಷನ್ 2023 ಫೆಬ್ರವರಿ ತಿಂಗಳ 25ನೇ ತಾರೀಕು ಸಂಜೆ ೦5:30ಕ್ಕೆ ಪ್ರಾರಂಭಗೊಳ್ಳಲಿದೆ.

"ವಿಷನ್ 2023 ನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಡಾ. ಕುಮಾರ ಇವರು ಉದ್ಘಾಟಿಸಲಿರುವರು.

ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀ ಗೋಪಾಲಕೃಷ್ಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಜಯಶೀಲ ಅಡ್ಯಂತಾಯ ಭಾಗವಹಿಸಲಿದ್ದಾರೆ.

2023 ಫೆಬ್ರವರಿ 26ನೇ ಆದಿತ್ಯವಾರ ಗಂಟೆ 5.00ಕ್ಕೆ ಕದ್ರಿ ಉದ್ಯಾನದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮ ಸಾನಿಧ್ಯ ಉತ್ಸವ ಜರುಗಲಿದೆ.

ಕಾರ್ಯಕ್ರಮವನ್ನ ಗಣ್ಯಾತಿಗಣ್ಯರು ಉದ್ಘಾಟಿಸಲಿದ್ದಾರೆ ಎಂದು ಸಂಘಟಕರಾದ ವಸಂತ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು

23/02/2023

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಮುಸ್ಲಿಂ ಸಂಘಟನೆ ಆಯೋಜಿಸಿದ್ದ ಶಿಕ್ಷಕ

ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದ ಆರೋಪದಲ್ಲಿ ವಿಟ್ಲದ ಅಡ್ಯನಡ್ಕ ಜನತಾ ಶಾಲೆಯ ಮುಖ್ಯ ಶಿಕ್ಷಕ ಟಿ. ರವೀಂದ್ರ ನಾಯ್ಕ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಫೆ.18ರಂದು ಶಿವರಾತ್ರಿಯ ದಿನ ಶಾಲೆಗೆ ರಜೆ ಇದ್ದರೂ, ಅಡ್ಯನಡ್ಕ ಬಳಿಯ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳನ್ನು ತೆರಳುವಂತೆ ಶಿಕ್ಷಕರು ಸೂಚಿಸಿದ್ದರು ಎನ್ನಲಾಗಿದೆ.

ಮುಸ್ಲಿಂ ಯಂಗ್ ಮನ್ ಅಸೋಸಿಯೇಶನ್ಸ್‌ನವರು ಕಾರ್ಯಾಗಾರ ನಡೆಸಿದ್ದರು. ಕಾರ್ಯಾಗಾರದಲ್ಲಿ ಒಬ್ಬನೇ ದೇವರು, ಪರೀಕ್ಷೆ ಪಾಸ್ ಆಗಲು ಚೆನ್ನಾಗಿ ಓದಬೇಕು, ದೇವರನ್ನು ಬೇಡಿಕೊಂಡರೆ
ಪಾಸ್ ಆಗುವುದಿಲ್ಲ ಇತ್ಯಾದಿ ಮಾತುಗಳನ್ನು ಹೇಳಿದ್ದಾಗಿ ವಿದ್ಯಾರ್ಥಿಗಳು ಹಿಂದು ಸಂಘಟನೆಯ ಗಮನಕ್ಕೆ ತಂದಿದ್ದರು.

ಅದರಂತೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಹಿಂದು ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ್ದರು. ಅಲ್ಲದೆ, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಪ್ರಕರಣ ದಾಖಲಿಸುವಂತೆ ಒತ್ತಡ ಹೇರಿದ್ದರು.

ಈ ಬಗ್ಗೆ ಪೋಷಕರೊಬ್ಬರ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕ್ಷಕ ರವೀಂದ್ರ ನಾಯ್ಕ ಕಾರ್ಯಾಗಾರ ಆಯೋಜಿಸಿದ್ದ ರಫೀಕ್ ಮಾಸ್ಟರ್ ಆತೂರು ಮತ್ತು ಮುಸ್ಲಿಂ ಯಂಗ್ ಮೆನ್ ಅಸೋಸಿಯೇಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಶಿಕ್ಷಕನಿಗೆ ಹಿಂದು ಸಂಘಟನೆಯ ಬೆದರಿಕೆ ಇದ್ದುದರಿಂದ ಅವರನ್ನು ವಿಟ್ಲ ಠಾಣೆಗೆ ಕರೆಸಿ ಆ ದಿನ ರಾತ್ರಿಯಿಡೀ ಇರಿಸಿಕೊಳ್ಳಲಾಗಿತ್ತು.

ಮರುದಿನ ರವೀಂದ್ರ ನಾಯ್ಕರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.

ಶೈಕ್ಷಣಿಕ ಕಾರ್ಯಾಗಾರಕ್ಕೆ ನುಗ್ಗಿ ಹಿಂದು ಸಂಘಟನೆಯ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆಂದು ಘಟನೆ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದ ಶಾಸಕ ಯುಟಿ ಖಾದರ್, ಹಿಂದು ಸಂಘಟನೆ ಕಾರ್ಯಕರ್ತರು ಗೂಂಡಾಗಾರಿ ನಡೆಸಿದ್ದಾರೆಂದು ಆರೋಪಿಸಿದ್ದರು.

ಅಧಿವೇಶನದಲ್ಲಿ ಖಾದರ್ ರಾಜ್ಯ ಸರಕಾರದ ವಿರುದ್ಧ ಪ್ರಶ್ನೆ ಮಾಡಿದ್ದರಿಂದ ಶಿಕ್ಷಣ ಸಚಿವ ಬಿಸಿ ನಾಗೇಶ್, ಆರೋಪಿ ಶಿಕ್ಷಕನನ್ನು ಅಮಾನತು ಗೊಳಿಸಿ ಬುಧವಾರದಂದು ಆದೇಶ ಹೊರಡಿಸಿದ್ದಾರೆ.

23/02/2023

ಉಳ್ಳಾಲ: ಲಾರಿ ಸ್ಕೂಟರ್ ಅಪಘಾತದಲ್ಲಿ ಸವಾರ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.

ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26) ಸಾವನ್ನಪ್ಪಿ ದವರು. ಸಹಸವಾರ ಉಮ್ಮರ್ ಫಾರುಕ್ ಎಂಬವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ವ್ಯಾಪಾರದ ಹಿನ್ನೆಲೆಯಲ್ಲಿ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸ್ಕೂಟರ್, ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತಿದ್ದ ಟಿಂಬರ್ ಲಾರಿ ಹಿಂಭಾಗಕ್ಕೆ ಸ್ಕೂಟರ್ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

20/02/2023

ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳಿಂದ 1.ಕೆಜಿ. 625 ಗ್ರಾಂ ಚಿನ್ನ, ಹಾಗೂ 6 ಲಕ್ಷ ರೂ. ಮೌಲ್ಯದ ವಿದೇಶಿ ನೋಟುಗಳು ವಶಕ್ಕೆ.

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಫೆಬ್ರವರಿಯಲ್ಲಿ ಭಾರಿ ಚಿನ್ನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು,1 ಕೆಜಿ 625 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಫೆ.01ರಿಂದ 15ರ ವರೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ದುಬೈ ಮತ್ತು ಬಹ್ರೇನ್‌ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಳ್ಳಲಾದ ಚಿನ್ನದ ಮಾರುಕಟ್ಟೆ ಮೌಲ್ಯ 91ಲಕ್ಷದ 35 ಸಾವಿರದ 850 ರೂ.ಆಗಿದೆ. ಚಿನ್ನ ಮಾತ್ರವಲ್ಲದೆ ಭಾರತೀಯ ರೂಪಾಯಿ 6 ಲಕ್ಷದ 54 ಸಾವಿರದ 750ರೂ. ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್‌ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್‌ಗಳಾಗಿ ಮಾಡಿ ಗುದನಾಳದಲ್ಲಿ ಟ್ರಾಲಿ ಬ್ಯಾಗ್‌ನ ಹ್ಯಾಂಡಲ್‌ನಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಹೀಗೆ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

20/02/2023

ಮಂಗಳೂರು: ಫೆಬ್ರವರಿ 24ರಂದು 'ಸಹಕಾರ ರತ್ನ' ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಅವರ 74ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ.

ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ
ಗುರುತಿಸಿಕೊಂಡಿದೆ.

ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಾಮಾಣಿಕ ರೀತಿಯ ಸಾರ್ಥಕತೆಯನ್ನು ಕಂಡು ಕೊಂಡಿರುವ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ 'ಸಹಕಾರ ರತ್ನ' ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 74ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನಡೆಸಲು ಅವಿಭಜಿತ ಜಿಲ್ಲೆಯ ಸಮಸ್ತ ಸಹಕಾರಿಗಳೆಲ್ಲರೂ
ತೀರ್ಮಾನಿಸಿದ್ದು .

ಫೆಬ್ರವರಿ-24 ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬದ ದಿನ. ಅದೇ ದಿನ ಪೂರ್ವಾಹ್ನ 10.30 ಗಂಟೆಗೆ ಎಸ್‌.ಸಿ.ಡಿ.ಸಿ.ಸಿ ಬ್ಯಾಂಕಿನ ಸಭಾಂಗಣದಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ಅ ವರ 74ನೇ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅಭಿವಂದನಾ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭ ನಡೆಯಲಿದೆ ಎಂದು ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಐಕಳ ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

20/02/2023

ಮಂಗಳೂರು : ರಾಜ್ಯದ ಜನರ ಕಲ್ಯಾಣಕ್ಕಾಗಿ ಕರ್ನಾಟಕ ಜನತಾ ಪಕ್ಷ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ.

ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ 224 ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಜ್ಯದ ಜನ ಬಿಜೆಪಿ, ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಜನತಾ ಪಕ್ಷ ಸಂಕಲ್ಪ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಇಂತಹ ಒಂದು ಅರಾಜಕೀಯ ಕಿತ್ತು ಹಾಕಿ ಹಾಗೂ ನ್ಯಾಯಸಮ್ಮತ ಆಡಳಿತಕ್ಕಾಗಿ ಕರ್ನಾಟಕದಲ್ಲಿ ಬರಬೇಕಾಗಿದೆ.

ರಾಜ್ಯದ ಜನ ನಮ್ಮದೇ ಆದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಜಾಗೃತರಾಗಿದ್ದಾರೆ.

ಕರ್ನಾಟಕ ಜನತಾ ಪಕ್ಷದ ಮೇಲೆ ರಾಜ್ಯದ ಜನರಿಗೆ ಸಂಪೂರ್ಣ ವಿಶ್ವಾಸ ವಿದೆ. ಆದ್ದರಿಂದ ಜನರಾಶಯದಂತೆ ಕರ್ನಾಟಕ ಜನತಾ ಪಕ್ಷದಿಂದ ಅಭ್ಯರ್ಥಿಗಳು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ.

ಕೆಲವೇ ದಿನದಲ್ಲಿ ಪಕ್ಷದಿಂದ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಜನರ ನಿರೀಕ್ಷೆಗೂ ಮೀರಿದ ಸರ್ವರೂ ಮೆಚ್ಚುವಂತ ಪ್ರಣಾಳಿಕೆ ಪಕ್ಷದಿಂದ ಪ್ರಕಟಿಸಲಾಗುವುದು. ಎಂದು ಬಿ.
ಕೆ.ಜೆ.ಪಿ ಪಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

20/02/2023

ಹರೇಕಳ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಉಳ್ಳಾಲದ ಕೊಣಾಜೆಯ ಹರೆಕಳದಲ್ಲಿ ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಹಿಳೆ ವಾಸವಿದ್ದ ಮನೆಯ ಅಡುಗೆ ಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ ನಡೆದಿದೆ.

ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜ ಎಂಬವರ ಪತ್ನಿ ಮಗ್ಗಿ ಮೊಂತೇರೊ (62) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ.16 ರಂದು ಪುತ್ರಿ ಮನೆಗೆ ಬಂದು ತಾಯಿ ಜತೆಗೆ ಮಾತನಾಡಿ ತೆರಳಿದ್ದರು.

ಆನಂತರ ಮೂರು ದಿನಗಳಿಂದ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರಿ ಮನೆಗೆ ಬಂದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಡುಗೆ ನಡೆಸುವ ಒಲೆಯ ಸಮೀಪದಲ್ಲೇ ಮೃತದೇಹ ಬಿದ್ದ ಸ್ಥಿತಿಯಲ್ಲಿದೆ. ಅಸೌಖ್ಯದಿಂದ ಕಳಗೆ ಬಿದ್ದು ತಲೆಗೆ ಗಾಯವಾಗಿ ಸಾವನ್ನಪ್ಪಿರುವ ಶಂಕೆಯನ್ನು ಕೊಣಾಜೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳೀಯರೊಂದಿಗೆ ಮಾತನಾಡದೇ ಇರುತ್ತಿದ್ದ ಮಗ್ಗಿ ಮೊಂತೇರೊ ಅವರು 3 ಎಕರೆ ಸ್ಥಳದಲ್ಲಿದ್ದ ಒಂಟಿ ಮನೆಯಲ್ಲಿ ಒಂಟಿಯಾಗಿಯೇ ವಾಸಿಸುತ್ತಿದ್ದರು. ಓರ್ವ ಪುತ್ರ ಕೂಡಾ ತಾಯಿ ಜೊತೆಗೆ ವಾಸ ಮಾಡುತ್ತಿರಲಿಲ್ಲ.

ಅಪರೂಪಕ್ಕೆ ಸ್ಥಳೀಯರ ಜೊತೆಗೆ ಮಾತನಾಡುವಾಗ ಗುಳಿಗ ದೈವದ ವಿಚಾರವನ್ನೇ ಮಗ್ಗಿ ಮೊಂತೇರೋ ಮಾತನಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

20/02/2023

ಕಡಬ: ಬೆಳ್ಳಂ ಬೆಳಗ್ಗೆ ಕಾಡಾನೆ ದಾಳಿ. ಯುವತಿ ಸಹಿತ ಇಬ್ಬರ ಸಾವು. ಸಾರ್ವಜನಿಕರ ಆಕ್ರೋಶ!

ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಕಡಬದಲ್ಲಿ ನಡೆದಿದೆ. ಬೆಳಿಗ್ಗೆ ಹಾಲಿನ ಡೈರಿಗೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ ಹಾಗು ಸ್ಥಳೀಯ ರಮೇಶ್ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿದೆ.

ವಾರದ ಹಿಂದೆ ಮರ್ದಾಳದ ಸ್ಥಳೀಯ ಯುವಕನೊಬ್ಬ ತನ್ನ ಫೇಸ್ಬುಕ್‌ ಪೇಜ್‌ನಲ್ಲಿ ಕಾಡಾನೆ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದರು.

ಈ ವಿಚಾರವಾಗಿ ಸಂತೋಷ್ ರೈ ಎಂಬವರು ಪಂಚಾಯತ್‌ಗೆ ಮಾಹಿತಿ ಕೊಟ್ಟಿದ್ದರು. ಅದಾಗಲೇ ಪಂಚಾಯತ್ ಕಡಬ ಠಾಣೆಗೆ ದೂರು ನೀಡಿ ಯುವಕನ ಮೇಲೆ ಕ್ರಮಕೈಗೊಳ್ಳುವಂತೆ ಮಾಡಿದ್ದರು.

ಹಾಗೂ ಕಡಬ ಪೊಲೀಸರು ಆತನ ಬಳಿಯಿದ್ದ ಮಾಹಿತಿ, ವೀಡಿಯೋವನ್ನ ಡಿಲಿಟ್ ಮಾಡಿಸಿದ್ದರು.

ಇದೀಗ ಅದೇ ಠಾಣಾ ವ್ಯಾಪ್ತಿಯ ಮೀನಾಡಿಯಲ್ಲಿ ಭೀಕರ ಕಾಡಾನೆ ದಾಳಿ ನಡೆದು ಇಬ್ಬರು ಸಾವನ್ನಪ್ಪಿದ್ದಾರೆ.

ಪಂಚಾಯತ್‌ಗೆ ಕಾಡಾನೆ ವಿಚಾರ ಗೊತ್ತಿದ್ದು ಯಾವೂದೇ ರೀತಿಯಾ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ಅನಾಹುತ ಆಗಿದೆ ಎಂದು ಸಾರ್ವಜನಿಕರು ಘಟನಾ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..

18/02/2023

ಮಂಗಳೂರು ನಗರದ ಬಾವುಟ ಗುಡ್ಡೆಯ ಪಕ್ಕದ ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆ ನಿನ್ನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರತಿ ಶುಕ್ರವಾರದಂದು ರಸ್ತೆ ಮಧ್ಯೆಯೇ ವಾಹನ ಪಾರ್ಕ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದದಲ್ಲದೆ, ನಿನ್ನೆ ರಸ್ತೆಯಲ್ಲಿಯೆ ನಮಾಝ್ ಮಾಡಿದ್ದು, ಇದರ ಬಗ್ಗೆ ಪ್ರಶ್ನಿಸುವವರು ಯಾರೂ ಕೂಡ ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ಇಲ್ಲದಂತಾಗಿದೆ.

ಈ ರೀತಿ ನಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದಕ್ಕೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳತ್ತಾರೆ.? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಸಾಮಾಜಿಕ‌ ಜಾಲತಾಣದಲ್ಲಿ ನಮಾಝ್ ಮಾಡುತ್ತಿರುವ ಫೋಟೋ ಜೊತೆಗೆ ಒಂದು ಬರಹವು ವೈರಲ್ ಆಗಿದೆ.

"ಇದು ಪಾಕಿಸ್ತಾನ ಅಥವಾ ಯಾವುದೇ ಇಸ್ಲಾಮಿಕ್ ರಾಷ್ಟ್ರದ ದೃಶ್ಯ ಅಲ್ಲ.. ಇದು ನಮ್ಮ ಹಿಂದೂತ್ವದ ಭದ್ರಕೋಟೆ ಮಂಗಳೂರಿನ ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ಹಂದಿಗಳು ನಮಾಝ್ ಮಾಡುವ ದೃಶ್ಯ. ಹಿಂದೂಗಳ ಪ್ರತಿಯೊಂದು ಹಬ್ಬಕ್ಕೆ ಪೊಲೀಸ್ ಅನುಮತಿ ಕೇಳುವ ಪೊಲೀಸ್ ಹಾಗೂ ಜಿಲ್ಲಾಡಳಿತ ಈಗ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.. ಹಿಂದೂತ್ವದ ಹೆಸರಿನಲ್ಲಿ ಗೆದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿಗೆ ಇದನ್ನು ನಿಲ್ಲಿಸಲು ತಾಕತ್ ಇಲ್ಲವೇ?" ಎಂಬ ಬರಹ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

18/02/2023

ಬಂಟ್ವಾಳದಲ್ಲಿ ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ ಫೆ. 18 ರಂದು ಮಧ್ಯಾಹ್ನ ಪಾಣೆಮಂಗಳೂರು ಎಂಬಲ್ಲಿ ಈ ಘಟನೆ ನಡೆದಿದೆ.

ಪಾಣೆಮಂಗಳೂರು ನೆಹರು ನಗರ ನಿವಾಸಿ, ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ಚೂರಿದು ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ನಿಸಾರ್ ಕೂಡ ನೆಹರು ನಗರ ನಿವಾಸಿಯಾಗಿದ್ದು, ಇಬ್ಬರು ಗಾಂಜ ವ್ಯಸನಿಗಳಾಗಿದ್ದು
ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆ ಇವರಿಬ್ಬರು ನೆಹರುನಗರದ ಬಳಿ ಬಂದಿದ್ದರು ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮದ್ಯೆ ಮಾತಿಗೆ ಮಾತು ಬೆಳೆದು ನಿಶಾರ್ ಚೂರಿಯಿಂದ ಸುಲೈಮಾನ್‌ನ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಸುಲೈಮಾನ್‌ನನ್ನು ತಕ್ಷಣವೆ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ಬೇಟಿ ನೀಡಿದ್ದಾರೆ.

ಆರೋಪಿ ನಿಸಾರ್ ನನ್ನು ಬಂಧಿಸಲು ಪೋಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

18/02/2023

ಈ ವರ್ಷದ ಬಜೆಟ್‌ನಲ್ಲಿ ಅಭಿವೃದ್ಧಿ ನಿಗಮದ ಪ್ರಸ್ತಾಪವನ್ನೇ ಮಾಡದೆ ಬಿಲ್ಲವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದೀರಿ.

ರಾಜ್ಯದಲ್ಲಿ 90 ಲಕ್ಷ ಬಿಲ್ಲವರಿದ್ದಾರೆ, ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸುತ್ತೀರಿ ಎಂದು ಬಿಲ್ಲವ ಮುಖಂಡರಾದ ಪದ್ಮರಾಜ್ ಮತ್ತು ಸತ್ಯಜಿತ್ ಸುರತ್ಕಲ್ ಕಿಡಿಕಾರಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಮಂಗಳೂರಿನಲ್ಲಿ ಜನವರಿ 29ರಂದು ಬಿಲ್ಲವರನ್ನು ಒಟ್ಟು ಸೇರಿಸಿ ಒಂದು ಲಕ್ಷ ಜನರ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೆವು.

ಹಕ್ಕೊತ್ತಾಯ ಸಭೆಗೆ ಮುಂದಾಗಿದ್ದ ನಮ್ಮನ್ನು ಬೆಂಗಳೂರಿಗೆ ಜನವರಿ 5ರಂದು ಕರೆಸಿ
ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಿದ್ದೀರಿ, ಅಲ್ಲದೆ, ಇತರ 14 ಬೇಡಿಕೆಗಳನ್ನೂ ಪರಿಗಣಿಸುವುದಾಗಿ ಹೇಳಿದ್ದಿರಿ ಆದರೆ ನಮ್ಮಯಾವುದೇ ಬೇಡಿಕೆಯ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ.

ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ.. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೆ ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಈ ಭಾಗದ ಸಂಸದ ನಳಿನ್ ಕುಮಾರ್‌ ಇದ್ದು ನಮಗೆ ಭರವಸೆಯನ್ನು ನೀಡಿದ್ದೀರಿ. ಈಗ ನೀವೆಲ್ಲ ಮಾತು ತಪ್ಪಿದ್ದೀರಿ.

ನಿಮ್ಮ ಈ ರೀತಿಯ ವರ್ತನೆಯಿಂದ ಬಿಲ್ಲವ ಸಮಾಜಕ್ಕೆ ನಿರಾಶೆಯಾಗಿದೆ.

ಇದಕ್ಕೆ ತಕ್ಕ ಶಾಸ್ತಿ ಅನುಭವಿಸ ಬೇಕಾದೀತು. ನಮ್ಮ ಹೋರಾಟವನ್ನು ಕೈಬಿಡಲ್ಲ ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

ಸತ್ಯಜಿತ್ ಸುರತ್ಕಲ್ ಮಾತನಾಡಿ, 18 ವರ್ಷಗಳ ಹಿಂದೆ ಶೇಂದಿ ನಿಷೇಧ ಆದಾಗಲೇ ಅಭಿವೃದ್ಧಿ ನಿಗಮ ಮಾಡಬೇಕಿತ್ತು. ಅಂದು ಅಧಿಕಾರದಲ್ಲಿದ್ದವರು ಮುಂದಿನ ಬಜೆಟ್‌ನಲ್ಲಿ ನಿಗಮ ಘೋಷಿಸುವುದಾಗಿ ತಿಳಿಸಿದ್ದರು. ಆದರೆ ಅದನ್ನು ಮಾಡಿಲ್ಲ
ಈ ಬಾರಿ ನಾವು ಹಕ್ಕೊತ್ತಾಯ ಮಾಡಿದ್ದೆವು. ಬಿಲ್ಲವ ಸಮಾಜದ ಪರವಾಗಿ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಉಡುಪಿ, ದಾವಣಗೆರೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ.

ಮೊನ್ನೆ ಸಮಾರೋಪ ಸಂದರ್ಭದಲ್ಲಿ ಸಚಿವರೇ ಬಂದು ಬೇಡಿಕೆ ಈಡೇರಿಸುವ ಹೇಳಿಕೆ ನೀಡಿದ್ದರು.

ಈಗ ಬಜೆಟ್‌ನಲ್ಲಿ ಹಣಕಾಸು ಹೊಂದಿಕೆ ಮಾಡಿಕೊಂಡು ಘೋಷಣೆ ಮಾಡಬೇಕಿತ್ತು ಇಲ್ಲಿ ಸಾದ್ಯವಾಗದ್ದು ಮುಂದೆ ಮಾಡುವ ಭರವಸೆ ಉಳಿದಿಲ್ಲ ಎಂದು ಸುದ್ದಿ ಗೋಷ್ಟಿಯಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ..

18/02/2023

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್‌ವತಿಯಿಂದ ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್ ನಾರಾಯಣ ವಿರುದ್ಧ ಶುಕ್ರವಾರ ಸಂಜೆ ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತಾಡಿದ ಮೊಯಿದೀನ್ ಬಾವಾ, "ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೇ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಅಶ್ವಥ್ ನಾರಾಯಣರನ್ನು ಪೊಲೀಸರು ಕೂಡಲೇ ಬಂದಿಸಬೇಕು.

ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು" ಎಂದು ಅಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ರಾಜೇಶ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.

18/02/2023

ಬಂಟ್ವಾಳ ‌ತಾಲೂಕಿನ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪುದು ಗ್ರಾಮ ಪಂಚಾಯತ್ ನಲ್ಲಿ ಫೆ. 25 ರಂದು ನಡೆಯಲಿರುವ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ, ಹಾಗೂ ಚುನಾವಣಾ ನೀತಿ ನಿಯಮಗಳ ಬಗ್ಗೆ ಫರಂಗಿಪೇಟೆಯಲ್ಲಿ ಬಂಟ್ವಾಳ ‌ಗ್ರಾಮಾಂತರ ಠಾಣಾ ಪೋಲೀಸರು ವಿಶೇಷ ಸಭೆ ನಡೆಸಿದರು.

ಚುನಾವಣೆ ನಡೆಯುವ ಗ್ರಾ.ಪಂ.ನ ಪ್ರತಿ ವಾರ್ಡ್ ಗಳಲ್ಲಿ ಯಾವುದೇ ಗೊಂದಲಗಳಿಗೆ ಕಾರಣವಾಗಬಾರದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಮುಖಂಡರುಗಳನ್ನು, ರಾಜಕೀಯ ಪ್ರಮುಖರನ್ನು , ಸಾಮಾಜಿಕ ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಲಾಗಿದೆ.

ಚುನಾವಣೆ ನಡೆದು ಮತ ಏಣಿಕೆ ಕಾರ್ಯ ಮುಗಿಯುವವರೆಗೆ ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸುಳ್ಳು ಸುದ್ದಿ ಹರಡದಂತೆ ಸೂಕ್ತ ಸಲಹೆಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ ನೀಡಿದರು.

ಗ್ರಾಮಾಂತರ ಠಾಣಾ ಎಸ್.ಐ.ಉದಯ ರವಿ ಕೆಲವೊಂದು ಮಾಹಿತಿಗಳನ್ನು ನೀಡಿದರು.

18/02/2023

ವಿಟ್ಲ: ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕನ್ಯಾನದಲ್ಲಿ ನಡೆದಿದೆ.

ಮೃತರನ್ನು ಆಟೋ ಚಾಲಕ ದಿನೇಶ್ ಬೈರಿಕಟ್ಟೆ (32) ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿದ್ದ ದಿನೇಶ್‌ರವರು ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ..

18/02/2023

ದಕ್ಷಿಣಕನ್ನಡ

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ವಾರಂಟ್ ಜಾರಿಯಾಗಿದ್ದರೂ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.ಆರೋಪಿಯನ್ನು ವಿಟ್ಲದ ಕಸಬಾ ಗ್ರಾಮದ ನಿವಾಸಿ ಮೊಹಮ್ಮದ್ಅನ್ವರ್ ಎಂದು ಗುರುತಿಸಲಾಗಿದೆ.

ಈತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರಂಟ್ ಜಾರಿಯಾಗಿದ್ದರೂ ಕಳೆದ 5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ.\

ಇದೀಗ ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಮತ್ತು ಉಪ ನೀರಿಕ್ಷಕರ ಮಾರ್ಗದರ್ಶನದಲ್ಲಿ ಎಚ್‌ಸಿ ಪರಮೇಶ್ ಮತ್ತು ಎಚ್‌ಸಿ ಉದಯ ಮತ್ತು ಪಿ ಸಿ ಗಿರಿಪ್ರಶಾಂತ್ ರವರು ದಸ್ತಗಿರಿ‌ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

18/02/2023

ಬಂಟ್ವಾಳ: ಮೆಲ್ಕಾರ್- ಉಳ್ಳಾಲ ರಸ್ತೆಯಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ವ್ಯಕ್ತಿಯೋರ್ವ ನಿರ್ಮಿಸಿದ್ದು, ಇದನ್ನು ತೆರವುಗೊಳಿಸುವಂತೆ ಮಾಡಿದ ಹೋರಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿತಾ?

ಮೆಲ್ಕಾರ್ ನಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳನ್ನು ತೆರವುಮಾಡುವಂತೆ ಖಾಲಿದ್ ಮೆಲ್ಕಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ಉಚ್ಚ ನ್ಯಾಯಾಲಯ ಅದೇಶ ಮಾಡಿದ್ದು, ವಾರದೊಳಗೆ ತೆರವು ಮಾಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದೆ.

ಉಚ್ಚ ನ್ಯಾಯಾಲಯದ್ದ ರಿಟ್ ಪಿಟಿಷನ್ ಸಂಖ್ಯೆ: W.P No 7003/2022 C/WW.P No5340/2022 ರಂತೆ ಹೊರಡಿಸಿರುವ ಆದೇಶವನ್ನು ಪಾಲಿಸಿ ಬಂಟ್ವಾಳ ತಾಲೂಕು, ಪಾಣೆ ಮಂಗಳೂರು ಗ್ರಾಮದ ಮೆಲ್ಕಾರು ಎಂಬಲ್ಲಿರುವ ಸ.ನಂ. 58 ಮತ್ತು 59 ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಅಂಗಡಿ ಕಟ್ಟಡಗಳನ್ನು 7 ದಿನದೊಳಗಾಗಿ ತೆರವುಗೊಳಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಬಂಟ್ವಾಳ ಮತ್ತು ಮುಖಾಧಿಕಾರಿ, ಬಂಟ್ವಾಳ ಪುರಸಭೆಗೆ ಆದೇಶಿಸಿದೆ.

ಉಚ್ಚ ನ್ಯಾಯಾಲಯ 31.8.2022ರ. ಒಳಗೆ ಅಂಗಡಿಗಳನ್ನು ತೆರವು ಮಾಡುವಂತೆ ಅದೇಶ
ಹೊರಡಿಸಿತ್ತು.

ಈ ಆದೇಶವನ್ನು ಪಾಲಿಸದೆ ಇದ್ದಲ್ಲಿ ತಲಾ ಒಂದು‌ ಕಟ್ಟಡಕ್ಕೆ ಹತ್ತು ಸಾವಿರ ರೂ‌ ದಂಡವನ್ನು ಅಂಗಡಿ ಮಾಲಕ ಸೈಪುದ್ದೀನ್ ಮಹಮ್ಮದ್ ಇವರಿಂದ ಪಡೆದುಕೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿಗೆ ಅದೇಶ‌ ಹೊರಡಿಸಿತ್ತು.

ಆದರೆ ಸೈಪುದ್ದೀನ್ ಉಚ್ಚ ನ್ಯಾಯಾಲಯದ ಅದೇಶವನ್ನು ಪಾಲಿಸದೆ, ಅಂಗಡಿ
ಕಟ್ಟಡಗಳಲ್ಲಿ ವ್ಯವಹಾರಗಳು ಮುಂದುವರೆದಿತ್ತು.

ಈ ಹಿನ್ನೆಲೆಯಲ್ಲಿ ಸರಕಾರಿ ಜಮೀನನ್ನು ರಕ್ಷಿಸಲು ಖಾಲಿದ್ ಅವರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದರು.

ಇವರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ನ್ಯಾಯಾಲಯದ ಅದೇಶದಂತೆ ವಾರದೊಳಗೆ ಅಂಗಡಿ ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದಾರೆ.

17/02/2023

ಚದುರಂಗ - ಇದು ವಿಜಯದ ಸಂಘರ್ಷ
ಈ ವಾರದ ಅತಿಥಿ : ಶ್ರಿ ರಾಮಚಂದ್ರ ಬೈಕಂಪಾಡಿ ಹಿರಿಯ ಬಿ.ಜೆ.ಪಿ ಮುಖಂಡರು

Address

Mangalore

Website

Alerts

Be the first to know and let us send you an email when The Saffron Productions posts news and promotions. Your email address will not be used for any other purpose, and you can unsubscribe at any time.

Contact The Business

Send a message to The Saffron Productions:

Videos

Share