02/05/2023
ಮುಳಬಾಗಿಲು ತಾಲೂಕು ಚುನಾವಣೆ ವಿಮರ್ಶೆ
ಮುಳಬಾಗಿಲು ಮೀಸಲು ಕ್ಷೇತ್ರ, ಎಸ್ಸಿ ಹಾಗೂ ಎಸ್ ಟಿ, ವೋಟ್ ಬ್ಯಾಂಕ್ ಬಗ್ಗೆ ಮಾತನಾಡುವುದಾದರೆ, ಈ ಬಾರಿ ಪ್ರಮುಖವಾಗಿ ಮೂರು ಅಭ್ಯರ್ಥಿಗಳಿದ್ದು ಇಬ್ಬರು ಅಭ್ಯರ್ಥಿಗಳು ಎಸ್ ಸಿ ಲೆಫ್ಟ್ ಆದಿ ಕರ್ನಾಟಕ ಹಾಗೂ ಒಬ್ಬ ಅಭ್ಯರ್ಥಿ ರೈಟ್ ಕಮ್ಯುನಿಟಿ ಭೋವಿ ಸಮುದಾಯಕ್ಕೆ ಬರುತ್ತಾರೆ. ಒಳ ವ್ಯಾಪ್ತಿಗೆ ಹೋದರೆ, ಈ ಬಾರಿ ಒಳಜಾತಿಗಳಲ್ಲಿ ಪ್ರತಿಷ್ಠೆಯೇ... ಪಕ್ಷವನ್ನು ಮೀರಿದ ವಿಷಯವಾಗಿದೆ. ಕಾಂಗ್ರೆಸ್ನ ಅಭ್ಯರ್ಥಿಯು ನಿಶ್ಚಯ ಆದ ನಂತರ, ಇಷ್ಟು ದಿನ ಇದ್ದ ರಾಜಕೀಯ ವಿಶ್ಲೇಷಣೆಗಳ ಬುಡ ಮೇಲಾಗಿದೆ.
ಇನ್ನೇನು ಗೆದ್ದೇ ಬಿಟ್ಟಿದ್ದೆವು ಎಂದು ತಿಳಿದಿದ್ದ ಜೆಡಿಎಸ್ ಇಂದು ನೇರ ಎರಡನೇ ಮತ್ತು ಮೂರನೇ ಸ್ಥಾನದ ಪರಿಸ್ಥಿತಿ ಬರುವ ಸೂಚನೆ ಹೆಚ್ಚಿದೆ, ಸ್ಥಳೀಯ ಹಾಗೂ ಬಿಜೆಪಿಯ ಅಭ್ಯರ್ಥಿಯ ಸರಳತೆ ಹಾಗೂ ಸಜ್ಜನಿಕೆಯ ಹಿನ್ನಲೆ ಹಾಗೂ ಚಿಕ್ಕ ತಾಳಿ ಮತ್ತು ದೊಡ್ಡ ತಾಳಿ ಎಂಬ ಒಳ ಜಾತಿಯ ವ್ಯವಸ್ಥೆಗೆ ರಾಜಕೀಯ ಲೆಕ್ಕಾಚಾರಗಳು ಮರೆಯಾಗಿ ಹೋಗಿದೆ.
ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯು ಈ ಹಿಂದೆ ಜೆಡಿಎಸ್ ಟಿಕೆಟ್ ವಂಚಿತರು ಆಗಿದ್ದು, ಒಳ್ಳೆಯ ಸಜ್ಜನಿಕೆಯ ಹಿನ್ನೆಲೆಯೂ ಇರುವ ಅಭ್ಯರ್ಥಿಯೆಂದು ಉನ್ನತ ಮೂಲಗಳಿಂದ ಸುದ್ದಿಯಾಗಿದೆ, ಜೆಡಿಎಸ್ ನಿಂದ ಎರಡು ಬಾರಿ ಟಿಕೆಟ್ ಕೈತಪ್ಪಿ ಎಲ್ಲಾ ಜೆಡಿಎಸ್ ನಾಯಕರಲ್ಲೂ ಒಳ್ಳೆಯ ಹೆಸರುಗಳಿಸಿದ್ದ ಆದಿನಾರಾಯಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು, ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ತುಂಬಿದಂತಾಗಿದೆ.
ಸರ್ಕಾರಿ ನೌಕರರ ವಿರುದ್ಧ ತುಂಬಿದ ಸಭೆಯಲ್ಲಿ ಚಾಟಿ ಬೀಸುವ ಮಾತುಗಳನ್ನು ಅಡಿರುವುದು ಪ್ರಸಕ್ತ ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆ ಆಗುವ ಸಾಧ್ಯತೆಗಳು ಹೆಚ್ಚಿದ, ಆದರೆ ಹಿಂದಿನಿಂದಲೂ ಸರ್ಕಾರಿ ನೌಕರರೇ ಇರಲಿ ಯಾರೇ ಇರಲಿ ಎಲ್ಲರೊಂದಿಗೆ ಒಳ್ಳೆಯ ವಿಶ್ವಾಸ ಆದಿನಾರಾಯಣ ಸಂಪಾದಿಸಿದ್ದರು ಎಂಬುದು ಸತ್ಯ.
ಇನ್ನು ತಾಲೂಕಿನಲ್ಲಿ ಮುಸಲ್ಮಾನ್ ಧರ್ಮದ ವೋಟ್ ಗಳು ಜೆಡಿಎಸ್ ಗೆ ಬರುವುದು ಕಷ್ಟಕರವಾಗಿದೆ... ಇದಕ್ಕೆ ಮೂಲ ಕಾರಣವೂ ಬಿಜೆಪಿ ಮತ್ತು ಜೆಡಿಎಸ್ ಹಿಂದೆ ಮಾಡಿದ ಮೈತ್ರಿ ಸರ್ಕಾರ ಹಾಗೂ ಪ್ರಸಕ್ತ ಹಾಸನ ಜಿಲ್ಲೆಯ ಎಂಎಲ್ಎ ಪ್ರೀತಮ್ ರವರು ಹೇಳಿರುವ ಹೇಳಿಕೆ ಬಿಜೆಪಿ ಮತ್ತು ಜೆಡಿಎಸ್ ಒಂದೇ ಎಂಬಂತಹ ಮಾತುಗಳು, ಸಾಮಾನ್ಯವಾಗಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಮುಸಲ್ಮಾನ ಧರ್ಮದ ಓಟುಗಳು ಜೆಡಿಎಸ್ ಗೆ ಹಾಕಿ ನಂತರ ಜೆಡಿಎಸ್ ಬಿಜೆಪಿಗೆ ಮೈತ್ರಿ ಆದರೆ ಹೇಗೆ? ಅದರ ಬದಲು ನೇರವಾಗಿ ಬಿಜೆಪಿಗೆ ಮತ ಹಾಕಬಹುದಲ್ಲವೇ, ಎಂಬ ಧೋರಣೆ ಎಲ್ಲಡಿಯೋ ಹರಡಿದೆ. ಈತನ್ ಮಧ್ಯೆ ಮುಸಲ್ಮಾನರೆಲ್ಲ ಐಕ್ಯತೆಯಿಂದ ಕಾಂಗ್ರೆಸ್ಸಿಗೆ ಮತ ನೀಡಿದಲ್ಲಿ ಈ ಬಾರಿಯ ಚುನಾವಣೆ ಕಾಂಗ್ರೆಸ್ಗೆ ಗೆಲುವು ಕಟ್ಟಿಟ್ಟ ಬುತ್ತಿ ಆಗುವುದು ಸಂಶಯವೇ ಇಲ್ಲ, ಆದರೆ ಒಂದು ವೇಳೆ ಮುಸಲ್ಮಾನರ ವೋಟ್ ಬ್ಯಾಂಕ್ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಾಗವಾದರೆ ಈ ಬಾರಿ ನೂರಕ್ಕೆ ನೂರು ನಲ್ಲಿ ಕಮಲ ಅರಳುವುದು ಶತಸಿದ್ಧ, ಏಕೆಂದರೆ ಬಿಜೆಪಿ ಪಾಳಯದ ಅಭ್ಯರ್ಥಿಯು ಪಕ್ಷಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಗಳಿಸಿರುವುದು ಸುಳ್ಳಿನ ಮಾತಲ್ಲ. ಇನ್ನು ಸ್ಥಳೀಯ ಅಭ್ಯರ್ಥಿಯೆಂಬ ಪಟ್ಟಿಗೆ ನಂಗಲಿ ಮುನಿಯಪ್ಪರವರ ಮೊಮ್ಮಗ ಎಂಬ ಖ್ಯಾತಿಯು ಬಿಜೆಪಿಗೆ ಲಾಭಿಯಾಗಲಿದೆ. ಇನ್ನು ಉಳಿದಂತೆ ಒಕ್ಕಲಿಗ ಮತ ಬ್ಯಾಂಕ್ ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್ಗೆ ಲಾಬಿಯಾಗಲು ನೇರವಾಗಿ ಜೆಡಿಎಸ್ ಕಟ್ಟಿ ಬೆಳೆಸಿದ ಅಲಂಗೂರು ಖ್ಯಾತಿಯ ಜೆಡಿಎಸ್ ನವರೇ ಆದ ಆಲಂಗೂರು ಶಿವಣ್ಣ ರವರ ಜೆಡಿಎಸ್ ನಿಂದ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಗೆ ಬಂದಿರುವ ವಿಚಾರ ಕಾಂಗ್ರೆಸ್ಗೆ ಆನೆ ಬಲದೊಂದಿಗೆ ಜೆಡಿಎಸ್ ಗೆ ಆಘಾತವನ್ನು ತಂದಿರುವುದು ಸತ್ಯವೇ ಸರಿ.
ಉಳಿದಂತೆ ತಾಲೂಕಿನ ಪ್ರಮುಖ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯವು ಆಂತರಿಕವಾಗಿ ಹಿಂದೆ ಜೆಡಿಎಸ್ ನಿಂದ ಇಂದು ಕಾಂಗ್ರೆಸಿಗೆ ಬಂದಿರುವ ಆದಿನಾರಾಯಣ ರವರ ಮೇಲೆ ಹೆಚ್ಚು ಒಲವು ತೋರಿಸಿರುವುದು ಬಹುತೇಕ ಖಚಿತವಾಗಿದೆ, ಇನ್ನೊಂದೆಡೆಯಲ್ಲಿ ಬಿಜೆಪಿ ಪಾಳಯದ ಸೀಗೆನಹಳ್ಳಿಯ ಸುಂದರ್ ರವರು ತಮ್ಮ ಸರಳತೆಯಿಂದ ಜನಪ್ರಿಯತೆ ಗಳಿಸಿ ಜೆಡಿಎಸ್ ಅನ್ನು ಮೂರನೇ ಸ್ಥಾನಕ್ಕೆ ತರುವ ರೀತಿಯಲ್ಲಿ ಕಾರ್ಯಯೋನ್ಮುಖರಾಗಿರುವುದು ಗಮನಾರ್ಕ... ಈ ಮದ್ಯ ನಗರದಲ್ಲಿ ಎರಡು ಸಮುದಾಯಗಳಿದ್ದು, ಕೆಲವು ಪ್ರತಿಷ್ಠಿತ ನಾಯಕರು ಒಂದೇ ಪಕ್ಷದಲ್ಲಿ ಇರುವುದು? ಮತ್ತೊಂದು ಸಮುದಾಯದ ಕಾಂಗ್ರೆಸ್ ಒಲವಿಗೆ ಮೂಲ ಕಾರಣವಾಗಿದೆ, ಇದು ವಾಸ್ತವವೂ ಹೌದು.
ಇನ್ನು ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆಗೂ ಮುಂಚೆ ಒಂದೇ ಪಕ್ಷದ ಮೇಲೆ ಹೇಗಿರುತ್ತದೆ ಎಂಬ ಆಸೆಯನಿಟ್ಟುಕೊಂಡು ಪಕ್ಷಾಂತರವಾದ ಪ್ರಮುಖ ನಾಯಕರುಗಳಿಗೆ ಆಗತವು ಉಂಟಾಗಿದೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಮುಳಬಾಗಿಲು ತಾಲೂಕಿಗೆ ಸೀಮಿತವಾಗಿ ಹೇಳುವುದಾದರೆ, ಮೊದಲ ಸ್ಥಾನದಲ್ಲಿ ಕಾಂಗ್ರೆಸ್ ಇರುತ್ತದೆ, ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಮಬಲಗಳಲ್ಲಿ ನಿಲ್ಲುವುದಂತು ಸಂಶಯವಿಲ್ಲ.
ಕೆಎಂಎಫ್ ವರದಿ