AllaboutKittur - ಚನ್ನಮನ ಕಿತ್ತೂರು

  • Home
  • India
  • Kittur
  • AllaboutKittur - ಚನ್ನಮನ ಕಿತ್ತೂರು

AllaboutKittur - ಚನ್ನಮನ ಕಿತ್ತೂರು Contact information, map and directions, contact form, opening hours, services, ratings, photos, videos and announcements from AllaboutKittur - ಚನ್ನಮನ ಕಿತ್ತೂರು, Media/News Company, Kittur.
(1)

25/02/2024
 #ಫೆಬ್ರುವರಿ- #೨ರಾಣಿ_ಚನ್ನಮ್ಮಾಜೀಯ_ಸ್ಮೃತಿ  #ದಿವಸ1824 ಅಕ್ಟೋಬರ್ 23 ರಂದು ಥ್ಯಾಕರೆಯ ತಲೆ ತೆಗೆದ ನಂತರ ಬ್ರಿಟಿಷರು ಹೆಡೆ ಮುಟ್ಟಿದ ನಾಗರ ಹ...
02/02/2024

#ಫೆಬ್ರುವರಿ- #೨ರಾಣಿ_ಚನ್ನಮ್ಮಾಜೀಯ_ಸ್ಮೃತಿ #ದಿವಸ

1824 ಅಕ್ಟೋಬರ್ 23 ರಂದು ಥ್ಯಾಕರೆಯ ತಲೆ ತೆಗೆದ ನಂತರ ಬ್ರಿಟಿಷರು ಹೆಡೆ ಮುಟ್ಟಿದ ನಾಗರ ಹಾವಿನಂತಾಗಿದ್ದರು.

ಬ್ರಿಟಿಷರು ದಕ್ಷಿಣ ಭಾರತದ ಎಲ್ಲ ಸಂಸ್ಥಾನಗಳನ್ನು ಕಿತ್ತೂರು ಸಂಸ್ಥಾನದಿಂದ ದೂರ ಸರಿಯುವಂತೆ ವಿಭಜಕ ನೀತಿಯನ್ನು ಅನುಸರಿಸಿ ಅವರೆಲ್ಲರನ್ನು ತಮ್ಮ ಬೆನ್ನಿಗೆ ನಿಲ್ಲುವಂತೆ ಮಾಡಿಕೊಂಡು ಸುಮಾರು 25000 ಸೈನಿಕರೊಡನೆ ಎರಡನೇ ಬಾರಿ ಕಿತ್ತೂರಿನ ಮೇಲೆ 1824 ನವೆಂಬರ್ 30ರಂದು ದಾಳಿಮಾಡಿದರು.

1824 ಡಿಸೆಂಬರ್ ನಾಲ್ಕರಂದು ಕಿತ್ತೂರಿನ ಗಡಾದ ಮರಡಿಯನ್ನು ಬ್ರಿಟಿಷ್‌ರು ವಶಪಡಿಸಿಕೊಂಡು.ಇದೇ ಸಂದರ್ಭದಲ್ಲಿ ಕಿತ್ತೂರಿನ ಪ್ರಮುಖ ಸೇನಾ ನಾಯಕರಾಗಿರುವ ಸರ್ದಾರ್ ಗುರುಸಿದ್ಧಪ್ಪ ,ಸಂಗೊಳ್ಳಿ ರಾಯಣ್ಣ ,ಬಿಚ್ಚುಗತ್ತಿ ಚನ್ನಬಸಪ್ಪರನ್ನು,ವಡ್ಡರ ಯಲ್ಲಣ ರನ್ನು ಗಡಾದ ಮರಡಿಯಲ್ಲಿ‌ ಬಂಧಿಸಿ ಧಾರವಾಡದ ಸೆರೆಮನೆಗೆ ಸಾಗಿಸಿದರು.

5 ನೇ ತಾರೀಖಿನಂದು ಕಿತ್ತೂರು ಕೋಟೆಯನ್ನು ತಮ್ಮ ಕೈವಶ ಮಾಡಿಕೊಂಡು ಕಿತ್ತೂರು ಕೋಟೆ ಮೇಲೆ ಜಾಕ ಯುನಿಯನ್ ಧ್ವಜ ಹಾರಿಸಿದರು.

1824 ಡಿಸೆಂಬರ್ 6ರಿಂದ 12ನೇ ತಾರೀಖಿನವರೆಗೆ ಕಿತ್ತೂರು ಕೋಟೆಯನ್ನು ಒತ್ತಾಯ ಪೂರ್ವಕವಾಗಿ ಜಪ್ತ ಮಾಡಿದರು.ಈ ಸಂದರ್ಭದಲ್ಲಿ ಕೋಟೆಯಲ್ಲಿ ರಾಣಿ ಚೆನ್ನಮ್ಮ ಸೊಸೆಯಂದಿರಾದ ವೀರಮ್ಮ,ಜಾನಕಿಬಾಯಿ ಇದ್ದರು,ಅವರೆಲ್ಲರಿಂದ ಕಂದಾಯ ಇಲಾಖೆಯ ದಾಖಲೆಗಳಿಗೆ ಒತ್ತಾಯಪೂರ್ವಕವಾಗಿ ಸಹಿ ಪಡೆದರು.

ಆಗ ಬ್ರೀಟಿಷರಿಗೆ 16ಲಕ್ಷ ನಗದು ಮತ್ತು 4ಲಕ್ಷ ವಜ್ರಾಭರಣಗಳನ್ನು ಕೈವಶಮಾಡಿಕೊಂಡ ಕುರಿತು ದಾಖಲೆಗಳು ಹೇಳುತ್ತವೆ.

ಡಿಸೆಂಬರ್ 13ರಿಂದ ಬೈಲಹೊಂಗಲ ದಲ್ಲಿ ಚನ್ನಮ್ಮ ಮತ್ತು ಸೊಸೆಯಂದಿರಾದ ಜಾನಕಿಬಾಯಿ ಮತ್ತು ರಾಣಿ ವೀರಮ್ಮಳನ್ನು ಗೃಹಬಂಧನದಲ್ಲಿ ಇರಿಸಿ ವಾರ್ಷಿಕ rs.40000 ವರ್ಷಾಸನವನ್ನು ನಿಗದಿ ಮಾಡಿದ್ದರು.

ಚನ್ನಮ್ಮಾಜಿ ಗಂಡನನ್ನು ಕಳೆದುಕೊಂಡಾಗ 36ವರ್ಷ, ಸಂಸ್ಥಾನ ಕೈಬಿಟ್ಟಾಗ 48 ವರ್ಷ ,ಚೆನ್ನಮ್ಮಾಜಿ ಐದು ವರ್ಷಗಳ ಕಾಲ ಗೃಹ ಬಂಧನ ದ ನಂತರ 1829 ಫೆಬ್ರುವರಿ 2ರಂದು ವಯೋಸಹಜ ಮತ್ತು ಸಂಸ್ಥಾನ ಕೈಬಿಟ್ಟು ಹೋದ ಖಿನ್ನತೆಯಿಂದಾಗಿ ಚನ್ನಮ್ಮಾಜೀ ನಿಧನಹೊಂದಿದಳು.

1830 ಮೇ 20ರಂದು ಚನ್ನಮ್ಮಾಜೀ ಯ ಸೊಸೆ ಜಾನಕಿಬಾಯಿ ಗೃಹ ಬಂದನದಲ್ಲಿಯೇ ನಿಧನ ಹೊಂದುವಳು.

ತಮಗೆ ಸಿಗುತ್ತಿದ್ದ rs.40000 ವರ್ಷಾಸನ ದಲ್ಲಿ ಸ್ವಲ್ಪ ಹಣವನ್ನು ಮಾತ್ರ ಬಳಸಿಕೊಂಡು ಉಳಿದಿದ್ದನ್ನು ಬ್ರಿಟಿಷರ ವಿರುದ್ಧ ಲಡಾಯಿ ಕಟ್ಟಲು ದತ್ತಕಮಗನಾದ ಶಿವಬಸವರಾಜನಿಗೆ ರವಾನಿಸುತ್ತಿದ್ದರು.

1830 ಫೆಬ್ರುವರಿಯಲ್ಲಿ ಚೆನ್ನಮ್ಮಾಜಿಯ ಸೊಸೆಯಾದ ರಾಣಿ ವೀರಮ್ಮ ದತ್ತಕ ಮಗನಾಗಿರುವ ಸವಾಯಿ ಮಲ್ಲಸರ್ಜನಿಗೆ rs.455 ಮನಿಆರ್ಡರ್ ಮಾಡುವಳು.

ಆ ಮನಿಯಾರ್ಡರ್ ಪತ್ರ ಧಾರವಾಡದ ಜಿಲ್ಲಾಧಿಕಾರಿ ಬೇಬರನ ಕೈಗೆ ಸಿಗುವುದು. ಇದರಿಂದ ಆತಂಕಗೊಂಡ ಬ್ರಿಟಿಷ್ ಸರಕಾರ ಬೈಲಹೊಂಗಲದ ಗೃಹ ಬಂಧನದಲ್ಲಿರುವ ಚೆನ್ನಮ್ಮಾಜಿಯ ಸೊಸೆ ರಾಣಿ ವೀರಮ್ಮಾ ನನ್ನು ಬೈಲಹೊಂಗಲದಿಂದ ಧಾರವಾಡ, ಧಾರವಾಡ ದಿಂದ ಕುಸುಗಲ್ ನ ಸಂಬಂದಿಕರ ಮನೆಗೆ ವರ್ಗಾಯಿಸಿ ಕಠಿಣ ಕಾವಲು ಇರಿಸುವರು.

ವೀರಮ್ಮನನ್ನು ಖಾನ ದೇಶದ ಮಾಲೆಗಾವ್ ಗೆ ವರ್ಗಾವಣೆ ಮಾಡುವ ಕುರಿತು ಅಂದಿನ ಧಾರವಾಡದ ಜಿಲ್ಲಾಧಿಕಾರಿ ಬಾಂಬೆ ಸರ್ಕಾರದ ಜೊತೆಗೆ ಪತ್ರವ್ಯವಹಾರವನ್ನು ಮಾಡಿರುವ ದಾಖಲೆಗಳು ಇವತ್ತಿಗೂ ಸಿಗುತ್ತವೆ.

ವೀರಮ್ಮನನ್ನು ವರ್ಗಾವಣೆ ಮಾಡುವಂತಹ ಸಂದರ್ಭದಲ್ಲಿ ಸಂಗೊಳ್ಳಿರಾಯಣ್ಣ ಮತ್ತು ಅವರ ತಂಡ ದಾಳಿ ಮಾಡುವ ಆತಂಕ ಬ್ರಿಟಿಷ್ ಸರ್ಕಾರಕ್ಕೆ ಇತ್ತು .

ವೀರಮ್ಮ ಅನಾರೋಗ್ಯ ಪೀಡಿತನಾದ ಕಾರಣ ಕುಸಗಲ್ ನಿಂದ ಧಾರವಾಡದ ಉಳವಿಚನ್ನಬಸವೇಶ್ವರ ದೇವಸ್ಥಾನ ದ ಹತ್ತಿರ ಸಂಬಂದಿಕರ ಮನೆಗೆ ಕರೆ ತಂದು ಧಾರವಾಡ ಜಿಲ್ಲಾಧಿಕಾರಿ ಬೇಬರ ವೀರಮ್ಮನಿಗೆ ನೀಡುವ ಹಾಲಿನಲ್ಲಿ ನಿಧಾನವಿಷ ಗುಳಿಗೆಯನ್ನು ಮೀಶ್ರಣ ಮಾಡಿದ ಕಾರಣ ನಿಧನಳಾದಳು ಏಂದು ಲಾವಣಿ ಪದಗಳು ಹೇಳುತ್ತವೆ.

ಈ ಕಾರಣಕ್ಕೆ 1830 ಜುಲೈ 15ರಂದು ರಾಣಿ ವೀರಮ್ಮ ನಿಧನ ಹೊಂದಿದಳು. ಕಿತ್ತೂರು ಸಂಸ್ಥಾನದ ಕೊನೆಯ ರಾಣಿ ವೀರಮ್ಮನ ಅಧ್ಯಾಯವು ಇಲ್ಲಿಗೆ ಮುಕ್ತಾಯವಾಯಿತು.

ನಂತರದಲ್ಲಿ 1831ರಿಂದ ದತ್ತಕ ಮಗನಾಗಿರುವ ಸವಾಯಿ ಮಲ್ಲಸರ್ಜ ಬ್ರಿಟಿಷರೂಡನೆ ಲಡಾಯಿಯನ್ನು 1857 ರ ವರೆಗೆ ಮುಂದುವರೆಸಿದನು.

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದತ್ತಕ ಮಗನನ್ನು ಬ್ರಿಟಿಷರು ಸೆರೆಹಿಡಿದರು ಎಂಬುದು ಮಾಹಿತಿಗಳು ಸಿಗುತ್ತದೆ.

ಇಲ್ಲಿಗೆ 1585 ರಿಂದ ಪ್ರಾರಂಭವಾದ ಕಿತ್ತೂರ ರಾಜಮನೆತನ 1857ರಲ್ಲಿ ಶಾಶ್ವತವಾಗಿ ಅಂತ್ಯವಾಗುವುದು.ಆದರೆ ಕಿತ್ತೂರ ಸಂಸ್ಥಾನ ಬ್ರೀಟಿಷರ ವಿರುದ್ಧ ತೋರಿದ ಧೈರ್ಯ, ಸಾಹಸ,ದೇಶಪ್ರೇಮ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿವೆ.

ಲೇಖನ:ಮಹೇಶ ನೀಲಕಂಠ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦.

ಇಂದು ಭಾರತೀಯ ನೌಕಾದಳದ ದಿನ ... ಇಮ್ಮಡಿ ಪುಲಕೇಶಿ ಮಹಾರಾಜರು (ಕ್ರಿ.ಶ. ೬೧೦-೬೪೨) ತನ್ನ ಸೇನೆಯಲ್ಲಿ ಬಲಿಷ್ಠ ನೌಕಾದಳವನ್ನಾ ಹೊಂದಿದ್ದಾರೆಂದು ಇ...
04/12/2023

ಇಂದು ಭಾರತೀಯ ನೌಕಾದಳದ ದಿನ ...

ಇಮ್ಮಡಿ ಪುಲಕೇಶಿ ಮಹಾರಾಜರು (ಕ್ರಿ.ಶ. ೬೧೦-೬೪೨) ತನ್ನ ಸೇನೆಯಲ್ಲಿ ಬಲಿಷ್ಠ ನೌಕಾದಳವನ್ನಾ ಹೊಂದಿದ್ದಾರೆಂದು ಇತಿಹಾಸ ಹೇಳುತ್ತದೆ. ಭಾರತೀಯ ನೌಕಾದಳವು ಇಮ್ಮಡಿ ಪುಲಕೇಶಿ ಮಹಾರಾಜರನ್ನಾ ನೆನೆಯಬೇಕು, ಈ ನಿಟ್ಟಿನಲ್ಲಿ ಕೆಲವು ಸಮಾನ ಮನಸ್ಕರು ಕಳೆದ ವರ್ಷ ಚರ್ಚೆ ನಡೆಸಿ,ಇಂದು ನೌಕಾದಳದ ದಿನದಂದು ಇಮ್ಮಡಿ ಪುಲಕೇಶಿ ಮಹಾರಾಜರನ್ನಾ ನೆನೆಯುವ ಕಾರ್ಯ ಮಾಡೋಣ ಎಂದು ತೀರ್ಮಾಣ ಮಾಡಿದರು. ಹೀಗಾಗಿ ಕಳೆದ ವರ್ಷದಿಂದ ನೌಕಾದಳದ ದಿನದಂದು ಇಮ್ಮಡಿ ಪುಲಿಕೇಶಿ ಜಯಂತಿ ಅಂತಾ ಆಚರಿಸೋಕೆ ತೀರ್ಮಾಣಿಸಿ,ಅದರಂತೆ ಈ ವರ್ಷ ಕೂಡ ನಡೆಯುತ್ತಿದೆ. ನಮ್ಮ ಶ್ರೀಮಂತ ಕನ್ನಡದ ಇತಿಹಾಸವನ್ನಾ ನಾವು ಇಂದಿನ ಯುವಜನೆತೆಗೆ ಮುಟ್ಟಿಸಬೇಕೆಂದರೆ ಈ ತೆರನಾದ ಹೊಸ ಹೊಸ ಪ್ರಯೋಗಗಳು ಅನಿವಾರ್ಯ.

ಎಲ್ಲರಿಗೂ ಇಮ್ಮಡಿ ಪುಲಕೇಶಿ ಜಯಂತಿಯ ಶುಭಾಶಯಗಳು.


#ಇಮ್ಮಡಿ_ಪುಲಕೇಶಿ

PC :

31/10/2023

ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು 💛❤️

ಪ್ರಥಮ ಭಾರತ ಸ್ವತಂತ್ರ ಸಂಗ್ರಾಮದ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿˌ ಧೀರ-ಶೂರ ರಾಣಿ ಕಿತ್ತೂರು ಚನ್ನಮ್ಮನವರ ೨೪೫ ನೇ ಜಯಂತಿಯ ಹಾರ್ದಿಕ ಶುಭಾಷಯ...
23/10/2023

ಪ್ರಥಮ ಭಾರತ ಸ್ವತಂತ್ರ ಸಂಗ್ರಾಮದ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿˌ ಧೀರ-ಶೂರ ರಾಣಿ ಕಿತ್ತೂರು ಚನ್ನಮ್ಮನವರ ೨೪೫ ನೇ ಜಯಂತಿಯ ಹಾರ್ದಿಕ ಶುಭಾಷಯಗಳು.

15/08/2023
05/06/2023

#ಡಾ!! #ಮುರಿಗೆಪ್ಪ_ಚನ್ನವೀರಪ್ಪ_ಮೋದಿ.

#ಜಗತ್ತಿನ_ದೂಡ್ಡ_ಸಂಚಾರಿ_ಚಿಕಿತ್ಸಾಲಯ

ಇಡೀ ಜಗತ್ತಿನಲ್ಲಿಯೇ ಡಾಕ್ಟರ್ ಮುರುಗೆಪ್ಪ ಚನ್ನವೀರಪ್ಪ ಮೋದಿ ಅವರು ನಡೆಸುತ್ತಿರುವುದು ಅತಿ ದೊಡ್ಡ ಸಂಚಾರಿ ನೇತ್ರ ಚಿಕಿತ್ಸಾಲಯ. ಇದರ ವೆಚ್ಚವನ್ನು ಸಾರ್ವಜನಿಕರು ಅಥವಾ ಸೇವಾ ಸಂಸ್ಥೆಗಳೇ ನೋಡಿಕೊಳ್ಳುತ್ತಾ ಬಂದಿರುವುದು ಮೋದಿಯವರ ವ್ಯಕ್ತಿತ್ವಕ್ಕೊಂದು ಹಿರಿಮೆ ಮತ್ತು ಸಮಾಜ ಅವರಿಗೆ ಬೆಂಬಲವಾಗಿ ನಿಂತಿದೆ ಎಂಬುದನ್ನು ಸೂಚಿಸುತ್ತದೆ .

#ಕೃತಜ್ಞತಾ_ಬಾವ_ಜೀವಿ

ನನ್ನ ಉಚಿತ ನೇತ್ರ ಚಿಕಿತ್ಸೆಗೆ ಸಹಾಯ ಮಾಡಿದವರೆಲ್ಲರೂ ನನ್ನ ಸಹಭಾಗಿಗಳು ನನ್ನ ದಾಖಲೆ ಪುಸ್ತಕದಲ್ಲಿ ಅವರ ಹೆಸರುಗಳಿರುತ್ತವೆ ಎನ್ನುವುದು ಮೋದಿಯವರ ನಿಷ್ಕಲ್ಮಶ ಮನಸ್ಸನ್ನು ಎತ್ತಿ ತೋರಿಸುತ್ತದೆ. ಮೋದಿಯವರು ಕನ್ನಡಿಗರಾದರು ತಮ್ಮ ವಿನೂತನ ಕಾರ್ಯವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದು ಹೊರನಾಡಿನಲ್ಲಿ.


#ಜಗತ್ತಿನ ವೇಗದ ನೇತ್ರ ಚಕಿತ್ಸಕ

ಮೋದಿಯವರು ಜಗತ್ತಿನ ಕಣ್ಣಿನಲ್ಲಿ ಅದ್ಭುತ ವ್ಯಕ್ತಿ ಎನಿಸಿದರು ಏಕೆಂದರೆ ಅವರಷ್ಟು ವೇಗವಾಗಿ ಚಿಕಿತ್ಸೆಯನ್ನು ವಿಶ್ವದಲ್ಲಿ ಯಾರು ಮಾಡುತ್ತಿರಲಿಲ್ಲ ಮೋದಿಯವರು ಮಾಡಿದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಳನ್ನು ಯಾರು ಮಾಡಲಿಲ್ಲ ಹಾಗಾಗಿ ಇಡೀ ವಿಶ್ವದಲ್ಲಿಯೇ ನೇತ್ರ ಚಿಕಿತ್ಸೆಯಲ್ಲಿ ಅವರ ಹೆಸರು ಮೊದಲನೇಯದಾಗಿ ಸದಾ ಇರುತ್ತದೆ.

#ವಿದೇಶಗಳಲ್ಲಿ_ಡಾ!! #ಮುರಿಗೆಪ್ಪ_ಮೋದಿಯವರ #ಮೂಲಕ_ಭಾರತದ_ಹಿರಿಮೆ.

ಅಂದಿನ ಸಂದರ್ಭದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದ್ದು ಅತ್ಯಾದುನಿಕ ಉಪಕರಣಗಳೊಂದಿಗೆ ಶಸ್ತ್ರ ಚಿಕಿತ್ಸೆಗಳು ನೆರವೇರುತ್ತಿದ್ದವು. ಅಂತಹ ಸಂದರ್ಭದಲ್ಲಿ ಮೋದಿ ಅವರ ಚಿಕಿತ್ಸಾ ವಿಧಾನ ಅವರು ಬಳಸುತ್ತಿರುವ ವೈದ್ಯಕೀಯ ಬಡಪೆಟ್ಟಿಗೆಯನ್ನು ಒಪ್ಪಿಕೊಳ್ಳುವುದಾಗಲಿ ಪರಿಗಣಿಸುವುದಾಗಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವೇ ಇರಲಿಲ್ಲ .ಅಂತಹದರಲ್ಲಿ ಮುರಿಗೆಪ್ಪ ಮೋದಿ ಪಾಶ್ಚಾತ್ಯ ರಾಷ್ಟ್ರಗಳ ತಂತ್ರಜ್ಞಾನಕ್ಕೆ ಸರಿಸಾಟಿಯಾಗಿ ನಿಂತು ಭಾರತೀಯರ ಪ್ರತಿಭೆ ಮತ್ತು ಸೇವಾ ಮನೋಭಾವದ ಹಿರಿಮೆಯನ್ನು ಜಗತ್ತಿಗೆ ಪ್ರಚುರ ಪಡಿಸಿದ್ದನ್ನು ಭಾರತೀಯರೆಲ್ಲರೂ ವಿಶೇಷವಾಗಿ ಕನ್ನಡಿಗರು ಅಭಿಮಾನದಿಂದ ಎದೆಯುಬ್ಬಿಸಿ ಹೇಳಿಕೊಳ್ಳಬೇಕು.

#ಪಾಶ್ಚಾತ್ಯ_ಮಾದ್ಯಮಗಳಲ್ಲಿ_ಮೋದಿಯವರ #ಹೆಸರು

ವಿದೇಶಗಳಲ್ಲಿನ ಪ್ರಸಿದ್ಧ ವೈದ್ಯರೊಡನೆ ತಮ್ಮ ಶಸ್ತ್ರ ಚಿಕಿತ್ಸೆಯ ಕಾರ್ಯವಿಧಾನಗಳ ಕುರಿತು ನಡೆಸುತ್ತಿದ್ದ ಚರ್ಚೆಗಳಿಂದ ಡ!!ಮುರಗೆಪ್ಪ ಚನ್ನವೀರಪ್ಪ ಮೋದಿ ಅವರ ಪ್ರತಿಭೆ ಪಾಶ್ಚತ್ಯ ರಾಷ್ಟ್ರಗಳಿಗೆ ಪರಿಚಯ ವಾದಂತೆ ಅಲ್ಲಿನ ಮಾಧ್ಯಮಗಳು ಮೋದಿಯವರನ್ನು ಹಾಡಿ ಹೊಗಳಿದವು.

ಅವರು ನಡೆಸುತ್ತಿದ್ದ ಸಂಚಾರಿ ಆಸ್ಪತ್ರೆಗಳ ಉಚಿತ ಶಿಬಿರಗಳ ವಿವರಗಳನ್ನು ತಿಳಿದು ಜನ ಬೆರಗಾಗಿದ್ದು ಅಷ್ಟೇ ಅಲ್ಲದೆ ಸಂಘ ಸಂಸ್ಥೆಗಳು ಮೋದಿಯವರ ಅದ್ಭುತ ವ್ಯಕ್ತಿತ್ವವನ್ನುಗೌರವಿಸಲು ನಾ ಮುಂದೆ ತಾ ಮುಂದು ಏಂದು ದುಂಬಾಲು ಬಿದ್ದು ಅವರಿಗೆ ಗೌರವ ಸದಸ್ಯತ್ವ ಸ್ಥಾನ ನೀಡಿ ಸನ್ಮಾನಿಸಿದವು.

#ನ್ಯೂಯಾರ್ಕ್_ನಗರಲ್ಲಿ_ಮುರಿಗೆಪ್ಪ_ಮೋದಿಯವರ #ಹೆಸರು

ನ್ಯೂಯಾರ್ಕ್ ನಗರದ ಕಿವಾನಿಸ್ ಕ್ಲಬ್ಬಿನ ದಿಗಾಂಗ್ ಎಂಬ ನಿಯತಕಾಲಿಗೆ 12 -7- 1972ರಂದು ವಿಶ್ವ ಪ್ರಸಿದ್ಧ ಭಾರತೀಯ ನೇತ್ರ ವೈದ್ಯ ಮತ್ತು 1963 ರಿಂದ ನಮ್ಮ ನ್ಯೂಮಾರ್ಕ್ ನಗರದ ಕಿವಾನಿಸ್ ಕ್ಲಬ್ಬಿನ ಗೌರವ ಸದಸ್ಯರಾಗಿರುವ ಡಾಕ್ಟರ್ ಮುರುಗಪ್ಪ ಚನ್ನವೀರಪ್ಪ ಮೋದಿ ಅವರು 19-7-1972ರಂದು ನಮ್ಮ ಕಚೇರಿಗೆ ಬರುತ್ತಿದ್ದಾರೆ ಪ್ರತಿ ಬುಧವಾರ ಭೋಜದ ಕೂಟದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ ಭಾರತದ ರಾಷ್ಟ್ರಾಧ್ಯಕ್ಷರ ಗೌರವ ನೇತ್ರವೈದ್ಯರು ಲಕ್ಷಾಂತರ ಜನರಿಗೆ ಬೆಳಕಿನ ಧಾನಿಗಳು ದೃಷ್ಟಿಯ ಧಾನಿಗಳು ಆದ ಈ ವಿಸ್ಮಯ ವ್ಯಕ್ತಿಯನ್ನು ನೋಡಲು ಮತ್ತು ಕೇಳಲು ಕಿವಾನಿಯನ್ನರಿಗೆ ಒಂದು ಅವಕಾಶವಾಗಲಿದೆ ನಾವು ನಮ್ಮ ನಗರದ ಲಾಂಛನ ಫಲಕ ನೀಡಲು ಅಪೇಕ್ಷಿಸಿದ್ದೇವೆ ಮೋದಿ ಒಬ್ಬ ಮಹೋನ್ನತ ವ್ಯಕ್ತಿ ಏಂದು ಬರೆದು ಗೌರವಿಸಿತ್ತು.

ಇದು ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ ಅವರ ಬಗೆಗೆ ಅಮೆರಿಕನ್ನರಿಗೆ ಇರುವ ಗೌರವವನ್ನು ತೋರಿಸುತ್ತದೆ ಮೋದಿಯವರು ನೇತ್ರ ಚಿಕಿತ್ಸೆ ನಡೆಸುವಾಗಿನ ಹಸ್ತ ಕೌಶಲ್ಯವನ್ನು ನೋಡುವ ಕಾರಣದಿಂದ ಕುತೂಹಲದಿಂದ ವಿದೇಶಗಳಿಂದ ಬಂದು ವರದಿ ಮಾಡಿದ ವಿವಿಧ ಪತ್ರಿಕೆಗಳ ವರದಿಗಾರರು ಸಂಘ ಸಂಸ್ಥೆಗಳು ಸದಸ್ಯರು ಇದ್ದಾರೆ.

ಡಾಕ್ಟರ್ ಮುರಿಗೆಪ್ಪ ಚನ್ನವೀರಪ್ಪ ಮೋದಿಯವರು ತಮ್ಮ ಉಚಿತ ಸಂಚಾರಿ ನೇತ್ರಾಲಯವಾದ "ಬ್ರೈನ್ ಚೈಲ್ಡ್ "ಮೂಲಕ ಹಳ್ಳಿ ಹಳ್ಳಿ ಗಳಿಗೆ ಹೋಗಿ ಜನರ ಸೇವೆಯನ್ನು ಮಾಡುವುದರ ಜೊತೆಗೆ ಉನ್ನತ ಶಿಕ್ಷಣ ಕಡೆಗೂ ಒಲವನ್ನು ಹೊಂದಿದ್ದರು. 1949ರ ಆಸು ಪಾಸಿನಲ್ಲಿ ಅಮೆರಿಕದ ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾನಿಲಯಗಳಲ್ಲಿ ನೇತೃ ಚಿಕಿತ್ಸೆಗೆ ಸಂಬಂಧಿಸಿದ ಹೆಚ್ಚಿನ ಶಿಕ್ಷಣವನ್ನು ಪಡೆದಿದ್ದರು.

#ರಷ್ಯಾದಲ್ಲಿ_ಡಾ!! #ಮುರಿಗೆಪ್ಪ_ಮೋದಿಯವರು

1957ರಲ್ಲಿ ಸೋವಿಯತ್ ರಷ್ಯಾ ಕ್ಕೆ ಹೋಗಿ ಅಲ್ಲಿನ ಪ್ರಸಿದ್ಧ ನೇತೃ ರೋಗಗಳ ಯುಕ್ರೇನಿಯಾ ವೈಜ್ಞಾನಿಕ ಸಂಸ್ಥೆಯಲ್ಲಿ ಅಲ್ಲಿನ ಪ್ರಸಿದ್ಧ ನೇತ್ರ ಶಸ್ತ್ರಚಿಕಿತ್ಸಕ ವೈದ್ಯರ ಎದುರಿಗೆ ತಮ್ಮ ಕೈಚಳಕದ ವಿಧಾನದ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಅವರಲ್ಲಿದ್ದ ವಿದ್ವತ್ತು ಕಾರ್ಯ ಕೈಚಳಕವನ್ನು ಪ್ರತ್ಯಕ್ಷವಾಗಿ ಕಂಡು ಹಲವು ವ್ಯಕ್ತಿಗಳು ಪತ್ರಿಕೆಗಳು ಪ್ರಶಂಷನಾ ಲೇಖವನನ್ನು ಪ್ರಕಟಿಸಿದವು.

India's cataract king Dr!!murigeppa modi

ಅಮೆರಿಕದ ನ್ಯೂಯಾರ್ಕ್ ಪತ್ರಿಕೆಯಂತೂ ಭಾರತದ ಕಣ್ಣಿನ ಪೋರೆಯ ದೊರೆ (India's cataract king)ಎಂದು ಕರೆಯಿತು. ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ವರು" ದೃಷ್ಟಿರಹಿತರ ಸಂತ" ಎಂದು ಕರೆದರು,ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಯವರು "ಅಮೇರಿಕಾದಲ್ಲಿ ಅಬ್ರಾಹಂ ಲಿಂಕನ್ ಭಾರತದಲ್ಲಿ ಡಾ!!ಮುರಿಗೆಪ್ಪ ಮೋದಿ" ಏಂದು ತುಲನೆ ಮಾಡಿ ಹೇಳಿಕೆಯನ್ನು ನೀಡಿದರು.

ಜಗತ್ತಿನ ಶ್ರೇಷ್ಠ ಪತ್ರಿಕೆಗಳು ಡಾಕ್ಟರ ಮುರಿಗೆಪ್ಪ ಮೋದಿ ಅವರ ನೇತೃ ಶಸ್ತ್ರ ಚಿಕಿತ್ಸೆಯಲ್ಲಿ ಕಂಡುಬರುತ್ತಿದ್ದ ಕೈಚಳಕವನ್ನು ಕಂಡು ಬೆರಗಾಗಿ ಅವರ ಸೇವಾ ಮನೋಭಾವವನ್ನು ಕುರಿತು "ದ ಗ್ರೇಟ್ ಆರ್ಕಿಟೆಕ್ಟ್ ಇನ್ ಐ ಸರ್ಜರಿ ಹಿ ಇಸ್ ಒನ್ ಆಪ್ ದಿ ಎಮಿನಂಟ್ ಸರ್ಜನ್ ಇನ್ ದಿ ವರ್ಲ್ಡ್ "ಫೈಯೋನಿಯರ್ ಆಫ್ ಮಾಸ್ ಹೈ ಸರ್ಜರಿ" ಎಂದು ಲೇಖನಗಳನ್ನು ಬರೆದು ಪ್ರಕಟಿಸಿ ಮೋದಿಯವರ ವಿದ್ವತ್ತನ್ನು ಗೌರವಿಸುವೆ

(ಮುಂದುವರೆಯುವುದು)

ಲೇಖನ:ಮಹೇಶ.ನೀ. ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦

05/06/2023
ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ,ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ ಸ್ಮರಣೋತ್ಸವದ ಗೌರವ ನಮನಗಳ...
02/02/2023

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ,ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ ಸ್ಮರಣೋತ್ಸವದ ಗೌರವ ನಮನಗಳು 🙏🙏

19/01/2023
19/01/2023
01/11/2022

ನಮ್ಮ ಬೆಳಗಾವಿ 💛❤️

01/11/2022

ಕರ್ನಾಟಕದಲ್ಲಿ ಕನ್ನಡವೇ ಮೊದಲು 🙏

ಕರ್ನಾಟಕ ಬರೀ ನಾಡಲ್ಲ,ನಮ್ಮ ಸಂಸ್ಕೃತಿಯ ಧಾತು.ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು,ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು 🎉
01/11/2022

ಕರ್ನಾಟಕ ಬರೀ ನಾಡಲ್ಲ,
ನಮ್ಮ ಸಂಸ್ಕೃತಿಯ ಧಾತು.
ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು,
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು 🎉

24/10/2022

ಕಿತ್ತೂರು ಉತ್ಸವ ಅದ್ಧೂರಿ ಚಾಲನೆ, ಜೈ ಚೆನ್ನಮ್ಮಾಜಿ 🙏🙏🎉🎉🎊🎊

ಕಿತ್ತೂರು ಉತ್ಸವ ಅದ್ಧೂರಿ ಚಾಲನೆ, ಜೈ ಚೆನ್ನಮ್ಮಾಜಿ 🙏🙏🎉🎉🎊🎊
24/10/2022

ಕಿತ್ತೂರು ಉತ್ಸವ ಅದ್ಧೂರಿ ಚಾಲನೆ, ಜೈ ಚೆನ್ನಮ್ಮಾಜಿ 🙏🙏🎉🎉🎊🎊

22/10/2022

*ಕಿತ್ತೂರು ಉತ್ಸವಕ್ಕೆ ಹೃತ್ಪೂರ್ವಕ ಸ್ವಾಗತ 23, 24, 25ನೇ ಅಕ್ಟೋಬರ್ 2022*

ಕಿತ್ತೂರಿನ ಹುಲಿ,

ಐತಿಹಾಸಿಕವಾಗಿ ಕರ್ನಾಟಕವು ನಮ್ಮ ತಾಯ್ನಾಡಿಗೆ ಪ್ರಶಸ್ತಿಗಳನ್ನು ತಂದ ಹಲವಾರು ಯುದ್ಧ ವೀರರನ್ನು ನಿರ್ಮಿಸಿದೆ. ಆದರೂ, ಆ ಚಾಂಪಿಯನ್‌ಗಳ ಪಟ್ಟಿಯಲ್ಲಿ ಒಂದು ಹೆಸರು ಪ್ರಕಾಶಮಾನವಾಗಿ ಹೊಳೆಯುತ್ತದೆ. ಅದು ಪರಾಕ್ರಮಿ ರಾಣಿ ಕಿತ್ತೂರು ರಾಣಿ ಚೆನ್ನಮ್ಮನದ್ದು.ಎರಡೂವರೆ ಶತಮಾನಗಳ ಹಿಂದೆ ಹುಟ್ಟಿದ್ದರೂ; ಆಕೆಯ ಧೈರ್ಯ ಮತ್ತು ಶೌರ್ಯದ ಕಥೆಗಳು ಕನ್ನಡಿಗರ ಮನಸ್ಸಿನಲ್ಲಿ ಯಾವಾಗಲೂ ತಾಜಾವಾಗಿರುತ್ತವೆ.ರಾಣಿ ಚೆನ್ನಮ್ಮ 1778 ರ ನವೆಂಬರ್ 14 ರಂದು ಬೆಳಗಾವಿ ನಗರದಿಂದ ಕೇವಲ 6 ಕಿಲೋಮೀಟರ್ ದೂರದಲ್ಲಿರುವ ಕಾಕತಿಯಲ್ಲಿ ಜನಿಸಿದರು. ಆಕೆಯ ತಂದೆ ಕುಲೀನ ಧೂಳಪ್ಪ ಗೌಡ.

ಬಾಲ್ಯದಿಂದಲೂ ಚೆನ್ನಮ್ಮ ಯೋಧ ತರಬೇತಿ ಪಡೆದಿದ್ದಳು. ಝಾನ್ಸಿ ಲಕ್ಷ್ಮಿ ಬಾಯಿ ಹಾಗೆ ಮಾಡುವ 35 ವರ್ಷಗಳ ಮೊದಲು ಅವರು ಪ್ರಬಲ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ತೆಗೆದುಕೊಂಡರು ಎಂಬುದು ಗಮನಾರ್ಹ ಸಂಗತಿಯಾಗಿದೆ.ಅಕ್ಟೋಬರ್ 23, 1824 ರಂದು, ಪೂರ್ವ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಸೇಂಟ್ ಜಾನ್ ಠಾಕ್ರೆ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ಮುನ್ನಡೆಸಿದರು ಚೆನ್ನಮ್ಮ, ಆಕ್ರಮಣಕಾರಿ ಬ್ರಿಟಿಷ್ ಪಡೆಗಳನ್ನು ಸಂಪೂರ್ಣವಾಗಿ ನಾಶಮಾಡುವಾಗ ಯುದ್ಧದಲ್ಲಿ ಕೊಂದರು.ಪ್ರತಿ ವರ್ಷ, ಈ ನಿರ್ದಿಷ್ಟ ದಿನದಂದು, ಬ್ರಿಟಿಷರ ವಿರುದ್ಧ ಅವಳ ಅದ್ಭುತ ವಿಜಯವನ್ನು ಇಲ್ಲಿಯವರೆಗೆ ಕಿತ್ತೂರು ಉತ್ಸವ ಎಂದು ಆಚರಿಸಲಾಗುತ್ತದೆ.

ಆದರೆ ವಿಜಯವು ಅಲ್ಪಕಾಲಿಕವಾಗಿತ್ತು ಮತ್ತು 1824 ರ ನವೆಂಬರ್ 30 ರಂದು ಸಂಯೋಜಿತ ಬ್ರಿಟಿಷ್ ಪಡೆ ಕಿತ್ತೂರನ್ನು ಸೋಲಿಸಿದಾಗ ದುರಂತ ಸಂಭವಿಸಿತು. ರಾಣಿ ಚೆನ್ನಮ್ಮ ತೀವ್ರವಾಗಿ ಹೋರಾಡಿದಳು, ಆದರೆ ಅಂತಿಮವಾಗಿ ಸೆರೆಹಿಡಿಯಲ್ಪಟ್ಟಳು ಮತ್ತು ಬೈಲಹೊಂಗಲ ಕೋಟೆಯಲ್ಲಿ ಬಂಧಿಸಲ್ಪಟ್ಟಳು, ಅಲ್ಲಿ ಅವಳು 2 ಫೆಬ್ರವರಿ 1829 ರಂದು ಕೊನೆಯುಸಿರೆಳೆದಳು.ಅವಳು ಅಂದು ಸ್ಫೂರ್ತಿಯಾಗಿದ್ದಳು ಮತ್ತು ಅವಳು ಶತಮಾನಗಳ ನಂತರ ಇಂದಿಗೂ ಸ್ಫೂರ್ತಿಯಾಗಿ ಉಳಿದಿದ್ದಾಳೆ.
ಎಲ್ಲಿಯವರೆಗೆ ಕರ್ನಾಟಕವು ಮೇಲುಗೈ ಸಾಧಿಸುತ್ತದೆ ಮತ್ತು ಎಲ್ಲಿಯವರೆಗೆ ಕನ್ನಡ ಭಾಷೆ ಮೇಲುಗೈ ಸಾಧಿಸುತ್ತದೆಯೋ ಅಲ್ಲಿಯವರೆಗೆ ರಾಣಿ ಚೆನ್ನಮ್ಮ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ನೆಲೆಸುತ್ತಾಳೆ.

*Heartly Welcome to Kittur Utsav 23, 24,* *25th October 2022*

The Tigress of Kittur

Historically Karnataka has produced several heroes of war who have brought laurels to our Motherland. Yet, one name shines brightest in that list of champions. It is that of the Valorous Queen Kittur Rani Chennamma.

Even though she was born two and a half centuries ago; the tales of her courage and bravery always remain fresh in the minds of Kannadigas.

Rani Chennamma was born on 14th November 1778 in Kakati which is just 6 kilometers from Belgaum city. Her father was the noble Dhoolappa Gowda.

From an early childhood, Chennamma was trained as a warrior. Also it is a notable fact that she took on the mighty British East India Company 35 years before Jhansi Lakshmi Bai had done so.

On 23rd October 1824 in defiance of the doctrine of lapse Chennamma led an armed resistance against St John Thackeray the erstwhile collector and political agent, killing him in the war while totally decimating the invading British forces.

Every year, on this particular day, her magnificent victory over the British is celebrated as Kittur Utsav till date.

But the victory was short lived and tragedy struck on 30th November 1824, when a combined British force overpowered Kittur. Rani Chennamma fought fiercely, but was ultimately captured and imprisoned at Bailhongal Fort where she breathed her last on 2 February 1829.

She was an inspiration then and she remains to be an inspiration centuries later today.
For as long as Karnataka shall prevail, and as long as Kannada language prevails, Rani Chennamma shall live in the hearts of millions of Kannadigas.

22/10/2022

#ಕಿತ್ತೂರು_ರಾಣಿ_ಚೆನ್ನಮ್ಮಾಜಿಯ_ಸೊಸೆ_ಜಾನಕಿಬಾಯಿ

ದೇಶದ ಮೊದಲ ಮಹಿಳಾ ಹೋರಾಟಗಾರ್ತಿ ರಾಣಿ ಚೆನ್ನಮ್ಮಾಜಿಯ ಏಕಮಾತ್ರ ಪುತ್ರ ಶಿವ ಬಸವರಾಜ ಅಥವಾ ಶಿವಬಸಪ್ಪನ ಪತ್ನಿಯೇ ಜಾನಕಿಬಾಯಿ. ಜಾನಕಿಬಾಯಿ ಕೊಲ್ಲಾಪುರ ಸಂಸ್ಥಾನದ ವ್ಯಾಪ್ತಿಗೆ ಒಳಪಟ್ಟ ಶೇಗುಣಸಿಯ ಅಲ್ಲಪ್ಪ ಗೌಡ ದೇಸಾಯಿಯ ಮಗಳು ಎಂದು ದೊಡ್ಡಪ್ಪ ಬಾವೆಪ್ಪ ಮೊಗಿಯವರ ಕುರಿತು ಬರೆದ ಬರೆದ ಪುಸ್ತಕದಲ್ಲಿ ಚನ್ನಕ್ಕ ಪಾವಟೆಯವರು ಹೇಳಿದ್ದಾರೆ.

ಆದರೆ ಶೆಗುಣಶಿಯ ಅಲ್ಲಪ್ಪಗೌಡ ದೇಸಾಯಿ . 1813ರಲ್ಲಿ ಪೇಶ್ವೆ ಎರಡನೇ ಬಾಜಿರಾಯ ಮಲ್ಲಸರ್ಜನನ್ನು ಬಂಧಿಸುವ ಸಂದರ್ಭದಲ್ಲಿ ಮಲ್ಲಸರ್ಜನ ಮತ್ತು ಎರಡನೇ ಬಾಜಿರಾಯನ ಮಧ್ಯೆ ಮಧ್ಯಸ್ಥಿಕೆ ವಹಿಸಿದ ವ್ಯೆಕ್ತಿಯ ಹೆಸರು ಸಹಿತ ಅಲ್ಲಪ್ಪಗೌಡ ದೇಸಾಯಿ ಇತನು ಸಹಿತ ಶೆಗುಣಸಿ ಯವನು.(ಶೆಗುಣಸಿ ಇವತ್ತಿನ ಚಿಕ್ಕೂಡಿ ಯಲ್ಲಿದೆ)ಹಾಗಾಗಿ ಜಾನಕಿ ಬಾಯಿಯ ತಂದೆ ಮತ್ತು ಪೇಶ್ವೇ ಮತ್ತು ಮಲ್ಲಸರ್ಜನ ಮಧ್ಯ 1813ರಲ್ಲಿ ಮಧ್ಯಸ್ಥಿಕೆ ವಹಿಸಿದ ಅಲ್ಲಪ್ಪ ಗೌಡ ದೇಸಾಯಿ ಇಬ್ಬರೂ ಒಬ್ಬರೇ ಎನ್ನುವುದು ಇಲ್ಲಿನ ಯಕ್ಷಪ್ರಶ್ನೆಯಾಗಿ ಉಳಿದಿದೆ.

1818 ರ ಮನ್ರೋ ಒಪ್ಪಂದ ಅಥವಾ ಖಾನಾಪುರ ಒಪ್ಪಂದದ ಪ್ರಕಾರ ಜಾನಕಿಬಾಯಿ ಗಂಡ ಅಂದರೆ ಚೆನ್ನಮ್ಮಾಜಿಯ ಮಗ ಶಿವ ಬಸವರಾಜ ಮೂರನೇ ಆಂಗ್ಲೋ ಮರಾಠ ಯುದ್ಧ ದಲ್ಲಿ ಬೆಳಗಾವಿಯಲ್ಲಿ ಭಾಗವಹಿಸಿದಾಗ ನಿಧನಹೊಂದಿದ.

ಆತನ ಶವವನ್ನು ತಂದು ಕಲ್ಮಠದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಇವತ್ತಿಗೂ ಸಹಿತ ಜಾನಕಿ ಬಾಯಿಯ ಗಂಡನ ಸಮಾಧಿಯನ್ನು ಕಲ್ಮಠದಲ್ಲಿ ಕಾಣಬಹುದು.

ಶಿವಬಸವರಾಜನ ಹೆಸರಿನಲ್ಲಿ ೧೮೧೮ ಕಿತ್ತೂರಿನಲ್ಲಿ ಕೆರೆಯೊಂದನ್ನು ಕಟ್ಟಿಸಲಾಯಿತು. ಆ ಕೆರೆ ಕಿತ್ತೂರಿನ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಂಭಾಗದಲ್ಲಿ ಇದೆ. ಅದಕ್ಕೆ ಇವತ್ತಿಗೂ ಸಹಿತ ಶಿವಬಸಪ್ಪನ ಕೆರೆ ಎಂದು ಕರೆಯುತ್ತಾರೆ. ಕಂದಾಯ ದಾಖಲೆಗಳಲ್ಲಿ ಕೆರೆಯೆಂದು ಮಾತ್ರ ಇರುವುದನ್ನು ನಾನೇ ಖುದ್ದಾಗಿ ಗಮನಿಸಿದ್ದೇನೆ.

ಕಿತ್ತೂರಿನ ಎರಡನೇ ಕದನ ಮುಗಿದನಂತರ 1824 ಡಿಸೆಂಬರ್ 5ರಿಂದ 12ನೇ ತಾರೀಖಿನವರೆಗೆ ಒತ್ತಾಯಪೂರ್ವಕವಾಗಿ ರಾಣಿ ಚೆನ್ನಮ್ಮನ ಜೊತೆಗೆ ಸೊಸೆಯಂದಿರಾದ ಜಾನಕಿಬಾಯಿ ಮತ್ತು ವಿರಮ್ಮಳನ್ನು ಕಿತ್ತೂರ ಕೋಟೆಯಲ್ಲಿರಿಸಿ ಎಲ್ಲ ಕಾಗದ ಪತ್ರಗಳಿಗೆ ಒತ್ತಾಯಪೂರ್ವಕವಾಗಿ ಪಡೆಯುವ ಕೆಲಸವನ್ನು ಬ್ರಿಟಿಷರು ಮಾಡಿದರು.

ಈ ಸಂದರ್ಭದಲ್ಲಿ ಬ್ರಿಟಿಷರು ರಾಣಿ ಚೆನ್ನಮ್ಮ ಮತ್ತು ವೀರಮ್ಮನಿಗೆ ಮಾತ್ರ ಆದ್ಯತೆ ಕೊಟ್ಟರೆ ಹೊರತಾಗಿ ಜಾನಕಿಬಾಯಿಗೆ ಕೊಡಲಿಲ್ಲ.

ಕಾರಣ 1816 ರಲ್ಲಿ ಕಿತ್ತೂರಿನ ದೊರೆಯಾದ ಮಲ್ಲಸರ್ಜ ದೇಸಾಯಿ ನಿಧನವಾದ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನಕ್ಕೆ ಉತ್ತರ ಅಧಿಕಾರಿಯನ್ನು ನೇಮಕ ಮಾಡುವ ಸಂದರ್ಭದಲ್ಲಿ ರಾಣಿ ಚೆನ್ನಮ್ಮಾಜಿಯ ಮುಂದೆ ನಿಂತು ತನ್ನ ಮಗನಾದ ಶಿವಬಸವರಾಜನಿಗೆ ಭೈರವಿ ಕಂಕಣ ಕಟ್ಟಿ ರಾಣಿ ರುದ್ರಮ್ಮಾಜೀಯ ಮಗನಾದ ಶಿವಬಸವರಾಜನಿಗೆ ಕಿತ್ತೂರು ದೊರೆಯ ಪಟ್ಟ ಕಟ್ಟುವಳು.

ಬೈರವಿ ಕಂಕಣ ಕಟ್ಟಿಕೊಂಡು ಸಂಸ್ಥಾನದ ಹಿತಾಸಕ್ತಿಯನ್ನು ಕಾಪಾಡುವ ಮತ್ತು ರಾಜನ ಅಂಗ ರಕ್ಷಕನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ನೀಡಿ ರಾಜ ಪದವಿಯಿಂದ ಶಿವ ಬಸವರಾಜನನ್ನು ದೂರ ಇಟ್ಟ ಕಾರಣ ಮುಂದೆ 1818 ರ anglo-maratha ಯುದ್ಧದಲ್ಲಿ ಸಂಸ್ಥಾನದ ರಕ್ಷಣೆಗೆ ಮುಂದಾಗಿ ಮೂರನೆ ಆಂಗ್ಲೊ ಮರಾಠ ಯುದ್ದದಲ್ಲಿ ಶಿವಬಸವರಾಜ ನಿಧನ ಹೊಂದಿದನು.

ಹೀಗಾಗಿ ಸಂಸ್ಥಾನದಲ್ಲಿ ಯಾವುದೇ ಕಂದಾಯದ ಅಧಿಕಾರವನ್ನು ಹೊಂದಿರದೇ ಇರುವ ಶಿವಬಸವರಾಜ ಹೆಂಡತಿಯಾದ ಕಾರಣ ಇರುವ ಕಾರಣ ಬ್ರಿಟಿಷರು ರಾಣಿ ಜಾನಕಿ ಬಾಯಿಗೆ ಹೆಚ್ಚಿನ ಆದ್ಯತೆ ನೀಡದೇ ಇರುವುದು ಸಹಜ.ಆದರೆ ಕಿತ್ತೂರು ಸಂಸ್ಥಾನದ ಜನ ಮಾತ್ರ ರಾಣಿ ಚನ್ನಮ್ಮಾಜೀಯ ಸೊಸೆ ಯಾದ ಕಾರಣ ಕಿತ್ತೂರಿನ ಜನ ಮಾನಸದ ಮೇಲೆ ಹೆಚ್ಚು ಹಿಡಿತ ಹೊಂದಿದ್ದಳು.

1824 ಡಿಸೆಂಬರ್ 13 ನೇ ತಾರೀಖಿನಂದು ರಾಣಿ ಚೆನ್ನಮ್ಮ ವೀರಮ್ಮ ಜೊತೆ ಜಾನಕಿ ಬಾಯಿಯನ್ನು ಬೈಲಹೊಂಗಲದಲ್ಲಿ ಅತ್ಯಂತ ಗೌರವಯುತವಾಗಿ ಗೃಹಬಂಧನದಲ್ಲಿರಿಸಿ ವಾರ್ಷಿಕ rs.40000 ವರ್ಷಾಸನವನ್ನು ಮೂವರು ರಾಣಿಯರಿಗೆ ಬ್ರೀಟಿಷ ಸರಕಾರ ದ ಅಧಿಕಾರಿ ಡಿಕೆನ್ ನಿಗದಿ ಮಾಡುವನು.

ವರ್ಷಾಸನ ವನ್ನು ಬ್ರಿಟಿಷರು ನಿಗದಿತವಾಗಿ ಕೊಡುತ್ತಿರಲ್ಲಿಲ್ಲ, ಮೂರು ನಾಲ್ಕು ತಿಂಗಳಿಗೊಮ್ಮೆ ಕೊಡುತ್ತಿದ್ದರು ಎನ್ನುವುದು ಮಾಹಿತಿ ಲಬ್ಯವಿದೆ.

ದಿನಾಂಕ 2-2-1829ರಂದು ರಾಣಿ ಚೆನ್ನಮ್ಮ ನಿಧನದ ನಂತರ ಅಂದರೆ ಒಂದು ವರ್ಷ ಮೂರು ತಿಂಗಳ ನಂತರ ಬೈಲಹೊಂಗಲ ದ ಗೃಹಬಂಧನದಲ್ಲಿ 20-5-1829 ರಂದು ಚನ್ನಮ್ಮಾಜೀಯ ಸೊಸೆ ಜಾನಕಿಬಾಯಿ ನಿಧನಳಾಗುವಳು .

ಜಾನಕಿಬಾಯಿ ಸಮಾದಿ :

ಜಾನಕಿಬಾಯಿ ನಿಧನಾನಂತರದಲ್ಲಿ ಬೈಲಹೊಂಗಲ ದ ಕಲ್ಮಠದ ಹಿಂದೆ ಎಂದರೆ ಹಿತ್ತಲಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.ಅಂದರೆ ಚನ್ನಮ್ಮಾಜೀಯ ಸಮಾದಿಯ ಸಮೀಪದಲ್ಲಿಯೇ ಜಾನಕಿ ಬಾಯಿ ಸಮಾದಿ ಇದೆ ಎಂದಾಯಿತು.

ಹೀಗೆ ರಾಣಿ ಚೆನ್ನಮ್ಮನ ಸೊಸೆಯಾಗಿ ಕಿತ್ತೂರು ಸಂಸ್ಥಾನದ ಕೊನೆಯ ದಿನಗಳಲ್ಲಿ ಬರುವ ಸಂದಿಗ್ಧತೆಯನ್ನು ಮತ್ಬಂತು ದಿರುವ ಎಲ್ಲ ನೋವುಗಳನ್ನು ರಾಣಿ ಚೆನ್ನಮ್ಮ ಮತ್ತು ರಾಣಿ ವೀರಮ್ಮಳ ಜೊತೆ ಅನುಭವಿಸಿದ ಗಟ್ಟಿ ಮನಸಿನವಳು ಜಾನಕಿ ಬಾಯಿ ಅಂದರೆ ತಪ್ಪಾಗಲಾರದು.

ಲೇಖಕರು: ಮಹೇಶ. ನೀಲಕಂಠ. ಚನ್ನಂಗಿ
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರು.
೯೭೪೦೩೧೩೮೨೦

14/08/2022

ನಮ್ಮ ಬೆಳಗಾವಿ ಸುವರ್ಣ ಸೌಧ

ಕಿತ್ತೂರಿನ ಯುವ ಸಾಮಾಜಿಕ ಕಾರ್ಯಕರ್ತ, ಬಜರಂಗದಳ  ಕಾರ್ಯದರ್ಶಿ  ಭರತ  ಸಂಗೋಜಿ  ಅವರು ಅನಾರೋಗ್ಯದಿಂದ  ಇವತ್ತು ಕೊನೆ ಉಸಿರು ಏಳೇದಿದ್ದಾರೆ 🙏🙏
14/06/2022

ಕಿತ್ತೂರಿನ ಯುವ ಸಾಮಾಜಿಕ ಕಾರ್ಯಕರ್ತ, ಬಜರಂಗದಳ ಕಾರ್ಯದರ್ಶಿ ಭರತ ಸಂಗೋಜಿ ಅವರು ಅನಾರೋಗ್ಯದಿಂದ ಇವತ್ತು ಕೊನೆ ಉಸಿರು ಏಳೇದಿದ್ದಾರೆ 🙏🙏

13/05/2022

ಕಿತ್ತೂರು ಗ್ರಾಮದೇವತೆಯರ ರಥೋತ್ಸವದ ನೋಟ 🙏🙏

ಎಂಟನೆಯ ದಿನದ ಕಿತ್ತೂರು ಗ್ರಾಮದೇವತೆಯರ ಜಾತ್ರೆ ಮಹೋತ್ಸವದ ಕ್ಷಣಗಳು 🙏🙏
11/05/2022

ಎಂಟನೆಯ ದಿನದ ಕಿತ್ತೂರು ಗ್ರಾಮದೇವತೆಯರ ಜಾತ್ರೆ ಮಹೋತ್ಸವದ ಕ್ಷಣಗಳು 🙏🙏

ಏಳನೆಯ ದಿನದ ಕಿತ್ತೂರು ಗ್ರಾಮದೇವತೆಯರ ಜಾತ್ರೆ ಮಹೋತ್ಸವದ ಕ್ಷಣಗಳು 🙏🙏
10/05/2022

ಏಳನೆಯ ದಿನದ ಕಿತ್ತೂರು ಗ್ರಾಮದೇವತೆಯರ ಜಾತ್ರೆ ಮಹೋತ್ಸವದ ಕ್ಷಣಗಳು 🙏🙏

Address

Kittur
591115

Telephone

+919611700115

Website

Alerts

Be the first to know and let us send you an email when AllaboutKittur - ಚನ್ನಮನ ಕಿತ್ತೂರು posts news and promotions. Your email address will not be used for any other purpose, and you can unsubscribe at any time.

Videos

Share


Other Kittur media companies

Show All