Janata News Kannada

Janata News Kannada ಜನತಾ ನ್ಯೂಸ್ ಕನ್ನಡ
ಇದು ನಿಮ್ಮೊಂದಿಗೆ ನಾವು.

25/04/2024

ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಗ್ಯಾರಂಟಿ ಶಾಸಕ ಕೃಷ್ಣ ನಾಯ್ಕ್

19/04/2024

ಇಂದು ಐಗೊಳ್ ಚಿದಾನಂದ ವಕೀಲರು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಅವರು ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

19/04/2024
19/04/2024

ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಪರ ಮತಯಾಚನೆ ಮಾಡಿದ ಶಾಸಕ ಶ್ರೀ ಕೃಷ್ಣನಾಯ್ಕ್.
ಬಳ್ಳಾರಿಯ ಕಿರೀಟ ಶ್ರೀ ರಾಮುಲುರವರು :ಶಾಸಕ ಶ್ರೀ ಕೃಷ್ಣನಾಯ್ಕ್.

16/04/2024

ಹೂವಿನ ಹಡಗಲಿ ಎರಡು ಲಕ್ಷಕ್ಕೂ ಅಧಿಕ ಮತದಿಂದ ಶ್ರೀ ರಾಮುಲು ಗೆಲ್ಲುತ್ತಾರೆ ಮಾಜಿ ಸಿಎಂ ಯಡಿಯೂರಪ್ಪ

24/03/2024

ಹೂವಿನ ಹಡಗಲಿ :ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ತಾಲೂಕಿನ ಶಿವಲಿಂಗನಹಳ್ಳಿ ಗ್ರಾಮದ ಶ್ರೀ ಗುರು ಕೊಟ್ಟುರೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿಗೆ ಒಂದೂವರೆ ಲಕ್ಷ ರೂಗಳನ್ನು ದೇಣಿಗೆ ನೀಡಿದ್ದಾರೆ
ಧರ್ಮಸ್ಥಳ ಯೋಜನೆಯ ವಿಜಯನಗರ ಜಿಲ್ಲೆಯ ನಿರ್ದೇಶಕರಾದ ಸತೀಶ್ ಶೆಟ್ಟಿಯವರು ಚೆಕ್ ವಿತರಣೆ ಮಾಡಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆಯವರು ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ವಿಶೇಷ ಆದ್ಯತೆ ನೀಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೂವಿನ ಹಡಗಲಿ ಧರ್ಮಸ್ಥಳದ ಯೋಜನೆಯ ಅಧಿಕಾರಿ ರವೀಂದ್ರ,ನಾಗತಿಬಸಪುರ್ ವಲಯದ ಮೇಲ್ವಿಚಾರಕಿ ದೇವಮ್ಮ. ಸ್ಥಳೀಯ ಸೇವಾ ಪ್ರತಿನಿಧಿ ದ್ಯಾಮಕ್ಕ ಹಾಗೂಶ್ರೀ ಗುರು ಕೊಟ್ಟುರೇಶ್ವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ,ಉಪಾಧ್ಯಕ್ಷ, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

18/03/2024

ಶಿವಲಿಂಗನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜರಿಗಿದ ಶ್ರೀ ಗುರು ಕೊಟ್ಟುರೇಶ್ವರ ರಥೋತ್ಸವ

10/03/2024

ಲಕ್ಷಾಂತರ ಭಕ್ತರ ಸಮೂಹದಲ್ಲಿ ಜರಿಗಿದ ಕುರುವತ್ತಿ ಬಸವೇಶ್ವರ ರಥೋತ್ಸವ

26/02/2024

ಏಳುಕೋಟಿ ಶ್ರೀ ಮೈಲಾರಲಿಂಗೇಶ್ವರನ
ಈ ವರ್ಷದ ಕಾರ್ಣಿಕ

ಸಂಪಾಯಿತಲೇ ಪರಾಕ್

26/02/2024

-: ಸಂಪಾಯಿತಲೇ ಪರಾಕ್ :- ಏಳುಕೋಟಿ ಶ್ರೀ ಮೈಲಾರಲಿಂಗೇಶ್ವರನ ಈ ವರ್ಷದ ಕಾರ್ಣಿಕ

26/02/2024

ಹೂವಿನ ಹಡಗಲಿ ಆರ್ ಎಸ್ ಎಸ್ ಎನ್ ಸೊಸೈಟಿ ಅಧ್ಯಕ್ಷರಾಗಿ ಕೆ ತಿಮ್ಮನಾಯ್ಕ್ ಆಯ್ಕೆ

20/02/2024

ಸಹಸ್ರಾರು ಭಕ್ತ ಸಮೂಹದಲ್ಲಿ ನೆರವೇರಿದ ಮಾನ್ಯರ ಮಾಸಲವಾಡದ ಶ್ರೀ ವಿರುಭದ್ರೇಶ್ವರ ರಥೋತ್ಸವ

17/01/2024

ಹೂವಿನ ಹಡಗಲಿ ತಾಲೂಕಿನ ಮದಲಗಟ್ಟಿಯಲ್ಲಿ 22 ರಂದುನೆಡೆಯುವ ರಾಮಾಂಜನೇಯ ಮೂರ್ತಿಪ್ರತಿಷ್ಠಾಪನೆಯ ಕಾರ್ಯಕ್ರಮ ಕ್ಕೆ ಆಗಮಿಸುವಂತೆ ಶಾಸಕ ಕೃಷ್ಣ ನಾಯ್ಕ ಕ್ಷೇತ್ರದ ಜನತೆಗೆ ಆಹ್ವಾನ ನೀಡಿದರು

30/12/2023

ಆರ್ ಎಸ್ ಎಸ್ ಪಥಸಂಚಲನ ಹೂವಿನ ಹಡಗಲಿ

29/11/2023

ಇಂದು ಹೂವಿನ ಹಡಗಲಿ ತಾಲೂಕು ಪಂಚಾಯತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶಾಸಕ ಕೃಷ್ಣಾ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು

29/11/2023

ಇತ್ತೀಚೆಗೆ ಸಿಡಿಲು ಬಡಿದು ಹೂವಿನ ಹಡಗಲಿ ತಾಲೂಕು ಹೊಳಗುಂದಿ ಗ್ರಾಮದ ಯಲ್ಲಪ್ಪ ಅಳವುಂಡಿ ಎನ್ನುವ ಕುರಿಗಾಯಿಯ 20 ಮೇಕೆಗಳು ಮೃತ ಪಟ್ಟಿದ್ದವು ಶಾಸಕರಾದ ಕೃಷ್ಣ ನಾಯ್ಕ್ ರೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು ಇಂದು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುರಿ ಗಾಯಿಗೆ , 80 ಸಾವಿರ ರೂಪಾಯಿಗಳ ಪರಿಹಾರ ಚೆಕ್ ವಿತರಿಸಲಾಯಿತು ತಹಶೀಲ್ದಾರ್ ಶರಣಮ್ಮ E O ಜಯರಾಂ ಚೌವಾಣ್ ಇದ್ದರೂ !!

28/11/2023

ಹೂವಿನ ಹಡಗಲಿ ತಾಲೂಕಿನ ನಾಗತಿ ಬಸಾಪುರ್ ಗ್ರಾಮದಲ್ಲಿ ಜನಮನ ಸೆಳೆದ ರಸಮಂಜರಿ ಕಾರ್ಯಕ್ರಮ

25/11/2023

ಹೂವಿನ ಹಡಗಲಿ ಕಿತ್ತೂರರಾಣಿ ಚೆನ್ನಮ್ಮ ವಿಜಯೋತ್ಸವ

ಸಮಾಜದ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾಜದ ನಿವೃತ್ತ ನೌಕರರು ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ..

18/11/2023

ಹೂವಿನ ಹಡಗಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ. ವಾಣಿಜ್ಯ ಮಳಿಗೆಗಳನ್ನು ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ .ಸಹಕಾರ ಸಂಘದ ಅಧ್ಯಕ್ಷ ಕೆ. ಮೈನುದ್ದೀನ್ ಉದ್ಘಾಟಿಸಿದರು. ಆರ್.ಗಂಗಮ್ಮ, ನಿರ್ದೇಕರಾದ ಮಹಮದ್ ರಫಿ, ಕನ್ನಿಹಳ್ಳಿ ಮುದುಕಪ್ಪ, ನಿಂಬಳಗೇರಿ ಇರ್ಪಾನ್, ಹೊಟ್ಟಿಮಂಜುನಾಥ,ತಿಮ್ಮನಾಯ್ಕ, ಓಲಿ ನಿರ್ಮಲಾ, ಟಿ.ಮಹಾಂತೇಶ, ಕೋಡಿಹಳ್ಳಿ ಮುದುಕಪ್ಪ, ಕ್ಷೇತ್ರಾಧಿಕಾರಿ.ಬಿ.ಡಿ.ಸಿ.ಸಿ.ಬ್ಯಾಂಕ್ ವೇದಮೂರ್ತಿ. ಮುಖ್ಯ ನಿರ್ವಾಹಕ ಜಿ.ಎಸ್.ಕೊಟ್ರೇಶ .ಮತ್ತು ಸಿಬ್ಬಂದಿ ವರ್ಗ ಇದ್ದರು.

17/11/2023

ವಿಜಯನಗರ ಜಿಲ್ಲೆ ಹೂವಿನ ಹಡಗಲಿ !!
ಜಿಲ್ಲಾಧಿಕಾರಿ M S ದಿವಾಕರ್ ಅವರಿಂದ ಬರ ನಿರ್ವಹಣೆ ಪೂರ್ವಭಾವಿ ಸಭೆ !

16/11/2023

ಮಲ್ಲಿಗೆ ನಾಡು ಹೂವಿನ ಹಡಗಲಿ ರಾಜಕೀಯ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸುತ್ತಿರುವ ಯುವಕ ತಳಕಲ್ಲು ಕರಿಬಸಪ್ಪ.
ಎಲೆ ಮರೆ ಕಾಯಿಯಂತೆ ಬಡವರ್ಗದ ಜನತೆಗೆ, ಜಾತ್ಯಾತೀತ ವಾಗಿ ಅವರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿಯು ರಾಜಕೀಯ ಕ್ಷೇತ್ರದಲ್ಲಿ ಬಾರಿ ಚರ್ಚೆಯಾಗುತ್ತಿದೆ.

12/11/2023

ದೀಪಾವಳಿ ಹಬ್ಬದ ಶುಭಾಶಯಗಳು
ಶುಭಕೋರುವವರು: ಎನ್ ಚಂದ್ರಶೇಖರ್ ಬಿಜೆಪಿ ಯುವನಾಯಕ ಹೂವಿನ ಹಡಗಲಿ

12/11/2023

ದೀಪಾವಳಿ ಹಬ್ಬದ ಶುಭಾಶಯಗಳು
ಶುಭಕೋರುವವರು: ಹೊಟ್ಟಿ ಮಂಜುನಾಥ ನಿರ್ದೇಶಕರು ಟಿ ಎ ಪಿ ಸಿ ಎಂ ಎಸ್ ಹಾಗೂ ವಿ ಎಸ್ ಎಸ್ ಎನ್ ಹಡಗಲಿ

12/11/2023

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.
ಶುಭಕೋರುವವರು: ಐಗೋಳ್ ಚಿದಾನಂದ ವಕೀಲರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು

11/11/2023

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಾಕ್ಷರಾಗಿ ಆಯ್ಕೆಯಾಗಿರುವ ಶ್ರೀ Vijayendra Yeddyurappa ಅವರಿಗೆ ಶುಭಾಶಯಗಳು.
ಶುಭಕೋರುವವರು ಶ್ರೀ ಕೃಷ್ಣ ನಾಯ್ಕ್ ಶಾಸಕರು ಹಡಗಲಿ ವಿಧಾನಸಭಾ ಕ್ಷೇತ್ರ .

07/11/2023

ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದೆ : ಮಾಜಿ ಡಿಸಿಎಂ ಗೋವಿಂದ ಕಾರಜೋಳ.

ಹೂವಿನ ಹಡಗಲಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳರವರ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಈಗಾಗಲೇ ಬರಗಾಲ ಘೋಷಣೆಯಾಗಿದೆ.ಆದರೆ ರಾಜ್ಯ ಸರ್ಕಾರ ಇದುವರೆಗೂ ರೈತರ ನೆರವಿಗೆ ಬರುತ್ತಿಲ್ಲ.ಕೂಡಲೇ ರೈತರಿಗೆ ಬರಪರಿಹಾರ ಕೊಡಬೇಕು,ಗೋಶಾಲೆಗಳನ್ನು ತೆರೆಯಬೇಕು, ಹಾಗೂ ಬರಗಾಲ ಕಾಮಗಾರಿಗಳನ್ನು ಪ್ರಾರಂಭಿಸಬೇಕು,ಪ್ರತಿ ತಾಲೂಕಿಗೆ ಕೂಡಲೇ 10 ಕೋಟಿ ಬರಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಬೇಕೆಂದು ಒತ್ತಾಯಿಸಿದರು.ಹಡಗಲಿ ಶಾಸಕರಾದ ಶ್ರೀ ಕೃಷ್ಣ ನಾಯ್ಕ್ ಹುಬ್ಬಳ್ಳಿ ಶಾಸಕ ಹಾಗೂ ರಾಜ್ಯ ಬಿಜೆಪಿ.ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ರಾದ ನಂದಿಹಳ್ಳಿ ಹಾಲಪ್ಪನವರು, ಬಿ.ಜೆ.ಪಿ.ಪಕ್ಷದ ಜಿಲ್ಲಾಧ್ಯಕ್ಷ ಬಸವನಗೌಡ ಪಾಟೀಲ್, ಹಡಗಲಿ ಮಂಡಲ ಅಧ್ಯಕ್ಷರಾದ ಸಂಜೀವ್ ರೆಡ್ಡಿ ,ಹಿರಿಯ ಮುಖಂಡರಾದ ಚಂದ್ರಶೇಖರ್, ಹನುಮಂತಪ್ಪನವರು ಪಕ್ಷದ ಮುಖಂಡರು ಭಾಗವಹಿಸಿದ್ದರು.

06/11/2023

ವಿಜಯನಗರ
ವಿಜಯನಗರ ಜಿಲ್ಲೆಗೆ ಬಿಜೆಪಿ‌ ಬರ ಅಧ್ಯಯನ ತಂಡ ಭೇಟಿ
ಮಾಜಿ ಡಿಸಿಎಂ ಗೋವಿಂದ್ ಕಾರಜೋಳ್ ನೇತೃತ್ವ ಬಿಜೆಪಿ ಬರ ಅಧ್ಯಯನ ತಂಡ
ವಿಜಯನಗರ ಹೂವಿನ ಹಡಗಲಿ ಭೇಟಿ ನೀಡಿದ ಬರ ಅಧ್ಯಯನ ತಂಡ
ಹೊಲಗಳಿಗೆ ತೆರಳ ಬರ ಅಧ್ಯಯನ
ಹೂವಿನ ಹಡಗಲಿ ಶಾಸಕ ಕೃಷ್ಣಾ ನಾಯ್ಕ್, ಶಾಸಕ ಮಹೇಶ್ ತೆಂಗಿನಕಾಯಿ ಜೊತೆಗೆ ಜಮೀನು ವೀಕ್ಷಣೆ
ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆದ ಬಿಜೆಪಿ ನಾಯಕರು
ಹೂವಿನ ಹಡಗಲಿ ಸೇರಿದಂತೆ ವಿವಿಧ ಭಾಗಕ್ಕೆ ತೆರಳಿ ಪರಿಶೀಲನೆ.

30/10/2023

ಹೂವಿನ ಹಡಗಲಿ ತಾಲೂಕಿನಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ತಾಲೂಕು ಆಡಳಿತ ಮಂಡಳಿ ಯಿಂದ ಪ್ರವಾಸಿ ಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನುವ ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಅವರ ಉಪಸ್ಥಿತಿಯಲ್ಲಿ ಶಾಸಕರಾದ ಕೃಷ್ಣ ನಾಯ್ಕ್ ಅವರು ಉದ್ಘಾಟಿಸಿದರು. ನಂತರ ಶಾಸಕ ಕೃಷ್ಣನಾಯ್ಕ್ ಮಾತನಾಡಿ ತಾಲೂಕ ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಅಧಿಕಾರಿಗಲಿಲ್ಲದೆ ಇರುವುದರಿಂದಲೇ ತಾಲೂಕ ನಲ್ಲಿ ಸಮಸ್ಸೆಗಳು ಹೆಚ್ಚಾಗಿವೆ ಎಂದು ಹೇಳಿದರು ಕೂಡಲೇ ನಮ್ಮ ತಾಲ್ಲೂಕಿಗೆ ಅಗತ್ಯವಿರುವ ಅಧಿಕಾರಿಗಳನ್ನ ತ್ವರಿತವಾಗಿ ನೇಮಕಾತಿ ಮಾಡಬೇಕು ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದರು, ಜನರ ಅವಲುಗಳನ್ನು ಸ್ವೀಕರಿಸಿದರು ಸ್ಥಳದಲ್ಲೇ ಜನರ ಸಮಸ್ಯೆಗಳುನ್ನು ಸ್ಥಳದಲ್ಲಿ ಪರಿಹಾರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶರಣಮ್ಮ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಕಲ್ಲ ಸೇರಿ ಇತರರು ಭಾಗವಹಿಸಿದ್ದರು

29/10/2023

ನಾಗತಿ ಬಸಾಪುರದಲ್ಲಿ ಕಿತ್ತೂರರಾಣಿ ಚೆನ್ನಮ್ಮ ಜಯಂತಿ ಅದ್ದೂರಿ ಆಚರಣೆ

Address

Huvinabadgalli

Alerts

Be the first to know and let us send you an email when Janata News Kannada posts news and promotions. Your email address will not be used for any other purpose, and you can unsubscribe at any time.

Videos

Share



You may also like