04/09/2023
ಸುದ್ದಿಗೋಷ್ಠಿ
ವಿಷಯ :- ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೈ ಕೋರ್ಟ್ ಆದೇಶದಂತೆ ಯಾವುದೇ ತರಹದ ಬೇರೆ ಧಾರ್ಮಿಕ ಆಚರಣೆ ಗಣೇಶ್ ಮೂರ್ತಿ ಕೂಡಿಸಲು ಅನುಮತಿ ನೀಡಬಾರದು ಹುಬ್ಬಳ್ಳಿ ಶಾಂತತೆಗೆ ಬಂಗ ತರುವ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸುವ ಕುರಿತು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿಯ ಗೌರವಾನ್ವಿತ ದಿವಾಣಿ ನ್ಯಾಯಾಲಯ ಪ್ರಕರಣ ಸಂಖ್ಯೆ ಆರ್ ಎ 40/1974 ರ ಅನ್ವಯ ಹುಬ್ಬಳ್ಳಿ ಜನರಿಗೆ ಈದ್ಗಾ ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಆದೇಶ ಮಾಡಿದೆ ಅಲ್ಲದೇ ಪ್ರಕರಣ ಸಂಖ್ಯೆ ಆರ್ ಎ 754/1982 ರ ಅನ್ವಯ ಸುಪ್ರೀಂ ಕೋರ್ಟ್ ಸದರಿ ತೀರ್ಪುನ್ನು ಎತ್ತಿ ಹಿಡಿದಿದೆ ಮತ್ತು ಡಿಕ್ರಿಯನ್ನು ಸಹ ಎತ್ತಿ ಹಿಡಿದಿದೆ ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ನಮಾಜ್ ಸಲ್ಲಿಸಲು ಮತ್ತು ಜನವರಿ 26 ಹಾಗೂ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶವಿದೆ ಇದರ ಹೊರತಾಗಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಹುಬ್ಬಳ್ಳಿಯ ದಿವಾಣಿ ನ್ಯಾಯಾಲಯ ಹಾಗೂ ಹೈಕೋರ್ಟ್ ದಿನಾಂಕ 18-06-1992 ರಂದು ಆದೇಶ ಮಾಡಿದೆ.
ಅದರಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ನವದೆಹಲಿ ಇವರು ಸನ್ 2019 ರಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ ಮತ್ತು ಸದರಿ ಆಸ್ತಿಯು ಅಂಜುಮನ್ ಏ ಇಸ್ಲಾಂ ಸಂಸ್ಥೆ ಕಬ್ಜಾದಲ್ಲಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ ಸದರಿ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಯಾವುದೇ ಅಧಿಕಾರ ಇಲ್ಲದಿದ್ದರು ಸಹ ಕಳೆದ ವರ್ಷ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪೂಜ್ಯ ಮಹಾಪೌರಾರು ಹಾಗೂ ಜನಪ್ರತಿನಿಧಿಗಳು ಕಾನೂನುಬಾಹಿರವಾಗಿ ತೆಗೆದುಕೊಂಡಿರುವ ತೀರ್ಮಾನ ಮತ್ತು ಪ್ರಸ್ತುತ ದಿನಾಂಕ 31-08-2023 ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿದಿಗಳ ತೀವ್ರ ವಿರೋಧದ ನಡುವೆ ಪುನಃ ಗಣೇಶ್ ಮೂರ್ತಿ ಕೂಡಿಸಲು ಠರಾವು ಪಾಸ್ ಮಾಡಿದ್ದಾರೆ.
ಕರ್ನಾಟಕ ಮುನ್ಸಿಪಾಲ ಕಾಯ್ದೆ -1976ರ ಸೆಕ್ಷನ್ 176 ರ ವಿರುದ್ಧವಾಗಿದೆ ಮತ್ತು ಕಾನೂನುಬಾಹಿರವಾಗಿದೆ ಕರ್ನಾಟಕ ಮುನ್ಸಿಪಾಲ್ ಕಾಯ್ದೆ -1976 ರ ಸೆಕ್ಷನ್ 60 ರ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡು ಕೆ.ಎಮ್. ಸಿ. ಕಾಯ್ದೆ ಮತ್ತು ಗೌರವಾನ್ವಿತ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ದಿನಾಂಕ..17.08.2023 ರಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀ ರಾಮ್ ಸೇನೆ ರಾಜ್ಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಸಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ್ ಮೂರ್ತಿ ಕೂಡಿಸುತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ, ಮಾದ್ಯಮದಲ್ಲಿ ಹೇಳಿಕೆ ನೀಡಿರುವ ಪ್ರಮೋದ್ ಮುತಾಲಿಕ್ ಮುಸ್ಲಿಂರಿಗೆ ತಾಕತ್ ಇದ್ದರೆ ತಡೆಯಲ್ಲಿ ಎಂದು ಸವಾಲು ಹಾಕಿ ಕೋಮು ಗಲಭೆ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ.
ಪ್ರಮೋದ್ ಮುತಾಲಿಕ್ ಅವರಿಗೆ ದೇಶದ ಸಂವಿಧಾನ,ಕಾನೂನು ಹಾಗೂ ಗೌರವಾನ್ವಿತ ನ್ಯಾಯಾಲಯದ ಆದೇಶಗಳ ಬಗ್ಗೆ ಗೌರವ ಇಲ್ಲದೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ,ಹುಬ್ಬಳ್ಳಿ ನಗರದಲ್ಲಿ ಸರ್ವ ಧರ್ಮಿಯರು ಕೋಮು ಸಾಮರಸ್ಯ ಶಾಂತಿಯಿಂದ ಜೀವನ ನಡೆಸುತಿದ್ದಾರೆ. ಆದರೆ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯಲ್ಲಿ ಕೋಮು ಸಾಮರಸ್ಯ ಹಾಳು ಮಾಡಿ ಕಾನೂನು ಸುವ್ಯವಸ್ಥೆಗೆ ಬಂಗ ತರುವಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ ಶಾಂತಿ ಬಂಗ ಮಾಡುವ ಹುನ್ನಾರ ನಡೆಸಿದ್ದಾರೆ.
ಆದಕಾರಣ ಈ ಕೂಡಲೇ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಈ ಮೂಲಕ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಗ್ರಹ ಸಚಿವರು ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಇವರಿಗೆ ಒತ್ತಾಯಪಡಿಸುತೇವೆ.
ಈದ್ಗಾ ಮೈದಾನದಲ್ಲಿ ಸುಮಾರು 200 ರಿಂದ 300 ವರ್ಷಗಳಿಂದ ಮುಸ್ಲಿಂ ಬಾಂದವರು ನಮಾಜ್ ಸಲ್ಲಿಸುತಿದ್ದಾರೆ. ಆದಕಾರಣ ಈದ್ಗಾ ಮೈದಾನದಲ್ಲಿ ಗಣಪತಿ ಮೂರ್ತಿ ಕೊಡಿಸಲು ಅನುಮತಿ ನೀಡಬಾರದು ಎಂದು ಎಸ್ ಡಿ ಪಿ ಐ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಒತ್ತಾಯ ಪವಡಿಸುತ್ತವೆ.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು ಡಾ|| ವಿಜಯ ಎಮ್ ಗುಂಟ್ರಾಳ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಕ್ತುಮ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಲೀಕ ಕಳಸ , ಹಮೀದ ಬಂಗಾಲಿ ಹಾಗೂ ಇಮ್ತಿಯಾಜ್ ಬೆಳೆಪಸರ್ ಉಪಸ್ಥಿತಿ ಇದ್ದರು.
ತಮ್ಮ ವಿಶ್ವಾಸಿ
ಗಫೂರ ಅಹ್ಮದ ಕುರಟ್ಟಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಯ
ದಿನಾಂಕ 04/09/2023
ಸ್ಥಳ: ಹುಬ್ಬಳ್ಳಿ
#ಹುಬ್ಬಳ್ಳಿ