10/01/2022
ಜಿಲ್ಲೆಯಲ್ಲಿ ಕೋಟಿ ಕೋಟಿ ರೂಪಾಯಿ ಕಂಪ್ಯೂಟರ್ ಹಗರಣ.
ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಹಣ ಮಾಡುವ ಉದ್ದೇಶದಿಂದಲೇ ಜಾರಿಗೊಳಿಸಿದ ಯೋಜನೆ ಇದು. ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ತಿಳಿಸಲು ಕೋಟ್ಯಾಂತರ ವೆಚ್ಚದಲ್ಲಿ ಜಾರಿಗೊಳಿಸಿದ ಯೋಜನೆ ಇದು. ಆದ್ರೆ ಬದಲಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ರಾಜಕಾರಣಿಗಳು ಹಾಗೂ ಇಲಾಖೆ ಅಧಿಕಾರಿಳ ಜೇಬು ತುಂಬಿಸಲಷ್ಟೇ ಇದು ಉಪಯೋಗವಾಗಿದ್ದು, ಮೂರು ವರ್ಷಗಳಿಂದ ಜಿಲ್ಲೆಯ 12 ಕೋಟಿ ವೆಚ್ಚದಲ್ಲಿ 15 ಕಂಪ್ಯೂಟರ್ ಲ್ಯಾಬ್ ಗಳ ಬೀಗ ತೆರೆದು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಿಲ್ಲ. ಅಲ್ಲದೆ ಲ್ಯಾಬ್ ನಲ್ಲಿರುವ ಬಹುತೇಕ ಕಂಪ್ಯೂಟರ್ ಗಳು ಉಪಯೋಗಕ್ಕೆ ಯೋಗ್ಯವಾಗಿಲ್ಲ. ಇದರ ಮಧ್ಯೆ ಲ್ಯಾಬ್ ನಿರ್ಮಾಣಕ್ಕೆ ಕಡಿಮೆ ಗುಣಮಟ್ಟದ ಸಮಾಗ್ರಿಗಳನ್ನ ಬಳಕೆ ಮಾಡಲಾಗಿದ್ದು, ಉದ್ಘಾಟನೆಗೂ ಮುನ್ನವೇ ದುರಸ್ತಿಗೆ ತಲುಪಿವೆ.
ವರದಿ- ಬಸವರಾಜ್ ಮರಳಿಹಳ್ಳಿ (TOI)